10 June 2021 KANNADA Murli Today | Brahma Kumaris
9 June 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಅಮರ ತಂದೆಯು ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡಲು ಬಂದಿದ್ದಾರೆ, ನೀವೀಗ ಮೂರು ಕಾಲಗಳು ಮತ್ತು ಮೂರು ಲೋಕಗಳನ್ನು ಅರಿತುಕೊಂಡಿದ್ದೀರಿ”
ಪ್ರಶ್ನೆ:: -
ಆತ್ಮಿಕ ತಂದೆಯು ಆತ್ಮಗಳಿಗೆ ಆಸ್ತಿಯನ್ನು ಯಾವ ಆಧಾರದ ಮೇಲೆ ಕೊಡುತ್ತಾರೆ?
ಉತ್ತರ:-
ವಿದ್ಯೆಯ ಆಧಾರದ ಮೇಲೆ. ಯಾವ ಮಕ್ಕಳು ಚೆನ್ನಾಗಿ ಓದುವರೋ, ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಪುರುಷಾರ್ಥ ಮಾಡುವರೋ ಅವರಿಗೇ ತಂದೆಯ ಆಸ್ತಿಯು ಸಿಗುತ್ತದೆ. ಲೌಕಿಕ ತಂದೆಯು ಕೇವಲ ಗಂಡು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಆದರೆ ಪಾರಲೌಕಿಕ ತಂದೆಯ ಸಂಬಂಧವು ಆತ್ಮಗಳೊಂದಿಗೆ ಇದೆ ಆದ್ದರಿಂದ ಆತ್ಮಗಳಿಗೇ ಆಸ್ತಿಯನ್ನು ಕೊಡುತ್ತಾರೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಭೋಲಾನಾಥನಿಗಿಂತ ಭಿನ್ನ………
ಓಂ ಶಾಂತಿ. ಆತ್ಮಿಕ ಮಕ್ಕಳೇ ಈ ಮೃತ್ಯು ಲೋಕದಿಂದ ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಆತ್ಮಿಕ ತಂದೆಯಿಂದ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನಿರ್ವಾಣಧಾಮಕ್ಕೆ ಅಮರ ಲೋಕವೆಂದು ಹೇಳಲಾಗುವುದಿಲ್ಲ. ಅಮರ ಲೋಕವೆಂದರೆ ಎಲ್ಲಿ ನೀವು ಅಕಾಲ ಮೃತ್ಯುವನ್ನೇ ಪಡೆಯುವುದಿಲ್ಲ. ಆದ್ದರಿಂದ ಅದಕ್ಕೆ ಅಮರ ಲೋಕವೆಂದು ಹೇಳಲಾಗುತ್ತದೆ. ಆತ್ಮಿಕ ತಂದೆ ಯಾರಿಗೆ ಅಮರನಾಥನೆಂದು ಹೇಳಲಾಗುತ್ತದೆಯೋ ಅವರು ಅವಶ್ಯವಾಗಿ ಅಮರಲೋಕದಲ್ಲಿ ಕರೆದುಕೊಂಡು ಹೋಗಲು ಮೃತ್ಯು ಲೋಕದಲ್ಲಿ ಕಥೆಯನ್ನು ತಿಳಿಸುತ್ತಾರೆ. ಮೂರು ಕಥೆಗಳು ಭಾರತದಲ್ಲಿಯೇ ಪ್ರಸಿದ್ಧವಾಗಿವೆ. ಅಮರ ಕಥೆ, ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆ. ಭಕ್ತಿಮಾರ್ಗದಲ್ಲಿ ಮೂರನೇ ನೇತ್ರದ ಕಥೆಯನ್ನು ಯಾರೂ ತಿಳಿದುಕೊಂಡಿಲ್ಲ. ಜ್ಞಾನದ ಮೂರನೇ ನೇತ್ರವನ್ನು ಜ್ಞಾನ ಸಾಗರ ಅಮರ ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಉಳಿದಂತೆ ಎಲ್ಲವೂ ಸುಳ್ಳು ಕಥೆಗಳನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಈಗ ಅರಿತುಕೊಂಡಿದ್ದೀರಿ – ಈಗ ನಮಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತಿದೆ. ಯಾವ ಮೂರನೇ ನೇತ್ರದಿಂದ ಮೂರೂ ಕಾಲಗಳು, ಮೂರು ಲೋಕಗಳನ್ನು ನೀವು ಅರಿತುಕೊಂಡಿದ್ದೀರಿ. ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಂಡಿದ್ದೀರಿ ಆದ್ದರಿಂದ ಮಕ್ಕಳು ತಮ್ಮನ್ನು ತ್ರಿಕಾಲದರ್ಶಿಗಳೆಂದೂ ತಿಳಿದುಕೊಳ್ಳುತ್ತೀರಿ. ನೀವು ಮಧುರಾತಿ ಮಧುರ ಮಕ್ಕಳ ವಿನಃ ಸೃಷ್ಟಿಯಲ್ಲಿ ಮತ್ತ್ಯಾರೂ ತ್ರಿಕಾಲದರ್ಶಿಗಳಾಗುವುದಿಲ್ಲ. ಭಲೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಬಗ್ಗೆ ತಿಳಿದುಕೊಂಡಿರಬಹುದು ಆದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರ್ಥಾತ್ ಮೂರೂ ಲೋಕಗಳನ್ನು ಯಾರೂ ಅರಿತುಕೊಂಡಿರುವುದಿಲ್ಲ. ಈಗ ಮಧುರಾತಿ ಮಧುರ ಆತ್ಮಿಕ ಮಕ್ಕಳು ಆತ್ಮಿಕ ತಂದೆಯಿಂದ ಕೇಳುತ್ತಿದ್ದೀರಿ. ನೀವು ಅವರ ಮಕ್ಕಳಾಗಿದ್ದೀರಿ, ಒಂದೇ ಬಾರಿ ನೀವು ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಸಿಕ್ಕಿದ್ದಾರೆ. ತಂದೆಯು ನೀವಾತ್ಮರಿಗೆ ಓದಿಸುತ್ತಾರೆ, ಮತ್ತೆಲ್ಲರೂ ದೇಹಾಭಿಮಾನಿಗಳಾಗಿರುವ ಕಾರಣ ನಾನು ಇದನ್ನು ಓದುತ್ತೇನೆ, ನಾನು ಇದನ್ನು ಮಾಡುತ್ತೇನೆಂದು ಹೇಳುತ್ತಾರೆ. ದೇಹಾಭಿಮಾನವು ಬಂದು ಬಿಡುತ್ತದೆ. ಈಗ ಈ ಸಂಗಮದಲ್ಲಿ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಹೇಳುತ್ತಾರೆ – ಮಕ್ಕಳೇ, ನೀವು ಚೆನ್ನಾಗಿ ಓದಿರಿ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ಮಗುವಿಗೂ ಅಧಿಕಾರವಿದೆ ಏಕೆಂದರೆ ಎಲ್ಲರೂ ಆತ್ಮಿಕ ಮಕ್ಕಳಲ್ಲವೆ. ಲೌಕಿಕ ಸಂಬಂಧದಲ್ಲಿ ಕೇವಲ ಮಗನು ಆಸ್ತಿಗೆ ಹಕ್ಕುದಾರನಾಗುತ್ತಾನೆ. ಈ ಪಾರಲೌಕಿಕ ಸಂಬಂಧದಲ್ಲಿ ಎಲ್ಲಾ ಮಕ್ಕಳು ಅರ್ಥಾತ್ ಆತ್ಮರಿಗೆ ಆಸ್ತಿಯು ಸಿಗುತ್ತದೆ. ಅಮರನಾಥನ ಕಥೆಯನ್ನೂ ಹೇಳುತ್ತಾರೆ, ಪಾರ್ವತಿಗೆ ಪರ್ವತಗಳ ಮೇಲೆ ಹೋಗಿ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಇದು ತಪ್ಪಲ್ಲವೆ! ಯಾವುದು ಸತ್ಯ, ಯಾವುದು ಅಸತ್ಯ ಎಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯವನ್ನು ಅವಶ್ಯವಾಗಿ ಸತ್ಯ ತಂದೆಯೇ ತಿಳಿಸುತ್ತಾರೆ, ತಂದೆಯು ಒಂದೇ ಬಾರಿ ಸತ್ಯವನ್ನು ತಿಳಿಸಿ ಸತ್ಯ ಖಂಡದ ಮಾಲೀಕರನ್ನಾಗಿ ಮಾಡುತ್ತಾರೆ. ನಿಮಗೂ ತಿಳಿದಿದೆ – ಈ ಅಸತ್ಯ ಖಂಡಕ್ಕೆ ಬೆಂಕಿ ಬೀಳುವುದು, ಇಲ್ಲಿ ಏನೆಲ್ಲವೂ ಕಾಣುತ್ತಿದೆಯೋ ಇದೇನೂ ಉಳಿಯುವುದಿಲ್ಲ. ಇನ್ನು ಸ್ವಲ್ಪವೇ ಸಮಯವಿದೆ, ಇದು ಶಿವ ತಂದೆಯ ಜ್ಞಾನ ಯಜ್ಞವಾಗಿದೆ. ಹೇಗೆ ಲೌಕಿಕದಲ್ಲಿಯೂ ಕೆಲವರು ರುದ್ರ ಯಜ್ಞವನ್ನು ರಚಿಸುತ್ತಾರೆ, ಕೆಲವರು ಗೀತಾ ಯಜ್ಞ, ಕೆಲವರು ರಾಮಾಯಣ ಯಜ್ಞವನ್ನು ರಚಿಸುತ್ತಾರೆ. ಇದು ಶಿವ ತಂದೆಯ ಅಥವಾ ರುದ್ರನ ಜ್ಞಾನ ಯಜ್ಞವಾಗಿದೆ, ಇದು ಅಂತಿಮ ಯಜ್ಞವಾಗಿದೆ.
