06 October 2021 KANNADA Murli Today | Brahma Kumaris
Read and Listen today’s Gyan Murli in Kannada
5 October 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗಿ, ಏಕೆಂದರೆ ತಂದೆಯು ನಿಮಗಾಗಿ ಹೊಸ ಸ್ವರ್ಗರೂಪಿ ಮನೆಯನ್ನು ಕಟ್ಟಿಸುತ್ತಿದ್ದಾರೆ.”
ಪ್ರಶ್ನೆ:: -
ಈ ಅವಿನಾಶಿ ರುದ್ರ ಜ್ಞಾನ ಯಜ್ಞದಲ್ಲಿ ಯಾವ-ಯಾವ ಮಾತುಗಳ ಕಾರಣದಿಂದ ವಿಘ್ನಗಳು ಬರುತ್ತವೆ?
ಉತ್ತರ:-
ಇದು ಶಿವ ತಂದೆಯು ರಚಿಸಿರುವ ಅವಿನಾಶಿ ರುದ್ರ ಯಜ್ಞವಾಗಿದೆ. ಇದರಲ್ಲಿ ನೀವು ಮನುಷ್ಯರಿಂದ ದೇವತೆಗಳಾಗುವುದಕ್ಕಾಗಿ ಪವಿತ್ರರಾಗುತ್ತೀರಿ. ಭಕ್ತಿ ಇತ್ಯಾದಿಗಳನ್ನು ಬಿಟ್ಟು ಬಿಡುತ್ತೀರಿ, ಈ ಕಾರಣದಿಂದಲೇ ವಿಘ್ನಗಳು ಬರುತ್ತವೆ. ಶಾಂತಿ ಸ್ಥಾಪನೆಯಾಗಲಿ, ವಿನಾಶವಾಗದಿರಲಿ ಎಂದು ಮನುಷ್ಯರು ಹೇಳುತ್ತಾರೆ. ಆದರೆ ತಂದೆಯು ಈ ರುದ್ರ ಜ್ಞಾನ ಯಜ್ಞವನ್ನು ರಚಿಸಿರುವುದೇ ಹಳೆಯ ಪ್ರಪಂಚದ ವಿನಾಶಕ್ಕಾಗಿ, ಇದರ ನಂತರವೇ ಶಾಂತಿಯ ಪ್ರಪಂಚವು ಬರುವುದು.
♫ ಕೇಳು ಇಂದಿನ ಮುರ್ಲಿ (audio)➤
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ. ಓಂ ಎಂದರೆ ನಾನು ಆತ್ಮ, ನನ್ನ ಸ್ವಧರ್ಮವು ಶಾಂತಿಯಾಗಿದೆ, ಶಾಂತಿಧಾಮದಲ್ಲಿ ಹೋಗುವುದಕ್ಕಾಗಿ ಯಾವುದೇ ಪುರುಷಾರ್ಥ ಮಾಡಬೇಕಾಗುವುದಿಲ್ಲ. ಆತ್ಮವು ಸ್ವಯಂ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದೆ. ಇಲ್ಲಿ ಸ್ವಲ್ಪವೇ ಸಮಯಕ್ಕಾಗಿ ಶಾಂತವಾಗಿರಬಹುದು. ಆತ್ಮವು ಹೇಳುತ್ತದೆ – ನನ್ನ ಕರ್ಮೇಂದ್ರಿಯಗಳ ರಥವು ಸುಸ್ತಾಗಿ ಬಿಟ್ಟಿದೆ. ನಾನು ನನ್ನ ಸ್ವಧರ್ಮದಲ್ಲಿ ಸ್ಥಿತನಾಗುತ್ತೇನೆ, ಶರೀರದಿಂದ ಭಿನ್ನವಾಗಿ ಬಿಡುತ್ತೇನೆ. ಆದರೆ ಕರ್ಮವನ್ನಂತೂ ಮಾಡಲೇಬೇಕಾಗಿದೆ. ಎಲ್ಲಿಯವರೆಗೆ ಶಾಂತಿಯಲ್ಲಿ ಕುಳಿತಿರುತ್ತೀರಿ? ಆತ್ಮವು ಹೇಳುತ್ತದೆ – ನಾನು ಶಾಂತಿ ದೇಶದ ನಿವಾಸಿಯಾಗಿದ್ದೇನೆ. ಕೇವಲ ಇಲ್ಲಿ ಶರೀರದಲ್ಲಿ ಬರುವುದರಿಂದ ನಾನು ಶಬ್ಧದಲ್ಲಿ ಬಂದಿದ್ದೇನೆ. ನಾನೂ ಆತ್ಮ, ನನ್ನದು ಶರೀರವಾಗಿದೆ. ಆತ್ಮವೇ ಪತಿತ ಮತ್ತು ಪಾವನವಾಗುತ್ತದೆ. ಆತ್ಮವು ಪತಿತವಾದರೆ ಶರೀರವೂ ಪತಿತವಾಗುತ್ತದೆ ಏಕೆಂದರೆ ಸತ್ಯಯುಗದಲ್ಲಿ ಪಂಚ ತತ್ವಗಳೂ ಸತೋಪ್ರಧಾನವಾಗಿರುತ್ತವೆ. ಇಲ್ಲಿ ಪಂಚ ತತ್ವಗಳೂ ತಮೋಪ್ರಧಾನವಾಗಿವೆ. ಚಿನ್ನದಲ್ಲಿ ಅಲಾಯಿ ಸೇರ್ಪಡೆಯಾದರೆ ಚಿನ್ನವು ನಕಲಿಯಾಗಿ ಬಿಡುತ್ತದೆ. ಮತ್ತೆ ಅದನ್ನು ಸ್ವಚ್ಛ ಮಾಡುವುದಕ್ಕಾಗಿ ಭಟ್ಟಿಯಲ್ಲಿ ಹಾಕಲಾಗುತ್ತದೆ. ಅದಕ್ಕೆ ಯೋಗಾಗ್ನಿಯೆಂದು ಹೇಳಲಾಗುವುದಿಲ್ಲ. ಈ ಯೋಗವು ಅಗ್ನಿಯೂ ಆಗಿದೆ, ಇದರಿಂದ ಪಾಪಗಳು ಭಸ್ಮವಾಗುತ್ತವೆ. ಆತ್ಮವನ್ನು ಪತಿತನಿಂದ ಪಾವನವನ್ನಾಗಿ ಮಾಡುವವರು ಪರಮಾತ್ಮನಾಗಿದ್ದಾರೆ. ಒಬ್ಬರದೇ ಹೆಸರಿದೆ, ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಡ್ರಾಮಾನುಸಾರ ಎಲ್ಲರೂ ಪತಿತ, ತಮೋಪ್ರಧಾನರಾಗಲೇಬೇಕಾಗಿದೆ. ಇದು ವೃಕ್ಷವಲ್ಲವೆ. ಆ ವೃಕ್ಷದ ಬೀಜವು ಕೆಳಭಾಗದಲ್ಲಿರುತ್ತದೆ, ಇದರ ಬೀಜವು ಮೇಲಿದ್ದಾರೆ. ತಂದೆಯನ್ನು ಕರೆಯುವಾಗ ಬುದ್ಧಿಯು ಮೇಲುಗಡೆ ಹೋಗುತ್ತದೆ. ಯಾರಿಂದ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರೋ ಅವರೀಗ ಕೆಳಗೆ ಬಂದು ಬಿಟ್ಟಿದ್ದಾರೆ. ತಿಳಿಸುತ್ತಾರೆ – ಮಕ್ಕಳೇ, ನಾನೇ ಬರಬೇಕಾಗುತ್ತದೆ. ನನ್ನ ಈ ಯಾವ ಮನುಷ್ಯ ಸೃಷ್ಟಿ ವೃಕ್ಷವಿದೆಯೋ ಇದು ಅನೇಕ ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಈಗ ಇದು ತಮೋಪ್ರಧಾನ ಪತಿತ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ – ಸತ್ಯಯುಗದಲ್ಲಿ ಮೊಟ್ಟ ಮೊದಲು ದೇವಿ-ದೇವತೆಗಳಿರುತ್ತಾರೆ, ಈಗ ಕಲಿಯುಗದಲ್ಲಿ ಅಸುರರಿದ್ದಾರೆ ಬಾಕಿ ಅಸುರರು ಮತ್ತು ದೇವತೆಗಳ ಯುದ್ಧವಾಗಲಿಲ್ಲ. ನೀವು ಯೋಗಬಲದಿಂದ ಈ ಅಸುರೀ ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ. ಬಾಕಿ ಯಾವುದೇ ಹಿಂಸಕ ಯುದ್ಧದ ಮಾತಿಲ್ಲ. ನೀವು ಯಾವುದೇ ಪ್ರಕಾರದ ಹಿಂಸೆ ಮಾಡುವುದಿಲ್ಲ. ನೀವು ಯಾರ ಮೇಲೆ ಕೈ ಮಾಡುವುದೂ ಇಲ್ಲ, ನೀವು ಡಬಲ್ ಅಹಿಂಸಕರಾಗಿದ್ದೀರಿ. ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ. ತಂದೆಯು ತಿಳಿಸುತ್ತಾರೆ – ಈ ಕಾಮ ಕಟಾರಿಯು ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ ಆದ್ದರಿಂದ ವಿಕಾರದಲ್ಲಿ ಹೋಗಬಾರದು. ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳೆಂದು ಮಹಿಮೆಯನ್ನು ಹಾಡುತ್ತಾರೆ. ಆತ್ಮವು ಈ ಕರ್ಮೇಂದ್ರಿಯಗಳ ಮೂಲಕ ಅರಿತುಕೊಂಡಿದೆ. ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಎಂದೋ ಪಾವನರಾಗಿದ್ದರು. ಆದ್ದರಿಂದಲೇ ನಾವು ಪತಿತರಾಗಿದ್ದೇವೆಂದು ಹೇಳುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ, ಪಾವನರಾಗಿದ್ದಾಗ ಯಾರೂ ಕರೆಯುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇಲ್ಲಂತೂ ಸಾಧು ಸಂತ ಮೊದಲಾದವರು ಪತಿತ-ಪಾವನ ಸೀತಾರಾಮ…. ಎಂದು ಎಷ್ಟು ಜೋರಾಗಿ ಹಾಡುತ್ತಿರುತ್ತಾರೆ. ಎಲ್ಲಿಗೆ ಹೋದರೂ ಹಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ – ಇಡೀ ಪ್ರಪಂಚವು ಪತಿತವಾಗಿದೆ, ರಾವಣ ರಾಜ್ಯವಲ್ಲವೆ. ರಾವಣನನ್ನು ಸುಡುತ್ತಾರೆ, ಆದರೆ ಅವರ ರಾಜ್ಯವು ಯಾವಾಗಿನಿಂದ ಆಯಿತು ಯಾರಿಗೂ ತಿಳಿದಿಲ್ಲ. ಭಕ್ತಿ ಮಾರ್ಗದ ಸಾಮಗ್ರಿಯು ಬಹಳಷ್ಟಿದೆ, ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಸನ್ಯಾಸಿಗಳೂ ಸಹ ಎಷ್ಟೊಂದು ಯೋಗಗಳನ್ನು ಕಲಿಸುತ್ತಾರೆ. ವಾಸ್ತವದಲ್ಲಿ ಯಾವುದಕ್ಕೆ ಯೋಗವೆಂದು ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇದು ಯಾರ ದೋಷವೂ ಅಲ್ಲ. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ, ಎಲ್ಲಿಯವರೆಗೆ ನಾನು ಬರುವುದಿಲ್ಲವೋ ಅಲ್ಲಿಯವರೆಗೆ ಇವರು ತಮ್ಮ ಪಾತ್ರವನ್ನು ಅಭಿನಯಿಸಲೇಬೇಕಾಗಿದೆ. ಜ್ಞಾನ ಮತ್ತು ಭಕ್ತಿ. ಜ್ಞಾನವು ದಿನ ಸತ್ಯ-ತ್ರೇತಾಯುಗ, ಭಕ್ತಿಯು ರಾತ್ರಿ ದ್ವಾಪರ-ಕಲಿಯುಗವಾಗಿದೆ ನಂತರ ವೈರಾಗ್ಯವಾಗುತ್ತದೆ ಅಂದರೆ ಹಳೆಯ ಪ್ರಪಂಚದಿಂದ ವೈರಾಗ್ಯ. ಇದು ಬೇಹದ್ದಿನ ವೈರಾಗ್ಯ. ಅವರದು ಹದ್ದಿನ ವೈರಾಗ್ಯವಾಗಿದೆ. ನೀವು ತಿಳಿದುಕೊಂಡಿದ್ದೀರಿ – ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ. ಹೊಸ ಮನೆಯನ್ನು ಕಟ್ಟಿಸುತ್ತಾರೆಂದರೆ ಹಳೆಯದರೊಂದಿಗೆ ವೈರಾಗ್ಯವುಂಟಾಗಿ ಬಿಡುತ್ತದೆ.
ನೋಡಿ, ಬೇಹದ್ದಿನ ತಂದೆಯು ಹೇಗಿದ್ದಾರೆ? ನಿಮಗೆ ಸ್ವರ್ಗರೂಪಿ ಮನೆಯನ್ನು ಕಟ್ಟಿಸಿಕೊಡುತ್ತಾರೆ. ಹೊಸ ಪ್ರಪಂಚವು ಸ್ವರ್ಗವಾಗಿದೆ, ಹಳೆಯ ಪ್ರಪಂಚವು ನರಕವಾಗಿದೆ. ಹೊಸದರಿಂದ ಹಳೆಯದು ಅದೇ ಮತ್ತೆ ಹೊಸದಾಗುತ್ತದೆ. ಹೊಸ ಪ್ರಪಂಚದ ಆಯಸ್ಸು ಎಷ್ಟಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ಹಳೆಯ ಪ್ರಪಂಚದಲ್ಲಿದ್ದು ನಾವು ಹೊಸ ಪ್ರಪಂಚವನ್ನು ಸ್ಥಾಪಿಸುತ್ತೇವೆ, ಹಳೆಯ ಸ್ಮಶಾನದಲ್ಲಿ ನಾವು ಪರಿಸ್ತಾನವನ್ನಾಗಿ ಮಾಡುತ್ತೇವೆ. ಇದೇ ಯಮುನಾ ನದಿಯ ತೀರದಲ್ಲಿ ಮಹಲುಗಳು ತಯಾರಾಗುತ್ತವೆ. ಇದೇ ದೆಹಲಿಯು ಯಮುನಾ ನದಿಯ ತೀರದಲ್ಲಿರುವುದು. ಪಾಂಡವರ ಕೋಟೆಗಳಿತ್ತು ಎಂದು ಯಾವುದನ್ನು ತೋರಿಸುತ್ತಾರೆಯೋ ಇದೆಲ್ಲವೂ ಡ್ರಾಮಾನುಸಾರ ಕಲ್ಪದ ನಂತರವೂ ಇರುತ್ತವೆ. ಹೇಗೆ ನೀವು ಯಜ್ಞ ತಪ, ದಾನ-ಪುಣ್ಯಗಳನ್ನು ಮಾಡಿದ್ದೀರೋ ಇದೆಲ್ಲವನ್ನು ಪುನಃ ಮಾಡಬೇಕಾಗುವುದು. ಮೊದಲು ಶಿವನ ಭಕ್ತಿಯನ್ನು ಮಾಡುತ್ತೀರಿ, ಬಹಳ ಸುಂದರವಾದ ಮಂದಿರವನ್ನು ಕಟ್ಟಿಸುತ್ತೀರಿ, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ನೀವೀಗ ಜ್ಞಾನ ಮಾರ್ಗದಲ್ಲಿದ್ದೀರಿ, ಇದು ಅವ್ಯಭಿಚಾರಿ ಜ್ಞಾನವಾಗಿದೆ, ಒಬ್ಬರೇ ಶಿವ ತಂದೆಯಿಂದ ನೀವು ಕೇಳುತ್ತೀರಿ. ಅವರಿಗೆ ನೀವು ಮೊದಲು ಭಕ್ತಿ ಮಾಡಿದಿರಿ ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ನೀವು ಬಹಳ ಸುಖಿಯಾಗಿರುತ್ತೀರಿ. ದೇವತಾ ಧರ್ಮವು ಬಹಳ ಸುಖ ನೀಡುವಂತದ್ದಾಗಿದೆ. ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಬಾಯಿ ಮಧುರವಾಗುತ್ತದೆ. ನೀವು ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ – ನೀವು ಮತ್ತ್ಯಾರಿಂದಲೂ ಕೇಳಬೇಡಿ. ನಿಮ್ಮದು ಇದು ಅವ್ಯಭಿಚಾರಿ ಜ್ಞಾನವಾಗಿದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ತಂದೆಯಿಂದಲೇ ಆಸ್ತಿಯು ಸಿಗುವುದು ನಂಬರ್ವಾರ್ ಪುರುಷಾರ್ಥದನುಸಾರ. ತಂದೆಯು ಸ್ವಲ್ಪ ಸಮಯಕ್ಕಾಗಿ ಸಾಕಾರದಲ್ಲಿ ಬಂದಿದ್ದಾರೆ. ತಿಳಿಸುತ್ತಾರೆ, ನಾನು ನೀವು ಮಕ್ಕಳಿಗೇ ಜ್ಞಾನವನ್ನು ಕೊಡಬೇಕಾಗಿದೆ, ನನ್ನದು ಇದು ಶಾಶ್ವತ ಶರೀರವಲ್ಲ. ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ, ಶಿವ ಜಯಂತಿಯಿಂದ ಕೂಡಲೇ ಗೀತಾ ಜಯಂತಿಯಾಗುತ್ತದೆ. ಅಲ್ಲಿಂದ ಜ್ಞಾನವನ್ನು ಹೇಳಲು ಆರಂಭಿಸುತ್ತಾರೆ. ಈ ಆತ್ಮಿಕ ವಿದ್ಯೆಯನ್ನು ಪರಮಾತ್ಮನೇ ಕೊಡುತ್ತಿದ್ದಾರೆ, ನೀರಿನ ಮಾತಿಲ್ಲ. ನೀರಿಗೆ ಜ್ಞಾನವೆಂದು ಹೇಳುವರೇ! ಜ್ಞಾನದಿಂದಲೇ ಪತಿತರಿಂದ ಪಾವನರಾಗುತ್ತೀರಿ, ನೀರಿನಿಂದ ಪಾವನರಾಗುವುದಿಲ್ಲ. ನದಿಗಳಂತೂ ಇಡೀ ಪ್ರಪಂಚದಲ್ಲಿವೆ. ಜ್ಞಾನ ಸಾಗರ ತಂದೆಯು ಇವರಲ್ಲಿ ಪ್ರವೇಶ ಮಾಡಿ ಜ್ಞಾನವನ್ನು ತಿಳಿಸುತ್ತಾರೆ. ಮನುಷ್ಯರು ಗೋಮುಖಕ್ಕೆ ಹೋಗುತ್ತಾರೆ. ವಾಸ್ತವದಲ್ಲಿ ನೀವು ಚೈತನ್ಯದಲ್ಲಿ ಗೋಮುಖವಾಗಿದ್ದೀರಿ, ನಿಮ್ಮ ಬಾಯಿಂದ ಜ್ಞಾನಾಮೃತವು ಬರುತ್ತದೆ ಬಾಕಿ ಹಸುವಿನಿಂದಂತೂ ಹಾಲು ಸಿಗುತ್ತದೆ, ನೀರಿನ ಮಾತಿಲ್ಲ. ಇದೆಲ್ಲವನ್ನೂ ತಂದೆಯು ತಿಳಿಸುತ್ತಾರೆ – ಅವರು ಎಲ್ಲರ ಸದ್ಗತಿದಾತನಾಗಿದ್ದಾರೆ. ಈಗ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಮೊದಲು ನೀವು ರಾವಣನನ್ನು ಏಕೆ ಸುಡುತ್ತಾರೆ ಎಂಬುದನ್ನು ತಿಳಿದುಕೊಂಡಿರಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಬೇಹದ್ದಿನ ದಶಹರಾ ಆಗುವುದಿದೆ. ಇಡೀ ಪ್ರಪಂಚವೇ ದ್ವೀಪವಾಗಿದೆ. ಇಡೀ ಸೃಷ್ಟಿಯಲ್ಲಿಯೇ ರಾವಣ ರಾಜ್ಯವಿದೆ. ವಾನರ ಸೇನೆಯ ಸಹಯೋಗದಿಂದ ಸೇತುವೆ ಕಟ್ಟಿದರು…. ಎಂದು ಯಾವುದು ಶಾಸ್ತ್ರಗಳಲ್ಲಿದೆಯೋ ಇವೆಲ್ಲವೂ ದಂತ ಕಥೆಗಳಾಗಿವೆ. ಭಕ್ತಿ ಇತ್ಯಾದಿಗಳು ನಡೆಯುತ್ತವೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿ ಭಕ್ತಿಯಾಗುತ್ತದೆ. ದಶಹರಾ, ರಕ್ಷಾಬಂಧನ ಇವೆಲ್ಲವೂ ಈಗಿನ ಹಬ್ಬಗಳಾಗಿವೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ. ಈಗ ಕೃಷ್ಣ ಪುರಿಯ ಸ್ಥಾಪನೆಯಾಗುತ್ತಿದೆ. ಇಂದು ಕಂಸ ಪುರಿಯಾಗಿದೆ, ನಾಳೆ ಕೃಷ್ಣ ಪುರಿಯಾಗುವುದು. ಆಸುರೀ ಸಂಪ್ರದಾಯಕ್ಕೆ ಕಂಸನೆಂದು ಹೇಳಲಾಗುತ್ತದೆ. ಪಾಂಡವರು ಮತ್ತು ಕೌರವರ ಯುದ್ಧವಿಲ್ಲ. ಕೃಷ್ಣನ ಜನ್ಮವು ಸತ್ಯಯುಗದಲ್ಲಿ ಆಗುತ್ತದೆ, ಕೃಷ್ಣನು ಮೊದಲ ರಾಜಕುಮಾರನಾಗಿದ್ದಾನೆ. ಓದಲು ಶಾಲೆಗೆ ಹೋಗುತ್ತಾನೆ. ದೊಡ್ಡವನಾದ ಮೇಲೆ ಸಿಂಹಾಸನವನ್ನು ಏರುತ್ತಾನೆ ಆದ್ದರಿಂದ ಮಹಿಮೆಯೆಲ್ಲವೂ ಶಿವ ತಂದೆಯದಾಗಿದೆ, ಇವರೇ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಬಾಕಿ ಈ ರಾಸಲೀಲೆ ಇತ್ಯಾದಿಗಳು ಪರಸ್ಪರ ಖುಷಿಯನ್ನು ಆಚರಿಸುತ್ತಾರೆ. ಬಾಕಿ ಕೃಷ್ಣನು ಯಾರಿಗಾದರೂ ಜ್ಞಾನವನ್ನು ತಿಳಿಸಲು ಹೇಗೆ ಸಾಧ್ಯ. ತಂದೆಯು ತಿಳಿಸುತ್ತಾರೆ – ಭಕ್ತಿ ಮಾಡಬೇಡಿ ಎಂದು ಯಾರಿಗೂ ಹೇಳಬಾರದು. ಭಕ್ತಿಯು ತಾನಾಗಿಯೇ ಬಿಟ್ಟು ಹೋಗುತ್ತದೆ. ಭಕ್ತಿಯನ್ನು ಬಿಡುತ್ತಾರೆ, ವಿಕಾರವನ್ನು ಬಿಡುತ್ತಾರೆ, ಇದರಿಂದಲೇ ಕಲಹಗಳಾಗುತ್ತವೆ. ತಂದೆಯು ತಿಳಿಸುತ್ತಾರೆ – ನಾನು ರುದ್ರ ಯಜ್ಞವನ್ನು ರಚಿಸುತ್ತೇನೆ, ಇದರಲ್ಲಿ ಆಸುರೀ ಸಂಪ್ರದಾಯದವರ ವಿಘ್ನಗಳು ಬೀಳುತ್ತವೆ. ಇದು ಶಿವ ತಂದೆಯ ಬೇಹದ್ದಿನ ಯಜ್ಞವಾಗಿದೆ. ಇದರಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ. ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಕಟವಾಯಿತೆಂದು ಗಾಯನವಿದೆ. ಯಾವಾಗ ಹಳೆಯ ಪ್ರಪಂಚದ ವಿನಾಶವಾಗುವುದೋ ಆಗ ನೀವು ಹೊಸ ಪ್ರಪಂಚದಲ್ಲಿ ಆಗ ನೀವು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ನಾವು ಶಾಂತಿ ಸ್ಥಾಪನೆಯಾಗಲಿ ಎಂದು ಹೇಳಿದರೆ ಈ ಬಿ.ಕೆ.ಗಳು ವಿನಾಶವಾಗಲಿ ಎನ್ನುತ್ತಾರೆ ಎಂದು ಮನುಷ್ಯರು ಹೇಳುತ್ತಾರೆ. ಜ್ಞಾನವಿಲ್ಲದ ಕಾರಣ ಈ ರೀತಿ ಮಾತನಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಈ ಇಡೀ ಹಳೆಯ ಪ್ರಪಂಚವು ಈ ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುವುದು. ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ಪ್ರಾಕೃತಿಕ ವಿಕೋಪಗಳಾಗುವವು, ಎಲ್ಲರೂ ಸಾಸಿವೆಯಂತೆ ಚೂರು ಚೂರಾಗಿ ಸಮಾಪ್ತಿಯಾಗುವರು. ಕೆಲವರೇ ಆತ್ಮರು ಉಳಿಯುವರು, ಆತ್ಮವಂತೂ ಅವಿನಾಶಿಯಾಗಿದೆ. ಈಗ ಬೇಹದ್ದಿನ ಹೋಲಿಕಾ ಆಗುವುದು, ಅದರಲ್ಲಿ ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ ಬಾಕಿ ಆತ್ಮವು ಪವಿತ್ರವಾಗಿ ಹೊರಟು ಹೋಗುವವು. ಬೆಂಕಿಯಲ್ಲಿ ವಸ್ತು ಶುದ್ಧವಾಗುತ್ತದೆ. ಶುದ್ಧತೆಗಾಗಿ ಹೋಮ ಮಾಡುತ್ತಾರೆ, ಅವೆಲ್ಲವೂ ಸ್ಥೂಲ ಮಾತುಗಳಾಗಿವೆ. ಈಗ ಇಡೀ ಪ್ರಪಂಚವೇ ಸ್ವಾಹಾ ಆಗಲಿದೆ. ವಿನಾಶಕ್ಕೆ ಮೊದಲು ಅವಶ್ಯವಾಗಿ ಸ್ಥಾಪನೆಯಾಗಬೇಕು. ಯಾರಿಗೇ ಆಗಲಿ ಈ ರೀತಿ ತಿಳಿಸಿರಿ – ಮೊದಲು ಸ್ಥಾಪನೆ ನಂತರ ವಿನಾಶ, ಬ್ರಹ್ಮನ ಮೂಲಕ ಸ್ಥಾಪನೆ. ಪ್ರಜಾಪಿತನು ಪ್ರಸಿದ್ಧರಾಗಿದ್ದಾರೆ, ಆದಿ ದೇವ-ಆದಿ ದೇವಿ… ಜಗದಂಬೆಯ ಲಕ್ಷಾಂತರ ಮಂದಿರಗಳಿವೆ. ಎಷ್ಟೊಂದು ಮೇಳಗಳಾಗುತ್ತವೆ, ನೀವು ಜಗದಂಬೆಯ ಮಕ್ಕಳು ಜ್ಞಾನ ಜ್ಞಾನೇಶ್ವರಿ ಆಗಿದ್ದೀರಿ ನಂತರ ರಾಜ ರಾಜೇಶ್ವರಿಯರಾಗುತ್ತೀರಿ. ನೀವು ಬಹಳ ಧನವಂತರಾಗುತ್ತೀರಿ. ಮತ್ತೆ ಭಕ್ತಿ ಮಾರ್ಗದಲ್ಲಿ ದೀಪಾವಳಿಯಂದು ಲಕ್ಷ್ಮಿಯಿಂದ ವಿನಾಶೀ ಧನವನ್ನು ಬೇಡುತ್ತಾರೆ. ಇಲ್ಲಿ ನಿಮಗೆ ಎಲ್ಲವೂ ಲಭಿಸುತ್ತದೆ – ಆಯುಷ್ಯವಾನ್ಭವ, ಪುತ್ರವಾನ್ಭವ. ಸತ್ಯಯುಗದಲ್ಲಿ 150 ವರ್ಷ ಆಯಸ್ಸು ಇರುತ್ತದೆ, ಇಲ್ಲಿ ನೀವು ಎಷ್ಟು ಯೋಗ ಮಾಡುತ್ತೀರೋ ಅಷ್ಟು ಆಯಸ್ಸು ಹೆಚ್ಚುತ್ತಾ ಹೋಗುವುದು. ನೀವು ಈಶ್ವರನೊಂದಿಗೆ ಯೋಗವನ್ನಿಟ್ಟು ಯೋಗೇಶ್ವರರಾಗುತ್ತೀರಿ.
ತಂದೆಯು ತಿಳಿಸುತ್ತಾರೆ – ನಾನು ಅಗಸನಾಗಿದ್ದೇನೆ, ಎಲ್ಲಾ ಕೊಳಕಾದ ಆತ್ಮರನ್ನು ಸ್ವಚ್ಛಗೊಳಿಸುತ್ತೇನೆ ಮತ್ತೆ ಶರೀರವು ಶುದ್ಧವಾಗಿರುವುದೇ ಸಿಗುವುದು. ನಾನು ಸೆಕೆಂಡಿನಲ್ಲಿ ಪ್ರಪಂಚದ ಎಲ್ಲಾ ವಸ್ತ್ರಗಳನ್ನು ಸ್ವಚ್ಛ ಮಾಡಿ ಬಿಡುತ್ತೇನೆ. ಕೇವಲ ಮನ್ಮನಾಭವ ಆಗಿರುವುದರಿಂದ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿ ಬಿಡುತ್ತದೆ. ಛೂ ಮಂತ್ರವಾಯಿತಲ್ಲವೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ, ಎಷ್ಟು ಸಹಜ ಉಪಾಯವಾಗಿದೆ! ನಡೆಯುತ್ತಾ-ತಿರುಗಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಿರಿ, ಮತ್ತೇನೂ ಕಷ್ಟವನ್ನು ಕೊಡುವುದಿಲ್ಲ. ಈಗ ನಿಮ್ಮದು ಒಂದು