10 August 2021 KANNADA Murli Today | Brahma Kumaris

Read and Listen today’s Gyan Murli in Kannada

August 9, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ನಿಮ್ಮನ್ನು ಈ ಪಾಪದ ಪ್ರಪಂಚದಿಂದ ಹೊರ ತೆಗೆದು ನೆಮ್ಮದಿಯ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ, ತಂದೆಯ ಮೂಲಕ ನಿಮಗೆ ಸುಖ-ಶಾಂತಿಯ ಎರಡು ಉಡುಗೊರೆ ಸಿಗುತ್ತವೆ”

ಪ್ರಶ್ನೆ:: -

ಇಡೀ ಪ್ರಪಂಚದಲ್ಲಿ ಸತ್ಯ-ಸತ್ಯವಾದ ನನ್ಸ್ ನೀವಾಗಿದ್ದೀರಿ, ಸತ್ಯವಾದ ನನ್ಸ್ ಎಂದು ಯಾರಿಗೆ ಹೇಳುತ್ತಾರೆ?

ಉತ್ತರ:-

ಯಾರ ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪಿರುವುದೋ ಅರ್ಥಾತ್ ನನ್ ಬಟ್ ಒನ್, ಅಂತಹವರು ಸತ್ಯವಾದ ನನ್ಸ್ ಆಗಿದ್ದಾರೆ. ಭಲೆ ಅವರು ತಮ್ಮನ್ನು ನನ್ಸ್ ಎಂದು ಕರೆಸಿಕೊಳ್ಳುತ್ತಾರೆ. ಆದರೆ ಅವರ ಬುದ್ಧಿಯಲ್ಲಿ ಕೇವಲ ಒಬ್ಬ ಕ್ರಿಸ್ತನ ನೆನಪಿರುವುದಿಲ್ಲ. ಕ್ರಿಸ್ತನನ್ನೂ ಸಹ ಭಗವಂತನ ಮಗುವೆಂದು ಹೇಳುತ್ತಾರೆ ಅಂದಮೇಲೆ ಅವರ ಬುದ್ಧಿಯಲ್ಲಿ ಇಬ್ಬರಿರುತ್ತಾರೆ ಮತ್ತು ನಿಮ್ಮ ಬುದ್ಧಿಯಲ್ಲಿ ಒಬ್ಬ ತಂದೆಯಿದ್ದಾರೆ ಆದ್ದರಿಂದ ನೀವು ಸತ್ಯ-ಸತ್ಯವಾದ ನನ್ಸ್ ಆಗಿದ್ದೀರಿ. ನಿಮಗೆ ತಂದೆಯ ಆಜ್ಞೆಯಾಗಿದೆ – ಪವಿತ್ರರಾಗಿರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದ ದೂರ ಕರೆದುಕೊಂಡು ಹೋಗು…..

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಾ? ಯಾರು ಕೇಳಿದರು? ಆತ್ಮರು. ಆತ್ಮಕ್ಕೆ ಪರಮಾತ್ಮನೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ನೀವೀಗ ಬ್ರಾಹ್ಮಣರಾಗಿದ್ದೀರಿ. ಈಗ ನಿಮಗೆ ದೇವತೆಯೆಂದು ಹೇಳಲಾಗುವುದಿಲ್ಲ. ಬ್ರಹ್ಮನಿಗೂ ಸಹ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ಭಲೆ ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ ಆದರೆ ಬ್ರಹ್ಮಾ ಮತ್ತು ವಿಷ್ಣುವಿನಲ್ಲಿ ಬಹಳ ಅಂತರವಿದೆ. ವಿಷ್ಣುವಿಗೆ ದೇವತೆ ಎಂದು ಹೇಳುತ್ತಾರೆ, ಬ್ರಹ್ಮನಿಗೆ ದೇವತೆಯೆಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಬ್ರಹ್ಮನು ಬ್ರಾಹ್ಮಣರ ತಂದೆಯಾಗಿದ್ದಾರೆ. ಬ್ರಾಹ್ಮಣರಿಗೆ ದೇವತೆಯೆಂದು ಹೇಳಲಾಗುವುದಿಲ್ಲ. ಈ ಮಾತುಗಳನ್ನು ಯಾವುದೇ ಮನುಷ್ಯರು ಮನುಷ್ಯರಿಗೆ ತಿಳಿಸಲು ಸಾಧ್ಯವಿಲ್ಲ, ಭಗವಂತನೇ ತಿಳಿಸುತ್ತಾರೆ. ಮನುಷ್ಯರು ಅಂಧ ಶ್ರದ್ಧೆಯಿಂದ ಏನು ಬಂದರೆ ಅದನ್ನು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಆತ್ಮಿಕ ತಂದೆಯು ನಾವು ಮಕ್ಕಳಿಗೆ ಓದಿಸುತ್ತಿದ್ದಾರೆ, ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಬೇಕಾಗಿದೆ. ನಾನಾತ್ಮನು ಈ ಶರೀರವನ್ನು ತೆಗೆದುಕೊಳ್ಳುತ್ತೇನೆ. ನಾನಾತ್ಮನು 84 ಜನ್ಮಗಳನ್ನು ಪಡೆದಿದ್ದೇನೆ, ಎಂತೆಂತಹ ಕರ್ಮ ಮಾಡುವರೋ ಅದರಂತೆ ಶರೀರ ಸಿಗುತ್ತದೆ. ಆತ್ಮವು ಶರೀರದಿಂದ ಬೇರೆಯಾಗಿ ಬಿಟ್ಟರೆ ಮತ್ತೆ ಶರೀರದೊಂದಿಗೆ ಪ್ರೀತಿಯಿರುವುದಿಲ್ಲ, ಆತ್ಮದೊಂದಿಗೇ ಪ್ರೀತಿಯಿರುತ್ತದೆ. ಆತ್ಮವು ಶರೀರದಲ್ಲಿದ್ದಾಗಲೇ ಆತ್ಮದಲ್ಲಿಯೂ ಪ್ರೀತಿಯಿರುತ್ತದೆ, ಪಿತೃಗಳನ್ನು ಕರೆಸುತ್ತಾರೆ. ಅವರ ಶರೀರವಂತೂ ಸಮಾಪ್ತಿಯಾಯಿತು ಆದರೆ ಅವರ ಆತ್ಮವನ್ನು ನೆನಪು ಮಾಡುತ್ತಾರೆ ಆದ್ದರಿಂದ ಬ್ರಾಹ್ಮಣರಲ್ಲಿ ಅವರ ಆತ್ಮವನ್ನು ಆಹ್ವಾನ ಮಾಡುತ್ತಾರೆ. ಇಂತಹವರ ಆತ್ಮವೇ ಬನ್ನಿ, ಈ ಭೋಜನವನ್ನು ಸ್ವೀಕಾರ ಮಾಡಿ ಎಂದು ಹೇಳುತ್ತಾರೆ ಅಂದರೆ ಆತ್ಮದಲ್ಲಿ ಮೋಹವಿರುತ್ತದೆ. ಆದರೆ ಮೊದಲು ಶರೀರದಲ್ಲಿ ಮೋಹವಿತ್ತು, ಆ ಶರೀರವು ನೆನಪಿಗೆ ಬರುತ್ತಿತ್ತು. ನಾವು ಆತ್ಮವನ್ನು ಕರೆಸುತ್ತೇವೆಂದು ತಿಳಿದುಕೊಳ್ಳುವುದಿಲ್ಲ ಆದರೆ ಎಲ್ಲವನ್ನೂ ಮಾಡುವುದೂ ಆತ್ಮವೇ. ಆತ್ಮದಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಅದರನಂತರ ಅನ್ಯ ವಿಕಾರಗಳು ಬರುತ್ತವೆ, ಎಲ್ಲವನ್ನೂ ಸೇರಿಸಿ ವಿಕಾರಿ ಎಂದು ಹೇಳಲಾಗುತ್ತದೆ. ಯಾರಲ್ಲಿ ಈ ವಿಕಾರ ಇರುವುದಿಲ್ಲವೋ ಅವರಿಗೆ ನಿರ್ವಿಕಾರಿ ಎಂದು ಹೇಳುತ್ತಾರೆ. ಇದನ್ನಂತೂ ತಿಳಿದುಕೊಂಡಿದ್ದೀರಿ – ಭಾರತದಲ್ಲಿ ದೇವಿ-ದೇವತೆಗಳಿದ್ದಾಗ ಅವರಲ್ಲಿ ದೈವೀ ಗುಣಗಳಿತ್ತು, ಈ ಲಕ್ಷ್ಮೀ-ನಾರಾಯಣರದೂ ದೇವಿ-ದೇವತಾ ಧರ್ಮವಾಗಿದೆ. ಹೇಗೆ ಕ್ರಿಶ್ಚಿಯನ್ ಧರ್ಮದಲ್ಲಿ ಸ್ತ್ರೀ ಅಥವಾ ಪುರುಷರೆಲ್ಲರೂ ಕ್ರಿಶ್ಚಿಯನ್ನರಾಗಿದ್ದಾರೆ, ಅದೇರೀತಿ ಇಲ್ಲಿಯೂ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ರಾಜ-ರಾಣಿ, ಪ್ರಜೆ ಎಲ್ಲರೂ ದೇವಿ-ದೇವತಾ ಧರ್ಮದವರಾಗಿದ್ದಾರೆ, ಇದು ಬಹಳ ಸುಖ ಕೊಡುವಂತಹ ಧರ್ಮವಾಗಿದೆ. ಮಕ್ಕಳು ಗೀತೆಯನ್ನೂ ಕೇಳಿದಿರಿ, ಬಾಬಾ, ನನ್ನನ್ನು ಸುಖ-ಶಾಂತಿಯಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಂದು ಆತ್ಮವೇ ಹೇಳಿತು. ಆ ಸ್ಥಳವಂತೂ ಸುಖಧಾಮ ಮತ್ತು ಶಾಂತಿಧಾಮವಾಗಿದೆ, ಇಲ್ಲಿ ಬಹಳ ಅಶಾಂತಿಯಿದೆ. ಸತ್ಯಯುಗದಲ್ಲಿ ಅಶಾಂತಿಯಿರುವುದಿಲ್ಲ. ಆತ್ಮಕ್ಕೆ ತಿಳಿದಿದೆ – ತಂದೆಯ ವಿನಃ ಬೇರೆಯಾರೂ ಸುಖದ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಆಗುವುದಿಲ್ಲ. ತಂದೆಯು ಹೇಳುತ್ತಾರೆ – ಮುಕ್ತಿ-ಜೀವನ್ಮುಕ್ತಿ ಇವೆರಡು ಉಡುಗೊರೆಗಳನ್ನು ಕಲ್ಪ-ಕಲ್ಪವೂ ತರುತ್ತೇನೆ ಆದರೆ ನೀವು ಮರೆತು ಹೋಗುತ್ತೀರಿ. ಡ್ರಾಮಾದಲ್ಲಿ ಎಲ್ಲವನ್ನೂ ಮರೆಯಲೇಬೇಕಾಗಿದೆ, ಎಲ್ಲವನ್ನೂ ಮರೆತಾಗಲೇ ನಾನು ಬರುವೆನು. ನೀವೀಗ ಬ್ರಾಹ್ಮಣರಾಗಿದ್ದೀರಿ, ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂದು ನಿಮಗೆ ನಿಶ್ಚಯವಿದೆ, ಯಾರು ಪೂರ್ಣ ಜ್ಞಾನವನ್ನು ಪಡೆದುಕೊಳ್ಳುವುದಿಲ್ಲವೋ ಅವರು ಮೊದಲ ಹೊಸ ಪ್ರಪಂಚದಲ್ಲಿಯೂ ಬರುವುದಿಲ್ಲ. ತ್ರೇತಾ ಅಥವಾ ತ್ರೇತಾಯುಗದ ಅಂತ್ಯದಲ್ಲಿ ಬರುವರು. ಎಲ್ಲವೂ ಪುರುಷಾರ್ಥದ ಮೇಲೆ ಅವಲಂಭಿತವಾಗಿದೆ, ಸತ್ಯಯುಗದಲ್ಲಿ ಸುಖವಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಒಳ್ಳೆಯದು – ಇದಕ್ಕೆ ಹಿಂದಿನ ಜನ್ಮದಲ್ಲಿ ಇವರು ಯಾರಾಗಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ಮೊದಲ ಜನ್ಮದಲ್ಲಿ ಇವರು ಬ್ರಾಹ್ಮಣರಾಗಿದ್ದರು, ಅದಕ್ಕೂ ಮೊದಲು ಶೂದ್ರರಾಗಿದ್ದರು. ನೀವು ವರ್ಣಗಳ ಮೇಲೆ ಬಹಳ ಚೆನ್ನಾಗಿ ತಿಳಿಸಬಹುದು.

ನೀವೀಗ ತಿಳಿದುಕೊಳ್ಳುತ್ತೀರಿ, ನಾವು 21 ಜನ್ಮಗಳಿಗಾಗಿ ಸುಖವನ್ನು ಪಡೆಯುತ್ತೇವೆ. ತಂದೆಯು ನಮಗೆ ಆ ಮಾರ್ಗವನ್ನು ತಿಳಿಸುತ್ತಿದ್ದಾರೆ. ನಾವೀಗ ಪತಿತರಾಗಿದ್ದೇವೆ ಆದ್ದರಿಂದ ಅಶಾಂತ, ದುಃಖಿಯಾಗಿದ್ದೇವೆ. ಎಲ್ಲಿ ಸಂತುಷ್ಟತೆಯಿರುವುದೋ ಅದಕ್ಕೆ ಸುಖ-ಶಾಂತಿ ಎಂದು ಹೇಳುವರು ಅಂದಾಗ ಈಗ ನೀವು ಮಕ್ಕಳ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಭಾರತವು ಎಷ್ಟು ಸುಖಿಯಾಗಿತ್ತು, ದುಃಖ ಅಥವಾ ಅಸಂತುಷ್ಟತೆಯ ಹೆಸರೇ ಇರಲಿಲ್ಲ, ನೀವೀಗ ಸ್ವರ್ಗದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವೀಗ ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ಅವರು ಆಸುರೀ ಸಂಪ್ರದಾಯದವರಾಗಿದ್ದಾರೆ. ಪಾಪಾತ್ಮರೆಂದು ಹೇಳುತ್ತಾರಲ್ಲವೆ. ಆತ್ಮರು ಅನೇಕರಿದ್ದಾರೆ, ಪರಮಾತ್ಮನು ಒಬ್ಬನೇ ಆಗಿದ್ದಾರೆ. ಎಲ್ಲರೂ ಸಹೋದರರಾಗಿದ್ದೀರಿ, ಎಲ್ಲರೂ ಪರಮಾತ್ಮರಾಗಲು ಸಾಧ್ಯವಿಲ್ಲ. ಇಷ್ಟು ಚಿಕ್ಕ ಮಾತೂ ಸಹ ಮನುಷ್ಯರ ಬುದ್ಧಿಯಲ್ಲಿಲ್ಲ. ತಂದೆಯು ತಿಳಿಸಿದ್ದಾರೆ – ಇಡೀ ಪ್ರಪಂಚವೇ ದೊಡ್ಡ ಬೇಹದ್ದಿನ ದ್ವೀಪವಾಗಿದೆ, ಅವು ಚಿಕ್ಕ-ಚಿಕ್ಕ ದ್ವೀಪಗಳಿರುತ್ತವೆ. ಈ ಬೇಹದ್ದಿನ ದ್ವೀಪದಲ್ಲಿ ರಾವಣ ರಾಜ್ಯವಿದೆ, ಈ ಮಾತುಗಳನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಅವರು ಕೇವಲ ಕಥೆಗಳನ್ನು ತಿಳಿಸುತ್ತಾ ಇರುತ್ತಾರೆ, ಕಥೆಗೆ ಜ್ಞಾನವೆಂದು ಹೇಳಲಾಗುವುದಿಲ್ಲ, ಅದರಿಂದ ಮನುಷ್ಯರು ಸದ್ಗತಿ ಪಡೆಯಲು ಸಾಧ್ಯವಿಲ್ಲ, ಜ್ಞಾನದಿಂದಲೇ ಸದ್ಗತಿ ಸಿಗುತ್ತದೆ. ಜ್ಞಾನ ಕೊಡುವವರು ಒಬ್ಬ ತಂದೆಯಾಗಿದ್ದಾರೆ ಮತ್ತ್ಯಾರೂ ಇಲ್ಲ. ಭಗವಂತನೇ ಬಂದು ಭಕ್ತರ ರಕ್ಷಣೆ ಮಾಡುತ್ತಾರೆ. ಮನುಷ್ಯರು ಮನುಷ್ಯರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ವಕೀಲನೂ ಆಗಿದ್ದಾರೆ ಏಕೆಂದರೆ ಯಮದೂತರ ಶಿಕ್ಷೆಗಳಿಂದ ಬಿಡಿಸುವವರಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ಜೈಲಿಗೆ ಹೋಗುವುದಿಲ್ಲ, ತಂದೆಯು ಎಲ್ಲರನ್ನೂ ಜೈಲಿನಿಂದ ಬಿಡಿಸುತ್ತಾರೆ. ಮಕ್ಕಳ ಎಲ್ಲಾ ಸರ್ವಶ್ರೇಷ್ಠ ಮನೋಕಾಮನೆಗಳು ಈಡೇರುತ್ತವೆ. ರಾವಣನ ಮೂಲಕ ಅಶುದ್ಧ ಕಾಮನೆಗಳು ಈಡೇರುತ್ತವೆ. ತಂದೆಯ ಮೂಲಕ ಶುದ್ಧ ಕಾಮನೆಗಳು ಪೂರ್ಣವಾಗುತ್ತವೆ. ಶುದ್ಧ ಕಾಮನೆಗಳು ಪೂರ್ಣವಾಗುವುದರಿಂದ ನೀವು ಸದಾ ಸುಖಿಯಾಗಿ ಬಿಡುತ್ತೀರಿ. ಪತಿತ ವಿಕಾರಿಯಾಗುವುದು ಅಶುದ್ಧ ಕಾಮನೆಯಾಗಿದೆ. ಪಾವನರಾಗಿರುವವರಿಗೆ ಬ್ರಹ್ಮಚಾರಿಗಳೆಂದು ಹೇಳಲಾಗುತ್ತದೆ. ನೀವೂ ಸಹ ಪವಿತ್ರರಾಗಿರಬೇಕಾಗಿದೆ, ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ. ತಂದೆಯೊಬ್ಬರೇ ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಸಾಧು-ಸನ್ಯಾಸಿಗಳೂ ಸಹ ವಿಕಾರದಿಂದ ಜನ್ಮ ಪಡೆಯುತ್ತಾರೆ, ದೇವತೆಗಳಿಗೆ ಈ ರೀತಿ ಹೇಳುವುದಿಲ್ಲ ಏಕೆಂದರೆ ಅಲ್ಲಿ ವಿಕಾರವಿರುವುದೇ ಇಲ್ಲ. ಅದು ಪಾವನ ಪ್ರಪಂಚವಾಗಿದೆ, ಲಕ್ಷ್ಮೀ-ನಾರಾಯಣರು ಸಂಪೂರ್ಣ ನಿರ್ವಿಕಾರಿಯಾಗಿದ್ದರು, ಭಾರತವು ಪವಿತ್ರವಾಗಿತ್ತು, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಪವಿತ್ರತೆಯಿದ್ದಾಗ ಸುಖ-ಶಾಂತಿಯಿತ್ತು, ಎಲ್ಲರೂ ಸುಖಿಯಾಗಿದ್ದರು. ಯಾವಾಗಿನಿಂದ ರಾವಣ ರಾಜ್ಯವಾಯಿತೋ ಆಗಿನಿಂದಲೇ ಇಳಿಯುತ್ತಾ ಬಂದಿದ್ದಾರೆ. ಈಗಂತೂ ಏನೂ ಪ್ರಯೋಜನಕ್ಕಿಲ್ಲ, ಒಮ್ಮೆಲೇ ಕವಡೆಯಂತಾಗಿ ಬಿಟ್ಟಿದ್ದೀರಿ, ಈಗ ಪುನಃ ತಂದೆಯ ಮೂಲಕ ವಜ್ರ ಸಮಾನರಾಗುತ್ತೀರಿ. ಭಾರತವು ಸತ್ಯಯುಗವಾಗಿದ್ದಾಗ ವಜ್ರ ಸಮಾನವಾಗಿತ್ತು, ಈಗಂತೂ ಕವಡೆಯ ತರಹವೂ ಇಲ್ಲ. ಯಾರಿಗೂ ತಮ್ಮ ಧರ್ಮದ ಬಗ್ಗೆ ಗೊತ್ತಿಲ್ಲ. ಪಾಪಗಳನ್ನು ಮಾಡುತ್ತಿರುತ್ತಾರೆ, ಸತ್ಯಯುಗದಲ್ಲಿ ಪಾಪದ ಹೆಸರೂ ಇರುವುದಿಲ್ಲ. ನೀವು ದೇವಿ-ದೇವತಾ ಧರ್ಮದವರು ಹೆಸರುವಾಸಿಯಾಗಿದ್ದೀರಿ, ದೇವತೆಗಳ ಅನೇಕ ಚಿತ್ರಗಳಿವೆ. ಅನ್ಯ ಧರ್ಮಗಳಲ್ಲಿ ನೋಡಿದರೆ ಒಂದೇ ಚಿತ್ರವಿರುತ್ತದೆ, ಕ್ರಿಶ್ಚಿಯನ್ನರ ಬಳಿ ಒಬ್ಬರೇ ಕ್ರೈಸ್ಟ್ನ ಚಿತ್ರವಿರುವುದು. ಬೌದ್ಧರ ಬಳಿ ಬುದ್ಧನ ಚಿತ್ರವಿರುವುದು. ಕ್ರಿಶ್ಚಿಯನ್ನರು ಕ್ರಿಸ್ತನನ್ನೇ ನೆನಪು ಮಾಡುತ್ತಾರೆ ಅವರನ್ನು ನನ್ಸ್ ಎಂದು ಹೇಳುತ್ತಾರೆ. ನನ್ಸ್ ಎಂದರೆ ಒಬ್ಬ ಕ್ರಿಸ್ತನನ್ನು ಬಿಟ್ಟರೆ ಮತ್ತ್ಯಾರೂ ಇಲ್ಲ, ಆದ್ದರಿಂದ ನನ್ ಬಟ್ ಕ್ರೈಸ್ಟ್ ಎಂದು ಹೇಳುತ್ತಾರೆ. ಬ್ರಹ್ಮಚಾರಿಗಳಾಗಿರುತ್ತಾರೆ, ನೀವೂ ಸಹ ನನ್ಸ್ ಆಗಿದ್ದೀರಿ, ನೀವು ತಮ್ಮ ಗೃಹಸ್ಥ ವ್ಯವಹಾರದಲ್ಲಿರುತ್ತಾ ನನ್ಸ್ ಆಗುತ್ತೀರಿ. ಒಬ್ಬ ತಂದೆಯನ್ನೇ ನೆನಪು ಮಾಡುತ್ತೀರಿ, ನನ್ ಬಟ್ ಒನ್, ಒಬ್ಬ ಶಿವ ತಂದೆಯ ವಿನಃ ಅನ್ಯ ಯಾರೂ ಇಲ್ಲ. ಅವರ ಬುದ್ಧಿಯಲ್ಲಾದರೂ ಇಬ್ಬರು ಬಂದು ಬಿಡುತ್ತಾರೆ, ಕ್ರಿಸ್ತನನ್ನು ಭಗವಂತನ ಮಗುವೆಂದು ತಿಳಿಯುತ್ತಾರೆ ಆದರೆ ಅವರಿಗೆ ಭಗವಂತನ ಜ್ಞಾನವಿಲ್ಲ, ನೀವು ಮಕ್ಕಳಿಗೇ ಜ್ಞಾನವಿದೆ. ಇಡೀ ಪ್ರಪಂಚದಲ್ಲಿ ಪರಮಾತ್ಮನ ಜ್ಞಾನವಿರುವಂತಹ ಮನುಷ್ಯರು ನಿಮ್ಮ ವಿನಃ ಯಾರೂ ಇಲ್ಲ. ಪರಮಾತ್ಮನು ಎಲ್ಲಿರುತ್ತಾರೆ? ಯಾವಾಗ ಬರುತ್ತಾರೆ? ಅವರ ಪಾತ್ರವೇನು ಎಂಬುದು ಯಾರಿಗೂ ತಿಳಿದಿಲ್ಲ. ಭಗವಂತನಿಗೆ ಎಲ್ಲವನ್ನೂ ಬಲ್ಲವರೆಂದು ಹೇಳುತ್ತಾರೆ, ಇದರಿಂದ ಅವರು ನಮ್ಮ ಹೃದಯದ ಮಾತನ್ನು ತಿಳಿದುಕೊಳ್ಳುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ತಂದೆಯು ಹೇಳುತ್ತಾರೆ – ನಾನು ಪ್ರತಿಯೊಬ್ಬರ ಹೃದಯದಲ್ಲಿ ಕುಳಿತು ಅವರ ಒಳಹೊಕ್ಕು ನೋಡಲು ನನಗೇಕೆ ಬೇಕು? ನಾನು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತೇನೆ. ಒಂದುವೇಳೆ ಯಾರಾದರೂ ಪವಿತ್ರವಾಗಿರುವುದಿಲ್ಲ, ಅಸತ್ಯವನ್ನು ಹೇಳುತ್ತಾರೆಂದರೆ ತಮಗೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ. ದೇವತೆಗಳ ಸಭೆಯಲ್ಲಿ ಅಸುರರು ಹೋಗಿ ಕುಳಿತುಕೊಳ್ಳುತ್ತಿದ್ದರು, ಅಲ್ಲಿ ಅಮೃತವನ್ನು ಹಂಚಲಾಗುತ್ತಿತ್ತು, ಯಾರೋ ವಿಕಾರದಲ್ಲಿ ಹೋಗಿ ಮತ್ತೆ ಬಚ್ಚಿಟ್ಟುಕೊಂಡು ಬಂದು ಕುಳಿತುಕೊಂಡರು ಆದ್ದರಿಂದ ಅವರು ಅಸುರರಾಗಿ ಬಿಟ್ಟರು ಎಂದು ಗಾಯನವಿದೆ ಅಂದರೆ ತಾವೇ ತಮ್ಮ ಪದವಿಯನ್ನು ಭ್ರಷ್ಟ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಪುರುಷಾರ್ಥ ಮಾಡಬೇಕಾಗಿದೆ, ಇಲ್ಲವಾದರೆ ತಮ್ಮದೇ ಸತ್ಯ ನಾಶ ಮಾಡಿಕೊಳ್ಳುವರು. ಅನೇಕರು ಹೀಗೆ ಬಚ್ಚಿಟ್ಟುಕೊಂಡು ಕುಳಿತುಕೊಳ್ಳುತ್ತಾರೆ, ನಾವು ವಿಕಾರದಲ್ಲಿ ಹೋಗುವುದಿಲ್ಲವೆಂದು ಹೇಳುತ್ತಾರೆ ಆದರೆ ವಿಕಾರದಲ್ಲಿ ಹೋಗುತ್ತಿರುತ್ತಾರೆ. ಹೀಗೆ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾರೆ. ತಮ್ಮದೇ ಸತ್ಯ ನಾಶ ಮಾಡಿಕೊಳ್ಳುತ್ತಾರೆ, ಪರಮಪಿತ ಪರಮಾತ್ಮನ ಬಲಭುಜ ಧರ್ಮರಾಜನಾಗಿದ್ದಾರೆ. ಧರ್ಮರಾಜನ ಮುಂದೆ ಸುಳ್ಳು ಹೇಳಿದರೆ ತಾವೇ ಶಿಕ್ಷೆಗೆ ಭಾಗಿಗಳಾಗುತ್ತಾರೆ. ಬಹಳಷ್ಟು ಸೇವಾಕೇಂದ್ರಗಳಲ್ಲಿಯೂ ಇಂತಹವರಿರುತ್ತಾರೆ. ತಂದೆಯು ಯಾವಾಗ ಮೊದಲ ಬಾರಿ ದೆಹಲಿಗೆ ಹೋಗಿದ್ದಾಗ ಒಬ್ಬ ವ್ಯಕ್ತಿಯು ನಿತ್ಯವೂ ಬರುತ್ತಿದ್ದರು ಮತ್ತು ವಿಕಾರದಲ್ಲಿ ಹೋಗುತ್ತಿದ್ದರು. ಪವಿತ್ರರಾಗಿ ಇರಲು ಸಾಧ್ಯವಿಲ್ಲವೆಂದರೆ ತಾವೇಕೆ ಬರುತ್ತೀರಿ ಎಂದು ಕೇಳಲಾಯಿತು, ಆಗ ಅವರು ಈ ರೀತಿ ಹೇಳಿದರು – ನಾನು ಬರದಿದ್ದರೆ ಮುಂದೆ ಹೇಗೆ ನಿರ್ವಿಕಾರಿಯಾಗುವೆನು? ಪವಿತ್ರತೆಯು ಇಷ್ಟವಾಗುತ್ತದೆ ಆದರೆ ಪವಿತ್ರವಾಗಿರಲು ಸಾಧ್ಯವಾಗುತ್ತಿಲ್ಲ, ಕೊನೆಗೊಂದು ದಿನ ಸುಧಾರಣೆಯಾಗುವೆನು, ಒಂದುವೇಳೆ ಬರುವುದನ್ನು ಬಿಟ್ಟರೆ ನನ್ನ ದೋಣಿಯು ಸಿಕ್ಕಿಹಾಕಿಕೊಳ್ಳುವುದು. ಮತ್ತ್ಯಾವುದೇ ಮಾರ್ಗವೂ ಇಲ್ಲ ಆದ್ದರಿಂದ ನಾನು ಇಲ್ಲಿಗೆ ಬರಬೇಕಾಗುತ್ತದೆ ಎಂದರು.

