05 December 2021 KANNADA Murli Today | Brahma Kumaris

Read and Listen today’s Gyan Murli in Kannada

December 4, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸದಾ ಪ್ರಸನ್ನರಾಗಿರುವುದು ಹೇಗೆ?

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾ ನಾಲ್ಕಾರು ಕಡೆಯ ಮಕ್ಕಳನ್ನು ನೋಡುತ್ತಿದ್ದರು, ಏನನ್ನು ನೋಡಿದರು? ಪ್ರತಿಯೊಬ್ಬ ಮಗು ಪ್ರತೀ ಸಮಯ ಸ್ವಯಂ ಎಷ್ಟು ಪ್ರಸನ್ನವಾಗಿರುತ್ತಾರೆ, ಜೊತೆ ಜೊತೆಗೆ ಅನ್ಯರನ್ನೂ ಸ್ವಯಂನ ಮೂಲಕ ಎಷ್ಟು ಪ್ರಸನ್ನಗೊಳಿಸುತ್ತಾರೆ? ಏಕೆಂದರೆ ಪರಮಾತ್ಮನ ಸರ್ವಪ್ರಾಪ್ತಿಗಳ ಪ್ರತ್ಯಕ್ಷ ಸ್ವರೂಪದಲ್ಲಿ ಪ್ರಸನ್ನತೆಯೇ ಚಹರೆಯ ಮೇಲೆ ಕಂಡು ಬರುತ್ತದೆ. “ಪ್ರಸನ್ನತೆ”ಯು ಬ್ರಾಹ್ಮಣ ಜೀವನದ ವಿಶೇಷ ಆಧಾರವಾಗಿದೆ. ಅಲ್ಪಕಾಲದ ಪ್ರಸನ್ನತೆ ಮತ್ತು ಸದಾಕಾಲದ ಸಂಪನ್ನತೆಯ ಪ್ರಸನ್ನತೆ – ಇವೆರಡರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅಲ್ಪಕಾಲದ ಪ್ರಸನ್ನತೆಯು ಅಲ್ಪಕಾಲದ ಪ್ರಾಪ್ತಿಯವರ ಚಹರೆಯ ಮೇಲೆ ಸ್ವಲ್ಪ ಸಮಯಕ್ಕಾಗಿ ಅವಶ್ಯವಾಗಿ ಕಂಡು ಬರುತ್ತದೆ ಆದರೆ ಆತ್ಮಿಕ ಪ್ರಸನ್ನತೆಯು ಸ್ವಯಂನ್ನು ಪ್ರಸನ್ನನನ್ನಾಗಿ ಮಾಡಿಯೇ ಮಾಡುತ್ತದೆ ಆದರೆ ಆತ್ಮಿಕ ಪ್ರಸನ್ನತೆಯ ವೈಬ್ರೇಷನ್ ಅನ್ಯ ಆತ್ಮಗಳವರೆಗೂ ತಲುಪುತ್ತದೆ. ಅನ್ಯ ಆತ್ಮರೂ ಸಹ ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡುತ್ತಾರೆ. ಹೇಗೆ ಫಲದಾಯಕ ವೃಕ್ಷವು ತನ್ನ ಶೀತಲತೆಯ ಛಾಯೆಯಲ್ಲಿ ಮಾನವನಿಗೆ ಸ್ವಲ್ಪ ಸಮಯಕ್ಕಾಗಿ ಶೀತಲತೆಯ ಅನುಭವ ಮಾಡಿಸುತ್ತದೆ ಮತ್ತು ಮಾನವನು ಪ್ರಸನ್ನನಾಗಿ ಬಿಡುತ್ತಾನೆ ಹಾಗೆಯೇ ಪರಮಾತ್ಮ ಪ್ರಾಪ್ತಿಗಳ ಫಲ ಸಂಪನ್ನ ಆತ್ಮಿಕ ಪ್ರಸನ್ನತೆಯಿರುವ ಆತ್ಮನು ಅನ್ಯರಿಗೂ ಸಹ ತನ್ನ ಪ್ರಾಪ್ತಿಗಳ ಛಾಯೆಯ ತನು-ಮನದ ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡಿಸುತ್ತಾರೆ. ಪ್ರಸನ್ನತೆಯ ವೈಬ್ರೇಷನ್ ಸೂರ್ಯನ ಕಿರಣಗಳಂತೆ ವಾಯುಮಂಡಲವನ್ನು, ವ್ಯಕ್ತಿಯನ್ನು ಮತ್ತೆಲ್ಲಾ ಮಾತುಗಳನ್ನು ಮರೆಸಿ ಸತ್ಯ, ಆತ್ಮಿಕ ಶಾಂತಿಯ ಖುಷಿಯ ಅನುಭೂತಿಯಲ್ಲಿ ಬದಲಾವಣೆ ಮಾಡಿ ಬಿಡುತ್ತದೆ. ವರ್ತಮಾನ ಸಮಯದ ಅಜ್ಞಾನಿ ಆತ್ಮಗಳು ತಮ್ಮ ಜೀವನದಲ್ಲಿ ಬಹಳ ಖರ್ಚು ಮಾಡಿಯಾದರೂ ಪ್ರಸನ್ನತೆಯಲ್ಲಿರಲು ಬಯಸುತ್ತಾರೆ. ತಾವೆಲ್ಲರೂ ಏನು ಖರ್ಚು ಮಾಡಿದಿರಿ? ಪೈಸೆಯನ್ನೂ ಖರ್ಚು ಮಾಡದೇ ಸದಾ ಪ್ರಸನ್ನರಾಗಿರುತ್ತೀರಲ್ಲವೆ! ಅಥವಾ ಅನ್ಯರ ಸಹಯೋಗದಿಂದ ಪ್ರಸನ್ನರಾಗಿರುತ್ತೀರಾ? ಬಾಪ್ದಾದಾ ಮಕ್ಕಳ ಚಾರ್ಟನ್ನು ಪರಿಶೀಲನೆ ಮಾಡುತ್ತಿದ್ದೆವು. ಏನು ನೋಡಿರಬಹುದು? ಒಂದನೆಯವರು ಸದಾ ಪ್ರಸನ್ನರಾಗಿರುವವರು ಮತ್ತು ಎರಡನೇ ಪ್ರಕಾರದವರು ಪ್ರಸನ್ನರಾಗಿರುವವರು. ಅವರಲ್ಲಿ “ಸದಾ” ಶಬ್ಧವಿಲ್ಲ. ಪ್ರಸನ್ನತೆಯೂ ಮೂರು ಪ್ರಕಾರದ್ದನ್ನು ನೋಡಿದೆವು. 1. ಸ್ವಯಂನಿಂದ ಪ್ರಸನ್ನ. 2. ಅನ್ಯರ ಮೂಲಕ ಪ್ರಸನ್ನ. 3. ಸೇವೆಯ ಮೂಲಕ ಪ್ರಸನ್ನ. ಒಂದುವೇಳೆ ಮೂರರಲ್ಲಿಯೂ ಪ್ರಸನ್ನರಾಗಿದ್ದರೆ ಬಾಪ್ದಾದಾರವರನ್ನು ಸ್ವತಹ ಪ್ರಸನ್ನಗೊಳಿಸಿದ್ದಾರೆ ಮತ್ತು ಯಾವ ಆತ್ಮನ ಮೇಲೆ ತಂದೆಯು ಪ್ರಸನ್ನರಾಗಿದ್ದಾರೆಯೋ ಅವರು ಸದಾ ಸಫಲತಾಮೂರ್ತಿಗಳು ಆಗಿಯೇ ಆಗುವರು.

