07 December 2021 KANNADA Murli Today | Brahma Kumaris

Read and Listen today’s Gyan Murli in Kannada

December 7, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಹೃದಯರಾಮ ತಂದೆಯು ನೀವು ಮಕ್ಕಳ ಹೃದಯವನ್ನು ಗೆಲ್ಲಲು ಬಂದಿದ್ದಾರೆ ಆದ್ದರಿಂದ ಸ್ವಚ್ಛ ಹೃದಯಿಗಳಾಗಿ”

ಪ್ರಶ್ನೆ:: -

ಸತ್ಯಯುಗೀ ಪದವಿಯ ಆಧಾರವು ಮುಖ್ಯವಾಗಿ ಯಾವ ಮಾತಿನ ಮೇಲಿದೆ?

ಉತ್ತರ:-

ಪವಿತ್ರತೆಯ ಮೇಲೆ ಆಧಾರವಿದೆ. ಮುಖ್ಯವಾದುದು ಪವಿತ್ರತೆಯಾಗಿದೆ. ಯಾರು ಸೇವಾಕೇಂದ್ರಕ್ಕೆ ಬರುತ್ತಾರೆಯೋ ಅವರಿಗೆ ತಿಳಿಸಬೇಕಾಗಿದೆ, ಒಂದುವೇಳೆ ಪವಿತ್ರರಾಗದಿದ್ದರೆ ಬುದ್ಧಿಯಲ್ಲಿ ಜ್ಞಾನವು ನಿಲ್ಲಲು ಸಾಧ್ಯವಿಲ್ಲ. ಯೋಗವನ್ನು ಕಲಿಯುತ್ತಾ-ಕಲಿಯುತ್ತಾ ಒಂದುವೇಳೆ ಪತಿತರಾಗಿ ಬಿಟ್ಟರೆ ಎಲ್ಲವೂ ಮಣ್ಣು ಪಾಲಾಗುವುದು. ಒಂದುವೇಳೆ ಯಾರು ಪವಿತ್ರರಾಗಿರುವುದಿಲ್ಲವೋ ಅವರು ತರಗತಿಗೆ ಬರದಿದ್ದರೂ ಚಿಂತೆಯಿಲ್ಲ. ಯಾರೆಷ್ಟು ಓದುವರೋ ಪವಿತ್ರರಾಗುವರು. ಅಷ್ಟು ಧನವಂತರಾಗುವರು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು..

ಓಂ ಶಾಂತಿ. ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಮತ್ತೆ ಬಂದಿದೆ. ಯಾವ ದಿನ? ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ – ಭಾರತದಲ್ಲಿ ಮತ್ತೆ ಸ್ವರ್ಗದ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ ಅರ್ಥಾತ್ ಲಕ್ಷ್ಮೀ-ನಾರಾಯಣರ ರಾಜ್ಯವು ಸ್ಥಾಪನೆಯಾಗುತ್ತಿದೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ಪತಿತ-ಪಾವನ ತಂದೆಯನ್ನು ನಾವು ಯಾರನ್ನು ಕರೆಯುತ್ತಿದ್ದೆವು ಅವರು ಬಂದಿದ್ದಾರೆ. ಅವರೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ ಅಥವಾ ದುಃಖಹರ್ತ-ಸುಖಕರ್ತನಾಗಿದ್ದಾರೆ. ಒಂದು ಬಾರಿ ಮುಕ್ತಗೊಳಿಸಿದ ನಂತರ ಮತ್ತೆ ಹೇಗೆ ಸಿಕ್ಕಿ ಹಾಕಿಕೊಂಡಿರಿ! ಎಂಬುದು ಯಾರಿಗೂ ತಿಳಿದಿಲ್ಲ. ಇಂತಹ ಕಲ್ಲು ಬುದ್ಧಿ ಮನುಷ್ಯರಿಗೆ ತಿಳಿಸಲು ಎಷ್ಟು ಪರಿಶ್ರಮವಾಗುತ್ತದೆ. ಕರ್ತವ್ಯವನ್ನು ನೋಡಿ, ಹೇಗೆ ಇಟ್ಟಿದ್ದಾರೆ! ಕೊಳಕಾದ ಬಟ್ಟೆಗಳನ್ನು ಬಂದು ಸ್ವಚ್ಛ ಮಾಡಿರಿ ಎಂದು. ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುವುದು. ರಾವಣ ರಾಜ್ಯದಲ್ಲಿ ಯಾರದೇ ಶರೀರವು ಪವಿತ್ರವಾಗಿಲ್ಲ, ಶರೀರವಂತು ಪತಿತವಾಗಿದೆ. ಇವೆಲ್ಲಾ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಆತ್ಮವು ಸ್ವಲ್ಪ ಪವಿತ್ರವಾಗಿದ್ದರೆ ಅವರದು ಪ್ರಭಾವವಿರುತ್ತದೆ ಆದರೂ ಪತಿತರಂತೂ ಆಗಲೇಬೇಕಲ್ಲವೆ. ಬೇಹದ್ದಿನ ತಂದೆ ಪತಿತ-ಪಾವನನು ಬಂದು ತಿಳಿಸುತ್ತಾರೆ – ಈ ಐದು ವಿಕಾರಗಳು ಶತ್ರುಗಳಾಗಿವೆ, ಇವನ್ನು ಬಿಡಿ. ಒಂದುವೇಳೆ ನನ್ನ ಮತವನ್ನು ಒಪ್ಪದಿದ್ದರೆ ನಿಮಗೆ ಧರ್ಮರಾಜನು ಶಿಕ್ಷೆ ಕೊಡುವರು. ನೀವು ಆಲ್ಮೈಟಿ ಅಥಾರಿಟಿಯ ಮಾತನ್ನು ಪಾಲಿಸದಿದ್ದರೆ ಧರ್ಮರಾಜನು ಬಹಳ ಕಠಿಣ ಶಿಕ್ಷೆ ಕೊಡುವರು. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ನಾವೇ ಪಾವನ ದೇವಿ-ದೇವತೆಗಳಾಗಿದ್ದೆವು, ಈಗ ಪತಿತರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ಬಹುಬೇಗನೆ ಅದನ್ನು ಬಿಡಬೇಕಾಗಿದೆ. ದೇಹಾಭಿಮಾನವು ರಾವಣನ ಮತವಾಗಿದೆ, ಅದನ್ನು ಬಿಡಬೇಕಾಗಿದೆ. ಮೊದಲ ನಂಬರಿನ ವಿಕಾರವೂ ಬಿಡಬೇಕಾಗಿದೆ. ಅಂತಹ ದಿನವೂ ಬರುವುದು ಯಾವಾಗ ತಂದೆಯ ಜೊತೆ ಈ ಸಭೆಯಲ್ಲಿ ಪತಿತರು ಯಾರೂ ಕುಳಿತುಕೊಳ್ಳಲು ಸಾಧ್ಯವಿಲ್ಲ, ಅಂತಹವರಿಗೆ ಅನುಮತಿ ಕೊಡುವುದಿಲ್ಲ. ಪತಿತರನ್ನು ಹೊರ ಹಾಕಿರಿ ಎಂದು ಹೇಳಲಾಗುತ್ತದೆ, ಇಂದ್ರ ಸಭೆಯಲ್ಲಿ ಬರಲು ಬಿಡುವುದಿಲ್ಲ. ಭಲೆ ಯಾರೆಷ್ಟೇ ಕೋಟ್ಯಾಧಿಪತಿಯಾಗಿರಲಿ ಅಥವಾ ಏನೇ ಆಗಿರಲಿ ಸಭೆಯಲ್ಲಿ ಬರಲು ಸಾಧ್ಯವಿಲ್ಲ. ಭಲೆ ಅವರಿಗೆ ತಿಳಿಸಲಾಗುತ್ತದೆ ಆದರೆ ತಂದೆಯ ಸಭೆಯಲ್ಲಿ ಅನುಮತಿ ನೀಡಲಾಗುವುದಿಲ್ಲ. ಈಗ ಅವರಿಗೆ ಅನುಮತಿ ನೀಡಲಾಗುತ್ತಿದೆ, ನಂತರ ಇರುವುದಿಲ್ಲ. ಈಗಲೂ ಸಹ ತಂದೆಯು ಕೇಳುತ್ತಾರೆ- ಯಾರಾದರೂ ಪತಿತರು ಬಂದು ಕುಳಿತುಕೊಂಡರೆ ತಂದೆಗೆ ಇಷ್ಟವಾಗುವುದಿಲ್ಲ, ಹೀಗೆ ಅನೇಕರು ಬಂದು ಕುಳಿತುಕೊಳ್ಳುತ್ತಾರೆ. ಅಂತಹವರು ಬಹಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಗುಡಿ-ಗೋಪುರಗಳಿಗೆ ಸ್ನಾನ ಮಾಡಿಕೊಂಡು ಹೋಗುತ್ತಾರೆ, ಸ್ನಾನ ಮಾಡದೇ ಯಾರೂ ಹೋಗುವುದಿಲ್ಲ. ಅದು ಸ್ಥೂಲ ಸ್ನಾನವಾಗಿದೆ, ಇದು ಜ್ಞಾನ ಸ್ನಾನವಾಗಿದೆ. ಇದರಿಂದಲೂ ಶುದ್ಧವಾಗಬೇಕಾಗಿದೆ. ಯಾವುದೇ ಮಾಂಸಹಾರಿಗಳು ಬರಲು ಸಾಧ್ಯವಿಲ್ಲ, ಯಾವಾಗ ಸಮಯ ಬರುವುದೋ ಆಗ ತಂದೆಯು ಬಹಳ ಕಠಿಣವಾಗುತ್ತಾರೆ. ಪ್ರಪಂಚದಲ್ಲಿ ನೋಡಿ, ಭಕ್ತಿಯದು ಎಷ್ಟೊಂದು ಪ್ರಭಾವವಿದೆ, ಯಾರು ಬಹಳ ಶಾಸ್ತ್ರಗಳನ್ನು ಓದುವರೋ ಅವರು ಶಾಸ್ತ್ರಿ ಎಂಬ ಪದವಿಯನ್ನು ತೆಗೆದುಕೊಳ್ಳುತ್ತಾರೆ. ನೀವೀಗ ಸಂಸ್ಕೃತ ಇತ್ಯಾದಿಗಳನ್ನು ಕಲಿತು ಏನು ಮಾಡುತ್ತೀರಿ! ಈಗ ತಂದೆಯು ತಿಳಿಸುತ್ತಾರೆ – ಎಲ್ಲವನ್ನೂ ಮರೆತು ಹೋಗಿ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿದರೆ ನೀವು ಪವಿತ್ರರಾಗಿ ವಿಷ್ಣು ಪುರಿಯ ಮಾಲೀಕರಾಗಿ ಬಿಡುತ್ತೀರಿ. ಯಾವಾಗ ಈ ಮಾತನ್ನು ಚೆನ್ನಾಗಿ ತಿಳಿದುಕೊಳ್ಳುವರೊ ಆಗ ಈ ಶಾಸ್ತ್ರಗಳೆಲ್ಲವನ್ನೂ ಮರೆತು ಹೋಗುವರು. ಲೌಕಿಕ ವಿದ್ಯೆಯನ್ನು ಓದಿ ವಕೀಲ ಇತ್ಯಾದಿಯಾಗುತ್ತಾರೆ ಆದರೆ ಅದೆಲ್ಲದಕ್ಕಿಂತ ಉನ್ನತ ವಿದ್ಯೆಯು ಇದಾಗಿದೆ ಯಾವುದನ್ನು ಪರಮಾತ್ಮ ಜ್ಞಾನ ಸಾಗರನೇ ಓದಿಸುತ್ತಾರೆ. ಅವರನ್ನು ಪತಿತ-ಪಾವನ ಬನ್ನಿರಿ ಎಂದು ಕರೆಯುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಇದನ್ನು ತಿಳಿಸುತ್ತಲೇ ಇರುತ್ತಾರೆ – ಸತ್ಯಯುಗಕ್ಕೆ ರಾಮ ರಾಜ್ಯವೆಂದು, ಕಲಿಯುಗಕ್ಕೆ ರಾವಣ ರಾಜ್ಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಪಾವನ ದೇವಿ – ದೇವತೆಗಳನ್ನು ಮಂದಿರಗಳಲ್ಲಿ ಪೂಜಿಸಲಾಗುತ್ತದೆ ಮತ್ತು ಅವರ ಮುಂದೆ ಪತಿತರು ಹೋಗಿ ತಲೆ ಬಾಗುತ್ತಾರೆ. ಅವರು ಪವಿತ್ರತೆಯಲ್ಲಿ ಎಲ್ಲರಿಗಿಂತ ಶ್ರೇಷ್ಠವಾಗಿದ್ದಾರೆಂದು ಇದರಿಂದಲೇ ಸಿದ್ಧವಾಯಿತು. ಸನ್ಯಾಸಿಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ. ಸನ್ಯಾಸಿಗಳ ಮಂದಿರವಾಗುವುದಿಲ್ಲ. ಈಗ ಮನುಷ್ಯರು ತಮೋಪ್ರಧಾನ ಭಕ್ತಿಯಲ್ಲಿ ಹೋಗಿರುವುದರಿಂದ ಸನ್ಯಾಸಿಗಳ ಚಿತ್ರವನ್ನೂ ಇಟ್ಟುಕೊಳ್ಳುತ್ತಾರೆ, ಅದಕ್ಕೆ ತಮೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ಮನುಷ್ಯರ ಪೂಜೆ, ಪಂಚತತ್ವಗಳ ಪೂಜೆಯು ನಡೆಯುತ್ತಿದೆ, ಸತೋಪ್ರಧಾನ ಭಕ್ತಿಯಿದ್ದಾಗ ಒಬ್ಬರ ಪೂಜೆಯು ನಡೆಯುತ್ತಿತ್ತು, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ದೇವತೆಗಳನ್ನೂ ಸಹ ತಂದೆಯೇ ಮಾಡಿದ್ದಾರೆ ಅಂದಮೇಲೆ ಅವರೊಬ್ಬರಿಗೇ ಪೂಜೆಯು ನಡೆಯಬೇಕು ಆದರೆ ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಕೆಲವರು ಸತೋಪ್ರಧಾನರಾಗಿಬಿಡುತ್ತಾರೆ, ಕೆಲವರು ಸತೋ, ಕೆಲವರು ರಜೋ, ಕೆಲವರು ತಮೋ ಆಗುತ್ತಾರೆ.