ತಂದೆಯು ತಿಳಿಸುತ್ತಾರೆ – ನೀವು ವಾಯುಮಂಡಲವನ್ನು ಹಾಳು ಮಾಡುತ್ತೀರಿ, ಎಲ್ಲಿಯವರೆಗೆ ಈ ರೀತಿ ಬರುತ್ತಾ ಇರುತ್ತೀರಿ! ಯಾರು ಪಾವನರಾಗುವರೋ ಅವರಿಗೆ ಪತಿತರೊಂದಿಗೆ ತಿರಸ್ಕಾರ ಬರುತ್ತದೆ. ಬಾಬಾ, ಇವರ ಕೈಯಿಂದ ತಯಾರಿಸಿದ ಆಹಾರವೂ ಇಷ್ಟವಾಗುವುದಿಲ್ಲವೆಂದು ಹೇಳುತ್ತಾರೆ. ತಂದೆಯು ಯುಕ್ತಿಯನ್ನೂ ತಿಳಿಸಿದ್ದಾರೆ – ಆಹಾರ-ಪಾನೀಯಗಳ ವಿಷಯಗಳಲ್ಲಿ ಕಿರಿಕಿರಿಯಾದರೆ ನೌಕರಿಯನ್ನೇ ಬಿಟ್ಟು ಬಿಡುತ್ತೇವೆಂದು ಹೇಳುವುದಲ್ಲ, ಯುಕ್ತಿಯಿಂದ ನಡೆಯಬೇಕಾಗುತ್ತದೆ. ಯಾರಿಗಾದರೂ ತಿಳಿಸಿದರೆ ಅವರು ಮುನಿಸಿಕೊಳ್ಳುತ್ತಾರೆ. ಹೇಗೆ ಪವಿತ್ರರಾಗಿರುವುದು! ಇದನ್ನು ಎಂದೂ ಕೇಳಿರುವುದೂ ಇಲ್ಲ, ಸನ್ಯಾಸಿಗಳೂ ಇರಲು ಸಾಧ್ಯವಿಲ್ಲ. ಯಾವಾಗ ಮನೆ-ಮಠಗಳನ್ನು ಬಿಟ್ಟು ಹೋಗುವರೋ ಆಗ ಪವಿತ್ರರಾಗಿರಲು ಸಾಧ್ಯ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇಲ್ಲಿ ಪತಿತ-ಪಾವನ, ಪರಮಪಿತ ಪರಮಾತ್ಮನೇ ಓದಿಸುತ್ತಾರೆಂದು ತಿಳಿದಿಲ್ಲ, ನಂಬುವುದಿಲ್ಲ ಆದ್ದರಿಂದ ವಿರೋಧ ಮಾಡುತ್ತಾರೆ. ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ ಎಂಬುದು ಯಾವುದೇ ಶಾಸ್ತ್ರದಲ್ಲಾದರೂ ತೋರಿಸಿ ಎನ್ನುತ್ತಾರೆ. ಇದಂತೂ ಗೀತೆಯಲ್ಲಿ ಬರೆಯಲ್ಪಟ್ಟಿದೆ – ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ. ಅವರು (ಬ್ರಹ್ಮಾ) ತನ್ನ ಜನ್ಮಗಳನ್ನೇ ಅರಿತುಕೊಂಡಿಲ್ಲ. ಇದಂತೂ ಬರೆಯಲ್ಪಟ್ಟಿದೆ ಅಂದಮೇಲೆ ಪರಮಾತ್ಮನು ಮನುಷ್ಯನ ತನುವಿನಲ್ಲಿ ಹೇಗೆ ಬರುತ್ತಾರೆಂದು ನೀವು ಹೇಗೆ ಹೇಳುವಿರಿ! ಪತಿತತನುವಿನಲ್ಲಿಯೇ ಬಂದು ಮಾರ್ಗವನ್ನು ತಿಳಿಸುತ್ತಾರಲ್ಲವೆ. ಮೊದಲೂ ಸಹ ಬಂದಿದ್ದರು ಮತ್ತು ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ತಿಳಿಸಿದ್ದರು, ಅವರೇ ಪರಮಧಾಮದಲ್ಲಿರುತ್ತಾರೆ ಮತ್ತು ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಹೇಳುತ್ತಾರೆ. ಕೃಷ್ಣನ ಶರೀರವಂತೂ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳಲು ಮೂಲ ವತನದಲ್ಲಿ ಇರುವುದಿಲ್ಲ, ಒಬ್ಬ ಪರಮಪಿತ ಪರಮಾತ್ಮನೇ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಈ ಯೋಗಾಗ್ನಿಯಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ ಆದ್ದರಿಂದಲೇ ನನಗೆ ಪತಿತ-ಪಾವನನೆಂದು ಹೇಳುತ್ತಾರೆ. ಅವಶ್ಯವಾಗಿ ಆತ್ಮರ ಪತಿತ-ಪಾವನನೇ ಆಗಿರಬೇಕಲ್ಲವೆ. ಆತ್ಮವೇ ಪತಿತನಾಗುತ್ತದೆ.

