07 August 2021 KANNADA Murli Today | Brahma Kumaris

Read and Listen today’s Gyan Murli in Kannada

August 6, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಎಲ್ಲರಿಗೆ ಇದೇ ಸಂದೇಶ ನೀಡಿ – ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಮರೆತು ತನ್ನನ್ನು ಆತ್ಮನೆಂದು ತಿಳಿಯಿರಿ ಆಗ ಎಲ್ಲಾ ದುಃಖಗಳೂ ದೂರವಾಗಿ ಬಿಡುವವು”

ಪ್ರಶ್ನೆ:: -

ನೀವು ಮಕ್ಕಳು ಯಾವ ಮಾತಿನಲ್ಲಿ ಫಾಲೋ ಫಾದರ್ ಮಾಡಬೇಕಾಗಿದೆ?

ಉತ್ತರ:-

ಹೇಗೆ ಈ ಬ್ರಹ್ಮಾರವರು ತಮ್ಮದೆಲ್ಲವನ್ನೂ ಈಶ್ವರಾರ್ಪಣೆ ಮಾಡಿ ಬಿಟ್ಟರು, ಸಂಪೂರ್ಣ ಟ್ರಸ್ಟಿಯಾದರು ಹಾಗೆಯೇ ನೀವೂ ಸಹ ಟ್ರಸ್ಟಿಯಾಗಿರಿ, ಎಂದೂ ಸಹ ಉಲ್ಟಾ-ಸುಲ್ಟಾ ಖರ್ಚು ಮಾಡಿ ಪಾಪಾತ್ಮರಿಗೆ ಕೊಡಬಾರದು. ತಮ್ಮದೆಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ತೊಡಗಿಸಿರಿ, ಸಂಪೂರ್ಣ ಟ್ರಸ್ಟಿಯಾಗಿರಿ. ತಂದೆಯ ಶ್ರೀಮತದಂತೆ ನಡೆಯುತ್ತಾ ಇರಿ. ಯಾವ ಮಗು ಎಷ್ಟು ಶ್ರೀಮತದನುಸಾರ ನಡೆಯುತ್ತದೆ ಎಂದು ತಂದೆಯು ನೋಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವು ಪ್ರೀತಿಯ ಸಾಗರನಾಗಿದ್ದೀರಿ….

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ – ಬಾಬಾ, ನಾವು ಎಲ್ಲಿಂದ ಬಂದೆವು ಯಾವಾಗ ಬಂದೆವು ಮತ್ತೆ ಹಿಂತಿರುಗಿ ಹೋಗುವ ಮಾರ್ಗವನ್ನು ಹೇಗೆ ಮರೆತೆವು ಎಂದು ಈ ಡ್ರಾಮಾವನ್ನು ಕಿವಿಗಳಲ್ಲಿ ತಿಳಿಸಿಬಿಡಿ. ನಾವು ಯಾರಾಗಿದ್ದೇವೆ, ಎಲ್ಲಿಂದ ಬಂದೆವು ಮತ್ತು ಎಲ್ಲಿಗೆ ಹೊರಟು ಹೋದೆವು! ಒಂದು ಜ್ಞಾನದ ಹನಿಯನ್ನಾದರೂ ಕೊಟ್ಟು ಬಿಡಿ ಏಕೆಂದರೆ ಜ್ಞಾನ ಸಾಗರನಲ್ಲವೆ. ಈಗ ಮಕ್ಕಳಿಗೆ ತಿಳಿದಿದೆ, ನಾವಾತ್ಮರು ಎಲ್ಲಿನ ನಿವಾಸಿಗಳಾಗಿದ್ದೇವೆ ಮತ್ತು ತಂದೆ ಹಾಗೂ ನಮ್ಮ ಸ್ವರ್ಗವನ್ನು ಹೇಗೆ ಮರೆತೆವು ನಂತರ ಹೇಗೆ ಬಂದು ಇಲ್ಲಿ ದುಃಖಿಯಾದೆವು ಎಂಬ ರಹಸ್ಯವನ್ನು ಕಿವಿಗಳಲ್ಲಿ ತಿಳಿಸಿ. ತಂದೆಯು ಜ್ಞಾನ ಸಾಗರನೂ ಆಗಿದ್ದಾರೆ, ಪವಿತ್ರತೆಯ ಸಾಗರನೂ ಆಗಿದ್ದಾರೆ, ಪ್ರೇಮ ಸಾಗರನೂ ಆಗಿದ್ದಾರೆ. ಶಾಂತಿ-ಸುಖ ಮತ್ತು ಸಂಪತ್ತಿನ ಸಾಗರನೂ ಆಗಿದ್ದಾರೆ. ಈಗ ಬೇಹದ್ದಿನ ತಂದೆಯ ಮೂಲಕ ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳುತ್ತೀರಿ, ಆದಿಯಲ್ಲಿ ಎಲ್ಲಿಂದ ಬಂದೆವು ನಂತರ ಮಧ್ಯದಲ್ಲಿ ಏನಾಯಿತು, ಯಾವುದರಿಂದ ನಾವು ಮಾರ್ಗವನ್ನು ಮರೆತು ದುಃಖಿಯಾದೆವು! ಈಗ ಪುನಃ ಬಾಬಾ ನಮಗೆ ಮಾರ್ಗವನ್ನು ತಿಳಿಸಿ, ನಾವು ನಮ್ಮ ಸುಖಧಾಮ-ಶಾಂತಿಧಾಮಕ್ಕೆ ಹೋಗಬೇಕೆಂದು ತಂದೆಗೆ ಹೇಳುತ್ತಾರೆ. ನೀವು ಆದಿಯಲ್ಲಿ ಯಾರಾಗಿದ್ದಿರಿ, ಮಧ್ಯದಲ್ಲಿ ಏನಾಯಿತು ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಭಕ್ತಿಮಾರ್ಗವು ಹೇಗೆ ಆರಂಭವಾಯಿತು, ಅಂತಿಮದಲ್ಲಿ ಏನಾಯಿತು – ಈ ಆದಿ-ಮಧ್ಯ-ಅಂತ್ಯದ ರಹಸ್ಯವು ಈಗ ಬುದ್ಧಿಯಲ್ಲಿ ಕುಳಿತಿದೆ. ಇದು ನಾಟಕವಲ್ಲವೆ. ಇದನ್ನು ಮನುಷ್ಯರು ಅವಶ್ಯವಾಗಿ ತಿಳಿದುಕೊಳ್ಳಬೇಕಾಗಿದೆ ಏಕೆಂದರೆ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. ನಿಮಗೆ ತಿಳಿದಿದೆ – ನಾವಾತ್ಮರು ನಿರಾಕಾರಿ ಶಾಂತಿಧಾಮದಿಂದ ಇಲ್ಲಿ ಶಬ್ಧ ಪ್ರಪಂಚದಲ್ಲಿ ಬರುತ್ತೇವೆ. ಮೂಲವತನ, ಸೂಕ್ಷ್ಮವತನ ನಂತರ ಇದು ಸ್ಥೂಲವತನವಾಗಿದೆ. ಮೂಲವತನದಿಂದ ಆತ್ಮರು ಈ ಶಬ್ಧ ಪ್ರಪಂಚದಲ್ಲಿ ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸಲು ಬರುತ್ತೀರಿ. ಆತ್ಮದ ನಿವಾಸ ಸ್ಥಾನವು ಶಾಂತಿಧಾಮವಾಗಿದೆ. ಈ ಮಾತುಗಳನ್ನೂ ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದನ್ನು ಜ್ಞಾನ ಸಾಗರ ತಂದೆಯೇ ಬಂದು ತಿಳಿಸುತ್ತಾರೆ, ಈಗಲೂ ತಿಳಿಸುತ್ತಿದ್ದಾರೆ. ಪಾರಲೌಕಿಕ ಪರಮಪಿತ ಪರಮಾತ್ಮನಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ಮನುಷ್ಯರಿಗೆ ಹೇಳಲು ಸಾಧ್ಯವಿಲ್ಲ. ಕೇವಲ ಒಬ್ಬ ತಂದೆಗೇ ಈ ಮಹಿಮೆಯನ್ನು ಹಾಡಲಾಗುತ್ತದೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ವಿನಾಶದ ಸಮಯವಾಗಿದೆ, ವಿನಾಶ ಕಾಲೇ ವಿಪರೀತ ಬುದ್ಧಿ ಯೂರೋಪಿಯನ್ನರು….. ಎಂದು ಗಾಯನವಿದೆ. ಈಗ ತಂದೆಯು ನಿಮ್ಮ ಬುದ್ಧಿಯೋಗವನ್ನು ತಮ್ಮ ಜೊತೆ ಜೋಡಣೆ ಮಾಡಿಸಿದ್ದಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ. ನಾನು ಮುಸಲ್ಮಾನನಾಗಿದ್ದೇನೆ, ಹಿಂದೂ ಆಗಿದ್ದೇನೆ, ಬೌದ್ಧಿ ಆಗಿದ್ದೇನೆ…. ಇವೆಲ್ಲವೂ ದೇಹದ ಧರ್ಮಗಳಾಗಿವೆ, ಆತ್ಮವಂತೂ ಆತ್ಮವೇ ಆಗಿದೆ. ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿದರೆ ಪತಿತರಿಂದ ಪಾವನರಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ – ಈ ದೇಹವನ್ನೂ ಸಹ ಮರೆಯಿರಿ. ಇದು ಎಲ್ಲರಿಗಾಗಿ ತಂದೆಯ ಸಂದೇಶವಾಗಿದೆ. ದೇಹ ಸಹಿತ ದೇಹದ ಏನೆಲ್ಲಾ ಸಂಬಂಧಗಳಿವೆಯೋ ಎಲ್ಲವನ್ನೂ ಮರೆಯಿರಿ. ನಾನಾತ್ಮನಾಗಿದ್ದೇನೆ. ನಾವೆಲ್ಲಾ ಸಹೋದರರ ತಂದೆಯು ಒಬ್ಬರೇ ಆಗಿದ್ದಾರೆ. ಈ ಬ್ರಹ್ಮಾರವರೂ ಸಹ ಹೇಳುತ್ತಾರೆ – ನಾನಾತ್ಮನಾಗಿದ್ದೇನೆ ಎಂದು, ಇದರಿಂದ ಎಲ್ಲರೂ ಸಹೋದರ-ಸಹೋದರರಾದರು. ಈ ಸಮಯದಲ್ಲಿ ಎಲ್ಲಾ ಸಹೋದರರು ಪತಿತ, ದುಃಖಿಯಾಗಿದ್ದಾರೆ. ಎಲ್ಲರೂ ಕಾಮ ಚಿತೆಯನ್ನೇರಿ ಭಸ್ಮವಾಗಿ ಬಿಟ್ಟಿದ್ದಾರೆ. ಯಾವಾಗ ದ್ವಾಪರದ ಆದಿಯಲ್ಲಿ ರಾವಣ ರಾಜ್ಯವು ಆರಂಭವಾಯಿತು, ನಂತರ ನೀವು ವಾಮ ಮಾರ್ಗದಲ್ಲಿ ಇಳಿಯುತ್ತೀರಿ ಆಗಲೇ ಮತ್ತೆಲ್ಲಾ ಧರ್ಮಗಳು ಆರಂಭವಾಗುತ್ತವೆ. ಅರ್ಧ ಸಮಯ ನೀವು ಪವಿತ್ರರಾಗಿರುತ್ತೀರಿ, ಇನ್ನರ್ಧ ಸಮಯದಲ್ಲಿ ನೀವು ಪತಿತರಾಗುತ್ತೀರಿ. 21 ಜನ್ಮಗಳು ಭಾರತದಲ್ಲಿಯೇ ಗಾಯನವಿದೆ. 