08 August 2021 KANNADA Murli Today | Brahma Kumaris

Read and Listen today’s Gyan Murli in Kannada

August 7, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಡಬಲ್ ವಿದೇಶಿ ಬ್ರಾಹ್ಮಣ ಮಕ್ಕಳ ವಿಶೇಷತೆಗಳು

♫ ಕೇಳು ಇಂದಿನ ಮುರ್ಲಿ (audio)➤

ಇಂದು ಭಾಗ್ಯವಿದಾತ ಬಾಪ್ದಾದಾ ತನ್ನ ಶ್ರೇಷ್ಠ ಭಾಗ್ಯಶಾಲಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಮಗುವಿನ ಭಾಗ್ಯವಂತೂ ಶ್ರೇಷ್ಠವಾಗಿಯೇ ಇದೆ ಆದರೆ ಅದರಲ್ಲಿಯೂ ನಂಬರ್ವಾರ್ ಇದೆ. ಇಂದು ಬಾಪ್ದಾದಾ ಎಲ್ಲಾ ಮಕ್ಕಳ ಹೃದಯದ ಉಲ್ಲಾಸ-ಉತ್ಸಾಹದ ಧೃಡ ಸಂಕಲ್ಪವನ್ನು ಕೇಳುತ್ತಿದ್ದರು. ಸಂಕಲ್ಪದ ಮೂಲಕ ಯಾರೆಲ್ಲರೂ ವಾರ್ತಾಲಾಪ ಮಾಡಿದರೋ ಅವರು ಬಾಪ್ದಾದಾರವರ ಬಳಿ ಸಂಕಲ್ಪ ಮಾಡುತ್ತಿದ್ದಂತೆಯೇ ತಲುಪಿ ಬಿಟ್ಟರು. “ಸಂಕಲ್ಪ ಶಕ್ತಿ”ಯು ವಾಣಿಯ ಶಕ್ತಿಗಿಂತ ಅತೀ ಸೂಕ್ಷ್ಮವಾಗಿರುವ ಕಾರಣ ಅತೀ ತೀವ್ರ ಗತಿಯಿಂದ ನಡೆಯುತ್ತದೆ ಮತ್ತು ತಲುಪುತ್ತದೆ. ವಾರ್ತಾಲಾಪದ ಭಾಷೆಯೇ ಸಂಕಲ್ಪದ ಭಾಷೆಯಾಗಿದೆ. ವಿಜ್ಞಾನದವರು ಶಬ್ಧವನ್ನು ಗ್ರಹಿಸುತ್ತಾರೆ ಆದರೆ ಸಂಕಲ್ಪವನ್ನು ಗ್ರಹಿಸಲು ಸೂಕ್ಷ್ಮ ಸಾಧನ ಬೇಕು. ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಸಂಕಲ್ಪದ ಭಾಷೆಯನ್ನು ಸದಾ ಕೇಳುತ್ತಾರೆ ಅರ್ಥಾತ್ ಸಂಕಲ್ಪವನ್ನು ಗ್ರಹಿಸುತ್ತಾರೆ. ಇದಕ್ಕಾಗಿ ಬುದ್ಧಿಯು ಅತೀ ಸೂಕ್ಷ್ಮ, ಸ್ವಚ್ಛ ಮತ್ತು ಸ್ಪಷ್ಟತೆ ಅವಶ್ಯಕವಾಗಿದೆ. ಆಗಲೇ ತಂದೆಯ ವಾರ್ತಾಲಾಪದ ಪ್ರತ್ಯುತ್ತರವನ್ನು ತಿಳಿದುಕೊಳ್ಳಬಲ್ಲಿರಿ.

ಬಾಪ್ದಾದಾರವರ ಬಳಿ ಎಲ್ಲರ ಸಂತುಷ್ಟತೆಯ ಹಾಗೂ ಖುಷಿಯಾಗಿರುವ, ನಿರ್ವಿಘ್ನರಾಗಿರುವ, ಸದಾ ತಂದೆಯ ಸಮಾನರಾಗುವ ಶ್ರೇಷ್ಠ ಸಂಕಲ್ಪಗಳು ತಲುಪಿದವು ಮತ್ತು ಬಾಪ್ದಾದಾ ಮಕ್ಕಳಿಗೆ ಧೃಡ ಸಂಕಲ್ಪದ ಮೂಲಕ ಸದಾ ಸಫಲತೆಯ ಶುಭಾಷಯಗಳನ್ನು ಕೊಡುತ್ತಿದ್ದಾರೆ ಏಕೆಂದರೆ ಎಲ್ಲಿ ಧೃಡತೆಯಿದೆಯೋ ಅಲ್ಲಿ ಸಫಲತೆಯಿದ್ದೇ ಇದೆ. ಇದು ಶ್ರೇಷ್ಠ ಭಾಗ್ಯವಂತರಾಗುವ ಚಿಹ್ನೆಯಿದೆ. ಸದಾ ಧೃಡತೆ, ಶ್ರೇಷ್ಠತೆಯಿರಲಿ. ಸಂಕಲ್ಪದಲ್ಲಿಯೂ ಬಲಹೀನತೆಯಿರಬಾರದು. ಇದಕ್ಕೆ ಶ್ರೇಷ್ಠತೆಯೆಂದು ಹೇಳಲಾಗುತ್ತದೆ. ಮಕ್ಕಳ ವಿಶಾಲ ಹೃದಯವನ್ನು ನೋಡಿ ಮಕ್ಕಳಿಗೆ ಸದಾ ವಿಶಾಲ ಹೃದಯ, ವಿಶಾಲ ಬುದ್ಧಿ, ವಿಶಾಲ ಸೇವೆ ಮತ್ತು ವಿಶಾಲ ಸಂಸ್ಕಾರ – ಇಂತಹ ‘ಸದಾ ವಿಶಾಲ ಭವ’ದ ವರದಾನವನ್ನೂ ವರದಾತ ತಂದೆಯು ಕೊಡುತ್ತಿದ್ದಾರೆ. ವಿಶಾಲ ಹೃದಯ ಅರ್ಥಾತ್ ಬೇಹದ್ದಿನ ಸ್ಮೃತಿ ಸ್ವರೂಪರು. ಪ್ರತೀ ಮಾತಿನಲ್ಲಿ ಬೇಹದ್ದ್ ಅರ್ಥಾತ್ ವಿಶಾಲ. ಎಲ್ಲಿ ಬೇಹದ್ದ್ ಆಗಿರುವುದೋ ಅಲ್ಲಿ ಯಾವುದೇ ಪ್ರಕಾರದ ಮಿತಿಯು ತನ್ನ ಕಡೆ ಆಕರ್ಷಣೆ ಮಾಡುವುದಿಲ್ಲ. ಇದಕ್ಕೆ ತಂದೆಯ ಸಮಾನ ಫರಿಶ್ತಾ ಜೀವನವೆಂದು ಹೇಳಲಾಗುತ್ತದೆ. ಕರ್ಮಾತೀತ ಎಂಬುದರ ಅರ್ಥವೇ ಆಗಿದೆ – ಸರ್ವ ಪ್ರಕಾರದ ಹದ್ದಿನ ಸ್ವಭಾವ-ಸಂಸ್ಕಾರದಿಂದ ಅತೀತ ಅರ್ಥಾತ್ ಭಿನ್ನ. ಹದ್ದ್ ಎನ್ನುವುದು ಬಂಧನವಾಗಿದೆ, ಬೇಹದ್ದ್ ನಿರ್ಬಂಧನವಾಗಿದೆ ಅಂದಾಗ ಸದಾ ಇದೇ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಇರುತ್ತೀರಿ. ಎಲ್ಲರೂ ನಾವು ಸದಾ ಅಮರವಾಗಿರುತ್ತೇವೆ, ಅಟಲ, ಅಖಂಡವಾಗಿರುತ್ತೇವೆ ಅರ್ಥಾತ್ ಖಂಡನೆಯಾಗುವವರಲ್ಲ ಎಂದು ಸಂಕಲ್ಪ ಮಾಡಿದಿರಿ. ಈ ರೀತಿಯ ಸಂಕಲ್ಪ ಮಾಡಿದಿರಲ್ಲವೆ. ಮಧುಬನದ ಗೆರೆಯವರೆಗಷ್ಟೆ, ಸಂಕಲ್ಪವಂತೂ ಇಲ್ಲ ಅಲ್ಲವೆ, ಸದಾ ಜೊತೆಯಿರುತ್ತದೆಯಲ್ಲವೆ.

ಮುರುಳಿಗಳನ್ನಂತೂ ಬಹಳ ಕೇಳಿದ್ದೀರಿ, ಈಗ ಯಾವುದನ್ನು ಕೇಳಿದ್ದೀರೋ ಅದನ್ನು ಮಾಡಬೇಕಾಗಿದೆ ಏಕೆಂದರೆ ಈ ಸಾಕಾರ ಸೃಷ್ಟಿಯಲ್ಲಿ ಸಂಕಲ್ಪ, ಮಾತು ಮತ್ತು ಕರ್ಮ – ಈ ಮೂರಕ್ಕೂ ಮಹತ್ವಿಕೆಯಿದೆ ಮತ್ತು ಮೂರರಲ್ಲಿಯೂ ಮಹಾನತೆಯಿರುವುದು – ಇದಕ್ಕೇ ಸಂಪನ್ನ ಸ್ಥಿತಿ ಎಂದು ಹೇಳಲಾಗುತ್ತದೆ. ಈ ಸಾಕಾರ ಸೃಷ್ಟಿಯಲ್ಲಿಯೇ ಪೂರ್ಣ ಅಂಕಗಳನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಒಂದುವೇಳೆ ಯಾರಾದರೂ ನನ್ನ ಸಂಕಲ್ಪವಂತೂ ಬಹಳ ಶ್ರೇಷ್ಠವಾಗಿದೆ ಆದರೆ ಕರ್ಮ ಹಾಗೂ ಮಾತಿನಲ್ಲಿ ಅಂತರವು ಕಾಣುತ್ತದೆಯೆಂದು ತಿಳಿಯುವುದಾದರೆ ಅದನ್ನು ಯಾರಾದರೂ ಒಪ್ಪುವರೆ? ಏಕೆಂದರೆ ಸಂಕಲ್ಪದ ಸ್ಥೂಲ ದರ್ಪಣವು ಮಾತು ಹಾಗೂ ಕರ್ಮವಾಗಿದೆ. ಶ್ರೇಷ್ಠ ಸಂಕಲ್ಪದವರ ಮಾತು ಸ್ವತಹ ಶ್ರೇಷ್ಠವಾಗಿರುವುದು ಆದ್ದರಿಂದ ಮೂರರ ವಿಶೇಷತೆಯೇ ‘ನಂಬರ್ವನ್’ ಆಗುವುದಾಗಿದೆ.

ಬಾಪ್ದಾದಾ ಡಬಲ್ ವಿದೇಶಿ ಮಕ್ಕಳನ್ನು ನೋಡಿ ಸದಾ ಮಕ್ಕಳ ವಿಶೇಷತೆಗಾಗಿ ಹರ್ಷಿತರಾಗುತ್ತೇವೆ. ಆ ವಿಶೇಷತೆಯೇನಾಗಿದೆ? ಹೇಗೆ ಬ್ರಹ್ಮಾ ತಂದೆಯ ಶ್ರೇಷ್ಠ ಸಂಕಲ್ಪದ ಮೂಲಕ ಹಾಗೂ ಶ್ರೇಷ್ಠ ಸಂಕಲ್ಪದ ಆಹ್ವಾನದ ಮೂಲಕ ದಿವ್ಯ ಜನ್ಮವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ ಅದೇರೀತಿ ಶ್ರೇಷ್ಠ ಸಂಕಲ್ಪದ ವಿಶೇಷ ರಚನೆಯಾಗಿರುವ ಕಾರಣ ತನ್ನ ಸಂಕಲ್ಪಗಳನ್ನು ಶ್ರೇಷ್ಠ ಮಾಡಿಕೊಳ್ಳುವುದರಲ್ಲಿ ವಿಶೇಷ ಗಮನವನ್ನು ಇಟ್ಟಿರುತ್ತಾರೆ. ಸಂಕಲ್ಪದ ಮೇಲೆ ಗಮನವಿರುವ ಕಾರಣ ಯಾವುದೇ ಪ್ರಕಾರದ ಮಾಯೆಯ ಸೂಕ್ಷ್ಮ ಯುದ್ಧವನ್ನು ಬಹು ಬೇಗನೆ ಅರಿತುಕೊಳ್ಳುತ್ತಾರೆ ಮತ್ತು ಅದನ್ನು ಪರಿವರ್ತನೆ ಮಾಡಿಕೊಳ್ಳಲು ಅಥವಾ ವಿಜಯಿಗಳಾಗಲು ಪುರುಷಾರ್ಥ ಮಾಡಿ ಅದನ್ನು ಬೇಗನೆ ಸಮಾಪ್ತಿ ಮಾಡುವ ಪ್ರಯತ್ನ ಪಡುತ್ತಾರೆ. ಸಂಕಲ್ಪ ಶಕ್ತಿಯನ್ನು ಸದಾ ಶುದ್ಧ ಮಾಡಿಕೊಳ್ಳುವ ಗಮನವು ಚೆನ್ನಾಗಿರುತ್ತದೆ. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸ ಚೆನ್ನಾಗಿರುತ್ತದೆ. ಸೂಕ್ಷ್ಮ ಪರಿಶೀಲನೆಯ ಕಾರಣ ಚಿಕ್ಕ ತಪ್ಪು ಸಹ ರಿಯಲೈಜ್ ಮಾಡಿ ತಂದೆಯ ಮುಂದೆ, ನಿಮಿತ್ತರಾಗಿರುವ ಮಕ್ಕಳ ಮುಂದೆ ಇಡುವುದರಲ್ಲಿ ಸ್ವಚ್ಛ ಹೃದಯಿಗಳಾಗಿದ್ದಾರೆ ಆದ್ದರಿಂದ ಈ ವಿಧಿಯ ಕಾರಣ ಬುದ್ಧಿಯಲ್ಲಿ ಸ್ವಲ್ಪವೂ ಕಸವು ಉಳಿದುಕೊಳ್ಳುವುದಿಲ್ಲ. ಮೆಜಾರಿಟಿ ಮಕ್ಕಳು ಸ್ವಚ್ಛ ಹೃದಯದಿಂದ ಮಾತನಾಡುವುದರಲ್ಲಿ ಸಂಕೋಚ ಪಡುವುದಿಲ್ಲ. ಆದ್ದರಿಂದ ಎಲ್ಲಿ ಸ್ವಚ್ಛತೆಯಿರುವುದೋ ಅಲ್ಲಿ ದೇವತಾ ಗುಣಗಳು ಸಹಜವಾಗಿ ಧಾರಣೆಯಾಗುತ್ತವೆ. ದಿವ್ಯ ಗುಣಗಳ ಧಾರಣೆ ಅರ್ಥಾತ್ ಆಹ್ವಾನ ಮಾಡುವ ವಿಧಿಯೇ ‘ಸ್ವಚ್ಛತೆ’ಯಾಗಿದೆ. ಹೇಗೆ ಭಕ್ತಿಯಲ್ಲಿಯೂ ಲಕ್ಷ್ಮಿಯ ಅಥವಾ ಯಾವುದೇ ದೇವಿಯ ಆಹ್ವಾನ ಮಾಡಿದಾಗ ಆ ಆಹ್ವಾನ ಮಾಡುವ ವಿಧಿಯಾಗಿ ಸ್ವಚ್ಛತೆಯನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ ಅಂದಾಗ ಈ ಸ್ವಚ್ಛತೆಯ ಶ್ರೇಷ್ಠ ಸ್ವಭಾವವು ದೈವೀ ಸ್ವಭಾವವನ್ನು ಸ್ವತಹ ಆಹ್ವಾನ ಮಾಡುತ್ತದೆ ಅಂದಾಗ ಈ ವಿಶೇಷತೆಯು ಮೆಜಾರಿಟಿ ಡಬಲ್ ವಿದೇಶಿ ಮಕ್ಕಳಲ್ಲಿದೆ. ಆದ್ದರಿಂದ ತೀವ್ರ ಗತಿಯಿಂದ ಮುಂದುವರೆಯುವ ಸುವರ್ಣವಕಾಶವು ಡ್ರಾಮಾನುಸಾರ ಸಿಕ್ಕಿದೆ. ‘ಇದಕ್ಕೆ ಲಾಸ್ಟ್ ಸೋ ಫಾಸ್ಟ್’ ಎಂದು ಹೇಳುತ್ತಾರೆ ಅಂದಾಗ ವಿಶೇಷವಾಗಿ ಫಾಸ್ಟ್ ಹೋಗುವ ಈ ವಿಶೇಷತೆಯು ಡ್ರಾಮಾನುಸಾರ ಸಿಕ್ಕಿದೆ. ಈ ವಿಶೇಷತೆಯನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಲಾಭ ಪಡೆಯುತ್ತಾ ಇರಿ. ಬಂದಿತು, ಸ್ಪಷ್ಟ ಮಾಡಿಕೊಂಡಿರಿ ಮತ್ತು ಹೊರಟು ಹೋಯಿತು – ಇದಕ್ಕೇ ಪರ್ವತವನ್ನೂ ಸಹ ಹತ್ತಿಯ ಸಮಾನ ಮಾಡಿಕೊಳ್ಳುವುದೆಂದು ಹೇಳುತ್ತಾರೆ. ಹತ್ತಿಯು ಸೆಕೆಂಡಿನಲ್ಲಿ ಹಾರುತ್ತದೆಯಲ್ಲವೆ, ಹಾಗೆ ಪರ್ವತಕ್ಕೆ ಎಷ್ಟು ಸಮಯ ಹಿಡಿಸುವುದು! ಆದ್ದರಿಂದ ಸ್ಪಷ್ಟ ಮಾಡಿಕೊಂಡಿರಿ, ತಂದೆಯ ಮುಂದೆ ಇಟ್ಟಿರಿ ಮತ್ತು ಸ್ವಚ್ಛತೆಯ ವಿಧಿಯಿಂದ ಫರಿಶ್ತೆಯಾಗಿ ಹಾರಿ ಹೋದಿರಿ. ಇದಕ್ಕೆ ಲಾಸ್ಟ್ ಸೋ ಫಾಸ್ಟ್ ಗತಿಯಿಂದ ಹಾರುವುದೆಂದು ಹೇಳುತ್ತಾರೆ. ಡ್ರಾಮಾನುಸಾರ ಈ ವಿಶೇಷತೆ ಸಿಕ್ಕಿದೆ. ಬಾಪ್ದಾದಾ ನೋಡುತ್ತೇವೆ – ಕೆಲವು ಪರಿಶೀಲನೆಯನ್ನೂ ಮಾಡಿಕೊಳ್ಳುತ್ತಾರೆ ಮತ್ತು ತಮ್ಮನ್ನು ಪರಿವರ್ತನೆಯೂ ಮಾಡಿಕೊಳ್ಳುತ್ತಾರೆ ಏಕೆಂದರೆ ನಾವು ವಿಜಯಿಗಳಾಗಬೇಕೆಂಬ ಲಕ್ಷ್ಯವಿದೆ. ಬಹುತೇಕ ಮಕ್ಕಳದು ಈ ನಂಬರ್ವನ್ ಲಕ್ಷ್ಯವಿದೆ.

