06 January 2022 KANNADA Murli Today | Brahma Kumaris

Read and Listen today’s Gyan Murli in Kannada

January 5, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ದೇಹ-ಅಭಿಮಾನದಲ್ಲಿ ಬರುವುದರಿಂದ ವಿಕರ್ಮವಾಗುತ್ತದೆ, ಆದ್ದರಿಂದ ಎಲ್ಲಾ ಸಂಗವನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು”

ಪ್ರಶ್ನೆ:: -

ಯಾವ ಒಂದು ಆಟ ಸ್ವಾಭಾವಿಕವಾಗಿದೆ, ಆದರೆ ಅದನ್ನು ಮನುಷ್ಯರು ಈಶ್ವರನ ಲೀಲೆಯೆಂದು ತಿಳಿಯುತ್ತಾರೆ?

ಉತ್ತರ:-

ನಾಟಕದಲ್ಲಿ ಈ ಪ್ರಕೃತಿ ಪ್ರಕೋಪಗಳಾಗುತ್ತವೆ, ವಿನಾಶದ ಸಮಯದಲ್ಲಿ ಒಂದು ಸಮುದ್ರದ ಅಲೆಯಲ್ಲಿ ಎಲ್ಲಾ ಖಂಡ-ದ್ವೀಪ ಮುಂತಾದವುಗಳು ವಿನಾಶವಾಗುತ್ತವೆ. ಇದರ ರಿಹರ್ಸಲ್ ಈಗಿನಿಂದ ನಡೆಯುತ್ತಿರುತ್ತವೆ. ಇದೆಲ್ಲಾ ಸ್ವಾಭಾವಿಕ ಆಟವಾಗಿದೆ. ಇದನ್ನು ಮನುಷ್ಯರು ಈಶ್ವರನ ಲೀಲೆ ಎಂದು ಹೇಳಿ ಬಿಡುತ್ತಾರೆ. ಆದರೆ ತಂದೆ ಹೇಳುತ್ತಾರೆ-ನಾನು ಇವುಗಳಿಗೆ ಯಾವುದೇ ಆದೇಶವನ್ನು ಕೊಡುವುದಿಲ್ಲ, ಇದೆಲ್ಲವು ನಾಟಕದಲ್ಲಿ ನಿಗಧಿಯಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನನ್ನ ಮನಸ್ಸೆಂಬ ಬಾಗಿಲಿನಲ್ಲಿ ಯಾರು ಬಂದರು……

ಓಂ ಶಾಂತಿ. ಯಾರು ಬಂದರು ಅರ್ಥಾತ್ ಯಾರ ನೆನಪು ಬಂತು? ಈ ರೀತಿಯಲ್ಲ ಅವರು ಬಂದು ನನ್ನ ಮನಸ್ಸಿನಲ್ಲಿ ಕುಳಿತುಕೊಂಡು ಬಿಟ್ಟರು-ಇದರ ಅರ್ಥ ಸರ್ವವ್ಯಾಪಿಯಾಗಿ ಬಿಡುತ್ತದೆ. ಈ ರೀತಿ ಅಲ್ಲ, ನನ್ನ ನೆನಪಿನಲ್ಲಿ ಯಾರು ಬಂದರು? ಅಕಾಲಮೂರ್ತಿ. ಅವರನ್ನು ಕಾಲ ಕಬಳಿಸುವುದಿಲ್ಲ. ಸಿಖ್ ಜನಾಂಗದವರ ಬಳಿ (ಅಕಾಲ್ತಖ್ತ್) ಅಕಾಲ ಸಿಂಹಾಸನ ಇದೆ. ಅವರ ಬಳಿ ಅಕಾಲಿ ಜನರೂ ಸಹ ಇದ್ದಾರೆ. ಸಿಖ್ ಧರ್ಮ ಪ್ರವೃತ್ತಿ ಮಾರ್ಗದ ಧರ್ಮ ಎಂದು ಸ್ವಯಂ ಸಿಖ್ ಜನತೆ ತಿಳಿದುಕೊಂಡಿಲ್ಲ. ಒಂದೇ ಆದಿ ಸನಾತನ ದೇವೀ-ದೇವತಾ ಧರ್ಮ ಪ್ರಾಯಃಲೋಪವಾಗಿದೆ. ಮತ್ತೊಂದು ಸನ್ಯಾಸಿ ಧರ್ಮ, ಅದು ನಿವೃತ್ತಿ ಮಾರ್ಗದ ಧರ್ಮವಾಗಿದೆ. ಮನೆ ಮಠವನ್ನು ಬಿಟ್ಟು ಹದ್ದಿನ ಸನ್ಯಾಸ ಮಾಡಿ ಪವಿತ್ರರಾಗುತ್ತಾರೆ. ಕಾಡಿನಲ್ಲಿ ಅವಶ್ಯವಾಗಿ ಪವಿತ್ರರಾಗಿಯೇ ಇರಬೇಕಾಗುತ್ತದೆ. ಪ್ರತಿಯೊಂದು ಧರ್ಮದ ನೀತಿ ಪದ್ಧತಿ ಬೇರೆ ಬೇರೆಯಾಗಿದೆ. ಶಿಕ್ಷಣವು ಬೇರೆಯಾಗಿದೆ. ಅದಾಗಿದೆ ನಿವೃತ್ತಿ ಮಾರ್ಗದ ಧರ್ಮ. ಅವರನ್ನು ಅನುಕರಣೆ ಮಾಡುವಂತಹವರು ಸಹ ಮನೆ-ಮಠವನ್ನು ಬಿಟ್ಟು ಕಾವಿ ತೊಡಬೇಕಾಗುತ್ತದೆ. ಸನ್ಯಾಸಿಗಳು ಗೃಹಸ್ಥಿಗಳಿಗೆ ಗೃಹಸ್ಥದಲ್ಲಿರುತ್ತಾ ಜ್ಞಾನವನ್ನು ಪಡೆದುಕೊಳ್ಳುತ್ತೀರಾ ಎಂದು ಕೇಳುತ್ತಾರೆ? ಆದರೆ ಅಲ್ಲಿ ಜ್ಞಾನವಿಲ್ಲ. ಸನ್ಯಾಸಿಗಳು ಸಹ ಗೃಹಸ್ಥದಲ್ಲಿರಲು ಸಾಧ್ಯವಿಲ್ಲ. ವಾಸ್ತವಿಕವಾಗಿ ಸದ್ಗತಿ ಕೊಡುವಂತಹವರು ಗುರುವಾಗಿದ್ದಾರೆ. ಸದ್ಗುರು ಒಬ್ಬರೇ ಆಗಿದ್ದಾರೆ. ಗುರುನಾನಕ್ ಸಹ ಈ ಶಿಕ್ಷಣ ಕೊಟ್ಟಿದ್ದಾರೆ. ಅವರು ಸಹ ಪರಮಾತ್ಮನ ಮಹಿಮೆ ಮಾಡುತ್ತಾರೆ. ಏಕ್ ಓಂಕಾರ್, ಅಕಾಲಮೂರ್ತಿ, ನಿಮಗೆ ಈಗ ಅಕಾಲಮೂರ್ತಿ ಅರ್ಥಾತ್ ಪರಮಪಿತ ಪರಮಾತ್ಮನ ನೆನಪಿದೆ. ಅಕಾಲಮೂರ್ತಿ ಅಯೋನಿಯೆಂದು ಮಹಿಮೆ ಮಾಡುತ್ತಾರೆ. ಸ್ವಯಂಭು ಅರ್ಥಾತ್ ರಚೈತನಾಗಿದ್ದಾರೆ. ನಿರ್ಭಯ್ ನಿರ್ವೈರ್, ಅಕಾಲ್ ಮೂರ್ತ್…… ಸತ್ಗುರು ಪ್ರಸಾದ್, ಜಪಸಾಹೆಬ್ ಮುಂತಾದ ಮಹಿಮೆಗಳು ಪರಮಪಿತ ಪರಮಾತ್ಮನಿಗಿವೆ. ಅಕಾಲ್ ಮೂರ್ತಿಯನ್ನೇ ಮಾನ್ಯತೆ ಮಾಡುತ್ತಾರೆ. ಅಶುದ್ಧ ವಸ್ತ್ರಗಳನ್ನು ಶುದ್ಧ ಮಾಡುವವರೆಂದು ಹೇಳುತ್ತಾರೆ…… ಪತಿತ ಪಾವನನೆಂದರೆ ಅಶುದ್ಧ ವಸ್ತ್ರವನ್ನು ಸ್ವಚ್ಚ ಮಾಡುವವರೆಂದು ಮಹಿಮೆ ಹಾಡುತ್ತಾರೆ. ಮತ್ತೆ ಹೇಳುತ್ತಾರೆ “ಅಶಂಖ್ ಚೋರ್ ಹರಾಂ ಖೋರ್”. ಪರಮಾತ್ಮನ ಮೇಲೆ ಬಲಿಹಾರಿ ಆಗುತ್ತಾರೆಂದು ಗುರುನಾನಕ್ ಹೇಳುತ್ತಾರೆ. ಅವಶ್ಯಕವಾಗಿ ಅವರು ಬಂದಿರಬೇಕು. ಬಾಬಾ ತಿಳಿಸುತ್ತಾರೆ-ನಾನು ಅಹಲ್ಯೆಯರ, ಗಣಿಕೆಯರ, ಸಾಧುಗಳ ಉದ್ಧಾರ ಮಾಡಲು ಬರುತ್ತೇನೆ. ಅಗತ್ಯವಾಗಿ ಎಲ್ಲರು ಪತಿತರಾಗಿರಬೇಕು. ಇದು ಬೇಹದ್ದಿನ ಮಾತು, ಬೇಹದ್ದಿನ ಮಾಲೀಕನೇ ಬಂದು ತಿಳಿಸಿ ಕೊಡುತ್ತಾರೆ. ಬ್ರಹ್ಮಾ, ವಿಷ್ಣು, ಶಂಕರನು ಸಹ ನನ್ನ ರಚನೆಯಾಗಿದ್ದಾರೆ. ಬ್ರಹ್ಮನ ಮುಖಾಂತರ ಆದಿ ಸನಾತನ ದೇವೀ-ದೇವತಾ ಧರ್ಮ ಸ್ಥಾಪನೆ ಮಾಡುತ್ತಾರೆ. ಆ ಗುರು ಜನರು ಸದ್ಗತಿ ದಾತರಲ್ಲ. ಅವರು ಯಾರ ಸದ್ಗತಿ ಮಾಡುತ್ತಾರೆ? ಅವರ ವಂಶಾವಳಿಯೇ ಪೂರ್ತಿ ವೃದ್ಧಿಯಾಗದಿದ್ದಾಗ ಹೇಗೆ ಸದ್ಗತಿ ಮಡುತ್ತಾರೆ. ತಂದೆ ತಿಳಿಸುತ್ತಾರೆ-ನಾನು ಬಂದು ಆದಿ ಸನಾತನ ಧರ್ಮದ ಸ್ಥಾಪನೆ ಹಾಗು ಅನೇಕ ಧರ್ಮಗಳ ವಿನಾಶ ಮಾಡಿಸುತ್ತೇನೆ. ಈ ಸಮಯ ಎಲ್ಲರು ತಮೋಪ್ರಧಾನ ಪಾಪಾತ್ಮರಾಗಿ ಬಿಟ್ಟಿದ್ದಾರೆ. ಈ ಸೃಷ್ಟಿ ಚಕ್ರ ಹೇಗೆ ತಿರುಗುತ್ತದೆ, ಎಂದು ನಾಟಕದ ಪಾತ್ರಧಾರಿಗಳಾದ ಮನುಷ್ಯರಿಗೆ ಗೊತ್ತಿರಬೇಕು. ತಂದೆ ಬಂದು ಮಕ್ಕಳನ್ನು ತ್ರಿಕಾಲದರ್ಶಿಯನ್ನಾಗಿ ಮಾಡುತ್ತಾರೆ. ತಂದೆ ಬಂದು ಸ್ವರ್ಗ ಸತ್ಯ ಖಂಡದ ಸ್ಥಾಪನೆ ಮಾಡಿ ಅಸತ್ಯ ಖಂಡದ ವಿನಾಶ ಮಾಡುತ್ತಾರೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ಸತ್ಯಖಂಡದ ಸ್ಥಾಪನೆ ಮಾಡುವವರು ಸತ್ಯ ಆಗಿರುತ್ತಾರಲ್ಲವೆ!. ಈ ಎಲ್ಲಾ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ದೇಹ-ಅಭಿಮಾನ ತುಂಬಾ ಇರುವ ಕಾರಣ ಎಲ್ಲರೂ ಧಾರಣೆ ಮಾಡುವುದಿಲ್ಲ. ಎಷ್ಟು ದೇಹೀ-ಅಭಿಮಾನಿಯಾಗುತ್ತೇವೆ, ತಮ್ಮನ್ನು ಅಶರೀರಿ ಆತ್ಮನೆಂದು ತಿಳಿದುಕೊಳ್ಳುತ್ತೇವೆ ಆಗ ಧಾರಣೆಯಾಗುತ್ತದೆ. ತಂದೆಯನ್ನು ನೆನಪು ಮಾಡಿದರೆ ಧಾರಣೆಯಾಗುತ್ತದೆ. ದೇಹ-ಅಭಿಮಾನಿಗೆ ಧಾರಣೆಯಾಗುವುದಿಲ್ಲ. ಯೋಗದಿಂದಲೇ ಆತ್ಮದ ಪಾಪ ಭಸ್ಮವಾಗುತ್ತದೆ. ಹಗಲಿನಲ್ಲಿ ದೇಹ-ಅಭಿಮಾನವಿರುತ್ತದೆ. ಹಾಗಾದರೆ ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡುವುದು ಯಾವಾಗ?

ನಿದ್ರೆಯನ್ನು ಗೆಲ್ಲುವಂತವರಾಗಿರೆಂದು ತಂದೆ ತಿಳಿಸುತ್ತಾರೆ. ತಂದೆ ಎಷ್ಟೊಂದು ಉತ್ತಮ ಜ್ಞಾನಬಿಂದುಗಳನ್ನು ತಿಳಿಸಿ ಕೊಡುತ್ತಾರೆ, ಆದರೆ ಮುರಳಿಯನ್ನೇ ಕೇಳದಿರುವ ಮಕ್ಕಳು ಸಹ ಇದ್ದಾರೆ. ಆದರೆ ವಿದ್ಯೆ ಮುಖ್ಯವಾಗಿದೆ. ಹೇಗಾದರು ಮಾಡಿ ಮುರುಳಿ ಓದಬೇಕಾಗುತ್ತದೆ. ಈ ರೀತಿಯೂ ಆಗಬಾರದು-ವಿಕಾರಕ್ಕೆ ವಶವಾಗುವುದು ಹಾಗೂ ಮುರಳಿಯನ್ನು ತೆಗೆದುಕೊಳ್ಳುವುದು. ಎಲ್ಲಿಯವರೆಗೂ ಪವಿತ್ರತೆಯ ಗ್ಯಾರೆಂಟಿ ಇರುವುದಿಲ್ಲ ಅಲ್ಲಿಯವರೆಗೂ ಮುರಳಿಯನ್ನು ಕಳುಹಿಸಬಾರದು. ಮುರಳಿ ಓದದೆ ಇರುವಂತಹವರ ಗತಿ ಏನಾಗುತ್ತದೆ. ಒಳ್ಳೊಳ್ಳೆಯ ಮಕ್ಕಳೇ ಮುರಳಿಯನ್ನು ಓದುವುದಿಲ್ಲ. ಅವರಿಗೆ ನಶೆ ಏರಿ ಬಿಟ್ಟಿರುತ್ತದೆ. ಇಲ್ಲವೆಂದರೆ ಒಂದು ದಿನವು ಸಹ ಮುರಳಿಯನ್ನು ಮಿಸ್ ಮಾಡಿಕೊಳ್ಳಬಾರದು. ಧಾರಣೆಯಾಗುತ್ತಿಲ್ಲವೆಂದರೆ ದೇಹಾಭಿಮಾನವಿದೆಯೆಂದು ತಿಳಿದುಕೊಳ್ಳಬೇಕು ಅಂತಹವರು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳಲಾರರು. ತಂದೆ ಚೆನ್ನಾಗಿ ತಿಳಿಸಿಕೊಡುತ್ತಾರೆ, ಮಕ್ಕಳೂ ಸಹ ತಿಳಿಸಿ ಕೊಡಬೇಕಾಗುತ್ತದೆ. ಏಕೆಂದರೆ ತಂದೆಯಂತು ಹೊರಗೆ ಹೋಗಲಾಗುವುದಿಲ್ಲ. ತಂದೆ ಮಕ್ಕಳ ಮುಂದೆಯೇ ತಿಳಿಸಿಕೊಡುತ್ತಾರೆ. ಈ ಹಿರಿಯ ತಾಯಿಯು ಸಹ ಗುಪ್ತವಾಗಿದ್ದಾರೆ. ಶಕ್ತಿಯರು ಹೊರಗೆ ಹೋಗಬಹುದು. ಸಮ್ಮೇಳನಗಳು ನಡೆಯುತ್ತಿರುತ್ತವೆ. ಆದರೆ ಅದರಲ್ಲಿ ಆದಿ ಸನಾತನ ದೇವೀ-ದೇವತಾ ಧರ್ಮದ ಯಾವುದೇ ಪ್ರತಿನಿಧಿಯಿರುವುದಿಲ್ಲ. ಈ ಮಾತನ್ನು ತಿಳಿಸಿಕೊಡಬೇಕು. ಉಳಿದ ಯಾವ ಧರ್ಮಪಿತರು ಬರುತ್ತಾರೆ, ಅವರು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅಧರ್ಮಗಳ ವಿನಾಶ ಮಾಡಲು ಬರುವುದಿಲ್ಲ. ಸತ್ಯ ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶ ಸಂಗಮಯುಗದಲ್ಲಿಯೇ ನಡೆಯುತ್ತದೆ. ಇಳಿಯುವ ಕಲೆಯಲ್ಲಿ ಬಂದಾಗ ತಂದೆಯು ಬರುತ್ತಾರೆ. ಏರುವ ಕಲೆ ಒಮ್ಮೆಯೇ ಆಗುತ್ತದೆ. ಗುರುನಾನಕ್ ಸಹ ಹೇಳಿದ್ದಾರೆ ಎಲ್ಲರೂ ನಿಂದಕರಾಗಿದ್ದಾರೆ, ಎಲ್ಲವು ಸುಳ್ಳಾಗಿದೆ. ಯಾರು ಸಹ ಪವಿತ್ರವಾಗಿರುವುದಿಲ್ಲ. ಸಿಖ್ ಧರ್ಮದಲ್ಲಿ ಅಕಾಲಿ ಇರುತ್ತದೆ, ಅವರಮೇಲೆ ಕಪ್ಪು ಚಕ್ರವನ್ನು ತೋರಿಸುತ್ತಾರೆ. ಇದಾಗಿದೆ ಸ್ವದರ್ಶನ ಚಕ್ರ. ಇದು ಪವಿತ್ರತೆಯ ಸಂಕೇತವಾಗಿದೆ. ಕಂಕಣವನ್ನು ಕಟ್ಟುತ್ತಾರೆ-ಇವೆರಡು ಪವಿತ್ರತೆಯ ಚಿಹ್ನೆಗಳಾಗಿವೆ. ಆದರೆ ಜನರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ, ಪವಿತ್ರವಾಗಿಯು ಇರುವುದಿಲ್ಲ. ಜನಿವಾರವು ಪವಿತ್ರತೆಯ ಚಿಹ್ನೆಯಾಗಿದೆ. ಈ ಸಮಯದಲ್ಲಿ ಎಲ್ಲವನ್ನು ತೆಗೆದು ಹಾಕಿದ್ದಾರೆ, ಯಾರ ಬಳಿಯು ಇಲ್ಲ. ಬ್ರಾಹ್ಮಣ ಕುಲ ಸರ್ವಶ್ರೇಷ್ಠ ಕುಲವಾಗಿದೆ. ಇದನ್ನೇ ಅಲ್ಲಿ ಶಿಕೆ (ಜುಟ್ಟು) ಉಳ್ಳವರನ್ನಾಗಿ ತೋರಿಸುತ್ತಾರೆ, ಆದರೆ ಇದುವರೆಗೂ ಪಾವನರು ಯಾರು ಆಗಿಲ್ಲ. ಪತಿತ ಪಾವನ ಪರಮಾತ್ಮ ಒಬ್ಬರೇ ಬಂದು ಸರ್ವರನ್ನು ಪಾವನ ಮಾಡುತ್ತಾರೆ. ಬುದ್ಧ, ಕ್ರೈಸ್ತ ಮುಂತಾದವರು ಯಾರು ಸಹ ಪತಿತ ಪಾವನರಲ್ಲ. ಪ್ರಪಂಚದಲ್ಲಿ ಕಲಿಸುವಂತಹ ಹಾಗು ಓದಿಸುವಂತಹ ಅನೇಕ ಗುರುಗಳಿದ್ದಾರೆ ಉಳಿದ ಹಾಗೆ ಸರ್ವರ ಸದ್ಗತಿದಾತ ಪತಿತಪಾವನ ಒಬ್ಬರೇ ಆಗಿದ್ದಾರೆ. ಎಲ್ಲರನ್ನು ಪಾವನ ಮಾಡಿ ಜೊತೆಯಲ್ಲಿ ಕರೆದೊಯ್ಯಲು ನಾನು ಬಂದಿದ್ದೇನೆ. ಜ್ಞಾನಸಾಗರನ ಜೊತೆ ನೀವು ಜ್ಞಾನಗಂಗೆಯರು ಸಹಯೋಗಿಗಳಾಗಿದ್ದೀರಿ. ಗಂಗಾ ನದಿಯಲ್ಲೂ ದೇವಿಯ ಚಿತ್ರವನ್ನಿಟ್ಟಿದ್ದಾರೆ. ಈಗ ವಾಸ್ತವಿಕವಾಗಿ ನೀವು ಜ್ಞಾನ ಗಂಗೆಯರಾಗಿದ್ದೀರಿ. ಆದರೆ ಈಗ ನಿಮ್ಮನ್ನು ಪೂಜಿಸುವುದಿಲ್ಲ. ಏಕೆಂದರೆ ನೀವೀಗ ಯೋಗ್ಯರಾಗುತ್ತಿದ್ದೀರಿ. ಪೂಜಾರಿಗಳಿಂದ ಪೂಜ್ಯರಾಗುತ್ತಿದ್ದೀರಿ. ನಂತರ ನಿಮ್ಮ ಪೂಜಾರಿತನವು ಸಮಾಪ್ತಿಯಾಗಿ ಬಿಡುತ್ತದೆ. ಈ ರಹಸ್ಯವನ್ನು ತಿಳಿಸಿದರೂ ಸಹ ಯಾರ ಬುದ್ಧಿಯಲ್ಲಿಯು ಕುಳಿತುಕೊಳ್ಳುವುದಿಲ್ಲ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಶ್ರೀಮತದಂತೆ ನಡೆಯಬೇಕು. ದೇಹಾಭಿಮಾನವನ್ನು ಬಿಡುತ್ತಾ ಹೋಗಿ. ಎಲ್ಲಾ ಮಿತ್ರ ಸಂಬಂಧಿ ಮುಂತಾದವರೆಲ್ಲರೂ ಸಮಾಪ್ತಿ ಆಗುವವರಾಗಿದ್ದಾರೆ. ನಾವೆಲ್ಲರು ಮನೆಗೆ ಹೊರಟು ಹೋಗುತ್ತೇವೆ. ಆದರೆ ಪ್ರಪಂಚವಂತು ಇರುತ್ತದೆಯಲ್ಲವೆ. ತಂದೆ ತಿಳಿಸುತ್ತಾರೆ-ನಾನು ಹೊಸ ಸೃಷ್ಟಿಯ ರಚೈತನಾಗಿದ್ದೇನೆ, ಆದರೆ ನಾನು ಪತಿತ ಪ್ರಪಂಚದಲ್ಲಿ ಬರುತ್ತೇನೆ, ಆದ್ದರಿಂದ ನನಗೆ ಪತಿತ ಪಾವನನೆಂದು ಕರೆಯುತ್ತಾರೆಂದಾಗ ಅವಶ್ಯಕವಾಗಿ ಪತಿತ ಪ್ರಪಂಚವೇ ಇರಬೇಕು. ಪಾವನ ಪ್ರಪಂಚದಲ್ಲಿ ಪತಿತರು ಇರುವುದಿಲ್ಲ. ಪರಮಾತ್ಮ ಸ್ವರ್ಗ ಸ್ಥಾಪನೆ ಮಾಡಬೇಕಾಗುತ್ತದೆ, ಆದ್ದರಿಂದ ಅವರಿಗೆ ಸ್ವರ್ಗ ಸ್ಥಾಪಕ ತಂದೆಯೆಂದು ಹೇಳುತ್ತಾರೆ. ಕ್ರೈಸ್ತ ಸ್ವರ್ಗ ಸ್ಥಾಪನೆ ಮಾಡುವುದಿಲ್ಲ. ಬಾಕಿ ಕ್ರೈಸ್ತನ ಸಮಯದಲ್ಲಿ ಮೇಲಿಂದ ಬರುವ ಆತ್ಮಗಳು ಸಹ ಸತೋಪ್ರಧಾನವಾಗಿರುತ್ತವೆ, ಉಳಿದಂತೆ ಬೇರೆ ಯಾರು ಸಹ ಪತಿತರಿಂದ ಪಾವನ ಮಾಡುವುದಿಲ್ಲ. ಈಗ ನಾವು ಮಕ್ಕಳು ಪತಿತರಾಗುವ ಯಾವ ಕರ್ಮವನ್ನು ಮಾಡಬಾರದು? ದೇಹ-ಅಭಿಮಾನದಿಂದಲೇ ವಿಕರ್ಮವಾಗುತ್ತದೆ. ನೀವು ಎಲ್ಲಾ ಸಂಗ ತೊರೆದು ಒಬ್ಬ ತಂದೆಯ ಸಂಗವನ್ನು ಮಾಡುತ್ತೇವೆಂದು ಪ್ರತಿಜ್ಞೆ ಮಾಡುತ್ತೀರಿ. ಈಗ ತಾವು ತಮ್ಮ ಪ್ರತಿಜ್ಞೆ ಪೂರ್ಣ ಮಾಡಬೇಕು. ಇಲ್ಲವೆಂದರೆ ಶಿಕ್ಷೆಗೆ ಗುರಿಯಾಗುವಿರಿ. ಗ್ರಂಥದಲ್ಲಿಯು ಇದೆ-ದೇವತೆಗಳು ಏರುವ ಕಲೆಯಲ್ಲಿ ಬಂದಾಗ ಸರ್ವರು ಏರುವ ಕಲೆಯಲ್ಲಿ ಬರುತ್ತಾರೆ (ಚಡಿತಿ ಕಲಾ ತೇರೆ ಭಾನೆ ಸರ್ವ್ ಕಾ ಭಲ) ಈ ಶಬ್ದಗಳು ಅರ್ಥ ಗರ್ಭಿತವಾಗಿವೆ ಆದರೆ ಇದುವರೆಗೂ ಓದಿರುವದೆನ್ನೆಲ್ಲಾ ಮರೆಯಬೇಕಾಗುತ್ತದೆ. ತಂದೆಗೂ ಸಹ ಎಲ್ಲಾ ಮಕ್ಕಳ ನೆನಪು ಇರುವುದಿಲ್ಲ, ಏಕೆಂದರೆ ಶಿವ ತಂದೆಯ ನೆನಪು ಮಾಡಬೇಕಾಗುತ್ತದೆ, ಆದುದರಿಂದ ತಂದೆ ತಿಳಿಸುತ್ತಾರೆ ಖುಷಿಯಾಗಿರಿ, ಸಂಪನ್ನರಾಗಿರಿ, ಮರೆಯಬೇಡಿ, ನೆನಪು