09 January 2022 KANNADA Murli Today | Brahma Kumaris
Read and Listen today’s Gyan Murli in Kannada
8 January 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
ತ್ರಿದೇವ ರಚಯಿತನ ಮೂಲಕ ವರದಾನಗಳ ಪ್ರಾಪ್ತಿ
♫ ಕೇಳು ಇಂದಿನ ಮುರ್ಲಿ (audio)➤
ಇಂದು ತ್ರಿದೇವ ರಚಯಿತ ತನ್ನ ಸಾಕಾರಿ ಮತ್ತು ಆಕಾರಿ ರಚನೆಯನ್ನು ನೋಡುತ್ತಿದ್ದಾರೆ. ಎರಡೂ ರಚನೆಗಳು ಅತಿಪ್ರಿಯವಾಗಿದೆ ಆದ್ದರಿಂದ ರಚಯಿತ ರಚನೆಯನ್ನು ನೋಡಿ ಹರ್ಷಿತರಾಗುತ್ತಾರೆ. ರಚನೆಯು ಸದಾ ಈ ಖುಷಿಯ ಗೀತೆಯನ್ನು ಹಾಡುತ್ತದೆ – “ವಾಹ್ ರಚಯಿತ ವಾಹ್” ಮತ್ತು ರಚಯಿತನು ಸದಾ ಈ ಗೀತೆಯನ್ನು ಹಾಡುತ್ತಾರೆ – “ವಾಹ್ ನನ್ನ ರಚನೆಯೇ ವಾಹ್” ರಚನೆಯು ಪ್ರಿಯವಾಗಿದೆ, ಯಾರು ಪ್ರಿಯರೆನಿಸುವರೋ ಅವರಿಗೆ ಸದಾ ಎಲ್ಲವನ್ನು ಕೊಟ್ಟು ಸಂಪನ್ನರನ್ನಾಗಿ ಮಾಡುತ್ತಾರೆ. ಆದ್ದರಿಂದ ತಂದೆಯು ಪ್ರತಿಯೊಬ್ಬ ಶ್ರೇಷ್ಠ ರಚನೆಯನ್ನು ವಿಶೇಷ ಮೂರೂ ಸಂಬಂಧಗಳಿಂದ ಎಷ್ಟು ಸಂಪನ್ನರನ್ನಾಗಿ ಮಾಡಿದ್ದಾರೆ! ತಂದೆಯ ಸಂಬಂಧದಿಂದ ದಾತನಾಗಿ ಜ್ಞಾನ ಖಜಾನೆಯಿಂದ ಸಂಪನ್ನ ಮಾಡಿದರು, ಶಿಕ್ಷಕನ ರೂಪದಿಂದ ಭಾಗ್ಯವಿದಾತನಾಗಿ ಅನೇಕ ಜನ್ಮಗಳಿಗೆ ಭಾಗ್ಯವಂತರನ್ನಾಗಿ ಮಾಡಿದರು! ಸದ್ಗುರುವಿನ ರೂಪದಲ್ಲಿ ವರದಾತನಾಗಿ ವರದಾನಗಳಿಂದ ಜೋಳಿಗೆಯನ್ನು ತುಂಬಿಸುತ್ತಾರೆ, ಇದು ಅವಿನಾಶಿ ಸ್ನೇಹ ಅಥವಾ ಪ್ರೀತಿಯಾಗಿದೆ. ಪ್ರೀತಿಯ ವಿಶೇಷತೆ ಏನೆಂದರೆ ಯಾರೊಂದಿಗೆ ಪ್ರೀತಿಯಿದೆಯೋ ಅವರ ಕೊರತೆಯು ಇಷ್ಟವಾಗುವುದಿಲ್ಲ, ಆ ಕಡಿಮೆಯನ್ನು ಕಮಾಲ್ನ ರೂಪದಲ್ಲಿ ಪರಿವರ್ತನೆ ಮಾಡುತ್ತಾರೆ. ತಂದೆಗೆ ಮಕ್ಕಳ ಕಡಿಮೆಯನ್ನು ಕಮಾಲ್ನ ರೂಪದಲ್ಲಿ ಪರಿವರ್ತನೆ ಮಾಡುವ ಶುಭ ಸಂಕಲ್ಪವು ಸದಾ ಇರುತ್ತದೆ. ಪ್ರೀತಿಯಲ್ಲಿ ತಂದೆಗೆ ಮಕ್ಕಳ ಪರಿಶ್ರಮವನ್ನು ನೋಡಲು ಇಷ್ಟವಾಗುವುದಿಲ್ಲ. ಯಾವುದೇ ಪರಿಶ್ರಮವು ಅವಶ್ಯಕವಾಗಿದ್ದರೆ ಮಾಡಿರಿ ಆದರೆ ಬ್ರಾಹ್ಮಣ ಜೀವನದಲ್ಲಿ ಪರಿಶ್ರಮ ಪಡುವ ಅವಶ್ಯಕತೆಯೇ ಇಲ್ಲ ಏಕೆಂದರೆ ದಾತ-ವಿದಾತ ಮತ್ತು ವರದಾತ ಮೂರೂ ಸಂಬಂಧಗಳಿಂದ ಇಷ್ಟು ಸಂಪನ್ನರಾಗಿ ಬಿಡುತ್ತೀರಿ ಪರಿಶ್ರಮವಿಲ್ಲದೆ ಆತ್ಮಿಕ ಮೋಜಿನಲ್ಲಿ ಇರುತ್ತೀರಿ. ಆಸ್ತಿಯೂ ಇದೆ, ವಿದ್ಯೆಯೂ ಇದೆ ಮತ್ತು ವರದಾನವೂ ಇದೆ. ಯಾರಿಗೆ ಮೂರೂ ರೂಪಗಳಿಂದ ಪ್ರಾಪ್ತಿಯಾಗುವುದೋ ಅಂತಹ ಸರ್ವಪ್ರಾಪ್ತಿಯುಳ್ಳ ಆತ್ಮನಿಗೆ ಪರಿಶ್ರಮ ಪಡುವ ಅವಶ್ಯಕತೆಯೇನಿದೆ! ಕೆಲವೊಮ್ಮೆ ಆಸ್ತಿಯ ರೂಪದಲ್ಲಿ ಹಾಗೂ ತಂದೆಯನ್ನು ದಾತನ ರೂಪದಲ್ಲಿ ನೆನಪು ಮಾಡಿರಿ ಆಗ ಆತ್ಮಿಕ ಅಧಿಕಾರಿತನದ ನಶೆಯಿರುವುದು. ಶಿಕ್ಷಕನ ರೂಪದಲ್ಲಿ ನೆನಪು ಮಾಡಿರಿ ಆಗ ಈಶ್ವರೀಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಭಾಗ್ಯದ ನಶೆಯಿರುವುದು. ಸದ್ಗುರು ಪ್ರತೀ ಹೆಜ್ಜೆಯಲ್ಲಿ ವರದಾನಗಳಿಂದ ನಡೆಸುತ್ತಿದ್ದಾರೆ, ಪ್ರತೀ ಕರ್ಮದಲ್ಲಿ ಶ್ರೇಷ್ಠ ಮತ ವರದಾತನ ವರದಾನವಿದೆ. ಯಾರು ಪ್ರತೀ ಹೆಜ್ಜೆಯಲ್ಲಿ ಶ್ರೇಷ್ಠ ಮತದಂತೆ ನಡೆಯುವರೋ ಅವರಿಗೆ ಪ್ರತೀ ಹೆಜ್ಜೆಯಲ್ಲಿ ಕರ್ಮದ ಸಫಲತೆಯ ವರದಾನವು ಸಹಜ, ಸ್ವತ: ಮತ್ತು ಅವಶ್ಯವಾಗಿ ಪ್ರಾಪ್ತಿಯಾಗುತ್ತದೆ. ಸದ್ಗುರುವಿನ ಮತವು ಶ್ರೇಷ್ಠ ಗತಿಯನ್ನೂ ಪ್ರಾಪ್ತಿ ಮಾಡಿಸುತ್ತದೆ. ಗತಿ-ಸದ್ಗತಿಯನ್ನು ಪ್ರಾಪ್ತಿ ಮಾಡಿಸುತ್ತದೆ, ಶ್ರೇಷ್ಠ ಮತ ಮತ್ತು ಶ್ರೇಷ್ಠ ಗತಿ. ತಮ್ಮ ಮಧುರ ಮನೆ ಅರ್ಥಾತ್ ಗತಿ ಮತ್ತು ಮಧುರ ರಾಜ್ಯ ಅರ್ಥಾತ್ ಸದ್ಗತಿ. ಇದನ್ನಂತೂ ಅವಶ್ಯವಾಗಿ ಪ್ರಾಪ್ತಿ ಮಾಡಿಕೊಳ್ಳುತ್ತೀರಿ ಆದರೆ ಬ್ರಾಹ್ಮಣ ಆತ್ಮರಿಗೆ ಇನ್ನೂ ವಿಶೇಷ ಗತಿಯು ಪ್ರಾಪ್ತಿಯಾಗುತ್ತದೆ. ಅದು ಯಾವುದೆಂದರೆ ಈ ಸಮಯದಲ್ಲಿಯೂ ಶ್ರೇಷ್ಠ ಮತದ ಶೇಷ್ಠ ಕರ್ಮದ ಪ್ರತ್ಯಕ್ಷ ಫಲ ಅರ್ಥಾತ್ ಸಫಲತೆ. ಈ ಶ್ರೇಷ್ಠ ಗತಿಯು ಕೇವಲ ಸಂಗಮಯುಗದಲ್ಲಿಯೇ ತಾವು ಬ್ರಾಹ್ಮಣರಿಗೆ ಪ್ರಾಪ್ತವಾಗಿದೆ ಆದ್ದರಿಂದಲೇ ಎಂತಹ ಮತವೋ ಅಂತಹ ಗತಿಯೆಂದು ಹೇಳಲಾಗುತ್ತದೆ. ಆ ಮನುಷ್ಯರಾದರೆ ಸತ್ತ ನಂತರ ಗತಿ ಸಿಗುವುದೆಂದು ತಿಳಿಯುತ್ತಾರೆ. ಆದ್ದರಿಂದ ಅಂತ್ಯಮತಿ ಸೋ ಗತಿ ಎಂದು ಹೇಳುತ್ತಾರೆ. ಆದರೆ ತಾವು ಬ್ರಾಹ್ಮಣ ಆತ್ಮರಿಗಾಗಿ ಈ ಮರುಜೀವಾ ಜನ್ಮದಲ್ಲಿ ಪ್ರತೀ ಕರ್ಮದ ಸಫಲತೆಯ ಫಲ ಅರ್ಥಾತ್ ಗತಿಯು ಪ್ರಾಪ್ತಿಯಾಗುವ ವರದಾನವು ಸಿಕ್ಕಿದೆ. ವರ್ತಮಾನ ಮತ್ತು ಭವಿಷ್ಯ ಸದಾ ಗತಿ-ಸದ್ಗತಿ ಇದ್ದೇ ಇದೆ. ಭವಿಷ್ಯದ ನಿರೀಕ್ಷಣೆಯಲ್ಲಿ ಇರುವುದಿಲ್ಲ. ಸಂಗಮಯುಗದ ಪ್ರಾಪ್ತಿಗೆ ಇದೇ ಮಹತ್ವವಿದೆ. ಈಗೀಗ ಕರ್ಮ ಮಾಡಿ ಮತ್ತು ಈಗೀಗ ಪ್ರಾಪ್ತಿಯ ಅಧಿಕಾರವನ್ನು ಪಡೆಯಿರಿ, ಇದಕ್ಕೇ ಹೇಳುತ್ತಾರೆ – ಒಂದು ಕೈಯಿಂದ ನೀಡಿ ಇನ್ನೊಂದು ಕೈಯಿಂದ ಪಡೆಯಿರಿ. ಎಂದಾದರೂ ಸಿಕ್ಕಿ ಬಿಡುವುದು ಅಥವಾ ಭವಿಷ್ಯದಲ್ಲಿ ಸಿಗುವುದು – ಈ ನಿರೀಕ್ಷಣೆಯ ವ್ಯಾಪಾರವಲ್ಲ, ತುರಂತ ದಾನ ಮಹಾಪುಣ್ಯ ಇಂತಹ ಪ್ರಾಪ್ತಿಯಾಗಿದೆ. ಇದಕ್ಕೆ ಅಗ್ಗವಾದ ವ್ಯಾಪಾರವೆಂದು ಹೇಳುತ್ತಾರೆ. ಭಕ್ತಿಯಲ್ಲಿ ಸಿಗುವುದು, ಸಿಗುವುದು ಎಂದು ನಿರೀಕ್ಷಣೆ ಮಾಡುತ್ತಾ ಇರುತ್ತೀರಿ, ಭಕ್ತಿಯಲ್ಲಿ ಎಂದಾದರೂ ಸಿಗುವುದು ಎಂದು ಇರುತ್ತದೆ ಮತ್ತು ತಂದೆಯು ಹೇಳುತ್ತಾರೆ – ಈಗ ಪಡೆಯಿರಿ. ಆದಿ ಸ್ಥಾಪನೆಯಲ್ಲಿಯೂ ತಮ್ಮ ಪ್ರಸಿದ್ಧತೆಯಿತ್ತು – ಇಲ್ಲಿ ಬಹಳ ಸಹಜವಾಗಿ ಸಾಕ್ಷಾತ್ಕಾರವಾಗುತ್ತದೆ ಎಂದು ಮತ್ತು ಆಗುತ್ತಲೂ ಇರುತ್ತಿತ್ತು ಅಂದಮೇಲೆ ಆದಿಯಿಂದ ಇದು ಅಗ್ಗವಾದ ವ್ಯಾಪಾರವಾಯಿತು, ಇದಕ್ಕೇ ರಚನೆಯೊಂದಿಗೆ ರಚಯಿತನ ಸತ್ಯ ಪ್ರೀತಿಯೆಂದು ಹೇಳುತ್ತಾರೆ. ಇಡೀ ಕಲ್ಪದಲ್ಲಿ ಇಂತಹ ಪ್ರಿಯರು ಮತ್ತ್ಯಾರೂ ಇರಲು ಸಾಧ್ಯವಿಲ್ಲ, ಎಷ್ಟಾದರೂ ಹೆಸರುವಾಸಿ ಪ್ರಿಯರಾಗಿರಬಹುದು ಆದರೆ ಇದು ಅವಿನಾಶಿ ಪ್ರೀತಿಯಾಗಿದೆ ಮತ್ತು ಅವಿನಾಶಿ ಪ್ರಾಪ್ತಿಯಾಗಿದೆ ಅಂದಮೇಲೆ ಈ ರೀತಿಯ ಪ್ರಿಯರು ಮತ್ತ್ಯಾರೂ ಇರಲು ಸಾಧ್ಯವಿಲ್ಲ. ಆದ್ದರಿಂದ ತಂದೆಗೆ ಮಕ್ಕಳ ಪರಿಶ್ರಮವನ್ನು ನೋಡಿ ದಯೆ ಬರುತ್ತದೆ, ವರದಾನಿಗಳು ಸದಾ ಆಸ್ತಿಯ ಅಧಿಕಾರಿಗಳು ಎಂದೂ ಪರಿಶ್ರಮ ಪಡುವುದಿಲ್ಲ. ಭಾಗ್ಯವಿದಾತ ಶಿಕ್ಷಕನು ಭಾಗ್ಯಶಾಲಿ ಮಕ್ಕಳು ಸದಾ ಪಾಸ್-ವಿತ್-ಆನರ್ ಆಗುತ್ತಾರೆ, ಅವರು ಅನುತ್ತೀರ್ಣರಾಗುವುದಿಲ್ಲ, ಯಾವುದೇ ಮಾತಿನ ಫೀಲ್ ಮಾಡುವುದಿಲ್ಲ.
ಪರಿಶ್ರಮ ಪಡುವುದಕ್ಕೆ ಎರಡು ಕಾರಣಗಳಿವೆ – ಮಾಯೆಯ ವಿಘ್ನಗಳಿಂದ ಅನುತ್ತೀರ್ಣರಾಗಿ ಬಿಡುತ್ತಾರೆ ಅಥವಾ ಸಂಬಂಧ-ಸಂಪರ್ಕದಲ್ಲಿ ಭಲೆ ಬ್ರಾಹ್ಮಣರಿರಬಹುದು, ಅಜ್ಞಾನಿಗಳಿರಬಹುದು, ಇಬ್ಬರ ಸಂಬಂಧದಲ್ಲಿ ಕರ್ಮದಲ್ಲಿ ಬರುತ್ತಾ ಚಿಕ್ಕ ಮಾತಿಗೆ ವ್ಯರ್ಥವಾಗಿ ಫೀಲ್ ಮಾಡುತ್ತಾರೆ. ಅದಕ್ಕೆ ತಾವು ಫ್ಲ್ಯೂ ಜ್ವರವೆಂದು ಹೇಳುತ್ತೀರಿ. ಫ್ಲ್ಯೂ ಏನು ಮಾಡುತ್ತದೆ? ಮೊದಲನೆಯದಾಗಿ, ನಡುಕವುಂಟಾಗುತ್ತದೆ, ಅದರಲ್ಲಿ ಶರೀರವು ಅಲುಗಾಡುತ್ತದೆ ಮತ್ತು ಇಲ್ಲಿ ಆತ್ಮದ ಸ್ಥಿತಿಯು ಅಲುಗಾಡುತ್ತದೆ, ಮನಸ್ಸು ಅಲುಗಾಡುತ್ತದೆ. ಹೇಗೆ ಫ್ಲ್ಯೂ ಬಂದಾಗ ಬಾಯಿ ಕಹಿಯಾಗಿ ಬಿಡುತ್ತದೆ ಹಾಗೆಯೇ ಇಲ್ಲಿಯೂ ಸಹ ಮನಸ್ಸಿನ ಫ್ಲ್ಯೂನಿಂದ ಬಾಯಿಂದ ಕಹಿಯಾದ ಮಾತುಗಳನ್ನು ಮಾತನಾಡತೊಡಗುತ್ತಾರೆ. ಮತ್ತೇನಾಗುತ್ತದೆ? ಕೆಲವೊಮ್ಮೆ ಚಳಿ, ಕೆಲವೊಮ್ಮೆ ಬಿಸಿಯೇರಿ ಬಿಡುತ್ತದೆ. ಇಲ್ಲಿಯೂ ಯಾವಾಗ ಫಿಲೀಂಗ್ ಬರುತ್ತದೆಯೋ ಆಗ ಒಳಗೆ ಆವೇಶ ಬರುತ್ತದೆ, ಬಿಸಿಯೇರುತ್ತದೆ – ಇವರು ಹೀಗೇಕೆ ಹೇಳಿದರು, ಹೀಗೇಕೆ ಮಾಡಿದರು? ಇದು ಆವೇಶವಾಗಿದೆ. ಅನುಭವಿಗಳಂತೂ ಆಗಿದ್ದೀರಲ್ಲವೆ. ಮತ್ತೇನಾಗುತ್ತದೆ? ಏನನ್ನೂ ತಿನ್ನಲು-ಕುಡಿಯಲು ಇಷ್ಟವಾಗುವುದಿಲ್ಲ. ಹಾಗೆಯೇ ಇಲ್ಲಿಯೂ ಸಹ ಯಾರಾದರೂ ಒಳ್ಳೆಯ ಜ್ಞಾನದ ಮಾತುಗಳನ್ನು ತಿಳಿಸಿದರೂ ಸಹ ಆ ಸಮಯದಲ್ಲಿ ಅವರಿಗೆ ಇಷ್ಟವಾಗುವುದಿಲ್ಲ. ಕೊನೆಗೆ ಫಲಿತಾಂಶವೇನಾಗುತ್ತದೆ? ನಿಶ್ಯಕ್ತಿಯಾಗಿ ಬಿಡುತ್ತದೆ. ಇಲ್ಲಿಯೂ ಸಹ ಸ್ವಲ್ಪಸಮಯದವರೆಗೆ ನಿರ್ಭಲತೆಯು ನಡೆಯುತ್ತದೆ. ಆದ್ದರಿಂದ ಫೇಲ್ ಆಗಬೇಡಿ, ಫೀಲ್ ಮಾಡಬೇಡಿ. ಬಾಪ್ದಾದಾ ಶ್ರೇಷ್ಠ ಮತವನ್ನು ಕೊಡುತ್ತೇವೆ, ಶುದ್ಧ ಫಿಲೀಂಗ್ ಇರಲಿ – ನಾನು ಸರ್ವಶ್ರೇಷ್ಠ ಅರ್ಥಾತ್ ಕೋಟಿಯಲ್ಲಿ ಕೆಲವನಾದ ಆತ್ಮನಾಗಿದ್ದೇನೆ. ನಾನು ದೇವಾತ್ಮ, ಮಹಾನ್ ಆತ್ಮ, ಬ್ರಾಹ್ಮಣ ಆತ್ಮ, ವಿಶೇಷ ಪಾತ್ರಧಾರಿ ಆತ್ಮನಾಗಿದ್ದೇನೆ. ಈ ಫೀಲಿಂಗ್ನಲ್ಲಿ ಇರುವವರಿಗೆ ವ್ಯರ್ಥ ಫಿಲೀಂಗ್ನ ಫ್ಲ್ಯೂ ಬರುವುದಿಲ್ಲ. ಈ ಶುದ್ಧ ಫೀಲಿಂಗ್ನಲ್ಲಿರಿ. ಎಲ್ಲಿ ಶುದ್ಧ ಫೀಲಿಂಗ್ ಇರುವುದೋ ಅಲ್ಲಿ ಅಶುದ್ಧ ಫಿಲೀಂಗ್ ಇರಲು ಸಾಧ್ಯವಿಲ್ಲ. ಆಗ ಫ್ಲ್ಯೂನ ಖಾಯಿಲೆಯಿಂದ ಅರ್ಥಾತ್ ಪರಿಶ್ರಮದಿಂದ ಮುಕ್ತರಾಗುತ್ತೀರಿ ಮತ್ತು ಸದಾ ಸ್ವಯಂನ್ನು ಈ ರೀತಿ ಅನುಭವ ಮಾಡುತ್ತೀರಿ – ನಾವು ವರದಾನಗಳಿಂದ ಪಾಲನೆ ಪಡೆಯುತ್ತಿದ್ದೇವೆ, ವರದಾನಗಳಿಂದ ಮುಂದೆ ಹಾರುತ್ತಿದ್ದೇವೆ, ವರದಾನಗಳಿಂದಲೇ ಸೇವೆಯಲ್ಲಿ ಸಫಲತೆಯನ್ನು ಪಡೆಯುತ್ತಿದ್ದೇವೆ.