ಎರಡನೇ ವಿಶೇಷತೆಯಾಗಿದೆ – ಜನ್ಮ ಪಡೆಯುತ್ತಿದ್ದಂತೆಯೇ ಆಸ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾ ಸೇವೆಯ ಉಲ್ಲಾಸ-ಉತ್ಸಾಹವು ಸ್ವತಹ ಬರುತ್ತದೆ. ಸೇವೆಯಲ್ಲಿ ತೊಡಗುವುದರಿಂದ ಮೊದಲನೆಯದಾಗಿ ಸೇವೆಯ ಪ್ರತ್ಯಕ್ಷ ಫಲ ‘ಖುಷಿ’ಯೂ ಸಿಗುತ್ತದೆ ಮತ್ತು ಸೇವೆಯಿಂದ ವಿಶೇಷ ಬಲವೂ ಸಿಗುತ್ತದೆ ಹಾಗೂ ಸೇವೆಯಲ್ಲಿ ಬ್ಯುಜಿಯಾಗಿರುವ ಕಾರಣ ನಿರ್ವಿಘ್ನರಾಗುವುದರಲ್ಲಿಯೂ ಸಹಯೋಗ ಸಿಗುತ್ತದೆ ಅಂದಾಗ ಸೇವೆಯ ಉಲ್ಲಾಸ-ಉತ್ಸಾಹವು ಸ್ವತಹವಾಗಿಯೇ ಬರುವುದು, ಸಮಯ ತೆಗೆಯುವುದು ಮತ್ತು ತನ್ನ ತನು-ಮನ-ಧನವನ್ನು ಸಫಲ ಮಾಡಿಕೊಳ್ಳುವುದು – ಇದೂ ಸಹ ಡ್ರಾಮಾನುಸಾರ ವಿಶೇಷತೆಯ ಲಿಫ್ಟ್ ಸಿಕ್ಕಿದೆ. ತಮ್ಮ ವಿಶೇಷತೆಗಳನ್ನು ತಿಳಿದುಕೊಂಡಿದ್ದೀರಲ್ಲವೆ! ಈ ವಿಶೇಷತೆಗಳಿಂದ ತಮ್ಮನ್ನು ಎಷ್ಟು ಮುಂದುವರೆಸಿಕೊಳ್ಳಬೇಕೋ ಅಷ್ಟು ಮುಂದುವರೆಯಬಲ್ಲಿರಿ. ಡ್ರಾಮಾನುಸಾರ ಯಾವುದೇ ಆತ್ಮನ ಈ ದೂರು ಉಳಿಯಲು ಸಾಧ್ಯವಿಲ್ಲ – ನಾವು ಕೊನೆಯಲ್ಲಿ ಬಂದಿದ್ದೇವೆ ಆದ್ದರಿಂದ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು. ಡಬಲ್ ವಿದೇಶಿ ಮಕ್ಕಳಿಗೆ ತಮ್ಮ ವಿಶೇಷತೆಗಳ ಸುವರ್ಣಾವಕಾಶವಿದೆ. ಭಾರತವಾಸಿಗಳಿಗೆ ಮತ್ತೆ ತಮ್ಮದೇ ಆದ ಸುವರ್ಣಾವಕಾಶವಿದೆ ಆದರೆ ಇಂದು ಡಬಲ್ ವಿದೇಶಿ ಮಕ್ಕಳೊಂದಿಗೆ ಮಿಲನ ಮಾಡುತ್ತಿದ್ದೇವೆ. ಡ್ರಾಮಾದಲ್ಲಿ ವಿಶೇಷವಾಗಿ ನಿಗಧಿಯಾಗಿರುವ ಕಾರಣ ಯಾರೇ ಕೊನೆಯಲ್ಲಿ ಬಂದಂತಹ ಆತ್ಮನ ದೂರು ನಡೆಯುವುದಿಲ್ಲ ಏಕೆಂದರೆ ನಾಟಕವು ಬಹಳ ನಿಖರವಾಗಿ ಮಾಡಲ್ಪಟ್ಟಿದೆ. ಈ ವಿಶೇಷತೆಗಳಿಂದ ಸದಾ ತೀವ್ರ ಗತಿಯಿಂದ ಹಾರುತ್ತಾ ನಡೆಯಿರಿ. ತಿಳಿಯಿತೆ – ಸ್ಪಷ್ಟವಾಯಿತೇ ಅಥವಾ ಇನ್ನೂ ಯಾವುದಾದರೂ ದೂರು ಇದೆಯೇ? ‘ದಿಲ್ಖುಷ್’ ಮಿಠಾಯಿಯನ್ನು ತಂದೆಗೆ ತಿನ್ನಿಸಿದ್ದೀರಿ. ‘ಧೃಡ ಸಂಕಲ್ಪ’ ಮಾಡಿದಿರಿ ಅರ್ಥಾತ್ ದಿಲ್ಖುಷ್ ಮಿಠಾಯಿಯನ್ನು ತಂದೆಗೆ ತಿನ್ನಿಸಿದಿರಿ. ಇದು ಅವಿನಾಶಿ ಮಿಠಾಯಿಯಾಗಿದೆ. ಸದಾ ಮಕ್ಕಳ ಬಾಯಿಯು ಸಿಹಿ ಮತ್ತು ತಂದೆಯ ಬಾಯಂತೂ ಸದಾ ಸಿಹಿಯಾಗಿರುತ್ತದೆ ಆದರೆ ನಂತರ ಇನ್ನೊಂದು ಪ್ರಕಾರದ ಭೋಗವನ್ನು ತಿನ್ನಿಸುವುದಲ್ಲ, ದಿಲ್ಖುಷ್ ಮಿಠಾಯಿಯ ಭೋಗವನ್ನೇ ತಿನ್ನಿಸಬೇಕು. ಸ್ಥೂಲ ಭೋಗವನ್ನು ಯಾವುದು ಬೇಕಾದರೂ ಇಡಿ ಆದರೆ ಮನಸ್ಸಿನ ಸಂಕಲ್ಪದ ಭೋಗವನ್ನು ಸದಾ ದಿಲ್ಖುಷ್ ಮಿಠಾಯಿಯನ್ನೇ ಇಡುತ್ತಾ ಇರಿ.

