07 May 2022 KANNADA Murli Today | Brahma Kumaris

Read and Listen today’s Gyan Murli in Kannada

6 May 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ತಂದೆಯ ಸಮಾನ ದೇಹೀ-ಅಭಿಮಾನಿಯಾಗಿ, ತಂದೆಗೆ ಇದೇ ಆಸೆ ಇದೆ- ನನ್ನ ಮಕ್ಕಳು ನನ್ನ ಸಮಾನರಾಗಿ ನನ್ನ ಜೊತೆ ಮನೆಗೆ ನಡೆಯಲಿ”

ಪ್ರಶ್ನೆ:: -

ನೀವು ಮಕ್ಕಳು ಯಾವ ಮಾತಿನ ವಿಚಿತ್ರವನ್ನು ನೋಡುತ್ತಾ ತಂದೆಗೆ ಅಭಿನಂದನೆಗಳನ್ನು ಹೇಳುತ್ತೀರಿ?

ಉತ್ತರ:-

ನೀವು ಮಕ್ಕಳು ಈ ಅದ್ಭುತವನ್ನು ನೋಡುತ್ತಾ ಹೇಗೆ ಬಾಬಾ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ ಇದ್ದಾರೆ. ತನ್ನ ಮಕ್ಕಳಿಗೆ ರಾಜಯೋಗವನ್ನು ಕಲಿಸಿ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ನೀವು ಮಕ್ಕಳು ಒಳಗಿಂದೊಳಗೇ ಇಂತಹ ಮಧುರ ಬಾಬಾನಿಗೆ ಅಭಿನಂದನೆಗಳನ್ನು ಹೇಳುತ್ತೀರಿ, ಅದಕ್ಕೆ ಬಾಬಾ ಹೇಳುತ್ತಾರೆ ಈ ಅಭಿನಂದನೆ (ಥ್ಯಾಂಕ್ಸ್) ಎಂಬ ಶಬ್ದವೂ ಸಹ ಭಕ್ತಿಮಾರ್ಗದ್ದಾಗಿದೆ. ಮಕ್ಕಳಿಗಂತೂ ಅಧಿಕಾರವಿರುತ್ತದೆ, ಇದರಲ್ಲಿ ಥ್ಯಾಂಕ್ಸ್ ಹೇಳುವ ಮಾತಿಲ್ಲ. ಡ್ರಾಮಾನುಸಾರವಾಗಿ ತಂದೆಯೂ ಆಸ್ತಿಯನ್ನು ಕೊಡಲೇ ಬೇಕಾಗಿದೆಯಲ್ಲವೇ!

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಯಾರ ಜೊತೆಗಾರ ಭಗವಂತನಾಗಿದ್ದಾರೆ ಅವರನ್ನು ಬಿರುಗಾಳಿ ಏನೂ ಮಾಡಲು ಸಾಧ್ಯ..

ಓಂ ಶಾಂತಿ. ಈ ಗೀತೆಯು ಮಕ್ಕಳಿಗೋಸ್ಕರವಿದೆ. ಯಾರ ಜೊತೆಗಾರ ಸರ್ವಶಕ್ತಿವಂತ ಪರಮಪಿತ ಪರಮಾತ್ಮನಾಗಿದ್ದಾರೆ ಅವರಿಗೆ ಮಾಯೆಯ ಬಿರುಗಾಳಿ ಏನು ಮಾಡಲು ಸಾಧ್ಯ? ಆ ಬಿರುಗಾಳಿಯಿಂದ ಏನೂ ಆಗುವುದಿಲ್ಲ. ಮಾಯೆಯ ಬಿರುಗಾಳಿಯು ಆತ್ಮ ಜ್ಯೋತಿಯನ್ನು ನಂದಿಸಿ ಬಿಡುತ್ತದೆ. ಈಗ ಮತ್ತೆ ಆತ್ಮ ಜ್ಯೋತಿಯನ್ನು ಬೆಳಗಿಸುವಂತಹ ಜೊತೆಗಾರ ಸಿಕ್ಕಿದ್ದಾರೆ ಅಂದಮೆಲೆ ಮಾಯೆ ಏನು ಮಾಡುತ್ತದೆ! ಹೆಸರನ್ನು ಮಹಾವೀರನೆಂದು ಇಡಲಾಗಿದೆ ಅಂದರೆ ಮಾಯಾ ರಾವಣನ ಮೇಲೆ ವಿಜಯವನ್ನು ಪಡೆಯುವವರು. ಹೇಗೆ ವಿಜಯವನ್ನು ಪಡೆಯಬೇಕು? ಅದಕ್ಕೋಸ್ಕರವೇ ಮಕ್ಕಳು ಈಗ ತಂದೆಯ ಮುಂದೆ ಕುಳಿತಿದ್ದಾರೆ. ಬಾಪ್ದಾದಾ ಕುಳಿತಿದ್ದಾರೆ. ದಾದಾ ಮತ್ತು ತಂದೆಯನ್ನು ಪಿತ ಮತ್ತು ಪಿತಾಮಹ ಎಂದು ಹೇಳುತ್ತಾರೆ ಎಂದಾಗ ಬಾಪ್ದಾದಾ ಆದರು. ಈಗ ಆತ್ಮಿಕ ತಂದೆಯು ನಮ್ಮ ಸಮ್ಮುಖದಲ್ಲಿ ಕುಳಿತಿದ್ದಾರೆ ಎನ್ನುವುದನ್ನು