06 August 2021 KANNADA Murli Today | Brahma Kumaris

Read and Listen today’s Gyan Murli in Kannada

August 5, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಪ್ರತಿನಿತ್ಯವೂ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ನಾನಾತ್ಮ ಎಷ್ಟು ಶುದ್ಧನಾಗಿದ್ದೇನೆ, ಎಷ್ಟು ಶುದ್ಧರಾಗುವಿರೋ ಅಷ್ಟು ಖುಷಿಯಿರುವುದು, ಸೇವೆ ಮಾಡುವ ಉತ್ಸಾಹ ಬರುವುದು”

ಪ್ರಶ್ನೆ:: -

ವಜ್ರ ಸಮಾನ ಶ್ರೇಷ್ಠರಾಗುವ ಪುರುಷಾರ್ಥವೇನು?

ಉತ್ತರ:-

ಆತ್ಮಾಭಿಮಾನಿಯಾಗಿರಿ. ಶರೀರದಲ್ಲಿ ಸ್ವಲ್ಪವೂ ಮೋಹವಿರಬಾರದು. ಚಿಂತೆಯಿಂದ ನಿಶ್ಚಿಂತರಾಗಿ, ಒಬ್ಬ ತಂದೆಯ ನೆನಪಿನಲ್ಲಿರಿ – ಈ ಶ್ರೇಷ್ಠ ಪುರುಷಾರ್ಥವೇ ವಜ್ರ ಸಮಾನರನ್ನಾಗಿ ಮಾಡುವುದು. ಒಂದುವೇಳೆ ದೇಹಾಭಿಮಾನವಿದ್ದರೆ ನಿಮ್ಮ ಸ್ಥಿತಿಯೇ ಕಚ್ಚಾ ಆಗಿದೆ. ತಂದೆಯಿಂದ ದೂರವಿದ್ದೀರಿ ಎಂದರ್ಥ. ನೀವು ಈ ಶರೀರದ ಸಂಭಾಲನೆಯನ್ನೂ ಮಾಡಬೇಕಾಗಿದೆ ಏಕೆಂದರೆ ಈ ಶರೀರದಲ್ಲಿರುತ್ತಾ ಕರ್ಮಾತೀತ ಸ್ಥಿತಿಯನ್ನು ಹೊಂದಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮುಖವನ್ನು ನೋಡಿಕೋ ಪ್ರಾಣಿ……..

ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಯಾರಿಗೆ ಯೋಗಬಲದಿಂದ ಪಾಪಗಳು ಕಳೆಯುತ್ತವೆಯೋ ಅವರಿಗೆ ಬಹಳ ಖುಷಿಯ ನಶೆಯೇರುತ್ತದೆ. ತಮ್ಮ ಸ್ಥಿತಿಯನ್ನು ತಾವೇ ತಿಳಿದುಕೊಳ್ಳಬಹುದಾಗಿದೆ. ಯಾವಾಗ ಸ್ಥಿತಿಯು ಚೆನ್ನಾಗಿರುವುದೋ ಆಗ ಸೇವೆ ಮಾಡುವ ಉಮ್ಮಂಗ ಬರುತ್ತದೆ. ಎಷ್ಟೆಷ್ಟು ಶುದ್ಧವಾಗುತ್ತಾ ಹೋಗುತ್ತೀರೋ ಅಷ್ಟು ಅನ್ಯರನ್ನೂ ಶುದ್ಧ ಅಥವಾ ಯೋಗಿಗಳನ್ನಾಗಿ ಮಾಡುವ ಉಮ್ಮಂಗ ಬರುತ್ತದೆ. ಏಕೆಂದರೆ ನೀವು ರಾಜಯೋಗಿಗಳು ಹಾಗೂ ರಾಜ ಋಷಿಗಳಾಗಿದ್ದೀರಿ. ಹಠಯೋಗಿ ಋಷಿಗಳು ತತ್ವವನ್ನೇ ಭಗವಂತನೆಂದು ತಿಳಿಯುತ್ತಾರೆ. ರಾಜಯೋಗಿ ಋಷಿಗಳು ಭಗವಂತನನ್ನು ತಂದೆಯೆಂದು ಒಪ್ಪುತ್ತೀರಿ. ತತ್ವವನ್ನು ನೆನಪು ಮಾಡುವುದರಿಂದ ಅವರ ಪಾಪಗಳು ಭಸ್ಮವಾಗುವುದಿಲ್ಲ. ತತ್ವದ ಜೊತೆ ಯೋಗವನ್ನು ಇಡುವುದರಿಂದ ಯಾವುದೇ ಬಲ ಸಿಗುವುದಿಲ್ಲ. ಯಾವುದೇ ಧರ್ಮದವರು ಯೋಗದ ಅರ್ಥವನ್ನು ತಿಳಿದುಕೊಂಡಿಲ್ಲ ಆದ್ದರಿಂದ ಯಾರೂ ಸಹ ಸತ್ಯಯೋಗಿಗಳಾಗಿ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಮ್ಮ ಸ್ಥಿತಿಯನ್ನು ಅರಿತುಕೊಳ್ಳಬಲ್ಲಿರಿ. ಆತ್ಮವು ತಂದೆಯನ್ನು ಎಷ್ಟು ನೆನಪು ಮಾಡುವುದೋ ಅಷ್ಟು ಖುಷಿಯಿರುವುದು. ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ, ಮಕ್ಕಳೂ ಸಹ ಒಬ್ಬರು ಇನ್ನೊಬ್ಬರ ಸ್ಥಿತಿಯನ್ನು ಮತ್ತು ತನ್ನ ಸ್ಥಿತಿಯನ್ನೂ ತಿಳಿದುಕೊಳ್ಳಬಹುದು. ನೋಡಿಕೊಳ್ಳಿ – ನನಗೆ ಶರೀರದಲ್ಲಿ ಅಭಿಮಾನವಂತೂ ಇಲ್ಲವೆ! ದೇಹಾಭಿಮಾನವಿದ್ದರೆ ತಿಳಿದುಕೊಳ್ಳಿ, ನಾವು ಬಹಳ ಕಚ್ಚಾ ಆಗಿದ್ದೇವೆ, ತಂದೆಯಿಂದ ಬಹಳ ದೂರವಿದ್ದೇವೆ. ತಂದೆಯು ಆದೇಶ ನೀಡುತ್ತಾರೆ – ಮಕ್ಕಳೇ, ನೀವೀಗ ವಜ್ರ ಸಮಾನರಾಗಬೇಕಾಗಿದೆ, ತಂದೆಯು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಾರೆ. ತಂದೆಗೆ ದೇಹಾಭಿಮಾನ ಆಗುವುದಿಲ್ಲ. ಮಕ್ಕಳಿಗೇ ದೇಹಾಭಿಮಾನ ಆಗುತ್ತದೆ. ತಂದೆಯ ನೆನಪಿನಿಂದ ನೀವು ದೇಹೀ-ಅಭಿಮಾನಿಗಳಾಗುತ್ತೀರಿ ಅಂದಾಗ ನಾವು ಎಷ್ಟು ಸಮಯ ನೆನಪು ಮಾಡುತ್ತೇವೆ ಎಂದು ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅಪಾರ ಖುಷಿಯಿರುವುದು ಮತ್ತು ತಮ್ಮನ್ನು ಯೋಗ್ಯರನ್ನಾಗಿ ಮಾಡಿಕೊಳ್ಳುತ್ತೀರಿ. ಕೆಲವು ಮಕ್ಕಳು ಕರ್ಮಾತೀತ ಸ್ಥಿತಿಯನ್ನು ತಲುಪಿ ಬಿಟ್ಟಿದ್ದಾರೆ ಎಂದೂ ತಿಳಿದುಕೊಳ್ಳಬೇಡಿ, ಇಲ್ಲ ಇನ್ನೂ ರೇಸ್ ನಡೆಯುತ್ತಿದೆ. ಯಾವಾಗ ಈ ಸ್ಪರ್ಧೆಯು ಮುಗಿಯುವುದೋ ಆಗ ಅಂತಿಮ ಫಲಿತಾಂಶ ಬರುವುದು ಮತ್ತೆ ವಿನಾಶವಾಗುವುದು ಆರಂಭವಾಗುತ್ತದೆ. ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ರಿಹರ್ಸಲ್ ಆಗುತ್ತಾ ಇರುತ್ತದೆ. ಇದರಲ್ಲಿ ನಾವು ಯಾರ ಮೇಲೂ ದೋಷ ಹಾಕುವಂತಿಲ್ಲ. ಅಂತಿಮದಲ್ಲಿಯೇ ಎಲ್ಲರದೂ ಅರ್ಥವಾಗುತ್ತದೆ. ಈಗಂತೂ ಸ್ವಲ್ಪ ಸಮಯ ಉಳಿದಿದೆ, ಈ ದಾದಾರವರೂ ಹೇಳುತ್ತಾರೆ – ಮಧುರ ಮಕ್ಕಳೇ, ಇನ್ನೂ ಸ್ವಲ್ಪ ಸಮಯವಿದೆ, ಈಗಲೇ ಯಾರೂ ಕರ್ಮಾತೀತ ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಖಾಯಿಲೆ ಇತ್ಯಾದಿಗಳು ಬಂದರೂ ಸಹ ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಇದನ್ನು ಭೋಗಿಸುವುದು ಮತ್ತ್ಯಾರಿಗೂ ತಿಳಿಯುವುದಿಲ್ಲ. ಅದು ಒಳಗೆ ನೋವಾಗಿರುತ್ತದೆ. ಈಗಿನ್ನೂ ಯಾರದೂ ಏಕರಸ ಸ್ಥಿತಿ ಆಗಿಲ್ಲ. ಎಷ್ಟು ಪ್ರಯತ್ನ ಪಡುವರೋ ಅಷ್ಟು ವಿಕಲ್ಪಗಳು, ಬಿರುಗಾಳಿಗಳು ಬಹಳ ಬರುತ್ತವೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಮನುಷ್ಯರು ಸಾಹುಕಾರರಾಗಿದ್ದರೆ ದೊಡ್ಡ-ದೊಡ್ಡ ಬಂಗಲೆಗಳಿದ್ದರೆ ಖುಷಿಯಿರುತ್ತದೆ ಏಕೆಂದರೆ ಹೆಚ್ಚು ಸುಖವಿರುತ್ತದೆ. ಈಗಲೂ ಸಹ ನೀವು ತಂದೆಯಿಂದ ಅಪಾರ ಸುಖವನ್ನು ತೆಗೆದುಕೊಳ್ಳುತ್ತೀರಿ, ತಂದೆಯಿಂದ ನಾವು ರಾಜ್ಯವನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಧನದಲ್ಲಿ ಎಷ್ಟು ಖುಷಿಯಿರುತ್ತದೆಯೋ ಅಷ್ಟು ಶಾಂತಿಯಲ್ಲಿ ಇರುವುದಿಲ್ಲ. ಸನ್ಯಾಸಿಗಳು ಮನೆಯನ್ನು ಬಿಟ್ಟು ಹೋಗಿ ಕಾಡಿನಲ್ಲಿರುತ್ತಿದ್ದರು. ಎಂದೂ ತಮ್ಮ ಬಳಿ ಹಣವನ್ನು ಇಟ್ಟುಕೊಳ್ಳುತ್ತಿರಲಿಲ್ಲ, ಕೇವಲ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಈಗಂತೂ ಎಷ್ಟೊಂದು ಧನವಂತರಾಗಿ ಬಿಟ್ಟಿದ್ದಾರೆ. ಎಲ್ಲರಿಗೆ ಹಣದ ಚಿಂತೆ ಬಹಳಷ್ಟಿದೆ. ವಾಸ್ತವದಲ್ಲಿ ರಾಜರಿಗೆ ಪ್ರಜೆಗಳ ಚಿಂತೆಯಿರುತ್ತದೆ. ಆದ್ದರಿಂದ ಯುದ್ಧದ ಸಾಮಾನುಗಳನ್ನು ಇಟ್ಟುಕೊಳ್ಳುತ್ತಾರೆ. ಸತ್ಯಯುಗದಲ್ಲಂತೂ ಯುದ್ಧ ಮೊದಲಾದುವುಗಳ ಮಾತಿರುವುದಿಲ್ಲ. ಈಗ ನೀವು ಮಕ್ಕಳಿಗೆ ಖುಷಿಯಾಗುತ್ತದೆ – ನಾವು ನಮ್ಮ ರಾಜ್ಯದಲ್ಲಿ ಹೋಗುತ್ತೇವೆ, ಅಲ್ಲಿ ಯಾವುದೇ ಭಯದ ಮಾತಿರುವುದಿಲ್ಲ. ತೆರಿಗೆ ಮೊದಲಾದುವುಗಳ ಮಾತಿರುವುದಿಲ್ಲ. ಈ ಶರೀರದ ಚಿಂತೆಯು ಇಲ್ಲಿಯೇ ಇರುತ್ತದೆ, ಆದ್ದರಿಂದಲೇ ಚಿಂತೆಯಿಂದ ಮುಕ್ತರನ್ನಾಗಿ ಮಾಡಿದರು ಎಂದು ಗಾಯನವಿದೆ. ನಿಮಗೆ ತಿಳಿದಿದೆ – ಚಿಂತೆಯಿಂದ ಮುಕ್ತರಾಗಲು ನಾವೀಗ ಇಷ್ಟೊಂದು ಪುರುಷಾರ್ಥ ಮಾಡುತ್ತೇವೆ ನಂತರ 21 ಜನ್ಮಗಳಿಗಾಗಿ ಯಾವುದೇ ಚಿಂತೆಯಿರುವುದಿಲ್ಲ. ತಂದೆಯನ್ನು ನೆನಪು ಮಾಡುವುದರಿಂದ ನೀವು ಬಹಳ ಅಡೋಲರಾಗಿರುತ್ತೀರಿ. ರಾಮಾಯಣದ ಕಥೆಯೂ ನಿಮ್ಮ ಮೇಲಿದೆ, ನೀವೇ ಮಹಾವೀರರಾಗುತ್ತೀರಿ. ನಮ್ಮನ್ನು ರಾವಣನು ಅಲುಗಾಡಿಸಲು ಸಾಧ್ಯವಿಲ್ಲವೆಂದು ಆತ್ಮವೇ ಹೇಳುತ್ತದೆ, ಆ ಸ್ಥಿತಿಯು ಅಂತಿಮದಲ್ಲಿ ಬರುವುದು. ಈಗಂತೂ ಯಾರು ಬೇಕಾದರೂ ಅಲುಗಾಡುತ್ತಾರೆ, ಚಿಂತೆಯಿರುತ್ತದೆ. ಯಾವಾಗ ವಿಶ್ವದಲ್ಲಿ ಯುದ್ಧವಾಗುವುದೋ ಆಗ ಇನ್ನು ಸಮಯ ಬಂದು ಬಿಟ್ಟಿದೆ ಎಂದು ತಿಳಿದುಕೊಳ್ಳುತ್ತಾರೆ. ತಂದೆಯನ್ನು ಎಷ್ಟು ನೆನಪು ಮಾಡುವ ಪುರುಷಾರ್ಥ ಮಾಡುತ್ತೀರೋ ಅಷ್ಟು ಲಾಭವಾಗುವುದು. ಪುರುಷಾರ್ಥ ಮಾಡಲು ಇದೇ ಸಮಯವಾಗಿದೆ, ಇನ್ನು ಸ್ವಲ್ಪ ಕಳೆದರೆ ವಿನಾಶದ ಸದ್ದು-ಗದ್ದಲವಿರುವುದು. ಈಗಂತೂ ಶರೀರದಲ್ಲಿಯೂ ಮೋಹವಿರುತ್ತದೆಯಲ್ಲವೆ. ಸ್ವಯಂ ತಂದೆಯೇ ಹೇಳುತ್ತಾರೆ – ಶರೀರವನ್ನೂ ಸಂಭಾಲನೆ ಮಾಡಿ, ಇದು ಅಂತಿಮ ಶರೀರವಾಗಿದೆ, ಇದರಲ್ಲಿಯೇ ಪುರುಷಾರ್ಥ ಮಾಡಿ ಕರ್ಮಾತೀತ ಸ್ಥಿತಿಯನ್ನು ಹೊಂದಬೇಕಾಗಿದೆ. ಜೀವಿಸಿರುತ್ತೀರಿ, ತಂದೆಯನ್ನು ನೆನಪು ಮಾಡುತ್ತಾ ಇರುತ್ತೀರಿ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಸದಾ ಅಮರರಾಗಿರಿ. ಎಷ್ಟು ಜೀವಿಸುತ್ತೀರೋ ಅಷ್ಟು ತಂದೆಯನ್ನು ನೆನಪು ಮಾಡಿ ಶ್ರೇಷ್ಠ ಆಸ್ತಿಯನ್ನು ಪಡೆಯುತ್ತೀರಿ. ಈಗ ನಿಮ್ಮದು ಸಂಪಾದನೆಯಾಗುತ್ತಾ ಇರುತ್ತದೆ. ಶರೀರವನ್ನು ನಿರೋಗಿ, ಸ್ವಾಸ್ಥ್ಯವಾಗಿಟ್ಟುಕೊಳ್ಳಿ. ಇದರಲ್ಲಿ ಆಲಸ್ಯ ಮಾಡಬಾರದು, ಆಹಾರ-ಪಾನೀಯಗಳ ಮೇಲೆ ಗಮನವನ್ನು ಇಟ್ಟಿದ್ದೇ ಆದರೆ ಏನೂ ಆಗುವುದಿಲ್ಲ. ಏಕರಸವಾಗಿ ನಡೆಯುವುದರಿಂದ ಶರೀರವೂ ಆರೋಗ್ಯವಂತವಾಗಿರುವುದು. ಇದು ಅಮೂಲ್ಯ ಶರೀರವಾಗಿದೆ. ಇದರಲ್ಲಿಯೇ ಪುರುಷಾರ್ಥ ಮಾಡಿ, ದೇವಿ-ದೇವತೆಗಳಾಗುತ್ತೀರಿ ಅಂದಮೇಲೆ ಬಲಿಹಾರಿಯು ಈ ಸಮಯದ್ದಾಗಿದೆ ಆದ್ದರಿಂದ ಖುಷಿಯಿರಲಿ. ಎಷ್ಟು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತೀರೋ ಅಷ್ಟು ನಾರಾಯಣೀ ನಶೆಯೇರಿರುವುದು. ತಂದೆಯ ನೆನಪಿನಿಂದಲೇ ನೀವು ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ನೋಡಿಕೊಳ್ಳಿ, ನಾವು ಎಷ್ಟು ಖುಷಿಯಲ್ಲಿ, ಎಷ್ಟು ನಶೆಯಲ್ಲಿರುತ್ತೇವೆ? ಬಡವರಿಗಂತೂ ಇನ್ನೂ ಖುಷಿಯಿರಬೇಕು, ಸಾಹುಕಾರರಿಗಾದರೆ ಧನದ ಚಿಂತೆಯಿರುತ್ತದೆ. ನಿಮ್ಮಲ್ಲಿ ಕುಮಾರಿಯರಿಗಂತೂ ಯಾವುದೇ ಚಿಂತೆಯಿರುವುದಿಲ್ಲ. ಹಾ! ಯಾರ ಮಿತ್ರ ಸಂಬಂಧಿಗಳಾದರೂ ಬಡವರಾಗಿದ್ದರೆ ಅವರ ಸಂಭಾಲನೆ ಮಾಡಬೇಕಾಗುತ್ತದೆ. ಅವರನ್ನು ಜಾಗೃತಗೊಳಿಸುತ್ತಾ ಇರಬೇಕಾಗಿದೆ. ಒಂದುವೇಳೆ ಜಾಗೃತರಾಗದಿದ್ದರೆ ಮತ್ತೆ ಎಲ್ಲಿಯವರೆಗೆ ಸಹಯೋಗ ನೀಡುತ್ತಾ ಇರುತ್ತೀರಿ! ತಂದೆಯು ಹೇಳುತ್ತಾರಲ್ಲವೆ – ನೀವು ಸೇವಾಧಾರಿಯಾಗಿ ಮತ್ತು ನಿಮ್ಮ ಸ್ತ್ರೀಯರನ್ನೂ ಆತ್ಮಿಕ ಸೇವೆಯಲ್ಲಿ ತೊಡಗಿಸಿರಿ. ನೀವು ತಂದೆಯ ಸಹಯೋಗಿಗಳಾಗಿದ್ದೀರಿ, ಸಹಯೋಗವಂತೂ ಎಲ್ಲರಿಗೂ ಬೇಕಲ್ಲವೆ. ತಂದೆಯೊಬ್ಬರೇ ಏನು ಮಾಡುವರು! ಎಷ್ಟು ಮಂದಿಗೆ ಮಂತ್ರ ಕೊಡುವರು! ಆದ್ದರಿಂದ ನಾನು ನಿಮಗೆ ತಿಳಿಸುತ್ತೇನೆ, ನೀವು ಮತ್ತೆ ಅನ್ಯರಿಗೆ ತಿಳಿಸಬೇಕಾಗಿದೆ. ಕಸಿ ಮಾಡಬೇಕಾಗಿದೆ. ಮಕ್ಕಳಿಗೆ ಹೇಳುತ್ತಾ ಇರುತ್ತಾರೆ – ಎಷ್ಟು ಸಾಧ್ಯವೋ ಸಹಯೋಗಿಗಳಾಗಿರಿ, ಮಂತ್ರವನ್ನು ಕೊಡುತ್ತಾ ಹೋಗಿರಿ. ನಿಮ್ಮ ಶಾಸ್ತ್ರಗಳಲ್ಲಿಯೂ ಇದೆ – ಎಲ್ಲರಿಗೂ ಸಂದೇಶ ನೀಡಿದ್ದರು, ತಂದೆಯು ಬಂದಿದ್ದಾರೆ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಯನ್ನು ನೆನಪು ಮಾಡಿ, ದೇಹಧಾರಿಗಳನ್ನು ನೆನಪು ಮಾಡಬೇಡಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು ಮತ್ತು ಆಸ್ತಿಯೂ ಸಿಗುವುದು. ಗೀತೆಯನ್ನಂತೂ ಬಹಳ ಕೇಳುತ್ತಾರೆ, ಅನ್ಯರಿಗೆ ಹೇಳುತ್ತಾರೆ. ಅದರಲ್ಲಿ ಪ್ರಸಿದ್ಧವಾದ ಶಬ್ಧವಾಗಿದೆ – ಮನ್ಮನಾಭವ. ತಂದೆಯನ್ನು ನೆನಪು ಮಾಡಿದರೆ ಮುಕ್ತಿಯನ್ನು ಪಡೆಯುತ್ತೀರಿ. ಸನ್ಯಾಸಿಗಳೂ ಸಹ ಇದನ್ನು ಇಚ್ಛಿಸುತ್ತಾರೆ. ಮಧ್ಯಾಜೀಭವ ಎಂದರೆ ಜೀವನ್ಮುಕ್ತಿ. ನೀವು ತಂದೆಯ ಮಕ್ಕಳಾಗುತ್ತೀರೆಂದರೆ ತಂದೆಯು ಹೇಳುತ್ತಾರೆ – ಮಕ್ಕಳೇ, ನೀವಾತ್ಮರು ಪತಿತರಾಗಿದ್ದೀರಿ, ಪತಿತರು ನಡೆಯಲು ಸಾಧ್ಯವಿಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಭಾರತವಾಸಿಗಳು ಸತೋಪ್ರಧಾನರಾಗಿದ್ದಿರಿ ನಂತರ ತಮೋಪ್ರಧಾನರಾದಿರಿ. ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಪುರುಷಾರ್ಥ ಮಾಡಿರಿ ಆಗ ಶ್ರೇಷ್ಠ ಪದವಿಯು ಸಿಗುವುದು. ಭಕ್ತಿಯನ್ನಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ನಿಮಗೆ ತಿಳಿದಿದೆ – ಮೊಟ್ಟ ಮೊದಲು ಅವ್ಯಭಿಚಾರಿ ಭಕ್ತಿಯು ಆರಂಭವಾಯಿತು, ಈಗ ಎಷ್ಟೊಂದು ವ್ಯಭಿಚಾರಿ ಭಕ್ತಿಯಿದೆ. ಶರೀರಗಳಿಗೂ ಪೂಜೆ ಮಾಡುತ್ತಾರೆ, ಅದು ಭೂತ ಪೂಜೆಯಾಗಿದೆ. ದೇವತೆಗಳಾದರೂ ಪವಿತ್ರರಾಗಿದ್ದಾರೆ ಆದರೆ ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಆದ್ದರಿಂದ ಪೂಜೆಯೂ ಸಹ ತಮೋಪ್ರಧಾನವಾಗುತ್ತಾ ಹೋಗುತ್ತದೆ. ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಕ್ತಿಯ ಶಬ್ಧವನ್ನು ಏನೂ ಹೇಳಬಾರದು. ಹಾಯ್ ರಾಮ್, ಇದೂ ಸಹ ಭಕ್ತಿಯ ಶಬ್ಧವಾಗಿದೆ. ಇಲ್ಲಿ ಈ ರೀತಿ ಕೂಗುವಂತಿಲ್ಲ. ಏನನ್ನೂ ಉಚ್ಛಾರಣೆ ಮಾಡುವ ಮಾತಿಲ್ಲ, ಓಂ ಶಾಂತಿ ಎಂದೂ ಸಹ ಪದೇ-ಪದೇ ಹೇಳುವ ಅವಶ್ಯಕತೆಯಿಲ್ಲ. ಶಾಂತಿಯೆಂದರೆ ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆ. ಆಗಿಯೇ ಇದ್ದೇನೆ. ಇದರಲ್ಲಿ ಹೇಳುವ ಮಾತಿಲ್ಲ. ಅನ್ಯ ಮನುಷ್ಯರೂ ಸಹ ಕೆಲವರು ಓಂ ಶಾಂತಿ ಎಂದು ಹೇಳುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಅವರಂತೂ ಓಂ ಎಂಬುದಕ್ಕೆ ದೊಡ್ಡ-ದೊಡ್ಡ ಮಹಿಮೆ ಮಾಡುತ್ತಾರೆ. ನೀವಂತೂ ಅರ್ಥವನ್ನು ತಿಳಿದುಕೊಂಡಿದ್ದೀರಿ. ಅರ್ಥವನ್ನು ತಿಳಿಯದೇ ಓಂ ಶಾಂತಿ ಎಂದು ಹೇಳುವುದೂ ಸಹ ವ್ಯರ್ಥವಾಗಿದೆ. ಹಾ! ಒಬ್ಬರು ಇನ್ನೊಬ್ಬರೊಂದಿಗೆ ಈ ರೀತಿ ಕೇಳಬಹುದು – ಶಿವ ತಂದೆಯ ನೆನಪಿನಲ್ಲಿದ್ದೀರಾ? ಹೇಗೆ ನಾನೂ ಸಹ ಮಕ್ಕಳೊಂದಿಗೆ ಕೇಳುತ್ತೇನೆ – ಮಕ್ಕಳೇ, ಯಾರ ಶೃಂಗಾರ ಮಾಡುತ್ತೀರಿ? ಶಿವ ತಂದೆಯ ರಥದ ಶೃಂಗಾರ ಮಾಡುತ್ತಿದ್ದೇನೆಂದು ಹೇಳುತ್ತಾರೆ. ಇದು ಶಿವ ತಂದೆಯ ರಥವಲ್ಲವೆ. ಹೇಗೆ ಹುಸೇನನ ರಥವಿರುತ್ತದೆಯಲ್ಲವೆ. ಕುದುರೆಯ ಶೃಂಗಾರ ಮಾಡುತ್ತಾರೆ, ಕುದುರೆಯ ಅರ್ಥವನ್ನು ತಿಳಿದುಕೊಂಡಿಲ್ಲ. ಧರ್ಮ ಸ್ಥಾಪನೆ ಮಾಡಲು ಯಾವ ಆತ್ಮರು ಬರುತ್ತಾರೆಯೋ ಅವರು ಬಹಳ ಪವಿತ್ರರಾಗಿರುತ್ತಾರೆ. ಹಳೆಯ ಪತಿತ ಆತ್ಮವು ಧರ್ಮ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ನೀವು ಧರ್ಮ ಸ್ಥಾಪನೆ ಮಾಡುವುದಿಲ್ಲ. ಶಿವ ತಂದೆಯು ನಿಮ್ಮ ಮೂಲಕ ಮಾಡುತ್ತಾರೆ. ನಿಮ್ಮನ್ನು ಪವಿತ್ರರನ್ನಾಗಿ ಮಾಡುತ್ತಾರೆ. ಆ ಮನುಷ್ಯರು ಭಕ್ತಿಮಾರ್ಗದಲ್ಲಿ ಬಹಳ ಶೃಂಗಾರ ಇತ್ಯಾದಿ ಮಾಡುತ್ತಾರೆ, ಇಲ್ಲಿ ಶೃಂಗಾರವನ್ನು ಇಷ್ಟಪಡುವುದಿಲ್ಲ. ತಂದೆಯು ಎಷ್ಟು ನಿರಹಂಕಾರಿಯಾಗಿದ್ದಾರೆ, ಸ್ವಯಂ ಹೇಳುತ್ತಾರೆ – ನಾನು ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ, ಮೊದಲು ಸತ್ಯಯುಗದಲ್ಲಿ ಶ್ರೀ ನಾರಾಯಣನಿರುವರು, ಶ್ರೀ ಲಕ್ಷ್ಮಿಗಿಂತ ಮೊದಲು ಶ್ರೀ ನಾರಾಯಣನು ಬರುವರು. ಅವರಂತೂ ದೊಡ್ಡವರಿರಬೇಕಲ್ಲವೆ ಆದ್ದರಿಂದ ಕೃಷ್ಣನ ಹೆಸರಿನ ಗಾಯನವಿದೆ. ನಾರಾಯಣನಿಗಿಂತಲೂ ಹೆಚ್ಚಿನದಾಗಿ ಕೃಷ್ಣನ ಮಹಿಮೆ ಮಾಡುತ್ತಾರೆ. ಕೃಷ್ಣನಿಗೆ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ನಾರಾಯಣನ ಜನ್ಮದಿನವನ್ನು ಆಚರಿಸುವುದಿಲ್ಲ. ಕೃಷ್ಣನೇ ನಾರಾಯಣನೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬಾಲ್ಯದ ಹೆಸರೇ ನಡೆದು ಬರುತ್ತದೆಯಲ್ಲವೆ. ಇಂತಹವರು ಜನ್ಮ ಪಡೆದರು ಎಂದರೆ ಅವರ ಜನ್ಮ ದಿನವನ್ನಾಚರಿಸುತ್ತಾರೆ ಆದ್ದರಿಂದ ಕೃಷ್ಣನ ಜನ್ಮ ದಿನವನ್ನು ಆಚರಿಸುತ್ತಾರೆ. ನಾರಾಯಣನ ಬಗ್ಗೆ ಯಾರಿಗೂ ಗೊತ್ತಿಲ್ಲ. ಮೊಟ್ಟ ಮೊದಲು ಶಿವ ಜಯಂತಿಯಾಗುತ್ತದೆ ನಂತರ ಕೃಷ್ಣನ ಜಯಂತಿ ಅನಂತರ ರಾಮನ ಜಯಂತಿ….. ಶಿವನ ಜೊತೆ ಗೀತಾ ಜಯಂತಿಯೂ ಆಗುತ್ತದೆ. ಶಿವ ತಂದೆಯು ಬರುವುದೇ ಬಹಳ ಜನ್ಮಗಳ ಅಂತಿಮದಲ್ಲಿ. ವೃದ್ಧ ಅನುಭವೀ ರಥದಲ್ಲಿಯೇ ಬರುತ್ತಾರೆ. ಎಷ್ಟು ಚೆನ್ನಾಗಿ ತಿಳಿಸಲಾಗಿದೆ ಆದರೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ.

ತಂದೆಯು ತಿಳಿಸುತ್ತಾರೆ – ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ, ನಾನು ಬಂದು ತಿಳಿಸಿದಾಗ ನೀವೂ ಸಹ ಅನ್ಯರಿಗೆ ತಿಳಿಸಬಲ್ಲಿರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಭವಿಷ್ಯದಲ್ಲಿ ನಾವೇ ಈ ದೇವಿ-ದೇವತೆಗಳಾಗುತ್ತೇವೆ. ಬ್ರಹ್ಮಾ ತಂದೆಯು 2-3 ಪ್ರಕಾರದ ಸಾಕ್ಷಾತ್ಕಾರ ಮಾಡಿದ್ದರು – ಈ ರೀತಿಯಾಗುತ್ತೇನೆ, ಕಿರೀಟಧಾರಿಯಾಗುತ್ತೇನೆ ಎಂದು. 2-4 ರಾಜ್ಯಭಾರದ ಜನ್ಮಗಳ ಸಾಕ್ಷಾತ್ಕಾರವನ್ನೂ ಮಾಡಿದ್ದರು, ಈಗ ನೀವು ತಿಳಿದುಕೊಳ್ಳುತ್ತೀರಿ, ಈ ಮಾತುಗಳನ್ನು ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಳ್ಳುವುದಿಲ್ಲ. ಹಾ! ಇಷ್ಟನ್ನು ತಿಳಿದುಕೊಳ್ಳುತ್ತಾರೆ – ಒಳ್ಳೆಯ ಕರ್ಮ ಮಾಡಿದರೆ ಒಳ್ಳೆಯ ಜನ್ಮ ಸಿಗುವುದೆಂದು. ನೀವೀಗ ಭವಿಷ್ಯಕ್ಕಾಗಿ, ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ನಾವೇ ಈ ಪದವಿಯನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಯಾರು ಕರ್ಮಾತೀತ ಸ್ಥಿತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಾ ಇರುವರೋ ಅವರಿಗೇ ಹೆಚ್ಚು ಖುಷಿಯಿರುವುದು. ಬಾಬಾ, ನಾವಂತೂ ಮಮ್ಮಾ-ಬಾಬಾರವರನ್ನು ಅನುಸರಿಸುತ್ತೇವೆಂದು ಹೇಳುತ್ತಾರೆ, ಆಗಲೇ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಸಾಧ್ಯ. ನಾವು ಎಷ್ಟು ಸರ್ವೀಸ್ ಮಾಡುತ್ತೇವೆ ಮತ್ತು ಎಷ್ಟು ಖುಷಿಯಲ್ಲಿರುತ್ತೇವೆ ಎಂಬ ತಿಳುವಳಿಕೆಯೂ ಇರಬೇಕು. ಸ್ವಯಂ ಖುಷಿಯಲ್ಲಿದ್ದಾಗಲೇ ಅನ್ಯರನ್ನೂ ಖುಷಿಯಲ್ಲಿ ತರುತ್ತೀರಿ, ಒಳಗೆ ಯಾವುದೇ ಕೆಟ್ಟ ಗುಣಗಳಿದ್ದರೆ, ಕೊರತೆಗಳಿದ್ದರೆ ಮನಸ್ಸು ತಿನ್ನುತ್ತಾ ಇರುತ್ತದೆ. ಕೆಲಕೆಲವರು ಬಂದು ಹೇಳುತ್ತಾರೆ, ಬಾಬಾ ನಮ್ಮಲ್ಲಿ ಕ್ರೋಧವಿದೆ, ನಮ್ಮಲ್ಲಿ ಈ ಭೂತವಿದೆ. ಇದು ಚಿಂತೆಯ ಮಾತಾಯಿತಲ್ಲವೆ. ಭೂತಗಳಿರಲು ಬಿಡಬಾರದು, ಕ್ರೋಧವನ್ನೇಕೆ ಮಾಡುವುದು! ಪ್ರೀತಿಯಿಂದ ತಿಳಿಸಲಾಗುತ್ತದೆ – ತಂದೆಯು ಯಾರ ಮೇಲಾದರೂ ಕ್ರೋಧ ಮಾಡುತ್ತಾರೆಯೇ? ಶಿವ ತಂದೆಯ ಮಹಿಮೆಯಿದೆಯಲ್ಲವೆ. ಬಹಳ ಸುಳ್ಳು ಮಹಿಮೆಯನ್ನು ಮಾಡುತ್ತಾರೆ. ನಾನು ಏನು ಮಾಡುತ್ತೇನೆ! ಬಂದು ಪತಿತರಿಂದ ಪಾವನ ಮಾಡಿ ಎಂದು ಹೇಳುತ್ತಾರೆ. ಹೇಗೆ ವೈದ್ಯರಿಗೆ ನಮ್ಮ ಖಾಯಿಲೆಯನ್ನು ದೂರ ಮಾಡಿ ಎಂದು ಹೇಳುತ್ತಾರೆ, ಅವರು ಔಷಧಿ ನೀಡಿ, ಇಂಜೆಕ್ಷನ್ ಕೊಡುತ್ತಾರೆ. ಅದಂತೂ ಅವರ ಕೆಲಸವಾಗಿದೆ, ಅದೇನು ದೊಡ್ಡ ಮಾತು! ಓದುವುದೇ ಸರ್ವೀಸಿಗಾಗಿ, ಹೆಚ್ಚು ಓದಿದರೆ ಹೆಚ್ಚು ಸಂಪಾದನೆ ಮಾಡಿಕೊಳ್ಳುತ್ತಾರೆ. ತಂದೆಯಂತೂ ಯಾವುದೇ ಸಂಪಾದನೆ ಮಾಡಬೇಕಾಗಿಲ್ಲ, ಅವರು ಕೇವಲ ಸಂಪಾದನೆ ಮಾಡಿಸಬೇಕಾಗಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ನೀವು ನನಗೆ ಅವಿನಾಶಿ ಸರ್ಜನ್ ಎಂದೂ ಹೇಳುತ್ತೀರಿ. ಇದು ನನಗೆ ಹೆಚ್ಚು ಮಹಿಮೆ ಮಾಡಿದ್ದೀರಿ. ಪತಿತ-ಪಾವನನಿಗೆ ಸರ್ಜನ್ ಎಂದು ಹೇಳಲಾಗುವುದಿಲ್ಲ, ಇದು ಕೇವಲ ಮಹಿಮೆಯಾಗಿದೆ. ತಂದೆಯಂತೂ ಇಷ್ಟನ್ನೇ ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನನ್ನೊಬ್ಬನನ್ನೇ ನೆನಪು ಮಾಡಿರಿ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಎಂದು ತಿಳಿಸುವುದೇ ನನ್ನ ಪಾತ್ರವಾಗಿದೆ. ಇದು ರಾಜಯೋಗದ ಜ್ಞಾನವಾಗಿದೆ. ಯಾರು ಗೀತೆಯನ್ನು ಓದಿದ್ದಾರೆಯೋ ಅವರಿಗೆ ತಿಳಿಸುವುದು ಸಹಜವಾಗುತ್ತದೆ. ನೀವು ಪೂಜ್ಯ ರಾಜಾಧಿರಾಜರಾಗುತ್ತೀರಿ ನಂತರ ಪೂಜಾರಿಗಳಾಗುತ್ತೀರಿ. ನೀವು ಪರಿಶ್ರಮ ಪಡಬೇಕಾಗಿದೆ. ವಿಶ್ವವನ್ನೇ ನೀವು ಪವಿತ್ರವನ್ನಾಗಿ ಮಾಡುತ್ತೀರಿ, ಇದು ಎಷ್ಟು ದೊಡ್ಡ ಪದವಿಯಾಗಿದೆ! ಕಲಿಯುಗೀ ಪರ್ವತವನ್ನು ಪರಿವರ್ತಿಸುವುದರಲ್ಲಿ ನೀವೆಲ್ಲರೂ ಕಿರು