07 November 2021 KANNADA Murli Today | Brahma Kumaris
Read and Listen today’s Gyan Murli in Kannada
6 November 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
ತನು, ಮನ, ಧನ ಮತ್ತು ಜನರ ಭಾಗ್ಯ
♫ ಕೇಳು ಇಂದಿನ ಮುರ್ಲಿ (audio)➤
ಇಂದು ಸತ್ಯ ಸಾಹೇಬನು ತನ್ನ ಮಕ್ಕಳನ್ನು ನೋಡುತ್ತಿದ್ದಾರೆ. ತಂದೆಗೆ ಸತ್ಯವೆಂದು ಹೇಳುತ್ತಾರೆ ಆದ್ದರಿಂದ ಬಾಪ್ದಾದಾರವರ ಮೂಲಕ ಸ್ಥಾಪನೆ ಮಾಡಲ್ಪಟ್ಟಿರುವ ಯುಗದ ಹೆಸರೇ ಆಗಿದೆ – ಸತ್ಯಯುಗ. ತಂದೆಯ ಮಹಿಮೆಯೂ ಸಹ ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವೆಂದು ಹೇಳುತ್ತಾರೆ. ಸತ್ಯದ ಮಹಿಮೆಯು ಸದಾ ಶ್ರೇಷ್ಠವೇ ಆಗಿದೆ. ಸತ್ಯ ತಂದೆಯ ಮೂಲಕ ತಾವೆಲ್ಲರೂ ಸತ್ಯ ನಾರಾಯಣರಾಗಲು ಸತ್ಯ ಕಥೆಯನ್ನು ಕೇಳುತ್ತಿದ್ದೀರಿ. ಇಂತಹ ಸತ್ಯ ಸಾಹೇಬನು ತಮ್ಮ ಮಕ್ಕಳನ್ನು ನೋಡುತ್ತಿದ್ದಾರೆ. ಎಷ್ಟು ಮಂದಿ ಮಕ್ಕಳು ಸತ್ಯ ಸಾಹೇಬನನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು. ಸತ್ಯ ಸಾಹೇಬನು ಎಲ್ಲದಕ್ಕಿಂತ ದೊಡ್ಡ ವಿಶೇಷತೆಯಾಗಿದೆ – ಅವರು ದಾತ, ವಿದಾತ, ವರದಾತನಾಗಿದ್ದಾರೆ. ರಾಜಿಯಾಗಿರುವ ಮಕ್ಕಳ ಗುರುತಾಗಿದೆ – ಸದಾ ದಾತಾ ರಾಜಿಯಾಗಿರುತ್ತಾರೆ ಆದ್ದರಿಂದ ಇಂತಹ ಆತ್ಮಗಳು ಸದಾ ತಮ್ಮನ್ನು ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಗುಣಗಳ ಖಜಾನೆ, ಎಲ್ಲಾ ಖಜಾನೆಗಳಿಂದ ತಮ್ಮನ್ನು ಸಂಪನ್ನ ಅನುಭವ ಮಾಡುತ್ತಾರೆ. ಎಂದೂ ಸಹ ತಮ್ಮನ್ನು ಖಜಾನೆಗಳಿಂದ ಖಾಲಿ ಎಂದು ತಿಳಿದುಕೊಳ್ಳುವುದಿಲ್ಲ. ಯಾವುದೇ ಗುಣ ಹಾಗೂ ಶಕ್ತಿ ಅಥವಾ ಜ್ಞಾನದ ಗುಹ್ಯ ರಹಸ್ಯದಿಂದ ವಂಚಿತರಾಗಿರುವುದಿಲ್ಲ. ಭಲೆ ಗುಣಗಳು ಹಾಗೂ ಶಕ್ತಿಗಳಲ್ಲಿ ಪರ್ಸೆಂಟೇಜ್ ಇರಬಹುದು ಆದರೆ ಯಾವುದೇ ಗುಣ ಅಥವಾ ಯಾವುದೇ ಶಕ್ತಿಯು ಆ ಆತ್ಮನಲ್ಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೇಗೆ ಸಮಯ ಪ್ರಮಾಣ ಕೆಲವು ಮಕ್ಕಳು ಹೇಳುತ್ತಾರೆ – ನನ್ನಲ್ಲಿ ಅನ್ಯ ಶಕ್ತಿಗಳಂತೂ ಇವೆ ಆದರೆ ಈ ಶಕ್ತಿ ಹಾಗೂ ಈ ಗುಣವಿಲ್ಲ ಎಂದು. ‘ಇಲ್ಲ’ ಎಂಬ ಶಬ್ಧವು ನಿಷೇಧವಾಗಿರುತ್ತದೆ. ಇಂತಹ ದಾತನ ಮಕ್ಕಳು ಸದಾ ಧನವಂತರಾಗಿರುತ್ತಾರೆ ಅರ್ಥಾತ್ ಸಂಪನ್ನವಾಗಿರುತ್ತಾರೆ. ಎರಡನೇ ಮಹಿಮೆಯಾಗಿದೆ – ‘ಭಾಗ್ಯವಿದಾತ’. ಭಾಗ್ಯವಿದಾತ ಸಾಹೇಬನನ್ನು ರಾಜಿ ಮಾಡಿಕೊಂಡಿರುವ ಮಕ್ಕಳ ಗುರುತೇನೆಂದರೆ ಆ ಮಾ|| ಭಾಗ್ಯವಿದಾತ ಮಕ್ಕಳ ಮಸ್ತಕದಲ್ಲಿ ಸದಾ ಭಾಗ್ಯದ ನಕ್ಷತ್ರವು ಹೊಳೆಯುತ್ತಿರುತ್ತದೆ ಅರ್ಥಾತ್ ಅವರ ಚಹರೆಯಿಂದ ಸದಾ ಆತ್ಮಿಕ ಹೊಳಪು ಕಂಡುಬರುತ್ತದೆ. ಆ ಮೂರ್ತಿಯಿಂದ ಸದಾ ರಾಜಿಯಾಗಿರುವ ಲಕ್ಷಣಗಳು ಕಂಡು ಬರುತ್ತವೆ. ಚಹರೆಯಿಂದ ಸದಾ ಆತ್ಮಿಕ ಗುಣಗಳ ಅನುಭವವಾಗುತ್ತದೆ, ಇದಕ್ಕೆ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವೆಂದು ಹೇಳಲಾಗುತ್ತದೆ. ಪ್ರತೀ ಮಾತಿನಲ್ಲಿ ತನು, ಮನ, ಧನ, ಜನ – ನಾಲ್ಕೂ ರೂಪಗಳಿಂದ ತಮ್ಮ ಭಾಗ್ಯದ ಅನುಭವ ಮಾಡುತ್ತಾರೆ. ಇದರಲ್ಲಿ ಯಾವುದಾದರೊಂದು ಭಾಗ್ಯದ ಕೊರತೆಯ ಅನುಭವ ಮಾಡುತ್ತಾರೆಂದಲ್ಲ. ನನ್ನ ಭಾಗ್ಯದಲ್ಲಿ ಮೂರು ಮಾತುಗಳಂತೂ ಸರಿಯಾಗಿದೆ ಬಾಕಿ ಒಂದು ಮಾತಿನ ಕೊರತೆಯಿದೆ – ಈ ರೀತಿ ಅವರು ಎಂದೂ ಹೇಳುವುದಿಲ್ಲ.
