07 March 2022 KANNADA Murli Today | Brahma Kumaris

Read and Listen today’s Gyan Murli in Kannada

March 6, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸ್ಮರಣೆ-ಸ್ಮರಣೆಯಲ್ಲಿ ಸುಖವನ್ನು ಪಡೆಯಿರಿ, ತಂದೆಯನ್ನು ಸ್ಮರಣೆ ಮಾಡಿದಾಗ ತನುವಿನ ಕಲಹ ಕ್ಲೇಷ ಅಳಿಸಿ ನೀವು ನಿರೋಗಿಯಾಗುತ್ತೀರಿ”

ಪ್ರಶ್ನೆ:: -

ಈ ಸಮಯದಲ್ಲಿ ನೀವು ಯುದ್ಧ ಸ್ಥಳದಲ್ಲಿ ಇದ್ದೀರಿ, ಆದುದರಿಂದ ಸೋಲು-ಗೆಲುವಿಗೆ ಆಧಾರ ಏನಾಗಿದೆ?

ಉತ್ತರ:-

ಶ್ರೀಮತದಂತೆ ನಡೆಯುವುದರಿಂದ ವಿಜಯವಾಗುತ್ತದೆ, ತಮ್ಮ ಮತದಂತೆ ಅಥವಾ ಪರಮತದಂತೆ ನಡೆಯುವುದರಿಂದ ಸೋಲನ್ನು ಪಡೆಯಬೇಕಾಗುವುದು. ಒಂದು ಕಡೆ ರಾವಣನ ಮತದವರಿದ್ದಾರೆ, ಮತ್ತೊಂದು ಕಡೆ ರಾಮನ ಮತದವರಿದ್ದಾರೆ. ತಂದೆ ತಿಳಿಸುತ್ತಾರೆ-ಮಕ್ಕಳೇ ರಾವಣನು ನಿಮ್ಮನ್ನು ಬಹಳ ಸತಾಯಿಸಿದ್ದಾನೆ. ಈಗ ನೀವು ನನ್ನೊಂದಿಗೆ ಬುದ್ದಿಯೋಗವನ್ನು ಜೋಡಿಸುವುದರಿಂದ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಒಂದುವೇಳೆ ಕಾರಣ-ಅಕಾರಣ ತಮ್ಮ ಮತದಂತೆ ನಡೆದಾಗ ಅಥವಾ ಬೇಸರ ಮಾಡಿಕೊಂಡು ವಿದ್ಯೆಯನ್ನು ಬಿಟ್ಟರೆ ಮಾಯೆಯು ನಮ್ಮ ಮುಖವನ್ನು ತನ್ನ ಕಡೆ ತಿರುಗಿಸಿಕೊಳ್ಳುತ್ತದೆ. ಆಗ ಸೋಲನ್ನು ಪಡೆಯುತ್ತೀರಿ, ಆದುದರಿಂದ ಬಹಳ-ಬಹಳ ಎಚ್ಚರಿಕೆಯಿಂದ ಇರಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೋಡು ನಿನ್ನ ಈ ಜಗತ್ತಿನ ಸ್ಥಿತಿ….

ಓಂ ಶಾಂತಿ. ಮನುಷ್ಯನು ಎಷ್ಟೊಂದು ಪರಿವರ್ತನೆ ಆಗಬೇಕಾಗುತ್ತದೆ. ಇದನ್ನು ಬ್ರಾಹ್ಮಣ ಮಕ್ಕಳಷ್ಟೆ ತಿಳಿದುಕೊಳ್ಳುತ್ತೀರಿ. ಈ ರೀತಿ ಮನುಷ್ಯನೇ ಶ್ರೇಷ್ಠ ಸ್ಥಿತಿಯನ್ನು ತಲುಪುತ್ತಾನೆ, ಅದೇ ಮನುಷ್ಯ ಕನಿಷ್ಠ ಸ್ಥಿತಿಯನ್ನೂ ಸಹ ತಲುಪುತ್ತಾನೆ. ಇದೇ ಮನುಷ್ಯ ಸತ್ಯಯುಗದಲ್ಲಿ ಸತೋಪ್ರಧಾನ ವಿಶ್ವದ ಮಾಲೀಕನಾಗಬಹುದು, ಹಾಗೂ ಇದೇ ಮನುಷ್ಯ ತಮೋಪ್ರಧಾನ ನಯಾ ಪೈಸೆಗೆ (ವರ್ತ್ ನಾಟ್ ಪೆನಿ) ಯೋಗ್ಯನಾಗುತ್ತಾನೆ. ಇದೆಲ್ಲವನ್ನು ನೀವು ಬೇಹದ್ದಿನ ತಂದೆಯ ಮೂಲಕ ತಿಳಿದುಕೊಂಡಿದ್ದೀರಿ. ಒಬ್ಬರೇ ಪತಿತಪಾವನ ಸದ್ಗತಿದಾತ ಆಗಿದ್ದಾರೆ. ಅವರೇ ಪಾವನರನ್ನಾಗಿ ಮಾಡುತ್ತಾರೆ, ಪುನಃ ರಾವಣ ಪತಿತರನ್ನಾಗಿ ಮಾಡುತ್ತಾನೆ. ಮತ್ತೆ ಪರಮಪಿತ ಪರಮಾತ್ಮ ಬಂದು ಬಹಳ ಶ್ರೇಷ್ಠ ಮಾಡುತ್ತಾರೆ, ಆದುದರಿಂದ ಈಶ್ವರನ ಗತಿ-ಮತಿ ಭಿನ್ನವಾಗಿದೆ ಎಂದು ಮಹಿಮೆ ಮಾಡುತ್ತಾರೆ. ತಂದೆಯ ಮಹಿಮೆ ಎಲ್ಲಕ್ಕಿಂತ ಭಿನ್ನವಾಗಿದೆ. ತಂದೆಯ ಮಹಿಮೆ ಅಪರಮಪಾರವಾಗಿದೆ, ಏಕೆಂದರೆ ಅವರಂತಹ ಮಾರ್ಗದರ್ಶನ (ಮತ) ಬೇರೆ ಯಾರೂ ಸಹ ಕೊಡಲಾರರು. ಇದನ್ನು ಶ್ರೀಮತ್ ಭಗವತ್ ಗೀತೆಯೆಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಅನೇಕರ ಮಾರ್ಗದರ್ಶನವಿರುತ್ತದೆ. ಉದಾಹರಣೆಗೆ ವಕೀಲರ, ವೈದ್ಯರ, ಅಗಸನ, ಸನ್ಯಾಸಿಗಳ, ಉದಾಸಿ (ದುಃಖಿ) ಮೊದಲಾದವರ ಮತಗಳಿವೆ. ಆದರೂ ಸಹ ಹೇ ಈಶ್ವರ ನಿಮ್ಮ ಗತಿ-ಮತಿ ಎಲ್ಲಕ್ಕಿಂತ ಭಿನ್ನವಾಗಿದೆ ಎಂದು ಹೇಳುತ್ತಾರೆ. ಪರಮಪಿತ ಪರಮಾತ್ಮ ಸರ್ವೋತ್ತಮ ಸರ್ವ ಶ್ರೇಷ್ಠ ಆಗಿದ್ದಾರೆ. ಇದು ಯಾವ ಮನುಷ್ಯನ ಅಥವಾ ದೇವತೆಗಳ ಮತವಲ್ಲ. ನಿಮ್ಮಲ್ಲೂ ಸಹ ಪಕ್ಕಾ ನಿಶ್ಚಯ ಬುದ್ದಿಯಿರುವವರೇ ಈ ಮಾತುಗಳನ್ನು ತಿಳಿದುಕೊಂಡು ಅನ್ಯರಿಗೂ ಸಹ ತಿಳಿಸಿಕೊಡುತ್ತಾರೆ. ತಂದೆಯ ಶ್ರೀಮತದಿಂದ ನಾವು ಎಷ್ಟೊಂದು ಶ್ರೇಷ್ಠರಾಗುತ್ತೇವೆಂದು ಅವರು ಮಾತ್ರ ತಿಳಿದುಕೊಂಡಿರುತ್ತಾರೆ. ತಂದೆಯು ಪ್ರೀತಿ ಹಾಗೂ ಶಾಂತಿಯಲ್ಲಿ ಸಂಪೂರ್ಣ(ಲವ್‍ಫುಲ್, ಪೀಸ್‍ಫುಲ್) ಆಗಿದ್ದಾರೆ. ಪ್ರತೀ ಮಾತಿನಲ್ಲಿ ಸಂಪೂರ್ಣವಾಗಿರುವ ಕಾರಣ ನೀವೂ ಸಹ ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಸಂಪೂರ್ಣ ಆಸ್ತಿ ಯಾವುದಾಗಿದೆ? ನಂಬರ್‍ವನ್ ವಿಶ್ವದ ಮಾಲೀಕರಾಗುವುದು, ಕಡಿಮೆ ಎಂದರೆ ಸೂರ್ಯವಂಶದ ಮಾಲೆಯಲ್ಲಿ ಮಣಿಯಾಗುವುದು ಸಂಪೂರ್ಣ ಆಸ್ತಿಯಾಗಿದೆ. ನಾವೇ ಪೂಜ್ಯರಿಂದ ಪೂಜಾರಿಗಳಾಗಿದ್ದೇವೆ. ಇಡೀ ಪ್ರಪಂಚ ಪರಮಪಿತ ಪರಮಾತ್ಮನ ಮಾಲೆಯನ್ನು ನಾಮ ಅಥವಾ ಜಪಿಸುತ್ತಾರೆ. ಆದರೆ ಸ್ಮರಣೆಯ ಅರ್ಥವನ್ನು ತಿಳಿದುಕೊಂಡಿಲ್ಲ. ಸ್ಮರಣೆ-ಸ್ಮರಣೆಯಲ್ಲೂ ಸುಖ ಪಡೆಯಬೇಕೆಂದು ಹೇಳುತ್ತೀರಿ. ಅರ್ಥಾತ್ ಒಬ್ಬ ತಂದೆಯ ಸ್ಮರಣೆ ಮಾಡಬೇಕು. ಆದರೆ ಜನರು ಎಲ್ಲರನ್ನು ಏಕೆ ಸ್ಮರಿಸುತ್ತಾರೆ? ತಂದೆಯು ಎಲ್ಲರ ಸ್ಮರಣೆಯನ್ನು ಬಿಟ್ಟು ಕೇವಲ ನನ್ನೊಬ್ಬನನ್ನೆ ನೆನಪು ಮಾಡಿ ಎಂದು ಹೇಳುತ್ತಾರೆ. ಒಬ್ಬ ತಂದೆಯನ್ನು ನಿರಂತರ ನೆನಪು ಮಾಡುತ್ತಾ-ಮಾಡುತ್ತಾ ನೀವು ನನ್ನ ಬಳಿ ತಲುಪುತ್ತೀರಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ನನ್ನೊಬ್ಬನನ್ನೇ ನೆನಪು ಮಾಡಬೇಕೆಂದು ತಂದೆಯ ಆದೇಶವಾಗಿದೆ. ಎಷ್ಟೊಂದು ಸಹಜವಾದ ಉಪಾಯವಾಗಿದೆ. ಸ್ಮರಣೆ-ಸ್ಮರಣೆಯಲ್ಲಿ ಸುಖವನ್ನು ಪಡೆಯಿರಿ ಅರ್ಥಾತ್ ಜೀವನ್ಮುಕ್ತಿಯ ಪದವಿಯನ್ನು ಪಡೆದುಕೊಳ್ಳಬೇಕೆಂದು ತಂದೆ ಹೇಳುತ್ತಾರೆ. ಇದರಿಂದ ಶರೀರದ ಎಲ್ಲಾ ಕಲಹ ಕ್ಲೇಷ ಅಳಿಸಿ ಹೋಗುತ್ತದೆ. ಅಲ್ಲಿ ನಿಮ್ಮ ಶರೀರಕ್ಕೂ ಸಹ ಯಾವ ರೋಗ ಇರುವುದಿಲ್ಲ. ಈಗ ತಂದೆಯು ಮಕ್ಕಳ ಸಮ್ಮುಖದಲ್ಲಿ ಹೇಳುತ್ತಿದ್ದಾರೆ, ನೀವು ಇದನ್ನು ಕೇಳಿ ಬೇರೆಯವರಿಗೂ ಸಹ ಹೇಳಬೇಕು. ಟೇಪ್‍ರಿಕಾರ್ಡರ್ ಬಹಳ ಚೆನ್ನಾಗಿ ಹೇಳುತ್ತದೆ. ಟೇಪ್‍ರಿಕಾರ್ಡರ್‍ನಲ್ಲಿ ಸ್ವಲ್ಪವೂ ತಪ್ಪಿ ಹೋಗುವುದಿಲ್ಲ. ಆದರೆ ಹಾವ ಭಾವನ್ನು ನೋಡಲು ಸಾಧ್ಯವಿಲ್ಲ. ಬುದ್ದಿಯಿಂದ ಬಾಬಾ ಈ ರೀತಿ ತಿಳಿಸುತ್ತಿದ್ದಾರೆಂದು ತಿಳಿದುಕೊಳ್ಳಬಹುದು. ಟೇಪ್‍ರಿಕಾರ್ಡರ್ ಖಜಾನೆಯಾಗಿದೆ. ಮನುಷ್ಯರು ಶಾಸ್ತ್ರಗಳನ್ನು ದಾನ ಮಾಡುತ್ತಾರೆ. ಗೀತೆಯನ್ನು ಮುದ್ರಿಸಿ ದಾನ ಮಾಡುತ್ತಾರೆ. ಈ ಟೇಪ್‍ರಿಕಾರ್ಡರ್ ಬಹಳ ವಂಡರ್‍ಫುಲ್ ವಸ್ತು ಆಗಿದೆ. ಇದು ಸ್ವಲ್ಪ ಸೂಕ್ಷ್ಮವಾಗಿರುವ ಕಾರಣ ಎಚ್ಚರಿಕೆಯಿಂದ ನಡೆಸಬೇಕಾಗುತ್ತದೆ. ಇದು ಆಸ್ಪತ್ರೆ ಹಾಗೂ ವಿಶ್ವ ವಿದ್ಯಾಲಯವಾಗಿದೆ. ಇಲ್ಲಿ ಎಲ್ಲರಿಗೂ ಆರೋಗ್ಯ ಐಶ್ವರ್ಯದ ಆಸ್ತಿಯನ್ನು ಕೊಡಬಹುದು. ಮುರಳಿಯಿಂದ ಎಲ್ಲವೂ ಪ್ರಾಪ್ತಿ ಆಗುತ್ತದೆ. ಆದರೆ ಮಾಯಾ ಮೋಹಿನಿ ಎಲ್ಲವನ್ನೂ ಮರೆಯುವಂತೆ ಮಾಡಿ ಬಿಡುತ್ತದೆ, ಅಥವಾ ರಾವಣ ಮೋಹಿತನಾಗಿ ಮಾಡುತ್ತಾನೆ, ಅಥವಾ ರಾಮ ಮೋಹಿತನಾಗಿ ಮಾಡುತ್ತಾನೆ. ರಾಮ ಸಂಗಮಯುಗದಲ್ಲಿ ಮಾತ್ರ ಮೋಹಿತನಾಗಿ ಮಾಡುತ್ತಾರೆ, ರಾವಣನು ಅರ್ಧ ಕಲ್ಪದಿಂದ ಸಳೆಯುತ್ತಾ-ಸಳೆಯುತ್ತಾ ಒಮ್ಮೆಯೇ ಮಣ್ಣು ಪಾಲು ಮಾಡಿ ಬಿಟ್ಟಿದ್ದಾನೆ. ಇಲ್ಲಿಯ ಪ್ರತಿಯೊಂದು ವಸ್ತು ತಮೋಪ್ರಧಾನವಾಗಿದೆ. ಪಂಚತತ್ವಗಳೂ ಸಹ ತಮೋಪ್ರಧಾನವಾಗಿವೆ. ಸತ್ಯಯುಗದಲ್ಲಿ ಪಂಚತತ್ವಗಳೂ ಸಹ ಸತೋಪ್ರಧಾನ ಆಗಿರುತ್ತವೆ. ಇದು ಎಷ್ಟೊಂದು ಶ್ರೇಷ್ಠ ಸಂಪಾದನೆಯಾಗಿದೆ. ಆದರೆ ಇದನ್ನು ತೆಗೆದುಕೊಳ್ಳುವವರು ಯಾರಾಗಿದ್ದಾರೆ? ಇದನ್ನು ಕೋಟಿಯಲ್ಲಿ ಕೆಲವರು ಮಾತ್ರ ತೆಗೆದುಕೊಳ್ಳುತ್ತಾರೆ. ಮಂಗನ ಬುದ್ದಿಯಿಂದ ಮಂದಿರದಲ್ಲಿ ಇರುವಂತಹ ಬುದ್ದಿಯವರನ್ನಾಗಿ ಮಾಡಲು ಎಷ್ಟೊಂದು ಪರಿಶ್ರಮವಾಗುತ್ತದೆ. ಇಡೀ ಪ್ರಪಂಚ ವೇಶ್ಯಾಲಯವಾಗಿದೆ. ಮತ್ತೆ ನಾನು ಬಂದು ಶಿವಾಲಯವನ್ನಾಗಿ ಮಾಡುತ್ತೇನೆ. ಭಾರತ ಶಿವಾಲಯವಾಗಿತ್ತು, ಈಗ ರಾವಣನು ವೇಶ್ಯಾಲಯವನ್ನಾಗಿ ಮಾಡಿದ್ದಾನೆ. ಈ ಎರಡು ರಾಜ್ಯಗಳು ಅರ್ಧ-ಅರ್ಧ ಸಮಯವಿರುತ್ತದೆ. ಮಕ್ಕಳೇ ಈಗ ನೀವು ಬಹಳ ಸೇವೆಯನ್ನು ಮಾಡಬೇಕೆಂದು ತಂದೆ ಹೇಳುತ್ತಾರೆ. ಪ್ರಪಂಚದವರು ಹೇ ಪತಿತ ಪಾವನ ಬಾ ಎಂದು ತೋರಿಕೆ ರೂಪದಲ್ಲಿ ಹೇಳುತ್ತಾರೆ. ಅದರೆ ಅರ್ಥವನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಈಗ ಅನೇಕ ಮತ-ಮತಾಂತಂತರಗಳಿವೆ. ಆದುದರಿಂದ ಇದು ಭ್ರಷ್ಟಾಚಾರ ಪ್ರಪಂಚವೆಂದು ಸ್ವಯಂ ಭಗವಂತನೇ ಹೇಳುತ್ತಾರೆ. ಮನುಷ್ಯರು ವಿಕಾರದಿಂದ ಭ್ರಷ್ಟರಾಗುತ್ತಾರೆ. ಕಾಮ ಎಲ್ಲಕ್ಕಿಂತ ಮಹಾ ಶತ್ರುವಾಗಿದೆ. ಸತ್ಯಯುಗದಲ್ಲಿ ಈ ವಿಕಾರಗಳು ಇರುವುದಿಲ್ಲ. ಈ ಭಾರತ ಅತೀ ಪ್ರೀತಿ ಪಾತ್ರ ತಂದೆಯ ಜನ್ಮ ಸ್ಥಾನವಾಗಿದೆ. ರಾವಣ ಶತ್ರುವಾಗಿರುವ ಕಾರಣ ಸುಡುತ್ತಾರೆ. ಅದೇ ರೀತಿ ದೇವೀಯರ ಚಿತ್ರವನ್ನು ಮಾಡುತ್ತಾ ಪೂಜೆ ಮಾಡಿ ನಂತರ ಮುಳಿಗಿಸಿ ಬಿಡುತ್ತಾರೆ. ಇದು ಎಷ್ಟು ಅಂಧಶ್ರದ್ಧೆಯಾಗಿದೆ. ಕ್ರಿಶ್ಚಯನ್ನರು ಇಂತಹ ಮಾತುಗಳನ್ನು ಹೇಳುತ್ತಾ ತಮ್ಮ ಧರ್ಮದಲ್ಲಿ ಬೇರೆಯವರನ್ನು ಸೇರಿಸಿಕೊಳ್ಳುತ್ತಾರೆ. ಇದೆಲ್ಲವೂ ನಾಟಕವಾಗಿದೆ. ಆದರೆ ಬಹಳ ಕಷ್ಟ ಪಡುತ್ತಾರೆ. ಇಡೀ ಪ್ರಪಂಚದಲ್ಲಿ ಈ ಸಮಯ ರಾವಣ ರಾಜ್ಯವಿದೆ. ಮಾಯೆಯಿಂದ ಮನುಷ್ಯರು ಪೀಡಿತರಾಗಿದ್ದಾರೆ. ಎಲ್ಲರನ್ನೂ ಬಂಧನಗಳಿಂದ ಒಬ್ಬ ತಂದೆಯೇ ಬಂದು ಬಿಡಿಸುತ್ತಾರೆ, ಬೇರೆ ಯಾರೂ ಸಹ ಬಿಡಿಸಲು ಸಾಧ್ಯವಿಲ್ಲ. ಹೇ ಪ್ರಭು ನಿನ್ನ ಶರಣಲ್ಲಿ ಬಂದಿದ್ದೇನೆ, ನನ್ನ ಗೌರವವನ್ನು ಕಾಪಾಡು ಎಂಬ ಹಾಡನ್ನು ಹಾಡುತ್ತಾರೆ. ತಂದೆ ಬಂದು ನಿಮ್ಮನ್ನು ಈಗ ರಾವಣನಿಂದ ರಕ್ಷಿಸುತ್ತಾರೆ. ರಾವಣ ಎಷ್ಟೊಂದು ಸತಾಯಿಸುತ್ತಾನೆ. ತಂದೆ ತಿಳಿಸುವುದೇ ಒಂದು, ರಾವಣ ಮಾಡುವುದೇ ಮತ್ತೊಂದು. ನೀವು ನನ್ನ ಮತದಂತೆ ನಡೆಯಬೇಕೆಂದು ತಂದೆ ತಿಳಿಸುತ್ತಾರೆ, ಮತ್ತೆ ರಾವನಣ ನಿಮ್ಮನ್ನು ಮರೆಯದಂತೆ ಮಾಡುತ್ತಾನೆ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬರುತ್ತಾರೆ. ಮಕ್ಕಳು ರಕ್ತದಲ್ಲಿ ಬರೆದು ಕೊಡುತ್ತಾರೆ, ಆದರೆ ಮತ್ತೆ ಮಾಯೆ ಮುಖವನ್ನು ತನ್ನ ಕಡೆ ಮಾಡಿಕೊಳ್ಳುತ್ತದೆ. ಇದೆಲ್ಲವೂ ಬುದ್ದಿಯಿಂದ ತಿಳಿದುಕೊಳ್ಳುವ ಮಾತಾಗಿದೆ. ಈಗ ಮನೆಗೆ ಹಿಂತಿರುಗುವ ಮಾತಾಗಿದೆ, ಆದುದರಿಂದ ನೀವು ನನ್ನನ್ನು ನೆನಪು ಮಾಡಿ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೀರಿ.

ತಂದೆ ಹೇಳುತ್ತಾರೆ – ಮಕ್ಕಳೇ ಶ್ರೀಮತವನ್ನು ಎಂದಿಗೂ ಮರೆಯಬಾರದು. ಕಾರಣ-ಅಕಾರಣ ಒಂದುವೇಳೆ ತಮ್ಮ ಮತದಂತೆ ಅಥವಾ ಬೇರೆಯವರ ತೊಂದರೆಯಿಂದ ತಂದೆಯನ್ನು ಬಿಟ್ಟು ಬಿಡುತ್ತಾರೆ. ಇದನ್ನು ಯುದ್ಧ ಸ್ಥಳವೆಂದು ಕರೆಯಲಾಗುತ್ತದೆ. ಒಂದು ಕಡೆ ರಾಮನ ಮತದವರಿದ್ದಾರೆ, ಮತ್ತೊಂದು ಕಡೆ ರಾವಣ ಮತದವರಿದ್ದಾರೆ. ಮಕ್ಕಳೇ ನೀವು ಭಗವಂತನಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಿ ಎಂದು ತಂದೆ ತಿಳಿಸುತ್ತಾರೆ. ಇಷ್ಟೊಂದು ಆತ್ಮಗಳು ತೆಗೆದುಕೊಳ್ಳುವುದು ಮೂರ್ಖತೆ ಆಗಿದೆಯೇನು? ನೀವೂ ಸಹ ಭಗವಂತನ ಸಂತಾನರಾಗಿದ್ದೀರಿ ಆದುದರಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಪರಮಪಿತ ಪರಮಾತ್ಮ ಬ್ರಹ್ಮನ ಮೂಲಕ ಹೊಸ ಸೃಷ್ಟಿಯನ್ನು ರಚಿಸುತ್ತಾರೆ. ವಿಷ್ಣುವಿನ ಮೂಲಕ ದೇವತೆಗಳನ್ನು ರಚಿಸುವುದಿಲ್ಲ. ಬ್ರಹ್ಮನ ಮೂಲಕ ವಿಷ್ಣುಪುರಿಯನ್ನು ರಚಿಸುತ್ತಾರೆ ಎಂದು ಯಾರಿಗಾದರೂ ಹೇಳಿದರೆ ಸರಿ ಎಂದು ಒಪ್ಪಿಕೊಳ್ಳುತ್ತಾರೆ. ವಿಷ್ಣುವಿನ ರಾಜಧಾನಿಯ ರಾಜ್ಯವನ್ನು ನಾವು ತೆಗೆದುಕೊಳ್ಳುತ್ತೇವೆ. ಕೆಲವರು ಕುಳಿತು ಕುಳಿತಿದ್ದಂತೆ ಕಾರಣ-ಅಕಾರಣ ಮತಬೇಧದಲ್ಲಿ ಬಂದು ತಂದೆಯಿಂದ ದೂರವಾಗಿ ಬಿಡುತ್ತಾರೆ. ಯಾವುದಾದರೂ ಬಂಧನವಾಯಿತು ಅಥವಾ ಯಾರಾದರೂ ಮಾತನಾಡಿದರೆ ತಂದೆಯನ್ನು ಮರೆತು ಬಿಡುತ್ತಾರೆ. ಪರಮಪಿತ ಪರಮಾತ್ಮನಿಂದ ಅನೇಕಾನೇಕ ಬ್ರಹ್ಮಾಕುಮಾರ-ಕುಮಾರಿಯರು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿ ಬಹಳ ಚೆನ್ನಾಗಿ ಅಧ್ಯಯನ ಮಾಡುತ್ತಾರೆ, ಆದರೆ ಇಲ್ಲಿಂದ ಹೊರಗಡೆ ಹೋದರೆ ಎಲ್ಲವನ್ನು ಮರೆತು ಹೋಗುತ್ತಾರೆ. ಮಾಯೆ ಭ್ರಷ್ಟ ಬುದ್ದಿಯವರನ್ನಾಗಿ ಮಾಡುತ್ತದೆ. ಯಾರಿಗಾದರು ತಿಳಿಸಿಕೊಡಲು ಎಷ್ಟೊಂದು ಶ್ರಮ ಪಡಬೇಕಾಗುತ್ತದೆ. ಮಕ್ಕಳು ಮತ್ತೆ-ಮತ್ತೆ ವ್ಯಾಪಾರ ವ್ಯವಹಾರವನ್ನು ಬಿಟ್ಟು ಸೇವೆಯಲ್ಲಿ ತೊಡಗುತ್ತಾರೆ. ಎಲ್ಲರ ಮೇಲೆ ದಯೆ ತೋರಿಸಲು ಇಷ್ಟ ಪಡುತ್ತಾರೆ. ಏಕೆಂದರೆ ಇಂತಹ ದುಃಖಿಗಳು ಪ್ರಪಂಚದಲ್ಲಿ ಯಾರೂ ಇಲ್ಲ. ಎಲ್ಲರ ಈ ಹಣ ಅಂತಸ್ತು ಎಲ್ಲವೂ ಮಣ್ಣು ಪಾಲಾಗುತ್ತದೆ. ನಿಮ್ಮ ಸಂಪಾದನೆ ಸತ್ಯ ಸಂಪಾದನೆಯಾಗಿದೆ. ನೀವು ಕೈ ತುಂಬಿಕೊಡು ಹೋಗುತ್ತೀರಿ. ಉಳಿದವರಲ್ಲೆರೂ ಖಾಲಿ ಕೈಯಲ್ಲಿ ಹೋಗುತ್ತಾರೆ. ಇದೆಲ್ಲವೂ ವಿನಾಶವಾಗುತ್ತದೆಯೆಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಇದು ಮಹಾಭಾರತದ ಯುದ್ಧವಾಗಿದೆ, ಎಲ್ಲರನ್ನು ಕಾಲನು ತಿಂದು ಬಿಡುತ್ತಾನೆಂದು ಎಲ್ಲರೂ ಹೇಳುತ್ತಾರೆ. ಆದರೆ ಏನಾಗುತ್ತದೆಯೆಂದು ಯಾರು ಸಹ ತಿಳಿದುಕೊಂಡಿಲ್ಲ. ನಾನು ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆಂದು ಸ್ವಯಂ ತಂದೆಯೇ ಹೇಳುತ್ತಿದ್ದಾರೆ. ನನಗೆ ಮಾತ್ರ ಕಾಲ, ಮಹಾಕಾಲನೆಂದು ಹೇಳುತ್ತಾರೆ. ಈಗ ಮೃತ್ಯು ಮುಂದೆ ನಿಂತಿದೆ, ಆದ್ದರಿಂದ ನನ್ನನ್ನು ನೆನಪು ಮಾಡಿ ಹಾಗೂ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳಬೇಕೆಂದು ತಂದೆಯು ತಿಳಿಸುತ್ತಿದ್ದಾರೆ. ಜೀವನ್ಮುಕ್ತಿಯಲ್ಲೂ ಸಹ ಪದವಿಯಿರುತ್ತದೆ. ಮುಕ್ತಿಯಲ್ಲಿ ಎಲ್ಲರೂ ಮುಕ್ತಿಯಲ್ಲಿ ಕುಳಿತು ಬಿಡುತ್ತಾರೆ. ಅವರೂ ಸಹ ಸತೋಪ್ರಧಾನ ನಂತರ ಸತೋ, ರಜೋ, ತಮೋನಲ್ಲಿ ಬರುತ್ತಾರೆ. ಶ್ರೇಷ್ಠ ಹಾಗೂ ಕನಿಷ್ಟ ಆಗುತ್ತಾರೆ, ಬಡವರಿಂದ ರಾಜಕುಮಾರರಾಗುತ್ತೇವೆ. ಭಾರತವು ಈ ಸಮಯದಲ್ಲಿ ಎಲ್ಲಕ್ಕಿಂತಲೂ ಪತಿತ, ಹಾಗೂ ಕನಿಷ್ಠವಾಗಿದೆ. ನಾಳೆ ಪುನಃ ಪಾವನ ರಾಜಕುಮಾರರಾಗುತ್ತೇವೆ. ದೇವೀ-ದೇವತಾ ಧರ್ಮ ಬಹಳ ಸುಖ ಕೊಡುವ ಧರ್ಮವಾಗಿದೆ. ಈ ಧರ್ಮದಷ್ಟು ಸುಖ ಯಾವ ಧರ್ಮವೂ ಸಹ ಕೊಡುವುದಿಲ್ಲ. ನೀವು ಸತ್ಯಯುಗದ ಮಾಲೀಕರಾಗಿದ್ದು ಈಗ ನರಕದ ಮಾಲೀಕರಾಗಿದ್ದೀರಿ. ಮತ್ತೆ ಸತ್ಯಯುಗದಲ್ಲಿ ಮೊದಲನೆ ಜನ್ಮವನ್ನು ತೆಗೆದುಕೊಳ್ಳುತ್ತೀರಿ. ಹಮ್ ಸೋ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನಾವು ಜೀವಾತ್ಮ ಈ ಸಮಯ ಬ್ರಾಹ್ಮಣ ಜನ್ಮದಲ್ಲಿ ಇದ್ದೇವೆ, ಈ ಜನ್ಮದ ಮೊದಲು ಶೂದ್ರರಾಗಿದ್ದೆವು. ನಾಳೆ ಹಮ್ ಸೋ ದೇವತಾ ನಂತರ ಕ್ಷತ್ರಿಯರಾಗುತ್ತೇವೆ. ಹೀಗೆ ವೈಶ್ಯ, ಶೂದ್ರರ ರಾಜ್ಯದಲ್ಲಿ ಬರುತ್ತೇವೆ. ಈಗ ನಮ್ಮದು ಏರುವ ಕಲೆಯಾಗಿದೆ. ಸತ್ಯಯುಗದಲ್ಲಿ ಈ ಜ್ಞಾನಯಿರುವುದಿಲ್ಲ. ಸತ್ಯಯುಗದ ಮೊದಲು ನಾವು ಇಳಿಯುವ ಕಲೆಯಲ್ಲಿದ್ದೆವು. ತಂದೆ ಬಂದು ಏರುವ ಕಲೆಯಲ್ಲಿ ಕರೆದೊಯ್ಯುತ್ತಾರೆ. ಆದರೆ ಈ ಎಲ್ಲಾ ಜ್ಞಾನವೂ ಯಾರ ಬುದ್ದಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಏಕೆಂದರೆ ಬುದ್ದಿಯೋಗ ನನ್ನ ಜೊತೆಯಲ್ಲಿ ಇಲ್ಲದ ಕಾರಣ ಬುದ್ದಿಯು ಚಿನ್ನದಂತೆ ಸತೋಪ್ರಧಾನ ಪಾತ್ರೆ ಆಗುವುದಿಲ್ಲ.

