07 April 2022 KANNADA Murli Today | Brahma Kumaris

Read and Listen today’s Gyan Murli in Kannada

6 April 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಕಲಿಯುಗದಲ್ಲಿ ಎಲ್ಲರೂ ರಾವಣನ ಬಂಧನದಲ್ಲಿ ಬಂಧಿಸಲ್ಪಟ್ಟಿದ್ದಾರೆ, ಜೀವನ ಬಂಧನದಲ್ಲಿದ್ದಾರೆ, ಅವರನ್ನು ಜೀವನ್ಮುಕ್ತ ಮಾಡಬೇಕು”

ಪ್ರಶ್ನೆ:: -

ಯಾವ ಆಸ್ತಿ ನೀವು ಬ್ರಾಹ್ಮಣರ ಜೊತೆ-ಜೊತೆಯಲ್ಲಿ ಎಲ್ಲಾ ಮನುಷ್ಯಾತ್ಮರಿಗೂ ಸಿಗುತ್ತದೆ?

ಉತ್ತರ:-

ಜೀವನ್ಮುಕ್ತರಾಗುವ ಆಸ್ತಿಯು ಎಲ್ಲರಿಗೂ ಸಿಗುತ್ತದೆ. ನೀವು ಬ್ರಹ್ಮನ ಸಂತಾನರು ಬ್ರಾಹ್ಮಣರಾಗುವುದರಿಂದ ನಿಮಗೆ 21 ಜನ್ಮಗಳಿಗಾಗಿ ಜೀವನ್ಮುಕ್ತಿಯ ಆಸ್ತಿ ಸಿಗುತ್ತದೆ. ಉಳಿದವರೆಲ್ಲರಿಗೂ ತಮ್ಮ-ತಮ್ಮ ಧರ್ಮದಲ್ಲಿ ಮೊದಲಿಗೆ ಜೀವನ್ಮುಕ್ತಿ ಅರ್ಥಾತ್ ಸುಖ ನಂತರ ದುಃಖ ಸಿಗುತ್ತದೆ. ಪ್ರತಿಯೊಬ್ಬರೂ ಅರ್ಧ ಸಮಯ ಸುಖ ಹಾಗೂ ಅರ್ಧ ಸಮಯ ದುಃಖವನ್ನು ಭೋಗಿಸುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಸ್ವರ್ಗದ ಸುಖವನ್ನು ಅನುಭವ ಮಾಡುವುದಿಲ್ಲ, ಅದಕ್ಕಾಗಿ ಬ್ರಾಹ್ಮಣರಾಗಬೇಕಾಗುತ್ತದೆ. ಪಾಠಶಾಲೆಯಲ್ಲಿ ಶಿಕ್ಷಣವನ್ನು ತೆಗೆದುಕೊಳ್ಳಬೇಕಾಗುತ್ತದೆ, ಮಾಯೆಯ ಮೇಲೆ ವಿಜಯಿಗಳಾಗಬೇಕಾಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮುಖವನ್ನು ನೋಡಿಕೊ ಪ್ರಾಣಿ..

ಓಂ ಶಾಂತಿ. ಇದನ್ನು ಯಾರು ಹೇಳಿದರು? ತಮ್ಮ ಮನಸ್ಸೆಂಬ ದರ್ಪಣದಲ್ಲಿ ಎಷ್ಟು ಪಾಪವಿದೆ, ಎಷ್ಟು ಪುಣ್ಯವಿದೆ ಅರ್ಥಾತ್ ಪಂಚ ವಿಕಾರಗಳ ಮೇಲೆ ವಿಜಯಿಗಳಾಗಿದ್ದೇವೆ ಎನ್ನುವುದನ್ನು ನೋಡಿಕೊಳ್ಳಿ! ನಾವು ಶ್ರೀ ನಾರಾಯಣನ್ನು ಸ್ವೀಕರಿಸಲು ಯೋಗ್ಯರಾಗಿದ್ದೇವೆಯೇ ಏಕೆಂದರೆ ಜೀವನ್ಮುಕ್ತಿ ಅಥವಾ ಸ್ವರ್ಗದ ಮಾಲೀಕರಂತು ರಾಜ, ರಾಣಿ ಹಾಗೂ ಪ್ರಜೆಗಳು ಆಗುತ್ತಾರೆ. ಆದ್ದರಿಂದ ಮನಸ್ಸೆಂಬ ದರ್ಪಣದಲ್ಲಿ ನಾವು ತಾಯಿ-ತಂದೆಯಂತೆ ಸೇವೆ ಮಾಡುತ್ತಿದ್ದೇವೆಯೇ ಎಂದು ನೋಡಿಕೊಳ್ಳಬೇಕು. ಇದು ಕಲಿಯುಗವಾಗಿದೆ ಹಾಗೂ ಎಲ್ಲರೂ ಜೀವನ ಬಂಧನದಲ್ಲಿದ್ದಾರೆಂದು ನೀವು ಬ್ರಾಹ್ಮಣರು ಮಾತ್ರ ತಿಳಿದುಕೊಂಡಿದ್ದೀರಿ. ಒಬ್ಬರೂ ಸಹ ಜೀವನ್ಮುಕ್ತಿಯಲ್ಲಿ ಇಲ್ಲ. ನೀವೂ ಜೀವನ ಬಂಧನದಲ್ಲಿ ಇದ್ದವರು, ಈಗ ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪುರುಷಾರ್ಥವನ್ನು ತಂದೆ ಮಾಡಿಸುತ್ತಾರೆ. ಈ ಸಮಯ ಎಲ್ಲಾ ಮನುಷ್ಯ ಮಾತ್ರರು ಜೀವನ ಬಂಧನದಲ್ಲಿದ್ದಾರೆ ಏಕೆಂದರೆ ಇದು ಕಲಿಯುಗವಾಗಿದೆ. ರಾವಣನ ಬಂಧನದಲ್ಲಿ ಬಂಧಿಸಲ್ಪಟ್ಟಿದ್ದಾರೆ. ಕಲಿಯುಗ ಜೀವನ ಬಂಧನವಾಗಿದೆ. ಸತ್ಯಯುಗದಲ್ಲಿ ಜೀವನಮುಕ್ತಿ ಇರುತ್ತದೆ. ರಾಮ ರಾಜ್ಯದಲ್ಲಿ ಯಥಾ ರಾಜಾ ರಾಣಿ ತಥಾ ಪ್ರಜೆಗಳೆಲ್ಲರೂ ಜೀವನ್ಮುಕ್ತಿಯಲ್ಲಿದ್ದರು. ರಾವಣ ರಾಜ್ಯದಲ್ಲಿ ಯಥಾ ರಾಜಾ ರಾಣಿ ತಥಾ ಪ್ರಜೆಗಳೆಲ್ಲರೂ ಜೀವನ ಬಂಧನದಲ್ಲಿದ್ದಾರೆ. ಈ ಸಮಯ ಎಲ್ಲಾ ಮನುಷ್ಯರು ಜೀವನ ಬಂಧನದಲ್ಲಿದ್ದು ತಮೋಪ್ರಧಾನ ದುಃಖಿಗಳಾಗಿದ್ದಾರೆ. ಈಗ ಎಲ್ಲರೂ ಸತೋಪ್ರಧಾನದಲ್ಲಿ ಹೋಗಬೇಕಾಗಿದೆ. ಸತೋಪ್ರಧಾನವು ಸತ್ಯಯುಗದಿಂದ ಆರಂಭವಾಗುತ್ತದೆ. ಪ್ರತಿಯೊಂದು ಆತ್ಮವು ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸಬೇಕು. ಯಾವಾಗ ಆತ್ಮ ತಮ್ಮ-ತಮ್ಮ ಧರ್ಮದಲ್ಲಿ ಶಾಂತಿಧಾಮದಿಂದ ಬಂದಾಗ ಜೀವನ ಮುಕ್ತಿಯಲ್ಲಿರುತ್ತಾರೆ. ಸತ್ಯ, ತ್ರೇತಾಯುಗದಲ್ಲಿ ಯಾರಿಗೂ ಜೀವನ ಬಂಧನವೆಂದು ಹೇಳಲಾಗುವುದಿಲ್ಲ ಏಕೆಂದರೆ ಅಲ್ಲಿ ರಾವಣ ರಾಜ್ಯ ಇರುವುದಿಲ್ಲ. ಕಲಿಯುಗದಲ್ಲಿ ರಾವಣ ರಾಜ್ಯವಿದೆ, ಈಗ ಇಡೀ ಪೃಥ್ವಿಯ ಮೇಲೆ ಜೀವನ ಬಂಧನವಿದೆ. ಆದಿ ಸನಾತನ ದೇವೀ-ದೇವತಾ ಧರ್ಮದ ಮೊದಲನೇ ಸ್ಥಾನದಲ್ಲಿದ್ದವರೂ ಸಹ ಈಗ ಜೀವನ ಬಂಧನದಲ್ಲಿದ್ದಾರೆ. ಈಗ ಜೀವನ ಮುಕ್ತವಾಗುತ್ತಿದೆ. ಜೀವನ ಮುಕ್ತಿಯ ಅರ್ಥ ಸತ್ಯ, ತ್ರೇತಾಯುಗದಲ್ಲಿ ಬರುವುದು ಎಂದಲ್ಲ. ರಾವಣನ ದುಃಖದಿಂದ ಬಿಡಿಸುವುದಕ್ಕೆ ಜೀವನಮುಕ್ತಿ ಎಂದು ಕರೆಯಲಾಗುತ್ತದೆ. ಮನುಷ್ಯರು ಮನುಷ್ಯರಿಗೆ ಮುಕ್ತಿ ಹಾಗೂ ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಮುಕ್ತಿ ಅರ್ಥಾತ್ ನಿರ್ವಾಣಧಾಮಕ್ಕೆ ಎಲ್ಲರನ್ನು ತಂದೆ ಕರೆದುಕೊಂಡು ಹೋಗುತ್ತಾರೆ. ಮೊದಲು ಎಲ್ಲರೂ ಮುಕ್ತಿಯಲ್ಲಿ ಹೋಗಿ ನಂತರ ನಂಬರ್‍ವಾರ್ ಧರ್ಮದನುಸಾರ ಜೀವನ ಮುಕ್ತಿಯಲ್ಲಿ ಬರುತ್ತಾರೆ. ಸತ್ಯಯುಗದಲ್ಲಿ ಬರುವುದಿಲ್ಲವೆಂದರೆ ಜೀವನ್ಮುಕ್ತಿ ಎಂದು ಹೇಳಬಾರದೆಂದು ತಿಳಿದುಕೊಳ್ಳಬಾರದು. ಅವರ ಧರ್ಮದಲ್ಲಿ ಯಾರು ಮೊದಲು ಬರುತ್ತಾರೆ, ಅವರು ಮೊದಲು ಜೀವನಮುಕ್ತಿಯಲ್ಲಿರುತ್ತಾರೆ. ಆತ್ಮ ಮೊದಲು ಸತೋಪ್ರಧಾನವಾಗುತ್ತದೆ, ನಂತರ ಸತೋ, ರಜೋನಲ್ಲಿ ಬರಬೇಕು. ಪ್ರತಿಯೊಂದು ವಸ್ತು ಹಳೆಯದರಿಂದ ಹೊಸದು, ಹೊಸ ವಸ್ತುವಿನಿಂದ ಹಳೆಯದು ಆಗಲೇಬೇಕಾಗುತ್ತದೆ. ಈ ಸಮಯ ಸಾಧು ಸಂತ ಮೊದಲಾದವರೆಲ್ಲರೂ ಜೀವನ ಬಂಧನದಲ್ಲಿದ್ದಾರೆ. ಏಕೆಂದರೆ ಇದು ಕಲಿಯುಗವಾಗಿದೆ. ಎಲ್ಲಿಯವರೆಗೆ ತಂದೆ ಬರುವುದಿಲ್ಲ, ಅಲ್ಲಿಯವರೆಗೆ ಕರೆಯಲಾಗುತ್ತದೆ, ನಂತರ ಅವರನ್ನು ಮಹಾಕಾಲ ಅಥವಾ ಯಾವುದಾದರೂ ಹೆಸರನ್ನು ಇಟ್ಟುಕೊಳ್ಳಬಹುದು. ಶಿವ ಅವರ ಮೂಲ ಹೆಸರಾಗಿದೆ. ಆದರೆ ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ. ಪರಮಪಿತ ಪರಮಾತ್ಮನೆಂದೂ ಸಹ ಹೇಳುತ್ತಾರೆ. ನಾನು ಬಂದು ಮಕ್ಕಳಿಗೆ ಮುಕ್ತಿ-ಜೀವನ್ಮುಕ್ತಿ ಎರಡನ್ನೂ ಕೊಡುತ್ತೇನೆ ಎಂದು ತಂದೆ ತಿಳಿಸುತ್ತಾರೆ. ಮೊದಲು ಯಾರು ಬರುತ್ತಾರೆ, ಅವರು ಅಗತ್ಯವಾಗಿ ಸುಖದಲ್ಲಿ ಬರುತ್ತಾರೆ, ನಂತರ ದುಃಖದಲ್ಲಿ ಬರಬೇಕಾಗುತ್ತದೆ. ಮುಕ್ತಿಯ ನಂತರ ಜೀವನ್ಮುಕ್ತಿ ಬರುತ್ತದೆ. ಆಮೇಲೆ ಕೊನೆಯಲ್ಲಿ ಜೀವನ ಬಂಧನದಲ್ಲಿ ಬರುತ್ತಾರೆ. ಮೊದಲು ಅಗತ್ಯವಾಗಿ ಸುಖದಲ್ಲಿ ಬರಬೇಕಾಗುತ್ತದೆ ಏಕೆಂದರೆ ತಂದೆ ಎಲ್ಲರಿಗೂ ಸುಖವನ್ನು ಕೊಡುತ್ತಾರೆ ಮತ್ತೆ ಕೆಲವರು ಒಂದು ಜನ್ಮವಾದರೂ ಸುಖವನ್ನು ಪಡೆಯಬಹುದು. ಬಂದು ಸ್ವಲ್ಪ ಸುಖವನ್ನು ಅನುಭವ ಮಾಡಿ ನಂತರ ಸತ್ತು ಹೋಗುತ್ತಾರೆ. ನಾಟಕದಲ್ಲಿ ಅವರ ಪಾತ್ರ ಅದೇರೀತಿ ಇರುತ್ತದೆ. ಮನುಷ್ಯರ ವೃದ್ಧಿಯಂತು ಆಗುತ್ತದೆ. ಇದುವರೆಗು ಬರುತ್ತಲೇ ಇದ್ದಾರೆ. ಅಂತವರು ಇಲ್ಲಿ ಹೆಚ್ಚು ಸಮಯ ಉಳಿಯುವುದಿಲ್ಲ ಏಕೆಂದರೆ ವಿನಾಶ ಮುಂದೆ ನಿಂತಿದೆ. ಹೊಸ ಆತ್ಮಗಳು ಬಂದರೂ ಸಹ ಇದು ಕಲಿಯುಗವಾಗಿರುವ ಕಾರಣ ಬಂದು ತಕ್ಷಣ ಬಹಳ ದುಃಖವನ್ನು ಅನುಭವ ಮಾಡುತ್ತಾರೆ. ಅವರಿಗೆ ಅಗತ್ಯವಾಗಿ ಇಲ್ಲಿ ಬಹಳ ಗೌರವ ಸಿಗುತ್ತದೆ. ಮುಕ್ತಿಧಾಮದಿಂದ ಸೀದಾ ಅವರು ಜೀವನ್ಮುಕ್ತಿಯಲ್ಲಿ ಬರಬೇಕಾಗುತ್ತದೆ. ಮಾಯೆಯ ಬಂಧನದಿಂದ ಮುಕ್ತರಾಗಿ ಮೊದಲು ಸುಖದಲ್ಲಿ ಇಳಿಯುತ್ತಾರೆ. ನಂತರ ದುಃಖದಲ್ಲಿ ಬರುತ್ತಾರೆ. ಈ ಸಮಯ ಎಲ್ಲರೂ ಬಹಳ ಬಲಹೀನ ಸ್ಥಿತಿಯನ್ನು ತಲುಪಿದ್ದಾರೆ. ಈಗ ತಮ್ಮ ಸುಖ ಹಾಗೂ ದುಃಖದ ಪಾತ್ರವನ್ನು ಮಾಡಿ ಎಲ್ಲರೂ ಮುಕ್ತಿ-ಜೀವನ್ಮುಕ್ತಿಯಲ್ಲಿ ಬರುತ್ತಾರೆ. ಮುಕ್ತಿಯ ಮೂಲಕ ಜೀವನ್ಮುಕ್ತಿಯಲ್ಲಿ ಬರಬೇಕಾಗುತ್ತದೆ. ಹೋಗಿ ಮತ್ತೆ ಮರಳಿ ಬರುತ್ತಾರೆ. ಇಡೀ ಪ್ರಪಂಚದ ಎಲ್ಲಾ ಮನುಷ್ಯರು ಯಾವ-ಯಾವ ಧರ್ಮದಲ್ಲಿ ಬಂದಿದ್ದರು, ಪುನಃ ಅದೇ ಧರ್ಮದಲ್ಲಿ ಬರುತ್ತಾರೆ. ಜನಕನಿಗೂ ಸಹ ಜೀವನಮುಕ್ತಿ ದೊರೆಯಿತಲ್ಲವೇ! ರಾಜರು ಈಗ ಇಲ್ಲವೆಂದು ತಿಳಿಯಬಾರದು, ಅಂತ್ಯದಲ್ಲಿ ಬಂದು ಅವರೂ ಸಹ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ನಂಬರ್‍ವಾರ್ ಪುರುಷಾರ್ಥದನುಸಾರವಾಗಿ ನಿಮ್ಮೆಲ್ಲರಿಗೂ ಸಹ ರಾಜ್ಯಭಾಗ್ಯವು ಪ್ರಾಪ್ತಿಯಾಗುತ್ತದೆ. ಯಾರೆಲ್ಲಾ ದೇವೀ-ದೇವತಾ ಧರ್ಮದವರಿದ್ದಾರೆ ಹಾಗೂ ಅನ್ಯ ಧರ್ಮದಲ್ಲಿ ಪರಿವರ್ತನೆಯಾಗಿದ್ದಾರೆ, ಪುನಃ ಅವರೆಲ್ಲರೂ ಹಿಂತಿರುಗಿ ದೇವತಾ ಧರ್ಮದಲ್ಲಿ ಬರುತ್ತಾರೆ. ಅವರೂ ಸಹ ಮೊದಲು ಬ್ರಾಹ್ಮಣರಾಗಬೇಕು. ಇಡೀ ಪ್ರಪಂಚದವರಂತು ಎಲ್ಲರೂ ಆಗಿದ್ದಾರೆ, ಆದರೆ ಎಲ್ಲರೂ ಬ್ರಾಹ್ಮಣರಾಗುವುದಿಲ್ಲ. ಯಾರು ಬ್ರಾಹ್ಮಣರಾಗುತ್ತಾರೆ, ಅವರಿಗೆ ಮಾತ್ರ 21 ಜನ್ಮಗಳ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ರಾಜ ಗದ್ದುಗೆಯ ಮೇಲೆ ಕುಳಿತುಕೊಳ್ಳಲು ಮೊದಲು ರಾಜಯೋಗವನ್ನು ಕಲಿಯಬೇಕಾಗುತ್ತದೆ. ಇದು ಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಶಿಕ್ಷಣವನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಮ್ಮೆ ಗುರಿ ಪ್ರಾಪ್ತಿಯಾದ ಮೇಲೆ ವಿದೇಶದಲ್ಲಿದ್ದು ಓದಬಹುದು. ನಾವು ಶಿವ ತಂದೆಯ ಮಕ್ಕಳು ತಂದೆಯಿಂದ ಅಗತ್ಯವಾಗಿ ಆಸ್ತಿಯನ್ನು ತೆಗೆದುಕೊಳ್ಳಬೇಕು ಮತ್ತೆ ರಾವಣನ ಭೂತ ಬಹಳ ಸತಾಯಿಸುತ್ತದೆ ಎಂದು ಪತ್ರ ಬರೆಯುತ್ತಾರೆ. ಒಮ್ಮೆ ಕಾಮದ, ಒಮ್ಮೆ ಕ್ರೋಧದ ಹಗುರ ನಶೆ ಬಂದು ಬಿಡುತ್ತದೆ. ಇವುಗಳ ಮೇಲೆ ನೀವು ವಿಜಯಿಗಳಾಬೇಕೆಂದು