05 November 2021 KANNADA Murli Today | Brahma Kumaris

Read and Listen today’s Gyan Murli in Kannada

4 November 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ವಿಚಾರ ಸಾಗರ ಮಂಥನ ಮಾಡುತ್ತಾ ಸರ್ವೀಸಿನ ಭಿನ್ನ-ಭಿನ್ನ ಯುಕ್ತಿಗಳನ್ನು ತೆಗೆಯಿರಿ, ಅದರಿಂದ ಎಲ್ಲರಿಗೂ ತಂದೆಯ ಪರಿಚಯವು ಸಿಗಲಿ”

ಪ್ರಶ್ನೆ:: -

ತಂದೆಯು ಪ್ರತಿಯೊಬ್ಬ ಮಗುವಿಗೆ ಶ್ರೇಷ್ಠ ಅದೃಷ್ಟವನ್ನು ರೂಪಿಸಲು ಯಾವ ಯುಕ್ತಿಯನ್ನು ತಿಳಿಸುತ್ತಾರೆ?

ಉತ್ತರ:-

ತಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಬೇಕೆಂದರೆ ಒಳಗಿನ ಎಲ್ಲಾ ಛೀ-ಛೀ ಕೆಟ್ಟ ಹವ್ಯಾಸಗಳನ್ನು ತೆಗೆಯಿರಿ. ಸುಳ್ಳು ಹೇಳುವುದು, ಕೋಪ ಮಾಡಿಕೊಳ್ಳುವುದು – ಇವು ಬಹಳ ಕೆಟ್ಟ ಹವ್ಯಾಸಗಳಾಗಿವೆ, ಸರ್ವೀಸಿನ ಉಮ್ಮಂಗವನ್ನು ಇಟ್ಟುಕೊಂಡು, ತಂದೆಯು ನಿರಹಂಕಾರಿಯಾಗಿದ್ದು ಹೇಗೆ ಸೇವೆ ಮಾಡುತ್ತಾರೆ ಹಾಗೆಯೇ ಎಷ್ಟು ಸಾಧ್ಯವೋ ಅನ್ಯರ ಕಲ್ಯಾಣಾರ್ಥವಾಗಿ ಆತ್ಮಿಕ ಸೇವೆಯಲ್ಲಿ ತತ್ಪರರಾಗಿರಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸತ್ತರೂ ನಿಮ್ಮ ಮಡಿಲಲ್ಲಿಯೇ, ಬದುಕಿದರೂ ನಿಮ್ಮ ಮಡಿಲಿನಲ್ಲಿಯೇ….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಮೊಟ್ಟ ಮೊದಲು ಈ ಮಾತನ್ನು ತಿಳಿದುಕೊಳ್ಳಬೇಕು ಮತ್ತು ತಿಳಿಸಬೇಕಾಗಿದೆ – ತಂದೆಯು ಯಾರು? ಮಕ್ಕಳಿಗೆ ಯಾವಾಗ ನಾವು ಬೇಹದ್ದಿನ ತಂದೆಯ ಸಂತಾನರಾಗಿದ್ದೇವೆಂದು ನಿಶ್ಚಯ ಮಾಡಿಕೊಳ್ಳುತ್ತೀರೋ ಆಗಲೇ ಅತೀಂದ್ರಿಯ ಸುಖದ ಅನುಭವವಾಗುತ್ತದೆ. ಕೇವಲ ಇದೊಂದೇ ಮಾತಿನಿಂದ ಖುಷಿಯ ನಶೆಯೇರುತ್ತದೆ. ಇದು ಸ್ಥಿರವಾದ ಖುಷಿಯ ಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ – ನಾವು ತಮ್ಮನ್ನು ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೇವೆ. ಇದು ಹೊಸ ರಚನೆಯಾಗಿದೆ ಅಂದಮೇಲೆ ಮೊದಲು ಎಲ್ಲರಿಗೆ ನಿಶ್ಚಯ ಮಾಡಿಸಬೇಕಾಗಿದೆ – ಇವರು ನಿಮ್ಮ ತಂದೆಯಾಗಿದ್ದಾರೆ. ತಂದೆಯ ಕೆಳಗಡೆ ವಿಷ್ಣು ಇದ್ದಾರೆ (ತ್ರಿಮೂರ್ತಿಯ ಚಿತ್ರದಲ್ಲಿ) ತಂದೆಯಿಂದ ವಿಷ್ಣು ಪುರಿಯ ಆಸ್ತಿಯು ಸಿಗುತ್ತದೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಇದನ್ನು ನಿಶ್ಚಯ ಮಾಡಿಸಿ ನಂತರ ಬರೆಸಬೇಕು. ವಿಷ್ಣುವಿನ ಅರ್ಥವು ವೈಷ್ಣವರೆಂಬುದನ್ನು ಹೇಳುತ್ತಾರೆ. ಭಾರತವಾಸಿಗಳು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಈ ದೇವಿ-ದೇವತೆಗಳು ನಿರ್ವಿಕಾರಿಯಾಗಿದ್ದರು, ಸ್ವರ್ಗದಲ್ಲಿ ಇವರದು ಪವಿತ್ರ ಪ್ರವೃತ್ತಿ ಮಾರ್ಗವಿತ್ತು. ತಾವು ಸಂಪೂರ್ಣ ನಿರ್ವಿಕಾರಿಗಳು ನಾವು ವಿಕಾರಿಗಳೆಂದು ಹಾಡುತ್ತಾರೆ, ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳು, ಕಲಿಯುಗದಲ್ಲಿ ಸಂಪೂರ್ಣ ವಿಕಾರಿಗಳಿದ್ದಾರೆ. ವಿಕಾರಿಗಳಿಗೆ ಪತಿತರು, ಭ್ರಷ್ಟಾಚಾರಿಗಳೆಂದು ಹೇಳುತ್ತಾರೆ. ಕ್ರೋಧಿಗೆ ಪತಿತ, ಭ್ರಷ್ಟಾಚಾರಿ ಎಂದು ಹೇಳಲಾಗುವುದಿಲ್ಲ, ಕ್ರೋಧವಂತೂ ಸನ್ಯಾಸಿಗಳಲ್ಲಿಯೂ ಇರುತ್ತದೆ ಅಂದಮೇಲೆ ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಯಾವಾಗ ಭಾರತದಲ್ಲಿ ಬರುತ್ತಾರೆಯೋ ಆಗ ಈ ಮಹಾಭಾರಿ ಯುದ್ಧವೂ ಆಗುತ್ತದೆ ಏಕೆಂದರೆ ಪರಮಾತ್ಮನು ಬಂದು ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ಎಲ್ಲರ ಶರೀರಗಳ ವಿನಾಶವಾಗುವುದು ಅಂದಾಗ ಈ ನಿಶ್ಚಯವಿರಲಿ – ನಮಗೆ ತಂದೆಯು ಓದಿಸುತ್ತಾರೆ ಅಂದಮೇಲೆ ಎಷ್ಟು ನಿಯಮಿತವಾಗಿ ಓದಬೇಕು. ಇಲ್ಲಿ ಹಾಸ್ಟೆಲ್ ಇಲ್ಲ, ಹಾಸ್ಟೆಲ್ ಮಾಡಿಸಿದರೆ ಮತ್ತೆ ಬಹಳಷ್ಟು ಮನೆಗಳು ಬೇಕಾಗುವುದು. ಕೇವಲ ಏಳು ದಿನ, ನಾಲ್ಕು ದಿನಗಳಿಗಾಗಿ ಬಂದರೂ ಸಹ ಮನೆಗಳನ್ನು ಕಟ್ಟಿಸಬೇಕಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿದ್ದು ಕೇವಲ ತಂದೆಯನ್ನು ನೆನಪು ಮಾಡಿರಿ, ತಂದೆಯೇ ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಾನು ಗ್ಯಾರಂಟಿ ಕೊಡುತ್ತೇನೆ, ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗುತ್ತವೆ. ಮೊದಲು ಇದನ್ನು ಬರೆಸಿಕೊಳ್ಳಬೇಕು – ಅವಶ್ಯವಾಗಿ ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಮತ್ತೆ ವಿಶ್ವದ ಮಾಲೀಕತ್ವಕ್ಕೆ ಹಕ್ಕುದಾರರಾಗುತ್ತೇವೆ. ರಾಜ-ರಾಣಿ, ಪ್ರಜೆಗಳೆಲ್ಲರೂ ವಿಶ್ವದ ಮಾಲೀಕರಾಗುತ್ತಾರೆ. ಮೇಳ, ಪ್ರದರ್ಶನಿಗಳಲ್ಲಿ ಯಾರೆಲ್ಲರೂ ತಿಳಿಸುವವರಾಗಿದ್ದಾರೆಯೋ ಅವರಿಗೆ ತಂದೆಯು ಆದೇಶ ನೀಡುತ್ತಾರೆ, ಮೂಲ ಮಾತನ್ನು ತಿಳಿಸಬೇಕಾಗಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಒಬ್ಬರೇ ಆಗಿದ್ದಾರೆ, ಅವರೇ ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಜ್ಞಾನಸಾಗರನೆಂದ ಮೇಲೆ ಅವಶ್ಯವಾಗಿ ಅವರೇ ಆದೇಶ ನೀಡುತ್ತಾರೆ, ಕೃಷ್ಣನಂತೂ ನೀಡಲು ಸಾಧ್ಯವಿಲ್ಲ. ಶಿವ ತಂದೆಯ ವಿನಃ ಮತ್ತ್ಯಾರೂ ಭಗವಂತನಲ್ಲ, ಬ್ರಹ್ಮಾ-ವಿಷ್ಣು-ಶಂಕರನೂ ಸಹ ದೇವತೆಗಳಾಗಿದ್ದಾರೆ. ಸ್ವರ್ಗದಲ್ಲಿ ಎಲ್ಲರೂ ದೈವೀ ಗುಣವಂತ ಮನುಷ್ಯರಿರುತ್ತಾರೆ, ಇಲ್ಲಿ ಕಲಿಯುಗದಲ್ಲಿ ಆಸುರೀ ಗುಣವಂತ ಮನುಷ್ಯರಿದ್ದಾರೆ. ಇದನ್ನೂ ಸಹ ನಂತರ ತಿಳಿಸಬೇಕಾಗಿದೆ. ಮೊಟ್ಟ ಮೊದಲು ತಂದೆಯ ಪರಿಚಯವನ್ನು ನೀಡಿ, ಸಹಿ ಮಾಡಿಸಿಕೊಳ್ಳಬೇಕು. ವಿಚಾರ ಸಾಗರ ಮಂಥನ ಮಾಡಲು ಭಿನ್ನ-ಭಿನ್ನ ಯುಕ್ತಿಗಳನ್ನು ತೆಗೆಯಬೇಕು ಮತ್ತು ಬಾಬಾ, ಈ ಪ್ರಕಾರದ ಪ್ರಶ್ನೆಯನ್ನು ಹೇಳುತ್ತಾರೆ, ನಾವು ಈ ಪ್ರಕಾರದಿಂದ ತಿಳಿಸಿದೆವು ಎಂದು ತಂದೆಗೆ ತಿಳಿಸಬೇಕಾಗಿದೆ. ನಂತರ ತಂದೆಯೂ ಸಹ ಇಂತಹ ಮಾತನ್ನು ತಿಳಿಸುತ್ತಾರೆ ಯಾವುದು ಅವರಿಗೆ ಪ್ರಭಾವ ಬೀರುತ್ತದೆ. ತಂದೆಗೆ ಸರ್ವವ್ಯಾಪಿ ಅಥವಾ ಮೀನು-ಮೊಸಳೆ ಅವತಾರವೆಂದು ಹೇಳುವುದೂ ಸಹ ನಿಂದನೆಯಾಗಿದೆ ಆದ್ದರಿಂದ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರು ಸತೋಪ್ರಧಾನರಾಗಿದ್ದರು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿ ಬಿಟ್ಟಿದ್ದಾರೆ ಮತ್ತೆ ತಂದೆಯು ತಿಳಿಸುತ್ತಾರೆ – ಈಗ ಮತ್ತೆ ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಯಾವುದೇ ಧರ್ಮದವರಾಗಿರಲಿ ತಂದೆಯ ಸಂದೇಶವು ಎಲ್ಲರಿಗೋಸ್ಕರ ಇದೆ. ಅವರಿಗೆ ಗಾಡ್ ಫಾದರ್, ಲಿಬರೇಟರ್ ಎಂದು ಹೇಳುತ್ತಾರೆ. ಲಿಬರೇಟ್ ಮಾಡಲು ಅವಶ್ಯವಾಗಿ ಪತಿತ ಪ್ರಪಂಚದಲ್ಲಿ ಬರುತ್ತಾರೆ. ಕಲಿಯುಗದ ಅಂತ್ಯದಲ್ಲಿ ಇಡೀ ಪ್ರಪಂಚವೇ ತಮೋಪ್ರಧಾನವಾಗಿದೆ. ಯಾವಾಗ ಸತೋಪ್ರಧಾನವಾಗುವರೋ ಆಗಲೇ ಹೊಸ ಪ್ರಪಂಚದಲ್ಲಿ ಹೋಗಲು ಸಾಧ್ಯ ಬಾಕಿ ಯಾರು ಅಲ್ಲಿಗೆ ಬರುವುದಿಲ್ಲವೋ ಅವರು ಶಾಂತಿಧಾಮದಲ್ಲಿ ಇರುತ್ತಾರೆ. ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ, ಇದರಿಂದ ಅವರು ತಿಳಿದುಕೊಳ್ಳಲಿ- ನಾವು ಆ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ತಂದೆಯು ವಿದೇಹಿಯಾಗಿದ್ದಾರೆ, ವಿಚಿತ್ರನಾಗಿದ್ದಾರೆ ಮತ್ತೆಲ್ಲರಿಗೂ ಭಿನ್ನ-ಭಿನ್ನ ಚಿತ್ರಗಳಿವೆ (ಶರೀರವಿದೆ). ಅನ್ಯರಿಗೆ ತಿಳಿಸುವ ಉಮ್ಮಂಗವಿರಬೇಕು. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಅಷ್ಟು ಮಂದಿ ಸೇವಾಕೇಂದ್ರಕ್ಕೆ ಬರುವುದಿಲ್ಲ. ಸೇವೆಯಲ್ಲಿದ್ದಾಗ ಮಕ್ಕಳಿಗೆ ಬಹಳ ಉಲ್ಲಾಸವಿರುವುದು. ಇಲ್ಲಿ ತಂದೆಯನ್ನು ಪದೇ-ಪದೇ ಮರೆತು ಹೋಗುತ್ತಾರೆ. ಸರ್ವೀಸಿನಲ್ಲಿದ್ದಾಗ ನೆನಪಿನ ಯಾತ್ರೆಯನ್ನು ಮರೆಯುವುದಿಲ್ಲ. ಸ್ವಯಂ ನೆನಪು ಮಾಡುತ್ತಾರೆ ಅನ್ಯರಿಗೂ ನೆನಪು ತರಿಸುತ್ತಾರೆ. ನೀವು ಮಕ್ಕಳು ಓದುತ್ತಿದ್ದೀರಿ, ನಿಮ್ಮ ಬುದ್ಧಿಯಲ್ಲಿದೆ – ನಾವು ಅವಶ್ಯವಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಇದು ನೆನಪಿನಲ್ಲಿದ್ದರೂ ಸಾಕು ಖುಷಿಯಿರುತ್ತದೆ. ಮರೆತು ಹೋಗುವುದರಿಂದಲೇ ಗಾಬರಿಯಾಗುತ್ತದೆ.

