09 March 2022 KANNADA Murli Today | Brahma Kumaris

Read and Listen today’s Gyan Murli in Kannada

March 8, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಹಳೆಯ ದೇಹಭಾನವನ್ನು ಮರೆಯಿರಿ, ಇದರೊಂದಿಗಿನ ಮಮತ್ವವನ್ನು ಅಳಿಸಿದಾಗ ನಿಮಗೆ ಫಸ್ಟ್‍ಕ್ಲಾಸ್ ಶರೀರ ಸಿಗುತ್ತದೆ, ಈ ಶರೀರವಂತೂ ಸಮಾಪ್ತಿ ಆಗಿ ಬಿಟ್ಟಿದೆ”

ಪ್ರಶ್ನೆ:: -

ಈ ನಾಟಕದ ಅವಿನಾಶಿ ನಿಯಮ ಯಾವುದಾಗಿದೆ, ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ?

ಉತ್ತರ:-

ಜ್ಞಾನವಿದ್ದಾಗ ಭಕ್ತಿ ಇರುವುದಿಲ್ಲ ಹಾಗೂ ಭಕ್ತಿ ಇದ್ದಾಗ ಜ್ಞಾನವಿರುವುದಿಲ್ಲ. ಅದೇ ರೀತಿ ಪಾವನ ಪ್ರಪಂಚವಿದ್ದಾಗ ಪತಿತ ಪ್ರಪಂಚವಿರುವುದಿಲ್ಲ. ಹಾಗೂ ಪತಿತ ಪ್ರಪಂಚವಿದ್ದಾಗ ಯಾರೂ ಪಾವನರಿರುವುದಿಲ್ಲ….. ಈ ನಾಟಕದ ಅವಿನಾಶಿ ನಿಯಮವನ್ನು ಯಾರೂ ಸಹ ತಿಳಿದುಕೊಂಡಿಲ್ಲ.

ಪ್ರಶ್ನೆ:: -

ಸತ್ಯವಾದ ಕಾಶಿ ಬಲಿ (ಕಾಶಿ ಕಲ್ವಟ್) ಎಂದು ಯಾವುದಕ್ಕೆ ಹೇಳಲಾಗುತ್ತದೆ?

ಉತ್ತರ:-

ಅಂತ್ಯದಲ್ಲಿ ಯಾರ ನೆನಪು ಬರಬಾರದು. ಒಬ್ಬ ತಂದೆಯಲ್ಲದೆ ಬೇರೆ ಯಾರ ನೆನಪು ಬಾರದಿರುವುದಕ್ಕೆ ಸತ್ಯವಾದ ಕಾಶಿಕಲ್ವಟ್ ಎಂದು ಹೇಳಲಾಗುತ್ತದೆ. ಕಾಶಿಕಲ್ವಟ್ ಅರ್ಥಾತ್ ಪಾಸ್ ವಿತ್ ಹಾನರ್ ಆಗುವುದು. ಅಂದರೆ ಸ್ವಲ್ಪವೂ ಶಿಕ್ಷಗೆ ಗುರಿಯಾಗದೆ ತೇರ್ಗಡೆಯಾಗುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಪ್ರತಿಜ್ಞೆ ಮಾಡಲು ನಿಮ್ಮ ಬಾಗಿಲಿಗೆ ಬಂದಿದ್ದೇನೆ..

ಓಂ ಶಾಂತಿ. ತಂದೆ ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಏಕೆಂದರೆ ಮಕ್ಕಳು ತಂದೆಯನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ ಹಾಗೂ ತಂದೆಯು ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಏಕೆಂದರೆ ದುಃಖಧಾಮದಿಂದ ಬಿಡಿಸಿ ಶಾಂತಿಧಾಮ ಹಾಗೂ ಸುಖಧಾಮಕ್ಕೆ ಕರೆದುಕೊಂಡು ಹೋಗಬೇಕಾಗಿದೆ. ಈಗ ನೀವು ಸುಖಧಾಮದಲ್ಲಿ ಹೊರಡಲು ಯೋಗ್ಯರಾಗುತ್ತಿದ್ದೀರಿ. ಪತಿತ ಮನುಷ್ಯರು ಯಾರೂ ಸಹ ಪಾವನ ಪ್ರಪಂಚದಲ್ಲಿ ಹೋಗಲು ನಿಯಮವಿಲ್ಲ. ಈ ಹೊಸ ಪ್ರಪಂಚಕ್ಕೆ ಹೋಗುವ ನಿಯಮವನ್ನು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಮನುಷ್ಯರು ಈ ಸಮಯದಲ್ಲಿ ಪತಿತ ವಿಕಾರಿಗಳಾಗಿದ್ದಾರೆ. ಹೇಗೆ ನೀವೂ ಸಹ ಪತಿತರಾಗಿದ್ದಂತಹವರು ನಿಮ್ಮ ಎಲ್ಲಾ ಅಭ್ಯಾಸಗಳನ್ನು ಅಳಿಸಿ ಸರ್ವಗುಣ ಸಂಪನ್ನ ದೇವೀ ದೇವತಾಗಳು ಆಗುತ್ತಿದ್ದೀರಿ. ನಾವು ಬದುಕಿದ್ದು ಸಾಯಲು ಅಥವಾ ಬದಿಕಿದ್ದು ನಿಮ್ಮ ಮಕ್ಕಳಾಗಲು ಬಂದಿದ್ದೇವೆ ಮತ್ತೆ ನೀವು ನಮಗೆ ಮತವನ್ನು ಕೊಡುತ್ತಿದ್ದೀರಿ, ಏಕೆಂದರೆ ನಿಮ್ಮ ಮತ ಸರ್ವೋತ್ತಮವಾಗಿದೆ ಎಂದು ಹಾಡಿನಲ್ಲಿ ಕೇಳಿದಿರಿ. ಇಂದು ಪ್ರಪಂಚದಲ್ಲಿರುವ ಅನೇಕ ಮತಗಳು ಆಸುರಿ ಮತಗಳಾಗಿವೆ. ಇದುವರೆಗು ನಾವು ಆಸುರಿ ಮತದಂತೆ ನಡೆಯುತ್ತಿದ್ದೇವೆಂದು ನಮಗೆ ತಿಳಿದಿರಲಿಲ್ಲ. ಹಾಗೂ ನಾವು ಈಶ್ವರನ ಮತದಂತೆ ನಡೆಯುತ್ತಿಲ್ಲವೆಂದು ಪ್ರಪಂಚದವರೂ ಸಹ ತಿಳಿದುಕೊಂಡಿಲ್ಲ. ಎಲ್ಲರೂ ರಾವಣನ ಮತದಂತೆ ನಡೆಯುತ್ತಿದ್ದಾರೆ. ಮಕ್ಕಳ ಅರ್ಧಕಲ್ಪದಿಂದ ನೀವು ರಾವಣನ ಮತದಂತೆ ನಡೆಯುತ್ತಾ ಬಂದಿದ್ದೀರೆಂದು ತಂದೆ ತಿಳಿಸುತ್ತಾರೆ. ಇದು ಭಕ್ತಿ ಮಾರ್ಗ ರಾವಣ ರಾಜ್ಯವಾಗಿದೆ. ರಾಮ ರಾಜ್ಯ ಜ್ಞಾನ ಖಾಂಡ, ರಾವಣ ರಾಜ್ಯ ಭಕ್ತಿಖಾಂಡವೆಂದು ಹೇಳುತ್ತಾರೆ. ಈ ರೀತಿ ಜ್ಞಾನ, ಭಕ್ತಿ ಹಾಗೂ ವೈರಾಗ್ಯ. ಯಾವುದರಿಂದ ವೈರಾಗ್ಯ? ಭಕ್ತಿಯಿಂದ ಹಾಗೂ ಹಳೆಯ ಪ್ರಪಂಚದಿಂದ ವೈರಾಗ್ಯ. ಜ್ಞಾನ ಅರ್ಥಾತ್ ದಿನ, ಭಕ್ತಿ ಅರ್ಥಾತ್ ರಾತ್ರಿ. ರಾತ್ರಿಯ ನಂತರ ದಿನ ಬರುತ್ತದೆ. ಭಕ್ತಿಯಿಂದ ಹಾಗೂ ಹಳೆಯ ಪ್ರಪಂಚದಿಂದ ವೈರಾಗ್ಯವಾಗಿದೆ. ಇದು ಬೇಹದ್ದಿನ ಸತ್ಯವಾದ ವೈರಾಗ್ಯವಾಗಿದೆ. ಸನ್ಯಾಸಿಗಳ ವೈರಾಗ್ಯವೇ ಬೇರೆಯಾಗಿದೆ. ಅವರು ಕೇವಲ ಮನೆ ಮಠದೊಂದಿಗೆ ವೈರಾಗಿಗಳಾಗುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಈ ರೀತಿ ಅವರು ಹದ್ದಿನ ವೈರಾಗ್ಯ ಅಥವಾ ಪ್ರವೃತ್ತಿಯನ್ನು ಸನ್ಯಾಸ ಮಾಡುತ್ತಾರೆ. ನೀವು ಬೇಹದ್ದಿನ ಸನ್ಯಾಸವನ್ನು ಹೇಗೆ ಮಾಡುತ್ತೀರಿ ಎಂದು ತಂದೆ ತಿಳಿಸುತ್ತಾರೆ. ನೀವು ಆತ್ಮಗಳಾಗಿದ್ದೀರಿ, ಭಕ್ತಿಯಲ್ಲಿ ಆತ್ಮ ಹಾಗೂ ಪರಮಾತ್ಮನ ಜ್ಞಾನವಿರುವುದಿಲ್ಲ. ನಾವು ಆತ್ಮ ಏನಾಗಿದ್ದೇವೆ, ಎಲ್ಲಿಂದ ಬಂದಿದ್ದೇವೆ, ಎಂತಹ ಪಾತ್ರವನ್ನು ಮಾಡಿದ್ದೇವೆ? ಸ್ವಲ್ಪವನ್ನೂ ತಿಳಿದುಕೊಂಡಿಲ್ಲ. ಸತ್ಯಯುಗದಲ್ಲಿ ಕೇವಲ ಆತ್ಮನ ಜ್ಞಾನವಿರುತ್ತದೆ. ಈ ರೀತಿ ನಾವು ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಪಡೆದುಕೊಳ್ಳುತ್ತೇವೆಂದು ತಿಳಿದುಕೊಂಡಿರುತ್ತಾರೆ. ಅಲ್ಲಿ ಪರಮಾತ್ಮ ಜ್ಞಾನದ ಆವಶ್ಯಕತೆ ಇರುವುದಿಲ್ಲ. ಆದುದರಿಂದ ಅಲ್ಲಿ ಪರಮಾತ್ಮನನ್ನು ನೆನಪು ಮಾಡುವುದಿಲ್ಲ. ಇದೆಲ್ಲವೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ತಂದೆ ನಾಲೆಜ್‍ಫುಲ್ ಆಗಿದ್ದಾರೆ. ತಂದೆಯ ಬಳಿ ಸೃಷ್ಟಿಚಕ್ರದ ಆದಿ, ಮಧ್ಯ, ಅಂತ್ಯದ ಜ್ಞಾನವಿದೆ. ತಂದೆಯು ನಿಮಗೆ ಪರಮಾತ್ಮನ ಜ್ಞಾನವನ್ನು ಕೊಟ್ಟಿದ್ದಾರೆ. ನೀವು ಯಾರನ್ನಾದರೂ ಸಹ ಆತ್ಮನ ರೂಪ ಹೇಗಿದೆ ಎಂದು ಕೇಳಬೇಕು. ಜ್ಯೋತಿ ಸ್ವರೂಪವೆಂದು ಹೇಳುತ್ತಾರೆ, ಆದರೆ ಆ ಜ್ಯೋತಿ ಸ್ವರೂಪ ಹೇಗಿದೆ ಎಂದು ಯಾರೂ ಸಹ ತಿಳಿದುಕೊಂಡಿಲ್ಲ. ಆತ್ಮ ಅತಿ ಸೂಕ್ಷ್ಮ ಬಿಂದು ನಕ್ಷತ್ರದಂತೆ ಇದೆ ಎಂದು ಈಗ ನೀವು ತಿಳಿದುಕೊಂಡಿದ್ದೀರಿ. ತಂದೆಯೂ ಸಹ ನಕ್ಷತ್ರದಂತೆ ಇದ್ದಾರೆ. ಆದರೆ ಅವರ ಮಹಿಮೆ ಅಪರಮಪಾರವಾಗಿದೆ. ನೀವು ಮುಕ್ತಿ, ಜೀವನ್ಮುಕ್ತಿಯನ್ನು ಹೇಗೆ ಪಡೆಯುತ್ತೀರೆಂದು ಈಗ ತಂದೆ ಸಮ್ಮುಖದಲ್ಲಿ ಕುಳಿತು ತಿಳಿಸಿಕೊಡುತ್ತಿದ್ದಾರೆ. ಶ್ರೀಮತದಂತೆ ನಡೆಯುವದರಿಂದ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೀರೆಂದು ತಂದೆ ತಿಳಿಸುತ್ತಾರೆ. ಜನರು ಮುಕ್ತಿ-ಜೀವನ್ಮುಕ್ತಿಗಾಗಿ ದಾನ, ಪುಣ್ಯ, ಯಜ್ಞ ಮೊದಲಾದವುಗಳನ್ನು ಮಾಡುತ್ತಾರೆ. ಭಗವಂತ ದಯೆ ತೋರಿ ನಮ್ಮನ್ನು ಕರೆದುಕೊಂಡು ಹೋಗುತ್ತಾರೆಂದು ತಿಳಿದುಕೊಳ್ಳುತ್ತಾರೆ. ಯಾವುದಾದರೂ ಒಂದು ರೂಪದಲ್ಲಿ ಭಗವಂತ ಸಿಗುತ್ತಾರೆಂದು ಭಾವನೆ ಇರುತ್ತದೆ. ಹಾಗಾದರೆ ಯಾವಾಗ ಸಿಗುತ್ತಾರೆಂದು ಅವರನ್ನು ಕೇಳಬೇಕು. ಇನ್ನು ಬಹಳ ಸಮಯವಿರುವ ಕಾರಣ ಅಂತ್ಯದಲ್ಲಿ ಸಿಗುತ್ತಾರೆಂದು ಹೇಳುತ್ತಾರೆ. ಈ ರೀತಿ ಮನುಷ್ಯರು ಸಂಪೂರ್ಣ ಅಂಧಕಾರದಲ್ಲಿದ್ದಾರೆ. ನೀವು ಜ್ಞಾನವೆಂಬ ಪ್ರಕಾಶದಲ್ಲಿದ್ದೀರಿ. ನೀವು ಈಗ ಪತಿತರನ್ನು ಪಾವನ ಮಾಡಲು ನಿಮಿತ್ತರಾಗುತ್ತೀರಿ. ನೀವು ಈ ರೀತಿ ಬಹಳ ಶಾಂತಿಯಿಂದ ಕೆಲಸ ಮಾಡಬೇಕು. ಈ ರೀತಿ ಪ್ರೀತಿಯಿಂದ ತಿಳಿಸಿಕೊಡಿ-ಮನುಷ್ಯರಿಂದ ದೇವತೆ ಅಥವಾ ಕವಡೆಯಿಂದ ವಜ್ರ ಸಮಾನ ಒಂದು ಸೆಕೆಂಡಿನಲ್ಲಿ ಆಗಬೇಕು. ಈಗ ತಂದೆಯೂ ಸಹ ಕಲ್ಪ-ಕಲ್ಪ ನಾನು ಬಂದು ಮಕ್ಕಳ ಸೇವೆಯಲ್ಲಿ ಉಪಸ್ಥಿತವಾಗಬೇಕು. ಈ ಸೃಷ್ಟಿ ಚಕ್ರ ಹೇಗೆ ಸುತ್ತುತ್ತದೆ ಎಂದು ತಿಳಿಸಬೇಕು. ಅಲ್ಲಿ ದೇವತೆಗಳು ಎಷ್ಟೊಂದು ಖುಷಿಯಲ್ಲಿರುತ್ತಾರೆ, ತಂದೆಯಿಂದ ಆಸ್ತಿ ಪ್ರಾಪ್ತಿಯಾಗಿರುವ ಕಾರಣ ಯಾವ ಚಿಂತೆಯ ಮಾತು ಇರುವುದಿಲ್ಲ. ಅದನ್ನು ದೇವರ ಹೂದೋಟವೆಂದು ಕರೆಯಲಾಗುತ್ತದೆ. ಅಲ್ಲಿ ವಜ್ರ ವೈಢೂರ್ಯಗಳ ಅರಮನೆಯಿದ್ದು ಬಹಳ ಶ್ರೀಮಂತರಾಗಿದ್ದರು. ಈ ಸಮಯದಲ್ಲಿ ತಂದೆ ನಿಮ್ಮನ್ನು ಜ್ಞಾನರತ್ನಗಳಿಂದ ಧನವಂತರನ್ನಾಗಿ ಮಾಡುತ್ತಿದ್ದಾರೆ. ನಂತರ ನಿಮಗೆ ಶರೀರವು ಬಹಳ ಆರೋಗ್ಯ ಕಾಯ ಸುಂದರವಾದ ಶರೀರ ಸಿಗುತ್ತದೆ. ಈಗ ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ಎಂದು ತಂದೆ ಹೇಳುತ್ತಾರೆ. ಈ ದೇಹ ಹಾಗೂ ದೇಹದ ಸಂಬಂಧ ಮುಂತಾದವುಗಳೆಲ್ಲವು ಸ್ಥೂಲವಾಗಿವೆ. ನೀವು ನಿಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ, ಈಗ ಎಂಬತ್ತನಾಲ್ಕು ಜನ್ಮಗಳ ಜ್ಞಾನ ನಿಮ್ಮ ಬುದ್ದಿಯಲ್ಲಿದೆ. ನಾಟಕ ಮುಗಿದ ಮೇಲೆ ಈಗ ಮನೆಗೆ ಹಿಂತಿರುಗಬೇಕು. ಈ ಸ್ಥೂಲವನ್ನು ಇನ್ನೇನು ಬಿಟ್ಟೇ ಬಿಟ್ಟೆವೆಂಬ ನೆನಪು ಸದಾ ಬುದ್ದಿಯಲ್ಲಿರಬೇಕು. ಆಗ ಬುದ್ದಿ ತಂದೆ ಜೊತೆಯಲ್ಲಿದ್ದು ವಿಕರ್ಮ ವಿನಾಶವಾಗುತ್ತದೆ. ಗೃಹಸ್ಥ ವ್ಯವಹಾರದಲ್ಲಿ ಕಮಲ ಪುಷ್ಪ ಸಮಾನ ಸುಖವಾಗಿರಬೇಕು. ಪ್ರಪಂಚದಲ್ಲಿ ವಾನಪ್ರಸ್ಥಿಗಳು ಮನೆಯನ್ನು ಬಿಟ್ಟು ಸಾಧು-ಸಂತರ ಬಳಿ ಹೋಗಿ ಕುಳಿತುಕೊಳ್ಳುತ್ತಾರೆ, ಆದರೆ ಅವರಿಗೆ ಇಲ್ಲಿ ನಮಗೇನು ಪ್ರಾಪ್ತಿ ಆಗುತ್ತದೆಂಬ ಜ್ಞಾನವಿರುವುದಿಲ್ಲ. ಯಾವಾಗ ವಾಸ್ತವಿಕವಾಗಿ ಸ್ಥೂಲದೊಂದಿಗೆ ಮಮತ್ವ ದೂರವಾಗಬೇಕೆಂದರೆ ಪ್ರಾಪ್ತಿಯ ಜ್ಞಾನವಿರಬೇಕು. ಅವರು ಅಂತ್ಯದಲ್ಲಿ ಮಕ್ಕಳ ಮರಿಯ ಬಾರದಿರಲಿ ಎಂದು ಮನೆ, ಮಠವನ್ನು ದೂರ ಮಾಡಿಕೊಳ್ಳುತ್ತಾರೆ, ಆದರೆ ಈ ಹಳೆಯ ಪ್ರಪಂಚದೊಂದಿಗೆ ಮಮತ್ವ ದೂರವಾದಾಗ ನಾವು ವಿಶ್ವದ ಮಾಲೀಕರಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಇಲ್ಲಿ ಬಹಳ ಶ್ರೇಷ್ಠವಾದ ಲಾಭವಿದೆ. ಉಳಿದಂತೆ ಪ್ರಪಂಚದಲ್ಲಿ ಓದುವುದೆಲ್ಲಾ ಅಲ್ಪಕಾಲದ ಸುಖದ ಸಲುವಾಗಿ ಮಾಡುತ್ತಾರೆ. ಭಕ್ತಿಯನ್ನೂ ಸಹ ಅಲ್ಪಕಾಲದ ಸುಖವನ್ನು ಪಡೆಯಲು ಮಾಡುತ್ತಾರೆ. ಮೀರಾಳಿಗೂ ಸಹ ಕೇವಲ ಸಾಕ್ಷಾತ್ಕಾರವಾಯಿತು, ಆದರೆ ರಾಜ್ಯವನ್ನು ತೆಗೆದುಕೊಳ್ಳಲು ಆಗುವುದಿಲ್ಲ.

ನಾವು ತಂದೆಯ ಶ್ರೀಮತದಂತೆ ನಡೆಯುವದರಿಂದ ಅತಿ ಶ್ರೇಷ್ಠ ಬಹುಮಾನ ಸಿಗುವುದೆಂದು ನೀವು ತಿಳಿದುಕೊಂಡಿದ್ದೀರಿ. ಪವಿತ್ರತೆ, ಶಾಂತಿ, ಸುಖ ಸ್ಥಾಪನೆ ಮಾಡುವ ಸಲುವಾಗಿ ಎಷ್ಟೊಂದು ಬೆಲೆಯುಳ್ಳ ಬಹುಮಾನ ಸಿಗುತ್ತದೆ. ಆದುದರಿಂದ ಈ ದೇಹಾಭಿಮಾನದಿಂದ ದೂರವಾಗಲು ತಂದೆ ಹೇಳುತ್ತಾರೆ. ನಾವು ನಿಮಗೆ ಸತ್ಯಯುಗದಲ್ಲಿ ಶ್ರೇಷ್ಠವಾದ ಆರೋಗ್ಯವುಳ್ಳ ಸುಂದರವಾದ ದೇಹ ಹಾಗೂ ದೇಹದ ಸಂಬಂಧವನ್ನು ಕೊಡುತ್ತೇನೆ. ಅಲ್ಲಿ ದುಃಖದ ಚಿನ್ಹೆ ಇರುವುದಿಲ್ಲ. ಆದುದರಿಂದ ಈಗ ನನ್ನ ಮತದಂತೆ ಯಥಾರ್ಥವಾಗಿ ನಡೆಯಬೇಕು. ಮಮ್ಮಾ ಬಾಬಾ ನನ್ನ ಮತದಂತೆ ಯಥಾರ್ಥವಾಗಿ ನಡೆದ ಕಾರಣ ಮೊದಲನೆಯ ಸ್ಥಾನ ಅವರಿಗೆ ಸಿಗುತ್ತದೆ. ಈ ಸಮಯದಲ್ಲಿ ಜ್ಞಾನ-ಜ್ಞಾನೇಶ್ವರಿ ಆಗಿ ಸತ್ಯಯುಗದಲ್ಲಿ ರಾಜ-ರಾಜೇಶ್ವರಿ ಆಗುತ್ತಾರೆ. ಯಾವಾಗ ಈಶ್ವರನ ಜ್ಞಾನದಿಂದ ನೀವು ರಾಜರಿಗೂ ರಾಜರಾದ ಮೇಲೆ ಸತ್ಯಯುಗದಲ್ಲಿ ನಿಮಗೆ ಈ ಜ್ಞಾನ ಇರುವುದಿಲ್ಲ. ಕೇವಲ ಈಗ ಮಾತ್ರ ನಿಮಗೆ ಈ ಜ್ಞಾನ ಇರುತ್ತದೆ. ಈಗ ದೇಹಾಭಿಮಾನವನ್ನು ಬಿಡಬೇಕು. ನನ್ನ ಸ್ತ್ರೀ, ನನ್ನ ಮಗು ಈ ಎಲ್ಲವನ್ನು ಮರೆಯಬೇಕು. ಇವರೆಲ್ಲರೂ ದೇಹದಿಂದ ಸತ್ತು ಹೋಗಿದ್ದಾರೆಂದು ತಿಳಿದುಕೊಳ್ಳಬೇಕು. ನಮ್ಮ ಶರೀರವೂ ಸಹ ಸತ್ತು ಹೋಗಿದೆ. ನಾವು ಈಗ ತಂದೆಯ ಬಳಿ ಹೋಗಬೇಕು. ಪ್ರಪಂಚದವರಿಗೆ ಈ ಸಮಯದಲ್ಲಿ ಆತ್ಮನ ಜ್ಞಾನವೂ ಸಹ ಇಲ್ಲದಾಗಿದೆ. ಆತ್ಮದ ಜ್ಞಾನ ಸತ್ಯಯುಗದಲ್ಲಿ ಈ ರೀತಿ ಇರುತ್ತದೆ. ಶರೀರವು ವೃದ್ದಾಪ್ಯವನ್ನು ತಲುಪಿದಾಗ ಅಂತ್ಯದಲ್ಲಿ ಈ ನನ್ನ ವೃದ್ದ ಶರೀರವನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳಬೇಕೆಂಬ ತಿಳುವಳಿಕೆ ಇರುತ್ತದೆ. ಮೊದಲು ನೀವು ಮುಕ್ತಿಧಾಮವನ್ನು ತಲುಪಬೇಕು. ಸತ್ಯಯುಗದಲ್ಲಿ ಮನೆಗೆ ಹೋಗಬೇಕೆಂದು ಯಾರೂ ಸಹ ಹೇಳುವುದಿಲ್ಲ. ಮನೆ ಅರ್ಥಾತ್ ಪರಂಧಾಮಕ್ಕೆ ಹಿಂತಿರುಗುವ ಸಮಯ ಇದೇ ಆಗಿದೆ. ಬಾಬಾ ಸಮ್ಮುಖದಲ್ಲಿ ಎಷ್ಟೊಂದು ತಿಳುವಳಿಕೆಯನ್ನು ಹೇಳಿ ನಿಮ್ಮ ಬುದ್ದಿಯಲ್ಲಿ ಜ್ಞಾನವನ್ನು ತುಂಬುತ್ತಾರೆ. ತಂದೆಯ ಸಮ್ಮುಖದಲ್ಲಿ ಕೇಳುವ ಹಾಗೂ ಓದುವುದರಲ್ಲಿ ಹಗಲು ರಾತ್ರಿಯ ಅಂತರವಿದೆ. ಆತ್ಮನಿಗೆ ಈಗ ತನ್ನ ಪರಿಚಯ ಪ್ರಾಪ್ತಿಯಾಗಿದೆ. ಇದನ್ನು ಜ್ಞಾನದ ಚಕ್ಷು ಎಂದು ಕರೆಯಲಾಗುತ್ತದೆ. ಎಷ್ಟೊಂದು ವಿಶಾಲ ಬುದ್ದಿ ಇರಬೇಕು. ಆತ್ಮ ಅತಿ ಸೂಕ್ಷ್ಮ ಆತ್ಮನಲ್ಲಿ ಎಷ್ಟೊಂದು ಪಾತ್ರ ತುಂಬಿದೆ. ನಾವೀಗ ತಂದೆಯ ಹಿಂದೆ ಓಡುತ್ತಾ ಹೋಗುತ್ತೇವೆ. ಎಲ್ಲರ ಶರೀರ ಸಮಾಪ್ತಿಯಾಗುತ್ತದೆ. ಪ್ರಪಂಚದ ಚರಿತ್ರೆ, ಭೂಗೋಳ ಪುನಃ ಪುನರಾವರ್ತನೆ ಆಗುತ್ತದೆ. ಮನೆ ಮಠವನ್ನು ಬಿಡಬಾರದು. ಕೇವಲ ಮಮತ್ವವನ್ನು ಅಳಿಸಿಕೊಂಡು ಪವಿತ್ರವಾಗಿರಬೇಕು. ಯಾರಿಗೂ ದುಃಖಕೊಡಬಾರದು. ಮೊದಲು ಜ್ಞಾನದ ಮಂಥನ ಮಾಡಿ ನಂತರ ಪ್ರೀತಿಯಿಂದ ಜ್ಞಾನವನ್ನು ಹೇಳಿ. ಶಿವ ತಂದೆಯೂ ವಿಚಾರ ಸಾಗರ ಮಂಥನ ಮಾಡುವುದಿಲ್ಲ. ಮಕ್ಕಳಿಗೆ ಮಾತ್ರ ಹೇಳುತ್ತಾರೆ, ಆದರೂ ಸಹ ಎಲ್ಲವನ್ನು ಶಿವ ತಂದೆ ತಿಳಿಸುತ್ತಾರೆಂದು ತಿಳಿದುಕೊಳ್ಳಬೇಕು. ಬ್ರಹ್ಮಾ ತಂದೆಗೆ ನಾನು ತಿಳಿಸುತ್ತಿದ್ದೇನೆಂಬ ನೆನಪಿರುವುದಿಲ್ಲ. ಶಿವ ತಂದೆಯೇ ತಿಳಿಸುತ್ತಾರೆ. ಇದನ್ನು ನಿರಹಂಕಾರಿತನವೆಂದು ಕರೆಯಲಾಗುವುದು. ಒಬ್ಬ ಶಿವ ತಂದೆಯನ್ನು ನೆನಪು ಮಾಡಬೇಕು. ತಂದೆ ಮಾಡುವ ವಿಚಾರ ಸಾಗರ ಮಂಥನವನ್ನು ನಮಗೆ ತಿಳಿಸುತ್ತಾರೆ. ಏಕೆಂದರೆ ಮಕ್ಕಳೂ ಸಹ ಅದನ್ನು ಅನುಸರಿಸಬೇಕೆಂದು ತಿಳಿಸುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ. ರಾತ್ರಿ ಎಚ್ಚರವಾಗಿದ್ದು ಈ ಎಲ್ಲಾ ಆಲೋಚನೆಯನ್ನು ಮಾಡಬೇಕು. ಮಲಗಿರದೆ ಕುಳಿತುಕೊಂಡು ಮಾಡಬೇಕು. ನಾವಾತ್ಮ ಎಷ್ಟೊಂದು ಸೂಕ್ಷ್ಮ ಬಿಂದು ಆಗಿದ್ದೇವೆ, ತಂದೆ ನೀವು ಎಷ್ಟೊಂದು ಜ್ಞಾನವನ್ನು ಹೇಳುತ್ತಿದ್ದೀರಿ. ಇದು ಸುಖ ಕೊಡುವ ತಂದೆಯ ಕಮಾಲಾಗಿದೆ! ತಂದೆಯು ಹೇಳುತ್ತಾರೆ – ನಿದ್ರೆ ಗೆಲ್ಲುವಂತಹ ಮಕ್ಕಳೇ, ಅನ್ಯ ದೇಹ ಸಹಿತ ದೇಹದ ಮಿತ್ರ ಸಂಬಂಧಿ ಮೊದಲಾದವರನ್ನು ಮರೆಯಬೇಕೆಂದು ಹೇಳುತ್ತಾರೆ. ಏಕೆಂದರೆ ಇದೆಲ್ಲವೂ ಸಮಾಪ್ತಿ ಆಗುತ್ತದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ಎಲ್ಲರೊಂದಿಗೆ ಮಮತ್ವವನ್ನು ಅಳಿಸಿಕೊಂಡು ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರವಾಗಿರಬೇಕು. ಈ ಶರೀರವನ್ನು ಬಿಟ್ಟರೂ ಸಹ ಯಾವ ಆಸಕ್ತಿ ಇರಬಾರದು. ಈ ರೀತಿ ಸತ್ಯ-ಸತ್ಯ ಕಾಶಿ ಕಲ್ವಟಲ್ಲಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಳ್ಳಬೇಕು. ಸ್ವಯಂ ಕಾಶಿನಾಥ ಶಿವ ತಂದೆ ಹೇಳುತ್ತಾರೆ ನಿಮ್ಮ ಎಲ್ಲರನ್ನು ಕರೆದೊಯ್ಯಲು ಬಂದಿದ್ದೇನೆ, ಆದುದರಿಂದ ಈ ಕಾಶಿ ಕಲ್ವಟಲ್ಲಿ ಅರ್ಪಣೆ ಆಗಲೇಬೇಕು. ಪ್ರಕೃತಿಯ ಪ್ರಕೋಪವೂ ಸಹ ಈಗ ಬಹಳ ಆಗುತ್ತದೆ. ಆ ಸಮಯದಲ್ಲಿ ನೀವು ತಂದೆಯ ನೆನಪಿನಲ್ಲಿರಬೇಕು. ಕಾಶಿಯಲ್ಲೂ ಸಹ ಶಿವನ ನೆನಪಿನಲ್ಲಿದ್ದು ಭಾವಿಯಲ್ಲಿ ಬೀಳುತ್ತಿದ್ದರು, ಆದರೆ ಈ ರೀತಿ ಮಾಡುವುದರಿಂದ ಏನೂ ಸಿಗುವುದಿಲ್ಲ. ಇಲ್ಲಿ ನೀವು ಶಿಕ್ಷೆ ಇಲ್ಲದಂತೆ ಮಾಡಿಕೊಳ್ಳಬೇಕು. ಇಲ್ಲವಾದರೆ ಶ್ರೇಷ್ಠ ಪದವಿ ಸಿಗುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮ ವಿನಾಶವಾಗುತ್ತದೆ. ಜೊತೆಯಲ್ಲಿ ನಾವು ಪುನಃ ಎಂಬತ್ತನಾಲ್ಕು ಜನ್ಮಗಳ ಚಕ್ರದಲ್ಲಿ ಬರುತ್ತೇವೆಂದು ನೆನಪಿರಬೇಕು. ಈ ಜ್ಞಾನವನ್ನು ಧಾರಣೆ ಮಾಡುವದರಿಂದ ನಾವು ಚಕ್ರವರ್ತಿ ರಾಜಾ ಆಗುತ್ತೇವೆ. ಯಾವ ವಿಕರ್ಮವನ್ನು ಮಾಡಬಾರದು. ಏನಾದರೂ ಕೇಳಬೇಕಾದರೆ ತಂದೆಯಿಂದ ಸಲಹೆ ಪಡೆಯಬಹುದು. ಸರ್ಜನ್ ನಾನು ಒಬ್ಬನೇ ಆಗಿದ್ದೇನೆ. ಒಂದುವೇಳೆ ಸಮ್ಮುಖದಲ್ಲಿ ಆದರೂ ಕೇಳಬಹುದು ಪತ್ರದಲ್ಲಿ ಆದರೂ ಕೇಳಬಹುದು. ತಂದೆ ದಾರಿ ತೋರಿಸುತ್ತಾರೆ, ತಂದೆ ಅತಿ ಸೂಕ್ಷ್ಮ ನಕ್ಷತ್ರವಾಗಿದ್ದರೂ ಸಹ ಅವರ ಮಹಿಮೆ ಅಪರಮಪಾರವಾಗಿದೆ. ಕರ್ತವ್ಯ ಮಾಡಿರುವ ಕಾರಣ ಮಹಿಮೆಯನ್ನು ಮಾಡುತ್ತಾರೆ. ಈಶ್ವರನೇ ಸರ್ವರ ಸದ್ಗತಿದಾತ ಆಗಿದ್ದಾರೆ. ಬ್ರಹ್ಮಾ ತಂದೆಗೂ ಸಹ ಜ್ಞಾನ ಕೊಡುವವರು ಪರಮಪಿತ ಪರಮಾತ್ಮ ಜ್ಞಾನ ಸಾಗರ ಆಗಿದ್ದಾರೆ. ಮಕ್ಕಳೇ ಒಬ್ಬ ತಂದೆಯನ್ನು ನೆನಪು ಮಾಡುತ್ತಾ ಬಹಳ ಮಧುರರಾಗಬೇಕೆಂದು ತಂದೆ ತಿಳಿಸುತ್ತಾರೆ. ಶಿವ ತಂದೆ ಎಷ್ಟೊಂದು ಮಧುರವಾಗಿದ್ದಾರೆ, ಪ್ರೀತಿಯಿಂದ ಎಲ್ಲರಿಗೂ ತಿಳಿಸುತ್ತಿರುತ್ತಾರೆ, ತಂದೆ ಪ್ರೀತಿಯ ಸಾಗರರಾಗಿರುವ ಕಾರಣ ಎಲ್ಲರನ್ನು ಪ್ರೀತಿ ಮಾಡುತ್ತಾರೆ. ಮಧುರ-ಮಧುರ ಮಕ್ಕಳೇ ಯಾರಿಗೂ ಸಹ ಮನಸ್ಸಾ, ವಾಚಾ, ಕರ್ಮಣಾ ದುಃಖ ಕೊಡಬಾರದೆಂದು ತಂದೆ ಹೇಳುತ್ತಾರೆ. ಒಂದುವೇಳೆ ನಿಮಗೆ ಯಾರೊಂದಿಗಾದರೂ ಶತೃತ್ವ ಇದ್ದರೂ ಸಹ ದುಃಖ ಕೊಡುವ ಆಲೋಚನೆ ಬರಬಾರದು. ಎಲ್ಲರಿಗೂ ಸುಖದ ಮಾತನ್ನೇ ಹೇಳಬೇಕು. ಆಂತರ್ಯದಲ್ಲಿ ಯಾರ ಪ್ರತಿಯೂ ಸಂಶಯ ಇರಬಾರದು. ಶಂಕರಾಚಾರ್ಯ ಮೊದಲಾದವರಿಗೆ ಎಷ್ಟೊಂದು ದೊಡ್ಡ-ದೊಡ್ಡ ಬೆಳ್ಳಿಯ ಸಿಂಹಾಸನದ ಮೇಲೆ ಕುಳ್ಳರಿಸುತ್ತಾರೆ. ಇಲ್ಲಿ ಶಿವ ತಂದೆ ನಿಮ್ಮನ್ನು ವಜ್ರ ಸಮಾನ ಮಾಡುತ್ತಾರೆ, ಆದುದರಿಂದ ಅವರಿಗೆ ವಜ್ರದ ಸಿಂಹಾಸನ ಇರಬೇಕು. ಆದರೆ ಶಿವ ತಂದೆ ಹೇಳುತ್ತಾರೆ-ನಾನು ಪತಿತ ಶರೀರ ಹಾಗೂ ಪತಿತ ಪ್ರಪಂಚದಲ್ಲಿ ಬರುತ್ತೇನೆ. ನೋಡಿ…! ತಂದೆ ಎಂತಹ ಸಿಂಹಾಸನವನ್ನು ತೆಗೆದುಕೊಂಡಿದ್ದಾರೆ. ತನಗಾಗಿ ಏನನ್ನೂ ಬೇಡುವುದಿಲ್ಲ. ಎಲ್ಲಿ ಬೇಕಾದರೂ ಇರಬಹುದು. ಚೀಲದಲ್ಲಿ ಈಶ್ವರನನ್ನು ನೋಡಿ ಎಂದು ಹೇಳುತ್ತಾರೆ…… ಸ್ವಯಂ ಭಗವಂತನು ಬಂದು ಈ ಹಳೆಯ ಚೀಲದಲ್ಲಿ (ಶರೀರದಲ್ಲಿ) ಕುಳಿತಿದ್ದಾರೆ, ಈಗ ತಂದೆ ಸ್ವರ್ಣಿಮಯುಗದ ಪ್ರಪಂಚಕ್ಕೆ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ನನಗೆ ಈ ಪತಿತ ಪ್ರಪಂಚದಲ್ಲಿ ಮೂರು ಹೆಜ್ಜೆಯ ಭೂಮಿಯೂ ಸಿಗುವುದಿಲ್ಲವೆಂದು