ತನುವಿನ ಭಾಗ್ಯ – ತನುವಿನ ಲೆಕ್ಕಾಚಾರವು ಕೆಲವೊಮ್ಮೆ ಪ್ರಾಪ್ತಿ ಹಾಗೂ ಪುರುಷಾರ್ಥ ಮಾರ್ಗದಲ್ಲಿ ವಿಘ್ನದ ಅನುಭವವಾಗುವುದಿಲ್ಲ. ತನುವು ಎಂದೂ ಸೇವೆಯಿಂದ ವಂಚಿತರಾಗಲು ಬಿಡುವುದಿಲ್ಲ. ಕರ್ಮಭೋಗದ ಸಮಯದಲ್ಲಿಯೂ ಇಂತಹ ಭಾಗ್ಯವಂತ ಮಕ್ಕಳು ಯಾವುದಾದರೊಂದು ಪ್ರಕಾರದ ಸೇವೆಗೆ ನಿಮಿತ್ತರಾಗುತ್ತಾರೆ. ಕರ್ಮಭೋಗವನ್ನು ನಡೆಸುತ್ತಾರೆ ಆದರೆ ಕರ್ಮಭೋಗಕ್ಕೆ ವಶರಾಗಿ ಚೀರಾಡುವುದಿಲ್ಲ. ಚೀರಾಡುವುದು ಅರ್ಥಾತ್ ಪದೇ-ಪದೇ ಕರ್ಮಭೋಗದ ವರ್ಣನೆ ಮಾಡುವುದು ಹಾಗೂ ಪದೇ-ಪದೇ ಕರ್ಮ ಭೋಗದ ಕಡೆಯೇ ಬುದ್ಧಿ ಹಾಗೂ ಸಮಯವನ್ನು ತೊಡಗಿಸುತ್ತಾ ಇರುವುದು. ಚಿಕ್ಕ ಮಾತನ್ನು ದೊಡ್ಡ ವಿಸ್ತಾರ ಮಾಡುವುದಕ್ಕೆ ಚೀರಾಡುವುದು ಎಂದು ಹೇಳುತ್ತಾರೆ. ಮತ್ತು ದೊಡ್ಡ ಮಾತನ್ನೂ ಸಹ ಜ್ಞಾನದ ಸಾರದಿಂದ ಸಮಾಪ್ತಿ ಮಾಡುವುದಕ್ಕೆ ಶರೀರವನ್ನು ನಡೆಸುವುದು ಎಂದು ಹೇಳುತ್ತಾರೆ ಆದ್ದರಿಂದ ಸದಾ ಈ ಮಾತನ್ನು ನೆನಪಿಟ್ಟುಕೊಳ್ಳಿ – ಯೋಗೀ ಜೀವನಕ್ಕಾಗಿ ಭಲೆ ಚಿಕ್ಕ ಕರ್ಮ ಭೋಗ (ಕಾಯಿಲೆ) ಆಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಅದರ ವರ್ಣನೆ ಮಾಡಬೇಡಿ. ಕರ್ಮ ಭೋಗದ ಕಥೆಯ ವಿಸ್ತಾರ ಮಾಡಬೇಡಿ ಏಕೆಂದರೆ ವರ್ಣನೆ ಮಾಡುವುದರಲ್ಲಿಯೇ ಸಮಯ ಮತ್ತು ಶಕ್ತಿಯು ಅದರ ಕಡೆ ಇರುವ ಕಾರಣ ಆತ್ಮಾಭಿಮಾನಿಗಳಲ್ಲ, ಆರೋಗ್ಯದ ಅಭಿಮಾನಿಗಳಾಗಿ ಬಿಡುತ್ತೀರಿ. ಈ ಆರೋಗ್ಯದ ಅಭಿಮಾನವು ಆತ್ಮಿಕ ಶಕ್ತಿಯಿಂದ ನಿಧಾನ-ನಿಧಾನವಾಗಿ ನಿರ್ಬಲರನ್ನಾಗಿ ಮಾಡಿ ಬಿಡುತ್ತದೆ ಆದ್ದರಿಂದ ಎಂದಿಗೂ ಹೆಚ್ಚು ವರ್ಣನೆ ಮಾಡಬೇಡಿ. ಯೋಗಿ ಜೀವನವು ಕರ್ಮ ಭೋಗವನ್ನು ಕರ್ಮ ಯೋಗದಲ್ಲಿ ಪರಿವರ್ತನೆ ಮಾಡುವಂತದ್ದಾಗಿದೆ. ಇವು ತನುವಿನ ಭಾಗ್ಯದ ಗುರುತುಗಳಾಗಿವೆ.
ಮನಸ್ಸಿನ ಭಾಗ್ಯ – ಮನಸ್ಸು ಸದಾ ಹರ್ಷಿತವಾಗಿರುತ್ತದೆ ಏಕೆಂದರೆ ಭಾಗ್ಯದ ಪ್ರಾಪ್ತಿಯ ಗುರುತೇ ಆಗಿದೆ – ಹರ್ಷಿತವಾಗಿರುವುದು. ಯಾರು ಸಂಪನ್ನವಾಗಿರುವರೋ ಅವರು ಸದಾ ಮನಸ್ಸಿನಿಂದ ಮುಗುಳ್ನಗುತ್ತಾ ಇರುತ್ತಾರೆ. ಮನದ ಭಾಗ್ಯವಂತರು ಸದಾ ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯನ್ನು ಹೊಂದಿರುತ್ತಾರೆ. ಭಾಗ್ಯವಿದಾತನನ್ನು ರಾಜಿ ಮಾಡಿಕೊಂಡಿರುವ ಕಾರಣ ಸರ್ವಪ್ರಾಪ್ತಿ ಸಂಪನ್ನ ಅನುಭವ ಮಾಡುವ ಕಾರಣ ಮನಸ್ಸಿನ ಸೆಳೆತ ಹಾಗೂ ಬಾಗುವಿಕೆಯು ವ್ಯಕ್ತಿ ಹಾಗೂ ವಸ್ತುವಿನ ಕಡೆ ಇರುವುದಿಲ್ಲ. ಇದಕ್ಕೇ ಸಾರ ರೂಪದಲ್ಲಿ “ಮನ್ಮನಾಭವ” ಎಂದು ಹೇಳುತ್ತೀರಿ. ಮನಸ್ಸನ್ನು ತಂದೆಯ ಕಡೆ ತೊಡಗಿಸುವುದರಲ್ಲಿ ಪರಿಶ್ರಮವಾಗುವುದಿಲ್ಲ ಆದರೆ ಸಹಜವಾಗಿ ಮನಸ್ಸು ತಂದೆಯ ಪ್ರೀತಿಯ ಸಂಸಾರದಲ್ಲಿರುತ್ತದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ – ಇದೇ ಅನುಭೂತಿಗೆ ಮನದ ಬಾಗಿಲು ಎಂದು ಹೇಳುತ್ತಾರೆ.
ಧನದ ಭಾಗ್ಯ – ಜ್ಞಾನ ಧನವಂತೂ ಇದ್ದೇ ಇದೆ ಆದರೆ ಸ್ಥೂಲ ಧನಕ್ಕೂ ಮಹತ್ವಿಕೆಯಿದೆ. ಧನದ ಭಾಗ್ಯದ ಅರ್ಥವು ಬ್ರಾಹ್ಮಣ ಜೀವನದಲ್ಲಿ ಲಕ್ಷಾಧೀಶ್ವರರು, ಕೋಟ್ಯಾಧೀಶ್ವರ ಆಗುವುದಲ್ಲ ಆದರೆ ಧನದ ಭಾಗ್ಯದ ಗುರುತೇನೆಂದರೆ ಸಂಗಮಯುಗದಲ್ಲಿ ತಾವು ಬ್ರಾಹ್ಮಣ ಆತ್ಮರಿಗೆ ತಿನ್ನಲು, ಕುಡಿಯಲು ಮತ್ತು ಆರಾಮವಾಗಿರಲು ಎಷ್ಟು ಅವಶ್ಯಕತೆಯಿದೆಯೋ ಅಷ್ಟು ಆರಾಮದಿಂದ ಸಿಗುವುದು ಮತ್ತು ಜೊತೆ ಜೊತೆಗೆ ಸೇವೆಗಾಗಿಯೂ ಧನ ಬೇಕು. ಆದ್ದರಿಂದ ಸೇವೆ ಮಾಡುವುದಕ್ಕೂ ಸಹ ಎಂದೂ ಸಮಯದಲ್ಲಿ ಕೊರತೆ ಅಥವಾ ಕಠಿಣ ಪರಿಸ್ಥಿತಿಯ ಅನುಭವ ಮಾಡುವುದಿಲ್ಲ. ಹೇಗಾದರೂ ಎಲ್ಲಿಂದಲಾದರೂ ಸೇವೆಯ ಸಮಯದಲ್ಲಿ ಭಾಗ್ಯವಿದಾತ ತಂದೆಯು ಯಾರನ್ನಾದರೂ ನಿಮಿತ್ತ ಮಾಡಿಯೇ ಮಾಡುತ್ತಾರೆ. ಧನದ ಭಾಗ್ಯವಂತರು ಎಂದಿಗೂ ಸಹ ತನ್ನ ‘ನಾಮ’, ‘ನಾಮದ ಅಥವಾ ಸ್ಥಾನದ’ ಇಚ್ಛೆಯ ಕಾರಣ ಸೇವೆ ಮಾಡುವುದಿಲ್ಲ. ಒಂದುವೇಳೆ ಹೆಸರು ಮತ್ತು ಸ್ಥಾನದ ಇಚ್ಛೆಯಿದ್ದರೆ ಅಂತಹ ಸಮಯದಲ್ಲಿ ಭಾಗ್ಯವಿದಾತನು ಸಹಯೋಗ ಕೊಡಿಸುವುದಿಲ್ಲ. ಅವಶ್ಯಕತೆ ಮತ್ತು ಇಚ್ಛೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಸತ್ಯವಾಗಿ ಅವಶ್ಯಕತೆಯಿದೆ ಮತ್ತು ಸತ್ಯ ಮನಸ್ಸಿದ್ದಾಗ ಯಾವುದೇ ಸೇವಾ ಕಾರ್ಯದಲ್ಲಿ ಕಾರ್ಯವಂತೂ ಸಫಲವಾಗಿಯೇ ಆಗುತ್ತದೆ ಆದರೆ ಭಂಡಾರದಲ್ಲಿ ಇನ್ನೂ ಸಂಪನ್ನವಾಗುತ್ತದೆ, ಉಳಿಯುತ್ತದೆ. ಆದ್ದರಿಂದ “ಶಿವನ ಭಂಡಾರ ಮತ್ತು ಭಂಡಾರಿ ಸದಾ ಭರ್ಪೂರ್” ಎಂದು ಗಾಯನವಿದೆ. ಅಂದಾಗ ಸತ್ಯ ಹೃದಯದವರ ಮತ್ತು ಸತ್ಯ ಸಾಹೇಬನಿಗೆ ರಾಜಿಯಾಗಿರುವವರ ಚಿಹ್ನೆಯಾಗಿದೆ – ಭಂಡಾರವೂ ಸಂಪನ್ನ, ಭಂಡಾರಿಯೂ ಸಂಪನ್ನ. ಇದು ಧನದ ಭಾಗ್ಯದ ಚಿಹ್ನೆಯಾಗಿದೆ. ವಿಸ್ತಾರವಂತೂ ಬಹಳಷ್ಟಿದೆ ಆದರೆ ಸಾರದಲ್ಲಿ ತಿಳಿಸುತ್ತಿದ್ದೇವೆ.