ಪರಿಶ್ರಮವು ಇಷ್ಟವಾಗುತ್ತದೆಯೇ ಅಥವಾ ಪರಿಶ್ರಮದ ಹವ್ಯಾಸವು ಪಕ್ಕಾ ಆಗಿ ಬಿಟ್ಟಿದೆಯೋ? ಪರಿಶ್ರಮವು ಇಷ್ಟವಾಗುತ್ತದೆಯೋ ಅಥವಾ ಮೋಜಿನಲ್ಲಿ ಇರುವುದು ಇಷ್ಟವಾಗುತ್ತದೆಯೋ? ಕೆಲಕೆಲವರಿಗೆ ಕಷ್ಟದ ಕೆಲಸವಲ್ಲದೆ ಮತ್ತ್ಯಾವ ಕೆಲಸವೂ ಇಷ್ಟವಾಗುವುದಿಲ್ಲ. ಅವರನ್ನು ಕುರ್ಚಿಯ ಮೇಲೆ ಆರಾಮವಾಗಿ ಕೂರಿಸಿದರೂ ಸಹ ನಮಗೆ ಏನಾದರೂ ಕಷ್ಟದ ಕೆಲಸ ಕೊಡಿ ಎಂದು ಹೇಳುತ್ತಾರೆ. ಇದಂತೂ ಆತ್ಮದ ಪರಿಶ್ರಮವಾಗಿದೆ ಮತ್ತು ಆತ್ಮವು 63 ಜನ್ಮಗಳು ಪರಿಶ್ರಮ ಪಟ್ಟು ಸುಸ್ತಾಗಿ ಬಿಟ್ಟಿದೆ. 63 ಜನ್ಮಗಳು ಹುಡುಕುತ್ತಿದ್ದರಲ್ಲವೆ. ಹುಡುಕುವುದರಲ್ಲಿ ಪರಿಶ್ರಮವೆನಿಸುತ್ತದೆಯಲ್ಲವೆ ಅಂದಮೇಲೆ ಮೊದಲೇ ಸುಸ್ತಾಗಿದ್ದೀರಿ, 63 ಜನ್ಮಗಳು ಪರಿಶ್ರಮ ಪಟ್ಟಿದ್ದೀರಿ, ಈಗ ಒಂದು ಜನ್ಮವಾದರೂ ಮೋಜಿನಲ್ಲಿರಿ. 21 ಜನ್ಮಗಳಂತೂ ಭವಿಷ್ಯದ ಮಾತಾಗಿದೆ ಆದರೆ ಇದೊಂದು ಜನ್ಮ ವಿಶೇಷವಾಗಿದೆ. ಪರಿಶ್ರಮ ಮತ್ತು ಮೋಜು ಎರಡರ ಅನುಭವ ಮಾಡಬಲ್ಲಿರಿ. ಭವಿಷ್ಯದಲ್ಲಂತೂ ಎಲ್ಲಾ ಮಾತುಗಳು ಮರೆತು ಹೋಗುತ್ತವೆ ಆದರೆ ಮಜಾ ಇರುವುದು ಈಗ. ಅನ್ಯರು ಪರಿಶ್ರಮ ಪಡುತ್ತಿದ್ದಾರೆ, ತಾವು ಮೋಜಿನಲ್ಲಿರಿ. ಒಳ್ಳೆಯದು.
ಟೀಚರ್ಸ್ ಭಕ್ತಿ ಮಾಡಿದ್ದೀರಾ? ಎಷ್ಟು ಜನ್ಮ ಭಕ್ತಿ ಮಾಡಿದ್ದೀರಿ, ಈ ಜನ್ಮದಲ್ಲಂತೂ ಮಾಡಿಲ್ಲ ಅಲ್ಲವೆ. ನಿಮ್ಮ ಭಕ್ತಿಯು ಹಿಂದಿನ ಜನ್ಮದಲ್ಲಿಯೇ ಮುಕ್ತಾಯವಾಯಿತು. ಯಾವಾಗಿನಿಂದ ಭಕ್ತಿಯನ್ನು ಆರಂಭಿಸಿದಿರಿ? ಯಾರ ಜೊತೆ ಆರಂಭಿಸಿದಿರಿ? ಬ್ರಹ್ಮಾ ತಂದೆಯ ಜೊತೆ ಆರಂಭಿಸಿದಿರಿ. ಯಾವ ಮಂದಿರಗಳನ್ನು ಮಾಡಿದಿರಿ? ಭಕ್ತಿಯಲ್ಲಿಯೂ ಆದಿ ಆತ್ಮರಾಗಿದ್ದೀರಿ, ಜ್ಞಾನ ಮಾರ್ಗಕ್ಕೂ ಆದಿ ಆತ್ಮರಾಗಿದ್ದೀರಿ. ಆದಿಯ ಭಕ್ತಿಯಲ್ಲಿ ಅವ್ಯಭಿಚಾರಿ ಭಕ್ತಿಯಿರುವ ಕಾರಣ ಭಕ್ತಿಯ ಆನಂದ, ಸುಖವೂ ಸಹ ಆ ಸಮಯದ ಪ್ರಮಾಣ ಕಡಿಮೆಯಿರಲಿಲ್ಲ. ಆ ಸುಖ ಮತ್ತು ಆನಂದವೂ ಸಹ ತನ್ನ ಸಮಯದಲ್ಲಿ ಶ್ರೇಷ್ಠವಾಗಿಯೇ ಇತ್ತು.
ಭಕ್ತ ಮಾಲೆಯಲ್ಲಿ ತಾವು ಇದ್ದೀರಾ? ತಾವೇ ಭಕ್ತಿಯನ್ನು ಆರಂಭಿಸಿದಿರಿ ಅಂದಮೇಲೆ ಭಕ್ತ ಮಾಲೆಯಲ್ಲಿ ತಾವು ಇಲ್ಲವೇ? ಡಬಲ್ ವಿದೇಶಿಯರು ಭಕ್ತ ಮಾಲೆಯಲ್ಲಿ ಇದ್ದೀರಾ? ಭಕ್ತರಾದಿರೋ ಅಥವಾ ಭಕ್ತಮಾಲೆಯಲ್ಲಿ ಇದ್ದೀರೋ? ಈಗ ಎಲ್ಲರೂ ಆಲೋಚಿಸುತ್ತಿದ್ದಾರೆ- ನಾವು ಇದ್ದೇವೆಯೇ ಅಥವಾ ಇರಲಿಲ್ಲವೇ! ವಿಜಯಮಾಲೆಯಲ್ಲಿಯೂ ಇದ್ದಿರಿ ಮತ್ತು ಭಕ್ತಮಾಲೆಯಲ್ಲಿಯೂ ಇದ್ದಿರಿ. ಪೂಜಾರಿಗಳಂತೂ ಆದಿರಿ ಆದರೆ ಭಕ್ತಮಾಲೆಯಲ್ಲಿದ್ದಿರಾ? ಭಕ್ತಮಾಲೆಯೇ ಬೇರೆಯಾಗಿದೆ, ತಾವಂತೂ ಜ್ಞಾನಿ ಸೋ ಭಕ್ತರಾದಿರಿ, ಅವರು ಭಕ್ತರಾಗಿದ್ದಾರೆ. ಅಂದಾಗ ಭಕ್ತಮಾಲೆ ಮತ್ತು ಜ್ಞಾನದ ಮಾಲೆಯಲ್ಲಿ ಅಂತರವಿದೆ. ಜ್ಞಾನಿಗಳ ಮಾಲೆಯೇ ವಿಜಯ ಮಾಲೆಯಾಗಿದೆ ಮತ್ತು ಯಾರು ಕೇವಲ ಭಕ್ತರಿದ್ದಾರೆಯೋ ಅಂತಹ ನೌಧಾಭಕ್ತರು ಭಕ್ತಿಯಲ್ಲದೆ ಅನ್ಯಮಾತನ್ನು ಕೇಳುವುದಕ್ಕೆಇಚ್ಛೆ ಪಡುವುದಿಲ್ಲ, ಭಕ್ತಿಯೇ ಶ್ರೇಷ್ಠವೆಂದು ತಿಳಿಯುತ್ತಾರೆ ಆದ್ದರಿಂದ ಭಕ್ತಮಾಲೆಯೇ ಬೇರೆಯಾಗಿದೆ, ಜ್ಞಾನಮಾಲೆಯೇ ಬೇರೆಯಾಗಿದೆ. ಭಕ್ತಿಯನ್ನು ಅವಶ್ಯವಾಗಿ ಮಾಡಿದಿರಿ ಆದರೆ ಭಕ್ತಮಾಲೆಯಲ್ಲಿದ್ದೀರಿ ಎಂದು ಹೇಳುವುದಿಲ್ಲ ಏಕೆಂದರೆ ಭಕ್ತಿಯ ಪಾತ್ರವನ್ನು ಅಭಿನಯಿಸಿದ ನಂತರ ತಾವೆಲ್ಲರೂ ಜ್ಞಾನದಲ್ಲಿ ಬರಬೇಕಾಗಿದೆ. ಅವರು ನೌಧಾ ಭಕ್ತರಾಗಿದ್ದಾರೆ ಮತ್ತು ತಾವು ನೌಧಾ ಜ್ಞಾನಿಗಳಾಗಿದ್ದೀರಿ. ಆತ್ಮದಲ್ಲಿ ಸಂಸ್ಕಾರಗಳ ಅಂತರವಿದೆ. ಭಕ್ತರು ಅಂದರೆ ಸದಾ ಬೇಡುವ ಸಂಸ್ಕಾರವಿರುತ್ತದೆ. ನಾನು ನೀಚನಾಗಿದ್ದೇನೆ, ತಂದೆಯು ಶ್ರೇಷ್ಠರಾಗಿದ್ದಾರೆ – ಈ ಸಂಸ್ಕಾರವಿರುತ್ತದೆ. ಅವರು ರಾಯಲ್ ಭಿಕಾರಿಗಳಾಗಿರುತ್ತಾರೆ ಮತ್ತು ತಾವಾತ್ಮರಲ್ಲಿ ಅಧಿಕಾರಿತನದ ಸಂಸ್ಕಾರವಿದೆ ಆದ್ದರಿಂದ ಪರಿಚಯ ಸಿಗುತ್ತಿದ್ದಂತೆಯೇ ಭಿಕಾರಿಗಳಾಗಿಬಿಟ್ಟಿರಿ ತಿಳಿಯಿತೆ? ಭಕ್ತರಿಗೂ ಸ್ಥಾನ ಕೊಡಬೇಕಲ್ಲವೆ. ಎರಡರಲ್ಲಿ ತಾವು ಬರುತ್ತೀರೆಂದರೆ ಅವರಿಗೂ ಅರ್ಧಕಲ್ಪವಿದೆ, ತಮಗೂ ಅರ್ಧಕಲ್ಪವಿದೆ. ಅವರೂ ಸಹ ಗಾಯನ ಮಾಲೆಯಲ್ಲಿ ಬರಲೇಬೇಕಾಗಿದೆ. ಪ್ರಪಂಚದವರಿಗಿಂತಲೂ ಒಳ್ಳೆಯವರಾಗಿದ್ದಾರೆ ಅಲ್ಲವೆ. ಮತ್ತ್ಯಾವ ಕಡೆಯೂ ಬುದ್ಧಿಯಿಲ್ಲ. ತಂದೆಯ ಕಡೆಯೇ ಇದೆ, ಶುದ್ಧವಾಗಿರುತ್ತಾರೆ. ಪವಿತ್ರತೆಯ ಫಲ ಸಿಗುತ್ತದೆ – “ಗಾಯನ ಯೋಗ್ಯರಾಗುತ್ತೀರಿ” ತಮ್ಮದು ಪೂಜೆಯಾಗುವುದು, ಅವರದು ಪೂಜೆಯಾಗುವುದಿಲ್ಲ. ಕೇವಲ ಗಾಯನಕ್ಕಾಗಿ ಅವರ ಪ್ರತಿಮೆಯನ್ನು ಮಾಡಿಡುತ್ತಾರೆ. ಹೇಗೆ ಮೀರಾಳಿಗೆ ಎಲ್ಲಿಯೂ ಮಂದಿರಗಳಿರುವುದಿಲ್ಲ, ದೇವತೆಗಳ ತರಹ ಮೀರಾಳಿಗೆ ಪೂಜೆಯಾಗುವುದಿಲ್ಲ, ಕೇವಲ ಗಾಯನವಾಗುತ್ತದೆ. ಈಗ ಅಂತಿಮ ಜನ್ಮದಲ್ಲಿ ಭಲೆ ಯಾರನ್ನಾದರೂ ಪೂಜಿಸಲಿ ಧರಣಿಯನ್ನಾದರೂ ಪೂಜಿಸಲಿ, ವೃಕ್ಷವನ್ನಾದರೂ ಪೂಜಿಸಲಿ ಆದರೆ ನಿಯಮ ಪ್ರಮಾಣ ಅವರದು ಕೇವಲ ಗಾಯನವಾಗುತ್ತದೆ, ಪೂಜೆಯಿಲ್ಲ. ತಾವು ಪೂಜ್ಯರಾಗುತ್ತೀರಿ ಅಂದಮೇಲೆ ತಾವು ಪೂಜ್ಯನೀಯ ಆತ್ಮರಾಗುತ್ತೀರಿ. ಈ ನಶೆಯನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ. ಪೂಜ್ಯ ಆತ್ಮರು ಎಂದೂ ಯಾವುದೇ ಅಪವಿತ್ರ ಸಂಕಲ್ಪವನ್ನೂ ಟಚ್ ಮಾಡಲು ಸಾಧ್ಯವಿಲ್ಲ, ಇಷ್ಟು ಪೂಜ್ಯರಾಗಿದ್ದೀರಾ! ಒಳ್ಳೆಯದು.