ಬಾಪ್ದಾದಾ ನೋಡಿದೆವು – ಕೆಲವು ಮಕ್ಕಳು ತನ್ನೊಂದಿಗೂ ಅಪ್ರಸನ್ನವಾಗಿರುತ್ತಾರೆ, ಚಿಕ್ಕಮಾತಿನ ಕಾರಣ ಅಪ್ರಸನ್ನವಾಗಿರುತ್ತಾರೆ. ಮೊಟ್ಟ ಮೊದಲ ಪಾಠವಾದ “ನಾನು ಯಾರು” ಇದನ್ನು ತಿಳಿದುಕೊಂಡಿದ್ದರೂ ಸಹ ಮರೆತು ಹೋಗುತ್ತಾರೆ. ಯಾವ ತಂದೆಯು ಆ ರೀತಿ ಮಾಡಿದ್ದಾರೆಯೋ, ಕೊಟ್ಟಿದ್ದಾರೆಯೋ ಅವರನ್ನೇ ಮರೆತು ಹೋಗುತ್ತಾರೆ. ತಂದೆಯು ಪ್ರತಿಯೊಬ್ಬ ಮಗುವನ್ನು ಪೂರ್ಣ ಆಸ್ತಿಗೆ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. ಕೆಲವರಿಗೆ ಪೂರ್ಣ, ಕೆಲವರಿಗೆ ಅರ್ಧ ಆಸ್ತಿಯನ್ನು ನೀಡಿಲ್ಲ. ಯಾರಿಗಾದರೂ ಅರ್ಧ ಅಥವಾ ಕಾಲು ಭಾಗದಷ್ಟು ಸಿಕ್ಕಿದೆಯೇ? ಅರ್ಧ ಸಿಕ್ಕಿದೆಯೋ ಅಥವಾ ಅರ್ಧ ತೆಗೆದುಕೊಂಡಿದ್ದೀರೋ? ತಂದೆಯು ಎಲ್ಲರಿಗೆ ಮಾ|| ಸರ್ವಶಕ್ತಿವಂತನ ವರದಾನ ಹಾಗೂ ಆಸ್ತಿಯನ್ನು ಕೊಟ್ಟರು. ಕೆಲವು ಶಕ್ತಿಗಳನ್ನು ಮಕ್ಕಳಿಗೆ ಕೊಟ್ಟರು, ಕೆಲವೊಂದನ್ನು ಕೊಡಲಿಲ್ಲವೆಂದಲ್ಲ. ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ. ಸರ್ವಗುಣ ಸಂಪನ್ನರನ್ನಾಗಿ ಮಾಡಿದ್ದಾರೆ, ಸರ್ವಪ್ರಾಪ್ತಿ ಸ್ವರೂಪರನ್ನಾಗಿ ಮಾಡಿದ್ದಾರೆ ಆದರೆ ತಂದೆಯ ಮೂಲಕ ಏನು ಪ್ರಾಪ್ತಿಗಳಾಗಿದೆಯೋ ಅದನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುವುದಿಲ್ಲ. ಹೇಗೆ ಸ್ಥೂಲ ಧನ ಹಾಗೂ ಸಾಧನಗಳು ಪ್ರಾಪ್ತಿಯಾಗಿದ್ದರೂ ಸಹ ಅದನ್ನು ಖರ್ಚು ಮಾಡುವುದು ಬರುವುದಿಲ್ಲ ಅಥವಾ ಸಾಧನಗಳನ್ನು ಉಪಯೋಗಿಸುವುದು ಬರಲಿಲ್ಲವೆಂದರೆ ಪ್ರಾಪ್ತಿ ಇದ್ದರೂ ಸಹ ಅದರಿಂದ ವಂಚಿತರಾಗಿ ಉಳಿಯುತ್ತಾರೆ. ಹಾಗೆಯೇ ಎಲ್ಲಾ ಪ್ರಾಪ್ತಿಗಳು ಹಾಗೂ ಖಜಾನೆಗಳು ಎಲ್ಲರ ಬಳಿ ಇವೆ ಆದರೆ ಅದನ್ನು ಕಾರ್ಯದಲ್ಲಿ ತೊಡಗಿಸುವ ವಿಧಿ ಬರುವುದಿಲ್ಲ ಮತ್ತು ಸಮಯದಲ್ಲಿ ಉಪಯೋಗಿಸುವುದು ಬರುವುದಿಲ್ಲ ಮತ್ತೆ ಹೇಳುತ್ತಾರೆ – ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಆದರೆ ಆ ಸಮಯದಲ್ಲಿ ಮರೆತು ಹೋಯಿತು, ಈಗ ತಿಳಿದುಕೊಳ್ಳುತ್ತೇನೆ – ಈ ರೀತಿಯಾಗಬಾರದು ಎಂದು. ಆದರೆ ಆ ಸಮಯದಲ್ಲಿ ಒಂದು ಕ್ಷಣವು ಹೊರಟು ಹೋದರೂ ಸಹ ಸಫಲತೆಯ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಏಕೆಂದರೆ ಸಮಯದ ವಾಹನವು ಹೊರಟು ಹೋಯಿತು. ಭಲೆ ಒಂದು ಕ್ಷಣವೇ ತಡ ಮಾಡಿರಬಹುದು ಅಥವಾ ಒಂದು ಗಂಟೆಯನ್ನಾದರೂ ತಡ ಮಾಡಿರಬಹುದು ಆದರೆ ಸಮಯವಂತೂ ಹೊರಟು ಹೋಯಿತಲ್ಲವೆ ಮತ್ತು ಯಾವಾಗ ಸಮಯದ ವಾಹನವು ಹೊರಟು ಹೋಗುವುದೋ ಆಗ ಸ್ವಯಂನೊಂದಿಗೆ ಹೃದಯ ವಿಧೀರ್ಣರಾಗಿ ಬಿಡುತ್ತಾರೆ ಮತ್ತು ನನ್ನ ಭಾಗ್ಯವೇ ಹೀಗಿದೆ, ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ ಎಂದು ಅಪ್ರಸನ್ನತೆಯ ಸಂಸ್ಕಾರವು ಇಮರ್ಜ್ ಆಗಿ ಬಿಡುವುದು. ಮೊದಲೂ ತಿಳಿಸಿದ್ದೆವು – ಸ್ವಯಂನೊಂದಿಗೆ ಅಪ್ರಸನ್ನರಾಗಿರಲು ಮುಖ್ಯವಾಗಿ ಎರಡು ಕಾರಣಗಳಿರುತ್ತವೆ – ಹೃದಯ ವಿಧೀರ್ಣರಾಗುವುದು ಮತ್ತು ಇನ್ನೊಂದು ಕಾರಣವಿದೆ – ಅನ್ಯರ ವಿಶೇಷತೆ ಹಾಗೂ ಭಾಗ್ಯವನ್ನು ಅಥವಾ ಪಾತ್ರವನ್ನು ನೋಡಿ ಈರ್ಷ್ಯೆಯು ಉತ್ಪನ್ನವಾಗುವುದು ಆಗ ಈರ್ಷ್ಯೆಯೂ ಹೆಚ್ಚಾಗುತ್ತದೆ, ಧೈರ್ಯವೂ ಕಡಿಮೆಯಾಗುತ್ತದೆ. ಹೃದಯ ವಿಧೀರ್ಣರಾಗಿರುವವರು ಎಂದೂ ಪ್ರಸನ್ನರಾಗಿರಲು ಸಾಧ್ಯವಿಲ್ಲ ಮತ್ತು ಈರ್ಷ್ಯೆ ಪಡುವವರು ಎಂದೂ ಪ್ರಸನ್ನರಾಗಿರಲು ಸಾಧ್ಯವಿಲ್ಲ ಏಕೆಂದರೆ ಎರಡೂ ಲೆಕ್ಕದಿಂದ ಇಂತಹ ಆತ್ಮಗಳ ಇಚ್ಛೆಯು ಎಂದಿಗೂ ಪೂರ್ಣವಾಗುವುದಿಲ್ಲ ಮತ್ತು ಇಚ್ಛೆಗಳು “ಅಚ್ಛಾ” ಅರ್ಥಾತ್ ಒಳ್ಳೆಯವರಾಗಲು