07 October 2021 KANNADA Murli Today | Brahma Kumaris

Read and Listen today’s Gyan Murli in Kannada

October 6, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಕೆಟ್ಟದ್ದನ್ನು ಕೇಳಬಾರದು, ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನರಾಗಿರಬೇಕಾಗಿದೆ”

ಪ್ರಶ್ನೆ:: -

ಯಾವ ಆಟವನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳುವ ಮಕ್ಕಳು ಎಂದೂ ತಬ್ಬಿಬ್ಬಾಗಲು ಸಾಧ್ಯವಿಲ್ಲ?

ಉತ್ತರ:-

ಸುಖ-ದುಃಖ, ಜ್ಞಾನ-ಭಕ್ತಿಯ ಯಾವ ಆಟವು ನಡೆಯುತ್ತದೆಯೋ ಇದನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳುವವರು ಎಂದೂ ತಬ್ಬಿಬ್ಬಾಗುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ – ಭಗವಂತನು ಯಾರಿಗೂ ದುಃಖ ಕೊಡುವುದಿಲ್ಲ, ಅವರು ದುಃಖಹರ್ತ-ಸುಖಕರ್ತನಾಗಿದ್ದಾರೆ. ಯಾವಾಗ ಎಲ್ಲರೂ ದುಃಖಿಯಾಗುವರೋ ಆಗ ದುಃಖದಿಂದ ಮುಕ್ತರನ್ನಾಗಿ ಮಾಡಲು ಅವರು ಬರುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು……..

