08 January 2022 KANNADA Murli Today | Brahma Kumaris

Read and Listen today’s Gyan Murli in Kannada

January 7, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಜ್ಞಾನ ರತ್ನಗಳನ್ನು ಧಾರಣೆ ಮಾಡಿ ಆತ್ಮಿಕ ಆಸ್ಪತ್ರೆ, ವಿಶ್ವ ವಿದ್ಯಾಲಯವನ್ನು ತೆರೆಯುತ್ತಾ ಹೋಗಿ, ಇದರಿಂದ ಎಲ್ಲರಿಗೂ ಆರೋಗ್ಯ ಐಶ್ವರ್ಯ ಸಿಗುತ್ತದೆ”

ಪ್ರಶ್ನೆ:: -

ತಂದೆಯ ಯಾವ ಕರ್ತವ್ಯ ಮನುಷ್ಯಾತ್ಮರು ಯಾರೂ ಮಾಡಲು ಸಾಧ್ಯವಿಲ್ಲ?

ಉತ್ತರ:-

ಆತ್ಮನಿಗೆ ಜ್ಞಾನದ ಇಂಜೆಕ್ಷನ್ ಕೊಟ್ಟು ಸದಾಕಾಲಕ್ಕೆ ನಿರೋಗಿಯನ್ನಾಗಿ ಮಾಡುವುದು ಈ ಕರ್ತವ್ಯವನ್ನು ಮನುಷ್ಯರು ಯಾರು ಮಾಡಲು ಸಾಧ್ಯವಿಲ್ಲ. ಆತ್ಮ ನಿರ್ಲೇಪವೆಂದು ತಿಳಿದು ಕೊಂಡಿರುವವರು ಜ್ಞಾನದ ಇಂಜೆಕ್ಷನ್ ಹೇಗೆ ಕೊಡಲು ಸಾಧ್ಯ? ಇಂತಹ ಜ್ಞಾನ-ಯೋಗದ ಔಷಧಿಯನ್ನು ಕೊಡುವ ಕರ್ತವ್ಯ ಒಬ್ಬ ಅವಿನಾಶಿ ಸರ್ಜನ್ ದಾಗಿದೆ. ಇದರಿಂದ ಅರ್ಧ ಕಲ್ಪದವರೆಗೂ ಆತ್ಮ ಹಾಗೂ ಶರೀರ ಎರಡು ಆರೋಗ್ಯ ಹಾಗೂ ಐಶ್ವರ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತವೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಸಮಯ ಹೋಗುತ್ತಿದೆ……

ಓಂ ಶಾಂತಿ. ಸ್ವಲ್ಪ ಸಮಯವಿದೆ ಎಂದು ಹೇಳಿದವರು ಯಾರು? ಎಲ್ಲವೂ ಕಳೆದು ಹೋಗಿ ಸ್ವಲ್ಪದರಲ್ಲಿಯೂ ಸ್ವಲ್ಪ ಉಳಿದಿದೆ. ಈಗ ನೀವು ಹಳೆಯ ಪ್ರಪಂಚದಲ್ಲಿ ಕುಳಿತುಕೊಂಡಿದ್ದೀರಿ. ಇಲ್ಲಿ ದುಃಖವೇ ದುಃಖವಿದೆ. ಸುಖದ ಹೆಸರು-ಚಿಹ್ನೆ ಇಲ್ಲದಾಗಿದೆ. ಸುಖಧಾಮದಲ್ಲಿ ಸುಖವೇ ಇರುತ್ತದೆ. ಕಲಿಯುಗಕ್ಕೆ ದುಃಖಧಾಮವೆಂದು ಕರೆಯಲಾಗುತ್ತದೆ. ಈಗ ತಂದೆ ತಿಳಿಸುತ್ತಾರೆ ನಾನು ಬಂದಿರುವುದೇ ನಿಮ್ಮನ್ನು ಸುಖಧಾಮಕ್ಕೆ ಕರೆದೊಯ್ಯಲು, ಹಾಗಾದರೆ ನೀವು ಏಕೆ ತಡ ಮಾಡುತ್ತಿದ್ದೀರಿ? ದುಃಖಧಾಮದಲ್ಲಿ ಮನಸ್ಸನ್ನು ಏಕೆ ಇಟ್ಟಿದ್ದೀರಿ? ದುಃಖಧಾಮದ ಸಂಬಂಧಿಕರೊಂದಿಗೆ ಅಥವಾ ಈ ಹಳೆಯ ಪತಿತ ಶರೀರದೊಂದಿಗೆ ಮನಸ್ಸನ್ನು ಏಕೆ ಇಟ್ಟಿದ್ದೀರಿ? ನಾನು ಬಂದಿರುವುದೇ ನಿಮ್ಮನ್ನು ಸುಖಧಾಮಕ್ಕೆ ಕರೆದೊಯ್ಯಲು. ಸನ್ಯಾಸಿಗಳು ಈ ಪ್ರಪಂಚದ ಸುಖವನ್ನು ಕಾಗೆಯ ಹೇಸಿಗೆಯ ಸಮಾನವೆಂದು ಈ ಪ್ರಪಂಚವನ್ನು ಸನ್ಯಾಸ ಮಾಡುತ್ತಾರೆ. ಮಕ್ಕಳಾದ ನಿಮಗೆ ಈಗ ಸುಖಧಾಮದ ಸಾಕ್ಷಾತ್ಕಾರವಾಗಿದೆ ಈ ವಿದ್ಯೆ ಇರುವುದೇ ಸುಖ ಧಾಮಕ್ಕಾಗಿ ಹಾಗೂ ಈ ವಿದ್ಯೆಯಲ್ಲಿ ಯಾವ ಪರಿಶ್ರಮವು ಇರುವುದಿಲ್ಲ. ತಂದೆಯನ್ನು ನೆನಪು ಮಾಡಬೇಕು. ಈ ನೆನಪಿನಿಂದ ನೀವು ನಿರೋಗಿಗಳಾಗುತ್ತೀರಿ. ನಿಮ್ಮ ಕಾಯ ಕಲ್ಪವೃಕ್ಷದ ಸಮಾನವಾಗುತ್ತದೆ. ಯಾವ ಮನುಷ್ಯ ಸೃಷ್ಟಿಯ ವೃಕ್ಷವಿದೆ ಅದರ ಆಯಸ್ಸು ಐದು ಸಾವಿರ ವರ್ಷಗಳಾಗಿವೆ. ಇದರಲ್ಲಿ ಅರ್ಧಕಲ್ಪ ಸುಖ ಅರ್ಧಕಲ್ಪ ದುಃಖವಿದೆ. ದುಃಖವಂತೂ ಅರ್ಧಕಲ್ಪದಿಂದ ನೋಡಿದ್ದೀರಿ. ತಂದೆ ತಿಳಿಸುತ್ತಾರೆ ಪವಿತ್ರ ಪ್ರಪಂಚದಲ್ಲಿ ಹೋಗಬೇಕೆಂದರೆ ಪವಿತ್ರರಾಗಿ. ಶ್ರೀಮತ ಹೇಳುತ್ತದೆ-ಈ ವಿಷದ ವ್ಯವಹಾರ(ಲೇನ್-ದೇನ್)ವನ್ನು ಬಿಟ್ಟು ಬಿಡಿ. ಜ್ಞಾನ ಹಾಗೂ ಯೋಗದ ಧಾರಣೆ ಮಾಡಿ. ಎಷ್ಟು ಜ್ಞಾನರತ್ನಗಳನ್ನು ಧಾರಣೆ ಮಾಡುತ್ತೀರಿ ಅಷ್ಟು ನಿರೋಗಿಯಾಗುತ್ತೀರಿ.