ಬಾಪ್ದಾದಾ ಸದಾ ಹೇಳುತ್ತೇವೆ – ಪತ್ರವನ್ನು ಬರೆಯುವಾಗ ಕೇವಲ ಎರಡು ಅಕ್ಷರದ ಪತ್ರವು ಸದಾ ತಂದೆಗೆ ಬರೆಯಿರಿ. ಆ ಎರಡು ಶಬ್ಧಗಳು ಯಾವುದಾಗಿದೆ? ಓ.ಕೆ. ಆಗ ಇಷ್ಟೊಂದು ಕಾಗದಗಳು, ಶಾಹಿ (ಇಂಕು) ಮತ್ತು ಸಮಯ ಯಾವುದೂ ವ್ಯರ್ಥವಾಗುವುದಿಲ್ಲ, ಎಲ್ಲವೂ ಉಳಿತಾಯವಾಗುವುದು. ಓ.ಕೆ. ಅರ್ಥಾತ್ ಓ (o) ಎಂದರೆ ತಂದೆಯ ನೆನಪೂ ಇದೆ ಮತ್ತು ಕೆ (ಞ) ಎಂದರೆ ಕಿಂಗ್ಡಮ್ ಅರ್ಥಾತ್ ರಾಜ್ಯವೂ ನೆನಪಿದೆ. ಓ (o) ಎಂದು ಬರೆದಾಗ ತಂದೆಯ ಚಿತ್ರವಾಗಿ ಬಿಡುತ್ತದೆ ಮತ್ತು ಕೆ (ಞ) ಎಂದರೆ ಕಿಂಗ್ಡಮ್ ಆದ್ದರಿಂದ ಓ.ಕೆ. ಎಂದು ಬರೆದರೆ ತಂದೆ ಮತ್ತು ಆಸ್ತಿ ಎರಡೂ ನೆನಪಿಗೆ ಬಂದು ಬಿಡುತ್ತವೆ ಅಂದಾಗ ಪತ್ರವನ್ನು ಖಂಡಿತ ಬರೆಯಿರಿ ಆದರೆ ಎರಡು ಶಬ್ಧಗಳಲ್ಲಿ. ಆಗ ಪತ್ರವು ತಲುಪಿ ಬಿಡುವುದು. ಬಾಕಿ ಹೃದಯದ ಉಲ್ಲಾಸವನ್ನಂತೂ ಬಾಪ್ದಾದಾ ತಿಳಿದುಕೊಂಡಿದ್ದೇವೆ – ಪ್ರೀತಿಯ ಹೃದಯದ ಮಾತುಗಳಂತೂ ಹೃದಯರಾಮ ತಂದೆಯ ಬಳಿ ಖಂಡಿತ ತಲುಪುತ್ತವೆ. ಈ ಪತ್ರ ಬರೆಯಲು ಎಲ್ಲರಿಗೆ ಬರುತ್ತದೆಯಲ್ಲವೆ? ಭಾಷೆಯು ಗೊತ್ತಿಲ್ಲದವರೂ ಸಹ ಬರೆಯಬಹುದು. ಇದರಲ್ಲಿ ಎಲ್ಲರ ಭಾಷೆಯೂ ಸಹ ಒಂದೇ ಆಗಿ ಬಿಡುವುದು. ಈ ಪತ್ರವು ಇಷ್ಟವಾಗಿದೆಯಲ್ಲವೆ. ಒಳ್ಳೆಯದು.

ಇಂದು ಮೊದಲ ಗ್ರೂಪ್ನ ಕೊನೆಯ ದಿನವಾಗಿದೆ. ಸಮಸ್ಯೆಗಳೆಲ್ಲವೂ ಸಮಾಪ್ತಿಯಾಯಿತು ಬಾಕಿ ಟೋಲಿಯನ್ನು ತಿನ್ನಬೇಕು ಮತ್ತು ತಿನ್ನಿಸಬೇಕಾಗಿದೆ. ಇನ್ನೇನು ಉಳಿಯಿತು? ಈಗ ಅನ್ಯರನ್ನು ಆ ರೀತಿ ಮಾಡಬೇಕಾಗಿದೆ. ಸೇವೆಯನ್ನಂತೂ ಮಾಡಬೇಕಲ್ಲವೆ. ನಿರ್ವಿಘ್ನ ಸೇವಾಧಾರಿಗಳಾಗಿರಿ. ಒಳ್ಳೆಯದು –

ಸದಾ ತಂದೆಯ ಸಮಾನರಾಗುವ ಉಲ್ಲಾಸ-ಉತ್ಸಾಹದಿಂದ ಹಾರುವವರು, ಸದಾ ಸ್ವಯಂನ್ನು ಪರಿಶೀಲನೆ ಮಾಡಿ ಪರಿವರ್ತನೆ ಮಾಡಿಕೊಂಡು ಸಂಪೂರ್ಣರಾಗುವವರು, ಸದಾ ಸಂಕಲ್ಪ, ಮಾತು ಮತ್ತು ಕರ್ಮ – ಮೂರರಲ್ಲಿಯೂ ಶ್ರೇಷ್ಠರಾಗುವವರು, ಸದಾ ಸ್ವಚ್ಚತೆಯ ಮೂಲಕ ಶ್ರೇಷ್ಠತೆಯನ್ನು ಧಾರಣೆ ಮಾಡಿಕೊಳ್ಳುವವರು – ಇಂತಹ ತೀವ್ರ ಗತಿಯಿಂದ ಹಾರುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ಆಸ್ಟ್ರೇಲಿಯಾದ ಚಿಕ್ಕ ಮಕ್ಕಳೊಂದಿಗೆ ಬಾಪ್ದಾದಾರವರ ವಾರ್ತಾಲಾಪ:

ಎಲ್ಲರೂ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಲ್ಲವೆ. ನಿತ್ಯವೂ ವಿದ್ಯಾಭ್ಯಾಸ ಮಾಡುತ್ತೀರಾ? ಹೇಗೆ ಆ ವಿದ್ಯೆಯನ್ನು ನಿತ್ಯವೂ ಓದುತ್ತೀರೋ ಅದೇರೀತಿ ಇದನ್ನೂ ಅಭ್ಯಾಸ ಮಾಡುತ್ತೀರಾ? ಮುರುಳಿಯನ್ನು ಕೇಳುವುದು ಇಷ್ಟವಾಗುತ್ತದೆಯೇ? ಮುರುಳಿಯು ಅರ್ಥವಾಗುತ್ತಿದೆಯೇ? ತಂದೆಯನ್ನು ನಿತ್ಯವೂ ನೆನಪು ಮಾಡುತ್ತೀರಾ? ಮುಂಜಾನೆ ಏಳುತ್ತಿದ್ದಂತೆಯೇ ಗುಡ್ಮಾರ್ನಿಂಗ್ ಹೇಳುತ್ತೀರಾ? ಈ ಗುಡ್ಮಾರ್ನಿಂಗ್ ಹೇಳುವುದನ್ನು ಎಂದೂ ತಪ್ಪಿಸಬಾರದು. ಗುಡ್ಮಾರ್ನಿಂಗ್ ಹೇಳಬೇಕು ಮತ್ತು ಗುಡ್ನೈಟ್ನ್ನೂ ಹೇಳಬೇಕು ಹಾಗೂ ಯಾವಾಗ ಭೋಜನ ಮಾಡುತ್ತೀರೋ ಆಗಲೂ ನೆನಪು ಮಾಡಬೇಕು. ಹಸಿವಾದರೆ ತಂದೆಯನ್ನು ಮರೆತು ತಿಂದು ಬಿಡುವುದಲ್ಲ. ತಿನ್ನುವುದಕ್ಕೆ ಮೊದಲು ಅವಶ್ಯವಾಗಿ ನೆನಪು ಮಾಡಬೇಕು. ನೆನಪು ಮಾಡುತ್ತೀರೆಂದರೆ ವಿದ್ಯೆಯಲ್ಲಿ ಬಹಳ ಚೆನ್ನಾಗಿ ಅಂಕಗಳನ್ನು ಪಡೆದುಕೊಳ್ಳುತ್ತೀರಿ ಏಕೆಂದರೆ ಯಾರು ತಂದೆಯನ್ನು ನೆನಪು ಮಾಡುವರೋ ಅವರು ಸದಾ ಉತ್ತೀರ್ಣರಾಗುತ್ತಾರೆ, ಎಂದೂ ಅನುತ್ತೀರ್ಣರಾಗಲು ಸಾಧ್ಯವಿಲ್ಲ ಅಂದಮೇಲೆ ಸದಾ ಉತ್ತೀರ್ಣರಾಗುತ್ತೀರಾ? ಒಂದುವೇಳೆ ನೀವು ಉತ್ತೀರ್ಣರಾಗದಿದ್ದರೆ ಎಲ್ಲರೂ ಶಿವ ತಂದೆಯ ಮಕ್ಕಳೂ ಸಹ ಅನುತ್ತೀರ್ಣರಾಗುತ್ತಾರೆಂದು ಹೇಳತೊಡಗುತ್ತಾರೆ. ಪ್ರತಿನಿತ್ಯವೂ ಮುರುಳಿಯ ಒಂದು ಅಂಶವನ್ನಾದರೂ ನಿಮ್ಮ ತಾಯಿಯಿಂದ ಖಂಡಿತ ಕೇಳಿರಿ. ಒಳ್ಳೆಯದು – ಬಹಳ ಭಾಗ್ಯಶಾಲಿಗಳಾಗಿದ್ದೀರಿ ಏಕೆಂದರೆ ಭಾಗ್ಯವಿದಾತನ ಧರಣಿಯಲ್ಲಿ ಬಂದಿದ್ದೀರಿ. ತಂದೆಯೊಂದಿಗೆ ಮಿಲನ ಮಾಡುವ ಭಾಗ್ಯವು ಸಿಕ್ಕಿದೆ. ಇದು ಕಡಿಮೆ ಭಾಗ್ಯವಲ್ಲ! ಒಳ್ಳೆಯದು.

ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ಬಾಪ್ದಾದಾರವರ ಮೂಲಕ ವರದಾನದ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು:

1. ತಂದೆಯವರ ಮೂಲಕ ಸಿಕ್ಕಿರುವ ಸರ್ವ ಖಜಾನೆಗಳನ್ನು, ಸರ್ವ ಆತ್ಮರುಗಳಿಗಾಗಿ ಉಪಯೋಗಿಸುವಂತಹ, ಸಂಪನ್ನರಾಗಿದ್ದು ಅನ್ಯರನ್ನೂ ಸಂಪನ್ನರನ್ನಾಗಿ ಮಾಡುವಂತಹ ಆತ್ಮರಾಗಿದ್ದೀರಿ. ತಾವೆಷ್ಟು ಖಜಾನೆಗಳಿಂದ ಸಂಪನ್ನರಾಗಿದ್ದೀರಿ? ಯಾರು ಸಂಪನ್ನವಾಗಿ ಇರುತ್ತಾರೆಯೋ ಅವರು ಸದಾ ಹಂಚುತ್ತಾರೆ. ಅವಿನಾಶಿ ಭಂಡಾರವನ್ನಿಡಲಾಗಿದೆ, ಯಾರೇ ಬರುವರು ಸಂಪನ್ನರಾಗಿ ಹೋಗಲಿ, ಯಾರೂ ಸಹ ಖಾಲಿಯಾಗಿ ಹೋಗಲು ಸಾಧ್ಯವಿಲ್ಲ – ಇದಕ್ಕೆ ಅಖಂಡ ಭಂಡಾರವೆಂದು ಹೇಳಲಾಗುತ್ತದೆ. ಕೆಲವೊಮ್ಮೆ ಮಹಾದಾನಿಯಾಗಿ ದಾನ ಮಾಡುತ್ತಾ, ಕೆಲವೊಮ್ಮೆ ಜ್ಞಾನಿಯಾಗಿ ಜ್ಞಾನ-ಅಮೃತವನ್ನು ಕುಡಿಸುತ್ತಾ, ಕೆಲವೊಮ್ಮೆ ದಾತಾ ಆಗಿದ್ದು, ಧನ-ದೇವಿಯಾಗಿರುತ್ತಾ ಧನವನ್ನು ಕೊಡುವವರು – ಇಂತಹ ಸರ್ವರ ಶುಭ-ಆಶೆಗಳನ್ನು ತಂದೆಯ ಮೂಲಕ ಪೂರ್ಣ ಮಾಡಿಸುವವರು ಆಗಿದ್ದೀರಿ. ಯಾರೆಷ್ಟು ಖಜಾನೆಗಳನ್ನು ಹಂಚುವರು, ಅಷ್ಟೂ ಹೆಚ್ಚಾಗುತ್ತಿರುತ್ತದೆ – ಇವರಿಗೆ ಸದಾ ಸಂಪದ್ಭರಿತರು ಎಂದು ಹೇಳಲಾಗುತ್ತದೆ. ಯಾರೂ ಸಹ ಖಾಲಿಯಾಗಿ ಹೋಗಬಾರದು, ಎಲ್ಲರ ಮುಖದಿಂದ ಇದೇ ಆಶೀರ್ವಾದಗಳು ಬರಲಿ – ‘ವಾಹ್, ನಮ್ಮ ಭಾಗ್ಯವೇ!’ ಇದೇರೀತಿ ಮಹಾದಾನಿ, ವರದಾನಿಯಾಗಿ ಸತ್ಯ ಸೇವಾಧಾರಿ ಆಗಿರಿ.

2. ಡ್ರಾಮಾನುಸಾರ ಸೇವೆಯ ವರದಾನವೂ ಸಹ ಸದಾ ಮುಂದುವರೆಸುತ್ತದೆ. ಒಂದು – ಯೋಗ್ಯತೆಯ ಮೂಲಕ ಸೇವೆಯ ಪ್ರಾಪ್ತಿಯಾಗುವುದು ಮತ್ತು ಇನ್ನೊಂದು – ವರದಾನದ ಮೂಲಕ ಸೇವೆಯ ಪ್ರಾಪ್ತಿಯಾಗುವುದು. ಸ್ನೇಹವೂ ಸಹ ಸೇವೆಯ ಸಾಧನವಾಗುತ್ತದೆ. ಭಲೆ ಭಾಷೆಯು ಗೊತ್ತಿಲ್ಲದೇ ಇರಬಹುದು ಆದರೆ ಸ್ನೇಹದ ಭಾಷೆಯಂತು ಎಲ್ಲಾ ಭಾಷೆಗಳಿಗಿಂತಲೂ ಶ್ರೇಷ್ಠವಾದುದು. ಆದ್ದರಿಂದ ಸ್ನೇಹಿ ಆತ್ಮನಿಗೆ ಸದಾ ಸಫಲತೆಯು ಸಿಗುತ್ತದೆ. ಸ್ನೇಹದ ಭಾಷೆಯನ್ನು ಯಾರು ತಿಳಿದಿರುತ್ತಾರೆಯೋ ಅವರೆಲ್ಲಿಯಾದರೂ ಸಫಲರಾಗಿ ಬಿಡುವರು. ಸೇವೆಯು ಸದಾ ನಿರ್ವಿಘ್ನವಾಗಿರಲಿ – ಇದಕ್ಕೆ ಸೇವೆಯಲ್ಲಿ ಸಫಲತೆ ಎಂದು ಹೇಳಲಾಗುತ್ತದೆ. ಅಂದಮೇಲೆ ಸ್ನೇಹದ ವಿಶೇಷತೆಯಿಂದ ಆತ್ಮರು ತೃಪ್ತರಾಗಿ ಬಿಡುತ್ತಾರೆ. ಸ್ನೇಹದ ಭಂಡಾರದಿಂದ ಸಂಪನ್ನವಾಗಿ ಇದೆ, ಇದನ್ನು ಹಂಚುತ್ತಾ ಮುಂದೆ ಸಾಗಿರಿ. ಯಾರು ತಂದೆಯಿಂದ ತುಂಬಿಕೊಂಡಿದ್ದರೆಯೋ ಅವರು ಹಂಚಿರಿ. ತಂದೆಯಿಂದ ಪಡೆದಿರುವ ಸ್ನೇಹವೇ ಮುಂದುವರೆಸುತ್ತಾ ಇರುತ್ತದೆ.

3. ಸ್ನೇಹದ ವರದಾನವೂ ಸಹ ಸೇವೆಗೆ ನಿಮಿತ್ತರನ್ನಾಗಿ ಮಾಡಿ ಬಿಡುತ್ತದೆ. ತಂದೆಯೊಂದಿಗೆ ಸ್ನೇಹವಿದೆಯೆಂದರೆ ಅನ್ಯರನ್ನೂ ತಂದೆಯ ಸ್ನೇಹಿಯನ್ನಾಗಿ ಮಾಡುತ್ತಾ, ಸಮೀಪಕ್ಕೆ ಕರೆದುಕೊಂಡು ಬರುತ್ತೀರಿ. ತಂದೆಯ ಸ್ನೇಹವು ಯಾವ ರೀತಿ ತಮ್ಮನ್ನು ತಂದೆಯ ಮಗುವನ್ನಾಗಿಸಿತು, ಅದರಿಂದ ಎಲ್ಲವೂ ಮರೆತು ಹೋಯಿತು. ಅದೇರೀತಿ ತಾವು ಅನುಭವಿಯಾಗಿ ಅನ್ಯರನ್ನೂ ಅನುಭವಿಯನ್ನಾಗಿ ಮಾಡುತ್ತಿರಿ. ಸದಾ ತಂದೆಯ ಸ್ನೇಹದಲ್ಲಿ ಅರ್ಪಣೆ ಆಗುವಂತಹ ಆತ್ಮನಾಗಿದ್ದೇನೆ ಎಂಬ ನಶೆಯಲ್ಲಿರಿ. ತಂದೆ ಹಾಗೂ ಸೇವೆ – ಇದೇ ಲಗನ್ ಮುಂದುವರೆಸುವ ಸಾಧನವಾಗಿದೆ. ಭಲೆ ಎಷ್ಟಾದರೂ ಮಾತುಗಳು ಬರಲಿ ಆದರೆ ತಂದೆಯ ಸ್ನೇಹವು ಸಹಯೋಗವನ್ನು ಕೊಡುತ್ತಾ ಮುಂದುವರೆಸುತ್ತದೆ. ಏಕೆಂದರೆ ಸ್ನೇಹಿಗೆ ಸ್ನೇಹದ ರಿಟರ್ನ್ನಲ್ಲಿ ಪದಮಪಟ್ಟು ಸಿಗುತ್ತದೆ. ಸ್ನೇಹವು ಅಂತಹ ಶಕ್ತಿಯಾಗಿದೆ, ಅದರಿಂದ ಯಾವುದೇ ಮಾತು ಕಷ್ಟವೆನಿಸುವುದಿಲ್ಲ ಏಕೆಂದರೆ ಸ್ನೇಹದಲ್ಲಿ ಮುಳುಗಿರುತ್ತಾರೆ – ಇದಕ್ಕೆ ಪರಂಜ್ಯೋತಿಯ ಮೇಲೆ ಪತಂಗವು ಅರ್ಪಣೆಯಾಗಿರುವುದು ಎಂದು ಹೇಳಲಾಗುತ್ತದೆ. ಜ್ಯೋತಿಯ ಸುತ್ತಲೂ ಸುತ್ತುವವರಲ್ಲ, ಅರ್ಪಣೆಯಾಗುವ ಹಾಗೂ ಪ್ರೀತಿಯ ರೀತಿಯನ್ನು ನಿಭಾಯಿಸುವವರು ಅಂದಮೇಲೆ ಸ್ನೇಹ ಮತ್ತು ಶಕ್ತಿ – ಇವೆರಡರ ಸಮತೋಲನದಿಂದ ಸದಾ ಮುಂದುವರೆಯುತ್ತಾ ಹಾಗೂ ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಈ ಸಮತೋಲವೇ ತಂದೆಯ ಆಶೀರ್ವಾದಗಳನ್ನು ಕೊಡಿಸುತ್ತದೆ ಹಾಗೂ ಕೊಡಿಸುತ್ತಾ ಇರುತ್ತದೆ. ಹಿರಿಯರ ಛತ್ರಛಾಯೆಯೂ ಸಹ ಸದಾ ಮುಂದುವರೆಸುತ್ತಾ ಇರುತ್ತದೆ. ತಂದೆಯ ಛತ್ರಛಾಯೆಯಂತು ಇದ್ದೇ ಇದೆ ಆದರೆ ಹಿರಿಯರ ಛತ್ರಛಾಯೆಯೂ ಸಹ ಸುವರ್ಣಾವಕಾಶ ಆಗಿದೆ. ಅಂದಮೇಲೆ ಸದಾ ಶಹಭಾಸ್ ತೆಗೆದುಕೊಳ್ಳುತ್ತಾ ಮುಂದುವರೆಯುತ್ತಾ ಇರುತ್ತೀರೆಂದರೆ, ತಮ್ಮ ಭವಿಷ್ಯವೂ ಸ್ಪಷ್ಟವಾಗುತ್ತಾ ಹೋಗುತ್ತದೆ.

