06 June 2021 KANNADA Murli Today – Brahma Kumaris

5 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಉದಾಸೀನತೆ ಬರಲು ಕಾರಣ- ಚಿಕ್ಕ ಪುಟ್ಟ ಉಲ್ಲಂಘನೆಗಳು

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬೇಹದ್ದಿನ ಅತಿ ಶ್ರೇಷ್ಠ ತಂದೆ, ಸರ್ವ ಶ್ರೇಷ್ಠರನ್ನಾಗಿ ಮಾಡುವಂತ ತಂದೆಯು ತನ್ನ ನಾಲೂ ಕಡೆಯಲ್ಲಿರುವ ಎಲ್ಲಾ ಮಕ್ಕಳಲ್ಲಿ, ವಿಶೇಷವಾಗಿ ಆಜ್ಞಾಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಎಲ್ಲರೂ ತಮ್ಮನ್ನು ಆಜ್ಞಾಕಾರಿ ಮಕ್ಕಳೆಂದು ತಿಳಿಯುತ್ತಾರೆ ಆದರೆ ನಂಬರ್ವಾರ್ ಆಗಿದ್ದಾರೆ. ಕೆಲವರು ಸದಾ ಆಜ್ಞಾಕಾರಿ ಮತ್ತು ಕೆಲವರು ಆಜ್ಞಾಕಾರಿ ಆಗಿದ್ದಾರೆ ಆದರೆ ಸದಾ ಇಲ್ಲ. ಆಜ್ಞಾಕಾರಿಗಳ ಪಟ್ಟಿಯಲ್ಲಿ ಎಲ್ಲಾ ಮಕ್ಕಳು ಬಂದು ಬಿಡುತ್ತಾರೆ ಆದರೆ ಅವಶ್ಯವಾಗಿ ಅಂತರವಿದೆ. ಆಜ್ಞೆಯನ್ನು ಕೊಡುವಂತಹ ತಂದೆಯು ಎಲ್ಲಾ ಮಕ್ಕಳಿಗೂ ಒಂದೇ ಸಮಯದಲ್ಲಿ, ಒಂದೇ ಆಜ್ಞೆಯನ್ನೂ ಕೊಡುತ್ತಾರೆ, ಯಾರಿಗೂ ಬೇರೆ-ಬೇರೆ ಅಥವಾ ಭಿನ್ನ-ಭಿನ್ನ ಆಜ್ಞೆಗಳನ್ನೂ ಕೊಡುವುದಿಲ್ಲ. ಆದರೂ ನಂಬರ್ವಾರ್ ಏಕೆ ಆಗುತ್ತಾರೆ? ಏಕೆಂದರೆ ಯಾರು ಸದಾ ಪ್ರತೀ ಸಂಕಲ್ಪ ಅಥವಾ ಪ್ರತೀ ಕರ್ಮವನ್ನು ಮಾಡುತ್ತಿದ್ದರೂ ತಂದೆಯ ಆಜ್ಞೆಯ ಸಹಜ ಸ್ಮೃತಿ ಸ್ವರೂಪರು ಆಗುತ್ತಾರೆ, ಅಂತಹವರು ಸದಾ ಸ್ವತಹವಾಗಿಯೇ ಪ್ರತೀ ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಆಜ್ಞೆಯ ಅನುಸಾರ ನಡೆಯುತ್ತಾರೆ ಮತ್ತು ಯಾರು ಸ್ಮೃತಿ ಸ್ವರೂಪರಾಗಿ ಇರುವುದಿಲ್ಲವೋ ಅವರಿಗೆ ಅನೇಕರು ಪದೇ-ಪದೇ ಸ್ಮೃತಿಯನ್ನು ತರಿಸಬೇಕಾಗುತ್ತದೆ. ಕೆಲವೊಮ್ಮೆ ಸ್ಮೃತಿಯ ಕಾರಣ ಆಜ್ಞಾಕಾರಿಗಳಾಗಿ ನಡೆಯುತ್ತಾ, ಮತ್ತೆ ಕೆಲವೊಮ್ಮೆ ನಡೆದ ನಂತರ ಆಜ್ಞೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ಆಜ್ಞೆಗಳ ಸ್ಮೃತಿ ಸ್ವರೂಪರಾಗಿರುವುದಿಲ್ಲ, ಯಾರಿಗೆ ಶ್ರೇಷ್ಠ ಕರ್ಮದ ಪ್ರತ್ಯಕ್ಷ ಫಲವು ಸಿಗುತ್ತದೆಯೋ, ಅದು ಅನುಭೂತಿ ಆಗದೇ ಇರುವ ಕಾರಣದಿಂದ ಕರ್ಮ ಮಾಡಿದ ನಂತರ ನೆನಪಿಗೆ ಬರುತ್ತದೆ – ಈ ಫಲಿತಾಂಶವೇಕೆ ಬಂದಿತು? ಕರ್ಮದ ನಂತರ ಪರಿಶೀಲನೆ ಮಾಡಿದಾಗ ತಿಳಿಯುತ್ತಾರೆ – ತಂದೆಯ ಆಜ್ಞೆಯನುಸಾರ ನಡೆಯದೇ ಇರುವ ಕಾರಣದಿಂದ, ಪ್ರತ್ಯಕ್ಷಫಲ ಅನುಭವವೇನು ಆಗಬೇಕಾಗಿತ್ತು ಅದಾಗಲಿಲ್ಲ. ಇದಕ್ಕೆ ಹೇಳುತ್ತಾರೆ – ಆಜ್ಞೆಯ ಸ್ಮೃತಿ ಸ್ವರೂಪರು ಆಗಿಲ್ಲ, ಆದರೆ ಕರ್ಮದ ಫಲವನ್ನು ನೋಡಿ ಸ್ಮೃತಿಗೆ ಬಂದಿತು. ಅಂದಾಗ ಮೊದಲ ನಂಬರಿನಲ್ಲಿ ಇದ್ದಾರೆ – ಸಹಜ, ಸ್ವತಹ ಸ್ಮೃತಿ ಸ್ವರೂಪ ಆಜ್ಞಾಕಾರಿಗಳು, ಎರಡನೆಯ ನಂಬರಿನಲ್ಲಿ – ಕೆಲವೊಮ್ಮೆ ಸ್ಮೃತಿಯಿಂದ ಕರ್ಮವನ್ನು ಮಾಡುವವರು ಮತ್ತೆ ಕೆಲವೊಮ್ಮೆ ಕರ್ಮದ ನಂತರ ಸ್ಮೃತಿಯಲ್ಲಿ ಬರುವವರು. ಮೂರನೇ ನಂಬರಿನವರ ಮಾತಂತು ಬಿಟ್ಟು ಬಿಡಿ. ಎರಡು ಮಾಲೆಗಳಿವೆ, ಮೊದಲು ಚಿಕ್ಕದಾದ ಮಾಲೆ ಇನ್ನೊಂದು ದೊಡ್ಡ ಮಾಲೆಯಿದೆ. ಮೂರನೆಯ ಮಾಲೆಯಂತು ಇಲ್ಲ ಆದ್ದರಿಂದ ಇಬ್ಬರ ಮಾತುಗಳನ್ನು ತಿಳಿಸುತ್ತಿದ್ದೇವೆ.