ನಾವೀಗ ಅಮರ ಪುರಿಗೆ ಹೋಗುತ್ತಿದ್ದೇವೆ, ಇನ್ನು ಕೆಲವೇ ನಿಮಿಷಗಳ ಮಾರ್ಗವಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. ಇದು ಯಾವುದೇ ಮನುಷ್ಯನಿಗೆ ತಿಳಿದಿಲ್ಲ. ಮೃತ್ಯು ಲೋಕದಿಂದ ಅಮರಲೋಕದಲ್ಲಿ ಹೋಗಲು ಇನ್ನೂ 40 ಸಾವಿರ ವರ್ಷಗಳಿದೆ ಎಂದು ಮನುಷ್ಯರು ಹೇಳಿ ಬಿಡುತ್ತಾರೆ. ಸತ್ಯಯುಗಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ತಂದೆಯು ಈಗ ಸನ್ಮುಖದಲ್ಲಿ ಕುಳಿತು ಅಮರಕಥೆ, ಮೂರನೇ ನೇತ್ರದ ಕಥೆ, ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ. ಭಕ್ತಿಮಾರ್ಗದಲ್ಲಿ ಏನೇನಿರುತ್ತದೆ ಅದನ್ನಂತೂ ನೋಡಿದಿರಿ. ಭಕ್ತಿಮಾರ್ಗದ್ದು ಎಷ್ಟೊಂದು ವಿಸ್ತಾರವಿದೆ. ಹೇಗೆ ವೃಕ್ಷವು ಬಹಳ ವಿಸ್ತಾರವಾಗಿ ಬೆಳೆಯುತ್ತದೆ ಹಾಗೆಯೇ ಭಕ್ತಿಯದೂ ಸಹ ಬಹಳ ದೊಡ್ಡ ಕರ್ಮ ಕಾಂಡದ ವೃಕ್ಷವಾಗಿದೆ. ಯಜ್ಞ, ವ್ರತ-ನಿಯಮ, ಜಪ-ತಪ ಇತ್ಯಾದಿ ಎಷ್ಟೊಂದು ಮಾಡುತ್ತಾರೆ. ಈ ಜನ್ಮದ ಭಕ್ತರಂತೂ ಬಹಳಷ್ಟು ಮಂದಿ ಇದ್ದಾರೆ. ಮನುಷ್ಯರ ವೃದ್ಧಿಯಾಗುತ್ತಾ ಇರುತ್ತದೆ. ನೀವು ಭಕ್ತಿಮಾರ್ಗದಲ್ಲಿ ಬಂದಿದ್ದೀರಿ, ಆಗಿನಿಂದ ಅನ್ಯ ಧರ್ಮಗಳು ಸ್ಥಾಪನೆಯಾಗಿದೆ. ಅದರೊಂದಿಗೆ ನಮ್ಮ ಸಂಬಂಧವಿಲ್ಲ, ಪ್ರತಿಯೊಬ್ಬರಿಗೆ ತಮ್ಮ ಧರ್ಮದೊಂದಿಗೆ ಸಂಬಂಧವಿರುತ್ತದೆ. ಪ್ರತಿಯೊಬ್ಬರ ರೀತಿ-ನೀತಿಗಳೇ ಬೇರೆಯಾಗಿರುತ್ತವೆ. ಭಾರತವು ಅಮರ ಪುರಿಯಾಗಿತ್ತು, ಅದೇ ಈಗ ಮೃತ್ಯುಲೋಕವಾಗಿದೆ. ನೀವು ಆದಿ ಸನಾತನ ದೇವಿ -ದೇವತಾ ಧರ್ಮದವರಾಗಿದ್ದಿರಿ ಆದರೆ ಈಗ ಪತಿತರಾಗಿರುವ ಕಾರಣ ನೀವು ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವೇ ದೇವತೆಗಳಾಗಿದ್ದೆವು ಎಂಬುದು ನಿಮಗೆ ಮರೆತು ಹೋಗಿದೆ. ಹೇಗೆ ಪ್ರಾಕ್ಟಿಕಲ್ನಲ್ಲಿ ಹೇಳುತ್ತಾರೆ – ಕ್ರಿಸ್ತನು ನಮ್ಮ ಧರ್ಮ ಸ್ಥಾಪನೆ ಮಾಡಿದರು ಆಗಿನಿಂದ ನಮ್ಮ ಕ್ರಿಶ್ಚಿಯನ್ನರು ನಡೆದು ಬಂದಿದ್ದಾರೆ. ಅವರು ಯುರೋಪಿಯನ್ ಧರ್ಮದವರೆಂದಲ್ಲ. ಹೇಗೆ ನೀವು ಹಿಂದೂ ಸ್ತಾನದಲ್ಲಿರುವವರು ಅಥವಾ ಭಾರತದಲ್ಲಿರುವವರು ದೇವಿ-ದೇವತಾ ಧರ್ಮದವರಾಗಿದ್ದೀರಿ, ಆದರೆ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವು ನೀಚರು, ಪಾಪಿಗಳು, ಕಂಗಾಲ ವಿಕಾರಿಗಳಾಗಿದ್ದೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಭಕ್ತಿಮಾರ್ಗದಲ್ಲಿ ಮನುಷ್ಯರು ದುಃಖಿಯಾದಾಗ ತಂದೆಯನ್ನೇ ಕರೆಯುತ್ತಾರೆ. ಇದನ್ನು ಕೇವಲ ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ – ಯಾವ ತಂದೆಯನ್ನು ಕರೆಯುತ್ತಾ ಬಂದೆವೋ ಅವರೇ ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುವುದಕ್ಕಾಗಿ ಅಮರಕಥೆಯನ್ನು ತಿಳಿಸುತ್ತಿದ್ದಾರೆ. ನಾವು ಅಮರಪುರಿಯ ಮಾಲೀಕರಾಗುವವರಿದ್ದೇವೆ. ಅಮರಪುರಿಗೆ ಸ್ವರ್ಗವೆಂದು ಹೇಳಲಾಗುತ್ತದೆ, ನಾವು ಸ್ವರ್ಗವಾಸಿಗಳಾಗಲು ಪುರುಷಾರ್ಥ ಮಾಡುತ್ತಿದ್ದೇವೆಂದು ನೀವು ಹೇಳುತ್ತೀರಿ. ಕಲಿಯುಗದಲ್ಲಿ ಮನುಷ್ಯರು ಸಾವನ್ನಪ್ಪಿದರೆ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ಅಂದಮೇಲೆ ಅವರು ಸ್ವರ್ಗದಲ್ಲಿ ಹೋಗಲು ಏನಾದರೂ ಸಾಧನೆ ಮಾಡಿದರೆ? ನೀವಂತೂ ಅಮರಪುರಿ, ವೈಕುಂಠದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಪುರುಷಾರ್ಥ ಮಾಡಿಸುವವರು ಯಾರು? ಅಮರತಂದೆ. ಅವರಿಗೆ ಅಮರನಾಥನೆಂದೂ ಹೇಳಲಾಗುತ್ತದೆ. ಈ ಯಜ್ಞಕ್ಕೆ ಪಾಠಶಾಲೆಯೆಂದೂ ಹೇಳಲಾಗುತ್ತದೆ. ಅನ್ಯಯಾವುದೇ ಪಾಠಶಾಲೆಗೆ ಯಜ್ಞವೆಂದು ಹೇಳುವುದಿಲ್ಲ. ಯಜ್ಞಗಳನ್ನು ಪ್ರತ್ಯೇಕವಾಗಿ ರಚಿಸಲಾಗುತ್ತದೆ ಯಾವುದರಲ್ಲಿ ಬ್ರಾಹ್ಮಣರು