ತಂದೆಗೆ ಬರೆಯಬೇಕು – ಬಾಬಾ, ನಾವು ಅತೀಂದ್ರಿಯ ಸುಖದಲ್ಲಿದ್ದೇವೆ, ಇನ್ನು ಸ್ವಲ್ಪವೇ ಸಮಯವಿದೆ, ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. 63 ಜನ್ಮಗಳು ನಾವು ಬಹಳ ರೋಗಿಯಾಗಿದ್ದೆವು, ಯಾವುದೇ ಔಷಧೋಪಚಾರ ಸಿಗಲಿಲ್ಲ, ಯಾರಿಂದಲೂ ಸಹಕಾರ ಸಿಗಲಿಲ್ಲ ಆದ್ದರಿಂದ ರೋಗ ಇನ್ನೂ ಮನೆ ಮಾಡಿಕೊಂಡಿತು. ಇದು ಇಂತಹ ಕಾಯಿಲೆಯಾಗಿದೆ ಅವಿನಾಶಿ ಸರ್ಜನ್ನಿನ ಚಿಕಿತ್ಸೆಯಿಲ್ಲದೆ ಇದು ಬಿಟ್ಟು ಹೋಗುವುದಿಲ್ಲ. ಈಗ ಎಲ್ಲರ ಕಾಯಿಲೆಯು ಬಿಡುಗಡೆಯಾಗುವ ಸಮಯವಾಗಿದೆ. ಪವಿತ್ರರಾಗಿ ಮುಕ್ತಿಧಾಮದಲ್ಲಿ ಹೊರಟು ಹೋಗುತ್ತೀರಿ, ಕೆಲವರು ಮುಕ್ತಿಯಲ್ಲಿರುವುದು ಒಳ್ಳೆಯದು. ಪಾತ್ರವೇ ಇರುವುದಿಲ್ಲವೆಂದು ಹೇಳುತ್ತಾರೆ. ಹೇಗೆ ನಾಟಕದಲ್ಲಿ ಯಾರಾದರೂ ಸ್ವಲ್ಪ ಪಾತ್ರ ಮಾಡಿ ಹೊರಟು ಹೋದರೆ ಹೀರೋ-ಹೀರೋಯಿನ್ ಅಥವಾ ಉತ್ತಮ ಪಾತ್ರಧಾರಿಗಳೆಂದು ಹೇಳಲಾಗುವುದಿಲ್ಲ. ತಂದೆಯು ತಿಳಿಸುತ್ತಾರೆ – ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಿರಿ ಆಗ ಪಕ್ಕಾ ಆಗಿಬಿಡುವಿರಿ. ನೆನಪನ್ನು ಎಂದೂ ಮರೆಯಬಾರದು. ಮುಖ್ಯವಾದವರು ಒಬ್ಬ ತಂದೆಯಾಗಿದ್ದಾರೆ ಬಾಕಿ ತಿಳಿಸುವುದಕ್ಕಾಗಿ ಚಿಕ್ಕ-ಚಿಕ್ಕ ಚಿತ್ರಗಳಿವೆ. ಇದರಿಂದ ಸಿದ್ಧ ಮಾಡಬೇಕಾಗಿದೆ, ಶಿವ-ಶಂಕರ ಒಂದೇ ಅಲ್ಲ. ಸೂಕ್ಷ್ಮವತನದಲ್ಲಿ ಇದ್ಯಾವುದೇ ಮಾತಿರುವುದಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ, ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಜ್ಞಾನವನ್ನು ಕೊಡುವವರು ಒಬ್ಬ ತಂದೆಯಾಗಿದ್ದಾರೆ. ಅವರು ಸಂಗಮಯುಗದಲ್ಲಿಯೇ ಕೊಡುತ್ತಾರೆ. ಇದನ್ನು ಪಕ್ಕಾ ಮಾಡಿಕೊಳ್ಳಿ. ಭಾರತವಾಸಿಗಳಿಗಂತೂ ಕಲ್ಪ-ಕಲ್ಪವೂ ಸ್ವರ್ಗದ ಆಸ್ತಿಯು ಸಿಗುತ್ತದೆ. ಇದು 5000 ವರ್ಷಗಳ ಮಾತಾಗಿದೆ, ಇದನ್ನು ಅವರು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಕೇವಲ ಕಲಿಯುಗಕ್ಕೇ ಲಕ್ಷಾಂತರ ವರ್ಷಗಳೆಂದು ಅವರು ಹೇಳಿ ಬಿಡುತ್ತಾರೆ ಮತ್ತು ಇಡೀ ಚಕ್ರವೇ 5000 ವರ್ಷಗಳು ಎಂದು ನಾವು ಹೇಳುತ್ತೇವೆ. ಅವರು ಎಷ್ಟು ದೊಡ್ಡ ಅಸತ್ಯವನ್ನು ಬರೆದಿದ್ದಾರೆ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ, ಕೃಷ್ಣನಿಗೆ ಪತಿತ-ಪಾವನನೆಂದು ಹೇಳುವುದಿಲ್ಲ. ಯಾವುದೇ ಧರ್ಮದವರು ಕೃಷ್ಣನಿಗೆ ಮುಕ್ತಿದಾತನೆಂದು ಹೇಳುವುದಿಲ್ಲ. ಹೇ ಪತಿತ-ಪಾವನ ಎಂದು ಕರೆಯುತ್ತಾರೆಂದರೆ ಬುದ್ಧಿಯು ಮೇಲೆ ಹೋಗುತ್ತದೆ ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಎಷ್ಟೊಂದು ಮಾಯೆಯ ಅಂಧಕಾರವಿದೆ. ಶಾಸ್ತ್ರಗಳು ಅನಾದಿಯೆಂದು ಹೇಳುತ್ತಾರೆ ಆದರೆ ಸತ್ಯ-ತ್ರೇತಾಯುಗದಲ್ಲಿ ಇವು ಇರುವುದೇ ಇಲ್ಲ. ಇದು ಇಂತಹ ವಿದ್ಯೆಯಾಗಿದೆ, ಕಾಯಿಲೆಯ ಸಮಯದಲ್ಲಿ ತರಗತಿಯಲ್ಲಿ ಕುಳಿತು ಓದಬಹುದಾಗಿದೆ, ಇಲ್ಲಿ ನೆಪಗಳು ನಡೆಯುವುದಿಲ್ಲ. ಹಸು ಬಹಳ ಒಳ್ಳೆಯದಾಗಿರುತ್ತದೆ, ಕೆಲವು ಹಸುಗಳಂತೂ ಒದೆಯುತ್ತವೆ, ಇಲ್ಲಿಯೂ ಯಾರಲ್ಲಿಯಾದರೂ ಕ್ರೋಧವಿದೆಯೆಂದರೆ ಅಹಂಕಾರಕ್ಕೆ ವಶರಾಗಿ ಒದೆಯುವುದನ್ನೂ ಮಾಡುತ್ತಾರೆ, ಡಿಸ್ಸರ್ವೀಸ್ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳಲ್ಲಿ ಯಾವುದೇ ಅವಗುಣವಿರಬಾರದು ಆದರೆ ಕರ್ಮ ಬಂಧನವು ಹೀಗಿದೆ, ಅದು ಶ್ರೇಷ್ಠ ಪದವಿಯನ್ನು ಪಡೆಯಲು ಬಿಡುವುದಿಲ್ಲ. ತಂದೆಯೇ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳುವ ಮಾರ್ಗವನ್ನು ತಿಳಿಸುತ್ತಾರೆ ಆದರೆ ಅದನ್ನು ರೂಪಿಸಿಕೊಳ್ಳುವುದಿಲ್ಲ ಎಂದರೆ ತಂದೆಯೇನು ಮಾಡುವರು? ಇದು ಬಹಳ ದೊಡ್ಡ ಸಂಪಾದನೆಯಾಗಿದೆ, ಸಂಪಾದನೆಯ ನಶೆಯಿರಬೇಕು. ಸಂಪಾದನೆ ಮಾಡದಿದ್ದರೆ ಪರಿಣಾಮವೇನಾಗುವುದು! ಕಲ್ಪ-ಕಲ್ಪವೂ ಇದೇ ಗತಿಯಾಗುವುದು. ತಂದೆಯಂತೂ ಎಲ್ಲರಿಗೆ ಸಾವಧಾನ ನೀಡುತ್ತಾರೆ, ನಿಂದನೆ ಮಾಡುವುದಿಲ್ಲ, ಮಕ್ಕಳಲ್ಲಿ ಯಾವುದೇ ಛೀ ಛೀ ಹವ್ಯಾಸವಿರಬಾರದು. ಸುಳ್ಳು ಹೇಳುವುದು ಬಹಳ ಕೆಟ್ಟದ್ದಾಗಿದೆ. ಯಜ್ಞದ ಸೇವೆಯನ್ನು ಖುಷಿ-ಖುಷಿಯಿಂದ ಮಾಡಬೇಕು. ತಂದೆಯ ಬಳಿ ಬರುತ್ತಾರೆ, ತಂದೆಯು ಸೇವೆ ಮಾಡಿ ಎಂದು ಸೂಚನೆ ನೀಡುತ್ತಾರೆ, ಯಾರು ನಿಮಗೆ ತಿನ್ನಿಸುತ್ತಾರೆಯೋ ಅವರ ಸೇವೆಯನ್ನು ಅವಶ್ಯವಾಗಿ ಮಾಡಬೇಕಲ್ಲವೆ. ಸೇವೆ ಮಾಡುವುದನ್ನು ತಂದೆಯು ಕಲಿಸುತ್ತಾರೆ. ನೋಡಿ, ಶ್ರೇಷ್ಠಾತಿ ಶ್ರೇಷ್ಠ ತಂದೆಯೂ ಸಹ ಎಷ್ಟೊಂದು ಸೇವೆ ಮಾಡುತ್ತಾರೆ! ಯಾವ ಸೇವೆಯನ್ನು ಅಜ್ಞಾನದಲ್ಲಿಯೂ ಮಾಡಲಿಲ್ಲವೋ ಅದನ್ನು ಮಾಡಬೇಕಾಗುತ್ತದೆ. ಇಷ್ಟು ನಿರಹಂಕಾರಿಗಳಾಗಬೇಕಾಗಿದೆ. ಕಾಯಿದೆಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಬಾರದು, ಎಷ್ಟು ಸಾಧ್ಯವೋ ಅನ್ಯರ ಕಲ್ಯಾಣಾರ್ಥವಾಗಿ ಎಲ್ಲವನ್ನೂ ಕೈಗಳಿಂದ ಮಾಡಬೇಕಾಗಿದೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸೇವೆ ತೆಗೆದುಕೊಂಡರೆ ಅದು ಬೇರೆ ಮಾತಾಗಿದೆ. ತನ್ನನ್ನು ನಿರಹಂಕಾರಿ, ನಿರ್ಮೋಹಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ, ತಂದೆಯ ನೆನಪಿಲ್ಲದೇ ಯಾರದೇ ಕಲ್ಯಾಣವಾಗಲು ಸಾಧ್ಯವಿಲ್ಲ. ಎಷ್ಟು ನೆನಪು ಮಾಡುವರೋ ಅಷ್ಟು ಪಾವನರಾಗುವರು. ನೆನಪಿನಲ್ಲಿಯೇ ವಿಘ್ನಗಳು ಬೀಳುತ್ತವೆ, ಜ್ಞಾನದಲ್ಲಿ ಇಷ್ಟೊಂದು ವಿಘ್ನ ಬೀಳುವುದಿಲ್ಲ. ಜ್ಞಾನದ ಅನೇಕ ಮಾತುಗಳಿವೆ. ತಂದೆಯನ್ನು ನೆನಪು ಮಾಡುವುದರಿಂದಲೇ ಸುಗಂಧಭರಿತ ಹೂಗಳಾಗುತ್ತಾರೆ. ಕಡಿಮೆ ನೆನಪು ಮಾಡಿದರೆ ಚೆಂಡು ಮಲ್ಲಿಗೆಯಾಗುತ್ತಾರೆ, ಎಕ್ಕದ ಹೂವೂ ಆಗುತ್ತಾರೆ ಆದ್ದರಿಂದ ತಮ್ಮನ್ನು ಸುಗಂಧಭರಿತ ಹೂವನ್ನಾಗಿ ಮಾಡಿಕೊಳ್ಳಬೇಕು, ಯಾವುದೇ ದುರ್ಗಂಧ ಇರಬಾರದು. ಆತ್ಮವು ಸುಗಂಧಭರಿತವಾಗಬೇಕಾಗಿದೆ, ಇಷ್ಟು ಚಿಕ್ಕ ಬಿಂದುವಿನಲ್ಲಿ ಸಂಪೂರ್ಣ ಜ್ಞಾನವು ಅಡಕವಾಗಿದೆ! ಇದು ಎಷ್ಟು ಅದ್ಭುತವಾಗಿದೆ. ಸೃಷ್ಟಿಯು ಒಂದೇ ಆಗಿದೆ, ಮೇಲಾಗಲಿ ಅಥವ ಕೆಳಗಡೆಯಾಗಲಿ ಸೃಷ್ಟಿಯಿಲ್ಲ. ತ್ರಿಮೂರ್ತಿಯ ಅರ್ಥವನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಅವರು ಕೇವಲ ತ್ರಿಮೂರ್ತಿ ಮಾರ್ಗವೆಂದು ಹೆಸರನ್ನು ಇಟ್ಟಿದ್ದಾರೆ. ಕೆಲವರಿಗೆ ಬ್ರಹ್ಮನಿಗೆ ತ್ರಿಮೂರ್ತಿಯೆಂದು ಹೇಳಿ ಬಿಡುತ್ತಾರೆ, ಅವರ ಚರಿತ್ರೆಯನ್ನೇ ತಿಳಿದುಕೊಂಡಿಲ್ಲ. ಶಾಸ್ತ್ರಗಳಲ್ಲಿ ಶ್ರೇಷ್ಠಾಚಾರಿ ಮನುಷ್ಯರ ಜೀವನ ಚರಿತ್ರೆಯಿದೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣ ಮೊದಲಾದವರೆಲ್ಲರೂ ಮನುಷ್ಯರೇ ಆಗಿದ್ದಾರೆ ಆದರೆ ಅನ್ಯರ ಜೀವನ ಕಥೆಗೆ ಶಾಸ್ತ್ರವೆಂದು ಹೇಳಲಾಗುವುದಿಲ್ಲ, ದೇವತೆಗಳ ಜೀವನ ಚರಿತ್ರೆಗೆ ಶಾಸ್ತ್ರವೆಂದು ಹೇಳಲಾಗುತ್ತದೆ ಬಾಕಿ ಶಿವ ತಂದೆಯ ಜೀವನ ಚರಿತ್ರೆ ಎಲ್ಲಿದೆ? ಅವರಂತೂ ನಿರಾಕಾರನಾಗಿದ್ದಾರೆ. ಸ್ವಯಂ ಅವರೇ ತಿಳಿಸುತ್ತಾರೆ – ನಾನು ಪತಿತ-ಪಾವನನಾಗಿದ್ದೇನೆ, ನನ್ನನ್ನು ಎಲ್ಲರೂ ತಂದೆ ಎಂದು ಹೇಳಿ ಕರೆಯುತ್ತಾರೆ, ನಾನು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತೇನೆ, ಭಾರತವು 5000 ವರ್ಷಗಳ ಮೊದಲು ಸ್ವರ್ಗವಾಗಿತ್ತು ಈಗ ಪುನಃ ಆಗಬೇಕಾಗಿದೆ. ಎಷ್ಟು ಸಹಜವಾಗಿದೆ! ಆದರೆ ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ, ಬುದ್ಧಿಯ ಬೀಗವೇ ತೆರೆಯುವುದಿಲ್ಲ. ಜ್ಞಾನ ಮತ್ತು ಯೋಗದ ಬೀಗವು ಬಂಧ್ ಆಗಿದೆ.

