07 July 2021 KANNADA Murli Today | Brahma Kumaris

Read and Listen today’s Gyan Murli in Kannada

July 6, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವಿಲ್ಲಿ ತನ್ನ ಸಹಿತ ಇಡೀ ಪ್ರಪಂಚದ ಕಾಯ ಕಲ್ಪ ತರುವನ್ನಾಗಿ ಮಾಡಲು ಬಂದಿದ್ದೀರಿ, ನೆನಪಿನಿಂದಲೇ ಕಾಯ ಕಲ್ಪ ತರುವಾಗುವುದು”

ಪ್ರಶ್ನೆ:: -

ನರಕವಾಸಿಗಳಿಂದ ಸ್ವರ್ಗವಾಸಿಗಳಾಗುವ ವಿಧಿ ಯಾವುದಾಗಿದೆ? ಈಗ ನೀವು ಮಕ್ಕಳಿಗೆ ಜೀವದಾನ ಸಿಗುತ್ತದೆ – ಹೇಗೆ?

ಉತ್ತರ:-

ನರಕವಾಸಿಗಳಿಂದ ಸ್ವರ್ಗವಾಸಿಗಳಾಗಲು ಅವಶ್ಯವಾಗಿ ಸಾಯಬೇಕಾಗುತ್ತದೆ. ತಂದೆಯು ಹೇಳುತ್ತಾರೆ – ನಾನು ನಿಮ್ಮೆಲ್ಲರಿಗೆ ಮೃತ್ಯುವನ್ನು ಕೊಡಲು ಬಂದಿದ್ದೇನೆ, ನಿಮ್ಮ ಈ ದೇಹವನ್ನು ಸಮಾಪ್ತಿ ಮಾಡಿಸಿ ಆತ್ಮಗಳನ್ನು ಕರೆದುಕೊಂಡು ಹೋಗುತ್ತೇನೆ. ಇದೇ ಸತ್ಯವಾದ ಜೀವದಾನವಾಗಿದೆ, ಇದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ, ಇದರಲ್ಲಿ ಎಲ್ಲದರ ವಿನಾಶವಾಗುವುದು ನಂತರ ಆತ್ಮರು ಪಾವನರಾಗಿ ಮನೆಗೆ ಹಿಂತಿರುಗುವರು ನಂತರ ಸ್ವರ್ಗದಲ್ಲಿ ಬರುವರು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮಾತೆ ಓ ಮಾತೆ ನೀನೇ ಎಲ್ಲರ ಭಾಗ್ಯ ವಿದಾತೆ…….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಜಗದಂಬೆಯ ಮಹಿಮೆಯನ್ನು ಕೇಳಿದಿರಿ. ಭಾರತದಲ್ಲಿಯೇ ಜಗದಂಬೆಯ ಗಾಯನವಿದೆ, ಜಗದಂಬೆಯಿದ್ದಾರೆ ಅಂದಮೇಲೆ ಜಗತ್ಪಿತನೂ ಅವಶ್ಯವಾಗಿ ಇರುವರು. ಸರಸ್ವತಿಗೆ ಜಗದಂಬೆ ಎಂದು ಹೇಳುತ್ತಾರೆ, ವಾಸ್ತವದಲ್ಲಿ ಅವರ ಹೆಸರು ಒಂದೇ ಇರಬೇಕಾಗಿದೆ. ನಿಮ್ಮದು ಒಂದೇ ಹೆಸರಿದೆಯಲ್ಲವೆ. 2-3 ಹೆಸರುಗಳಂತೂ ಇಲ್ಲ. ಜಗದಂಬೆಯನ್ನು ಸಾಕಾರದಲ್ಲಿ ತೋರಿಸುತ್ತಾರೆ, ಶರೀರಧಾರಿಯಾಗಿದ್ದಾರೆ ಹಾಗೆಯೇ ಜಗತ್ಪಿತನೂ ಇದ್ದಾರೆ, ಅವರಿಗೆ ಪ್ರಜಾಪಿತನೆಂದೂ ಹೇಳಲಾಗುತ್ತದೆ. ಹೇಗೆ ಇಡೀ ಜಗತ್ತಿಗೆ ತಾಯಿಯಾಗಿದ್ದಾರೆಯೋ ಅದೇ ರೀತಿ ಇಡೀ ಜಗತ್ತಿನ ತಂದೆಯೂ ಇದ್ದಾರೆ. ಅವಶ್ಯವಾಗಿ ಇಬ್ಬರೂ ಇಲ್ಲಿಯೇ ಇರುವರು. ಇಬ್ಬರ ಹೆಸರನ್ನೂ ತಿಳಿಸಿದೆನು – ಪ್ರಜಾಪಿತ ಮತ್ತು ಪ್ರಜಾ ಮಾತಾ ಹಾಗೂ ನಿರಾಕಾರ ಶಿವ ತಂದೆಗೂ ಸಹ ಜಗತ್ಪಿತನೆಂದು ಹೇಳಲಾಗುತ್ತದೆ. ಅವರು ಎಲ್ಲರ ಪಿತನಾಗಿದ್ದಾರೆ. ಅವರ ಹೆಸರೇ ಆಗಿದೆ – ಪರಮಪಿತ ಪರಮಾತ್ಮ ಶಿವ. ಕೇವಲ ಈಶ್ವರ ಅಥವಾ ಪರಮಾತ್ಮ ಎಂದು ಹೇಳಬಾರದು. ಅವರಿಗೆ ನಾಮ-ರೂಪವೂ ಇದೆಯಲ್ಲವೆ. ಗಾಡ್ಫಾದರ್ ಎಂದು ಹೇಳಲಾಗುತ್ತದೆ, ಒಬ್ಬರು ಆತ್ಮಗಳ ತಂದೆಯಾಗಿದ್ದಾರೆ, ಇನ್ನೊಬ್ಬರು ಸಾಕಾರಿ ಮನುಷ್ಯಾತ್ಮರ ತಂದೆ ಮತ್ತು ತಾಯಿಯಾಗಿದ್ದಾರೆ. ಶಿವನು ಆತ್ಮರ ಪಿತನಾಗಿದ್ದಾರೆ, ಅವರು ನಮ್ಮ ತಂದೆಯಾಗಿದ್ದಾರೆಂದು ಆತ್ಮವು ಹೇಳುತ್ತದೆ ಮತ್ತೆ ಆತ್ಮಕ್ಕೆ ಈ ಸಾಕಾರ ಶರೀರವು ಸಿಕ್ಕಿದಾಗ ಬ್ರಹ್ಮಾ ತಂದೆ ಎಂದು ಹೇಳುತ್ತಾರೆ ಅಂದಮೇಲೆ ಇಬ್ಬರು ತಂದೆಯರಾದರು. ಒಬ್ಬರು ಶಿವ ತಂದೆ, ಇನ್ನೊಬ್ಬರು ಪ್ರಜಾಪಿತ ಬ್ರಹ್ಮಾ. ಬ್ರಹ್ಮನು ಶಿವ ತಂದೆಯ ಮಗನಾಗಿದ್ದಾರೆ. ಒಬ್ಬರು ನಿರಾಕಾರಿ ಪಿತ, ಇನ್ನೊಬ್ಬರು ಸಾಕಾರಿ ಪಿತ. ನಿರಾಕಾರ ಪಿತನಿಗೆ ಪತಿತ-ಪಾವನನೆಂದು ಹೇಳಲಾಗುತ್ತದೆ. ಬ್ರಹ್ಮಾ ಹಾಗೂ ಸರಸ್ವತಿಗೆ ಪತಿತ-ಪಾವನರೆಂದು ಹೇಳಲಾಗುವುದಿಲ್ಲ. ಪತಿತ-ಪಾವನನು ಒಬ್ಬರೇ ಆಗಿದ್ದಾರೆ, ಇವರಂತೂ ಇಬ್ಬರಾದರು. ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ ಅಂದಾಗ ಇಬ್ಬರು ತಂದೆಯರಾದರು. ಶಿವ ತಂದೆಯು ರಚಯಿತನಾಗಿದ್ದಾರೆ, ಹೊಸ ಪ್ರಪಂಚವನ್ನು ರಚಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಮೊದಲು ಬ್ರಹ್ಮನನ್ನು ರಚಿಸಬೇಕಾಗಿದೆ, ವಿಷ್ಣು ಮತ್ತು ಶಂಕರನಿಗೆ ಎಂದೂ ಪ್ರಜಾಪಿತನೆಂದು ಹೇಳುವುದಿಲ್ಲ, ಬ್ರಹ್ಮನಿಗೇ ಪ್ರಜಾಪಿತನೆಂದು ಹೇಳುತ್ತಾರೆ ಅಂದಮೇಲೆ ಶಿವ ತಂದೆಯು ಪ್ರಜಾಪಿತ ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ನಾವು ಶಿವ ತಂದೆಯ ಮಕ್ಕಳೆಂದು ಹೇಳುತ್ತೀರಿ, ಶಿವ ತಂದೆಯು ಇವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಂಡಿದ್ದಾರೆ, ಅವರೇ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ಆತ್ಮವೇ ಪತಿತವಾಗಿದೆ, ಈ ಕಾರಣದಿಂದ ಶರೀರವು ಪತಿತವಾದದ್ದೇ ಸಿಗುತ್ತದೆ. ಹೇಗೆ ಚಿನ್ನದಲ್ಲಿ ಬೆಳ್ಳಿ, ತಾಮ್ರ, ಕಬ್ಬಿಣವನ್ನು ಬೆರೆಸುತ್ತಾರೆಯೋ ಅದೇ ರೀತಿ ಆತ್ಮದಲ್ಲಿಯೂ ತುಕ್ಕು ಬೀಳುತ್ತದೆ, ಮೂಲತಃ ಆತ್ಮವು ಪವಿತ್ರ, ಮುಕ್ತಿಧಾಮದ ನಿವಾಸಿಯಾಗಿದೆ. ಅಲ್ಲಿ ಶಿವ ತಂದೆಯು ಇರುತ್ತಾರೆ. ಶಿವ ತಂದೆ, ಪ್ರಜಾಪಿತ ಬ್ರಹ್ಮಾರಲ್ಲಿ ಒಬ್ಬರಿಗೆ ತಂದೆಯೆಂತಲೂ, ಇನ್ನೊಬ್ಬರಿಗೆ ದಾದಾ ಎಂತಲೂ ಹೇಳುತ್ತೀರಿ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಎಲ್ಲಾ ಮನುಷ್ಯ ಮಾತ್ರರು ಶಿವನ ಸಂತಾನರಾಗಿದ್ದಾರೆ, ಶಿವವಂಶಿಯರಾಗಿದ್ದಾರೆ ಮತ್ತೆ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಶಿವ ತಂದೆ ಮತ್ತು ಬ್ರಹ್ಮಾದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ, ಶಿವ ತಂದೆಯು ಇವರಲ್ಲಿ ವಿರಾಜಮಾನವಾಗಿದ್ದಾರೆ, ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಬ್ರಾಹ್ಮಣರನ್ನಾಗಿ ಮಾಡಿ ರಾಜಯೋಗವನ್ನು ಕಲಿಸುತ್ತಾರೆ. ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ದೇವತೆಗಳಿಗೆ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ, ಅವರಿಗೆ ತಂದೆಯೆಂತಲೂ ಹೇಳಲು ಸಾಧ್ಯವಿಲ್ಲ. ನೀವೀಗ ವಿಷ್ಣುಪುರಿಯ ಮಾಲೀಕರಾಗುತ್ತಿದ್ದೀರಿ, ವಿಷ್ಣುವಿನ ಎರಡು ರೂಪಗಳು ಲಕ್ಷ್ಮೀ-ನಾರಾಯಣರಾಗಿದ್ದಾರೆ, ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಯಾರು ಭಕ್ತಿ ಮಾಡುವರೋ ಅವರಿಗೆ ಅವಶ್ಯವಾಗಿ ಇಬ್ಬರು ತಂದೆಯರಿದ್ದಾರೆ. ಸತ್ಯಯುಗದಲ್ಲಿ ಒಬ್ಬ ತಂದೆಯಿರುತ್ತಾರೆ, ಅಲ್ಲಿ ಹೇ ಪರಮಪಿತ ಪರಮಾತ್ಮ, ದುಃಖಹರ್ತ-ಸುಖಕರ್ತ ಬನ್ನಿ ಎಂದು ಹೇಳುವುದಿಲ್ಲ. ಅಲ್ಲಂತೂ ದೇವಿ-ದೇವತೆಗಳ ರಾಜ್ಯವಿತ್ತು, ಅವರೆಂದೂ ಓ ಗಾಡ್ಫಾದರ್, ಲಿಬರೇಟರ್ ಎಂದು ಹೇಳುವುದಿಲ್ಲ. ಪತಿತ-ಪಾವನನ್ನು ಕರೆಯಲು ಅಲ್ಲಿ ಯಾರೂ ದುಃಖಿ-ಪತಿತರಿರುವುದೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಭಾರತದಲ್ಲಿ ಇಂದಿಗೆ 5000 ವರ್ಷಗಳ ಮೊದಲು ದೇವಿ-ದೇವತೆಗಳ ರಾಜ್ಯವಿತ್ತು, ಮತ್ತೆ 1250 ವರ್ಷಗಳ ನಂತರ ರಾಮ-ಸೀತೆಯರ ರಾಜ್ಯವಾಗುತ್ತದೆ. ತಂದೆಯು ಸಿದ್ಧ ಮಾಡಿ ತಿಳಿಸುತ್ತಾರೆ – ಸತ್ಯ-ತ್ರೇತಾಯುಗದಲ್ಲಿ ನೀವು 21 ಜನ್ಮಗಳನ್ನು ತೆಗೆದುಕೊಂಡಿರಿ. ಬ್ರಾಹ್ಮಣ-ದೇವತಾ, ಕ್ಷತ್ರಿಯ….. ಎಲ್ಲವೂ ಭಾರತದಲ್ಲಿಯೇ ಆಗುತ್ತಾರೆ, ತಂದೆಯು ಬಂದು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ, ಪುನರ್ಸ್ಥಾಪನೆ ಮಾಡುತ್ತಾರೆ. ಕಾಯ ಕಲ್ಪತರುವನ್ನಾಗಿ ಮಾಡುತ್ತಾರೆ, ಅಮರವನ್ನಾಗಿ ಮಾಡುತ್ತಾರೆ. ನೀವು ಮಕ್ಕಳನ್ನು ತಂದೆಯು ಬಂದು ಅಮರ ಲೋಕದ ಮಾಲೀಕರನ್ನಾಗಿ ಮಾಡುತ್ತಾರೆ. ಭಾರತವು ಅಮರ ಲೋಕವಾಗಿದ್ದಾಗ ದೇವತೆಗಳ ರಾಜ್ಯವಿತ್ತು, ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಬಂದು ಮೃತ್ಯುಲೋಕದ ಮಾಲೀಕರಾಗಿದ್ದೀರಿ. ನಮ್ಮ ಭಾರತವೆಂದು ಹೇಳುತ್ತಾರೆ ಅಂದಮೇಲೆ ಪ್ರಜೆಗಳೂ ಮಾಲೀಕರಾದರಲ್ಲವೆ. ನೀವೂ ಸಹ ನಮ್ಮ ಭಾರತವೆಂದು ಹೇಳುತ್ತೀರಿ, ನಾವು ಭಾರತದ ಮಾಲೀಕರಾಗಿದ್ದೆವು ಆದರೆ ನರಕವಾಸಿಗಳು. ನಾವು ಸ್ವರ್ಗವಾಸಿಗಳಾಗಿದ್ದೇವೆ ಎಂದು ದೇವತೆಗಳು ಹೇಳುತ್ತಾರೆ, ನೀವೂ ಸಹ ಸ್ವರ್ಗವಾಸಿಗಳಾಗಿದ್ದಿರಿ ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ನರಕವಾಸಿಗಳಾಗಿದ್ದೀರಿ, ಇಲ್ಲಿ ಭಾರತದಲ್ಲಿಯೇ ಶಿವ ತಂದೆಯು ಅವತರಣೆ ಮಾಡುತ್ತಾರೆ, ಶಿವ ರಾತ್ರಿ ಮತ್ತು ಶಿವ ಜಯಂತಿ ಎಂದು ಗಾಯನವಿದೆ, ಕೃಷ್ಣ ಜಯಂತಿಯನ್ನೂ ಆಚರಿಸುತ್ತಾರೆ. ಇಂತಹ ಸಮಯದಲ್ಲಿ ಕೃಷ್ಣನ ಜನ್ಮವಾಯಿತೆಂದು ದಿನಾಂಕ, ವೇಳೆಯನ್ನು ತಿಳಿಸುತ್ತಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ತಾಯಿಯ ಗರ್ಭದಿಂದಲೇ ಜನ್ಮ ಪಡೆದಿರಬೇಕು, ಸತ್ಯಯುಗ, ಹೊಸ ಪ್ರಪಂಚದಲ್ಲಿ ಕೃಷ್ಣ ಜಯಂತಿಯಾಗುತ್ತದೆ ನಂತರ ಕೃಷ್ಣನು ಪುನರ್ಜನ್ಮದಲ್ಲಿ ಬರತೊಡಗಿದನು. ತಂದೆಯು ಕೇವಲ ಒಬ್ಬರ ಮಾತನ್ನು ತಿಳಿಸುವುದಿಲ್ಲ, ಕೃಷ್ಣ ಪುರಿಯೇ ವಿಷ್ಣು ಪುರಿ ರಾಜರು ಕೆಳಗಿಳಿಯುತ್ತಾರೆ. ಅವರ ರಾಜಧಾನಿಯೂ ಸಹ ಕನಿಷ್ಠ ಮಟ್ಟಕ್ಕೆ ಬರುತ್ತದೆ. ಅದರಲ್ಲಿ ರಾಜ-ರಾಣಿ, ಪ್ರಜೆಗಳೆಲ್ಲರೂ ಬರುತ್ತಾರೆ. ಯಾವಾಗ ಚಂದ್ರವಂಶಿಯರ ರಾಜ್ಯವಿರುವುದೋ ಆಗ ಸೂರ್ಯವಂಶಿಯರ ರಾಜ್ಯವು ಕಳೆದು ಹೋಗುತ್ತದೆ. ಅವರ ರಾಜ್ಯವೇ ಚಂದ್ರವಂಶಿಯರಿಗೆ ಸಿಗುತ್ತದೆ ನಂತರ ವೈಶ್ಯ ವಂಶಿಯರಿಗೆ ಸಿಗುತ್ತದೆ.

ಈಗ ನೀವು ತಿಳಿದುಕೊಳ್ಳುತ್ತೀರಿ – ನಾವು ಬ್ರಾಹ್ಮಣ ಕುಲದವರು ಜುಟ್ಟಿಗೆ ಸಮಾನರಾಗಿದ್ದೇವೆ. ಜುಟ್ಟಿಗೂ ಮೇಲೆ ತಂದೆಯಿದ್ದಾರೆ, ನಾವು ಮೊದಲು ಬ್ರಾಹ್ಮಣರಾಗಿದ್ದೆವು ನಂತರ ಶೂದ್ರರು ಅಥವಾ ಪಾದಗಳಿಗೆ ಸಮಾನರಾದೆವು, ಈಗ ಪಾದಗಳಿಂದ ಒಮ್ಮೆಲೆ ಶಿಖೆಗೆ ಸಮಾನರಾಗುತ್ತೇವೆ. ಮೊದಲು ಶಿವ ತಂದೆ ಅವರ ನಂತರ ಶಿಖೆಯಿರುತ್ತದೆ. ತಂದೆಯು ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡಿದ್ದಾರೆ, ಈಗ ನೀವು ಶಿವ ತಂದೆಯನ್ನು ಬಾಬಾ, ಬಾಬಾ ಎಂದು ಹೇಳುತ್ತೀರಿ. ಈ ಲೆಕ್ಕದಿಂದ ನೀವು ಮೊಮ್ಮಕ್ಕಳಾಗಿದ್ದೀರಿ. ನಿಮಗೆ ತಿಳಿದಿದೆ – ನಾವೆಲ್ಲರೂ ಬ್ರಹ್ಮನ ಸಂತಾನರು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೇವೆ. ನಾವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಸಹೋದರ-ಸಹೋದರಿಯರ ನಡುವೆ ಎಂದೂ ಕುದೃಷ್ಟಿ ಬರಲು ಸಾಧ್ಯವಿಲ್ಲ. ಎಷ್ಟೊಂದು ಮಂದಿ ಮಕ್ಕಳೆಲ್ಲರೂ ಬಾಬಾ ಎಂದು ಹೇಳುತ್ತಾರೆ ಅಂದಮೇಲೆ ಇದೆಲ್ಲವೂ ಸುಳ್ಳಾಗಲು ಸಾಧ್ಯವೇ! ಎಲ್ಲರ ತಂದೆಯಂತೂ ನಿರಾಕಾರ ಶಿವನಾಗಿದ್ದಾರೆ ಮತ್ತು ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮನಾಗಿದ್ದಾರೆ, ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿಯರಾದರು ಅಂದಮೇಲೆ ನೀವು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಸ್ತ್ರೀ-ಪುರುಷರು ಹೇಗೆ ಪವಿತ್ರರಾಗಿರುವುದು ಆದ್ದರಿಂದ ಡ್ರಾಮಾದಲ್ಲಿ ಈ ಯುಕ್ತಿಯು ನಿಗಧಿಯಾಗಿದೆ, ಇಲ್ಲಿ ಕೇವಲ ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ. ಯಾರೂ ಶೂದ್ರ ಕುಮಾರ-ಕುಮಾರಿಯರಲ್ಲ. ಅವರು ಪತಿತ, ಶೂದ್ರ, ತುಚ್ಛ ಬುದ್ಧಿಯವರಾಗಿದ್ದಾರೆ ಏಕೆಂದರೆ ತಂದೆಯನ್ನು ಅರಿತುಕೊಂಡಿಲ್ಲ. ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ ಅಂದಮೇಲೆ ಅವರ ವಿಳಾಸ ಗೊತ್ತಿದೆಯೇ? ನಾಮ-ರೂಪ, ದೇಶ-ಕಾಲವನ್ನು ತಿಳಿಸಿ, ಅವರ ಜೀವನ ಕಥೆಯನ್ನು ತಿಳಿಸಿ? ಒಂದುವೇಳೆ ತಿಳಿದಿಲ್ಲವೆಂದರೆ ನಾಸ್ತಿಕರಾದರು. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲ. ಇದು ಪತಿತ ಪ್ರಪಂಚವಾಗಿದೆ, ಸತ್ಯಯುಗ ಪಾವನ ಪ್ರಪಂಚ, ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸಂಪೂರ್ಣ ತಮೋಪ್ರಧಾನರಾಗಿದ್ದಾರೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ. ಇದಕ್ಕೂ ಸಹ ಹಂತಗಳಿರುತ್ತವೆ. ದ್ವಾಪರದಿಂದ ನರಕವಾಗಲು ಆರಂಭವಾಗುತ್ತದೆ, ನಂತರ ವೃದ್ಧಿಯಾಗುತ್ತದೆ. ಭಕ್ತಿಯೂ ಸಹ ಮೊದಲು ಸತೋಪ್ರಧಾನ, ಅವ್ಯಭಿಚಾರಿಯಾಗಿತ್ತು ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ನೀವು ನೋಡಿರಬಹುದು – ಎಲ್ಲಿ ಮೂರುದಾರಿಗಳು ಸೇರುವವೋ ಅದಕ್ಕೆ ಟಿವಾಟೆ ಎಂದು ಹೇಳುತ್ತಾರೆ. ಅದರ ಮೇಲೆ ತೈಲ ಇತ್ಯಾದಿಗಳನ್ನು ಹಾಕುತ್ತಾರೆ, ಕೈ ಮುಗಿಯುತ್ತಾರೆ ಅಂದಾಗ ಆಲೋಚಿಸಿ – ಶಿವ ತಂದೆಯ ಪೂಜೆಯೆಲ್ಲಿ, ಆ ಟಿವಾಟೆಯ ಪೂಜೆಯೆಲ್ಲಿ! ಇದಕ್ಕೇ ತಮೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ನೀರಿಗೂ ಪೂಜೆ ಮಾಡುತ್ತಾರೆ. ಪತಿತ-ಪಾವನಿ ಗಂಗೆಯೆಂದು ಹಾಡುತ್ತಾರೆ ಆದರೆ ಪತಿತ-ಪಾವನ ಯಾರು? ನೀರಿನ ಗಂಗೆಯು ಪತಿತ-ಪಾವನಿಯಾಗಲು ಸಾಧ್ಯವೇ! ಅದಂತೂ ಸ್ಥೂಲ ನೀರಲ್ಲವೆ. ಪತಿತ-ಪಾವನನು ತಂದೆಯಾಗಿದ್ದಾರೆ, ಶಿವ ಜಯಂತಿಯೂ ಭಾರತದಲ್ಲಿಯೇ ಆಗುತ್ತದೆ ಅಂದಮೇಲೆ ಅವಶ್ಯವಾಗಿ ಪತಿತರನ್ನು ಪಾವನ ದೇವತೆಗಳನ್ನಾಗಿ ಮಾಡಲು ಭಾರತದಲ್ಲಿಯೇ ಬಂದಿರಬೇಕಲ್ಲವೆ. ಬ್ರಹ್ಮನ ತನುವಿನಲ್ಲಿ ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ, ನೀವಿಲ್ಲಿ ಪತಿತರಿಂದ ಪಾವನ ಆಗುವುದಕ್ಕಾಗಿಯೇ ಬರುತ್ತೀರಿ. ಹೇಗೆ ನಿಮಗೆ ಎರಡು ಭುಜಗಳಿವೆಯೋ ಹಾಗೆಯೇ ಎರಡು ಭುಜಗಳಿರುತ್ತವೆ, ನಾಲ್ಕೆಂಟು ಭುಜಗಳುಳ್ಳ ಮನುಷ್ಯರು ಯಾರೂ ಇರುವುದಿಲ್ಲ. ಇದು ಕೇವಲ ಅಲಂಕಾರಗಳನ್ನು ತೋರಿಸಿದ್ದಾರೆ. ಪ್ರವೃತ್ತಿಯನ್ನು ತೋರಿಸುವುದಕ್ಕಾಗಿ ಚತುರ್ಭುಜವನ್ನು ತೋರಿಸಿದ್ದಾರೆ. ಲಕ್ಷ್ಮೀ-ನಾರಾಯಣ ಪುರಿಗೆ ವಿಷ್ಣು ಪುರಿಯೆಂದು ಹೇಳಲಾಗುತ್ತದೆ. ವಿಷ್ಣುವಿನಿಂದ ವೈಷ್ಣವ ಶಬ್ಧವು ಬಂದಿದೆ, ದೇವತೆಗಳು ವೈಷ್ಣವರಾಗಿದ್ದರು. ವಲ್ಲಭಾಚಾರಿ ವೈಷ್ಣವರು ಸಸ್ಯಹಾರಿಗಳಾಗಿರುತ್ತಾರೆ. ಅವರೇನೂ ನಿರ್ವಿಕಾರಿಗಳು ಆಗಿರುವುದಿಲ್ಲ, ಅವರದು ದೊಡ್ಡ ಮಹಲುಗಳಿರುತ್ತವೆ. ವೈಷ್ಣವ ಎಂಬುದರ ಅರ್ಥವನ್ನೇ ತಿಳಿದುಕೊಂಡಿಲ್ಲ, ವಾಸ್ತವದಲ್ಲಿ ವಿಷ್ಣು ಪುರಿಯಲ್ಲಿ ಇರುವವರಿಗೆ ವೈಷ್ಣವರೆಂದು ಹೇಳಲಾಗುತ್ತದೆ, ಪವಿತ್ರರಿಗೆ ವೈಷ್ಣವರೆಂದು ಹೇಳಲಾಗುತ್ತದೆ. ರಾಧೆ-ಕೃಷ್ಣರ ಮಂದಿರವೇ ಬೇರೆ, ಲಕ್ಷ್ಮೀ-ನಾರಾಯಣರ ಮಂದಿರವನ್ನೇ ಬೇರೆಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಅವರಲ್ಲಿ ಏನು ವ್ಯತ್ಯಾಸವಿದೆಯೆಂಬುದನ್ನು ಭಾರತವಾಸಿಗಳು ತಿಳಿದುಕೊಂಡೇ ಇಲ್ಲ. ರಾಧೆ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ರಾಧೆ-ಕೃಷ್ಣ ಇದು ಬಾಲ್ಯದ ರೂಪವಾಗಿದೆ. ಲಕ್ಷ್ಮೀ-ನಾರಾಯಣ ಇದು ದೊಡ್ಡವರ ರೂಪವಾಗಿದೆ. ಲಕ್ಷ್ಮೀ-ನಾರಾಯಣರ ಬಾಲ್ಯದ ಚಿತ್ರ ಯಾವುದೂ ಇಲ್ಲ, ಲಕ್ಷ್ಮೀ-ನಾರಾಯಣರನ್ನು ಸತ್ಯಯುಗದಲ್ಲಿಯೂ, ರಾಧೆ-ಕೃಷ್ಣರನ್ನು ದ್ವಾಪರದಲ್ಲಿಯೂ ತೆಗೆದುಕೊಂಡು ಹೋಗಿದ್ದಾರೆ. ನೀವೀಗ ರಚಯಿತ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ತಂದೆಯು ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ, ಡ್ರಾಮಾದ ರಹಸ್ಯವನ್ನೂ ತಿಳಿಸುತ್ತಾರೆ. ವೃಕ್ಷವನ್ನು ನೋಡಿದಾಗ ಶಂಕರಾಚಾರ್ಯರು ಕಲಿಯುಗದಲ್ಲಿ ಬರುತ್ತಾರೆ ತಿಳಿದುಕೊಳ್ಳುತ್ತಾರೆ. ಸನ್ಯಾಸಿಗಳ ವಂಶವು ಸತ್ಯಯುಗದಲ್ಲಂತೂ ಇರಲು ಸಾಧ್ಯವಿಲ್ಲ. ಎಲ್ಲರೂ ಭಗವಂತನ ಮಕ್ಕಳೆಂದ ಮೇಲೆ ಸ್ವರ್ಗವಾಸಿಗಳಾಗಬೇಕು ಆದರೆ ಎಲ್ಲರೂ ಸ್ವರ್ಗವಾಸಿಗಳಾಗುವುದಿಲ್ಲ, ಕೇವಲ ದೇವತೆಗಳೇ ಆಗುತ್ತಾರೆ. ಈಗ ನೀವು ಬ್ರಾಹ್ಮಣ ವಂಶಿಯರಾಗಿದ್ದೀರಿ ನಂತರ ದೇವತೆಗಳಾಗುತ್ತೀರಿ ಅಂದಮೇಲೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