ಕುಳಿತು ಮಂತ್ರಗಳನ್ನು ಓದುತ್ತಾರೆ. ತಂದೆಯು ಹೇಳುತ್ತಾರೆ – ನಿಮ್ಮದು ಇದು ಕಾಲೇಜು ಆಗಿದೆ, ಯಜ್ಞವೂ ಆಗಿದೆ. ಎರಡೂ ಒಟ್ಟಿಗೆ ಇದೆ. ನೀವು ತಿಳಿದುಕೊಂಡಿದ್ದೀರಿ – ಈ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತು. ಇದರಲ್ಲಿ ಇಡೀ ಪ್ರಪಂಚವೇ ಸ್ವಾಹಾ ಆಗುವುದು ಮತ್ತೆ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಇದರ ಹೆಸರೇ ಆಗಿದೆ – ಮಹಾಭಾರಿ ಮಹಾಭಾರತ ಯುದ್ಧ. ಇದರಂತಹ ಯುದ್ಧವು ಬೇರೆ ಯಾವುದೂ ಆಗುವುದಿಲ್ಲ. ಯುದ್ಧದಲ್ಲಿ ಅಣ್ವಸ್ತ್ರಗಳಿಂದ ಯುದ್ಧವಾಯಿತು ಎಂದು ಹೇಳುತ್ತಾರೆ. ನಿಮ್ಮ ಜೊತೆ ಯುದ್ಧವಂತೂ ಇಲ್ಲ ಆದರೆ ಇದಕ್ಕೆ ಮಹಾಭಾರತ ಯುದ್ಧವೆಂದು ಏಕೆ ಹೇಳುತ್ತಾರೆ? ಭಾರತದಲ್ಲಿ ಒಂದೇ ಧರ್ಮವಿರುತ್ತದೆಯಲ್ಲವೆ. ಮೃತ್ಯುವಂತೂ ಹೊರ ದೇಶದಲ್ಲಿ ಆಗುತ್ತಿದೆ. ಇಲ್ಲಿ ಯುದ್ಧದ ಮಾತಿಲ್ಲ. ತಂದೆಯು ತಿಳಿಸುತ್ತಾರೆ – ನಿಮಗಾಗಿ ಹೊಸ ಪ್ರಪಂಚವು ಬೇಕು, ಆದ್ದರಿಂದ ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶವಾಗುವುದು. ನೀವು ಮಕ್ಕಳ ಬುದ್ಧಿಯಲ್ಲಿ ವಿರಾಟರೂಪದ ಸಂಪೂರ್ಣ ಜ್ಞಾನವಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ಯಾರು ಕಲ್ಪದ ಮೊದಲು ಬಂದಿದ್ದರೋ ದೇವತೆಗಳಾಗಲು ಅವರೇ ಬರುವರು. ಇದು ಬುದ್ಧಿಯ ಕೆಲಸವಾಗಿದೆ. ನಾವು ಎಷ್ಟು ಮಂದಿ ಬ್ರಾಹ್ಮಣರಾಗಿದ್ದೇವೆಯೋ ಅಷ್ಟೇ ಮಂದಿ ದೇವತೆಗಳಾಗುತ್ತೇವೆ. ಪ್ರಜಾಪಿತ ಬ್ರಹ್ಮನ ಗಾಯನವಿದೆ. ಪ್ರಜಾಪಿತ ಬ್ರಹ್ಮನ ಮೂಲಕ ಪರಮಪಿತ ಪರಮಾತ್ಮನು ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಆದ್ದರಿಂದ ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳುತ್ತಾರೆ ಆದರೆ ಯಾವಾಗ ಹೇಗೆ ರಚಿಸುತ್ತಾರೆಂಬುದು ಯಾರೂ ತಿಳಿದುಕೊಂಡಿಲ್ಲ. ಆರಂಭದಲ್ಲಿ ರಚಿಸಲು ಮನುಷ್ಯರಿರಲಿಲ್ಲವೆ! ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಯಾವಾಗ ಮನುಷ್ಯರು ಪತಿತರಾಗುವರೋ ಆಗಲೇ ತಂದೆಯೂ ಬರುತ್ತಾರೆ. ಪ್ರಪಂಚವು ಪರಿವರ್ತನೆಯಾಗಬೇಕಾಗಿದೆ. ನಿಮ್ಮನ್ನು ತಂದೆಯು ಹೊಸ ಪ್ರಪಂಚಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ಈಗ ಎಲ್ಲರೂ ತಮೋಪ್ರಧಾನ ಹಳೆಯ ಪ್ರಪಂಚದಲ್ಲಿದ್ದೀರಿ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ – ಪ್ರತಿಯೊಬ್ಬ ಮನುಷ್ಯ ಮಾತ್ರನೂ, ಪ್ರತಿಯೊಂದು ವಸ್ತು ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ಪ್ರಪಂಚವು ಅವಶ್ಯವಾಗಿ ಹೊಸದರಿಂದ ಹಳೆಯದಾಗುತ್ತದೆ. ವಸ್ತ್ರಗಳನ್ನೂ ಸಹ ಹೊಸದಾಗಿ ಧರಿಸಿ ಸ್ವಲ್ಪ ದಿನಗಳು ಕಳೆದರೆ ಹಳೆಯದಾಗುತ್ತದೆ. ಈಗ ನಿಮಗೆ ಜ್ಞಾನ ಸಿಕ್ಕಿದೆ. ಸತ್ಯ ನಾರಾಯಣನ ಕಥೆಯನ್ನು ನೀವೀಗ ಕೇಳುತ್ತಿದ್ದೀರಿ. ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ. ಉಳಿದೆಲ್ಲವೂ ಅದರ ಮಕ್ಕಳಾಗಿವೆ. ಹೇಗೆ ಬ್ರಹ್ಮನ ವಂಶಾವಳಿಯಿದೆಯೋ ಹಾಗೆಯೇ ಗೀತೆಯೂ ಮುಖ್ಯವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಮಾತಾಪಿತರಾಗಿದ್ದಾರೆ. ಉಳಿದೆಲ್ಲರೂ ಮಕ್ಕಳಾಗಿದ್ದಾರೆ. ಈಗ ಮಾತಾಪಿತರಿಂದ ಆಸ್ತಿಯು ಸಿಗುತ್ತದೆ, ಉಳಿದಂತೆ ಎಷ್ಟಾದರೂ ಶಾಸ್ತ್ರಗಳನ್ನು ಓದಲಿ, ಏನಾದರೂ ಮಾಡಲಿ, ಆಸ್ತಿಯು ಸಿಗಲು ಸಾಧ್ಯವಿಲ್ಲ. ಭಲೆ ಶಾಸ್ತ್ರಗಳನ್ನು ಓದುವವರಿಗೆ ಬಹಳ ಸಂಪಾದನೆಯಾಗಬಹುದು ಆದರೆ ಅದೂ ಸಹ ಅಲ್ಪಕಾಲಕ್ಕಾಗಿ. ಇಲ್ಲಿ ನೀವು ಮಕ್ಕಳು ಕೇಳಿಸಿಕೊಳ್ಳುತ್ತೀರಿ, ಇದರಿಂದ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳುತ್ತೀರಿ. ವಿಚಾರ ಮಾಡಿ, ಅವರಾದರೆ ಒಬ್ಬರು ತಿಳಿಸುತ್ತಾರೆ, ಎಲ್ಲರೂ ಅವರಿಗೆ ಹಣ ಕೊಡುತ್ತಾರೆ. ಇಲ್ಲಿ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ ಯಾವುದರಿಂದ ನೀವು 21 ಜನ್ಮಗಳಿಗಾಗಿ ಎಷ್ಟೊಂದು ಸಾಹುಕಾರರಾಗುತ್ತೀರಿ. ಅಲ್ಲಿ ಯಾರು ಓದಿ ತಿಳಿಸುವರೋ ಅವರ ಜೇಬು ತುಂಬುತ್ತದೆ. ಭಕ್ತಿ ಇತ್ಯಾದಿಗಳನ್ನು ಮಾಡುವುದು ಪ್ರವೃತ್ತಿ ಮಾರ್ಗದವರ ಕೆಲಸವಾಗಿದೆ. ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ, ನಿಮಗೆ ತಿಳಿದಿದೆ – ಸ್ವರ್ಗ ಲೋಕದಲ್ಲಿ ನಾವು ಪೂಜ್ಯರಾಗಿದ್ದೆವು, ಇಲ್ಲವೆಂದರೆ 84 ಜನ್ಮಗಳ ಲೆಕ್ಕವು ಎಲ್ಲಿಂದ ಬರುವುದು? ಇದು ಆತ್ಮಿಕ ಜ್ಞಾನವಾಗಿದೆ. ಪರಮಾತ್ಮ ಜ್ಞಾನ ಸಾಗರನಿಂದಲೇ ಇದು ಸಿಗುತ್ತದೆ. ಪತಿತ-ಪಾವನ ತಂದೆಯು ಎಲ್ಲರ ಸದ್ಗತಿದಾತನಾಗಿದ್ದಾರೆ. ನಾವು ಮಕ್ಕಳಿಗೆ ಅಮರಕಥೆಯನ್ನು ತಿಳಿಸುತ್ತಿದ್ದಾರೆ. ಜನ್ಮ-ಜನ್ಮಾಂತರದಿಂದ ಅಸತ್ಯ ಕಥೆಗಳನ್ನು ಕೇಳುತ್ತಾ ಬಂದಿದ್ದೀರಿ, ಈಗ ಸತ್ಯ ಕಥೆಯನ್ನು ಕೇಳಿ ನೀವು 16 ಕಲಾ ಸಂಪೂರ್ಣರಾಗುತ್ತೀರಿ. ಚಂದ್ರನಿಗೆ 14 ಕಲಾ ಸಂಪೂರ್ಣನೆಂದು ಹೇಳಲಾಗುತ್ತದೆ, ಸೂರ್ಯನಿಗೆ ಈ ರೀತಿ ಹೇಳುವುದಿಲ್ಲ.
ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರು ಭವಿಷ್ಯದಲ್ಲಿ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗುತ್ತೇವೆ. ಮತ್ತೆ ಅರ್ಧ ಕಲ್ಪದ ನಂತರ ಆತ್ಮದಲ್ಲಿ ತುಕ್ಕು ಬೀಳುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಈಗ ಪುನಃ ಸರ್ವಗುಣ ಸಂಪನ್ನರು, 16 ಕಲಾಸಂಪೂರ್ಣರು…. ಪುನಃ ದೇವತೆಗಳಾಗುತ್ತಿದ್ದೀರಿ. ನಾವಾತ್ಮರು ಮೊದಲು ನಮ್ಮ ಮನೆಗೆ ಹೋಗಿ ನಂತರ ಬಂದು ಶರೀರ ಧಾರಣೆ ಮಾಡಿ ದೇವತೆಗಳಾಗುತ್ತೇವೆ. ಅನಂತರ ಚಂದ್ರವಂಶಿ ಮನೆತನದಲ್ಲಿ ಬರುತ್ತೇವೆ, 84 ಜನ್ಮಗಳ ಲೆಕ್ಕವೂ ಬೇಕಲ್ಲವೆ. ಯಾವ ಯುಗದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡಿರಿ ಎಂದು ತಂದೆಯು 84 ಜನ್ಮಗಳ ಸತ್ಯ-ಸತ್ಯವಾದ ಕಥೆಯನ್ನೂ ಈಗ ತಿಳಿಸಿದ್ದಾರೆ. ನೀವು ಮಕ್ಕಳಿಗೇ ಹೇಳುತ್ತಾರೆ – ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ತಮ್ಮನ್ನು ಮೊದಲನೆಯದಾಗಿ ಬ್ರಾಹ್ಮಣರೆಂದು ತಿಳಿದುಕೊಳ್ಳಬೇಕಾಗಿದೆ. ಮಮ್ಮಾ-ಬಾಬಾ ಎಂದು ಹೇಳುತ್ತೀರಲ್ಲವೆ. ಆಸ್ತಿಯನ್ನು ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ತೆಗೆದುಕೊಳ್ಳುತ್ತೀರಿ. ಬ್ರಹ್ಮನೂ ಸಹ ತಂದೆಯವರಾದರು. ಬ್ರಹ್ಮನಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ ಏಕೆಂದರೆ ಅವರೂ ಸಹೋದರನಾಗಿದ್ದಾರೆ, ಶರೀರಧಾರಿಯಲ್ಲವೆ. ನೀವು ಎಲ್ಲಾ ಮಕ್ಕಳು ಆಸ್ತಿಯನ್ನು ಅವರಿಂದ ತೆಗೆದುಕೊಳ್ಳುತ್ತೀರಿ, ಈ ಬ್ರಹ್ಮನಿಂದಲ್ಲ. ಯಾರಿಂದ ಆಸ್ತಿಯನ್ನು ಪಡೆಯುವುದಿಲ್ಲವೋ ಅವರನ್ನು ನೆನಪು ಮಾಡಬಾರದು, ಒಬ್ಬ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರಿಗೇ ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹೇಳುತ್ತಾರೆ. ನೀವು ಅವರ ಬಳಿ ಬರುತ್ತೀರಿ ಅಂದಾಗ ನಿಮ್ಮ ಬುದ್ಧಿಯಲ್ಲಿದೆ – ನಾವು ಶಿವ ತಂದೆಯ ಬಳಿ ಹೋಗುತ್ತೇವೆ. ಈಗ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಆತ್ಮವು ಬಿಂದುವಾಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ. ಆತ್ಮವು ಒಂದು ಸೆಕೆಂಡಿನಲ್ಲಿ ಹಾರುತ್ತದೆ. ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಹೋಗಿ ಭೃಕುಟಿಯ ಮಧ್ಯ ಭಾಗದಲ್ಲಿ ವಿರಾಜಮಾನನಾಗುತ್ತೇನೆ. ನಾನಾತ್ಮನು ಹೀಗಿದ್ದೇನೆಂದು ಬುದ್ಧಿಯಲ್ಲಿ ತಿಳುವಳಿಕೆ ಇದೆ. ಸತ್ಯಯುಗದಲ್ಲಿ ಯಾವುದೇ ಇಂತಹ ವಸ್ತುವನ್ನು ನೋಡುವ ಆಸೆಯಿರುವುದಿಲ್ಲ. ಆತ್ಮವನ್ನು ನೋಡಬಹುದಾಗಿದೆ ಆದರೆ ದಿವ್ಯದೃಷ್ಟಿಯಿಂದ. ಯಾರೂ ಈ ಕಣ್ಣುಗಳಿಂದ ನೋಡುವ ಮಾತಿಲ್ಲ. ಭಕ್ತಿಮಾರ್ಗದಲ್ಲಿಯೇ ಸಾಕ್ಷಾತ್ಕಾರ ಮಾಡುತ್ತಾರೆ. ಹೇಗೆ ರಾಮಕೃಷ್ಣರ ಶಿಷ್ಯ ವಿವೇಕಾನಂದನಾಗಿದ್ದರು, ಅವರು ತಿಳಿಸಿದ್ದಾರೆ – ನಾನು ಸನ್ಮುಖದಲ್ಲಿ ಕುಳಿತುಕೊಂಡಾಗ ಅವರ ಆತ್ಮವು ಬಂದು ನನ್ನಲ್ಲಿ ಪ್ರವೇಶವಾಯಿತು. ವಾಸ್ತವದಲ್ಲಿ ಈ ಮಾತು ಸಾಧ್ಯವಿಲ್ಲ, ಈ ರೀತಿ ಏನೂ ಆಗುವುದಿಲ್ಲ. ಆತ್ಮವು ಹೇಗೆ ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಪ್ರವೇಶ ಮಾಡುತ್ತದೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳಿಗೆ ತಿಳಿಸಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ, ನಾವು ಅಮರ ಲೋಕದಲ್ಲಿ ಜನ್ಮ ಪಡೆಯುತ್ತೇವೆ, ಅಲ್ಲಿ ನಾವು ಗರ್ಭ ಮಹಲಿನಲ್ಲಿರುತ್ತೇವೆ. ಇಲ್ಲಂತೂ ಗರ್ಭ ಜೈಲಿನಲ್ಲಿ ಬಹಳ ಅಯ್ಯೊ ಅಯ್ಯೊ ಎನ್ನುತ್ತಾರೆ. ಈಗ ಅರ್ಧಕಲ್ಪಕ್ಕಾಗಿ ತಂದೆಯು ನಿಮ್ಮನ್ನು ಎಲ್ಲಾ ದುಃಖಗಳಿಂದ ಬಿಡಿಸುತ್ತಾರೆ ಅಂದಮೇಲೆ ಎಷ್ಟು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ನೀವು ತಿಳಿದುಕೊಂಡಿದ್ದೀರಿ – ನಾವು ತಂದೆಯ ಸಲಹೆಯಂತೆ ನಡೆದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಯುಕ್ತಿಯನ್ನೂ ತಿಳಿಸುತ್ತಾರೆ. ಮನುಷ್ಯರಂತೂ ಅನೇಕ ಪ್ರಕಾರದ ಯುಕ್ತಿಗಳನ್ನು ರಚಿಸುತ್ತಾರೆ. ಕೆಲವರು ವಿಜ್ಞಾನದ ಅಭಿಮಾನಿಗಳಾಗಿದ್ದಾರೆ, ಕೆಲವರು ವೈದ್ಯಕೀಯ ಅಭಿಮಾನಿಗಳಾಗಿದ್ದಾರೆ. ಮನುಷ್ಯರ ಹೃದಯವು ಹಾಳಾದರೆ ಇನ್ನೊಂದು ಪ್ಲಾಸ್ಟಿಕ್ ಹೃದಯವನ್ನು ಹಾಕಬಲ್ಲೆವು ಎಂದು ಬರೆಯುತ್ತಾರೆ. ನಿಜವಾದುದನ್ನು ತೆಗೆದು ತಾತ್ಕಾಲಿಕ ಹೃದಯವನ್ನು ನಡೆಸುತ್ತಿರುತ್ತಾರೆ. ಇದೂ ಸಹ ಎಷ್ಟು ಒಳ್ಳೆಯ ಕಲೆಯಾಗಿದೆ ಆದರೆ ಇದು ಅಲ್ಪಕಾಲದ ಸುಖಕ್ಕಾಗಿ. ನಾಳೆ ಅವರು ಮರಣ ಹೊಂದಿದರೆ ಶರೀರವೇ ಸಮಾಪ್ತಿ ಆಗಿ ಬಿಡುವುದು, ಪ್ರಾಪ್ತಿಯೇನೂ ಆಗುವುದಿಲ್ಲ. ಅಲ್ಪಕಾಲಕ್ಕಾಗಿ ಸಿಕ್ಕಿತಷ್ಟೇ. ವಿಜ್ಞಾನದ ಮೂಲಕ ಬಹಳಷ್ಟು ಕಮಾಲ್ ಮಾಡಿ ತೋರಿಸುತ್ತಾರೆ ಅದೂ ಕೇವಲ ಅಲ್ಪಕಾಲಕ್ಕಾಗಿ. ಈ ಮಾತಂತೂ ಎಲ್ಲದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಪಾವನ ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತವಾಗಿ ಬಿಟ್ಟಿದೆ. ಆ ಪತಿತ ಆತ್ಮವನ್ನು ಪುನಃ ಪಾವನವನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಒಬ್ಬ ತಂದೆಯದೇ ಗಾಯನವಿದೆ, ಸರ್ವರ ಪತಿತ-ಪಾವನ, ಸರ್ವರ ಸದ್ಗತಿದಾತ, ಸರ್ವರ ಮೇಲೆ ದಯಾ ದೃಷ್ಟಿಯನ್ನು ಇಡುವವರು, ಸರ್ವೋದಯ ಲೀಡರ್ ಆಗಿದ್ದಾರೆ. ಮನುಷ್ಯರು ತಮ್ಮನ್ನು ಸರ್ವೋದಯ ಲೀಡರ್ ಎಂದು ಕರೆಸಿಕೊಳ್ಳುತ್ತಾರೆ ಆದರೆ ಸರ್ವ ಎಂದರೆ ಅದರಲ್ಲಿ ಎಲ್ಲರೂ ಬಂದುಬಿಡುತ್ತಾರೆ. ಅಂದಮೇಲೆ ಸರ್ವರ ಮೇಲೆ ದಯೆ ತೋರಿಸುವವರು ತಂದೆಯೊಬ್ಬರೇ ಎಂದು ಗಾಯನವಿದೆ. ಅವರಿಗೇ ದಯಾ ಸಾಗರ, ಆನಂದ ಸಾಗರನೆಂದು ಹೇಳುತ್ತಾರೆ. ಉಳಿದ ಮನುಷ್ಯರು ಸರ್ವರ ಮೇಲೆ ದಯೆ ತೋರಿಸಲು ಸಾಧ್ಯವೇ? ತಮ್ಮಮೇಲೆ ದಯೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರೆ ಅನ್ಯರ ಮೇಲೆ ಏನು ಮಾಡುವರು? ಇವರು ಅಲ್ಪಕಾಲದ ದಯೆ ತೋರಿಸುತ್ತಾರೆ. ಎಷ್ಟು ದೊಡ್ಡ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ.
