10 October 2021 KANNADA Murli Today | Brahma Kumaris

Read and Listen today’s Gyan Murli in Kannada

October 9, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸಫಲತೆಯ ಅಯಸ್ಕಾಂತ - ‘ಹೊಂದಿಕೊಳ್ಳುವುದು ಮತ್ತು ಮೋಲ್ಡ್ ಆಗುವುದು’

♫ ಕೇಳು ಇಂದಿನ ಮುರ್ಲಿ (audio)➤

ಎಲ್ಲರ ಸ್ನೇಹವು ಸ್ನೇಹ ಸಾಗರನಲ್ಲಿ ಸಮಾವೇಶವಾಯಿತು, ಇದೇ ರೀತಿ ಸದಾ ಸ್ನೇಹದಲ್ಲಿ ಸಮಾವೇಶವಾಗಿರುತ್ತಾ ಅನ್ಯರಿಗೂ ಸ್ನೇಹದ ಅನುಭವ ಮಾಡಿಸುತ್ತಾ ನಡೆಯಿರಿ, ಬಾಪ್ದಾದಾ ಸರ್ವ ಮಕ್ಕಳ ವಿಚಾರಗಳು ಸಮಾನ ಮಿಲನವಾಗುವ ಸಮ್ಮೇಳನವನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಹಾರುತ್ತಾ ಬರುವವರಿಗೆ ಸದಾ ಹಾರುವ ಕಲೆಯ ವರದಾನವು ಸ್ವತಹ ಪ್ರಾಪ್ತಿ ಆಗುತ್ತಿರುತ್ತದೆ. ಬಾಪ್ದಾದಾ ಬಂದಿರುವ ಎಲ್ಲಾ ಮಕ್ಕಳ ಉಮ್ಮಂಗ-ಉತ್ಸಾಹವನ್ನು ನೋಡಿ ಎಲ್ಲಾ ಮಕ್ಕಳ ಮೇಲೆ ಸ್ನೇಹದ ಹೂ ಮಳೆಯನ್ನು ಸುರಿಸುತ್ತಿದ್ದಾರೆ. ಸಂಕಲ್ಪಗಳು ಸಮಾನವಾಗುವ ಮಿಲನ ಮತ್ತು ಮುಂದೆ ಸಂಸ್ಕಾರವು ತಂದೆಯ ಸಮಾನ ಮಿಲನವಾಗುವುದು – ಈ ಮಿಲನವೇ ತಂದೆಯ ಮಿಲನವಾಗಿದೆ. ಇದೇ ತಂದೆಯ ಸಮಾನರಾಗುವುದಾಗಿದೆ. ಸಂಕಲ್ಪ ಮಿಲನ, ಸಂಸ್ಕಾರ ಮಿಲನ – ಇದು ಮಿಲನವಾಗುವುದೇ ನಿರ್ಮಾಣರಾಗಿ ನಿಮಿತ್ತರಾಗುವುದಾಗಿದೆ. ಸಮೀಪ ಬರುತ್ತಿದ್ದೀರಿ, ಬಂದೇ ಬರುತ್ತೀರಿ. ಸೇವೆಯ ಸಫಲತೆಯ ಚಿಹ್ನೆಗಳನ್ನು ನೋಡಿ ಹರ್ಷಿತರಾಗುತ್ತಿದ್ದೇವೆ. ಸ್ನೇಹ ಮಿಲನದಲ್ಲಿ ಸದಾ ಸ್ನೇಹಿಯಾಗಿ ಸ್ನೇಹದ ಅಲೆಯನ್ನು ವಿಶ್ವದಲ್ಲಿ ಹರಡಿಸುವುದಕ್ಕಾಗಿ ಬಂದಿದ್ದೀರಿ ಆದರೆ ಪ್ರತಿಯೊಂದು ಮಾತಿನಲ್ಲಿ ದಾನವು ಮನೆಯಿಂದಲೇ ಪ್ರಾರಂಭವಾಗುವುದು. ಮೊದಲು ಸ್ವ ತನ್ನ ಎಲ್ಲದಕ್ಕಿಂತ ಪ್ರಿಯ ಮನೆಯಾಗಿದೆ, ಆದ್ದರಿಂದ ಮೊದಲು ಸ್ವಯಂನೊಂದಿಗೆ ನಂತರ ಬ್ರಾಹ್ಮಣ ಪರಿವಾರದೊಂದಿಗೆ, ನಂತರ ವಿಶ್ವದೊಂದಿಗೆ. ಪ್ರತೀ ಸಂಕಲ್ಪದಲ್ಲಿ ಸ್ನೇಹ, ನಿಸ್ವಾರ್ಥ ಸತ್ಯ ಸ್ನೇಹ, ಹೃದಯದ ಸ್ನೇಹ, ಪ್ರತೀ ಸಂಕಲ್ಪದಲ್ಲಿ ಸಹಾನುಭೂತಿ, ಪ್ರತೀ ಸಂಕಲ್ಪದಲ್ಲಿ ದಯಾಹೃದಯಿ, ದಾತಾತನದ ಸ್ವಭಾವವು ಸ್ವಾಭಾವಿಕವಾಗಿ ಬಿಡಲಿ – ಇದು ಸ್ನೇಹದ ಮಿಲನ, ಸಂಕಲ್ಪದ ಮಿಲನ, ವಿಚಾರದ ಮಿಲನ, ಸಂಸ್ಕಾರ ಮಿಲನವಾಗಿದೆ. ಸರ್ವರ ಸಹಯೋಗದ ಕಾರ್ಯಕ್ಕೆ ಮೊದಲು ಸದಾ ಸರ್ವ ಶ್ರೇಷ್ಠ ಬ್ರಾಹ್ಮಣ ಆತ್ಮರ ಸಹಯೋಗವು ವಿಶ್ವವನ್ನು ಸಹಜ ಮತ್ತು ಸ್ವತಹವಾಗಿ ಸಹಯೋಗಿಯನ್ನಾಗಿ ಮಾಡಿಕೊಳ್ಳುತ್ತದೆ ಆದ್ದರಿಂದ ಸಫಲತೆಯು ಸಮೀಪ ಬರುತ್ತಿದೆ. ಹೊಂದಿಕೊಳ್ಳುವುದು ಮತ್ತು ಬಾಗುವುದೇ ಸಫಲತೆಯ ಚುಂಬಕ (ಅಯಸ್ಕಾಂತ) ವಾಗಿದೆ. ಈ ಚುಂಬಕದ ಮುಂದೆ ಸರ್ವ ಆತ್ಮಗಳು ಆಕರ್ಷಿತರಾಗಿ ಬಹಳ ಸಹಜವಾಗಿ ಬಂದರೆಂದರೆ ಬಂದರು.