ನಾಲ್ಕನೆಯ ಮಾತು – ಜನರ ಭಾಗ್ಯ. ಜನ ಅರ್ಥಾತ್ ಬ್ರಾಹ್ಮಣ ಪರಿವಾರ ಹಾಗೂ ಲೌಕಿಕ ಪರಿವಾರ, ಲೌಕಿಕ ಸಂಬಂಧದಲ್ಲಿ ಬರುವಂತಹ ಆತ್ಮಗಳು ಹಾಗೂ ಅಲೌಕಿಕ ಸಂಬಂಧದಲ್ಲಿ ಬರುವಂತಹ ಆತ್ಮಗಳು. ಅಂದಾಗ ಜನರ ಮೂಲಕ ಭಾಗ್ಯವಂತ ಆತ್ಮಗಳ ಮೊದಲ ಚಿಹ್ನೆಯಾಗಿದೆ – ಜನರ ಭಾಗ್ಯವಂತ ಆತ್ಮನಿಗೆ ಜನರ ಮೂಲಕ ಸದಾ ಸ್ನೇಹ ಹಾಗೂ ಸಹಯೋಗದ ಪ್ರಾಪ್ತಿಯಾಗುತ್ತಾ ಇರುವುದು. ಕೊನೆಪಕ್ಷ 95% ಆತ್ಮಗಳಿಂದ ಪ್ರಾಪ್ತಿಯ ಅನುಭವವು ಅವಶ್ಯವಾಗಿ ಆಗುವುದು. ಮೊದಲೂ ಸಹ ತಿಳಿಸಿದ್ದೆವು – 5% ಆತ್ಮಗಳ ಲೆಕ್ಕಾಚಾರವೂ ಮುಗಿಸಬೇಕಾಗುತ್ತದೆ ಆದ್ದರಿಂದ ಅವರ ಮೂಲಕ ಕೆಲವೊಮ್ಮೆ ಸ್ನೇಹ ಸಿಗುತ್ತದೆ, ಕೆಲವೊಮ್ಮೆ ಪರೀಕ್ಷೆಗಳೂ ಬರುತ್ತವೆ ಆದರೆ 5%ಗಿಂತ ಹೆಚ್ಚಾಗಬಾರದು. ಇಂತಹ ಆತ್ಮಗಳೊಂದಿಗೂ ನಿಧಾನ-ನಿಧಾನವಾಗಿ ಶುಭ ಭಾವನೆ-ಶುಭ ಕಾಮನೆಯ ಮೂಲಕ ಆ ಲೆಕ್ಕಾಚಾರವನ್ನು ಮುಗಿಸಿಕೊಳ್ಳುತ್ತಾ ಇರಿ. ಯಾವಾಗ ಲೆಕ್ಕವು ಮುಗಿಯುವುದೋ ಆಗ ಲೆಕ್ಕಾಚಾರವು ಸಮಾಪ್ತಿ ಆಗುವುದು ನಂತರ ಆ ಲೆಕ್ಕಾಚಾರವೇ ಇರುವುದಿಲ್ಲ ಅಂದಾಗ ಭಾಗ್ಯಶಾಲಿ ಆತ್ಮನ ಚಿಹ್ನೆಯಾಗಿದೆ – ಜನರೊಂದಿಗೆ ಉಳಿದುಕೊಂಡಿರುವ ಲೆಕ್ಕಾಚಾರವನ್ನು ಸಹಜವಾಗಿ ತೀರಿಸುತ್ತಾ ಇರುವುದು ಮತ್ತು 95% ಆತ್ಮಗಳ ಮೂಲಕ ಸದಾ ಸ್ನೇಹ ಮತ್ತು ಸಹಯೋಗದ ಅನುಭೂತಿ ಮಾಡುವುದು. ಜನರ ಭಾಗ್ಯವಿರುವ ಆತ್ಮಗಳೇ ಜನರ ಸಂಬಂಧ-ಸಂಪರ್ಕದಲ್ಲಿ ಬರುತ್ತಾ ಸದಾ ಪ್ರಸನ್ನರಾಗಿರುತ್ತಾರೆ. ಪ್ರಶ್ನಚಿತ್ತರಲ್ಲ ಆದರೆ ಪ್ರಸನ್ನಚಿತ್ತರಾಗಿರುತ್ತಾರೆ. ಇವರು ಹೀಗೇಕೆ ಮಾಡುತ್ತಾರೆ, ಹೀಗೇಕೆ ಹೇಳುತ್ತಾರೆ – ಈ ಮಾತು ಈ ರೀತಿಯಲ್ಲ, ಈ ರೀತಿಯಿರಬೇಕು ಹೀಗೆ ಚಿತ್ತದಲ್ಲಿ ಈ ಪ್ರಶ್ನೆಗಳು ಉತ್ಪನ್ನವಾಗಿರುವವರಿಗೆ ಪ್ರಶ್ನಚಿತ್ತರೆಂದು ಹೇಳಲಾಗುತ್ತದೆ ಮತ್ತು ಪ್ರಶ್ನಚಿತ್ತರೆಂದೂ ಪ್ರಸನ್ನಚಿತ್ತರಾಗಿರಲು ಸಾಧ್ಯವಿಲ್ಲ. ಅವರ ಚಿತ್ತದಲ್ಲಿ ಸದಾ ‘ಕ್ಯು’ (ಏಕೆ) ಎಂಬ ‘ಕ್ಯೂ’ ನಿಂತಿರುತ್ತದೆ ಆದ್ದರಿಂದ ಆ ಕ್ಯೂ ಸಮಾಪ್ತಿ ಮಾಡುವುದರಲ್ಲಿಯೇ ಸಮಯವೂ ಹೊರಟು ಹೋಗುತ್ತದೆ ಮತ್ತು ಈ ಕ್ಯು ಈ ರೀತಿಯಾಗುತ್ತದೆ ತಾವು ಬಿಡಬೇಕೆಂದರೂ ಸಹ ಬಿಡಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಸಮಯವನ್ನು ಕೊಡಲೇಬೇಕಾಗುತ್ತದೆ ಏಕೆಂದರೆ ಈ ಕ್ಯು ನ ರಚಯಿತರು ತಾವಾಗಿದ್ದೀರಿ. ಯಾವಾಗ ರಚನೆಯನ್ನು ರಚಿಸಿದಿರೆಂದರೆ ಅದರ ಪಾಲನೆ ಮಾಡಲೇಬೇಕಾಗುವುದು. ಪಾಲನೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಲೆ ಎಷ್ಟಾದರೂ ದೂರ ಸರಿಯಿರಿ ಆದರೆ ಸಮಯ, ಶಕ್ತಿಗಳನ್ನು ಖರ್ಚು ಮಾಡಲೇಬೇಕಾಗುವುದು, ಆದ್ದರಿಂದ ಈ ವ್ಯರ್ಥ ರಚನೆಯನ್ನು ನಿಯಂತ್ರಣ ಮಾಡಿ. ಈ ಸಂತಾನ ನಿಯಂತ್ರಣ ಮಾಡಿ. ತಿಳಿಯಿತೆ – ಧೈರ್ಯವಿದೆಯೇ? ಹೇಗೆ ಮನುಷ್ಯರು ಇದು ಈಶ್ವರನ ಕೊಡುಗೆಯಾಗಿದೆ, ನಮ್ಮ ತಪ್ಪೇನಿದೆ ಎಂದು ಹೇಳಿ ಬಿಡುತ್ತಾರೆ ಹಾಗೆಯೇ ಬ್ರಾಹ್ಮಣರೂ ಸಹ ಇದು ಡ್ರಾಮಾದಲ್ಲಿದೆ, ಏನು ಮಾಡುವುದು ಎಂದು ಹೇಳಿ ಬಿಡುತ್ತೀರಿ ಆದರೆ ಡ್ರಾಮಾದ ಮಾ|| ರಚಯಿತ, ಮಾ|| ಜ್ಞಾನಪೂರ್ಣರಾಗಿ, ಪ್ರತೀ ಕರ್ಮವನ್ನು ಶ್ರೇಷ್ಠ ಮಾಡಿಕೊಳ್ಳುತ್ತಾ ಹೋಗಿ. ಒಳ್ಳೆಯದು.