ಸೆಕೆಂಡಿನಲ್ಲಿ ಏರುವ ಕಲೆಯಾಗುತ್ತದೆ. ತಂದೆಯು ತಿಳಿಸುತ್ತಾರೆ – ನಾನು ನೀವು ಮಕ್ಕಳ ಸೇವಕನಾಗಿ ಬಂದಿದ್ದೇನೆ, ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ನೀವೇ ಕರೆದಿರಿ ಅಂದಮೇಲೆ ಸೇವಕನಾದರಲ್ಲವೆ. ಯಾವಾಗ ನೀವು ಬಹಳ ಪತಿತರಾಗುತ್ತೀರೋ ಆಗ ಜೋರಾಗಿ ಕರೆಯುತ್ತೀರಿ. ನಾನೀಗ ಬಂದಿದ್ದೇನೆ, ನಾನು ಕಲ್ಪ-ಕಲ್ಪವೂ ಬಂದು ಮಕ್ಕಳಿಗೆ ಮಂತ್ರವನ್ನು ಕೊಡುತ್ತೇನೆ – ನನ್ನನ್ನು ನೆನಪು ಮಾಡಿರಿ. ಮನ್ಮನಾಭವದ ಅರ್ಥವೇ ಇದಾಗಿದೆ ನಂತರ ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ನೀವು ವಿಷ್ಣು ಪುರಿಯ ರಾಜ್ಯವನ್ನು ಪಡೆಯಲು ಬಂದಿದ್ದೀರಿ. ರಾವಣ ಪುರಿಯ ನಂತರ ವಿಷ್ಣು ಪುರಿಯಾಗುವುದು. ಕಂಸ ಪುರಿಯ ನಂತರ ಕೃಷ್ಣ ಪುರಿಯಾಗುವುದು. ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ. ತಂದೆಯು ಹೇಳುತ್ತಾರೆ – ಈ ಹಳೆಯ ಪ್ರಪಂಚದಿಂದ ಕೇವಲ ಮಮತೆಯನ್ನು ತೆಗೆಯಿರಿ. ನಾವೀಗ 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ. ಈ ಹಳೆಯ ವಸ್ತ್ರವನ್ನು ಬಿಟ್ಟು ನಾವು ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ನೆನಪಿನಿಂದಲೇ ಪಾಪಗಳು ಕಳೆಯುತ್ತವೆ, ಇಷ್ಟೂ ಸಾಹಸವನ್ನು ಇಡಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಮುಖದಿಂದ ಸದಾ ಜ್ಞಾನಾಮೃತವೇ ಬರುತ್ತಿರಬೇಕಾಗಿದೆ. ಜ್ಞಾನದಿಂದಲೇ ಎಲ್ಲರ ಸದ್ಗತಿ ಮಾಡಬೇಕಾಗಿದೆ. ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳಬೇಕು, ಅನ್ಯರಿಂದಲ್ಲ.
2. ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚ ಹಳೆಯ ವಸ್ತ್ರದಿಂದ ಮಮತೆಯನ್ನು ತೆಗೆಯಬೇಕಾಗಿದೆ.
ವರದಾನ:-
ನಿರಾಕಾರ ಅಥವಾ ಸಾಕಾರದ ರೂಪದಿಂದ ಬುದ್ಧಿಯ ಸಂಗ ಅಥವಾ ಸಂಬಂಧವನ್ನು ಒಬ್ಬ ತಂದೆಯೊಂದಿಗೆ ಪರಿಪಕ್ವವಾಗಿದ್ದಾರೆ ಫರಿಶ್ತೆಯಾಗಿ ಬಿಡುವಿರಿ. ಯಾರ ಸರ್ವ ಸಂಬಂಧವು ಒಬ್ಬರೊಂದಿಗೆ ಇರುವುದೋ ಅವರೇ ಸದಾ ಫರಿಶ್ತೆಯಾಗಿದ್ದಾರೆ. ಹೇಗೆ ಸರ್ಕಾರಿ ಮಾರ್ಗಗಳಲ್ಲಿ ಬೋರ್ಡುಗಳನ್ನು ಹಾಕಿರುತ್ತಾರೆ – ಇದು ಮಾರ್ಗವು ಸ್ಥಗಿತವಾಗಿದೆ, ಇದೇರೀತಿ ಎಲ್ಲಾ ಮಾರ್ಗಗಳಲ್ಲಿ ಸ್ಥಗಿತಗೊಳಿಸುತ್ತೀರೆಂದರೆ ಬುದ್ಧಿಯ ಅಲೆದಾಟವೇ ಸಮಾಪ್ತಿಯಾಗುವುದು. ಬಾಪ್ದಾದಾರವರ ಇದೇ ಆದೇಶವಿದೆ – ಮೊದಲು ಎಲ್ಲಾ ಮಾರ್ಗಗಳನ್ನು ಸ್ಥಗಿತಗೊಳಿಸಿರಿ. ಇದರಿಂದ ಸಹಜವಾಗಿ ಫರಿಶ್ತೆಯಾಗಿ ಬಿಡುವಿರಿ.
