10 May 2022 KANNADA Murli Today | Brahma Kumaris

Read and Listen today’s Gyan Murli in Kannada

May 9, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮಗೆ ಶ್ರೇಷ್ಠ ಮತವನ್ನು ಕೊಟ್ಟು, ಸದಾಕಾಲಕ್ಕೋಸ್ಕರ ಸುಖಿ, ಶಾಂತರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಈಗ ಅವರ ಮತದ ಮೇಲೆ ನಡೆಯಿರಿ. ಆತ್ಮಿಕ ವಿದ್ಯೆಯನ್ನು ಓದಿಮತ್ತು ಓದಿಸಿ, ಆಗ ಸದಾ ಆರೋಗ್ಯವಂತರು ಹಾಗೂ ಭಾಗ್ಯವಂತರಾಗುತ್ತೀರಿ”

ಪ್ರಶ್ನೆ:: -

ಯಾವ ಅವಕಾಶವು ಇಡೀ ಕಲ್ಪದಲ್ಲಿ ಈ ಸಮಯದಲ್ಲಿಯೇ ಸಿಗುತ್ತದೆ, ಅದನ್ನು ಕಳೆದುಕೊಳ್ಳಬಾರದಾಗಿದೆ?

ಉತ್ತರ:-

ಆತ್ಮಿಕ ಸೇವೆ ಮಾಡುವ ಅವಕಾಶ, ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಅವಕಾಶವು ಈಗಲೇ ಸಿಗುತ್ತದೆ. ಆದ್ದರಿಂದ ಇದನ್ನು ಕಳೆದುಕೊಳ್ಳಬಾರದಾಗಿದೆ. ಆತ್ಮಿಕ ಸೇವೆಯಲ್ಲಿ ತೊಡಗಬೇಕು ಮತ್ತು ಸರ್ವೀಸೇಬಲ್ ಆಗಬೇಕಾಗಿದೆ. ವಿಶೇಷವಾಗಿ ಕುಮಾರಿಯರು ಈಶ್ವರೀಯ ಸರ್ಕಾರದ ಸೇವೆ ಮಾಡಬೇಕು. ಮಮ್ಮಾರವರನ್ನು ಪೂರ್ತಿ-ಪೂರ್ತಿ ಅನುಕರಣೆ ಮಾಡಬೇಕು. ಒಂದುವೇಳೆ ಕುಮಾರಿಯರು ತಂದೆಯ ಮಕ್ಕಳಾದ ಮೇಲೂ ಸಹ ಶರೀರಿಕ ಸೇವೆಯನ್ನೇ ಮಾಡುತ್ತಿರುತ್ತಾರೆ, ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆಯನ್ನು ಮಾಡುವುದಿಲ್ಲವೆಂದರೆ ಇದೂ ಸಹ ತಂದೆಗೆ ಅಗೌರವವಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎದ್ದೇಳಿ ಪ್ರಿಯತಮರೇ ಎದ್ದೇಳಿ..

ಓಂ ಶಾಂತಿ. ಪ್ರಿಯತಮೆಯರಿಗೆ ಯಾರು ತಿಳಿಸಿದರು? ಪ್ರಿಯತಮ ಪ್ರಿಯತಮೆಯರಗೋಸ್ಕರ ಬಂದರು ಎಂದು ಹೇಳುತ್ತಾರೆ. ಅಂದಮೇಲೆ ಎಷ್ಟು ಮಂದಿ ಪ್ರಿಯತಮೆಯರಿದ್ದಾರೆ? ಒಬ್ಬ ಪ್ರಿಯತಮನಿಗೆ ಇಷ್ಟೊಂದು ಪ್ರಿಯತಮೆಯರು…. ಅದ್ಭುತವಲ್ಲವೇ. ಮನುಷ್ಯರು ಕೃಷ್ಣನಿಗೆ 16,108 ಜನ ಪ್ರಿಯತಮೆಯರಿದ್ದರು ಎಂದು ಹೇಳುತ್ತಾರೆ, ಆದರೆ ಇರಲಿಲ್ಲ. ಶಿವ ತಂದೆಯು ಹೇಳುತ್ತಾರೆ ಈಗ ನನಗೆ ಕೋಟ್ಯಾಂತರ ಲೆಕ್ಕದಲ್ಲಿ ಪ್ರಿಯತಮೆಯರಿದ್ದಾರೆ. ಎಲ್ಲಾ ಪ್ರಿಯತಮೆಯರನ್ನು ನಾನು ನನ್ನ ಜೊತೆ ಮಧುರ ಮನೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಪ್ರಿಯತಮೆಯರೂ ಸಹ ತಿಳಿದುಕೊಳ್ಳುತ್ತಾರೆ – ಬಾಬಾ ನಮ್ಮನ್ನು ಪುನಃ ಕರೆದುಕೊಂಡು ಹೋಗಲು ಬಂದಿದ್ದಾರೆ. ಜೀವಾತ್ಮರು ಪ್ರಿಯತಮೆಯಾದರಲ್ಲವೇ. ಪ್ರಿಯತಮೆಯರ ಹೃದಯದಲ್ಲಿದೆ – ನಮ್ಮ ಪ್ರಿಯತಮ ನಮಗೆ ಶ್ರೀಮತಕೊಟ್ಟು ಶೃಂಗಾರ ಮಾಡಿಸಲು ಬಂದಿದ್ದಾರೆ. ಮತಗಳು ಪ್ರತಿಯೊಬ್ಬರಿಗೂ ಸಿಗುತ್ತದೆ. ಪುರುಷನ ಮತವು ಸ್ತ್ರೀಯರಿಗೆ, ತಂದೆಯ ಮತವು ಮಕ್ಕಳಿಗೆ, ಸಾಧುವಿನ ಮತವು ಶಿಷ್ಯರಿಗೆ ಸಿಗುತ್ತದೆ. ಆದರೆ ಪರಮಾತ್ಮನ ಮತವು ಎಲ್ಲದಕ್ಕಿಂತ ಭಿನ್ನವಾಗಿದೆ, ಆದ್ದರಿಂದ ಇದನ್ನು ಶ್ರೀಮತವೆಂದು ಹೇಳಲಾಗುತ್ತದೆ, ಮತ್ತೆಲ್ಲವೂ ಮನುಷ್ಯರ ಮತಗಳಾಗಿವೆ. ಅವರೆಲ್ಲರೂ ತಮ್ಮ ಶರೀರ ನಿರ್ವಹಣೆಗಾಗಿ ಮತವನ್ನು ಕೊಡುತ್ತಾರೆ. ಸಾಧು, ಸಂತರು ಮುಂತಾದ ಎಲ್ಲರಿಗೂ ಶರೀರ ನಿರ್ವಹಣೆಯ ಚಿಂತೆಯೇ ಇರುತ್ತದೆ. