10 September 2021 KANNADA Murli Today | Brahma Kumaris

Read and Listen today’s Gyan Murli in Kannada

September 9, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ನೀವು ಆತ್ಮಿಕ ತಂದೆಯಿಂದ ಹೊಸ-ಹೊಸ ಆತ್ಮಿಕ ಮಾತುಗಳನ್ನು ಕೇಳುತ್ತಿದ್ದೀರಿ, ನೀವು ತಿಳಿದುಕೊಂಡಿದ್ದೀರಿ - ಹೇಗೆ ನಾವಾತ್ಮರು ತಮ್ಮ ರೂಪವನ್ನು ಬದಲಾಯಿಸಿಕೊಂಡು ಬಂದಿದ್ದೇವೆಯೋ ಹಾಗೆಯೇ ತಂದೆಯೂ ಬಂದಿದ್ದಾರೆ''

ಪ್ರಶ್ನೆ:: -

ಚಿಕ್ಕ-ಚಿಕ್ಕ ಮಕ್ಕಳು ತಂದೆಯ ತಿಳಿಸುವಿಕೆಯ ಮೇಲೆ ಚೆನ್ನಾಗಿ ಗಮನ ನೀಡಿದ್ದೇ ಆದರೆ ಯಾವ ಬಿರುದನ್ನು ಪಡೆಯಬಹುದು?

ಉತ್ತರ:-

ಆಧ್ಯಾತ್ಮಿಕ ಲೀಡರ್ ಚಿಕ್ಕ ಮಕ್ಕಳು ಒಂದುವೇಳೆ ಸಾಹಸದ ಕಾರ್ಯವನ್ನು ಮಾಡಿ ತೋರಿಸಿದರೆ, ತಂದೆಯನ್ನು ಏನನ್ನು ಕೇಳುವರು ಅದರ ಮೇಲೆ ಗಮನ ನೀಡಿ ಅನ್ಯರಿಗೂ ತಿಳಿಸಿದರೆ ಅವರನ್ನು ಎಲ್ಲರೂ ಬಹಳ ಪ್ರೀತಿ ಮಾಡುವರು, ತಂದೆಯ ಹೆಸರೂ ಪ್ರಸಿದ್ಧವಾಗುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಆಕಾಶ ಸಿಂಹಾಸನವನ್ನು ಬಿಟ್ಟು ಬಾ…..

ಓಂ ಶಾಂತಿ. ಮಕ್ಕಳು ಕರೆದರು ತಂದೆಯು ಪ್ರತ್ಯುತ್ತರ ನೀಡಿದರು. ಮಕ್ಕಳು ಪ್ರತ್ಯಕ್ಷದಲ್ಲಿ ಏನು ಹೇಳುತ್ತಾರೆಂದರೆ ಬಾಬಾ ತಾವು ಪುನಃ ರಾವಣ ರಾಜ್ಯದಲ್ಲಿ ಬಂದು ಬಿಡಿ, ಪುನಃ ಮಾಯೆಯ ನೆರಳು ಬಿದ್ದಿದೆ ಎಂಬ ಶಬ್ಧವೂ ಇದೆಯಲ್ಲವೆ. ರಾವಣನಿಗೆ ಮಾಯೆಯೆಂದು ಹೇಳಲಾಗುತ್ತದೆ ಆದ್ದರಿಂದ ಕೂಗುತ್ತಾರೆ. ರಾವಣ ರಾಜ್ಯವು ಬಂದು ಬಿಟ್ಟಿದೆ ಆದ್ದರಿಂದ ಈಗ ಪುನಃ ಬಂದು ಬಿಡಿ, ಈ ರಾವಣ ರಾಜ್ಯದಲ್ಲಿ ಬಹಳ ದುಃಖವಿದೆ, ನಾವು ಬಹಳ ದುಃಖಿ-ಪಾಪಾತ್ಮರಾಗಿ ಬಿಟ್ಟಿದ್ದೇವೆ. ಈಗ ತಂದೆಯು ಸನ್ಮುಖದಲ್ಲಿದ್ದಾರೆ. ಮಕ್ಕಳಿಗೆ ತಿಳಿದಿದೆ – ಪುನಃ ಅದೇ ಮಹಾಭಾರತ ಯುದ್ಧವು ನಿಂತಿದೆ. ತಂದೆಯು ಜ್ಞಾನ ಮತ್ತು ರಾಜಯೋಗವನ್ನು ಕಲಿಸುತ್ತಿದ್ದಾರೆ. ಹೇ ನಿರಾಕಾರ ಪರಮಪಿತ ಪರಮಾತ್ಮ, ನಿರಾಕಾರನು ಬಂದು ಇಲ್ಲಿ ಸಾಕಾರ ರೂಪವನ್ನು ಧಾರಣೆ ಮಾಡಿ ರೂಪ ಬದಲಾಯಿಸಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವೂ ಸಹ ಆ ಬ್ರಹ್ಮ ತತ್ವ ಅಥವಾ ನಿರಾಕಾರಿ ಪ್ರಪಂಚದ ನಿವಾಸಿಗಳಾಗಿದ್ದೀರಿ. ನೀವೂ ಸಹ ರೂಪ ಬದಲಾಯಿಸಿದ್ದೀರಿ, ಇದು ಯಾರಿಗೂ ಗೊತ್ತಿಲ್ಲ. ಯಾವ ಆತ್ಮವು ನಿರಾಕಾರನಾಗಿದೆಯೋ ಅದೇ ಬಂದು ಸಾಕಾರವನ್ನು ಧಾರಣೆ ಮಾಡಿಕೊಳ್ಳುತ್ತದೆ. ಅದು ನಿರಾಕಾರಿ ಪ್ರಪಂಚವಾಗಿದೆ, ಇದು ಸಾಕಾರಿ ಪ್ರಪಂಚವಾಗಿದೆ, ಮಧ್ಯದಲ್ಲಿರುವುದು ಆಕಾರಿ ಪ್ರಪಂಚ, ಅದು ಬೇರೆಯಾಗಿದೆ. ನಾವು ಶಾಂತಿಧಾಮ ಅಥವಾ ನಿರ್ವಾಣಧಾಮದಿಂದ ಬರುತ್ತೇವೆಂಬುದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಯಾವಾಗ ಮೊಟ್ಟ ಮೊದಲು ಹೊಸ ರಚನೆಯನ್ನು ರಚಿಸಬೇಕಾಗುತ್ತದೆಯೋ ಆಗ ಸೂಕ್ಷ್ಮವತನವನ್ನೇ ರಚಿಸುತ್ತಾರೆ. ಸೂಕ್ಷ್ಮವತನದಲ್ಲಿ ನೀವು ಹೋಗಬಲ್ಲಿರಿ, ಮತ್ತ್ಯಾವುದೇ ಸಮಯದಲ್ಲಿ ಅಲ್ಲಿಗೆ ಹೋಗುವುದಿಲ್ಲ. ಮೊಟ್ಟ ಮೊದಲಿಗೆ ನೀವು ಬಂದಾಗ ಸೂಕ್ಷ್ಮವತನದ ಮೂಲಕ ಬರುವುದಿಲ್ಲ. ನೇರವಾಗಿ ಬರುತ್ತೀರಿ, ಈಗ ನೀವು ಸೂಕ್ಷ್ಮವತನಕ್ಕೆ ಬಂದು ಹೋಗುತ್ತೀರಿ. ಕಾಲ್ನಡಿಗೆಯಲ್ಲಿ ಹೋಗುವ ಮಾತಿಲ್ಲ, ಇದು ನೀವು ಮಕ್ಕಳಿಗೆ ಸಾಕ್ಷಾತ್ಕಾರವಾಗುತ್ತದೆ. ಮೂಲವತನದ ಸಾಕ್ಷಾತ್ಕಾರವೂ ಆಗುತ್ತದೆ ಆದರೆ ಹೋಗಲು ಸಾಧ್ಯವಿಲ್ಲ. ವೈಕುಂಠದ ಸಾಕ್ಷಾತ್ಕಾರವೂ ಆಗುತ್ತದೆ, ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಸಂಪೂರ್ಣ ಪವಿತ್ರರಾಗುವವರೆಗೆ ನೀವು ಹೋಗಲು ಸಾಧ್ಯವಿಲ್ಲ. ನಾವು ಸೂಕ್ಷ್ಮವತನಕ್ಕೆ ಹೋಗಬಲ್ಲೆವು ಎಂದು ಹೇಳುವಂತಿಲ್ಲ. ನೀವು ಸಾಕ್ಷಾತ್ಕಾರ ಮಾಡಬಹುದು, ಶಿವ ತಂದೆ ಮತ್ತು ದಾದಾ ಮತ್ತು ನೀವು ಮಕ್ಕಳಿದ್ದೀರಿ. ನೀವು ಮಕ್ಕಳು ಹೇಗೆ ಹೊಸ-ಹೊಸ ಆತ್ಮಿಕ ಮಾತುಗಳನ್ನು ಕೇಳುತ್ತೀರಿ, ಈ ಮಾತುಗಳು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಭಲೆ ನಿರಾಕಾರಿ ಪ್ರಪಂಚವೆಂದು ಹೇಳುತ್ತಾರೆ ಆದರೆ ಅದು ಹೇಗಿರುತ್ತದೆ ಎಂಬುದನ್ನು ಮನುಷ್ಯರಿಗೆ ತಿಳಿದಿಲ್ಲ. ಮೊದಲಿಗೆ ಆತ್ಮನನ್ನೇ ತಿಳಿದುಕೊಂಡಿಲ್ಲ ಅಂದಮೇಲೆ ಮತ್ತೆ ನಿರಾಕಾರಿ ಪ್ರಪಂಚವನ್ನೇನು ತಿಳಿದುಕೊಳ್ಳುವರು! ತಂದೆಯು ಮೊದಲು ಬಂದು ಆತ್ಮಾನುಭೂತಿ ಮಾಡಿಸುತ್ತಾರೆ. ನೀವಾತ್ಮರಾಗಿದ್ದೀರಿ, ರೂಪ ಬದಲಾಯಿಸಿದ್ದೀರಿ ಅರ್ಥಾತ್ ನಿರಾಕಾರಿಯಿಂದ ಸಾಕಾರದಲ್ಲಿ ಬಂದಿದ್ದೀರಿ. ನಾವಾತ್ಮರು ಹೇಗೆ 84 ಜನ್ಮಗಳನ್ನು ಪಡೆಯುತ್ತೇವೆ ಎಂಬುದನ್ನು ನೀವೀಗ ತಿಳಿದುಕೊಳ್ಳುತ್ತೀರಿ. ಇದೆಲ್ಲಾ ಪಾತ್ರವು ಆತ್ಮದಲ್ಲಿ ರೆಕಾರ್ಡ್ನಂತೆ ಅಡಕವಾಗಿದೆ. ಮೊದಲು ಈ ಮಾತುಗಳನ್ನು ತಿಳಿಸುತ್ತಿದ್ದರು, ಈಗ ತಂದೆಯು ಹೇಳುತ್ತಾರೆ – ನಿಮಗೆ ಗುಹ್ಯ ರಮಣೀಕ ಮಾತುಗಳನ್ನು ತಿಳಿಸುತ್ತೇನೆ ಯಾವುದನ್ನು ನೀವು ಮೊದಲು ತಿಳಿದುಕೊಂಡಿರಲಿಲ್ಲ ಅದನ್ನು ಈಗ ತಿಳಿದುಕೊಂಡಿದ್ದೀರಿ. ಹೊಸ-ಹೊಸ ಮಾತುಗಳು ಬುದ್ಧಿಯಲ್ಲಿ ಬರತೊಡಗುತ್ತವೆ ಆದ್ದರಿಂದ ನೀವು ಅನ್ಯರಿಗೂ ಬಹು ಬೇಗನೆ ತಿಳಿಸಬಲ್ಲಿರಿ. ದಿನ-ಪ್ರತಿದಿನ ಈ ಬ್ರಾಹ್ಮಣ ವೃಕ್ಷವು ವೃದ್ಧಿಯಾಗುತ್ತಾ ಹೋಗುವುದು, ಇದೇ ಮತ್ತೆ ದೈವೀ ವೃಕ್ಷವಾಗುವುದು, ಬ್ರಾಹ್ಮಣರೇ ವೃದ್ಧಿಯಾಗುತ್ತಾರೆ. ನೋಡಲು ಎಷ್ಟು ಚಿಕ್ಕದಾಗಿ ಕಾಣುತ್ತದೆ, ಹೇಗೆ ವಿಶ್ವದ ನಕ್ಷೆಯಲ್ಲಿ ಭಾರತವನ್ನು