ತಂದೆ ತಿಳಿಸಿದ್ದಾರೆ ಇದು ಆತ್ಮೀಯ ಆಸ್ಪತ್ರೆಯು ಆಗಿದೆ, ಅಲ್ಲದೆ ವಿಶ್ವವಿದ್ಯಾಲಯವಾಗಿದೆ. ಪರಮಪಿತ ಪರಮಾತ್ಮ ಬಂದು ಆತ್ಮಿಕ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವನ್ನು ತೆರೆಯುತ್ತಿದ್ದಾರೆ. ಪ್ರಪಂಚದಲ್ಲಿ ತುಂಬಾ ಆಸ್ಪತ್ರೆಗಳಿವೆ ಆದರೆ ಇಂತಹ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವೆರಡು ಜೊತೆ ಜೊತೆಯಲ್ಲಿ ಎಲ್ಲಿಯೂ ಇರುವುದಿಲ್ಲ. ಇಲ್ಲಿ ಇದು ವಿಚಿತ್ರವಾಗಿದೆ. ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ, ಆರೋಗ್ಯ ಹಾಗೂ ಐಶ್ವರ್ಯ ಜೊತೆಯಲ್ಲಿಯೇ ಸಿಗುತ್ತದೆ. ಹಾಗಾದರೆ ಈ ಖಜಾನೆಗಳನ್ನು ತೆಗೆದುಕೊಳ್ಳಲು ಏಕೆ ಬರಬಾರದು. ಇಂದು-ನಾಳೆ ಎಂದು ಹೇಳುತ್ತಾರೆ ಅಕಸ್ಮಿಕವಾಗಿ ವಿನಾಶ ಬಂದು ಬಿಡುತ್ತದೆ. ತಂದೆ ಶ್ರೇಷ್ಠಾತಿ ಶ್ರೇಷ್ಠ ಮತವನ್ನು ಕೊಡುತ್ತಾರೆ. ಈ ಸಮಯದಲ್ಲಿ ಬೇಹದ್ದಿನ ತಂದೆ ಇಂತಹ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವನ್ನು ತೆರೆಯುತ್ತಿದ್ದಾರೆ, ಇದರಿಂದ ಎಲ್ಲರಿಗೂ ಆರೋಗ್ಯ ಐಶ್ವರ್ಯ ಎರಡು ಸಿಗುತ್ತದೆ ಎಂದು ಸರ್ಕಾರದವರಿಗೆ ನೀವು ತಿಳಿಸಿಕೊಡಿ. ಸರ್ಕಾರವೂ ಸಹ ಆಸ್ಪತ್ರೆ, ವಿಶ್ವವಿದ್ಯಾಲಯವನ್ನು ತೆರೆಯುತ್ತದೆ. ಅವರಿಗೆ ಶಾರೀರಿಕ ಆಸ್ಪತ್ರೆ ತೆರೆಯುವುದರಿಂದ ಏನು ಸಿಗುತ್ತದೆ ಎಂದು ತಿಳಿಸಬೇಕು. ಇದಂತೂ ಅರ್ಧಕಲ್ಪದಿಂದ ನಡೆಯುತ್ತಲೇ ಬಂದಿದೆ. ಹಾಗೂ ರೋಗಿಗಳು ಆಗುತ್ತಲೇ ಬಂದಿದ್ದಾರೆ. ಇದು ಆತ್ಮಿಕ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವಾಗಿದೆ. ಇದರಿಂದ ಮನುಷ್ಯರು 21 ಜನ್ಮಗಳಿಗೆ ಸದಾ ಆರೋಗ್ಯವಂತರು ಹಾಗೂ ಐಶ್ವರ್ಯವಂತರು ಆಗುತ್ತಾರೆ. ಶಿಕ್ಷಣ ಮಂತ್ರಿ, ಆರೋಗ್ಯ ಮಂತ್ರಿಗಳಿಗೂ ತಿಳಿಸಿಕೊಡಿ-ಬೇಹದ್ದಿನ ತಂದೆಯು ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ ಎರಡನ್ನು ಸೇರಿಸಿ ತೆಗೆದಿದ್ದಾರೆ. ತಮಗೂ ಸಹ ಮಾರ್ಗದರ್ಶನ ಕೊಡುತ್ತಿದ್ದಾರೆ ನೀವು ಕೂಡ ಈ ರೀತಿ ತೆರೆದಾಗ ಮನುಷ್ಯರ ಕಲ್ಯಾಣವಾಗುತ್ತದೆ. ಆದರೆ ಈ ರೋಗ ಮುಂತಾದವುಗಳೆಲ್ಲವೂ ರಾವಣ ರಾಜ್ಯ ಆರಂಭ ಆದಾಗಿನಿಂದ ಪ್ರಾರಂಭವಾಗಿವೆ. ಮೊದಲು ವೈದ್ಯರ ಔಷಧಿ ಇತ್ತು. ಈಗ ತುಂಬಾ ಇಂಗ್ಲೀಷ್ ಔಷಧಿಗಳು ಬಂದು ಬಿಟ್ಟಿವೆ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ, ಅವಿನಾಶಿ ಔಷಧಿಯನ್ನು ಕೊಡುತ್ತಾರೆ ಆದ್ದರಿಂದ ಜ್ಞಾನ ಅಂಜನ ಸದ್ಗುರು ಕೊಟ್ಟರು ಎಂದು ಗಾಯನವಿದೆ. ಜ್ಞಾನದ ಇಂಜೆಕ್ಷನ್ ಆತ್ಮಗಳಿಗೆ ಆತ್ಮಿಕ ತಂದೆ ಕೊಡುತ್ತಾರೆ. ಬೇರೆ ಯಾರೂ ಸಹ ಆತ್ಮಕ್ಕೆ ಇಂಜೆಕ್ಷನ್ ಕೊಡುವವರು ಇಲ್ಲ. ಅವರು ಆತ್ಮ ನಿರ್ಲೇಪ ಎಂದು ಹೇಳಿ ಬಿಡುತ್ತಾರೆ. ಆ ಆಸ್ಪತ್ರೆ ಹಾಗೂ ವಿಶ್ವ ವಿದ್ಯಾಲಯದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಆಗುತ್ತದೆಯೆಂದು ಹೇಳಿ. ಇಲ್ಲಿ ಖರ್ಚು ಆಗುವ ಯಾವ ಮಾತು ಇಲ್ಲ. ಕೇವಲ ಮೂರು ಹೆಜ್ಜೆ ಭೂಮಿ ಬೇಕಷ್ಟೆ. ಯಾರೇ ಬಂದರು ಅವರಿಗೆ ಈ ರೀತಿ ತಿಳಿಸಿ ಕೊಡಬೇಕು – ತಂದೆಯನ್ನು ನೆನಪು ಮಾಡಿದರೆ ಸದಾ ಆರೋಗ್ಯವಂತರಾಗುತ್ತೀರಿ. ಚಕ್ರವನ್ನು ತಿಳಿದುಕೊಳ್ಳುವುದರಿಂದ ಚಕ್ರವರ್ತಿ ರಾಜ ಆಗುತ್ತೀರಿ. ಶ್ರೀಮಂತರಾದರೆ ದೊಡ್ಡ ಆಸ್ಪತ್ರೆ, ವಿಶ್ವವಿದ್ಯಾಲಯವನ್ನು ತೆರೆಯುತ್ತಾರೆ. ಬಡವರು ಚಿಕ್ಕದಾಗಿ ತೆರೆಯುತ್ತಾರೆ. ಸರ್ಕಾರವೂ ಸಹ ಎಷ್ಟೊಂದು ತೆರೆಯುತ್ತದೆ. ಈಗಿನ ಕಾಲದಲ್ಲಿ ಚಪ್ಪರ (ಟೆಂಟ್) ಮುಂತಾದವುಗಳನ್ನು ಹಾಕಿ ಓದಿಸುತ್ತಾರೆ ಹಾಗೂ ಸ್ಥಳವಿಲ್ಲದ ಕಾರಣ ಎರಡು-ಮೂರು ತರಗತಿಯನ್ನು (ಸೆಷನ್) ಇಡುತ್ತಾರೆ. ಏಕೆಂದರೆ ಹಣವು ಇಲ್ಲದಾಗಿದೆ. ಇಲ್ಲಿ ಯಾವುದೇ ವ್ಯಯದ ಮಾತಿಲ್ಲ. ಯಾವುದೇ ಸ್ಥಳವಿದ್ದರೂ ಸರಿ. ಇಲ್ಲಿ ಯಾವುದೇ ಸಾಮಾನು ಇಡುವ ಅವಶ್ಯಕತೆಯಿಲ್ಲ. ತುಂಬಾ ಸಹಜವಾದ ಮಾತಾಗಿದೆ ಸಹೋದರರೂ ಸಹ ತೆರೆಯುತ್ತಾರೆ, ಮಾತೆಯರೂ ಸಹ ತೆರೆಯುತ್ತಾರೆ. ತಂದೆ ತಿಳಿಸುತ್ತಾರೆ ನೀವೇ ತೆರೆದು ನೀವೇ ನೋಡಿಕೊಳ್ಳಬೇಕು. ಯಾರು ಮಾಡುತ್ತಾರೆ ಅವರು ಪಡೆದುಕೊಳ್ಳುತ್ತಾರೆ. ಬಹಳ ಮಂದಿಯ ಕಲ್ಯಾಣವಾಗುತ್ತದೆ. ಶ್ರೇಷ್ಠರಾಗಲು ಬೇಹದ್ದಿನ ತಂದೆ ಶ್ರೀಮತವನ್ನು ಕೊಡುತ್ತಾರೆ. ತುಂಬಾ ಈ ರೀತಿಯು ಇದ್ದಾರೆ-ಕೇಳುತ್ತಾರೆ ಆದರೆ ಮಾಡುವುದಿಲ್ಲ, ಏಕೆಂದರೆ ಅದೃಷ್ಟದಲ್ಲಿ ಇರುವುದಿಲ್ಲ. ತಂದೆಯಿಂದ ಆರೋಗ್ಯ ಹಾಗೂ ಐಶ್ವರ್ಯ ಸಿಗುತ್ತದೆ. ತಂದೆ ವೈಕುಂಠದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ. ವಜ್ರ ವೈಢೂರ್ಯಗಳ ಮಹಲ್ ಸಿಗುತ್ತದೆ. ಭಾರತದಲ್ಲಿಯೇ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಅವಶ್ಯಕವಾಗಿ ಅವರಿಗೆ ತಂದೆಯೇ ಆಸ್ತಿ ಕೊಟ್ಟಿರಬೇಕು. ಈಗ ಕಲಿಯುಗದಲ್ಲಿ ದುಃಖವೇ ದುಃಖವಿದೆ. ಆಮೇಲೆ ಸತ್ಯಯುಗದ ಸ್ಥಾಪನೆಯನ್ನು ನಾನೇ ಮಾಡಬೇಕಾಗುತ್ತದೆ. ಮನುಷ್ಯರು ಆಸ್ಪತ್ರೆ ಮುಂತಾದವುಗಳನ್ನು ತೆರೆದಾಗ ಉದ್ಘಾಟನೆ ಮಾಡುತ್ತಾರೆ. ನಾನು ಸ್ವರ್ಗದ ಉದ್ಘಾಟನೆ ಮಾಡುತ್ತೇನೆಂದು ತಂದೆ ತಿಳಿಸುತ್ತಾರೆ. ಈಗ ನೀವು ಶ್ರೀಮತದಂತೆ ನಡೆದು ಸ್ವರ್ಗಕ್ಕೆ ಯೋಗ್ಯರಾಗಿ. ನೀವು ಕಲ್ಪ-ಕಲ್ಪವು ಯೋಗ್ಯರಾಗುತ್ತೀರಿ, ಇದು ಹೊಸ ಮಾತೇನಲ್ಲ. ಬಡವರು ತುಂಬಾ ಬರುತ್ತಾರೆ. ನಾನು ಬಡವರ ಬಂಧು ಆಗಿದ್ದೇನೆಂದು ತಂದೆ ತಿಳಿಸುತ್ತಾರೆ. ಶ್ರೀಮಂತರ ಬಳಿ ಬಹಳ ಹಣವಿರುವ ಕಾರಣ ನಾವು ಸ್ವರ್ಗದಲ್ಲಿದ್ದೇವೆಂದು ತಿಳಿಯುತ್ತಾರೆ. ಭಾರತ ಬಡದೇಶವಾಗಿದೆ. ತಂದೆಯು ಅಧಿಕವಾಗಿ ಬಡವರನ್ನು ಉದ್ಧಾರ ಮಾಡುತ್ತಾರೆ. ಶ್ರೀಮಂತರು ನಿದ್ರೆಯಲ್ಲಿ ಮುಳುಗಿದ್ದಾರೆ. ತಂದೆಯು ಎಷ್ಟೊಂದು ಜ್ಞಾನ-ಯೋಗವನ್ನು ಕಲಿಸಿಕೊಡುತ್ತಾರೆ, ನಿಮಗೆ ಇಡೀ ಚಕ್ರದ ಜ್ಞಾನವನ್ನು ತಿಳಿಸುತ್ತಾ ತಂದೆಯು ಮೂರನೇಯ ನೇತ್ರವನ್ನು ಕೊಡುತ್ತಾರೆ. ಉಳಿದವರೆಲ್ಲರು ಘೋರ ಅಂಧಕಾರದಲ್ಲಿದ್ದಾರೆ. ನಾಟಕದ ಆದಿ, ಮಧ್ಯ, ಅಂತ್ಯ ಯಾರಿಗೂ ಸಹ ಗೊತ್ತಿಲ್ಲ. ಪತಿತ ಪಾವನ ತಂದೆಯನ್ನು ಮರೆತುಬಿಟ್ಟಿದ್ದಾರೆ. ಶಿವ ಪರಮಾತ್ಮನಿಗೆ ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ.

ಈಗ ಎಲ್ಲರ ಅಂತಿಮ ಸಮಯವೆಂದು ನೀವು ತಿಳಿದುಕೊಂಡಿದ್ದೀರಿ. ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿ ಬಿಡುತ್ತಾರೆ, ಆಗ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ನಾನು ಮಾರ್ಗದರ್ಶಕನಾಗಿ (ಪಂಡ) ಬಂದಿದ್ದೇನೆ. ನೀವು ಪಾಂಡವ ಸೈನ್ಯವಾಗಿದ್ದೀರಿ. ಆ ಮಾರ್ಗದರ್ಶಕರು ಶಾರೀರಿಕ ಯಾತ್ರೆಯನ್ನು ಮಾಡಿಸುತ್ತಾರೆ. ಆ ಯಾತ್ರೆಯನ್ನು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ಇದು ಆತ್ಮಿಕ ತೀರ್ಥವಾಗಿದೆ. ಇಲ್ಲಿ ನಡೆಯುವ-ಓಡಾಡುವ ಆವಶ್ಯಕತೆಯಿಲ್ಲ. ಕೇವಲ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಿಳಿಸುತ್ತಾರೆ. ರಾತ್ರಿಯೆಲ್ಲಾ ಎಚ್ಚರವಾಗಿದ್ದು ನನ್ನನ್ನು ನೆನಪು ಮಾಡಬೇಕು. ನನ್ನ ಜೊತೆ ಬುದ್ಧಿಯ ಸಂಬಂಧವನ್ನು ಜೋಡಿಸಬೇಕು. ನಿದ್ರೆಯನ್ನು ಗೆಲ್ಲುವರಾದಾಗ ನೀವು ಸಮೀಪ ಬರುತ್ತಾ ಹೋಗುತ್ತೀರಿ. ಅವರು ಕುಖ ವಂಶಾವಳಿ ಬ್ರಾಹ್ಮಣರಾಗಿದ್ದಾರೆ. ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಈಗ ನೀವು ಆತ್ಮಿಕ ಯಾತ್ರೆಯಲ್ಲಿ ದ್ದೀರಿ, ಆದ್ದರಿಂದ ನೀವು ಪವಿತ್ರವಾಗಿರಬೇಕು. ಆ ಬ್ರಾಹ್ಮಣರು ಸ್ವಯಂ ಅಪವಿತ್ರರಾಗಿದ್ದಾಗ ಅವರು ಅನ್ಯರನ್ನು ಪವಿತ್ರ ಮಾಡಲು ಸಾಧ್ಯವಿಲ್ಲ. ನೀವಂತೂ ಪವಿತ್ರರಾಗಿರಬೇಕು. ರುದ್ರ ಜ್ಞಾನ ಯಜ್ಞದಲ್ಲಿ ಪವಿತ್ರ ಬ್ರಾಹ್ಮಣರೇ ಇರುತ್ತಾರೆ. ಆ ಬ್ರಾಹ್ಮಣರು ಮಂದಿರಗಳಲ್ಲಿರುತ್ತಾರೆ. ಅವರ ಹೆಸರು ಬ್ರಾಹ್ಮಣರಾಗಿದ್ದು ದೇವತೆಗಳ ಮೂರ್ತಿಗಳನ್ನು ಸ್ವಯಂ ಸ್ನಾನ ಮುಂತಾದವುಗಳಿಂದ ಸ್ವಚ್ಛ ಮಾಡುತ್ತಾರೆ, ಆದರೆ ಅವರೂ ಸಹ ಪತಿತರೇ ಆಗಿದ್ದಾರೆ. ಉಳಿದ ಅನ್ಯ ಮನುಷ್ಯರು ಮಂದಿರಕ್ಕೆ ಹೋಗುತ್ತಾರೆ, ಆದರೆ ಅವರ ಹೆಸರು ಬ್ರಾಹ್ಮಣರಲ್ಲವೆಂದರೆ ಅವರ ಕೈಗಳಿಂದ ಮೂರ್ತಿಗಳನ್ನು ಮುಟ್ಟಿಸುವುದಿಲ್ಲ. ಬ್ರಾಹ್ಮಣರಿಗೆ ತುಂಬಾ ಗೌರವವಿದೆ. ಆದರೆ ಅವರೂ ಸಹ ಪತಿತ ವಿಕಾರಿಗಳಾಗಿದ್ದಾರೆ. ಕೆಲವರು ಬ್ರಹ್ಮಚಾರಿಗಳಾಗಿರುತ್ತಾರೆ. ತಂದೆ ಬಂದು ತಿಳಿಸುತ್ತಿದ್ದಾರೆ – ಸತ್ಯ-ಸತ್ಯ ಬ್ರಾಹ್ಮಣ ಬ್ರಾಹ್ಮಣಿಯರು ಯಾರೆಂದರೆ ಯಾರು 21 ಕುಲದ ಉದ್ಧಾರ ಮಾಡುತ್ತಾರೆ. ಒಂದುವೇಳೆ ಕನ್ಯೆ ಉದ್ಧಾರ ಮಾಡುವವರಾದರೆ ಅವರ ತಂದೆ ತಾಯಿಯು ಸಹ ಇರುತ್ತಾರೆ. ಇಲ್ಲಿ (ಪರಮಾತ್ಮ) ತಂದೆ ತಾಯಿ ನಿಮಗೆ 21 ಜನ್ಮಗಳು ಸ್ವರ್ಗದ ಮಾಲೀಕರಾಗುವುದನ್ನು ಕಲಿಸಿ ಕೊಡುತ್ತಾರೆ. ತಂದೆ ಗುಪ್ತವಾಗಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಶಿವಬಾಬಾ ಬ್ರಹ್ಮಾರವರ ಮೂಲಕ ನಮಗೆ ಎಲ್ಲಾ ರಹಸ್ಯಗಳನ್ನು ತಿಳಿಸಿ ಕೊಡುತ್ತಾರೆ. ಈ ದಾದಾರವರು ಸಹ ವ್ಯಾಪಾರ ಮುಂತಾದವುಗಳನ್ನು ಮಾಡುತ್ತಿದ್ದರು. ಈಗ ಅನೇಕ ಜನ್ಮಗಳ ಅಂತಿಮ ಜನ್ಮದ ಅಂತಿಮದಲ್ಲಿ ಬಂದು ಶಿವಬಾಬಾ ಪ್ರವೇಶ ಮಾಡುತ್ತಾರೆ ಹಾಗೂ ಇವರ ಮುಖಾಂತರವೇ ಜ್ಞಾನ ಹೇಳುತ್ತಾರೆ. ಇದು ರಥವಾಗಿದೆ, ಶಿವಬಾಬಾ ರಥಿ (ಸಾರಥಿ) ಆಗಿದ್ದಾರೆ. ಈಗ ನಿರಾಕಾರ ಪರಮಾತ್ಮ ತಿಳಿಸುತ್ತಿದ್ದಾರೆ, ಈ ರಥ ಅನೇಕ ಜನ್ಮಗಳ ಪತಿತ ರಥವಾಗಿದೆ. ಮೊಟ್ಟ ಮೊದಲಿಗೆ ಇವರೇ ಪಾವನರಾಗಿ ಬಿಡುತ್ತಾರೆ. ಏಕೆಂದರೆ ಇವರು ತುಂಬಾ ಸಮೀಪದಲ್ಲಿದ್ದಾರೆ. ಇವರೆಂದಿಗೂ ನಾನು ಭಗವಂತನೆಂದು ಹೇಳುವುದಿಲ್ಲ. ಇದು ನನ್ನ ಅನೇಕ ಜನ್ಮಗಳ ಅಂತ್ಯದ ಅಂತಿಮ ಜನ್ಮವೆಂದು ಹೇಳುತ್ತಾರೆ. ಇದು ವಾನಪ್ರಸ್ಥ ಸ್ಥಿತಿಯಾಗಿದೆ, ಪತಿತವಾಗಿದೆ. ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆ. ಈಗ ತಂದೆ ತಿಳಿಸುತ್ತಿದ್ದಾರೆ ನೀವು ತಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ, ನಾನೇ ನಿಮಗೆ ತಿಳಿಸಿಕೊಡುತ್ತೇನೆ. ಪತಿತ ಪಾವನ ಪರಮಪಿತ ಪರಮಾತ್ಮನೆಂದು ಈಗ ಬುದ್ಧಿಯಲ್ಲಿ ಬರುತ್ತದೆ. ಅವರು ತಂದೆ, ಶಿಕ್ಷಕ, ಸದ್ಗುರು ಆಗಿದ್ದಾರೆ. ಪೂರ್ಣ ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ತಂದೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆಂದು ನಮಗೆ ಗೊತ್ತಿದೆ. ಈ ತಂದೆ, ಶಿಕ್ಷಕ, ಸದ್ಗುರುವಿನ ಆದೇಶವನ್ನು ಪಡೆಯುವುದರಿಂದ ನೀವು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೀರಿ. ಎಷ್ಟೊಂದು ಚೆನ್ನಾಗಿ ತಿಳಿಸಿ ಕೊಡುತ್ತಿದ್ದಾರೆ. ಕೆಲವರಂತೂ ಧಾರಣೆ ಮಾಡಿ ಶ್ರೀಮತದಂತೆ ನಡೆದು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಶ್ರೀಮತವನ್ನು ಒಪ್ಪಿಕೊಳ್ಳದವರು ಶ್ರೇಷ್ಠ ಪದವಿಯನ್ನು ಪಡೆಯಲಾರರು. ತಂದೆ ತಿಳಿಸುತ್ತಾರೆ-ಸುಖಧಾಮ ಹಾಗೂ ಶಾಂತಿಧಾಮವನ್ನು ನೆನಪು ಮಾಡುತ್ತಾ ಈ ದುಃಖಧಾಮವನ್ನು ಮರೆಯುತ್ತಾ ಹೋಗಿ. ತಮ್ಮನ್ನು ಅಶರೀರಿ ಎಂದು ತಿಳಿದುಕೊಳ್ಳಬೇಕು. ನಾವೀಗ ಹಿಂತಿರುಗುತ್ತಿದ್ದೇವೆ. ತಂದೆ ಕರೆದೊಯ್ಯಲು ಬಂದಿದ್ದಾರೆ. ಪ್ರತಿಯೊಬ್ಬರು ತಮ್ಮ ತಮ್ಮ ಪತ್ರವನ್ನು ಪುನರಾವರ್ತನೆ ಮಾಡಬೇಕು. ಪ್ರತಿಯೊಂದು ಆತ್ಮ ಅವಿನಾಶಿ ಪಾತ್ರಧಾರಿಯಾಗಿದೆ. ಪ್ರಪಂಚ ಎಂದೂ ಪ್ರಳಯವಾಗುವುದಿಲ್ಲ. ಇದು ದುಃಖಧಾಮವಾಗಿದೆ, ನಂತರ ಶಾಂತಿಧಾಮ ಹಾಗು ಸುಖಧಾಮಲ್ಲಿ ಹೋಗುತ್ತೇವೆ. ಈ ರೀತಿ ಬುದ್ಧಿಯಲ್ಲಿ ಸ್ವದರ್ಶನ ಚಕ್ರ ತಿರುಗಿಸುತ್ತಾ ಪವಿತ್ರರಾಗಿದ್ದಾಗ ನಮ್ಮ ಜೀವನವೆಂಬ ಹಡಗು ಪಾರಾಗಿ ಬಿಡುತ್ತದೆ. ನೀವೀಗ ಕಾಲನ ಮೇಲೆ (ಮೃತ್ಯು) ವಿಜಯಿಗಳಾಗಿದ್ದೀರಿ. ಅಲ್ಲಿ ಎಂದಿಗೂ ನಿಮ್ಮ ಅಕಾಲ ಮೃತ್ಯು ಆಗುವುದಿಲ್ಲ. ಹೇಗೆ ಸರ್ಪವು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯನ್ನು ಪಡೆಯುತ್ತದೆ, ಹಾಗೆ ನೀವೂ ಸಹ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಪಡೆದುಕೊಂಡು ಬಿಡುತ್ತೀರಿ. ಇಂತಹ ಸ್ಥಿತಿಯನ್ನು ಇಲ್ಲಿಯೇ ಮಾಡಿಕೊಳ್ಳಬೇಕು. ನಾವು ಇನ್ನೇನು ಈ ಶರೀರವನ್ನು ಬಿಟ್ಟು ಮಧುರ ಮನೆಗೆ ಹೋಗುತ್ತೇವೆ, ನಮ್ಮನ್ನು ಕಾಲ ತಿನ್ನುವುದಿಲ್ಲ. ವಾಸ್ತವಿಕವಾಗಿ ಸರ್ಪದ ಉದಾಹರಣೆಯನ್ನು ಸನ್ಯಾಸಿಗಳು ಕೊಡುವ ಹಾಗಿಲ್ಲ. ಭ್ರಮರಿಯ ಉದಾಹರಣೆಯೂ ಸಹ ಪ್ರವೃತ್ತಿ ಮಾರ್ಗದಲ್ಲಿ ಇರುವವರದ್ದಾಗಿದೆ. ಜನಕನಂತೆ ಒಂದು ಸೆಕೆಂಡ್ನಲ್ಲಿ ಜೀವನ್ಮುಕ್ತಿಯನ್ನು ಪಡೆಯಬಹುದು ಎಂದು ಸನ್ಯಾಸಿಗಳು ಹೇಳುತ್ತಾರೆ. ಅದೂ ಸಹ ಇಲ್ಲಿಯದನ್ನು ಅನುಕರಣೆ ಮಾಡಿದ್ದಾರೆ. ಜೀವನ್ಮುಕಿಯಲ್ಲಿ ಇಬ್ಬರು (ಸ್ತ್ರೀ-ಪುರುಷ) ಇರಬೇಕಾಗುತ್ತದೆ. ಈ ಸನ್ಯಾಸಿಗಳು ಜೀವನ್ಮುಕ್ತಿಯನ್ನು ಹೇಗೆ ಕೊಡುತ್ತಾರೆ. ಈಗ ತಂದೆ ತಿಳಿಸುತ್ತಾರೆ, ಮನೆಗೆ ಹಿಂತಿರುಗಿ, ನನ್ನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗಿ ಬಿಡುತ್ತದೆ. ಇಲ್ಲವಾದರೆ ತುಂಬಾ ಶಿಕ್ಷೆ ತಿನ್ನುತ್ತೀರಿ ಹಾಗೂ ಪದವಿ ಭ್ರಷ್ಠವಾಗುತ್ತದೆ. ಅಂತ್ಯದಲ್ಲಿ ದೇಹ ಬಿಡುವಾಗ ಯಾರಾದರು ನೆನಪಿಗೆ ಬಂದರೆ ಪುನಃ ಇಲ್ಲಿಯೇ ಪುನರ್ಜನ್ಮ ಪಡೆಯಬೇಕಾಗುತ್ತದೆ. ಇದನ್ನು ಯೋಗದಿಂದ ಆರೋಗ್ಯ, ಜ್ಞಾನದಿಂದ ಐಶ್ವರ್ಯ, ಸೆಕೆಂಡ್ನಲ್ಲಿ ಜೀವನ್ಮುಕ್ತಿಯೆಂದು ಕರೆಯಲಾಗುತ್ತದೆ. ಆದ್ದರಿಂದ ಇಷ್ಟೊಂದು ಹಣ ವ್ಯರ್ಥ ಮಾಡುತ್ತಾ ಅಲೆದಾಡುವ ಆವಶ್ಯಕತೆ ಏನು? ಆದ್ದರಿಂದ ಆರೋಗ್ಯ ಮಂತ್ರಿ, ಶಿಕ್ಷಣ ಮಂತ್ರಿಗೆ ತಿಳಿಸಿಕೊಡಿ. ನೀವು ಇಂತಹ ಆಸ್ಪತ್ರೆ ವಿಶ್ವವಿದ್ಯಾಲಯವನ್ನು ತೆರೆದರೆ ನಿಮಗೆ ತುಂಬಾ ಲಾಭವಾಗುತ್ತದೆ. ಯಾರು ಮಾಡುತ್ತಾರೆ ಅವರು ಪಡೆದುಕೊಳ್ಳುತ್ತಾರೆ. ಶ್ರೀಮಂತರ ಕರ್ತವ್ಯವಾಗಿದೆ ಶ್ರೀಮಂತರನ್ನು ಉದ್ಧಾರ ಮಾಡುವುದು. ಬಡವರೇ ಆಸ್ತಿಯನ್ನು ಪಡೆಯುತ್ತಾರೆ. ಉಳಿದ ಹಾಗೆ ಕೋಟ್ಯಾಧೀಶ್ವರರಿಗೋಸ್ಕರ ಈ ರೀತಿ ಹೇಳಲಾಗಿದೆ-ಕೆಲವರ ಸಂಪತ್ತು ಮಣ್ಣಿನ ಪಾಲಾಯಿತು. ಅಂತ್ಯದಲ್ಲಿ ಬೆಂಕಿ ಹತ್ತಿದಾಗ ಎಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಏಕೆ ವಿನಾಶಕ್ಕೆ ಮೊದಲು ಪುರುಷಾರ್ಥ ಮಾಡಿ ಪದವಿಯನ್ನು ಪಡೆಯಬಾರದು. ಎಲ್ಲರು ಸಾಯಲೇ ಬೇಕಾಗುತ್ತದೆ. ನಾಟಕದ ಅಂತ್ಯವು ಆಗುತ್ತದೆ. ತಂದೆ ಎಷ್ಟೊಂದು ಚೆನ್ನಾಗಿ ತಿಳಿಸಿ ಕೊಡುತ್ತಾರೆ. ನದಿಗಳನ್ನಂತೂ ಸುತ್ತುತ್ತಿರುತ್ತಾರೆ. ಉಳಿದ ಹಾಗೆ ಬ್ರಹ್ಮಾಪುತ್ರಾ ನದಿ ಈ ಬ್ರಹ್ಮಾ ಆಗಿದ್ದಾರೆ. ಮಮ್ಮಾ ಸರಸ್ವತಿಯಾಗಿದ್ದಾರೆ. ಉಳಿದವರೆಲ್ಲರು ಜ್ಞಾನ ಗಂಗೆಯರಾಗಿದ್ದಾರೆ. ನೀರಿನ ಗಂಗೆಯು ಹೇಗೆ ಪಾವನ ಮಾಡುತ್ತದೆ. ಇದು ಯಾವುದೇ ಮೇಳ ಅಲ್ಲ. ಆದರೆ ಇದು ಸತ್ಯವಾದ ಮೇಳ ಆಗಿದೆ, ಇಲ್ಲಿ ಜೀವಾತ್ಮಗಳು ಪರಮಾತ್ಮನೊಂದಿಗೆ ಮಿಲನ ಮಾಡುತ್ತಾರೆ. ಆಗ ಈ ರೀತಿ ಹೇಳುತ್ತಾರೆ-ಆತ್ಮ ಪರಮಾತ್ಮ ತುಂಬಾ ಸಮಯ ಅಗಲಿ ಹೋಗಿದ್ದರು… ಇದು ಜೀವಾತ್ಮ ಹಾಗೂ ಪರಮಾತ್ಮನ ಮೇಳ ಆಗಿದೆ. ಪರಮಾತ್ಮನು ಜೀವದ (ಶರೀರದ) ಲೋನ್ ತೆಗೆದುಕೊಂಡಿದ್ದಾರೆ. ಇಲ್ಲವೆಂದರೆ ಹೇಗೆ ಓದಿಸುವುದು? ಆದ್ದರಿಂದ ಅವರಿಗೆ ಶಿವ ಭಗವಂತ ಎಂದು ಕರೆಯಲಾಗುತ್ತದೆ, ಅವರು ಇವರಲ್ಲಿ ಪ್ರವೇಶ ಮಾಡಿ ಜ್ಞಾನ ಕೊಡುತ್ತಿದ್ದಾರೆ. ಸರಸ್ವತಿಯವರಿಗೆ ವಿದ್ಯಾ ದೇವತೆ ಎಂದು ಕರೆಯಲಾಗುತ್ತದೆ. ಬ್ರಹ್ಮಾರವರಲ್ಲೂ ಸಹ ಜ್ಞಾನವಿರುತ್ತದೆ. ಅವರಿಗೆ ಜ್ಞಾನ ಕೊಡುವವರು ಯಾರು? ಜ್ಞಾನ ಸಾಗರರಾಗಿದ್ದಾರೆ. ನೀವು ಈ ಜ್ಞಾನವನ್ನು ನಂಬರ್ ವಾರ್ ಪುರುಷಾರ್ಥನುಸಾರವಾಗಿ ತಿಳಿದು ಕೊಂಡಿದ್ದೀರಿ. ಈ ಜ್ಞಾನವನ್ನು ಧಾರಣೆ ಮಾಡಿ ಶ್ರೀಮತದಂತೆ ನಡೆಯಬೇಕು. ಎಲ್ಲವು ಪವಿತ್ರತೆಯ ಮೇಲೆ ಆಧಾರವಾಗಿದೆ. ಪವಿತ್ರತೆಗಾಗಿ ಅಬಲೆಯರ ಮೇಲೆ ಅತ್ಯಾಚಾರ ನಡೆಯು ತ್ತದೆ. ದ್ರೌಪದಿಯು ಸಹ ತನ್ನ ರಕ್ಷಣೆಗಾಗಿ ಬೇಡಿಕೊಂಡಳು. ಸಹನೆ ಮಾಡುತ್ತಾ-ಮಾಡುತ್ತಾ 21 ಜನ್ಮಗಳ ವರೆಗು ಅಪವಿತ್ರತೆಯಿಂದ ರಕ್ಷಿಸಲ್ಪಡುತ್ತೇವೆ. ಗೀತೆಯಲ್ಲೂ ಸಹ ಇದೆ-ನಾನು ಸಾಧುಗಳನ್ನು ಉದ್ಧಾರ ಮಾಡುತ್ತೇನೆ. ಆದರೆ ಸಾಧು ಜನರು ಈ ಅಕ್ಷರವನ್ನು ಹೇಳುವುದಿಲ್ಲ.

