11 April 2022 KANNADA Murli Today | Brahma Kumaris
Read and Listen today’s Gyan Murli in Kannada
10 April 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ – ಇಡೀ ದಿನ ನಿಮ್ಮ ಬುದ್ಧಿಯಲ್ಲಿ ಸೇವೆಯ ಚಿಂತನೆ ನಡೆಯಬೇಕು, ನೀವು ಎಲ್ಲರ ಕಲ್ಯಾಣ ಮಾಡಬೇಕು ಏಕೆಂದರೆ ನೀವು ಕುರುಡರ ಊರುಗೋಲಾಗಿದ್ದೀರಿ”
ಪ್ರಶ್ನೆ:: -
ಶ್ರೇಷ್ಠ ಪದವಿಗಾಗಿ ಮುಖ್ಯವಾಗಿ ಯಾವ ಧಾರಣೆಯಿರಬೇಕು?
ಉತ್ತರ:-
ಯಾವಾಗ ತಮ್ಮ ಕರ್ಮೇಂದ್ರಿಯಗಳ ಮೇಲೆ ಪೂರ್ಣ ನಿಯಂತ್ರಣವಿರುತ್ತದೆ, ಆಗ ಶ್ರೇಷ್ಠ ಪದವಿ ಸಿಗುತ್ತದೆ. ಒಂದುವೇಳೆ ಕರ್ಮೇಂದ್ರಿಯಗಳು ತಮ್ಮ ಅಧೀನದಲ್ಲಿಲ್ಲದೆ, ಚಲನೆ ಸರಿಯಿಲ್ಲದೆ, ಬಹಳ ಇಚ್ಛೆಗಳಿರುತ್ತವೆ ಹಾಗೂ ತುಂಬಾ ಲೋಭವಿದ್ದರೆ ಶ್ರೇಷ್ಠ ಪದವಿಯಿಂದ ವಂಚಿತರಾಗುತ್ತೀರಿ. ಶ್ರೇಷ್ಠ ಪದವಿಯನ್ನು ತೆಗೆದುಕೊಳ್ಳಬೇಕೆಂದರೆ ತಾಯಿ-ತಂದೆಯನ್ನು ಸಂಪೂರ್ಣವಾಗಿ ಅನುಸರಿಸಬೇಕು. ಕರ್ಮೇಂದ್ರಿಯಗಳ ಮೇಲೆ ವಿಜಯಿಗಳಾಗಬೇಕು.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನಯನಹೀನರಿಗೆ ದಾರಿ ತೋರಿಸು ಪ್ರಭು…
ಓಂ ಶಾಂತಿ. ಪ್ರದರ್ಶನಿಗಾಗಿ ಈ ಗೀತೆ ಬಹಳ ಚೆನ್ನಾಗಿದೆ, ಆದರೆ ಪ್ರದರ್ಶನದಲ್ಲಿ ಇಂತಹ ಹಾಡುಗಳನ್ನು ಹಾಕುವುದಿಲ್ಲ. ಎಲ್ಲರೂ ಭಗವಂತನನ್ನು ಕರೆಯುವ ಕಾರಣ ನೀವು ತಿಳಿಸಿಕೊಡಬಹುದು. ಎಲ್ಲಿಗೆ ಹೋಗಬೇಕು, ಯಾರು ಕರೆದೊಯ್ಯುತ್ತಾರೆಂದು ತಿಳಿದುಕೊಂಡಿಲ್ಲ. ಈ ರೀತಿ ನಾಟಕ ಅಥವಾ ಪಾತ್ರಕ್ಕೆ ಅನುಗುಣವಾಗಿ ಭಕ್ತರು ಭಕ್ತಿಯನ್ನು ಮಾಡಬೇಕಾಗುತ್ತದೆ. ಆದರೆ ಭಕ್ತಿ ಪೂರ್ಣಗೊಂಡಾಗ ತಂದೆಯು ಬರುತ್ತಾರೆ. ಭಕ್ತಿಯಲ್ಲಿ ಎಷ್ಟೊಂದು ಅಲೆಯಬೇಕಾಗುತ್ತದೆ. ಮೇಳ, ಮೊದಲಾದವುಗಳು ನಡೆಯುತ್ತಿದ್ದು ದಿನ-ಪ್ರತಿದಿನ ವೃದ್ಧಿಯಾಗುತ್ತಿರುತ್ತವೆ, ಶ್ರದ್ಧೆಯಿಂದ ತೀರ್ಥ ಯಾತ್ರೆಯಲ್ಲಿ ಹೋಗಿ ಅಲೆದಾಡುತ್ತಿರುತ್ತಾರೆ. ಬಹಳ ಸಮಯ ಆಗುವುದರಿಂದ ಸರ್ಕಾರವು ಸ್ಟಾಂಪ್ ಮೊದಲಾದವುಗಳನ್ನು ಮಾಡುತ್ತದೆ. ಸಾಧು ಮೊದಲಾದವರ ಸ್ಟಾಂಪ್ ಮಾಡುತ್ತಾರೆ, ಜನ್ಮ ದಿನವನ್ನೂ ಸಹ ಆಚರಿಸುತ್ತಾರೆ. ಇದೆಲ್ಲವೂ ರಾವಣ ರಾಜ್ಯದ ಅಥವಾ ಮಾಯೆಯ ಆಡಂಭರವಾಗಿದೆ. ಆದುದರಿಂದ ಈ ಮೇಳ ಮುಂತಾದವುಗಳು ಅವರಿಗೆ ಬೇಕಾಗುತ್ತದೆ. ಅರ್ಧ ಕಲ್ಪದಿಂದ ನೀವು ರಾವಣ ರಾಜ್ಯದಲ್ಲಿ ಅಲೆದಾಡಬೇಕಾಯಿತು. ಈಗ ತಂದೆ ಬಂದು ರಾವಣ ರಾಜ್ಯದಿಂದ ಬಿಡಿಸಿ ರಾಮ ರಾಜ್ಯಕ್ಕೆ ಕರೆದೊಯ್ಯುತ್ತಾರೆ. ನೀವೇ ಪೂಜ್ಯರು, ನೀವೇ ಪೂಜಾರಿಗಳೆಂಬ ಅರ್ಥವನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಮೊದಲು 16 ಕಲಾ ಸಂಪೂರ್ಣರು ಪೂಜ್ಯರಾಗಿ ನಂತರ ಎರಡು ಕಲೆ ಕಡಿಮೆಯಾದ ಮೇಲೆ ಅರ್ಧ ಪೂಜ್ಯರೆಂದು ಹೇಳಲಾಗುತ್ತದೆ. ಪೂಜಾರಿಗಳಿಂದ ಪೂಜ್ಯರಾಗುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಈಗ ಈ ಕಲಿಯುಗದ ಅಂತ್ಯದಲ್ಲಿ ನಮ್ಮ ಪೂಜಾರಿತನದ ಪಾತ್ರವು ಸಮಾಪ್ತಿಯಾಗುತ್ತದೆ ನಂತರ ಪೂಜ್ಯರನ್ನಾಗಿ ಮಾಡಲು ತಂದೆಯು ಬರಬೇಕಾಗುತ್ತದೆ. ಈಗ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ವಿಶ್ವವೆಂದರೆ ಅದೂ ಸಹ ವಿಶ್ವವಾಗಿದೆ, ಇದೂ ಸಹ ವಿಶ್ವವಾಗಿದೆ. ಅಲ್ಲಿ ಮನುಷ್ಯರು ಬಹಳ ಕಡಿಮೆ ಇರುತ್ತಾರೆ ಏಕೆಂದರೆ ಅಲ್ಲಿ ಒಂದೇ ಧರ್ಮವಿರುತ್ತದೆ. ಆದರೆ ಇಲ್ಲಿ ಅನೇಕ ಧರ್ಮವಿರುವ ಕಾರಣ ಜಗಳವಾಗುತ್ತಿರುತ್ತದೆ.
ಈಗ ತಂದೆಯು ಯೋಗ್ಯರನ್ನಾಗಿ ಮಾಡಲು ಬಂದಿದ್ದಾರೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳುತ್ತೀರಿ. ಕಲ್ಯಾಣ ಮಾಡಿಕೊಳ್ಳುವ ಇಚ್ಛೆ ಎಷ್ಟಿದೆಯೆಂದು ನೋಡಿಕೊಳ್ಳಬೇಕು. ಹೀಗೆ ಕಲಾಕಾರನಿಗೆ ತನ್ನ ಕಲೆಯು ಮನುಷ್ಯರಿಗೆ ತಿಳಿಯುವಂತೆ ಹೇಗೆ ಮಾಡುವುದು ಎಂಬ ಯೋಚನೆಯಿರುತ್ತದೆ. ನಾವು ಬೇಹದ್ದಿನ ತಂದೆಯ ಸೇವೆ ಮಾಡುತ್ತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಭಾರತವನ್ನು ಸ್ವರ್ಗ ಮಾಡಬೇಕು. ನೋಡಿ..! ಪ್ರದರ್ಶನದಲ್ಲಿ ಎಷ್ಟೊಂದು ಜನ ಬರುತ್ತಾರೆ. ಮನುಷ್ಯರಿಗೆ ಸರಿಯಾದ ಮಾರ್ಗ ತೋರಿಸುವಂತಹ ಪ್ರದರ್ಶನ ಚಿತ್ರಗಳನ್ನು ಮಾಡಬೇಕು. ಜಾತ್ರೆ ಮೊದಲಾದವುಗಳು ಚಿತ್ರಗಳ ಹೋಲಿಕೆಯಲ್ಲಿ ಬಹಳ ಕಡಿಮೆಯಿದೆ. ಯಾವ ಚಿತ್ರಕಲಾಕಾರರು ಈ ಜ್ಞಾನವನ್ನು ತಿಳಿದುಕೊಳ್ಳುತ್ತಾರೆ, ಅವರಿಗೆ ಮನುಷ್ಯರ ಕಲ್ಯಾಣವಾಗುವ ಚಿತ್ರಗಳನ್ನು ಮಾಡಬೇಕೆಂಬ ಯೋಚನೆಯಿರುತ್ತದೆ. ಹಗಲು-ರಾತ್ರಿ ಬುದ್ಧಿಯು ಇದೇ ಮಾತಿನಲ್ಲಿ ತೊಡಗಿರಬೇಕು. ಇಂತಹ ವಸ್ತುಗಳ ಬಗ್ಗೆ ಬಹಳ ಆಸಕ್ತಿ ಇರಬೇಕು ಏಕೆಂದರೆ ಮೃತ್ಯು ಅಕಸ್ಮಾತಾಗಿ ಬರುತ್ತದೆ, ಒಂದುವೇಳೆ ತಮ್ಮ ಚಪ್ಪಲಿ ಮೊದಲಾದವುಗಳ ನೆನಪು ಬಂದರೆ ಸತ್ತ ಮೇಲೆ ಅಂತಹ ಜನ್ಮ ಸಿಗುತ್ತದೆ. ತಂದೆ ಇಲ್ಲಿ ದೇಹ ಸಹಿತ ಎಲ್ಲವನ್ನು ಮರೆಯಬೇಕೆಂದು ಹೇಳುತ್ತಾರೆ. ತಂದೆಯು ಯಾರು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾರನ್ನಾದರೂ ಆತ್ಮಗಳ ತಂದೆ ಯಾರು ಎಂಬುವುದನ್ನು ತಿಳಿದುಕೊಂಡಿದ್ದೀರಾ? ಎಂದು ಕೇಳಬೇಕು. ಆಗ ಅವರು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ಪರಮಾತ್ಮನನ್ನು ಎಷ್ಟೊಂದು ನೆನಪು