ಹೇಳುತ್ತಾರೆ. ವಿಶ್ವದ ಮಾಲೀಕರು ನೀವು ಮಾತ್ರ ಆಗುತ್ತೀರಿ. ನಾಟಕದಲ್ಲಿ ನನ್ನ ಪಾತ್ರವೇ ಈ ರೀತಿ ಇದೆ. ಭಕ್ತಿ ಮಾರ್ಗದಲ್ಲಿಯೂ ಸಹ ನಾನು ಸುಖ ಕೊಡಬೇಕು. ಏಕೆಂದರೆ ಮಾಯೆಯು ಬಹಳ ದುಃಖಿಯನ್ನಾಗಿ ಮಾಡುತ್ತದೆ. ತಂದೆ ದುಃಖದಿಂದ ಬಿಡಿಸಿ ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ನಾಟಕವನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ಒಂದು ಭಕ್ತಿಯ ಆಡಂಭರ, ಮತ್ತೊಂದು ಮಾಯೆಯ ಆಡಂಭರವಿದೆ. ವಿಜ್ಞಾನದಿಂದಲೂ ಸಹ ಏನೇನು ಮಾಡುತ್ತಿದ್ದಾರೆ…. ನೋಡಿ! ಮನುಷ್ಯರು ಇದನ್ನು ಸ್ವರ್ಗವೆಂದು ತಿಳಿದು ಕುಳಿತಿದ್ದಾರೆ. ಇದು ವಿಜ್ಞಾನದ ಆಕರ್ಷಣೆ ಎಂದು ತಂದೆ ತಿಳಿಸುತ್ತಾರೆ. ಇನ್ನೇನು ಇದೆಲ್ಲವು ಹೊರಟು ಹೋಗುತ್ತದೆ. ಈ ದೊಡ್ಡ-ದೊಡ್ಡ ಮನೆಗಳೆಲ್ಲಾ ಬೀಳುತ್ತವೆ. ನಂತರ ಈ ವಿಜ್ಞಾನ ಸತ್ಯಯುಗದಲ್ಲಿ ನಿಮಗೆ ಸುಖದ ರೂಪದಲ್ಲಿ ಉಪಯೋಗವಾಗುತ್ತದೆ. ನೀವು ಮಕ್ಕಳು ಬಹಳ ಮಧುರರಾಗಬೇಕು. ಹೇಗೆ ತಂದೆ ತಾಯಿ ಎಂದು ಯಾರಿಗೂ ಸಹ ದುಃಖ ಕೊಡುವುದಿಲ್ಲ. ತಂದೆ ತಾಯಿ ಮಕ್ಕಳಿಗೆ ಈ ರೀತಿ ಹೇಳುತ್ತಾರೆ-ಮಕ್ಕಳೇ ಪರಸ್ಪರ ಎಂದಿಗೂ ಯುದ್ಧ ಜಗಳ ಮಾಡಬಾರದು. ಎಂದಿಗೂ ತಂದೆ ತಾಯಿಯ ಗೌರವವನ್ನು ಕಳೆಯಬಾರದು. ಈ ಸ್ಥೂಲ ಶರೀರದಿಂದ ಮಮತ್ವವನ್ನು ಅಳಿಸಿಕೊಳ್ಳಬೇಕು. ಒಬ್ಬ ತಂದೆಯನ್ನು ನೆನಪು ಮಾಡಬೇಕು. ಈ ಪ್ರಪಂಚದ ಎಲ್ಲಾ ವಸ್ತುಗಳು ಸಮಾಪ್ತಿ ಆಗುತ್ತವೆ. ಈಗ ನೀವು ಮನೆಗೆ ಹಿಂತಿರುಗಬೇಕಾಗಿದೆ, ಆದುದರಿಂದ ಈಗ ನೀವು ತಂದೆಯ ಸಹಯೋಗಿಗಳಾಗಬೇಕು. ನೀವು ಸತ್ಯ-ಸತ್ಯ ಸಲಹೆಯ ಸೈನಿಕರಾಗಿದ್ದೀರಿ. ಈಶ್ವರನ ಸೇವಕರಾಗಿ ಮುಳಗಿರುವ ವಿಶ್ವದ ಹಡುಗನ್ನು ಪಾರು ಮಾಡುತ್ತೀರಿ. ಈ ಚಕ್ರ ಹೇಗೆ ತಿರುಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ಬೆಳಗ್ಗೆ ಮೂರು ನಾಲ್ಕು ಗಂಟೆಗೆ ಎಚ್ಚರವಾಗಿ ಈ ರೀತಿ ಚಿಂತನೆ ಮಾಡಿದಾಗ ಬಹಳ ಖುಷಿ ಇರುತ್ತದೆ ಹಾಗೂ ಇನ್ನು ಪಕ್ಕಾ ಆಗುತ್ತೀರಿ. ಜ್ಞಾನವನ್ನು ಪುನರಾವರ್ತನೆ ಮಾಡುವುದಿಲ್ಲವೆಂದರೆ ಮಾಯೆ ಮರೆಯುವಂತೆ ಮಾಡುತ್ತದೆ. ಇಂದು ತಂದೆ ಏನೇನು ತಿಳಿಸಿದರೆಂದು ಮಂಥನ ಮಾಡಬೇಕು. ಏಕಾಂತದಲ್ಲಿ ಕುಳಿತು ವಿಚಾರ ಸಾಗರ ಮಂಥನ ಮಾಡಬೇಕು. ಇಲ್ಲಿಯ ಏಕಾಂತವೂ ಬಹಳ ಚೆನ್ನಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮನಸ್ಸಾ, ವಾಚಾ, ಕರ್ಮಣಾ ಯಾರಿಗೂ ಸಹ ದುಃಖ ಕೊಡಬಾರದು. ಯಾರ ಮಾತನ್ನು ಮನಸ್ಸಲ್ಲಿ ಇಟ್ಟುಕೊಳ್ಳಬಾರದು. ತಂದೆ ಸಮಾನ ಪ್ರೀತಿಯ ಸಾಗರ ಆಗಬೇಕು.

