10 November 2021 KANNADA Murli Today | Brahma Kumaris

Read and Listen today’s Gyan Murli in Kannada

9 November 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಭಾರತವು ಎಲ್ಲರ ತೀರ್ಥ ಸ್ಥಾನವಾಗಿದೆ, ಆದ್ದರಿಂದ ಎಲ್ಲಾ ಧರ್ಮದವರಿಗೆ ಭಾರತದ ಮಹಿಮೆಯನ್ನು ತಿಳಿಸಿರಿ, ಎಲ್ಲರಿಗೆ ಸಂದೇಶ ನೀಡಿರಿ”

ಪ್ರಶ್ನೆ:: -

ಯಾವ ಪುರುಷಾರ್ಥದಿಂದ ನಿಮ್ಮದು ಅಂತ್ಯಮತಿ ಸೋ ಗತಿಯಾಗುವುದು ಹಾಗೂ ನಿದ್ರಾಜೀತರಾಗಿ ಬಿಡುತ್ತೀರಿ?

ಉತ್ತರ:-

ರಾತ್ರಿ ಮಲಗುವ ಮೊದಲು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ, ಸ್ವದರ್ಶನ ಚಕ್ರವನ್ನೂ ತಿರುಗಿಸುತ್ತಾ ಇರಿ. ಯಾವಾಗ ನಿದ್ರೆ ಬರುವುದೋ ಆಗ ಮಲಗಿ ಬಿಡಿ, ಇದರಿಂದ ಅಂತ್ಯ ಮತಿ ಸೋ ಗತಿಯಾಗಿ ಬಿಡುವುದು. ಬೆಳಗ್ಗೆ ಏಳುತ್ತಿದ್ದಂತೆಯೇ ಅದೇ ಮಾತು ನೆನಪಿಗೆ ಬರುತ್ತಿರುವುದು. ಇಂತಹ ಅಭ್ಯಾಸವನ್ನು ಮಾಡುತ್ತಾ, ನೀವು ನಿದ್ರೆಯ ಮೇಲೆ ಜಯಿಸುವವರಾಗಿ ಬಿಡುತ್ತೀರಿ. ಯಾರು ಮಾಡುವರೋ ಅವರು ಪಡೆಯುವರು. ಮಾಡುವವರ ಚಲನೆಯು ಪ್ರಸಿದ್ಧವಾಗುತ್ತಾ ಹೋಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಯಾರು ತಂದೆಯ ಜೊತೆಯಿದ್ದಾರೆಯೋ ಅವರಿಗಾಗಿ ಜ್ಞಾನದ ಮಳೆ….

ಓಂ ಶಾಂತಿ. ಯಾರು ತಂದೆಯ ಜೊತೆಯಿದ್ದಾರೆಯೋ…. ಈಗ ಪ್ರಪಂಚದಲ್ಲಿ ತಂದೆಯರಂತೂ ಅನೇಕರಿದ್ದಾರೆ. ಅವರೆಲ್ಲರಿಗೂ ತಂದೆ ರಚಯಿತನು ಒಬ್ಬರೇ ಆಗಿದ್ದಾರೆ. ಅವರು ಜ್ಞಾನ ಸಾಗರನಾಗಿದ್ದಾರೆ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಯಾವಾಗ ಸತ್ಯಯುಗದ ಸ್ಥಾಪನೆಯಾಗುವುದೋ ಆಗಲೇ ಮನುಷ್ಯನ ಸದ್ಗತಿಯೂ ಆಗುತ್ತದೆ. ತಂದೆಯನ್ನೇ ಸದ್ಗತಿದಾತನೆಂದು ಹೇಳಲಾಗುತ್ತದೆ. ಯಾವಾಗ ಸಂಗಮದ ಸಮಯವು ಬರುವುದೋ ಆಗ ಜ್ಞಾನಸಾಗರನು ಬಂದು ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ಎಲ್ಲರದೂ ದುರ್ಗತಿಯಾಗಿದೆ. ಎಲ್ಲರ ದುರ್ಗತಿಯೂ ಸಹ ಒಂದೇರೀತಿ ಆಗುವುದಿಲ್ಲ. ಎಲ್ಲದಕ್ಕಿಂತ ಪ್ರಾಚೀನವಾದುದು ಭಾರತವಾಗಿದೆ. ಭಾರತವಾಸಿಗಳದೇ 84 ಜನ್ಮಗಳೆಂದು ಗಾಯನವಿದೆ ಅಂದಮೇಲೆ ಅವಶ್ಯವಾಗಿ ಯಾರು ಮೊಟ್ಟ ಮೊದಲು ಮನುಷ್ಯರಿರುವರೋ ಅವರೇ 84 ಜನ್ಮಗಳಿಗೆ ಯೋಗ್ಯರಾಗುತ್ತಾರೆ. ದೇವತೆಗಳದು 84 ಜನ್ಮಗಳೆಂದರೆ ಬ್ರಾಹ್ಮಣರದೂ 84 ಜನ್ಮಗಳಾಗಿದೆ. ಮುಖ್ಯವಾದವರನ್ನೇ ಎಣಿಕೆ ಮಾಡಲಾಗುತ್ತದೆ. ತಂದೆಯು ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯನ್ನು ರಚಿಸುವುದಕ್ಕಾಗಿ ಮೊದಲು ಸೂಕ್ಷ್ಮ ಲೋಕವನ್ನು ರಚಿಸುತ್ತಾರೆ ನಂತರ ಹೊಸ ಸೃಷ್ಟಿಯು ಸ್ಥಾಪನೆಯಾಗುತ್ತದೆ. ತ್ರಿಲೋಕಿನಾಥನು ಒಬ್ಬ ತಂದೆಯಾಗಿದ್ದಾರೆ, ಅವರ ಮಕ್ಕಳೂ ಸಹ ತಮ್ಮನ್ನು ತ್ರಿಲೋಕಿನಾಥನೆಂದು ಹೇಳಿಕೊಳ್ಳಬಹುದು. ಇಲ್ಲಂತೂ ಮನುಷ್ಯರ ಹೆಸರನ್ನೂ ಸಹ ತ್ರಿಲೋಕಿನಾಥನೆಂದು ಇಟ್ಟುಕೊಂಡಿದ್ದಾರೆ, ಡಬಲ್ ದೇವತೆಗಳ ಹೆಸರುಗಳನ್ನೂ ಇಟ್ಟುಕೊಂಡಿದ್ದಾರೆ – ಗೌರಿ ಶಂಕರ, ರಾಧಾ ಶ್ಯಾಮ….. ವಾಸ್ತವದಲ್ಲಿ ರಾಧಾಕೃಷ್ಣನು ಬೇರೆ-ಬೇರೆ ರಾಜ್ಯದವರಾಗಿದ್ದರು, ಯಾರು ಒಳ್ಳೆಯ ಮಕ್ಕಳಿದ್ದಾರೆಯೋ ಅವರ ಬುದ್ಧಿಯಲ್ಲಿ ಬಹಳ ಒಳ್ಳೆಯ ಮಾತುಗಳ ಧಾರಣೆಯಿರುತ್ತದೆ. ಹೇಗೆ ಬುದ್ಧಿವಂತ ವೈದ್ಯರ ಬುದ್ಧಿಯಲ್ಲಿ ಅನೇಕ ಔಷಧಿಗಳ ಜ್ಞಾನವಿರುತ್ತದೆ. ಇಲ್ಲಿಯೂ ಸಹ ಪ್ರತಿನಿತ್ಯವೂ ಹೊಸ-ಹೊಸ ಮಾತುಗಳು ಬರುತ್ತಿರುತ್ತವೆ. ಯಾರಿಗೆ ಒಳ್ಳೆಯ ಅಭ್ಯಾಸವಿರುವುದೋ ಅವರು ಹೊಸ ಹೊಸ ಮಾತುಗಳನ್ನು ಧಾರಣೆ ಮಾಡಿಕೊಳ್ಳುತ್ತಾರೆ. ಯಾರು ಧಾರಣೆ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಮಹಾರಥಿಯೆಂದು ಹೇಳಲಾಗುವುದಿಲ್ಲ. ಎಲ್ಲವೂ ಬುದ್ಧಿಯ ಮೇಲೆ ಆಧಾರಿತವಾಗಿದೆ ಮತ್ತು ಅದೃಷ್ಟದ ಮಾತಾಗಿದೆ. ಇದೂ ಸಹ ಡ್ರಾಮಾ ಆಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ನಾವಾತ್ಮರು ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಲಿಲ್ಲವೆಂದರೆ ಏನೂ ಅರಿತಿಲ್ಲವೆಂದರ್ಥ. ನೀವಂತೂ ತಿಳಿದುಕೊಳ್ಳಬೇಕಾಗಿದೆ. ಅನ್ಯರಿಗೆ ತಂದೆಯ ಪರಿಚಯ ಕೊಡುವುದು ಮಕ್ಕಳ ಕರ್ತವ್ಯವಾಗಿದೆ. ಇಡೀ ಪ್ರಪಂಚಕ್ಕೆ ತಿಳಿಸಬೇಕಾಗಿದೆ, ನಂತರ ನಮಗೆ ತಿಳಿಯಲೇ ಇಲ್ಲವೆಂದು ಯಾರೂ ಹೇಳುವಂತಾಗದಿರಲಿ. ವಿದೇಶದಿಂದಲೂ ಅನೇಕರು ಬರುವರು. ಅವರೆಲ್ಲರಿಗಾಗಿ ಬಾಂಬೆಯಲ್ಲಿ ಪ್ರಬಂಧ ಮಾಡುವರು, ಅವರಂತೂ ಸಮರ್ಥರೂ ಆಗಿದ್ದಾರೆ, ಅವರಬಳಿ ಹಣವು ಬಹಳಷ್ಟಿದೆ. ಶಿವನನ್ನು ತಮ್ಮ ದೊಡ್ಡ ಗುರುವೆಂದು ಒಪ್ಪುತ್ತಾರಲ್ಲವೆ. ಆದ್ದರಿಂದ ತಿಳಿಸಲಾಗಿದೆ – ಈ ಧರ್ಮಪಿತರದು ಸ್ವಲ್ಪ ಪಾತ್ರವಿದೆ, ಆದಿಯಲ್ಲಿ ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದರು – ಕೊನೆಗೆ ಈ ಕ್ರೈಸ್ಟ್, ಇಬ್ರಾಹಿಂ ಮೊದಲಾದವರೆಲ್ಲರೂ ಮಿಲನ ಮಾಡಲು ಬರುತ್ತಾರೆ ಅಂದಮೇಲೆ ಅದಕ್ಕಾಗಿ ಮೈದಾನ ಮಾಡಬೇಕು, ಎಲ್ಲಾ ಪ್ರವಾಸಿಗರು ಬಾಂಬೆಗೆ ಬರುತ್ತಾ ಇರುತ್ತಾರೆ. ಭಾರತವು ಎಲ್ಲರನ್ನೂ ಬಹಳ ಆಕರ್ಷಿಸುತ್ತದೆ. ಮೂಲತಃ ಭಾರತವು ತಂದೆಯ ಜನ್ಮಸ್ಥಾನವಾಗಿದೆ. ಎಲ್ಲರಲ್ಲಿ ಭಗವಂತನು ಇದ್ದಾರೆಂದು ಹೇಳಿರುವ ಕಾರಣ ಬೇಹದ್ದಿನ ತಂದೆಯ ಮಹತ್ವವನ್ನೇ ಮರೆ ಮಾಡಿ ಬಿಟ್ಟಿದ್ದಾರೆ. ನೀವೀಗ ತಿಳಿಸುತ್ತೀರಿ – ಭಾರತವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಬಾಕಿ ಎಲ್ಲಾ ಪೈಗಂಬರರು ತಮ್ಮ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅವರ ಹಿಂದೆ ಮತ್ತೆ ಅವರ ಧರ್ಮದವರೂ ಬರುತ್ತಾರೆ. ಈಗ ಅಂತ್ಯವಾಗಿದೆ, ನಾವು ಹಿಂತಿರುಗಿ ಹೋಗಬೇಕೆಂದು ಪ್ರಯತ್ನ ಪಡುತ್ತಾರೆ ಆದರೆ ಕೇಳಿರಿ – ನಿಮ್ಮನ್ನು ಇಲ್ಲಿಗೆ ಕರೆ ತಂದವರು ಯಾರು? ಕ್ರಿಸ್ತನು ಕ್ರಿಶ್ಚಿಯನ್ ಧರ್ಮದ ಸ್ಥಾಪನೆ ಮಾಡಿದನು ಅಂದಮೇಲೆ ಕ್ರಿಸ್ತನೇ ನಿಮ್ಮನ್ನು ಇಲ್ಲಿಗೆ ಕರೆತಂದನೇ? ಈಗ ಹಿಂತಿರುಗಿ ಹೋಗುವುದಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ, ಎಲ್ಲರೂ ಬರುವುದೇ ಪಾತ್ರವನ್ನು ಅಭಿನಯಿಸಲು. ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಕೊನೆಗೆ ದುಃಖದಲ್ಲಿ ಬರಲೇಬೇಕಾಗಿದೆ ಮತ್ತೆ ದುಃಖದಿಂದ ಬಿಡಿಸಿ ಮತ್ತೆ ಸುಖದಲ್ಲಿ ಕರೆದುಕೊಂಡು ಹೋಗುವುದು ತಂದೆಯದೇ ಕರ್ತವ್ಯವಾಗಿದೆ. ಭಾರತವು ತಂದೆಯ ಜನ್ಮಭೂಮಿಯಾಗಿದೆ, ಇಷ್ಟು ಮಹತ್ವವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿದ್ದಾರೆಯೋ ಅವರಿಗೆ ನಶೆಯೇರಿದೆ, ಕಲ್ಪ-ಕಲ್ಪವೂ ತಂದೆಯು ಭಾರತದಲ್ಲಿಯೇ ಬರುತ್ತಾರೆ, ಇದನ್ನು ಎಲ್ಲರಿಗೂ ತಿಳಿಸಬೇಕು, ನಿಮಂತ್ರಣ ಕೊಡಬೇಕಾಗಿದೆ. ರಚನೆಯ ಜ್ಞಾನವನ್ನು ಯಾರೂ ತಿಳಿದುಕೊಂಡಿಲ್ಲ ಅಂದಮೇಲೆ ಇಂತಹ ಸೇವಾಧಾರಿಗಳಾಗಿ ತಮ್ಮ ಹೆಸರನ್ನು ಪ್ರಸಿದ್ಧ ಮಾಡಿಕೊಳ್ಳಿ. ಎಲ್ಲಾ ಕಡೆ ಈ ಮೇಳಗಳು ನಡೆಯುವುದು. ಯಾರು ತೀಕ್ಷ್ಣವಾದ ಮಕ್ಕಳಿದ್ದಾರೆಯೋ ಅವರ ಸಹಯೋಗವನ್ನು ಎಲ್ಲರೂ ಕೇಳುತ್ತಿರುತ್ತಾರೆ. ಅವರ ಹೆಸರನ್ನು ಜಪಿಸುತ್ತಾ ಇರುತ್ತಾರೆ. ಮೊದಲನೆಯದಾಗಿ ಶಿವ ತಂದೆಯನ್ನು ಜಪಿಸುತ್ತಾರೆ, ಎರಡನೆಯದಾಗಿ ಬ್ರಹ್ಮಾ ತಂದೆಯನ್ನು, ಮೂರನೆಯದಾಗಿ ಕುಮಾರಿಕಾ (ದಾದಿಯರು), ಗಂಗೆ, ಮನೋಹರ್, ಇವರನ್ನು