ಈಗ ತಂದೆಯು ತಿಳಿಸುತ್ತಾರೆ – ನಿಮಗೆ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುವ ಎಷ್ಟು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಯುಕ್ತಿಯು ಅತಿ ಸಹಜವಾಗಿದೆ, ಕೇವಲ ನನ್ನನ್ನು ನೆನಪು ಮಾಡಿರಿ ಏಕೆಂದರೆ ನೀವು ನನ್ನನ್ನೇ ಮರೆತು ಹೋದಿರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿರುತ್ತೀರಿ ಆದ್ದರಿಂದ ನನ್ನನ್ನು ನೆನಪು ಮಾಡುವುದಿಲ್ಲ. ನಿಮ್ಮ 84 ಜನ್ಮಗಳ ಚರಿತ್ರೆ-ಭೂಗೋಳವನ್ನು ನಿಮಗೆ ತಿಳಿಸುತ್ತೇನೆ, ನೀವು ಹೀಗೆ ರಾಜ್ಯ ಮಾಡುತ್ತಿದ್ದಿರಿ, ಸದಾ ಸುಖಿಯಾಗಿದ್ದಿರಿ, ನಂತರ ದಿನ-ಪ್ರತಿದಿನ ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ, ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ಈಗ ತಂದೆಯು ಪುನಃ ನೀವುಮಕ್ಕಳಿಗೆ ಕಲ್ಪದ ಮೊದಲಿನಂತೆ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವೇ ಕಲ್ಪ-ಕಲ್ಪವೂ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಶ್ರೀಮತದಂತೆ ನಡೆಯುತ್ತೀರಿ. ಶ್ರೀಮತವು ಬಾಪ್ದಾದಾರವರ ಮತವಾಗಿದೆ. ಅವರನ್ನು ಬಿಟ್ಟರೆ ಶ್ರೀಮತವೆಲ್ಲಿಂದ ಸಿಗುವುದು! ತಂದೆಯು ತಿಳಿಸುತ್ತಾರೆ – ನೀವು ವಿಚಾರ ಮಾಡಿ, ಈ ಕಲೆಯು ಯಾರಲ್ಲಿಯಾದರೂ ಇದೆಯೇ? ಇಲ್ಲ. ವಿಶ್ವದ ಮಾಲೀಕರನ್ನಾಗಿ ಮಾಡುವ ಯುಕ್ತಿಯನ್ನು ತಂದೆಯೇ ತಿಳಿಸಿಕೊಡುತ್ತಾರೆ. ಇದರ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ತಂದೆಯೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಜ್ಞಾನ ತಿಳಿಸುತ್ತಾರೆ. ಕೇವಲ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು ಪವಿತ್ರರಾಗಿ ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ, ಈ ಯೋಗಾಗ್ನಿಯಿಂದಲೇ ನಿಮ್ಮ ಪಾಪದ ಕೊಡವು ಸಮಾಪ್ತಿ ಆಗುವುದು.
ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬಹಳ ಪತಿತರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇತ್ತೀಚೆಗಂತೂ ಮನುಷ್ಯರು ನಾನೇ ಶಿವನೆಂದು ಹೇಳಿಕೊಳ್ಳುತ್ತಾರೆ ಅಥವಾ ನೀವು ಪರಮಾತ್ಮನ ರೂಪವಾಗಿದ್ದೀರಿ, ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಈಗ ತಂದೆಯು ಬಂದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯೇ ನೆನಪು ತರಿಸಬೇಕಾಗಿದೆ. ಸರ್ವರ ಸದ್ಗತಿದಾತನು ಒಬ್ಬ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಶಿವನ ಮಂದಿರಗಳನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ, ಶಂಕರನ ರೂಪವೇ ಬೇರೆಯಾಗಿದೆ. ಪ್ರದರ್ಶನಿಯಲ್ಲಿಯೂ ಇದನ್ನು ತೋರಿಸಬೇಕಾಗಿದೆ, ಶಿವ ನಿರಾಕಾರ, ಶಂಕರ ಆಕಾರಿಯಾಗಿದ್ದಾನೆ. ಕೃಷ್ಣನಂತೂ ಸಾಕಾರದಲ್ಲಿದ್ದಾನೆ, ಜೊತೆಯಲ್ಲಿ ರಾಧೆಯನ್ನು ತೋರಿಸುವುದು ಸರಿಯಾಗಿದೆ. ಆಗ ಇದು ಸಿದ್ಧವಾಗುವುದು – ಇವರೇ ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆಂದು. ಕೃಷ್ಣನು ದ್ವಾಪರದಲ್ಲಿ ಗೀತೆಯನ್ನು ತಿಳಿಸಲು ಬರುವುದೇ ಇಲ್ಲ. ಪತಿತರಾಗುವುದು ಕಲಿಯುಗದ ಅಂತ್ಯದಲ್ಲಿ, ಸತ್ಯಯುಗದಲ್ಲಿ ಪಾವನರಿರುತ್ತಾರೆ ಅಂದಮೇಲೆ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಇದನ್ನು ತಂದೆಯೇ ತಿಳಿದುಕೊಂಡಿದ್ದಾರೆ, ಅವರೇ ತ್ರಿಕಾಲದರ್ಶಿಯಾಗಿದ್ದಾರೆ. ಕೃಷ್ಣನಿಗೆ ತ್ರಿಕಾಲದರ್ಶಿಯೆಂದು ಹೇಳಲಾಗುವುದಿಲ್ಲ, ಅವರು ಮೂರು ಕಾಲಗಳ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಕೃಷ್ಣನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆಂದು ಹೇಳುತ್ತಾರೆ. ದೈವೀ ರಾಜಕುಮಾರ-ಕುಮಾರಿಯರು ಕಾಲೇಜಿಗೆ ಓದಲು ಹೋಗುತ್ತಾರೆ. ಮೊದಲು ಇಲ್ಲಿಯೂ ಸಹ ರಾಜಕುಮಾರ-ಕುಮಾರಿಯರ ಕಾಲೇಜುಗಳಿತ್ತು, ಈಗ ಒಂದೇ ಬೆರಕೆಯಾಗಿ ಬಿಟ್ಟಿದೆ. ಕೃಷ್ಣನು ರಾಜಕುಮಾರನಾಗಿದ್ದನು, ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರೆ, ಎಲ್ಲರೂ ಒಟ್ಟಿಗೆ ಓದುತ್ತಾರೆ. ಅದಂತೂ ನಿರ್ವಿಕಾರಿ ಪ್ರಪಂಚವಾಗಿದೆ, ಒಬ್ಬ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಸರ್ವರ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯೇ ಬಂದು ಸರ್ವರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ದೇವತೆಗಳ ರಾಜ್ಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಧರ್ಮಗಳು ಅರ್ಧದಿಂದ ಬರುತ್ತವೆ ಅಂದಮೇಲೆ ಸತ್ಯಯುಗದಲ್ಲಿ ಈ ಧರ್ಮಗಳಿರಲು ಹೇಗೆ ಸಾಧ್ಯ! ಇವರು ನಿವೃತ್ತಿ ಮಾರ್ಗದವರು ಹಠಯೋಗಿಗಳಾಗಿದ್ದಾರೆ. ರಾಜಯೋಗವನ್ನು