ನಾವು ಮಕ್ಕಳೇ ತಿಳಿದುಕೊಂಡಿದ್ದೇವೆ. ಆತ್ಮೀಯ ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಆತ್ಮವೇ ಕರ್ಮೇಂದ್ರಿಯಗಳ ಮುಖಾಂತರ ಕೇಳುತ್ತದೆ, ಮಾತನಾಡುತ್ತದೆ. ನೀವು ಮಕ್ಕಳಿಗೆ ದೇಹದ ಅಭಿಮಾನದಲ್ಲಿ ಬರುವುದು ಅಭ್ಯಾಸವಾಗಿ ಬಿಟ್ಟಿದೆ ಏಕೆಂದರೆ ಅರ್ಧಕಲ್ಪ ದೇಹಾಭಿಮಾನದಲ್ಲಿ ಇರುತ್ತೀರಿ. ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪಡೆದುಕೊಳ್ಳುತ್ತೀರಿ. ಆ ಕಾರಣ ಶರೀರಕ್ಕೆ ಹೆಸರನ್ನು ಇಡಲಾಗುತ್ತದೆ. ಕೆಲವರು ಹೇಳುತ್ತಾರೆ ನಾನು ಪರಮಾನಂದ ಆಗಿದ್ದೇನೆ. ಕೆಲವರು ಹೇಳುತ್ತಾರೆ ನಾನು ಇಂತಹವನಾಗಿದ್ದೇನೆ, ನಾನು… ಇದಕ್ಕೆ ಬಾಬಾ ಹೇಳುತ್ತಾರೆ ನಾನು ಸದಾ ದೇಹೀ-ಅಭಿಮಾನಿಯಾಗಿದ್ದೇನೆ. ನನಗೆ ದೇಹವೇ ಸಿಗುವುದಿಲ್ಲ ಆದ್ದರಿಂದ ನನಗೆ ಎಂದೂ ದೇಹಾಭಿಮಾನ ಇರುವುದಿಲ್ಲ. ಈ ಶರೀರವಂತೂ ದಾದಾರವರದ್ದಾಗಿದೆ. ನಾನು ಸದಾ ದೇಹೀ-ಅಭಿಮಾನಿಯಾಗಿದ್ದೇನೆ. ನೀವು ಮಕ್ಕಳನ್ನೂ ಸಹ ತನ್ನ ಸಮಾನರನ್ನಾಗಿ ಮಾಡಲು ಇಚ್ಚಿಸುತ್ತೇನೆ ಏಕೆಂದರೆ ಈಗ ನೀವು ನನ್ನ ಜೊತೆ ನನ್ನ ಹತ್ತಿರ ಬರಬೇಕಾಗಿದೆ. ಈ ದೇಹಾಭಿಮಾನವನ್ನು ಬಿಡಬೇಕಾಗಿದೆ. ಇದರಲ್ಲಿ ಸಮಯ ಇಡಿಸುತ್ತದೆ ಏಕೆಂದರೆ ಬಹಳ ಸಮಯದಿಂದ ದೇಹಾಭಿಮಾನದಲ್ಲಿ ಇರುವುದು ಅಭ್ಯಾಸವಾಗಿ ಬಿಟ್ಟಿದೆ. ಈಗ ತಂದೆ ಹೇಳುತ್ತಾರೆ ಮಕ್ಕಳೇ ಈ ಶರೀರವನ್ನೂ ಸಹ ತ್ಯಜಿಸಿ ನನ್ನ ಸಮಾನರಾಗಿ ಏಕೆಂದರೆ ನೀವು ನನ್ನ ಅತಿಥಿ ಆಗಬೇಕಾಗಿದೆ. ನನ್ನ ಹತ್ತಿರ ಹಿಂತಿರುಗಿ ಬರಬೇಕಾಗಿದೆ ಆದ್ದರಿಂದ ಹೇಳುತ್ತಿದ್ದೇನೆ ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ. ನಾನು ಆತ್ಮಗಳೊಂದಿಗೇ ಮಾತನಾಡುತ್ತೇನೆ. ನೀವು ತಂದೆಯನ್ನು ನೆನಪು ಮಾಡುತ್ತೀರೆಂದರೆ ನಿಮ್ಮ ಈ ದೇಹಾಭಿಮಾನದ ದೃಷ್ಟಿ ಸಮಾಪ್ತಿಯಾಗುವುದು ಆದರೆ ಇದರಲ್ಲಿಯೇ ಪರಿಶ್ರಮವಿದೆ. ನಾನು ನೀವು ಆತ್ಮರ ಸೇವೆಯನ್ನು ಮಾಡುತ್ತಿದ್ದೇನೆ. ಆತ್ಮವು ಕರ್ಮೇಂದ್ರಿಯಗಳ ಮುಖಾಂತರ ಕೇಳುತ್ತದೆ. ನಾನು ಆತ್ಮ (ಬ್ರಹ್ಮಾ ತಂದೆ) ನಿಮಗೆ ಶಿವಬಾಬಾನ ಸಂದೇಶವನ್ನು ಕೊಡುತ್ತಿದ್ದೇನೆ. ಆತ್ಮವೂ ತನ್ನನ್ನು ಸ್ತ್ರೀ ಅಥವಾ ಪುರುಷ ಎಂದು ಹೇಳುವುದಿಲ್ಲ. ಈ ಸ್ತ್ರೀ ಪುರುಷ ಎಂಬ ಹೆಸರು ಶರೀರದಿಂದ ಆಗಿದೆ. ತಂದೆಯಂತೂ ಪರಮಾತ್ಮನಾಗಿದ್ದಾರೆ, ಅಂತಹ ತಂದೆಯು ಹೇಳುತ್ತಾರೆ – ಹೇ ಆತ್ಮರೇ! ಕೇಳುತ್ತಿದ್ದೀರಾ? ಆತ್ಮವೂ ಹೇಳುತ್ತದೆ – ಹಾ! ಕೇಳುತ್ತಿದ್ದೇನೆ. ನೀವೀಗ ತಮ್ಮ ತಂದೆಯನ್ನು ಅರಿತುಕೊಂಡಿದ್ದೀರಿ. ಆ ತಂದೆಯೂ ಎಲ್ಲಾ ಆತ್ಮಗಳ ತಂದೆ ಆಗಿದ್ದಾರೆ. ಹೇಗೆ ನೀವು ಆತ್ಮರಾಗಿದ್ದೀರಿ, ಅದೇರೀತಿ ನಾನು ನಿಮ್ಮ ತಂದೆಯಾಗಿದ್ದೇನೆ, ನನಗೆ ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ, ನನಗೆ ನನ್ನದೇ ಆದಂತಹ ಶರೀರವಿಲ್ಲ ಆದರೆ ಬ್ರಹ್ಮ, ವಿಷ್ಣು, ಶಂಕರನಿಗೆ ತಮ್ಮ ಆಕಾರವಿದೆ. ಆತ್ಮನಿಗೆ ಆತ್ಮ ಎಂದೇ ಹೇಳುತ್ತಾರೆ. ನನ್ನ ಹೆಸರು ಶಿವ ಆಗಿದೆ. ಶರೀರದ ಮೇಲಂತೂ ಅನೇಕ ಹೆಸರುಗಳನ್ನು ಇಡುತ್ತಾರೆ. ನಾನು ಶರೀರವನ್ನು ತೆಗೆದುಕೊಳ್ಳುವುದಿಲ್ಲ ಆದ್ದರಿಂದ ನನಗೆ ಯಾವುದೇ ಶರೀರಿಕ ಹೆಸರು ಇಲ್ಲ. ನೀವು ಆತ್ಮಗಳು ಸಾಲಿಗ್ರಾಮಗಳಾಗಿದ್ದೀರಿ. ನೀವು ಆತ್ಮಗಳನ್ನು ತಂದೆಯು ಕೇಳುತ್ತಾರೆ – ಹೇ ಆತ್ಮರೇ ಕೇಳುತ್ತಿದ್ದೀರಾ? ನಿಮಗೆ ಈಗ ಆತ್ಮಾಭಿಮಾನಿಯಾಗಿರುವ ಅಭ್ಯಾಸ ಆಗಬೇಕಾಗಿದೆ. ಆತ್ಮಗಳು ಈ ಕರ್ಮೇಂದ್ರಿಯಗಳ ಮುಖಾಂತರ ಕೇಳುತ್ತೀರಿ ಹಾಗೂ ಮಾತನಾಡುತ್ತೀರಿ, ಆತ್ಮಗಳಿಗೆ ಈಗ ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಆತ್ಮವು ಬುದ್ದಿ ಹೀನ ಆಗಿ ಬಿಟ್ಟಿದೆ ಏಕೆಂದರೆ ತಂದೆಯನ್ನು ಮರೆತು ಹೋಗಿದೆ. ಶಿವನೂ ಪರಮಾತ್ಮನಾಗಿದ್ದಾರೆ, ಕೃಷ್ಣನೂ ಪರಮಾತ್ಮನಾಗಿದ್ದಾರೆ – ಈ ರೀತಿ ಅಲ್ಲ. ಮನುಷ್ಯರಂತೂ ಕಲ್ಲೂ-ಮುಳ್ಳು ಎಲ್ಲವೂ ಪರಮಾತ್ಮ ಆಗಿದ್ದಾರೆ ಎಂದು ಹೇಳುತ್ತಾರೆ. ಇಡೀ ಸೃಷ್ಟಿಯಲ್ಲಿ ಉಲ್ಟಾ ಜ್ಞಾನವನ್ನು ಹರಡಿಸಿದ್ದಾರೆ. ಕೆಲವರಂತೂ ನಾವು ಭಗವಂತನ ಮಕ್ಕಳೆಂದು ತಿಳಿಯುತ್ತಾರೆ ಆದರೆ ಮೆಜಾರಿಟಿ ಸರ್ವವ್ಯಾಪಿ ಎಂದು ಹೇಳುವವರೇ ಇದ್ದಾರೆ. ಇಂದು ಎಲ್ಲರೂ ಸರ್ವವ್ಯಾಪಿ ಎಂಬ ಕೆಸರಿನಲ್ಲಿ ಬಿದ್ದಿದ್ದಾರೆ. ಈಗ ಆ ಕೆಸರಿನಿಂದ ಎಲ್ಲರನ್ನು ಹೊರ ತೆಗೆಯಬೇಕಾಗಿದೆ. ಇಡೀ ಪ್ರಪಂಚವು ಒಂದು ಕಡೆ ಮತ್ತು ತಂದೆಯು ಇನ್ನೊಂದು ಕಡೆ ಇದ್ದಾರೆ. ತಂದೆಯ ಮಹಿಮೆಯನ್ನು ಗಾಯನ ಮಾಡಲಾಗಿದೆ. ಅಹೋ ಪ್ರಭು ನಿನ್ನ ಲೀಲೆ ಅಪರಮಪಾರವಾಗಿದೆ. ನಿನ್ನ ಮತದಿಂದಲೇ ಗತಿ ಅಥವಾ ಸದ್ಗತಿಯು ಸಿಗುತ್ತದೆ. ಸದ್ಗತಿದಾತ ಒಬ್ಬರೇ ಆಗಿದ್ದಾರೆ. ಮನುಷ್ಯರು ಗತಿ-ಸದ್ಗತಿಗೋಸ್ಕರ ಎಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಒಬ್ಬ ತಂದೆಯೇ ಸದ್ಗುರುವಾಗಿದ್ದಾರೆ. ಅವರೇ ಮುಕ್ತಿ-ಜೀವನ್ಮುಕ್ತಿ ಎರಡನ್ನೂ ಕೊಡುತ್ತಾರೆ.