ಬಿಡುವುದಿಲ್ಲ, ಆದ್ದರಿಂದ ಪ್ರಸನ್ನರಾಗಿರುವುದಿಲ್ಲ. ಪ್ರಸನ್ನರಾಗಿರಲು ಸದಾ ಒಂದು ಮಾತನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿ – ಡ್ರಾಮಾದ ನಿಯಮ ಪ್ರಮಾಣ ಸಂಗಮಯುಗದಲ್ಲಿ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಿಗೂ ಯಾವುದಾದರೊಂದು ವಿಶೇಷತೆ ಸಿಕ್ಕಿದೆ, ಅವರು 16,000ದ ಮಾಲೆಯ ಕೊನೆಯ ಮಣಿಯೇ ಆಗಿರಲಿ, ಅವರಿಗೂ ಒಂದಲ್ಲ ಒಂದು ವಿಶೇಷತೆ ಪ್ರಾಪ್ತಿಯಾಗಿರುತ್ತದೆ. ಅದಕ್ಕಿಂತಲೂ ಮುಂದೆ ಹೋದಾಗ 9 ಲಕ್ಷ ಎಂದು ಯಾವ ಗಾಯನವಿದೆಯೋ ಅವರಿಗೂ ಸಹ ಒಂದಲ್ಲ ಒಂದು ವಿಶೇಷತೆಯಿರುತ್ತದೆ. ತಮ್ಮ ವಿಶೇಷತೆಯನ್ನು ಮೊದಲು ಗುರುತಿಸಿ. ಬ್ರಾಹ್ಮಣ ಜನ್ಮದ ಭಾಗ್ಯದ ವಿಶೇಷತೆಯನ್ನು ಗುರುತಿಸಲು ಈಗಿನ್ನೂ 9 ಲಕ್ಷದವರೆಗೆ ತಲುಪಿಲ್ಲ. ಅದನ್ನು ಗುರುತಿಸಿ ಕಾರ್ಯದಲ್ಲಿ ತೊಡಗಿಸಿ. ಕೇವಲ ಅನ್ಯರ ವಿಶೇಷತೆಯನ್ನು ನೋಡಿ ಹೃದಯ ವಿಧೀರ್ಣರಾಗುವುದಾಗಲಿ ಅಥವಾ ಈರ್ಷ್ಯೆಯಲ್ಲಿ ಬರಬಾರದು ಆದರೆ ತನ್ನ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿದಾಗ ಒಂದು ವಿಶೇಷತೆಯು ಮತ್ತೆಲ್ಲಾ ವಿಶೇಷತೆಗಳನ್ನು ತರುವುದು. ಒಂದರ ಮುಂದೆ ಬಿಂದು ಹಾಕುತ್ತಾ ಹೋದರೆ ಎಷ್ಟಾಗುವುದು? 1ರ ಪಕ್ಕದಲ್ಲಿ ಒಂದು ಬಿಂದುವನ್ನಿಟ್ಟರೆ (0) 10 ಆಗುವುದು. ಇನ್ನೊಂದು ಬಿಂದುವನ್ನಿಟ್ಟರೆ 100 ಆಗಿಬಿಡುವುದು. ಮೂರನೇ ಬಿಂದುವನ್ನಿಟ್ಟರೆ…… ಈ ಲೆಕ್ಕವಂತೂ ಬರುತ್ತದೆಯಲ್ಲವೆ. ಕಾರ್ಯದಲ್ಲಿ ತೊಡಗಿಸುವುದು ಎಂದರೆ ಹೆಚ್ಚಿಸಿಕೊಳ್ಳುವುದು. ಇದರಲ್ಲಿ ಅನ್ಯರನ್ನು ನೋಡಬೇಡಿ, ತನ್ನ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿ. ಹೇಗೆ ನೋಡಿ, ಬಾಪ್ದಾದಾ ಸದಾ “ಭೋಲಿ ಭಂಡಾರಿ” (ಭೋಲಿ ದಾದಿ) ಯ ಉದಾಹರಣೆಯನ್ನು ತಿಳಿಸುತ್ತಾರೆ. ಮಹಾರಥಿಗಳ ಹೆಸರು ಕೆಲವೊಮ್ಮೆ ಬರುತ್ತದೆ ಆದರೆ ಇವರ ಹೆಸರನ್ನು ಹೇಳುತ್ತಲೇ ಇರುತ್ತಾರೆ. ಯಾವ ವಿಶೇಷತೆಯಿತ್ತೋ ಅದನ್ನು ಕಾರ್ಯದಲ್ಲಿ ತೊಡಗಿಸಿದರು. ಭಲೆ ಭಂಡಾರವನ್ನೇ ಸಂಭಾಲನೆ ಮಾಡುತ್ತಾರೆ ಆದರೆ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುವುದರಿಂದ ವಿಶೇಷ ಆತ್ಮಗಳ ಹೆಸರಿನ ಗಾಯನವಾಗುತ್ತದೆ. ಎಲ್ಲರೂ ಮಧುಬನದ ವರ್ಣನೆ ಮಾಡುವಾಗ ದಾದಿಯರ ಮಾತುಗಳನ್ನು ತಿಳಿಸುತ್ತಾರೆ, ಜೊತೆಗೆ ಭೋಲಿ ದಾದಿಯ ಉದಾಹರಣೆಯನ್ನೂ ಕೊಡುತ್ತಾರೆ. ಭಲೆ ಭಾಷಣ ಮಾಡುವುದಿಲ್ಲ ಆದರೆ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿದ ಕಾರಣ ಸ್ವಯಂ ವಿಶೇಷ ಆತ್ಮನಾಗಿ ಬಿಟ್ಟರು. ಅನ್ಯರೂ ಸಹ ವಿಶೇಷ ದೃಷ್ಟಿಯಿಂದ ನೋಡುತ್ತಾರೆ, ಅಂದಮೇಲೆ ಪ್ರಸನ್ನರಾಗಿರಲು ಏನು ಮಾಡುವಿರಿ? ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿ ಆಗ ವೃದ್ಧಿಯೂ ಆಗುವುದು ಮತ್ತು ಯಾವಾಗ ಸರ್ವ ವಿಶೇಷತೆಗಳು ಬಂದು ಬಿಡುವುದೋ ಆಗ ಸಂಪನ್ನರಾಗಿ ಬಿಡುತ್ತೀರಿ ಮತ್ತು ಪ್ರಸನ್ನತೆಗೆ ಆಧಾರವಾಗಿದೆ – “ಸಂಪನ್ನತೆ” ಯಾರು ಸ್ವಯಂನೊಂದಿಗೆ ಪ್ರಸನ್ನರಾಗಿರುವರೋ ಅವರು ಅನ್ಯರೊಂದಿಗೂ ಪ್ರಸನ್ನರಾಗಿರುತ್ತಾರೆ, ಸೇವೆಯೊಂದಿಗೂ ಪ್ರಸನ್ನರಾಗಿರುತ್ತಾರೆ. ಯಾವುದೇ ಸೇವೆ ಸಿಗಲಿ ಅದರಲ್ಲಿ ಅನ್ಯರನ್ನು ಪ್ರಸನ್ನಗೊಳಿಸುತ್ತಾ ಸೇವೆಯಲ್ಲಿ ಮೊದಲಿನ ನಂಬರನ್ನು ಪಡೆಯುತ್ತಾರೆ. ಎಲ್ಲದಕ್ಕಿಂತ ಅತಿ ದೊಡ್ಡ ಸೇವೆಯನ್ನು ತಮ್ಮ ಪ್ರಸನ್ನಚಿತ್ತ ಮೂರ್ತಿಯೇ (ಚಹರೆ) ಮಾಡುವುದು ಅಂದಾಗ ಯಾವ ಚಾರ್ಟ್ ನೋಡಿದೆವೆಂದು ಕೇಳಿದಿರಾ! ಒಳ್ಳೆಯದು.

