09 July 2021 KANNADA Murli Today | Brahma Kumaris

Read and Listen today’s Gyan Murli in Kannada

July 8, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಹಾಳಾಗಿರುವವರನ್ನು ಸುಧಾರಣೆ ಮಾಡುವವರು ಅರ್ಥಾತ್ ಅದೃಷ್ಟವನ್ನು ರೂಪಿಸುವವರು ಒಬ್ಬ ತಂದೆಯಾಗಿದ್ದಾರೆ, ಯಾರು ನಿಮಗೆ ಜ್ಞಾನವನ್ನು ಕೊಟ್ಟು ಅದೃಷ್ಟವನ್ನು ರೂಪಿಸುತ್ತಾರೆ”

ಪ್ರಶ್ನೆ:: -

ತಾವು ಮಕ್ಕಳ ಆತ್ಮಿಕ ಭಟ್ಟಿಯ ಒಂದು ಕಾಯಿದೆ ಯಾವುದಾಗಿದೆ?

ಉತ್ತರ:-

ಆತ್ಮಿಕ ಭಟ್ಟಿಯಲ್ಲಿ ಅರ್ಥಾತ್ ನೆನಪಿನ ಯಾತ್ರೆಯಲ್ಲಿ ಕುಳಿತುಕೊಳ್ಳುವವರು ಎಂದೂ ಅಲ್ಲಿ-ಇಲ್ಲಿನ ಯೋಚನೆ ನಡೆಸಬಾರದು, ಒಬ್ಬ ತಂದೆಯನ್ನು ನೆನಪು ಮಾಡಬೇಕು. ಒಂದುವೇಳೆ ಬುದ್ಧಿ ಅಲ್ಲಿ-ಇಲ್ಲಿ ಅಲೆದಾಡುವುದಾದರೆ ತೂಕಡಿಸುತ್ತಾರೆ, ಆಕಲಿಕೆ ಬರುತ್ತದೆ, ಇದರಿಂದ ವಾಯುಮಂಡಲ ಕೆಡುತ್ತದೆ. ತಮಗೆ ತಾವೇ ನಷ್ಟ ಮಾಡಿಕೊಳ್ಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಹೃದಯದ ಆಶ್ರಯ….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಹಾಡಿನ ಎರಡು ಶಬ್ದಗಳನ್ನು ಕೇಳಿದ್ದೀರಿ. ಮಕ್ಕಳಿಗೆ ಹೆಚ್ಚರಿಕೆ ಸಿಗುತ್ತದೆ. ಈ ಸಮಯದಲ್ಲಿ ಕೇವಲ ನೀವು ಬ್ರಾಹ್ಮಣರ ವಿನಃ ಎಲ್ಲರ ಅದೃಷ್ಟ ಹಾಳಾಗಿದೆ. ಅದೃಷ್ಟವನ್ನು ರೂಪಿಸುವವರು ಎಂದು ತಂದೆಗೆ ಹೇಳಲಾಗುತ್ತದೆ. ತಮಗೆ ಗೊತ್ತಿದೆ ಶಿವಬಾಬಾ ಎಷ್ಟು ಮಧುರವಾಗಿದ್ದಾರೆ ಎಂದು. ಬಾಬಾ ಎಂಬ ಅಕ್ಷರ ಮಧುರವಾಗಿದೆ. ತಂದೆಯಿಂದ ಎಲ್ಲಾ ಆತ್ಮರಿಗೆ ಆಸ್ತಿ ಸಿಗುತ್ತದೆ. ಲೌಕಿಕ ತಂದೆಯಿಂದ ಮಕ್ಕಳಿಗೆ ಆಸ್ತಿ ಸಿಗುತ್ತದೆ. ಹೆಣ್ಣು ಮಗುವಿಗೆ ಸಿಗುವುದಿಲ್ಲ. ಇಲ್ಲಿ ಗಂಡು ಮಗು ಅಥವಾ ಹೆಣ್ಣು ಮಗು ಎಲ್ಲರೂ ಆಸ್ತಿಗೆ ಹಕ್ಕುದಾರರಾಗಿದ್ದಾರೆ. ತಂದೆ ಆತ್ಮರಿಗೆ ಅರ್ಥಾತ್ ತಮ್ಮ ಮಕ್ಕಳಿಗೆ ಓದಿಸುತ್ತಾರೆ. ನಾವೆಲ್ಲಾ ಸಹೋದರರಾಗಿದ್ದೇವೆ ಎಂದು ಆತ್ಮ ತಿಳಿಯುತ್ತದೆ. ಇದಕ್ಕೆ ಬ್ರದರ್ಹುಡ್ (ವಿಶ್ವ ಭ್ರಾತೃತ್ವ) ಎಂದು ಹೇಳಲಾಗುತ್ತದೆಯಲ್ಲವೇ. ಒಬ್ಬ ಭಗವಂತನ ಮಕ್ಕಳಾಗಿದ್ದೇವೆ ಆದರೆ ಇಷ್ಟು ಯುದ್ಧ-ಜಗಳ ಏಕೆ ಮಾಡುತ್ತಾರೆ? ಎಲ್ಲರೂ ಪರಸ್ಪರ ಜಗಳ ಮಾಡುತ್ತಲೇ ಇರುತ್ತಾರೆ. ಅನೇಕ ಧರ್ಮ, ಅನೇಕ ಮತಗಳಿದೆ ಮತ್ತು ಮುಖ್ಯ ಮಾತಂತೂ ರಾವಣ ರಾಜ್ಯದಲ್ಲಿ ಯುದ್ಧವೇ ನಡೆಯುತ್ತದೆ ಏಕೆಂದರೆ ವಿಕಾರಗಳ ಪ್ರವೇಶತೆ ಆಗುತ್ತದೆ. ಕಾಮ ವಿಕಾರದ ಮೇಲೆ ಎಷ್ಟೊಂದು ಯುದ್ಧ, ಜಗಳ ನಡೆಯುತ್ತದೆ. ಈ ರೀತಿ ಬಹಳ ರಾಜರು ಯುದ್ಧ ಮಾಡಿದರು. ಕಾಮ ವಿಕಾರಕ್ಕಾಗಿ ಅನೇಕರು ಜಗಳ ಮಾಡುತ್ತಾರೆ. ಎಷ್ಟು ಖುಷಿ ಆಗುತ್ತಾರೆ. ಯಾರ ಜೊತೆಯಾದರೂ ಮನಸ್ಸಾದರೆ ಹೊಡೆಯುವುದೂ ಮಾಡುತ್ತಾರೆ. ಕಾಮ ಮಹಾಶತ್ರುವಾಗಿದೆ. ಕ್ರೋಧ ಮಾಡಿಕೊಳ್ಳುವವರಿಗೆ ಕ್ರೋಧಿ ಎಂದು ಹೇಳಲಾಗುತ್ತದೆ. ಲೋಭ ಇರುವವರಿಗೆ ಲೋಭಿ ಎಂದು ಹೇಳಲಾಗುತ್ತದೆ. ಆದರೆ ಕಾಮಿ ಆಗಿರುವವರಿಗೆ ಅನೇಕ ಹೆಸರುಗಳಿಟ್ಟಿದ್ದಾರೆ. ಆದ್ದರಿಂದ ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯುವುದು. ಶಾಸ್ತ್ರದಲ್ಲಿ ಅಮೃತ ಎಂದು ಹೆಸರು ಕೊಟ್ಟಿದ್ದಾರೆ. ಸಾಗರ ಮಂಥನ ಮಾಡಿದಾಗ ಅಮೃತ ಬಂದಿದೆ ಎಂದು ತೋರಿಸುತ್ತಾರೆ. ಲಕ್ಷಿಗೆ ಕಲಶವನ್ನು ಕೊಟ್ಟಿದ್ದಾರೆ. ಎಷ್ಟು ಕಥೆಗಳಿವೆ. ಇದರಲ್ಲೂ ಸರ್ವವ್ಯಾಪಿಯ ಮಾತು ದೊಡ್ಡದಾಗಿದೆ, ಗೀತೆಯ ಭಗವಂತ ಯಾರಾಗಿದ್ದಾರೆ? ಮತ್ತು ಪತಿತ-ಪಾವನ ಯಾರಾಗಿದ್ದಾರೆ? ಪ್ರದರ್ಶಿನಿಯಲ್ಲಿ ಮುಖ್ಯವಾಗಿ ಈ ಚಿತ್ರಗಳ ಮೇಲೆ ತಿಳಿಸಲಾಗುತ್ತದೆ. ಪತಿತ-ಪಾವನ, ಜ್ಞಾನ ಸಾಗರ ಮತ್ತು ಅವರಿಂದ ಹೊರಟಿರುವ ಗಂಗಯರೋ ಅಥವಾ ನೀರಿನ ನದಿಗಳೋ ಅಥವಾ ಸಾಗರವೋ? ಎಷ್ಟು ಒಳ್ಳೊಳ್ಳೆಯ ಮಾತುಗಳನ್ನು ತಿಳಿಸಲಾಗುತ್ತದೆ. ತಂದೆ ಕುಳಿತು ತಿಳಿಸುತ್ತಿದ್ದಾರೆ – ಮಧುರಾತಿ ಮಧುರ ಮಕ್ಕಳೇ ನಿಮ್ಮನ್ನು ಯಾರು ಪಾವನ ಮಾಡಿದ್ದಾರೆ? ಹಾಳಾಗಿರುವವರನ್ನು ಸುಧಾರಣೆ ಮಾಡುವವರು ಯಾರು? ಪತಿತ ಪಾವನ ಯಾವಾಗ ಬರುತ್ತಾರೆ? ಈ ಆಟ ಹೇಗೆ ಮಾಡಲ್ಪಟ್ಟಿದೆ? ಯಾರಿಗೂ ಗೊತ್ತಿಲ್ಲ. ತಂದೆಗೆ ಜ್ಞಾನ ಸಾಗರ, ಆನಂದ ಸಾಗರ, ಶಾಂತಿಯ ಸಾಗರ ಎಂದು ಹೇಳಲಾಗುತ್ತದೆ. ಹಾಳಾಗಿರುವವರನ್ನು ಸುಧಾರಣೆ ಮಾಡುವವರು ಒಬ್ಬರೆಯಾಗಿದ್ದಾರೆ ಎಂದು ಗಾಯನವೂ ಸಹ ಇದೆ. ರಾವಣನೇ ನಮ್ಮನ್ನು ಹಾಳು ಮಾಡುತ್ತಾನೆ ಎಂದಂತೂ ಅರ್ಥ ಆಗುತ್ತದೆ. ಇದು ಸೋಲು-ಗೆಲುವಿನ ಆಟವಾಗಿದೆ. ರಾವಣನನ್ನೂ ಸಹ ನೀವು ತಿಳಿದುಕೊಂಡಿದ್ದೀರಿ ಯಾರನ್ನು ವರ್ಷ-ವರ್ಷ ಸುಡುತ್ತಾರೆ. ರಾವಣ ಭಾರತದ ಶತ್ರುವಾಗಿದ್ದಾನೆ. ಭಾರತದಲ್ಲಿಯೇ ಪ್ರತಿ ವರ್ಷ ಸುಡುತ್ತಾರೆ. ಯಾವಾಗಿನಿಂದ ಸುಡುತ್ತಾ ಬಂದಿದ್ದೀರಾ? ಎಂದು ಅವರನ್ನು ಕೇಳಿ. ಅಂದಾಗ ಇದು ಅನಾದಿಯಿಂದ, ಸೃಷ್ಟಿ ಆರಂಭ ಆದಾಗಿನಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಶಾಸ್ತ್ರದಲ್ಲಿ ಓದಿರುವುದೆಲ್ಲಾ ಸತ್ಯ ಎಂದು ಹೇಳುತ್ತಾ ಬಂದಿದ್ದಾರೆ. ಈಶ್ವರನಿಗೆ ಸರ್ವವ್ಯಾಪಿ ಎಂದು ಹೇಳುವುದು ಮುಖ್ಯ ತಪ್ಪಾಗಿದೆ. ತಂದೆ ಇದು ಯಾರ ತಪ್ಪಾಗಿದೆ ಎಂದು ಹೇಳುವುದಿಲ್ಲ. ಇದು ಡ್ರಾಮಾದಲ್ಲಿ ನಿಗದಿಯಾಗಿದೆ. ಸೋಲು-ಗೆಲುವಿನ ಆಟವಾಗಿದೆ. ಮಾಯೆಯ ಜೊತೆ ಸೋತಾದಾಗ ಸೋಲು, ಗೆದ್ದಾಗ ಗೆಲುವು. ಮಾಯೆಯ ಜೊತೆ ಹೇಗೆ ಸೋಲುವುದು, ಅದನ್ನೂ ಸಹ ತಿಳಿಸಲಾಗುತ್ತದೆ. ಪೂರ್ತಿ ಅರ್ಧಕಲ್ಪ ರಾವಣ ರಾಜ್ಯ ನಡೆಯುತ್ತದೆ. ಒಂದು ಸೆಕೆಂಡಿನ ಅಂತರವೂ ಸಹ ಇರಲು ಸಾಧ್ಯವಿಲ್ಲ. ರಾಮ ರಾಜ್ಯದ ಸ್ಥಾಪನೆ, ರಾವಣ ರಾಜ್ಯದ ವಿನಾಶವು ತನ್ನ ಸಮಯದಲ್ಲಿ ಸರಿಯಾಗಿ ಆಗುತ್ತದೆ. ಸತ್ಯಯುಗದಲ್ಲಿ ಲಂಕೆ ಇರುವುದಿಲ್ಲ. ಅದಂತೂ ಬುದ್ಧ ಧರ್ಮದ ಖಂಡವಾಗಿದೆ. ಲಂಡನ್ ಈ ಕಡೆ ಇದೆ, ಅಮೆರಿಕಾ ಈ ಕಡೆ ಇದೆ ಎಂದು ಓದಿರುವವರ ಬುದ್ದಿಯಲ್ಲಿ ಇರುತ್ತದೆ. ವಿದ್ಯೆಯಿಂದ ಬುದ್ಧಿಯ ಬೀಗ ತೆರೆಯಲಾಗುತ್ತದೆ, ಬೆಳಕು ಬರುತ್ತದೆ. ಇದಕ್ಕೆ ಜ್ಞಾನದ ಮೂರನೇ ನೇತ್ರ ಎಂದು ಹೇಳಲಾಗುತ್ತದೆ. ವೃದ್ಧರು ಬಹಳ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವರು ಒಂದು ಮುಖ್ಯ ಮಾತನ್ನು ಧಾರಣೆ ಮಾಡಿಕೊಳ್ಳಬೇಕು, ಯಾವುದು ಅಂತ್ಯದಲ್ಲಿ ಕೆಲಸಕ್ಕೆ ಬರುವುದು. ಮನುಷ್ಯರು ಶಾಸ್ತ್ರಗಳನ್ನಂತೂ ಬಹಳ ಓದುತ್ತಾರೆ. ಆದರೂ ಕೊನೆಗೆ ರಾಮ-ರಾಮ ಎಂಬುದು ಹೇಳಿ ಎಂದು ಒಂದು ಅಕ್ಷರವನ್ನು ಹೇಳಿ ಬಿಡುತ್ತಾರೆ. ಶಾಸ್ತ್ರವನ್ನು ಕೇಳಿಸಿ, ವೇದವನ್ನು ಕೇಳಿಸಿ ಎಂದು ಹೇಳುವುದಿಲ್ಲ. ಕೊನೆಗೆ ರಾಮನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಯಾರು ಹೆಚ್ಚು ಸಮಯ ಯಾವ ಚಿಂತನೆಯಲ್ಲಿ ಇರುತ್ತಾರೆ ಅಂತ್ಯದಲ್ಲೂ ಅದೇ ನೆನಪು ಬಂದು ಬಿಡುತ್ತದೆ. ಈಗ ಎಲ್ಲರ ವಿನಾಶವಂತೂ ಆಗಬೇಕಾಗಿದೆ. ಎಲ್ಲರು ಯಾರನ್ನು ನೆನಪು ಮಾಡುತ್ತಾರೆ? ಎಂದು ನಿಮಗೆ ಗೊತ್ತಿದೆ. ಕೆಲವರು ಕೃಷ್ಣನನ್ನು, ಕೆಲವರು ಗುರುವನ್ನು ನೆನಪು ಮಾಡುತ್ತಾರೆ. ಕೆಲವರು ತಮ್ಮ ದೇಹ ಸಂಬಂಧಿಗಳನ್ನು ನೆನಪು ಮಾಡುತ್ತಾರೆ. ದೇಹವನ್ನು ನೆನಪು ಮಾಡಿದರೆ ಎಲ್ಲವು ಸಮಾಪ್ತಿ ಆಗಿ ಬಿಡುತ್ತದೆ. ತಮ್ಮನ್ನು ತಾವು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂಬ ಒಂದೇ ಮಾತನ್ನು ಇಲ್ಲಿ ನಿಮಗೆ ತಿಳಿಸಲಾಗುತ್ತದೆ. ನಾವು ಎಷ್ಟು ನೆನಪು ಮಾಡುತ್ತೇವೆ ಎಂದು ಚಾರ್ಟ್ ಇಟ್ಟುಕೊಳ್ಳಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತಾ ಹೋಗುತ್ತೀರಿ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪಾವನರಾಗುತ್ತೀರೆಂದಲ್ಲ. ಆತ್ಮನ ಮಾತಾಗಿದೆಯಲ್ಲವೇ. ಆತ್ಮವೇ ಪಾವನ ಆಗುತ್ತದೆ, ಆತ್ಮನೇ ಪತಿತ ಆಗುತ್ತದೆಯಲ್ಲವೇ. ಆತ್ಮ ನಕ್ಷತ್ರ ಬಿಂದು ಆಗಿದೆ ಎಂದು ತಂದೆ ತಿಳಿಸಿದ್ದಾರೆ. ಭೃಕುಟಿಯ ಮಧ್ಯದಲ್ಲಿ ಆತ್ಮ ಇರುವುದು. ಆತ್ಮ ನಕ್ಷತ್ರ ಅತೀ ಸೂಕ್ಷ್ಮವಾಗಿದೆ. ತಾವು ಮಕ್ಕಳೇ ಈ ಮಾತುಗಳನ್ನು ತಿಳಿದುಕೊಳ್ಳಲು ಸಾಧ್ಯ. ನಾನು ಕಲ್ಪದ ಸಂಗಮದಲ್ಲಿ ಬರುತ್ತೇನೆ ಎಂದು ನಾನು ತಿಳಿಸಿದ್ದೇನೆ. ಘೋರ ಅಂಧಕಾರ ಮತ್ತು ಘೋರ ಬೆಳಕಿನ ಸಂಗಮದಲ್ಲಿ ಬರುತ್ತೇನೆ. ಬಾಕಿ ಯುಗ-ಯುಗದಲ್ಲಿ ಬರುವ ಅವಶ್ಯಕತೆ ಇಲ್ಲ. ಏಣಿಯನ್ನು ಇಳಿಯುತ್ತಲೇ ಬರುತ್ತೀರಿ. ಪೂರ್ಣ 84 ಜನ್ಮಗಳ ಏಣಿ ಇಳಿದಾಗ ತಂದೆಯು ಬರುತ್ತಾರೆ. ಈ ಜ್ಞಾನ ಇಡೀ ಪ್ರಪಂಚಕ್ಕಾಗಿ ಇದೆ. ಇವರ ಎಲ್ಲಾ ಚಿತ್ರಗಳು ಕಲ್ಪನೆಯಾಗಿದೆ ಎಂದು ಸನ್ಯಾಸಿಗಳು ಹೇಳಿ ಬಿಡುತ್ತಾರೆ. ಆದರೆ ಕಲ್ಪನೆ ಮಾಡುವ ಮಾತೇ ಇದರಲ್ಲಿ ಇಲ್ಲ. ಇದು ಎಲ್ಲರಿಗೆ ತಿಳಿಸಲಾಗುತ್ತದೆ, ಇಲ್ಲವೆಂದರೆ ಹೇಗೆ ಗೊತ್ತಾಗುತ್ತದೆ. ಆದ್ದರಿಂದ ಈ ಚಿತ್ರಗಳನ್ನು ಮಾಡಲಾಗಿದೆ. ಈ ಪ್ರದರ್ಶಿನಿ ದೇಶ-ವಿದೇಶದಲ್ಲಿ ಆಗುತ್ತಿರುತ್ತದೆ. ಬಹಳ ಭಾರತವಾಸಿ ಮಕ್ಕಳಿದ್ದಾರೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರೂ ಮಕ್ಕಳಾಗಿದ್ದಾರಲ್ಲವೇ. ಇದು ಅನೇಕ ಧರ್ಮಗಳ ವೃಕ್ಷವಾಗಿದೆ. ಇವರೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಸತ್ತು ಹೋಗಿದ್ದಾರೆ ಎಂದು ತಂದೆ ಕುಳಿತು ತಿಳಿಸುತ್ತಾರೆ. ಸತ್ಯಯುಗದಲ್ಲಿ ಯಾರು ಮೊಟ್ಟ ಮೊದಲು ಬರುತ್ತಾರೆ, ಅವರೇ ಪುನಃ ಮೊಟ್ಟ ಮೊದಲು ದ್ವಾಪರದಿಂದ ಹಿಡಿದು ಕಾಮ ಅಗ್ನಿಯಲ್ಲಿ ಸುಟ್ಟು ಹೋಗುತ್ತಾರೆ. ಆದ್ದರಿಂದ ಕಪ್ಪಾಗಿ ಬಿಟ್ಟಿದ್ದಾರೆ. ಈಗ ಎಲ್ಲರ ಸದ್ಗತಿ ಆಗುವುದಿದೆ. ತಾವು ನಿಮಿತ್ತರಾಗಿದ್ದೀರಿ. ನಿಮ್ಮ ಹಿಂದೆ ಎಲ್ಲರ ಸದ್ಗತಿ ಆಗುವುದಿದೆ. ತಂದೆ ಎಷ್ಟು ಸಹಜ ರೀತಿ ತಿಳಿಸುತ್ತಾರೆ. ಕೇವಲ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಆತ್ಮವೇ ದುರ್ಗತಿಯನ್ನು ಪಡೆದುಕೊಂಡಿದೆ. ಆತ್ಮ ಪತಿತ ಆಗುವುದರಿಂದ ಶರೀರವೂ ಸಹ ಅದೇ ರೀತಿ ಸಿಗುತ್ತದೆ. ಆತ್ಮನನ್ನು ಪಾವನ ಮಾಡಿಕೊಳ್ಳುವ ಬಹಳ ಸಹಜ ಯುಕ್ತಿಯನ್ನು ತಂದೆ ತಿಳಿಸುತ್ತಾರೆ.

ತ್ರಿಮೂರ್ತಿ ಚಿತ್ರದಲ್ಲಿ ಬ್ರಹ್ಮನ ಚಿತ್ರವನ್ನು ನೋಡಿ ಮನುಷ್ಯರು ಗೊಂದಲವಾಗುತ್ತಾರೆ. ಇವರಿಗೆ ಬ್ರಹ್ಮಾ ಎಂದು ಏಕೆ ಹೇಳುತ್ತೀರಿ? ಬ್ರಹ್ಮಾ ಅಂತೂ ಸೂಕ್ಷ್ಮವತನವಾಸಿ ದೇವತೆಯಾಗಿದ್ದಾರೆ, ಇಲ್ಲಿ ಎಲ್ಲಿಂದ ಬಂದಿದ್ದಾರೆ? ಈ ದಾದಾರವರಂತೂ ಪ್ರಸಿದ್ಧ ಆಗಿದ್ದರು. ಸಮಾಚಾರ ಪತ್ರದಲ್ಲಿ ಎಲ್ಲಾ ಕಡೆ ಹಾಕಿದರು, ಒಬ್ಬ ವಜ್ರದ ವ್ಯಾಪಾರಿ ನಾನು ಶ್ರಿಕೃಷ್ಣನಾಗಿದ್ದೇನೆ, ನಮಗೆ 16,108 ರಾಣಿಗಳು ಬೇಕು ಎಂದು ಹೇಳಿದರು. ಈ ರೀತಿ ಓಡಿಸಲು ದೊಡ್ಡದಾಗಿ ಸಮಾಚಾರ ಹರಡಿದೆ. ಈಗ ಒಬ್ಬೊಬ್ಬರಿಂದ ಯಾರು ತಲೆ ಕೆಡಿಸಿಕೊಳ್ಳುತ್ತಾರೆ. ಎಷ್ಟೊಂದು ಮನುಷ್ಯರಿದ್ದಾರೆ. ಆಬುನಲ್ಲೂ ಸಹ ಯಾರಾದರೂ ಬರುತ್ತಾರೆಂದರೆ ಅವರಿಗೆ ತಕ್ಷಣ ಅರೇ ಬ್ರಹ್ಮಾಕುಮಾರಿಯರ ಹತ್ತಿರ ಹೋಗುತ್ತೀರಾ! ಅವರಂತೂ ಜಾದೂ ಮಾಡಿ ಬಿಡುತ್ತಾರೆ. ಸ್ತ್ರೀ-ಪುರುಷರನ್ನು ಸಹೋದರ-ಸಹೋದರಿಯರನ್ನಾಗಿ ಮಾಡಿ ಬಿಡುತ್ತಾರೆ. ದೊಡ್ಡ-ದೊಡ್ಡ ಮಾತುಗಳನ್ನು ಹೇಳಿ ತಲೆ ಕೆಡಿಸುತ್ತಾರೆ. ತಾವು ನನಗೆ ಜ್ಞಾನ ಸಾಗರ, ವರ್ಲ್ಡ್ ಆಲ್ಮೈಟಿ ಅಥಾರಿಟಿ ಎಂದು ಹೇಳುತ್ತೀರಿ ಎಂದು ತಂದೆ ತಿಳಿಸುತ್ತಾರೆ. ವರ್ಲ್ಡ್ ಆಲ್ಮೈಟಿ ಅಥಾರಿಟಿ ಎಂದರೆ ಸರ್ವಶಕ್ತಿವಂತ. ಎಲ್ಲಾ ವೇದ, ಶಾಸ್ತ್ರಗಲು ತಿಳಿದಿರುವವರು. ದೊಡ್ಡ ವಿದ್ವಾನರಿಗೂ ಸಹ ಅಥಾರಿಟಿ ಎಂದು ಹೇಳಲಾಗುತ್ತದೆ ಏಕೆಂದರೆ ಅವರೆಲ್ಲರೂ ವೇದ-ಶಾಸ್ತ್ರ ಮುಂತಾದಗಳನ್ನು ಓದುತ್ತಾರೆ. ನಂತರ ಕಾಶಿಗೆ ಹೋಗಿ ಟೈಟಲ್ ತೆಗೆದುಕೊಂಡು ಬರುತ್ತಾರೆ. ಮಹಾ-ಮಹೋಪಾಧ್ಯಾಯ ಶ್ರೀ, ಶ್ರೀ 108 ಸರಸ್ವತಿ ಎಂಬ ಎಲ್ಲಾ ಬಿರುದುಗಳು ಅಲ್ಲಿಯೇ ಸಿಗುತ್ತದೆ. ಯಾರು ಬಹಳ ಬುದ್ಧಿವಂತರಾಗಿರುತ್ತಾರೆ ಅವರಿಗೆ ಬಹಳ ದೊಡ್ಡ ಬಿರುದು ಸಿಗುತ್ತದೆ. ಶಾಸ್ತ್ರಗಳಲ್ಲಿ ಜನಕನ ಬಗ್ಗೆ ಬರೆದಿದ್ದಾರೆ. ಅವರು ಯಾರಾದರೂ ಸತ್ಯ ಬ್ರಹ್ಮ ಜ್ಞಾನಿ ನನಗೆ ತಿಳಿಸಲಿ ಎಂದು ಹೇಳಿದರು. ಈಗ ಬ್ರಹ್ಮ ಜ್ಞಾನಿಗಳಂತೂ ಇಲ್ಲವೇ ಇಲ್ಲ. ಇದೆಲ್ಲಾ ಇಲ್ಲಿನ ಮಾತುಗಳೇ. ದೊಡ್ಡ ಕಥೆ ಮಾಡಿ ಬಿಟ್ಟಿದ್ದಾರೆ. ಶಂಕರ-ಪಾರ್ವತಿಯರದೂ ಸಹ ಬರೆದಿರುವ ಕಥೆಯಾಗಿದೆ. ಎಷ್ಟು ಕಥೆಗಳನ್ನು ಕುಳಿತು ಮಾಡಿದ್ದಾರೆ. ಶಂಕರ ಪಾರ್ವತಿಗೆ ಕಥೆ ತಿಳಿಸಿದ್ದಾರೆ, ವಾಸ್ತವದಲ್ಲಿ ಶಿವ ಎಂದು ಇತ್ತು ನಂತರ ಅವರು ಶಂಕರ-ಪಾರ್ವತಿಯರ ಹೆಸರು ಕೊಟ್ಟು ಬಿಟ್ಟಿದ್ದಾರೆ. ಭಾಗವತ ಮುಂತಾದವುದರಲ್ಲಿ ಈ ಸಮಯದ ಮಾತುಗಳಿವೆ. ಅವರಿಗೆ ಯೋಚನೆ ಬಂದಿತು – ರಾಜನಿಗೆ ಹೋಗಿ ಈ ಜ್ಞಾನವನ್ನು ತಿಳಿಸೋಣ ಎಂದು ನಂತರ ಕಥೆಯಲ್ಲಿ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ – ರಾಜರಿಗೆ ಹೋಗಿ ಜ್ಞಾನವನ್ನು ತಿಳಿಸಿ. ತಾವೇ ಸೂರ್ಯವಂಶಿ ಆಗಿದ್ದಿರಿ ನಂತರ ಚಂದ್ರವಂಶಿ, ವೈಶ್ಯವಂಶಿ, ಶೂದ್ರವಂಶಿ ಆಗಿದ್ದೀರಿ. ನಮ್ಮ ರಾಜಧಾನಿಯೇ ಕಳೆದು ಹೋಗಿದೆ. ನಂತರ ಸೂರ್ಯವಂಶಿಯ ರಾಜಧಾನಿಯನ್ನು ತೆಗೆದುಕೊಳ್ಳಬೇಕೆಂದರೆ ಪುರುಷಾರ್ಥ ಮಾಡಿ. ರಾಜಯೋಗ ಕಲಿಸುವ ತಂದೆ ಬಂದಿದ್ದಾರೆ. ಪುನಃ ಬಂದು ಬೇಹದ್ದಿನ ಸ್ವರಾಜ್ಯವನ್ನು ಪಡೆದುಕೊಳ್ಳಿ. ರಾಜರ ಬಳಿಯೂ ಬಹಳ ಪತ್ರಗಳು ಹೋಗುತ್ತದೆ. ಆದರೆ ಅವರಿಗೆ ಸಿಗುತ್ತದೇನು? ಅವರ ಪ್ರವೈಟ್ ಸೆಕ್ರೆಟರಿ ಪತ್ರಗಳನ್ನು ಕೊಡುತ್ತಾರೆ. ಇಷ್ಟೊಂದು ಪತ್ರಗಳನ್ನು ಎಸೆದು ಬಿಡುತ್ತಾರೆ. ಕೆಲವೊಂದರಲ್ಲಿ ಅವಶ್ಯವಾಗಿರುವ ಮಾತುಗಳಿದ್ದರೆ ಅವರಿಗೆ ತೋರಿಸುತ್ತಾರೆ. ಅಷ್ಟವಕ್ರ ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಸಾಕ್ಷಾತ್ಕಾರ ಮಾಡಿಸಿದರು ಎಂದು ಹೇಳುತ್ತಾರೆ. ಈಗ ತಂದೆ ನಿಮಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಯಾರು ತಿಳಿದುಕೊಳ್ಳುವರು ಇಲ್ಲವೋ ಅವರು ಇಲ್ಲಿ-ಅಲ್ಲಿ ನೋಡುತ್ತಿರುತ್ತಾರೆ. ಬಾಬಾ ತಕ್ಷಣ ತಿಳಿದುಕೊಳ್ಳುತ್ತಾರೆ – ಅವರ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳಿತ್ತಿಲ್ಲ ಎಂದು. ಬಾಬಾ ಎಲ್ಲಾ ಕಡೆ ನೋಡುತ್ತಾರೆ – ಎಲ್ಲರೂ ಚೆನ್ನಾಗಿ ಕೇಳುತ್ತಾರೆಯೇ, ಇವರ ಬುದ್ಧಿ ಎಲ್ಲೋ ಅಲೆದಾಡುತ್ತಿರುತ್ತದೆ, ಆಕಲಿಸುತ್ತಿರುತ್ತಾರೆ. ಜ್ಞಾನ ಬುದ್ಧಿಯಲ್ಲಿ ಕುಳಿತುಕೊಂಡಿಲ್ಲವೆಂದರೆ ತೂಕಡಿಸುತ್ತಿರುತ್ತಾರೆ, ನಷ್ಟ ಆಗಿ ಬಿಡುತ್ತದೆ. ಕರಾಚಿಯಲ್ಲಿ ಮಕ್ಕಳ ಭಟ್ಟಿ ಇತ್ತು. ಕೆಲವರು ತೂಕಡಿಸಿದರೆ, ಅವರನ್ನು ತಕ್ಷಣ ಹೊರಗೆ ಹಾಕುತ್ತಿದ್ದರು. ತಾವೇ ಕುಳಿತುಕೊಳ್ಳುತ್ತಿದ್ದರು. ಹೊರಗಿನವರು ಯಾರೂ ಬರುತ್ತಿರಲಿಲ್ಲ. ಶುರುವಿನಲ್ಲಿ ಇವರದು ಬಹಳ ದೊಡ್ಡ ಪಾರ್ಟ್ ನಡೆದಿತ್ತು. ದೊಡ್ಡ ಚರಿತ್ರೆ ಇದೆ. ಶುರುವಿನಲ್ಲಂತೂ ಮಕ್ಕಳು ಬಹಳ ಧ್ಯಾನದಲ್ಲಿ ಹೋಗುತ್ತಿದ್ದರು. ಇದುವರೆಗೂ ಜಾದೂ ಎಂದು ಹೇಳುತ್ತಾರೆ. ಪರಮಪಿತ ಪರಮಾತ್ಮನಿಗೆ ಜಾದುಗಾರ್ ಎಂದು ಹೇಳುತ್ತಾರೆ. ಶಿವ ಬಾಬಾ ನೋಡುತ್ತಾರೆ – ಇವರಿಗೆ ಬಹಳ ಪ್ರೀತಿ ಇದೆ, ನೋಡುತ್ತಿದ್ದಾಗಲೇ ತಕ್ಷಣ ಧ್ಯಾನದಲ್ಲಿ ಹೋಗುತ್ತಿದ್ದರು. ಭಾರತವಾಸಿಗಳಿಗೆ ವೈಕುಂಠವೆಂದರೆ ಬಹಳ ಪ್ರೀತಿ ಇದೆ. ಯಾರಾದರೂ ಸತ್ತು ಹೋದರೆ ವೈಕುಂಠವಾಸಿ ಆದರು, ಸ್ವರ್ಗವಾಸಿ ಆದರು ಎಂದು ಹೇಳುತ್ತಾರೆ. ಈಗ ಇದಂತೂ ನರಕವಾಗಿದೆ, ಎಲ್ಲರೂ ನರಕವಾಸಿ ಆದರು. ಆಗ ಇಂತಹವರು ಸ್ವರ್ಗವಾಸಿ ಆದರು ಎಂದು ಹೇಳುತ್ತಾರೆ. ಆದರೆ ಸ್ವರ್ಗದಲ್ಲಂತೂ ಯಾರೂ ಹೋಗುವುದೇ ಇಲ್ಲ. ನಾವು ಸ್ವರ್ಗವಾಸಿ ಆಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ನರಕವಾಸಿ ಆದೆವು ಎಂದು ಈಗ ಕೇವಲ ನೀವಷ್ಟೇ ತಿಳಿದುಕೊಂಡಿದ್ದೀರಿ. ಪುನಃ ಈಗ ಬಾಬಾ ಸ್ವರ್ಗವಾಸಿಯನ್ನಾಗಿ ಮಾಡುತ್ತಿದ್ದಾರೆ. ಸ್ವರ್ಗದಲ್ಲಿ ರಾಜಧಾನಿ ಇರುತ್ತದೆ. ರಾಜಧಾನಿಯಲ್ಲಿ ಬಹಳ ಪದವಿಗಳಿವೆ. ಪುರುಷಾರ್ಥ ಮಾಡಿ ನರನಿಂದ ನಾರಯಣರಾಗಬೇಕು. ಮಮ್ಮಾ-ಬಾಬಾ ಭವಿಷ್ಯದಲ್ಲಿ ಲಕ್ಷ್ಮೀ-ನಾರಾಯಣರಾಗುತ್ತಾರೆ ಎಂದು ತಮಗೆ ಗೊತ್ತಿದೆ. ಈಗ ಪುರುಷಾರ್ಥ ಮಾಡುತ್ತಿದ್ದಾರೆ, ಆದ್ದರಿಂದ ಫಾಲೋ ಫಾದರ್-ಮದರ್ ಎಂದು ಹೇಳಲಗುತ್ತದೆ. ಇವರು ಹೇಗೆ ಪುರುಷಾರ್ಥ ಮಾಡಿದರು ಅದೇ ರೀತಿ ತಾವೂ ಸಹ ಮಾಡಿ. ಇವರೂ ನೆನಪಿನಲ್ಲಿ ಇರುತ್ತಾರೆ, ಸ್ವದರ್ಶನ ಚಕ್ರಧಾರಿಯಾಗುತ್ತಾರೆ. ತಾವು ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ತ್ರಿಕಾಲದರ್ಶಿಯಾಗಿ. ನಿಮಗೆ ಪೂರ್ತಿ ಚಕ್ರದ ಜ್ಞಾನವಿದೆ, ಇದರಲ್ಲಿ ತತ್ಪರರಾಗಿರಿ, ಬೇರೆಯವರಿಗೆ ತಿಳಿಸುತ್ತಿರಿ. ಈ ಸೇವೆಯಲ್ಲಿ ತತ್ಪರರಾಗಿದ್ದರೆ ಬೇರೆ ಯಾವುದೇ ವ್ಯಾಪರ-ವ್ಯವಹಾರ ನೆನಪಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸತ್ಯಯುಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಮಾತಾ-ಪಿತಾರವರನ್ನು ಪೂರ್ತಿ ಫಾಲೋ ಮಾಡಬೇಕು. ಅವರ ಸಮಾನ ಪುರುಷಾರ್ಥ ಮಾಡಬೇಕು. ಸೇವೆಯಲ್ಲಿ ತತ್ಪರರಾಗಿರಬೇಕು. ಏಕಾಗ್ರವಾಗಿ ವಿದ್ಯೆಯನ್ನು ಓದಬೇಕು.

2. ನೆನಪಿನ ಸತ್ಯ-ಸತ್ಯ ಚಾರ್ಟ್ ಇಟ್ಟುಕೊಳ್ಳಬೇಕು. ತಮ್ಮನ್ನು ತಾವು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ದೇಹ ಮತ್ತು ದೇಹಧಾರಿಗಳನ್ನು ನೆನಪು ಮಾಡಬಾರದು.

ವರದಾನ:-

ಹೇಗೆ ಆತ್ಮ ಮತ್ತು ಶರೀರವೆರಡೂ ಒಟ್ಟಿಗೆ ಇದೆ, ಎಲ್ಲಿಯವರೆಗೆ ಈ ಸೃಷ್ಟಿಯಲ್ಲಿ ಪಾತ್ರವಿದೆಯೋ ಅಲ್ಲಿಯವರೆಗೆ ಬೇರ್ಪಡಲು ಸಾಧ್ಯವಿಲ್ಲವೋ ಹಾಗೆಯೇ ಶಿವ ಮತ್ತು ಶಕ್ತಿಯಿಬ್ಬರ ಸಂಬಂಧವೂ ಅಷ್ಟೇ ಆಳವಾಗಿದೆ. ಯಾರು ಸದಾ ಶಿವಶಕ್ತಿ ಸ್ವರೂಪದಲ್ಲಿ ಸ್ಥಿತರಾಗಿದ್ದು ನಡೆಯುತ್ತಾರೆಯೋ, ಅವರ ಲಗನ್ನಿನಲ್ಲಿಯೂ ಮಾಯೆಯು ವಿಘ್ನ ಹಾಕಲು ಸಾಧ್ಯವಿಲ್ಲ. ಅವರು ಸದಾ ಸಂಗಾತಿ ಹಾಗೂ ಸಾಕ್ಷಿ ಸ್ಥಿತಿಯ ಅನುಭವ ಮಾಡುವರು. ಅವರಿಗೆ ಇಂತಹ ಅನುಭವವಾಗುವುದು, ಸಾಕಾರದಲ್ಲಿ ಇವರೊಂದಿಗೆ ಯಾರೋ ಜೊತೆಯಿದ್ದಾರೆ ಎಂಬಂತೆ ಅನುಭವವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top