21 ಕುಲದ ಉದ್ಧಾರ ಮಾಡುವವರೇ ಕುಮಾರಿ ಎಂದು ಹೇಳಲಾಗುತ್ತದೆ. ಕನ್ಯೆಗೆ ಮಾನ್ಯತೆಯಿದೆ. ನೀವು ಭಾರತವನ್ನಷ್ಟೇ ಅಲ್ಲ, ಇಡೀ ಪ್ರಪಂಚದ ಉದ್ಧಾರ ಮಾಡುತ್ತಿದ್ದೀರಿ. ನಿಮಗೆ ತಿಳಿದಿದೆ, ಎಲ್ಲಾ ಆತ್ಮರು ಶಿವ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಕುಮಾರರೇ ಆದರು. ಯಾವಾಗ ಪ್ರಜಾಪಿತ ಬ್ರಹ್ಮನ ಸಂತಾನರಾಗುತ್ತೀರೋ ಆಗ ಸಹೋದರ-ಸಹೋದರಿಯರಾಗುತ್ತಾರೆ. ಇದು ನೀವು ಮಕ್ಕಳಿಗೆ ಜ್ಞಾನವಿದೆ – ನಾವೆಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದೇವೆ. ಹೇ ಪತಿತ-ಪಾವನ ಬನ್ನಿ, ಇಲ್ಲಿ ರಾವಣ ರಾಜ್ಯದಿಂದ ದುಃಖದಿಂದ ನಮ್ಮನ್ನು ಮುಕ್ತಗೊಳಿಸಿ, ನಮ್ಮ ಮಾರ್ಗದರ್ಶಕನಾಗಿ ನಮ್ಮನ್ನು ಮನೆಗೆ ಕರೆದುಕೊಂಡು ಹೋಗಿ, ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ಎಲ್ಲರೂ ತಂದೆಯನ್ನು ಕರೆಯುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ತಂದೆಯು ಬಂದಿದ್ದಾರೆ ನಮ್ಮನ್ನು ಈ ಕಲಿಯುಗೀ ರಾವಣ ರಾಜ್ಯದಿಂದ ಬಿಡಿಸಿ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ತಂದೆಗೆ ಗೊತ್ತಿದೆ, ಎಲ್ಲಾ ಆತ್ಮರು ಪತಿತರಾಗಿದ್ದಾರೆ. ಆದ್ದರಿಂದ ಶರೀರವೂ ಪತಿತವಾಗಿದೆ, ಆತ್ಮವನ್ನೇ ಪಾವನ ಮಾಡಿ ನಿರ್ವಾಣಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಭೂತ ಕಾಲದಿಂದ ವರ್ತಮಾನ, ಮತ್ತೆ ಭವಿಷ್ಯವಾಗುವುದು. ಆದಿ-ಮಧ್ಯ-ಅಂತ್ಯ ಪುನಃ ಆದಿ. ಸತ್ಯಯುಗದ ಆದಿ, ಕಲಿಯುಗದ ಅಂತ್ಯ ಮತ್ತೆ ಭವಿಷ್ಯ ಸತ್ಯಯುಗವು ಬರುವುದು. ಇದು ಸಹಜವಲ್ಲವೆ. ಅಂದಮೇಲೆ ಮಧ್ಯದಲ್ಲಿ ಏನಾಯಿತು? ನಾವು ಹೇಗೆ ಕೆಳಗಿಳಿದೆವು? ನಾವು ಪಾವನ ದೇವತೆಗಳಾಗಿದ್ದೆವು, ನಂತರ ಪಾವನರಿಂದ ಹೇಗೆ ಪತಿತರಾದೆವು! ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ – ರಾವಣ ರಾಜ್ಯವು ಆರಂಭವಾದಾಗಲಿಂದ ನೀವು ಪತಿತರಾಗುತ್ತೀರಿ, ಈಗ ಪುನಃ ನಿಮ್ಮನ್ನು ಭವಿಷ್ಯ ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ, ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ನಾನು ನಿಮ್ಮನ್ನು ವಿಷಯ ಸಾಗರದಿಂದ ಪಾರು ಮಾಡುತ್ತೇನೆ. ನನ್ನ ಜೀವನದ ದೋಣಿಯನ್ನು ದಡ ಸೇರಿಸು ಎಂದು ಹಾಡುತ್ತಾರೆ. ಎಲ್ಲರೂ ಒಬ್ಬ ತಂದೆಯನ್ನು ಕರೆಯುತ್ತಾರೆ – ತಂದೆಯೇ, ನಮ್ಮ ದೋಣಿಯು ಮುಳುಗಿಹೋಗಿದೆ ಅದನ್ನು ಕ್ಷೀರ ಸಾಗರದ ಕಡೆಗೆ ಕರೆದುಕೊಂಡು ಹೋಗಿರಿ. ತಂದೆಗೆ ಅಂಬಿಗ, ಹೂದೋಟದ ಮಾಲೀಕನೆಂತಲೂ ಹೇಳಲಾಗುತ್ತದೆ. ನಾವೀಗ ಮುಳ್ಳುಗಳ ಕಾಡಿನಲ್ಲಿದ್ದೇವೆ ನಮ್ಮನ್ನು ಪುನಃ ಹೂದೋಟಕ್ಕೆ ಕರೆದುಕೊಂಡು ಹೋಗಿರಿ. ದೇವತೆಗಳು ಹೂಗಳಲ್ಲವೆ! ಈಗ ಎಲ್ಲರೂ ಇಲ್ಲಿ ಮುಳ್ಳುಗಳಾಗಿದ್ದಾರೆ, ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ದೇವತೆಗಳೆಂದೂ ಯಾರಿಗೂ ದುಃಖ ಕೊಡುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ಅವರು ಕೇವಲ ಹಾಡುತ್ತಾರೆ, ನೀವಿಲ್ಲಿ ಸನ್ಮುಖದಲ್ಲಿ ಕುಳಿತಿದ್ದೀರಿ. ಹೇಳುತ್ತೀರಲ್ಲವೆ- ಬಾಬಾ, ನಾವು ಎಲ್ಲಿಂದ ಮರೆತೆವು! ಈ ಸೃಷ್ಟಿ ಚಕ್ರವನ್ನು ನಾವು ಹೇಗೆ ಮರೆತೆವು! ಸತ್ಯ-ತ್ರೇತಾಯುಗದಲ್ಲಿ ಇದನ್ನು ತಿಳಿದುಕೊಂಡಿರಲಿಲ್ಲ ಏಕೆಂದರೆ ಅಲ್ಲಿ ನಾವು ಸುಖಿಯಾಗಿದ್ದೆವು ನಂತರ ಯಾವಾಗ ದುಃಖಿಯಾದೆವು? ರಾವಣ ರಾಜ್ಯವು