ಟೀಚರ್ಸ್ ಕೇಳಿದಿರಾ! ಸತ್ಯ ಸಾಹೇಬನು ನನ್ನ ಮೇಲೆ ಎಷ್ಟು ರಾಜಿಯಾಗಿದ್ದಾರೆ, ಇದರ ರಹಸ್ಯವನ್ನು ಕೇಳಿದಿರಲ್ಲವೆ. ರಹಸ್ಯವನ್ನು ಕೇಳುವುದರಿಂದ ಎಲ್ಲಾ ಟೀಚರ್ಸ್ ರಹಸ್ಯಯುಕ್ತರಾದಿರಿ ಮತ್ತು ಮನಸ್ಸಿನಲ್ಲಿಯೂ ಬರುತ್ತದೆ – ಈ ಭಾಗ್ಯವು ನನ್ನಲ್ಲಿ ಕಡಿಮೆಯಿದೆಯೇ? ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಜನರ ಪರಿಸ್ಥಿತಿಯಲ್ಲಿ – ಇಂತಹ ಜೀವನದ ಅನುಭವವಂತೂ ಮಾಡುತ್ತಿಲ್ಲ ತಾನೇ. ವಿಶೇಷ ನಿಮಿತ್ತ ಶಿಕ್ಷಕಿಯರ ಪ್ರತಿ ಒಂದೇ ಸ್ಲೋಗನ್ ತಿಳಿಸಿದ್ದೆವು ಆದರೆ ಇದು ಎಲ್ಲರ ಪ್ರತಿಯೂ ಆಗಿದೆ. ಪ್ರತಿಯೊಂದು ಮಾತಿನಲ್ಲಿ ತಂದೆಯ ಶ್ರೀಮತದ ಪ್ರಮಾಣ “ಜೀ ಹಜೂರ್, ಜೀ ಹಜೂರ್” (ಆಯಿತು ಪ್ರಭು) ಎನ್ನುತ್ತಾ ಇರಿ. ಮಕ್ಕಳು “ಜೀ ಹಜೂರ್” ಎಂದರೆ ಸಾಕು. ತಂದೆಯು ಮಕ್ಕಳ ಮುಂದೆ “ಹಾಜಿರ್ ಹಜೂರ್” (ಪ್ರಭು ಪ್ರತ್ಯಕ್ಷವಾಗುವರು) ಆಗುವರು. ಯಾವಾಗ ಪ್ರಭು ಪ್ರತ್ಯಕ್ಷವಾಗಿ ಬಿಟ್ಟರೆಂದರೆ ಯಾವುದೇ ಮಾತಿನ ಕೊರತೆಯಿರುವುದಿಲ್ಲ, ಸದಾ ಸಂಪನ್ನರಾಗಿ ಬಿಡುತ್ತೀರಿ. ದಾತ ಮತ್ತು ಭಾಗ್ಯವಿದಾತ ಎರಡರ ಪ್ರಾಪ್ತಿಗಳ ಭಾಗ್ಯದ ನಕ್ಷತ್ರವು ಮಸ್ತಕದ ಮಧ್ಯದಲ್ಲಿ ಹೊಳೆಯ ತೊಡಗುವುದು. ಶಿಕ್ಷಕಿಯರಿಗಂತೂ ಡ್ರಾಮಾನುಸಾರ ಬಹಳ ಭಾಗ್ಯವು ಸಿಕ್ಕಿದೆ. ಇಡೀ ದಿನ ತಂದೆ ಮತ್ತು ಭಾಗ್ಯವನ್ನು ಬಿಟ್ಟರೆ ಅನ್ಯ ಕೆಲಸವಾದರೂ ಏನು! ನಿಮ್ಮ ಉದ್ಯೋಗವೇ ಇದಾಗಿದೆ – ಪ್ರವೃತ್ತಿ ಮಾರ್ಗದವರಾದರೆ ಎಷ್ಟೊಂದು ನಿಭಾಯಿಸಬೇಕಾಗುತ್ತದೆ. ತಮ್ಮೆಲ್ಲರಿಗಂತೂ ಒಂದೇ ಕೆಲಸವಿದೆ, ಕೆಲವು ಮಾತುಗಳಿಂದ ಸ್ವತಂತ್ರ ಪಕ್ಷಿಗಳಾಗಿದ್ದೀರಿ, ತಮ್ಮ ಭಾಗ್ಯವನ್ನು ತಿಳಿದುಕೊಂಡಿದ್ದೀರಾ? ಯಾವುದೇ ಚಿನ್ನದ ಪಂಜರ, ವಜ್ರದ ಪಂಜರವಂತೂ ರೂಪಿಸಿಕೊಳ್ಳುವುದಿಲ್ಲ ತಾನೆ. ತಾವೇ ರೂಪಿಸಿಕೊಳ್ಳುತ್ತಾರೆ, ತಾವೇ ಅದರಲ್ಲಿ ಸಿಲುಕುತ್ತಾರೆ. ತಂದೆಯಂತೂ ಸ್ವತಂತ್ರ ಪಕ್ಷಿಗಳನ್ನಾಗಿ ಮಾಡಿದರು, ಹಾರುವ ಪಕ್ಷಿಗಳನ್ನಾಗಿ ಮಾಡಿದರು. ಬಹಳ-ಬಹಳ-ಬಹಳ ಅದೃಷ್ಟವಂತರು. ತಿಳಿಯಿತೇ? ಪ್ರತಿಯೊಬ್ಬರಿಗೂ ವಿಶೇಷತೆಯು ಅವಶ್ಯವಾಗಿ ಸಿಕ್ಕಿದೆ. ಪ್ರವೃತ್ತಿ ಮಾರ್ಗದ ವಿಶೇಷತೆಯು ತಮ್ಮದೇ ಆಗಿದೆ, ಟೀಚರ್ಸ್ನ ವಿಶೇಷತೆಯೇ ತಮ್ಮದಾಗಿದೆ, ಗೀತಾ ಪಾಠಶಾಲೆಯ ವಿಶೇಷತೆಯೇ ತಮ್ಮದು ಭಿನ್ನ-ಭಿನ್ನ ವಿಶೇಷತೆಗಳಿಂದ ಎಲ್ಲರೂ ವಿಶೇಷ ಆತ್ಮಗಳಾಗಿದ್ದೀರಿ ಆದರೆ ಸೇವಾಕೇಂದ್ರದಲ್ಲಿ ಇರುವಂತಹ ನಿಮಿತ್ತ ಟೀಚರ್ಸ್ಗೆ ಬಹಳ ಅವಕಾಶವಿದೆ. ಒಳ್ಳೆಯದು.