ಮೀಟಿಂಗ್ನ ಮಕ್ಕಳಿಗೂ ಸಹ ಬಾಪ್ದಾದಾ ಸ್ನೇಹದ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಸಮೀಪವಿದ್ದೀರಿ ಮತ್ತು ಸದಾ ಸಮೀಪವಿರುತ್ತೀರಿ. ಕೇವಲ ತಂದೆಯ ಸಮೀಪವಲ್ಲ ಆದರೆ ಪರಸ್ಪರವು ಸಮೀಪತೆಯ ದೃಶ್ಯವನ್ನು ಬಾಪ್ದಾದಾರವರಿಗೆ ತೋರಿಸಿತು. ವಿಶ್ವಕ್ಕೆ ದೃಶ್ಯವನ್ನು ತೋರಿಸುವ ಮೊದಲು ಬಾಪ್ದಾದಾ ನೋಡಿದೆವು, ಬರುವಂತಹ ತಾವು ಸರ್ವ ಮಕ್ಕಳ ಕರ್ಮವನ್ನು ನೋಡಿ ಏನು ಕರ್ಮ ಮಾಡಬೇಕು, ಏನಾಗಬೇಕು ಅದನ್ನು ಸಹಜವಾಗಿಯೇ ತಿಳಿದುಕೊಳ್ಳುತ್ತಾರೆ. ತಮ್ಮ ಆಕ್ಷನ್, ಆಕ್ಷನ್ ಪ್ಲಾನ್ ಆಗಿದೆ. ಒಳ್ಳೆಯದು.

ಎಲ್ಲರೂ ಒಳ್ಳೆಯ ಪ್ಲಾನುಗಳನ್ನು ಮಾಡಿದ್ದೀರಿ. ಇನ್ನೂ ಹೇಗೆ ಈ ಕಾರ್ಯವು ಆರಂಭವಾಗುತ್ತಾ ಬಾಪ್ದಾದಾರವರ ವಿಶೇಷ ಸೂಚನೆಯು ವರ್ಗೀಕರಣವನ್ನು ತಯಾರು ಮಾಡುವುದಿತ್ತು ಮತ್ತು ಈಗಲೂ ಇದೆ. ಆದ್ದರಿಂದ ಈ ಲಕ್ಷ್ಯವನ್ನು ಅವಶ್ಯವಾಗಿ ಇಟ್ಟುಕೊಳ್ಳಿ – ಈ ಮಹಾನ್ ಕಾರ್ಯದಲ್ಲಿ ಯಾವುದೇ ವರ್ಗವು ಉಳಿದುಕೊಳ್ಳಬಾರದು. ಸಮಯ ಪ್ರಮಾಣ ಭಲೆ ಬೇಗನೆ ಮಾಡಲು ಸಾಧ್ಯವಾಗದೇ ಇರಬಹುದು ಆದರೆ ಸ್ಯಾಂಪಲನ್ನು ಅವಶ್ಯವಾಗಿ ತಯಾರು ಮಾಡಬೇಕೆಂಬ ಪ್ರಯತ್ನ ಹಾಗೂ ಲಕ್ಷ್ಯವನ್ನು ಖಂಡಿತ ಇಟ್ಟುಕೊಳ್ಳಿ. ಬಾಕಿ ಮುಂದೆ ಇದೇ ಕಾರ್ಯವನ್ನು ಮುಂದುವರೆಸುತ್ತಾ ಇರುತ್ತೀರಿ ಆದ್ದರಿಂದ ಸಮಯ ಪ್ರಮಾಣ ಮಾಡುತ್ತಾ ಇರಬೇಕು ಆದರೆ ಸಮಾಪ್ತಿಯನ್ನು ಸಮೀಪ ತರುವುದಕ್ಕಾಗಿ ಸರ್ವರ ಸಹಯೋಗ ಬೇಕು ಆದರೆ ಇಡೀ ಪ್ರಪಂಚದ ಆತ್ಮರನ್ನಂತೂ ಒಂದು ಸಮಯದಲ್ಲಿ ಸಂಪರ್ಕದಲ್ಲಿ ತರಲು ಸಾಧ್ಯವಿಲ್ಲ ಆದ್ದರಿಂದ ನೀವು ಹೆಮ್ಮೆಯಿಂದ ಹೇಳಬಹುದು – ನಾವು ಸರ್ವ ಆತ್ಮರನ್ನು ಸರ್ವವರ್ಗದ ಆಧಾರದಿಂದ ಸಹಯೋಗಿಗಳನ್ನಾಗಿ ಮಾಡಿದ್ದೇವೆ ಅಂದಾಗ ಈ ಲಕ್ಷ್ಯವು ಸರ್ವರ ಕಾರಣವನ್ನು ಪೂರ್ಣ ಮಾಡಿ ಬಿಡುತ್ತದೆ. ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ತಿಳಿಯಲೇ ಇಲ್ಲವೆಂದು ಯಾವುದೇ ವರ್ಗದ ದೂರು ಉಳಿಯಬಾರದು. ಬೀಜವನ್ನು ಬಿತ್ತಿರಿ, ಬಾಕಿ ವೃದ್ಧಿಯು ಹೇಗೆ ಸಮಯ ಸಿಗುವುದೋ, ಹೇಗೆ ಮಾಡಲು ಸಾಧ್ಯವೋ ಹಾಗೆಯೇ ಮಾಡಿ. ಹೇಗೆ ಮಾಡುವುದು, ಎಷ್ಟೊಂದು ಮಾಡುವುದು ಎಂದು ಇದರಲ್ಲಿ ಭಾರಿಯಾಗಬೇಡಿ. ಎಷ್ಟು ಆಗುವುದಿದೆಯೋ ಅಷ್ಟು ಆಗಿಯೇ ಬಿಡುವುದು. ಎಷ್ಟು ಮಾಡಿದರೋ ಅಷ್ಟೇ ಸಫಲತೆಯ ಸಮೀಪ ಬರುವರು. ಸ್ಯಾಂಪಲನ್ನು ತಯಾರು ಮಾಡುತ್ತೀರಲ್ಲವೆ?

