08 September 2021 KANNADA Murli Today | Brahma Kumaris

Read and Listen today’s Gyan Murli in Kannada

September 7, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮಗಿಂತ ಹಿರಿಯರ ಬಗ್ಗೆ ಗೌರವವನ್ನು ಇಡುವುದೂ ಸಹ ಒಂದು ದೈವೀ ಗುಣವಾಗಿದೆ, ಯಾರು ಒಳ್ಳೆಯ ಬುದ್ಧಿವಂತರು-ತಿಳಿಸುವವರು ಆಗಿರುತ್ತಾರೆಯೋ ಅವರನ್ನು ಫಾಲೋ ಮಾಡಬೇಕಾಗಿದೆ.”

ಪ್ರಶ್ನೆ:: -

ಸತ್ಯಯುಗದಲ್ಲಿ ಯಾವುದೇ ಭಕ್ತಿಯ ರೀತಿ-ಪದ್ಧತಿಗಳಿರುವುದಿಲ್ಲ – ಏಕೆ?

ಉತ್ತರ:-

ಏಕೆಂದರೆ ಜ್ಞಾನದ ಸಾಗರ ತಂದೆಯು ಜ್ಞಾನವನ್ನು ಕೊಟ್ಟು ಸದ್ಗತಿಯಲ್ಲಿ ಕಳುಹಿಸುತ್ತಾರೆ. ಭಕ್ತಿಯ ಫಲವು ಪ್ರಾಪ್ತಿಯಾಗಿ ಬಿಡುತ್ತದೆ. ಜ್ಞಾನವು ಪ್ರಾಪ್ತಿಯಾಗುವುದರಿಂದ ಭಕ್ತಿಯದು ಹೇಗೆಂದರೆ ವಿಚ್ಛೇದನವೇ ಆಗಿ ಬಿಡುತ್ತದೆ. ಯಾವಾಗ ಜ್ಞಾನದ ಪ್ರಾಲಬ್ಧವಾಗುವುದೋ ಆಗ ಭಕ್ತಿ, ಜಪ, ತಪ, ದಾನ, ಪುಣ್ಯವನ್ನು ಮಾಡುವಂತಹ ಅವಶ್ಯಕತೆಯಾದರೂ ಏನಿದೆ! ಅಲ್ಲಿ ಇದ್ಯಾವುದೇ ಪದ್ಧತಿಗಳು ಇರಲು ಸಾಧ್ಯವಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಪತಿತ ಪಾವನ ಶಿವ ಭಗವಾನುವಾಚ. ಈಗ ತಂದೆಯು ಕುಳಿತು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ – ಇಲ್ಲಿಗೆ ಯಾವಾಗ ನಾನು ಬರುವೆನು ಆಗ ಪತಿತರನ್ನು ಪಾವನಗೊಳಿಸುವುದಕ್ಕಾಗಿ ಜ್ಞಾನವನ್ನು ತಿಳಿಸುತ್ತೇನೆ, ಇದನ್ನು ಮತ್ತ್ಯಾರೂ ಸಹ ಕಲಿಸಿಕೊಡಲು ಸಾಧ್ಯವಿಲ್ಲ. ಅವರುಗಳೂ ಸಹ ಭಕ್ತಿಯನ್ನೇ ಕಲಿಸುತ್ತಾರೆ, ಕೇವಲ ನೀವು ಮಕ್ಕಳೇ ಜ್ಞಾನವನ್ನು ಕಲಿಯುತ್ತೀರಿ. ಅದರಿಂದ ನೀವು ತಮ್ಮನ್ನು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎಂದು ತಿಳಿದುಕೊಳ್ಳುತ್ತೀರಿ. ದಿಲ್ವಾಡಾ ಮಂದಿರವು ತಮ್ಮ ಸನ್ಮುಖದಲ್ಲಿ ಪ್ರತ್ಯಕ್ಷದಲ್ಲಿದೆ. ಅಲ್ಲಿಯೂ ರಾಜಯೋಗದ ತಪಸ್ಸಿನಲ್ಲಿ ಕುಳಿತುಕೊಂಡಿದ್ದಾರೆ. ಜಗದಂಬೆಯೂ ಇದ್ದಾರೆ, ಪ್ರಜಾಪಿತನೂ ಇದ್ದಾರೆ. ಕುಮಾರಿ ಕನ್ಯೆ, ಅಧರ್ ಕುಮಾರಿಯೂ ಇದ್ದಾರೆ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ, ಮೇಲೆ ರಾಜ್ಯದ ಚಿತ್ರಗಳೂ ಪ್ರತ್ಯಕ್ಷವಾಗಿದೆ. ತಂದೆಯು ಯಾವುದೇ ಭಕ್ತಿಯನ್ನು ಕಲಿಸಿಕೊಡುವುದಿಲ್ಲ. ಭಕ್ತಿಯನ್ನು ಅವರೇ ಮಾಡುತ್ತಾರೆ, ಯಾರು ಕಲಿಸಿಕೊಟ್ಟು ಹೋದರು. ಆದರೆ ಅವರಿಗೆ ಗೊತ್ತೇ ಇಲ್ಲ – ಯಾರು ಈ ರಾಜಯೋಗವನ್ನು ಕಲಿಸಿ ಕೊಟ್ಟು ರಾಜಧಾನಿಯ ಸ್ಥಾಪನೆ ಮಾಡಿ ಹೋದರು. ನೀವು ಮಕ್ಕಳೀಗ ತಿಳಿದುಕೊಂಡಿದ್ದೀರಿ – ಭಕ್ತಿ ವಿಭಾಗವೇ ಬೇರೆ, ಜ್ಞಾನವೇ ಬೇರೆ ಆಗಿದೆ. ಜ್ಞಾನವನ್ನು ತಿಳಿಸುವವರು ಕೇವಲ ಒಬ್ಬರೇ ಆಗಿದ್ದಾರೆ, ಮತ್ತ್ಯಾರೂ ಜ್ಞಾನವನ್ನು ಕಲಿಸಲು ಸಾಧ್ಯವಿಲ್ಲ. ಜ್ಞಾನದ ಸಾಗರನು ಒಬ್ಬರೇ ಆಗಿದ್ದಾರೆ, ಅವರೇ ಬಂದು ಜ್ಞಾನದಿಂದ ಪತಿತರಿಂದ ಪಾವನಗೊಳಿಸುತ್ತಾರೆ. ಅನ್ಯ ಯಾವುದೆಲ್ಲಾ ಸತ್ಸಂಗಗಳಿವೆಯೋ ಅದರಲ್ಲಿ ಯಾರೂ ಸಹ ಜ್ಞಾನವನ್ನು ಕಲಿಸಲು ಸಾಧ್ಯವಿಲ್ಲ. ಭಲೆ ತನ್ನನ್ನು ಶ್ರೀ ಶ್ರೀ 108 ಜಗದ್ಗುರು, ಭಗವಂತನೆಂದೂ ಹೇಳುತ್ತಾರೆ ಆದರೆ ಎಲ್ಲರ ಪರಮಪಿತನು ಜ್ಞಾನ ಸಾಗರನಾಗಿದ್ದಾರೆ ಎಂದು ಯಾರೂ ಸಹ ಹೇಳುವುದಿಲ್ಲ. ಅವರನ್ನಂತು ಯಾರೂ ಸಹ ಪರಮಪಿತನೆಂದು ಹೇಳುವುದಿಲ್ಲ. ಇದಂತು ಗೊತ್ತಿದೆ – ಪರಮಪಿತನು ಪತಿತ-ಪಾವನನಾಗಿದ್ದಾರೆ. ಇವೆಲ್ಲಾ ಅಂಶಗಳನ್ನು ಬಹಳ ಚೆನ್ನಾಗಿ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಮನುಷ್ಯರು ಹೇಳುತ್ತಾರೆ – ಈ ಬ್ರಹ್ಮಾಕುಮಾರಿಯರಂತು ಭಕ್ತಿಗೆ ವಿಚ್ಛೇದನವನ್ನೇ ಕೊಟ್ಟು ಬಿಡುತ್ತಾರೆ. ಆದರೆ ಯಾವಾಗ ಜ್ಞಾನವು ಲಭಿಸುತ್ತದೆಯೋ ಆಗ ಭಕ್ತಿಗೆ ವಿಚ್ಛೇದನ ಕೊಡಲೇಬೇಕಾಗಿದೆ. ಹೀಗೂ ತಿಳಿಯಬಾರದು – ಯಾವಾಗ ಭಕ್ತಿಯಲ್ಲಿ ಹೋಗುತ್ತೇವೆಯೋ ಆಗ ಸಮಯದಲ್ಲಿ ನಾವು ಜ್ಞಾನಕ್ಕೆ ವಿಚ್ಛೇದನವನ್ನು ಕೊಡುತ್ತೇವೆ ಎಂಬುದು ಗೊತ್ತೇ ಇರುವುದಿಲ್ಲ. ಆ ಸಮಯದಲ್ಲಿ ಸ್ವತಹವಾಗಿಯೇ ರಾವಣ ರಾಜ್ಯದಲ್ಲಿ ಬಂದು ಬಿಡುತ್ತೇವೆ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ – ಬಾಬಾರವರು ನಮಗೆ ರಾಜಯೋಗವನ್ನು ಕಲಿಸಿ ಕೊಡುತ್ತಿದ್ದಾರೆ. ರಾಜಯೋಗವು ಜ್ಞಾನವಾಗಿದೆ, ಇದನ್ನು ಭಕ್ತಿಯೆಂದು ಹೇಳುವುದಿಲ್ಲ. ಭಗವಂತನು ಜ್ಞಾನದ ಸಾಗರನಾಗಿದ್ದಾರೆ, ಅವರೆಂದಿಗೂ ಭಕ್ತಿಯನ್ನು ಕಲಿಸಿಕೊಡುವುದಿಲ್ಲ. ಭಕ್ತಿಯ ಫಲವಂತು ಜ್ಞಾನವೇ ಆಗಿದೆ, ಜ್ಞಾನದಿಂದ ಸದ್ಗತಿ ಆಗುವುದು. ಕಲಿಯುಗದ ಅಂತ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ ಆದ್ದರಿಂದ ಈ ಹಳೆಯ ಪ್ರಪಂಚವನ್ನು ದುಃಖಧಾಮವೆಂದು ಹೇಳಲಾಗುತ್ತದೆ. ಈ ಮಾತುಗಳನ್ನು ನೀವು ಈಗಲೇ ತಿಳಿದುಕೊಳ್ಳುವಿರಿ. ತಂದೆಯು ಭಕ್ತಿಯ ಫಲವ ಅರ್ಥಾತ್ ಸದ್ಗತಿ ಕೊಡುವುದಕ್ಕಾಗಿಯೇ ಬಂದಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದಿರುವುದೇ ಹಳೆಯ ಪ್ರಪಂಚ, ಇದರ ವಿನಾಶವಾಗುವುದಿದೆ. ನಮಗೆ ಹೊಸ ಪ್ರಪಂಚದಲ್ಲಿ ರಾಜ್ಯವು ಬೇಕಾಗಿದೆ. ಇದು ರಾಜಯೋಗದ ಜ್ಞಾನವಾಗಿದೆ. ಜ್ಞಾನವನ್ನು ಕಲಿಸುವವರು ಒಬ್ಬರೇ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಅವರನ್ನೇ ಜ್ಞಾನದ ಸಾಗರನೆಂದು ಕರೆಯಲಾಗುತ್ತದೆ, ಶ್ರೀಕೃಷ್ಣನಿಗಲ್ಲ. ಕೃಷ್ಣನ ಮಹಿಮೆಯೇ ಬೇರೆಯಿದೆ, ಅವಶ್ಯವಾಗಿ ಅವನು ಹಿಂದಿನ ಜನ್ಮದಲ್ಲಿ ಅಂತಹ ಕರ್ತವ್ಯವನ್ನು ಮಾಡಿದ್ದಾನೆ, ಅದರಿಂದ ರಾಜಕುಮಾರನಾಗಿದ್ದಾನೆ.

ಈಗ ನೀವು ತಿಳಿದುಕೊಂಡಿದ್ದೀರಿ – ನಾವು ರಾಜಯೋಗದ ಜ್ಞಾನವನ್ನು ಪಡೆದು ಹೊಸ ಪ್ರಪಂಚದಲ್ಲಿ ಸ್ವರ್ಗದ ರಾಜಕುಮಾರ-ರಾಜಕುಮಾರಿ ಆಗುವೆವು. ಸ್ವರ್ಗವನ್ನು ಸದ್ಗತಿ, ನರಕಕ್ಕೆ ದರ್ಗತಿಯೆಂದು ಹೇಳಲಾಗುತ್ತದೆ. ನಾವು ನಮಗಾಗಿ ರಾಜ್ಯ ಸ್ಥಾಪನೆ ಮಾಡುತ್ತಿದ್ದೇವೆ. ಉಳಿದವರು ಯಾರು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ, ಪಾವನರು ಆಗುವುದಿಲ್ಲವೋ ಅವರು ರಾಜಧಾನಿಯಲ್ಲಿ ಬರಲು ಸಾಧ್ಯವಿಲ್ಲ ಏಕೆಂದರೆ ಸತ್ಯಯುಗದಲ್ಲಿ ಬಹಳ ಸ್ವಲ್ಪವೇ ಮಂದಿಯಿರುತ್ತಾರೆ. ಕಲಿಯುಗದ ಅಂತ್ಯದಲ್ಲಿ ಇಷೆಲ್ಲಾ ಅನೇಕ ಮನುಷ್ಯರಿದ್ದಾರೆಯೋ ಅವರು ಅವಶ್ಯವಾಗಿ ಮುಕ್ತಿಧಾಮದಲ್ಲಿ ಹೋಗುವರು, ಮಾಯವಾಗಿ ಬಿಡುವುದಿಲ್ಲ, ಎಲ್ಲರೂ ಮನೆಗೆ ಹೊರಟು ಹೋಗುವರು. ಈಗಂತು ಮಕ್ಕಳಿಗೆ ಮನೆಯ ನೆನಪಿರುತ್ತದೆ – ಈಗ 84 ಜನ್ಮಗಳ ಚಕ್ರವನ್ನು ಪೂರ್ಣಗೊಳಿಸಿದೆವು, ನಾಟಕವು ಸಂಪೂರ್ಣವಾಯಿತು. ಈ ಚಕ್ರವನ್ನು ಅನೇಕ ಬಾರಿ ಸುತ್ತಿದ್ದೇವೆ ಎನ್ನುವುದನ್ನು ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ. ಬ್ರಾಹ್ಮಣರಂತು ಆಗುತ್ತಿರುತ್ತಾರೆ, 16,108ರ ಮಾಲೆಯಿದೆ. ಸತ್ಯಯುಗದಲ್ಲಂತು ಬಹಳಷ್ಟಿರುವುದಿಲ್ಲ. ಸತ್ಯಯುಗದ ಮಾದರಿಯನ್ನೂ ತೋರಿಸುತ್ತಾರಲ್ಲವೆ. ದೊಡ್ಡ ವಸ್ತುವಿನ ಮಾದರಿಯು ಚಿಕ್ಕದಾಗಿರುತ್ತದೆ. ಹೇಗೆ ಚಿನ್ನದ ದ್ವಾರಿಕೆಯನ್ನು ತೋರಿಸುತ್ತಾರೆ, ಆಗ ಹೇಳುತ್ತಾರೆ – ದ್ವಾರಕಾದಲ್ಲಿ ಕೃಷ್ಣನ ರಾಜ್ಯವಿತ್ತು. ಈಗ ದ್ವಾರಕದಲ್ಲಿ ಇದ್ದನೆಂದು ಹೇಳುವರೇ ಅಥವಾ ದೆಹಲಿಯಲ್ಲಿಯೇ? ಜಮುನಾ ನದಿ ತೀರವಂತು ದೆಹಲಿಯಲ್ಲಿದೆ. ಅಲ್ಲಂತು ಸಾಗರವಿದೆ. ಜಮುನಾ ತೀರದಲ್ಲಿ ರಾಜಧಾನಿಯಿತ್ತು, ದ್ವಾರಕಾ ರಾಜಧಾನಿ ಆಗಿರಲಿಲ್ಲ ಎನ್ನುವುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ದೆಹಲಿಯು ಪ್ರಸಿದ್ಧವಿದೆ, ಜಮುನಾ ನದಿಯೂ ಇರಬೇಕು. ಜಮುನಾದ ಮಹಿಮೆಯೂ ಇದೆ. ಪರಿಸ್ತಾನವೆಂದು ದೆಹಲಿಗೇ ಹೇಳಲಾಗುತ್ತದೆ. ಶ್ರೇಷ್ಠವಾದ ಸಿಂಹಾಸನವಂತು ದೆಹಲಿಯ ಸಿಂಹಾಸನವೇ ಆಗಿರುತ್ತದೆ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗಿ ಜ್ಞಾನಮಾರ್ಗವು ಆರಂಭವಾಗುವುದೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ಈ ದೈವೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ತಂದೆಯು ಹೇಳುತ್ತಾರೆ – ಮುಂದೆ ನಡೆದಂತೆ ನಿಮಗೆ ಯಾರ್ಯಾರು ಎಷ್ಟು ಉತ್ತೀರ್ಣರಾಗುತ್ತಾರೆ ಎನ್ನುವುದೆಲ್ಲವೂ ತಿಳಿದು ಬರುವುದು. ಶಾಲೆಯಲ್ಲಿಯೂ ಇಂತಿಂತಹವರು ಎಷ್ಟು ಅಂಕಗಳಿಂದ ಉತ್ತೀರ್ಣರಾಗುವರು, ಮುಂದಿನ ತರಗತಿಗೆ ಹೋಗುವರು ಎನ್ನುವುದು ತಿಳಿಯುವುದು. ಕೊನೆಯ ಸಮಯದಲ್ಲಿ ಯಾರ್ಯಾರು ಉತ್ತೀರ್ಣರಾಗುವರು, ನಂತರ ವರ್ಗಾವಣೆಯಾಗುವರು ಎನ್ನುವುದು ಹೆಚ್ಚಾಗಿ ತಿಳಿದುಬರುವುದು. ತರಗತಿಯಂತು ದೊಡ್ಡದಾಗಿದೆ ಅಲ್ಲವೆ, ಬೇಹದ್ದಿನ ತರಗತಿಯಾಗಿದೆ. ಸೇವಾಕೇಂದ್ರಗಳಂತು ದಿನ ಕಳೆದಂತೆ ಹೆಚ್ಚಾಗುತ್ತಿರುವುದು. ಯಾರಾದರೂ ಬಂದು 7 ದಿನದ ಕೋರ್ಸ್ನ್ನು ಚೆನ್ನಾಗಿ ತೆಗೆದುಕೊಳ್ಳುವರು. ಒಂದೆರಡು ದಿನಗಳ ಕೋರ್ಸ್ ಸಹ ಕಡಿಮೆಯಾಗುವುದಿಲ್ಲ. ಕಲಿಯುಗದ ವಿನಾಶವು ಸನ್ಮುಖದಲ್ಲಿ ಬಂದು ನಿಂತಿದೆ ಎನ್ನುವುದನ್ನು ನೋಡುತ್ತಾರೆ, ಈಗ ಸತೋಪ್ರಧಾನರು ಆಗಬೇಕಾಗಿದೆ. ತಂದೆಯು ಹೇಳಿದ್ದಾರೆ – ಬುದ್ಧಿಯೋಗವನ್ನು ನನ್ನೊಂದಿಗೆ ಇಡುತ್ತೀರೆಂದರೆ ಸತೋಪ್ರಧಾನರು ಆಗಿ ಬಿಡುತ್ತೀರಿ. ಪವಿತ್ರ ಪ್ರಪಂಚದಲ್ಲಿ ಬರುವಿರಿ. ಹೇಗೆ ಡ್ರಾಮಾದಲ್ಲಿ ಕಲ್ಪದ ಮೊದಲಿನಂತೆ ಪಾತ್ರವನ್ನು ಅಭಿನಯಿಸಲಾಗಿದೆ. ಹಾಗೆಯೇ ಪಾತ್ರವನ್ನಂತು ಅವಶ್ಯವಾಗಿ ಅಭಿನಯಿಸಲೇಬೇಕು. ಭಾರತವಾಸಿಗಳೇ ರಾಜ್ಯವನ್ನಾಳುತ್ತಾರೆ, ನಂತರ ವೃದ್ಧಿ ಹೊಂದುತ್ತದೆ. ವೃಕ್ಷವು ವೃದ್ಧಿಯನ್ನು ಪಡೆಯುತ್ತಿರುತ್ತದೆ. ಭಾರತವಾಸಿಗಳು ದೇವಿ-ದೇವತಾ ಧರ್ಮದವರಾಗಿದ್ದಾರೆ. ಹೇಗೆ ಕ್ರಿಶ್ಚಿಯನ್ನರು ಕ್ರೈಸ್ಟ್ನ್ನು ಪೂಜಿಸುತ್ತಾರೆ ಹಾಗೆಯೇ ಭಾರತವಾಸಿಗಳು ಈಗ ಪಾವನವಿರದೇ ಇರುವ ಕಾರಣದಿಂದ, ಪಾವನರಿರುವ ದೇವತೆಗಳನ್ನು ಪೂಜಿಸುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮವಿರುವುದು ಸತ್ಯಯುಗದಲ್ಲಿ. ಸತ್ಯಯುಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಅವಶ್ಯವಾಗಿ ಸತ್ಯಯುಗದಲ್ಲಿ ಈ ದೇವತೆಗಳ ರಾಜ್ಯವಿತ್ತು ಅಂದಮೇಲೆ ಅವಶ್ಯವಾಗಿ ಒಂದು ಜನ್ಮದ ಹಿಂದೆ ಅಂತಹ ಪುರುಷಾರ್ಥವನ್ನು ಮಾಡಿರುತ್ತಾರೆ. ಅವಶ್ಯವಾಗಿ ಅದು ಸಂಗಮವೇ ಆಗಿರುತ್ತದೆ. ಯಾವಾಗ ಹಳೆಯ ಪ್ರಪಂಚವು ಬದಲಾಗಿ ಹೊಸ ಪ್ರಪಂಚವಾಗುತ್ತದೆ, ಕಲಿಯುಗದ ನಂತರ ಸತ್ಯಯುಗವು ಬರಬೇಕು ಅಂದಮೇಲೆ ಕಲಿಯುಗದಲ್ಲಿ ಪತಿತರಾಗಿರುತ್ತಾರೆ. ಬಾಬಾರವರು ತಿಳಿಸಿದ್ದಾರೆ – ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಚಿತ್ರಿಸುತ್ತೀರಿ ಅಥವಾ ಆಧ್ಯಾತ್ಮಿಕ ಪುಸ್ತಕಗಳನ್ನು ತಯಾರು ಮಾಡುತ್ತೀರೆಂದರೆ, ಅದರಲ್ಲಿ ಇದನ್ನು ಬರೆಯಬೇಕು – ಇವರು ತನ್ನ ಹಿಂದಿನ ಜನ್ಮದಲ್ಲಿ ಈ ಸಹಜ ರಾಜಯೋಗದ ಜ್ಞಾನದಿಂದ ಈ ಪುರುಷಾರ್ಥವನ್ನು ಮಾಡಿದ್ದಾರೆ. ಕೇವಲ ರಾಜ-ರಾಣಿ ಆಗುವುದಿಲ್ಲ, ಪ್ರಜೆಗಳೂ ಆಗುವರಲ್ಲವೆ. ಅಜ್ಞಾನದಲ್ಲಂತು ಮನುಷ್ಯರು ಏನನ್ನೂ ತಿಳಿದುಕೊಳ್ಳದೆ, ಕೇವಲ ಪೂಜೆ ಮಾಡುತ್ತಿರುತ್ತಾರೆ.ಈಗ ನೀವು ತಿಳಿಯುತ್ತೀರಿ – ಅವರು ಪೂಜೆ ಮಾಡುತ್ತಿರಬೇಕಾದರೆ ಕೇವಲ ಲಕ್ಷ್ಮೀ-ನಾರಾಯಣನನ್ನೇ ನೋಡುತ್ತಿರುತ್ತಾರೆ. ತಿಳುವಳಿಕೆಯಂತು ಇಲ್ಲ. ಜನರು ತಿಳಿಯುತ್ತಾರೆ – ಭಕ್ತಿ ಮಾಡದೇ ಭಗವಂತನೇ ಸಿಗುವುದಿಲ್ಲ. ನೀವು ಯಾರಿಗಾದರೂ ಭಗವಂತನು ಬಂದಿದ್ದಾರೆ ಎಂದು ಹೇಳುತ್ತೀರೆಂದರೆ, ಅವರು ನಗುತ್ತಾರೆ. ಭಗವಂತನಂತು ಕಲಿಯುಗದ ಅಂತಿಮದಲ್ಲಿ ಬರುತ್ತಾರೆ, ಈಗ ಎಲ್ಲಿಂದ ಬರುವರು! ಕಲಿಯುಗದ ಅಂತ್ಯದಲ್ಲಿಯೇ ಬರುತ್ತಾರೆ ಎಂದು ಏಕೆ ಹೇಳುತ್ತಾರೆ ಎನ್ನುವುದನ್ನೂ ತಿಳಿದುಕೊಂಡಿಲ್ಲ. ಅವರಂತು ಕೃಷ್ಣನನ್ನು ದ್ವಾಪರದಲ್ಲಿ ಬರುವನೆಂದು ಹೇಳುತ್ತಾರೆ, ಮನುಷ್ಯರಿಗೆ ತಿಳುವಳಿಕೆಯಿಲ್ಲದೆ ಏನೆನಿಸುತ್ತದೆಯೋ ಅದನ್ನೇ ಹೇಳಿ ಬಿಡುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ – ನೀವು ಸಂಪೂರ್ಣವಾಗಿ ಬುದ್ಧಿಹೀನರು ಆಗಿ ಬಿಟ್ಟಿದ್ದೀರಿ. ತಂದೆಯನ್ನೇ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಭಕ್ತಿಯು ಹೊರಗಿನಿಂದ ಬಹಳ ಸುಂದರವಾದ ರೂಪದಲ್ಲಿ ಕಾಣಿಸುತ್ತದೆ, ಭಕ್ತಿಯ ಆಕರ್ಷಣೆಯು ಎಷ್ಟೊಂದಿದೆ! ನಿಮ್ಮ ಬಳಿಯಂತು ಏನೂ ಇಲ್ಲ. ಮತ್ತೆಲ್ಲಿಯಾದರೂ ಸತ್ಸಂಗ ಮುಂತಾದ ಕಡೆಗಳಲ್ಲಿ ಹೋದರೆ ಅವಶ್ಯವಾಗಿ ಧ್ವನಿ ಮೊಳಗುತ್ತದೆ, ಹಾಡನ್ನು ಹಾಡುತ್ತಾರೆ. ಇಲ್ಲಂತು ತಂದೆಯವರು ಹಾಡನ್ನೂ ಬಯಸುವುದಿಲ್ಲ. ಮುಂದೆ ನಡೆದಂತೆ ಇದೂ ಸಹ ಸ್ಥಗಿತಗೊಳ್ಳುತ್ತದೆ.

ತಂದೆಯು ಹೇಳುತ್ತಾರೆ – ನಿಮಗೆ ಈ ಹಾಡುಗಳು ಇತ್ಯಾದಿಗಳೆಲ್ಲದರ ಸಾರವನ್ನು ತಿಳಿಸಿದ್ದೇವೆ. ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ. ಇದು ವಿದ್ಯಾಭ್ಯಾಸವಾಗಿದೆ, ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಒಂದುವೇಳೆ ಸ್ವಲ್ಪವೇ ಓದಿದರೆ ಪ್ರಜೆಗಳಲ್ಲಿ ಹೋಗಿ ಬಿಡುತ್ತೀರಿ ಆದ್ದರಿಂದ ಯಾರು ಬಹಳ ಬುದ್ಧಿವಂತರಾಗಿದ್ದಾರೆ, ಅವರನ್ನು ಫಾಲೋ ಮಾಡಬೇಕಾಗಿದೆ. ಏಕೆಂದರೆ ಅವರಿಗೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಿರುವುದರಿಂದ ಲಾಭವಾಗುವುದು. ಯಾರು ಬಹಳ ಚೆನ್ನಾಗಿ ತಿಳಿಸುವವರಿದ್ದಾರೆಯೋ ಅವರಿಂದ ಕಲಿಯಬೇಕಾಗಿದೆ. ಯಾರು ಚೆನ್ನಾಗಿ ತಿಳಿಸುತ್ತಾರೆಯೋ ಅವರನ್ನು ಸೇವಾಕೇಂದ್ರಗಳಲ್ಲಿಯೂ ನೆನಪು ಮಾಡುವರಲ್ಲವೆ. ಬ್ರಹ್ಮಾಕುಮಾರಿಯಂತು ಕುಳಿತಿದ್ದಾರೆ, ಆದರೂ ಹೇಳುತ್ತಾರೆ – ಇಂತಹವರು ಬರಲಿ, ಇವರು ಬಹಳ ಬುದ್ಧಿವಂತರೆಂದು ತಿಳಿಯುತ್ತಾರೆ. ಈ ರೀತಿಯಿದ್ದಾಗ ಅವರಿಗೆ ಅಂತಹ ಆತಿಥ್ಯವನ್ನೇ ಕೊಡಬೇಕಾಗುತ್ತದೆ. ಮತ್ತೆ ಅದೇರೀತಿ ಜ್ಞಾನದಲ್ಲಿ ಅವರು ನಮಗಿಂತ ತೀಕ್ಷ್ಣವಿದ್ದಾರೆ ಎಂದು ಹಿರಿಯರಿಗೆ ಗೌರವವನ್ನಿಡಬೇಕಾಗುತ್ತದೆ. ಇವರಿಗೆ ಅವಶ್ಯವಾಗಿ ಶ್ರೇಷ್ಠ ಪದವಿಯು ಸಿಗುವುದು, ಇದರಲ್ಲಿ ಅಹಂಕಾರ ಬರಬಾರದು. ಹಿರಿಯರಿಗೆ ಬಹಳಷ್ಟು ಗೌರವವಿರುತ್ತದೆ, ಪ್ರಧಾನಮಂತ್ರಿಯವರಿಗೆ ಅವಶ್ಯವಾಗಿ ಹೆಚ್ಚು ಗೌರವವಿರುತ್ತದೆ. ಪ್ರತಿಯೊಬ್ಬರದೂ ನಂಬರ್ವಾರ್ ಗೌರವವಿರುತ್ತದೆ. ಒಬ್ಬರಿನ್ನೊಬ್ಬರ ಬಗ್ಗೆ ಅವಶ್ಯವಾಗಿ ಗೌರವವನ್ನಿಡಬೇಕಲ್ಲವೆ. ವಕೀಲರಲ್ಲಿಯೂ ನಂಬರ್ವಾರ್ ಆಗಿರುತ್ತಾರೆ, ದೊಡ್ಡ ಕೇಸುಗಳಲ್ಲಿ ಬಹಳ ಬುದ್ಧಿವಂತ ವಕೀಲರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.