ಓಂ ಶಾಂತಿ. ಮಕ್ಕಳು ಏನು ಕೇಳಿದಿರಿ? ಭಕ್ತಿಯ ಹಾಡು. ಭಕ್ತಿಯನ್ನು ಆಂಗ್ಲ ಭಾಷೆಯಲ್ಲಿ ಫಿಲಾಸಫಿ ಎಂದು ಹೇಳುತ್ತಾರೆ. ಡಾಕ್ಟರ್ ಆಫ್ ಪಿಲಾಸಫಿ ಎಂದು ಬಿರುದು ಸಿಗುತ್ತದೆ. ಈಗ ಫಿಲಾಸಫಿ (ಭಕ್ತಿ) ಯನ್ನಂತೂ ಚಿಕ್ಕವರು-ದೊಡ್ಡವರು ಎಲ್ಲಾ ಮನುಷ್ಯರೂ ತಿಳಿದುಕೊಂಡಿದ್ದಾರೆ. ಈಶ್ವರನು ಎಲ್ಲಿದ್ದಾರೆಂದು ಯಾರನ್ನೇ ಕೇಳಿದರೂ ಸಹ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಇದೂ ಸಹ ಫಿಲಾಸಫಿಯಾಯಿತಲ್ಲವೆ! ಈಗ ತಂದೆಯು ಯಾವುದೇ ಶಾಸ್ತ್ರಗಳ ಮಾತನ್ನು ತಿಳಿಸುವುದಿಲ್ಲ. ಯಾವುದೇ ಭಕ್ತರಿಗೆ ಜ್ಞಾನ ಸಾಗರನೆಂದು ಹೇಳುವುದಿಲ್ಲ. ಅವರಲ್ಲಿ ಜ್ಞಾನವೂ ಇಲ್ಲ, ಜ್ಞಾನ ಸಾಗರನ ಮಕ್ಕಳೂ ಅಲ್ಲ. ಜ್ಞಾನಸಾಗರ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ತಮ್ಮನ್ನು ಅವರ ಮಗನೆಂದೂ ತಿಳಿದುಕೊಳ್ಳುವುದಿಲ್ಲ, ಅವರೆಲ್ಲರೂ ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಭಕ್ತಿ ಮಾಡುತ್ತಾರೆ ಆದರೆ ಭಗವಂತನನ್ನೇ ಅರಿತುಕೊಂಡಿಲ್ಲ ಅಂದಮೇಲೆ ಭಕ್ತಿಯಿಂದ ಏನು ಲಾಭವಾಗುವುದು? ಅನೇಕರಿಗೆ ಡಾಕ್ಟರ್ ಆಫ್ ಫಿಲಾಸಫಿ ಎಂದು ಬಿರುದು ಸಿಗಬಹುದು. ಅವರ ಬುದ್ಧಿಯಲ್ಲಿ ಈಶ್ವರ ಸರ್ವವ್ಯಾಪಿ ಎಂಬ ಒಂದೇ ಮಾತಿರುತ್ತದೆ, ಅದನ್ನು ಫಿಲಾಸಫಿ ಎಂದು ತಿಳಿಯುತ್ತಾರೆ. ಇದರಿಂದಲೇ ಕನಿಷ್ಟರಾಗುತ್ತಾ ಬಂದಿದ್ದಾರೆ, ಇದಕ್ಕೆ ಧರ್ಮಗ್ಲಾನಿ ಎಂದು ಹೇಳಲಾಗುತ್ತದೆ. ನಾವು ಯಾವುದೇ ಮನುಷ್ಯರೊಂದಿಗೆ ಶಾಸ್ತ್ರಗಳ ವಾದ-ವಿವಾದ ಮಾಡುವುದಿಲ್ಲ. ನಾವು ಯಾವುದೇ ಮನುಷ್ಯರಿಂದ ಓದಿಲ್ಲ. ಮತ್ತೆಲ್ಲಾ ಮನುಷ್ಯರು ಮನುಷ್ಯರ ಮೂಲಕ ಓದಿರುತ್ತಾರೆ. ವೇದ-ಶಾಸ್ತ್ರ ಇತ್ಯಾದಿಗಳೆಲ್ಲವನ್ನೂ ಮನುಷ್ಯರಿಂದಲೇ ಓದುತ್ತಾರೆ. ಬರೆದಿರುವುದೂ ಮನುಷ್ಯರೆ. ನಿಮಗೆ ಈ ಜ್ಞಾನವನ್ನು ತಿಳಿಸುವವರು ಒಬ್ಬರೇ ಆತ್ಮಿಕ ತಂದೆಯಾಗಿದ್ದಾರೆ ಅವರು ಒಂದೇ ಬಾರಿ ಬಂದು ತಿಳಿಸುತ್ತಾರೆ. ನಾವೀಗ ಯಾವುದೇ ಮನುಷ್ಯರಿಂದ ಏನನ್ನೂ ಕಲಿಯುವಂತಿಲ್ಲ. ಆತ್ಮಿಕ ತಂದೆಯಿಂದಲೇ ಹೇಳಬೇಕಾಗಿದೆ. ಕೇಳುವವರು ಆತ್ಮಿಕ ಮಕ್ಕಳು ಆತ್ಮರಾಗಿದ್ದೇವೆ. ಆ ಮನುಷ್ಯರೆಲ್ಲರೂ ಮನುಷ್ಯರಿಗೆ ತಿಳಿಸುತ್ತಾರೆ ಆದರೆ ಇದು ಆತ್ಮಿಕ ತಂದೆಯ ಜ್ಞಾನವಾಗಿದೆ, ಅವರದು ಮನುಷ್ಯರ ಜ್ಞಾನವಾಗಿದೆ. ಇವರೂ ಸಹ (ಬ್ರಹ್ಮಾ ತಂದೆ) ಮನುಷ್ಯನಲ್ಲವೆ. ತಿಳಿಸಿರಿ, ಆತ್ಮಿಕ ತಂದೆಯು ಇವರ ಮೂಲಕ ತಿಳಿಸುತ್ತಾರೆ – ನಾವಾತ್ಮರು ಕೇಳಿಸಿಕೊಳ್ಳುತ್ತೇವೆ. ನಾವಾತ್ಮರು ಮತ್ತೆ ಈ ಶರೀರದ ಮೂಲಕ ಅನ್ಯರಿಗೆ ತಿಳಿಸುತ್ತೇವೆ, ಇದು ಆತ್ಮಿಕ ಜ್ಞಾನವಾಗಿದೆ. ಉಳಿದೆಲ್ಲವೂ ಲೌಕಿಕ ಜ್ಞಾನವಾಗಿದೆ. ಭಕ್ತಿಯಲ್ಲಿ ಶರೀರದ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ತಮ್ಮನ್ನು ಮನುಷ್ಯರು ಅಥವಾ ಭಕ್ತರೆಂದು ತಿಳಿಯಬೇಡಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ನೀವಾತ್ಮರು ಸಹೋದರ-ಸಹೋದರರಾಗಿದ್ದೀರಿ, ಆತ್ಮರು ಮತ್ತು ಪರಮಾತ್ಮನು ಬಹುಕಾಲ ಅಗಲಿದ್ದರೆಂದು ಗಾಯನವಿದೆ ಅಂದಮೇಲೆ ನಾವು ಯಾವುದೇ ಮನುಷ್ಯರಿಂದ ಕೇಳುವಂತಿಲ್ಲ. ಯಾರಾದರೂ ಪ್ರಶ್ನೆ ಕೇಳಿದರೆ ತಿಳಿಸಿ, ನಮ್ಮದು ಶಾಸ್ತ್ರಗಳ ಜ್ಞಾನವಲ್ಲ. ನಾವು ಅದಕ್ಕೆ ಫಿಲಾಸಫಿ ಎಂದು ಹೇಳುತ್ತೇವೆ ಅರ್ಥಾತ್ ಭಕ್ತಿಮಾರ್ಗದ ಜ್ಞಾನವಾಗಿದೆ. ಸದ್ಗತಿ ನೀಡುವ ಜ್ಞಾನವನ್ನು ಕೇವಲ ಒಬ್ಬ ತಂದೆಯೇ ತಿಳಿಸುತ್ತಾರೆ. ಸರ್ವರ ಸದ್ಗತಿದಾತನು ಒಬ್ಬನೇ ಎಂದು ಗಾಯನವಿದೆ ಅಂದಾಗ ನೀವು ಮಕ್ಕಳು ಯಾರೊಂದಿಗೂ ವಾದ ಮಾಡಬಾರದು.