4. ಪ್ರತೀ ಹೆಜ್ಜೆಯಲ್ಲಿ ತಂದೆಯವರ ಜೊತೆ ಅನುಭವವನ್ನು ಮಾಡುವವರಲ್ಲವೆ. ಯಾವ ಮಕ್ಕಳನ್ನು ತಂದೆಯವರು ವಿಶೇಷ ಸೇವಾರ್ಥವಾಗಿ ನಿಮಿತ್ತರನ್ನಾಗಿ ಮಾಡಿದ್ದಾರೆಂದರೆ, ನಿಮಿತ್ತರಾಗುವುದರ ಜೊತೆ ಜೊತೆಗೆ ಸೇವೆಯ ಪ್ರತೀ ಹೆಜ್ಜೆಯಲ್ಲಿ ಸಹಯೋಗಿಯೂ ಆಗುತ್ತಾರೆ. ಭಾಗ್ಯವಿದಾತನು ಪ್ರತಿಯೊಂದು ಮಕ್ಕಳಿಗೂ ಭಾಗ್ಯದ ವಿಶೇಷತೆಯನ್ನು ಕೊಟ್ಟಿದ್ದಾರೆ. ಆ ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಸದಾಕಾಲ ಮುಂದುವರೆಯುತ್ತಾ ಮತ್ತು ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಸೇವೆಯಂತು ಶ್ರೇಷ್ಠ ಬ್ರಾಹ್ಮಣ ಆತ್ಮರ ಹಿಂದೆ-ಹಿಂದೆ ಬರುವುದಿದೆ. ತಾವು ಸೇವೆಯ ಹಿಂದೆ ಹೋಗಬೇಕಾಗಿರುವುದಿಲ್ಲ, ಎಲ್ಲಿಗೆ ಹೋಗುವಿರಿ ಅಲ್ಲಿ ಸೇವೆಯು ಹಿಂದೆಯೇ ಬರುತ್ತದೆ. ಉದಾ: ಎಲ್ಲಿ ಪ್ರಕಾಶತೆಯಿರುತ್ತದೆ ಅಲ್ಲಿ ಅವಶ್ಯವಾಗಿ ನೆರಳು ಬರುತ್ತದೆ. ಅದೇರೀತಿ ತಾವು ಡಬಲ್ ಲೈಟ್ ಆಗಿದ್ದೀರೆಂದಾಗ ತಮ್ಮ ಹಿಂದೆ ಸೇವೆಯೂ ಸಹ ನೆರಳಿನಂತೆ ಬರುತ್ತದೆ. ಆದ್ದರಿಂದ ಸದಾ ನಿಶ್ಚಿಂತರಾಗಿದ್ದು ತಂದೆಯ ಛತ್ರಛಾಯೆಯಲ್ಲಿ ನಡೆಯುತ್ತಾ ಇರಬೇಕು.

5. ಸದಾ ಹೃದಯದಲ್ಲಿ ತಂದೆಯ ಸಮಾನರಾಗುವ ಉಮ್ಮಂಗವು ಇರುತ್ತದೆಯಲ್ಲವೇ? ಯಾವಾಗ ಸಮಾನರಾಗುವಿರಿ ಆಗಲೇ ಸಮೀಪವಿರುತ್ತೀರಿ, ಸಮೀಪವಂತು ಇರಲೇಬೇಕು ಅಲ್ಲವೆ. ಸಮೀಪವಿರುವವರ ಬಳಿ ಸಮಾನರಾಗುವ ಉಮ್ಮಂಗವು ಇದ್ದೇ ಇರುತ್ತದೆ ಮತ್ತು ಸಮಾನರಾಗುವುದು ಕಷ್ಟವಾಗುವುದಿಲ್ಲ. ಆದರೆ ಕೇವಲ ಯಾವುದೇ ಕರ್ಮವನ್ನು ಮಾಡುವಿರೆಂದರೆ, ಮಾಡುವುದಕ್ಕೆ ಮೊದಲು ಇದನ್ನು ಸ್ಮೃತಿಯಲ್ಲಿ ತಂದುಕೊಳ್ಳಬೇಕು – ಈ ಕರ್ಮವನ್ನು ತಂದೆಯವರು ಹೇಗೆ ಮಾಡುತ್ತಾರೆ. ಈ ಸ್ಮೃತಿಯು ಸ್ವತಹವಾಗಿಯೇ ತಂದೆಯ ಕರ್ಮದಂತೆ ಅನುಸರಣೆ ಮಾಡಿಸುತ್ತದೆ. ಇದರಬಗ್ಗೆ ಯೋಚಿಸುವ ಮಾತೇ ಇಲ್ಲ, ಏಣಿಯನ್ನು ಇಳಿಯುತ್ತಾ-ಹತ್ತುತ್ತಾ ಇರುವಾಗಲೂ ಯೋಚಿಸಬಹುದು. ಬಹಳ ಸಹಜ ವಿಧಿಯೂ ಆಗಿದೆ. ಅಂದಮೇಲೆ ಕೇವಲ ತಂದೆಯೊಂದಿಗೆ ಮಿಲನ ಮಾಡುತ್ತಾ ಸಾಗಿರಿ ಮತ್ತು ಇದನ್ನೇ ನೆನಪಿಟ್ಟುಕೊಳ್ಳಿರಿ – ನಾವು ಅವಶ್ಯವಾಗಿ ತಂದೆಯ ಸಮಾನ ಆಗಲೇಬೇಕು. ಇದರಿಂದ ಸಹಜವಾಗಿಯೇ ಪ್ರತಿಯೊಂದು ಕರ್ಮದಲ್ಲಿ ಸಫಲತೆಯ ಅನುಭವವನ್ನು ಮಾಡುತ್ತಾ ಇರುತ್ತೀರಿ. ಒಳ್ಳೆಯದು!

ವರದಾನ:-

ಹೇಗೆ ಶರೀರದ ಶಕ್ತಿಗಾಗಿ ಪಚನ ಕ್ರಿಯೆ ಅಥವಾ ಜೀರ್ಣಿಸಿಕೊಳ್ಳುವ ಶಕ್ತಿಯ ಅವಶ್ಯಕತೆಯಿದೆಯೋ ಹಾಗೆಯೇ ಆತ್ಮವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಮನನ ಶಕ್ತಿಯಿರಬೇಕು. ಮನನ ಶಕ್ತಿಯ ಮೂಲಕ ಅನುಭವ ಸ್ವರೂಪರಾಗುವುದು – ಇದೇ ಅತಿ ಶ್ರೇಷ್ಠಕ್ಕಿಂತಲೂ ಶ್ರೇಷ್ಠವಾದ ಶಕ್ತಿಯಾಗಿದೆ. ಇಂತಹ ಅನುಭವಿಗಳೆಂದಿಗೂ ಮೋಸ ಹೋಗಲು ಸಾಧ್ಯವಿಲ್ಲ, ಹೇಳಿಕೆ-ಕೇಳಿಕೆ ಮಾತುಗಳಲ್ಲಿ ವಿಚಲಿತರಾಗಲು ಸಾಧ್ಯವಿಲ್ಲ. ಅನುಭವಿಗಳು ಸದಾ ಸಂಪನ್ನರಾಗಿ ಇರುತ್ತಾರೆ, ಅವರು ಸದಾ ಶಕ್ತಿಶಾಲಿ, ಮಾಯಾಮುಕ್ತ, ವಿಘ್ನ ಮುಕ್ತರು ಆಗಿ ಬಿಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top