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಧನವಂತರಾಗುವ ಮತವನ್ನೇ ಕೊಡುತ್ತಿರುತ್ತಾರೆ. ಎಲ್ಲರಿಗಿಂತ ಒಳ್ಳೆಯ ಮತವು ಸಾಧುಗಳು, ಗುರುಗಳದೆಂದು ಹೇಳಲಾಗಿದೆ. ಆದರೆ ಅವರೂ ಸಹ ತಮ್ಮ ಹೊಟ್ಟೆಗೋಸ್ಕರ ಎಷ್ಟು ಹಣವನ್ನು ಕೂಡಿಡುತ್ತಾರೆ. ನನಗೆ ನನ್ನದೇ ಆದ ಶರೀರವಿಲ್ಲ. ನಾನು ನನ್ನ ಹೊಟ್ಟೆಗೋಸ್ಕರ ಏನೂ ಮಾಡುವುದಿಲ್ಲ. ನೀವೂ ಸಹ ತಮ್ಮ ಹೊಟ್ಟೆಗೋಸ್ಕರವೇ ನಾವು ಮಹಾರಾಜಾ-ಮಹಾರಾಣಿ ಆಗಬೇಕೆನ್ನುವುದು ಪುರುಷಾರ್ಥ ಮಾಡುತ್ತಿದ್ದೀರಿ. ಎಲ್ಲರಿಗೂ ಹೊಟ್ಟೆಯದೇ ಚಿಂತೆ ಇದೆ. ಕೆಲವರು ಜೋಳದ ರೊಟ್ಟಿಯನ್ನು ತಿಂದರೇ ಇನ್ನೂ ಕೆಲವರು ಅಶೋಕ ಹೋಟಲಿನಲ್ಲಿ ತಿನ್ನುತ್ತಾರೆ. ಸಾಧುಗಳು ಹಣವನ್ನು ಜೊತೆಗೂಡಿಸಿ ದೊಡ್ಡ ಮಂದಿರ ಮುಂತಾದವುಗಳನ್ನು ಮಾಡುತ್ತಾರೆ. ಶಿವಬಾಬಾ ಶರೀರ ನಿರ್ವಹಣರ್ಥವಾಗಿ ಏನನ್ನೂ ಮಾಡುವುದಿಲ್ಲ. ನಿಮ್ಮನ್ನು ಸದಾ ಸುಖಿಗಳನ್ನಾಗಿ ಮಾಡಲು ಎಲ್ಲವನ್ನೂ ಕೊಡುತ್ತಾರೆ. ನೀವು ಸದಾ ಆರೋಗ್ಯವಂತರು, ಭಾಗ್ಯವಂತರಾಗುತ್ತೀರಿ. ನಾನು ಸದಾ ಆರೋಗ್ಯವಂತನಾಗಲು ಪುರುಷಾರ್ಥವನ್ನು ಮಾಡುವುದಿಲ್ಲ ಏಕೆಂದರೆ ನಾನು ಅಶರೀರಿ ಆಗಿದ್ದೇನೆ. ನಾನು ನೀವು ಮಕ್ಕಳನ್ನು ಸುಖಿಗಳನ್ನಾಗಿ ಮಾಡಲು ಬರುತ್ತೇನೆ. ಶಿವಬಾಬಾರವರಂತು ನಿರಾಕಾರ ಆಗಿದ್ದಾರೆ. ಬಾಕಿ ಎಲ್ಲರಿಗೆ ಹೊಟ್ಟೆಯ ಚಿಂತೆ ಇರುತ್ತದೆ. ದ್ವಾಪರದಲ್ಲಿ ದೊಡ್ಡ-ದೊಡ್ಡ ಸನ್ಯಾಸಿಗಳು, ತತ್ವ ಜ್ಞಾನಿಗಳು, ಬ್ರಹ್ಮ ಜ್ಞಾನಿಗಳಿದ್ದರು. ಅವರು ನೆನಪಿನಲ್ಲಿ ಇರುತ್ತಿದ್ದರು. ಆಗ ಮನೆಯಲ್ಲಿ ಕುಳಿತಿದ್ದಂತೆಯೇ ಅವರಿಗೆ ಎಲ್ಲವೂ ಸಿಗುತ್ತಿತ್ತು. ಹೊಟ್ಟೆಯಂತು ಎಲ್ಲರಿಗೂ ಇದೆ, ಎಲ್ಲರಿಗೂ ಭೋಜನ ಬೇಕು. ಆದರೆ ಅವರು ಯೋಗದಲ್ಲಿ ಇರುತ್ತಾರೆ. ಆದ್ದರಿಂದ ಅವರು ಪರಿಶ್ರಮ ಪಡಬೇಕಾಗುವುದಿಲ್ಲ. ಈಗ ತಂದೆಯು ನೀವು ಮಕ್ಕಳಿಗೆ ಸದಾ ಸುಖಿಗಳಾಗಿರಲು ಯುಕ್ತಿಯನ್ನು ತಿಳಿಸುತ್ತಾರೆ. ತಂದೆಯು ತಮ್ಮ ಮತವನ್ನು ಕೊಟ್ಟು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನೀವು ಚಿರಂಜೀವಿ ಆಗಿರಿ. ಅಮರರಾಗಿರಿ. ಎಲ್ಲದಕ್ಕಿಂತ ಒಳ್ಳೆಯ ಮತವು ತಂದೆಯದಾಗಿದೆ. ಮನುಷ್ಯರಂತು ಅನೇಕ ಮತಗಳನ್ನು ಕೊಡುತ್ತಾರೆ. ಕೆಲವರು ಪರಿಕ್ಷೆಯಲ್ಲಿ ಉತ್ತೀರ್ಣರಾಗಿ ಬ್ಯಾರಿಸ್ಟರ್ ಆಗುತ್ತಾರೆ, ಆದರೆ ಅವೆಲ್ಲವೂ ಅಲ್ಪಕಾಲಕ್ಕೋಸ್ಕರ. ತಮ್ಮ ಮತ್ತು ತಮ್ಮ ಮಕ್ಕಳ ಹೊಟ್ಟೆಗೋಸ್ಕರ ಪುರುಷಾರ್ಥ ಮಾಡುತ್ತಾರೆ.

ಈಗ ತಂದೆಯು ನಿಮಗೆ ಶ್ರೀಮತವನ್ನು ಕೊಡುತ್ತಾರೆ – ಹೇ! ಮಕ್ಕಳೇ ಶ್ರೀಮತದಂತೆ ನಡೆದು ಆತ್ಮಿಕ ವಿದ್ಯೆಯನ್ನು ಓದಬೇಕು. ಇದರಿಂದ ಮನುಷ್ಯರು ವಿಶ್ವದ ಮಾಲೀಕರಾಗುತ್ತಾರೆ. ಎಲ್ಲರಿಗೂ ತಂದೆಯ ಪರಿಚಯ ಕೊಡಿ. ತಂದೆಯ ನೆನಪಿನಲ್ಲಿ ಇರುವುದರಿಂದಲೇ ಸದಾ ಆರೋಗ್ಯವಂತರು, ಭಾಗ್ಯವಂತರಾಗುತ್ತಾರೆ. ತಂದೆಯೇ ಅವಿನಾಶಿ ಸರ್ಜನ್ ಆಗಿದ್ದಾರೆ. ನೀವು ಆ ತಂದೆಯ ಮಕ್ಕಳು ಆತ್ಮಿಕ ಸರ್ಜನ್ ಆಗಿದ್ದೀರಿ, ಯಾವುದೇ ಕಷ್ಟವಿಲ್ಲ. ಕೇವಲ ಮುಖದಿಂದ ಆತ್ಮಗಳಿಗೆ ಶ್ರೀಮತವನ್ನು ಕೊಡಲಾಗುತ್ತದೆ. ಸರ್ವೋತ್ತಮ ಸೇವೆಯನ್ನು ನೀವು ಮಕ್ಕಳು ಮಾಡಬೇಕಾಗಿದೆ. ಇಂತಹ ಮತವನ್ನು ನಿಮಗೆ ಯಾರೂ ಕೊಡಲು ಸಾಧ್ಯವಿಲ್ಲ. ಈಗ ನಾವು ತಂದೆಯ ಮಕ್ಕಳಾಗಿದ್ದೇವೆಂದರೆ ತಂದೆಯ ವ್ಯಾಪಾರ ಮಾಡಬೇಕೋ ಅಥವಾ ಶರೀರಿಕ ವ್ಯಾಪಾರ ಮಾಡಬೇಕೋ! ತಂದೆಯಿಂದ ನಾವು ಅವಿನಾಶಿ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೇವೆ. ಶಿವನ ಮುಂದೆ ಹೋಗಿ ನಮ್ಮ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ಅವರು 10-20 ಸಾವಿರ ಸಿಕ್ಕಿ ಬಿಡುತ್ತದೆ ಎಂದು ತಿಳಿಯುತ್ತಾರೆ. ಒಂದುವೇಳೆ ಸಿಕ್ಕಿತೆಂದರೆ ಸಾಕು ಅವರ ಮೇಲೆ ಬಲಿಹಾರಿ ಆಗುತ್ತಾರೆ, ತುಂಬಾ ಸತ್ಕಾರ ಮಾಡುತ್ತಾರೆ. ಇದೆಲ್ಲವೂ ಭಕ್ತಿ ಮಾರ್ಗವಾಗಿದೆ. ಈಗ ಎಲ್ಲರಿಗೆ ತಂದೆಯ ಪರಿಚಯ ಕೊಡಿ ಮತ್ತು ಬೇಹದ್ದಿನ ಭೂಗೋಳವನ್ನು ತಿಳಿಸಿ. ತುಂಬಾ ಸಹಜವಾಗಿದೆ. ಹದ್ದಿನ ಇತಿಹಾಸ ಭೂಗೋಳದಲ್ಲಿ ತುಂಬಾ ಮಾತುಗಳು ಇರುತ್ತವೆ. ಆದರೆ ಈ ಬೇಹದ್ದಿನ ಇತಿಹಾಸ ಭೂಗೋಳದಲ್ಲಿ – ಬೇಹದ್ದಿನ ತಂದೆಯು ಎಲ್ಲಿದ್ದಾರೆ, ಹೇಗೆ ಬರುತ್ತಾರೆ! ನಾವು ಆತ್ಮರಲ್ಲಿ 84 ಜನ್ಮಗಳ ಪಾತ್ರವು ಹೇಗೆ ತುಂಬಲ್ಪಟ್ಟಿದೆ ಎನ್ನುವುದನ್ನು ತಿಳಿಸಲಾಗುತ್ತದೆ. ಇಷ್ಟೆ ತಿಳಿಸಿ ಸಾಕು, ತುಂಬಾ ತಿಳಿಸಲು ಹೋಗಬೇಡಿ, ಕೇವಲ ಅಲ್ಫ್ ಮತ್ತು ಬೇ ಅರ್ಥಾತ್ ತಂದೆ ಮತ್ತು ಆಸ್ತಿ. ನಾವು ಆತ್ಮರು ತಂದೆಯನ್ನು ನೆನಪು ಮಾಡಿ ವಿಶ್ವದ ಮಾಲೀಕರಾಗುತ್ತೇವೆ. ಈಗ ಓದಬೇಕು ಮತ್ತು ಓದಿಸಬೇಕಾಗಿದೆ. ಅಲ್ಫ್ ಎಂದರೆ ಅಲ್ಲಾಹ್, ಬೇ ಎಂದರೆ ಬಾದುಷಾಹಿ (ಆಸ್ತಿ). ಈಗ ಯೋಚಿಸಿ ಈ ವ್ಯಾಪಾರ ಮಾಡಬೇಕಾ! ಅಥವಾ ಶರೀರಿಕ ವ್ಯಾಪಾರ ಮಾಡಿ 2-4 ನೂರು ರೂಪಾಯಿಗಳನ್ನು ಸಂಪಾದಿಸಬೇಕೋ!!