ತಂದೆಯು ಹೇಳುತ್ತಾರೆ – ನಾನು ಸಾಧು-ಸಂತ ಮುಂತಾದವರೆಲ್ಲರ ಸದ್ಗತಿ ಮಾಡುವುದಕ್ಕೋಸ್ಕರ ನಾನು ಬರಬೇಕಾಗುತ್ತದೆ. ಎಲ್ಲರ ಸದ್ಗತಿ ಮಾಡುವವರು ನಾನೂ ಒಬ್ಬನೇ ಆಗಿದ್ದೇನೆ. ನಾನು ಆತ್ಮಗಳೊಂದಿಗೆ ಮಾತನಾಡುತ್ತೇನೆ. ನಾನು ನಿಮ್ಮ ತಂದೆ ಆಗಿದ್ದೇನೆ. ಎಲ್ಲಾ ಆತ್ಮಗಳು ನನ್ನ ಸಂತಾನರಾಗಿದ್ದೀರಿ ಎಂದು ನನ್ನ ಹೊರತು ಅನ್ಯರ್ಯಾರೂ ಹೇಳಲು ಸಾಧ್ಯವಿಲ್ಲ. ಅವರಂತು ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ. ಮತ್ತೆ ಈ ರೀತಿ ಎಂದೂ ಹೇಳಲು ಸಾಧ್ಯವಿಲ್ಲ. ಈಗ ಸ್ವಯಂ ತಂದೆಯು ಹೇಳುತ್ತಾರೆ. ನಾನು ಭಕ್ತರಿಗೆ ಭಕ್ತಿಯ ಫಲವನ್ನು ಕೊಡಲು ಬಂದಿದ್ದೇನೆ ಆದ್ದರಿಂದಲೇ ಭಕ್ತರ ಉದ್ಧಾರಕ ಭಗವಂತ ಒಬ್ಬರೇ ಆಗಿದ್ದಾರೆ ಎನ್ನುವ ಗಾಯನವಿದೆ. ಎಲ್ಲರೂ ಭಕ್ತರಾಗಿದ್ದಾರೆ. ಆದರೆ ಭಗವಂತನೇ ಬೇರೆಯಾಗಿದ್ದಾರೆ. ಒಂದುವೇಳೆ ಭಕ್ತರೇ ಭಗವಂತನಾಗಿದ್ದರೆ ಅವರು ಭಗವಂತನನ್ನು ನೆನಪು ಮಾಡುವ ಅವಶ್ಯಕತೆ ಇಲ್ಲ. ತಮ್ಮ-ತಮ್ಮ ಭಾಷೆಯಲ್ಲಿ ಪರಮಾತ್ಮನನ್ನು ತಮ್ಮ-ತಮ್ಮದೇ ಆದಂತಹ ಹೆಸರುಗಳಿಂದ ಕರೆಯುತ್ತಾರೆ. ಆದರೆ ಯಥಾರ್ಥವಾದ ಹೆಸರು ಶಿವ ಎಂದಾಗಿದೆ. ಯಾರು ಯಾರನ್ನೇ ಆದರೂ ಗ್ಲಾನಿ ಅಥವಾ ನಿಂದನೆ ಮಾಡುತ್ತಾರೆಂದರೆ ಅವರ ಮೇಲೆ ಕೇಸ್ ಮಾಡುತ್ತಾರೆ. ಆದರೆ ಇಲ್ಲಿ ತಂದೆಯನ್ನು ಎಲ್ಲರೂ ಸರ್ವವ್ಯಾಪಿ ಎಂದು ಹೇಳಿ ಎಷ್ಟೊಂದು ಗ್ಲಾನಿ ಮಾಡುತ್ತಾರೆ ಆದರೆ ತಂದೆಯು ಯಾರ ಮೇಲೆ ಕೇಸ್ ಮಾಡಬೇಕು!! ಆದರೆ ಇದು ಡ್ರಾಮಾ ಆಗಿದೆ. ಇದರಲ್ಲಿ ಯಾರ ಮಾತೂ ನಡೆಯುವುದಿಲ್ಲ. ಇದನ್ನು ತಂದೆಯೇ ತಿಳಿದುಕೊಂಡಿದ್ದಾರೆ. ಮಕ್ಕಳೇ, ನೀವೀಗ ದುಃಖಿಯಾಗಿದ್ದೀರಿ. ಪುನಃ ನೀವು ದುಃಖಿಗಳಾಗುತ್ತೀರಿ. ಈ ಗೀತೆ ಶಾಸ್ತ್ರ ಮುಂತಾದವುಗಳು ಕಲ್ಪದ ನಂತರವೂ ಮಾಡಲ್ಪಡುತ್ತವೆ ಆದರೆ ಕೇವಲ ಗೀತೆ ಮುಂತಾದವುಗಳನ್ನು ಓದುವುದರಿಂದ ಏನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಂತು ಸಮರ್ಥತೆ ಇರಬೇಕು. ಶಾಸ್ತ್ರಗಳನ್ನು ಹೇಳುವವರು ಯಾರಿಗೋಸ್ಕರ ಈ ಮಾತನ್ನು ಹೇಳಬಹುದು-ಮಕ್ಕಳೇ ನನ್ನ ಜೊತೆ ಯೋಗವನ್ನು ಜೋಡಿಸುವುದರಿಂದ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಈ ಮಾತನ್ನು ಯಾರೂ ಹೇಳಲು ಸಾಧ್ಯವಿಲ್ಲ. ಅವರಂತೂ ಕೇವಲ ಗೀತಾ ಪುಸ್ತಕವನ್ನು ಓದಿ ತಿಳಿಸುತ್ತಾರೆ.