ಮಾಡಬೇಡಿ. ಆದರೆ ಸೇವಾಧಾರಿ ಮಕ್ಕಳನ್ನು ತಂದೆ ಅಗತ್ಯವಾಗಿ ನೆನಪು ಮಾಡುತ್ತಾರೆ-ಇಂತಹವರು ಉತ್ತಮ ಸಹಯೋಗಿಗಳಾಗಿದ್ದಾರೆ. ಶ್ರೀಮಂತರಂತೂ ಘೋರ ಅಂಧಕಾರದಲ್ಲಿ ಮುಳುಗಿದ್ದಾರೆ. ಮೃತ್ಯು ಮುಂದೆ ನಿಂತಿದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಭಗವಾನುವಾಚ-ನಾನು ರಾಜಯೋಗ ಕಲಿಸುತ್ತೇನೆ ಅಂದಾಗ ಅವಶ್ಯಕವಾಗಿ ಜ್ಞಾನದಿಂದ ಧನ ದೇವಿ ಆಗುತ್ತೀರಿ. ನಂಬರ್ ವಾರ್ ರಾಜಧಾನಿ ಸ್ಥಾಪನೆಯಾಗುತ್ತದೆ. ನಾವೆಲ್ಲರು ನಂಬರ್ ವಾರ್ ಓದುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ನಾನು ರಾಜಧಾನಿ ಸ್ಥಾಪನೆ ಮಾಡುತ್ತಿದ್ದೇನೆಂದು ತಂದೆ ತಿಳಿಸಿ ಕೊಡುತ್ತಿದ್ದಾರೆ. ಅನೇಕ ಧರ್ಮದ ವಿನಾಶ ಮಾಡಿಸುತ್ತೇನೆ. ಪರಮ ಸದ್ಗುರು ಒಬ್ಬರೇ ಆಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ಭಗವಂತನಿಗೆ ಈ ಗಾಯನವಿದೆ. ಶ್ರೇಷ್ಠಾತಿ ಶ್ರೇಷ್ಠ ಬ್ರಹ್ಮಾ-ವಿಷ್ಣು-ಶಂಕರಿನಿಗು ಭಗವಂತನೆಂದು ಹೇಳುವುದಿಲ್ಲ. ಹಾಗಾದರೆ ರಾಮ-ಕೃಷ್ಣನಿಗೆ ಭಗವಂತನೆಂದು ಹೇಗೆ ಹೇಳುತ್ತೀರಿ. ಅವರು ಜ್ಞಾನಸಾಗರ ಪತಿತ-ಪಾವನರಾಗಿದ್ದಾರೆ. ಭಕ್ತರು ಭಗವಂತನನ್ನು ನೆನಯುತ್ತಾರೆ, ಬ್ರಹ್ಮಾ, ವಿಷ್ಣು, ಶಂಕರನನ್ನು ನೆನಪು ಮಾಡುತ್ತಾರೇನು?ಇವರಂತೂ ಈಗ ವ್ಯಭಿಚಾರಿಗಳಾಗಿ ಬಿಟ್ಟಿದ್ದಾರೆ. ಎಷ್ಟೊಂದು ಧಾರಣೆ ಮಾಡುವಂತಹ ಎಷ್ಟೊಂದು ಶ್ರೇಷ್ಠ ಮಾತುಗಳಾಗಿವೆ. ಯಾರು ಮಾಡುತ್ತಾರೆ, ಅವರು ಪಡೆದುಕೊಳ್ಳುತ್ತಾರೆ. ನೀವು ಜ್ಞಾನ ಗಂಗೆಯರು ಆಗಿದ್ದೀರಿ. ನೀವು ಗಂಗಾ ತಟವಾಗಿದ್ದೀರಿ, ಸಾಗರವಂತು ಎಲ್ಲಿಗೂ ಹೋಗುವುದಿಲ್ಲ. ಆದರೆ ಅದು ಜಡ ಸಾಗರ ಇದು ಚೈತನ್ಯ. ಆ ಸಾಗರದಲ್ಲಿ ಒಂದು ಬಿರುಗಾಳಿಯ ಅಲೆ ಬಂದರೆ ತುಂಬಾ ನಷ್ಟವಾಗಿ ಬಿಡುತ್ತದೆ. ವಿನಾಶದ ಸಮಯದಲ್ಲಿ ತುಂಬಾ ಜೋರಾಗಿ ಬಿರುಗಾಳಿ ಬರುತ್ತದೆ. ಎಲ್ಲಾ ಖಂಡ-ದ್ವೀಪ ಮುಂತಾದವೆಲ್ಲವು ಸಮಾಪ್ತಿಯಾಗಿ ಬಿಡುತ್ತವೆ. ತಡ ಆಗುವುದಿಲ್ಲ. ಪ್ರಾಕೃತಿಕ ಪ್ರಕೋಪಗಳಿಗೆ ಈಶ್ವರಿನ ಆಟ ಎಂದು ಹೇಳಿ ಬಿಡುತ್ತಾರೆ. ಯಾವಾಗ ಶಂಕರನಿಂದ ವಿನಾಶವೆಂದು ಹೇಳುತ್ತಾರೆಂದಾಗ ಈಶ್ವರನ ಲೀಲೆ ಆಯಿತಲ್ಲವೇ. ಆದರೆ ತಂದೆ ತಿಳಿಸುತ್ತಾರೆ ನಾನು ಈ ರೀತಿಯಾಗಿ ಆದೇಶವನ್ನು ಕೊಡುವುದಿಲ್ಲ. ಇದೆಲ್ಲವು ನಾಟಕದಲ್ಲಿ ನಿಗಧಿಯಾಗಿದೆ. ಚಂಡ ಮಾರುತ, ಪ್ರಾಕೃತಿಕ ಪ್ರಕೋಪ ಮುಂತಾದವುಗಳೆಲ್ಲವು ತಮ್ಮ ಕೆಲಸವನ್ನು ಮಾಡುತ್ತವೆ. ಕಲ್ಪ-ಕಲ್ಪ ಈ ಪ್ರಕೋಪಗಳು ಬಂದೇ ಬರುತ್ತವೆ ಹಾಗೂ ಎಲ್ಲಾ ಖಂಡಗಳು ನಾಶವಾಗುತ್ತವೆ. ಆಗ ಭಾರತ ಒಂದೇ ಉಳಿದುಕೊಳ್ಳುತ್ತದೆ. ಅದಕ್ಕಾಗಿ ತಯಾರಿ ನಡೆಯುತ್ತದೆ. ರಿಹರ್ಸಲ್ ಸಹ ಆಗುತ್ತಿರುತ್ತದೆ. ಇದು ಸ್ವಾಭಾವಿಕ ಆಟವಾಗಿ ಮಾಡಲ್ಪಟ್ಟಿದೆ.

ನೀವು ಶಿವಶಕ್ತಿಯರೇ ಎಲ್ಲಿ ಬೇಕಾದರು ಹೋಗಿ ಈ ರೀತಿ ತಿಳಿಸಬಹುದು, ತಾವೆಲ್ಲರು ಶಾಂತಿ ಸ್ಥಾಪನೆಯಾಗಲಿಯೆಂದು ಬಯಸುತ್ತೀರಲ್ಲವೆ, ಆದರೆ ಶಾಂತಿ ಎಲ್ಲಿರುತ್ತದೆ ಎಂದು ನೀವು ತಿಳಿದಿದ್ದೀರಾ? ಸುಖ ಎಲ್ಲಿರುತ್ತದೆ? ದುಃಖ ಎಲ್ಲಿರುತ್ತದೆ? ಈ ಎಲ್ಲವು ತಿಳಿಯುವಂತಹ ಮಾತುಗಳಾಗಿವೆ. ಈಗ ದುಃಖಧಾಮವಿದೆ. ಇದೇ ಭಾರತ ಸುಖಧಾಮವಾಗಿತ್ತು. ಆದಿ ಸನಾತನ ದೇವೀ-ದೇವತೆಗಳ ರಾಜ್ಯಯಿತ್ತು. ಕಲಿಯುಗ ದುಃಖಧಾಮವಾಗಿದೆ. ಇದರ ವಿನಾಶ ಅವಶ್ಯಕವಾಗಿ ಆಗುತ್ತದೆ. ಮೊದಲು ಅಂತ್ಯವಾಗಿ ಮತ್ತೆ ಆದಿಯಾಗುತ್ತದೆ. ಮಧ್ಯದಲ್ಲಿ ಅನೇಕ ಧರ್ಮಗಳಿವೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು. ಇದು ನಾಟಕದ ಚಕ್ರವಾಗಿದೆ. ಇದರಲ್ಲಿ ನಾಲ್ಕು ಧರ್ಮಗಳಿವೆ. ಒಂದು ಧರ್ಮವೆಂಬ ಕಾಲು ಮಾಯವಾಗಿದೆ. ದೇವೀ-ದೇವತಾ ಧರ್ಮ ಸ್ಥಾಪನೆ ಮಾಡುವವರು ಯಾರಾಗಿದ್ದಾರೆ? ಇದನ್ನು ಹೇಳಿ? ಪರಮಪಿತ ಪರಮಾತ್ಮ ಬ್ರಹ್ಮನ ಮುಖಾಂತರ ಸ್ಥಾಪನೆ ಮಾಡಿಸುತ್ತಾರೆ. ವಾಸ್ತವಿಕವಾಗಿ ನೀವು ಸಹ ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ. ಶಿವನಿಗೂ ಸಂತಾನರಾಗಿದ್ದೀರಿ. ಬ್ರಹ್ಮನ ಮಕ್ಕಳಾಗಿರುವ ಕಾರಣ ಪರಸ್ಪರ ಸಹೋದರ ಸಹೋದರಿಯಾಗಿದ್ದೀರಿ. ನಾವು ಅವರಿಗೆ ಆಗಿದ್ದೇವೆಂದು ತಿಳಿದುಕೊಂಡಿದ್ದೀರಿ. ಪರಮಪಿತ ಪರಮಾತ್ಮ ಮೊದಲು ಬ್ರಾಹ್ಮಣ ಧರ್ಮವನ್ನು ರಚಿಸುತ್ತಾರೆ. ಬ್ರಾಹ್ಮಣ ಧರ್ಮ ಎಲ್ಲಕ್ಕಿಂತಲು ಶ್ರೇಷ್ಠವಾಗಿದೆ, ಹಾಗು ಉಳಿದ ಧರ್ಮಗಳು ನಂಬರ್ ವಾರ್ ನಂತರ ಬರುತ್ತವೆ. ಕೊನೆಗೂ ಅಗತ್ಯವಾಗಿ ನಿಮ್ಮ ಪ್ರತ್ಯಕ್ಷತೆಯಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನದ ಧಾರಣೆಗಾಗಿ ಎಷ್ಟು ಸಾಧ್ಯವೊ ಅಷ್ಟು ದೇಹೀ-ಅಭಿಮಾನಿಯಾಗಿರಬೇಕು. ಅಶರೀರಿ ಆಗುವ ಅಭ್ಯಾಸವನ್ನು ರಾತ್ರಿ ಎಚ್ಚರವಾಗಿದ್ದು ಮಾಡಬೇಕು.