ತಂದೆಯು ತಿಳಿಸುತ್ತಾರೆ – ಜ್ಞಾನದ ಅಥಾರಿಟಿ, ಜ್ಞಾನಸಾಗರನು ನಾನಾಗಿದ್ದೇನೆ, ನಾನು ನಿಮಗೆ ಯಾವುದೆ ಶಾಸ್ತ್ರ ಇತ್ಯಾದಿಗಳನ್ನು ತಿಳಿಸುವುದಿಲ್ಲ. ನನ್ನದು ಇದು ಆತ್ಮಿಕ ಜ್ಞಾನವಾಗಿದೆ, ಉಳಿದೆಲ್ಲವೂ ದೈಹಿಕ ಜ್ಞಾನವಾಗಿದೆ. ಆ ಸತ್ಸಂಗ ಇತ್ಯಾದಿಗಳೆಲ್ಲವೂ ಭಕ್ತಿ ಮಾರ್ಗಕ್ಕಾಗಿ. ಈ ಆತ್ಮಿಕ ತಂದೆಯು ಆತ್ಮರಿಗೆ ತಿಳಿಸುತ್ತಾರೆ ಆದ್ದರಿಂದ ದೇಹೀ-ಅಭಿಮಾನಿಯಾಗುವುದರಲ್ಲಿ ಮಕ್ಕಳಿಗೆ ಪರಿಶ್ರಮವಾಗುತ್ತದೆ. ನಾವಾತ್ಮರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯ ಮಕ್ಕಳು ಅವಶ್ಯವಾಗಿ ತಂದೆಯ ಸಿಂಹಾಸನಕ್ಕೇ ವಾರಸುಧಾರರಾಗುತ್ತಾರೆ ಅಲ್ಲವೆ. ಲಕ್ಷ್ಮೀ-ನಾರಾಯಣರೂ ದೇಹಧಾರಿಗಳಾಗಿದ್ದಾರೆ, ಅವರ ಮಕ್ಕಳು ಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ಈ ಮಾತೇ ಭಿನ್ನವಾಗಿದೆ. ಸತ್ಯಯುಗದಲ್ಲಿಯೂ ಲೌಕಿಕದ ಮಾತಿರುತ್ತದೆ, ಅಲ್ಲಿ ಈ ರೀತಿ ಆತ್ಮಿಕ ತಂದೆಯಿಂದ ಆಸ್ತಿಯು ಸಿಗುತ್ತದೆ, ದೇಹಾಭಿಮಾನವನ್ನು ಕಳೆಯಬೇಕಾಗಿದೆ ಎಂದು ಹೇಳುವುದಿಲ್ಲ. ನಾವಾತ್ಮರಾಗಿದ್ದೇವೆ ಮತ್ತು ತಂದೆಯನ್ನು ನೆನಪು ಮಾಡಬೇಕೆಂದು ಇಲ್ಲಿಯೇ ಹೇಳುತ್ತಾರೆ. ಈ ಭಾರತದ ಪ್ರಾಚೀನ ಯೋಗವೇ ಪ್ರಸಿದ್ಧವಾಗಿದೆ, ನೆನಪು ಶಬ್ಧವು ಹಿಂದಿ ಭಾಷೆಯದಾಗಿದೆ. ಅಂದಾಗ ಈ ಜ್ಞಾನವನ್ನು ನಿಮಗೆ ಯಾರು ಕೊಡುತ್ತಾರೆ? ಇದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಜನ್ಮ-ಜನ್ಮಾಂತರದಿಂದ ಮನುಷ್ಯರು ಮನುಷ್ಯರೊಂದಿಗೆ ಮಾತನಾಡುತ್ತಾ ಬಂದಿದ್ದಾರೆ, ಈಗ ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ಮಾತನಾಡುತ್ತಾರೆ. ಪರಮಾತ್ಮನು ತಿಳಿಸುತ್ತಾರೆ ಆದ್ದರಿಂದ ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಗೀತೆಯನ್ನೂ ಸಹ ಅವರು ಆಧ್ಯಾತ್ಮಿಕ ಜ್ಞಾನವೆಂದು ತಿಳಿಯುತ್ತಾರೆ ಆದರೆ ಅದರಲ್ಲಿ ದೇಹಧಾರಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಯಾವುದೇ ಮನುಷ್ಯರಲ್ಲಿ ಈ ಜ್ಞಾನವಿರಲು ಸಾಧ್ಯವಿಲ್ಲ. ಎಂದಾದರೂ ಯಾರೇ ನಿಮ್ಮೊಂದಿಗೆ ವಾದ-ವಿವಾದ ಮಾಡುತ್ತಾರೆಂದರೆ ಹೇಳಿರಿ, ನಿಮ್ಮದು ಭಕ್ತಿಯ ಜ್ಞಾನವಾಗಿದೆ, ಮನುಷ್ಯರೇ ರಚಿಸಿರುವ ಶಾಸ್ತ್ರಗಳ ಜ್ಞಾನವಾಗಿದೆ. ಸತ್ಯ ಜ್ಞಾನವಂತೂ ಒಬ್ಬ ಜ್ಞಾನಸಾಗರ ತಂದೆಯ ಬಳಿಯೇ ಇದೆ. ಅವರೇ ಸ್ವಯಂ ಜ್ಞಾನವನ್ನು ತಿಳಿಸುತ್ತಾರೆ, ಅವರಿಗೆ ಪಾರಲೌಕಿಕ ತಂದೆಯೆಂದು ಹೇಳುತ್ತಾರೆ. ಪೂಜೆಯೂ ಆ ನಿರಾಕಾರನಿಗೇ ಹೇಳುತ್ತಾರೆ. ಒಂದುವೇಳೆ ಅನ್ಯ ನಿರಾಕಾರಿಗಳ ಪೂಜೆಯಾಗುತ್ತದೆ ಎಂದರೆ ಅವರೂ ಸಹ ಪರಮಾತ್ಮನ ಮಕ್ಕಳೇ ಆಗಿದ್ದಾರೆ. ಮಣ್ಣಿನಿಂದ ಸಾಲಿಗ್ರಾಮಗಳನ್ನು ಮಾಡಿ ಪೂಜೆ ಮಾಡುತ್ತಾರೆ, ರುದ್ರ ಯಜ್ಞವನ್ನು ರಚಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಆ ಪರಮಪಿತ ಪರಮಾತ್ಮನು ನಿರಾಕಾರಿ ಪ್ರಪಂಚದಲ್ಲಿರುತ್ತಾರೆ. ನಾವಾತ್ಮರೂ ಅಲ್ಲಿಯೇ ಇರುತ್ತೇವೆ. ಆ ಜ್ಞಾನಸಾಗರನೇ ಬಂದು ಜ್ಞಾನವನ್ನು ತಿಳಿಸಿ ಎಲ್ಲರ ಸದ್ಗತಿ ಮಾಡುತ್ತಾರೆ. ಅವರು ಅತಿ ಮೇಲೆ ಇರುವಂತಹ ಪರಮಪಿತ ಪರಮಾತ್ಮನಾಗಿದ್ದಾರೆ. ಎಲ್ಲಾ ಆತ್ಮ ಸಹೋದರರಿಗೆ ಪಾತ್ರವು ಸಿಕ್ಕಿದೆ, ಅವರೇ ನಂತರ ಶರೀರ ಧಾರಣೆ ಮಾಡಿ ಸಹೋದರ-ಸಹೋದರಿಯರಾಗುತ್ತಾರೆ. ಆತ್ಮರೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದಾರೆ. ಆತ್ಮವು ಯಾವಾಗ ಶರೀರವನ್ನು ಧಾರಣೆ ಮಾಡುತ್ತದೆಯೋ ಆಗ ಸ್ವರ್ಗದಲ್ಲಿ ಸುಖ, ನರಕದಲ್ಲಿ ದುಃಖವನ್ನೂ ಪಡೆಯುತ್ತದೆ. ಇದು ಏಕೆ ಆಗುತ್ತದೆ? ತಿಳಿಸಲಾಗಿದೆ – ಜ್ಞಾನ ಮತ್ತು ಭಕ್ತಿ. ಜ್ಞಾನವು ದಿನ ಭಕ್ತಿಯು ರಾತ್ರಿಯಾಗಿದೆ. ಜ್ಞಾನದಿಂದ ಸುಖ, ಭಕ್ತಿಯಿಂದ ದುಃಖ, ಈ ಆಟವು ಮಾಡಲ್ಪಟ್ಟಿದೆ. ಸುಖ-ದುಃಖ ಎಲ್ಲವನ್ನೂ ಭಗವಂತನೇ ರಚಿಸುವುದಿಲ್ಲ. ಯಾವಾಗ ದುಃಖಿಯಾಗುವರೋ ಆಗ ಭಗವಂತನನ್ನೇ ಕರೆಯುತ್ತಾರೆ, ಅವರು ಸುಖ ಕೊಡುವವರೆಂದು ತಿಳಿಯುತ್ತಾರೆ. ನಂತರ ಯಾವಾಗ ಸುಖದ ಸಮಯವು ಮುಗಿಯುವುದೋ ಅನಂತರ ರಾವಣನ ಐದು ವಿಕಾರಗಳ ಕಾರಣ ದುಃಖವು ಆರಂಭವಾಗುತ್ತದೆ, ಇದೇ ಆಟವಾಗಿದೆ, ಇದನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳಬೇಕಾಗಿದೆ. ಇದನ್ನೇ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಉಳಿದೆಲ್ಲವೂ ದೈಹಿಕ ಜ್ಞಾನವಾಗಿದೆ. ಅದನ್ನು ನಾವು ಕೇಳಲು ಬಯಸುವುದಿಲ್ಲ. ನಮಗೆ ಆದೇಶ ಸಿಕ್ಕಿದೆ – ಕೇವಲ ನಾನು ನಿರಾಕಾರ ತಂದೆಯಿಂದಲೇ ಕೇಳಿರಿ, ಕೆಟ್ಟದ್ದನ್ನು ಕೇಳಬೇಡಿ ಎಂದು ತಂದೆಯು ತಿಳಿಸುತ್ತಾರೆ ಆದ್ದರಿಂದ ನಾವು ಒಬ್ಬ ಭಗವಂತನಿಂದಲೇ ಕೇಳುತ್ತೇವೆ, ನೀವು ಮನುಷ್ಯರಿಂದ ಕೇಳುತ್ತೀರಿ, ರಾತ್ರಿ-ಹಗಲಿನ ಅಂತರವಿದೆ. ದೊಡ್ಡ-ದೊಡ್ಡ ವಿದ್ವಾಂಸರು ಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ, ಅದನ್ನು ನಾವೂ ಸಹ ಬಹಳಷ್ಟು ಓದಿದೆವು. ಈಗ ಭಗವಂತನು ತಿಳಿಸುತ್ತಾರೆ – ನೀವು ಅನೇಕ ಗುರುಗಳನ್ನು ಮಾಡಿಕೊಂಡಿದ್ದೀರಿ, ಈಗ ಎಲ್ಲವನ್ನು ಬಿಟ್ಟು ಬಿಡಿ. ನಾನು ಏನನ್ನು ತಿಳಿಸುತ್ತೇನೆಯೋ ಅದನ್ನೇ ಕೇಳಿರಿ, ಭಗವಂತನು ನಿರಾಕಾರನಾಗಿದ್ದಾರೆ. ಅವರ ಹೆಸರಾಗಿದೆ – ಶಿವ. ನಾವೀಗ ಅವರಿಂದ ಕೇಳುತ್ತಿದ್ದೇವೆ, ತಂದೆಯೇ ತಮ್ಮ ಪರಿಚಯ ಮತ್ತು ತಮ್ಮ ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ತಿಳಿಸುತ್ತಾರೆ ಅಂದಮೇಲೆ ಮತ್ತೆ ನಾವು ತಮ್ಮಿಂದ ಶಾಸ್ತ್ರಗಳ ಮಾತುಗಳನ್ನು ಏಕೆ ಕೇಳಬೇಕು! ನಾವು ತಮಗೆ ಆತ್ಮಿಕ ಜ್ಞಾನವನ್ನು ತಿಳಿಸುತ್ತೇವೆ, ಕೇಳುವಂತಿದ್ದರೆ ಕೇಳಿರಿ, ತಬ್ಬಿಬ್ಬಾಗುವ ಮಾತೇ ಇಲ್ಲ. ಇಡೀ ಪ್ರಪಂಚವು ಒಂದು ಕಡೆಯಿದೆ ಮತ್ತು ನೀವು ಕೆಲವರು ಇನ್ನೊಂದು ಕಡೆ ಇದ್ದೀರಿ. ಈಗ ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನಿಮ್ಮ ಮೇಲಿರುವ ಪಾಪಗಳ ಹೊರೆಯು ಇಳಿಯುವುದು ಮತ್ತು ನೀವು ಪವಿತ್ರರಾಗಿ ಬಿಡುತ್ತೀರಿ. ಯಾರು ಪವಿತ್ರರಾಗುವರೋ ಅವರೇ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಈಗ ಹಳೆಯ ಪ್ರಪಂಚವು ಪರಿವರ್ತನೆಯಾಗಲಿದೆ, ಕಲಿಯುಗದ ನಂತರ ಸತ್ಯಯುಗವು ಬರಲಿದೆ. ಸತ್ಯಯುಗವು ಪಾವನ ಪ್ರಪಂಚ, ಕಲಿಯುಗದಲ್ಲಿಯೇ ಪಾವನ ಪ್ರಪಂಚವನ್ನಾಗಿ ಮಾಡಲು ಬನ್ನಿ ಎಂದು ನನ್ನನ್ನು ಕರೆಯುತ್ತೀರಿ ಆದ್ದರಿಂದ ನಾನೀಗ ಬಂದಿದ್ದೇನೆ, ಈಗ ನನ್ನೊಬ್ಬನನ್ನೇ ನೆನಪು ಮಾಡಿರಿ. ಈಗ ಪ್ರಪಂಚವು ಬದಲಾಗುತ್ತಿದೆ, ಇದು ಅಂತಿಮ ಜನ್ಮವಾಗಿದೆ. ಈ ಹಳೆಯ ಪ್ರಪಂಚದಲ್ಲಿ ಆಸುರೀ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯವು ಸ್ಥಾಪನೆಯಾಗುತ್ತಿದೆ. ಆದ್ದರಿಂದ ಈಗ ಅಂತಿಮ ಜನ್ಮ ಗೃಹಸ್ಥ ವ್ಯವಹಾರದ್ದರೂ ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಇದು ವಿಷಯ ಸಾಗರವಲ್ಲವೆ. ಕಮಲಪುಷ್ಫವು ನೀರಿನ ಮೇಲಿರುತ್ತದೆ ಹಾಗೆಯೇ ನೀವು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈಗ ಇಡೀ ಪ್ರಪಂಚವೇ ಪರಿವರ್ತನೆಯಾಗುತ್ತಿದೆ, ಆ ಧರ್ಮ ಸ್ಥಾಪಕರಂತೂ ಕೇವಲ ತಮ್ಮ-ತಮ್ಮ ಧರ್ಮಗಳನ್ನು ಸ್ಥಾಪನೆ ಮಾಡುತ್ತಾರೆ. ಅವರು ಮೊದಲು ಪಾವನರಾಗಿರುತ್ತಾರೆ ನಂತರ ಪತಿತರಾಗುತ್ತಾರೆ. ಸದ್ಗುರುವು ಒಬ್ಬರೇ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಯಾವಾಗ ಸದ್ಗತಿಯಲ್ಲಿ ಹೋಗಬೇಕೆನಿಸುವುದೋ ಆಗಲೇ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಯಾವಾಗ ಬಹಳ ಪಾಪವಾಗುವುದೋ ಆಗ ಆತ್ಮಿಕ ತಂದೆಯು ಜ್ಞಾನವನ್ನು ತಿಳಿಸುತ್ತಾರೆ. ಭಕ್ತಿಯ ಫಲವಾದ ಜ್ಞಾನವು ನಿಮಗೆ ಭಗವಂತನಿಂದ ಸಿಗುತ್ತದೆ. ಭಗವಂತನು ಭಕ್ತಿಯನ್ನು ಕಲಿಸುವುದಿಲ್ಲ, ಅವರು ಜ್ಞಾನವನ್ನು ಕೊಡುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಿಳಿಸುತ್ತಾರೆ. ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ, ಹೊಸ ಪ್ರಪಂಚದಲ್ಲಿ ಎಲ್ಲರೂ ಸ್ವರ್ಗವಾಸಿಗಳಾಗಿದ್ದಿರಿ, ಈಗ ಹಳೆಯ ಪ್ರಪಂಚದಲ್ಲಿ ನರಕವಾಸಿಗಳಾಗಿದ್ದೀರಿ ಆದ್ದರಿಂದ ನಾನು ಎಲ್ಲರ ಉದ್ಧಾರ ಮಾಡಲು ಬರುತ್ತೇನೆ. ನಾನೇ ಬಂದು ಆತ್ಮಿಕ ಜ್ಞಾನವನ್ನು ತಿಳಿಸುತ್ತೇನೆ. ತಂದೆಯು ತಮ್ಮ ಪರಿಚಯವನ್ನು ಕೊಡುತ್ತಿದ್ದಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಇದು ನರಕವಾಗಿದೆ. ಹೊಸ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಇಲ್ಲಿಯೇ ಸ್ವರ್ಗ-ನರಕ ಎರಡೂ ಇದೆ, ಯಾರಿಗೆ ಬಹಳ ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆ ಎಂದು ಹೇಗೆ ಹೇಳುವಿರಿ! ಸ್ವರ್ಗವಿರುವುದೇ ಹೊಸ ಪ್ರಪಂಚದಲ್ಲಿ, ಇಲ್ಲಿ ಸ್ವರ್ಗವೆಲ್ಲಿಂದ ಬಂದಿತು ಆದ್ದರಿಂದ ನಾವು ಯಾವುದೇ ಮನುಷ್ಯರ ಮಾತನ್ನು ಕೇಳುವುದಿಲ್ಲ. ತಂದೆಯು ತಿಳಿಸುತ್ತಾರೆ – ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು ಎಂದರೆ ನನ್ನೊಬ್ಬನನ್ನೇ ನೆನಪು ಮಾಡಿರಿ. ಇಡೀ ದಿನ ಬುದ್ಧಿಯಲ್ಲಿ ಈ ಜ್ಞಾನವಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಒಬ್ಬ ತಂದೆಯಿಂದಲೇ ಆತ್ಮಿಕ ಮಾತುಗಳನ್ನು ಕೇಳಬೇಕಾಗಿದೆ. ಯಾರೊಂದಿಗೂ ಅನ್ಯ ಮಾತುಗಳ ವಾದ-ವಿವಾದ ಮಾಡಬಾರದು.