ನಾಲ್ಕಾರು ಕಡೆಯ ಆಸ್ತಿಗೆ ಅಧಿಕಾರಿ ಆತ್ಮರಿಗೆ, ಸದಾ ವಿದ್ಯೆಯಲ್ಲಿ ಪಾಸ್-ವಿತ್-ಆನರ್ ಆಗುವವರು, ಸದಾ ವರದಾನಗಳ ಮೂಲಕ ವರದಾನಿಯಾಗಿ, ಅನ್ಯರನ್ನೂ ವರದಾನಿಗಳನ್ನಾಗಿ ಮಾಡುವವರು – ಇಂತಹ ತಂದೆ-ಶಿಕ್ಷಕ ಮತ್ತು ಸದ್ಗುರುವಿಗೆ ಪ್ರಿಯರು ಸದಾ ಆತ್ಮಿಕ ಮೋಜಿನಲ್ಲಿ ಇರುವಂತಹ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಂಜಾಬ್-ರಾಜಾಸ್ಥಾನ ಗ್ರೂಪ್:
ತಮ್ಮನ್ನು ಸದಾ ಪವಿತ್ರ ಹಂಸಗಳೆಂದು ಅನುಭವ ಮಾಡುತ್ತೀರಾ? ಪವಿತ್ರ ಹಂಸವೆಂದರೆ ಸಮರ್ಥ ಹಾಗೂ ವ್ಯರ್ಥವನ್ನು ಪರಿಶೀಲಿಸುವವರೆಂದು ಅರ್ಥ. ಹಂಸವು ಕಲ್ಲು ಮತ್ತು ರತ್ನವನ್ನು ಬೇರ್ಪಡಿಸುತ್ತದೆ, ಮುತ್ತು ಹಾಗೂ ಕಲ್ಲುಗಳನ್ನು ಬೇರ್ಪಡಿಸುತ್ತದೆ ಆದರೆ ತಾವು ಪವಿತ್ರ ಹಂಸಗಳು ಏನನ್ನು ಪರಿಶೀಲಿಸುತ್ತೀರಿ? ಯಾವುದು ಸಮರ್ಥ ಹಾಗೂ ಯಾವುದು ವ್ಯರ್ಥ, ಯಾವುದು ಶುದ್ಧ ಹಾಗೂ ಯಾವುದು ಅಶುದ್ಧವೆಂಬುದನ್ನು ಪರಿಶೀಲಿಸುತ್ತೀರಿ. ಹೇಗೆ ಹಂಸಗಳೆಂದಿಗೂ ಕಲ್ಲುಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ, ಬೇರ್ಪಡಿಸಿ ಬಿಡುತ್ತದೆ, ಬಿಟ್ಟು ಬಿಡುತ್ತದೆ, ಗ್ರಹಿಸುವುದಿಲ್ಲವೋ ಹಾಗೆಯೇ ಪವಿತ್ರ ಹಂಸಗಳಾದ ತಾವು ವ್ಯರ್ಥವನ್ನು ಬಿಡುತ್ತೀರಿ ಮತ್ತು ಸಮರ್ಥ ಸಂಕಲ್ಪಗಳನ್ನು ಧಾರಣೆ ಮಾಡುತ್ತೀರಿ. ಒಂದುವೇಳೆ ವ್ಯರ್ಥ ಬಂದರೂ ಸಹ ಧಾರಣೆ ಮಾಡಿಕೊಳ್ಳುವುದಿಲ್ಲ. ವ್ಯರ್ಥವೇನಾದರೂ ಧಾರಣೆ ಮಾಡಿಕೊಂಡಿರೆಂದರೆ ಪವಿತ್ರ ಹಂಸಗಳೆಂದು ಕರೆಯಲಾಗುವುದಿಲ್ಲ. ವ್ಯರ್ಥವಾಗಿರುವುದನ್ನು ಕೊಕ್ಕರೆಗಳು ಧಾರಣೆ ಮಾಡುತ್ತದೆ, ಅಂತಹ ವ್ಯರ್ಥವನ್ನಂತು ಬಹಳಷ್ಟು ಕೇಳಿದಿರಿ, ಮಾತನಾಡಿದಿರಿ, ಕರ್ಮವನ್ನೂ ಮಾಡಿದಿರಿ ಆದರೆ ಅದರ ಪರಿಣಾಮವೇನಾಯಿತು? ಕಳೆದುಕೊಂಡಿರಿ, ಎಲ್ಲವನ್ನೂ ಕಳೆದುಕೊಂಡಿದ್ದೀರಲ್ಲವೆ. ತನುವನ್ನೂ ಕಳೆದುಕೊಳ್ಳಲಾಯಿತು, ದೇವತೆಗಳ ತನುವನ್ನೂ ನೋಡಿ ಹಾಗೂ ಈಗಿರುವ ತನುವನ್ನೂ ನೋಡಿ ಹೇಗಿದೆ? ಎಷ್ಟೊಂದು ಅಂತರವಿದೆ! ಯುವಕರಿಗಿಂತಲೂ ವೃದ್ಧರೇ ಬಹಳ ಚೆನ್ನಾಗಿದ್ದಾರೆ. ಅಂದಮೇಲೆ ತನುವನ್ನೂ ಕಳೆದುಕೊಂಡಿರಿ, ಮನಸ್ಸಿನ ಸುಖ-ಶಾಂತಿಯನ್ನೂ, ಧನವನ್ನೂ ಕಳೆದುಕೊಳ್ಳಲಾಯಿತು. ತಮ್ಮ ಬಳಿ ಎಷ್ಟೆಲ್ಲಾ ಹಣವಿತ್ತಲ್ಲವೆ? ಅಪಾರ ಹಣವೆಲ್ಲವೂ ಎಲ್ಲಿ ಹೋಯಿತು? ವ್ಯರ್ಥದಲ್ಲಿ ಕಳೆದು ಬಿಟ್ಟಿರಿ. ಈಗ ಜಮಾ ಮಾಡಿಕೊಳ್ಳುತ್ತಿದ್ದೀರಾ ಅಥವಾ ಕಳೆಯುತ್ತಿದ್ದೀರಾ? ಪವಿತ್ರ ಹಂಸಗಳು ಕಳೆಯುವವರಲ್ಲ, ಜಮಾ ಮಾಡುವವರು. ಈಗ 21 ಜನ್ಮಗಳಿಗಾಗಿ ತನುವೂ ಒಳ್ಳೆಯದೇ (ಪವಿತ್ರ) ಸಿಗುತ್ತದೆ ಹಾಗೂ ಮನಸ್ಸೂ ಸಹ ಸದಾ ಖುಷಿಯಾಗಿರುತ್ತದೆ. ಹಣವಂತು ಈಗ ಯಾವ ರೀತಿ ಮಣ್ಣಿದೆಯೋ ಆ ರೀತಿ ಇರುತ್ತದೆ. ಈಗ ಮಣ್ಣಿಗೂ ಸಹ ಬೆಲೆಯಿದೆ ಆದರೆ ಅಲ್ಲಿ ರತ್ನಗಳಿಂದ ಆಡುತ್ತೀರಿ, ರತ್ನಗಳಿಂದ ಕಟ್ಟಡದ ಶೃಂಗಾರವಾಗುವುದು ಅಂದಮೇಲೆ ಅದಕ್ಕಾಗಿ ಎಷ್ಟು ಜಮಾ ಮಾಡುತ್ತಿದ್ದೀರಿ! ಯಾರಬಳಿ ಜಮಾ ಇರುತ್ತದೆಯೋ ಅವರಿಗೆ ಖುಷಿಯಾಗುತ್ತದೆ. ಒಂದುವೇಳೆ ಜಮಾ ಆಗಿರದಿದ್ದರೆ ಮನಸ್ಸು ಚಿಕ್ಕದಾಗಿ ಬಿಡುತ್ತದೆ, ಜಮಾ ಆಗಿದ್ದರೆ ವಿಶಾಲ ಹೃದಯವಾಗುವುದು. ಈಗ ಎಷ್ಟೊಂದು ವಿಶಾಲ ಹೃದಯದವರಾಗಿ ಬಿಟ್ಟಿರಿ! ಅಂದಾಗ ಪ್ರತೀ ಹೆಜ್ಜೆಯಲ್ಲಿ ಜಮಾದ ಖಾತೆಯು ವೃದ್ಧಿಯಾಗುತ್ತಿದೆಯೋ ಅಥವಾ ಕೆಲವೊಮ್ಮೆಗಷ್ಟು ಜಮಾ ಮಾಡುತ್ತೀರಾ? ತಮ್ಮ ಚಾರ್ಟನ್ನು ಬಹಳ ಚೆನ್ನಾಗಿ ನೋಡಿದ್ದೀರಾ? ಅಂತಹ ಸಮಯದಲ್ಲಿಯೂ ಸಹ ಕೆಲೆಕೆಲವೊಮ್ಮೆಗೂ ವ್ಯರ್ಥವಾಗಿ ಹೊರಟು ಹೋಗುವುದಿಲ್ಲವೇ? ಈಗಂತು ಸಮಯದ ಮೌಲ್ಯವಂತು ಗೊತ್ತಗಿದೆಯಲ್ಲವೆ. ಸಂಗಮದ ಒಂದು ಸೆಕೆಂಡ್ ಸಹ ಎಷ್ಟು ಅಮೂಲ್ಯವಾದುದು! ಹೇಳುವುದಕ್ಕೆ ಒಂದು ಎರಡು ಸೆಕೆಂಡ್ ಹೋಯಿತು ಎಂದು ಹೇಳುತ್ತೀರಿ ಆದರೆ ಒಂದು ಸೆಕೆಂಡು ಎಷ್ಟೊಂದು ದೊಡ್ಡದು! ಇದು ನೆನಪಿರುತ್ತದೆಯೆಂದರೆ ಒಂದು ಸೆಕೆಂಡನ್ನೂ ವ್ಯರ್ಥ ಮಾಡುವುದಿಲ್ಲ. ಸೆಕೆಂಡ್ ಕಳೆದರೂ ವರ್ಷವನ್ನು ಕಳೆದಂತೆ, ಸಂಗಮದ ಒಂದು ಸೆಕೆಂಡಿಗೆ ಇಷ್ಟೊಂದು ಮಹತ್ವವಿದೆ! ಅಂದಮೇಲೆ ಜಮಾ ಮಾಡುವವರಾಗಬೇಕು ಕಳೆಯುವವರಲ್ಲ ಏಕೆಂದರೆ ಇಲ್ಲಿ ಕಳೆಯುತ್ತೀರಿ ಅಥವಾ ಸಂಪಾದನೆಯಾಗುತ್ತದೆ. ಇಡೀ ಕಲ್ಪಕ್ಕಾಗಿ ಸಂಪಾದಿಸುವ ಸಮಯವೂ ಇದೇ ಆಗಿದೆ ಅಂದಾಗ ಪವಿತ್ರ ಹಂಸವೆಂದರೆ ಸ್ವಪ್ನ, ಸಂಕಲ್ಪದಲ್ಲಿಯೂ ಸಹ ವ್ಯರ್ಥವಾಗಿ ಕಳೆಯುವುದಿಲ್ಲ.
ಹೋಲಿ ಎಂದರೆ ಸದಾ ಪವಿತ್ರತೆಯ ಶಕ್ತಿಯಿಂದ ಸೆಕೆಂಡಿನಲ್ಲಿ ಅಪವಿತ್ರತೆಯನ್ನು ದೂರ ಓಡಿಸುವವರು. ಕೇವಲ ತನಗಷ್ಟೇ ಅಲ್ಲ ಆದರೆ ಅನ್ಯರಿಗಾಗಿಯೂ ಮಾಡುವವರು. ಏಕೆಂದರೆ ಇಡೀ ವಿಶ್ವವನ್ನು ಪರಿವರ್ತನೆ ಮಾಡಬೇಕಲ್ಲವೆ. ಪವಿತ್ರತೆಯ ಶಕ್ತಿಯು ಎಷ್ಟೊಂದು ಮಹಾನ್ ಆಗಿದೆ ಎಂಬುದನ್ನಂತು ತಿಳಿದಿದ್ದೀರಲ್ಲವೆ! ಪವಿತ್ರತೆಯು ಅಂತಹ ಅಗ್ನಿಯಾಗಿದೆ, ಅದರಲ್ಲಿ ಸೆಕೆಂಡಿನಲ್ಲಿ ವಿಶ್ವದ ಕೊಳಕೆಲ್ಲವನ್ನೂ ಭಸ್ಮ ಮಾಡಬಹುದು. ಸಂಪೂರ್ಣ ಪವಿತ್ರತೆಯಲ್ಲಿ ಇಂತಹ ಶ್ರೇಷ್ಠವಾದ ಶಕ್ತಿಯಿದೆ! ಅಂತ್ಯದಲ್ಲಿ ಯಾವಾಗ ಎಲ್ಲರೂ ಸಂಪೂರ್ಣರಾಗುವರೋ ಆಗ ತಮ್ಮ ಶ್ರೇಷ್ಠ ಸಂಕಲ್ಪಗಳಲ್ಲಿ ಲಗನ್ನಿನ ಅಗ್ನಿಯಿಂದ, ಈ ಕೊಳಕೆಲ್ಲವೂ ಭಸ್ಮವಾಗಿ ಬಿಡುವುದು. ಯೋಗ ಜ್ವಾಲೆಯಾಗಿರಲಿ, ಅಂತ್ಯದಲ್ಲಿ ನಿಧಾನ-ನಿಧಾನವಾಗಿ ಎಂಬಂತೆ ಸೇವೆಯಾಗುವುದಿಲ್ಲ. ಯೋಚಿಸಿದಿರಿ ಮತ್ತು ಅದಾಯಿತು – ಇದಕ್ಕೆ ವಿಹಂಗ ಮಾರ್ಗದ ಸೇವೆ ಎನ್ನಲಾಗುತ್ತದೆ. ಇದನ್ನೀಗ ತಮ್ಮಲ್ಲಿ ತುಂಬಿಕೊಳ್ಳುತ್ತಿದೀರಿ, ಅದನ್ನು ನಂತರ ಕಾರ್ಯದಲ್ಲಿ ಉಪಯೋಗಿಸುತ್ತೀರಿ. ದೇವಿಯರ ನೆನಪಾರ್ಥದಲ್ಲಿ ಇದನ್ನು ತೋರಿಸುತ್ತಾರೆ – ಜ್ವಾಲೆಯಿಂದ ಆಸುರರನ್ನು ಭಸ್ಮಗೊಳಿಸಿ ಬಿಟ್ಟರು. ಅಸುರರನ್ನಲ್ಲ ಆದರೆ ಆಸುರಿ ಶಕ್ತಿಗಳನ್ನು ಸಮಾಪ್ತಿಗೊಳಿಸಿದರು. ಇದೆಲ್ಲವೂ ಯಾವ ಸಮಯದ ನೆನಪಾರ್ಥ? ಈಗಿನದಲ್ಲವೆ. ಅಂದಾಗ ಇದೇರೀತಿ ಜ್ವಾಲಾಮುಖಿಯಾಗಿರಿ. ತಾವಾಗದಿದ್ದರೆ ಮತ್ತ್ಯಾರು ಆಗುವರು! ಅಂದಾಗ ಈಗ ಜ್ವಾಲಾಮುಖಿ ಆಗಿರುತಾ ಆಸುರಿ ಸಂಸ್ಕಾರ, ಸ್ವಭಾವಗಳೆಲ್ಲವನ್ನೂ ಭಸ್ಮಗೊಳಿಸಿರಿ. ತಮ್ಮದನ್ನಂತು ಮಾಡಿದ್ದೀರಲ್ಲವೆ ಅಥವಾ ಈಗ ಮಾಡುತ್ತಿದ್ದೀರಾ? ಒಳ್ಳೆಯದು.