2. ಏಕಾಂತದಲ್ಲಿ ಕುಳಿತು ವಿಚಾರ ಸಾಗರ ಮಂಥನ ಮಾಡಬೇಕು. ಮಂಥನ ಮಾಡಿ ನಂತರ ಪ್ರೀತಿಯಿಂದ ತಿಳಿಸಬೇಕು. ತಂದೆಯ ಸೇವೆಯಲ್ಲಿ ಸಹಯೋಗಿಗಳಾಗಬೇಕು.

ವರದಾನ:-

ಆತ್ಮಿಕ ಘನತೆಯ ಆಧಾರ ಸಂಪೂರ್ಣ ಪವಿತ್ರತೆಯಾಗಿದೆ. ಸಂಪೂರ್ಣ ಪವಿತ್ರತೆಯೇ ಘನತೆಯಾಗಿದೆ. ಇದರ ಹೊಳಪು ಪವಿತ್ರ ಆತ್ಮನ ಸ್ವರೂಪದಿಂದ ಕಾಣಿಸುವುದು. ಪವಿತ್ರತೆಯ ಹೊಳಪೆಂದಿಗೂ ಸಹ ಗುಪ್ತವಾಗಿರಲು ಸಾಧ್ಯವೇ ಇಲ್ಲ, ತನ್ನನ್ನು ಯಾರೆಷ್ಟಾದರೂ ಗುಪ್ತವಾಗಿಡಬಹುದು ಆದರೆ ಅವರ ಮಾತು, ಅವರ ಸಂಬಂಧ-ಸಂಪರ್ಕ, ಆತ್ಮಿಕ ವ್ಯವಹಾರದ ಪ್ರಭಾವವೇ ಅವರನ್ನು ಪ್ರತ್ಯಕ್ಷಗೊಳಿಸುತ್ತದೆ. ಅಂದಮೇಲೆ ಪ್ರತಿಯೊಬ್ಬರೂ ಜ್ಞಾನದ ದರ್ಪಣದಲ್ಲಿ ನೋಡಿಕೊಳ್ಳಿರಿ – ನನ್ನ ಚಹರೆಯಲ್ಲಿ, ಚಲನೆಯಲ್ಲಿ ಆ ಘನತೆಯು ಕಾಣಿಸುತ್ತದೆಯೇ ಅಥವಾ ಸಾಧಾರಣ ಚಹರೆ, ಸಾಧಾರಣ ಚಲನೆಯಿದೆಯೇ?

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top