ಜಪಿಸುತ್ತಾರೆ. ಭಕ್ತಿಮಾರ್ಗದಲ್ಲಿ ಕೈಯಲ್ಲಿ ಮಾಲೆಯನ್ನು ಜಪಿಸುತ್ತಾರೆ, ಈಗ ಬಾಯಿಂದ ಹೆಸರನ್ನು ಜಪಿಸುತ್ತಾರೆ, ಇಂತಹವರು ಬಹಳ ಸೇವಾಧಾರಿಯಾಗಿದ್ದಾರೆ ನಿರಹಂಕಾರಿಯಾಗಿದ್ದಾರೆ ಮಧುರರಾಗಿದ್ದಾರೆ, ದೇಹಾಭಿಮಾನವಿಲ್ಲ ಎಂದು. ಸ್ನೇಹ ಕೊಟ್ಟರೆ ಸ್ನೇಹ ಸಿಗುವುದೆಂದು ಹೇಳುತ್ತಾರಲ್ಲವೆ. ಈಗ ತಂದೆಯು ತಿಳಿಸುತ್ತಾರೆ- ನೀವು ದುಃಖಿಯಾಗಿದ್ದೀರಿ, ನೀವು ನನ್ನನ್ನು ನೆನಪು ಮಾಡುತ್ತೀರೆಂದರೆ ನಾನೂ ಸಹ ಸಹಯೋಗ ನೀಡುತ್ತೇನೆ. ನೀವು ತಿರಸ್ಕಾರ ಮಾಡುತ್ತೀರೆಂದರೆ ಇದು ತಮ್ಮ ಮೇಲೆ ತಿರಸ್ಕಾರ ಮಾಡಿಕೊಂಡಂತೆ, ಪದವಿಯೂ ಸಿಗುವುದಿಲ್ಲ. ಎಷ್ಟು ಅಪಾರವಾದ ಸಿಗುವುದೋ, ಯಾರಿಗಾದರೂ ಲಾಟರಿ ಹೊಡದರೆ ಎಷ್ಟು ಖುಷಿಯಾಗುವುದು! ಅದರಲ್ಲಿಯೂ ಎಷ್ಟೊಂದು ಬಹುಮಾನಗಳು ಸಿಗುತ್ತವೆ ಮತ್ತು ಎರಡನೆ, ಮೂರನೇ ಬಹುಮಾನವೂ ಸಿಗುತ್ತದೆ ಹಾಗೆಯೇ ಇದೂ ಸಹ ಈಶ್ವರೀಯ ಸ್ಪರ್ಧೆಯಾಗಿದೆ, ಜ್ಞಾನ ಮತ್ತು ಯೋಗದ ಸ್ಪರ್ಧೆಯಾಗಿದೆ. ಯಾರು ಇದರಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುವರೋ ಅವರೇ ಕೊರಳಿನ ಹಾರವಾಗುತ್ತಾರೆ ಮತ್ತು ಸಿಂಹಾಸನದಲ್ಲಿ ಸಮೀಪ ಕುಳಿತುಕೊಳ್ಳುತ್ತಾರೆ.

ನೀವೆಲ್ಲರೂ ಕರ್ಮಯೋಗಿಗಳಾಗಿದ್ದೀರಿ. ತಮ್ಮ ಮನೆಯನ್ನೂ ಸಂಭಾಲನೆ ಮಾಡಿ ಶಾಲೆಯಲ್ಲಿ ಒಂದು ಗಂಟೆ ಓದಬೇಕಾಗಿದೆ ಮತ್ತೆ ಮನೆಗೆ ಹೋಗಿ ರಿವೈಜ್ ಮಾಡಬೇಕಾಗಿದೆ. ಶಾಲೆಯಲ್ಲಿಯೂ ಇದೇ ರೀತಿ ಮಾಡುತ್ತಾರಲ್ಲವೆ. ಓದಿ ಮತ್ತೆ ಮನೆಗೆ ಹೋಗಿ ರಿವೈಜ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಒಂದು ಘಳಿಗೆ ಅರ್ಧ ಘಳಿಗೆ ದಿನದಲ್ಲಿ 8 ಗಂಟೆಗಳಿರುತ್ತವೆ, ಅದರಲ್ಲಿಯೂ ಒಂದು ಗಂಟೆ, ಅರ್ಧ ಗಂಟೆ ಅಥವಾ 15-20 ನಿಮಿಷಗಳಾದರೂ ತರಗತಿಯಲ್ಲಿ ಓದಿ ಧಾರಣೆ ಮಾಡಿಕೊಂಡು ಮತ್ತೆ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿರಿ ಎಂದು ತಂದೆಯು ತಿಳಿಸುತ್ತಾರೆ. ಆದಿಯಲ್ಲಿ ನಿಮ್ಮನ್ನು ತಂದೆಯು ನೆನಪಿನಲ್ಲಿ ಕುಳಿತುಕೊಳ್ಳಿ, ಸ್ವದರ್ಶನ ಚಕ್ರವನ್ನು ತಿರುಗಿಸಿ ಎಂದು ಕೂರಿಸುತ್ತಿದ್ದರಲ್ಲವೆ. ನೆನಪಿನ ಜ್ಞಾನವಂತೂ ಇತ್ತಲ್ಲವೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ, ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ನಿದ್ರೆಯು ಬಂದಾಗ ಮಲಗಿ ಬಿಡಿ. ಇದರಿಂದ ಅಂತ್ಯ ಮತಿ ಸೋ ಗತಿಯಾಗುವುದು. ಮತ್ತೆ ಮುಂಜಾನೆ ಏಳುವಾಗಲೂ ಸಹ ಅದೇ ಮಾತುಗಳು ನೆನಪಿಗೆ ಬರುತ್ತಾ ಇರುವವು, ಇಂತಹ ಅಭ್ಯಾಸ ಮಾಡುತ್ತಾ-ಮಾಡುತ್ತಾ ನೀವು ನಿದ್ರೆಯನ್ನು ಜಯಿಸುವವರಾಗಿ ಬಿಡುತ್ತೀರಿ. ಯಾರು ಮಾಡುವರೋ ಅವರು ಪಡೆಯುವರು. ಮಾಡುವವರದು ಎಲ್ಲರಿಗೂ ಕಂಡು ಬರುತ್ತದೆ, ಚಲನೆಯು ಪ್ರಸಿದ್ಧವಾಗುತ್ತದೆ. ನೋಡಲಾಗುತ್ತದೆ – ಇವರು ವಿಚಾರ ಸಾಗರ ಮಂಥನ ಮಾಡುತ್ತಾರೆಯೇ? ಧಾರಣೆ ಮಾಡುತ್ತಾರೆಯೇ? ಯಾವುದೇ ಲೋಭವಿಲ್ಲವೆ ಎಂದು. ಈ ಶರೀರವು ಹಳೆಯದಾಗಿದೆ. ಇದರ ಬಗ್ಗೆಯೂ ಹೆಚ್ಚು ಆಲೋಚನೆ ಮಾಡಬಾರದು. ಯಾವಾಗ ಜ್ಞಾನ-ಯೋಗದ ಪೂರ್ಣ ಧಾರಣೆ ಇರುವುದೋ ಆಗ ಇದೂ ಸರಿಯಾಗಿರುವುದು. ಧಾರಣೆಯಿಲ್ಲದಿದ್ದರೆ ಶರೀರವು ಇನ್ನೂ ಕುಗ್ಗುತ್ತಾ ಹೋಗುವುದು. ಕುಗ್ಗುತ್ತಾ-ಕುಗ್ಗುತ್ತಾ ಸಂಪೂರ್ಣ ಸ್ಮಶಾನಕ್ಕೆ ಯೋಗ್ಯವಾಗಿ ಬಿಡುವುದು ಮತ್ತೆ ಭವಿಷ್ಯದಲ್ಲಿ ಹೊಸ ಶರೀರ ಸಿಗಬೇಕಾಗಿದೆ ಆದ್ದರಿಂದ ಆತ್ಮವನ್ನು ಪವಿತ್ರ ಮಾಡಿಕೊಳ್ಳಬೇಕಾಗಿದೆ. ಇದಂತೂ ಹಳೆಯ, ಮೈಲಿಗೆ ಶರೀರವಾಗಿದೆ, ಇದಕ್ಕೆ ಎಷ್ಟಾದರೂ ಪೌಡರ್ ಹಚ್ಚಿದರೂ ಸಹ ಇದು ಕಾಸಿನ ಬೆಲೆಯದ್ದಾಗಿದೆ. ಈಗ ನಿಮ್ಮೆಲ್ಲರ ನಿಶ್ಚಿತಾರ್ಥವು ಶಿವ ತಂದೆಯೊಂದಿಗೆ ಆಗಿದೆ, ವಿವಾಹದ ದಿನದಂದು ಹಳೆಯ ವಸ್ತ್ರಗಳನ್ನು ಧರಿಸುತ್ತಾರೆ, ಹಾಗೆಯೇ ಈ ಶರೀರದ ಸ್ಥೂಲ ಶೃಂಗಾರವನ್ನು ಹೆಚ್ಚು ಮಾಡಿಕೊಳ್ಳಬಾರದು. ಜ್ಞಾನ, ಯೋಗದಿಂದ ನಿಮ್ಮನ್ನು ಶೃಂಗರಿಸುತ್ತೀರೆಂದರೆ ದೇವತೆಗಳಾಗಿ ಬಿಡುತ್ತೀರಿ. ಇದು ಜ್ಞಾನ ಮಾನಸ ಸರೋವರವಾಗಿದೆ, ಇದರಲ್ಲಿ ಜ್ಞಾನ ಸ್ನಾನ ಮಾಡುತ್ತಾ ಇರಿ ಆಗ ನೀವು ಸ್ವರ್ಗದ ಪರಿಗಳಾಗಿ ಬಿಡುತ್ತೀರಿ. ಪ್ರಜೆಗಳಿಗೆ ಪರಿಗಳೆಂದು ಹೇಳುವುದಿಲ್ಲ, ಕೃಷ್ಣನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು ಓಡಿಸಿಕೊಂಡು ಹೋದನೆಂದು ಹೇಳುತ್ತಾರೆ. ಓಡಿಸಿಕೊಂಡು ಹೋಗಿ ಪ್ರಜೆಗಳಲ್ಲಿ ಚಂಡಾಲರನ್ನಾಗಿ ಮಾಡಿದನೆಂದು ಹೇಳುವುದಿಲ್ಲ. ನೀವೂ ಸಹ ಇಂತಹ ಪುರುಷಾರ್ಥ ಮಾಡಬೇಕಾಗಿದೆ. ಏನು ಸಿಕ್ಕಿದರೆ ಅದೇ ಸಾಕು ಎಂದಲ್ಲ, ಇದು ಪಾಠಶಾಲೆಯಾಗಿದೆ, ಇಲ್ಲಿ ಮುಖ್ಯವಾದುದು ವಿದ್ಯೆಯಾಗಿದೆ. ಅನೇಕ ಗೀತಾಪಾಠಶಾಲೆಗಳನ್ನು ಮಾಡುತ್ತಾರೆ, ಅಲ್ಲಿ ಕುಳಿತು ಗೀತೆಯನ್ನು ತಿಳಿಸುತ್ತಾರೆ, ಕಂಠಪಾಠ ಮಾಡುತ್ತಾರೆ. ಯಾರಾದರೊಬ್ಬರು ಶ್ಲೋಕವನ್ನು ತೆಗೆದುಕೊಂಡು ಅದನ್ನು ವಿಸ್ತಾರವಾಗಿ ತಿಳಿಸುತ್ತಾರೆ. ಕೆಲವರು ಹಾಗೆಯೇ ಕೇವಲ ಓದುತ್ತಾರೆ, ಇನ್ನೂ ಕೆಲವರು ಒಂದು ಶ್ಲೋಕವನ್ನು ಅರ್ಧ ಮುಕ್ಕಾಲು ಗಂಟೆ ಭಾಷಣ ಮಾಡುತ್ತಾರೆ ಆದರೆ ಅದರಿಂದ ಲಾಭವೇನೂ ಇಲ್ಲ. ಇಲ್ಲಂತೂ ತಂದೆಯು ಓದಿಸುತ್ತಾರೆ, ಗುರಿ-ಧ್ಯೇಯವು ಸ್ಪಷ್ಟವಾಗಿದೆ, ಮತ್ತ್ಯಾವುದೇ ವೇದಶಾಸ್ತ್ರಗಳನ್ನು ಓದುವುದರಲ್ಲಿ ಗುರಿ-ಧ್ಯೇಯವಿಲ್ಲ. ಪುರುಷಾರ್ಥ ಮಾಡುತ್ತಾ ಇರಿ. ಆದರೆ ಸಿಗುವುದೇನು? ಯಾವಾಗ ಬಹಳ ಭಕ್ತಿ ಮಾಡುವರೋ ಆಗ ಭಗವಂತನು ಸಿಗುತ್ತಾರೆ, ಅದು ರಾತ್ರಿಯ ನಂತರ ಅವಶ್ಯವಾಗಿ ದಿನವಾಗುವುದು. ಕಲ್ಪದ ಆಯಸ್ಸನ್ನು ಕೆಲಕೆಲವರು ಕೆಲವೊಂದು ರೀತಿ ತಿಳಿಸುತ್ತಾರೆ. ತಿಳಿಸುವುದಕ್ಕೂ ಬಲ ಬೇಕಲ್ಲವೆ. ಯೋಗಬಲದಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಒಂದುವೇಳೆ ಮಾಡಲು ಸಾಧ್ಯವಾಗದಿದ್ದರೆ ಶಕ್ತಿಯಿಲ್ಲ, ಯೋಗವಿಲ್ಲವೆಂದರ್ಥ. ಯಾರು ಯೋಗಯುಕ್ತ ಮಕ್ಕಳಿದ್ದಾರೆಯೋ ಅವರಿಗೆ ತಂದೆಯೂ ಸಹ ಸಹಯೋಗ ನೀಡುತ್ತಾರೆ. ಡ್ರಾಮಾದಲ್ಲಿ ಏನಿದೆಯೋ ಅದೇ ಪುನರಾವರ್ತನೆಯಾಗುತ್ತದೆ, ಕ್ಷಣ ಕ್ಷಣವು ಕಳೆಯುತ್ತಾ ಹೋಗುತ್ತದೆ. ಟಿಕ್ ಟಿಕ್ ಎಂದು ಕಳೆಯುತ್ತಾ ಹೋಗುತ್ತದೆ. ನಾವು ಶ್ರೀಮತದಿಂದ ಪಾತ್ರದಲ್ಲಿ ಬರುತ್ತೇವೆ, ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠರಾಗುವುದಿಲ್ಲ. ನಂಬರ್ವಾರಂತೂ ಇದ್ದಾರಲ್ಲವೆ. ನಾವು ಒಂದಾಗಬೇಕೆಂದು ಅವರು ತಿಳಿಯುತ್ತಾರೆ ಆದರೆ ಅರ್ಥವೇ ಗೊತ್ತಿಲ್ಲ. ಒಂದಾಗುವುದು ಎಂದರೆ ಎಲ್ಲರೂ ತಂದೆಯವರಾಗುವುದೇ ಅಥವಾ ಎಲ್ಲರೂ ಸಹೋದರರಾಗುವುದೇ? ಒಂದುವೇಳೆ ಸಹೋದರರೆಂದು ಹೇಳಿದರೂ ಸರಿಯೇ, ಶ್ರೀಮತದಿಂದಲೇ ನಾವು ಒಂದಾಗಲು ಸಾಧ್ಯ. ನೀವೆಲ್ಲರೂ ಒಂದು ಮತದಂತೆ ನಡೆಯುತ್ತೀರಿ. ನಿಮ್ಮ ತಂದೆ, ಶಿಕ್ಷಕ, ಗುರು ಒಬ್ಬರೇ ಆಗಿದ್ದಾರೆ, ಯಾರು ಪೂರ್ಣ ಶ್ರೀಮತದಂತೆ ನಡೆಯುವುದಿಲ್ಲವೋ ಅವರು ಶ್ರೇಷ್ಠರಾಗಲು ಸಾಧ್ಯವಿಲ್ಲ. ಒಂದುವೇಳೆ ನಡೆಯುವುದೇ ಇಲ್ಲವೆಂದರೆ ಅವರು ಸಮಾಪ್ತಿಯಾಗುತ್ತಾರೆ, ಸ್ಪರ್ಧೆಯಲ್ಲಿ ಯಾರು ಬುದ್ಧಿವಂತ ಯೋಗ್ಯರಾಗಿರುವರೋ ಅವರನ್ನೇ ಇಡುತ್ತಾರೆ, ದೊಡ್ಡ ಸ್ಪರ್ಧೆಯಲ್ಲಿ ಒಳ್ಳೊಳ್ಳೆಯ ಕುದುರೆಗಳನ್ನೇ ಬಿಡುತ್ತಾರೆ ಏಕೆಂದರೆ ದೊಡ್ಡ ಲಾಟರಿಯನ್ನು ಇಡುತ್ತಾರೆ. ಇದೂ ಸಹ ಶರೀರರೂಪಿ ಅಶ್ವದ ಸ್ಪರ್ಧೆಯಾಗಿದೆ. ಹುಸೇನನ ಕುದುರೆಯನ್ನು ತೋರಿಸುತ್ತಾರೆ. ಹಿಂಸೆಯು ಎರಡು ಪ್ರಕಾರವಾಗಿರುತ್ತದೆ, ನಂಬರ್ವನ್ ಹಿಂಸೆಯು ಕಾಮ ಕಟಾರಿಯಾಗಿದೆ, ಇದರಿಂದಲೇ ಅರ್ಧ ಕಲ್ಪದಿಂದ ತನ್ನನ್ನು ಮತ್ತು ಅನ್ಯರನ್ನೂ ಕೊಲೆ ಮಾಡಿಕೊಳ್ಳುತ್ತಾ ಬಂದರು. ಈ ಹಿಂಸೆಯನ್ನು ಯಾರೂ ತಿಳಿದುಕೊಂಡಿಲ್ಲ. ಸನ್ಯಾಸಿಗಳೂ ಸಹ ಈ ರೀತಿ ತಿಳಿದುಕೊಳ್ಳುವುದಿಲ್ಲ, ಕೇವಲ ಇದು ವಿಕಾರವೆಂದು ಹೇಳಿ ಬಿಡುತ್ತಾರೆ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈ ಕಾಮವು ಮಹಾಶತ್ರುವಾಗಿದೆ, ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತದ್ದಾಗಿದೆ, ಇದನ್ನೂ ಸಿದ್ಧ ಮಾಡಿ ತಿಳಿಸಬೇಕಾಗಿದೆ – ನಮ್ಮದು ಪ್ರವೃತ್ತಿ ಮಾರ್ಗ ರಾಜಯೋಗವಾಗಿದೆ, ನಿಮ್ಮದು ಹಠಯೋಗವಾಗಿದೆ. ನೀವು ಶಂಕರಾಚಾರ್ಯರಿಂದ ಹಠಯೋಗವನ್ನು ಕಲಿಯುತ್ತೀರಿ, ನಾವು ಶಿವಾಚಾರ್ಯರಿಂದ ರಾಜಯೋಗವನ್ನು ಕಲಿಯುತ್ತೇವೆ. ಮುಂದೆ ಹೋದಂತೆ ನಿಮ್ಮದು ಖಂಡಿತ ಪ್ರತ್ಯಕ್ಷತೆಯಾಗುವುದು. ಕೆಲವರು ಪ್ರಶ್ನೆ ಕೇಳುತ್ತಾರೆ. ದೇವತೆಗಳದು 5000 ವರ್ಷಗಳಲ್ಲಿ 84 ಜನ್ಮಗಳಾಯಿತು, ಅಂದಮೇಲೆ ಕ್ರಿಶ್ಚಿಯನ್ನರದು ಎಷ್ಟಾಯಿತು? ಕ್ರಿಸ್ತನಿಗೆ 2000 ವರ್ಷಗಳಾಯಿತು, ಈಗ ಲೆಕ್ಕ ಮಾಡಿ, ಅವರದು ಅಂದಾಜು ಎಷ್ಟು ಜನ್ಮಗಳಿರಬಹುದು? 30 ಅಥವಾ 32. ಇದಂತೂ ಸ್ಪಷ್ಟವಾಗಿದೆ. ಯಾರು ಬಹಳ ಸುಖವನ್ನು ನೋಡುತ್ತಾರೆಯೋ ಅವರು ಬಹಳ ದುಃಖವನ್ನೂ ನೋಡುತ್ತಾರೆ. ಅನ್ಯ ಧರ್ಮದವರಿಗೆ ಸುಖವೂ ಕಡಿಮೆ, ದುಃಖವೂ ಕಡಿಮೆ ಸಿಗುತ್ತದೆ, ಅಂದಾಜು ಲೆಕ್ಕವನ್ನು ತೆಗೆಯಬೇಕಾಗಿದೆ. ಯಾರು ಮುಖ್ಯ ಧರ್ಮಪಿತರಿದ್ದಾರೆಯೋ ಅವರ ಜನ್ಮಗಳನ್ನು ತೆಗೆಯಿರಿ. ಯಾರು ಕೊನೆಯಲ್ಲಿ ಬರುತ್ತಾರೆಯೋ ಅವರದು ಕೆಲವೇ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಬುದ್ಧಿ, ಇಬ್ರಾಹಿಂನ ಲೆಕ್ಕವನ್ನು ತೆಗೆಯಬಹುದು. ಭಲೆ ಅವರದು ಒಂದೆರಡು ಜನ್ಮಗಳ ಅಂತರವಾಗಬಹುದು. ನಿಖರವಾಗಿ ತಿಳಿಸಲು ಸಾಧ್ಯವಿಲ್ಲ. ಅಂದಾಜಿನಲ್ಲಿ ತಿಳಿಸಬಹುದು, ಇವೆಲ್ಲವೂ ವಿಚಾರ ಸಾಗರ ಮಂಥನ ಮಾಡುವ ಮಾತುಗಳಾಗಿವೆ. ಯಾರಾದರೂ ಕೇಳಿದರೆ ಏನು ತಿಳಿಸುವಿರಿ? ಮೊದಲು ತಂದೆಯನ್ನು ನೆನಪು ಮಾಡಿರಿ ಏಕೆಂದರೆ ತಂದೆಯಿಂದ ಆಸ್ತಿ ತೆಗೆದುಕೊಳ್ಳಬೇಕೆಂದು ತಿಳಿಸಿರಿ. ಎಷ್ಟು ಜನ್ಮಗಳನ್ನು ತೆಗೆದುಕೊಂಡಿರುವರೋ ಅಷ್ಟೇ ತೆಗೆದುಕೊಳ್ಳುವರು. ಮೊದಲು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ ಎಂದು ಚೆನ್ನಾಗಿ ತಿಳಿಸಬೇಕಾಗಿದೆ. ಇದು ಪರಿಶ್ರಮದ ಕೆಲಸವಾಗಿದೆ.

