09 September 2021 KANNADA Murli Today | Brahma Kumaris

Read and Listen today’s Gyan Murli in Kannada

September 8, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ನೀವು ಬುದ್ಧಿವಂತರಾಗಿದ್ದೀರೆಂದರೆ ಸಂಪಾದನೆಯ ಬಹಳ-ಬಹಳ ಉಮ್ಮಂಗವಿರಬೇಕು, ಉದ್ಯೋಗ-ವ್ಯವಹಾರಗಳಿಂದಲೂ ಸಮಯವನ್ನು ತೆಗೆದು ತಂದೆಯನ್ನು ನೆನಪು ಮಾಡಿರಿ ಆಗ ಸಂಪಾದನೆಯಾಗುತ್ತಾ ಇರುವುದು''

ಪ್ರಶ್ನೆ:: -

ನೀವು ಮಕ್ಕಳಿಗೆ ಈಗ ಅಂತಹ ಯಾವ ಶ್ರೀಮತ ಸಿಕ್ಕಿದೆ ಅದು ಮತ್ತೆಂದೂ ಸಿಗುವುದಿಲ್ಲ?

ಉತ್ತರ:-

ಈ ಸಮಯದಲ್ಲಿ ತಂದೆಯು ನಿಮಗೆ ಶ್ರೀಮತ ಕೊಡುತ್ತಾರೆ – ಮಧುರ ಮಕ್ಕಳೇ, ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ ಆಗ ಪೂರ್ಣ ಆಸ್ತಿಯು ಸಿಗುವುದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಿರಿ, ಇಂತಹ ಶ್ರೀಮತವು ಅನ್ಯ ಸತ್ಸಂಗಗಳಲ್ಲಿ ಎಂದೂ ಸಿಗಲು ಸಾಧ್ಯವಿಲ್ಲ. ಆ ಸತ್ಸಂಗಗಳಲ್ಲಿ ತಂದೆ ಮತ್ತು ಆಸ್ತಿಯ ಮಾತಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವೇ ಮಾತಾ-ಪಿತಾ ಆಗಿದ್ದೀರಿ…..

ಓಂ ಶಾಂತಿ. ವಿಶೇಷವಾಗಿ ಈ ಭಾರದಲ್ಲಿ ಇಡೀ ಪ್ರಪಂಚದಲ್ಲಿ ಅನೇಕ ಪ್ರಕಾರದ ಸತ್ಸಂಗಗಳಿರುತ್ತವೆ. ನಾವು ಈ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂದು ಮನುಷ್ಯರ ಬುದ್ಧಿಯಲ್ಲಿರುವಂತಹ ಯಾವುದೇ ಸತ್ಸಂಗ ಅಥವಾ ಚರ್ಚ್ ಅಥವಾ ಮಂದಿರ ಮತ್ತ್ಯಾವುದೂ ಇರುವುದಿಲ್ಲ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ಎಲ್ಲಾ ಸೇವಾಕೇಂದ್ರಗಳಲ್ಲಿ ತಮ್ಮ ಬೇಹದ್ದಿನ ತಂದೆಯ ನೆನಪಿನಲ್ಲಿ ಈ ವಿಚಾರದಿಂದ ಕುಳಿತಿದ್ದಾರೆ – ನಾವು ನಮ್ಮ ತಂದೆಯಿಂದ ಸುಖಧಾಮದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಈ ರೀತಿ ಮತ್ತ್ಯಾವುದೇ ಸತ್ಸಂಗ ಅಥವಾ ಚರ್ಚ್ ಇತ್ಯಾದಿಗಳಲ್ಲಿ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿಯೇ ಇದೆ. ನೀವು ತಿಳಿದುಕೊಂಡಿದ್ದೀರಿ – ನಾವು ಬೇಹದ್ದಿನ ತಂದೆಯ ನೆನಪಿನಲ್ಲಿ ಕುಳಿತಿದ್ದೇವೆ. ಹೊಸ ಪ್ರಪಂಚ ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಎಲ್ಲಾ ಮಕ್ಕಳು ಒಬ್ಬ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದಾರೆ. ಇಷ್ಟೊಂದು ಮಕ್ಕಳು ವೃದ್ಧಿಯಾಗುತ್ತಲೇ ಇರುತ್ತಾರೆ. ಎಲ್ಲರಿಗೆ ಶ್ರೀಮತ ಸಿಗುತ್ತಿದೆ, ಮುಂಜಾನೆ ಎದ್ದು ನೆನಪು ಮಾಡಿರಿ. ನಾವು ತಂದೆಯಿಂದ ಈ ಆಸ್ತಿಯನ್ನು ತೆಗೆದುಕೊಳ್ಳುವವರಿದ್ದೇವೆ, ನಾವು ಅವರ ಮಕ್ಕಳಾಗಿದ್ದೇವೆ. ಇದು ಈಗ ಆತ್ಮಕ್ಕೆ ತಂದೆಯಿಂದ ಪರಿಚಯ ಸಿಕ್ಕಿದೆ. ತಂದೆಯು ಸಲಹೆ ನೀಡುತ್ತಾರೆ – ನನ್ನನ್ನು ನೆನಪು ಮಾಡಿರಿ ಮತ್ತು ಗೃಹಸ್ಥ ವ್ಯವಹಾರದಲ್ಲಿರುತ್ತ ಕಮಲಪುಷ್ಫ ಸಮಾನ ಪವಿತ್ರರಾಗಿ ಇರಿ. ಎಲ್ಲರೂ ಇಲ್ಲಿ ಬಂದು ಇರಲು ಸಾಧ್ಯವಿಲ್ಲ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹೋಗಿ ಮತ್ತೆ ತಮ್ಮ-ತಮ್ಮ ಮನೆಗೆ ಹೊರಟು ಹೋಗುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ತಮ್ಮ ಶಿಕ್ಷಕರಿಂದ ಆಸ್ತಿಯನ್ನು ಪಡೆಯುತ್ತಾರೆ, ಇಲ್ಲಿಯೂ ಹಾಗೆಯೇ ಪ್ರತಿನಿತ್ಯವೂ ಓದಿ ಮತ್ತೆ ಮನೆಗೆ ಹೋಗಿ ಉದ್ಯೋಗ-ವ್ಯವಹಾರ ಇತ್ಯಾದಿಗಳನ್ನು ಮಾಡಿರಿ. ನೀವು ಗೃಹಸ್ಥ ವ್ಯವಹಾರದಲ್ಲಿಯೂ ಇದ್ದೀರಿ ಮತ್ತು ವಿದ್ಯಾರ್ಥಿಗಳೂ ಆಗಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಆಗಿರಬೇಕಾಗಿದೆ. ಈ ರೀತಿ ಮತ್ತ್ಯಾವುದೇ ಸನ್ಯಾಸಿ ಮೊದಲಾದವರು ಹೇಳುವುದಿಲ್ಲ. ನೀವಿಲ್ಲಿ ಪ್ರತ್ಯಕ್ಷದಲ್ಲಿ ಕುಳಿತಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಪವಿತ್ರರಾಗುತ್ತೀರಿ. ಪವಿತ್ರರಾಗಿ ಪರಮಪಿತ ಪರಮಾತ್ಮನನ್ನು ಮತ್ತ್ಯಾರೂ ನೆನಪು ಮಾಡುವುದಿಲ್ಲ. ಭಲೆ ಗೀತೆಯನ್ನು ಕೇಳುತ್ತಾರೆ, ಓದುತ್ತಾರೆ ಆದರೆ ನೆನಪು ಮಾಡುವುದಿಲ್ಲ ಅಲ್ಲವೆ. ನುಡಿಯುವುದು ಮತ್ತು ನಡೆಯುವುದರಲ್ಲಿ ಅಂತರವಿರುತ್ತದೆ. ನೀವು ತಿಳಿದುಕೊಂಡಿದ್ದೀರಿ – ನಮ್ಮ ತಂದೆಯು ಜ್ಞಾನಪೂರ್ಣನಾಗಿದ್ದಾರೆ. ಅವರಲ್ಲಿ ಇಡೀ ಡ್ರಾಮಾ ಚಕ್ರದ ಜ್ಞಾನವಿದೆ. ಈಗ ನಮಗೂ ಜ್ಞಾನ ಸಿಗುತ್ತಿದೆ, ಈ ಚಕ್ರವು ಬಹಳ ಚೆನ್ನಾಗಿದೆ. ಇದು ಪುರುಷೋತ್ತಮ ಯುಗವಾಗಿರುವ ಕಾರಣ ನಿಮ್ಮ ಈ ಜನ್ಮವು ಪುರುಷೋತ್ತಮವಾಗಿದೆ. ಅಧಿಕ ಮಾಸವಿರುತ್ತದೆ ಅಲ್ಲವೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ತಂದೆಯಿಂದ ಪುರುಷೋತ್ತಮರಾಗುತ್ತಿದ್ದೇವೆ. ನಾವು ಪುನಃ ಮರ್ಯಾದಾ ಪುರುಷೋತ್ತಮರಾಗುತ್ತಿದ್ದೇವೆ. 84 ಜನ್ಮಗಳ ಚಕ್ರವನ್ನು ಸುತ್ತಿದೆವು ಎಂಬುದು ಬುದ್ಧಿಯಲ್ಲಿ ಜ್ಞಾನವಿದೆ, ಮತ್ತ್ಯಾವುದೇ ಸತ್ಸಂಗಗಳಲ್ಲಿ ಇದನ್ನು ತಿಳಿಸುವುದಿಲ್ಲ. ನಾವು ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕೆಂದು ನೀವು ತಿಳಿದುಕೊಳ್ಳುತ್ತೀರಿ. ಅವರಂತೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಈ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಅವಶ್ಯವಾಗಿ ಬ್ರಹ್ಮನ ಮೂಲಕ ಯೋಗಬಲದಿಂದ ಇವರು ಈ ಪದವಿಯನ್ನು ಪಡೆದಿದ್ದಾರೆ. ಹೀಗೆ ಬುದ್ಧಿಯಲ್ಲಿ ಇಮರ್ಜ್ ಮಾಡಿಕೊಳ್ಳಬೇಕು. ಬ್ರಹ್ಮಾ-ಸರಸ್ವತಿ, ಲಕ್ಷ್ಮೀ-ನಾರಾಯಣರ ಎರಡೂ ರೂಪಗಳನ್ನು ತೋರಿಸಿದ್ದಾರೆ. ಬ್ರಹ್ಮಾ-ಸರಸ್ವತಿ ಮತ್ತು ಪ್ರಜೆಗಳನ್ನೂ ತೋರಿಸಬೇಕಾಗಿದೆ. ಪ್ರತಿಯೊಂದು ಮಾತಿನ ಮೇಲೆ ಬಹಳ ಚೆನ್ನಾಗಿ ವಿಚಾರ ಮಾಡಬೇಕು. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ, ನನ್ನನ್ನು ನೆನಪು ಮಾಡಿದರೆ ನೀವು ಈ ರೀತಿಯಾಗುತ್ತೀರಿ ಎಂದು ಈ ಬ್ರಹ್ಮಾರವರಿಗೂ ಹೇಳುತ್ತಾರೆ. ಬ್ರಹ್ಮಾ ಮುಖವಂಶಾವಳಿಯಾದ ಎಲ್ಲರಿಗೂ ನನ್ನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ. ಹೇಗೆ ನೆನಪು ಮಾಡಬೇಕಾಗಿದೆ ಎಂಬುದೂ ಸಹ ಬುದ್ಧಿಯಲ್ಲಿದೆ. ಚಿತ್ರಗಳನ್ನೂ ಸನ್ಮುಖದಲ್ಲಿ ಇಡಲಾಗಿದೆ. ಇದರ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ತಂದೆಯ ಪರಿಚಯ ಕೊಡಬೇಕಾಗಿದೆ. ಪ್ರದರ್ಶನಿಯಲ್ಲಿಯೂ ಇದರ ಮೇಲೆ ತಿಳಿಸಿಕೊಡಿ, ಈ ನಿಶ್ಚಯ ಕುಳಿತುಕೊಳ್ಳುತ್ತದೆ – ಅವಶ್ಯವಾಗಿ ಇವರು ಎಲ್ಲರ ಬೇಹದ್ದಿನ ತಂದೆಯಾಗಿದ್ದಾರೆ. ಈ ಲೆಕ್ಕದಿಂದ ನಮಗೆ ಬೇಹದ್ದಿನ ಆಸ್ತಿಯು ಸಿಗಬೇಕಾಗಿದೆ. ನಾವು ನಿರಾಕಾರಿ ಆತ್ಮರು ಸಹೋದರ-ಸಹೋದರರಾಗಿದ್ದೇವೆ, ಸಾಕಾರದಲ್ಲಿ ಬಂದಾಗ ಸಹೋದರ-ಸಹೋದರಿಯರಾಗುತ್ತೇವೆ ಆಗಲೇ ಓದಲು ಸಾಧ್ಯ. ಸಹೋದರ-ಸಹೋದರಿಯರಾಗುವುದು ಬ್ರಹ್ಮನ ಮಕ್ಕಳು. ಆಸ್ತಿಯು ತಂದೆಯಿಂದ ಸಿಗುತ್ತದೆ. ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಯಾರಿಗಾದರೂ ತಿಳಿಸಿ, ಮೊದಲು ತಂದೆಯ ಪರಿಚಯ ನೀಡಿ. ನಾವು ಸಹೋದರರಾಗಿದ್ದೇವೆ, ಸರ್ವವ್ಯಾಪಿಯೆಂದು ಹೇಳಿದರೆ ವಿಶ್ವ ಪಿತೃತ್ವವಾಗಿ ಬಿಡುತ್ತದೆ. ವಿಶ್ವ ಪಿತೃತ್ವವಾದರೆ ಆಸ್ತಿಯು ಯಾರಿಂದ ಸಿಗುವುದು? ಎಲ್ಲರೂ ಭಗವಂತರೇ ಎಂದು ಹೇಳುತ್ತಾ ಬೀಳುತ್ತಾ ಬಂದಿದ್ದಾರೆ, ಆಸ್ತಿಯೇನೂ ಇಲ್ಲ. ಈಗ ವಿಶ್ವ ಭ್ರಾತೃತ್ವ ಎಂದು ತಿಳಿಯುವುದರಿಂದಲೇ ಆಸ್ತಿಯು ಸಿಗುವುದು ಅಂದಾಗ ಇದರ ಬಗ್ಗೆ ಚೆನ್ನಾಗಿ ತಿಳಿಸುವುದರಿಂದ ಬುದ್ಧಿಯಲ್ಲಿ ಯಾವ ಅಷ್ಟ ದೇವತೆಗಳು ಇತ್ಯಾದಿ ಕುಳಿತಿದೆಯೋ ಅದೆಲ್ಲವೂ ಹೊರಟು ಹೋಗುವುದು. ತಿಳಿಸಿರಿ, ಇಬ್ಬರು ತಂದೆಯರಿದ್ದಾರೆ, ಆತ್ಮಿಕ ತಂದೆಯಿಂದ ಸರ್ವರ ಸದ್ಗತಿಯಾಗುವುದು, ಅವರೇ ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಎಲ್ಲರೂ ಸುಖಿಯಾಗಿ ಬಿಡುತ್ತಾರೆ. ತಂದೆಗೆ ಸ್ವರ್ಗದ ರಚಯಿತನೆಂದು ಹೇಳಲಾಗುತ್ತದೆ. ಮೊದಲು ತಂದೆಯ ಪ್ರಭಾವವನ್ನು ಬುದ್ಧಿಯಲ್ಲಿ ಕೂರಿಸಬೇಕು. ಇವರು ಆತ್ಮರ ಬೇಹದ್ದಿನ ತಂದೆಯಾಗಿದ್ದಾರೆ, ಅವರಿಗೇ ಪತಿತ-ಪಾವನನೆಂದು ಹೇಳುತ್ತಾರೆ. ನೀವಾತ್ಮರು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಿ. ಈ ನಿಶ್ಚಯವನ್ನು ಪಕ್ಕಾ ಮಾಡಿಕೊಳ್ಳಿ. ಮೂಲ ಮಾತು ಮೊಟ್ಟ ಮೊದಲನೆಯದಾಗಿ ಇದನ್ನೇ ಬುದ್ಧಿಯಲ್ಲಿ ಕುಳ್ಳರಿಸಬೇಕಾಗಿದೆ, ಇದನ್ನು ತಿಳಿದುಕೊಂಡಾಗಲೇ ಖುಷಿಯಿರುವುದು ಮತ್ತು ನಾವು ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತೇವೆ. ನಮಗೆ ನಿಶ್ಚಯವಿದೆ. ನಾವು ತಂದೆಯನ್ನು ನೆನಪು ಮಾಡಿ ವಿಶ್ವದ ಮಾಲೀಕರಾಗುತ್ತೇವೆಂದು ಹೇಳುತ್ತಾರೆ. ಇದು ಬಹಳ ಖುಷಿಯಿರುತ್ತದೆ. ಬುದ್ಧಿವಂತರಾಗಿದ್ದರೆ ಬುದ್ಧಿಯಲ್ಲಿ ಪೂರ್ಣ ನಿಶ್ಚಯವಿದ್ದರೆ ಹೇಳುವರು – ಇಂತಹ ಬೇಹದ್ದಿನ ತಂದೆ ಯಾರು ದಾದಾರವರಲ್ಲಿ ಬರುವರೋ ಅವರೊಂದಿಗೆ ಮೊದಲು ಹೋಗಿ ಮಿಲನ ಮಾಡಬೇಕು. ಶಿವ ತಂದೆಯು ಬ್ರಹ್ಮಾರವರ ಮುಖಾಂತರವೇ ನಮ್ಮೊಂದಿಗೆ ಮಾತನಾಡುವರು. ನೀವಾತ್ಮರು ಅವರೊಂದಿಗೆ ಮಿಲನ ಮಾಡಿಯೇ ಇಲ್ಲವೆಂದರೆ ಹೇಗೆ ನೆನಪು ಮಾಡುವಿರಿ? ದತ್ತು ಮಕ್ಕಳಾದಾಗಲೇ ನೆನಪು ಬರುವುದು. ದತ್ತು ಮಕ್ಕಳಾಗದಿದ್ದರೆ ಹೇಗೆ ನೆನಪು ಬರುತ್ತದೆ? ಮೊದಲು ಅವರ ಮಕ್ಕಳಾಗಿದ್ದೀರಿ, ಇಂತಹ ತಂದೆಯೊಂದಿಗಂತೂ ಕೂಡಲೇ ಮಿಲನ ಮಾಡಬೇಕು. ತಂದೆಯೂ ಸಹ ಇದನ್ನೇ ಕೇಳುತ್ತಾರೆ – ನೀವು ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುತ್ತೀರಾ? ನಾನು ನೀವಾತ್ಮರಿಗೆ ತಂದೆಯಾಗಿದ್ದೇನೆ, ಶಿವ ತಂದೆಯು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನಾವಾತ್ಮರ ತಂದೆಯೇ ನಿಮಗೂ ತಂದೆಯಾಗಿದ್ದಾರೆ. ಅವರು ಕೇಳುತ್ತಾರೆ – ಎಲ್ಲಾ ಆತ್ಮರ ತಂದೆಯು ಖಂಡಿತವಾಗಿ ಅವರೊಬ್ಬರೇ ಆಗಿದ್ದಾರೆಂದು ನಿಮಗೆ ನಿಶ್ಚಯವಿದೆಯೇ! ಅವರೇ ಆಸ್ತಿಯನ್ನು ಕೊಡುತ್ತಾರೆ, ಪವಿತ್ರರೂ ಆಗಬೇಕಾಗಿದೆ. ಅವರ ವಿನಃ ಮತ್ತೆಲ್ಲರನ್ನೂ ಮರೆಯಬೇಕಾಗಿದೆ. ನೀವಾತ್ಮರು ಮನೆಯಿಂದ ಅಶರೀರಿಯಾಗಿ ಬಂದಿದ್ದೀರಲ್ಲವೆ. ಬಂದಾಗ ಯಾವುದೇ ದೇಹ, ಸಂಬಂಧವಿರಲಿಲ್ಲ. ಆತ್ಮವು ಶರೀರದಲ್ಲಿ ಪ್ರವೇಶ ಮಾಡಿ ದೊಡ್ಡದಾದಾಗಲೇ ಇವರು ನಿಮ್ಮ ತಂದೆಯಾಗಿದ್ದಾರೆ….. ಎಂದು ತಿಳಿಸಲಾಗುತ್ತಿದೆ. ಆತ್ಮವು ಎಲ್ಲಾ ಸಂಬಂಧಗಳಿಂದ ಭಿನ್ನವಾಗಿದೆ. ಆತ್ಮವು ಹೊರಟು ಹೋದರೆ ತಾನು ಸತ್ತರೆ ಜಗತ್ತೇ ಸತ್ತಂತೆ ಎಂದು ಹೇಳಲಾಗುತ್ತದೆ, ಬಂಧನರಹಿತ ಆಗಿ ಬಿಡುತ್ತಾರೆ. ಇನ್ನೊಂದು ಶರೀರ ಬಿಡುವವರೆಗೂ ನಿರ್ಬಂಧನರಾಗಿರುತ್ತಾರೆ, ತಾಯಿಯ ಗರ್ಭದಲ್ಲಿ ಹೋಗಿ ಹೊರ ಬಂದು ಬುದ್ಧಿವಂತರಾದಾಗ ನಂತರ ಸಂಬಂಧದ ಮಾತು ಇರುತ್ತದೆ. ಅಂದಮೇಲೆ ಇಲ್ಲಿಯೂ ಸಹ ನೀವು ಮಕ್ಕಳು ತಿಳಿಸಿಕೊಡಬೇಕಾಗಿದೆ. ಜೀವಿಸಿದ್ದಂತೆಯೇ ಎಲ್ಲವನ್ನೂ ಮರೆಯಬೇಕಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡುವುದೇ ಅವ್ಯಭಿಚಾರಿ ನೆನಪಾಗಿದೆ. ಇದಕ್ಕೆ ಯೋಗವೆಂದು ಹೇಳಲಾಗುತ್ತದೆ. ಇಲ್ಲಂತೂ ಮನುಷ್ಯರಿಗೆ ಅನೇಕರ ನೆನಪಿರುತ್ತದೆ, ನಿಮ್ಮದು ಅವ್ಯಭಿಚಾರಿ ನೆನಪಾಗಿದೆ. ಆತ್ಮಕ್ಕೆ ತಿಳಿದಿದೆ – ಇವೆಲ್ಲಾ ಶರೀರದ ಸಂಬಂಧಗಳು ಸಮಾಪ್ತಿಯಾಗಲಿದೆ, ನಮ್ಮ ಸಂಬಂಧವು ಒಬ್ಬ ತಂದೆಯೊಂದಿಗಿದೆ. ಒಬ್ಬ ತಂದೆಯನ್ನು ಎಷ್ಟು ನೆನಪು ಮಾಡುವರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ಮಿತ್ರ ಸಂಬಂಧಿಗಳನ್ನು ನೆನಪು ಮಾಡಿದರೆ ವಿಕರ್ಮವಾಗುತ್ತವೆ ಎಂದಲ್ಲ. ಯಾವಾಗ ಅಂತಹ ಯಾವುದಾದರೂ ತಪ್ಪು ಕರ್ಮ ಮಾಡಿದಾಗ ವಿಕರ್ಮವಾಗುತ್ತದೆ. ಬಾಕಿ ಮತ್ತ್ಯಾರನ್ನಾದರೂ ನೆನಪು ಮಾಡುವುದರಿಂದ ವಿಕರ್ಮಗಳಂತೂ ಆಗುವುದಿಲ್ಲ ಆದರೆ ಸಮಯವು ವ್ಯರ್ಥವಾಗುತ್ತದೆ. ಒಬ್ಬ ತಂದೆಯನ್ನೇ ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಇದು ಪಾಪವನ್ನು ಕಳೆಯುವ ಯುಕ್ತಿಯಾಗಿದೆ ಬಾಕಿ ಸಂಬಂಧಗಳಂತೂ ನೆನಪಿರುತ್ತದೆ. ಶರೀರ ನಿರ್ವಹಣಾರ್ಥವಾಗಿ ಉದ್ಯೋಗ-ವ್ಯವಹಾರ ಎಲ್ಲವನ್ನೂ ಮಾಡಿರಿ ಆದರೆ ಸಮಯ ಸಿಕ್ಕಿದರೆ ನೆನಪು ಮಾಡುತ್ತಾ ಇರಿ. ಇದರಿಂದ ತುಕ್ಕು ಬಿಟ್ಟು ಹೋಗಲಿ. ಮೂಲ ಮಾತೇ ಇದಾಗಿದೆ. ಪತಿತರಿಂದ ಹೇಗೆ ಪಾವನರಾಗುವುದು ಎಂದು ಆಂತರ್ಯದಲ್ಲಿ ವಿಚಾರ ಮಾಡಿ, ಅದಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿ ಇರಬೇಕಾಗಿದೆ. ಸನ್ಯಾಸಿಗಳೂ ಸಹ ಶರೀರವನ್ನು ಬಿಟ್ಟು ಹೋಗಿ ಮತ್ತೆ ಗೃಹಸ್ಥಿಗಳ ಬಳಿ ಜನ್ಮ ಪಡೆಯುತ್ತಾರೆ. ಅವರು ಜನ್ಮ-ಜನ್ಮಾಂತರಕ್ಕಾಗಿ ಪಾವನರಾಗಿ ಬಿಡುತ್ತಾರೆ ಎಂದಲ್ಲ. ಈಗ ನಿರ್ವಿಕಾರಿ ಪ್ರಪಂಚವಂತೂ ಯಾವುದೂ ಇಲ್ಲ. ಇದು ವಿಕಾರಿ ಪ್ರಪಂಚವಾಗಿದೆ, ಇದರಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ವಿಕಾರಿ ಪ್ರಪಂಚದಲ್ಲಿರುವ ಕಾರಣ ಒಂದಲ್ಲ ಒಂದು ನಿರ್ಬಲತೆಗಳು ಅವಶ್ಯವಾಗಿ ಇರುತ್ತದೆ ಬಾಕಿ ಪ್ರಪಂಚಗಳಂತೂ ಇರುವುದೇ ಎರಡು – ವಿಕಾರಿ ಪ್ರಪಂಚ ಮತ್ತು ನಿರ್ವಿಕಾರಿ ಪ್ರಪಂಚ. ಪಾವನ ಪ್ರಪಂಚದಲ್ಲಿ ದೇವತೆಗಳು ಇರುತ್ತಿದ್ದರು ಅಂದಾಗ ಇದನ್ನು ತಿಳಿಸುವುದರಲ್ಲಿ ಬಹಳ ಸಹಜವಾಗುವುದು. ಈಗ ಈ ಪತಿತ ಪ್ರಪಂಚದ ವಿನಾಶವಾಗಲಿದೆ, ವಿನಾಶವಾಗುವ ಮೊದಲೇ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ – ದೇಹದ ಸಂಬಂಧಗಳನ್ನು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿರಿ ಆಗ ನೀವು ಪಾವನರಾಗುತ್ತೀರಿ. ತಂದೆಯು ತಿಳಿಸುತ್ತಾರೆ – ನೀವು ನನ್ನನ್ನು ಪತಿತ-ಪಾವನನೆಂದು ಹೇಳುತ್ತೀರಲ್ಲವೆ. ಗಂಗೆಯಲ್ಲಿ ಮುಳುಗುವವರಂತೂ ಅನೇಕರಿದ್ದಾರೆ, ಮುಳುಗುವುದರಿಂದ ಪಾವನರಾಗಿ ಬಿಡುವರೇ! ಪ್ರದರ್ಶನಿಯಲ್ಲಿ ಬಹಳ ಚೆನ್ನಾಗಿ ತಿಳಿಸಬೇಕಾಗುತ್ತದೆ. ಪ್ರಜಾಪಿತನಂತೂ ಇಲ್ಲಿಯೇ ಬೇಕಲ್ಲವೆ. ಕೆಳಗೆ ಈ ಬ್ರಹ್ಮಾ ಮತ್ತು ಬ್ರಹ್ಮಾಕುಮಾರ-ಕುಮಾರಿಯರು ತಪಸ್ಸು ಮಾಡುತ್ತಿದ್ದಾರೆ. ಈ ಮಾತನ್ನು ಚೆನ್ನಾಗಿ ತಿಳಿಸಬೇಕು. ಯಾರಿಗೇ ಆದರೂ ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ತಡವರಿಸುವುದರಿಂದ ಹೆಸರನ್ನು ಕೆಡಿಸುತ್ತೀರಿ. ಒಂದುವೇಳೆ ಯಾವುದೇ ಚಿತ್ರದಲ್ಲಿ ತಿಳಿಸಲು ಆಗದಿದ್ದರೆ ಆಗ ಹೇಳಿರಿ – ಸ್ವಲ್ಪ ನಿಲ್ಲಿರಿ, ನಾವು ಮತ್ತೊಬ್ಬ ಸಹೋದರಿಯನ್ನು ಕಳುಹಿಸುತ್ತೇವೆ ಎಂದು. ಒಬ್ಬರು ಇನ್ನೊಬ್ಬರಿಗಿಂತ ತೀಕ್ಷ್ಣವಾಗಿರುತ್ತಾರಲ್ಲವೆ. ಪ್ರದರ್ಶನಿ, ಮೇಳಗಳಲ್ಲಿ ಬಹಳ ಬುದ್ಧಿವಂತರಾಗಿರಬೇಕು, ನಾವು ಸರಿಯಾಗಿ ತಿಳಿಸುತ್ತೇವೆಯೇ, ಯಾರೂ ವಾದ ಮಾಡುತ್ತಿಲ್ಲವೆ? ಎಂದು ನೋಡಬೇಕು. ಮುಖ್ಯ ದ್ವಾರದಲ್ಲಿ ಪರಿಚಯದವರಿರಬೇಕು, ಅನೇಕ ಪ್ರಕಾರದವರು ಬರುತ್ತಾರಲ್ಲವೆ. ಹಿರಿಯ ವ್ಯಕ್ತಿಗಳಿಗೆ ಅವಶ್ಯವಾಗಿ ಗೌರವ ಕೊಡುತ್ತಾರೆ. ಅಂತರವಂತೂ ಅವಶ್ಯವಾಗಿ ಇರುತ್ತದೆ. ಇದರಲ್ಲಿ ಇವರ ಮೇಲೆ ಪ್ರೀತಿಯಿದೆ, ಇವರ ಮೇಲೆ ಇಲ್ಲ, ದ್ವೈತ ದೃಷ್ಟಿಯಿದೆ ಎಂಬುದು ಬರಬಾರದು. ಇದಕ್ಕೆ ದ್ವೈತವೆಂದು ಹೇಳಲಾಗುವುದಿಲ್ಲ. ಇಲ್ಲಿ ದೊಡ್ಡ ವ್ಯಕ್ತಿಗಳಿಗೆ ಉಪಚಾರ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ ಆದರೆ ಸೇವಾಧಾರಿಗಳಿಗೆ ಉಪಚಾರ ಮಾಡಬೇಕಲ್ಲವೆ. ಯಾರಾದರೂ ಮನೆಯನ್ನು ಕಟ್ಟಿಸಿಕೊಡುತ್ತಾರೆಂದರೆ ಅವಶ್ಯವಾಗಿ ಉಪಚಾರ ಮಾಡಬೇಕಾಗುತ್ತದೆ. ನಿಮಗಾಗಿಯೇ ಮನೆಯು ತಯಾರಾಗುತ್ತದೆಯಲ್ಲವೆ. ಯಾರು ಪರಿಶ್ರಮ ಪಟ್ಟು ರಾಜರಾಗುವರೋ ಅವರಿಗೆ ಪ್ರಜೆಗಳು ಸ್ವತಹ ಉಪಚಾರ ಮಾಡುತ್ತಾರಲ್ಲವೆ. ಕಡಿಮೆ ದರ್ಜೆಯವರಿಗಿಂತ ಉತ್ತಮ ದರ್ಜೆಯವರಿಗೆ ಆತಿಥ್ಯವಂತೂ ಸಿಗುತ್ತದೆಯಲ್ಲವೆ. ಬೇಹದ್ದಿನ ತಂದೆಗೆ ಇಡೀ ಪ್ರಪಂಚದ ಆತ್ಮರು ಮಕ್ಕಳಾಗಿದ್ದಾರೆ ಆದರೆ ಭಾರತದಲ್ಲಿ ತಂದೆಯು ಅವತರಣೆ ಮಾಡಿದ್ದಾರೆ. ಭಾರತವಾಸಿಗಳು ಯಾರು ಮೊದಲು ಶ್ರೇಷ್ಠರಾಗಿದ್ದರೋ ಅವರು ಈಗ ಕನಿಷ್ಟರಾಗಿ ಬಿಟ್ಟರು ಆದ್ದರಿಂದ ತಂದೆಯು ತಿಳಿಸುತ್ತಾರೆ – ನಾನು ಓದಿಸಲು ಬಂದಿದ್ದೇನೆ, ನಾನು ಭಾರತದಲ್ಲಿ ಬರುತ್ತೇನೆಂದರೆ ಎಲ್ಲರ ಕಲ್ಯಾಣವಾಗಿ ಬಿಡುತ್ತದೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಕಲ್ಯಾಣವಾಗುತ್ತದೆಯಲ್ಲವೆ. ಈಗ ಭಾರತವೇ ನರಕವಾಗಿದೆ, ಮತ್ತೆ ಸ್ವರ್ಗವಾಗಬೇಕಾಗಿದೆ ಅಂದಮೇಲೆ ಭಾರತದಲ್ಲಿಯೇ ಬರುತ್ತೇನೆ. ಮತ್ತೆಲ್ಲಿಯಾದರೂ ಹೋಗಿ ಏನು ಮಾಡಬೇಕು! ಭಾರತದಲ್ಲಿಯೇ ಭಕ್ತಿಮಾರ್ಗದಲ್ಲಿ ಮೊಟ್ಟ ಮೊದಲು ಬಹಳ ಸುಂದರವಾದ ಸೋಮನಾಥನ ಮಂದಿರವನ್ನು ಕಟ್ಟಿಸಿದ್ದರು, ಹೇಗೆ ವಿದೇಶದಲ್ಲಿ ದೊಡ್ಡ-ದೊಡ್ಡ ಚರ್ಚ್ ಕಟ್ಟಿಸುತ್ತಾರೆ ಏಕೆಂದರೆ ಪೋಪ್ ತೆಗೆದುಕೊಂಡಿರುವ ರಾಜ್ಯವಾಗಿದೆ. ಎಲ್ಲಾ ಚರ್ಚ್ಗಳು ಒಂದೇ ರೀತಿ ಇರುವುದಿಲ್ಲ, ನಂಬರ್ವಾರ್ ಇರುತ್ತದೆಯಲ್ಲವೆ. ಸೋಮನಾಥ ಮಂದಿರವು ಎಷ್ಟೊಂದು ವಜ್ರ ರತ್ನಗಳಿಂದ ಸಂಪನ್ನವಾಗಿತ್ತು, ಮುಸಲ್ಮಾನರು ಲೂಟಿ ಮಾಡಿಕೊಂಡು ಹೋದರು. ಇಲ್ಲಿ ಬಹಳ ಧನವಂತರಾಗಿದ್ದರು, ಚರ್ಚ್ನಿಂದ ಏನನ್ನು ಲೂಟಿ ಮಾಡುವರು? ಮನುಷ್ಯರು ಹಣದ ಹಿಂದೆ ಬೀಳುತ್ತಾರಲ್ಲವೆ. ಮಹಮ್ಮದ್ ಘಜನಿಯು ಎಷ್ಟೊಂದು ತೆಗೆದುಕೊಂಡು ಹೋದನು, ಮತ್ತೆ ಬ್ರಿಟಿಷರು ಬಂದರು ಅವರೂ ಇಲ್ಲಿಂದ ಹಣವನ್ನು ಕಳುಹಿಸುತ್ತಾ ಹೋದರು. ಬಹಳ ಹಣವನ್ನು ತೆಗೆದುಕೊಂಡು ಹೋದರು. ಅದು ಈಗ ನಿಮಗೆ ಪುನಃ ಹಿಂತಿರುಗಿಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿಗಳನ್ನು ಕೊಡುತ್ತಾರೆ. ಇದೆಲ್ಲವೂ ಸಮಯದಲ್ಲಿ ಸಿಗುತ್ತಿದೆ. ಲೆಕ್ಕವು ಸಿಗದಿದ್ದರೆ ಮತ್ತೆ ಹೇಗೆ ನಡೆಸುವುದು! ತಂದೆಯು ತಿಳಿಸುತ್ತಾರೆ – ಈ ನಾಟಕವು ಹೇಗೆ ಮಾಡಲ್ಪಟ್ಟಿದೆ, ಈ ಲೇವಾದೇವಿಯ ಲೆಕ್ಕವು ಹೇಗಿದೆ! ಆದರೂ ನೀವು ಮಕ್ಕಳೀಗ ಸ್ವರ್ಗದ ಮಾಲೀಕರಾಗಬೇಕಾಗಿದೆ. ಈ ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಸುತ್ತುತ್ತದೆ, ಅದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ. ಈಗ ಪುನಃ ತಿಳಿಸುತ್ತೇನೆ, ಮಕ್ಕಳೇ ಮನ್ಮನಾಭವ, ಇದು ಮತ್ತೆ ಪುನರಾವರ್ತನೆಯಾಗುವುದು. ಪ್ರತೀ ವಸ್ತು ಸತೋಪ್ರಧಾನದಿಂದ ತಮೋಪ್ರಧಾನವಾಗುವುದು. ದಿನದಲ್ಲಿ ಉದ್ಯೋಗ-ವ್ಯವಹಾರವನ್ನು ಮಾಡುತ್ತೀರಿ, ಆ ಸಮಯವನ್ನಂತೂ ಬಿಟ್ಟು ಬಿಡಿ. ಉಳಿದಂತೆ ಎಷ್ಟು ಸಮಯ ಸಿಗುವುದೋ ಅದರಲ್ಲಿ ನನ್ನನ್ನು ನೆನಪು