‘ನಂಬರ್ವನ್ ಆಜ್ಞಾಕಾರಿ’ಗಳು ಇಡೀ ದಿನದ ದಿನಚರಿಯಲ್ಲಿ ಸದಾ ಅಮೃತವೇಳೆಯಿಂದ ರಾತ್ರಿಯವರೆಗೆ ಪ್ರತಿಯೊಂದು ಕರ್ಮದಲ್ಲಿ ಆಜ್ಞೆಯ ಅನುಸಾರ ನಡೆಯುವ ಕಾರಣದಿಂದ, ಪ್ರತಿಯೊಂದು ಕರ್ಮದಲ್ಲಿ ಪರಿಶ್ರಮದ ಅನುಭವ ಆಗುವುದಿಲ್ಲ ಆದರೆ ಆಜ್ಞಾಕಾರಿಯಾಗುವ ವಿಶೇಷ ಫಲವಾಗಿ ತಂದೆಯ ಅಶೀರ್ವಾದಗಳ ಅನುಭೂತಿ ಮಾಡುತ್ತಾರೆ. ಏಕೆಂದರೆ ಆಜ್ಞಾಕಾರಿ ಮಕ್ಕಳ ಪ್ರತೀ ಹೆಜ್ಜೆಯಲ್ಲಿ ಬಾಪ್ದಾದಾರವರ ಹೃದಯದ ಆಶೀರ್ವಾದಗಳು ಜೊತೆಯಿದೆ. ಆದ್ದರಿಂದ ಪ್ರತೀ ಕರ್ಮವು ಫಲ ಕೊಡುವಂತದ್ದೇ ಆಗಿದೆ. ಏಕೆಂದರೆ ಕರ್ಮವು ಬೀಜವಾಗಿದೆ ಮತ್ತು ಬೀಜದಿಂದ ಪ್ರಾಪ್ತಿಯೇನಾಗುತ್ತದೆಯೋ ಅದರ ಫಲವಾಗಿದೆ. ಅಂದಮೇಲೆ ನಂಬರ್ವನ್ ಆತ್ಮರ ಪ್ರತಿಯೊಂದು ಕರ್ಮವೆಂಬ ಬೀಜವು ಶಕ್ತಿಶಾಲಿಯಾಗಿರುವ ಕಾರಣದಿಂದ, ಅದರ ಫಲ ಅರ್ಥಾತ್ ಸಂತುಷ್ಟತೆ, ಸಫಲತೆಯು ಪ್ರಾಪ್ತಿಯಾಗುತ್ತದೆ. ಸ್ವಯಂ ಸ್ವಯಂನಿಂದಲೂ ಸಂತುಷ್ಟತೆ ಆಗುತ್ತದೆ ಹಾಗೂ ಕರ್ಮದ ಫಲಿತಾಂಶದಿಂದಲೂ ಸಂತುಷ್ಟತೆಯು ಪ್ರಾಪ್ತಿಯಾಗುತ್ತದೆ. ಹಾಗೂ ಅನ್ಯ ಆತ್ಮರ ಸಂಬಂಧ -ಸಂಪರ್ಕದಿಂದಲೂ ಸಂತುಷ್ಟತೆಯ ಪ್ರಾಪ್ತಿಯಾಗುತ್ತದೆ. ನಂಬರ್ವನ್ ಆಜ್ಞಾಕಾರಿ ಆತ್ಮರಲ್ಲಿ ಸ್ವತಹ ಹಾಗೂ ಸದಾ ಮೂರೂ ಪ್ರಕಾರದ ಸಂತುಷ್ಟತೆಯ ಅನುಭವವಾಗುತ್ತದೆ. ನಾನು ಬಹಳ ಚೆನ್ನಾಗಿ ವಿಧಿಪೂರ್ವಕವಾದ ಕರ್ಮವನ್ನು ಮಾಡಿದೆನು ಎಂದು ಕೆಲವೊಮ್ಮೆ ಕೆಲವು ಮಕ್ಕಳು ತನ್ನ ಕರ್ಮದಿಂದ ಸ್ವಯಂ ಸಂತುಷ್ಟರಾಗುತ್ತಾರೆ. ಆದರೆ ಎಲ್ಲಿ ಸ್ವಯಂಗೆ ಸಫಲತೆಯೆಂಬ ಫಲವು ಎಷ್ಟಾಗಿದೆ ಎಂದು ತಿಳಿಯುತ್ತಾರೆಯೋ ಅಷ್ಟು ಕಾಣಿಸುವುದಿಲ್ಲ, ಮತ್ತೆ ಎಲ್ಲಿ ಸ್ವಯಂ ಹಾಗೂ ಫಲದಲ್ಲಿಯೂ ಸಂತುಷ್ಟವಾಗಿರುತ್ತಾರೆ. ಆದರೆ ಸಂಬಂಧ-ಸಂಪರ್ಕದಲ್ಲಿ ಸಂತುಷ್ಟತೆ ಇರುವುದಿಲ್ಲ. ಅಂದಮೇಲೆ ಇಂತಹವರಿಗೆ ನಂಬರ್ವನ್ ಆಜ್ಞಾಕಾರಿ ಎಂದು ಹೇಳುವುದಿಲ್ಲ. ನಂಬರ್ವನ್ ಆಜ್ಞಾಕಾರಿಗಳು ಮೂರೂ ಮಾತುಗಳಲ್ಲಿ ಸಂತುಷ್ಟತೆಯ ಅನುಭವ ಮಾಡುತ್ತಾರೆ.