2. ಹೇಗಾದರೂ ಮಾಡಿ ಪ್ರತಿನಿತ್ಯ ಮುರಳಿಯನ್ನು ಕೇಳಬೇಕು ಅಥವಾ ಓದಬೇಕು. ಒಂದುದಿನವು ತಪ್ಪಿಸಿಕೊಳ್ಳಬಾರದು. ಎಲ್ಲಾ ಸಂಗವನ್ನು ಬಿಟ್ಟು ಒಬ್ಬ ತಂದೆಯ ಸಂಗವನ್ನು ಮಾಡುವ ಪ್ರತಿಜ್ಞೆ ಮಾಡಬೇಕು.

ವರದಾನ:-

ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ – ನಾವು ತಂದೆಯ ನಯನಗಳ ತಾರೆಗಳಾಗಿದ್ದೇವೆ, ನಯನಗಳಲ್ಲಿ ನಕ್ಷತ್ರ (ತಾರೆ) ಅಂದರೆ ಬಿಂದುವೇ ಸಮಾವೇಶವಾಗಲು ಸಾಧ್ಯ. ಕಣ್ಣುಗಳಲ್ಲಿ ನೋಡುವ ವಿಶೇಷತೆಯೂ ಬಿಂದುವಿನದಾಗಿದೆ ಅಂದಮೇಲೆ ಬಿಂದು ರೂಪದಲ್ಲಿರುವುದೇ ಹಾರುವ ಕಲೆಯಲ್ಲಿ ಹಾರುವ ಸಾಧನವಾಗಿದೆ. ಪ್ರತಿಯೊಂದು ಕರ್ಮವನ್ನು ಬಿಂದುವಾಗಿದ್ದು ಮಾಡುತ್ತೀರೆಂದರೆ ಲೈಟ್ ಆಗಿರುತ್ತೀರಿ. ಯಾವುದೇ ಹೊರೆಯನ್ನು ಹೊತ್ತುಕೊಳ್ಳುವ ಹವ್ಯಾಸಿ ಆಗಬಾರದು. ನನ್ನದೆನ್ನುವುದಕ್ಕೆ ಬದಲು ನಿನ್ನದು ಎಂದು ಹೇಳುತ್ತೀರೆಂದರೆ ಡಬಲ್ ಲೈಟ್ ಆಗಿಬಿಡುತ್ತೀರಿ. ಸ್ವ-ಉನ್ನತಿ ಅಥವ ವಿಶ್ವದ ಸೇವೆಯ ಕಾರ್ಯದಲ್ಲಿಯೂ ಹೊರೆಯ ಅನುಭವವಾಗುವುದಿಲ್ಲ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ದೇಹದ ಸ್ಮೃತಿಯಿಂದ ಈ ರೀತಿಯಲ್ಲಿ ಕಳೆದುಹೋಗಬೇಕು, ಅದರಿಂದ ದೇಹದ ಪರಿವೆಯ, ಹಗಲು-ರಾತ್ರಿ, ಹಸಿವು ಹಾಗೂ ಬಾಯಾರಿಕೆಯ, ಸುಖದ, ವಿಶ್ರಾಂತಿಯ ಸಾಧನಗಳ, ಯಾವುದೇ ಮಾತಿನ ಆಧಾರದ ಮೇಲೆ ಜೀವನವಿರಬಾರದು. ಹೀಗಿದ್ದಾಗ ಲವಲೀನ ಸ್ಥಿತಿಯೆಂದು ಹೇಳಲಾಗುತ್ತದೆ. ಹೇಗೆ ಶಮೆಯು ಜ್ಯೋತಿ ಸ್ವರೂಪವಾಗಿದೆ, ಲೈಟ್ ಮೈಟ್ ರೂಪವಾಗಿದೆಯೋ ಹಾಗೆಯೇ ಶಮೆಯ ಸಮಾನ ತಾವೂ ಸಹ ಲೈಟ್ ಮೈಟ್ ರೂಪವಾಗಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top