ಸದಾ ಸರ್ವ ಪ್ರಕಾರದ ಭಾಗ್ಯವನ್ನು ಅನುಭವ ಮಾಡುವಂತಹ ಅನುಭವೀ ಆತ್ಮಗಳಿಗೆ, ಸದಾ ಪ್ರತೀ ಹೆಜ್ಜೆಯಲ್ಲಿ “ಜೀ ಹಜೂರ್” ಮಾಡುವಂತಹ ತಂದೆಯ ಸಹಯೋಗದ ಅಧಿಕಾರಿ ಶ್ರೇಷ್ಠ ಆತ್ಮಗಳಿಗೆ, ಸದಾ ಪ್ರಶ್ನಚಿತ್ತಕ್ಕೆ ಬದಲಾಗಿ ಪ್ರಸನ್ನ ಚಿತ್ತರಾಗಿರುವಂತಹ – ಇಂತಹ ಪ್ರಶಂಸೆಗೆ ಯೋಗ್ಯ, ಯೋಗಿ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಂಜಾಬ್, ಹರಿಯಾಣ, ಹಿಮಾಚಲ್ ಗ್ರೂಪ್:
ಎಲ್ಲರೂ ತಮ್ಮನ್ನು ಮಹಾವೀರ ಮತ್ತು ಮಹಾವೀರಿಣಿಯರೆಂದು ತಿಳಿಯುವಿರಾ? ಮಹಾವೀರರಂತು ಆಗಿದ್ದೀರಿ ಆದರೆ ಸದಾಕಾಲವೂ ಮಹಾವೀರರಾಗಿ ಇರುತ್ತೀರಾ? ಅಥವಾ ಕೆಲವೊಮ್ಮೆ ಮಹಾವೀರರು, ಕೆಲವೊಮ್ಮೆ ಸ್ವಲ್ಪ ಬಲಹೀನರಾಗುತ್ತೀರಾ? ಸದಾಕಾಲವೂ ಮಹಾವೀರರೆಂದರೆ ಸದಾ ಲೈಟ್ಹೌಸ್ ಮತ್ತು ಮೈಟ್ಹೌಸ್ ಆಗಿರುವುದು. ಜ್ಞಾನವು ಲೈಟ್ ಆಗಿದೆ ಮತ್ತು ಯೋಗವು ಮೈಟ್ ಆಗಿದೆ ಅಂದಾಗ ಮಹಾವೀರರೆಂದರೆ ಜ್ಞಾನಿ ಆತ್ಮನೂ ಆಗಿರುವರು ಮತ್ತು ಯೋಗಿ ಆತ್ಮನೂ ಆಗಿರುವರು. ಜ್ಞಾನ ಮತ್ತು ಯೋಗ – ಇವೆರಡೂ ಶಕ್ತಿಗಳು ಅಂದರೆ ಲೈಟ್ ಹಾಗೂ ಮೈಟ್ನಿಂದ ಸಂಪನ್ನವಾಗಿರುವುದು, ಇಂತಹವರಿಗೇ `ಮಹಾವೀರ’ನೆಂದು ಹೇಳಲಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಜ್ಞಾನದ ಲೈಟ್ನ ಕೊರತೆಯಿರಬಾರದು ಮತ್ತು ಮೈಟ್ ಅಂದರೆ ಯೋಗದ ಕೊರತೆಯೂ ಆಗಬಾರದು. ಇದರಲ್ಲಿ ಏನಾದರೂ ಒಂದು ಕೊರತೆಯಾದರೂ ಪರಿಸ್ಥಿತಿಯ ಸಮಯದಲ್ಲಿ ಸೆಕೆಂಡಿನಲ್ಲಿ ಪಾರಾಗಲು ಸಾಧ್ಯವಿಲ್ಲ, ಸಮಯವು ಹೊರಟು ಹೋಗುತ್ತದೆ. ಇದರಿಂದ ಪಾಸ್ ಆಗುತ್ತೀರಿ ಆದರೆ ಸಮಯದಲ್ಲಿ ಪಾಸ್ ಆಗದಿದ್ದರೆ ಅನುತ್ತೀರ್ಣರೇ ಆಗುವಿರಿ, ನಂತರ ಇನ್ನೊಂದು ವರ್ಷ ಓದಬೇಕಾಗುತ್ತದೆ, ವರ್ಷದ ನಂತರ ಉತ್ತೀರ್ಣರಾಗುತ್ತೀರಿ ಅಂದರೆ ಸಮಯವು ಹೋಯಿತಲ್ಲವೆ! ಹಾಗೆಯೇ ಯಾರು ಜ್ಞಾನಿ ಮತ್ತು ಯೋಗಿ ಆತ್ಮರಿದ್ದಾರೆಯೋ ಅವರು ಇವೆರಡರ (ಲೈಟ್ ಮತ್ತು ಮೈಟ್) ಸ್ವರೂಪರಾಗಿಲ್ಲ, ಅದರಿಂದಲೂ ಪರಿಸ್ಥಿತಿಗಳಲ್ಲಿ ಉತ್ತೀರ್ಣರಾಗುವುದರಲ್ಲಿ ಸಮಯವನ್ನು ತೆಗೆದುಕೊಳ್ಳುತ್ತದೆ. ಒಂದುವೇಳೆ ಸಮಯದಲ್ಲಿ ಪಾಸ್ ಆಗದಿರುವ ಸಂಸ್ಕಾರವಾಯಿತೆಂದರೆ, ಅಂತಿಮ ಪರೀಕ್ಷೆಯಲ್ಲಿಯೂ ಅದೇ ಸಂಸ್ಕಾರವು ಫುಲ್ಪಾಸ್ ಆಗಲು ಬಿಡುವುದಿಲ್ಲ. ಅಂದಾಗ ಪಾಸ್ ಆಗುವವರಂತು ಇದ್ದೀರಿ ಆದರೆ ಸಮಯದಲ್ಲಿ ಪಾಸ್ ಆಗುವವರಲ್ಲ. ಯಾರು ಸದಾ ಸಮಯದಲ್ಲಿ ಫುಲ್ಪಾಸ್ ಆಗುವರು, ಅವರಿಗೆ ಪಾಸ್-ವಿತ್-ಆನರ್ ಎಂದು ಹೇಳಲಾಗುತ್ತದೆ. ಅಂದರೆ ಧರ್ಮರಾಜನೂ ಸಹ ಅವರಿಗೆ ಗೌರವ ಕೊಡುವರು. ಧರ್ಮರಾಜ ಪುರಿಯಲ್ಲಿಯೂ ಶಿಕ್ಷೆಯಾಗುವುದಿಲ್ಲ, ಗೌರವ ಸಿಗುತ್ತದೆ, ಇವರು ಪಾಸ್-ವಿತ್-ಆನರ್ ಎಂಬ ಗಾಯನವೂ ಆಗುತ್ತದೆ.
ಅಂದಮೇಲೆ ಪಾಸ್-ವಿತ್-ಆನರ್ ಆಗುವುದಕ್ಕಾಗಿ ವಿಶೇಷವಾಗಿ ತಮ್ಮನ್ನು ಯಾವುದೇ ಮಾತಿನಲ್ಲಿ, ಯಾವುದೇ ಸಂಸ್ಕಾರದಲ್ಲಾದರೂ, ಸ್ವಭಾವ, ಗುಣಗಳಲ್ಲಿಯೂ, ಶಕ್ತಿಗಳಲ್ಲಿಯೂ ಕೊರತೆಯಾಗಿ ಇಟ್ಟುಕೊಳ್ಳಬಾರದು. ಎಲ್ಲಾ ಮಾತುಗಳಲ್ಲಿ ಸಂಪೂರ್ಣರಾಗಬೇಕು ಅರ್ಥಾತ್ ಪಾಸ್-ವಿತ್-ಆನರ್ ಆಗುವುದಾಗಿದೆ. ಹಾಗಾದರೆ ಎಲ್ಲರೂ ಈ ರೀತಿ ಆಗಿದ್ದೀರಾ ಅಥವಾ ಆಗುತ್ತಿದ್ದೀರಾ? (ಆಗುತ್ತಿದ್ದೇವೆ) ಆದ್ದರಿಂದಲೇ ವಿನಾಶವು ನಿಂತಿದೆ. ತಾವೇ ತಡೆದಿಟ್ಟಿದ್ದೀರಿ. ವಿಶ್ವದ ವಿನಾಶ ಅರ್ಥಾತ್ ಪರಿವರ್ತನೆ, ಇದರಲ್ಲಿ ಮೊದಲು ಬ್ರಾಹ್ಮಣರ ಕೊರತೆಗಳ ವಿನಾಶವಾಗಬೇಕು. ಒಂದುವೇಳೆ ಬ್ರಾಹ್ಮಣರಲ್ಲಿನ ಕೊರತೆಗಳು ವಿನಾಶವಾಗದಿದ್ದರೆ ವಿಶ್ವದ ವಿನಾಶ ಅಂದರೆ ಪರಿವರ್ತನೆಯು ಹೇಗಾಗುತ್ತದೆ! ಅಂದರೆ ಪರಿವರ್ತನೆಯ ಆಧಾರಮೂರ್ತಿಗಳು ತಾವು ಬ್ರಾಹ್ಮಣರಾಗಿದ್ದೀರಿ.
ಪಂಜಾಬ್, ಹರಿಯಾಣ, ಹಿಮಾಚಲ್ ಪ್ರದೇಶದವರಂತು ಮೊದಲೇ ತಯಾರಾಗಿರಬೇಕು. ತಾವು ಅಂತ್ಯವನ್ನು ತರುವವರು ತಯಾರಾಗಿಲ್ಲ, ಆದ್ದರಿಂದ ಭಯೋತ್ಪಾದಕರು ತಯಾರಾಗಿದ್ದಾರೆ. ಹಾಗಾದರೆ ಎಲ್ಲರೂ ಮೊದಲ ನಂಬರ್ ತೆಗೆದುಕೊಳ್ಳುವವರೇ ಅಥವಾ ಏನು ಸಿಗುತ್ತದೆಯೋ ಅದರಲ್ಲಿಯೇ ಖುಷಿಯಾಗಿ ಇರುವಿರಾ? ಅನೇಕರಿಗಿಂತಲೂ ಚೆನ್ನಾಗಿಯೇ ಇದೆ ಎಂದು ಯೋಚಿಸುತ್ತಿರಲ್ಲವೇ? ಬಹಳ ಚೆನ್ನಾಗಿಯೇ ಇದೆ ಆದರೆ ಒಳ್ಳೆಯದಕ್ಕಿಂತಲೂ ಒಳ್ಳೆಯದಾಗಿ ಇರಬೇಕು. ಕೋಟಿಯಲ್ಲಿ ಕೆಲವರಾಗಿ ಬಿಟ್ಟಿರಿ – ಇದೇನೂ ದೊಡ್ಡ ಮಾತಲ್ಲ ಆದರೆ ಕೋಟಿಯಲ್ಲಿಯೂ ಕೆಲವರಾಗಿರಬೇಕು ಆದ್ದರಿಂದ ಸದಾ ಎವರೆಡಿ ಆಗಿರಬೇಕು. ಅಂತ್ಯದಲ್ಲಿ ರೆಡಿ ಆಗುವುದಲ್ಲ, ಈಗಲೇ ಎವರೆಡಿ ಅಂದರೆ ಸದಾ ರೆಡಿಯಾಗಿ ಇರುವುದು. ಒಂದುವೇಳೆ ರೆಡಿ ಆಗುತ್ತಿದ್ದೇವೆ ಎಂದು ಹೇಳುತ್ತೀರೆಂದರೆ ಪುರುಷಾರ್ಥವು ತೀವ್ರಗೊಳ್ಳುವುದಿಲ್ಲ.