ಮಾಡುತ್ತಾ ಬೇಡುತ್ತಾರೆ. ಒಂದುವೇಳೆ ದೇವಿಯ ಪೂಜೆ ಮಾಡಿ ಏನೇ ಪ್ರಾಪ್ತಿಯಾಯಿತೆಂದರೆ ದೇವಿಗೆ ಅರ್ಪಣೆ ಆಗುತ್ತಾರೆ ನಂತರ ಆ ಪೂಜಾರಿಯ ಹಿಂದೆ ಹೋಗಿ ಆಶೀರ್ವಾದ ಮೊದಲಾದವುಗಳನ್ನು ಮಾಡಿಸಿಕೊಳ್ಳುತ್ತಾರೆ. ಇದು ಎಷ್ಟೊಂದು ಅಂಧಶ್ರದ್ದೆಯಾಗಿದೆ. ಇಂತಹ ಹಾಡುಗಳ ಅರ್ಥವನ್ನು ಪ್ರದರ್ಶನದಲ್ಲಿ ತಿಳಿಸಿಕೊಡಬೇಕು. ಈ ಪ್ರದರ್ಶನ ಹಳ್ಳಿ-ಹಳ್ಳಿಗೂ ಹೋಗುತ್ತದೆ. ತಂದೆ ಬಡವರ ಬಂಧು ಆಗಿದ್ದಾರೆ. ಅವರನ್ನು ಬಹಳ ಶ್ರಮದಿಂದ ಶ್ರೀಮಂತರನ್ನಾಗಿ ಮಾಡಬೇಕು. ಶ್ರೀಮಂತರು ಕೋಟಿಯಲ್ಲಿ ಕೆಲವರು ಮಾತ್ರ ಬರುತ್ತಾರೆ. ಇಲ್ಲಿ ಮನುಷ್ಯರಿಂದ ದೇವತೆಗಳಾಗಬೇಕು. ಈ ಸಮಯದ ಮನುಷ್ಯರು ಎಷ್ಟೊಂದು ಕಲ್ಲು ಬುದ್ಧಿಯವರಾಗಿದ್ದಾರೆ. ಸೇವಾಕೇಂದ್ರಕ್ಕೆ ಬರುತ್ತಾ ಎಲ್ಲವನ್ನು ನೋಡುತ್ತಾ ನಿಶ್ಚಯವಿರುತ್ತದೆ! ಇವರು ತಂದೆ ಆದರೆ ಅವರೇ ಶಿಕ್ಷಕನಾಗಿದ್ದಾರೆ ಎಂಬ ಮಾತನ್ನು ತಿಳಿದುಕೊಳ್ಳುವುದಿಲ್ಲ.
ಈ ಪಾಪದ ಪ್ರಪಂಚದಿಂದ…… ಎಂಬ ಒಂದು ಹಾಡು ಬಹಳ ಚೆನ್ನಾಗಿದೆ ಏಕೆಂದರೆ ಇದು ಪಾಪದ ಪ್ರಪಂಚವೇ ಆಗಿದೆ. ಭಗವಾನುವಾಚ: ಇದು ಆಸುರಿ ಸಂಪ್ರದಾಯವಾಗಿದೆ, ನಾನು ಇದನ್ನು ದೈವೀ ಸಂಪ್ರದಾಯವನ್ನಾಗಿ ಮಾಡುತ್ತೇನೆ. ಮತ್ತೆ ಮನುಷ್ಯರ ಸಂಗಗಳು ಈ ಕರ್ತವ್ಯವನ್ನು ಹೇಗೆ ಮಾಡಲು ಸಾಧ್ಯವಾಗುತ್ತದೆ. ಇದು ಸಂಪೂರ್ಣವಾಗಿ ಬುದ್ಧಿಯ ಮಾತಾಗಿದೆ. ನೀವು ಪತಿತರಾಗಿದ್ದೀರಿ. ನಾನು ನಿಮ್ಮನ್ನು ಭವಿಷ್ಯಕ್ಕಾಗಿ ಪಾವನ ದೇವತೆಗಳನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಪತಿತವೆಂಬ ಅಕ್ಷರವು ವಿಕಾರಕ್ಕೆ ಸಂಬಂಧಿಸಿದೆ. ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿತ್ತು. ಇದು ವಿಕಾರಿ ಪ್ರಪಂಚವಾಗಿದೆ. ಕೃಷ್ಣನಿಗೆ 16108 ರಾಣಿಯರನ್ನು ತೋರಿಸುತ್ತಾರೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ. ಯಾವ ಶಾಸ್ತ್ರಗಳನ್ನು ಮಾಡಿದ್ದಾರೆ, ಅವುಗಳಲ್ಲಿ ನಿಂದನೆ ಮಾಡಿದ್ದಾರೆ. ತಂದೆ ಮಾಡುವಂತಹ ಸ್ವರ್ಗವನ್ನು ಕುರಿತೂ ಸಹ ಏನೇನೋ ಹೇಳಿಬಿಟ್ಟಿದ್ದಾರೆ. ತಂದೆ ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ತಂದೆ ಎಷ್ಟೊಂದು ಉತ್ತಮವಾದ ಶಿಕ್ಷಣವನ್ನು ಕೊಡುತ್ತಾರೆ. ಇದು ಸತ್ಯ-ಸತ್ಯವಾದ ಸತ್ಸಂಗವಾಗಿದೆ. ಉಳಿದೆಲ್ಲವು ಅಸತ್ಯ ಸಂಗಗಳಾಗಿವೆ. ಇಂತಹವರನ್ನು ಮತ್ತೆ ಪರಮಪಿತ ಪರಮಾತ್ಮ ಬಂದು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಮಕ್ಕಳೇ ನೀವು ಈಗ ಕುರುಡರಿಗೆ ಊರುಗೋಲಾಗಬೇಕೆಂದು ತಂದೆ ತಿಳಿಸುತ್ತಾರೆ. ಸ್ವಯಂ ಯಾರು ಸತ್ಯವಾಗಿರುವುದಿಲ್ಲ, ಅವರು ಅನ್ಯರಿಗೆ ಹೇಗೆ ಊರುಗೋಲಾಗುತ್ತಾರೆ! ಅವರು ಕೇಳಿರುವ ಜ್ಞಾನ ನಾಶವಾಗದಿರಬಹುದು, ಒಮ್ಮೆ ತಾಯಿ, ತಂದೆ ಎಂದು ಹೇಳಿರುವ ಕಾರಣ ಅವರಿಗೆ ಅಲ್ಪ-ಸ್ವಲ್ಪ ಪ್ರಾಪ್ತಿಯಾಗುತ್ತದೆ. ಆದರೆ ನಂಬರ್ವಾರ್ ಪದವಿ ಇದೆಯಲ್ಲವೇ? ಅವರ ನಡವಳಿಕೆಯಿಂದ ಅವರು ಏನಾಗಬಹುದೆಂದು ತಿಳಿದುಕೊಳ್ಳಬಹುದು. ಆದರೂ ಸಹ ತಂದೆ ಮತ್ತೆ ಪುರುಷಾರ್ಥ ಮಾಡಿಸುತ್ತಾರೆ. ಸಿಗುವಷ್ಟೆ ಸಾಕು ಎಂದು ಹೇಳಬಾರದು. ಪುರುಷಾರ್ಥದಿಂದ ಮಾತ್ರ ಶ್ರೇಷ್ಠ ಪ್ರಾಲಬ್ಧವು ಪ್ರಾಪ್ತಿಯಾಗುತ್ತದೆ. ಪುರುಷಾರ್ಥ ಮಾಡದೆ ನೀರೂ ಸಹ ಸಿಗುವುದಿಲ್ಲ, ಇದನ್ನು ಕರ್ಮ ಕ್ಷೇತ್ರವೆಂದು ಹೇಳಲಾಗುತ್ತದೆ. ಆದುದರಿಂದ ಮನುಷ್ಯರು ಕರ್ಮ ಮಾಡದೆ ಇರಲು ಸಾಧ್ಯವಿಲ್ಲ ಏಕೆಂದರೆ ಕರ್ಮ ಸನ್ಯಾಸವೆಂಬ ಅಕ್ಷರ ತಪ್ಪಾಗಿದೆ. ಅಂತಹವರು ಬಹಳ ಹಠ ಮಾಡುತ್ತಾರೆ. ಹಠದಿಂದ ನೀರಿನ ಮೇಲೆ ಹಾಗೂ ಬೆಂಕಿಯ ಮೇಲೆ ನಡೆಯುತ್ತಾರೆ ಆದರೆ ಇದರಿಂದ ಏನೂ ಲಾಭವಿಲ್ಲ. ವ್ಯರ್ಥವಾಗಿ ತಮ್ಮ ಆಯಸ್ಸನ್ನು ವ್ಯರ್ಥ ಮಾಡಿಕೊಳುತ್ತಾರೆ. ರಾವಣನ ಬಂಧನದಿಂದ ಬಿಡುಗಡೆಯಾಗುವ ಸಲುವಾಗಿ ಭಕ್ತಿಯನ್ನು ಮಾಡುತ್ತಾರೆ. ಬಿಡುಗಡೆಯಾಗಿ ಮತ್ತೆ ಹಿಂತಿರುಗಿ ಮನೆಗೆ ಹೋಗಬೇಕು ಆದುದರಿಂದ ಎಲ್ಲರೂ ಮುಕ್ತಿ ಅಥವಾ ಸುಖಧಾಮದಲ್ಲಿ ಕರೆದುಕೊಂಡು ಹೋಗು ಎಂದು ನೆನಪು ಮಾಡುತ್ತಾರೆ. ಭಾರತ ಸುಖಧಾಮವಾಗಿತ್ತು, ಈಗ ನರಕವಿರುವ ಕಾರಣ ನರಕವಾಸಿಗಳೆಂದು ಹೇಳಲಾಗುತ್ತದೆಯಲ್ಲವೇ! ಇಂತಹವರು ಸ್ವರ್ಗವಾಸಿಯಾದರೆಂದು ಹೇಳುತ್ತಾರೆ, ಹಾಗಾದರೆ ನೀವು ನರಕದಲ್ಲೀದ್ದೀರೆಂದು ಹೇಳಬಹುದಲ್ಲವೇ? ಏಕೆಂದರೆ ಸ್ವರ್ಗಕ್ಕೆ ವಿರುದ್ಧ ನರಕವಾಗಿದೆ. ಅದು ಶಾಂತಿಧಾಮವಾಗಿದೆ. ದೊಡ್ಡ ದೊಡ್ಡ ಮನುಷ್ಯರೂ ಸಹ ಇಷ್ಟೊಂದು ತಿಳಿದುಕೊಳ್ಳುವುದಿಲ್ಲ. ತಮ್ಮನ್ನು ತಾವೇ ನರಕದಲ್ಲಿ ಇದ್ದೇವೆಂದು ಸಿದ್ಧ ಮಾಡುತ್ತಾರೆ. ಇದನ್ನು ಬಹಳ ಯುಕ್ತಿಯಿಂದ ಸಿದ್ಧ ಮಾಡಿ ತೋರಿಸಬೇಕು. ಈ ಪ್ರದರ್ಶನವಂತು ಬಹಳ ಕೆಲಸವನ್ನು ಮಾಡಿ ತೋರಿಸುತ್ತದೆ. ಈ ಸಮಯದಲ್ಲಿ ಮನುಷ್ಯರು ಎಷ್ಟೊಂದು ಪಾಪ ಮಾಡುತ್ತಾರೆ, ಆದರೆ ಸ್ವರ್ಗದಲ್ಲಿ ಇಂತಹ ಮಾತುಗಳು ಇರುವುದಿಲ್ಲ. ಅಲ್ಲಿ ಪ್ರಾಲಬ್ಧವಿರುತ್ತದೆ. ಈಗ ಮತ್ತೆ ನೀವು ಸ್ವರ್ಗದಲ್ಲಿ ಹೋಗುತ್ತೀರಿ, ನಾವು ಅನೇಕ ಸಲ ವಿಶ್ವದ ಮಾಲೀಕರಾಗಿದ್ದೇವು. ಈಗಲೂ ಆಗುತ್ತಿದ್ದೇವೆಂದು ನೀವು ಹೇಳುತ್ತೀರಿ. ಆದರೆ ಇದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ನಿಮ್ಮಲ್ಲಿಯೂ ಸಹ ಕೆಲವರು ಮಾತ್ರ ತಿಳಿದುಕೊಳ್ಳುತ್ತಾರೆ. ಈ ಆಟದಿಂದ ಯಾರೂ ಬಿಡುಗಡೆಯಾಗಲು ಸಾಧ್ಯವಿಲ್ಲ. ಯಾವಾಗ ದುಃಖವಾಗುತ್ತದೆ ಆಗ ಮನುಷ್ಯರು ಮೋಕ್ಷವನ್ನು ಬಯಸುತ್ತಾರೆ. ಆದರೆ ತಂದೆ ಹೇಳುತ್ತಾರೆ ಚೆನ್ನಾಗಿ ಪುರುಷಾರ್ಥ ಮಾಡಿ ತಾಯಿ ತಂದೆಯನ್ನು ಅನುಸರಿಸಿ ಉತ್ತಮ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಿ. ತಮ್ಮ ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಿ. ತಂದೆ ಮಾರ್ಗದರ್ಶನವಂತು ನೀಡುತ್ತಾರೆ. ನೀವು ಅದರಂತೆ ಏಕೆ ನಡೆಯುವುದಿಲ್ಲ? ಬಹಳ ಇಚ್ಚೆಗಳನ್ನು ಇಟ್ಟುಕೊಳ್ಳಬಾರದು. ಯಜ್ಞದಲ್ಲಿ ಸಿಗುವಂತದ್ದನ್ನು ಸ್ವೀಕರಿಸಬೇಕು. ಲೋಭವೂ ಇರಬಾರದು. ಕರ್ಮೇಂದ್ರಿಯಗಳು ತಮ್ಮ ವಶದಲ್ಲಿ ಇಲ್ಲದಿದ್ದರೆ ಶ್ರೇಷ್ಠ ಪದವಿಯನ್ನು ತೆಗೆದುಕೊಳ್ಳುವುದಿಲ್ಲ. ಇಂತಹ ಹಾಡುಗಳನ್ನು ಪ್ರದರ್ಶನದಲ್ಲಿ ಪ್ರಸಾರ ಮಾಡಿ ಅದರ ಅರ್ಥವನ್ನು ತಿಳಿಸಬಹುದು.
ಶಿವ ತಂದೆಯ ಪರಿವಾರ ನಿಮ್ಮದಾಗಿದೆ. ಶಿವ ತಂದೆಗಿಂತ ಶ್ರೇಷ್ಠರು ಬೇರೆ ಯಾರೂ ಇಲ್ಲ ಹಾಗೂ ಎಲ್ಲರಗಿಂತ ಶ್ರೇಷ್ಠ ಯಾರದರು ಇರುತ್ತಾರೆ. ದಾದಾರವರ 84 ಜನ್ಮಗಳಲ್ಲಿ, ತಂದೆಯು 84 ನೇ ಜನ್ಮದಲ್ಲಿ ಸಿಗುತ್ತಾರೆ. ಶಿವ ತಂದೆ ರಚಯಿತನಾಗಿದ್ದು ಈಗ ಹೊಸ ರಚನೆಯನ್ನು ರಚಿಸುತ್ತಿದ್ದಾರೆ ಅರ್ಥಾತ್ ಹಳೆಯ ರಚನೆಯನ್ನು ಹೊಸ ರಚನೆಯಾಗಿ ಮಾಡುತ್ತಿದ್ದಾರೆ. ನಾವು ಪಾವನರಿಂದ ಪತಿತರಾಗಿದ್ದೇವೆ. ಸ್ವರ್ಗದಲ್ಲಿ ಶ್ರೀಕೃಷ್ಣ ಮೊದಲನೇ ಸ್ಥಾನದಲ್ಲಿ ಇದ್ದಾನೆಂದು ನೀವು ತಿಳಿದುಕೊಂಡಿದ್ದೀರಿ. ಪುನಃ ಅಂತ್ಯದಲ್ಲಿ ಇದು ಅವರ ಜನ್ಮವಾಗಿದೆ, ಮತ್ತೆ ಅವರು ಮೊದಲನೆಯ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ಪೂರ್ತಿಯಾಗಿ 84 ಜನ್ಮಗಳನ್ನು ಶ್ರೀಕೃಷ್ಣ ತೆಗೆದುಕೊಂಡಿದ್ದಾನೆ. ಸೂರ್ಯವಂಶಿ ದೈವೀ ಸಂಪ್ರದಾಯದವರು ಪೂರ್ತಿ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಯಾವ ಶ್ರೀಕೃಷ್ಣ ಮೊದಲನೇ ಸ್ಥಾನದಲ್ಲಿ ಇದ್ದನು, ತಂದೆಯು ಅವರ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ಪ್ರವೇಶ ಮಾಡಿ ಮತ್ತೆ ಅವರನ್ನು ಶ್ರೀಕೃಷ್ಣನನ್ನಾಗಿ ಮಾಡುತ್ತೇನೆಂದು ತಂದೆ ಹೇಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಯಾವುದೇ ವಿನಾಶಿ ಇಚ್ಚೆಗಳನ್ನು ಇಟ್ಟುಕೊಳ್ಳಬಾರದು. ತಮ್ಮ ಹಾಗೂ ಸರ್ವರ ಕಲ್ಯಾಣ ಮಾಡಬೇಕು.
2. ದೇಹ ಸಹಿತ ಎಲ್ಲವನ್ನು ಮರೆತು ಮನೆಗೆ ಹಿಂತಿರುಗಬೇಕು. ಆದುದರಿಂದ ಬುದ್ಧಿ ಎಲ್ಲಿಯೂ ಸಿಕ್ಕಿಕೊಂಡಿಲ್ಲವೇ ಎಂದು ಪರಿಶೀಲನೆ ಮಾಡಿಕೊಳ್ಳಬೇಕು.
ವರದಾನ:-
ಸೇನೆಯಲ್ಲಿ ಯಾರು ಸೈನಿಕರಾಗುತ್ತಾರೆಯೋ ಅವರೆಂದಿಗೂ ಹುಡುಗಾಟಿಕೆಯಿಂದ ಇರುವುದಿಲ್ಲ, ಸದಾ ಗಮನದಲ್ಲಿ ಅಲರ್ಟ್ ಆಗಿರುತ್ತಾರೆ. ತಾವೂ ಸಹ ಪಾಂಡವ ಸೇನೆಯಾಗಿದ್ದೀರಿ, ಇದರಲ್ಲಿ ಸ್ವಲ್ಪವೂ ಹುಡುಗಾಟಿಕೆಯಿರಬಾರದು. ಗಮನವು ಒಂದು ಸ್ವಾಭಾವಿಕವಾದ ವಿಧಿಯಾಗಿ ಬಿಡಲಿ. ಕೆಲವರು ಗಮನವನ್ನಿಡುವುದರಲ್ಲಿಯೂ ಒತ್ತಡವನ್ನಿಡುತ್ತಾರೆ ಆದರೆ ಒತ್ತಡಯುಕ್ತ ಜೀವನವು ಸದಾಕಾಲ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಸ್ವಾಭಾವಿಕ ಗಮನವಿರುವಂತಹ ಸ್ವಭಾವವನ್ನಾಗಿ ಮಾಡಿಕೊಳ್ಳಿರಿ. ಗಮನವಿಡುವುದರಿಂದ ಸ್ವತಹವಾಗಿಯೇ ಸ್ಮೃತಿ ಸ್ವರೂಪರಾಗಿ ಬಿಡುತ್ತೀರಿ, ವಿಸ್ಮೃತಿಯ ಹವ್ಯಾಸದಿಂದ ಮುಕ್ತರಾಗಿ ಬಿಡುವಿರಿ.
ಸ್ಲೋಗನ್:-
ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:
1. ನೆನಪಿನ ಸಂಬಂಧವು ಜ್ಞಾನದೊಂದಿಗಿದೆ, ಜ್ಞಾನವಿಲ್ಲದ ನೆನಪು ಯಥಾರ್ಥವಾಗಿರಲು ಸಾಧ್ಯವಿಲ್ಲ.
ಮನುಷ್ಯರು ಮೊಟ್ಟ ಮೊದಲು ತನ್ನ ಸುಖಿ ಜೀವನವನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಯಾವ ಮುಖ್ಯ ಅಂಶವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ? ಮೊದಲ ಮುಖ್ಯವಾದ ಮಾತು ತಿಳಿದುಕೊಳ್ಳಬೇಕು – ಯಾವ ತಂದೆ ಪರಮಾತ್ಮನಿಗೆ ನಾವು ಮಕ್ಕಳಾಗಿದ್ದೇವೆಯೋ, ಆ ತಂದೆಯ ನೆನಪಿನಲ್ಲಿಯೇ ಪ್ರತೀಸಮಯ ಶ್ವಾಸ-ಶ್ವಾಸದಲ್ಲಿಯೂ ಇರಬೇಕು. ಆ ಅಭ್ಯಾಸದಲಿರುವ ಪ್ರಯತ್ನವನ್ನು ಸಂಪೂರ್ಣವಾಗಿ ಮಾಡಬೇಕಾಗಿದೆ. ಈಗ ಶ್ವಾಸ-ಶ್ವಾಸದಲ್ಲಿಯೂ ನೆನಪು ಮಾಡುವುದೆಂದರೆ, ನಿರಂತರ ಬುದ್ಧಿಯೋಗವನ್ನಿಡಬೇಕು, ಅದನ್ನೇ ನಿರಂತರ ಯೋಗ, ಅಟೂಟ ಅಜಪಾಜಪ ನೆನಪೆಂದು ಹೇಳಲಾಗುತ್ತದೆ, ಇದ್ಯಾವುದೂ ಮುಖದಿಂದ ಜಪಿಸುವ ನೆನಪಲ್ಲ ಹಾಗೂ ಯಾವುದೋ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನ ಮಾಡುವುದೂ ಅಲ್ಲ. ಆದರೆ ಇದು ಬುದ್ಧಿಯೋಗದ ಮೂಲಕ ನೆನಪಿಡಬೇಕು, ಈಗ ಆ ನೆನಪೂ ಸಹ ಆಗ ನಿರಂತರವಾಗಿ ಇರಲು ಸಾಧ್ಯವಾಗುವುದು, ಯಾವಾಗ ಪರಮಾತ್ಮನ ಸಂಪೂರ್ಣ ಪರಿಚಯವಿರುತ್ತದೆ. ಇದರಿಂದಲೇ ಧ್ಯಾನವನ್ನು ಸಂಪೂರ್ಣ ರೀತಿಯಿಂದ ಇಡುವುದಕ್ಕೆ ಸಾಧ್ಯವಾಗುವುದು ಆದರೆ ಪರಮಾತ್ಮನಂತು ಗೀತೆಯಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ – ನಾನು ಧ್ಯಾನದಿಂದಾಗಲಿ, ಜಪದಿಂದಾಗಲಿ ಸಿಗುವುದಿಲ್ಲ ಮತ್ತು ನನ್ನ ಚಹರೆಯನ್ನು ಮುಂದಿಟ್ಟುಕೊಂಡು ಧ್ಯಾನ ಮಾಡಬಾರದು. ಆದರೆ ಜ್ಞಾನ ಯೋಗದ ಮೂಲಕ ಪರಮಾತ್ಮನನ್ನು ಪಡೆಯಬೇಕಾಗಿದೆ ಆದ್ದರಿಂದ ಮೊದಲು ಜ್ಞಾನವಿರಬೇಕು, ಜ್ಞಾನವಿಲ್ಲದೆ ನೆನಪು ಸ್ಥಿರವಾಗಿರಲು ಸಾಧ್ಯವಿಲ್ಲ. ನೆನಪಿನ ಸಂಬಂಧವಿರುವುದೇ ಜ್ಞಾನದೊಂದಿಗೆ. ಈಗ ಜ್ಞಾನದಿಂದ, ಅಥವಾ ಮನಸ್ಸಿನಿಂದ ಕಲ್ಪನೆ ಮಾಡಿರಿ ಅಥವಾ ಕುಳಿತುಕೊಂಡು ದರ್ಶನ ಮಾಡಿರಿ, ಒಂದುವೇಳೆ ನೋಡಿರುವ ವಸ್ತುವಿನ ಬಗ್ಗೆ ತಿಳುವಳಿಕೆಯಿದ್ದಾಗಲೇ ಯೋಗ ಮತ್ತು ಧ್ಯಾನವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದು ಆದ್ದರಿಂದ ಪರಮಾತ್ಮನು ಹೇಳುತ್ತಾರೆ – ನಾನು ಯಾರು, ನನ್ನ ಜೊತೆ ಹೇಗೆ ಯೋಗವನ್ನಿಡುವುದು ಎಂಬುದರ ತಿಳುವಳಿಕೆಯಿರಬೇಕು. ಜ್ಞಾನಕ್ಕಾಗಿ ಮೊದಲು ಸಂಗವಿರಬೇಕು, ಈಗ ಇವೆಲ್ಲಾ ಜ್ಞಾನದ ಅಂಶಗಳನ್ನು ಬುದ್ಧಿಯಲ್ಲಿ ಇಟ್ಟುಕೊಂಡಾಗಲೇ ಸರಿಯಾದ ಯೋಗವನ್ನಿಡಲು ಸಾಧ್ಯವಾಗುವುದು.
2. “ಸೃಷ್ಟಿಯ ಆದಿ ಹೇಗಾಗುತ್ತದೆ?”
ಮನುಷ್ಯರು ಕೇಳುತ್ತಾರೆ – ಪರಮಾತ್ಮನು ಸೃಷ್ಟಿಯನ್ನು ಹೇಗೆ ರಚಿಸಿದರು? ಆದಿಯಲ್ಲಿ ಎಂತಹ ಮನುಷ್ಯನನ್ನು ರಚಿಸಿದರು, ಈಗ ಅವರ ನಾಮ-ರೂಪವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಈಗ ಅವರ ಬಗ್ಗೆ ಅವರಿಗೇ ತಿಳಿಸಲಾಗುತ್ತದೆ – ಪರಮಾತ್ಮನು ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ತನುವಿನಿಂದ ರಚಿಸಿದರು, ಮೊದಲ ವ್ಯಕ್ತಿ ಬ್ರಹ್ಮಾರವರನ್ನು ರಚಿಸಿದರು. ಅಂದಾಗ ಪರಮಾತ್ಮನು ಸೃಷ್ಟಿಯ ಯಾವ ಆದಿಯನ್ನು ರಚಿಸಿದರು, ಅದನ್ನು ಅವಶ್ಯವಾಗಿ ಪರಮಾತ್ಮನೂ ಸಹ ಈ ಸೃಷ್ಟಿಯಲ್ಲಿ ತನ್ನ ಪಾತ್ರವನ್ನಭಿನಯಿಸಿದ್ದಾರೆ. ಈಗ ಪರಮಾತ್ಮನು ಪಾತ್ರವನ್ನು ಹೇಗೆ ಅಭಿನಯಿಸುತ್ತಾರೆ? ಮೊದಲು ಪರಮಾತ್ಮನು ಸೃಷ್ಟಿಯನ್ನು ರಚಿಸಿದರು, ಅದರಲ್ಲಿಯೂ ಮೊದಲು ಬ್ರಹ್ಮಾರವರನ್ನು ರಚಿಸಿದರು, ಹಾಗಾದರೆ ಮೊದಲು ಬ್ರಹ್ಮಾರವರ ಆತ್ಮವು ಪವಿತ್ರವಾಯಿತು, ಅವರೇ ಹೋಗಿ ಶ್ರೀಕೃಷ್ಣನಾದರು. ನಂತರದಲ್ಲಿ ಅದೇ ತನುವಿನ ಮೂಲಕ ದೇವಿ-ದೇವತೆಗಳ ಸೃಷ್ಟಿಯ ಸ್ಥಾಪನೆಯಾಯಿತು. ಹಾಗಾದರೆ ದೈವೀ ಸೃಷ್ಟಿಯ ರಚನೆಯು ಬ್ರಹ್ಮಾರವರ ತನುವಿನ ಮೂಲಕ ಮಾಡಿಸಿದರು. ಹಾಗಾದರೆ ದೇವಿ-ದೇವತೆಗಳ ಆದಿಪಿತನು ಬ್ರಹ್ಮಾರವರಾದರು, ಬ್ರಹ್ಮಾರವರೇ ಶ್ರೀಕೃಷ್ಣನಾಗುವರು, ಆ ಶ್ರೀಕೃಷ್ಣನೇ ನಂತರದಲ್ಲಿ ಅಂತಿಮಜನ್ಮದಲ್ಲಿ ಬ್ರಹ್ಮಾ ಆಗಿದ್ದಾರೆ. ಈಗ ಇದೇರೀತಿಯೇ ಸೃಷ್ಟಿಯ ನಿಯಮವು ನಡೆಯುತ್ತಾ ಬರುತ್ತದೆ. ಈಗ ಅದೇ ಆತ್ಮವು ಸುಖದ ಪಾತ್ರವನ್ನು ಸಂಪೂರ್ಣಗೊಳಿಸಿ ದುಃಖದ ಪಾತ್ರದಲ್ಲಿ ಬರುತ್ತದೆ, ಅಂದಮೇಲೆ ರಜೊ-ತಮೋ ಸ್ಥಿತಿಯನ್ನು ಪಾರುಮಾಡುತ್ತಾ, ನಂತರ ಶೂದ್ರನಿಂದ ಬ್ರಾಹ್ಮಣನಾಗುತ್ತದೆ. ಅಂದಮೇಲೆ ನಾವು ಬ್ರಹ್ಮಾವಂಶಿಯಿಂದ ಶಿವವಂಶಿ ಸತ್ಯ ಬ್ರಾಹ್ಮಣರಾಗಿದ್ದೇವೆ. ಯಾರು ಬ್ರಹ್ಮಾರವರ ಮೂಲಕ ಅವಿನಾಶಿ ಜ್ಞಾನವನ್ನು ತೆಗೆದುಕೊಂಡು ಪವಿತ್ರವಾಗುತ್ತಾರೆಯೋ ಅವರನ್ನೇ ಈಗ ಬ್ರಹ್ಮಾವಂಶಿ ಎಂದು ಹೇಳುತ್ತಾರೆ.
