06 December 2021 KANNADA Murli Today | Brahma Kumaris

Read and Listen today’s Gyan Murli in Kannada

December 5, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ದಾನವಾಗಿ ಕೊಟ್ಟಿರುವ ವಸ್ತುವನ್ನು ಎಂದೂ ಹಿಂತೆಗೆದುಕೊಳ್ಳಬಾರದು, ಹಿಂತೆಗೆದುಕೊಂಡರೆ ಆಶೀರ್ವಾದಕ್ಕೆ ಬದಲು ಶಾಪ ಸಿಗುವುದು”

ಪ್ರಶ್ನೆ:: -

ಯಾವ ನಿಶ್ಚಯವು ಪಕ್ಕಾ ಆಗಿದ್ದರೆ ಯಾವುದೇ ವಿರೋಧವನ್ನು ಎದುರಿಸಬಹುದು?

ಉತ್ತರ:-

ನಮಗೆ ಭಗವಂತ ಸಿಕ್ಕಿದ್ದಾರೆ ನಾವು ಅವರನ್ನು ನೆನಪು ಮಾಡಿ ವಿಕರ್ಮ ವಿನಾಶ ಮಾಡಿಕೊಳ್ಳಬೇಕಾಗಿದೆ. ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ ಎಂಬುದು ಒಂದುವೇಳೆ ನಿಶ್ಚಯವಾಗಿ ಬಿಟ್ಟರೆ ಎಲ್ಲಾ ವಿರೋಧಗಳು ಸಮಾಪ್ತಿಯಾಗುತ್ತವೆ. ಎದುರಿಸುವ ಶಕ್ತಿ ಬಂದು ಬಿಡುತ್ತದೆ. ನಿಶ್ಚಯದ ಕೊರತೆಯಿದ್ದರೆ ತಬ್ಬಿಬ್ಬಾಗುತ್ತಾರೆ ಮತ್ತೆ ಜ್ಞಾನವನ್ನು ಬಿಟ್ಟು ಭಕ್ತಿಗೆ ಹೊರಟು ಹೋಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದ ನಾವು ಜಗತ್ತನ್ನೇ ಪಡೆದೆವು………

ಓಂ ಶಾಂತಿ. ಈ ಗೀತೆಯನ್ನು ಯಾರು ಕೇಳುತ್ತಾರೆ? ಮಕ್ಕಳೇ ಕೇಳುತ್ತಾರೆ, ಅವರೇ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಪ್ರಜೆಗಳೂ ಸಹ ಯಾರು ಕೇಳುವರೋ ಅವರೂ ವಿಶ್ವದ ಮಾಲೀಕರಾಗುತ್ತಾರೆ. ಹೇಗೆ ಭಾರತವಾಸಿಗಳೆಲ್ಲರೂ ನಮ್ಮ ಭಾರತ ಎಂದು ಹೇಳುತ್ತಾರೆ, ಹಾಗೆಯೇ ಸತ್ಯಯುಗದಲ್ಲಿಯೂ ಸಹ ಯಥಾರಾಜ-ರಾಣಿ ತಥಾ ಪ್ರಜಾ ಇರುತ್ತಾರೆ. ನಾವು ವಿಶ್ವದ ಮಾಲೀಕರೆಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಹೇಗೆ ಯುರೋಪಿಯನ್ನರು ಬಂದರು, ಅವರೂ ಸಹ ನಾವು ಹಿಂದೂಸ್ತಾನದ ಮಾಲೀಕರೆಂದು ಹೇಳಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾವು ಹಿಂದೂಸ್ತಾನಿಗಳು ಹಿಂದೂಸ್ತಾನದ ಮಾಲೀಕರೆಂದು ಹೇಳುತ್ತಿರಲಿಲ್ಲ. ಅವರ ಗುಲಾಮರಾಗಿದೆವು. ರಾಜ್ಯವೆಲ್ಲವೂ ಯುರೋಪಿಯನ್ನರ ಕೈಯಲ್ಲಿತ್ತು, ಮತ್ತೆ ನಮ್ಮ ರಾಜ್ಯಭಾಗ್ಯವನ್ನು ರಾವಣನು ಕಸಿದುಕೊಂಡನು. ಈಗ ನಮಗೆ ನಮ್ಮ ರಾಜ್ಯವು ಬೇಕು, ಇದು ಪರರಾಜ್ಯವಾಗಿದೆ. ದೂರದೇಶದಲ್ಲಿ ಇರುವವರು ಪರದೇಶದಲ್ಲಿ ಬಂದರೆಂದು ಗಾಯನವಿದೆ. ನೀವೀಗ ತಮ್ಮ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಹೊಡೆದಾಡುವುದಿಲ್ಲ, ಎಲ್ಲವನ್ನು ತಮಗಾಗಿಯೇ ಮಾಡುತ್ತೀರಿ. ಆ ಸೈನ್ಯವಂತೂ ತಮ್ಮ ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿಗಾಗಿ ಹೊಡೆದಾಡುತ್ತಾರೆ. ಗಣ್ಯ ವ್ಯಕ್ತಿಗಳಂತೂ ಅವರೇ ಆಗುತ್ತಾರಲ್ಲವೆ. ಅವರಿಗೇ ಬಹಳ ಒಳ್ಳೆಯ ನಶೆಯಿರುತ್ತದೆ. ಈಗಲೂ ಸಹ ನಮ್ಮ ಭಾರತವೆಂದು ಹೇಳುತ್ತಾರಲ್ಲವೆ ಆದರೆ ಇದೇನೂ ನಮ್ಮ ರಾಜ್ಯವಲ್ಲ, ರಾವಣನ ರಾಜ್ಯವಾಗಿದೆ. ಇದರಲ್ಲಿ ನಾವು ಜೀವಿಸುತ್ತಿದ್ದೇವೆಂದು ಭಾರತವಾಸಿಗಳಿಗೆ ಗೊತ್ತಿಲ್ಲ. ರಾಮರಾಜ್ಯದಲ್ಲಿರುವಾಗ ಇದು ಪರರಾಜ್ಯವೆಂದು ಹೇಳುವುದಿಲ್ಲ, ಈಗ ಭಾರತದಲ್ಲಿ ಸಂಪೂರ್ಣ ರಾವಣ ರಾಜ್ಯವಿದೆ. ರಾಮನ ರಾಜ್ಯವಿತ್ತು, ದೇವತೆಗಳ ರಾಜ್ಯವಿತ್ತು, ಈಗಿಲ್ಲ. ನೀವು ತಿಳಿದುಕೊಂಡಿದ್ದೀರಿ – 5000 ವರ್ಷಗಳ ನಂತರ ನಾವು ರಾಜ್ಯವನ್ನು ಪಡೆಯುತ್ತಿದ್ದೇವೆ. ಯಾರಿಂದ? ಪರಮಾತ್ಮ ತಂದೆಯಿಂದ. ರಾಮ ಎಂಬ ಶಬ್ಧವನ್ನು ಕೇಳಿ ಮನುಷ್ಯರು ತಬ್ಬಿಬ್ಬಾಗುತ್ತಾರೆ ಆದ್ದರಿಂದ ಬೇಹದ್ದಿನ ತಂದೆಯೆಂದು ಹೇಳುವುದು ಸರಿಯಿದೆ. ತಂದೆ ಶಬ್ಧವು ಬಹಳ ಮಧುರವಾಗಿದೆ. ತಂದೆಯೇ ಆಸ್ತಿಯನ್ನು ನೆನಪಿಗೆ ತರಿಸುತ್ತಾರೆ. ಒಬ್ಬ ತಂದೆಯ ವಿನಃ ಮತ್ತೆಲ್ಲವನ್ನೂ ಮರೆಯಬೇಕಾಗಿದೆ. ನಾವಾತ್ಮರು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ, ತಂದೆಯು ಬಂದು ನಿಮ್ಮನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ನಾವಾತ್ಮರಾಗಿದ್ದೇವೆ, ಆತ್ಮವು ಎಷ್ಟು ಸೂಕ್ಷ್ಮವಾಗಿದೆ ಅದರಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ, ಇದನ್ನು ಮಂಧ ಬುದ್ಧಿಯ ಮನುಷ್ಯರು ಅರಿತುಕೊಳ್ಳುವುದಿಲ್ಲ ಮತ್ತು ತಿಳಿಸುವುದೂ ಇಲ್ಲ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇದು ಎಷ್ಟು ಸಹಜವಾಗಿದೆ! ಆದರೆ ಮಾಯೆಯು ಮರೆಸಿಬಿಡುತ್ತದೆ ಆದ್ದರಿಂದ ಮಕ್ಕಳು ಪರಿಶ್ರಮ ಪಡಬೇಕಾಗುತ್ತದೆ. ಇದರಲ್ಲಿ ಯಾವುದೇ ಆಯುಧಗಳು ಮದ್ದು ಗುಂಡುಗಳ ಮಾತಿಲ್ಲ. ಯಾವುದೇ ವ್ಯಾಯಾಮವನ್ನು ಕಲಿಯಬೇಕಾಗಿಲ್ಲ. ಶಾಸ್ತ್ರ ಇತ್ಯಾದಿಗಳನ್ನು ಓದುವಂತಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ಹೇಗೆ ನಾಟಕದಲ್ಲಿ ಪಾತ್ರಧಾರಿಯು ಪಾತ್ರವನ್ನಭಿನಯಿಸಿ ನಂತರ ತಮ್ಮ ವೇಷ ಭೂಷಣಗಳನ್ನು ಬದಲಾಯಿಸಿ ತಮ್ಮ ಮನೆಗೆ ಹೋಗುತ್ತಾರೆ ಹಾಗೆಯೇ ನಿಮ್ಮ ಬುದ್ಧಿಯಲ್ಲಿಯೂ ಇದೆ – ಈಗ ನಾಟಕವು ಮುಕ್ತಾಯವಾಗಲಿದೆ. ಈಗ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ನಾವು