ಮಕ್ಕಳೇ, ನೀವೀಗ ಅನುಭವಿಯಾಗಿದ್ದೀರಿ. ನಾವು 84 ಜನ್ಮದ ಚಕ್ರದಲ್ಲಿ ಹೇಗೆ ಬರುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಡ್ರಾಮಾದಲ್ಲಿ ಪ್ರತೀ ಮಾತು ತನ್ನ ಸಮಯದಲ್ಲಿಯೇ ಬರುತ್ತದೆ. ತಂದೆಯು ಮಕ್ಕಳೊಂದಿಗೆ, ಆತ್ಮಗಳೊಂದಿಗೆ ಮಾತನಾಡುತ್ತಾರೆ. ಮಕ್ಕಳೇ ನೀವೂ ಸಹ ಈ ರೀತಿ ಕಲಿಯಿರಿ – ನಾವು ಆತ್ಮಗಳೊಂದಿಗೆ ಮಾತನಾಡುತ್ತೇವೆ. ನಾವು ಆತ್ಮರು ಈ ಬಾಯಿಯ ಮುಖಾಂತರ ಮಾತನಾಡುತ್ತೇವೆ ಮತ್ತು ಈ ಕಿವಿಗಳಿಂದ ಕೇಳುತ್ತೇವೆ. ನಾನು ತಂದೆಯ ಸಂದೇಶವನ್ನು ಕೊಡುತ್ತೇನೆ. ನಾನು ಆತ್ಮನಾಗಿದ್ದೇನೆ. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ. ಆತ್ಮವೂ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ಈಗ ಆತ್ಮವು 84 ಜನ್ಮಗಳನ್ನು ಪೂರ್ಣ ಮಾಡಿದೆ. ಈಗ ತಂದೆಯು ಹೇಳುತ್ತಾರೆ – ಒಂದುವೇಳೆ ಪರಮಾತ್ಮ ಸರ್ವವ್ಯಾಪಿ ಆಗಿದ್ದರೆ ಜೀವಪರಮಾತ್ಮ ಎಂದು ಹೇಳಿಯಲ್ಲವೇ! ಜೀವಾತ್ಮ ಎಂದು ಏಕೆ ಹೇಳುತ್ತೀರಿ? ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ನಿಮಗೆ ಈ ದೃಷ್ಟಿ ಇರಲಿ ನನ್ನ ಸಹೋದರ ಆತ್ಮಗಳೇ ತಿಳಿದುಕೊಂಡಿದ್ದೀರಾ – ನಾನು ತಂದೆಯ ಸಂದೇಶವನ್ನು ತಿಳಿಸುತ್ತಿದ್ದೇನೆ – ಇದು 5000 ವರ್ಷಗಳ ಹಿಂದಿನದ್ದಾಗಿದೆ. ತಂದೆಯು ಹೇಳುತ್ತಾರೆ ಇದು ದುಃಖಧಾಮವಾಗಿದೆ. ಆದ್ದರಿಂದ ನನ್ನನ್ನು ನೆನಪು ಮಾಡಿ. ಸತ್ಯಯುಗವು ಸುಖಧಾಮವಾಗಿದೆ. ಹೇ! ಆತ್ಮರೇ ನೀವು ಸುಖಧಾಮದಲ್ಲಿ ಇದ್ದಿರಲ್ಲವೇ. ನೀವೇ 84 ಜನ್ಮಗಳ ಚಕ್ರವನ್ನು ಸುತ್ತಿದಿರಿ. ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಲೇಬೇಕಾಗಿದೆ. ಈಗ ಮತ್ತೆ ಹಿಂತಿರುಗಿ ಶ್ರೀ ಕೃಷ್ಣ ಪುರಿಯಲ್ಲಿ ನಡೆಯಿರಿ. ಅಲ್ಲಿ ಹೋಗಿ ಏನಾಗಲು ಬಯಸುತ್ತೀರಿ? ಮಹಾರಾಜ-ಮಹಾರಾಣಿ ಆಗುತ್ತೀರಾ ಅಥವಾ ದಾಸ-ದಾಸಿಯಾಗುತ್ತೀರಾ? ಹೀಗೆ ಆತ್ಮಗಳೊಂದಿಗೆ ಮಾತನಾಡಬೇಕು. ಉಮ್ಮಂಗವಿರಬೇಕು. ನಾನೇರ್ ಪರಮಾತ್ಮನಾಗಿದ್ದೇನೆ ಎನ್ನುವ ಉಮ್ಮಂಗವಲ್ಲ. ಪರಮಾತ್ಮನಂತು ಜ್ಞಾನ ಸಾಗರ ಆಗಿದ್ದಾರೆ, ಅವರೆಂದೂ ಅಜ್ಞಾನ ಸಾಗರ ಆಗುವುದಿಲ್ಲ. ತಂದೆಯಿಂದ ಜ್ಞಾನವನ್ನು ತೆಗೆದುಕೊಂಡು ಮಾ|| ಜ್ಞಾನ ಸಾಗರ ಆಗುತ್ತೇವೆ. ವಾಸ್ತವದಲ್ಲಿ ಸಾಗರ ಒಬ್ಬ ತಂದೆಯಾಗಿದ್ದಾರೆ. ಉಳಿದವರೆಲ್ಲರೂ ನದಿಗಳು. ವ್ಯತ್ಯಾಸವಿದೆಯಲ್ಲವೇ! ಆತ್ಮ ಯಾವಾಗ ಬುದ್ಧಿಹೀನವಾಗುತ್ತದೆ ಆಗಲೇ ಜ್ಞಾನವನ್ನು ತಿಳಿಸಲಾಗುತ್ತದೆ. ಸ್ವರ್ಗದಲ್ಲಿ ಯಾರಿಗಾದರೂ ತಿಳಿಸಲಾಗುತ್ತದೆಯೇನು! ಇಲ್ಲಿ ಎಲ್ಲರೂ ಪತಿತ, ಬುದ್ಧಿಹೀನ ಹಾಗೂ ದುಃಖಿಯಾಗಿದ್ದಾರೆ. ಬಡವರೇ ಇಲ್ಲಿ ಆರಾಮವಾಗಿ ಕುಳಿತು ಜ್ಞಾನವನ್ನು ಕೇಳುತ್ತಾರೆ. ಸಾಹುಕಾರರಿಗೆ ತಮ್ಮದೇ ಆದ ನಶೆಯಿರುತ್ತದೆ. ಅವರಲ್ಲಿಯೂ ಕೆಲವರು ಮಾತ್ರ ಜ್ಞಾನವನ್ನು