ಬೆರಳಿನ ಸಹಯೋಗ ನೀಡುತ್ತೀರಿ ಬಾಕಿ ಸ್ಥೂಲವಾಗಿ ಪರ್ವತದ ಯಾವುದೇ ಮಾತಿಲ್ಲ. ಈಗ ನಿಮಗೆ ತಿಳಿದಿದೆ, ಹೊಸ ಪ್ರಪಂಚವು ಬರಲಿದೆ ಆದ್ದರಿಂದ ರಾಜಯೋಗವನ್ನು ಅವಶ್ಯವಾಗಿ ಕಲಿಯಬೇಕಾಗಿದೆ, ತಂದೆಯೇ ಬಂದು ಕಲಿಸುತ್ತಾರೆ. ಈಗ ಸತೋಪ್ರಧಾನರಾಗಬೇಕಾಗಿದೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರಿಗೆ ತಿಳಿಸಿದ ಕೂಡಲೇ ನಾಟುವುದು. ಈ ಮಾತು ಸರಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ತಂದೆಯು ಅವಶ್ಯವಾಗಿ ಮನ್ಮನಾಭವ ಎಂದು ಹೇಳಿದ್ದರು. ಅದು ಸಂಸ್ಕೃತ ಶಬ್ಧವಾಗಿದೆ. ತಂದೆಯಂತೂ ನನ್ನನ್ನು ನೆನಪು ಮಾಡಿ ಎಂದು ಹಿಂದಿ ಭಾಷೆಯಲ್ಲಿ ಹೇಳುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಎಷ್ಟು ಶ್ರೇಷ್ಠ ಧರ್ಮ – ಶ್ರೇಷ್ಠ ಕರ್ಮದವರಾಗಿದ್ದಿರಿ. ಆದ್ದರಿಂದಲೇ 16 ಕಲಾ ಸಂಪೂರ್ಣ…. ಎಂದು ಗಾಯನವಿದೆ. ಪುನಃ ಆ ರೀತಿ ಆಗಬೇಕಾಗಿದೆ. ತಮ್ಮನ್ನು ನೋಡಿಕೊಳ್ಳಿ, ನಾವು ಎಷ್ಟು ಸತೋಪ್ರಧಾನರಾಗಿದ್ದೇವೆ, ಪಾವನರಾಗಿದ್ದೇವೆ. ಎಷ್ಟು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವ ಸೇವೆ ಮಾಡುತ್ತೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ನಿರಹಂಕಾರಿಗಳಾಗಬೇಕಾಗಿದೆ. ಈ ಶರೀರದ ಸಂಭಾಲನೆ ಮಾಡುತ್ತಾ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ತಂದೆಗೆ ಸಹಯೋಗಿಗಳಾಗಬೇಕಾಗಿದೆ.

2. ಒಳಗೆ ಯಾವುದೇ ಭೂತವಿರಲು ಅನುಮತಿ ಕೊಡಬಾರದು. ಎಂದೂ ಯಾರ ಮೇಲೂ ಕ್ರೋಧ ಮಾಡಬಾರದು. ಎಲ್ಲರೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳಬೇಕು. ಮಾತಾಪಿತರನ್ನು ಅನುಸರಿಸಿ ಸಿಂಹಾಸನಾಧೀಶರಾಗಬೇಕಾಗಿದೆ.

ವರದಾನ:-

ಹೇಗೆ ಬ್ರಹ್ಮಾ ತಂದೆಯು ಜ್ಞಾನಿ ಹಾಗೂ ಅಜ್ಞಾನಿ ಆತ್ಮರ ಮೂಲಕ ಆಗಿರುವ ಟೀಕೆಯನ್ನೂ ಸಹನೆ ಮಾಡುತ್ತಾ, ಅದನ್ನು ಪರಿವರ್ತನೆ ಮಾಡಿ ಬಿಟ್ಟರು. ಹಾಗಾದರೆ ಫಾಲೋ ಫಾದರ್ ಮಾಡಿರಿ. ಇದಕ್ಕಾಗಿ ಕೇವಲ ತಮ್ಮ ಸಂಕಲ್ಪಗಳಲ್ಲಿ ಧೃಡತೆಯನ್ನು ಧಾರಣೆ ಮಾಡಿಕೊಳ್ಳಿರಿ. ಇದು ಎಲ್ಲಿಯವರೆಗೆ ಆಗುತ್ತದೆ ಎಂದು ಯೋಚಿಸಬಾರದು. ಕೇವಲ ಮೊದಲು ಸ್ವಲ್ಪ ಹೇಗಾಗುವುದೋ, ಎಲ್ಲಿಯವರೆಗೆ ಸಹನೆ ಮಾಡುತ್ತೇವೆಯೋ ಎಂದೆನಿಸುತ್ತದೆ. ಆದರೆ ಒಂದುವೇಳೆ ತಮಗಾಗಿ ಯಾರೇನಾದರೂ ಮಾತನಾಡುತ್ತಾರೆ ಎಂದರೂ ಸಹ ತಾವು ಶಾಂತವಾಗಿರಿ, ಸಹನೆ ಮಾಡಿಕೊಳ್ಳುತ್ತೀರೆಂದರೆ, ಅವರೂ ಸಹ ಬದಲಾಗಿ ಬಿಡುವರು. ಇದರಲ್ಲಿ ಕೇವಲ ಹೃದಯ ವಿಧೀರ್ಣರು ಆಗಬಾರದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top