05 June 2022 KANNADA Murli Today | Brahma Kumaris

Read and Listen today’s Gyan Murli in Kannada

4 June 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಬ್ರಾಹ್ಮಣ ಜೀವನದ ಶ್ರೇಷ್ಠ ಪರ್ಸನಾಲಿಟಿ (ವ್ಯಕ್ತಿತ್ವ) - ಸಂತುಷ್ಟತೆ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾರವರು ತನ್ನ ನಾಲ್ಕಾರು ಕಡೆಯ ಸಂತುಷ್ಟ ಮಣಿಗಳನ್ನು ನೋಡುತ್ತಿದ್ದಾರೆ. ಸಂಗಮಯುಗದಲ್ಲಿ ಸಂತುಷ್ಟವಾಗಿರುವುದು ಮತ್ತೆ ಸಂತುಷ್ಟರನ್ನಾಗಿ ಮಾಡುವಂತಹ ಯುಗವಾಗಿದೆ. ಬ್ರಾಹ್ಮಣ ಜೀವನದ ವಿಶೇಷತೆ ಸಂತುಷ್ಟತೆಯಾಗಿದೆ. ಸಂತುಷ್ಟತೆ ಎಲ್ಲದಕ್ಕಿಂತ ದೊಡ್ಡ ಖಜಾನೆಯಾಗಿದೆ. ಸಂತುಷ್ಟತೆಯೇ ಬ್ರಾಹ್ಮಣ ಜೀವನದ ಪವಿತ್ರತೆಯ ವ್ಯಕ್ತಿತ್ವವಾಗಿದೆ. ಈ ವ್ಯಕ್ತಿತ್ವದಿಂದ ಸಹಜವಾಗಿ ವಿಶೇಷ ಆತ್ಮರಾಗಿ ಬಿಡುತ್ತಾರೆ. ಸಂತುಷ್ಟತೆಯ ವ್ಯಕ್ತಿತ್ವ ಇಲ್ಲವೆಂದರೆ ವಿಶೇಷ ಆತ್ಮ ಎಂದು ಹೇಳಲು ಸಾಧ್ಯವಿಲ್ಲ. ಈಗಿನ ಕಾಲದಲ್ಲಿ ಎರಡು ಪ್ರಕಾರದ ಪರ್ಸನಾಲಿಟಿ (ವ್ಯಕ್ತಿತ್ವ) ಗಾಯನ ಮಾಡಲಾಗುತ್ತದೆ. ಒಂದಾಗಿದೆ ಶಾರೀರಿಕ ಪರ್ಸನಾಲಿಟಿ (ವ್ಯಕ್ತಿತ್ವ), ಇನ್ನೊಂದು ಪದವಿಯ ಪರ್ಸನಾಲಿಟಿ (ವ್ಯಕ್ತಿತ್ವ) ಯಾಗಿದೆ. ಬ್ರಾಹ್ಮಣ ಜೀವನದಲ್ಲಿ ಯಾವ ಬ್ರಾಹ್ಮಣ ಆತ್ಮನಲ್ಲಿ ಸಂತುಷ್ಟತೆಯ ಮಹಾನತೆ ಇರುತ್ತದೆಯೋ ಅವರ ಮುಖದಲ್ಲಿ, ಅವರ ಚೆಹರೆಯಲ್ಲೂ ಸಹ ಸಂತುಷ್ಟತೆಯ ಪರ್ಸನಾಲಿಟಿ (ವ್ಯಕ್ತಿತ್ವ) ಕಂಡುಬರುತ್ತದೆ ಮತ್ತೆ ಶ್ರೇಷ್ಠ ಸ್ಥಿತಿಯ ಪದವಿಯ ಪರ್ಸನಾಲಿಟಿ (ವ್ಯಕ್ತಿತ್ವ) ಕಂಡು ಬರುತ್ತದೆ. ಸಂತುಷ್ಟತೆಯ ಆಧಾರ ತಂದೆಯ ಮುಖಾಂತರ ಪ್ರಾಪ್ತಿ ಆಗಿರುವ ಸರ್ವ ಪ್ರಾಪ್ತಿಗಳಿಂದ ಭರ್ಪೂರ್ ಅರ್ಥಾತ್ ಸಂತುಷ್ಟತೆ. ಅಸಂತುಷ್ಟತಕ್ಕೆ ಕಾರಣ ಅಪ್ರಾಪ್ತಿಯಾಗಿದೆ. ಸಂತುಷ್ಟತಕ್ಕೆ ಕಾರಣ ಸರ್ವ ಪ್ರಾಪ್ತಿಗಳು. ಆದ್ದರಿಂದ ಬಾಪ್ದಾದಾರವರು ತಾವೆಲ್ಲಾ ಬ್ರಾಹ್ಮಣ ಮಕ್ಕಳಿಗೆ ಬ್ರಾಹ್ಮಣ ಜನ್ಮ ಪಡೆದ ತಕ್ಷಣ ಪೂರ್ತಿ ಆಸ್ತಿಯನ್ನು ಕೊಟ್ಟು ಬಿಟ್ಟಿದ್ದಾರಲ್ಲವೇ, ಅಥವಾ ಕೆಲವರಿಗೆ ಸ್ವಲ್ಪ, ಕೆಲವರಿಗೆ ಅಧಿಕ ಕೊಟ್ಟಿದ್ದಾರೇನು? ಬಾಪ್ದಾದಾರವರು ಸದಾ ಮಕ್ಕಳಿಗೆ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಸರ್ವ ಪ್ರಾಪ್ತಿಗಳು ಆಸ್ತಿಯಾಗಿದೆ. ಇದರಲ್ಲಿ ಸರ್ವ ಶಕ್ತಿಗಳು, ಸರ್ವಗುಣಗಳು, ಜ್ಞಾನವೂ ಸಹ ಬಂದು ಬಿಡುತ್ತದೆ. ಕೇವಲ ಜ್ಞಾನ ಅಲ್ಲ, ಸಂಪೂರ್ಣ ಜ್ಞಾನ. ಕೇವಲ ಶಕ್ತಿಗಳು, ಮತ್ತೆ ಗುಣಗಳು ಅಲ್ಲ ಆದರೆ ಸರ್ವ ಗುಣಗಳು ಮತ್ತು ಸರ್ವ ಶಕ್ತಿಗಳು ಆಗ ಸಂಪನ್ನತೆಯ ಆಸ್ತಿ ಸಿಗುತ್ತದೆ. ಯಾವುದೇ ಕೊರತೆ ಇರುವುದಿಲ್ಲ. ಸರ್ವ ಬ್ರಾಹ್ಮಣ ಮಕ್ಕಳಿಗೆ ಪೂರ್ತಿ ಆಸ್ತಿ ಸಿಗುತ್ತದೆ, ಅರ್ಥ ಸಿಗುವುದಿಲ್ಲ. ಸರ್ವ ಗುಣಗಳಲ್ಲಿ ಎರಡು ಗುಣಗಳು ನಿಮಗೆ, ಎರಡು ಗುಣಗಳು ಇವರಿಗೆ, ಈ ರೀತಿ ಕೊಟ್ಟಿರಲಿಲ್ಲ. ಪೂರ್ತಿ ಆಸ್ತಿ ಅರ್ಥಾತ್ ಸಂಪನ್ನತೆ, ಸಂಪೂರ್ಣತೆ. ಯಾವುದೂ ಕಡಿಮೆ ಇಲ್ಲ. ಯಾವಾಗ ಪ್ರತಿಯೊಬ್ಬರಿಗೆ ಪೂರ್ತಿ ಆಸ್ತಿ ಸಿಗುತ್ತದೆ ಅಂದಾಗ ಎಲ್ಲಿ ಸರ್ವ ಪ್ರಾಪ್ತಿಗಳು ಇರುತ್ತದೆಯೋ ಅಲ್ಲಿ ಸಂತುಷ್ಟತೆ ಇರುತ್ತದೆ. ಬಾಪ್ದಾದಾರವರು ಸರ್ವ ಬ್ರಾಹ್ಮಣರ ಸಂತುಷ್ಟತೆಯ ಪರ್ಸನಾಲಿಟಿ (ವ್ಯಕ್ತಿತ್ವ) ಎಷ್ಟಿದೆ ಎಂದು ನೋಡುತ್ತಿದ್ದಾರೆ. ಬ್ರಾಹ್ಮಣ ಜೀವನದಲ್ಲಿ ಅಸಂತುಷ್ಟತೆಯ ಹೆಸರು-ಗುರುತೇ ಇಲ್ಲ. ಬ್ರಾಹ್ಮಣ ಜೀವನದ ವ್ಮಜಾ ಇದೆ ಎಂದರೆ ಈ ಪರ್ಸನಾಲಿಟಿ (ವ್ಯಕ್ತಿತ್ವ) ಯಲ್ಲಿದೆ. ಇದೇ ವ್ಮಜಾದ ಜೀವನ, ಮೌಜಿನ ಜೀವವಾಗಿದೆ.

ಸಂತುಷ್ಟತೆಯ ಪರ್ಸನಾಲಿಟಿ (ವ್ಯಕ್ತಿತ್ವ) ನಯನಗಳಲ್ಲಿ, ಚೆಹರೆಯಲ್ಲಿ, ಚಲನೆಯಲ್ಲಿ ಕಂಡುಬರಬೇಕೆ, ಇದೇ ತಪಸ್ಸಿನ ಅರ್ಥವಾಗಿದೆ. ಅಂತಹ ಸಂತುಷ್ಟ ಮಣಿಗಳ ಮಾಲೆ ತಯಾರಾಗುತ್ತಿದೆ. ಎಷ್ಟು ಮಾಲೆ ಆಗಿದೆ? ಸಂತುಷ್ಟ ಮಣಿ ಅರ್ಥಾತ್ ಮಚ್ಚೆ ಇಲ್ಲದ ಮಣಿ. ಸಂತುಷ್ಟ ಆತ್ಮ ಸ್ವಯಂ ಸಹ ಸದಾ ಪ್ರಸನ್ನಚಿತ್ತವಾಗಿರುತ್ತಾರೆ ಮತ್ತೆ ಅನ್ಯರಿಂದಲೂ ಪ್ರಸನ್ನವಾಗಿರುತ್ತಾರೆ – ಇದೇ ಸಂತುಷ್ಟತೆಯ ಚಿನ್ಹೆಯಾಗಿದೆ. ಪ್ರಸನ್ನಚಿತ್ತ ಸ್ಥಿತಿಯಲ್ಲಿ ಪ್ರಶ್ನ ಚಿತ್ತ ಆಗುವುದಿಲ್ಲ. ಒಂದಾಗಿದೆ ಪ್ರಸನ್ನಚಿತ್ತ, ಇನ್ನೊಂದಾಗಿದೆ ಪ್ರಶ್ನಚಿತ್ತ. ಪ್ರಶ್ನೆ ಅರ್ಥಾತ್ ಕ್ವಶ್ಚನ್. ಪ್ರಸನ್ನಚಿತ್ತ ಡ್ರಾಮಾದ ನಾಲೆಜ್ಫುಲ್ (ಜ್ಞಾನವಂತ) ಆಗಿರುವ ಕಾರಣ ಪ್ರಸನ್ನವಾಗಿರುತ್ತಾರೆ, ಪ್ರಶ್ನೆ ಮಾಡುವುದಿಲ್ಲ. ಯಾವುದೇ ಪ್ರಶ್ನೆ ತಮ್ಮ ಪ್ರತಿ ಅಥವಾ ಯಾರ ಪ್ರತಿಯಾದರೂ ಬರುತ್ತದೆಂದರೆ ಅದಕ್ಕೆ ಉತ್ತರ ಮೊದಲು ಸ್ವಯಂನಲ್ಲಿ ಬರುತ್ತದೆ. ಏನು ಮತ್ತು ಏಕೆ ಎನ್ನುವುದಿರಬಾರದು ಆದರೆ ಬಿಂದು (ಡಾಟ್) ಇಡಬೇಕೆಂದು ಮೊದಲೂ ಸಹ ತಿಳಿಸಲಾಗಿದೆ. ಒಂದು ಸೆಕೆಂಡಿನಲ್ಲಿ ಸಾರ, ಒಂದು ಸೆಕೆಂಡಿನಲ್ಲಿ ವಿಸ್ತಾರ. ಈ ರೀತಿ ಪ್ರಸನ್ನಚಿತ್ತರು ಸದಾ ಸಂತುಷ್ಟವಾಗಿರುತ್ತಾರೆ. ಅಂದಾಗ ಇಂತಹ ಚಿನ್ಹೆಗಳು ನನ್ನ ಸಂತುಷ್ಟ ಮಣಿಯಲ್ಲಿ ಇದೆಯೇ? ಎಂದು ಪರಿಶೀಲನೆ ಮಾಡಿಕೊಳ್ಳಿ. ಬಾಪ್ದಾದಾರವರಂತೂ ಎಲ್ಲರಿಗೂ ಸಂತುಷ್ಟ ಮಣಿಯ ಟೈಟಿಲ್ (ಬಿರುದು) ನ್ನು ಕೊಟ್ಟಿದ್ದಾರೆ. ಅಂದಾಗ ಬಾಪ್ದಾದಾರವರು ಹೇ ಸಂತುಷ್ಟಮಣಿಗಳೇ ಸದಾ ಸಂತುಷ್ಟವಾಗಿದ್ದೀರಾ? ಎಂದು ಕೇಳುತ್ತಿದ್ದಾರೆ. ಮತ್ತೆ ಪ್ರಶ್ನೆ ಸ್ವಯಂನಲ್ಲಿ ಅರ್ಥಾತ್ ಸ್ವಯಂನ ಪುರುಷಾರ್ಥದಿಂದ, ಸ್ವಯಂನ ಸಂಸ್ಕಾರ ಪರಿವರ್ತನೆಯ ಪುರುಷಾರ್ಥದಿಂದ, ಸ್ವಯಂನ ಪುರುಷಾರ್ಥದ ಪರ್ಸೆಂಟೇಜಿನಲ್ಲಿ, ಸ್ಥಿತಿಯಲ್ಲಿ ಸಂತುಷ್ಟವಾಗಿದ್ದೀರಾ? ಒಳ್ಳೆಯದು ಇನ್ನೊಂದು ಪ್ರಶ್ನೆ – ಸ್ವಯಂನ ಮನಸಾ, ವಾಚಾ, ಕರ್ಮಣಾ ಅರ್ಥಾತ್ ಸಂಬಂಧ-ಸಂಪರ್ಕದ ಮುಖಾಂತರ ಸೇವೆಯಲ್ಲಿ ಸದಾ ಸಂತುಷ್ಟವಾಗಿದ್ದೀರಾ? ಮೂರೂ ಸೇವೆಗಳು, ಕೇವಲ ಒಂದು ಸೇವೆಯಲ್ಲಿ ಅಲ್ಲ. ಮೂರೂ ಸೇವೆಯಲ್ಲಿ ಸದಾ ಸಂತುಷ್ಟವಾಗಿದ್ದೀರಾ? ನಾನು ಎಲ್ಲಿಯ ತನಕ ಸಂತುಷ್ಟವಾಗಿದ್ದೀನಿ ಎನ್ನುವುದು ನೋಡಿಕೊಳ್ಳುತ್ತಿದ್ದೀರಾ, ಯೋಚನೆ ಮಾಡುತ್ತಿದ್ದೀರಾ? ಒಳ್ಳೆಯದು ಮೂರನೇ ಪ್ರಶ್ನೆಯಾಗಿದೆ – ಸರ್ವ ಆತ್ಮರ ಸಂಬಂಧ-ಸಂಪರ್ಕದಲ್ಲಿ ಸ್ವಯಂನ ಮುಖಾಂತರ ಅಥವಾ ಸರ್ವರ ಮುಖಾಂತರ ಸದಾ ಸಂತುಷ್ಟವಾಗಿದ್ದೀರಾ? ಏಕೆಂದರೆ ತಪಸ್ಯಾ ವರ್ಷದಲ್ಲಿ ತಪಸ್ಸಿನ, ಸಫಲತೆಯ ಫಲ ಇದನ್ನೇ ಪ್ರಾಪ್ತಿ ಮಾಡಿಕೊಳ್ಳುವುದು. ಸ್ವಯಂನಿಂದ, ಸೇವೆಯಿಂದ ಮತ್ತೆ ಸರ್ವರಿಂದ ಸಂತುಷ್ಟತೆ ಇರಬೇಕು. ನಾಲ್ಕು ಗಂಟೆ ಯೋಗ ಮಾಡುತ್ತಿದ್ದೀರಾ ಒಳ್ಳೆಯದು, 4 ಗಂಟೆಯಿಂದ 8 ಗಂಟೆವರೆಗೆ ತಲುಪಿ ಬಿಡುತ್ತೀರಿ. ಇದೂ ಸಹ ಬಹಳ ಒಳ್ಳೆಯದು. ಯೋಗದ ಸಿದ್ಧಿ ಸ್ವರೂಪರಾಗಿ. ಯೋಗದ ವಿಧಿಯಾಗಿದೆ. ಆದರೆ ಈ ವಿಧಿಯಿಂದ ಏನು ಸಿದ್ಧಿ ಸಿಗುತ್ತದೆ? ಯೋಗವನ್ನು ಜೋಡಿಸುವುದು, ಇದು ವಿಧಿಯಾಗಿದೆ, ಯೋಗದ ಪ್ರಾಪ್ತಿ ಇದು ಸಿದ್ಧಿಯಾಗಿದೆ. ಆದ್ದರಿಂದ ಹೇಗೆ 8 ಗಂಟೆ ಯೋಗದ ಲಕ್ಷ್ಯ ಇಟ್ಟುಕೊಂಡಿದ್ದೀರೆಂದಾಗ ಕಡಿಮೆ ಪಕ್ಷ ಮೂರೂ ಪ್ರಕಾರದ ಸಂತುಷ್ಟತೆಯ ಸಿದ್ಧಿಯ ಸ್ಪಷ್ಟ ಲಕ್ಷ್ಯ ಇಟ್ಟುಕೊಳ್ಳಿ. ಕೆಲವು ಮಕ್ಕಳು ಸ್ವಯಂ ಮಿಯಾ ಮಿಟ್ಟು (ನನಗೆ ಎಲ್ಲಾ ಗೊತ್ತಿದೆ) ಸಂತುಷ್ಟರೆಂದು ತಿಳಿದುಕೊಳ್ಳುತ್ತಾರೆ. ಈ ರೀತಿ ಆಗಬಾರದು. ಒಂದಾಗಿಗೆ ಹೃದಯದಿಂದ ತಿಳಿದುಕೊಳ್ಳುವುದು, ಇನ್ನೊಂದು ಬುದ್ಧಿಯಿಂದ ತಿಳಿದುಕೊಳ್ಳುವುದು. ಬುದ್ಧಿಯಿಂದ ತಿಳಿದುಕೊಳ್ಳುತ್ತಾರೆ ನಾನು ಸಂತುಷ್ಟವಾಗಿದ್ದೇನೆಂದು – ಈ ರೀತಿ ಸಂತುಷ್ಟತೆ ಅಲ್ಲ, ಯಥಾರ್ಥವಾಗಿ ತಿಳಿದುಕೊಳ್ಳುಬೇಕು. ಸಂತುಷ್ಟತೆಯ ಚಿನ್ಹೆಗಳು ಸ್ವಯಂನಲ್ಲಿ ಅನುಭವ ಆಗಬೇಕು. ಮನಸ್ಸು ಸದಾ ಪ್ರಸನ್ನವಾಗಿರಬೇಕು, ಪರ್ಸನಾಲಿಟಿ (ವ್ಯಕ್ತಿತ್ವ) ಇರಬೇಕು. ಸ್ವಯಂನ್ನು ಪರ್ಸನಾಲಿಟಿ (ವ್ಯಕ್ತಿತ್ವ) ಎಂದು ತಿಳಿದುಕೊಳ್ಳುವುದು ಮತ್ತೆ ಅನ್ಯರು ಒಪ್ಪುವುದಿಲ್ಲ, ಇದಕ್ಕೆ ಮಿಯಾ ಮಿಟ್ಟು (ಎಲ್ಲಾ ಗೊತ್ತಿದೆ ಎನ್ನುವ ಅಹಂಕಾರಿ) ಎಂದು ಕರೆಯಲಾಗುತ್ತದೆ. ಈ ರೀತಿ ಸಂತುಷ್ಟವಲ್ಲ. ಆದರೆ ಯಥಾರ್ಥ ಅನುಭವದ ಮುಖಾಂತರ ಸಂತುಷ್ಟ ಆತ್ಮರಾಗಿ. ಸಂತುಷ್ಟತೆ ಅರ್ಥಾತ್ ಮನಸ್ಸು-ಬುದ್ಧಿ ಸದಾ ಆರಾಮವಾಗಿ ಇರುವುದು. ಸುಖದ ಸ್ಥಿತಿಯಲ್ಲಿ ಇರುವುದು. ದುಃಖದಲ್ಲಿ ಇರುವುದಿಲ್ಲ. ಅಂತಹ ಸಂತುಷ್ಟ ಮಣಿಗಳು ತಂದೆಯ ಮಸ್ತಕದ ಮಣಿಗಳ ಸಮಾನ ಸದಾ ಹೊಳೆಯುತ್ತಿರುತ್ತಾರೆ. ಆದ್ದರಿಂದ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಿ. ಸಂತುಷ್ಟತೆ ತಂದೆಯಿಂದ ಮತ್ತೆ ಸರ್ವರಿಂದ ಆಶೀರ್ವಾದಗಳನ್ನು ಕೊಡಿಸುತ್ತದೆ. ಸಂತುಷ್ಟ ಆತ್ಮ ಸಮಯ ಪ್ರತಿ ಸಮಯ ತಂದೆ ಮತ್ತು ಸರ್ವರ ಆಶೀರ್ವಾದಗಳ ವಿಮಾನದಲ್ಲಿ ಹಾರುವಂತಹ ಅನುಭವವನ್ನು ಮಾಡುತ್ತಾರೆ. ಈ ಆಶೀರ್ವಾದಗಳೇ ಅವರಿಗೆ ವಿಮಾನವಾಗಿದೆ. ಸದಾ ಸ್ವಯಂ ವಿಮಾನದಲ್ಲಿ ಹಾರುವ ಹಾಗೆ ಅನುಭವ ಆಗುತ್ತದೆ. ಆಶೀರ್ವಾದಗಳು ಬೇಡುವುದಲ್ಲ, ಆದರೆ ಆಶೀರ್ವಾದಗಳು ಸ್ವಯಂ ಅವರ ಮುಂದೆ ಸ್ವತಹವಾಗಿ ಬಂದು ಬಿಡುತ್ತದೆ. ಅಂತಹ ಸಂತುಷ್ಟ ಮಣಿ ಅರ್ಥಾತ್ ಸಿದ್ಧಿ ಸ್ವರೂಪ ತಪಸ್ವಿ. ಅಲ್ಪಕಾಲದ ಸಿದ್ಧಿಗಳು ಅಲ್ಲ, ಇದು ಅವಿನಾಶಿ ಮತ್ತು ಆತ್ಮಿಕ ಸಿದ್ಧಿಗಳು. ಇಂತಹ ಸಂತುಷ್ಟ ಮಣಿಗಳನ್ನು ನೋಡುತ್ತಿದ್ದಾರೆ. ಪ್ರತೊಯೊಬ್ಬರು ತಮ್ಮನ್ನು ತಾವೇ ನಾನು ಯಾರು? ಎಂದು ಕೇಳಿಕೊಳ್ಳಿ.

ತಪಸ್ಯಾ ವರ್ಷದ ಉಮ್ಮಂಗ-ಉತ್ಸಾಹ ಚೆನ್ನಾಗಿದೆ. ಪ್ರತಿಯೊಬ್ಬರೂ ಯಥಾ ಶಕ್ತಿ ಅನುಸಾರವಾಗಿ ಮಾಡುತ್ತಿದ್ದಾರೆ. ಈ ಉತ್ಸಾಹ ಬಹಳ ಚೆನ್ನಾಗಿದೆ. ಈಗ ತಪಸ್ಸಿನ ಮೂಲಕ ಪ್ರಾಪ್ತಿಗಳನ್ನು ಸ್ವಯಂ ತಮ್ಮ ಜೀವನದಲ್ಲಿ ಮತ್ತೆ ಸರ್ವರ ಸಂಬಂಧ-ಸಂಪರ್ಕದಲ್ಲಿ ಪ್ರತ್ಯಕ್ಷ ಮಾಡಿ. ತಮ್ಮಲ್ಲಿ ತಾವೇ ಅನುಭವ ಮಾಡುತ್ತೀರಿ ಆದರೆ ಅನುಭವವನ್ನು ಕೇವಲ ಮನಸ್ಸು-ಬುದ್ಧಿಯಿಂದ ಮಾಡಿದ್ದೀರಿ, ಆ ಅನುಭವವನ್ನು ಇಲ್ಲಿಯವರೆಗೇ ಇಟ್ಟುಕೊಳ್ಳಬೇಡಿ. ಆ ಅನುಭವವನ್ನು ಚಲನೆ, ಚೆಹರೆ, ಸಂಬಂಧ-ಸಂಪರ್ಕದಲ್ಲಿ ತರಬೇಕು. ಆಗ ಮೊದಲು ಸ್ವಯಂನಲ್ಲಿ ಪ್ರತ್ಯಕ್ಷ ಆಗುತ್ತದೆ, ನಂತರ ಸಂಬಂಧದಲ್ಲಿ ಪ್ರತ್ಯಕ್ಷ ಆಗುತ್ತದೆ, ಮತ್ತೆ ವಿಶ್ವದ ಸ್ಟೇಜಿನ ಮೇಲೆ ಪ್ರತ್ಯಕ್ಷವಾಗುತ್ತದೆ. ಆಗ ಪ್ರತ್ಯಕ್ಷತೆಯ ನಗಾರಿ ಬಾರಿಸುತ್ತದೆ. ಹೇಗೆ ನಿಮ್ಮ ನೆನಪಾರ್ಥವನ್ನು ಶಾಸ್ತ್ರದಲ್ಲಿ ಶಂಕರ ಮೂರನೇ ನೇತ್ರವನ್ನು ತೆರೆದಾಗ ವಿನಾಶವಾಗಿ ಬಿಡುತ್ತದೆ ಎಂದು ಹೇಳುತ್ತಾರೆ. ಅಂದಾಗ ಶಂಕರ ಅರ್ಥಾತ್ ಅಶರೀರಿ ತಪಸ್ವಿ ರೂಪವಾಗಿದೆ. ವಿಕಾರಿ ರೂಪಿ ಹಾವನ್ನು ಕೊರಳಿನ ಹಾರವನ್ನಾಗಿ ಮಾಡಿ ಬಿಟ್ಟರು. ಸದಾ ಶ್ರೇಷ್ಠ ಸ್ಥಿತಿ ಮತ್ತು ಶ್ರೇಷ್ಠ ಆಸನಧಾರಿಗಳು, ಇದು ಮೂರನೇ ಕಣ್ಣು ಅರ್ಥಾತ್ ಸಂಪೂರ್ಣತೆಯ ಕಣ್ಣು, ಸಂಪನ್ನತೆಯ ಕಣ್ಣು. ಯಾವಾಗ ತಾವು ತಪಸ್ಸಿನಲ್ಲಿ ಸಂಪನ್ನರು, ಸಂಪೂರ್ಣ ಸ್ಥಿತಿಯಿಂದ ವಿಶ್ವ ಪರಿವರ್ತನೆಯ ಸಂಕಲ್ಪ ಮಾಡಿದ್ದೇ ಆದರೆ ಈ ಪ್ರಕೃತಿಯೂ ಸಹ ಸಂಪೂರ್ಣ ಏರು-ಪೇರು ನರ್ತನವನ್ನು ಮಾಡುತ್ತದೆ. ಉಪಧ್ರವ ಮಾಡುವಂತಹ ನರ್ತನ ಮಾಡುತ್ತದೆ. ತಾವು ಅಚಲವಾಗಿರುತ್ತೀರಿ, ಪ್ರಕೃತಿ ಉಪಧ್ರವವಾಗುತ್ತಿರುತ್ತದೆ ಏಕೆಂದರೆ ಇಷ್ಟು ದೊಡ್ಡ ವಿಶ್ವದ ಸ್ವಚ್ಛತೆಯನ್ನು ಯಾರು ಮಾಡುತ್ತಾರೆ? ಮನುಷ್ಯಾತ್ಮರು ಮಾಡಲು ಸಾಧ್ಯತೆ ಇದೆಯೇ? ಈ ಗಾಲಿ, ಭೂಮಿ, ಸಮುದ್ರ, ನೀರು-ಇವುಗಳ ಏರು-ಪೇರಿನಿಂದ ಸ್ವಚ್ಛತೆಯಾಗುತ್ತದೆ. ಅಂದಾಗ ಇಂತಹ ಸಂಪೂರ್ಣತೆಯ ಸ್ಥಿತಿಯನ್ನು ಈ ತಪಸ್ಸಿನಿಂದ ಮಾಡಿಕೊಳ್ಳಬೇಕು. ಪ್ರಕೃತಿಯೂ ಸಹ ತಮ್ಮ ಸಂಕಲ್ಪದ ಆದೇಶವನ್ನು ಯಾವಾಗ ತಾವು ತನ್ನ ಸ್ವಯಂನ, ಸದಾ ಕಾಲದ ಸಹಯೋಗಿಯಾದ ಕರ್ಮೇಂದ್ರಿಯಗಳು ಮನಸ್ಸು-ಬುದ್ಧಿ-ಸಂಸ್ಕಾರ ತಮ್ಮ ಆದೇಶವನ್ನು ಒಪ್ಪಿಕೊಳ್ಳುತ್ತದೆಯೋ ಆಗ ಪ್ರಕೃತಿಯೂ ಸಹ ತಮ್ಮ ಸಂಕಲ್ಪದ ಆದೇಶವನ್ನು ಒಪ್ಪಿಕೊಳ್ಳುತ್ತದೆ. ಒಂದುವೇಳೆ ಸ್ವಯಂನ ಸದಾ ಸಹಯೋಗಿ ಕರ್ಮೇಂದ್ರಿಯಗಳು ನಿಮ್ಮ ಆದೇಶವನ್ನು ಒಪ್ಪುವಿದಿಲ್ಲವೆಂದರೆ ಪ್ರಕೃತಿ ನಿಮ್ಮ ಆದೇಶವನ್ನು ಹೇಗೆ ಒಪ್ಪುತ್ತದೆ? ತಮ್ಮೆಲ್ಲರದೂ ಒಂದೇ ಸಂಕಲ್ಪ, ಒಂದೇ ಸಮಯದಲ್ಲಿ ಉತ್ಪನ್ನವಾಗಲಿ, ಇಷ್ಟೊಂದು ಶಕ್ತಿಶಾಲಿ ತಪಸ್ಸಿನ ಶ್ರೇಷ್ಠ ಸ್ಥಿತಿ ಇರಲಿ, ಪರಿವರ್ತನೆ ಮತ್ತೆ ಪ್ರಕೃತಿ ಪ್ರತ್ಯಕ್ಷವಾಗಿ ನಿಮ್ಮ ಮುಂದೆ ಬರಬೇಕೆಂದು ಸೆಕೆಂಡಿನ ಸಂಕಲ್ಪ ಮಾಡಿ. ಹೇಗೆ ತಾವು ಬ್ರಾಹ್ಮಣ ಆತ್ಮರು ವಿಶ್ವದ ಸರ್ವ ಆತ್ಮರಗಾಗಿ ಒಂದೇ ಸಮಯದಲ್ಲಿ ವಿಶ್ವ ಶಾಂತಿಗಾಗಿ ಯೋಗವನ್ನು ಮಾಡುತ್ತೀರಲ್ಲವೇ. ಅಂದಾಗ ಎಲ್ಲರದೂ ಒಂದೇ ಸಮಯದಲ್ಲಿ ಒಂದೇ ಸಂಕಲ್ಪದ ನೆನಪಾರ್ಥ ಉಳಿಯುತ್ತದೆ. ಹಾಗೆಯೇ ಸರ್ವರ ಒಂದೇ ಸಂಕಲ್ಪದಿಂದ ಪ್ರಕೃತಿ ಉಪಧ್ರವದ ನರ್ತನವನ್ನು ಪ್ರಾರಂಭಿಸುತ್ತದೆ. ಆದ್ದರಿಂದಲೇ ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಎಂದು ಹೇಳುತ್ತೀರಿ. ಅಂದಾಗ ಈ ಹಳೆಯ ಪ್ರಪಂಚ ಹೊಸ ಪ್ರಪಂಚವಾಗಿ ಹೇಗೆ ಪರಿವರ್ತನೆಯಾಗುತ್ತದೆ? ತಮ್ಮೆಲ್ಲರ ಶಕ್ತಿಶಾಲಿ ಸಂಕಲ್ಪದಿಂದ, ಸಂಘಟಿತ ರೂಪದಿಂದ ಯಾವಾಗ ಎಲ್ಲರದೂ ಒಂದೇ ಸಂಕಲ್ಪ ಉತ್ಪನ್ನವಾಗುತ್ತದೆಯೋ ಆಗ ಪರಿವರ್ತನೆಯಾಗುತ್ತದೆ. ಏನು ಮಾಡಬೇಕೆಂಬುದು ತಿಳಿಯಿತೇ? ಇದಕ್ಕೆ ತಪಸ್ಸು ಎಂದು ಕರೆಯಲಾಗುತ್ತದೆ. ಒಳ್ಳೆಯದು.