ತಂದೆಯು ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ ಎಂಬ ಸಂದೇಶವನ್ನು ಮನೆಮನೆಗೂ ತಿಳಿಸಿರಿ. ಫಸ್ಟ್ ಫ್ಲೋರ್ ಮೂಲವತನ, ಸೆಕೆಂಡ್ ಫ್ಲೋರ್ ಸೂಕ್ಷ್ಮವತನ, ಥರ್ಡ್ ಫ್ಲೋರ್ ಈ ಸಾಕಾರಿ ಪ್ರಪಂಚವಾಗಿದೆ. ಒಂದುವೇಳೆ ಮಕ್ಕಳಿಗೆ ಇವುಗಳ ನೆನಪಿದ್ದರೂ ಸಹ ಮೊದಲು ತಂದೆಯು ಅವಶ್ಯವಾಗಿ ನೆನಪಿಗೆ ಬರುವರು. ಸೇವೆಗಾಗಿ ಓಡಬೇಕಾಗಿದೆ, ತಂದೆಯು ಎಲ್ಲಿಗೂ ಹೋಗುವುದನ್ನು ನಿರಾಕರಿಸುವುದಿಲ್ಲ. ಭಲೆ ವಿವಾಹಗಳಿಗೆ ಹೋಗಿರಿ, ತೀರ್ಥ ಸ್ಥಾನಗಳಿಗೆ ಹೋಗಿರಿ, ಸರ್ವೀಸ್ ಮಾಡಲು ಹೋಗಿರಿ. ಭಾಷಣ ಮಾಡಿರಿ, ಇದನ್ನೇ ತಿಳಿಸಿರಿ – ಒಂದು ಆತ್ಮಿಕ ಯಾತ್ರೆಯಾಗಿದೆ, ಇನ್ನೊಂದು ದೈಹಿಕ ಯಾತ್ರೆಯಾಗಿದೆ. ಜ್ಞಾನ ಬಿಂದುಗಳಂತೂ ಬಹಳ ಸಿಗುತ್ತಿರುತ್ತವೆ, ವಾನಪ್ರಸ್ಥಿಗಳ ಸಂಗದಲ್ಲಿ ಹೋಗಿ ಸರ್ವೀಸ್ ಮಾಡಿರಿ. ಅವರದನ್ನು ಕೇಳಿರಿ, ಅವರು ಏನು ಹೇಳುತ್ತಾರೆ ಎಂದು. ಕೈಯಲ್ಲಿ ಭಿತ್ತಿ ಪತ್ರವಿರಲಿ. ಮುಖ್ಯವಾದ ನಾಲ್ಕೈದು ಮಾತುಗಳು ಅದರಲ್ಲಿ ಬರೆದಿರಲಿ – ಈಶ್ವರ ಸರ್ವವ್ಯಾಪಿ ಅಲ್ಲ, ಗೀತೆಯ ಭಗವಂತ ಕೃಷ್ಣನಲ್ಲ, ಇದನ್ನು ಸ್ಪಷ್ಟವಾಗಿ ಬರೆದು ಬಿಡಿ. ಅದನ್ನು ಯಾರಾದರೂ ಓದಿದರೆ ಇದು ಸತ್ಯವೇ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಇದರಲ್ಲಿ ಬಹಳ ಚತುರತೆ ಬೇಕಾಗಿದೆ. ತಂದೆಯೂ ತ್ರಿಮೂರ್ತಿಯ ಚಿತ್ರದ ಬಗ್ಗೆಯೂ ತಿಳಿಸುತ್ತಾರೆ. ಈ ಚಿತ್ರವನ್ನು ಪದೇ-ಪದೇ ಜೇಬಿನಿಂದ ತೆಗೆದು ನೋಡುತ್ತಾ ಇರಿ, ಯಾರಿಗಾದರೂ ತಿಳಿಸಿರಿ. ಇದು ತಂದೆ, ಇದು ಆಸ್ತಿ. ವಿಷ್ಣುವಿನ ಚಿತ್ರವೂ ಚೆನ್ನಾಗಿದೆ, ನೀವು ರೈಲಿನಲ್ಲಿಯೂ ಸರ್ವೀಸ್ ಮಾಡಬಹುದು, ತಂದೆಯನ್ನು ನೆನಪು ಮಾಡಿದರೆ ವಿಶ್ವದ ಮಾಲೀಕರಾಗಿ ಬಿಡುತ್ತೀರಿ ಎಂದು. ಬಹಳಷ್ಟು ಸೇವೆಯಾಗುತ್ತದೆ ಆದರೆ ಯಾರಿಗೂ ಬುದ್ಧಿಯು ಬರುವುದೂ ಇಲ್ಲ. ಬಹಳ ಪುರುಷಾರ್ಥ ಮಾಡಬೇಕಾಗಿದೆ. ಯುದ್ಧದ ಮೈದಾನದಲ್ಲಿ ಸುಸ್ತಿಯಾಗಬಾರದು. ಬಹಳ ಎಚ್ಚರಿಕೆ ವಹಿಸಬೇಕಾಗಿದೆ, ಮಂದಿರಗಳಲ್ಲಿಯೂ ಬಹಳಷ್ಟು ಸರ್ವೀಸ್ ನಡೆಯುತ್ತದೆ. ಕೇವಲ ತಂದೆಯು ತಿಳಿಸುತ್ತಾರೆ – ಮನ್ಮನಾಭವ. ತಮೋಪ್ರಧಾನರಿಂದ ಸತೋಪ್ರಧಾನರಾಗಿರಿ. ಮುಖ್ಯ ಮಾತನ್ನು ಪಕ್ಕಾ ಮಾಡಿಸಬೇಕು. ಮಕ್ಕಳಿಗೆ ಸರ್ವೀಸಿನ ಬಹಳ ವಿಚಾರವಿರಬೇಕು – ತ್ರಿಮೂರ್ತಿಯ ಚಿತ್ರದಲ್ಲಿ ಇಡೀ ಜ್ಞಾನವು ಅಡಕವಾಗಿದೆ, ಏಣಿಯ ಚಿತ್ರದಲ್ಲಿಯೂ ಚೆನ್ನಾಗಿದೆ. ಪ್ರತಿಯೊಬ್ಬರೂ ಹಣ ಸಂಪಾದಿಸಲು ತಮ್ಮ ಉನ್ನತಿಯನ್ನು ಬಯಸುತ್ತಾರೆ. ಚಿಕ್ಕ ಮಕ್ಕಳಿಗೂ ಸಹ ಯುಕ್ತಿಗಳನ್ನು ಕಲಿಸಿ, ಆಗ ಎಲ್ಲರೂ ಶಭಾಷ್ ಹೇಳುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರದು ಕಮಾಲ್ ಆಗಿದೆ, ಚಿಕ್ಕ ಮಕ್ಕಳೂ ಸಹ ಎಷ್ಟೊಂದು ಜ್ಞಾನವನ್ನು ಕೊಡುತ್ತಾರೆ ಅದನ್ನು ಯಾವುದೇ ಸನ್ಯಾಸಿಗಳೂ ಕೊಡಲು ಸಾಧ್ಯವಿಲ್ಲ. ಉಚಿತವಾಗಿ ವಸ್ತು ಸಿಕ್ಕಿದರೆ ಇದನ್ನು ನಮ್ಮ ಕಲ್ಯಾಣಕ್ಕಾಗಿ ಕೊಡುತ್ತಾರೆಂದು ತಿಳಿಯುತ್ತಾರೆ. ಆಗ ತಿಳಿಸಿ, ಇದು ಉಚಿತವಾಗಿದೆ, ಭಲೆ ತಾವು ಓದಿರಿ, ಇದರಿಂದ ತಮ್ಮ ಕಲ್ಯಾಣ ಮಾಡಿಕೊಳ್ಳಿ. ಶಿವ ತಂದೆಯು ಭೋಲಾ ಭಂಡಾರಿ ಆಗಿದ್ದಾರಲ್ಲವೆ. ಅನೇಕ ಮಕ್ಕಳಿದ್ದಾರೆ, ತಂದೆಗೆ ಹಣದ ಅವಶ್ಯಕತೆಯೇನಿದೆ! ರೈಲಿನಲ್ಲಿಯೂ ನೀವು ಬಹಳ ಸರ್ವೀಸ್ ಮಾಡಬಹುದು. ಒಳ್ಳೆಯ ವ್ಯಕ್ತಿಯನ್ನು ನೋಡಿ ಕೂಡಲೇ ಅವರಿಗೆ ತಿಳಿಸಿ, ಚಿತ್ರವನ್ನು ಕೊಟ್ಟು ಬಿಡಿ. ಹೇಳಿರಿ, ನೀವು ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಿ ಮತ್ತು ಅನ್ಯರ ಕಲ್ಯಾಣವನ್ನೂ ಮಾಡಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವುದೇ ಕಾಯಿದೆಗೆ ವಿರುದ್ಧವಾದ ಕೆಲಸವನ್ನು ಮಾಡಬಾರದು, ಬಹಳ-ಬಹಳ ನಿರಹಂಕಾರಿ, ನಿರ್ಮೋಹಿಗಳಾಗಬೇಕಾಗಿದೆ. ಎಷ್ಟು ಸಾಧ್ಯವೋ ಪ್ರತೀ ಕಾರ್ಯವನ್ನು ತಮ್ಮ ಕೈಗಳಿಂದ ಮಾಡಬೇಕಾಗಿದೆ. ಯಜ್ಞದ ಸೇವೆಯನ್ನು ಬಹಳ ಖುಷಿಯಿಂದ ಮಾಡಬೇಕಾಗಿದೆ

2. ವಿದ್ಯೆಯಲ್ಲಿ ಎಂದೂ ನೆಪ ಹೇಳಬಾರದು, ಕಾಯಿಲೆಯ ಸಮಯದಲ್ಲಿಯೂ ಅವಶ್ಯವಾಗಿ ಓದಬೇಕು, ಉಲ್ಲಾಸದಲ್ಲಿರಲು ಸರ್ವೀಸಿನ ಉಮ್ಮಂಗವನ್ನು ಇಟ್ಟುಕೊಳ್ಳಬೇಕಾಗಿದೆ.

ವರದಾನ:-

ಭಕ್ತಿಮಾರ್ಗದಲ್ಲಿ ಗಣೇಶನನ್ನು ವಿಘ್ನ-ವಿನಾಶಕನೆಂದು ಪೂಜಿಸುತ್ತಾರೆ, ಜೊತೆ-ಜೊತೆಗೆ ಜ್ಞಾನಪೂರ್ಣ ಅರ್ಥಾತ್ ವಿದ್ಯಾಪತಿಯೆಂದೂ ಸಹ ಮಾನ್ಯತೆ ಕೊಡುತ್ತಾರೆ.ಅಂದಾಗ ಯಾವ ಮಕ್ಕಳು ಮಾಸ್ಟರ್ ಜ್ಞಾನಪೂರ್ಣರಾಗುವರೋ ಅವರೆಂದಿಗೂ ವಿಘ್ನಗಳಿಂದ ಸೋಲನ್ನನುಭವಿಸಲು ಸಾಧ್ಯವಿಲ್ಲ ಏಕೆಂದರೆ ಜ್ಞಾನಕ್ಕೆ ಪ್ರಕಾಶತೆ-ಶಕ್ತಿಯೆಂದು ಹೇಳಲಾಗುತ್ತದೆ. ಅದರಿಂದ ಗುರಿಯವರೆಗೆ ತಲುಪುವುದು ಸಹಜವಾಗಿ ಬಿಡುತ್ತದೆ. ಈ ರೀತಿಯಲ್ಲಿ ಯಾರು ವಿಘ್ನ-ವಿನಾಶಕರಾಗಿ ಇದ್ದಾರೆ, ತಂದೆಯ ಜೊತೆ ಕಂಬೈಂಡ್ ಆಗಿರುತ್ತಾ ಜ್ಞಾನದ ಸ್ಮರಣೆ ಮಾಡುತ್ತಿರುತ್ತಾರೆಯೋ ಅವರೆಂದಿಗೂ ವಿಘ್ನಗಳಿಂದ ಸೋಲಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top