ಬಾಕಿ ಭಾರತ ಸರ್ಕಾರವನ್ನು ಸಮೀಪ ತರುವ ಯಾವ ಶ್ರೇಷ್ಠ ಸಂಕಲ್ಪವನ್ನು ತೆಗೆದುಕೊಂಡಿದ್ದೀರೋ ಆ ಸಮಯವು ಸರ್ವರ ಬುದ್ಧಿಗಳನ್ನು ಸಮೀಪ ತರುತ್ತಿದೆ. ಆದ್ದರಿಂದ ಸರ್ವ ಬ್ರಾಹ್ಮಣ ಆತ್ಮರೇ ಈ ವಿಶೇಷ ಕಾರ್ಯಾರ್ತವಾಗಿ ಆರಂಭದಿಂದ ಅಂತ್ಯದವರೆಗೆ ವಿಶೇಷ ಶುದ್ಧ ಸಂಕಲ್ಪ “ಸಫಲತೆ ಆಗಲೇಬೇಕಾಗಿದೆ” – ಈ ಶುದ್ಧ ಸಂಕಲ್ಪದಿಂದ ಮತ್ತು ತಂದೆಯ ಸಮಾನ ವೈಬ್ರೇಷನ್ ಹರಡಿಸುವುದರಿಂದ ವಿಜಯದ ನಿಶ್ಚಯದ ಧೃಡತೆಯಿಂದ ಮುಂದುವರೆಯುತ್ತಾ ನಡೆಯುವುದು ಆದರೆ ಯಾವುದೇ ದೊಡ್ಡ ಕಾರ್ಯವನ್ನು ಯಾವಾಗ ಮಾಡಲಾಗುತ್ತದೆಯೋ ಆಗ ಮೊದಲು ಹೇಗೆ ಸ್ಥೂಲದಲ್ಲಿ ನೋಡಿದ್ದೀರಿ – ಯಾವುದೇ ಹೊರೆಯನ್ನು ಎತ್ತುವಾಗ ಏನು ಮಾಡುತ್ತಾರೆ? ಎಲ್ಲರೂ ಸೇರಿ ಕೈ ಕೊಡುತ್ತಾರೆ ಮತ್ತು ಒಬ್ಬರು ಇನ್ನೊಬ್ಬರಿಗೆ ಧೈರ್ಯ, ಉಲ್ಲಾಸವನ್ನೂ ಹೆಚ್ಚಿಸುವ ಮಾತುಗಳನ್ನು ಮಾತನಾಡುತ್ತಾರೆ. ನೋಡಿದ್ದೀರಲ್ಲವೆ, ಇದೇ ರೀತಿ ಯಾರೇ ನಿಮಿತ್ತರಾಗಲಿ ಆದರೆ ಸದಾ ಈ ವಿಶೇಷ ಕಾರ್ಯಕ್ಕಾಗಿ ಸರ್ವರ ಸ್ನೇಹ, ಸರ್ವರ ಸಹಯೋಗ, ಸರ್ವರ ಶಕ್ತಿಯ ಉಮ್ಮಂಗ-ಉತ್ಸಾಹದ ವೈಬ್ರೇಷನ್ ಕುಂಭಕರ್ಣನ ನಿದ್ರೆಯಿಂದ ಏಳಿಸುವುದು – ಈ ವಿಶೇಷ ಕಾರ್ಯದ ಮೇಲೆ ಈ ಗಮನವು ಅತ್ಯವಶ್ಯಕವಾಗಿದೆ. ವಿಶೇಷವಾಗಿ ಸ್ವ, ಸರ್ವ ಬ್ರಾಹ್ಮಣ ಮತ್ತು ವಿಶ್ವದ ಆತ್ಮರ ಸಹಯೋಗ ತೆಗೆದುಕೊಳ್ಳುವುದೇ ಸಫಲತೆಯ ಸಾಧನವಾಗಿದೆ. ಇದರ ಮಧ್ಯದಲ್ಲಿ ಒಂದುವೇಳೆ ಸ್ವಲ್ಪ ಅಂತರವಾದರೂ ಸಹ ಸಫಲತೆಯ ಅಂತರವನ್ನು ತರುವುದರಲ್ಲಿ ನಿಮಿತ್ತನಾಗಿ ಬಿಡುತ್ತದೆ ಆದ್ದರಿಂದ ಬಾಪ್ದಾದಾ ಎಲ್ಲಾ ಮಕ್ಕಳ ಧೈರ್ಯದ ಶಬ್ಧವನ್ನು ಕೇಳಿ ಅದೇ ಸಮಯ ಹರ್ಷಿತರಾಗುತ್ತಿದ್ದೆವು ಮತ್ತು ವಿಶೇಷವಾಗಿ ಸಂಘಟನೆಯು ಸ್ನೇಹದ ಕಾರಣ ಸ್ನೇಹದ ರಿಟರ್ನ್ ಕೊಡುವುದಕ್ಕಾಗಿ ಬಂದಿದ್ದೇನೆ. ಬಹಳ ಒಳ್ಳೆಯವರಾಗಿದ್ದೀರಿ ಮತ್ತು ಅನೇಕಬಾರಿ ಒಳ್ಳೆಯವರಾಗಿದ್ದಿರಿ ಮತ್ತು ಆಗಿದ್ದೀರಿ ಆದ್ದರಿಂದ ಡಬಲ್ ವಿದೇಶಿ ಮಕ್ಕಳ ದೂರದಿಂದ ಎವರೆಡಿಯಾಗಿ ಹಾರಲು ನಿಮಿತ್ತ ವಿಶೇಷ ಮಕ್ಕಳಿಗೆ ಬಾಪ್ದಾದಾ ಹೃದಯದ ಹಾರವನ್ನು ಮಾಡಿಕೊಂಡು ಸಮಾವೇಶ ಮಾಡಿಕೊಳ್ಳುತ್ತೇವೆ. ಒಳ್ಳೆಯದು.