ಸ್ಲೋಗನ್:-
ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ – “ನಿರಂತರ ಈಶ್ವರೀಯ ನೆನಪಿನ ಆಸನ”
ಯಾವಾಗ ಪರಮಾತ್ಮನ ನೆನಪಿನಲ್ಲಿ ಕುಳಿತುಕೊಳ್ಳುತ್ತೀರೆಂದರೆ ಕುಳಿತುಕೊಳ್ಳುವುದರ ಅರ್ಥವೇನಾಗಿದೆ? ನಾವು ಕೇವಲ ಪರಮಾತ್ಮನ ನೆನಪಿನಲ್ಲಿ ಕುಳಿತುಕೊಳ್ಳುವುದಲ್ಲ ಆದರೆ ತಮ್ಮ ಈಶ್ವರೀಯ ನೆನಪಂತು ನಿತ್ಯವೂ ನಡೆಯುತ್ತಾ -ಸುತ್ತಾಡುತ್ತಲೂ, ಪ್ರತೀ ಸಮಯದಲ್ಲಿಯೂ ಮಾಡಬೇಕು ಹಾಗೂ ನೆನಪೂ ಸಹ ಯಾವುದರ ನಾಮ-ರೂಪ ಹಾಗೂ ಪರಿಚಯವಿದೆಯೋ, ಆ ವಸ್ತುವಿನದೇ ನೆನಪಿರುತ್ತದೆ. ಹಾಗಾದರೆ ಒಂದುವೇಣೆ ನಾವು ಈಶ್ವರನು ನಾಮ-ರೂಪದಿಂದ ಭಿನ್ನವಾಗಿದ್ದಾರೆ ಎಂದು ಹೇಳಿದ್ದಾದರೆ, ಅವರನ್ನು ಯಾವ ರೂಪದಿಂದ ನೆನಪು ಮಾಡುವುದು? ಒಂದುವೇಳೆ ಈಶ್ವರನು ಸರ್ವವ್ಯಾಪಿ ಆಗಿದ್ದಾರೆಂದರೆ, ಅವರ ವ್ಯಾಪಕತೆಯಂತು ಸರ್ವತ್ರವಾಯಿತು. ಹಾಗಾದರೆ ಮತ್ತೆ ಯಾರನ್ನು ನೆನಪು ಮಾಡುವುದು! ಒಂದುವೇಳೆ ನೆನಪು ಎಂಬ ಶಬ್ಧವಿದೆಯೆಂದರೆ ಅವಶ್ಯವಾಗಿ ನೆನಪಿನ ರೂಪವೂ ಇರುತ್ತದೆ. ನೆನಪಿನ ಅರ್ಥವು ಇದೇ ಆಗಿದೆ – ಒಂದು ನೆನಪು ಮಾಡುವವರು, ಇನ್ನೊಂದು ಯಾರನ್ನೇ ನೆನಪು ಮಾಡುತ್ತೀರೆಂದರೆ ಅವಶ್ಯವಾಗಿ ನೆನಪು ಮಾಡುವವರಿಗಿಂತಲೂ ಅವರು ಭಿನ್ನವಾಗಿದ್ದಾರೆ, ಹಾಗಾದರೆ ಈಶ್ವರನು ಸರ್ವವ್ಯಾಪಿ ಆಗಲಿಲ್ಲ. ಒಂದುವೇಳೆ ಯಾರಾದರೂ ಹೇಳುವರು – ನಾವು ಆತ್ಮರು ಪರಮಾತ್ಮನ ಅಂಶವಾಗಿದ್ದೇವೆ ಎಂದು ಹೇಳಿದರೆ, ಪರಮಾತ್ಮನೂ ತುಂಡು-ತುಂಡು ಆಗಿರುತ್ತಾರೆಯೇ! ಈ ರೀತಿ ಹೇಳಿದ್ದಾದರೆ ಪರಮಾತ್ಮನು ವಿನಾಶಿಯಾದರು. ಅವರು ನೆನಪೂ ಸಹ ವಿನಾಶಿಯಾಯಿತು. ಈಗ ಈ ಮಾತುಗಳನ್ನು ಜನರು ತಿಳಿದುಕೊಂಡಿಲ್ಲ, ಪರಮಾತ್ಮನೂ ಅವಿನಾಶಿ ಮತ್ತು ನಾವು ಅವಿನಾಶಿ ಪರಮಪಿತ ಪರಮಾತ್ಮನ ಸಂತಾನರಾದ ನಾವೂ ಸಹ ಆತ್ಮರು ವಿನಾಶಿಯಾಗಿದ್ದೇವೆ. ಅಂದಮೇಲೆ ನಾವು ಅವರ ವಂಶದವರಾದೆವು, ಅವರ ಅಂಶವಲ್ಲ. ಈಗ ಪರಮಾತ್ಮನೇ ಸ್ವಯಂ ಬಂದು ನಾವು ಮಕ್ಕಳಿಗೇನು ಕೊಡುತ್ತಾರೆಂಬ ತಿಳುವಳಿಕೆಯು ಈಗಿರಬೇಕು. ನಾವು ಮಕ್ಕಳಪ್ರತಿ ಪರಮಾತ್ಮನ ಮಹಾವಾಕ್ಯವಿದೆ- ಮಕ್ಕಳೇ, ನಾನು ಯಾರಾಗಿದ್ದೇನೆ ಹೇಗಿದ್ದೇನೆಯೋ, ಆ ರೂಪವನ್ನು ನೆನಪು ಮಾಡುವುದರಿಂದ ನೀವು ಅವಶ್ಯವಾಗಿ ನನ್ನನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ಒಂದುವೇಳೆ ನಾನು ದುಃಖ-ಸುಖದಿಂದ ಭಿನ್ನವಾದ ತಂದೆಯು ಸರ್ವವ್ಯಾಪಿ ಆಗಿದ್ದರೆ, ಮತ್ತೆ ಈ ಆಟದಲ್ಲಿ ಸುಖ-ದುಃಖವಾಗುವುದಿಲ್ಲ. ಅಂದರೆ ನಾನು ಸರ್ವವ್ಯಾಪಿ ಆಗಿಲ್ಲ, ನಾನೂ ಸಹ ಆತ್ಮನಂತೆಯೇ ಆತ್ಮನಾಗಿರುವೆನು ಆದರೆ ನನ್ನ ಗುಣವು ಸರ್ವ ಆತ್ಮರುಗಳಿಗಿಂತ ಪರಮದಷ್ಟಿದೆ ಆದ್ದರಿಂದ ನನ್ನನ್ನು ಪರಮ ಆತ್ಮ ಅರ್ಥಾತ್ ಪರಮಾತ್ಮ ಎಂದು ಹೇಳುತ್ತಾರೆ. ಒಳ್ಳೆಯದು. ಓಂ ಶಾಂತಿ.
➤ Email me Murli: Receive Daily Murli on your email. Subscribe!