ವರ್ತಮಾನ ಸಮಯದ ಅನುಸಾರ ಶ್ರೇಷ್ಠ ಆಜ್ಞಾಕಾರಿಯಾದ ಕೆಲವು ಮಕ್ಕಳ ಮೂಲಕ ಕೆಲವೊಮ್ಮೆ ಕೆಲಕೆಲವು ಆತ್ಮರು ತನ್ನನ್ನು ಅಸಂತುಷ್ಟನೆಂಬ ಅನುಭವವನ್ನೂ ಮಾಡುತ್ತಾರೆ. ಯಾರಿಂದ ಎಲ್ಲರೂ ಸಂತುಷ್ಟವಾಗಿದ್ದಾರೆ ಎನ್ನುವಂತೆ ಯಾರೂ ಇಲ್ಲ ಎಂದು ತಾವು ಯೋಚಿಸುತ್ತೀರಿ! ಕೆಲಕೆಲವರು ಅಸಂತುಷ್ಟರೂ ಆಗಿ ಬಿಡುತ್ತಾರೆ, ಆದರೆ ಅದಕ್ಕೆ ಹಲವು ಕಾರಣಗಳಿರುತ್ತವೆ. ತನ್ನ ಕಾರಣವನ್ನು ತಿಳಿಯದೇ ಇರುವ ಕಾರಣದಿಂದ ತಪ್ಪಾಗಿ ತಿಳಿದುಕೊಂಡು ಬಿಡುತ್ತಾರೆ. ಇನ್ನೊಂದು ಮಾತು – ತನ್ನ ಬುದ್ಧಿಯ ಅನುಸಾರ ಹಿರಿಯರಿಂದ ಹೆಚ್ಚಾಗಿ ಬಯಕೆ, ಇಚ್ಛೆಯನ್ನು ಇಡುತ್ತಾರೆ ಮತ್ತು ಆ ಇಚ್ಛೆಯು ಯಾವಾಗ ಪೂರ್ಣವಾಗುವುದಿಲ್ಲವೋ ಆಗ ಅಸಂತುಷ್ಟರಾಗಿ ಬಿಡುತ್ತಾರೆ. ಮೂರನೇ ಮಾತು – ಕೆಲವು ಆತ್ಮರು ಯಾರು ಸಂತುಷ್ಟವಾಗಬೇಕು, ಅವರು ತನ್ನ ಹಿಂದಿನ ಸ್ವಭಾವ-ಸಂಸ್ಕಾರ ಮತ್ತು ಲೆಕ್ಕಾಚಾರದ ಕಾರಣ ಸಂತುಷ್ಟವಾಗುವುದಿಲ್ಲ. ಇದರಿಂದ ನಂಬರ್ವನ್ ಆಜ್ಞಾಕಾರಿ ಆತ್ಮನ ಅಥವಾ ಶ್ರೇಷ್ಠ ಆತ್ಮರ ಮೂಲಕ ಸಂತುಷ್ಟತೆಯು ಸಿಗದಿರುವ ಕಾರಣದಿಂದ ಅಸಂತುಷ್ಟರು ಆಗುವುದಲ್ಲ. ಆದರೆ ತನ್ನ ಕಾರಣಗಳಿಂದಲೇ ಅಸಂತುಷ್ಟರು ಆಗಿ ಬಿಡುತ್ತಾರೆ. ಆದ್ದರಿಂದ ಕೆಲಕೆಲವೊಂದು ಕಡೆ ಇದೇ ಕಾಣಿಸುತ್ತದೆ- ಪ್ರತಿಯೊಬ್ಬರಲ್ಲಿಯೂ ಯಾವುದಾದರೂ ಅಸಂತುಷ್ಟತೆಯಿದೆ. ಆದರೆ ಅವರಲ್ಲಿಯೂ ಮೆಜಾರಿಟಿಯಲ್ಲಿ ಸುಮಾರು 95% ಸಂತುಷ್ಟವಾಗಿರಬಹುದು, 5% ಅಸಂತುಷ್ಟತೆಯು ಕಾಣಿಸುತ್ತದೆ. ಅಂದಾಗ ನಂಬರ್ವನ್ ಆಜ್ಞಾಕಾರಿ ಮಕ್ಕಳಲ್ಲಿ ಮೆಜಾರಿಟಿ ಮೂರೂ ರೂಪಗಳಿಂದ ಸಂತುಷ್ಟತೆಯ ಅನುಭವ ಮಾಡುವರು ಮತ್ತು ಸದಾ ಪ್ರತಿಯೊಂದು ಕರ್ಮವನ್ನು ಆಜ್ಞೆಯ ಅನುಸಾರ ಶ್ರೇಷ್ಠ ಕರ್ಮವಿರುವ ಕಾರಣದಿಂದ, ಕರ್ಮವನ್ನು ಮಾಡಿದ ನಂತರ ಸಂತುಷ್ಟರಾಗುವ ಕಾರಣ ಕರ್ಮವು ಅವರನ್ನು ಸರಿಯಾಗಿ ಮಾಡಿದೆನೇ ಅಥವಾ ಇಲ್ಲವೆ ಎಂದು ಮತ್ತೆ-ಮತ್ತೆ ಬುದ್ಧಿಯನ್ನು-ಮನಸ್ಸನ್ನು ವಿಚಲಿತ ಮಾಡುವುದಿಲ್ಲ. ಸೆಕೆಂಡ್ ನಂಬರಿನವರಲ್ಲಿ ಕೆಲವೊಮ್ಮೆ ಕರ್ಮವನ್ನು ಮಾಡಿದ ನಂತರ ಮನಸ್ಸಿನಲ್ಲಿ ಸಂಕಲ್ಪವು ನಡೆಯುತ್ತದೆ – ಗೊತ್ತಿಲ್ಲ ಸರಿಯಾಗಿ ಮಾಡಿದೆನೆ ಅಥವಾ ಇಲ್ಲವೋ. ತಮ್ಮ ಭಾಷೆಯಲ್ಲಿ ಹೀಗೆ ಹೇಳುತ್ತೀರಿ – ಸರಿಯಾಗಿ ಮಾಡಿಲ್ಲವೆಂದು ಮನಸ್ಸು ತಿನ್ನುತ್ತಿದೆ. ನಂಬರ್ವನ್ ಆಜ್ಞಾಕಾರಿ ಆತ್ಮನ ಮನಸ್ಸೆಂದಿಗೂ ತಿನ್ನುವುದಿಲ್ಲ, ಆಜ್ಞೆಯ ಅನುಸಾರ ನಡೆಯುವ ಕಾರಣದಿಂದ ಸದಾ ಹಗುರವಾಗಿ ಇರುತ್ತಾರೆ ಏಕೆಂದರೆ ಕರ್ಮದ ಬಂಧನಗಳ ಹೊರೆಯಿರುವುದಿಲ್ಲ. ಒಂದು – ಕರ್ಮದ ಸಂಬಂಧದಲ್ಲಿ ಬರುವುದು, ಇನ್ನೊಂದು – ಕರ್ಮದ ಬಂಧನಗಳಿಗೆ ವಶರಾಗಿ ಕರ್ಮ ಮಾಡುವುದು. ಇದನ್ನು ಇದಕ್ಕು ಮೊದಲೂ ಸಹ ತಿಳಿಸಿದ್ದೆವು ಅಂದಾಗ ನಂಬರ್ವನ ಆತ್ಮನು ಕರ್ಮದ ಸಂಬಂಧದಲ್ಲಿ ಬರುವವನಾಗಿದ್ದಾನೆ, ಆದ್ದರಿಂದ ಸದಾ ಹಗುರವಾಗಿ ಇರುತ್ತಾರೆ. ಅವರ ಪ್ರತೀ ಕರ್ಮದಲ್ಲಿಯೂ ಬಾಪ್ದಾದಾರವರ ಮೂಲಕ ವಿಶೇಷ ಆಶೀರ್ವಾದದ ಪ್ರಾಪ್ತಿಯಿರುವ ಕಾರಣದಿಂದ, ಅದರ ಫಲ ಸ್ವರೂಪವಾಗಿ ಪ್ರತಿಯೊಂದು ಕರ್ಮವನ್ನು ಮಾಡುತ್ತಿದ್ದರೂ ಸದಾ ಆಂತರಿಕವಾಗಿ ಆತ್ಮ ವಿಶ್ವಾಸದ ಅನುಭವ ಮಾಡುವರು. ಸದಾ ಅತೀಂದ್ರಿಯ ಸುಖದ ಅನುಭವ ಮಾಡುವರು, ಸದಾ ತನ್ನನ್ನು ಸಂಪನ್ನವಾಗಿದ್ದೇನೆಂಬ ಅನುಭವ ಮಾಡುತ್ತಾರೆ.

ಕೆಲವೊಮ್ಮೆ ಕೆಲವು ಮಕ್ಕಳು ತಂದೆಯ ಮುಂದೆ ತನ್ನ ಹೃದಯದ ಕ್ಷೇಮ ಸಮಾಚಾರವನ್ನು ತಿಳಿಸುತ್ತಾರೆ ಏನು ಹೇಳುತ್ತಾರೆ – ಇಂದು ಸ್ವಯಂನ್ನು ಖಾಲಿ-ಖಾಲಿಯಾಗಿರುವ ಅನುಭವವಾಗುತ್ತಿದೆ, ಯಾವುದೇ ಮಾತು(ಸಂದರ್ಭ) ನಡೆದಿಲ್ಲ ಆದರೆ ಸಂಪನ್ನತೆ ಅಥವಾ ಸುಖದ ಅನುಭೂತಿ ಆಗುತ್ತಿಲ್ಲ. ಕೆಲವೊಮ್ಮೆ ಆ ಸಮಯದಲ್ಲಿ ಯಾವುದೇ ಉಲ್ಟಾ ಕಾರ್ಯ ಅಥವಾ ಯಾವುದೇ ಚಿಕ್ಕ ಪುಟ್ಟ ತಪ್ಪುಗಳಾಗುವುದಿಲ್ಲ ಆದರೆ ನಡೆಯುತ್ತಾ-ನಡೆಯುತ್ತಾ ಬುದ್ಧಿಹೀನತೆ ಅಥವಾ ಹುಡುಗಾಟಿಕೆಯಲ್ಲಿ ಸಮಯ-ಸಮಯದಲ್ಲಿ ಆಜ್ಞೆಯನುಸಾರ ಕಾರ್ಯವನ್ನು ಮಾಡುವುದಿಲ್ಲ. ಮೊದಲ ಉಲ್ಲಂಘನೆ ಮಾಡಿರುವ ಸಮಯದ ಹೊರೆಯು, ಯಾವುದೇ ಸಮಯದಲ್ಲಾದರೂ ತನ್ನ ಕಡೆಗೆ ಸೆಳೆಯಬಹುದು. ಹೇಗೆ ಹಿಂದಿನ ಜನ್ಮಗಳ ಕಠಿಣವಾದ ಸಂಸ್ಕಾರ-ಸ್ವಭಾವವನ್ನು ಬಯಸದಿದ್ದರೂ ಕೆಲ-ಕೆಲವೊಮ್ಮೆ ತನ್ನ ಕಡೆಗೆ ಸೆಳೆದು ಬಿಡುತ್ತದೆ, ಅದಂತು ಹಿಂದಿನ ಲೆಕ್ಕಾಚಾರವಾಗಿದೆ. ಅದೇ ರೀತಿ ಸಮಯ-ಸಮಯದಲ್ಲಿ ಮಾಡಿರುವ ಉಲ್ಲಂಘನೆಗಳ ಹೊರೆಯು ಕೆಲ-ಕೆಲವೊಮ್ಮೆ ತನ್ನ ಕಡೆಗೆ ಸೆಳೆದು ಬಿಡುತ್ತದೆ, ಇದಂತು ವರ್ತಮಾನ ಜೀವನದ ಲೆಕ್ಕವಾಗಿದೆ. ಏಕೆಂದರೆ ಯಾವುದೇ ಲೆಕ್ಕಾಚಾರ ಆಗಿರಬಹುದು- ಅದು ಭಲೆ ಈ ಜನ್ಮದ್ದಾಗಿರಲಿ ಅಥವಾ ಹಿಂದಿನ ಜನ್ಮದ್ದಾಗಿರಲಿ, ಅದೆಲ್ಲವೂ ಲಗನ್ನಿನ ಅಗ್ನಿ ಸ್ವರೂಪ ಸ್ಥಿತಿಯಿಲ್ಲದೆ ಭಸ್ಮಗೊಳಿಸಲು ಸಾಧ್ಯವಾಗುವುದಿಲ್ಲ. ಸದಾ ಅಗ್ನಿ ಸ್ವರೂಪ ಸ್ಥಿತಿ ಎಂದರೆ ಶಕ್ತಿಶಾಲಿ ನೆನಪಿನ ಸ್ಥಿತಿ, ಬೀಜರೂಪ, ಲೈಟ್ಹೌಸ್ (ಪ್ರಕಾಶ ಗೃಹ), ಮೈಟ್ಹೌಸ್ (ಶಕ್ತಿ ಗೃಹ) ಸ್ಥಿತಿಯಿಲ್ಲದೇ ಇರುವ ಕಾರಣದಿಂದ, ಈ ಲೆಕ್ಕಾಚಾರಗಳನ್ನು ಭಸ್ಮಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಉಳಿದಿರುವ ಲೆಕ್ಕಾಚಾರಗಳು ತನ್ನ ಕಡೆಗೆ ಸೆಳೆಯುತ್ತದೆ. ಆ ಸಮಯದಲ್ಲಿ ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ ಆದರೆ ಗೊತ್ತಿಲ್ಲ ಏನಾಗುತ್ತಿದೆ! ಕೆಲವೊಮ್ಮೆ ನೆನಪಿನಲ್ಲಿ, ಸೇವೆಯಲ್ಲಿಯೂ ಮನಸ್ಸು ತೊಡಗಿಸಲು ಆಗುವುದಿಲ್ಲ ಅಥವಾ ಕೆಲವೊಮ್ಮೆ ಆಲಸ್ಯದ ಪ್ರಕಂಪನಗಳಿರುತ್ತವೆ. ಒಂದು – ಜ್ಞಾನದ ಮೂಲಕ ಶಾಂತಿಯ ಅನುಭವ, ಇನ್ನೊಂದಿದೆ – ಖುಷಿ-ಆನಂದವಿಲ್ಲದೆಯೇ ಸನ್ನಾಟ ಶಾಂತಿ(ಸಮಾಧಿ ಸ್ಥಿತಿ). ಅದು ಪ್ರಾಪ್ತಿಯಿಲ್ಲದಿರುವ ಶಾಂತಿಯಾಗಿರುತ್ತದೆ. ಮನಸ್ಸು ಇಚ್ಛಿಸುತ್ತದೆ – ಕೇವಲ ಒಂಟಿಯಾಗಿ ಎಲ್ಲಿಯಾದರೂ ಹೋಗಿ ಕುಳಿತು ಬಿಡೋಣ. ಇವೆಲ್ಲಾ ಲಕ್ಷಣಗಳು ಯಾವುದಾದರೊಂದು ಶ್ರೀಮತದ ಉಲ್ಲಂಘನೆಯ ಚಿಹ್ನೆಗಳಾಗಿವೆ. ಕರ್ಮದ ಹೊರೆಯು ಸೆಳೆಯುತ್ತದೆ.