ಕುಮಾರಿಯರಂತೂ ಕನ್ನಯ್ಯನವರಾಗಿದ್ದೀರಿ. ಕೇವಲ ಒಂದು ಶಬ್ಧವನ್ನು ನೆನಪಿಟ್ಟುಕೊಳ್ಳಿ – ಎಲ್ಲದರಲ್ಲಿ ಏಕತೆ, ಏಕಮತ, ಏಕರಸ, ಏಕ ತಂದೆ. ಭಾರತದ ಮಕ್ಕಳಿಗೂ ಸಹ ಬಾಪ್ದಾದಾ ಹೃದಯದಿಂದ ಶುಭಾಷಯಗಳನ್ನು ನೀಡುತ್ತಿದ್ದೇವೆ. ಎಂತಹ ಲಕ್ಷ್ಯವನ್ನು ಇಟ್ಟುಕೊಂಡಿರೋ ಅದೇರೀತಿ ಲಕ್ಷಣಗಳನ್ನು ಪ್ರತ್ಯಕ್ಷದಲ್ಲಿ ತಂದಿರಿ. ತಿಳಿಯಿತೆ – ಯಾರಿಗೆ ಹೇಳುವುದು, ಯಾರಿಗೆ ಹೇಳದಿರುವುದು, ಎಲ್ಲರಿಗೂ ಹೇಳುತ್ತೇವೆ. (ದಾದೀಜಿಯವರಿಗೆ) ಯಾರು ನಿಮಿತ್ತರಾಗುವರೋ ಅವರಿಗೆ ವಿಚಾರವಂತೂ ಇದ್ದೇ ಇರುತ್ತದೆ. ಇದೇ ಸಹಾನುಭೂತಿಯ ಚಿಹ್ನೆಯಾಗಿದೆ. ಒಳ್ಳೆಯದು.

ಮೀಟಿಂಗ್ನಲ್ಲಿ ಬಂದಿರುವ ಸಹೋದರ-ಸಹೋದರಿಯರೆಲ್ಲರಿಗೂ ಬಾಪ್ದಾದಾರವರು ವೇದಿಕೆಯಲ್ಲಿ ಕರೆಸಿದರು.

ಎಲ್ಲರೂ ಬುದ್ಧಿಯನ್ನು ಬಹಳ ಚೆನ್ನಾಗಿ ಉಪಯೋಗಿಸಿದ್ದಾರೆ. ಬಾಪ್ದಾದಾರವರು ಪ್ರತಿಯೊಂದು ಮಕ್ಕಳ ಸೇವೆಯ ಸ್ನೇಹವನ್ನೂ ತಿಳಿದಿದ್ದಾರೆ. ಸೇವೆಯಲ್ಲಿ ಮುಂದುವರೆಯುವುದರಿಂದ ನಾಲ್ಕೂ ಕಡೆಯಲ್ಲಿ ಎಲ್ಲಿಯವರೆಗೆ ಸಫಲತೆಯಾಗಿದೆ, ಇದನ್ನು ಕೇವಲ ಸ್ವಲ್ಪ ಯೋಚಿಸುವುದು ಮತ್ತು ನೋಡುವುದು. ಬಾಕಿ ಸೇವೆಯ ಲಗನ್ ಚೆನ್ನಾಗಿದೆ. ಸೇವೆಗಾಗಿ ಹಗಲು-ರಾತ್ರಿ ಒಂದು ಮಾಡುತ್ತಾ ಓಡುತ್ತೀರಿ. ಬಾಪ್ದಾದಾರವರಂತು ಪರಿಶ್ರಮವನ್ನೂ ಪ್ರೀತಿಯ ರೂಪದಲ್ಲಿ ನೋಡುತ್ತಾರೆ. ಒಳ್ಳೆಯದು! ಒಳ್ಳೆಯ ಉಮ್ಮಂಗ-ಉತ್ಸಾಹವಿರುವ ಜೊತೆಗಾರರು ಸಿಕ್ಕಿದ್ದಾರೆ, ವಿಶಾಲ ಕಾರ್ಯವಾಗಿದೆ ಮತ್ತು ವಿಶಾಲ ಹೃದಯವಿದೆ ಆದ್ದರಿಂದ ಎಲ್ಲಿ ವಿಶಾಲತೆಯಿದೆಯೋ ಅಲ್ಲಿ ಅವಶ್ಯವಾಗಿ ಸಫಲತೆಯಿರುತ್ತದೆ. ಬಾಪ್ದಾದಾರವರು ಸರ್ವ ಮಕ್ಕಳ ಸೇವೆಯ ಲಗನ್ನ್ನು ನೋಡುತ್ತಾ, ಪ್ರತಿನಿತ್ಯವೂ ಖುಷಿಯ ಹಾಡನ್ನು ಹಾಡುತ್ತಾರೆ. ಹಲವೊಮ್ಮೆ ಹಾಡನ್ನು ತಿಳಿಸಲಾಗಿದೆ – “ವಾಹ್ ಮಕ್ಕಳೇ ವಾಹ್!” ಒಳ್ಳೆಯದು. ಇಲ್ಲಿಗೆ ಬರುವುದರಲ್ಲಿ ಎಷ್ಟೊಂದು ರಹಸ್ಯಗಳಿದ್ದವು, ರಹಸ್ಯಗಳನ್ನು ತಿಳಿಯುವವರಲ್ಲವೆ! (ದಾದಿಯವರು ಬಾಪ್ದಾದಾರವರಿಗೆ ಭೋಗವನ್ನು ಸ್ವೀಕಾರ ಮಾಡಿಸಲು ಬಯಸಿದರು) ಇಂದು ದೃಷ್ಟಿಯಿಂದಲೇ ಸ್ವೀಕರಿಸುತ್ತೇವೆ. ಒಳ್ಳೆಯದು.