ಪಂಜಾಬ್ನವರು ನಿರ್ಭಯರಾಗಿ ಬಿಟ್ಟಿರಿ, ಭಯ ಪಡುವವರಲ್ಲ ಅಲ್ಲವೆ? ಜ್ವಾಲಾಮುಖಿಯಾಗಿ, ಭಯವನ್ನೇಕೆ ಪಡಬೇಕು? ಅವಶ್ಯವಾಗಿ ಸತ್ತಿದ್ದೀರಿ, ಮತ್ತ್ಯಾವುದರೊಂದಿಗೆ ಭಯಪಡುವುದು? ಮತ್ತು ರಾಜಾಸ್ಥಾನದವರಿಗಂತು “ರಾಜ್ಯ-ಅಧಿಕಾರ”ವನ್ನಂತು ಎಂದಿಗೂ ಮರೆಯಬಾರದು. ರಾಜಾಸ್ಥಾನದವರಿಗೆ ರಾಜ್ಯವನ್ನು ಮರೆತು ಮರಳಂತು ನೆನಪಿಗೆ ಬರುವುದಿಲ್ಲವೆ? ಅಲ್ಲಿ ಬಹಳಷ್ಟು ಮರಳಿದೆಯಲ್ಲವೆ! ಅಂದಾಗ ಸದಾ ಹೊಸ ರಾಜ್ಯದ ಸ್ಮೃತಿಯಲ್ಲಿರಿ. ಎಲ್ಲರೂ ನಿರ್ಭಯ ಜ್ವಾಲಾಮುಖಿಯಾಗಿದ್ದು ಪ್ರಕೃತಿ ಹಾಗೂ ಆತ್ಮರಲ್ಲಿರುವ ತಮೋಗುಣವೇನಿದೆ, ಅದನ್ನು ಭಸ್ಮ ಮಾಡುವವರಾಗಿರಿ. ಇದು ಬಹಳ ದೊಡ್ಡ ಕಾರ್ಯವಾಗಿದೆ, ತೀವ್ರಗತಿಯಿಂದ ಮಾಡಿದಾಗಲೇ ಪೂರ್ಣವಾಗುವುದು. ಈಗಂತು ವ್ಯಕ್ತಿಗಳಿಗೇ ಸಂದೇಶವನ್ನು ತಲುಪಿಲ್ಲ, ಪ್ರಕೃತಿಯ ಮಾತಂತು ಆನಂತರ ಆಗುವುದು. ಆದ್ದರಿಂದ ತೀವ್ರಗತಿಯಿಂದ ಮಾಡಿರಿ. ಗಲ್ಲಿ-ಗಲ್ಲಿಯಲ್ಲಿಯೂ ಸೇವಾಕೇಂದ್ರವಾಗಲಿ ಏಕೆಂದರೆ ಸಂದರ್ಭದನುಸಾರ ಒಂದು ಗಲ್ಲಿಯಿಂದ ಇನ್ನೊಂದು ಗಲ್ಲಿಗೂ ಹೋಗುವುದಕ್ಕಾಗುವುದಿಲ್ಲ, ಒಬ್ಬರಿನ್ನೊಬ್ಬರು ನೋಡುವುದಕ್ಕೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮನೆ-ಮನೆಯಲ್ಲಿ, ಗಲ್ಲಿ-ಗಲ್ಲಿಯಲ್ಲಿ ಸೇವಾಕೇಂದ್ರವಾಗುತ್ತದೆಯಲ್ಲವೆ. ಒಳ್ಳೆಯದು.
ವರದಾನ:-
ಬ್ರಹ್ಮಾ ತಂದೆಯು ಯಾವ ರೀತಿ ಸಾಧಾರಣ ತನುವಿನಲ್ಲಿದ್ದರೂ ಸದಾ ಪುರುಷೋತ್ತಮನೆಂದು ಅನುಭವವಾಗುತ್ತಿತ್ತು. ಸಾಧಾರಣತೆಯಲ್ಲಿ ಪುರುಷೋತ್ತಮನ ಹೊಳಪನ್ನು ನೋಡಿದಿರಿ, ಅದೇರೀತಿ ತಂದೆಯನ್ನು ಅನುಸರಣೆ ಮಾಡಿರಿ. ಭಲೆ ಕರ್ಮವು ಸಾಧಾರಣವಾಗಿರಬಹುದು ಆದರೆ ಸ್ಥಿತಿಯು ಮಹಾನ್ ಆಗಿರಲಿ. ಚಹರೆಯಲ್ಲಿ ಶ್ರೇಷ್ಠ ಜೀವನದ ಪ್ರಭಾವವಿರಲಿ. ಲೌಕಿಕ ರೀತಿಯಿಂದಲೂ ಕೆಲ ಮಕ್ಕಳ ಚಲನೆ ಹಾಗೂ ಚಹರೆಯು ತಂದೆಯ ಸಮಾನವಿರುತ್ತದೆ, ಇಲಿ ಚಹರೆಯ ಮಾತಲ್ಲ ಆದರೆ ಚಲನೆಯೇ ಚಿತ್ರವಾಗಿದೆ. ಪ್ರತೀ ಚಲನೆಯಿಂದ ತಂದೆಯ ಅನುಭವವಾಗಲಿ, ಬ್ರಹ್ಮಾ ತಂದೆಯ ಸಮಾನ ಪುರುಷೋತ್ತಮ ಸ್ಥಿತಿಯಿದ್ದಾಗ ತಂದೆಯ ಸಮಾನ ಎಂದು ಹೇಳಲಾಗುತ್ತದೆ.
ಸ್ಲೋಗನ್:-
ಲವಲೀನ ಸ್ಥಿತಿಯ ಅನುಭವ ಮಾಡಿರಿ:
ಪರಮಾತ್ಮನ ಈ ಪ್ರೀತಿಯು ಆನಂದಮಯ ಉಯ್ಯಾಲೆಯಾಗಿದೆ, ಈ ಸುಖ ಕೊಡುವ ಉಯ್ಯಾಲೆಯಲ್ಲಿ ಸದಾ ತೂಗುತ್ತಿರಿ, ಪರಮಾತ್ಮನ ಪ್ರೀತಿಯಲ್ಲಿ ಲವಲೀನರಾಗಿ ಇರುತ್ತೀರೆಂದರೆ, ಎಂದಿಗೂ ಯಾವುದೇ ಪರಿಸ್ಥಿತಿ ಅಥವಾ ಮಾಯೆಯ ಏರುಪೇರುಗಳು ಬರಲು ಸಾಧ್ಯವಿಲ್ಲ.
➤ Email me Murli: Receive Daily Murli on your email. Subscribe!