ಉಲ್ಲಂಘನೆಯಲ್ಲಿಯೂ ಒಂದು – ಪಾಪ ಕರ್ಮ ಮಾಡುವುದು ಅಥವಾ ಯಾವುದಾದರೂ ದೊಡ್ಡ ತಪ್ಪನ್ನು ಮಾಡುವುದು ಮತ್ತು ಇನ್ನೊಂದು – ಚಿಕ್ಕ ಪುಟ್ಟ ಉಲ್ಲಂಘನೆಗಳೂ ಆಗುತ್ತಿರುತ್ತವೆ. ಉದಾ: ತಂದೆಯವರ ಆಜ್ಞೆಯಿದೆ – ಅಮೃತವೇಳೆಯಲ್ಲಿ ವಿಧಿಗಳನುಸಾರ ಶಕ್ತಿಶಾಲಿ ನೆನಪಿನಲ್ಲಿರಿ. ಅದರಂತೆ ಒಂದುವೇಳೆ ಅಮೃತವೇಳೆಯಲ್ಲಿ ಆಜ್ಞೆಯ ಅನುಸಾರ ನಡೆಯುತ್ತಿಲ್ಲವೆಂದರೆ, ಅವರಿಗೇನು ಹೇಳುವುದು? ಆಜ್ಞಾಕಾರಿಯೇ ಅಥವಾ ಉಲ್ಲಂಘನೆ ಮಾಡುವವರೇ? ಪ್ರತಿಯೊಂದು ಕರ್ಮವನ್ನು ಕರ್ಮಯೋಗಿಯಾಗಿ, ನಿಮಿತ್ತ ಭಾವದಿಂದ ಮಾಡಿರಿ, ನಿರ್ಮಾಣರಾಗಿದ್ದು ಮಾಡಿರಿ ಎಂಬುದು ಆಜ್ಞೆಗಳಿವೆ. ಹಾಗೆ ನೋಡಿದರೆ ಆಜ್ಞೆಗಳ ಬಹಳ ದೊಡ್ಡ ಪಟ್ಟಿಯೇ ಇದೆ ಆದರೆ ಉದಾಹರಣೆಯಲ್ಲಿ ತಿಳಿಸುತ್ತಿದ್ದೇವೆ. ದೃಷ್ಟಿ, ವೃತ್ತಿ, ಪ್ರತಿಯೊಂದಕ್ಕೂ ಆಜ್ಞೆಗಳಿವೆ, ಇವೆಲ್ಲಾ ಆಜ್ಞೆಗಳಲ್ಲಿ ಯಾವುದಾದರೊಂದು ಆಜ್ಞೆಯನ್ನು ವಿಧಿಪೂರ್ವಕವಾಗಿ ಪಾಲಿಸುವುದಿಲ್ಲವೆಂದರೆ ಹೇಳಲಾಗುತ್ತದೆ – ಚಿಕ್ಕ ಪುಟ್ಟ ಉಲ್ಲಂಘನೆ ಮಾಡುವುದು. ಒಂದುವೇಳೆ ಈ ಖಾತೆಯು ಜಮಾ ಆಗುತ್ತಿದ್ದರೆ, ಅವಶ್ಯವಾಗಿ ತನ್ನ ಕಡೆಗೆ ಸೆಳೆಯುತ್ತದೆ ಅಲ್ಲವೆ. ಆದ್ದರಿಂದ ಹೇಳುತ್ತೀರಿ – ಎಷ್ಟು ಆಗಬೇಕಾಗಿತ್ತು ಅಷ್ಟು ಆಗುತ್ತಿಲ್ಲ. ಎಲ್ಲರೂ ಸರಿಯಾಗಿ ನಡೆಯುತ್ತಿದ್ದೀರಾ ಎಂದು ಯಾವಾಗ ಕೇಳುತ್ತೇವೆ, ಅದಕ್ಕೆ ಎಲ್ಲರೂ ಹೌದು ಎಂದು ಹೇಳುತ್ತೀರಿ. ಮತ್ತೆ ಯಾವಾಗ ಕೇಳುತ್ತೇವೆ – ಎಷ್ಟಾಗಬೇಕು ಅಷ್ಟಿದೆಯೇ ಎಂದು ಕೇಳಿದಾಗ ಯೋಚಿಸುತ್ತಾರೆ. ಇಷ್ಟೆಲ್ಲಾ ಸೂಚನೆಗಳು ಸಿಗುತ್ತವೆ, ಜ್ಞಾನಪೂರ್ಣರು ಆಗಿದ್ದರೂ ಸಹ ಎಷ್ಟಾಗಬೇಕು ಅಷ್ಟಾಗುತ್ತಿಲ್ಲವೆಂದರೆ, ಅದರ ಕಾರಣವೇನು? ಹಿಂದಿನ ಅಥವಾ ವರ್ತಮಾನದ ಹೊರೆಯು ತಮ್ಮನ್ನು ಡಬಲ್ಲೈಟ್ ಆಗಲು ಬಿಡುತ್ತಿಲ್ಲ. ಕೆಲವೊಮ್ಮೆ ಡಬಲ್ಲೈಟ್ ಆಗುವುದು, ಕೆಲವೊಮ್ಮೆ ಹೊರೆಯು ಕೆಳಗೆ ಕರೆ ತರುತ್ತದೆ. ಸದಾ ಅತೀಂದಿರ್ಯ ಸುಖ ಅಥವಾ ಖುಷಿ ಸಂಪನ್ನ ಶಾಂತಿ ಸ್ಥಿತಿಯ ಅನುಭವ ಮಾಡುತ್ತಿಲ್ಲ. ಬಾಪ್ದಾದಾರವರಿಂದ ವಿಶೇಷವಾಗಿ ಆಜ್ಞಾಕಾರಿಯಾಗುವ ಅಶೀರ್ವಾದ ಲಿಫ್ಟ್ನ ಪ್ರಾಪ್ತಿಯಾಗುವುದಿಲ್ಲ ಆದರಿಂದ ಕೆಲವೊಮ್ಮೆ ಸಹಜವಾಗುತ್ತದೆ ಮತ್ತೆ ಕೆಲವೊಮ್ಮೆ ಪರಿಶ್ರಮ ಎನಿಸುತ್ತದೆ. ನಂಬರ್ವನ್ ಆಜ್ಞಾಕಾರಿಯ ವಿಶೇಷತೆಯನ್ನು ಸ್ಪಷ್ಟವಾಗಿ ಕೇಳಿದಿರಾ! ಉಳಿದಂತೆ ನಂಬರ್ ಟು(ಎರಡನೆ ನಂಬರಿನವರು) ಯಾರಾದರು? ಯಾರಲ್ಲಿ ಈ ವಿಶೇಷತೆಗಳ ಕೊರತೆಯಿದೆ, ಅವರು ನಂಬರ್ ಟು ಮತ್ತು ಎರಡನೇ ನಂಬರಿನ ಮಾಲೆಯವರಾದರು. ಅಂದಾಗ ಮೊದಲ ಮಾಲೆಯಲ್ಲಿ ಬರಬೇಕಲ್ಲವೇ? ಇದರಲ್ಲಿ ಕಷ್ಟವೇನೂ ಇಲ್ಲ, ಪ್ರತೀ ಹೆಜ್ಜೆಯ ಆಜ್ಞೆಗಳೂ ಸ್ಪಷ್ಟವಿದೆ, ಅದರಂತೆ ನಡೆಯುವುದು ಸಹಜವೇ ಅಥವಾ ಕಷ್ಟವಾಗಿದೆಯೇ? ಆಜ್ಞೆಗಳೇ ತಂದೆಯ ಹೆಜ್ಜೆಗಳಾಗಿವೆ ಅಂದಮೇಲೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವುದು ಸಹಜವಲ್ಲವೆ. ಅದೇರೀತಿ ಎಲ್ಲರೂ ಸತ್ಯಸೀತೆ ಆಗಿದ್ದೀರಿ, ಪ್ರೇಮಿಕೆ ಆಗಿದ್ದೀರಿ ಅಂದಮೇಲೆ ಪ್ರೇಮಿಕೆಯರು ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಾರಲ್ಲವೆ? ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುವುದು ವಿಧಿಯಾಗಿದೆ ಅಲ್ಲವೆ. ಅಂದಮೇಲೆ ಕಷ್ಟವೇನಿದೆ! ಮಗುವಿನ ಸಂಬಂಧದಲ್ಲಿಯೂ ನೋಡಿರಿ – ಮಗು ಎಂದರೆ ಯಾರು ತಂದೆಯ ಪದ ಚಿಹ್ನೆಯ ಮೇಲೆ ನಡೆಯುವವರು. ಹೇಗೆ ತಂದೆಯವರು ಹೇಳಿದರು ಅದೇ ರೀತಿ ಮಾಡುವುದು ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವುದು ಆಗಿದೆ. ತಂದೆಯವರು ಹೇಳುವುದು ಮತ್ತು ಮಕ್ಕಳು ಮಾಡುವುದಕ್ಕೆ ಹೇಳಲಾಗುತ್ತದೆ – ನಂಬರ್ವನ್ ಆಜ್ಞಾಕಾರಿ. ಹಾಗಾದರೆ ಇದನ್ನು ಪರಿಶೀಲನೆ ಮಾಡಿರಿ ಮತ್ತು ಪರಿವರ್ತನೆ ಮಾಡಿಕೊಳ್ಳಿರಿ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿರುವ ಸರ್ವ ಆಜ್ಞಾಕಾರಿ ಶ್ರೇಷ್ಠಾತ್ಮರಿಗೆ, ಸದಾ ತಂದೆಯ ಮೂಲಕ ಪ್ರಾಪ್ತಿಯಾಗಿರುವ ಆಶೀರ್ವಾದಗಳ ಅನುಭೂತಿ ಮಾಡುವಂತಹ ವಿಶೇಷ ಆತ್ಮರಿಗೆ, ಸದಾ ಪ್ರತಿಯೊಂದು ಕರ್ಮದಲ್ಲಿ ಸಂತುಷ್ಟತೆ, ಸಫಲತೆಯನ್ನು ಅನುಭವ ಮಾಡುವಂತಹ ಮಹಾನ್ ಆತ್ಮರಿಗೆ, ಸದಾ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವ ಆಜ್ಞಾಕಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ಮಧುರ ಮಹಾವಾಕ್ಯಗಳು:

1. ಸದಾ ತಮ್ಮನ್ನು ಆತ್ಮಿಕ ಯಾತ್ರಿಯೆಂದು ತಿಳಿಯುತ್ತೀರಾ? ಯಾತ್ರೆ ಮಾಡುವಾಗ ಯಾವ ನೆನಪಿರುತ್ತದೆ? ಎಲ್ಲಿಗೆ ಹೋಗಬೇಕಾಗಿದೆಯೋ ಅದೇ ನೆನಪಿರುತ್ತದೆ ಅಲ್ಲವೆ. ಅದರ ಹೊರತು ಮತ್ತ್ಯಾವುದೇ ಮಾತು ನೆನಪಿಗೆ ಬರುತ್ತದೆಯೆಂದರೆ, ಅದನ್ನೂ ಮರೆಸುತ್ತಾರೆ. ಒಂದುವೇಳೆ ಯಾರಾದರೂ ದೇವಿಯ ಯಾತ್ರೆಯಲ್ಲಿ ಹೋಗುತ್ತಾರೆಂದರೆ `ಜೈ ಮಾತಾ ಜೈ ಮಾತಾ’ ಎನ್ನುತ್ತಾ ಹೋಗುವರು. ಒಂದುವೇಳೆ ಮತ್ತ್ಯಾರದಾದರೂ ನೆನಪು ಬರುತ್ತದೆಯೆಂದರೆ ಒಳ್ಳೆಯದಲ್ಲವೆಂದು ತಿಳಿಯುವರು. ಮತ್ತು ಒಬ್ಬರು ಇನ್ನೊಬ್ಬರಿಗೂ ಸಹ ಜೈ ಮಾತಾ ಎಂದು ನೆನಪು ಮಾಡಿರಿ, ಮನೆಯನ್ನು ಅಥವಾ ಮಕ್ಕಳನ್ನು ನೆನಪು ಮಾಡದಿರಿ, ತಾಯಿ(ದೇವಿ)ಯನ್ನು ನೆನಪು ಮಾಡಿರಿ ಎನ್ನುವುದನ್ನು ನೆನಪಿಗೆ ತರಿಸುತ್ತಾರೆ. ಅಂದಮೇಲೆ ಈ ಆತ್ಮಿಕ ಯಾತ್ರಿಗಳಲ್ಲಿ ಸದಾ ಯಾವ ನೆನಪಿರುತ್ತದೆ? ತನ್ನ ಮನೆ ಅಂದರೆ ಪರಮಧಾಮವು ನೆನಪಿರುತ್ತದೆ ಅಲ್ಲವೆ? ಅಲ್ಲಿಯೇ ಹೋಗಬೇಕಾಗಿದೆ ಅಂದಮೇಲೆ ಮನೆ ಮತ್ತು ನಮ್ಮ ರಾಜ್ಯವಾದ ಸ್ವರ್ಗ ಎರಡರ ನೆನಪಿರುತ್ತದೆಯೇ ಅಥವಾ ಬೇರೆ ಯಾವುದೇ ಮಾತುಗಳು ನೆನಪಿರುತ್ತದೆಯೇ? ಹಳೆಯ ಮಾತುಗಳಂತು ನೆನಪಿಗೆ ಬರುವುದಿಲ್ಲ ಅಲ್ಲವೇ? ಇಲ್ಲಿರುವಾಗ ನೆನಪಿಗೆ ಬಂದು ಬಿಡುತ್ತದೆ – ಈ ರೀತಿಯಲ್ಲಿಯೂ ಆಗಬಾರದು. ಇಲ್ಲಿರುತ್ತಿದ್ದರೂ ಭಿನ್ನವಾಗಿರಬೇಕು ಏಕೆಂದರೆ ಎಷ್ಟು ಭಿನ್ನವಾಗಿ ಇರುತ್ತೀರಿ ಅಷ್ಟೇ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬಹುದು. ಹಾಗಾದರೆ ಪರಿಶೀಲನೆ ಮಾಡಿಕೊಳ್ಳಿ- ಹಳೆಯ ಪ್ರಪಂಚದಲ್ಲಿ ಇರುತ್ತಿದ್ದರೂ, ಹಳೆಯ ಪ್ರಪಂಚದಲ್ಲಿ ಸಿಲುಕಿಕೊಳ್ಳುವುದಿಲ್ಲವೇ? ಕಮಲ-ಪುಷ್ಪವು ಕೆಸರಿನಲ್ಲಿ ಇರುತ್ತದೆ ಆದರೆ ಅದರಲ್ಲಿದ್ದರೂ ಅದರಿಂದ ಭಿನ್ನವಾಗಿ ಇರುತ್ತದೆ ಅಂದಾಗ ಸೇವೆಯಲ್ಲಿಯೂ ಇರಬೇಕಾಗುತ್ತದೆ, ಮೋಹದ ಕಾರಣದಿಂದಲ್ಲ. ಅಂದಮೇಲೆ ಮಾತೆಯರಿಗೆ ಮೋಹವಂತು ಇಲ್ಲವೇ? ಒಂದುವೇಳೆ ಅಲ್ಪ ಸ್ವಲ್ಪ ಮೊಮ್ಮಕ್ಕಳು-ಮರಿ ಮಕ್ಕಳಿಗೆ ಏನಾದರೂ ಆಯಿತೆಂದರೆ, ಆಗ ಮೋಹವಿರುತ್ತದೆಯೇ? ಒಂದುವೇಳೆ ಅವರೇನಾದರೂ ಸ್ವಲ್ಪ ಅಳುತ್ತಾರೆಂದರೆ, ತಮ್ಮ ಮನಸ್ಸೂ ಅಳುತ್ತದೆಯೇ? ಏಕೆಂದರೆ ಎಲ್ಲಿ ಮೋಹವಿರುತ್ತದೆಯೋ ಅಲ್ಲಿ ಅನ್ಯರ ದುಃಖವು ತಮ್ಮದೆನಿಸುತ್ತದೆ. ಅವರಿಗೇನಾದರೂ ಜ್ವರವಿದ್ದರೆ ತಮ್ಮ ಮನಸ್ಸಿಗೂ ಜ್ವರವುಂಟಾಗಿ ಬಿಡುತ್ತದೆ – ಈ ರೀತಿಯೂ ಆಗಬಾರದು. ಮೋಹವು ಸೆಳೆಯುತ್ತದೆ ಅಲ್ಲವೆ! ಪರೀಕ್ಷೆಗಳಂತು ಬರುತ್ತವೆ ಅಲ್ಲವೆ! ಕೆಲವೊಮ್ಮೆ ಮೊಮ್ಮಗನು ರೋಗಿಯಾಗುವನು, ಕೆಲವೊಮ್ಮೆ ಮರಿಮಗು ರೋಗಿ ಆಗುವನು, ಕೆಲವೊಮ್ಮೆ ಹಣದ ಸಮಸ್ಯೆಯು ಉಂಟಾಗುತ್ತದೆ, ಕೆಲವೊಮೆ ತಮ್ಮ ರೋಗದ ಸಮಸ್ಯೆಯೇ ಬರುತ್ತದೆ, ಇವೆಲ್ಲವೂ ಅವಶ್ಯವಾಗಿ ಆಗುತ್ತದೆ. ಆದರೆ ಇವೆಲ್ಲವುಗಳಿಂದ ಸದಾ ಭಿನ್ನವಾಗಿರಬೇಕು, ಮೋಹದಲ್ಲಿ ಬಂದು ಬಿಡುಬಾರದು – ಇಷ್ಟು ನಿರ್ಮೋಹಿ ಆಗಿದ್ದೀರಾ? ಮಾತೆಯರಲ್ಲಿ ಸಂಬಂಧದೊಂದಿಗೆ ಮೋಹವುಂಟಾಗುತ್ತದೆ ಮತ್ತು ಪಾಂಡವರಲ್ಲಿ ಹಣದೊಂದಿಗೆ ಮೋಹವುಂಟಾಗುತ್ತದೆ. ಹಣ ಸಂಪಾದಿಸುವಾಗ ನೆನಪೂ ಸಹ ಮರೆತು ಹೋಗುತ್ತದೆ. ಶರೀರ ನಿರ್ವಹಣೆಯ ನಿಮಿತ್ತ ಕಾರ್ಯವನ್ನು ಮಾಡುವುದು ಬೇರೆ ಮಾತು ಆದರೆ ಯಾವುದರಲ್ಲಿ ತೊಡಗಿರುತ್ತೀರಿ ಅದರಿಂದ ವಿದ್ಯಾಭ್ಯಾಸವೂ ನೆನಪಿಲ್ಲ, ನೆನಪಿನ ಅಭ್ಯಾಸವೂ ಇಲ್ಲ…. ಅದಕ್ಕೆ ಮೋಹ ಎಂದು ಹೇಳಲಾಗುತ್ತದೆ. ಅಂದಮೇಲೆ ಮೋಹವಂತು ಇಲ್ಲವಲ್ಲವೆ. ಎಷ್ಟು ನಷ್ಟಮೋಹಿ ಆಗಿರುತ್ತೀರಿ ಅಷ್ಟೇ ಸ್ಮೃತಿ ಸ್ವರೂಪರು ಆಗುವಿರಿ.