ಆರಂಭವಾದಾಗ. ಭಾರತವಾಸಿಗಳು ರಾವಣನನ್ನು ಸುಡುತ್ತಲೇ ಇರುತ್ತಾರೆ, ಎಲ್ಲಿಯವರೆಗೆ ರಾವಣನ ವಿನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಸುಡುತ್ತಲೇ ಇರುತ್ತಾರೆ. ಮತ್ತೆ ಸತ್ಯಯುಗದಲ್ಲಿ ಪ್ರತೀವರ್ಷ ಸುಡುವುದಿಲ್ಲ. ಇದು ಭಕ್ತಿಮಾರ್ಗವಾಗಿದೆ, ಈ ರಾವಣ ರಾಜ್ಯವು ಸಮಾಪ್ತಿಯಾಗಲಿದೆ. ಭಕ್ತಿಮಾರ್ಗದಲ್ಲಿ ರಾವಣನನ್ನು ಪ್ರತಿ ವರ್ಷ ಸುಡುತ್ತಾರೆ ಆದರೆ ಸಾಯುವುದೇ ಇಲ್ಲ. ಈಗ ನಿಮ್ಮ ಮುಂದೆ ರಾವಣನು ಸತ್ತು ಹೋದಂತೆಯೇ. ನಿಮಗೆ ತಿಳಿದಿದೆ – ಈಗ ರಾವಣ ರಾಜ್ಯವು ಸಮಾಪ್ತಿಯಾಗಲಿದೆ. ಪಂಚ ಭೂತಗಳ ತಲೆಯನ್ನು ಕತ್ತರಿಸಲಾಗುತ್ತದೆ. ಮೊಟ್ಟ ಮೊದಲು ಕಾಮದ ತಲೆಯನ್ನು ಕತ್ತರಿಸುತ್ತೀರಿ. ಕಾಮವೇ ಮಹಾಶತ್ರುವಾಗಿದೆ. ತಂದೆಯು ತಿಳಿಸುತ್ತಾರೆ – ಈ ಐದು ಭೂತಗಳ ಮೇಲೆ ಜಯಶೀಲರಾಗುವುದರಿಂದಲೇ ನೀವು ವಿಶ್ವದ ಮೇಲೆ ಜಯ ಗಳಿಸುತ್ತೀರಿ. ನಾವು ಪತಿತರೆಂದು ಮನುಷ್ಯರೂ ಹೇಳುತ್ತಾರೆ ಆದ್ದರಿಂದಲೇ ಪತಿತರನ್ನು ಪಾವನ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಹೇ ಪತಿತ-ಪಾವನ, ಹೇ ತಂದೆಯೇ, ಅಂಬಿಗನೇ, ದಯಾ ಸಾಗರ ತಂದೆಯೇ ಬನ್ನಿ ಎಂದು ಆತ್ಮವು ಕರೆಯುತ್ತದೆ. ತಂದೆಯು ಹೇಳುತ್ತಾರೆ – ನಾನು ಕಲ್ಪ-ಕಲ್ಪವೂ ಬರುತ್ತೇನೆ, ಹೇಗೆ ಬರುತ್ತೇನೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಭಗವಂತನೇ ಬಂದು ರಾಜಯೋಗವನ್ನು ಕಲಿಸಿದರೆಂದು ಗೀತೆಯಲ್ಲಿಯೂ ಇದೆ ಆದರೆ ಭಗವಂತ ಯಾರು, ಯಾವಾಗ ಬಂದರು ಎಂಬುದು ಯಾರಿಗೂ ತಿಳಿದಿಲ್ಲ. ಗೀತೆಯನ್ನಂತೂ ಖಂಡನೆ ಮಾಡಿ ಬಿಡುತ್ತಾರೆ. ಕೃಷ್ಣನನ್ನೂ ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಆದರೆ ದ್ವಾಪರದ ನಂತರ ಪ್ರಪಂಚವು ಇನ್ನೂ ಪತಿತವಾಗುತ್ತದೆ ಅಂದಮೇಲೆ ಕೃಷ್ಣನು ದ್ವಾಪರದಲ್ಲಿ ಬಂದು ಏನು ಮಾಡಿದಂತಾಯಿತು! ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಸಂಪೂರ್ಣ ಅಸತ್ಯವಂತರಾಗಿದ್ದಾರೆ, ಸತ್ಯಯುಗದಲ್ಲಿ ಸತ್ಯವಂತರಿರುತ್ತಾರೆ. ನೀವೀಗ ಅಸತ್ಯವಂತರಿಂದ ಸತ್ಯವಂತರಾಗುತ್ತೀರಿ. ತಂದೆಯು ತಿಳಿಸುತ್ತಾರೆ – ನೀವೇ ಸಂಪೂರ್ಣ ನಿರ್ವಿಕಾರಿ ಪೂಜ್ಯರಾಗಿದ್ದಿರಿ, ನೀವೇ ಈಗ ವಿಕಾರಿ ಪೂಜಾರಿಗಳಾಗಿದ್ದೀರಿ. ತಾವೇ ಪೂಜ್ಯ, ತಾವೇ ಪೂಜಾರಿ… 21 ಜನ್ಮಗಳವರೆಗೆ ನೀವು ಮೊದಲು ಪೂಜ್ಯರಾಗುತ್ತೀರಿ ನಂತರ ಪೂಜಾರಿಗಳಾಗಿದ್ದೀರಿ. ಸತ್ಯಯುಗದಲ್ಲಿ 8 ಜನ್ಮಗಳನ್ನು ಮತ್ತು ತ್ರೇತಾಯುಗದಲ್ಲಿ 12 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ನೀವು ಹೇಗೆ ಪತಿತರಾದಿರಿ, ಹೇಗೆ ಕೆಳಗಿಳಿದಿದ್ದೀರಿ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಈ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ, ಇಡೀ ವಿಶ್ವದ ಚರಿತ್ರೆ-ಭೂಗೋಳ, ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಎಲ್ಲರೂ ಏಕರಸವಾಗಿ ತಿಳಿದುಕೊಳ್ಳುವುದಿಲ್ಲ, ನಂಬರ್ವಾರ್ ತಿಳಿದುಕೊಳ್ಳುವರು.

ತಂದೆಯು ತಿಳಿಸುತ್ತಾರೆ – ನಾನು ಬಂದು ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇನೆ. ನೀವೀಗ ಸರ್ವಗುಣ ಸಂಪನ್ನರಾಗಬೇಕಾಗಿದೆ, ಅಲ್ಲಿಯವರೆಗೂ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ. ಇಲ್ಲಿಯೇ ಆಗಬೇಕಾಗಿದೆ ಮತ್ತೆ ಭವಿಷ್ಯದಲ್ಲಿ ಹೋಗಿ ನೀವು ರಾಜ್ಯಭಾರ ಮಾಡುವಿರಿ. ಅದರ ಮಧ್ಯದಲ್ಲಿ ಎಲ್ಲವೂ ವಿನಾಶವಾಗಿ ಬಿಡುವುದು. ವಿನಾಶವನ್ನೂ ಖಂಡಿತ ಮಾಡುತ್ತೀರಿ, ನೀವು ಪ್ರತ್ಯಕ್ಷದಲ್ಲಿ ತಮ್ಮ ಪಾತ್ರವನ್ನು ಅಭಿನಯಿಸುತ್ತೀರಿ. ಮುಂದೆ ಏನಾಗುವುದು ಎಂದು ನಿಮಗೆ ತಿಳಿಯುತ್ತದೆಯೇ! ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುವುದು.

ನಿಮಗೆ ಒಟ್ಟಾಗಿ ಹೇಳಲಾಗುತ್ತದೆ – ಸ್ಥಾಪನೆ ಮತ್ತು ವಿನಾಶವಾಗುವುದು. ವಿನಾಶವು ಹೇಗಾಗುವುದು? ಅದನ್ನೂ ಯಾವಾಗ ಆಗುವುದೋ ಆಗಲೇ ನೋಡುತ್ತೀರಿ, ದಿವ್ಯ ದೃಷ್ಟಿಯಿಂದ ವಿನಾಶವನ್ನಂತೂ ನೋಡಿದ್ದೀರಿ, ಮುಂದೆ ಹೋದಂತೆ ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಸ್ಥಾಪನೆಯ ಸಾಕ್ಷಾತ್ಕಾರವನ್ನು ದಿವ್ಯ ದೃಷ್ಟಿಯಿಂದ ನೋಡಿದ್ದೀರಿ ಮತ್ತು ಪ್ರತ್ಯಕ್ಷದಲ್ಲಿಯೂ ನೋಡುತ್ತೀರಿ ಆದ್ದರಿಂದ ಹೆಚ್ಚು ಧ್ಯಾನದಲ್ಲಿ ಹೋಗುವುದೂ ಸಹ ಸರಿಯಲ್ಲ. ಕೆಲವರು ವೈಕುಂಠದಲ್ಲಿ ಹೋಗಿ ನೃತ್ಯ ಮಾಡತೊಡಗುತ್ತಾರೆ. ಜ್ಞಾನವೂ ಇಲ್ಲ, ಯೋಗವೂ ಇಲ್ಲ, ಎರಡರಿಂದಲೂ ವಂಚಿತರಾಗಿ ಬಿಡುತ್ತಾರೆ ಆದ್ದರಿಂದ ಧ್ಯಾನದಲ್ಲಿ ಹೋಗುವ ಅವಶ್ಯಕತೆಯಿಲ್ಲ. ಇದಂತೂ ಕೇವಲ ಭೋಗವನ್ನು ಇಡಲಾಗುತ್ತದೆ. ನೀವು ಬ್ರಾಹ್ಮಣರು ಅಲ್ಲಿಗೆ ಹೋಗುತ್ತೀರಿ, ಅಲ್ಲಿ (ಸೂಕ್ಷ್ಮವತನ) ದೇವತೆಗಳು ಮತ್ತು ಬ್ರಾಹ್ಮಣರ ಸಭೆಯು ಸೇರುತ್ತದೆ, ನೀವಿಲ್ಲಿ ತಂದೆಯ ಮನೆಯಲ್ಲಿ ಕುಳಿತಿದ್ದೀರಿ ಮತ್ತೆ ನಿಮ್ಮನ್ನು ವಿಷ್ಣುಪುರಿಗೆ ಹೋಗುವುದಕ್ಕಾಗಿ ಯೋಗ್ಯರನ್ನಾಗಿ ಮಾಡಲಾಗುತ್ತದೆ. ಕನ್ಯೆಗೆ ವಿವಾಹವಾಗುವಾಗ ಅವರಿಗೆ ಎಲ್ಲವನ್ನೂ ತಿಳಿಸಲಾಗುತ್ತದೆ – ಮಾವನ ಮನೆಯಲ್ಲಿ ಹೇಗೆ ನಡೆಯಬೇಕು, ಎಲ್ಲರೊಂದಿಗೆ ಪ್ರೀತಿಯಿಂದ ನಡೆಯಬೇಕು, ಜಗಳ-ಕಲಹ ಮಾಡಬಾರದು…. ಎಂದು. ಇಲ್ಲಿಯೂ ಹಾಗೆಯೇ ತಂದೆಯು ಹೇಳುತ್ತಾರೆ – ಮಕ್ಕಳೇ, ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ, ಸ್ವರ್ಗದಲ್ಲಿ ಈ ಜಗಳ-ಕಲಹ ಏನೂ ಇರುವುದಿಲ್ಲ. ನೀವೀಗ ಮಾವನ ಮನೆಯಾದ ವಿಷ್ಣು ಪುರಿಗೆ ಹೋಗುತ್ತೀರಿ. ಅಲ್ಲಿ ಮಹಾನ್ ವೈಷ್ಣವರಿರುತ್ತಾರೆ. ಸೃಷ್ಟಿಯಲ್ಲಿ ಅವರಂತಹ ವೈಷ್ಣವರು ಮತ್ತ್ಯಾರೂ ಇರುವುದಿಲ್ಲ. ವೈಷ್ಣವ ದೇವತೆಗಳು ವಿಕಾರದಲ್ಲಿ ಹೋಗುವುದಿಲ್ಲ. ವಿಕಾರವೂ ಸಹ ಹಿಂಸೆಯಾಗಿದೆ. ಅಹಿಂಸಾ ಪರಮೋ ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ನಾವು ತಂದೆಯ ಮನೆಯಲ್ಲಿ ಕುಳಿತಿದ್ದೇವೆ, ಈಗ ವಿಷ್ಣು ಪುರಿಯಲ್ಲಿ ಹೋಗಬೇಕಾಗಿದೆ. ನಿಮಗೆ ತಿಳಿದಿದೆ, ಅಲ್ಲಿ ಬಹಳ ಸುಖವಿರುತ್ತದೆ. ವಿವಾಹಕ್ಕೆ ಮೊದಲು ಕನ್ಯೆಯು ಹರಿದಿರುವ ವಸ್ತ್ರಗಳನ್ನು ಧರಿಸಿರುತ್ತಾಳೆ, ಅದಕ್ಕೆ ವನವಾಸವೆಂದು ಹೇಳಲಾಗುತ್ತದೆ. ಈಗ ನಿಮ್ಮ ಬಳಿಯೂ ಏನಿದೆ? ಏನೂ ಇಲ್ಲ. ಇಲ್ಲಿನದೆಲ್ಲವೂ ಕಲ್ಲು-ಚೂರುಗಳಾಗಿದೆ. ಇಲ್ಲಿ ನೀವು ಯಾವುದೇ ಆಭರಣ ಇತ್ಯಾದಿಗಳನ್ನು ಧರಿಸುವ ಅವಶ್ಯಕತೆಯಿಲ್ಲ ಅದರೆ ಗೃಹಸ್ಥ ವ್ಯವಹಾರದಲ್ಲಿ ಇರುತ್ತೀರಿ, ಆದ್ದರಿಂದ ಮದುವೆ-ಮುಂಜಿಗಳಿಗೆ ಹೋಗಬೇಕಾಗುತ್ತದೆ ಅಂದಾಗ ಒಡವೆ ಇತ್ಯಾದಿಗಳನ್ನು ಧರಿಸಿ, ಅದನ್ನು ನಿರಾಕರಿಸುವುದಿಲ್ಲ. ಇಲ್ಲದಿದ್ದರೆ ಇವರು ವಿಧವೆಯಂತಿದ್ದಾರೆ, ಆಭರಣಗಳನ್ನು ಧರಿಸುವುದಿಲ್ಲವೆಂದು ಮಾತನಾಡುತ್ತಾರೆ, ಕೆಟ್ಟ ಹೆಸರು ಬರುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಹೆಸರಿಗೆ ಕಳಂಕ ತರಬಾರದು. ಏನಾದರೂ ಧರಿಸಿ ಆದರೆ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ಭಲೆ ಎಲ್ಲಿಯಾದರೂ ಹೋಗಿರಿ ಆದರೆ ಈ ಮಂತ್ರವನ್ನು ನೆನಪಿಟ್ಟುಕೊಳ್ಳಿರಿ. ನಾವು ನೆನಪಿನಲ್ಲಿರುತ್ತೇವೆಯೇ ಎಂದು ಪರೀಕ್ಷಿಸಿಕೊಳ್ಳಿ. ನಾವು ತಂದೆಯ ಆದೇಶ ಅನುಸಾರ ಅಲ್ಲಿಗೆ ಹೋಗುತ್ತೇವೆ ಎಂದು ನೆನಪಿರಲಿ. ಅವರ ಜೊತೆಯೂ ಸಂಬಂಧವನ್ನು ನಿಭಾಯಿಸಬೇಕಾಗಿದೆ ಆದರೆ ಕೈ ಕೆಲಸ ಮಾಡುತ್ತಿರಲಿ ಆದರೆ ಬುದ್ಧಿಯು ತಂದೆಯನ್ನು ನೆನಪು ಮಾಡಲಿ ಆಗ ಇವರು ಶಕ್ತಿಶಾಲಿಗಳೆಂದು ತಿಳಿಯುತ್ತಾರೆ. ಒಡವೆ ಇತ್ಯಾದಿಗಳನ್ನು ಭಲೆ ಧರಿಸಿ, ವಿವಾಹ ಮೊದಲಾದವುಗಳಿಗೆ ಹೋಗಿರಿ, ಎಲ್ಲರೊಂದಿಗೆ ಇರಿ ಆದರೆ ಮಹಾವೀರರಾಗಿ ಇರಿ. ಸನ್ಯಾಸಿಗಳ ಬಗ್ಗೆಯೂ ತೋರಿಸುತ್ತಾರಲ್ಲವೆ – ಗುರುವು ವೇಶ್ಯೆಯ ಬಳಿ ಕಳುಹಿಸಿದರು, ಸರ್ಪದ ಬಳಿ ಕಳುಹಿಸಿಕೊಟ್ಟರು…… ಯಾರು ಸಾಹಸದಿಂದ ಉತ್ತೀರ್ಣರಾಗಿ ತೋರಿಸುವರೋ ಅವರಿಗೆ ಮಹಾವೀರರೆಂದು ಹೇಳಲಾಗುತ್ತದೆ. ತಂದೆಯ ನೆನಪಿನಲ್ಲಿದ್ದಾಗ ಕರ್ಮೇಂದ್ರಿಯಗಳಿಂದ ಯಾವುದೇ ಚಂಚಲತೆಯಾಗುವುದಿಲ್ಲ, ತಂದೆಯನ್ನು ಮರೆತರೆ ಕರ್ಮೇಂದ್ರಿಯಗಳು ಚಂಚಲವಾಗುವುದು. ನೀವು