ತಂದೆಯು ಹೇಳುತ್ತಾರೆ – ಒಂದುವೇಳೆ ಯಾರಾದರೂ ನನಗೆ ಬುದ್ಧಿವಂತ ಮಗುವಿದ್ದರೆ ಅವರ ಮಿತ್ರ ಸಂಬಂಧಿಗಳಿಗೂ ಸಹ ನಾನು ಅವರ ಶರೀರ ನಿರ್ವಹಣಿಗೂ ಸಂಪತ್ತನ್ನು ಕೊಡುತ್ತೇನೆ. ಆದರೆ ಆ ಮಗು ಒಳ್ಳೆಯವರಾಗಿರಬೇಕು, ಸರ್ವೀಸೆಬುಲ್ ಆಗಿರಬೇಕು. ಒಳಗೂ ಹೊರಗೂ ಶುದ್ಧವಾಗಿರಬೇಕು. ಮಾತು ಮಧುರವಾಗಿರಬೇಕು. ವಾಸ್ತವದಲ್ಲಿ ಕುಮಾರಿಯರ ಸಂಪಾದನೆಯನ್ನು ತಂದೆ ತಾಯಿಯು ತಿನ್ನುವುದಿಲ್ಲ. ಬಾಬಾನ ಮಕ್ಕಳಾದ ನಂತರ ಇನ್ನೂ ಆ ಶರೀರಿಕ ಸೇವೆಯಲ್ಲಿ ಹೆಚ್ಚಿನ ಗಮನ ಕೊಡುವುದು – ಇದಂತೂ ಅಗೌರವವಾಗುತ್ತದೆ. ತಂದೆಯು ಹೇಳುತ್ತಾರೆ ಮನುಷ್ಯ ಮಾತ್ರರನು ಸ್ವರ್ಗದ ಮಾಲೀಕರನ್ನಾಗಿ ಮಾಡಿ. ಮಕ್ಕಳು ಮತ್ತೆ ಶರೀರಿಕ ಸೇವೆಯಲ್ಲಿಯೇ ತಲೆ ಕೆಡಿಸಿಕೊಳ್ಳುತ್ತಾರೆ! ಶಾಲೆಯನ್ನು ತೆರೆಯುವುದು ಸರ್ಕಾರದ ಕೆಲಸವಾಗಿದೆ. ಈಗ ಮಕ್ಕಳಿಗೆ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಯಾವ ಸರ್ವೀಸ್ ಮಾಡುತ್ತೀರಿ – ಈಶ್ವರೀಯ ಸರ್ಕಾರದ್ದೋ ಅಥವಾ ಆ ಸರ್ಕಾರದ್ದೋ? ಹೇಗೆ ಬ್ರಹ್ಮಾ ತಂದೆಯು ಮೊದಲು ವಜ್ರ ವ್ಯಾಪಾರ ಮಾಡುತ್ತಿದ್ದರು ನಂತರ ಶಿವಬಾಬಾ ಹೇಳಿದರು ನೀವು ಈ ಅವಿನಾಶಿ ಜ್ಞಾನರತ್ನಗಳ ವ್ಯಾಪಾರ ಮಾಡಬೇಕು, ಇದರಿಂದ ನೀವು ಈ ರೀತಿ ಆಗುತ್ತೀರಿ. ತಂದೆಯು ಚತುರ್ಭುಜ ವಿಷ್ಣುವಿನ ಸಾಕ್ಷಾತ್ಕಾರವನ್ನು ಮಾಡಿಸಿದರು. ಈಗ ಆ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವುದು ಅಥವಾ ಈ ಸ್ಥೂಲ ರತ್ನಗಳ ವ್ಯಾಪಾರ ಮಾಡುವುದೋ! ಎಲ್ಲದಕ್ಕಿಂತ ಒಳ್ಳೆಯ ವ್ಯಾಪಾರವು ಜ್ಞಾನ ರತ್ನಗಳದಾಗಿದೆ. ಭಲೆ ಈ ವಜ್ರಗಳ ಸಂಪಾದನೆಯು ಚೆನ್ನಾಗಿತ್ತು. ಆದರೂ ಸಹ ಶಿವಬಾಬಾ ಇವರಲ್ಲಿ ಪ್ರವೇಶ ಆಗಿ ಮತವನ್ನು ಕೊಟ್ಟರು – ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ಎಷ್ಟು ಸಹಜವಾಗಿದೆ. ಚಿಕ್ಕ ಮಕ್ಕಳೂ ಸಹ ಓದಬಲ್ಲರು. ಶಿವ ತಂದೆಯು ಪ್ರತಿಯೊಬ್ಬ ಮಗುವನ್ನು ಅರ್ಥಾ ಮಾಡಿಕೊಳ್ಳುತ್ತಾರೆ. ಬ್ರಹ್ಮಾ ತಂದೆಯೂ ಸಹ ಕಲಿಯಬಲ್ಲರು. ಬ್ರಹ್ಮಾತಂದೆಯು ಬಾಹರ್ಯಾಮಿ, ಶಿವ ತಂದೆಯು ಅಂತರ್ಯಾಮಿ ಆಗಿದ್ದಾರೆ. ಈ ಬಾಬಾರವರೂ ಸಹ ಪ್ರತಿಯೊಬ್ಬ ಮುಖದಿಂದ, ಮಾತಿನಿಂದ, ನಡವಳಿಕೆಯಿಂದ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಆತ್ಮಿಕ ಸೇವೆಯ ಅವಕಾಶವೂ ಒಂದೇ ಬಾರಿ ಸಿಗುತ್ತದೆ. ಈಗ ಹೃದಯದಲ್ಲಿ ಬರಬೇಕು – ನಾವು ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕೋ ಅಥವಾ ಮುಳ್ಳುಗಳನ್ನು ಮುಳ್ಳುಗಳನಾಗಿಯೇ ಮಾಡಬೇಕೋ ಯೋಚಿಸಿ. ಏನು ಮಾಡಬೇಕೋ? ನಿರಾಕಾರ ಭಗವಾನುವಾಚ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ತ್ಯಾಗ ಮಾಡಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇರಿ. ಬ್ರಹ್ಮಾರವರ ಶರೀರದಿಂದ ತಂದೆಯು ಬ್ರಾಹ್ಮಣರೊಂದಿಗೇ ಮಾತನಾಡುತ್ತಾರೆ. ಆ ಬ್ರಾಹ್ಮಣರೆಲ್ಲರೂ ಬ್ರಾಹ್ಮಣ ದೇವೀ-ದೇವತಾಯ ನಮಃ ಎಂದು ಹೇಳುತ್ತಾರೆ. ಆದರೆ ಅವರು ಕುಖವಂಶಾವಳಿ ಆಗಿದ್ದಾರೆ, ನೀವು ಮುಖವಂಶಾವಳಿ ಆಗಿದ್ದೀರಿ. ಶಿವಬಾಬಾನಿಗೆ ಅವಶ್ಯವಾಗಿ ಬ್ರಹ್ಮಾ ತಂದೆಯು ಬೇಕು. ಕುಮಾರಿಕ (ಪ್ರಕಾಶಮಣಿ ದಾದಿಜಿ) ಹೇಳು, ಬಾಬಾನಿಗೆ ಎಷ್ಟು ಮಕ್ಕಳಿದ್ದಾರೆ? ಕೆಲವರು 600 ಕೋಟಿ ಎಂದು ಹೇಳಿದರು, ಕೆಲವರು ಒಬ್ಬ ಬ್ರಹ್ಮ ಎಂದು ಹೇಳಿದರು……. ಭಲೆ ನೀವು ತ್ರಿಮೂರ್ತಿ ಎಂದು ಹೇಳುತ್ತೀರಿ. ಆದರೆ ಕರ್ತವ್ಯಗಳಂತು ಬೇರೆ ಬೇರೆ ಇದೆಯಲ್ಲವೇ. ವಿಷ್ಣುವಿನ ನಾಭಿಯಿಂದ ಬ್ರಹ್ಮ ಬಂದ, ಬ್ರಹ್ಮನ ನಾಭಿಯಿಂದ ವಿಷ್ಣು ಎಂದಾಗ ಒಬ್ಬರೇ ಆದರಲ್ಲವೇ. ವಿಷ್ಣು ಅಥವಾ ಬ್ರಹ್ಮ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಬಾಕಿ ಶಂಕರ ಇದ್ದಾರೆ. ಶಂಕರನೇ ಶಿವ ಆಗುತ್ತಾರೆಂದಲ್ಲ. ಇವರು ತ್ರಿಮೂರ್ತಿಗಳಲ್ಲಿ ಒಬ್ಬರು. ತಂದೆಯು ತ್ರಿಮೂರ್ತಿಗಳಿಗೆ ಒಡೆಯನಾಗಿದ್ದಾರೆ. ಆದರೆ ನಿಜವಾದ ಮಕ್ಕಳು ಇಬ್ಬರಾದರು. ಇದೆಲ್ಲವೂ ಜ್ಞಾನದ ಮಾತುಗಳಾಗಿವೆ. ಅಂದಾಗ ನೀವು ಮಕ್ಕಳು ಈ ಸೇವೆ ಮಾಡುವುದು ಒಳ್ಳೆಯದೋ ಅಥವಾ ಮೆಟ್ರಿಕ್ ಮುಂತಾದವುಗಳನ್ನು ಓದುವುದು ಒಳ್ಳೆಯದೋ? ಅಲ್ಲಿ ಅಲ್ಪಕಾಲದ ಸುಖವೇ ಸಿಗುತ್ತದೆ. ಸ್ವಲ್ಪ ವೇತನ ಸಿಗುತ್ತದೆ ಅಷ್ಟೆ. ಇಲ್ಲಿ ಭವಿಷ್ಯ 21 ಜನ್ಮಗಳಿಗೋಸ್ಕರ ಸಂಪನ್ನರಾಗುತ್ತೀರಿ. ಅಂದಾಗ ಏನು ಮಾಡಬೇಕು? ಕನ್ಯೆರಂತು ನಿರ್ಬಂಧನರಾಗಿದ್ದಾರೆ. ಅದರ್ ಕುಮಾರಿಯರಿಗಿಂತ ಕುಮಾರಿ ಕನ್ಯೆರು ಬೇಗ ಮುಂದೆ ಹೋಗಬಲ್ಲರು. ಏಕೆಂದರೆ ಪವಿತ್ರವಾಗಿರುತ್ತಾರೆ. ಮಮ್ಮಾರವರೂ ಸಹ ಕುಮಾರಿಯಾಗಿದ್ದರಲ್ಲವೇ. ಹಣದ ಮಾತಿಲ್ಲ. ಧಾರಣೆಯ ಮಾತಾಗಿದೆ. ತುಂಬಾ ತೀಕ್ಷ್ಣವಾಗಿ ಮುಂದೆ ಹೋಗುವುದರಿಂದ ವಿಶೇಷವಾಗಿ ಕನ್ಯೆಯರನ್ನು ಅನುಕರಣೆ ಮಾಡಬೇಕು. ಮುಳ್ಳುಗಳನ್ನು ಹೂಗಳ ಸಮಾನ ಮಾಡಿ ಈಶ್ವರೀಯ ವಿದ್ಯೆಯ ಅವಕಾಶ ತೆಗೆದುಕೊಳ್ಳಬೇಕೋ ಅಥವಾ ಆ ವಿದ್ಯೆಯನ್ನು ಓದಬೇಕೋ? ಕನ್ಯೆಯರ ಚರ್ಚಾ ಘೋಷ್ಟಿಗಳನ್ನು ಮಾಡಬೇಕು. ಮಾತೆಯರಿಗಂತು ಪತಿ ಮುಂತಾದವರ ನೆನಪು ಬರುತ್ತದೆ. ಸನ್ಯಾಸಿಗಳಿಗೂ ಸಹ ಅನೇಕ ನೆನಪುಗಳು ಬರುತ್ತಿರುತ್ತದೆ. ಕನ್ಯೆಯರು ಏಣಿಯನ್ನು ಏರಬಾರದು ಏಕೆಂದರೆ ಸಂಗದ ರಂಗು ತುಂಬಾ ಹಿಡಿಸುತ್ತದೆ. ಯಾರಾದರೂ ಶ್ರೀಮಂತರ ಮಗ ನೋಡಿದರೆ, ಮನಸಾಯಿತು, ಮದುವೆ ಆಗಿ ಬಿಟ್ಟರು. ಆಟವು ಸಮಾಪ್ತಿ ಆಯಿತು. ಸೆಂಟರ್ನಿಂದ ಜ್ಞಾನವನ್ನು ಕೇಳಿ ಹೊರಗಡೆ ಹೋಗುತ್ತಾರೆಂದರೆ ಆಟವು ಸಮಾಪ್ತಿ ಆಗುತ್ತದೆ. ಇದು ಮಧುಬನವಾಗಿದೆ. ಇಲ್ಲಿ ಇಂತಹವರೂ ಸಹ ಅನೇಕರು ಬರುತ್ತಾರೆ. ಅವರು ನಾವು ಹೋಗಿ ಸೆಂಟರ್ ತೆರೆಯುತ್ತೇವೆಂದು ಹೇಳುತ್ತಾರೆ. ಹೊರಗಡೆ ಹೋಗಿ ಕಳೆದು ಹೋಗುತ್ತಾರೆ. ಇಲ್ಲಿ ಜ್ಞಾನವನ್ನು ಧಾರಣೆ ಮಾಡುತ್ತಾರೆ, ಹೊರಗಡೆ ಹೋದ ನಂತರ ನಶೆಯು ಕಳೆದು ಹೋಗುತ್ತದೆ. ಮಾಯೆಯು ತುಂಬಾ ವಿರೋಧಿಸುತ್ತದೆ. ಮಾಯೆಯು ಹೇಳುತ್ತದೆ – ವಾಹ್! ಇವರು ತಂದೆಯನ್ನು ಅರ್ಥ ಮಾಡಿಕೊಂಡಿದ್ದಾರೆ, ಆದರೂ ಸಹ ತಂದೆಯನ್ನು ನೆನಪು ಮಾಡುತ್ತಿಲ್ಲ. ಆದ್ದರಿಂದ ನಾನೂ ಸಹ ಇವರ ಜೊತೆ ಸೇರಿ ಇವರನ್ನು ಸಾಯಿಸೋಣ ಎಂದು ಹೇಳುತ್ತದೆ. ನೀವು ತಂದೆಗೆ ಬಾಬಾ ಈ ಮಾಯೆಯು ನಮಗೆ ಏಟು ಕೊಡದಂತೆ ನೀವು ಹೇಳಿ ಎಂದು ಹೇಳಬೇಡಿ. ಇದು ಯುದ್ಧದ ಮೈದಾನವಾಗಿದೆಯಲ್ಲವೇ. ಒಂದು ಕಡೆ ರಾವಣನ ಸೈನ್ಯವಿದೆ, ಇನ್ನೊಂದು ಕಡೆ ರಾವಣನ ಸೈನ್ಯವಿದೆ. ನೀವು ಸಾಹಸವಂತರಾಗಿ ರಾಮನ ಕಡೆ ಹೋಗಬೇಕು. ಆಸುರಿ ಸಂಪ್ರದಾಯವನ್ನೂ ದೈವೀ ಸಂಪ್ರದಾಯವನ್ನಾಗಿ ಮಾಡುವಂತಹ ವ್ಯಾಪಾರ ಮಾಡಬೇಕಾಗಿದೆ. ಶಾರೀರಿಕ ವಿದ್ಯೆಯನ್ನು ನೀವು ಯಾರಿಗಾದರೂ ಓದಿಸುತ್ತೀರೆಂದರೆ ಅವರು ಓದೀ ದೊಡ್ಡವರಾಗುವುದರಲ್ಲಿ ವಿನಾಶವು ಹತ್ತಿರ ಬಂದು ಬಿಡುತ್ತದೆ. ಇದರ ಚಿನ್ಹೆಗಳನ್ನು ನೀವು ನೋಡುತ್ತಿದ್ದೀರಿ. ತಂದೆಯು ತಿಳಿಸಿದ್ದಾರೆ – ಈ ಇಬ್ಬರೂ ಕ್ರಿಶ್ಚಿಯನ್ ಸಹೋದರರು ಪರಸ್ಪರ ಜೊತೆಗೂಡಿದರೆ ಯುದ್ಧವಾಗಲು ಸಾಧ್ಯವಿಲ್ಲ. ಆದರೆ ನಾಟಕದಲ್ಲಿ ಈ ರೀತಿ ಇಲ್ಲ. ಅವರಿಗೆ ಇದು ಅರ್ಥವಾಗುವುದೇ ಇಲ್ಲ. ಈಗ ನೀವು ಮಕ್ಕಳು ಯೋಗಬಲದಿಂದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಇದು ಶಿವಶಕ್ತಿ ಸೈನ್ಯವಾಗಿದೆ. ನೀವು ಶಿವ ಶಕ್ತಿಯರು ಶಿವಬಾಬಾರವರಿಂದ ಭಾರತದ ಪ್ರಾಚೀನ ಜ್ಞಾನ ಮತ್ತು ಯೋಗವನ್ನು ಕಲಿತು ಭಾರತವನ್ನು ವಜ್ರ ಸಮಾನವನ್ನಾಗಿ ಮಾಡುತ್ತೀರಿ. ತಂದೆಯು ಕಲ್ಪದ ನಂತರವೇ ಬಂದು ಪತಿತರನ್ನು ಪಾವನ ಮಾಡುತ್ತಾರೆ. ನೀವೆಲ್ಲರೂ ರಾವಣನ ಬಂಧನದಲ್ಲಿದ್ದೀರಿ, ಶೋಕವಾಟಿಕೆಯಲ್ಲಿ ಇದ್ದೀರಿ. ಎಲ್ಲರೂ ದುಃಖಿಗಳಾಗಿದ್ದೀರಿ. ಮತ್ತೆ ರಾಮ (ಶಿವಬಾಬಾ) ಬಂದು ನಿಮ್ಮೆಲ್ಲರನ್ನು ಬಿಡಿಸಿ ಅಶೋಕವಾಟಿಕೆ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಶ್ರೀಮತವು ಹೇಳುತ್ತದೆ – ಮುಳ್ಳುಗಳನ್ನು ಹೂವನ್ನಾಗಿ, ಮನುಷ್ಯರನ್ನು ದೇವತೆಯನ್ನಾಗಿ ಮಾಡಿ. ನೀವು ಮಾಸ್ಟರ್ ದುಃಖಹರ್ತಾ-ಸುಖಕರ್ತಾ ಆಗಿದ್ದೀರಿ, ಆದ್ದರಿಂದ ಇದೇ ವ್ಯಾಪಾರ ಮಾಡಬೇಕು. ಶ್ರೀಮತದ ಮೇಲೆ ನಡೆಯುವುದರಿಂದಲೇ ಶ್ರೇಷ್ಠರಾಗುತ್ತೀರಿ, ತಂದೆಯಂತು ಸಲಹೆಯನ್ನು ಕೊಡುತ್ತಾರೆ. ಈಗ ತಂದೆಯು ಹೇಳುತ್ತಾರೆ – ಹೇಳುವುದು ನನ್ನ ಕರ್ತವ್ಯ, ಮಾಡುವುದು ನಿಮ್ಮ ಇಷ್ಟ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸರ್ವಿಸೇಬಲ್(ಸೇವಾಧಾರಿ) ಆಗಲು ಒಳಗೆ-ಹೊರಗೆ ಸ್ವಚ್ಚವಾಗಿರಬೇಕಾಗಿದೆ. ಮುಖದಿಂದ ಬಹಳ ಮಧುರವಾದ ಮಾತುಗಳನ್ನೇ ಮಾತನಾಡಬೇಕು. ದೇಹ ಸಹಿತ ದೇಹದ ಸರ್ವ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ. ಸಂಗದಿಂದ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.

2. ತಂದೆಯ ಸಮಾನ ಮಾಸ್ಟರ್ ದುಃಖಹರ್ತಾ-ಸುಖಕರ್ತಾ ಆಗಬೇಕಾಗಿದೆ. ಆತ್ಮಿಕ ಸೇವೆ ಮಾಡಿ ಸತ್ಯ ಸಂಪಾದನೆ ಮಾಡಬೇಕಾಗಿದೆ. ಆತ್ಮಿಯ ತಂದೆಯ ಮತದ ಮೇಲೆ ಆತ್ಮಿಕ ಸಮಾಜ ಸೇವಕರಾಗಬೇಕಾಗಿದೆ.