ನೋಡಿದಾಗ ಎಷ್ಟು ಚಿಕ್ಕದಾಗಿ ಕಾಣಿಸುತ್ತದೆ! ವಾಸ್ತವದಲ್ಲಿ ಭಾರತವು ಎಷ್ಟು ದೊಡ್ಡದಾಗಿದೆ. ಹಾಗೆಯೇ ಜ್ಞಾನಕ್ಕಾಗಿ ಹೇಳಲಾಗುತ್ತದೆ – ಮನ್ಮನಾಭವ ಅರ್ಥಾತ್ ತಂದೆಯನ್ನು ನೆನಪು ಮಾಡಿ. ಬೀಜವು ಎಷ್ಟು ಚಿಕ್ಕದಾಗಿರುತ್ತದೆ ಅದರಿಂದ ಎಷ್ಟು ದೊಡ್ಡ ವೃಕ್ಷವು ಬರುತ್ತದೆಯೋ ಹಾಗೆಯೇ ಈ ಬ್ರಾಹ್ಮಣ ಕುಲವೂ ಚಿಕ್ಕದಾಗಿದೆ, ವೃದ್ಧಿಯಾಗುತ್ತಾ ಹೋಗುತ್ತದೆ. ನಿಮ್ಮ ಬುದ್ಧಿಯಲ್ಲಿದೆ, ನಾವು ಈ ಸಮಯದಲ್ಲಿ ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. 84 ಜನ್ಮಗಳ ಏಣಿಯು ಬಹಳ ಚೆನ್ನಾಗಿದೆ. ನೀವು ಮಕ್ಕಳು ತಿಳಿಸಬಹುದು – ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವರೋ ಅವರೇ ಬಂದು ತಿಳಿದುಕೊಳ್ಳುತ್ತಾರೆ. ಮತ್ತೆ ಕೆಲವರು 84, ಕೆಲವರು 80 ಜನ್ಮಗಳನ್ನೂ ತೆಗೆದುಕೊಳ್ಳುವರು. ಇದನ್ನಂತೂ ತಿಳಿದುಕೊಳ್ಳುತ್ತಾರೆ – ನಾವು ದೈವೀ ಕುಲದವರಾಗಿದ್ದೇವೆ, ನಾವು ಸೂರ್ಯವಂಶಿ ಮನೆತನದವರಾಗಿದ್ದೇವೆ. ಒಂದುವೇಳೆ ಅನುತ್ತೀರ್ಣರಾದರೆ ಮತ್ತೆ ತಡವಾಗಿ ಬರುವರು, ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಭಲೆ ಬಹಳ ಜ್ಞಾನವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ ಆದರೆ ಒಟ್ಟಿಗೆ ಬರುವುದಿಲ್ಲ ಅಲ್ಲವೆ. ಒಟ್ಟಿಗೆ ಹೋಗುತ್ತಾರೆ, ಬರುವಾಗ ಕೆಲಕೆಲವರೇ ಬರುತ್ತಾರೆ. ಇದು ತಿಳಿದುಕೊಳ್ಳುವ ಮಾತಲ್ಲವೆ. ಎಲ್ಲರೂ ಒಟ್ಟಿಗೆ ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುವರು! ತಂದೆಯನ್ನು ಕರೆಯುತ್ತಾರೆ, ಬಾಬಾ ಪುನಃ ಬಂದು ಗೀತಾ ಜ್ಞಾನವನ್ನು ತಿಳಿಸಿರಿ. ಇದರಿಂದಲೇ ಸಿದ್ಧವಾಗುತ್ತದೆ, ಯಾವಾಗ ಮಹಾಭಾರತ ಯುದ್ಧವು ಆರಂಭವಾಗುವುದೋ ಆ ಸಮಯದಲ್ಲಿಯೇ ತಂದೆಯು ಬಂದು ಗೀತಾ ಜ್ಞಾನವನ್ನು ತಿಳಿಸುತ್ತಾರೆ, ಅದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ, ಕಲ್ಪ-ಕಲ್ಪವೂ 5000 ವರ್ಷಗಳ ನಂತರ ತಂದೆಯು ಬಂದು ನಮಗೆ ಜ್ಞಾನವನ್ನು ಕೊಡುತ್ತಾರೆ, ಸತ್ಯ ನಾರಾಯಣನ ಕಥೆಯನ್ನೂ ಕೇಳುತ್ತಾರಲ್ಲವೆ. ಇವರು ಎಲ್ಲಿಂದ ಬರುವರು ಮತ್ತೆ ಎಲ್ಲಿಗೆ ಹೋದರು, ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ರಾವಣನ ಯಾವ ನೆರಳು ಬಿದ್ದಿದೆಯೋ ಡ್ರಾಮಾನುಸಾರ ಈ ರಾವಣ ರಾಜ್ಯವು ಈಗ ಸಮಾಪ್ತಿಯಾಗಲಿದೆ. ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ ಮತ್ತು ಈ ಸಮಯದಲ್ಲಿ ರಾವಣ ರಾಜ್ಯವಿದೆ. ಈಗ ನೀವು ತಿಳಿದುಕೊಳ್ಳುತ್ತೀರಿ – ನಮ್ಮಲ್ಲಿ ಯಾವ ಜ್ಞಾನ ಬಂದಿದೆಯೋ ಅದು ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ. ನಮ್ಮದು ಇದು ಹೊಸ ಪ್ರಪಂಚಕ್ಕಾಗಿ ಹೊಸ ವಿದ್ಯೆಯಾಗಿದೆ. ಗೀತೆಯಲ್ಲಿ ಕೃಷ್ಣನ ಹೆಸರನ್ನೇ ಬರೆದಿದ್ದಾರೆ, ಅದಂತೂ ಹಳೆಯ ಮಾತಾಯಿತಲ್ಲವೆ. ನೀವೀಗ ಹೊಸ ಮಾತುಗಳನ್ನು ಕೇಳುತ್ತಿದ್ದೀರಿ. ಇದನ್ನು ಕೇಳಿದಾಗ ಶಿವ ಭಗವಾನುವಾಚ ಎಂಬುದನ್ನು ನಾವು ಎಂದೂ ಕೇಳಿರಲಿಲ್ಲ, ಕೃಷ್ಣ ಭಗವಾನುವಾಚ ಎಂದು ಕೇಳುತ್ತಾ ಬಂದೆವು ಎಂದು ಹೇಳುತ್ತಾರೆ. ನೀವು ಹೊಸ ಪ್ರಪಂಚಕ್ಕಾಗಿ ಎಲ್ಲವೂ ಹೊಸ ಮಾತುಗಳನ್ನು ಕೇಳುತ್ತೀರಿ. ಇದು ಎಲ್ಲರಿಗೂ ತಿಳಿದಿದೆ, ಭಾರತವು ಪ್ರಾಚೀನವಾಗಿದೆ ಆದರೆ ಯಾವಾಗ ಆಗಿತ್ತು? ಈ ಲಕ್ಷ್ಮೀ-ನಾರಾಯಣರ ರಾಜ್ಯವು ಹೇಗೆ ನಡೆಯಿತು? ಇವರು ಹೇಗೆ ರಾಜ್ಯವನ್ನು ಪಡೆದರು? ಮತ್ತೆ ಎಲ್ಲಿಗೆ ಹೋದರು? ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಇವರ ರಾಜ್ಯವು ಸಮಾಪ್ತಿಯಾಗಬೇಕಾದರೆ ಏನಾಯಿತು? ಯಾರ ಗೆದ್ದರು? ಏನನ್ನೂ ತಿಳಿದುಕೊಳ್ಳುವುದಿಲ್ಲ. ಅವರಂತೂ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಆದರೆ ಲಕ್ಷ್ಮೀ-ನಾರಾಯಣರು ಲಕ್ಷಾಂತರ ವರ್ಷಗಳು ರಾಜ್ಯ ಮಾಡಿರಲು ಸಾಧ್ಯವೇ ಇಲ್ಲ. ಆ ರೀತಿ ಇದ್ದಿದ್ದೇ ಆದರೆ ಸೂರ್ಯವಂಶಿ ರಾಜರು ಅನೇಕ ಮಂದಿ ಆಗಿ ಬಿಡುವರು. ಯಾರದು ಹೆಸರೇ ಇಲ್ಲ, 1250 ವರ್ಷಗಳ ಕಥೆಯೇ ಯಾರಿಗೂ ತಿಳಿದಿಲ್ಲ, ಜೊತೆಗೆ ಲಕ್ಷ್ಮೀ-ನಾರಾಯಣರ ರಾಜ್ಯವು ಎಲ್ಲಿಯವರೆಗೆ ನಡೆಯಿತು, ಇದೂ ಸಹ ಯಾರಿಗೂ ಗೊತ್ತಿಲ್ಲ, ಲಕ್ಷಾಂತರ ವರ್ಷಗಳ ಮಾತು ಯಾರಿಗೆ ಹೇಗೆ ತಿಳಿಯುತ್ತದೆ, ಯಾರ ಬುದ್ಧಿಯೂ ಕೆಲಸ ಮಾಡುವುದಿಲ್ಲ. ಈಗ ನೀವು ಚಿಕ್ಕ-ಚಿಕ್ಕ ಮಕ್ಕಳು ಬಹು ಬೇಗನೆ ತಿಳಿಸಬಲ್ಲಿರಿ, ಇದು ಬಹಳ ಸಹಜವಾಗಿದೆ. ಎಲ್ಲವೂ ಭಾರತದ್ದೇ ಕಥೆಯಾಗಿದೆ. ಸತ್ಯ-ತ್ರೇತಾಯುಗದಲ್ಲಿ ಭಾರತವಾಸಿ ರಾಜರಿದ್ದರು, ಬೇರೆ-ಬೇರೆ ಚಿತ್ರಗಳೂ ಇವೆ. ಇಂದಿಗೆ 5000 ವರ್ಷಗಳ ಮೊದಲೂ ರಾಜರಿದ್ದರು, ಇಲ್ಲಂತೂ ಸಾವಿರಾರು ವರ್ಷಗಳೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ – ಇದು ಕೇವಲ 5000 ವರ್ಷಗಳ ಕಥೆಯಾಗಿದೆ, ಇಂದಿಗೆ 5000 ವರ್ಷಗಳ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ವಂಶಾವಳಿಯಿತ್ತು ನಂತರ ಪುನರ್ಜನ್ಮ ತೆಗೆದುಕೊಳ್ಳಬೇಕಾಯಿತು. ಚಿಕ್ಕ-ಚಿಕ್ಕ ಮಕ್ಕಳು ಇಷ್ಟು ತಿಳಿಸಿದರೂ ಸಹ ಇವರು ಬಹಳ ಒಳ್ಳೆಯ ಜ್ಞಾನವನ್ನು ಓದಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಈ ಆಧ್ಯಾತ್ಮಿಕ ಜ್ಞಾನವು ಆತ್ಮಿಕ ತಂದೆಯ ವಿನಃ ಮತ್ತ್ಯಾರ ಬಳಿಯೂ ಇಲ್ಲ. ನಮಗೂ ಸಹ ಆತ್ಮಿಕ ತಂದೆಯು ತಿಳಿಸಿದ್ದಾರೆ ಎಂದು ನೀವು ಹೇಳುತ್ತೀರಿ. ಆತ್ಮವು ಶರೀರದ ಮೂಲಕ ಕೇಳಿಸಿಕೊಳ್ಳುತ್ತದೆ, ನಾನು ಇಂತಹವನಾಗುತ್ತೇನೆ ಎಂದು ಆತ್ಮವೇ ಹೇಳುತ್ತದೆ. ಮನುಷ್ಯರು ಸ್ವಯಂನ್ನು ಅರಿತುಕೊಳ್ಳುವುದಿಲ್ಲ. ತಂದೆಯು ನಮಗೆ ಆತ್ಮಾನುಭೂತಿ ಮಾಡಿಸಿದ್ದಾರೆ, ನಾವಾತ್ಮರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಇಂತಿಂತಹ ಮಾತುಗಳನ್ನು ಕುಳಿತು ತಿಳಿಸಿದರೆ ಇವರಿಗೆ ಬಹಳ ಒಳ್ಳೆಯ ಜ್ಞಾನವಿದೆಯೆಂದು ಹೇಳುತ್ತಾರೆ. ಭಗವಂತನು ಜ್ಞಾನ ಸಾಗರನಲ್ಲವೆ. ಭಗವಂತ ಜ್ಞಾನ ಸಾಗರ, ಆನಂದ ಸಾಗರ, ಮುಕ್ತಿದಾತ, ಮಾರ್ಗದರ್ಶಕನೆಂದು ಹಾಡುತ್ತಾರೆ ಆದರೆ ಮಾರ್ಗದರ್ಶಕನಾಗಿ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಇದನ್ನು ಮಕ್ಕಳು ತಿಳಿಸಬಹುದು. ಆತ್ಮಿಕ ತಂದೆಯು ಜ್ಞಾನ ಸಾಗರನಾಗಿದ್ದಾರೆ, ಇವರಿಗೆ ಆನಂದ ಸಾಗರನೆಂದು ಹೇಳಲಾಗುತ್ತದೆ. ಯಾವಾಗ ಮನುಷ್ಯರು ಬಹಳ ದುಃಖಿಯಾಗುವರೋ ಆಗ ತಂದೆಯು ಬಂದು ಮುಕ್ತಗೊಳಿಸುತ್ತಾರೆ. ಒಂದು ರಾವಣನ ರಾಜ್ಯವಿರುತ್ತದೆ, ಸ್ವರ್ಗದ ರಚಯಿತ ತಂದೆಯೆಂದು ಹೇಳಲಾಗುತ್ತದೆ. ನರಕಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ಈ ಜ್ಞಾನವನ್ನು ಯಾರಿಗಾದರೂ ಕುಳಿತು ತಿಳಿಸಿದರೆ ಹೋಗಿ ಎಲ್ಲರಿಗೂ ತಿಳಿಸಿರಿ ಎಂದು ಹೇಳುತ್ತಾರೆ ಆದರೆ ನಿಮ್ಮಲ್ಲಿ ಧಾರಣೆಯು ಬಹಳ ಚೆನ್ನಾಗಿರಬೇಕು. ಪ್ರದರ್ಶನಿ ಚಿತ್ರಗಳ ಪುಸ್ತಕವೂ ಇದೆ. ಇನ್ನೂ ಹೆಚ್ಚು ತಿಳಿದುಕೊಂಡಿದ್ದೇ ಆದರೆ ಇದರ ಮೇಲೆ ಬಹಳ ಸರ್ವೀಸ್ ಮಾಡಬಹುದು.

ಈ ಮಗುವು (ಜಯಂತಿ ಬೆಹೆನ್) ಸಹ ಲಂಡನ್ನಲ್ಲಿ ತಮ್ಮ ಶಿಕ್ಷಕರಿಗೆ ತಿಳಿಸಬಹುದಾಗಿದೆ. ಅಲ್ಲಿ ಈ ಸರ್ವೀಸ್ ಮಾಡಬಹುದು. ಪ್ರಪಂಚದಲ್ಲಿ ಬಹಳಷ್ಟು ಮೋಸವಿದೆಯಲ್ಲವೆ. ರಾವಣನು ಎಲ್ಲರಿಗೆ ಮೋಸ ಮಾಡಿದ್ದಾನೆ, ಮಕ್ಕಳು ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಬಹುದಾಗಿದೆ, ಲಕ್ಷ್ಮೀ-ನಾರಾಯಣರ ರಾಜ್ಯವು ಎಷ್ಟು ಸಮಯ ನಡೆಯಿತು ಮತ್ತು ಯಾವ ಸಂವತ್ಸರದಿಂದ ಇಸ್ಲಾಮಿ, ಬೌದ್ಧ, ಕ್ರಿಶ್ಚಿಯನ್ನರು ಬರುತ್ತಾರೆ, ವೃದ್ಧಿಯಾಗುತ್ತಾ ಆಗುತ್ತಾ ವಿಭಿನ್ನ ಧರ್ಮಗಳ ವೃಕ್ಷವು ಎಷ್ಟು ದೊಡ್ಡದಾಗಿ ಬಿಡುತ್ತದೆ. ಅರ್ಧ ಕಲ್ಪದ ನಂತರ ಅನ್ಯ ಧರ್ಮಗಳೂ ಬರುತ್ತವೆ. ಇಂತಿಂತಹ ಮಾತುಗಳನ್ನು ಕುಳಿತು ತಿಳಿಸಿದ್ದೇ ಆದರೆ ಕೇಳುವವರು ಇವರಿಗೆ ಆಧ್ಯಾತ್ಮಿಕ ಲೀಡರ್, ಇವರಲ್ಲಿ ಆಧ್ಯಾತ್ಮಿಕ ಜ್ಞಾನವಿದೆ ಎಂದು ಹೇಳುವರು. ಈ ಜ್ಞಾನವು ಭಾರತದಲ್ಲಿ ಸಿಗುತ್ತಿದೆ, ಆತ್ಮಿಕ ತಂದೆಯು ಕೊಡುತ್ತಿದ್ದಾರೆ. ಅವರು ಬೀಜ ರೂಪನಾಗಿದ್ದಾರೆ, ಇದು ಉಲ್ಟಾ ವೃಕ್ಷವಾಗಿದೆ. ಬೀಜವು ಜ್ಞಾನಪೂರ್ಣನಾಗಿದ್ದಾರೆ, ಬೀಜಕ್ಕೆ ವೃಕ್ಷದ ಜ್ಞಾನವಿರುತ್ತದೆಯಲ್ಲವೆ. ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ, ಭಾರತದ ದೇವತಾ ಧರ್ಮವೆಂದು ಇದಕ್ಕೆ ಹೇಳಲಾಗುತ್ತದೆ. ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯ, ನಂತರ ರಾಮ-ಸೀತೆಯರ ರಾಜ್ಯವಾಗುತ್ತದೆ, ಇದು ಅರ್ಧ ಕಲ್ಪ ನಡೆಯುತ್ತದೆ ನಂತರ ಇಸ್ಲಾಮಿಗಳು ಬರುತ್ತಾರೆ. ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ, ಹೀಗೆ ಈ ಮಗು ಹೋಗಿ ಭಾಷಣ ಮಾಡಿದರೆ ಮತ್ತು ಈ ವೃಕ್ಷವು ಹೇಗೆ ಇಮರ್ಜ್ ಆಗುತ್ತದೆ, ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ. ಕೇಳಬಹುದಾಗಿದೆ, ವಿದೇಶದಲ್ಲಿ ಮತ್ತ್ಯಾರೂ ಇಲ್ಲ. ಈ ಮಗು ಹೋಗಿ ತಿಳಿಸಲಿ – ಇದು ಕಲಿಯುಗದ ಅಂತ್ಯವಾಗಿದೆ, ಸತ್ಯಯುಗ ಬರಲಿದೆ. ಇದನ್ನು ಕೇಳಿದವರು ಬಹಳ ಖುಷಿ ಪಡುತ್ತಾರೆ. ತಂದೆಯು ಯುಕ್ತಿಯನ್ನು ತಿಳಿಸುತ್ತಿರುತ್ತಾರೆ, ಇದರ ಮೇಲೆ ಗಮನ ಕೊಡಬೇಕಾಗಿದೆ, ಚಿಕ್ಕ ಮಕ್ಕಳಿಗೆ ಬಹಳ ಮಾನ್ಯತೆಯು ಸಿಗುವುದು. ಚಿಕ್ಕವರು ಯಾವುದೇ ಸಾಹಸದ ಕಾರ್ಯವನ್ನು ಮಾಡುತ್ತಾರೆಂದರೆ ಅವರನ್ನು ಬಹಳ ಪ್ರೀತಿ ಮಾಡುತ್ತಾರೆ, ತಂದೆಗೆ ಇದೇ ವಿಚಾರವಿರುತ್ತದೆ – ಇಂತಿಂತಹ ಮಕ್ಕಳು ಈ ಜ್ಞಾನದಲ್ಲಿ ಗಮನ ನೀಡಿದ್ದೇ ಆದರೆ ಆಧ್ಯಾತ್ಮಿಕ ಲೀಡರ್ ಆಗಬಹುದು. ಆತ್ಮಿಕ ತಂದೆಯೇ ಕುಳಿತು ಜ್ಞಾನವನ್ನು ಕೊಡುತ್ತಾರೆ, ಕೃಷ್ಣನಿಗೇ ಭಗವಂತನೆಂದು ಹೇಳುವುದು ತಪ್ಪಾಗಿದೆ. ಭಗವಂತ ನಿರಾಕಾರನಾಗಿದ್ದಾರೆ, ನಾವೆಲ್ಲರೂ ಸಹೋದರರಾಗಿದ್ದೇವೆ, ಅವರು ತಂದೆಯಾಗಿದ್ದಾರೆ. ಎಲ್ಲರೂ ಕಲಿಯುಗದಲ್ಲಿ ಯಾವಾಗ ದುಃಖಿಯಾಗುವರೋ ಆಗ ತಂದೆಯು ಬರುತ್ತಾರೆ. ಯಾವಾಗ ಮತ್ತೆ ಕಲಿಯುಗವಾಗುವುದೋ ಆಗ ತಂದೆಯು ಸ್ವರ್ಗ ಸ್ಥಾಪನೆ ಮಾಡಲು ಬರಬೇಕಾಗುತ್ತದೆ. ಭಾರತವು ಪ್ರಾಚೀನ ಸುಖಧಾಮವಾಗಿತ್ತು, ಸ್ವರ್ಗವಾಗಿತ್ತು, ಬಹಳ ಕಡಿಮೆ ಮನುಷ್ಯರಿದ್ದರು ಬಾಕಿ ಇಷ್ಟೆಲ್ಲಾ ಆತ್ಮರು ಎಲ್ಲಿದ್ದರು? ಶಾಂತಿಧಾಮದಲ್ಲಿ ಇದ್ದರಲ್ಲವೆ ಅಂದಮೇಲೆ ಈ ರೀತಿ ತಿಳಿಸಬೇಕು, ಇದರಲ್ಲಿ ಹೆದರುವ ಮಾತಿಲ್ಲ. ಇದು ಕಥೆಯಾಗಿದೆ. ಕಥೆಯನ್ನು ಖುಷಿಯಿಂದ ಹೇಳಲಾಗುತ್ತದೆ, ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ, ಅದಕ್ಕೆ ಕಥೆಯೆಂದೂ ಹೇಳಬಹುದು, ಜ್ಞಾನವೆಂದೂ ಹೇಳಬಹುದು, ನಿಮಗೆ ಇದು ಪಕ್ಕಾ ನೆನಪಿರಲಿ. ತಂದೆಯು ತಿಳಿಸುತ್ತಾರೆ – ನಾನಾತ್ಮನಲ್ಲಿ ಇಡೀ ವೃಕ್ಷದ ಜ್ಞಾನವಿದೆ, ಅದನ್ನು ನಾನು ಪುನರಾವರ್ತಿಸುತ್ತೇನೆ. ಜ್ಞಾನ ಸಾಗರ ತಂದೆಯು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಿದ್ದಾರೆ, ಇವರು