ವಿಶ್ವದ ಮಾಲೀಕರಾಗುತ್ತೀರಿ. ಇದು ಕಡಿಮೆ ಮಾತೇನು! ಸನ್ಯಾಸಿಗಳು ಈ ಮಾತುಗಳನ್ನು ಸ್ವಲ್ಪವೂ ಅರಿತುಕೊಂಡಿಲ್ಲ. ಭಲೆ ಶಾಸ್ತ್ರಗಳಲ್ಲಿ ಕೆಲವು ಮಾತುಗಳಿವೆ ಆದರೆ ಖಂಡನೆ ಮಾಡಿ ಬಿಟ್ಟಿದ್ದಾರೆ. ಭಗವಾನುವಾಚ – ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಎಲ್ಲಿಯವರೆಗೂ ಜೀವಿಸಿರುತ್ತೀರೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಾ ಇರಿ, ಕೇಳುತ್ತಾ ಇರಿ. ರಾಜಧಾನಿಯು ಸ್ಥಾಪನೆಯಾಗುವುದು, ಮಕ್ಕಳಿಗೆ ಪದೇ-ಪದೇ ಶಿಕ್ಷಣ ಕೊಡಲಾಗುತ್ತದೆ – ಒಬ್ಬ ತಂದೆಯನ್ನು ನೆನಪು ಮಾಡಿರಿ, ದೈವೀ ಲಕ್ಷಣಗಳನ್ನು ಕಲಿಯಿರಿ, ಯಾವುದೇ ವಿಕರ್ಮವಾಗಬಾರದು. ಇದಂತೂ ಅಸುರರ ಕೆಲಸವಾಗಿದೆ. ನೀವೀಗ ದೇವತೆಗಳಾಗುತ್ತೀರಿ ಅಂದರೆ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡದು ಕಾಮ ವಿಕಾರದ ಮುಳ್ಳಾಗಿದೆ. ಇದು ಹವ್ಯಾಸವಾಗಿದ್ದರೆ ಪದೇ-ಪದೇ ಬೀಳುತ್ತಾರೆ. ಮಾಯೆಯು ಪೆಟ್ಟನ್ನು ಕೊಟ್ಟು ಬೀಳಿಸಿ ಬಿಡುತ್ತದೆ ಆದ್ದರಿಂದಲೇ ಗಾಯನವಿದೆ, ಆಶ್ಚರ್ಯವೆನಿಸುವಂತೆ ಕೇಳಿ ಅನ್ಯರಿಗೂ ಹೇಳಿ ಮತ್ತೆ ಮಾಯೆಗೆ ವಶವಾಗಿ ಹೊರಟು ಹೋಗುವರು…. ನೀವೀಗ ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ಇದೆಲ್ಲವೂ ಈಶ್ವರನೇ ಕೊಟ್ಟಿದ್ದಾರೆಂದು ಹೇಳುತ್ತೀರಿ ಆದ್ದರಿಂದ ನೀವು ಟ್ರಸ್ಟಿಯಾಗಿ ಬಿಡುತ್ತೀರಿ – ಇದೆಲ್ಲವೂ ತಂದೆಯದಾಗಿದೆ, ನಾವು ಅವರ ಶ್ರೀಮತದಂತೆ ನಡೆಯಬೇಕಾಗಿದೆ. ತಂದೆಯೂ ಸಹ ನೋಡುತ್ತಾರೆ – ನನಗೆ ಎಲ್ಲವನ್ನೂ ಅರ್ಪಣೆ ಮಾಡಿದ ಮೇಲೆ ಹೇಗೆ ನನ್ನ ಶ್ರೀಮತದನುಸಾರ ನಡೆಯುತ್ತಾರೆ? ಯಾವುದೇ ಉಲ್ಟಾ-ಸುಲ್ಟಾ ಖರ್ಚು ಮಾಡಿ ಪಾಪಾತ್ಮರಿಗೆ ಕೊಡುತ್ತಿಲ್ಲವೆ? ಆದಿಯಲ್ಲಿ ಈ ಬ್ರಹ್ಮಾರವರೂ ಸಹ ಟ್ರಸ್ಟಿಯಾಗಿ ತೋರಿಸಿದರಲ್ಲವೆ, ಎಲ್ಲವನ್ನೂ ಈಶ್ವರನಿಗೆ ಅರ್ಪಣೆ ಮಾಡಿ ಸ್ವಯಂ ಟ್ರಸ್ಟಿಯಾಗಿ ಬಿಟ್ಟರು. ಯಾರಿಗೆ ಏನೂ ಕೊಡಲಿಲ್ಲ. ಈಶ್ವರಾರ್ಪಣೆ ಮಾಡಿದೆವು ಅಂದಮೇಲೆ ಈಶ್ವರನ ಸೇವೆಯಲ್ಲಿಯೇ ತೊಡಗಿಸಬೇಕಾಗಿದೆ. ಶರೀರ ನಿರ್ವಹಣೆಯೂ ಸಹ ಆಗುತ್ತಿತ್ತು ಅಲ್ಲವೆ. ಏನೆಲ್ಲವೂ ಇತ್ತೋ ಅದೆಲ್ಲವನ್ನೂ ಸೇವೆಯಲ್ಲಿ ತೊಡಗಿಸಿದರು. ಇವರನ್ನು ನೋಡಿ ಅನ್ಯರೂ ಅದೇರೀತಿ ಮಾಡಿದರು. ಭಟ್ಟಿಯಾಯಿತು, ಭಟ್ಟಿಯಾಗದಿದ್ದರೆ ಇಷ್ಟೊಂದು ಮಂದಿ ಮಕ್ಕಳು ಸೇವೆಗಾಗಿ ಎಲ್ಲಿ ಬುದ್ಧಿವಂತರಾಗುತ್ತಿದ್ದರು! ಪಾಕೀಸ್ತಾನದಲ್ಲಿಯೂ ಕಲಿತರು ಮತ್ತು ಇಲ್ಲಿಗೆ ಬಂದು ಕಲಿತರು. ಯಾವಾಗ ಅನ್ಯರಿಗೆ ತಿಳಿಸಲು ಯೋಗ್ಯರಾದರೋ ಆಗ ಸೇವೆಗಾಗಿ ಹೊರಟರು. ಈಗಂತೂ ನೋಡಿ ಎಷ್ಟೊಂದು ಪ್ರದರ್ಶನಿಗಳನ್ನು ಮಾಡುತ್ತಾ ಇರುತ್ತೀರಿ, ದೊಡ್ಡ-ದೊಡ್ಡವರಿಗೆ ನಿಮಂತ್ರಣ ಕೊಡುತ್ತೀರಿ. ಈ ಜ್ಞಾನ ಯಜ್ಞದಲ್ಲಿ ಅನೇಕ ಪ್ರಕಾರದ ವಿಘ್ನಗಳೂ ಬರುತ್ತವೆ, ವಿಘ್ನಗಳಿಗೆ ಹೆದರಬಾರದು. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಯೋಗ ಬಲದಲ್ಲಿದ್ದು ಅವರಿಗೆ ತಿಳಿಸಿರಿ, ಭಗವಂತ ತಂದೆಯ ಮಕ್ಕಳಾಗಿಯೂ ಮತ್ತೆ ತಂದೆಯನ್ನು ಮರೆತು ಹೋಗುತ್ತೀರಿ, ಮಾಯೆಗೆ ವಶವಾಗಿ ಬಿಡುತ್ತೀರಿ. ಇದೂ ಸಹ ಸೋಲು-ಗೆಲುವಿನ ಕುಸ್ತಿಯಾಗಿದೆ ಆದರೆ ಇದು ಮಲ್ಲ ಯುದ್ಧದಂತಿದೆ. ಮಾಯೆಯೂ ಪೆಟ್ಟು ಕೊಡುತ್ತದೆ ಆಗ ಮೂರ್ಚಿತರಾಗುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಾಯೆಗೆ ಎಂದೂ ಸೋಲಬೇಡಿರಿ, ಪವಿತ್ರರಾಗಿರಿ ಆಗ ವಿಶ್ವದ ಮಾಲೀಕರಾಗುತ್ತೀರಿ. ಎಷ್ಟು ದೊಡ್ಡ ಸಂಪಾದನೆಯಿದೆ. ಒಂದುವೇಳೆ ಪೂರ್ಣ ಪುರುಷಾರ್ಥ ಮಾಡದಿದ್ದರೆ ಹೋಗಿ ದಾಸ-ದಾಸಿಯರಾಗುತ್ತೀರಿ, ರಾಜಧಾನಿಯೆಲ್ಲವೂ ಇಲ್ಲಿಯೇ ಸ್ಥಾಪನೆಯಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಿರಬೇಕಾಗಿದೆ. ಮಹಾವೀರರಾಗಿ ಮಾಯೆಯ ಯುದ್ಧದಲ್ಲಿ ವಿಜಯಿಗಳಾಗಬೇಕಾಗಿದೆ. ಎಲ್ಲರ ಜೊತೆ ಸಂಬಂಧ ನಿಭಾಯಿಸುತ್ತಾ ಬುದ್ಧಿಯೋಗವು ಒಬ್ಬ ತಂದೆಯಲ್ಲಿರಬೇಕಾಗಿದೆ.

2. ವಿಘ್ನಗಳಿಗೆ ಹೆದರಬಾರದು. ಸೇವೆಯಲ್ಲಿ ತಮ್ಮದೆಲ್ಲವನ್ನೂ ಸಫಲ ಮಾಡಬೇಕಾಗಿದೆ. ಈಶ್ವರಾರ್ಪಣೆ ಮಾಡಿ ಟ್ರಸ್ಟಿಯಾಗಿರಬೇಕಾಗಿದೆ. ಉಲ್ಟಾ-ಸುಲ್ಟಾ ಕಾರ್ಯದಲ್ಲಿ ಹಣವನ್ನು ತೊಡಗಿಸಬಾರದು.

ವರದಾನ:-

ಹೇಗೆ ಕರ್ಮದಲ್ಲಿ ಬರುವುದು ಸ್ವಾಭಾವಿಕ ಆಗಿದೆಯೋ ಹಾಗೆಯೇ ಕರ್ಮಾತೀತರು ಆಗುವುದೂ ಸಹ ಸ್ವಾಭಾವಿಕವಾಗಲಿ, ಇದಕ್ಕಾಗಿ ಡಬಲ್ ಲೈಟ್ ಆಗಿರಬೇಕು. ಡಬಲ್ ಲೈಟ್ ಆಗಿರುವುದಕ್ಕಾಗಿ ಕರ್ಮವನ್ನು ಮಾಡುತ್ತಿದ್ದರೂ, ಸ್ವಯಂನ್ನು ನಿಮಿತ್ತನೆಂದು ತಿಳಿಯಿರಿ ಮತ್ತು ಆತ್ಮಿಕ ಸ್ಥಿತಿಯಲ್ಲಿರುವ ಅಭ್ಯಾಸವನ್ನು ಮಾಡಿರಿ. ಇವೆರಡು ಮಾತುಗಳಲ್ಲಿಯೇ ಗಮನವನ್ನು ಇಟ್ಟುಕೊಳ್ಳುವುದರಿಂದ ಸೆಕೆಂಡಿನಲ್ಲಿ ಕರ್ಮಾತೀತ, ಸೆಕೆಂಡಿನಲ್ಲಿ ಕರ್ಮಯೋಗಿ ಆಗಿ ಬಿಡುವಿರಿ. ನಿಮಿತ್ತವಷ್ಟೇ ಕರ್ಮ ಮಾಡುವುದಕ್ಕಾಗಿ ಕರ್ಮಯೋಗಿ ಆಗಿರಿ, ನಂತರ ಕರ್ಮಾತೀತ ಸ್ಥಿತಿಯ ಅನುಭವ ಮಾಡಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top