ತಂದೆಯು ತಿಳಿಸುತ್ತಾರೆ – ನೀವು ಪವಿತ್ರ ಆತ್ಮರು 16 ಕಲಾ ಸಂಪೂರ್ಣರಾಗಿದ್ದಿರಿ, ಈಗ ಕಲಾಹೀನ, ಪತಿತರಾಗಿ ಬಿಟ್ಟಿದ್ದೀರಿ. ನಾನು ಕಲ್ಪ-ಕಲ್ಪವೂ ಬಂದು ನಿಮಗೆ ತಿಳಿಸುತ್ತೇನೆ. ನೀವು ಕಾಮ ಚಿತೆಯ ಮೇಲೆ ಕುಳಿತು ಪತಿತರಾಗಿ ಬಿಡುತ್ತೀರಿ ನಂತರ ಜ್ಞಾ ನಚಿತೆಯ ಮೇಲೆ ಕೂರಿಸಿ ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ. ಭಾರತದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಅಪವಿತ್ರ ಪ್ರವೃತ್ತಿ ಮಾರ್ಗವಾಗಿದೆ, ಯಾರಿಗೂ ಸುಖವಿಲ್ಲ. ತಂದೆಯು ತಿಳಿಸುತ್ತಾರೆ – ಇಬ್ಬರೂ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿರಿ. ಆತ್ಮರಿಗೆ ತಮ್ಮ-ತಮ್ಮ ಕರ್ಮಗಳನುಸಾರ ಶರೀರಗಳು ಸಿಗುತ್ತವೆ. ಇನ್ನೊಂದು ಜನ್ಮದಲ್ಲಿಯೂ ಅದೇ ಪತಿ-ಪತ್ನಿಯು ಪರಸ್ಪರ ಸೇರುತ್ತಾರೆಂದಲ್ಲ. ಇಷ್ಟೊಂದು ರೇಸ್ ಮಾಡಲು ಸಾಧ್ಯವಿಲ್ಲ, ಇದು ವಿದ್ಯೆಯ ಮಾತಲ್ಲವೆ. ಅಜ್ಞಾನ ಕಾಲದಲ್ಲಿ ಇದು ಆಗಬಹುದು, ಪರಸ್ಪರ ಬಹಳ ಪ್ರೇಮವಿದ್ದರೆ ಅವರ ಮನೋಕಾಮನೆಗಳು ಪೂರ್ಣವಾಗಬಹುದು. ಅದಂತೂ ಪತಿತ ವಿಕಾರಿ ಮಾರ್ಗವಾಗಿದೆ. ಪತಿಯ ಹಿಂದೆ ಪತ್ನಿಯು ಚಿತೆಯ ಮೇಲೆ ಕುಳಿತುಕೊಳ್ಳುತ್ತಾಳೆ. ನಂತರದ ಜನ್ಮದಲ್ಲಿಯೂ ಹೋಗಿ ಅವರನ್ನು ಸೇರುತ್ತಾರೆ ಆದರೆ ನಂತರದ ಜನ್ಮದಲ್ಲಿ ಅವರಿಗೆ ಇದೆಲ್ಲವೂ ಅರ್ಥವಾಗುವುದಿಲ್ಲ. ನೀವೂ ಸಹ ತಂದೆಯ ಜೊತೆ ಜ್ಞಾನ ಚಿತೆಯನ್ನೇರುತ್ತೀರಿ. ಈ ಛೀ ಛೀ ಶರೀರವನ್ನು ಬಿಟ್ಟು ಹೊರಟು ಹೋಗುತ್ತೀರಿ. ನಿಮಗೆ ಇದು ಈಗ ಅರ್ಥವಾಗಿದೆ, ನಾವು ಹಿಂದಿನ ಜನ್ಮದಲ್ಲಿ ಇದೇರೀತಿ ಜೊತೆಗಾರರಾಗಿದ್ದೆವು ಎಂಬುದು ಅವರಿಗಂತೂ ತಿಳಿದಿರುವುದಿಲ್ಲ. ನಿಮಗೂ ಸಹ ನಂತರದಲ್ಲಿ ಈ ಮಾತುಗಳು ನೆನಪಿರುವುದಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಗುರಿ-ಧ್ಯೇಯವಿದೆ, ಮಮ್ಮಾ-ಬಾಬಾರವರೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ವಿಷ್ಣು ದೇವತೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿಗೆ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ಬ್ರಹ್ಮನೇ ನಂತರ ದೇವತೆಯಾಗುತ್ತಾರೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮ ಹೇಗಾಗುತ್ತಾರೆಂದು ನೀವೀಗ ತಿಳಿದುಕೊಂಡಿದ್ದೀರಿ. ನಿಮಗೆ ಇದೂ ಸಹ ತಿಳಿದಿದೆ – ಸುಖವು ಕೇವಲ ಸ್ವರ್ಗದಲ್ಲಿಯೇ ಇರುತ್ತದೆ, ಯಾರಾದರೂ ಶರೀರ ಬಿಟ್ಟರೆ ಸ್ವರ್ಗಕ್ಕೆ ಹೋದರು ಅರ್ಥಾತ್ ಸುಖದಲ್ಲಿ ಹೋದರೆಂದು ಹೇಳುತ್ತಾರೆ. ದುಃಖದಲ್ಲಿ ಪತಿತರಿರುತ್ತಾರೆ. ತಂದೆಯು ಪುನಃ ಇದನ್ನೇ ಹೇಳುತ್ತಾರೆ – ಮಕ್ಕಳೇ, ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಉಳಿದೆಲ್ಲವೂ ವಿವರವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ಜ್ಞಾನ ಪೂರ್ಣನಾಗಿರುವುದರಿಂದ ನಿಮ್ಮನ್ನೂ ತನ್ನಂತೆಯೇ ಜ್ಞಾನ ಪೂರ್ಣರನ್ನಾಗಿ ಮಾಡುತ್ತಾರೆ. ತಂದೆಯ ನೆನಪಿನಿಂದ ನೀವು ಸತೋಪ್ರಧಾನರಾಗುತ್ತೀರಿ. ಇದು ಆತ್ಮರ ರೇಸ್ ಆಗಿದೆ. ಯಾರು ಹೆಚ್ಚು ನೆನಪು ಮಾಡುವರೋ ಅವರು ಬೇಗನೆ ಆಗುತ್ತಾರೆ. ಇದು ಯೋಗ ಮತ್ತು ವಿದ್ಯೆಯ ರೇಸ್ ಆಗಿದೆ. ಶಾಲೆಯಲ್ಲಿಯೂ ಸ್ಪರ್ಧೆಯಿರುತ್ತದೆಯಲ್ಲವೆ. ಅನೇಕ ಮಂದಿ ವಿದ್ಯಾರ್ಥಿಗಳಿರುತ್ತಾರೆ, ಅವರಲ್ಲಿ ಯಾರು ನಂಬರ್ವನ್ ಬರುವರೋ ಅವರಿಗೆ ವಿದ್ಯಾರ್ಥಿವೇತನವು ಸಿಗುತ್ತದೆ. ಲಕ್ಷಾಂತರ, ಕೋಟ್ಯಾಂತರ ವಿದ್ಯಾರ್ಥಿಗಳಿಗೂ ಒಂದೇ ವಿದ್ಯೆಯಿರುತ್ತದೆ ಅಂದಮೇಲೆ ಇಷ್ಟೊಂದು ಶಾಲೆಗಳು ಇರುತ್ತವೆಯಲ್ಲವೆ. ಈಗ ನೀವು ಈ ವಿದ್ಯೆಯನ್ನು ಓದಬೇಕಾಗಿದೆ. ಎಲ್ಲರಿಗೆ ಮಾರ್ಗವನ್ನು ತಿಳಿಸಿರಿ, ಅಂಧರಿಗೆ ಊರುಗೋಲಾಗಿರಿ. ಮನೆ-ಮನೆಯಲ್ಲಿ ಸಂದೇಶವನ್ನು ತಲುಪಿಸಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗ ಅಶುದ್ಧ ಕಾಮನೆಗಳ ತ್ಯಾಗ ಮಾಡಿ ಶುದ್ಧ ಕಾಮನೆಗಳನ್ನು ಇಟ್ಟುಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ಶುದ್ಧ ಕಾಮನೆಯಾಗಿದೆ, ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕು ಎಂಬುದು. ಯಾವುದೇ ತಪ್ಪನ್ನು ಮುಚ್ಚಿಟ್ಟು ತಮಗೆ ತಾವು ಮೋಸ ಮಾಡಿಕೊಳ್ಳಬಾರದು. ಧರ್ಮರಾಜ ತಂದೆಯೊಂದಿಗೆ ಸದಾ ಸತ್ಯವಾಗಿರಬೇಕಾಗಿದೆ.

2. ಜ್ಞಾನ ಚಿತೆಯ ಮೇಲೆ ಕುಳಿತು ಈ ವಿದ್ಯೆಯಲ್ಲಿ ರೇಸ್ ಮಾಡಿ ಭವಿಷ್ಯ ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಯೋಗಾಗ್ನಿಯಿಂದ ವಿಕರ್ಮಗಳ ಖಾತೆಯನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಸತ್ಯತೆಯ ಅಧಿಕಾರಿ ಸ್ವರೂಪ ಮಕ್ಕಳ ಮಹಿಮೆಯಿದೆ – ಸತ್ಯವಾಗಿರುವವರು ನರ್ತಿಸುತ್ತಿರುತ್ತಾರೆ. ಸತ್ಯದ ದೋಣಿಯು ಅಲುಗಾಡುವುದು ಆದರೆ ಮುಳುಗಲು ಸಾಧ್ಯವಿಲ್ಲ. ತಮ್ಮನ್ನು ಯಾರೆಷ್ಟಾದರೂ ಅಲುಗಾಡಿಸಲು (ವಿಚಲಿತ) ಪ್ರಯತ್ನಿಸಲಿ ಆದರೆ ತಾವು ಸತ್ಯತೆಯ ಮಹಾನತೆಯಿಂದ ಅತಿ ಹೆಚ್ಚು ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರಿ. ಅವರು ತಮ್ಮನ್ನು ಅಲುಗಾಡಿಸುವುದಿಲ್ಲ ಆದರೆ ಉಯ್ಯಾಲೆಯನ್ನು ಅಲುಗಾಡಿಸುತ್ತಾರೆ. ಇದು ಅಲುಗಾಡುವುದಲ್ಲ ಆದರೆ ತೂಗುವುದಾಗಿದೆ ಆದ್ದರಿಂದ ತಾವು ಅವರಿಗೆ ಧನ್ಯವಾದಗಳನ್ನು ಕೊಡಿ – ತಾವು ತೂಗಿರಿ ಮತ್ತು ನಾವು ತಂದೆಯ ಜೊತೆ ತೂಗುತ್ತೇವೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top