ತಿಳಿದುಕೊಂಡಿಲ್ಲ. ಪ್ರವೃತ್ತಿ ಮಾರ್ಗದವರಿಗಾಗಿ ಈ ರಾಜಯೋಗವಿದೆ, ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಕಲಿಯುಗದಲ್ಲಿ ಪತಿತ ಪ್ರವೃತ್ತಿ ಮಾರ್ಗದವರಾಗಿ ಬಿಟ್ಟಿದ್ದೀರಿ. ಭಗವಾನುವಾಚ, ನನ್ನೊಬ್ಬನನ್ನೇ ನೆನಪು ಮಾಡಿರಿ. ಹಳೆಯ ಪ್ರಪಂಚ ಅಥವಾ ದೇಹದ ಸಂಬಂಧಗಳೊಂದಿಗೆ ಮನಸ್ಸನ್ನಿಟ್ಟರೆ ಅದೃಷ್ಟವು ಕೆಟ್ಟು ಹೋಗುವುದು. ಅನೇಕರ ಅದೃಷ್ಟವು ಕೆಟ್ಟು ಹೋಗುತ್ತದೆ. ಯಾರಾದರೂ ಅಕರ್ತವ್ಯ ಮಾಡಿದ್ದರೆ ಅಂತಿಮದಲ್ಲಿ ಅದೆಲ್ಲವೂ ಮುಂದೆ ಬರುತ್ತದೆ, ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಕ್ಕಳು ಬಹಳ ಮುಚ್ಚಿಡುತ್ತಾರೆ. ಈ ಜನ್ಮದಲ್ಲಿ ಮಾಡಿರುವ ಪಾಪಕರ್ಮಗಳನ್ನು ತಂದೆಗೆ ತಿಳಿಸುವುದರಿಂದ ಅರ್ಧ ಶಿಕ್ಷೆಯು ಕಳೆದು ಹೋಗುವುದು. ಆದರೆ ಸಂಕೋಚಕ್ಕೊಳಗಾಗಿ ತಿಳಿಸುವುದೇ ಇಲ್ಲ. ಬಹಳ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಬುದ್ಧಿಯಲ್ಲಿ ನೆನಪಂತೂ ಇರುತ್ತದೆ ಆದರೆ ಅದನ್ನು ತಿಳಿಸುವುದರಿಂದ ಶಿಕ್ಷೆಯಿಂದ ಮುಕ್ತರಾಗುವಿರಿ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ. ಇರುವ ಕಾಯಿಲೆಯನ್ನು ಸಂಕೋಚಕ್ಕೊಳಗಾಗಿ ಸರ್ಜನ್ಗೆ ತಿಳಿಸಲಿಲ್ಲವೆಂದರೆ ಅದು ಕಳೆಯುವುದಾದರೂ ಹೇಗೆ? ಯಾವುದೇ ವಿಕರ್ಮ ಮಾಡಿದ್ದರೂ ಸಹ ತಿಳಿಸುವುದರಿಂದ ಅರ್ಧ ಪಾಪವು ತುಂಡಾಗುವುದು. ತಿಳಿಸದೇ ಇದ್ದರೆ ಅದು ವೃದ್ಧಿಯಾಗುತ್ತಾ ಹೋಗುವುದು. ಹೆಚ್ಚು ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುವಿರಿ ಮತ್ತೆ ಅದೃಷ್ಟವು ಸಮಾಪ್ತಿಯಾಗಿ ದುರಾದೃಷ್ಟವಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ದೇಹದೊಂದಿಗೂ ಸಂಬಂಧವನ್ನು ಇಡಬೇಡಿ.ಯಾವಾಗಲೂ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮಿಂದ ಯಾವುದೇ ಕೆಟ್ಟ ಕೆಲಸವಾಗುವುದಿಲ್ಲ. ಇವರು ಧರ್ಮರಾಜನೂ ಆಗಿದ್ದಾರೆ, ಅವರೊಂದಿಗೂ ಮುಚ್ಚಿಡುತ್ತಾ ಇದ್ದರೆ ಮತ್ತೆ ನಿಮ್ಮಷ್ಟು ಶಿಕ್ಷೆ ಮತ್ತ್ಯಾರಿಗೂ ಸಿಗುವುದಿಲ್ಲ. ಸಮಯವು ಎಷ್ಟು ಸಮೀಪಿಸುತ್ತಾ ಹೋಗುವುದೋ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತಾಹೋಗುವುದು. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಪಾಪಗಳ ಶಿಕ್ಷೆಯು ಖಂಡಿತ ಸಿಗುತ್ತದೆ. ಹೇಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುವುದೋ ಹಾಗೆಯೇ ಒಂದು ಸೆಕೆಂಡಿನಲ್ಲಿ ಶಿಕ್ಷೆಗಳ ಈ ರೀತಿ ಅನುಭವವಾಗುತ್ತದೆ ಹೇಗೆ ಬಹಳ ಸಮಯದಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂಬಂತೆ. ಇದು ಬಹಳ ಸೂಕ್ಷ್ಮ ಮೆಷಿನರಿಯಾಗಿದೆ, ಎಲ್ಲರ ಅಂತಿಮ ಸಮಯವಾಗಿದೆ. ಶಿಕ್ಷೆಗಳನ್ನು ಖಂಡಿತವಾಗಿಯೂ ಅನುಭವಿಸಬೇಕಾಗಿದೆ ನಂತರ ಎಲ್ಲಾ ಆತ್ಮರು ಪವಿತ್ರರಾಗಿ ಹೊರಟು ಹೋಗುವರು. ತಂದೆಯು ಬಂದು ಪತಿತ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಈ ಶಕ್ತಿಯಿಲ್ಲ. 63 ಜನ್ಮಗಳಿಂದ ಪಾಪಗಳನ್ನು ಮಾಡುತ್ತಾ-ಮಾಡುತ್ತಾ ಈಗ ಪಾಪದ ಕೊಡವು ತುಂಬಿದೆ. ಮಾಯೆಯ ಗ್ರಹಣವು ಎಲ್ಲರಿಗೂ ಹಿಡಿದಿದೆ. ದೊಡ್ಡ ಗ್ರಹಣವು ನಿಮಗೆ ಹಿಡಿದಿದೆ, ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ, ನಿಮ್ಮ ಮೇಲೆ ಗ್ರಹಣ ಹಿಡಿದಿದೆ. ಜ್ಞಾನವೂ ಸಹ ಈಗ ನೀವು ಮಕ್ಕಳಿಗೆ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ – ನೀವು ಭಾರತದ ಮಾಲೀಕರಾಗಿದ್ದಿರಿ ನಂತರ 84 ಜನ್ಮಗಳನ್ನು ನೀವು ತೆಗೆದುಕೊಂಡಿರಿ. ನೀವು ಅವಶ್ಯವಾಗಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಮತ್ತೆ ಪತಿತರಾದ ಕಾರಣ ಹಿಂದೂಗಳೆಂದು ಕರೆಸಿಕೊಂಡಿದ್ದಿರಿ ಎಂದು ತಂದೆಯು ನೇರವಾಗಿ ತಿಳಿಸುತ್ತಾರೆ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಯೇ ಇಲ್ಲ. ಮಠಪಂಥಕ್ಕೆ ರಾಜಧಾನಿ ಎಂದು ಹೇಳುವುದಿಲ್ಲ. ರಾಜ್ಯವು ರಾಜರಿಗಿರುತ್ತದೆ. ಮೊದಲನೇ ಲಕ್ಷ್ಮೀ-ನಾರಾಯಣ, ಎರಡನೇ ಲಕ್ಷ್ಮೀ-ನಾರಾಯಣ……ಹೀಗೆ ರಾಜ್ಯವು ನಡೆಯುತ್ತದೆ. ಇದೂ ಸಹ ಅವಶ್ಯವಾಗಿದೆ, ಪಾವನರಿಂದ ಪತಿತರಾಗಲೇಬೇಕಾಗಿದೆ. ಪತಿತರಾಗುವ ಕಾರಣ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ಪೂಜ್ಯ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ತಮ್ಮ ಧರ್ಮದ ಚಿತ್ರಗಳನ್ನೇ ಪೂಜಿಸುತ್ತಾರೆ. ನಾವೇ ಪೂಜ್ಯ ದೇವಿ-ದೇವತೆಗಳಾಗಿದ್ದೆವು, ಈಗ ಪೂಜಾರಿಗಳಾಗಿದ್ದೇವೆ ಎಂಬುದನ್ನೇ ಮರೆತು ಹೋಗಿದ್ದೇವೆ. ತಂದೆಯು ಆಸ್ತಿಯನ್ನು ಕೊಟ್ಟಿದ್ದರು, ನಂತರ ಪತಿತರಾದೆವು ಆದ್ದರಿಂದ ನಮ್ಮದೇ ಚಿತ್ರಗಳಿವೆ. ಕುಳಿತು ಪೂಜೆ ಮಾಡಿದೆವು ಎಂದು ನೀವೀಗ ತಿಳಿದುಕೊಳ್ಳುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಾರತದ ವಿನಃ ಮತ್ತ್ಯಾರಿಗೂ ಹೇಳುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬಂದು ಪುನಃ ದೇವಿ-ದೇವತೆಗಳನ್ನಾಗಿ ಮಾಡಲು ಜ್ಞಾನ ಕೊಡುತ್ತಾರೆ. ಉಳಿದೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೊರಟು ಹೋಗುತ್ತಾರೆ. ಆತ್ಮರೆಲ್ಲರೂ ಓ ಗಾಡ್ ಫಾದರ್ ಎಂದು ತಂದೆಯನ್ನು ಕರೆಯುತ್ತಾ ಇರುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ, ಒಬ್ಬರು ಶಿವ ತಂದೆ, ಇನ್ನೊಬ್ಬರು ಲೌಕಿಕ ತಂದೆ ಮತ್ತು ಇವರು ಅಲೌಕಿಕ ತಂದೆ ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ಮತ್ತೆಲ್ಲರಿಗೆ ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ಸತ್ಯಯುಗದಲ್ಲಿ ಕೇವಲ ಒಬ್ಬರೇ ಲೌಕಿಕ ತಂದೆಯಿರುತ್ತಾರೆ. ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇಲ್ಲ. ಅಲ್ಲಂತೂ ಸುಖವೇ ಸುಖವಿರುತ್ತದೆ ಅಂದಮೇಲೆ ಮತ್ತೆ ಪಾರಲೌಕಿಕ ತಂದೆಯನ್ನು ಏಕೆ ನೆನಪು ಮಾಡುವರು! ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಇಲ್ಲಿ ನಿಮಗೆ ಮೂವರು ತಂದೆಯರಿರುತ್ತಾರೆ, ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ನಂತರ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಇಲ್ಲಿ ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ನಾವೆಲ್ಲರೂ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮಗೆ ಶುದ್ಧ ಅಭಿಮಾನವಿದೆ. ತಂದೆಯು ಶಿಕ್ಷಕ, ಸದ್ಗುರುವೂ ಆಗಿದ್ದಾರೆ, ಅವರ ಮಹಿಮೆಯನ್ನೂ ಸಹ ತಿಳಿಸಬೇಕಾಗಿದೆ. ಅವರೇ ಬಂದು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ನಿಮಗೆ ಆಸ್ತಿಯಿತ್ತು, ನಂತರ 84 ಜನ್ಮಗಳನ್ನು ತೆಗೆದುಕೊಂಡು ಅದನ್ನು ಕಳೆದುಕೊಂಡಿದ್ದೀರಿ. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ, ತಂದೆಗೆ ಪತಿತ-ಪಾವನ, ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಈ ಪ್ರಪಂಚವೇ ಪತಿತರದಾಗಿದೆ. ಯಾರೂ ಸದ್ಗತಿ ಕೊಡಲು ಸಾಧ್ಯವಿಲ್ಲ. ಬಾಕಿ ಯಾರಾದರೂ ಬಹಳ ಶಾಸ್ತ್ರಗಳನ್ನು ಓದಿದ್ದರೆ ಅವರದು ಅಂತ್ಯಮತಿ ಸೋ ಗತಿಯಾಗುತ್ತದೆ. ನಂತರದ ಜನ್ಮದಲ್ಲಿ ಬಾಲ್ಯದಲ್ಲಿಯೇ ಎಲ್ಲವನ್ನೂ ಕಂಠಪಾಠ ಮಾಡಿ ಬಿಡುತ್ತಾರೆ. ತಂದೆಯು ನೀವು ಮಕ್ಕಳಿಗೆ ಎಷ್ಟು ಒಳ್ಳೆಯ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ – ಮಕ್ಕಳೇ, ನಿವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುವುದು. ಈಗ ನಾಟಕವು ಪೂರ್ಣವಾಗುತ್ತದೆ. ಎಲ್ಲರೂ ಇಲ್ಲಿ ರಾಜರಾಗಬೇಕಾಗಿದೆ. ಕ್ರೈಸ್ಟ್ ಮೊದಲಾದವರೆಲ್ಲರ ಆತ್ಮಗಳು ಹಾಜರಿದ್ದಾರೆ, ಅವರೂ ಸಹ ತಂದೆಯ ಬಳಿ ಸಲಾಮು ಹೊಡೆಯಲು ಬರುವರು. ಅವರಂತೂ ಚಕ್ರವರ್ತಿ ರಾಜರಾಗುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡುತ್ತಾರೆ. ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುತ್ತಾರೆ. ನಿಮ್ಮದು ಮನ್ಮನಾಭವ ಮತ್ತು ಮಧ್ಯಾಜೀಭವದ ಡಬಲ್ ಮಂತ್ರವಾಗಿದೆ. ತಂದೆಯು ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಸ್ವಯಂನ್ನು ಆತ್ಮವೆಂದು ತಿಳಿದು ಆತ್ಮಿಕ ತಂದೆಯಿಂದ ವಿದ್ಯೆಯನ್ನು ಓದಿ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸತ್ಯ ಖಂಡದ ಮಾಲೀಕರಾಗುವ ಸತ್ಯ ಕಥೆಯನ್ನು ಕೇಳಬೇಕು ಹಾಗೂ ಅನ್ಯರಿಗೂ ಹೇಳಬೇಕಾಗಿದೆ.
2. ಯಾವ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೋ ಅವರನ್ನೇ ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿಯನ್ನಲ್ಲ. ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ ಆದ್ದರಿಂದ ಇದನ್ನು ನೋಡಿಯೂ ನೋಡದಂತಿರಬೇಕಾಗಿದೆ.
ವರದಾನ:-
ಯಾವ ಮಕ್ಕಳು ಲೋಹದ ಸರಪಳಿ ಹಾಗೂ ತೆಳುವಾದ ದಾರಗಳ ಬಂಧನಗಳನ್ನು ಬಿಡಿಸಿಕೊಂದು ಬಂಧನಮುಕ್ತ ಸ್ಥಿತಿಯಲ್ಲಿ ಇರುತ್ತಾರೆಯೋ, ಅವರು ಕಲಿಯುಗೀ ಸ್ಥೂಲ ವಸ್ತುಗಳ ಬಯಕೆಗಳು ಅಥವಾ ಮನಸ್ಸಿನ ಸೆಳೆತಗಳಿಂದ ಮುಕ್ತರಾಗಿ ಬಿಡುತ್ತಾರೆ. ಅವರನ್ನು ಯಾವುದೇ ದೇಹ-ಅಭಿಮಾನ ಅಥವಾ ದೇಹದ ಹಳೆಯ ಪ್ರಪಂಚದ ವಸ್ತುಗಳೂ ಸಹ ಅಂಶದಷ್ಟೂ ಆಕರ್ಷಿಸುವುದಿಲ್ಲ. ಯಾವಾಗ ಯಾವುದೇ ಇಂದ್ರಿಯಗಳ ಪ್ರಾಪ್ತಿ ಅರ್ಥಾತ್ ವಿನಾಶಿ ಪ್ರಾಪ್ತಿಗಳ ಕಡೆ ಆಕರ್ಷಿಸುವುದಿಲ್ಲವೋ, ಆಗ ಅಲೌಕಿಕ ಅತೀಂದ್ರಿಯ ಸುಖ ಅಥವಾ ಮನ ರಸ ಸ್ಥಿತಿಯ ಅನುಭವವಾಗುವುದು. ಇದಕ್ಕಾಗಿ ನಿರಂತರ ಮನ್ಮನಾಭವದ ಸ್ಥಿತಿಯಿರಬೇಕಾಗಿದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!