ಸತ್ಯಯುಗದಲ್ಲಿ ಬಹಳ ಸ್ವಚ್ಛತೆಯಿರುತ್ತದೆ, ಅಲ್ಲಿ ಶರೀರ(ಶವ)ಕ್ಕೆ ಯಾವುದೇ ಬೆಲೆಯಿರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡುತ್ತಾರೆ, ಇಲ್ಲಿನ ತರಹ ಭಸ್ಮ(ಬೂದಿ)ವನ್ನು ನದಿ ಮೊದಲಾದುವುಗಳಲ್ಲಿ ಹಾಕುವುದಿಲ್ಲ ಅಥವಾ ಆ ಶರೀರವನ್ನು ಎಲ್ಲಿಯೂ ತೆಗೆದುಕೊಂಡು ಹೋಗುವುದಿಲ್ಲ, ಈ ಕಷ್ಟದ ಮಾತೇ ಇರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡಿ ಬಿಡುವರು. ಇಲ್ಲಿ ಶರೀರದ ಹಿಂದೆ ಮನುಷ್ಯರು ಎಷ್ಟೊಂದು ಅಳುತ್ತಾರೆ, ನೆನಪು ಮಾಡುತ್ತಾರೆ, ಬ್ರಾಹ್ಮಣರಿಗೆ ತಿನ್ನಿಸುತ್ತಾರೆ, ಅಲ್ಲಿ ಇಂತಹ ಯಾವುದೇ ಮಾತುಗಳು ಇರುವುದಿಲ್ಲ. ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ, ಅಲ್ಲಿ ಏನೇನಿರಬಹುದು. ಸ್ವರ್ಗವೆಂದರೆ ಮತ್ತೇನು! ಇದು ನರಕ, ಅಸತ್ಯ ಖಂಡವಾಗಿದೆ ಆದ್ದರಿಂದಲೇ ಸುಳ್ಳು ಕಾಯ, ಸುಳ್ಳು ಮಾಯೆ ಎಂದು ಗಾಯನವಿದೆ. ಗೋಹತ್ಯೆಯನ್ನು ನಿಲ್ಲಿಸಿ ಎಂದು ಸರ್ಕಾರವೂ ಹೇಳುತ್ತದೆ. ಅವರಿಗೆ ಬರೆಯಬೇಕು – ಮೊದಲು ಒಬ್ಬರು ಇನ್ನೊಬ್ಬರ ಮೇಲೆ ಕಾಮದ ಕಟಾರಿಯನ್ನು ನಡೆಸುವ ಹತ್ಯೆಯನ್ನು ನಿಲ್ಲಿಸಿ, ಈ ಕಾಮವು ಮಹಾಶತ್ರುವಾಗಿದೆ. ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಅದನ್ನು ಜಯಿಸಿರಿ. ನೀವು ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಅಲ್ಲಿ ದೇವತೆಗಳಿಗೆ ಹೊಸ ರಕ್ತವಿರುತ್ತದೆ. ಮಕ್ಕಳದು ಹೊಸ ರಕ್ತವೆಂದು ಮನುಷ್ಯರು ಹೇಳುತ್ತಾರೆ ಆದರೆ ಹೊಸ ರಕ್ತವೆಲ್ಲಿಂದ ಬಂದಿತು! ಇಲ್ಲಿ ಹಳೆಯ ರಕ್ತವಾಗಿದೆ. ಸತ್ಯಯುಗದಲ್ಲಿ ಯಾವಾಗ ಹೊಸ ಶರೀರವು ಸಿಗುವುದೋ ಆಗ ಹೊಸ ರಕ್ತವಿರುವುದು. ಈ ಶರೀರವೂ ಹಳೆಯದಾಗಿದೆ ಆದ್ದರಿಂದ ರಕ್ತವೂ ಹಳೆಯದಾಗಿದೆ. ಈಗ ಇದನ್ನು ಬಿಡಬೇಕಾಗಿದೆ ಮತ್ತು ಪಾವನರಾಗಬೇಕಾಗಿದೆ. ತಂದೆಯ ವಿನಃ ಮತ್ತ್ಯಾರೂ ಪಾವನ ಮಾಡಲು ಸಾಧ್ಯವಿಲ್ಲ. ಎಲ್ಲರ ಧರ್ಮವು ಬೇರೆ-ಬೇರೆಯಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಧರ್ಮಶಾಸ್ತ್ರವನ್ನು ಓದಬೇಕಾಗಿದೆ. ಸಂಸ್ಕೃತದಲ್ಲಿ ಮುಖ್ಯವಾದುದು ಗೀತೆಯಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಸಂಸ್ಕೃತವನ್ನು ಕಲಿಸುತ್ತೇನೆಯೇ? ಈ ಬ್ರಹ್ಮನು ಯಾವ ಭಾಷೆಯನ್ನು ಅರಿತಿದ್ದಾರೆಯೋ ನಾನು ಅದರಲ್ಲಿಯೇ ತಿಳಿಸುತ್ತೇನೆ. ಒಂದುವೇಳೆ ನಾನು ಸಂಸ್ಕೃತದಲ್ಲಿ ತಿಳಿಸಿದರೆ ಈ ಮಕ್ಕಳು ಹೇಗೆ ತಿಳಿದುಕೊಳ್ಳುವರು! ಈ ಸಂಸ್ಕೃತವು ದೇವತೆಗಳ ಭಾಷೆಯೂ ಅಲ್ಲ, ಕೆಲಕೆಲವೊಮ್ಮೆ ಮಕ್ಕಳು ಬಂದು ಸತ್ಯಯುಗದ ಭಾಷೆಯನ್ನೇ ತಿಳಿಸುತ್ತಾರೆ. ಈ ಭಾಷೆಗಳನ್ನು ಕಲಿಯುವುದರಿಂದ ಶರೀರ ನಿರ್ವಹಣೆಗೆ ಕೆಲವರು ಲಕ್ಷಗಳನ್ನು, ಕೆಲವರು ಕೋಟಿಗಳನ್ನು ಸಂಪಾದಿಸುತ್ತಾರೆ, ಇಲ್ಲಿ ನೀವು ಎಷ್ಟೊಂದು ಸಂಪಾದನೆ ಮಾಡಿಕೊಳ್ಳುತ್ತೀರಿ. ಸತ್ಯಯುಗದಲ್ಲಿ ನಾವು ಮಹಾರಾಜ-ಮಹಾರಾಣಿಯಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಎಷ್ಟು ಓದುವರೋ ಅಷ್ಟು ಧನವಂತರಾಗುವರು. ಬಡವರು ಮತ್ತು ಸಾಹುಕಾರರಲ್ಲಿ ಅಂತರವಂತೂ ಇರುತ್ತದೆಯಲ್ಲವೆ. ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ, ಯಾರು ಸೇವಾಕೇಂದ್ರಕ್ಕೆ ಬರುತ್ತಾರೆಯೋ ಅವರಿಗೆ ತಿಳಿಸಬೇಕಾಗಿದೆ – ಒಂದುವೇಳೆ ಪವಿತ್ರರಾಗದಿದ್ದರೆ ಜ್ಞಾನವು ಬುದ್ಧಿಯಲ್ಲಿ ನಿಲ್ಲುವುದಿಲ್ಲ. 5-7 ದಿನಗಳಕಾಲ ಬಂದು ಮತ್ತೆ ಪತಿತರಾದರೆ ಜ್ಞಾನವು ಸಮಾಪ್ತಿ. ಯೋಗವನ್ನು ಕಲಿಯುತ್ತಾ-ಕಲಿಯುತ್ತಾ ಒಂದುವೇಳೆ ಪತಿತರಾದರೆ ಎಲ್ಲವೂ ಮಣ್ಣು ಪಾಲಾಗುವುದು. ಒಂದುವೇಳೆ ಯಾರಾದರೂ ಪವಿತ್ರವಾಗಿರುವುದಿಲ್ಲವೆಂದರೆ ಭಲೆ ಬರುವುದೇ ಬೇಡ, ಅವರ ಚಿಂತೆ ಮಾಡಬಾರದು. ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ, ತಂದೆಯ ನೆನಪಿಲ್ಲದೆ ಅದು ಹೇಗೆ ಇಳಿಯುತ್ತದೆ! ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ, ತಂದೆಯು ಏನು ಹೇಳುವರೋ ಅದನ್ನು ಮಾಡಬೇಕಾಗಿದೆ. ಹೇ ಪತಿತ-ಪಾವನ ಬನ್ನಿ ನಾವು ಪತಿತರಾಗಿದ್ದೇವೆಂದು ಇಡೀ ಪ್ರಪಂಚವೇ ಕರೆಯುತ್ತದೆ ಆದರೆ ಯಾರೂ ಪಾವನರಾಗುವುದಿಲ್ಲ ಅಂದಮೇಲೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅವರಂತು ಬ್ರಹ್ಮತತ್ವವನ್ನೇ ಪರಮಾತ್ಮನೆಂದು ತಿಳಿದು ನೆನಪು ಮಾಡುತ್ತಾರೆ. ಪರಮಾತ್ಮನೆಂದರೆ ಯಾರು ಎಂಬ ಜ್ಞಾನವು ಯಾರಲ್ಲಿಯೂ ಇಲ್ಲ. ಬ್ರಹ್ಮತತ್ವವು ಪರಮಾತ್ಮನಲ್ಲ ಅಥವಾ ಬ್ರಹ್ಮತತ್ವದಲ್ಲಿ ಯಾರೂ ಲೀನವಾಗಲು ಸಾಧ್ಯವಿಲ್ಲ. ಮತ್ತೆ ಪುನರ್ಜನ್ಮದಲ್ಲಿ ಎಲ್ಲರೂ ಬರಲೇಬೇಕಾಗಿದೆ ಏಕೆಂದರೆ ಆತ್ಮ ಅವಿನಾಶಿಯಾಗಿದೆ. ಬುದ್ಧನು ಹಿಂತಿರುಗಿ ಹೊರಟು ಹೋದನೆಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ಬುದ್ಧನು ಯಾವ ಧರ್ಮದ ಸ್ಥಾಪನೆ ಮಾಡಿದನೋ ಅವಶ್ಯವಾಗಿ ಅದರ ಪಾಲನೆಯನ್ನೂ ಮಾಡುತ್ತಾನೆ. ಇಲ್ಲದಿದ್ದರೆ ಪಾಲನೆಯನ್ನು ಯಾರು ಮಾಡುವರು? ಅವರು ಹಿಂತಿರುಗಿ ಹೋಗಲು ಹೇಗೆ ಸಾಧ್ಯ! ನಾವು ಹೋಗಿ ಮುಕ್ತಿಯಲ್ಲಿ ಕುಳಿತು ಬಿಡುತ್ತೇವೆಂದು ನೀವು