ಹೋಗಿ ಜ್ಞಾನ ಕೊಟ್ಟಿದ್ದೇ ಆದರೆ ತಾವು ಅನ್ಯರನ್ನೂ ಕರೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಆಗ ಕರೆದುಕೊಂಡು ಬರುತ್ತೇವೆಂದು ಹೇಳಿರಿ ಏಕೆಂದರೆ ಅವರು ಇದನ್ನು ತಿಳಿದುಕೊಳ್ಳಬಯಸುತ್ತಾರೆ – ಭಾರತದ ಪ್ರಾಚೀನ ರಾಜಯೋಗವು ಯಾವುದಾಗಿತ್ತು, ಯಾವುದರಿಂದ ಭಾರತವು ಸ್ವರ್ಗವಾಯಿತು, ಅದನ್ನು ಯಾರಾದರೂ ಬಂದು ತಿಳಿಸಲಿ. ಸನ್ಯಾಸಿಗಳು ಏನು ತಿಳಿಸುವರು? ಆತ್ಮಿಕ ಜ್ಞಾನವು ಕೇವಲ ಗೀತೆಯಲ್ಲಿದೆ ಆದ್ದರಿಂದ ಅವರು ಹೋಗಿ ಗೀತೆಯನ್ನೇ ತಿಳಿಸುತ್ತಾರೆ. ಗೀತೆಯನ್ನು ಎಷ್ಟೊಂದು ಓದುತ್ತಾರೆ, ಕಂಠಪಾಠ ಮಾಡಿಕೊಳ್ಳುತ್ತಾ ಇರುತ್ತಾರೆ. ಇದು ಆತ್ಮಿಕ ಜ್ಞಾನವೇ? ಇದಂತೂ ಮನುಷ್ಯರ ಹೆಸರಿನ ಮೇಲೆ ಬರೆದಿದ್ದಾರೆ, ಮನುಷ್ಯರು ಆತ್ಮಿಕ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ನೀವೀಗ ಅಂತರವನ್ನು ತಿಳಿದುಕೊಂಡಿದ್ದೀರಿ, ಆ ಗೀತೆಯಲ್ಲಿ ಮತ್ತು ತಂದೆಯು ಯಾವುದನ್ನು ತಿಳಿಸುತ್ತಾರೆಯೋ ಅದರಲ್ಲಿ ರಾತ್ರಿ-ಹಗಲಿನ ಅಂತರವಿದೆ. ತಂದೆಯು ಜ್ಞಾನ ಕೊಟ್ಟರು ಮತ್ತು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಕೃಷ್ಣನಿಗೆ ಈ ಜ್ಞಾನವು ಇರುವುದಿಲ್ಲ, ಜ್ಞಾನ ಸಾಗರನು ತಂದೆಯಾಗಿದ್ದಾರೆ. ಇವು ಎಷ್ಟು ರಹಸ್ಯಯುಕ್ತ ಮಾತುಗಳಾಗಿವೆ! ಕೃಷ್ಣನ ಆತ್ಮವು ಸತ್ಯಯುಗದಲ್ಲಿದ್ದಾಗ ಜ್ಞಾನವಿರಲಿಲ್ಲ, ಸೂತ್ರವು ಎಷ್ಟೊಂದು ಗಂಟಾಗಿ ಬಿಟ್ಟಿದೆ. ಇವರೆಲ್ಲರೂ ವಿದೇಶಕ್ಕೆ ಹೋಗಿ ಹೆಸರು ಗಳಿಸಬಹುದಾಗಿದೆ, ಭಾಷಣ ಮಾಡಬಹುದು. ತಿಳಿಸಿರಿ, ವಿಶ್ವದ ಚರಿತ್ರೆ-ಭೂಗೋಳದ ಜ್ಞಾನವನ್ನು ನಾವು ನಿಮಗೆ ಕೊಡಬಲ್ಲೆವು, ಭಗವಂತನು ಹೇಗೆ ಸ್ವರ್ಗ ಸ್ಥಾಪನೆ ಮಾಡುತ್ತಾರೆ, ಅದು ಸ್ವರ್ಗದಿಂದ ಮತ್ತೆ ಹೇಗೆ ನರಕವಾಗುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ, ಈ ರೀತಿ ಭಾಷಣದ ವಿಷಯವನ್ನು ಬರೆಯಿರಿ, ನಂತರ ನಾನು ಯಾವುದೇ ಮಾತನ್ನು ಮರೆತಿಲ್ಲವೆ ಎಂದು ನೋಡಿಕೊಳ್ಳಿ, ಮತ್ತೆ ನೆನಪು ಮಾಡಿಕೊಂಡು ಬರೆಯಿರಿ. ಈ ಅಭ್ಯಾಸ ಮಾಡುವುದರಿಂದ ಬಹಳ ಚೆನ್ನಾಗಿ ಬರೆಯುತ್ತೀರಿ. ಬಹಳ ಚೆನ್ನಾಗಿ ತಿಳಿಸುತ್ತೀರಿ ಆಗ ಹೆಸರು ಪ್ರಸಿದ್ಧವಾಗುವುದು. ಇಲ್ಲಿಂದಲೂ ಸಹ ತಂದೆಯು ಯಾರನ್ನಾದರೂ ವಿದೇಶಕ್ಕೆ ಕಳುಹಿಸಬಹುದು. ಇವರು ಹೋಗಿ ತಿಳಿಸಿದರೂ ಸಹ ಬಹಳ ಒಳ್ಳೆಯದು. ಏಳು ದಿನಗಳಲ್ಲಿಯೂ ಬಹಳ ಬುದ್ಧಿವಂತರಾಗಿ ಬಿಡುತ್ತಾರೆ. ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಬೀಜ ಮತ್ತು ವೃಕ್ಷ, ಇದು ವಿವರವಾದ ಜ್ಞಾನವಾಗಿದೆ. ಚಿತ್ರಗಳ ಮೇಲೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಸರ್ವೀಸಿನ ಬಹಳ ಉಮ್ಮಂಗವಿರಬೇಕು. ಬಹಳ ಶ್ರೇಷ್ಠ ಪದವಿಯಾಗುವುದು, ಜ್ಞಾನವು ಅತಿ ಸಹಜವಾಗಿದೆ. ಇದು ಹಳೆಯ ಛೀ ಛೀ ಪ್ರಪಂಚವಾಗಿದೆ, ಸ್ವರ್ಗದ ಮುಂದೆ ಈ ಹಳೆಯ ಪ್ರಪಂಚವು ಹೇಗೆ ಗೊಬ್ಬರದ ಸಮಾನವಾಗಿದೆ, ಇದರಿಂದ ದುರ್ಗಂಧವು ಬರುತ್ತದೆ. ಅದು ಚಿನ್ನದ ಪ್ರಪಂಚ, ಇದು ಗೊಬ್ಬರದ ಪ್ರಪಂಚವಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಈಗ ಈ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ, ಈ ರೀತಿ ಶಾಲೆಗೆ ಓದಲು ಹೋಗುತ್ತೇವೆ. ಅಲ್ಲಿ ಇಂತಹ ವಿಮಾನಗಳಿರುತ್ತವೆ, ಪೂರ್ಣ ಸುರಕ್ಷಿತವಾಗಿರುತ್ತದೆ. ಈ ಖುಷಿಯು ಮಕ್ಕಳಿಗೆ ಆಂತರ್ಯದಲ್ಲಿದ್ದಾಗ ಎಂದೂ ಯಾವುದೇ ಮಾತಿನಲ್ಲಿ ಅಳು ಬರುವುದಿಲ್ಲ. ನಾವು ರಾಜಕುಮಾರ-ಕುಮಾರಿಯರಾಗುತ್ತೇವೆ ಎಂದು ನೀವು ತಿಳಿದುಕೊಂಡಿದ್ದೀರಲ್ಲವೆ ಅಂದಮೇಲೆ ಆಂತರ್ಯದಲ್ಲಿ ನಿಮಗೆ ಏಕೆ ಖುಷಿಯಿರಬಾರದು! ಭವಿಷ್ಯದಲ್ಲಿ ಹೀಗೆ ಶಾಲೆಗೆ ಹೋಗುತ್ತೀರಿ, ಹೀಗೀಗೆ ಮಾಡುತ್ತೀರಿ. ಇದು ಮಕ್ಕಳಿಗೆ ಏಕೆ ಮರೆತು ಹೋಗುತ್ತದೆ! ಬಹಳ ನಶೆಯಿರಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಹಳೆಯ ಛೀ ಛೀ ಗೊಬ್ಬರದ ಸಮಾನ ಪ್ರಪಂಚವನ್ನು ಬುದ್ಧಿಯಿಂದ ಮರೆತು ಸತ್ಯಯುಗೀ ಪ್ರಪಂಚವನ್ನು ನೆನಪು ಮಾಡಿ ಅಪಾರ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ, ಎಂದೂ ಅಳಬಾರದು.

2. ತಂದೆಯು ಯಾವ ಗುಹ್ಯ ರಮಣೀಕ ಮಾತುಗಳನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಿಕೊಂಡು ಎಲ್ಲರಿಗೂ ತಿಳಿಸಬೇಕಾಗಿದೆ, ಆಧ್ಯಾತ್ಮಿಕ ಲೀಡರ್ ಎಂಬ ಬಿರುದನ್ನು ತೆಗೆದುಕೊಳ್ಳಬೇಕಾಗಿದೆ.

ವರದಾನ:-

ಯಾರು ಮಹಾವೀರ ಮಕ್ಕಳಾಗಿದ್ದಾರೆಯೋ ಅವರನ್ನು ಸಾಕಾರಿ ಪ್ರಪಂಚದ ಯಾವುದೇ ಆಕರ್ಷಣೆಗಳು, ತನ್ನ ಕಡೆಗೆ ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಅವರು ಸ್ವಯಂನ್ನು ಒಂದು ಸೆಕೆಂಡಿನಲ್ಲಿ ಭಿನ್ನ ಹಾಗೂ ತಂದೆಯ ಪ್ರಿಯರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದು. ಆದೇಶವು ಸಿಗುತ್ತಿದ್ದಂತೆಯೇ ಅಶರೀರಿ, ಆತ್ಮ-ಅಭಿಮಾನಿ, ಬಂಧನ-ಮುಕ್ತ, ಯೋಗಯುಕ್ತ ಸ್ಥಿತಿಯ ಅನುಭವ ಮಾಡುವವರೇ ಸಹಜಯೋಗಿ, ಸ್ವತಹ ಯೋಗಿ, ಸದಾ ಯೋಗಿ, ಕರ್ಮ ಯೋಗಿ ಮತ್ತು ಶ್ರೇಷ್ಠ ಯೋಗಿ ಆಗಿದ್ದಾರೆ. ಅವರು ಯಾವಾಗ ಬೇಕು, ಎಷ್ಟು ಸಮಯ ಬೇಕೋ, ಭಲೆ ತನ್ನ ಸಂಕಲ್ಪ-ಶ್ವಾಸವನ್ನೂ ಒಬ್ಬ ಪ್ರಾಣೇಶ್ವರ ತಂದೆಯ ನೆನಪಿನಲ್ಲಿ ಸ್ಥಿತಗೊಳಿಸಲು ಸಾಧ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top