ಕೆಲವರಂತು ಲಕ್ಷಾಂತರ ರೂಪಾಯಿಗಳ ಕೇಸನ್ನು ತೆಗೆದುಕೊಳ್ಳುತ್ತಾರೆ, ಅವರಲ್ಲಿಯೂ ಅವಶ್ಯವಾಗಿ ನಂಬರ್ವಾರ್ ಆಗಿರುತ್ತಾರೆ. ನಮಗಿಂತಲೂ ಬುದ್ಧಿವಂತರಾಗಿದ್ದರೆ ಗೌರವವನ್ನಿಡಬೇಕು. ಸೇವಾಕೇಂದ್ರವನ್ನು ಸಂಭಾಲನೆ ಮಾಡಬೇಕು, ಎಲ್ಲಾ ಪ್ರಕಾರದ ಕಾರ್ಯವನ್ನೂ ಮಾಡಬೇಕಾಗಿದೆ. ಬಾಬಾರವರಿಗೆ ಇಡೀ ದಿನದಲ್ಲಿ ಪ್ರದರ್ಶನಿ ಹೇಗೆ ಮಾಡುವುದು ಎಂದು ವಿಚಾರವಿರುತ್ತದೆಯಲ್ಲವೆ, ಸಂಪೂರ್ಣ ಗಮನ ಕೊಡಬೇಕಾಗಿದೆ. ತಂದೆಯು ಬಂದಿರುವುದೇ ಸತೋಪ್ರಧಾನರನ್ನಾಗಿ ಮಾಡುವುದಕ್ಕಾಗಿ ಅಂದಮೇಲೆ ನಾವು ತಮೋಪ್ರಧಾನರಿಂದ ಸತೋಪ್ರಧಾನರು ಹೇಗಾಗುವುದು! ಪತಿತ-ಪಾವನನು ತಂದೆಯೇ ಆಗಿದ್ದಾರೆ, ಆದರೆ ಇಲ್ಲಂತು ಹೇಳುತ್ತಾರೆ – ಪತಿತ-ಪಾವನಿ ಗಂಗೆ ಆಗಿದ್ದಾಳೆ, ಅದರಲ್ಲಂತು ಜನ್ಮ-ಜನ್ಮಾಂತರದಿಂದ ಸ್ನಾನ ಮಾಡುತ್ತಾ ಬಂದಿದ್ದೇವೆ. ಯಾರೂ ಸಹ ಪಾವರನಾಗಲೇ ಇಲ್ಲ, ಇದೆಲ್ಲವೂ ಭಕ್ತಿಯಾಗಿದೆ. ಯಾವಾಗ ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ, ಅಂದಾಗ ಅವರು ಅವಶ್ಯವಾಗಿ ಸಂಗಮದಲ್ಲಿ ಬರುತ್ತಾರೆ ಮತ್ತು ಒಂದೇ ಬಾರಿ ಬರುತ್ತಾರೆ. ಪ್ರತಿಯೊಬ್ಬರದೂ ತನ್ನ-ತನ್ನ ರೀತಿ-ಪದ್ಧತಿಗಳಿವೆ. ಹೇಗೆ ನೇಪಾಳದಲ್ಲಿ ಅಷ್ಟಮಿಯಂದು ಬಲಿ ಅರ್ಪಿಸುತ್ತಾರೆ, ಚಿಕ್ಕ ಮಕ್ಕಳ ಕೈಯಲ್ಲಿ ಬಂದೂಕನ್ನು ಕೊಟ್ಟು ಗುಂಡನ್ನಾರಿಸುತ್ತಾರೆ.ಆ ಚಿಕ್ಕಮಕ್ಕಳೂ ಬಲಿ ಕೊಡುತ್ತಾರೆ. ಅವರು ದೊಡ್ಡವರಾದಾಗ ಒಂದೇ ಏಟಿಗೆ ಕರುವನ್ನು ಕತ್ತರಿಸುತ್ತಾರೆ. ಯಾರಾದರೂ ಸ್ವಲ್ಪವೇ ಶಕ್ತಿಯನು ಉಪಯೋಗಿಸಿದರು, ಒಂದೇ ಏಟಿಗೆ ಸಾಯದಿದ್ದರೆ ಅದು ಅರ್ಪಣೆಯಾಗಲಿಲ್ಲ, ಅದನ್ನು ದೇವಿಗೆ ಅರ್ಪಣೆ ಮಾಡುವುದಿಲ್ಲ – ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಪ್ರತಿಯೊಬ್ಬರದೂ ತನ್ನ-ತನ್ನ ಕಲ್ಪನೆಯಾಗಿದೆ. ಕಲ್ಪನೆಯ ಮೇಲೆ ಅನುಯಾಯಿಗಳು ಆಗುತ್ತಾರೆ. ಇಲ್ಲಂತು ಹೊಸ ಮಾತಾಗಿದೆ. ಇದನ್ನಂತು ಮಕ್ಕಳೇ ತಿಳಿದುಕೊಳ್ಳಬಹುದು. ಒಬ್ಬ ತಂದೆಯೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ನಾವು ಸ್ವದರ್ಶನ ಚಕ್ರಧಾರಿ ಆಗಿದ್ದೇವೆಂದು ನಿಮಗೆ ಖುಷಿಯಿರುತ್ತದೆ, ಮತ್ತ್ಯಾರೂ ಸಹ ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಿಮಗೆ ನಾವು ಸಭೆಯಲ್ಲಿ ಹೇಳುತ್ತೇವೆ – ಸರ್ವೋತ್ತಮ ಬ್ರಾಹ್ಮಣ ಕುಲ ಭೂಷಣ, ಸ್ವದರ್ಶನ ಚಕ್ರಧಾರಿಗಳು, ಅಂದಾಗ ಇದರ ಅರ್ಥವನ್ನೂ ನೀವು ತಿಳಿದುಕೊಳ್ಳುವಿರಿ. ಯಾರಾದರೂ ಹೊಸಬರಿದ್ದರೆ ಇದೇನು ಹೇಳುತ್ತಿದ್ದಾರೆ? ಎಂದು ತಬ್ಬಿಬ್ಬಾಗುತ್ತಾರೆ. ಸ್ವದರ್ಶನ ಚಕ್ರಧಾರಿಯಂತು ವಿಷ್ಣುವಾಗಿದ್ದಾನೆ. ಇದು ಹೊಸ ಮಾತಲ್ಲವೆ ಆದ್ದರಿಂದ ನಮಗಾಗಿ ಹೇಳುತ್ತಾರೆ – ಹೊರಗೆ ಮೈದಾನದಲ್ಲಿ ಬರುತ್ತೀರೆಂದರೆ ಗೊತ್ತಾಗುವುದು.

