08 June 2021 KANNADA Murli Today – Brahma Kumaris

June 7, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಬುದ್ಧಿವಂತ ಮಕ್ಕಳೇ - ಸದಾ ನೆನಪಿಡಿ, ನಾವು ಅವಿನಾಶಿ ಆತ್ಮರಾಗಿದ್ದೇವೆ, ನಾವೀಗ ತಂದೆಯ ಜೊತೆ ಮೊದಲ ಅಂತಸ್ತಿಗೆ ಹೋಗಬೇಕಾಗಿದೆ”

ಪ್ರಶ್ನೆ:: -

ಯಾವ ಪರಿಶ್ರಮವನ್ನು ನೀವು ಪ್ರತಿಯೊಬ್ಬರೂ ಅವಶ್ಯವಾಗಿ ಮಾಡಬೇಕಾಗಿದೆ?

ಉತ್ತರ:-

ತಂದೆಯು ನಮಗೆ ಯಾವ ಇಷ್ಟೊಂದು ಜ್ಞಾನವನ್ನು ಕೊಡುತ್ತಾರೆಯೋ ಅದನ್ನು ತಮ್ಮ ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುತ್ತಾ ಇರಿ, ಒಳಗಿಂದೊಳಗೆ ಮನನ ಮಾಡಿ ಜೀರ್ಣ ಮಾಡಿಕೊಳ್ಳಿ ಅದರಿಂದ ಶಕ್ತಿ ಸಿಗುವುದು. ಪ್ರತಿಯೊಬ್ಬರೂ ಈ ಪರಿಶ್ರಮವನ್ನು ಅವಶ್ಯವಾಗಿ ಪಡಬೇಕಾಗಿದೆ. ಯಾರು ಇಂತಹ ಗುಪ್ತ ಪರಿಶ್ರಮ ಪಡುವರೋ ಅವರು ಸದಾ ಹರ್ಷಿತರಾಗಿರುತ್ತಾರೆ. ಅವರಿಗೆ ನಶೆಯಿರುತ್ತದೆ – ನಮಗೆ ಓದಿಸುವವರು ಯಾರಾಗಿದ್ದಾರೆ! ನಾವು ಯಾರ ಸನ್ಮುಖದಲ್ಲಿ ಕುಳಿತಿದ್ದೇವೆ!

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಇದನ್ನು ಯಾರು ಹೇಳಿದರು? ಓಂ ಶಾಂತಿ ಓಂ ಶಾಂತಿ ಎಂದು ಎರಡು ಬಾರಿ ಹೇಳುತ್ತಾರೆ. ಒಂದನ್ನು ಶಿವ ತಂದೆಯು ಹೇಳಿದರು, ಇನ್ನೊಂದು ಬ್ರಹ್ಮಾ ತಂದೆಯೂ ಹೇಳಿದರು. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ, ಇವರಿಬ್ಬರೂ ಓಂ ಶಾಂತಿ ಓಂ ಶಾಂತಿ ಎಂದು ಹೇಳಬೇಕಾಗುತ್ತದೆ. ಈಗ ಮೊದಲು ಯಾರು ಹೇಳಿದರು? ನಂತರ ಯಾರು ಹೇಳಿದರು? ಮೊದಲು ಶಿವ ತಂದೆಯು ಹೇಳಿದರು ಓಂ ಶಾಂತಿ. ನಾನು ಶಾಂತಿಯ ಸಾಗರನಾಗಿದ್ದೇನೆ, ನಂತರ ಯಾರು ಹೇಳಿದರು? ದಾದಾರವರ ಆತ್ಮವು ಹೇಳಿತು. ಮಕ್ಕಳಿಗೆ ನೆನಪು ತರಿಸುತ್ತಾರೆ – ಓಂ ಶಾಂತಿ, ನಾನು ಸದಾ ದೇಹೀ-ಅಭಿಮಾನಿಯಾಗಿದ್ದೇನೆ. ಎಂದೂ ದೇಹಾಭಿಮಾನದಲ್ಲಿ ಬರುವುದಿಲ್ಲ. ಒಬ್ಬ ತಂದೆಯೇ ಸದಾ ದೇಹೀ-ಅಭಿಮಾನಿಯಾಗಿರುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರೂ ಹೀಗೆ ಹೇಳುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ – ತ್ರಿಮೂರ್ತಿಗಳಿಗೂ ಸೂಕ್ಷ್ಮ ರೂಪವಿದೆ ಅಂದಾಗ ಓಂ ಶಾಂತಿ ಎಂದು ಹೇಳುವವರು ಒಬ್ಬ ಶಿವ ತಂದೆಯಾಗಿದ್ದಾರೆ, ಅವರಿಗೆ ಯಾವುದೇ ಶರೀರವಿಲ್ಲ. ತಂದೆಯು ನಿಮಗೆ ಬಹಳ ಚೆನ್ನಾಗಿ ತಿಳಿಸುತ್ತಾರೆ – ನಾನು ಒಂದೇ ಬಾರಿ ಬರುತ್ತೇನೆ. ನಾನು ಸದಾ ದೇಹೀ-ಅಭಿಮಾನಿಯಾಗಿದ್ದೇನೆ, ಪುನರ್ಜನ್ಮದಲ್ಲಿ ಬರುವುದಿಲ್ಲ. ಆದ್ದರಿಂದ ನನ್ನ ಮಹಿಮೆಯೇ ಭಿನ್ನವಾಗಿದೆ. ನಿರಾಕಾರ ಪರಮಪಿತ ಪರಮಾತ್ಮನೆಂದು ನನಗೆ ಹೇಳುತ್ತಾರೆ. ಭಕ್ತಿಮಾರ್ಗದಲ್ಲಿಯೂ ಶಿವನಿಗೆ ನಿರಾಕಾರ ಪರಮಪಿತ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ, ನಿರಾಕಾರನ ಪೂಜೆ ನಡೆಯುತ್ತದೆ, ಅವರೆಂದೂ ದೇಹದಲ್ಲಿ ಬರುವುದಿಲ್ಲ ಅರ್ಥಾತ್ ದೇಹಾಭಿಮಾನಿಯಾಗುವುದಿಲ್ಲ. ಅವರಿಗಿಂತ ಕೆಳಗಡೆ ಬಂದಾಗ ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿರುತ್ತಾರೆ. ಶಿವನ ನಾಮ-ರೂಪವಂತೂ ಕಣ್ಣಿಗೆ ಕಾಣುವುದಿಲ್ಲ. ಚಿತ್ರವನ್ನು ಮಾಡಿಸುತ್ತಾರೆ ಆದರೆ ಅವರು ನಿರಾಕಾರನಾಗಿದ್ದಾರೆ, ಅವರೆಂದೂ ಸಾಕಾರಿಯಾಗುದಿಲ್ಲ. ಪೂಜೆಯೂ ನಿರಾಕಾರನಿಗೇ ಆಗುತ್ತದೆ. ಮಕ್ಕಳ ಬುದ್ಧಿಯಲ್ಲಿ ಇಡೀ ಜ್ಞಾನವಿರುತ್ತದೆ, ಭಕ್ತಿಯನ್ನಂತೂ ಮಾಡಿದ್ದೀರಲ್ಲವೆ. ಚಿತ್ರಗಳನ್ನು ಮಕ್ಕಳು ನೋಡಿದ್ದೀರಿ, ನಿಮಗೇ ತಿಳಿದಿದೆ – ಸತ್ಯ-ತ್ರೇತಾಯುಗದಲ್ಲಿ ಚಿತ್ರಗಳ ಭಕ್ತಿಯಾಗಲಿ, ವಿಚಿತ್ರ ತಂದೆಯ ಭಕ್ತಿಯಾಗಲಿ ಇರುವುದಿಲ್ಲ. ಬುದ್ಧಿಯಲ್ಲಿ ಬರುತ್ತದೆ, ಪರಮಪಿತ ಪರಮಾತ್ಮನು ವಿಚಿತ್ರನಾಗಿದ್ದಾರೆ, ಅವರಿಗೆ ಸೂಕ್ಷ್ಮ ಚಿತ್ರವಾಗಲಿ, ಸ್ಥೂಲ ಚಿತ್ರವಾಗಲಿ ಇಲ್ಲ. ದುಃಖಹರ್ತ-ಸುಖಕರ್ತ, ಪತಿತ-ಪಾವನ ಎಂದು ಅವರ ಮಹಿಮೆಯನ್ನೇ ಮಾಡಲಾಗುತ್ತದೆ. ನೀವು ಮತ್ತ್ಯಾರದೇ ಚಿತ್ರಕ್ಕೆ ಪತಿತ-ಪಾವನಿ ಎಂದು ಹೇಳುವುದಿಲ್ಲ. ಮತ್ತ್ಯಾವ ಮನುಷ್ಯರ ಬುದ್ಧಿಯಲ್ಲಿಯೂ ಈ ಮಾತುಗಳಿರುವುದಿಲ್ಲ. ಬ್ರಹ್ಮಾ, ವಿಷ್ಣು, ಶಂಕರನು ಸೂಕ್ಷ್ಮವತನವಾಸಿಗಳಾಗಿದ್ದಾರೆ, ಮೊದಲನೇ ಅಂತಸ್ತು ಸೂಕ್ಷ್ಮವತನವಾಗಿದೆ, ಅದರ ನಂತರ ಎರಡನೇ ಅಂತಸ್ತು, ಅದು ಶ್ರೇಷ್ಠಾತಿ ಶ್ರೇಷ್ಠವಾದ ಮೂಲವತನವಾಗಿದೆ. ಪರಮಪಿತ ಪರಮಾತ್ಮನು ಆ ಅಂತಸ್ತಿನ ನಿವಾಸಿಯಾಗಿದ್ದಾರೆ. ಅದರ ಕೆಳಗಿನ ಅಂತಸ್ತಿನಲ್ಲಿ ಸೂಕ್ಷ್ಮ ಶರೀರಧಾರಿಗಳಿದ್ದಾರೆ. ಇಲ್ಲಿನ ಕೆಳ ಅಂತಸ್ತಿನಲ್ಲಿ ಸ್ಥೂಲ ಶರೀರಧಾರಿಗಳಿದ್ದಾರೆ, ಇದರಲ್ಲಿ ತಬ್ಬಿಬ್ಬಾಗಬೇಡಿ. ಈ ಮಾತುಗಳನ್ನು ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೇಲಿರುವುದು ಆತ್ಮಗಳ ಸೃಷ್ಟಿಯಾಗಿದೆ ಅದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಾವೆಲ್ಲಾ ಆತ್ಮರ ಪ್ರಪಂಚವಾಗಿದೆ. ಮತ್ತೆ ನಾವಾತ್ಮರು ಈ ಸಾಕಾರಿ ಪ್ರಪಂಚದಲ್ಲಿ ಬರುತ್ತೇವೆ. ಪರಮಧಾಮದಲ್ಲಿ ಆತ್ಮರಿರುತ್ತಾರೆ, ಇಲ್ಲಿ ಜೀವಾತ್ಮರಿದ್ದಾರೆ. ಇದು ಬುದ್ಧಿಯಲ್ಲಿರಬೇಕು – ಅವಶ್ಯವಾಗಿ ನಾವು ನಿರಾಕಾರಿ ತಂದೆಯ ಮಕ್ಕಳಾಗಿದ್ದೇವೆ, ನಾವೂ ಸಹ ಮೊದಲು ನಿರಾಕಾರ ತಂದೆಯ ಬಳಿ ಇರುತ್ತಿದ್ದೆವು, ನಿರಾಕಾರಿ ಪ್ರಪಂಚದಲ್ಲಿಯೂ ಆತ್ಮರಿರುತ್ತಾರೆ. ಆ ಆತ್ಮರು ಇಲ್ಲಿಯ ತನಕ ಪಾತ್ರವನ್ನು ಅಭಿನಯಿಸಲು ಸಾಕಾರದಲ್ಲಿ ಬರುತ್ತಿದ್ದಾರೆ. ಪರಮಧಾಮವು ನಿರಾಕಾರಿ ತಂದೆಯ ವತನವಾಗಿದೆ, ನಾವಾತ್ಮರಾಗಿದ್ದೇವೆ ಎಂಬ ನಶೆಯಿರಬೇಕು. ಅವಿನಾಶಿ ವಸ್ತುವಿನ ನಶೆಯಿರಬೇಕೇ ಹೊರತು ವಿನಾಶಿ ವಸ್ತುವಿನದಲ್ಲ. ದೇಹದ ನಶೆಯಿರುವವರಿಗೆ ದೇಹಾಭಿಮಾನಿಗಳೆಂದು ಹೇಳಲಾಗುತ್ತದೆ. ದೇಹಾಭಿಮಾನಿಗಳು ಒಳ್ಳೆಯವರೋ ಅಥವಾ ಆತ್ಮಾಭಿಮಾನಿಗಳು ಒಳ್ಳೆಯವರೋ? ಯಾರು ಬುದ್ಧಿವಂತರು? ಆತ್ಮಾಭಿಮಾನಿಗಳು. ಆತ್ಮವೇ ಅವಿನಾಶಿಯಾಗಿದೆ, ದೇಹವು ವಿನಾಶಿಯಾಗಿದೆ. ನಾನು 84 ದೇಹಗಳನ್ನು ತೆಗೆದುಕೊಳ್ಳುತ್ತೇನೆ, ನಾನಾತ್ಮನು ಪರಮಧಾಮದಲ್ಲಿ ತಂದೆಯ ಜೊತೆ ಇದ್ದೆನು, ಅಲ್ಲಿಂದ ಪಾತ್ರವನ್ನು ಅಭಿನಯಿಸಲು ಬರುತ್ತೇನೆಂದು ಆತ್ಮವೇ ಹೇಳುತ್ತದೆ, ಓ ಬಾಬಾ ಎಂದು ಆತ್ಮವೇ ಹೇಳುತ್ತದೆ. ಸಾಕಾರಿ ಸೃಷ್ಟಿಯಲ್ಲಿ ಸಾಕಾರಿ ತಂದೆಯಿದ್ದಾರೆ. ನಿರಾಕಾರಿ ಸೃಷ್ಟಿಯಲ್ಲಿ ನಿರಾಕಾರಿ ತಂದೆಯಿದ್ದಾರೆ. ಇದು ಸಂಪೂರ್ಣ ಸಹಜ ಮಾತಾಗಿದೆ. ಬ್ರಹ್ಮನಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುತ್ತಾರೆ ಅಂದಮೇಲೆ ಅವರು ಇಲ್ಲಿಯವರೇ ಅಲ್ಲವೆ. ಅಲ್ಲಿ ನಾವಾತ್ಮರೆಲ್ಲರೂ ಒಬ್ಬ ತಂದೆಯ ಮಕ್ಕಳು ಸಹೋದರರಾಗಿರುತ್ತೇವೆ, ತಂದೆಯು ಶಿವನ ಜೊತೆ ಇರುವವರಾಗಿದ್ದೇವೆ. ಪರಮಾತ್ಮನ ಹೆಸರಾಗಿದೆ – ಶಿವ, ಆತ್ಮನ ಹೆಸರಾಗಿದೆ – ಸಾಲಿಗ್ರಾಮ. ಆತ್ಮಕ್ಕೂ ರಚಯಿತನು ಬೇಕಲ್ಲವೆ. ತನ್ನೊಂದಿಗೆ ತಾನು ಯಾವಾಗಲೂ ಹೀಗೆ ಮಾತನಾಡಿಕೊಳ್ಳುತ್ತಾ ಇರಿ. ಯಾವ ಜ್ಞಾನವು ಸಿಗುತ್ತದೆಯೋ ಅದು ತನ್ನ ಹೃದಯಕ್ಕೆ ನಾಟಬೇಕೆಂದರೆ ಪರಿಶ್ರಮ ಪಡಬೇಕಾಗುತ್ತದೆ. ಆತ್ಮವೇ ವಿಚಾರ ಮಾಡಬೇಕಾಗುತ್ತದೆ – ಮೊಟ್ಟ ಮೊದಲು ಈ ನಿಶ್ಚಯ ಮಾಡಿಕೊಳ್ಳಿ, ನಾವಾತ್ಮರು ತಂದೆಯ ಜೊತೆಯಿರುವವರಾಗಿದ್ದೇವೆ. ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಅವಶ್ಯವಾಗಿ ಆಸ್ತಿಯು ಸಿಗಬೇಕು. ಇದನ್ನೂ ಸಹ ತಿಳಿದುಕೊಂಡಿದ್ದೀರಿ – ಇದು ಆತ್ಮಗಳ ವೃಕ್ಷವಾಗಿದೆ, ಅಂದಮೇಲೆ ಅದಕ್ಕೆ ಮೊದಲೇ ಅವಶ್ಯವಾಗಿ ಬೀಜವಿರುತ್ತದೆ. ಹೇಗೆ ಮನೆತನವನ್ನು ಮಾಡುತ್ತಾರಲ್ಲವೆ. ದೊಡ್ಡವರು ತಂದೆ, ಮತ್ತೆ ಅವರಿಂದ 2-4 ಮಂದಿ ಮಕ್ಕಳು, ಮತ್ತೆ ಅವರಿಗೆ ಮಕ್ಕಳು, ಮೊಮ್ಮಕ್ಕಳು…. ಹೀಗೆ ಒಬ್ಬರಿಂದ ವೃದ್ಧಿಯಾಗುತ್ತಾ-ಆಗುತ್ತಾ ವೃಕ್ಷವೇ ದೊಡ್ಡದಾಗಿ ಬಿಡುತ್ತದೆ. ಇಂತಹವರಿಂದ ಇಂತಹವರು, ಅವರ ನಂತರ ಇವರು….. ಎಂದು. ತಲೆಮಾರಿನ ನಕ್ಷೆಯಿರುತ್ತದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಮೂಲವತನದಲ್ಲಿ ಎಲ್ಲಾ ಆತ್ಮರಿರುತ್ತಾರೆ, ಅದೂ ಚಿತ್ರವಿದೆ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ, ಆ ತಂದೆಯು ಈ ಶರೀರದಲ್ಲಿ ಬಂದಿದ್ದಾರೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಆತ್ಮಿಕ ತಂದೆಯು ಬಂದು ಆತ್ಮಗಳಿಗೆ ಓದಿಸುತ್ತಾರೆ. ಸೂಕ್ಷ್ಮವತನದಲ್ಲಂತೂ ಓದಿಸುವುದಿಲ್ಲ, ಮತ್ತು ಸತ್ಯಯುಗದಲ್ಲಿಯೂ ಸಹ ಈ ಜ್ಞಾನವು ಯಾರಿಗೂ ಇರುವುದಿಲ್ಲ. ತಂದೆಯೇ ಈ ಸಂಗಮಯುಗದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ. ಈ ಮನುಷ್ಯ ಸೃಷ್ಟಿರೂಪಿ ವೃಕ್ಷದ ಜ್ಞಾನವು ಯಾರಿಗೂ ಇಲ್ಲ. ಕಲ್ಪದ ಆಯಸ್ಸನ್ನು ಬಹಳ ಸುದೀರ್ಘವಾಗಿ ಬರೆದು ಬಿಟ್ಟಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವೀಗ ಪುನಃ ಮನೆಗೆ ನಡೆಯಬೇಕಾಗಿದೆ, ಅದು ಆತ್ಮಗಳ ಮನೆಯಾಗಿದೆ. ತಂದೆ ಮತ್ತು ಮಕ್ಕಳಿರುತ್ತಾರೆ. ಎಲ್ಲರೂ ಸಹೋದರರಾಗಿದ್ದಾರೆ. ಇಲ್ಲಿ ಬಂದು ಶರೀರ ಧಾರಣೆ ಮಾಡಿದಾಗ ಸಹೋದರ-ಸಹೋದರಿಯರಾಗುತ್ತೇವೆ. ನಾವಾತ್ಮರೆಲ್ಲರೂ ವಾಸ್ತವದಲ್ಲಿ ಸಹೋದರರಾಗಿದ್ದೇವೆ. ಸಹೋದರರಿಗೆ ಅವಶ್ಯವಾಗಿ ತಂದೆಯೂ ಇರಬೇಕಲ್ಲವೆ. ಅವರು ಪರಮಪಿತ ಪರಮಾತ್ಮನಾಗಿದ್ದಾರೆ. ಎಲ್ಲಾ ಆತ್ಮರು ಶರೀರದಲ್ಲಿದ್ದರೂ ಸಹ ಅವರನ್ನು ನೆನಪು ಮಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಪತಿತ ಪ್ರಪಂಚದಲ್ಲಿ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ ಏಕೆಂದರೆ ಎಲ್ಲರೂ ರಾವಣನ ಬಂಧನದಲ್ಲಿದ್ದಾರೆ. ಹೇ ರಾಮ ಎಂದು ಸೀತೆಯೂ ಕರೆಯುತ್ತಿದ್ದಳು, ತಂದೆಯು ತಿಳಿಸುತ್ತಾರೆ – ರಾಮನೆಂದಾಗ ತ್ರೇತಾಯುಗದ ರಾಮನು ನೆನಪು ಬರುವುದಿಲ್ಲ. ಪರಮಪಿತ ಪರಮಾತ್ಮನನ್ನೇ ನೆನಪು ಮಾಡುತ್ತಿರುತ್ತಾರೆ, ಆತ್ಮವೇ ಕರೆಯುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಇನ್ನರ್ಧ ಕಲ್ಪದವರೆಗೂ ಯಾರನ್ನೂ ಕರೆಯುವುದಿಲ್ಲ, ಏಕೆಂದರೆ ಸುಖಧಾಮದಲ್ಲಿರುತ್ತೀರಿ. ಈ ಸಮಯದಲ್ಲಿ ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಅವರಂತೂ ಆತ್ಮವೇ ಪರಮಾತ್ಮ, ಆತ್ಮವೇ ಪರಮಾತ್ಮನಲ್ಲಿ ಲೀನವಾಗುತ್ತದೆ ಎಂದು ಹೇಳುತ್ತಾರೆ. ತಂದೆ ತಿಳಿಸುತ್ತಾರೆ – ಆತ್ಮ ಅವಿನಾಶಿಯಾಗಿದೆ. ಯಾವ ಆತ್ಮವೂ ಸಹ ವಿನಾಶವಾಗಲು ಸಾಧ್ಯವಿಲ್ಲ. ಹೇಗೆ ತಂದೆಯು ಅವಿನಾಶಿಯಾಗಿದ್ದಾರೆಯೋ ಹಾಗೆಯೇ ಆತ್ಮವೂ ಅವಿನಾಶಿಯಾಗಿದೆ. ಇಲ್ಲಿ ಆತ್ಮವು ಪತಿತ, ತಮೋಪ್ರಧಾನವಾಗುತ್ತದೆ ಮತ್ತೆ ತಂದೆಯು ಬಂದು ಪವಿತ್ರ, ಸತೋಪ್ರಧಾನರನ್ನಾಗಿ ಮಾಡುತ್ತದೆ. ಇಡೀ ಪ್ರಪಂಚವು ತಮೋಪ್ರಧಾನವಾಗಲೇಬೇಕು ನಂತರ ಪುನಃ ಸತೋಪ್ರಧಾನವಾಗುವುದು. ಪತಿತ ಪ್ರಪಂಚವನ್ನು ಪಾವನ ಮಾಡಲು ತಂದೆಯೇ ಬರಬೇಕಾಗುತ್ತದೆ, ಅವರಿಗೇ ಪರಮಾತ್ಮನೆಂದು ಹೇಳುತ್ತಾರೆ. ತಂದೆಯೂ ಅವಿನಾಶಿ, ನಾವಾತ್ಮರೂ ಅವಿನಾಶಿಯಾಗಿದ್ದೇವೆ. ಈ ನಾಟಕವು ಅವಿನಾಶಿಯಾಗಿದೆ. ಈ ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈ ನಾಲ್ಕು ಯುಗಗಳಲ್ಲಿ ನಮ್ಮ ಪಾತ್ರವು ನಡೆಯುತ್ತದೆ. ನಾವು ಸೂರ್ಯವಂಶಿಯರೇ ನಂತರ ಚಂದ್ರವಂಶಿಯರಾಗುತ್ತೇವೆ. ಚಂದ್ರವಂಶಿಯರೆಂದರೆ ಹೇಗೆ ಎರಡನೇ ದರ್ಜೆಯಲ್ಲಿ ಬರುತ್ತೇವೆ. 14 ಕಲೆಗಳುಳ್ಳವರಿಗೆ ಸೂರ್ಯವಂಶಿಯರೆಂದು ಹೇಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ಅವರಿಗೆ ದೇವಿ-ದೇವತೆಗಳೆಂತಲೂ ಹೇಳುವಂತಿಲ್ಲ. 16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳಿಗೆ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ರಾಮನಿಗೆ 14 ಕಲೆಗಳಲ್ಲಿ ಸಂಪನ್ನನೆಂದು ಹೇಳುತ್ತಾರೆ. ನಿಮ್ಮದೇ 84 ಜನ್ಮಗಳ ಲೆಕ್ಕವನ್ನು ತಿಳಿಸಲಾಗುತ್ತದೆ. ಹೊಸ ವಸ್ತುವು ನಂತರ ಹಳೆಯದಾಗುತ್ತದೆ ಆಗ ಅಷ್ಟು ಮಜಾ ಇರುವುದಿಲ್ಲ. ಮೊದಲು ಸಂಪೂರ್ಣ ಪವಿತ್ರವಾಗಿರುತ್ತದೆ ನಂತರ ಕೆಲವೊಂದು ವರ್ಷಗಳು ಕಳೆದರೆ ಅದಕ್ಕೆ ಸ್ವಲ್ಪ ಹಳೆಯದೆಂದು ಹೇಳಲಾಗುತ್ತದೆ. ಹೇಗೆ ಮನೆಯ ಉದಾಹರಣೆಯನ್ನು ಕೊಡಲಾಗುತ್ತದೆ, ಇದೇರೀತಿ ಪ್ರತಿಯೊಂದು ವಸ್ತುವು ಪರಿವರ್ತನೆಯಾಗುತ್ತದೆ. ಈ ಪ್ರಪಂಚವೂ ಸಹ ಒಂದು ದೊಡ್ಡ ಮಂಟಪವಾಗಿದೆ. ಈ ಆಕಾಶ ತತ್ವವು ಬಹಳ ದೊಡ್ಡದಾಗಿದೆ, ಇದಕ್ಕೆ ಯಾವುದೇ ಅಂತ್ಯವಿಲ್ಲ. ಇದರ ಅಂತ್ಯವೆಲ್ಲಿದೆ ಎಂದು ಯಾರೂ ಹುಡುಕಲು ಸಾಧ್ಯವಿಲ್ಲ. ಎಷ್ಟೇ ನಡೆಯುತ್ತಾ ಹೋಗಿ ಅದು ಮುಗಿಯುವುದಿಲ್ಲ. ಹಾಗೆಯೇ ಬ್ರಹ್ಮ ಮಹಾತತ್ವದ ಅಂತ್ಯವನ್ನು