ತಂದೆ ಹೇಳುತ್ತಾರೆ. ಯೋಗಬಲದ ಯುದ್ಧ ನಿಮ್ಮದಾಗಿದೆ. ನೀವು ನೆನಪು ಮಾಡಿದರೆ ಮಾಯೆ ನಿಮ್ಮ ಬುದ್ಧಿಯೋಗವನ್ನು ದೂರ ಮಾಡುತ್ತದೆ. ಮುಕ್ತಿ-ಜೀವನ್ಮುಕ್ತಿ ನಿಮ್ಮೆಲ್ಲರಿಗೂ ಪ್ರಾಪ್ತಿಯಾಗಬೇಕೆಂದು ತಂದೆ ಹೇಳುತ್ತಾರೆ. ಅದರ ಅರ್ಥ ಎಲ್ಲರೂ ಸ್ವರ್ಗದಲ್ಲಿ ಬರುತ್ತಾರೆಂದು ತಿಳಿದುಕೊಳ್ಳಬಾರದು. ನಮಗೆ ಮುಕ್ತಿ ಬೇಕೆಂದು ಎಲ್ಲರೂ ಕೇಳುತ್ತಾರೆ. ಒಂದುವೇಳೆ ಅಂತ್ಯದಲ್ಲಿ ಬಂದಾಗ ಅದುವರೆಗೆ ಮುಕ್ತಿಯಲ್ಲಿದ್ದರು ಎಂದು ಹೇಳಬಹುದು. ಅವರಿಗೆ ಬಹಳ ಶಾಂತಿ ಸಿಗುತ್ತದೆ. 4500 ವರ್ಷ ಅಥವಾ ಮುಕ್ಕಾಲು ಕಲ್ಪದವರೆಗು ಬಹಳ ಶಾಂತಿಯಲ್ಲಿರುತ್ತಾರೆ. ಈ ನಾಟಕ ಅನಾದಿ ಆಗಿ ಮಾಡಲ್ಪಟ್ಟಿದೆ. ಇದರಲ್ಲಿ ಸ್ವಲ್ಪವೂ ಏರು-ಪೇರು ಆಗುವುದಿಲ್ಲ. ಶಾಂತಿಯ ಇಚ್ಚೆ ಬಹಳ ಇಟ್ಟುಕೊಳ್ಳುತ್ತಾರೆ. ನಿಮ್ಮ ಸುಖಕ್ಕಿಂತಲೂ ಅವರಿಗೆ ಬಹಳ ಶಾಂತಿಯ ಪ್ರಾಪ್ತಿಯಾಗುತ್ತದೆ. ನಿಮಗೆ ಸುಖ ಶಾಂತಿ ಎರಡು ಸಿಗುತ್ತದೆ. ಇಲ್ಲಿಯದು ಅಲ್ಪಕಾಲದ ಸುಖವಾಗಿದೆ. ಇಲ್ಲಿ ಶಾಂತಿ ಇಲ್ಲವೇ ಇಲ್ಲ. ಏಕೆಂದರೆ ಇದು ದುಃಖಧಾಮವಾಗಿದೆ. ಹೀಗೆ ಕಾಡಿನಲ್ಲಿ ಹೋಗಿ ಕುಳಿತುಕೊಳ್ಳುವುದು ಶಾಂತಿಯಲ್ಲ. ಒಂದುವೇಳೆ ಅಲ್ಲಿ ಶಾಂತಿ ಸಿಗುವುದಾದರೆ ಮತ್ತೆ ಪಟ್ಟಣಗಳಲ್ಲಿ ಬಂದು ಇಷ್ಟೊಂದು ಮನೆ ಮೊದಲಾದವುಗಳನ್ನು ಏಕೆ ಮಾಡುತ್ತಾರೆ? ಸತ್ಯಯುಗದಲ್ಲಂತೂ ಶಾಂತಿಯೇ ಶಾಂತಿ ಇರುತ್ತದೆ. ಅಂತ್ಯದಲ್ಲಿ ಬರುವವರು ಅಶಾಂತಿಯೇ ಅಶಾಂತಿ ಇದೆ ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಶಾಂತಿ ಇರುತ್ತದೆ. ಬೇರೆಯವರು ಅಶಾಂತಿಯಲ್ಲಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಇವು ಬಹಳ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಎಲ್ಲರಿಗೂ ಜೀವನ್ಮುಕ್ತಿ ಸಿಗುತ್ತದೆ. ನೀವು 21 ಜನ್ಮ ರಾಜ್ಯ ಮಾಡುತ್ತೀರಿ. ಬೇರೆಯವರೆಲ್ಲಾ ಬಹಳ ತಡವಾಗಿ ಬರುತ್ತಾರೆ, ಏಕೆಂದರೆ ಅವರು ಮೇಲೆ ಪರಮಧಾಮದಲ್ಲಿ ಶಾಂತಿಯಲ್ಲಿರುತ್ತಾರೆ. ಸತ್ಯ-ತ್ರೇತಾಯುಗದಲ್ಲಿಯೂ ಸಹ ಅಂತ್ಯದಲ್ಲಿ ಬರುವವರೂ ಸಹ ಶಾಂತಿಧಾಮದಲ್ಲಿರುತ್ತಾರೆ. ಅಲ್ಲಿ ದುಃಖವಿರುವುದಿಲ್ಲ.