ಹೇಳುತ್ತೀರಾ? ನೀವು ತಿಳಿದುಕೊಂಡಿದ್ದೀರಿ – ನಾವು ನಮ್ಮ ಧರ್ಮ ಸ್ಥಾಪನೆ ಮಾಡುತ್ತಿದ್ದೇವೆ, ಮತ್ತೆ ನೀವೇ ಪಾಲನೆಯನ್ನೂ ಮಾಡುತ್ತೀರಿ. ಅದು ಪಾವನ ಧರ್ಮವಾಗಿತ್ತು, ಈಗ ಪತಿತರಾಗಿ ಬಿಟ್ಟಿದ್ದೀರಿ. ಯಾರು ಈ ಧರ್ಮದವರಾಗಿರುವರೋ ಅವರೇ ಬರುತ್ತಾರೆ. ಈಗ ಸಸಿಯ ನಾಟಿಯಾಗುತ್ತಿದೆ, ಈ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಮಧುರ ವೃಕ್ಷವಾಗಿದೆ, ಇದರ ಸ್ಥಾಪನಾ ಕಾರ್ಯವು ನಡೆಯುತ್ತಿದೆ. ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ರಚಿಸಿದ್ದಾರೆಯೋ ಎಲ್ಲವೂ ಭಕ್ತಿಮಾರ್ಗಕ್ಕಾಗಿ. ಒಬ್ಬ ತಂದೆಯದೇ ಗಾಯನವಿದೆ, ಅವರು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ ಅಂದಮೇಲೆ ಈ ರೀತಿ ಮಾಡುವಂತಹ ತಂದೆಯನ್ನು ಎಷ್ಟು ಚೆನ್ನಾಗಿ ನೆನಪು ಮಾಡಬೇಕು! ಇದನ್ನೂ ಸಹ ತಿಳಿದುಕೊಂಡಿದ್ದೀರಿ – ಡ್ರಾಮಾನುಸಾರ ಭಕ್ತಿಮಾರ್ಗವೂ ಸಹ ನಡೆಯಬೇಕು. ವಾಸ್ತವದಲ್ಲಿ ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ ಅಂದಮೇಲೆ ಪೂಜೆಯು ಅವರೊಬ್ಬರಿಗೇ ಮಾಡಬೇಕಾಗಿದೆ. ದೇವಿ-ದೇವತೆಗಳು ಸತೋಪ್ರಧಾನರಿದ್ದವರು 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನರಾಗಿದ್ದಾರೆ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯ ನೆನಪಿನ ವಿನಃ ಸತೋಪ್ರಧಾನರಾಗಲು ಸಾಧ್ಯವಿಲ್ಲ. ತಂದೆಯ ವಿನಃ ಮತ್ತ್ಯಾರಲ್ಲಿಯೂ ಆ ರೀತಿ ಮಾಡುವ ಶಕ್ತಿಯಿಲ್ಲ ಅಂದಮೇಲೆ ನೆನಪು ಅವರೊಬ್ಬರನ್ನೇ ಮಾಡಬೇಕಾಗಿದೆ. ಇದು ಅವ್ಯಭಿಚಾರಿ ನೆನಪಾಗಿದೆ. ಅನೇಕರನ್ನು ನೆನಪು ಮಾಡುವುದು ವ್ಯಭಿಚಾರಿ ನೆನಪಾಗಿದೆ. ಎಲ್ಲಾ ಆತ್ಮರಿಗೆ ಗೊತ್ತಿದೆ – ಶಿವನು ನಮ್ಮ ತಂದೆಯಾಗಿದ್ದಾರೆ ಆದ್ದರಿಂದಲೇ ಎಲ್ಲಾ ಕಡೆ ಶಿವನನ್ನು ಪೂಜಿಸುತ್ತಾರೆ. ದೇವಿ-ದೇವತೆಗಳ ಮುಂದೆ ಶಿವನನ್ನು ಇಟ್ಟಿರುತ್ತಾರೆ. ವಾಸ್ತವದಲ್ಲಿ ದೇವತೆಗಳಂತೂ ಪೂಜೆ ಮಾಡುವುದಿಲ್ಲ, ಗಾಯನವಿದೆ – ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ ಅಂದಮೇಲೆ ದೇವತೆಗಳು ಹೇಗೆ ಪೂಜೆ ಮಾಡುತ್ತಾರೆ, ಅದು ತಪ್ಪಾಗಿದೆ. ಸುಳ್ಳು ಮಹಿಮೆಯನ್ನು ತೋರಿಸುವುದೇ? ಶಿವ ತಂದೆಯನ್ನು ನೆನಪು ಮಾಡಲು ಅವರನ್ನು ಎಲ್ಲಿ ಅರಿತುಕೊಂಡಿದ್ದಾರೆ? ಅಂದಮೇಲೆ ಆ ಚಿತ್ರವನ್ನು ತೆಗೆದುಹಾಕಬೇಕು. ಬಾಕಿ ಸಿಂಗಲ್ ಕಿರೀಟಧಾರಿಗಳು ಪೂಜೆ ಮಾಡುವುದನ್ನು ತೋರಿಸಬೇಕು. ಸಾಧು-ಸಂತ ಯಾರಿಗೂ ಸಹ ಪ್ರಕಾಶತೆಯ ಕಿರೀಟವಿಲ್ಲ ಆದ್ದರಿಂದ ಬ್ರಾಹ್ಮಣರಿಗೂ ಸಹ ಪ್ರಕಾಶತೆಯ ಕಿರೀಟವನ್ನು ತೋರಿಸಲು ಸಾಧ್ಯವಿಲ್ಲ. ಯಾರಿಗೆ ಜ್ಞಾನದಲ್ಲಿ ಪೂರ್ಣ ಗಮನ ಹರಿಯುವುದೋ ಅವರು ತಿದ್ದುಪಡಿ ಮಾಡುತ್ತಾ ಇರುತ್ತಾರೆ. ಇನ್ನೂ ಯಾರೂ ಪರಿಪೂರ್ಣರಾಗಿಲ್ಲ. ತಪ್ಪುಗಳಾಗುತ್ತಲೇ ಇರುತ್ತವೆ. ತ್ರಿಮೂರ್ತಿಯ ಚಿತ್ರವು ಎಷ್ಟು ಚೆನ್ನಾಗಿದೆ! ಇವರು ತಂದೆ, ಇವರು ದಾದಾ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ – ನೀವು ನನ್ನನ್ನು ನೆನಪು ಮಾಡಿದರೆ ಈ ರೀತಿಯಾಗುತ್ತೀರಿ, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಆತ್ಮವು ಹೇಳುತ್ತದೆ – ಒಬ್ಬ ತಂದೆಯ ವಿನಃ ನನಗೆ ಮತ್ತ್ಯಾರಲ್ಲಿಯೂ ಮಮತೆಯಿಲ್ಲ. ನಾವು ಇಲ್ಲಿದ್ದರೂ ಸಹ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡುತ್ತೇವೆ. ಈಗ ದುಃಖಧಾಮವನ್ನು ಬಿಡಬೇಕಾಗಿದೆ ಆದರೆ ನಮ್ಮ ಹೊಸ ಮನೆಯು ತಯಾರಾಗುವವರೆಗೆ ಹಳೆಯ ಮನೆಯಲ್ಲಿಯೇ ಇರಬೇಕಾಗಿದೆ. ಹೊಸ ಮನೆಗೆ ಹೋಗಲು ಯೋಗ್ಯರಾಗಬೇಕಾಗಿದೆ. ಆತ್ಮವು ಪವಿತ್ರವಾಗಿ ಬಿಟ್ಟರೆ ಮತ್ತೆ ಮನೆಗೆ ಹೊರಟು ಹೋಗುವುದು. ಎಷ್ಟು ಸಹಜವಾಗಿದೆ! ಮೂಲ ಮಾತು ಇದನ್ನೇ ತಿಳಿದುಕೊಳ್ಳಬೇಕಾಗಿದೆ – ಪರಮಾತ್ಮ ಯಾರು ಮತ್ತು ಈ ದಾದಾ ಯಾರು? ತಂದೆಯು ಇವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ನೀವು ಸತ್ಯಯುಗದಲ್ಲಿ ಪಾವನ ದೇವತೆಗಳಾಗಿ ಬಿಡುತ್ತೀರಿ. ಉಳಿದೆಲ್ಲರೂ ಆ ಸಮಯದಲ್ಲಿ ಮುಕ್ತಿಧಾಮದಲ್ಲಿರುತ್ತಾರೆ. ಎಲ್ಲಾ ಆತ್ಮರನ್ನೂ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುವವರು ತಂದೆಯೇ ಆಗಿದ್ದಾರೆ. ಎಷ್ಟು ಸಹಜವಾಗಿದೆ! ಮಕ್ಕಳಿಗೆ ಬಹಳ ಖುಷಿಯಿರಬೇಕು. ಹೃದಯವು ಬಹಳ ಸ್ವಚ್ಛವಾಗಿರಬೇಕು. ಮನಸ್ಸು ಸ್ವಚ್ಛವಾಗಿದ್ದಲ್ಲಿ ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಮನಸ್ಸು ಆತ್ಮದಲ್ಲಿದೆ, ಸತ್ಯ ಹೃದಯರಾಮನು ಆತ್ಮರ ತಂದೆಯಾಗಿದ್ದಾರೆ, ಹೃದಯವನ್ನು ಗೆಲ್ಲುವವರೆಂದು ಹೃದಯರಾಮ ತಂದೆಗೆ ಹೇಳಲಾಗುತ್ತದೆ. ಅವರು ಬರುವುದೇ ಎಲ್ಲರ ಹೃದಯವನ್ನು ಗೆಲ್ಲುವುದಕ್ಕಾಗಿ ಸಂಗಮದಲ್ಲಿ ಬಂದು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಆತ್ಮರ ಹೃದಯವನ್ನು ಗೆಲ್ಲುವವರು ಪರಮಾತ್ಮನಾಗಿದ್ದಾರೆ, ಮನುಷ್ಯರ ಹೃದಯವನ್ನು ಗೆಲ್ಲುವವರು ಮನುಷ್ಯರಾಗಿದ್ದಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಒಬ್ಬರು ಇನ್ನೊಬ್ಬರ ಹೃದಯವನ್ನು ಕೆಡಿಸುವವರಾಗಿದ್ದಾರೆ.