ಟೀಚರ್ಸ್ಗೆ ಮುಂದೆ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿದೆ ಏಕೆಂದರೆ ಮಾರ್ಗದರ್ಶಕರಾಗಿ ಬರುತ್ತಾರೆ, ಬಹಳ ಪರಿಶ್ರಮ ಪಡುತ್ತಾರೆ. ಒಬ್ಬರನ್ನು ಸುಖಧಾಮದಿಂದ ಕರೆದರೆ ಇನ್ನೊಬ್ಬರನ್ನು ವಿಶಾಲ ಭವನದಿಂದ (ಮಧುಬನದಲ್ಲಿ) ಕರೆಯುತ್ತಾರೆ. ಇದರಿಂದ ಒಳ್ಳೆಯ ವ್ಯಾಯಾಮವಾಗಿ ಬಿಡುತ್ತದೆ. ಸೇವಾಕೇಂದ್ರದಲ್ಲಂತೂ ವಾಕಿಂಗ್ ಮಾಡುವುದಿಲ್ಲ, ಯಜ್ಞದ ಆದಿಯಲ್ಲಿ ಸೇವೆಯನ್ನು ಆರಂಭ ಮಾಡಿದಾಗ ಎಲ್ಲರೂ ನಡೆದುಕೊಂಡೇ ಹೋಗುತ್ತಿದ್ದರಲ್ಲವೆ. ನಿಮ್ಮ ಹಿರಿಯ ದಾದಿಯರೂ ಸಹ ನಡೆದಾಡುತ್ತಿದ್ದರು, ಸಾಮಾನುಗಳ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡೇ ಹೋಗುತ್ತಿದ್ದರು, ಈಗಂತೂ ತಾವೆಲ್ಲರೂ ಮಾಡಿ-ಮಾಡಲ್ಪಟ್ಟಿರುವ ಸಮಯದಲ್ಲಿ ಬಂದಿದ್ದೀರಿ ಆದ್ದರಿಂದ ಭಾಗ್ಯಶಾಲಿಗಳಲ್ಲವೆ. ತಯಾರಾಗಿರುವ ಸೇವಾಕೇಂದ್ರಗಳು ಸಿಕ್ಕಿದೆ, ತಮ್ಮ ಮನೆಯಾಗಿ ಬಿಟ್ಟಿದೆ. ಮೊದಲಂತೂ ಯಮುನಾ ನದಿಯ ತೀರದಲ್ಲಿದ್ದರು, ಒಂದೇ ಕೋಣೆಯಿತ್ತು, ರಾತ್ರಿಯಲ್ಲಿ ಮಲಗುವುದು ಹಗಲಿನಲ್ಲಿ ಅದೇ ಸೇವಾಸ್ಥಾನವಾಗಿರುತ್ತಿತ್ತು. ಆದರೆ ಖುಷಿ-ಖುಷಿಯಿಂದ ತ್ಯಾಗ ಮಾಡಿದ್ದೀರಿ ಅದರ ಭಾಗ್ಯದ ಫಲವನ್ನು ತಿನ್ನುತ್ತಿದ್ದೀರಿ. ತಾವು ಫಲವನ್ನು ತಿನ್ನುವ ಸಮಯದಲ್ಲಿ ಬಂದಿದ್ದೀರಿ. ಮೊದಲಿನವರೆಲ್ಲರೂ ಬೀಜವನ್ನು ಬಿತ್ತಿದ್ದರು, ಅದರ ಫಲವನ್ನು ತಾವು