2. ದೇಹೀ-ಅಭಿಮಾನಿಗಳಾಗುವ ಪರಿಶ್ರಮ ಪಡಬೇಕಾಗಿದೆ. ಸತೋಪ್ರಧಾನರಾಗಲು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ.

ವರದಾನ:-

ಹೇಗೆ ಯಾವುದೇ ಹಿರಿಯರ ಕೈಯಲ್ಲಿ ಕೈ ಇರುತ್ತದೆಯೆಂದರೆ ಸ್ಥಿತಿಯು ನಿಶ್ಚಿಂತವಾಗಿರುತ್ತದೆ. ಹಾಗೆಯೇ ಪ್ರತಿಯೊಂದು ಕರ್ಮದಲ್ಲಿ ಇದನ್ನೇ ತಿಳಿಯಬೇಕು – ಬಾಪ್ದಾದಾರವರು ನನ್ನ ಜೊತೆಯೂ ಇದ್ದಾರೆ ಹಾಗೂ ನಮ್ಮ ಈ ಅಲೌಕಿಕ ಜೀವನದ ಕೈ ಅವರ ಕೈಯಲ್ಲಿದೆ ಅರ್ಥಾತ್ ಜೀವನವು ಅವರಿಗೆ ಅರ್ಪಣೆಯಾಗಿದೆ. ಹೀಗಿದ್ದಾಗ ಜವಾಬ್ದಾರಿಯೂ ಅವರದಾಗಿ ಬಿಡುತ್ತದೆ. ಎಲ್ಲ ಹೊರೆಯನ್ನು ತಂದೆಯ ಮೇಲಿಟ್ಟು ಸ್ವಯಂನ್ನು ಹಗುರ ಮಾಡಿಬಿಡಿ. ಹೊರೆಯನ್ನಿಳಿಸುವ ಅಥವಾ ಕಷ್ಟವನ್ನು ಸಹಜಗೊಳಿಸುವ ಸಾಧನವೇ ಆಗಿದೆ ತಂದೆಯ ಹಸ್ತ ಹಾಗೂ ಜೊತೆ (ಸಂಗ).

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

1. “ಜ್ಞಾನ, ಯೋಗ ಹಾಗೂ ದೈವೀ ಗುಣಗಳ ಧಾರಣೆಯು ಜೀವನದ ಆಧಾರವಾಗಿದೆ”

ತಮ್ಮಲ್ಲಿ ಇದಂತು ನಿಶ್ಚಯವಿದೆ – ನಮಗೆ ಪರಮಪಿತ ಪರಮಾತ್ಮನ ಮೂಲಕ ಜ್ಞಾನವು ಸಿಗುತ್ತಿದೆ, ಈ ಜ್ಞಾನದಲ್ಲಿ ಮುಖ್ಯವಾಗಿ ಮೂರು ಅಂಶಗಳಿವೆ, ಅದಕ್ಕಾಗಿಯೇ ನಾವು ಸಂಪೂರ್ಣವಾಗಿ ಪುರುಷಾರ್ಥ ಮಾಡುವುದರಲ್ಲಿ ಗಮನವಿಡಬೇಕಾಗಿದೆ. ಇದರಲ್ಲಿ ಮೊದಲು ಯೋಗ ಅಥವಾ ಈಶ್ವರನ ನಿರಂತರ ನೆನಪು ಇರಬೇಕು, ಇದರಿಂದ ವಿಕರ್ಮಗಳ ವಿನಾಶವಾಗುವುದು. ಇನ್ನೊಂದು – ಜ್ಞಾನ ಎಂದರೆ ಇಡೀ ಬ್ರಹ್ಮಾಂಡ, ಸೃಷ್ಟಿಯ ಆದಿ-ಮಧ್ಯ-ಅಂತ್ಯವು ಹೇಗಾಗುವುದು ಎಂಬ ಜ್ಞಾನವಿದ್ದಾಗಲೇ, ಈ ಜೀವನದಲ್ಲಿ ಪ್ರತ್ಯಕ್ಷವಾಗಿ ಪರಿವರ್ತನೆ ಬರಲು ಸಾಧ್ಯ ಹಾಗೂ ನಾವು ಬಹಳ ಒಳ್ಳೆಯ ಭವಿಷ್ಯ ಪ್ರಾಲಬ್ಧವನ್ನು ರೂಪಿಸಿಕೊಳ್ಳಬಹುದು. ಮೂರನೆಯ ಅಂಶವಾಗಿದೆ – ಕ್ವಾಲಿಫಿಕೇಶನ್, ನಾವು ಅವಶ್ಯವಾಗಿ ಸರ್ವ ಗುಣ ಸಂಪನ್ನ, 16 ಕಲಾ ಸಂಪೂರ್ಣರು ಆಗಬೇಕು, ಈ ರೀತಿ ಆದಾಗಲೇ ದೇವತೆಯಾಗಬಹುದು. ಅದಕ್ಕಾಗಿ ತಮ್ಮನ್ನು ತಾವು ನಡೆಯುತ್ತಾ-ಸುತ್ತಾಡುತ್ತಾ, ಆಹಾರ-ಪಾನೀಯಗಳ ಸೇವನೆ ಮಾಡುತ್ತಿದ್ದರೂ ಮೂರು ಅಂಶಗಳ ಮೇಲೆ ಗಮನ ಕೊಡುವುದು ಅವಶ್ಯಕವಿದೆ. ಈ ಒಂದೇ ಜನ್ಮದಲ್ಲಿ ಜ್ಞಾನ ಬಲ, ಯೋಗ ಬಲ ಹಾಗೂ ದೈವೀ ಗುಣಗಳ ಧಾರಣೆಯಾಗುವುದು. ಈ ಮೂರರ ಪರಸ್ಪರದಲ್ಲಿ ಸಂಬಂಧವಿದೆ – ಜ್ಞಾನವಿಲ್ಲದೆ ಯೋಗವಾಗಲು ಸಾಧ್ಯವಿಲ್ಲ ಹಾಗೂ ಯೋಗವಿಲ್ಲದೆ ದೈವೀ ಗುಣಗಳ ಧಾರಣೆಯಾಗುವುದಿಲ್ಲ, ಈ ಮೂರು ಅಂಶಗಳೇ ಇಡೀ ಜೀವನದ ಆಧಾರವಾಗಿದೆ. ಇದರಿಂದಲೇ ವಿಕರ್ಮಗಳ ಖಾತೆಯು ಸಮಾಪ್ತಿಯಾಗಿ ಒಳ್ಳೆಯ ಕರ್ಮವಾಗುವುದು. ಇದಕ್ಕೇ ಈಶ್ವರೀಯ ಜೀವನವೆಂದು ಹೇಳಲಾಗುವುದು.