ನೀವು ತಿಳಿದುಕೊಂಡಿದ್ದೀರಿ – ಹಿರಿಯರು, ಕಿರಿಯರು ಎಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಬಾಬಾ, ನಾವು ನಿಮ್ಮ ಮಕ್ಕಳಾಗಿದ್ದೇವೆ, ಬ್ರಾಹ್ಮಣರಾಗಿದ್ದೇವೆಂದು ಇಬ್ಬರೂ ಹೇಳುತ್ತಾರೆ. ಇವರು ಬಾಪ್ದಾದಾ ಆಗಿದ್ದಾರೆ – ಆದಿ ದೇವ ಬ್ರಹ್ಮಾ ಮತ್ತು ಶಿವ ತಂದೆ. ನಾವು ಬ್ರಹ್ಮಾ ತಂದೆ ಮತ್ತು ಶಿವ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ತಂದೆಯು ಹೇಳುತ್ತಾರೆ – ನನ್ನನ್ನು ನೆನಪು ಮಾಡಿದರೆ ಪತಿತರಿಂದ ಪಾವನರಾಗುತ್ತೀರಿ. ನಾವು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶಿವ ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಪತಿತ-ಪಾವನನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಇದು ಸಂಗಮಯುಗವಾಗಿದೆ, ಪತಿತರಿಂದ ಪಾವನರಾಗುವ ಮೇಳವಾಗಿದೆ. ಪತಿತ-ಪಾವನನ ಮೂಲಕವೇ ಪಾವನರಾಗುತ್ತೀರಿ. ಸಂಗಮದಲ್ಲಿ ನದಿಗಳು ಮತ್ತು ಸಾಗರನ ಮೇಳವಾಗಿದೆ. ನದಿಗಳ ಮೇಳವಂತೂ ಅಲ್ಲ. ಈಗ ಜ್ಞಾನ ಸಾಗರ ಮತ್ತು ನೀವಾತ್ಮರ ಮೇಳವಾಗುತ್ತದೆ. ನೀವು ಜ್ಞಾನ ಸಾಗರನ ಬಳಿ ಬಂದಿದ್ದೀರಿ. ಜ್ಞಾನ ಗಂಗೆಯರಾದ ನೀವು ಜ್ಞಾನ ಸಾಗರನಿಂದ ಹೊರಟಿದ್ದೀರಿ. ನೀವು ಜ್ಞಾನ ಸ್ನಾನ ಮಾಡಿಸಿ ಪಾವನರನ್ನಾಗಿ ಮಾಡುತ್ತೀರಿ, ಯೋಗವನ್ನು ಕಲಿಸುತ್ತೀರಿ. ಸಾಗರನ ಪರಿಚಯ ನೀಡಿ ನೀವು ಈ ಮೇಳದಲ್ಲಿ ಕರೆದುಕೊಂಡು ಬಂದಿದ್ದೀರಿ. ಈ ಸಮಯದಲ್ಲಿ ನೀವು ಬ್ರಾಹ್ಮಣರಾದಾಗ ನಿಮಗೆ ಮೂರು ಜನ ತಂದೆಯರಿರುತ್ತಾರೆ. ಲೌಕಿಕ ತಂದೆಯೂ ಇದ್ದಾರೆ ಮತ್ತು ಪ್ರಜಾಪಿತನೂ ಇದ್ದಾರೆ, ಶಿವ ತಂದೆಯೂ ಇದ್ದಾರೆ. ಭಕ್ತಿಮಾರ್ಗದಲ್ಲಿ ಇಬ್ಬರು ತಂದೆಯರಿರುತ್ತಾರೆ, ಸತ್ಯಯುಗದಲ್ಲಿ ಒಬ್ಬರೇ ತಂದೆಯಿರುವರು. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನಿಮ್ಮ ಆತ್ಮವು ಹೇಳುತ್ತದೆ – ನನ್ನವರು ಒಬ್ಬ ಶಿವ ತಂದೆಯ ಹೊರತು ಮತ್ತ್ಯಾರೂ ಇಲ್ಲ. ಮಿತ್ರ ಸಂಬಂಧಿ ಮೊದಲಾದವರಿದ್ದರೂ ಸಹ ನನ್ನವರು ಒಬ್ಬರೇ ಶಿವ ತಂದೆಯೆಂದು ಹೇಳುತ್ತೀರಿ, ಅವರ ನೆನಪಿನಿಂದಲೇ ಪತಿತರಿಂದ ಪಾವನರಾಗಬೇಕಾಗಿದೆ. ಆತ್ಮಕ್ಕೆ ತಿಳಿದಿದೆ – ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ನಾವಾತ್ಮರನ್ನು ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ, ಬ್ರಹ್ಮನ ತನುವಿನಲ್ಲಿ ಪ್ರವೇಶ ಮಾಡಿ ಪಾವನರನ್ನಾಗಿ ಮಾಡುತ್ತಾರೆ. ನಿಮ್ಮನ್ನು ಕರೆದುಕೊಂಡು ಹೋಗುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ಹೇಳುತ್ತಾರೆ – ನಿಮ್ಮೆಲ್ಲರಿಗೆ ಮೃತ್ಯುವನ್ನು ಕೊಡಲು ಬಂದಿದ್ದೇನೆ. ನರಕವಾಸಿಗಳಿಂದ ಸ್ವರ್ಗವಾಸಿಗಳಾಗಬೇಕೆಂದರೆ ಅವಶ್ಯವಾಗಿ ಸಾಯಬೇಕಾಗುತ್ತದೆಯಲ್ಲವೆ. ನಿಮ್ಮ ಈ ದೇಹವನ್ನು ಸಮಾಪ್ತಿ ಮಾಡಿಸಿ ಆತ್ಮರನ್ನು ಕರೆದುಕೊಂಡು ಹೋಗುತ್ತೇನೆ. ತಂದೆಯು ಹೇಳುತ್ತಾರೆ – ನಿಮಗೆ ಜೀವದಾನ ಕೊಡುತ್ತೇನೆ, ಇದು ಮಹಾಭಾರತ ಯುದ್ಧವಲ್ಲವೆ. ಎಲ್ಲರ ವಿನಾಶವಾಗುವುದು, ಇಲ್ಲದಿದ್ದರೆ ಹೇಗೆ ಕರೆದುಕೊಂಡು ಹೋಗಲಿ! ಆತ್ಮರನ್ನು ಪವಿತ್ರರನ್ನಾಗಿ ಮಾಡಿ ಮನೆಗೆ ಕರೆದುಕೊಂಡು ಹೋಗುತ್ತೇನೆ, ಅದಂತೂ ಶಾಂತಿಧಾಮವಾಗಿದೆ. ಸತ್ಯಯುಗವು ಬರುತ್ತದೆಯೆಂದರೆ ಅವಶ್ಯವಾಗಿ ಕಲಿಯುಗದ ವಿನಾಶವಾಗುವುದು. ಇದಕ್ಕಾಗಿಯೇ ಮಹಾಭಾರತ ಯುದ್ಧವು ಪ್ರಸಿದ್ಧವಾಗಿದೆ. ಈ ಸಂಗಮಯುಗದಲ್ಲಿಯೇ ಆಗುತ್ತದೆ ಯಾವಾಗ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನ ಸಾಗರದಲ್ಲಿ ಜ್ಞಾನ ಸ್ನಾನ ಮಾಡಿ ಸ್ವಯಂನ್ನು ಪಾವನ ಮಾಡಿಕೊಳ್ಳಬೇಕಾಗಿದೆ, ಮಿತ್ರ ಸಂಬಂಧಿಗಳ ಜೊತೆಯಲ್ಲಿದ್ದರೂ ಸಹ ಬುದ್ಧಿಯಲ್ಲಿರಲಿ – ನನ್ನವರು ಒಬ್ಬ ಶಿವ ತಂದೆಯ ಹೊರತು ಮತ್ತ್ಯಾರೂ ಇಲ್ಲ.

2. ವಿಷ್ಣು ಪುರಿಯಲ್ಲಿ ಹೋಗಲು ಪಕ್ಕಾ ವೈಷ್ಣವರು ಅರ್ಥಾತ್ ಪವಿತ್ರರಾಗಬೇಕಾಗಿದೆ. ನರಕದಿಂದ ಜೀವಿಸಿದ್ದಂತೆಯೇ ಸತ್ತು ಬುದ್ಧಿಯೋಗವನ್ನು ಸ್ವರ್ಗದ ಕಡೆ ಜೋಡಿಸಬೇಕಾಗಿದೆ.

ವರದಾನ:-

ಕರ್ಮವನ್ನು ಮಾಡುವ ಸಮಯದಲ್ಲಿ ಧರ್ಮ ಅರ್ಥಾತ್ ಧಾರಣೆಯೂ ಸಹ ಸಂಪೂರ್ಣವಾಗಿ ಇರುತ್ತದೆಯೆಂದರೆ, ಧರ್ಮ ಮತ್ತು ಕರ್ಮವೆರಡರ ಸಮತೋಲವು ಸಮಾನವಾಗಿ ಇರುವುದರಿಂದ ಪ್ರಭಾವ ಬೀರುವುದು. ಅದು ಈ ರೀತಿ ಆಗಬಾರದು – ಯಾವಾಗ ಕರ್ಮವು ಸಮಾಪ್ತಿಯಾಗುವುದೋ ಆಗ ಧಾರಣೆಯು ಸ್ಮೃತಿಗೆ ಬಂದಿತು. ಬುದ್ಧಿಯಲ್ಲಿ ಎರಡೂ ಮಾತಿನಲ್ಲಿ ಸಮಾನ ಸಮತೋಲನವಿದ್ದಾಗ ಹೇಳಲಾಗುತ್ತದೆ – ಶ್ರೇಷ್ಠ ಅಥವಾ ದಿವ್ಯ ಬುದ್ಧಿವಂತರು. ಇಲ್ಲದಿದ್ದರೆ ಸಾಧಾರ ಬುದ್ಧಿ, ಕರ್ಮವೂ ಸಾಧಾರಣ, ಧಾರಣೆಗಳೂ ಸಾಧಾರಣವಾಗಿ ಇರುತ್ತದೆ. ಈ ಸಾಧಾರಣತೆಯಲ್ಲಿ ಸಮಾನತೆ ತರಬಾರದು ಆದರೆ ಶ್ರೇಷ್ಠತೆಯಲ್ಲಿ ಸಮಾನತೆಯಿರಲಿ. ಶ್ರೇಷ್ಠ ಕರ್ಮದಂತೆ ಧಾರಣೆಯೂ ಶ್ರೇಷ್ಠವಾಗಿರಲಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top