ಮನುಷ್ಯರು ವಿಜ್ಞಾನವನ್ನು ಬಹಳ ಮುಂದುವರೆದಿದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ನಮ್ಮ ಶಾಂತಿ ಎಲ್ಲಕ್ಕಿಂತ ಮುಂದೆ ಇದೆ ಎಂದು ಹೇಳುತ್ತೇವೆ. ತಂದೆಯನ್ನು ನೆನಪು ಮಾಡುವುದರಿಂದ ಶಕ್ತಿ ಸಿಗುತ್ತದೆ. ಅವರು ವಿಜ್ಞಾನದ ಶಕ್ತಿಯಿಂದ ಮೇಲೆ ಚಂದ್ರನವರೆಗೂ ಹೋಗುವಂತಹ ಪುರುಷಾರ್ಥ ಮಾಡುತ್ತಾರೆ. ನೀವು ಒಂದು ಸೆಕೆಂಡಿನಲ್ಲಿ ಸೂರ್ಯ, ಚಂದ್ರರಿಗೂ ಮೇಲೆ ಹೊರಟು ಹೋಗುತ್ತಾರೆ. ಮೂಲವತನ ಸೂಕ್ಷ್ಮವತನದ ಮೇಲೆ ಏನೂ ಇಲ್ಲ. ಸೂರ್ಯ-ಚಂದ್ರರಿಗೆ ಮೂಲವತನ, ಸೂಕ್ಷ್ಮವತನ ಬಹಳ ದೂರವಿದೆ. ಅದು ಯಾರಿಗೂ ಗೊತ್ತಾಗುವುದಿಲ್ಲ. ಇದೆಲ್ಲಾ ವಿಸ್ತಾರವಾದ ಮಾತುಗಳಾಗಿವೆ. ಸೂರ್ಯವಂಶದ ರಾಜಾ-ರಾಣಿಯಾಗುವ ಅದೃಷ್ಟ ಇಲ್ಲದಿದ್ದಾಗ ಏನೂ ತಿಳಿದುಕೊಳ್ಳುವುದಿಲ್ಲ ಹಾಗೂ ಅನ್ಯರಿಗೂ ತಿಳಿಸಿಕೊಡುವುದಿಲ್ಲ. ಮುಕ್ತಿ-ಜೀವನ್ಮುಕ್ತಿಯ ಜ್ಞಾನ ನನ್ನಲ್ಲಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. (ಜನಕನ ಉದಾಹರಣೆ) ಜನಕನು ಎಲ್ಲರನ್ನು ಜೈಲಿನಲ್ಲಿ ಬಂಧಿಸಿದನು. ಅರ್ಥಾತ್ ಈ ರಾವಣನು ಎಲ್ಲರನ್ನು ಬಂಧಿಸಿದ್ದಾನೆ. ತಂದೆ ಬಂದು ಎಲ್ಲರನ್ನು ಬಿಡಿಸುತ್ತಾರೆ. ತಂದೆಯ ಮೂಲಕ ನೀವು ಎಲ್ಲರನ್ನು ರಾವಣನ ಬಂಧನದಿಂದ ಬಿಡಿಸಿ ಜೀವನ್ಮುಕ್ತಿಯಲ್ಲಿ ಕರೆದೊಯ್ಯಲು ನಿಮಿತ್ತರಾಗಿದ್ದೀರಿ. ನಿಮ್ಮ ಹೆಸರು ಶಿವಶಕ್ತಿ ಸೇನೆ ಎಂದು ಪ್ರಖ್ಯಾತವಾಗಿದೆ. ನಾಟಕದನುಸಾರವಾಗಿ ನಿಮ್ಮ ಹೆಸರು ಅಂತ್ಯದಲ್ಲಿ ಬಹಳ ಪ್ರಸಿದ್ಧವಾಗುತ್ತದೆ. ತಂದೆ ಈ ಸೃಷ್ಟಿಯಲ್ಲಿ ಬಂದ ನಂತರ ಮಾತೆಯರ ಪದವಿ ಬಹಳ ಶ್ರೇಷ್ಠವಾಯಿತು. ಮೊದಲು ವಿದೇಶದಲ್ಲಿ ಮಾತೆಯರಿಗೆ ಬಹಳ ಗೌರವವಿತ್ತು. ಅಲ್ಲಿ ಹೆಣ್ಣು ಮಗುವಿನ ಜನ್ಮವಾದರೆ ಬಹಳ ಖುಷಿಯನ್ನು ಆಚರಿಸುತ್ತಾರೆ. ಇಲ್ಲಿ ಹೆಣ್ಣು ಮಗುವಿನ ಜನ್ಮವಾದರೆ ಮಂಚವನ್ನು ಉಲ್ಟಾ ಮಾಡುತ್ತಾರೆ. ಜನ್ಮ ದಿನವನ್ನೂ ಸಹ ಆಚರಣೆ ಮಾಡುವುದಿಲ್ಲ. ಹಾಗೆ ನೋಡಿದರೆ ಕನ್ಯೆಯರ ಕನ್ನಯ್ಯನೆಂದು ಗಾಯನವಿದೆ. ವಾಸ್ತವದಲ್ಲಿ ನೀವು ಎಲ್ಲರೂ ಕನ್ಯೆಯರಾಗಿದ್ದೀರಿ. ಇದು ನಿಮ್ಮ ಹೊಸ ಜನ್ಮವಾಗಿದೆ. ಆದರೆ ವಿದ್ಯೆಯಲ್ಲಿ ನಂಬರ್‍ವಾರ್ ಇರುತ್ತದೆ. ಆತ್ಮ ಚಿಕ್ಕದು-ದೊಡ್ಡದು ಆಗುವುದಿಲ್ಲ. ಶರೀರ ಚಿಕ್ಕದು, ದೊಡ್ಡದಾಗಿರುತ್ತದೆ. ಕೆಲವರು ತಕ್ಷಣ ತಿಳಿದುಕೊಳ್ಳುತ್ತಾರೆ ಆದರೆ ಅದೃಷ್ಟದಲ್ಲಿ ಇಲ್ಲವೆಂದರೆ ತಿಳಿದುಕೊಳ್ಳುವುದಿಲ್ಲ. ಜೀವನ್ಮುಕ್ತಿ ಹಾಗೂ ಜೀವನ ಬಂಧನ ಎರಡು ಸ್ಥೂಲವತನದ ಮಾತಾಗಿದೆ. ಸತ್ಯಯುಗದಿಂದ ಜೀವನ್ಮುಕ್ತಿ ಪ್ರಾರಂಭವಾಗುತ್ತದೆ. ಪುನಃ ದ್ವಾಪರದಲ್ಲಿ ಜೀವನ ಬಂಧನವಿರುತ್ತದೆ. ಈಗ ಎಲ್ಲರೂ ಸುಖವನ್ನು ಮರೆತು ದುಃಖದಲ್ಲಿ ಬಂಧಿಸಿದ್ದಾರೆ. ನಾವು 21 ಜನ್ಮಗಳ ಸುಖ ಪ್ರಾಪ್ತಿ ಮಾಡಿಕೊಂಡಿದ್ದೇವೆಂದು ಹೇಳುವವರು ಯಾರೂ ಇಲ್ಲ. ಈಗ ರಾವಣ ರಾಜ್ಯವಾಗಿರುವ ಕಾರಣ ಎಲ್ಲರೂ ಮಲಿನವಾಗಿದ್ದಾರೆ. ಸತ್ಯಯುಗದಲ್ಲಿ ರಾವಣ ರಾಜ್ಯವಿರುವುದಿಲ್ಲ. ಆದುದರಿಂದ ಅಲ್ಲಿ ವಿಕಾರಗಳು ಇರುವುದಿಲ್ಲ. ಯೋಗಬಲ, ಭೋಗಬಲ ಎಂದು ಹೇಳಲಾಗುತ್ತದೆ. ಅಲ್ಲಿ ಯೋಗಬಲದಿಂದ ಮಕ್ಕಳ ಜನ್ಮವಾಗುತ್ತದೆ. ನೀವು ಆ ಪದ್ಧತಿಯನ್ನು ತಿಳಿದುಕೊಂಡಿದ್ದೀರಿ. ಇಲ್ಲಿ ಬೇರೆಯವರ ಮಾತಿಲ್ಲ. ಅಮೇರಿಕಾ ಮೊದಲಾದವುಗಳ ಪದ್ಧತಿಗಳನ್ನು ಅವರೇ ತಿಳಿದುಕೊಂಡಿರಬೇಕು. ನಾವು ನಮ್ಮ ಪದ್ಧತಿಯನ್ನು ತಿಳಿದುಕೊಂಡಿದ್ದೇವೆ. ನಾವು ಸತ್ಯಯುಗದಲ್ಲಿ ಇರುತ್ತೇವೆ. ಹಿಂದೆ ಆಗಿರುವುದೇ ಈಗ ಆಗುತ್ತದೆ. ಮಕ್ಕಳು ಧ್ಯಾನದಲ್ಲಿ ಹೋಗಿ ಅಲ್ಲಿಯ ಪದ್ಧತಿಗಳನ್ನು ನೋಡುಕೊಂಡು ಬರುತ್ತಾರೆ, ಆದರೂ ಸಹ ಶ್ರೇಷ್ಠ ಪದವಿಯನ್ನು ತೆಗೆದುಕೊಳ್ಳಲು ಪುರುಷಾರ್ಥವನ್ನು ಮಾಡಬೇಕು. ಯಾರು ಧ್ಯಾನದಲ್ಲಿ ಆ ಪದ್ಧತಿಗಳನ್ನು ನೋಡಿಕೊಂಡು ಬಂದರು ಅವರೆಲ್ಲರೂ ಈಗ ತಂದೆಯನ್ನು ಬಿಟ್ಟು ಹೋಗಿದ್ದಾರೆ. ಆದುದರಿಂದ ಧ್ಯಾನ ಮೊದಲಾದವುಗಳಲ್ಲಿ ಏನೂ ಲಾಭವಿಲ್ಲ. ಎಲ್ಲವೂ ವಿದ್ಯೆಯ ಮೇಲೆ ಆಧಾರವಾಗಿದೆ. ಯೋಗ ಹಾಗೂ ಜ್ಞಾನ, ಯೋಗ ಅರ್ಥಾತ್ ತಂದೆಯನ್ನು ನೆನಪು ಮಾಡುವುದು. ಜ್ಞಾನ ಅರ್ಥಾತ್ ಚಕ್ರವನ್ನು ತಿರುಗಿಸುವುದಾಗಿದೆ. ಇದಂತು ಬಹಳ ಸಹಜವಾಗಿದೆ. ನೀವು ನನ್ನ ಬಳಿಗೆ ಬರಬೇಕಾಗಿದೆ. ಆದುದರಿಂದ ನನ್ನನ್ನು ನೆನಪು ಮಾಡಿ ಎಂದು ತಂದೆ ಹೇಳುತ್ತಾರೆ. ಮನುಷ್ಯರು ಸಾಯುವಾಗ ರಾಮ-ರಾಮ ಹೇಳಿ ಎಂದು ಹೇಳುತ್ತಾರೆ. ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಶ್ರೀಕೃಷ್ಣನೆಂದು ಹೇಳಿದರೂ ಸಹ ಅಲ್ಲಿಗೆ ತಲುಪುವುದಿಲ್ಲ. ಏಕೆಂದರೆ ಕರೆದೊಯ್ಯವವರು ತಂದೆ ಮಾತ್ರ ಆಗಿದ್ದಾರೆ. ವಿಕರ್ಮ ವಿನಾಶವಾಗದೆ ಹೇಗೆ ಹಿಂತಿರುಗುತ್ತಾರೆ. ಈಗ ಎಲ್ಲರ ಅಂತಿಮ ಸಮಯವಾಗಿದೆ. ಪುನಃ ಅವರವರ ಸಮಯದಲ್ಲಿ ಬರುತ್ತಾರೆ. ಈ ಪಾಯಿಂಟನ್ನು ಧಾರಣೆ ಮಾಡಿ ನೋಟ್ ಮಾಡಿಕೊಳ್ಳಬೇಕು.