ಮಕ್ಕಳು ಬಾಂಬೆಯಲ್ಲಿ ಬಹಳ ಪರಿಶ್ರಮ ಪಡುತ್ತಿದ್ದಾರೆ ಏಕೆಂದರೆ ಅವರು ಬಹಳ ಸಫಲರಾಗಬೇಕಾಗಿದೆ, ಇದರಲ್ಲಿ ಬುದ್ಧಿಯೂ ಬೇಕು, ತಂದೆಯ ಹಣದೊಂದಿಗೆ ಬಹಳ ಪ್ರೀತಿಯೂ ಬೇಕು. ಕೆಲವರಂತೂ ಹಣ ತೆಗೆದುಕೊಳ್ಳುವುದಿಲ್ಲ, ಅರೆ! ಜ್ಞಾನರತ್ನಗಳನ್ನು ತೆಗೆದುಕೊಳ್ಳಿ, ಧಾರಣೆ ಮಾಡಿಕೊಳ್ಳಿ ಎಂದು ಹೇಳಿದರೆ ನಾವೇನು ಮಾಡುವುದು, ನಮಗೆ ಅರ್ಥವಾಗುವುದಿಲ್ಲವೆಂದು ಹೇಳುತ್ತಾರೆ. ತಿಳಿದುಕೊಳ್ಳದಿದ್ದರೆ ಅದು ನಿಮ್ಮಿಷ್ಟ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶರೀರವನ್ನು ಸರಿಯಾಗಿ ಇಟ್ಟುಕೊಳ್ಳಲು ಜ್ಞಾನ-ಯೋಗದ ಧಾರಣೆ ಮಾಡಬೇಕಾಗಿದೆ, ಯಾವುದೇ ಪದಾರ್ಥದ ಲೋಭವನ್ನು ಇಟ್ಟುಕೊಳ್ಳಬಾರದು. ಈ ಜ್ಞಾನ -ಯೋಗದಿಂದ ಶೃಂಗರಿಸಿಕೊಳ್ಳಬೇಕು, ಸ್ಥೂಲ ಶೃಂಗಾರದಿಂದಲ್ಲ.

2. ಒಂದು ಗಂಟೆ, ಅರ್ಧ ಗಂಟೆ ಅವಶ್ಯವಾಗಿ ವಿದ್ಯೆಯನ್ನು ಓದಬೇಕಾಗಿದೆ, ಜ್ಞಾನ ಮತ್ತು ಯೋಗದಲ್ಲಿ ಸ್ಪರ್ಧೆ ಮಾಡಬೇಕಾಗಿದೆ.

ವರದಾನ:-

ವಿಜಯಿಯಾಗುವುದಕ್ಕಾಗಿ ಪ್ರತಿಯೊಬ್ಬರ ಹೃದಯ ರಹಸ್ಯವನ್ನು ತಿಳಿಯಬೇಕಾಗಿದೆ. ಯಾರದೇ ಮುಖದಿಂದ ಬರುವಂತಹ ಶಬ್ಧದಿಂದ, ಅವರ ಹೃದಯದ ರಹಸ್ಯವನ್ನು ತಿಳಿದುಕೊಳ್ಳುತ್ತೀರೆಂದರೆ ವಿಜಯಿಗಳಾಗಬಹುದು ಆದರೆ ಹೃದಯದ ರಹಸ್ಯವನ್ನು ತಿಳಿದುಕೊಳ್ಳುವುದಕ್ಕಾಗಿ ಅಂತರ್ಮುಖತೆ ಇರಬೇಕಾಗಿದೆ. ಎಷ್ಟು ಅಂತರ್ಮುಖಿಯಾಗಿ ಇರುತ್ತೀರಿ ಅಷ್ಟೂ ಪ್ರತಿಯೊಬ್ಬರ ಹೃದಯದ ರಹಸ್ಯವನ್ನು ತಿಳಿದುಕೊಂಡು ಅವರನ್ನೂ ಖುಷಿ ಪಡಿಸಬಹುದು. ಖುಷಿ ಪಡಿಸುವವರೇ ವಿಜಯಿಗಳಾಗುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top