ಕೇಳುತ್ತಾರೆ. ರಾಜ ಜನಕ ಎಲ್ಲವನ್ನು ಕೊಟ್ಟು ಬಿಟ್ಟರೆಂದು ಹೇಳುತ್ತಾರಲ್ಲವೇ. ಇಲ್ಲಿ ಎಲ್ಲರೂ ಜನಕರಾಗಿದ್ದಾರೆ. ಜೀವನ್ಮುಕ್ತಿಗೋಸ್ಕರ ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ನಾವು ಆತ್ಮ ಆಗಿದ್ದೇವೆ ಎನ್ನುವುದನ್ನು ಪಕ್ಕಾ ಮಾಡಿಕೊಳ್ಳಬೇಕು. ಬಾಬಾ, ನಾವು ನಿಮಗೆ ಎಷ್ಟು ಅಭಿನಂದನೆಗಳನ್ನು ಹೇಳಬೇಕು! ಡ್ರಾಮಾನುಸಾರ ತಾವು ಆಸ್ತಿಯನ್ನು ಕೊಡಲೇಬೇಕಾಗಿದೆ ಮತ್ತು ನಾವು ನಿಮ್ಮ ಮಗು ಆಗಲೇಬೇಕಾಗಿದೆ. ನಾವು ತಮ್ಮ ವಾರಸದಾರರು ಆಗಲೇಬೇಕಾಗಿದೆ. ಇದರಲ್ಲಿ ಅಭಿನಂದನೆಯ ಮಾತೇನಿದೆ. ತಂದೆಯು ಸ್ವಯಂ ಬಂದು ನಮ್ಮನ್ನು ಅನ್ಯರಿಗೆ ತಿಳಿಸಲು ಯೋಗ್ಯರನ್ನಾಗಿ ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ತಂದೆಯನ್ನು ಮಹಿಮೆ ಮಾಡುತ್ತಾರೆ, ಆಗ ಥ್ಯಾಂಕ್ಸ್ ಎಂಬ ಶಬ್ದವು ಹೊರಡುತ್ತದೆ. ತಂದೆಯಂತು ತಮ್ಮ ಕರ್ತವ್ಯವನ್ನು ಮಾಡಲೇ ಬೇಕಾಗಿದೆ. ಅವರು ಬಂದು ಪುನಃ ಸ್ವರ್ಗದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ಡ್ರಾಮಾನುಸಾರ ತಂದೆ ಬಂದು ರಾಜಯೋಗವನ್ನು ಕಲಿಸಲೇಬೇಕಾಗಿದೆ, ಆಸ್ತಿ ಕೊಡಲೇಬೇಕಾಗಿದೆ ಆದರೂ ಸಹ ಯಾರು ಎಷ್ಟು ಪುರುಷ್ಜಾರ್ಥ ಮಾಡುತ್ತಾರೆ ಅದರನುಸಾರ ಸ್ವರ್ಗದಲ್ಲಿ ಹೋಗುತ್ತಾರೆ. ಯಾರೆಷ್ಟು ಪುರುಷಾರ್ಥ ಮಾಡುತ್ತಾರೆ ಅದರನುಸಾರವಾಗಿ ಸ್ವರ್ಗದಲ್ಲಿ ಬರುತ್ತಾರೆ. ಬಾಕಿ ಇದರಲ್ಲಿ ಅಭಿನಂದನೆಯ ಯಾವುದೇ ಮಾತಿಲ್ಲ. ಈಗ ಬಾಬಾ ನಮಗೆ ಎಂತಹ ಆಟವನ್ನು ತೋರಿಸಿದ್ದಾರೆಂದು ಆಶ್ಚರ್ಯಚಕಿತರಾಗುತ್ತೇವೆ ಏಕೆಂದರೆ ಮೊದಲು ನಾವು ತಿಳಿದಿರಲಿಲ್ಲ, ಈಗ ಎಲ್ಲವನ್ನು ತಿಳಿದುಕೊಂಡಿದ್ದೇವೆ. ಬಾಬಾ ನಾವು ಪುನಃ ಈ ಜ್ಞಾನವನ್ನು ಮರೆತು ಹೋಗುತ್ತೇವೆಯೇ? ಅದಕ್ಕೆ ತಂದೆಯು ಹೇಳುತ್ತಾರೆ – ಹೌದು ಮಕ್ಕಳೇ, ನನ್ನ ಮತ್ತು ನಿಮ್ಮ ಬುದ್ಧಿಯಿಂದ ಈ ಜ್ಞಾನವು ಪ್ರಾಯಲೋಪವಾಗಿಬಿಡುವುದು. ಪುನಃ ಜ್ಞಾನ ಕೊಡುವಂತಹ ಸಮಯ ಬಂದಾಗ ಇಮರ್ಜ್ ಆಗುವುದು. ಈಗಂತೂ ನಾವೆಲ್ಲರೂ ನಿರ್ವಾಣಧಾಮದಲ್ಲಿ ಹೋಗುತ್ತೇವೆ. ಮತ್ತೆ ಭಕ್ತಿಮಾರ್ಗದಲ್ಲಿ ನಾನು ಪಾತ್ರವನ್ನು ಅಭಿನಯಿಸುತ್ತೇನೆ. ಆತ್ಮನಲ್ಲಿಯೂ ತಾನಾಗಿಯೇ ಆ ಸಂಸ್ಕಾರವು ಬಂದು ಬಿಡುತ್ತದೆ. ನಾನು ಕಲ್ಪದ ನಂತರವೂ ಇದೇ ಶರೀರದಲ್ಲಿ ಬರುತ್ತೇನೆ, ಇದು ಬುದ್ಧಿಯಲ್ಲಿ ಇರುತ್ತದೆ. ಆದರೆ ಪುನಃ ನೀವು ದೇಹೀ-ಅಭಿಮಾನಿ ಆಗಿರಬೇಕಾಗುವುದು. ಇಲ್ಲದಿದ್ದರೆ ದೇಹಾಭಿಮಾನಿಗಳಾಗಿ ಬಿಡುತ್ತೀರಿ. ಮುಖ್ಯ ಮಾತು ಇದೇ ಆಗಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಪುರುಷಾರ್ಥದನುಸಾರವಾಗಿ ಕಲ್ಪ-ಕಲ್ಪವು ನೀವು ಆಸ್ತಿಯನ್ನು ಪಡೆಯುತ್ತೀರಿ. ತಂದೆಯು ಎಷ್ಟು ಸಹಜವಾಗಿ ತಿಳಿಸಿ ಕೊಡುತ್ತಾರೆ. ಆದರೆ ಈ ಗುರಿಯನ್ನು ತಲುಪುವುದರಲ್ಲಿ ಗುಪ್ತ ಪರಿಶ್ರಮವಿದೆ.

ಮೊಟ್ಟ ಮೊದಲು ಆತ್ಮವು ಬಂದಾಗ ಪುಣ್ಯಾತ್ಮ ಸತೋಪ್ರಧಾನವಾಗಿರುತ್ತದೆ ನಂತರ ಅವಶ್ಯವಾಗಿ ಪಾಪಾತ್ಮ, ತಮೋಪ್ರಧಾನರಾಗಲೇಬೇಕಾಗಿದೆ. ಈಗ ಮತ್ತೆ ನೀವು ತಮೋಪ್ರಧಾನರಿಂದ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ತಂದೆಯು ಸಂದೇಶವನ್ನು ಕೊಟ್ಟಿದ್ದಾರೆ – ನನ್ನನ್ನು ನೆನಪು ಮಾಡಿ ಎಂದು. ಈಗ ಇಡೀ ರಚನೆಗೆ ಆಸ್ತಿ ಸಿಗುತ್ತಿದೆ. ಏಕೆಂದರೆ ಎಲ್ಲರ ಸದ್ಗತಿದಾತನಲ್ಲವೇ! ಅವರೇ ಸರ್ವರ ಮೇಲೆ ದಯೆ ತೋರಿಸುವವರಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ದುಃಖಿಯಾಗುವುದಿಲ್ಲ. ಉಳಿದ ಆತ್ಮಗಳು ಎಲ್ಲರೂ ಶಾಂತಿಧಾಮದಲ್ಲಿ ಹೋಗಿ ಇರುತ್ತಾರೆ. ಇದು ಅಂತಿಮ ಸಮಯವಾಗಿದೆ ಎಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಆದ್ದರಿಂದ ಯೋಗ ಬಲದಿಂದ ದುಃಖದ ಎಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ ಮತ್ತು ಜ್ಞಾನ ಹಾಗೂ ಯೋಗಬಲದಿಂದ ನಾವು ಭವಿಷ್ಯ ಸುಖಕ್ಕೋಸ್ಕರ ಖಾತೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಎಷ್ಟು ಜಮಾ ಮಾಡಿಕೊಳ್ಳುತ್ತೇವೆ ಅಷ್ಟೂ ಸುಖವನ್ನು ಪಡೆಯುತ್ತೇವೆ ಮತ್ತು ದುಃಖದ ಖಾತೆಯು ಸಮಾಪ್ತಿಯಾಗುತ್ತಾ ಹೋಗುವುದು. ಈಗ ನಾವು ಕಲ್ಪದ ಸಂಗಮದಲ್ಲಿ ಬಂದು ದುಃಖದ ಲೆಕ್ಕಾಚಾರವನ್ನು ಸಮಾಪ್ತಿ ಮಾಡುತ್ತೇವೆ ಮತ್ತು ಇನ್ನೊಂದು ಕಡೆ ಜಮಾ ಮಾಡಿಕೊಳ್ಳುತ್ತೇವೆ. ಇದು ವ್ಯಾಪಾರವಾಗಿದೆಯಲ್ಲವೇ! ಬಾಬಾ ಜ್ಞಾನರತ್ನಗಳನ್ನು ಕೊಟ್ಟು ಗುಣವಂತರನ್ನಾಗಿ ಮಾಡುತ್ತಾರೆ. ಅದನ್ನು ಯಾರು ಎಷ್ಟು ಬೇಕಾದರೂ ಧಾರಣೆ ಮಾಡಬಹುದು. ಆ ಒಂದೊಂದು ರತ್ನವೂ ಸಹ ಲಕ್ಷಾಂತರ ರೂಪಾಯಿ ಬೆಳೆಯುಳ್ಳದ್ದಾಗಿದೆ. ಇದರಿಂದ ನೀವು ಭವಿಷ್ಯದಲ್ಲಿ ಸುಖಿಯಾಗಿರುತ್ತೀರಿ. ಇದು ಸದಾ ದುಃಖಧಾಮವಾಗಿದೆ. ಅದು ಸದಾ ಸುಖಧಾಮವಾಗಿರುತ್ತದೆ. ಸ್ವರ್ಗದಲ್ಲಿ ಸದಾ ಸುಖವೇ ಸುಖವಿರುತ್ತದೆ ಎನ್ನುವುದನ್ನು ಸನ್ಯಾಸಿಗಳು ತಿಳಿದುಕೊಂಡಿಲ್ಲ. ಒಬ್ಬ ತಂದೆಯೇ ಗೀತೆಯ ಮುಖಾಂತರ ಭಾರತವನ್ನು ಇಷ್ಟೂ ಶ್ರೇಷ್ಠವನ್ನಾಗಿ ಮಾಡುತ್ತಾರೆ. ಮನುಷ್ಯರೆಲ್ಲರು ಎಷ್ಟು ಶಾಸ್ತ್ರ ಮುಂತಾದವುಗಳನ್ನು ತಿಳಿಸುತ್ತಾರೆ ಆದರೆ ಪ್ರಪಂಚವಂತು ಹಳೆಯದಾಗಲೇ ಬೇಕಾಗಿದೆ. ಮೊದಲು ದೇವತೆಗಳು ಹೊಸ ಸೃಷ್ಟಿಯಲ್ಲಿ ರಾಮ ರಾಜ್ಯದಲ್ಲಿದ್ದರು. ಈಗ ದೇವತೆಗಳೇ ಇಲ್ಲ. ಎಲ್ಲಿ ಹೋದರು? ಯಾರು 84 ಜನ್ಮಗಳನ್ನು ಭೋಗಿಸಿದ್ದರು. ಮತ್ಯಾರಿಗೂ 84 ಜನ್ಮಗಳ ಲೆಕ್ಕವನ್ನು ತೋರಿಸಲು ಸಾಧ್ಯವಿಲ್ಲ. ಅವಶ್ಯವಾಗಿ ದೇವತಾ ಧರ್ಮದವರೇ 84 ಜನ್ಮಗಳನ್ನು ಪಡೆಯುತ್ತಾರೆ. ಮನುಷ್ಯರಂತೂ ತಿಳಿದುಕೊಳ್ಳುತ್ತಾರೆ – ಲಕ್ಷ್ಮೀ ನಾರಾಯಣ ಮುಂತಾದವರು ಭಗವಂತನಾಗಿದ್ದರು. ಎಲ್ಲಿ ನೋಡಿದರೂ ನೀನೇ ನೀನು ಎಂದು ಮಹಿಮೆ ಮಾಡುತ್ತಾರೆ. ಸರ್ವವ್ಯಾಪಿ ಜ್ಞಾನದಿಂದಲೂ ಸುಖಿಯಾಗಿರುತ್ತೀರೇನು? ಈ ಸರ್ವವ್ಯಾಪಿ ಎಂಬ ಜ್ಞಾನವಂತು ನಡೆಯುತ್ತಲೇ ಬಂದಿದೆ. ಭಾರತವು ಇನ್ನೂ ಕಂಗಾಲ, ನರಕವಾಗಿ ಬಿಟ್ಟಿದೆ. ಭಗವಂತನಂತು ಭಕ್ತರಿಗೆ ಭಕ್ತಿಯ ಫಲವನ್ನು ಕೊಡಲೇಬೇಕಾಗಿದೆ. ಸನ್ಯಾಸಿಗಳು ತಾವೇ ಸಾಧನೆ ಮಾಡುತ್ತಿರುತ್ತಾರೆಂದರೆ ಅವರು ಏನು ಫಲವನ್ನು ಕೊಡುತ್ತಾರೆ? ಮನುಷ್ಯರಂತು ಸದ್ಗತಿದಾತನಾಗಿಲ್ಲ. ಯಾರು ಈ ಧರ್ಮದವರಿದ್ದಾರೆ ಅವರೇ ಹೊರಬರುತ್ತಾರೆ. ಈ ರೀತಿ ಅನೇಕರು ಸನ್ಯಾಸಿ ಧರ್ಮದಲ್ಲಿಯು ಸೇರಿಹೋಗಿದ್ದಾರೆ. ಅವರೂ ಬಂದು ಬಿಡುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಬಾಬಾ ತಿಳಿಸುತ್ತಾರೆ – ಮಕ್ಕಳೇ ನಾನಾತ್ಮನಾಗಿದ್ದೇನೆ ಎನ್ನುವುದನ್ನು ನೀವೀಗ ಅಭ್ಯಾಸ ಮಾಡಬೇಕಾಗಿದೆ. ಆತ್ಮದ ಆಧಾರದ ಮೇಲೆಯೇ ಶರೀರವು ನಿಂತಿದೆ. ಈ ಶರೀರವು ವಿನಾಶಿಯಾಗಿದೆ, ಆತ್ಮವು ಅವಿನಾಶಿಯಾಗಿದೆ. ಪಾತ್ರವೆಲ್ಲವೂ ಈ ಚಿಕ್ಕ ಆತ್ಮನಲ್ಲಿಯೇ ಇದೆ. ಇದು ಎಷ್ಟು ವಿಚಿತ್ರವಾಗಿದೆ. ವಿಜ್ಞಾನದವರು ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ವಿಶೇಷವಾದ ಅವಿನಾಶಿ ಪಾತ್ರವು ಇಷ್ಟು ಚಿಕ್ಕ ಆತ್ಮನಲ್ಲಿ ಇದೆ. ಆತ್ಮವು ಅವಿನಾಶಿಯಾಗಿದೆ, ಆದ್ದರಿಂದ ಪಾತ್ರವೂ ಅವಿನಾಶಿಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕಲ್ಪದ ಸಂಗಮದಲ್ಲಿ ಯೋಗಬಲದಿಂದ ದುಃಖದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ. ಹೊಸದನ್ನು ಜಮಾ ಮಾಡಿಕೊಳ್ಳಬೇಕು ಹಾಗೂ ಜ್ಞಾನರತ್ನಗಳನ್ನು ಧಾರಣೆ ಮಾಡಿ ಗುಣವಂತರಾಗಬೇಕಾಗಿದೆ.

2. ನಾನು ಆತ್ಮನಾಗಿದ್ದೇನೆ, ಸಹೋದರ ಆತ್ಮನೊಂದಿಗೆ ಮಾತನಾಡುತ್ತೇನೆ, ಶರೀರವು ವಿನಾಶಿಯಾಗಿದೆ. ನಾನು ನನ್ನ ಸಹೋದರ ಆತ್ಮನಿಗೆ ಸಂದೇಶವನ್ನು ತಿಳಿಸುತ್ತಿದ್ದೇನೆ – ಈ ರೀತಿ ಅಭ್ಯಾಸ ಮಾಡಬೇಕಾಗಿದೆ.

ವರದಾನ:-

ಯಾರು ಯಾವುದೇ ಭಾವದಿಂದ ಮಾತನಾಡಲಿ ಅಥವಾ ನಡೆಯಲಿ, ಆದರೆ ತಾವು ಸದಾಕಾಲ ಪ್ರತಿಯೊಬ್ಬ ಆತ್ಮನ ಬಗ್ಗೆ ಶುಭ ಭಾವ, ಶ್ರೇಷ್ಠ ಭಾವವನ್ನು ಧಾರಣೆ ಮಾಡಿಕೊಳ್ಳಿರಿ. ಇದರಲ್ಲಿ ವಿಜಯಿಯಾಗುವಿರೆಂದರೆ ಮಾಲೆಯಲ್ಲಿ ಪೋಣಿಸಲ್ಪಡುವ ಅಧಿಕಾರಿ ಆಗಿ ಬಿಡುವಿರಿ. ಏಕೆಂದರೆ ಸರ್ವರ ಪ್ರಿಯರಾಗುವ ಸಾಧನವೇ ಇದಾಗಿದೆ – ಸಂಬಂಧ-ಸಂಪರ್ಕದಲ್ಲಿ ಪ್ರತಿಯೊಬ್ಬರ ಬಗ್ಗೆ ಶ್ರೇಷ್ಠ ಭಾವವನ್ನು ಧಾರಣೆ ಮಾಡಿಕೊಳ್ಳುವುದು. ಈ ರೀತಿ ಶ್ರೇಷ್ಠ ಭಾವವಿರುವವರು ಸದಾ ಎಲ್ಲರಿಗೂ ಸುಖ ಕೊಡುವರು, ಸುಖವನ್ನು ತೆಗೆದುಕೊಳ್ಳುವರು. ಇದೂ ಸಹ ಸೇವೆಯಾಗಿದೆ ಹಾಗೂ ಶುಭ ಭಾವನೆಯು ಮನಸ್ಸಾ ಸೇವೆಯ ಶ್ರೇಷ್ಠ ಸಾಧನವಾಗಿದೆ. ಅಂದಮೇಲೆ ಇಂತಹ ಸೇವೆಯನ್ನು ಮಾಡುವವರು ವಿಜಯ ಮಾಲೆಯ ಮಣಿಯಾಗುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top