ಬಾಪ್ದಾದಾರವರು ಡಬಲ್ ವಿದೇಶಿ ಮಕ್ಕಳನ್ನು ನೋಡಿ ಸದಾ ಹರ್ಷಿತರಾಗುತ್ತೇವೆ. ಭಾರತವಾಸಿಗಳನ್ನು ನೋಡಿ ಹರ್ಷಿತರಾಗುವುದಿಲ್ಲ ಎಂದಲ್ಲ. ಈಗ ಡಬಲ್ ವಿದೇಶಿಗಳ ಸರದಿ ಆಗಿರುವ ಕಾರಣ ಈ ರೀತಿ ಹೇಳುತ್ತೇವೆ. ಭಾರತದ ಮೇಲೆ ತಂದೆ ಸದಾ ಪ್ರಸನ್ನ ಆಗಿಯೇ ಇದ್ದೇವೆ. ಆದ್ದರಿಂದಲೇ ಭಾರತದಲ್ಲಿ ಬಂದಿರುವುದು. ಮತ್ತು ತಮ್ಮೆಲ್ಲರನ್ನೂ ಸಹ ಭಾರತವಾಸಿಯರನ್ನಾಗಿ ಮಾಡಲಾಗಿದೆ. ಈ ಸಮಯದಲ್ಲಿ ತಾವೆಲ್ಲರೂ ವಿದೇಶಿಗಳೋ ಅಥವಾ ಭಾರತವಾಸಿಗಳೋ? ಭಾರತವಾಸಿಗಳಲ್ಲೂ ಸಹ ಮಧುಬನ ನಿವಾಸಿಗಳು. ಮಧುಬನ ನಿವಾಸಿಗಳಾಗುವುದು ಇಷ್ಟವಾಗುತ್ತದೆಯಲ್ಲವೇ? ಈಗ ಬೇಗ-ಬೇಗ ಸೇವೆಯನ್ನು ಪೂರ್ಣ ಮಾಡಿದ್ದೆ ಆದರೆ ಮಧುಬನ ನಿವಾಸಿಗಳು ಆಗಿಯೇ ಬಿಡುತ್ತೀರಿ. ಇಡೀ ವಿಶ್ವದಲ್ಲಿ ಆದಷ್ಟು ಬೇಗ ಸಂದೇಶವನ್ನು ನೀಡುವುದು ಪೂರ್ಣ ಮಾಡಿ. ನಂತರ ಇಲ್ಲಿಗೆ ಬರುತ್ತೀರೆಂದರೆ ಮತ್ತೆ ನಿಮ್ಮನ್ನು ಕಳುಹಿಸುವುದಿಲ್ಲ. ಅದುವರೆಗೂ ನಿವೇಶನವೂ ಸಿದ್ಧವಾಗುತ್ತದೆ. ನೋಡಿ ಮೈದಾನವಂತೂ ಉದ್ದ-ಅಗಲವಾಗಿದೆ (ಪೀಸ್ ಪಾರ್ಕ್) ಅಲ್ಲಿ ಮೊದಲೇ ತಮ್ಮೆಲ್ಲರಿಗೂ ವ್ಯವಸ್ಥೆ ಮಾಡಲಾಗುತ್ತದೆ. ಆ ನಂತರ ತಮಗೆ ತೊಂದರೆ ಆಗುವುದಿಲ್ಲ. ಯಾವಾಗ ಅಂತಹ ಸಮಯ ಬರುತ್ತದೆಯೋ ಆ ಸಮಯದಲ್ಲಿ ತಮ್ಮ ಬಟ್ಟೆಯ ಪೆಟ್ಟಿಗೆ ಮೇಲೆ ಮಲಗಿಕೊಳ್ಳುತ್ತೀರಿ. ಮಂಚಗಳನ್ನು ತೆಗೆದುಕೊಳ್ಳುವುದಿಲ್ಲ. ಆ ಸಮಯವೇ ಬೇರೆಯಾಗಿರುತ್ತದೆ. ಈ ಸಮಯವೇ ಬೇರೆಯಾಗಿದೆ. ಈಗ ಸೇವೆಯ ಒಂದೇ ಸಮಯದಲ್ಲಿ ಮನಸಾ-ವಾಚಾ-ಕರ್ಮಣಾ ಒಟ್ಟಿಗೆ ಸಂಕಲ್ಪ ಒಂದೇ ಇರಲಿ, ಆಗ ಸೇವೆಯಲ್ಲಿ ತೀವ್ರವಾಗಿ ಮುಂದೆವರೆಯುತ್ತದೆ. ಮನಸ್ಸಿನ ಮೂಲಕ ಶಕ್ತಿಶಾಲಿ, ಮಾತಿನ ಮೂಲಕ ಜ್ಞಾನಪೂರ್ಣ, ಸಂಬಂಧ-ಸಂಪರ್ಕ ಅರ್ಥಾತ್ ಕರ್ಮದ ಮೂಲಕ ಪ್ರೀತಿ ಪೂರ್ಣ, ಈ ಮೂರೂ ಅನುಭವಗಳು ಒಂದೇ ಸಮಯದಲ್ಲಿ ಒಟ್ಟಿಗೆ ನಡೆಯಲಿ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ಮಹಾನ್ ಸಂತುಷ್ಟ ಆತ್ಮರಿಗೆ, ಸದಾ ಪ್ರಸನ್ನಚಿತ್ತ ನಿಶ್ಚಿಂತವಾಗಿರುವ ಶ್ರೇಷ್ಠ ಆತ್ಮರಿಗೆ, ಸದಾ ಒಂದೇ ಸಮಯದಲ್ಲಿ ಮೂರೂ ಸೇವೆಗಳನ್ನು ಮಾಡುವಂತಹ ತೀವ್ರ ಗತಿಯಿಂದ ಸೇವೆ ಮಾಡುವ ಸೇವಾಧಾರಿ ಆತ್ಮರಿಗೆ, ಸದಾ ಶ್ರೇಷ್ಠ ಸ್ಥಿತಿಯ ಆಸನಧಾರಿ ತಪಸ್ವಿ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