ಪ್ರತೀ 5000 ವರ್ಷಗಳ ನಂತರ ಪಾತ್ರವನ್ನಭಿನಯಿಸುತ್ತೇವೆ. ಅರ್ಧಕಲ್ಪ ರಾಜ್ಯಭಾರ ಮಾಡುತ್ತೇವೆ, ಅರ್ಧಕಲ್ಪ ಗುಲಾಮರಾಗಿ ಬಿಡುತ್ತೇವೆ. ಈಗ ಮಕ್ಕಳಿಗೆ ಹೆಚ್ಚು ಕಷ್ಟ ಕೊಡುವುದಿಲ್ಲ. ಕೇವಲ ಬುದ್ಧಿಯಲ್ಲಿ ನೆನಪಿರಬೇಕಾಗಿದೆ. ಪುರುಷಾರ್ಥ ಮಾಡಿ ಸಾಧ್ಯವಾದಷ್ಟು ಇದನ್ನು ಮರೆಯಬಾರದು. ಈಗ ನಾಟಕವು ಪೂರ್ಣವಾಗುತ್ತಿದೆ. ಇನ್ನು ಸ್ವಲ್ಪವೇ ಸಮಯವಿದೆ, ನಾವು ಹೋಗಬೇಕಾಗಿದೆ. ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳುತ್ತಾ-ಮಾತನಾಡಿಕೊಳ್ಳುತ್ತಾ ನೀವು ಪಾವನರಾಗಿ ಹಿಂತಿರುಗಿ ಹೋಗಿ ಬಿಡುತ್ತೀರಿ. ಪ್ರತಿಯೊಬ್ಬ ಮಗು ಇದನ್ನು ಅರಿತುಕೊಳ್ಳಬಹುದಾಗಿದೆ – ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಯಾರಾದರೂ ಚಾರ್ಟ್ ರೆಯಲಿ, ಬರೆಯದಿರಲಿ ಆದರೆ ಬುದ್ಧಿಯಲ್ಲಂತೂ ಇರುತ್ತದೆಯಲ್ಲವೆ – ಇಡೀ ದಿನದಲ್ಲಿ ನಾನು ಏನೇನು ಮಾಡಿದೆನು? ಹೇಗೆ ವ್ಯಾಪಾರಿಗಳು ರಾತ್ರಿಯಲ್ಲಿ ತಮ್ಮ ಲಾಭ-ನಷ್ಟಗಳನ್ನು ನೋಡುತ್ತಾರೆ, ಇದೂ ಸಹ ವ್ಯಾಪಾರವಾಗಿದೆ. ರಾತ್ರಿ ಮಲಗುವ ಸಮಯದಲ್ಲಿ ಪರಿಶೀಲನೆ ಮಾಡಿಕೊಳ್ಳಿ – ಇಡೀ ದಿನದಲ್ಲಿ ತಂದೆಯನ್ನು ಎಷ್ಟು ನೆನಪು ಮಾಡಿದೆನು, ಎಷ್ಟು ಜನರಿಗೆ ತಂದೆಯ ಪರಿಚಯ ಕೊಟ್ಟೆನು? ಯಾರು ಬುದ್ಧಿವಂತರಾಗಿರುವರೋ ಅವರ ವ್ಯಾಪಾರವು ಚೆನ್ನಾಗಿ ನಡೆಯುತ್ತದೆ. ಮಂಧಬುದ್ಧಿಯವರಾಗಿದ್ದರೆ ವ್ಯಾಪಾರವೂ ಹಾಗೆಯೇ ನಡೆಯುತ್ತದೆ. ಇಲ್ಲಂತೂ ತಮ್ಮ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಕೇವಲ ತಂದೆಯು ತಿಳಿಸುವುದೇನೆಂದರೆ – ನನ್ನನ್ನು ನೆನಪು ಮಾಡಿ ಹಾಗೂ ಚಕ್ರವನ್ನು ನೆನಪು ಮಾಡಿದರೆ ನೀವು ಚಕ್ರವರ್ತಿ ರಾಜರಾಗುತ್ತೀರಿ. ಅತಿಯಾದ ಆಸೆಯೂ ಇರಬಾರದು, ಹಳ್ಳಿಗಳಲ್ಲಿ ಇರುವವರಿಗೆ ಆಸೆಗಳು ಕಡಿಮೆಯಿರುತ್ತದೆ, ಸಾಹುಕಾರರಿಗೆ ಬಹಳ ಇರುತ್ತದೆ. ಬಡವರು ತಮ್ಮ ಬಡತನದಲ್ಲಿಯೇ ಖುಷಿಯಾಗಿರುತ್ತಾರೆ. ಒಣ ರೊಟ್ಟಿಯನ್ನು ತಿನ್ನುವುದೇ ಅಭ್ಯಾಸವಾಗಿ ಬಿಟ್ಟಿರುತ್ತದೆ. ಸಾಹುಕಾರರಲ್ಲಿ ಬಹಳ ಇಚ್ಛೆಗಳಿರುತ್ತವೆ, ತಂದೆ-ತಾಯಿಗೂ ಸಹ ತೊಂದರೆ ಕೊಡುತ್ತಾರೆ. ಬ್ರಹ್ಮಾ ತಂದೆಯು ಅನುಭವಿಯಾಗಿದ್ದಾರೆ. ಬಡವರ ಮೇಲೆ ಅನುಕಂಪವೂ ಬರುತ್ತದೆ. ಬಡವರು ನೋಡುತ್ತಾರೆ- ಇಷ್ಟು ದೊಡ್ಡ ವ್ಯಕ್ತಿಯು ಜ್ಞಾನ ಕೇಳುತ್ತಾರೆಂದರೆ ನಾವೂ ಕೇಳೋಣ ಎಂದು ತಿಳಿಯುತ್ತಾರೆ, ತಂದೆಯು ಬಹಳ ಚಿತ್ರಗಳನ್ನು