ಹುಡುಕಲು ಸಾಧ್ಯವಿಲ್ಲ. ವಾಸ್ತವದಲ್ಲಿ ವಿಜ್ಞಾನಿಗಳು ಇದರ ಅಂತ್ಯವನ್ನು ಕಾಣಲು ಎಷ್ಟೊಂದು ಪ್ರಯತ್ನ ಪಡುತ್ತಾರೆ ಆದರೆ ಹೋಗಲು ಸಾಧ್ಯವಾಗುವುದಿಲ್ಲ. ಬ್ರಹ್ಮ ಮಹಾತತ್ವವು ಬಹಳ ದೊಡ್ಡದಾಗಿದೆ, ಬೇಅಂತ್ ಆಗಿದೆ. ನಾವಾತ್ಮರು ಬಹಳ ಚಿಕ್ಕ ಜಾಗದಲ್ಲಿರುತ್ತೇವೆ. ಇಲ್ಲಿ ಕಟ್ಟಡಗಳನ್ನು ಎಷ್ಟು ದೊಡ್ಡ-ದೊಡ್ಡದಾಗಿ ಕಟ್ಟಿಸುತ್ತಾರೆ, ಧರಣಿಯ ಭಾಗವು ಬಹಳ ದೊಡ್ಡದಾಗಿದೆ. ಹೊಲಗದ್ದೆಗಳೂ ಬೇಕಲ್ಲವೆ. ಪರಮಧಾಮದಲ್ಲಂತೂ ಕೇವಲ ಆತ್ಮರಿರುತ್ತಾರೆ. ಆತ್ಮವು ಶರೀರವಿಲ್ಲದೆ ಹೇಗೆ ತಿನ್ನುವುದು? ಅಲ್ಲಂತೂ ಅಭೋಕ್ತರಾಗಿರುತ್ತೀರಿ, ತಿನ್ನುವ-ಕುಡಿಯುವ ಮಾತೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ – ಈ ಜ್ಞಾನವು ನೀವು ಮಕ್ಕಳಿಗೆ ಇದೆ. ಒಂದೇ ಬಾರಿ ಸಿಗುತ್ತದೆ ಮತ್ತೆ ಕಲ್ಪದ ನಂತರ ನೀವು ಮಕ್ಕಳಿಗೆ ಪುನಃ ತಿಳಿಸಲಾಗುತ್ತದೆ ಅಂದಮೇಲೆ ನಾವೇ ದೇವತಾ ಧರ್ಮದವರಾಗಿದ್ದೆವು ಎಂಬ ನಶೆಯಿರಬೇಕು. ಬಾಬಾ, ಇಂದಿಗೆ 5000 ವರ್ಷಗಳ ಮೊದಲು ನಾವು ಶೂದ್ರರಿಂದ ಬ್ರಾಹ್ಮಣರಾಗಲು ತಮ್ಮ ಬಳಿ ಬಂದಿದ್ದೆವು, ಈಗ ಪುನಃ ನಾವು ತಮ್ಮ ಬಳಿ ಬಂದಿದ್ದೇವೆ ಎಂದು ನೀವು ಹೇಳುತ್ತೀರಿ. ತಂದೆಯು ನಿರಾಕಾರನಾಗಿರುವ ಕಾರಣ ದಾದಾರವರ ಬಳಿ ಬಂದಿದ್ದೇವೆ, ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆಂದು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ – ಹೇಗೆ ನೀವು ಕರ್ಮೇಂದ್ರಿಯಗಳನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೀರೋ ಹಾಗೆಯೇ ನಾವೂ ಸಹ ಕರ್ಮೇಂದ್ರಿಯಗಳ ಆಧಾರವನ್ನು ತೆಗೆದುಕೊಳ್ಳುತ್ತೇನೆ, ಇಲ್ಲವೆಂದರೆ ಹೇಗೆ ನಾನು ಪಾತ್ರವನ್ನಭಿನಯಿಸಲಿ? ಶಿವ ಜಯಂತಿಯನ್ನೂ ಆಚರಿಸುತ್ತಾರೆ. ಶಿವನು ನಿರಾಕಾರನಾಗಿದ್ದಾರೆ ಅಂದಮೇಲೆ ಅವರ ಜಯಂತಿ ಹೇಗಾಯಿತು? ಮನುಷ್ಯರು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ, ನಾನು ಹೇಗೆ ಬಂದು ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲಿ ಎಂದು ತಂದೆಯು ಹೇಳುತ್ತಾರೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ ನನಗೇ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳುತ್ತಾರೆ. ನನಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೆಂದು ತಂದೆಯು ಹೇಳುತ್ತಾರೆ.