ಎಲ್ಲರ ಬುದ್ಧಿಯು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ ಮತ್ತು ಒಬ್ಬರಿನ್ನೊಬ್ಬರ ಸಮೀಪಕ್ಕೆ ಬರುತ್ತಿದ್ದೀರಲ್ಲವೆ! ಆದ್ದರಿಂದ ಸಫಲತೆಯು ಅತಿ ಸಮೀಪದಲ್ಲಿದೆ. ಸಮೀಪತೆಯು ಸಫಲತೆಯನ್ನು ಸಮೀಪಕ್ಕೆ ತರುತ್ತದೆ. ಸುಸ್ತಾಗುವುದಿಲ್ಲವೆ? ಬಹಳ ಕಾರ್ಯಗಳು ಸಿಕ್ಕಿವೆಯೇ? ಆದರೆ ಅರ್ಧದಷ್ಟು ಕಾರ್ಯಗಳಂತು ತಂದೆಯು ಮಾಡುವರು. ಎಲ್ಲರ ಉಮ್ಮಂಗವು ಚೆನ್ನಾಗಿದೆ, ಧೃಡತೆಯೂ ಇದೆಯಲ್ಲವೆ! ಸಮೀಪತೆಯು ಎಷ್ಟು ಸಮೀಪವಿದೆ? ಚುಂಬಕವನ್ನು ಇಡುತ್ತೀರೆಂದರೆ ಸಮೀಪತೆಯು ಎಲ್ಲರ ಕೊರಳಿನಲ್ಲಿ ಹಾರವನ್ನು ಹಾಕುತ್ತದೆ, ಇಂತಹ ಅನುಭವ ಆಗುತ್ತದೆಯೇ? ಒಳ್ಳೆಯದು – ಎಲ್ಲರೂ ಬಹಳ ಒಳ್ಳೆಯವರಾಗಿದ್ದಾರೆ.

ದಾದಿಯವರ ಪ್ರತಿ ಉಚ್ಚರಿಸುವ ಅವ್ಯಕ್ತ ಮಹಾವಾಕ್ಯ:

ತಂದೆಯು ಮಕ್ಕಳಿಗೆ ಧನ್ಯವಾದಗಳನ್ನು ಕೊಡುತ್ತಾರೆ, ಮಕ್ಕಳು ತಂದೆಗೆ ಕೊಡುತ್ತಾರೆ. ಒಬ್ಬರಿನ್ನೊಬ್ಬರಿಗೆ ಧನ್ಯವಾದ ಕೊಡುತ್ತಾ-ಕೊಡುತ್ತಾ ಮುಂದುವರೆದಿದ್ದೀರಿ, ಮುಂದುವರೆಯುವ ವಿಧಿಯೂ ಇದೇ ಆಗಿದೆ. ಈ ವಿಧಿಯಿಂದ ತಾವುಗಳ ಸಂಘಟನೆಯೂ ಚೆನ್ನಾಗಿ ತಯಾರಾಗಿದೆ. ಒಬ್ಬರಿನ್ನೊಬ್ಬರಿಗೆ ‘ಹಾಂ ಜೀ’ ‘ಧನ್ಯವಾದ’ಗಳನ್ನು ಹೇಳಿದಿರಿ ಮತ್ತು ಮುಂದುವರೆದಿರಿ – ಇದೇ ವಿಧಿಯನ್ನು ಎಲ್ಲರೂ ಫಾಲೋ ಮಾಡಿದರೆ ಫರಿಶ್ತೆಗಳು ಆಗಿ ಬಿಡುವಿರಿ. ಬಾಪ್ದಾದಾರವರು ಚಿಕ್ಕ ಮಾಲೆಯನ್ನು ನೋಡುತ್ತಾ ಖುಷಿಯಾಗುವರು. ಈಗ ಕಂಕಣವು ತಯಾರಾಗಿದೆ, ಕೊರಳಿನ ಮಾಲೆಯು ತಯಾರಾಗುತ್ತಿದೆ ಮತ್ತು ಕೊರಳಿನ ಮಾಲೆಯನ್ನು ತಯಾರಿಸಲು ತೊಡಗಿದ್ದೀರಿ – ಈಗ ಗಮನವಿರಲಿ. ಹೆಚ್ಚಾಗಿ ಸೇವೆಯಲ್ಲಿಯೇ ಹೊರಟು ಹೋಗುತ್ತೀರೆಂದರೆ ತಮ್ಮ ಮೇಲಿರುವ ಗಮನವು ಕೆಲವೊಂದೆಡೆ ಕಡಿಮೆ ಆಗಿ ಬಿಡುತ್ತದೆ. ‘ವಿಸ್ತಾರ’ದಲ್ಲಿ ‘ಸಾರ’ವು ಗುಪ್ತವಾಗಿ ಬಿಡುತ್ತದೆ, ಪ್ರತ್ಯಕ್ಷ ರೂಪದಲ್ಲಿ ಇರುವುದಿಲ್ಲ. ತಾವುಗಳೇ ಹೇಳುತ್ತೀರಿ – ಈಗ ಇದಾಗಬೇಕು, ಇಂತಹ ದಿನವೂ ಬರುತ್ತದೆ ಆಗ ಹೇಳುವರು – ಏನಾಗಬೇಕು ಅದೇ ಆಗುತ್ತಿದೆ. ದೀಪಗಳ ಮಾಲೆಯಂತು ಮೊದಲು ತಯಾರಾಗುವುದು ಇಲ್ಲಿಯೇ ಆಗುವುದು. ಬಾಪ್ದಾದಾರವರು ತಮ್ಮೆಲ್ಲರನ್ನೂ ಪ್ರತಿಯೊಬ್ಬರಲ್ಲಿ ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುವ ಉದಾಹರಣೆ ಎಂದು ತಿಳಿಯುವರು. ತಮ್ಮೆಲ್ಲರ ಏಕತೆಯೇ ಯಜ್ಞದ ಕೋಟೆಯಾಗಿದೆ. ಭಲೆ 10 ಮಂದಿಯಿರಬಹುದು, ಅಥವಾ 12 ಮಂದಿಯಿರಬಹುದು ಆದರೆ ಕೋಟೆಯ ಗೋಡೆಗಳಾಗಿದ್ದೀರಿ. ಇದರಿಂದ ಬಾಪ್ದಾದಾರವರು ಖುಷಿಯಾಗುವರು! ಬಾಪ್ದಾದಾರವರಂತು ಇದ್ದೇ ಇರುವರು, ಆದರೆ ನಿಮಿತ್ತರಂತು ತಾವಾಗಿದ್ದೀರಿ. ಇಂತಹದ್ದೇ ಸಂಘಟನೆಯು ಎರಡು ಮೂರು ಗ್ರೂಪ್ ಇದ್ದರೆ ಚಮತ್ಕಾರವೇ ಆಗಿ ಬಿಡುವುದು. ಈಗ ಇಂತಹ ಗ್ರೂಪ್ನ್ನು ತಯಾರು ಮಾಡಿರಿ. ಹೇಗೆ ಮೊದಲ ಗ್ರೂಪ್ಗಾಗಿ ಎಲ್ಲರೂ ಹೇಳುತ್ತಾರೆ – ಇವರೆಲ್ಲರ ಪರಸ್ಪರದಲ್ಲಿ ಸ್ನೇಹವಿದೆ. ಸ್ವಭಾವಗಳು ಭಿನ್ನ-ಭಿನ್ನವಾಗಿ ಇದ್ದೇ ಇರುತ್ತದೆ ಆದರೆ ಗೌರವವಿದೆ, ಪ್ರೀತಿಯಿದೆ, ಹಾಂ ಜಿ ಎನ್ನುವರು, ಸಮಯದಲ್ಲಿ ತನ್ನನ್ನು ತಾನೇ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಈ ಕೋಟೆಯ ಗೋಡೆಗಳು ಶಕ್ತಿಶಾಲಿ ಆಗಿದೆ. ಆದ್ದರಿಂದಲೇ ವೃದ್ಧಿಯಾಗುತ್ತಾ ಇದೆ. ಬುನಾದಿಯನ್ನು ನೋಡುತ್ತಾ ಖುಷಿಯಾಗುತ್ತದೆ ಅಲ್ಲವೆ. ಹೇಗೆ ಮೊದಲ ಭಾಗವು ಕಾಣಿಸುತ್ತದೆ, ಹಾಗೆಯೇ ಶಕ್ತಿಶಾಲಿ ಗ್ರೂಪ್ ತಯಾರಾಗಿ ಬಿಡಲಿ, ಇದರಿಂದ ಸೇವೆಯು ಹಿಂದೆಂದೆ ಬರುತ್ತದೆ. ಡ್ರಾಮಾದಲ್ಲಿ ವಿಜಯ ಮಾಲೆಯ ನೊಂದಣಿಯಾಗಿದೆ. ಅಂದಮೇಲೆ ಅವಶ್ಯವಾಗಿ ಒಬ್ಬರಿನ್ನೊಬ್ಬರ ಸಮೀಪ ಬರುವರು, ಇದರಿಂದ ಮಾಲೆಯಾಗುವುದು. ಒಂದು ಮಣಿ ಒಂದು ಕಡೆ ಇರಲಿ, ಇನ್ನೊಂದು ದೂರವಿದ್ದರೆ ಮಾಲೆಯಾಗುವುದಿಲ್ಲ. ಮಣಿಗಳು ಸಮಾನ, ಸಮೀಪಕ್ಕೆ ಬಂದಾಗಲೇ ಮಾಲೆಯು ತಯಾರಾಗುವುದು. ಈ ಉದಾಹರಣೆಯು ಚೆನ್ನಾಗಿದೆ. ಒಳ್ಳೆಯದು!

ಈಗಂತು ಮಿಲನವಾಗುವ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆ. ರಥವನ್ನೂ ಸಹ ವಿಶೇಷ ಸಕಾಶದಿಂದ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದೇವಲ್ಲವೆ. ಇಲ್ಲದಿದ್ದರೆ ಸಾಧಾರಣ ಮಾತಲ್ಲ. ಎಲ್ಲರಿಗೂ ಕಾಣಿಸುತ್ತದೆಯಲ್ಲವೆ, ಆದರೂ ಸರ್ವಶಕ್ತಿಗಳ ಶಕ್ತಿಗಳು ಜಮಾ ಆಗಿದೆ ಆದ್ದರಿಂದ ರಥವೂ ಸಹ ಇಷ್ಟೊಂದು ಸಹಯೋಗ ಕೊಡುತ್ತಿದೆ. ಶಕ್ತಿಗಳೇನಾದರೂ ಜಮಾ ಆಗಿಲ್ಲದಿದ್ದರೆ, ಇಷ್ಟೊಂದು ಸೇವೆಗಳು ಕಷ್ಟವಾಗಿ ಬಿಡುತ್ತದೆ. ಇದೂ ಸಹ ಡ್ರಾಮಾದಲ್ಲಿ ಪ್ರತಿಯೊಂದು ಆತ್ಮನ ಪಾತ್ರವಿದೆ. ಶ್ರೇಷ್ಠ ಕರ್ಮದ ಖಜಾನೆಯು ಜಮಾ ಆಗುತ್ತದೆಯೆಂದರೆ, ಸಮಯದಲ್ಲಿ ಅದು ಕೆಲಸಕ್ಕೆ ಬರುತ್ತದೆ. ಎಷ್ಟೊಂದು ಆತ್ಮರುಗಳ ಆಶೀರ್ವಾದಗಳು ಸಿಗುತ್ತಿವೆ, ಅದೆಲ್ಲವೂ ಜಮಾ ಆಗುತ್ತಿದೆ! ಯಾವುದೋ ವಿಶೇಷ ಪುಣ್ಯದ ಖಜಾನೆಯು ಜಮಾ ಆಗಿರುವ ಕಾರಣದಿಂದ ವಿಶೇಷ ಪಾತ್ರವಿದೆ. ನಿರ್ವಿಘ್ನವಾಗಿ ರಥವು ನಡೆಯುವುದೂ ಡ್ರಾಮಾದ ಪಾತ್ರವಾಗಿದೆ. 6 ತಿಂಗಳಿನ ಸಮಯವೇನೂ ಕಡಿಮೆಯಲ್ಲ. ಒಳ್ಳೆಯದು – ಎಲ್ಲರನ್ನೂ ಖುಷಿ ಪಡಿಸುತ್ತೇವೆ.

ಅವ್ಯಕ್ತ ಮುರುಳಿಯಿಂದ ಆರಿಸಿರುವ ಕೆಲವು ಅಮೂಲ್ಯ ಮಹಾವಾಕ್ಯಗಳು (ಪ್ರಶ್ನೆ-ಉತ್ತರ)

ಪ್ರಶ್ನೆ: ಯಾವ ಒಂದು ಶಬ್ದದ ಅರ್ಥ ಸ್ವರೂಪದಲ್ಲಿ ಸ್ಥಿತರಾಗುವುದರಿಂದಲೇ ಸರ್ವ ಬಲಹೀನತೆಗಳು ಸಮಾಪ್ತಿಯಾಗುವವು?

ಉತ್ತರೆ: ಕೇವಲ ಪುರುಷಾರ್ಥಿ ಶಬ್ದದ ಅರ್ಥ ಸ್ವರೂಪದಲ್ಲಿ ಸ್ಥಿತರಾಗಿ ಬಿಡಿ. ಪುರುಷ ಎಂದರೆ ಈ ರಥದ ರಥಿ, ಪ್ರಕೃತಿಯ ಮಾಲೀಕ. ಈ ಒಂದು ಶಬ್ದದ ಅರ್ಥ ಸ್ವರೂಪದಲ್ಲಿ ಸ್ಥಿತರಾಗುವುದರಿಂದ ಸರ್ವ ಬಲಹೀನತೆಗಳು ಸಮಾಪ್ತಿಯಾಗುವವು. ಪುರುಷ ಪ್ರಕೃತಿಯ ಅಧಿಕಾರಿಯಾಗಿದ್ದಾನೆ ಅಧೀನನಲ್ಲ. ರಥಿ ರಥವನ್ನು ನಡೆಸುವಂತಹವರು, ರಥದ ಅಧೀನರಾಗುವವರಲ್ಲ.

ಪ್ರಶ್ನೆ: ಆದಿಕಾಲದ ರಾಜ್ಯಾಧಿಕಾರಿಯಾಗುವುದಕ್ಕೆ ಯಾವ ಸಂಸ್ಕಾರವನ್ನು ಈಗಿನಿಂದಲೇ ಧಾರಣೆ ಮಾಡಿಕೊಳ್ಳಬೇಕು?

ಉತ್ತರ: ತಮ್ಮ ಆದಿ ಅವಿನಾಶಿ ಸಂಸ್ಕಾರ ಈಗಿನಿಂದಲೇ ಧಾರಣೆ ಮಾಡಿಕೊಳ್ಳಬೇಕು. ಒಂದುವೇಳೆ ಯೋದ್ಧತನದ ಸಂಸ್ಕಾರವಿದ್ದರೆ ಎಂದರೆ ಯುದ್ಧ ಮಾಡುತ್ತ – ಮಾಡುತ್ತ ಸಮಯ ಕಳೆಯಿತು. ಇವತ್ತು ವಿಜಯ ನಾಳೆ ಸೋಲು. ಈಗ ಈಗ ಜಯ ಈಗ ಈಗ ಸೋಲು, ಸದಾ ವಿಜಯಿತನದ ಸಂಸ್ಕಾರ ಆಗಲ್ಲಿಲವೆಂದರೆ ಕ್ಷತ್ರಿಯರು ಎಂದು ಹೇಳಲಾಗುವುದು, ಬ್ರಾಹ್ಮಣರಲ್ಲ. ಬ್ರಾಹ್ಮಣರು ದೇವತೆಗಳಾಗುತ್ತಾರೆ, ಕ್ಷತ್ರಿಯರು ಕ್ಷತ್ರಿಯರಲ್ಲಿ ಹೋಗುತ್ತಾರೆ.

ಪ್ರಶ್ನೆ: ವಿಶ್ವ ಪರಿವರ್ತಕರಾಗುವ ಮೊದಲು ಯಾವ ಪರಿವರ್ತನೆ ಮಾಡುವ ಶಕ್ತಿ ಬೇಕಾಗಿದೆ?

ಉತ್ತರ; ವಿಶ್ವ ಪರಿವರ್ತಕರಾಗುವ ಮೊದಲು ತಮ್ಮ ಸಂಸ್ಕಾರಗಳ ಪರಿವರ್ತನೆ ಮಾಡಿಕೊಳ್ಳುವ ಶಕ್ತಿ ಬೇಕಾಗಿದೆ. ದೃಷ್ಟಿ ಮತ್ತು ವೃತ್ತಿಯ ಪರಿವರ್ತನೆ ಬೇಕಾಗಿದೆ. ನೀವು ದೃಶ್ಯವನ್ನು ಈ ದೃಷ್ಟಿಯಿಂದ ನೋಡುವವರಾಗಿದ್ದೀರಿ. ದಿವ್ಯ ನೇತ್ರಗಳಿಂದ ನೋಡಿರಿ, ಚರ್ಮದ ನೇತ್ರಗಳಿಂದಲ್ಲ.

ದಿವ್ಯ ನೇತ್ರಗಳಿಂದ ನೋಡುತ್ತೀರೆಂದರೆ ದಿವ್ಯ ರೂಪವು ಸ್ವತಹವಾಗಿ ಕಾಣಿಸುವುದು. ಚರ್ಮದ ನೇತ್ರವು ಚರ್ಮವನ್ನೇ ನೋಡುವುದು, ಚರ್ಮಗಾಗಿ ಯೋಚಿಸಿ – ಈ ಕೆಲಸ ಫರಿಶ್ತೆಗಳದ್ದು ಬ್ರಾಹ್ಮಣರದ್ದಲ್ಲ.

ಪ್ರಶ್ನೆ: ಪರಸ್ಪರದಲ್ಲಿ ಸಹೋದರಿ ಸಹೋದರನ ಸಂಬಂಧವಿದ್ದರೂ ಯಾವ ದಿವ್ಯ ನೇತ್ರದಿಂದ ನೋಡಿದರೆ ದೃಷ್ಟಿ ಅಥವಾ ವೃತ್ತಿ ಎಂದಿಗೂ ಚಂಚಲವಾಗುವುದಕ್ಕೆ ಸಾಧ್ಯವಿಲ್ಲ?

ಉತ್ತರ: ಪ್ರತಿಯೊಬ್ಬ ನಾರಿ ಶರೀರಧಾರಿ ಆತ್ಮವನ್ನು ಶಕ್ತಿರೂಪ, ಜಗತ್ಮಾತಾವಿನ ರೂಪ,ದೇವಿಯ ರೂಪವನ್ನೇ ನೋಡಿ – ಇದೆ ದಿವ್ಯ ನೇತ್ರದಿಂದ ನೋಡುವುದಾಗಿದೆ. ಶಕ್ತಿಯರ ಮುಂದೆ ಯಾರಾದರೂ ಆಸುರೀ ವೃತ್ತಿಯಿಂದ ಬಂದರೆ ಭಸ್ಮವಾಗಿ ಬಿಡುತ್ತಾರೆ ಅದಕ್ಕೆ ನಮ್ಮ ಸಹೋದರಿ ಅಥವಾ ಟೀಚರ್ ಅಲ್ಲ ಆದರೆ ಶಿವ ಶಕ್ತಿಯಾಗಿದ್ದಾರೆ. ಮಾತೆಯರು ಅಕ್ಕಂದಿರೂ ಸಹ ಸದಾ ತಮ್ಮ ಶಕ್ತಿ ಸ್ವರೂಪದಲ್ಲಿ ಸ್ಥಿತರಾಗಿರಿ. ನನ್ನ ವಿಶೇಷ ಸಹೋದರ, ವಿಶೇಷ ಸ್ಟುಡೆಂಟ್(ವಿದ್ಯಾರ್ಥಿ)ಯಲ್ಲ, ಅವರು ಮಹಾವೀರರಾಗಿದ್ದಾರೆ ಮತ್ತು ಅವರು ಶಿವ ಶಕ್ತಿಯಾಗಿದ್ದಾರೆ.

ಪ್ರಶ್ನೆ: ಮಹಾವೀರನ ವಿಶೇಷತೆ ಏನೆಂದು ತೋರಿಸುತ್ತಾರೆ?

ಉತ್ತರ: ಅವರ ಹೃದಯದಲ್ಲಿ ಸದಾ ಒಬ್ಬ ರಾಮನಿರುತ್ತಾನೆ. ಮಹಾವೀರ ರಾಮನವರಾದರೆ ಶಕ್ತಿಯು ಶಿವನವರಾಗಿದ್ದಾರೆ. ಯಾವುದೇ ಶರೀರಧಾರಿಯನ್ನು ನೋಡುತ್ತ ಮಸ್ತಕದಲ್ಲಿ ಆತ್ಮವನ್ನೇ ನೋಡಿ. ಆತ್ಮದ ಜೊತೆಯೇ ಮಾತನಾಡಬೇಕು ಶರೀರದ ಜೊತೆಯಲ್ಲ. ಮಸ್ತಕ ಮಣಿಯ ಮೇಲೆಯೇ ದೃಷ್ಟಿ ಹೋಗಬೇಕು.

ಪ್ರಶ್ನೆ: ಯಾವ ಒಂದು ಶಬ್ದವನ್ನು ಹುಡುಗಾಟಿಕೆಯ ರೂಪದಲ್ಲಿ ಉಪಯೋಗಿಸದೆ ಕೇವಲ ಒಂದು ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು, ಅದು ಯಾವುದಾಗಿದೆ?

ಉತ್ತರ: ಪುರುಷಾರ್ಥಿ ಶಬ್ದವನ್ನು ಹುಡುಗಾಟಿಕೆಯ ರೂಪದಲ್ಲಿ ಉಪಯೋಗಿಸದೆ ಕೇವಲ ಒಂದು ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು – ಪ್ರತಿ ಮಾತಿನಲ್ಲಿ ನಾನು ದೃಢ ಸಂಕಲ್ಪದವರಾಗಬೇಕಾಗಿದೆ. ಏನೆಲ್ಲಾ ಮಾಡಬೇಕೋ ಅದು ಶ್ರೇಷ್ಠ ಕರ್ಮವನ್ನೇ ಮಾಡಬೇಕು. ಶ್ರೇಷ್ಠರಾಗಬೇಕು. ಓಂ ಶಾಂತಿ.

ವರದಾನ:-

ಯಾರು ಅಂತಿಮ ಸಮಯಕ್ಕಾಗಿ ಹಳೆಯ ಸಂಸ್ಕಾರಗಳ ಆಸ್ತಿಯನ್ನು ಪಕ್ಕದಲ್ಲಿಟ್ಟಿರುತ್ತಾರೆಯೋ, ಅವರನ್ನು ಮಾಯೆಯು ಒಂದಲ್ಲ ಒಂದು ರೂಪದಿಂದ ಹಿಡಿದುಕೊಂಡುಬಿ ಡುತ್ತದೆ. ಹಳೆಯ ರಿಜಿಸ್ಟರ್ನ ಚಿಕ್ಕದಾದ ತುಂಡಷ್ಟಿದ್ದರೂ ಹಿಡಿದು ಬಿಡುತ್ತದೆ, ಮಾಯೆಯು ಬಹಳ ತೀಕ್ಷ್ಣವಾಗಿದೆ. ಅದರ ಕ್ಯಾಚಿಂಗ್ ಪವರ್ ಕಡಿಮೆಯೇನಿಲ್ಲ ಆದ್ದರಿಂದ ವಿಕಾರಗಳ ವಂಶದ ಅಂಶವನ್ನೂ ಸಮಾಪ್ತಿಗೊಳಿಸಿರಿ. ಯಾವುದೇ ಮೂಲೆಯಲ್ಲಿಯೂ ಹಳೆಯ ಖಜಾನೆಗಳ ಚಿಹ್ನೆಯು ಅಂಶದಷ್ಟು ಇರಬಾರದು – ಇದಕ್ಕೆ ಸರ್ವ ಸಮರ್ಪಣೆ, ನಿಮಿತ್ತ ಅಥವಾ ಯಜ್ಞ ಸ್ನೇಹಿ ಸಹಯೋಗಿ ಎಂದು ಹೇಳಲಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top