ಮಾಡಿಸಿದ್ದಾರೆ. ಸರ್ವೀಸ್ ಮಾಡುತ್ತೇವೆಂದು ಕೆಲವರು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮೊದಲು ನೀವು ಬುದ್ಧಿವಂತರಾಗಿ ನಂತರ ಸರ್ವೀಸ್ ಮಾಡಿರಿ ಏಕೆಂದರೆ ಇತ್ತೀಚೆಗೆ ಭಕ್ತಿಯ ಪ್ರಭಾವ ಹೆಚ್ಚಾಗಿದೆ. ಒಂದು ಕಡೆ ತಿಳಿಸಿದರೆ ಇನ್ನೊಂದು ಕಡೆ ಗುರುಗಳ ಉಪದೇಶ ನಡೆಯುತ್ತದೆ. ಅವರು ಭಯ ಪಡಿಸುತ್ತಾರೆ – ಒಂದುವೇಳೆ ನೀವು ಭಕ್ತಿ ಮಾಡದಿದ್ದರೆ ನಿಮಗೆ ಫಲ ಹೇಗೆ ಸಿಗುವುದು! ಭಕ್ತಿಯಿಂದ ಭಗವಂತ ಸಿಗುತ್ತಾರೆ. ಎಲ್ಲಿಯವರೆಗೆ ಈ ಜ್ಞಾನದಲ್ಲಿ ಪಕ್ಕಾ ಆಗುವುದಿಲ್ಲವೋ, ನಮಗೆ ಭಗವಂತ ಸಿಕ್ಕಿದ್ದಾರೆ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆಯೆಂದು ಅವರು ನಮಗೆ ತಿಳಿಸುತ್ತಿದ್ದಾರೆಂದು ಪೂರ್ಣ ನಿಶ್ಚಯವಾಗುವುದಿಲ್ಲವೊ ಅಲ್ಲಿಯವರೆಗೆ ಯಾವುದೇ ವಿರೋಧವನ್ನು ಎದುರಿಸಲು ಸಾಧ್ಯವಿಲ್ಲ. ನಿಮ್ಮೊಂದಿಗೆ ವಿರೋಧವಿದೆ, ನೀವು ಒಂದು ಮಾತನ್ನು ಹೇಳುತ್ತೀರೆಂದರೆ ಅವರು ಇನ್ನೊಂದು ಮಾತನ್ನು ಹೇಳುತ್ತಾರೆ. ಪ್ರಪಂಚದಲ್ಲಿ ಅನೇಕ ಮಠ ಪಂಥಗಳಿವೆ, ಅಲ್ಲಿ ಮನುಷ್ಯರು ಹೋಗಿ ಒಂದಲ್ಲ ಒಂದು ಕೇಳಿಕೊಂಡು ಬರುತ್ತಾರೆ. ಭಗವದ್ಗೀತೆಗೂ ಭಿನ್ನ-ಭಿನ್ನ ಅರ್ಥಗಳನ್ನು ತಿಳಿಸುತ್ತಾರೆ ಆದ್ದರಿಂದ ಮನುಷ್ಯರು ಸಿಕ್ಕಿಕೊಳ್ಳುತ್ತಾರೆ. ಸನ್ಯಾಸಿಗಳು ಎಂದೂ ಸಹ ಗೃಹಸ್ಥಿಗಳಿಗೆ ವಿಕಾರದಲ್ಲಿ ಹೋಗಬೇಡಿ ಎಂದು ಹೇಳುವುದಿಲ್ಲ. ಒಂದುವೇಳೆ ಅವರು ನಿರ್ವಿಕಾರಿಗಳಾಗಿರಿ ಎಂದು ಹೇಳಿದರೂ ಸಹ ಏನಾಗುವುದು? ಗುರಿ-ಧ್ಯೇಯ ಯಾವುದೂ ಇಲ್ಲ. ಪ್ರಪಂಚದಲ್ಲಿ ಉಲ್ಟಾ ಮಾರ್ಗಗಳನ್ನು ತಿಳಿಸುವವರು ಅನೇಕರಿದ್ದಾರೆ. ಸತ್ಯ ಮಾರ್ಗವನ್ನು ತಿಳಿಸುವವರು ಕೆಲವರೇ ಇದ್ದಾರೆ. ಅವರಮೇಲೂ ಸಹ ಮಾಯೆಯ ಪ್ರಭಾವ ಬೀರುತ್ತಾ ಇರುತ್ತದೆ. ಪವಿತ್ರರಾಗಬೇಕೆಂದು ಮನಸ್ಸು ಹೇಳುತ್ತದೆ ಆದರೆ ಮಾಯೆಯು ಬುದ್ಧಿಯನ್ನು ತಿರುಗಿಸುತ್ತದೆ. ಬಹಳ ಕೆಟ್ಟ ವಿಚಾರಗಳನ್ನು ತರುತ್ತಾ ಇರುತ್ತದೆ. ಮಾಯೆಯ ಯುದ್ಧವು ಬಹಳ ಇದೆ. ನಡೆಯುತ್ತಾ-ನಡೆಯುತ್ತಾ ಬಹಳ ಬಿರುಗಾಳಿಗಳು ಬರುತ್ತವೆ. ಒಂದುವೇಳೆ ಯಾವುದೇ ವಿಕಾರದ ಭೂತವು ಒಳಗಡೆ ಇದ್ದರೆ ಅದು ಮನಸ್ಸನ್ನು ತಿನ್ನುತ್ತಾ ಇರುವುದು. ಕ್ರೋಧದ ದಾನ ಕೊಡಿ ಎಂದು ಅನ್ಯರಿಗೆ ಹೇಳಿ, ತಾನು ಕ್ರೋಧ ಮಾಡುತ್ತಿದ್ದರೆ ಅವರು ನೇರವಾಗಿ ಹೇಳಿಬಿಡುತ್ತಾರೆ- ನೀವೇ ಕ್ರೋಧ ಮಾಡಿಕೊಳ್ಳುತ್ತೀರಿ ಮತ್ತೆ ನಮಗೆ ಹೇಗೆ ಹೇಳುತ್ತೀರಿ? ಆದ್ದರಿಂದ ಕ್ರೋಧವನ್ನು ಬಿಡಲೇಬೇಕಾಗುವುದು. ಕ್ರೋಧವನ್ನು ಮುಚ್ಚಿಟ್ಟು ಕಾರ್ಯ ಮಾಡಲಾಗುವುದಿಲ್ಲ. ಕ್ರೋಧದಲ್ಲಿ ಬಹಳ ಶಬ್ಧವಿರುತ್ತದೆ, ಪರಸ್ಪರ ಹೊಡೆದಾಡುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಗ್ಲಾನಿ ಮಾಡುತ್ತಾರೆ. ತಂದೆಯೂ ನೋಡುತ್ತಾರೆ – ಕ್ರೋಧದ ಭೂತವು ಬಿಟ್ಟು ಹೋಗುವುದೇ ಇಲ್ಲ. ಕೆಲಕೆಲವರು ಇಲ್ಲಿ ತಂದೆಯ ಸನ್ಮುಖದಲ್ಲಿದ್ದರೂ ಸಹ ಕ್ರೋಧ ಮಾಡುತ್ತಾರೆ. ಅನೇಕರಲ್ಲಿ ಕ್ರೋಧದ ಭೂತವು ಬಂದು ಬಿಡುತ್ತದೆ. ಇದು ಬಹಳ ಕೆಟ್ಟದ್ದಾಗಿದೆ. ತೊಂದರೆ ಕೊಡುತ್ತಾರೆ. ತಂದೆಯು ಮತ್ತೆ ಪ್ರೀತಿಯಿಂದ ತಿಳಿಸುತ್ತಾರೆ- ಒಂದುವೇಳೆ ಹೆಸರನ್ನು ಕೆಡಿಸುತ್ತೀರೆಂದರೆ ಮತ್ತೆ ಪದವಿ ಭ್ರಷ್ಟರಾಗುತ್ತಾರೆ. ನೀವು ಪಂಚ ವಿಕಾರಗಳನ್ನು ತಂದೆಗೆ ದಾನವಾಗಿ ಕೊಟ್ಟಿದ್ದೀರಿ ಅಂದಮೇಲೆ ಮತ್ತೇಕೆ ಹಿಂತೆಗೆದುಕೊಳ್ಳುತ್ತೀರಿ ಎಂಬುದನ್ನಂತೂ ತಿಳಿಸಬೇಕು. ಒಂದುವೇಳೆ ಮತ್ತೆ ಕ್ರೋಧ ಮಾಡಿಕೊಂಡರೆ ಗ್ರಹಣವು ಬಿಟ್ಟು ಹೋಗುವುದಿಲ್ಲ, ಅದು ವೃದ್ಧಿಯಾಗುತ್ತಿರುತ್ತದೆ. ತಂದೆಯ ಆಶೀರ್ವಾದದ ಬದಲು ಶಾಪವು ಸಿಗುತ್ತದೆ ಏಕೆಂದರೆ ತಂದೆಯ ಜೊತೆ ಧರ್ಮರಾಜನೂ ಇದ್ದಾರೆ, ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಕ್ರೋಧ ಮಾಡುವುದೂ ಸಹ ಪಾಪವಾಗಿದೆ, ಯಾರಲ್ಲಿ ಪಂಚ ವಿಕಾರಗಳಿದೆಯೋ ಅವರಿಗೆ ಪಾಪಾತ್ಮರೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ, ಅಲ್ಲಿ ಯಾವುದೇ ಪಾಪ ಮಾಡುವುದಿಲ್ಲ. ಈಗ ಜನ್ಮ-ಜನ್ಮಾಂತರದ ಬಹಳಷ್ಟು ಹೊರೆಯು ತಲೆಯ ಮೇಲಿದೆ. ಮೊದಲು ಅದನ್ನು ಯೋಗಬಲದಿಂದ ಕಳೆಯಬೇಕಾಗಿದೆ. ಮಾಯೆಯು ಬಹಳ ಕೆಟ್ಟದ್ದಾಗಿದೆ, ಲೋಭವು ಅನೇಕರಲ್ಲಿದೆ. ಬಟ್ಟೆ, ಚಪ್ಪಲಿ, ಬಿಡುಗಾಸಿನ ಲೋಭವಿದೆ, ಇದಕ್ಕಾಗಿ ಸುಳ್ಳು ಹೇಳುತ್ತಿರುತ್ತಾರೆ – ಇದೆಲ್ಲವೂ ಲೋಭದ ಚಿಹ್ನೆಗಳಾಗಿದೆ. ಇಲ್ಲಂತೂ ಎಲ್ಲವೂ ಸಿಗುತ್ತವೆ. ಹೊರಗಡೆ ಮನೆ-ಮನೆಯಲ್ಲಿ ಬಹಳ ಕಿರಿಕಿರಿಯಿರುತ್ತದೆ, ಸಂಗವು ಬಹಳ ಕೆಟ್ಟದ್ದಾಗಿದೆ. ಪತಿಯು ಬ್ರಾಹ್ಮಣನಾಗಿದ್ದರೂ, ಸ್ತ್ರೀ ಶೂದ್ರಳು. ಒಂದುವೇಳೆ ಸ್ತ್ರೀ ಬ್ರಾಹ್ಮಣಿಯಾಗಿದ್ದರೆ ಪತಿಯು ಶೂದ್ರನಾಗಿರುತ್ತಾನೆ. ಮನೆಯಲ್ಲಿಯೂ ಹಂಸ ಮತ್ತು ಕೊಕ್ಕರೆ, ಇದರಿಂದ ಬಹಳ ಕಿರಿಕಿರಿಯಾಗುತ್ತಿರುತ್ತದೆ. ತಮ್ಮನ್ನು ಶಾಂತವಾಗಿಟ್ಟುಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗುತ್ತದೆ. ಮನೆಮಠ ಬಿಡುವುದನ್ನು ತಂದೆಯು ಒಪ್ಪುವುದಿಲ್ಲ. ಇಂತಹ ಆಶ್ರಮಗಳು ಬಹಷ್ಟಿವೆ ಅಲ್ಲಿ ಮಕ್ಕಳ ಸಮೇತವಾಗಿ ಹೋಗಿ ಇರುತ್ತಾರೆ, ಮತ್ತೆ ಎಲ್ಲಾ ಜಾಗಗಳಲ್ಲಿಯೂ ಏರುಪೇರುಗಳು ಇದ್ದೇ ಇರುತ್ತದೆ, ಶಾಂತಿಯು ಎಲ್ಲಿಯೂ ಇಲ್ಲ. ಸತ್ಯ-ಸತ್ಯವಾದ ಶಾಂತಿ, ಸುಖ, ಪವಿತ್ರತೆಯು 21 ಜನ್ಮಗಳಿಗಾಗಿ ಈಗ ನೀವು ಮಕ್ಕಳಿಗೆ ಸಿಗುತ್ತಿದೆ. ಇಂತಹ ಮತವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ – ನಾನು ಸರ್ವೀಸ್ ಮಾಡಲು ಎಷ್ಟು ದೂರದ ದೇಶದಿಂದ ಬರುತ್ತೇನೆ. ನೀವೂ ಸಹ ಸರ್ವೀಸ್ ಮಾಡಬೇಕಾಗಿದೆ. ಪ್ರದರ್ಶನಿ, ಮೇಳಗಳಲ್ಲಿ ಬಹಳಷ್ಟು ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಲೆ ರಾಜ್ಯಪಾಲ ಮೊದಲಾದವರು ಉದ್ಘಾಟನೆ ಮಾಡುತ್ತಾರೆ ಆದರೆ ಇವರಿಗೆ ಪರಮಾತ್ಮನೇ ಬ್ರಹ್ಮಾರವರ ಮೂಲಕ ಓದಿಸುತ್ತಾರೆ, ಇದರಿಂದ ವಿಶ್ವದ ಆಸ್ತಿಯು ಸಿಗುತ್ತದೆಯೆಂಬುದು ಅವರ ಬುದ್ಧಿಯಲ್ಲಿ ಬರುತ್ತದೆಯೇ? ಇದು ಬಹಳ ಚೆನ್ನಾಗಿದೆ, ಮಾತೆಯರು ಒಳ್ಳೆಯ ಕರ್ತವ್ಯ ಮಾಡುತ್ತಿದ್ದಾರೆ. ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದಷ್ಟೇ ಹೇಳುತ್ತಾರೆ. ಭಲೆ ಇದನ್ನೂ ಬರೆಯುತ್ತಾರೆ- ಗೀತೆಯನ್ನು ಭಗವಂತನೇ ಹೇಳಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಬರೆದರೂ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಿಳಿದುಕೊಳ್ಳುವ ಪುರುಷಾರ್ಥವೂ ನಡೆಯುವುದಿಲ್ಲ. ನಿಮ್ಮ ಬುದ್ಧಿಯಲ್ಲಿದೆ – ಶಿವ ತಂದೆಯು ಬ್ರಹ್ಮನ ಮೂಲಕ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನೀವು ಈ ಲಕ್ಷ್ಮೀ-ನಾರಾಯಣರಾಗುತ್ತೀರಿ. ಈ ಸಂದೇಶವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ನೀವು ಪೈಗಂಬರನ ಮಕ್ಕಳಾಗಿದ್ದೀರಿ. ಅನ್ಯ ಯಾರೆಲ್ಲರೂ ಬರುತ್ತಾರೆಯೋ ಅವರು ಧರ್ಮ ಸ್ಥಾಪಕರಾಗಿದ್ದಾರೆ. ನೀವು ಎಲ್ಲರಿಗೆ ಈ ಸಂದೇಶವನ್ನು ತಿಳಿಸಿರಿ – ತಂದೆಯು ಸ್ವರ್ಗ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ – ಒಂದುವೇಳೆ ನೀವು ನನ್ನನ್ನು ನೆನಪು ಮಾಡುತ್ತೀರಿ ಮತ್ತು ಪವಿತ್ರರಾಗುತ್ತೀರೆಂದರೆ ನೀವೂ ಸಹ ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ, ಪದೇ-ಪದೇ ಈ ವಿಚಾರಗಳೂ ನಡೆಯಬೇಕು. ಸ್ಥಿತಿಯು ಪರಿಪಕ್ವವಿಲ್ಲದಿರುವ ಕಾರಣ ಉದ್ಯೋಗ-ವ್ಯವಹಾರಗಳಲ್ಲಿ ಹೋಗುತ್ತಿದ್ದಂತೆಯೇ ಎಲ್ಲವೂ ಮರೆತು ಹೋಗುತ್ತದೆ. ಆದರೆ ಯಾವ ಮಹಾವಾಕ್ಯಗಳನ್ನು ಕೇಳುತ್ತೀರಿ ಅದು ವ್ಯರ್ಥವಾಗುವುದಿಲ್ಲ. ಒಂದೊಂದು ರತ್ನವು ಕಡಿಮೆಯಲ್ಲ, ಒಂದು ರತ್ನವೂ ಸಹ ಸ್ವರ್ಗದ ಮಾಲೀಕರನ್ನಾಗಿ ಮಾಡಬಲ್ಲದು. ನಮ್ಮ ಭಾರತವು ಬಹಳ ಶ್ರೇಷ್ಠ ದೇಶವಾಗಿದೆ ಎಂದು ಹಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಮ್ಮ ಭಾರತ ಯಾವುದು ಸ್ವರ್ಗವಾಗಿತ್ತೋ ಅದೀಗ ನರಕವಾಗಿದೆ. ಈಗ ತಂದೆಯು ತಿಳಿಸುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಪ್ರಜೆಗಳಂತೂ ಅನೇಕರು ತಯಾರಾಗುತ್ತಿರುತ್ತಾರೆ, ವೃದ್ಧಿಯಾಗುತ್ತಿರುತ್ತದೆ, ಸೇವಾಕೇಂದ್ರಗಳು ತೆರೆಯುತ್ತಲೇ ಇರುತ್ತವೆ. ತಂದೆಯೂ ಸಹ ತಿಳಿಸುತ್ತಾರೆ- ಹಳ್ಳಿಯಲ್ಲಿ ಹೋಗಿ ಸರ್ವೀಸ್ ಮಾಡಿರಿ. ಇಂತಹ ಅನೇಕ ಹಳ್ಳಿಗಳಿವೆ ಎಲ್ಲಿ ಎಲ್ಲರೂ ಸೇರಿ ತರಗತಿ ನಡೆಸುತ್ತಾರೆ ಮತ್ತೆ ತಂದೆಗೆ ಪತ್ರ ಬರೆಯುತ್ತಾರೆ.

ನೀವು ಮಕ್ಕಳ ಕೆಲಸವಾಗಿದೆ – ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡುವುದು. ಇದರಿಂದ ಎಲ್ಲಾ ಮನುಷ್ಯರು ದೇವತೆಗಳಾಗಿ ಬಿಡುತ್ತಾರೆ. ಯಾರು ಇಲ್ಲಿನವರಾಗಿರುತ್ತಾರೆ ಅವರು ಅನ್ಯ ಸತ್ಸಂಗಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇಲ್ಲಿ ಮುಖ್ಯ ಮಾತು ಪವಿತ್ರತೆಯಾಗಿದೆ. ಇದಕ್ಕಾಗಿಯೇ ತಂದೆ ಮಕ್ಕಳ, ಸ್ತ್ರೀ-ಪುರುಷರ, ಪುರುಷರು ಸ್ತ್ರೀಯರಿಗೆ ಶತ್ರುಗಳಾಗಿ ಬಿಡುತ್ತಾರೆ. ಸರ್ಕಾರವೂ ಸಹ ಹೇಳುತ್ತದೆ- ಇವರೇನು ಮಾಡುತ್ತಾರೆ? ಇದು ಏಕೆ ಆಗುತ್ತದೆ ಎಂದು. ಆದರೆ ಧರ್ಮದಲ್ಲಿ ಅವರು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಸ್ವರಾಜ್ಯವನ್ನಂತೂ ಅವಶ್ಯವಾಗಿ ಸ್ಥಾಪನೆ ಮಾಡುತ್ತೀರಿ. ಮೊದಲು ಯಾವ ಯುದ್ಧವಾಗಿದೆಯೋ ಅದರ ಮತ್ತು ಇದರ ಮಧ್ಯೆ ರಾತ್ರಿ-ಹಗಲಿನ ಅಂತರವಿದೆ. ಮೊದಲು ಈ ಅಣು ಬಾಂಬುಗಳು ತಯಾರಾಗಿರಲಿಲ್ಲ. ನೀವು ತಿಳಿದುಕೊಂಡಿದ್ದೀರಿ – ನಮ್ಮ ರಾಜ್ಯದಲ್ಲಿ ಯುದ್ಧದ ಹೆಸರು, ಗುರುತೂ ಇರಲಿಲ್ಲ. ಸತ್ಯ-ತ್ರೇತಾಯುಗದಲ್ಲಿ ಸುಖವಿರುತ್ತದೆ, ದ್ವಾಪರ-ಕಲಿಯುಗದಲ್ಲಿ ದುಃಖವಿದೆ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ. ಪ್ರಪಂಚವು ಒಂದೇ ಆಗಿರುತ್ತದೆ. ಕೇವಲ ಹೊಸದು ಮತ್ತು ಹಳೆಯದಾಗುತ್ತದೆ. ಈಗ ಹಳೆಯ ಪ್ರಪಂಚವು ವಿನಾಶವಾಗಿ ಹೊಸದಾಗುತ್ತದೆ. ಈ ಹಳೆಯ ಪ್ರಪಂಚವು ಈಗ ಏನೂ ಪ್ರಯೋಜನವಿಲ್ಲ ಮತ್ತೆ ಹೊಸ ಪ್ರಪಂಚ ಸ್ಥಾಪಿಸಬೇಕಾಗಿದೆ. ದೆಹಲಿಯಲ್ಲಿ ಎಷ್ಟು ಬಾರಿ ಹೊಸ ಮಹಲುಗಳಾಗಿರಬಹುದು. ಯಾರು ಬರುತ್ತಾರೆಯೋ ಅವರು ಆ ಕಟ್ಟಡವನ್ನು ಬೀಳಿಸಿ ಮತ್ತೆ ತಮ್ಮ ನೆನಪಿಗಾಗಿ ಹೊಸದನ್ನು ಕಟ್ಟಿಸುತ್ತಾರೆ. ಯಾವಾಗ ದೊಡ್ಡ ಯುದ್ಧವಾಗುವುದೋ ಆಗ ಇವೆಲ್ಲವೂ ನುಚ್ಚು ನೂರಾಗುವವು. ಮತ್ತೆ ಹೊಸ ಪ್ರಪಂಚದಲ್ಲಿ ಹೊಸ ಮಹಲುಗಳನ್ನು ನಿರ್ಮಾಣ ಮಾಡುತ್ತೀರಿ. ಯಾರೆಷ್ಟು ಓದುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಕೆಲವರು ಚೆನ್ನಾಗಿ ಓದುತ್ತಾರೆ, ಕೆಲವರು ಕಡಿಮೆ. ಇದಂತೂ ನಡೆಯುತ್ತಾ ಇರುತ್ತದೆ.

ನೀವು ಮಕ್ಕಳು ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ – ನಾವೀಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈ ಹಳೆಯ ಶರೀರವನ್ನು ಬಿಟ್ಟು ನಾವು ನಮ್ಮ ಮನೆಗೆ ಹೋಗುವೆವು. ಈ ಸ್ಥಿತಿಯು ಪಕ್ಕಾ ಆಗಿ ಬಿಟ್ಟರೆ ಮತ್ತೇನು ಬೇಕು! ಈ ಸ್ಥಿತಿಯಲ್ಲಿ ಶರೀರ ಬಿಟ್ಟರೂ ಸಹ ಬಹಳ ಶ್ರೇಷ್ಠ ಕುಲದಲ್ಲಿ ಜನ್ಮ ಪಡೆಯುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವುದಕ್ಕಾಗಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಬೇಕಾಗಿದೆ. ಮಾಯೆಯ ಚಕ್ರವ್ಯೂಹದಲ್ಲಿ ಎಂದೂ ಬರಬಾರದು. ಅತಿಯಾದ ಆಸೆಗಳನ್ನಿಟ್ಟುಕೊಳ್ಳಬಾರದು.

2. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ತಮ್ಮ ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡಬೇಕಾಗಿದೆ. ಹಳ್ಳಿ-ಹಳ್ಳಿಗಳಿಗೆ ಹೋಗಿ ಸೇವೆ ಮಾಡಬೇಕಾಗಿದೆ.

ವರದಾನ:-

ತಮ್ಮನ್ನು ಸದಾ ವಿಜಯಿ ರತ್ನ ಎಂದು ತಿಳಿದುಕೊಂಡು, ಪ್ರತೀ ಸಂಕಲ್ಪ ಹಾಗೂ ಕರ್ಮವನ್ನು ಮಾಡುತ್ತೀರೆಂದರೆ ಎಂದಿಗೂ ಸೋಲಾಗಲು ಸಾಧ್ಯವಿಲ್ಲ. ಮಾಸ್ಟರ್ ಸರ್ವಶಕ್ತಿವಂತನೆಂದಿಗೂ ಸೋಲನ್ನು ಅನುಭವಿಸಲು ಸಾಧ್ಯವಿಲ್ಲ. ಒಂದುವೇಳೆ ಮತ್ತೆ-ಮತ್ತೆ ಸೋಲಾಗುತ್ತಿದೆಯೆಂದರೆ ಧರ್ಮರಾಜನ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಹಾಗೂ ಭವಿಷ್ಯದಲ್ಲಿ ಹಾರವನ್ನು ತಯಾರು ಮಾಡಬೇಕಾಗುತ್ತದೆ, ದ್ವಾಪರದಿಂದ ಅನೇಕ ಮೂರ್ತಿಗಳಿಗೆ ಹಾರವನ್ನು ತೊಡಿಸುವವರು ಆಗಬೇಕಾಗುತ್ತದೆ. ಆದ್ದರಿಂದ ಸೋಲನ್ನು ಅನುಭವಿಸುವ ಬದಲು ಬಲಿಹಾರಿ ಆಗಿ ಬಿಡಿ, ತಮ್ಮ ಸಂಪೂರ್ಣ ಸ್ವರೂಪವನ್ನು ಧಾರಣೆ ಮಾಡಿಕೊಳ್ಳುವ ಪ್ರತಿಜ್ಞೆ ಮಾಡುತ್ತೀರೆಂದರೆ ವಿಜಯಿಗಳಾಗುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top