ನೀವು ತಿಳಿದುಕೊಂಡಿದ್ದೀರಿ-ಈ ಸಮಯದಲ್ಲಿ ಇಡೀ ಪ್ರಪಂಚದವರು ಲಂಚಕೋರರಾಗಿ ಬಿಟ್ಟಿದ್ದಾರೆ. ಆದುದರಿಂದ ಇದೆಲ್ಲವು ವಿನಾಶವಾಗಬೇಕಾಗಿದೆ, ಆಸ್ತಿ ಪಡೆಯವಂತಹವರೇ ಪಡೆಯುತ್ತಾರೆ. ತಂದೆಗೆ ಕೆಲವು ಮಕ್ಕಳು ಈ ರೀತಿ ಹೇಳುತ್ತಾರೆ-ನಾವು ಬಡವರ ಮನೆಯಲ್ಲಿದ್ದಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು. ಏಕೆಂದರೆ ಶ್ರೀಮಂತರು ಹೊರಗಡೆ ಬಿಡುವುದೇ ಇಲ್ಲ. ನಾವು ಕನ್ಯೆಯರಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಮಾತೆಯರು ಏಣಿಯನ್ನು ಇಳಿಯಬೇಕಾಗುತ್ತದೆ. ಆದರೆ ತಂದೆ ತಿಳಿಸುತ್ತಾರೆ-ಆಸ್ತಿಯನ್ನು ತೆಗೆದುಕೊಳ್ಳಿ. ಮನುಷ್ಯರು ಸಾಯಲು ತಡವಾಗುವುದಿಲ್ಲ. ತುಂಬಾ ಆಪತ್ತುಗಳು ಬರುತ್ತವೆ. ತಾವು ಕೇವಲ ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. 84 ಜನ್ಮಗಳನ್ನು ಪೂರ್ಣ ಮಾಡಿ ಹಿಂತಿರುಗಬೇಕೋ ಅಥವಾ ಇಲ್ಲೆ ಇನ್ನು ದುಃಖಿಗಳಾಗಬೇಕೊ? ಮನ್ಮನಾಭವ, ಮಧ್ಯಾಜಿಭವ. ರಾವಣನ ಆಸ್ತಿಯನ್ನು ಮರೆಯಬೇಕು. ರಾವಣ ಶಾಪ ಕೊಡುತ್ತಾನೆ. ತಂದೆಯ ಮಕ್ಕಳಾದರೆ ಅಸ್ತಿ ಪಡೆಯುತ್ತೀರೆಂದು ತಂದೆ ತಿಳಿಸುತ್ತಾರೆ. ಶ್ರೀಮತದಂತೆ ನಡೆಯುವುದಿಲ್ಲವೆಂದರೆ ಆಸ್ತಿಯನ್ನು ಹೇಗೆ ಪಡೆಯುತ್ತೀರಿ? ಈ ಆತ್ಮಿಕ ಆಸ್ಪತ್ರೆಯನ್ನು ತೆರೆಯುತ್ತಾ ಹೋಗಿ ಸ್ಥಳವು ಸಿಗುತ್ತದೆ. ಬಾಡಿಗೆಗೆ ಕೊಟ್ಟರೂ ಒಳ್ಳೆಯದು, ತುಂಬಾ ಪ್ರಾಪ್ತಿಯಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಗೆ ಸಮೀಪ ಬರಬೇಕೆಂದರೆ ಆತ್ಮಿಕ ಯಾತ್ರೆಯಲ್ಲಿರಬೇಕು. ರಾತ್ರಿ ಎಚ್ಚರವಾಗಿದ್ದು ಈ ಬುದ್ಧಿಯ ಯಾತ್ರೆಯನ್ನು ಅವಶ್ಯಕವಾಗಿ ಮಾಡಬೇಕು.

2. ಸತ್ಯ-ಸತ್ಯ ಬ್ರಾಹ್ಮಣರಾಗಿ 21 ಕುಲದ ಉದ್ಧಾರ ಮಾಡಬೇಕು. ಸ್ವದರ್ಶನ ಚಕ್ರಧಾರಿಗಳಾಗಬೇಕು. ಕಾಲನ ಮೇಲೆ ವಿಜಯಿಗಳಾಗಲು ಈ ಹಳೆಯ ವಸ್ತ್ರದಿಂದ ಮಮತೆಯನ್ನು ದೂರ ಮಾಡಿಕೊಳ್ಳಬೇಕು.

ವರದಾನ:-

ಹೇಗೆ ಸೂರ್ಯನನ್ನು ನೋಡುವುದರಿಂದ ಅವಶ್ಯವಾಗಿ ಸೂರ್ಯನ ಕಿರಣಗಳು ಬರುತ್ತವೆ, ಹಾಗೆಯೇ ಯಾವ ಮಕ್ಕಳು ಜ್ಞಾನ ಸೂರ್ಯ ತಂದೆಯ ಸನ್ಮುಖದಲ್ಲಿ ಸದಾ ಇರುತ್ತಾರೆಯೋ ಅವರು ಜ್ಞಾನ ಸೂರ್ಯನ ಸರ್ವಗುಣಗಳ ಕಿರಣಗಳನ್ನು ಸ್ವಯಂನಲ್ಲಿ ಅನುಭವ ಮಾಡುತ್ತಾರೆ. ಅವರ ಚಹರೆಯಲ್ಲಿ ಅಂತರ್ಮುಖತೆಯ ಹೊಳಪು ಹಾಗೂ ಸಂಗಮಯುಗದ ಅಥವಾ ಭವಿಷ್ಯದ ಸರ್ವ ಸ್ವಮಾನಗಳ ನಶೆಯು ಕಂಡುಬರುತ್ತದೆ. ಇದಕ್ಕಾಗಿ ತಮ್ಮ ಸ್ಮೃತಿಯಲ್ಲಿ ಸದಾ ಇದೇ ಇರಲಿ – ಇದು ಅಂತಿಮ ಗಳಿಗೆ ಆಗಿದೆ. ಯಾವುದೇ ಗಳಿಗೆಯಲ್ಲಾದರೂ ಈ ತನುವು ವಿನಾಶವಾಗಬಹುದು ಆದ್ದರಿಂದ ಸದಾ ಪ್ರೀತಿಬುದ್ಧಿಯವರಾಗಿದ್ದು ಜ್ಞಾನ ಸೂರ್ಯನ ಸನ್ಮುಖದಲ್ಲಿರುತ್ತಾ ಅಂತರ್ಮುಖತೆ ಅಥವಾ ಸ್ವಮಾನದ ಅನುಭೂತಿಯಲ್ಲಿ ಇರಬೇಕಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top