ತಂದೆಯು ಇವರಲ್ಲಿ ಪ್ರವೇಶ ಮಾಡಿ ನಮಗೆ ಎಲ್ಲಾ ಜ್ಞಾನವನ್ನು ತಿಳಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಬ್ರಹ್ಮಾ, ವಿಷ್ಣು, ಶಂಕರರ ಪಾತ್ರವನ್ನೂ ತಿಳಿದುಕೊಳ್ಳಬೇಕು. ತಂದೆಯು ಪತಿತ-ಪಾವನನೆಂಬುದನ್ನು ತಿಳಿದುಕೊಂಡಿದ್ದೀರಿ, ಪ್ರತಿಯೊಬ್ಬರ ಮಹಿಮೆಯು ಬೇರೆ-ಬೇರೆ, ಕರ್ತವ್ಯವು ಬೇರೆ-ಬೇರೆಯಾಗಿರುತ್ತದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ ಇತ್ಯಾದಿಯಾಗುತ್ತಾರೆ. ಇದು ನನ್ನ ಶರೀರವಾಗಿದೆ, ನಾನು ಪ್ರಧಾನ ಮಂತ್ರಿಯಾಗಿದ್ದೇನೆಂದು ಆತ್ಮವೇ ಹೇಳುತ್ತದೆ. ಆತ್ಮವು ಶರೀರದ ಜೊತೆ ಇಲ್ಲವೆಂದರೆ ಮಾತನಾಡಲು ಸಾಧ್ಯವಿಲ್ಲ. ಶಿವ ತಂದೆಯೂ ನಿರಾಕಾರನಾಗಿದ್ದಾರೆ, ಅವರೂ ಸಹ ಮಾತನಾಡುವುದಕ್ಕಾಗಿ ಕರ್ಮೇಂದ್ರಿಯಗಳ ಆಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಾಯಿಂದ ಗಂಗೆಯು ಬಂದಿತೆಂದು ತೋರಿಸುತ್ತಾರೆ. ಶಿವನಂತೂ ಬಿಂದುವಾಗಿದ್ದಾರೆ ಅಂದಮೇಲೆ ಅವರಿಗೆ ಬಾಯಿ ಎಲ್ಲಿಂದ ಬಂದಿತು? ಆದ್ದರಿಂದ ಇವರಲ್ಲಿ (ಬ್ರಹ್ಮಾ) ಬಂದು ಕುಳಿತುಕೊಂಡು ಜ್ಞಾನ ಗಂಗೆಯನ್ನು ಹೊರ ಹಾಕುತ್ತಾರೆ. ತಂದೆಯೇ ಹೇ ಪತಿತ-ಪಾವನ ಬನ್ನಿ, ಈ ದುಃಖದಿಂದ ಬಿಡಿಸಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಅವರೇ ಅತಿ ದೊಡ್ಡ ಸರ್ಜನ್ ಆಗಿದ್ದಾರೆ. ಅವರಲ್ಲಿಯೇ ಪತಿತರನ್ನು ಪಾವನ ಮಾಡುವ ಜ್ಞಾನವಿದೆ. ಎಲ್ಲಾ ಪತಿತರನ್ನು ಪಾವನ ಮಾಡುವ ಸರ್ಜನ್ ಒಬ್ಬರೇ ಆಗಿದ್ದಾರೆ, ಸತ್ಯಯುಗದಲ್ಲಿ ಎಲ್ಲರೂ ನಿರೋಗಿಗಳಿರುತ್ತಾರೆ. ಈ ಲಕ್ಷ್ಮೀ-ನಾರಾಯಣರು ಸತ್ಯಯುಗದ ಮಾಲೀಕರಾಗಿದ್ದಾರೆ. ಇವರಿಗೆ ಇಂತಹ ಕರ್ಮವನ್ನು ಯಾರು ಕಲಿಸಿದರು? ಯಾವುದರಿಂದ ಇಷ್ಟು ನಿರೋಗಿಗಳಾದರು! ತಂದೆಯೇ ಬಂದು ಶ್ರೇಷ್ಠ ಕರ್ಮವನ್ನು ಕಲಿಸುತ್ತಾರೆ. ಇಲ್ಲಂತೂ ಕರ್ಮವೇ ಕುಟುಕುತ್ತಿರುತ್ತದೆ. ಸತ್ಯಯುಗದಲ್ಲಿ ಕರ್ಮವು ಹೀಗಿದೆ ಎಂಬ ಮಾತನ್ನು ಹೇಳುವುದಿಲ್ಲ. ಅಲ್ಲಿ ಯಾವುದೇ ದುಃಖ ರೋಗವಿರುವುದಿಲ್ಲ. ಇಲ್ಲಂತೂ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಇದು ಕರ್ಮ ಭೋಗವೆಂದು ಹೇಳಲು ಸತ್ಯ-ತ್ರೇತಾಯುಗದಲ್ಲಿ ದುಃಖದ ಮಾತೇ ಇರುವುದಿಲ್ಲ. ಕರ್ಮ, ಅಕರ್ಮ, ವಿಕರ್ಮದ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಕ್ಕೇ ಸಾಧ್ಯವಿಲ್ಲ. ನಿಮಗೆ ತಿಳಿದಿದೆ – ಪ್ರತಿಯೊಂದು ವಸ್ತು ಮೊದಲು ಸತೋಪ್ರಧಾನ, ನಂತರ ಸತೋ, ರಜೋ, ತಮೋ ಆಗುತ್ತದೆ. ಸತ್ಯಯುಗದಲ್ಲಿ ಪಂಚ ತತ್ವಗಳೂ ಸಹ ಸತೋಪ್ರಧಾನವಾಗಿರುತ್ತದೆ. ನಮ್ಮ ಶರೀರವೂ ಸಹ ಸತೋಪ್ರಧಾನ ಪ್ರಕೃತಿಯದಾಗಿರುತ್ತದೆ, ನಂತರ ಆತ್ಮನಲ್ಲಿ ಎರಡು ಕಲೆಗಳು ಕಡಿಮೆಯಾಗುವ ಕಾರಣ ಶರೀರವೂ ಅದೇ ರೀತಿಯಾಗುತ್ತದೆ. ಸೃಷ್ಟಿಗೂ ಎರಡು ಕಲೆಗಳು ಕಡಿಮೆಯಾಗುತ್ತದೆ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗಿನಿಂದಲೇ ತಂದೆಯ ಶ್ರೀಮತದಂತೆ ಇಂತಹ ಶ್ರೇಷ್ಠ ಕರ್ಮಗಳನ್ನು ಮಾಡಬೇಕಾಗಿದೆ ಯಾವುದರಿಂದ ಮತ್ತೆಂದೂ ಕರ್ಮವು ಹಳಿಯುವಂತಾಗಬಾರದು ಅರ್ಥಾತ್ ಕರ್ಮಗಳ ಶಿಕ್ಷೆಯನ್ನು ಅನುಭವಿಸುವಂತಾಗದಿರಲಿ.

2. ಯಾವುದೇ ವಿನಾಶಿ ವಸ್ತುವಿನ ನಶೆಯಿಟ್ಟುಕೊಳ್ಳಬಾರದು. ಈ ದೇಹವೂ ಸಹ ವಿನಾಶಿಯಾಗಿದೆ, ಇದರ ನಶೆಯನ್ನೂ ಇಟ್ಟುಕೊಳ್ಳಬಾರದು, ಸೂಕ್ಷ್ಮ ಬುದ್ಧಿಯವರಾಗಬೇಕಾಗಿದೆ.

ವರದಾನ:-

ಅಮೃತವೇಳೆಯಿಂದ ರಾತ್ರಿಯವರೆಗಿನ ದಿನಚರಿಯಲ್ಲಿ ಆದೇಶಗಳೇನು ಸಿಕ್ಕಿದೆಯೋ, ಅದರ ಅನುಸಾರವಾಗಿ ತಮ್ಮ ವೃತ್ತಿ, ದೃಷ್ಟಿ, ಸಂಕಲ್ಪ, ಸ್ಮೃತಿ, ಸೇವೆ ಹಾಗೂ ಸಂಬಂಧವನ್ನು ಪರಿಶೀಲನೆ ಮಾಡಿಕೊಳ್ಳಿರಿ. ಆದೇಶವನ್ನು ಯಾರು ಪ್ರತೀ ಸಂಕಲ್ಪ, ಪ್ರತೀ ಹೆಜ್ಜೆಯಲ್ಲಿ ಪಾಲಿಸುತ್ತಾರೆಯೋ, ಅವರ ಸರ್ವ ಇಚ್ಛೆಗಳೂ ಸಮಾಪ್ತಿ ಆಗಿ ಬಿಡುತ್ತದೆ (ಪೂರ್ಣಗೊಳ್ಳುತ್ತವೆ). ಒಂದುವೇಳೆ ಆಂತರ್ಯದಲ್ಲಿ ಏನಾದರೂ ಪುರುಷಾರ್ಥ ಅಥವಾ ಸಫಲತೆಯ ಬಯಕೆಯಿದ್ದರೂ ಸಹ, ಅವಶ್ಯವಾಗಿ ಒಂದಲ್ಲ ಒಂದು ಕಡೆ ಆದೇಶವನ್ನು ಪಾಲಿಸುತ್ತಿಲ್ಲ ಎಂದು. ಆದ್ದರಿಂದ ಯಾವಾಗ ಯಾವುದೇ ತೊಡಕುಗಳು ಬರುತ್ತವೆಯೆಂದರೂ ಸಹ ನಾಲ್ಕೂ ಕಡೆಗಳಿಂದ ಪರಿಶೀಲನೆ ಮಾಡಿರಿ. ಇದರಿಂದ ಸ್ವತಹವಾಗಿಯೇ ಮಾಯಾ ಮುಕ್ತರು ಆಗಿ ಬಿಡುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top