ತಂದೆ ಹೇಳುತ್ತಾರೆ – ಕೇವಲ ತಂದೆ, ತಂದೆ ಎಂದು ಮುಖದಿಂದ ಹೇಳಬಾರದು, ಆದರೆ ತಂದೆಯ ನೆನಪು ನಮ್ಮ ಆಂತರ್ಯದಲ್ಲಿ ಈ ರೀತಿ ಇರಬೇಕು, ಅಂದರೆ ಅಂತಿಮತಿ ಸೋ ಗತಿ ಸ್ಥಿತಿಯಲ್ಲಿರಬೇಕು. ದೇಹಭಾನವನ್ನು ಬಿಟ್ಟು ತಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಬೇಕು. ಎಷ್ಟು ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುತ್ತೀರಿ ಅಷ್ಟು ತಂದೆಯ ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ಬೇರೆ ಇನ್ನು ಯಾವ ಉಪಾಯವೂ ಇಲ್ಲ. ಭಗವಾನುವಾಚ ನೀವು ಈ ರೀತಿ ಎಲ್ಲರಿಗೂ ತಿಳಿಸಿಕೊಡಬೇಕು, ನೀವು ಯಾವ ಯಜ್ಞ, ತಪ, ದಾನ ಮಾಡುತ್ತೀರಿ ಅದರಿಂದ ನಾನು ನಿಮಗೆ ಸಿಗುವುದಿಲ್ಲ. ಈಗ ನೀವು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ಇದುವರೆಗು ಯಾರೂ ಸಹ ನನ್ನ ಮನೆಗೆ ಬರುವುದಿಲ್ಲ. ಈ ನಾಟಕದಲ್ಲಿ ಅಂತ್ಯದವರೆಗೆ ಎಲ್ಲಾ ಪಾತ್ರಧಾರಿಗಳು ಇರಬೇಕು. ಯಾವಾಗ ನಾಟಕ ಪೂರ್ತಿಯಾಗುತ್ತದೆ, ಎಲ್ಲರೂ ಮನೆಗೆ ಹಿಂತಿರುಗಬೇಕು. ಆತ್ಮಗಳು ವೃದ್ದಿಯಾಗುತ್ತಿರುತ್ತವೆ. ಮಧ್ಯದಲ್ಲಿ ಯಾರೂ ಸಹ ನಾಟಕವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಸ್ಥಾಪನೆ ಮಾಡುವಂತಹವರೂ ಸಹ ಇಲ್ಲಿಯೇ ಕುಳಿತಿದ್ದಾರೆ. ಎಂಬತ್ತನಾಲ್ಕು ಜನ್ಮ ತೆಗೆದುಕೊಳ್ಳುವವರೂ ಇದ್ದಾರೆ. ವೃಕ್ಷವೂ ನಿಸ್ಸಾರ ಸ್ಥಿತಿಯನ್ನು ಪಡೆಯುತ್ತದೆ. ಇವು ಬಹಳ ತಿಳಿದುಕೊಳ್ಳುವಂತಹ ಉತ್ತಮ ಮಾತುಗಳಾಗಿವೆ. ಬಹಳ ಎಚ್ಚರಿಕೆಯಿಂದ ಇರಬೇಕು, ಏಕೆಂದರೆ ಮಾಯೆ ಮೋಸ ಮಾಡುತ್ತದೆ. ತಮ್ಮ ಮುಖವನ್ನು ತಂದೆಯ ಸಮ್ಮುಖದಲ್ಲಿ ಇಟ್ಟುಕೊಳ್ಳಬೇಕು. ಸದಾ ಖುಷಿಯಲ್ಲಿರಬೇಕು (ಶವದ ಮುಖವನ್ನು ತಿರಿಗಿಸುತ್ತಾರೆ) ತಂದೆಯೂ ಸಹ ತಮ್ಮ ಮುಖವನ್ನು ಸ್ವರ್ಗದ ಕಡೆ ಮಾಡಿಕೊಂಡು, ನರಕದ ಕಡೆ ಕಾಲುಗಳನ್ನು ಇಟ್ಟುಕೊಳ್ಳಬೇಕು. ಆದುದರಿಂದ ಕೃಷ್ಣನ ಚಿತ್ರವನ್ನು ಈ ರೀತಿ ಮಾಡುತ್ತಾರೆ. ಶ್ಯಾಮ ಸುಂದರನ ರೂಪದಲ್ಲಿ ಕೃಷ್ಣನು ತೋರಿಸುತ್ತಾರೆ. ನೀವೂ ಸಹ ನಂಬರ್‍ವನ್ ಪಾವನರಾಗುತ್ತೀರೆಂದು ತಂದೆ ತಿಳಿಸುತ್ತಾರೆ. ಅರ್ಥಾತ್ ಮನುಷ್ಯರಿಂದ ದೇವತೆಗಳನ್ನಾಗಿ ಅರ್ಥಾತ್ ಕಲಿಯುಗವನ್ನು ಸತ್ಯಯುಗವನ್ನಾಗಿ ಮಾಡವುದು ತಂದೆ ಕರ್ತವ್ಯ ಆಗಿದೆ. ನಾವು ಶ್ರೀಮತದಂತೆ ವಿಶ್ವದಲ್ಲಿ ರಾಜ್ಯ ಸ್ಥಾಪನೆ ಮಾಡುತ್ತಿದ್ದೇವೆ, ಆ ರಾಜ್ಯದಲ್ಲಿ ಬಂದು ನಾವೇ ರಾಜ್ಯಭಾರ ಮಾಡುತ್ತೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಇದಕ್ಕಾಗಿ ಯಜ್ಞ, ತಪ ಮಾಡುವ ಆವಶ್ಯಕತೆಯೇನು ಇಲ್ಲ. ಬಾಬಾ ಇವರ ಮೂಲಕ ತನ್ನನ್ನು ನೆನಪು ಮಾಡುವ ಮತವನ್ನು ಕೊಡುತ್ತಾರೆ. ಈಗ ರಾಜಧಾನಿ ಸ್ಥಾಪನೆ ಆಗುತ್ತಿದೆ. ಆ ರಾಜಧಾನಿಯಲ್ಲಿ ನಿಮಗೆ ಯಾವ ಪದವಿ ಬೇಕೋ ಅದನ್ನು ತೆಗೆದುಕೊಳ್ಳಿ. ಹೇಗೆ ಮಮ್ಮಾ ಈಗ ಜ್ಞಾನ-ಜ್ಞಾನೇಶ್ವರಿ ಆಗಿದ್ದು, ಸತ್ಯಯುಗದಲ್ಲಿ ರಾಜ-ರಾಜೇಶ್ವರಿ ಆಗುತ್ತಾರೆ. ಇದು ರಾಜಯೋಗದ ಜ್ಞಾನವಾಗಿದೆ. ಇಂತಹ ಕಾಲೇಜ್‍ನಲ್ಲಿ ನೀವು ಬಹಳ ಚೆನ್ನಾಗಿ ಓದಬೇಕು. ಇಂದು ನಾನು ನಿಮಗೆ ಬಹಳ ಉತ್ತಮ ಪಾಯಿಂಟ್ಸನ್ನು ಹೇಳುತ್ತೇನೆ, ಆದುದರಿಂದ ಪೂರ್ಣ ಗಮನ ಇರಬೇಕು ಎಂದು ತಂದೆ ಹೇಳುತ್ತಾರೆ. ಮಿತ್ರ ಸಂಬಂಧಿಗಳ ಕಲ್ಯಾಣವನ್ನು ಸಹ ಮಾಡಿ. ಅದೃಷ್ಟದಲ್ಲಿರುವವರು ಮುಂದುವರೆಯುತ್ತಾರೆ. ಶಿವನ ಮಂದಿರದಲ್ಲಿ ಹೋಗಿ ಭಾಷಣ ಮಾಡಿ. ಶಿವ ತಂದೆ ನರಕವನ್ನು ಸ್ವರ್ಗವನ್ನಾಗಿ ಮಾಡಲು ಬಂದಿದ್ದಾರೆ. ಆಗ ಅನೇಕರು ಸ್ವರ್ಗವಾಸಿ ಆಗಲು ಬರುತ್ತಾರೆ. ಮಾಯೆಯ ಜೊತೆ ನಿಮ್ಮ ಶಕ್ತಿಶಾಲಿ ಯುದ್ಧ ನಡೆಯುತ್ತದೆ. ಬಹಳ ಉತ್ತಮ ಮಕ್ಕಳಿಗೆ ಇಂದು ನಶೆ ಏರಿ, ನಾಳೆ ಮಾಯೆಗೆ ವಶವಾಗುತ್ತಾರೆ. ಈಗ ಈ ಹಳೆಯ ಪ್ರಪಂಚ ಸಮಾಪ್ತಿ ಆಗುತ್ತಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಈಗ ಈ ಹಳೆಯ ಶರೀರವನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ಹೋಗಿ ನಮ್ಮ ಹೆಜ್ಜೆಯನ್ನು ಇಡುತ್ತೇವೆ. ಈ ದೆಹಲಿ ಸ್ವರ್ಗವಾಗುತ್ತದೆ. ಈಗ ಆ ಸ್ವರ್ಗದಲ್ಲಿ ಹೋಗುವ ಸಲುವಾಗಿ ಹೂವಾಗಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ದೇಹಾಭಿಮಾನವನ್ನು ಬಿಟ್ಟು ಆಂತರ್ಯದಲ್ಲಿಯೇ ತಂದೆಯನ್ನು ನೆನಪು ಮಾಡುತ್ತಾ, ಅಂತಿಮತಿ ಸೋ ಗತಿಯನ್ನು ತಲುಪಬೇಕು. ನೆನಪಿನಿಂದ ಬುದ್ದಿಯನ್ನು ಸತೋಪ್ರಧಾನ ಮಾಡಿಕೊಳ್ಳಬೇಕು.

2. ಎಂದಿಗೂ ಮನ್ಮತ ಅಥವಾ ಮತಬೇಧದಲ್ಲಿ ಬಂದು ವಿದ್ಯೆಯನ್ನು ಬಿಡಬಾರದು. ತಮ್ಮ ಮುಖವನ್ನು ಸ್ವರ್ಗದಲ್ಲಿ ಇಟ್ಟು ನರಕವನ್ನು ಮರೆಯಬೇಕು.

ವರದಾನ:-

ನಾವು ಸರ್ವ ಶ್ರೇಷ್ಠ ಆತ್ಮರಾಗಿದ್ದೇವೆ, ಸರ್ವಶ್ರೇಷ್ಠ ಭಗವಂತನ ಮಕ್ಕಳಾಗಿದ್ದೇವೆ ಎಂಬ ಗೌರವವು ಸರ್ವಶ್ರೇಷ್ಠ ನಶೆಯಾಗಿದೆ. ಯಾರು ಈ ಶ್ರೇಷ್ಠವಾದ ಗೌರವಯುಕ್ತ ಸ್ಥಿತಿಯಲ್ಲಿರುತ್ತಾರೆಯೋ ಅವರೆಂದಿಗೂ ಬೇಸರವಾಗಲು ಸಾಧ್ಯವಿಲ್ಲ. ದೇವತಾ ಸ್ಥಿತಿಗಿಂತಲೂ ಶ್ರೇಷ್ಠವಾದುದು ಈ ಬ್ರಾಹ್ಮಣನೆಂಬ ಗೌರವದಲ್ಲಿರುವುದು. ಸರ್ವ ಪ್ರಾಪ್ತಿಗಳ ಪಟ್ಟಿಯನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತೀರೆಂದರೆ, ತಮ್ಮ ಶ್ರೇಷ್ಠ ಗೌರವವು ಸದಾ ಸ್ಮೃತಿಯಲ್ಲಿರುತ್ತದೆ ಹಾಗೂ ಇದೇ ಹಾಡನ್ನು ಹಾಡುತ್ತಾ ಇರುತ್ತೀರಿ – ಪಡೆಯಬೇಕಾದದ್ದನ್ನು ಪಡೆದೆನು…. ಸರ್ವ ಪ್ರಾಪ್ತಿಗಳ ಸ್ಮೃತಿಯಿಂದ ಮಾಸ್ಟರ್ ಸರ್ವಶಕ್ತಿವಂತನ ಸ್ಥಿತಿಯು ಸಹಜವಾಗಿ ತಯಾರಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top