2. “ಭಾರತದ ಪ್ರಾಚೀನ ಯೋಗವು ಪರಮಾತ್ಮನ ಮೂಲಕ ಕಲಿಸಿಕೊಡಲಾಗಿದೆ”

ತಮ್ಮ ಈ ಈಶ್ವರೀಯ ಯೋಗವು ಭಾರತದಲ್ಲಿ ಪ್ರಾಚೀನ ಯೋಗದ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಯೋಗವನ್ನು ಅವಿನಾಶಿ ಯೋಗವೆಂದು ಏಕೆ ಹೇಳುತ್ತಾರೆ? ಏಕೆಂದರೆ ಅವಿನಾಶಿ ಪರಮಪಿತ ಪರಮಾತ್ಮನ ಮೂಲಕ ಕಲಿಸಿಕೊಡಲಾಗಿದೆ. ಭಲೆ ಯೋಗವನ್ನಂತು ಬೇರೆ ಆತ್ಮರೂ ಕಲಿಸುತ್ತಾರೆ ಆದ್ದರಿಂದ ಯೋಗಾಶ್ರಮ ಮುಂತಾದವನ್ನು ತೆರೆಯುತ್ತಾ ಇರುತ್ತಾರೆ ಆದರೆ ಆ ಪ್ರಾಚೀನ ಯೋಗವನ್ನು ಕಲಿಸಲು ಸಾಧ್ಯವಿಲ್ಲ. ಒಂದುವೇಳೆ ಇಂತಹ ಯೋಗವಿದ್ದರೆ ಆ ಬಲವೆಲ್ಲಿದೆ! ಭಾರತವಂತು ದಿನ ಕಳೆದಂತೆ ನಿರ್ಬಲವಾಗುತ್ತಾ ಇದೆ, ಇದರಿಂದ ಸಿದ್ಧವಾಗುತ್ತದೆ – ಆ ಯೋಗವು ಅವಿನಾಶಿ ಯೋಗವಲ್ಲ, ಯಾರೊಂದಿಗೆ ಯೋಗ(ಸಂಬಂಧ)ವನ್ನಿಡಬೇಕು ಅದನ್ನು ಅವರೇ ಸ್ವಯಂ ಕಲಿಸಿಕೊಡಲು ಸಾಧ್ಯ. ಉಳಿದಂತೆ ಅನ್ಯರೊಂದಿಗೆ ಯೋಗವನ್ನೇ ಇಡಬಾರದೆಂದರೆ ಕಲಿಸುವುದಾದರೂ ಹೇಗೆ? ಇದನ್ನಂತು ಸ್ವಯಂ ಪರಮಾತ್ಮನೇ ಕಾರ್ಯವನ್ನು ಮಾಡುವುದಕ್ಕೆ ಸಾಧ್ಯ, ಅವರೇ ನಮಗೆ ಸಂಪೂರ್ಣ ಭೇದವನ್ನು(ಅಂತರವನ್ನು) ತಿಳಿಸುವುದಕ್ಕೆ ಸಾಧ್ಯವಾಗುವುದು. ಮತ್ತೆಲ್ಲಾ ಕಡೆಗಳಲ್ಲಿ ಹೇಳುತ್ತಿರುತ್ತಾರೆ – ನಾವು ಯೋಗ ಕಲಿಸುತ್ತೇವೆ. ಇದನ್ನಂತು ನಾವು ತಿಳಿದುಕೊಂಡಿದ್ದೇವೆ – ಸತ್ಯ ಯೋಗವನ್ನಂತು ಸ್ವಯಂ ಪರಮಾತ್ಮನೇ ಕಲಿಸಿಕೊಟ್ಟು, ಸೂರ್ಯವಂಶಿ-ಚಂದ್ರವಂಶಿ ಮನೆತನ ಅಥವಾ ದೈವೀ ರಾಜ್ಯದ ಸ್ಥಾಪನೆ ಮಾಡುವರು. ಈಗ ಆ ಪ್ರಾಚೀನ ಯೋಗವನ್ನು ಕಲ್ಪ-ಕಲ್ಪದಲ್ಲಿಯೂ ಪರಮಾತ್ಮನು ಬಂದು ನಮಗೆ ಕಲಿಸುತ್ತಾರೆ. ಹೇಳುತ್ತಾರೆ – ಹೇ ಆತ್ಮ, ಪರಮಾತ್ಮನಾದ ನನ್ನೊಂದಿಗೆ ನಿರಂತರ ಯೋಗವನ್ನಿಡುತ್ತೀರೆಂದರೆ ನಿಮ್ಮ ಪಾಪಗಳು ನಷ್ಟವಾಗಿ ಬಿಡುತ್ತದೆ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top