ನೀವು ತಾಯಿ ತಂದೆಯನ್ನು ಫಾಲೋ ಮಾಡಬೇಕು. ಮಮ್ಮಾ ಯಾರಿಗೂ ಎಂದೂ ತೊಂದರೆ ಮಾಡುತ್ತಿರಲಿಲ್ಲ. ಅನೇಕರ ಬಗ್ಗೆ ಬಹಳ ದೂರುಗಳು ಬರುತ್ತಿತ್ತು, ಏಕೆಂದರೆ ನಡವಳಿಕೆ ಸರಿ ಇರುವುದಿಲ್ಲ. ಪರಮಪಿತ ಪರಮಾತ್ಮ ಓದಿಸುತ್ತಿರುವಾಗ ಎಷ್ಟೊಂದು ಬುದ್ಧಿ ಇರಬೇಕು. ಉತ್ತಮ ನಡವಳಿಕೆ ಇರುವವರ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ. ಕೆಲವರಂತು ಬಹಳ ತೊಂದರೆ ಮಾಡುತ್ತಾರೆ. ತಮಗೆ ತಾವೇ ಶಿಕ್ಷೆ ತೆಗೆದುಕೊಳ್ಳುತ್ತಾರೆ, ಪದವಿಯೂ ಭ್ರಷ್ಟವಾಗುತ್ತದೆ. ಹಿಂದೂ ಜನರು ತಮಗೆ ತಾವೇ ಶಿಕ್ಷೆ ತೆಗೆದುಕೊಳ್ಳುತ್ತಿದ್ದರೆಂದು ಹೇಳಲಾಗುತ್ತದೆ. ಯಾವ ಈಶ್ವರ ರಾಜ್ಯಭಾಗ್ಯವನ್ನು ಕೊಟ್ಟಿದ್ದರು ಅವರನ್ನೇ ಸರ್ವವ್ಯಾಪಿ ಎಂದು ಹೇಳಿದ್ದಾರೆ. ಆದರೆ ಸ್ವಯಂ ಈಶ್ವರನೇ ಹೇಳುತ್ತಾರೆ ನಾನು ಸರ್ವವ್ಯಾಪಿ ಅಲ್ಲ. ಸ್ವಯಂ ಭಗವಂತ ಹೇಳುತ್ತಾರೆ ನಾನು ನಿಮ್ಮಂತೆ ಇರುವೆನೇನು? ನಾನು ನಿಮ್ಮಂತೆ ಶಿಕ್ಷೆ ಹೇಗೆ ತೆಗೆದುಕೊಳ್ಳಲಿ, ನಾನು ನಾಯಿ, ಬೆಕ್ಕಿನಲ್ಲಿ ಇರುವೆನೇನು! ನೀವು ನನ್ನ ನಿಂದನೆ ಮಾಡುವುದು ನಾಟಕದಲ್ಲಿ ನಿಗದಿಯಾಗಿದೆ, ಮತ್ತೆ ಪುನರಾವರ್ತನೆ ಆಗುತ್ತದೆ ಎಂದು ತಂದೆ ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವುದೇ ಉಲ್ಟಾ ನಡವಳಿಕೆಯಂತೆ ನಡೆದುಕೊಳ್ಳಬಾರದು. ಉತ್ತಮ ಗುಣಗಳನ್ನು ಧಾರಣೆ ಮಾಡಬೇಕು. ಮಾತಾಪಿತರನ್ನು ಅನುಸರಿಸಬೇಕು.

2. ಯೋಗಬಲದಿಂದ ಕಾಮ, ಕ್ರೋಧದ ಹಗುರ ನಶೆಯನ್ನೂ ಸಹ ಸಮಾಪ್ತಿ ಮಾಡಬೇಕು. ನಿಮಿತ್ತರಾಗಿ ಎಲ್ಲರನ್ನು ರಾವಣನ ಬಂಧನದಿಂದ ಬಿಡಿಸುವಂತಹ ಸೇವೆ ಮಾಡಬೇಕು.

ವರದಾನ:-

ಯಾರು ಪ್ರಸನ್ನಚಿತ್ತ ಆತ್ಮರಾಗಿದ್ದಾರೆಯೋ ಅವರು ತನ್ನ ಸಂಬಂಧದಲ್ಲಿ ಅಥವಾ ಸರ್ವರ ಸಂಬಂಧದಲ್ಲಿ, ಪ್ರಕೃತಿಯ ಸಂಬಂಧದಲ್ಲಿ, ಯಾವುದೇ ಸಮಯ, ಯಾವುದೇ ಮಾತಿನಲ್ಲಿಯೂ ಸಂಕಲ್ಪದಲ್ಲಿಯೂ ಪ್ರಶ್ನೆ ಉತ್ಪನ್ನವಾಗುವುದಿಲ್ಲ. ಇವರು ಹೀಗೇಕೆ ಅಥವಾ ಇದೇನಾಗುತ್ತಿದೆ, ಹೀಗೂ ಇರುತ್ತಾರೆಯೇ? ಪ್ರಸನ್ನಚಿತ್ತ ಆತ್ಮನ ಸಂಕಲ್ಪದಲ್ಲಿ ಪ್ರತೀ ಕರ್ಮವನ್ನು ಮಾಡುತ್ತಿದ್ದರೂ, ನೋಡುತ್ತಾ, ಆಲಿಸುತ್ತಾ, ಯೋಚಿಸುವಾಗಲೂ ಇದೇ ಇರುತ್ತದೆ – ಏನಾಗುತ್ತಿದೆಯೋ ಅದು ನನಗಾಗಿ ಒಳ್ಳೆಯದು ಮತ್ತು ಸದಾ ಒಳ್ಳೆಯದೇ ಆಗುತ್ತದೆ. ಅವರೆಂದಿಗೂ ಏನು, ಏಕೆ, ಹೀಗೆ-ಹಾಗೆ ಎಂಬ ಪ್ರಶ್ನೆಗಳ ಗೊಂದಲದಲ್ಲಿ ಹೋಗುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top