ಬಾಪ್ದಾದಾರವರು ಪಂಜಾಬ್ ಜೋನಿನವರನ್ನು ಸದಾ ಮುಂದಿಡುತ್ತಾರೆ ಆದ್ದರಿಂದ ಎವರೆಡಿ ಆಗಿರಬೇಕು. ತಂದೆಯ ದೃಷ್ಟಿಯೂ ಸಹ ಮೊದಲು ಪಂಜಾಬ್ನವರ ಮೇಲೆ ಹೋಯಿತಲ್ಲವೆ. ಹಾಗಾದರೆ ತಂದೆಯ ಮೊದಲ ದೃಷ್ಟಿಯು ತಮ್ಮ ಮೇಲೆ ಇದೆಯೆಂದರೆ, ಬರಬೇಕಾಗಿರುವುದೂ ಸಹ ಮೊದಲ ನಂಬರಿನಲ್ಲಿ. ಆಧಾರ ಮೂರ್ತಿ ಆಗಿದ್ದೀರಿ ಅಂದಾಗ ಆಧಾರವು (ಫೌಂಡೇಷನ್) ಸದಾ ಪರಿಪಕ್ವವಾಗಿ ಇರುತ್ತದೆ, ಒಂದುವೇಳೆ ಕಚ್ಚಾ ಆಯಿತೆಂದರೆ ಇಡೀ ಕಟ್ಟಡವೇ ಕಚ್ಚಾ ಆಗಿ ಬಿಡುತ್ತದೆ. ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಪಾಸ್-ವಿತ್-ಆನರ್ ಆಗುವವರು – ಈ ವರದಾನವನ್ನೇ ಸದಾ ನೆನಪಿಟ್ಟುಕೊಳ್ಳಿರಿ. ಇದರ ವಿಧಿಯೇನೆಂದರೆ ಎವರೆಡಿ ಆಗಿರುವುದು. ಒಳ್ಳೆಯದು.
ಬಹಳ ದೊಡ್ಡ ಜೋನಂತು ಮಧುಬನವೇ ಆಗಿದೆ. ಎಲ್ಲಾ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರ ಸತ್ಯ ಮನೆಯು ಮಧುಬನವೇ ಆಗಿದೆಯಲ್ಲವೆ. ಆತ್ಮರ ಮನೆಯು ಪರಮಧಾಮ ಆಗಿದೆ ಆದರೆ ಬ್ರಾಹ್ಮಣರ ಮನೆಯು ಮಧುಬನ ಆಗಿದೆ ಅಂದಮೇಲೆ ಅಮೃತಸರ ಅಥವಾ ಲುಧಿಯಾನದವರಲ್ಲ, ಪಂಜಾಬ್ ಅಥವಾ ಹರಿಯಾಣದವರಲ್ಲ ಆದರೆ ತಮ್ಮ ಸ್ಥಿರವಾದ ವಿಳಾಸ ಮಧುಬನವಾಗಿದೆ. ಬಾಕಿ ಎಲ್ಲವೂ ಸೇವಾ ಸ್ಥಾನಗಳಾಗಿವೆ, ಭಲೆ ಪ್ರವೃತ್ತಿಯಲ್ಲಿಯೇ ಇರಬಹುದು, ಅದೂ ಸೇವಾ ಸ್ಥಾನವಾಗಿದೆ ಮನೆಯಲ್ಲ. ಮಧುರ ಮನೆಯು ಮಧುಬನವಾಗಿದೆ – ಈ ರೀತಿ ತಿಳಿಯುವಿರಲ್ಲವೆ! ಅಥವಾ ಆ ಮನೆಯೇ ನೆನಪಿಗೆ ಬರುತ್ತದೆಯೇ? ಒಳ್ಳೆಯದು.
ವರದಾನ:-
ಯಾರು ಒಂದೇ ರೀತಿ ಮಣಿಯಾಗಿದ್ದಾರೆ, ಒಬ್ಬರದೇ ಲಗನ್ನಿನಲ್ಲಿ ಹಾಗೂ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿ, ಒಬ್ಬರ ಮತದಂತೆ ನಡೆಯುವವರಾಗಿ ಇದ್ದಾರೆ, ಪರಸ್ಪರರಲ್ಲಿ ಸಂಕಲ್ಪಗಳಲ್ಲಿಯೂ ಏಕಮತವಿದೆಯೋ ಅವರೇ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಆದರೆ ಏಕಮತದ ವಾತಾವರಣವು ಹಾಗಾಗುತ್ತದೆ ಯಾವಾಗ ಸಮಾವೇಶ ಮಾಡಿಕೊಳ್ಳುವ ಶಕ್ತಿಯಿರುತ್ತದೆ. ಒಂದುವೇಳೆ ಯಾವುದೇ ಮಾತಿನಲ್ಲಿ ಭಿನ್ನತೆಯುಂಟಾಗುತ್ತದೆ ಎಂದರೆ, ಆ ಭಿನ್ನತೆಯನ್ನು ಸಮಾವೇಶ ಮಾಡಿಕೊಂಡಾಗ ಪರಸ್ಪರರಲ್ಲಿ ಏಕತೆಯಿಂದ ಸಮೀಪಕ್ಕೆ ಬರುವಿರಿ ಹಾಗೂ ಎಲ್ಲರ ಮುಂದೆ ಉದಾಹರಣಾ ಸ್ವರೂಪರಾಗುವಿರಿ.
ಸ್ಲೋಗನ್:-
➤ Email me Murli: Receive Daily Murli on your email. Subscribe!