ನೀವು ಮಕ್ಕಳಿಗೆ ಕಲ್ಪದ ಮೊದಲೂ ಸಹ ಈ ತ್ರಿಮೂರ್ತಿಯ ಚಿತ್ರದಲ್ಲಿ ತಿಳಿಸಿದ್ದಾರೆ ಆದ್ದರಿಂದಲೇ ಈಗಲೂ ಸಹ ಇದು ಇದೆಯಲ್ಲವೆ. ಅಂದಮೇಲೆ ಅವಶ್ಯವಾಗಿ ತಿಳಿಸಬೇಕಾಗುವುದು. ಈಗ ತಿಳಿಸುವುದಕ್ಕಾಗಿ ಎಷ್ಟೊಂದು ಚಿತ್ರಗಳು ಬಿಡುಗಡೆಯಾಗಿದೆ. ಏಣಿ ಚಿತ್ರವು ಎಷ್ಟು ಚೆನ್ನಾಗಿದೆ! ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಅರೆ! ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ಇದು ಅಂತಿಮ ಜನ್ಮವಾಗಿದೆ. ನಾವಂತೂ ಶುಭವನ್ನು ನುಡಿಯುತ್ತೇವೆ ಅಂದಮೇಲೆ ನಾವು 84 ಜನ್ಮಗಳನ್ನು ತೆಗೆದುಕೊಂಡಿಲ್ಲವೆಂದು ನೀವೇಕೆ ಹೇಳುತ್ತೀರಿ! ಅಂದಮೇಲೆ ನೀವು ಸ್ವರ್ಗದಲ್ಲಿ ಬರುವುದಿಲ್ಲ, ಮತ್ತೆ ನರಕದಲ್ಲಿಯೇ ಬರುತ್ತೀರಿ. ಸ್ವರ್ಗದಲ್ಲಿ ಬರಲು ಬಯಸುತ್ತಿಲ್ಲ. ಭಾರತವೇ ಸ್ವರ್ಗವಾಗಬೇಕಾಗಿದೆ. ಇದಂತೂ ತಿಳಿದುಕೊಳ್ಳುವ ಲೆಕ್ಕವಾಗಿದೆ. ಮಹಾರಥಿಗಳು ಬಹಳ ಚೆನ್ನಾಗಿ ತಿಳಿಸುತ್ತಾರೆ. ನಾವು ಹೋಗಿ ಯಾರಿಗಾದರೂ ದಾನ ಮಾಡಬೇಕು ಎಂದು ಸರ್ವೀಸ್ ಮಾಡುವ ಉಲ್ಲಾಸವಿರಬೇಕು. ಧನವೇ ಇಲ್ಲದಿದ್ದರೆ ದಾನ ಮಾಡುವ ವಿಚಾರವೂ ಬರುವುದಿಲ್ಲ. ಮೊದಲು ಕೇಳಬೇಕು – ಯಾವ ಆಸೆಯನ್ನು ಇಟ್ಟುಕೊಂಡು ಬಂದಿದ್ದೀರಿ? ಇಲ್ಲಿ ದರ್ಶನದ ಮಾತಿಲ್ಲ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖ ಪಡೆಯಬೇಕಾಗಿದೆ. ಇಬ್ಬರು ತಂದೆಯರಿದ್ದಾರಲ್ಲವೆ. ಬೇಹದ್ದಿನ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಹೇಗೆ ಸಿಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಇದನ್ನೂ ಸಹ ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವವರಿದ್ದರೆ ಕೂಡಲೇ ತಿಳಿದುಕೊಳ್ಳುವರು. ಇದನ್ನಂತೂ ತಂದೆಯು ತಿಳಿಸುತ್ತಾರೆ – ಮನೆಯಲ್ಲಿ ಕುಳಿತುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಲೂ ಕೇವಲ ತಂದೆಯ ನೆನಪು ಮಾಡಿರಿ, ನೆನಪು ಮಾಡುವುದರಿಂದಲೇ ಪಾಪಗಳು ಕಳೆಯುತ್ತಾ ಹೋಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಂದೂ ಒಬ್ಬರು ಇನ್ನೊಬ್ಬರ ಮನಸ್ಸನ್ನು ಕೆಡಿಸಬಾರದು. ಸರ್ವೀಸ್ ಮಾಡುವ ಉಲ್ಲಾಸವನ್ನು ಇಟ್ಟುಕೊಳ್ಳಬೇಕು. ಜ್ಞಾನ ಧನವಿದ್ದರೆ ಅವಶ್ಯವಾಗಿ ದಾನ ಮಾಡಬೇಕು.

2. ಹೊಸ ಮನೆಯಲ್ಲಿ ಹೋಗುವುದಕ್ಕಾಗಿ ಸ್ವಯಂನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆತ್ಮವನ್ನು ನೆನಪಿನ ಬಲದಿಂದ ಪಾವನ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಯಾರು ಅಲಂಕಾರಿ ಆಗಿದ್ದಾರೆಯೋ ಅವರೆಂದಿಗೂ ದೇಹ-ಅಹಂಕಾರಿ ಆಗಲು ಸಾಧ್ಯವಿಲ್ಲ. ನಿರಾಕಾರಿ ಹಾಗೂ ಅಲಂಕಾರಿ ಆಗಿರುವುದೇ ಮನ್ಮಾನಭವ, ಮಧ್ಯಾಜೀಭವ ಆಗಿದೆ. ಯಾವಾಗ ಸದಾ ಇಂತಹ ಸ್ವ-ಸ್ಥಿತಿಯಲ್ಲಿ ಸ್ಥಿತರಾಗಿ ಇರುತ್ತೀರೆಂದರೆ ಸರ್ವ ಪರಿಸ್ಥಿತಿಗಳನ್ನು ಸಹಜವಾಗಿಯೇ ಪಾರು ಮಾಡಿ ಬಿಡುತ್ತೀರಿ. ಇದರಿಂದ ಅನೇಕ ಹಳೆಯ ಸ್ವಭಾವಗಳು ಸಮಾಪ್ತಿ ಆಗಿ ಬಿಡುತ್ತವೆ. ಸ್ವಯಂನಲ್ಲಿ ಆತ್ಮಿಕ ಭಾವದಿಂದ ನೋಡುವುದರಿಂದ ಭಾವ-ಸ್ವಭಾವಗಳ ಮಾತುಗಳು ಸಮಾಪ್ತಿ ಆಗಿ ಬಿಡುತ್ತವೆ ಹಾಗೂ ಎದುರಿಸುವ ಸರ್ವ ಶಕ್ತಿಗಳೆಲ್ಲವೂ ತಮ್ಮಲ್ಲಿ ಬಂದು ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top