ನಿಮ್ಮದು ಜ್ಞಾನ ಮಾರ್ಗವಾಗಿದೆ. ನೀವು 5 ವಿಕಾರಗಳ ಮೇಲೆ ವಿಜಯವನ್ನು ಪಡೆಯುತ್ತೀರಿ. ಈ ಅಸುರರೊಂದಿಗೆ (5 ವಿಕಾರಗಳು) ನಿಮ್ಮ ಯುದ್ಧವಿದೆ. ನಂತರ ನೀವು ದೇವತೆಗಳಾಗುತ್ತೀರಿ. ಮತ್ತ್ಯಾವುದೇ ಯುದ್ಧದ ಮಾತಾಗುವುದಿಲ್ಲ. ಎಲ್ಲಿ ಅಸುರರಿರುತ್ತಾರೆ ಅಲ್ಲಿ ದೇವತೆಗಳು ಇರುವುದಿಲ್ಲ. ನೀವು ಯಾರು ಪುರುಷಾರ್ಥ ಮಾಡುತ್ತಿದ್ದೀರಿ ಅಂತಹವರು ಬ್ರಾಹ್ಮಣರು ದೇವತೆಗಳಾಗುವವರು ಆಗಿದ್ದೀರಿ. ರುದ್ರ ಜ್ಞಾನ ಯಜ್ಞದಲ್ಲಿ ಅವಶ್ಯವಾಗಿ ಬ್ರಾಹ್ಮಣರಿರಬೇಕು. ಬ್ರಾಹ್ಮಣರಿಲ್ಲದೆ ಯಜ್ಞವಾಗುವುದೇ ಇಲ್ಲ. ರುದ್ರನು ಶಿವನಾಗಿದ್ದಾರೆ, ಹಾಗಾದರೆ ಕೃಷ್ಣನ ಹೆಸರೆಲ್ಲಿಂದ ಬಂದಿತು! ನೀವು ಪ್ರಪಂಚದವರಿಗಿಂತ ಸಂಪೂರ್ಣ ಭಿನ್ನವಾಗಿದ್ದೀರಿ, ಹಾಗೆಯೇ ನೀವು ಇಷ್ಟು ಕೆಲವರೇ ಇದ್ದೀರಿ. ಪಕ್ಷಿಗಳು ಸಾಗರವನ್ನು ನುಂಗಿ ಬಿಟ್ಟಿತು, ಈ ರೀತಿ ಶಾಸ್ತ್ರಗಳಲ್ಲಿ ಎಷ್ಟೊಂದು ಕಟ್ಟು ಕಥೆಗಳಿವೆ. ತಂದೆಯು ಹೇಳುತ್ತಾರೆ – ಈಗ ಅವೆಲ್ಲವನ್ನೂ ಮರೆತು ನನ್ನೊಬ್ಬನನ್ನೇ ನೆನಪು ಮಾಡಿರಿ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ತಂದೆಯಂತು ಒಬ್ಬರೇ ಆಗಿದ್ದಾರಲ್ಲವೆ. ಹೇ ಪರಮಾತ್ಮ ಅಥವಾ ಪ್ರಭುವೆಂದು ಹೇಳುತ್ತಾರೆಂದರೆ, ಆ ಸಮಯದಲ್ಲಿ ಲಿಂಗವೂ ನೆನಪಿಗೆ ಬರುವುದಿಲ್ಲ. ಕೇವಲ ಈಶ್ವರ ಅಥವಾ ಪ್ರಭು ಎಂದು ಹೇಳಿ ಬಿಡುತ್ತಾರೆ. ಆತ್ಮನಿಗೆ ತಂದೆಯಿಂದ ಅರ್ಧಕಲ್ಪದ ಸುಖವು ಸಿಕ್ಕಿರುತ್ತದೆ ಆದ್ದರಿಂದ ಆನಂತರ ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತದೆ. ಈಗ ನಿಮಗೆ ತಿಳುವಳಿಕೆಯು ಸಿಕ್ಕಿದೆ – ಆತ್ಮವೆಂದರೇನು, ಪರಮಾತ್ಮನು ಏನಾಗಿದ್ದಾರೆ, ನಾವೆಲ್ಲಾ ಆತ್ಮರು ಮೂಲವತನದಲ್ಲಿ ಇರುವವರು, ಅಲ್ಲಿಂದ ನಂಬರ್ವಾರ್ ಪಾತ್ರವನ್ನಭಿನಯಿಸಲು ಬರುತ್ತೇವೆ. ಮೊದಲು ಬರುವುದು ದೇವಿ-ದೇವತೆಗಳು. ಹೇಳುತ್ತಾರೆ – ಕ್ರೈಸ್ಟ್ಗೆ ಮೊದಲು ದೇವಿ-ದೇವತಾ ಧರ್ಮವಿತ್ತು. ಇದು 5 ಸಾವಿರ ವರ್ಷಗಳ ಮಾತಾಗಿದೆ. ಅವರುಗಳು ಹೇಳಿ ಬಿಡುತ್ತಾರೆ – ಇದು 50 ಸಾವಿರಗಳ ಪುರಾತನ ವಸ್ತುವಾಗಿದೆ. ಆದರೆ 50 ಸಾವಿರ ವರ್ಷಗಳ ಪುರಾತನ ವಸ್ತುವಂತು ಯಾವುದೂ ಸಹ ಇರಲು ಸಾಧ್ಯವಿಲ್ಲ. ಡ್ರಾಮಾದ ಸಮಯವಿರುವುದೇ 5 ಸಾವಿರ ವರ್ಷಗಳು. ಇದೇ ಮುಖ್ಯವಾದ ಧರ್ಮವಾಗಿದೆ. ಈ ಧರ್ಮದವರದೇ ಕಟ್ಟಡ ಮುಂತಾದವುಗಳು ಇರುತ್ತವೆ. ಮೊಟ್ಟ ಮೊದಲಂತು ರಜೋ ಗುಣಿ ಬುದ್ಧಿಯವರಿದ್ದರು. ಈಗಂತು ಇನ್ನೂ ತಮೋ ಗುಣಿ ಬುದ್ಧಿಯವರಾಗಿದ್ದಾರೆ. ಪ್ರದರ್ಶನಿಯಲ್ಲಿ ಎಷ್ಟೊಂದು ತಿಳಿಸಲಾಗುತ್ತದೆ, ಯಾರ ಬುದ್ಧಿಯಲ್ಲಾದರೂ ತಿಳಿಯುತ್ತದೆಯೇ! ಬ್ರಾಹ್ಮಣರಲ್ಲಿಯೇ ನಾಟಿಯಾಗುವುದು. ಅಂದಮೇಲೆ ಮಕ್ಕಳಿಗೆ ತಿಳಿಸಲಾಗಿದೆ – ಜ್ಞಾನವೇ ಭಿನ್ನವಾದಂತಹ ವಸ್ತು, ಭಕ್ತಿಯೇ ಬೇರೆ ಆಗಿದೆ. ಜ್ಞಾನದಿಂದ ಸದ್ಗತಿಯಾಗುವುದು ಆದ್ದರಿಂದ ಹೇಳುತ್ತಾರೆ – ಹೇ ಪತಿತ-ಪಾವನ ಬನ್ನಿರಿ, ದುಃಖದಿಂದ ಮುಕ್ತಗೊಳಿಸಿರಿ. ನಂತರ ಮಾರ್ಗದರ್ಶಕನಾಗಿ ಜೊತೆಗೆ ಕರೆದುಕೊಂಡು ಹೋಗುವರು. ತಂದೆಯವರೇ ಬಂದು ಆತ್ಮರನ್ನು ಕರೆದುಕೊಂಡು ಹೋಗುತ್ತಾರೆ. ಎಲ್ಲರ ಶರೀರವಂತು ಇಲ್ಲಿಯೇ ಸಮಾಪ್ತಿಯಾಗಿ ಬಿಡುತ್ತದೆ, ವಿನಾಶವಾಗುತ್ತದೆ ಅಲ್ಲವೆ. ಶಾಸ್ತ್ರಗಳಲ್ಲಿ ಒಂದೇ ಒಂದು ಮಹಾಭಾರತ ಯುದ್ಧದ ಮಹಿಮೆಯಿದೆ, ಹೇಳುತ್ತಾರೆ – ಇದು ಅದೇ ಮಹಾಭಾರತ ಯುದ್ಧವಾಗಿದೆ. ಅದಂತು ಆಗಲೇಬೇಕು. ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡುತ್ತಿರಿ. ತಮೋಪ್ರಧಾನರಿಂದ ಸತೋಪ್ರಧಾನರಾಗುವ ಉಪಾಯವಂತು ಇದೊಂದೇ ಆಗಿದೆ. ತಂದೆಯು ಹೇಳುತ್ತಾರೆ – ನನ್ನೊಬ್ಬನ್ನೇ ನೆನಪು ಮಾಡುತ್ತೀರೆಂದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಆತ್ಮವು ನನ್ನಜೊತೆ ಹೊರಟು ಬಿಡುತ್ತದೆ. ಇದನ್ನು ಎಲ್ಲರಿಗೂ ಸಂದೇಶವನ್ನು ಕೊಡುತ್ತಾ ಇರುತ್ತೀರೆಂದರೆ, ಅನೇಕರ ಕಲ್ಯಾಣವಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾರು ವಿದ್ಯಾಭ್ಯಾಸದಲ್ಲಿ ಬುದ್ಧಿವಂತರಾಗಿದ್ದಾರೆ, ಚೆನ್ನಾಗಿ ತಿಳಿಸುತ್ತಾರೆ ಅಂತಹವರ ಸಂಗ ಮಾಡಬೇಕಾಗಿದೆ, ಅವರಿಗೆ ಗೌರವ ಕೊಡಬೇಕಾಗಿದೆ. ಎಂದಿಗೂ ಅಹಂಕಾರದಲ್ಲಿ ಬರಬಾರದು.

2. ಜ್ಞಾನದ ಹೊಸ-ಹೊಸ ಮಾತುಗಳನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕು ಹಾಗೂ ಅನ್ಯರಿಗೂ ತಿಳಿಸಬೇಕಾಗಿದೆ. ನಾವು ಸ್ವದರ್ಶನ ಚಕ್ರಧಾರಿ ಆಗಿದ್ದೇವೆ ಎಂಬ ಖುಷಿಯಲ್ಲಿಯೇ ಇರಬೇಕಾಗಿದೆ.

ವರದಾನ:-

ಯಾವುದು ಸಂಕಲ್ಪ, ಸ್ವಪ್ನದಲ್ಲಿಯೂ ಇರುವುದಿಲ್ಲವೋ ಅಂತಹ ಪರೀಕ್ಷೆಯು ಈಗ ಬರುವುದಿದೆ. ಆದರೆ ತಮ್ಮಲ್ಲಿ ಇಂತಹ ಅಭ್ಯಾಸವಿರಬೇಕು – ಹೇಗೆಂದರೆ ಅಲ್ಪಕಾಲದ ಡ್ರಾಮಾವನ್ನು ಸಾಕ್ಷಿಯಾಗಿದ್ದು ನೋಡಲಾಗುತ್ತದೆ, ಅದರಲ್ಲಿ ಭಲೆ ನೋವಿರುವುದೇ ಇರಬಹುದು ಅಥವಾ ತಮಾಷೆಯೇ ಇರಬಹುದು, ಅದರಲ್ಲಿ ಅಂತರವಾಗುವುದಿಲ್ಲ. ಅದೇರೀತಿ ಭಲೆ ಯಾವುದೇ ರಮಣಿಕವಾದ ಪಾತ್ರವಿರಲಿ, ಸ್ನೇಹಿ ಆತ್ಮನ ಗಂಭೀರ ಪಾತ್ರವೇ ಇರಲಿ…. ಪ್ರತಿಯೊಂದು ಪಾತ್ರವನ್ನು ಸಾಕ್ಷಿ ದೃಷ್ಟನಾಗಿದ್ದು ನೋಡಿರಿ, ಏಕರಸ ಸ್ಥಿತಿಯಿರಲಿ. ಆದರೆ ಇಂತಹ ಸ್ಥಿತಿಯಾಗಬೇಕೆಂದರೆ ಸದಾ ಒಬ್ಬ ತಂದೆಯ ನೆನಪಿನಲ್ಲಿ ಮಗ್ನರಾಗಿರಬೇಕು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top