ವರದಾನ:-

ಬ್ರಾಹ್ಮಣನಾಗುವುದು ಅರ್ಥಾತ್ ದೇಹ, ಸಂಬಂಧ ಹಾಗೂ ಸಾಧನಗಳ ಬಂಧನದಿಂದ ಮುಕ್ತರಾಗುವುದು. ದೇಹದ ಸಂಬಂಧಿಗಳು ದೇಹದ ಸಂಬಂಧದಿಂದ ಸಂಬಂಧವಲ್ಲ ಆದರೆ ಆತ್ಮಿಕ ಸಂಬಂಧವಿದೆ. ಒಂದುವೇಳೆ ಯಾರೇ ಯಾರಲ್ಲಿಯೇ ವಶ, ಪರವಶರಾಗುತ್ತಾರೆಂದರೆ ಬಂಧನವಿದೆ ಆದರೆ ಬ್ರಾಹ್ಮಣ ಎಂದರೆ ಜೀವನ್ಮುಕ್ತ. ಎಲ್ಲಿಯವರೆಗೆ ಕರ್ಮೇಂದ್ರಿಯಗಳ ಆಧಾರವಿದೆ ಅಲ್ಲಿಯವರೆಗೆ ಕರ್ಮವನ್ನಂತು ಮಾಡಲೇಬೇಕು ಆದರೆ ಕರ್ಮ ಬಂಧನವಲ್ಲ, ಕರ್ಮ-ಸಂಬಂಧವಿದೆ. ಈ ರೀತಿಯಲ್ಲಿ ಯಾರು ಮುಕ್ತರಾಗಿರುತ್ತಾರೆಯೋ ಅವರು ಸದಾ ಸಫಲತಾಮೂರ್ತಿ ಆಗಿದ್ದಾರೆ. ಇದಕ್ಕೆ ಸಹಜ ಸಾಧನವಾಗಿದೆ – ನಾನು ಮತ್ತು ನನ್ನ ಬಾಬಾ, ಇದೇ ನೆನಪು ಸಹಜ ಯೋಗಿ, ಸಫಲತಾಮೂರ್ತಿ ಹಾಗೂ ಬಂಧನ ಮುಕ್ತರನ್ನಾಗಿ ಮಾಡಿ ಬಿಡುತ್ತದೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

ಮನುಷ್ಯರು ಈ ಯಾವ ಹಾಡನ್ನು ಹಾಡುತ್ತಾರೆ – ಓ ಗೀತೆಯ ಭಗವಂತನೇ, ತಮ್ಮ ಮಾತನ್ನು ನಿಭಾಯಿಸಲು ಬನ್ನಿರಿ. ಈಗ ಸ್ವಯಂ ಗೀತೆಯ ಭಗವಂತನೇ ಕಲ್ಪ ಮೊದಲಿನ ತನ್ನ ವಚನವನ್ನು ಪಾಲಿಸುವುದಕ್ಕಾಗಿ ಬಂದಿದ್ದಾರೆ ಹಾಗೂ ಹೇಳುತ್ತಾರೆ – ಹೇ ಮಕ್ಕಳೇ, ಯಾವಾಗ ಭಾರತದಲ್ಲಿ ಅತಿ ಧರ್ಮ ಗ್ಲಾನಿಯಾಗುತ್ತದೆಯೋ ಆಗ ನಾನು ಅವಶ್ಯವಾಗಿ ಇದೇ ಸಮಯದಲ್ಲಿ, ನನ್ನ ಪ್ರತಿಜ್ಞೆಯನ್ನು ನಿಭಾಯಿಸಲು ಬರುತ್ತೇನೆ. ಈಗ ನಾನು ಬರುತ್ತೇನೆಂದರೆ ಅರ್ಥ ಇದಲ್ಲ- ನಾನು ಯುಗ-ಯುಗದಲ್ಲಿಯೂ ಬರುತ್ತೇನೆ. ಎಲ್ಲರೂ ಯುಗಗಳಲ್ಲಂತು ಧರ್ಮ ಗ್ಲಾನಿಯಾಗುವುದಿಲ್ಲ, ಧರ್ಮ ಗ್ಲಾನಿಯಾವುದೇ ಕಲಿಯುಗದಲ್ಲಿ, ಅಂದಮೇಲೆ ಪರಮಾತ್ಮನು ಕಲಿಯುಗದ ಅಂತ್ಯದ ಸಮಯದಲ್ಲಿ ಬರುತ್ತೇನೆ. ಅದೇ ಸಮಯದಲ್ಲಿ ಪರಮಾತ್ಮನು ಬಂದು, ಅಧರ್ಮ ವಿನಾಶ ಮಾಡಿ ಸತ್ಯ ಧರ್ಮದ ಸ್ಥಾಪನೆ ಮಾಡುತ್ತಾರೆ. ಒಂದುವೇಳೆ ದ್ವಾಪರದಲ್ಲಿ ಬಂದಿದ್ದರೆ, ದ್ವಾಪರದ ನಂತರ ಸತ್ಯಯುಗವಾಗಬೇಕು, ಮತ್ತೆ ಕಲಿಯುಗವೇಕೆ ಇದೆ? ಈ ರೀತಿಯಂತು ಹೇಳುವುದಿಲ್ಲ – ಪರಮಾತ್ಮನು ಕಗ್ಗತ್ತಲಿನ ಕಲಿಯುಗದ ಸ್ಥಾಪನೆ ಮಾಡಿದರು, ಈಗ ಈ ಮಾತಾಗಲು ಸಾಧ್ಯವಿಲ್ಲ ಆದ್ದರಿಂದ ಪರಮಾತ್ಮನು ಹೇಳುತ್ತಾರೆ – ನಾನು ಒಬ್ಬನೇ ಮತ್ತು ಒಂದೇ ಬಾರಿ ಬಂದು ಅಧರ್ಮ ಅಥವಾ ಕಲಿಯುಗದ ವಿನಾಶ ಮಾಡಿ, ಸತ್ಯಯುಗದ ಸ್ಥಾಪನೆ ಮಾಡುತ್ತೇನೆ ಅಂದಮೇಲೆ ನಾನು ಬರುವ ಸಮಯ ಸಂಗಮಯುಗವಾಗಿದೆ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top