ಮಾಡಿರಿ. ವ್ಯಾಪಾರ ಇತ್ಯಾದಿಗಳಲ್ಲಿಯೂ ಕೆಲಕೆಲವೊಮ್ಮೆ ಸಮಯ ಸಿಗುತ್ತದೆ. ಕೆಲವರಿಗಂತೂ ಇಂತಹ ಸೇವೆಯಿರುತ್ತದೆ ಕೇವಲ ಸಹಿ ಹಾಕುವುದಷ್ಟೇ. ಸಹಿ ಹಾಕಿದರೆ ಮುಗಿಯಿತು. ಹೀಗೆ ಅನೇಕರು ಖಾಲಿಯಾಗಿರುತ್ತಾರೆ. ಹೇಗೇ ಇರಲಿ ರಾತ್ರಿಯ (ಅಮೃತವೇಳೆ) ಸಮಯವಂತೂ ತಮ್ಮದಾಗಿದೆ, ದಿನದಲ್ಲಿ ಶರೀರ ನಿರ್ವಹಣೆಗಾಗಿ ಸಂಪಾದನೆ ಮಾಡುತ್ತೀರಿ ಮತ್ತೆ ರಾತ್ರಿಯಲ್ಲಿ ಈ ಸಂಪಾದನೆ ಮಾಡಿಕೊಳ್ಳಿ. ಇದು ಭವಿಷ್ಯ 21 ಜನ್ಮಗಳಿಗಾಗಿ ಸಂಪಾದನೆಯಾಗಿದೆ. ಒಂದು ಘಳಿಗೆ, ಅರ್ಧ ಘಳಿಗೆ ಎಷ್ಟು ಸಾಧ್ಯವೋ ತಂದೆಯ ನೆನಪಿನಲ್ಲಿರಿ, ಇದರಿಂದ ನಿಮ್ಮದು ಬಹಳ ಸಂಪಾದನೆಯಾಗುವುದು. ಯಾರು ಬುದ್ಧಿವಂತರಾಗುವರೋ ಅವರೇ ತಿಳಿದುಕೊಳ್ಳುವರು – ಅವಶ್ಯವಾಗಿ ಬಹಳ ಸಂಪಾದನೆ ಮಾಡಿಕೊಳ್ಳಬಹುದಾಗಿದೆ. ಬಾಬಾ, ನಾವು ಇಷ್ಟು ಸಮಯ ನೆನಪು ಮಾಡಿದೆವು ಎಂದು ಕೆಲವರು ಚಾರ್ಟ್ ಬರೆಯುತ್ತಾರೆ, ಅಜ್ಞಾನಿಗಳೂ ಸಹ ಕೆಲವರು ತಮ್ಮ ದಿನಚರಿಯನ್ನು ಬರೆಯುತ್ತಾರೆ. ನೀವೂ ಸಹ ಚಾರ್ಟ್ ಬರೆಯುತ್ತೀರೆಂದರೆ ಗಮನವಿರುವುದು. ನನ್ನ ಸಮಯವು ವ್ಯರ್ಥವಾಗಿ ಹೋಗುತ್ತಿಲ್ಲವೆ! ಯಾವುದೇ ವಿಕರ್ಮವನ್ನಂತೂ ಮಾಡುತ್ತಿಲ್ಲವೇ ಎಂದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ದ್ವೈತ ಭಾವನೆಯನ್ನು ಸಮಾಪ್ತಿ ಮಾಡಿ ಎಲ್ಲರ ಪ್ರತಿ ಗೌರವವನ್ನು ಇಡಬೇಕಾಗಿದೆ. ಯಾರಿಗೇ ಆದರೂ ಬಹಳ ಪ್ರೀತಿಯಿಂದ ತಿಳಿಸಬೇಕಾಗಿದೆ. ಸಂಪಾದನೆಯಲ್ಲಿ ನಿರತರಾಗಿರಬೇಕಾಗಿದೆ.

2. ಜೀವಿಸಿದ್ದಂತೆಯೇ ಎಲ್ಲವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನೂ ಮಾಡಬೇಕು. ಜೊತೆ ಜೊತೆಗೆ ಬುದ್ಧಿವಂತರಾಗಿ ಅವಿನಾಶಿ ಸಂಪಾದನೆಯನ್ನೂ ಮಾಡಿಕೊಳ್ಳಬೇಕಾಗಿದೆ. ನೆನಪಿನ ಚಾರ್ಟ್ ಇಡಬೇಕಾಗಿದೆ.

ವರದಾನ:-

ಯಾರು ಸದಾ ಬೇಹದ್ದಿನ ವೈರಾಗ್ಯ ವೃತ್ತಿಯಲ್ಲಿರುತ್ತಾರೆಯೋ ಅವರೆಂದಿಗೂ ಯಾವುದೇ ದೃಷ್ಯವನ್ನು ನೋಡುತ್ತಿದ್ದರೂ ಗಾಬರಿಯಾಗುವುದಿಲ್ಲ ಅಥವಾ ಚಂಚಲವಾಗುವುದಿಲ್ಲ. ಸದಾ ಅಚಲ-ಅಡೋಲವಾಗಿ ಇರುತ್ತಾರೆ ಏಕೆಂದರೆ ಬೇಹದ್ದಿನ ವೈರಾಗ್ಯ ವೃತ್ತಿಯಿಂದ ನಷ್ಟಮೋಹ ಸ್ಮೃತಿ ಸ್ವರೂಪರು ಆಗಿ ಬಿಡುತ್ತಾರೆ. ಒಂದುವೇಳೆ ಅಲ್ಪ ಸ್ವಲ್ಪವೇನಾದರೂ ನೋಡಿದರೂ ಏರುಪೇರಾಗುತ್ತದೆ ಅಥವಾ ಮೋಹವು ಉತ್ಪನ್ನವಾಗಬಹುದು, ಆಗ ಅಂಗಧನ ಸಮಾನ ಅಚಲ-ಅಡೋಲವೆಂದು ಹೇಳುವುದಿಲ್ಲ. ಬೇಹದ್ದಿನ ವೈರಾಗ್ಯ ವೃತ್ತಿಯಲ್ಲಿ ಗಂಭೀರತೆಯ ಜೊತೆಗೆ ರಮಣೀಕತೆಯೂ ಸಮಾವೇಶವಾಗಿರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top