ಎಲ್ಲರೂ ತಮ್ಮನ್ನು ಪವಿತ್ರ ಹಂಸಗಳೆಂದು ತಿಳಿಯುವಿರಾ? ಪವಿತ್ರ ಹಂಸದ ವಿಶೇಷ ಕರ್ಮವೇನಾಗಿದೆ? (ಪ್ರತಿಯೊಬ್ಬರೂ ತಿಳಿಸಿದರು) ಯಾವ ವಿಶೇಷತೆಗಳನ್ನು ತಿಳಿಸಲಾಗಿದೆಯೋ ಅದನ್ನು ಪ್ರತ್ಯಕ್ಷ ಕರ್ಮದಲ್ಲಿ ಬರುತ್ತದೆಯೇ? ಏಕೆಂದರೆ ತಾವು ಬ್ರಾಹ್ಮಣರಲ್ಲದೆ ಮತ್ತ್ಯಾರು ಪವಿತ್ರ ಹಂಸಗಳಾಗಲು ಸಾಧ್ಯ? ಆದ್ದರಿಂದ ನಶೆಯಿಂದ ಹೇಳಿರಿ. ಹೇಗೆ ತಂದೆಯು ಸದಾ ಪವಿತ್ರತೆಯ ಸಾಗರನಾಗಿದ್ದಾರೆಯೋ, ಸದಾ ಸರ್ವಶಕ್ತಿಗಳನ್ನು ಕರ್ಮದಲ್ಲಿ ತರುತ್ತಾರೆಯೋ ಹಾಗೆಯೇ ತಾವು ಪವಿತ್ರ ಹಂಸಗಳೂ ಸಹ ಸರ್ವಶಕ್ತಿಗಳನ್ನು ಪ್ರತ್ಯಕ್ಷದಲ್ಲಿ ತರುವವರು ಹಾಗೂ ಸದಾ ಪವಿತ್ರವಾಗಿದ್ದೀರಿ. ಅದೇರೀತಿ ಇದ್ದಿರಿ ಹಾಗೂ ಸದಾ ಇರುತ್ತೀರಿ. ಮೂರೂ ಕಾಲಗಳ ನೆನಪಿದೆಯಲ್ಲವೇ? ಮಕ್ಕಳು ಅನೇಕ ಬಾರಿ ಪಾತ್ರವನ್ನಭಿನಯಿಸಿರುವುದನ್ನು ಬಾಪ್ದಾದಾರವರು ನೋಡುತ್ತಾ ಹರ್ಷಿತವಾಗುತ್ತಾರೆ ಆದ್ದರಿಂದ ಕಷ್ಟವೆನಿಸುವುದಿಲ್ಲ ಅಲ್ಲವೆ. ಮಾಸ್ಟರ್ ಸರ್ವಶಕ್ತಿವಂತನ ಮುಂದೆ ಕಷ್ಟವೆನ್ನುವ ಶಬ್ದವೆಂದಿಗೂ, ಸ್ವಪ್ನದಲ್ಲಿಯೂ ಬರಲು ಸಾಧ್ಯವಿಲ್ಲ. ಬ್ರಾಹ್ಮಣ ಶಬ್ಧಕೋಶದಲ್ಲಿ ಕಷ್ಟವೆನ್ನುವ ಪದವಿದೆಯೇ? ಎಲ್ಲಾದರೂ ಚಿಕ್ಕ ಅಕ್ಷರಗಳಲ್ಲಾದರೂ ಇಲ್ಲವಲ್ಲವೇ? ಮಾಯೆಯ ಬಗ್ಗೆ ಅರಿವುಂಟಾಗಿದೆ ಅಲ್ಲವೇ? ಎಲ್ಲಿ ಸಂಪೂರ್ಣತೆಯಿದೆಯೋ ಅಲ್ಲಿ ಅನುತ್ತೀರ್ಣರಾಗಲು ಸಾಧ್ಯವಿಲ್ಲ. ಅನುತ್ತೀರ್ಣರಾಗಲು ಕಾರಣವೇನು? ಎಲ್ಲದರ ತಿಳುವಳಿಕೆಯಿದ್ದರೂ ಅನುತ್ತೀರ್ಣರಾಗುವುದು ಏಕೆ? ಒಂದುವೇಳೆ ಎಲ್ಲವೂ ಗೊತ್ತಿದ್ದರೂ ಅನುತ್ತೀರ್ಣರಾದರೆ ಏನೆಂದು ಹೇಳುವುದು? ಯಾವುದೇ ಸಂದರ್ಭವಿದೆಯೆಂದರೆ, ಅದರಲ್ಲಿ ಅನುತ್ತೀರ್ಣರಾಗಲು ಕಾರಣವಾಗಿದೆ – ಯಾವುದಾದರೊಂದು ಮಾತಿನಲ್ಲಿ ಬೇಸರವಾಗಿ ಬಿಡುತ್ತೀರಿ. ಬೇಸರವು ರೋಗವನ್ನುಂಟು ಮಾಡುತ್ತದೆ. ಮತ್ತು ಅದೇನು ಮಾಡುತ್ತದೆಯೆಂದು ಗೊತ್ತಿದೆಯೇ? ಬಲಹೀನರನ್ನಾಗಿ ಮಾಡಿ ಬಿಡುತ್ತದೆ. ಬಲಹೀನತೆಯಿಂದ ಚಿಕ್ಕ ಮಾತೂ ಸಹ ದೊಡ್ಡದಾಗಿ ಬಿಡುತ್ತದೆ, ಆದ್ದರಿಂದ ಈಗ ಸಂಪೂರ್ಣರಾಗಿರಿ. ಫೇಲ್ ಆಗಬಾರದು, ಪಾಸ್ ಆಗಬೇಕು. ಯಾವುದೆ ಮಾತಿರಲಿ, ಅದನ್ನು ಪಾಸ್ ಮಾಡುತ್ತಾ ಸಾಗುತ್ತೀರೆಂದರೆ ಪಾಸ್-ವಿತ್-ಆನರ್ ಆಗಿ ಬಿಡುತ್ತೀರಿ. ಅಂದಮೇಲೆ ಪಾಸ್ ಮಾಡಬೇಕು, ಪಾಸ್ ಆಗಬೇಕು ಮತ್ತು ಪಾಸ್ ಇರಬೇಕು(ಸಮೀಪ). ಬಾಪ್ದಾದಾರವರೊಂದಿಗೆ ಎಷ್ಟು ಪ್ರೀತಿಯಿದೆಯೋ ಅಷ್ಟು ಮತ್ತ್ಯಾರೊಂದಿಗೂ ಇಲ್ಲ ಎಂದು ನಶೆಯಿಂದ ಹೇಳುತ್ತೀರಿ ಅಂದಮೇಲೆ ಯಾವಾಗ ಪ್ರೀತಿಯಿದೆಯೆಂದರೆ ಸಮೀಪವಿರಬೇಕೇ ಅಥವಾ ದೂರವಿರಬೇಕಾ? ಹಾಗಾದರೆ ಸಮೀಪವಿರಬೇಕು ಹಾಗೂ ಉತ್ತೀರ್ಣರಾಗಬೇಕು. ಯು.ಕೆ.ಯವರಂತು ಬಾಪ್ದಾದಾರವರ ಸರ್ವ ಆಶೆಗಳನ್ನು ಪೂರ್ಣಗೊಳಿಸುವವರು ಆಗಿದ್ದೀರಲ್ಲವೆ. ಎಲ್ಲದಕ್ಕಿಂತ ನಂಬರ್ವನ್ ತಂದೆಯವರ ಶುಭ ಆಶೆಯು ಯಾವುದಾಗಿದೆ? ವಿಶೇಷವಾಗಿ ಯು.ಕೆ.ಯವರಿಗಾಗಿ ಹೇಳುತ್ತಿದ್ದೇವೆ. ಬಹಳ ಗಣ್ಯ ವ್ಯಕ್ತಿಯನ್ನು ಕರೆತರಬೇಕಾಗಿದೆ. ತಂದೆಯನ್ನು ಪ್ರತ್ಯಕ್ಷ ಮಾಡಲು ಯಾರು ನಿಮಿತ್ತರಾಗುವರು ಹಾಗೂ ತಂದೆಯ ಸಮೀಪದಲ್ಲಿ ಬರುತ್ತಾರೆಯೋ ಅಂತಹ ಗಣ್ಯ ವ್ಯಕ್ತಿಯನ್ನು ಕರೆ ತರಬೇಕಾಗಿದೆ. ಈಗ ಯು.ಕೆ.ಯಲ್ಲಿ, ಅಮೇರಿಕಾದಲ್ಲಿ, ಇನ್ನೂ ವಿದೇಶದ ದೇಶಗಳಿಂದ ಅವಶ್ಯವಾಗಿ ಗಣ್ಯ ವ್ಯಕ್ತಿಗಳು ಬಂದಿದ್ದಾರೆ ಆದರೆ ಒಂದು – ಸಹಯೋಗಿ ಮತ್ತು ಇನ್ನೊಂದು ಪ್ರಕಾರದವರು – ಸಹಯೋಗಿ, ಸಮೀಪದಲ್ಲಿರುವವರು. ಇಂತಹ ಮೈಕ್/ಗಣ್ಯ ವ್ಯಕ್ತಿಯನ್ನು ತಯಾರು ಮಾಡಿರಿ. ಹಾಗೆಯೇ ಸೇವೆಯಲ್ಲಿಯೂ ಬಹಳಚೆನ್ನಾಗಿ ವೃದ್ಧಿಯಾಗುತ್ತಿದೆ, ಆಗುತ್ತಿರುತ್ತದೆ. ಒಳ್ಳೆಯದು – ರಷ್ಯಾದವರು ಚಿಕ್ಕ ಮಕ್ಕಳಿದ್ದಾರೆ ಆದರೆ ಅದೃಷ್ಟವಂತರು. ತಮಗೆ ತಂದೆಯೊಂದಿಗೆ ಅಪಾರ ಪ್ರೀತಿಯಿದೆ! ಬಾಪ್ದಾದಾರವರೂ ಸಹ ಮಕ್ಕಳ ಸಾಹಸದಲ್ಲಿ ಖುಷಿಯಿದ್ದಾರೆ, ಒಳ್ಳೆಯದು – ಈಗ ಪರಿಶ್ರಮವನ್ನು ಮರೆತಿದ್ದೀರಲ್ಲವೆ. ಒಳ್ಳೆಯದು.

ವರದಾನ:-

ತಮಗೆ ತಾವು ಈ ಧೃಡ ಸಂಕಲ್ಪ ಮಾಡಿರಿ – ಇಡೀ ದಿನದಲ್ಲಿ ಸಂಕಲ್ಪ, ಮಾತು, ಕರ್ಮದ ಮೂಲಕ ಪುಣ್ಯಾತ್ಮರಾಗಿದ್ದು ಪುಣ್ಯವನ್ನೇ ಮಾಡುತ್ತೇವೆ. ಪುಣ್ಯದ ಪ್ರತ್ಯಕ್ಷ ಫಲವಾಗಿದೆ – ಪ್ರತಿಯೊಂದು ಆತ್ಮ ಆಶೀರ್ವಾದಗಳು. ಹಾಗಾದರೆ ಪ್ರತೀ ಸಂಕಲ್ಪದಲ್ಲಿ, ಮಾತಿನಲ್ಲಿ ಆಶೀರ್ವಾದಗಳು ಜಮಾ ಆಗಲಿ. ಸಂಬಂಧ-ಸಂಪರ್ಕದಿಂದ ಸಹಯೋಗದ ಧನ್ಯವಾದಗಳೇ ಬರಲಿ. ಇಂತಹ ಆಶೀರ್ವಾದಗಳ ಅಧಿಕಾರಿಯೇ ವಿಶ್ವ ಪರಿವರ್ತನೆಗೆ ನಿಮಿತ್ತರಾಗುವರು. ಅಂತಹವರಿಗೇ ಬಹುಮಾನವೂ ಸಿಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top