ಕುಮಾರರೊಂದಿಗೆ: ಚಮತ್ಕಾರ ಮಾಡುವಂತಹ ಕುಮಾರರಲ್ಲವೆ? ಯಾವ ಚಮತ್ಕಾರವನ್ನು ತೋರಿಸುವಿರಿ? ತಂದೆಯ ಪ್ರತ್ಯಕ್ಷಗೊಳಿಸುವ ಉತ್ಸಾಹವಂತು ಇದ್ದೇ ಇರುತ್ತದೆ ಆದರೆ ಅದರ ವಿಧಿಯೇನಾಗಿದೆ? ವರ್ತಮಾನದಲ್ಲಿ ಯುವ ವರ್ಗದವರ ಮೇಲೆ ಎಲ್ಲರ ಕಣ್ಣಿದೆ. ಆತ್ಮಿಕ ಯುವ ವರ್ಗದವರು ತಮ್ಮ ಮನಸಾ ಶಕ್ತಿಯಿಂದ, ಮಾತಿನಿಂದ, ಚಲನೆಯಿಂದ ಶಾಂತಿಯ ಶಕ್ತಿಯನ್ನು ಈ ರೀತಿಯಲ್ಲಿ ಅನುಭವ ಮಾಡಿಸಿರಿ – ಇವರು ಶಾಂತಿಯ ಶಕ್ತಿಯಿಂದ ಕ್ರಾಂತಿ ಮಾಡುವವರು ಎಂದು ಅವರು ತಿಳಿಯಲಿ. ಹೇಗೆ ಶಾರೀರಿಕ ಯುವ ವರ್ಗದವರ ಚಲನೆ ಮತ್ತು ಚಹರೆಯಿಂದ ಉತ್ಸಾಹವು ಕಾಣಿಸುತ್ತದೆ ಅಲ್ಲವೆ. ಅವರನ್ನು ನೋಡುತ್ತಿದ್ದಂತೆಯೇ ಗೊತ್ತಾಗುತ್ತದೆ – ಇವರು ಯುವ ವರ್ಗದವರು. ಹಾಗೆಯೇ ತಮ್ಮ ಚಹರೆ ಮತ್ತು ಚಲನೆಯಿಂದ ಶಾಂತಿಯ ಅನುಭೂತಿಯಾಗಲಿ – ಇದಕ್ಕೆ ಚಮತ್ಕಾರ ಮಾಡುವುದೆಂದು ಹೇಳಲಾಗುತ್ತದೆ. ಪ್ರತಿಯೊಬ್ಬರ ವೃತ್ತಿಯಿಂದ ಪ್ರಕಂಪನಗಳು ಬರಲಿ. ಹೇಗೆ ಅವರುಗಳ ಚಲನೆ-ಚಹರೆಯಿಂದ ಈ ಪ್ರಕಂಪನಗಳು ಬರುತ್ತವೆ – ಇವರು ಹಿಂಸಕ ವೃತ್ತಿಯವರು ಎಂದು. ಹಾಗೆಯೇ ತಮ್ಮ ಪ್ರಕಂಪನಗಳಿಂದ ಶಾಂತಿಯ ಕಿರಣಗಳ ಅನುಭವವಾಗುವ ಚಮತ್ಕಾರವನ್ನು ತೋರಿಸಿರಿ. ಯಾರು ಕ್ರಾಂತಿಯ ಕಾರ್ಯವನ್ನು ಮಾಡುತ್ತಾರೆಯೋ ಅವರಲ್ಲಿ ಎಲ್ಲರ ಗಮನ ಹರಿಯುತ್ತದೆ ಅಲ್ಲವೆ. ಅದೇರೀತಿ ತಾವುಗಳ ಮೇಲೆ ಎಲ್ಲರ ಗಮನ ಹರಿಯಲಿ – ಇಂತಹ ವಿಶಾಲ ಸೇವೆಯನ್ನು ಮಾಡಿರಿ ಏಕೆಂದರೆ ಜ್ಞಾನವನ್ನು ಕೇಳಿದಾಗ ಚೆನ್ನಾಗಿದೆ ಎನಿಸುತ್ತದೆ ಆದರೆ ಪರಿವರ್ತನೆಯಂತು ಅನುಭವವನ್ನು ನೋಡಿ ಅನುಭವಿ ಆಗುತ್ತಾರೆ. ಇಂತಹ ಯಾವುದಾದರೂ ಭಿನ್ನವಾದ/ವಿಶೇಷವಾದ ಮಾಡಿ ತೋರಿಸಿರಿ. ವಾಣಿಯಿಂದಂತು ಮಾತೆಯರೂ ಸಹ ಸೇವೆಯನ್ನು ಮಾಡುವರು, ನಿಮಿತ್ತ ಶಿಕ್ಷಕಿಯರೂ ಸೇವೆಯನ್ನು ಮಾಡುತ್ತಾರೆ ಆದರೆ ತಾವು ನವೀನತೆಯನ್ನು ಮಾಡಿತೋರಿಸಿರಿ, ಯಾವುದರಿಂದ ಸರ್ಕಾರದ ಗಮನಕ್ಕೂ ಬರಬೇಕೆ. ಹೇಗೆ ಸೂರ್ಯನ ಉದಯವು ಆಗುತ್ತದೆಯೆಂದರೆ ಸ್ವತಹವಾಗಿಯೇ ಗಮನ ಹರಿಯುತ್ತದೆ ಅಲ್ಲವೆ- ಕಿರಣಗಳು ಬರುತ್ತಿದೆ! ಅದೇರೀತಿ ತಮ್ಮ ಕಡೆ ಗಮನ ಹರಿಯಲಿ. ತಿಳಿಯಿತೆ?

ವರದಾನ:-

ಆತ್ಮರಲ್ಲಿ ಬಹಳ ಸಮಯದಲ್ಲಿ ಇಚ್ಛೆ ಅಥವಾ ಆಶೆಯಿದೆ – ನಿರ್ವಾಣ ಅಥವಾ ಮುಕ್ತಿಧಾಮದಲ್ಲಿ ಹೋಗಬೇಕು ಎನ್ನುವುದು. ಇದಕ್ಕಾಗಿಯೇ ಅನೇಕ ಜನ್ಮಗಳಿಂದ ಅನೇಕ ಪ್ರಕಾರದ ಸಾಧನೆಗಳನ್ನು ಮಾಡುತ್ತಾ-ಮಾಡುತ್ತಾ ಸುಸ್ತಾಗಿ ಬಿಟ್ಟಿದ್ದಾರೆ. ಈಗ ಪ್ರತಿಯೊಬ್ಬರೂ ಸಿದ್ಧಿಯನ್ನು ಬಯಸುತ್ತಾರೆ, ಸಾಧನೆ ಮಾಡುವುದನ್ನಲ್ಲ. ಸಿದ್ಧಿ ಅರ್ಥಾತ್ ಸದ್ಗತಿ ಆಗಿದೆ, ಅಂದಮೇಲೆ ತಾವು ಶ್ರೇಷ್ಠ ಆತ್ಮರು ತಮ್ಮ ಶಾಂತಿ ಶಕ್ತಿ ಅಥವಾ ಸರ್ವಶಕ್ತಿಗಳಿಂದ, ಈ ರೀತಿಯಲ್ಲಿ ವ್ಯಾಕುಲರಾಗಿ ಸುಸ್ತಾಗಿ, ಬಾಯಾರಿರುವ ಆತ್ಮರ ಬಾಯಾರಿಕೆಯನ್ನು ನೀಗಿಸುವುದಕ್ಕಾಗಿ ಒಂದು ಸೆಕೆಂಡಿನಲ್ಲಿ ಸಿದ್ಧಿ ಕೊಡುತ್ತೀರೆಂದರೆ ಹೇಳಲಾಗುತ್ತದೆ – ಈಶ್ವರನ ಸಹಯೋಗಿಗಳು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top