3. ಓಂ ಶಬ್ಧದ ಯಥಾರ್ಥ ಅರ್ಥ
ಯಾವಾಗ ನಾವು ಓಂ ಶಾಂತಿ ಶಬ್ಧವನ್ನು ಹೇಳುತ್ತೇವೆಂದರೆ, ಮೊಟ್ಟ ಮೊದಲು ಓಂ ಶಬ್ಧದ ಅರ್ಥವನ್ನೂ ಸಹ ಸಂಪೂರ್ಣವಾಗಿ ತಿಳಿಯಬೇಕಾಗಿದೆ. ಒಂದುವೇಳೆ ಓಂ..ನ ಅರ್ಥವೇನೆಂದು ಯಾರನ್ನೇ ಕೇಳಿರಿ? ಅದಕ್ಕೆ ಅವರು ಓಂ…ನ ಅರ್ಥವನ್ನು ಬಹಳ ಉದ್ದಗಲವಾಗಿ ತಿಳಿಸುತ್ತಾರೆ. ಓಂ…ನ ಅರ್ಥ ಓಂಕಾರವನ್ನು ದೀರ್ಘವಾಗಿ ಹೇಳಿ ತಿಳಿಸುತ್ತಾರೆ, ಈ ಓಂನ ಬಗ್ಗೆ ಬಹಳ ಉದ್ದಗಲವಾದ ಶಾಸ್ತ್ರವನ್ನೇ ಮಾಡಿ ಬಿಟ್ಟಿದ್ದಾರೆ ಆದರೆ ವಾಸ್ತವದಲ್ಲಿ ಓಂ…ನ ಅರ್ಥವನ್ನು ಅಷ್ಟು ದೊಡ್ಡದಾಗಿಲ್ಲ. ತಮಗಂತು ಪರಮಾತ್ಮನೇ ಓಂ…ನ ಅರ್ಥವನ್ನು ಬಹಳ ಸಹಜ ಮತ್ತು ಸರಳವಾಗಿ ತಿಳಿಸುತ್ತಾರೆ. ಓಂ…ನ ಅರ್ಥ – ನಾನು ಆತ್ಮನ, ನನ್ನ ಸತ್ಯ ಧರ್ಮ ಶಾಂತ ಸ್ವರೂಪವಾಗಿದೆ. ಈಗ ಈ ಓಂ..ನ ಅರ್ಥದಲ್ಲಿ ಸ್ಥಿತರಾಗಬೇಕಾಗಿದೆ. ಓಂ….ನ ಅರ್ಥ-ನಾನು ಆತ್ಮನು ಪರಮಾತ್ಮನ ಸಂತಾನನಾಗಿದ್ದೇನೆ. ಮುಖ್ಯವಾದ ಮಾತು – ಓಂ…ನ ಅರ್ಥದಲ್ಲಿಯೇ ಸ್ಥಿತರಾಗುವುದು, ಬಾಕಿ ಮುಖದಿಂದ ಓಂ…ನ ಉಚ್ಛಾರಣೆಯ ಅವಶ್ಯಕತೆಯಿಲ್ಲ. ಇದಂತು ಬುದ್ಧಿಯಲ್ಲಿ ನಿಶ್ಚಯ ಮಾಡಿಟ್ಟುಕೊಂಡು ನಡೆಯಬೇಕು. ಓಂ…ನ ಅರ್ಥವೇನಿದೆಯೋ ಅದರ ಸ್ವರೂಪದಲ್ಲಿ ಸ್ಥಿತರಾಗಬೇಕು. ಅವರುಗಳಂತು ಭಲೆ ಓಂ..ನ ಅರ್ಥವನ್ನು ತಿಳಿಸುತ್ತಾರೆ ಆದರೆ ಆ ಸ್ವರೂಪದಲ್ಲಿ ಸ್ಥಿತರಾಗುವುದಿಲ್ಲ. ನಾವಂತು ಓಂ…ನ ಸ್ವರೂಪವನ್ನು ತಿಳಿದಿದ್ದೇವೆ, ಆದ್ದರಿಂದ ಆ ಸ್ವರೂಪದಲ್ಲಿ ಸ್ಥಿತರಾಗುತ್ತೇವೆ. ನಾವು ಇದನ್ನೂ ತಿಳಿದಿದ್ದೇವೆ – ಪರಮಾತ್ಮನು ಬೀಜರೂಪವಾಗಿದ್ದಾರೆ ಮತ್ತು ಆ ಬೀಜರೂಪ ಪರಮಾತ್ಮನು ಈ ಇಡೀ ವೃಕ್ಷವನ್ನು ಹೇಗೆ ರಚಿಸಿದರು ಎಂಬುದರ ಸಂಪೂರ್ಣ ಜ್ಞಾನವು ನಮಗೀಗ ಸಿಗುತ್ತಿದೆ. ಒಳ್ಳೆಯದು – ಓಂ ಶಾಂತಿ.
➤ Email me Murli: Receive Daily Murli on your email. Subscribe!