ತಿನ್ನುತ್ತಿದ್ದೀರಿ. ಫಲ ತಿನ್ನುವುದು ಬಹಳ ಸಹಜವಲ್ಲವೆ. ಈಗ ಇಂತಹ ಫಲಸ್ವರೂಪ, ಕ್ವಾಲಿಟಿಯವರನ್ನು ತಯಾರು ಮಾಡಿ. ತಿಳಿಯಿತೆ- ಕ್ವಾಂಟಿಟಿ (ಸಂಖ್ಯೆ) ಅಂತೂ ಇದ್ದೇ ಇದೆ ಮತ್ತು ಇದೂ ಬೇಕಾಗಿದೆ. 9 ಲಕ್ಷದವರೆಗೆ ತಲುಪಬೇಕೆಂದರೆ ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡೂ ಬೇಕಾಗಿದೆ ಆದರೆ ಈಗ 16,000ದ ಪಕ್ಕಾ ಮಾಲೆಯನ್ನು ತಯಾರು ಮಾಡಿ. ಈಗ ಕ್ವಾಲಿಟಿ ಆತ್ಮರನ್ನು ತಯಾರು ಮಾಡುವ ಸೇವೆಯಲ್ಲಿ ವಿಶೇಷ ಅಂಡರ್ಲೈನ್ ಮಾಡಿಕೊಳ್ಳಿ.

ಪ್ರತಿಯೊಂದು ಗ್ರೂಪ್ನಲ್ಲಿ ಶಿಕ್ಷಕಿ ಸಹೋದರಿಯರೂ ಬರುತ್ತಾರೆ, ಕುಮಾರಿಯರೂ ಬರುತ್ತಾರೆ ಆದರೆ ಯಾರೂ ಸಮರ್ಪಣೆ ಆಗುವುದಿಲ್ಲ. ಮಧುಬನವು ಇಷ್ಟವಾಗುತ್ತದೆ, ತಂದೆಯೊಂದಿಗೆ ಪ್ರೀತಿಯೂ ಇದೆ ಆದರೆ ಸಮರ್ಪಣೆಯಾಗಲು ಆಲೋಚಿಸುತ್ತಾರೆ. ಯಾರು ಸ್ವಯಂ ತಾವಾಗಿಯೇ ಮುಂದೆ ಬರುವರೋ ಅರ್ಥಾತ್ ಸಮರ್ಪಣೆಯಾಗುವರೋ ಅವರು ನಿರ್ವಿಘ್ನರಾಗಿ ನಡೆಯುತ್ತಾರೆ ಮತ್ತು ಯಾರು ಹೇಳುವುದರಿಂದ ನಡೆಯುವರೋ ಅವರು ನಿಲ್ಲುತ್ತಾರೆ ಮತ್ತೆ ನಡೆಯುತ್ತಾರೆ. ನಾವಂತೂ ಸಮರ್ಪಣೆಯಾಗುವುದಿಲ್ಲ ಎಂದು ಮೊದಲೇ ಹೇಳಿದ್ದೆವು ಎಂದು ಅವರು ಪದೇ-ಪದೇ ತಮಗೇ ಹೇಳುತ್ತಾರೆ. ಇನ್ನೂ ಕೆಲವರು ಆಲೋಚಿಸುತ್ತಾರೆ – ಇದಕ್ಕಿಂತಲೂ ಹೊರಗಡೆಯಿದ್ದು ಸೇವೆ ಮಾಡುವುದು ಒಳ್ಳೆಯದಾಗಿದೆ ಎಂದು. ಆದರೆ ಹೊರಗೆ ಇದ್ದು ಸೇವೆ ಮಾಡುವುದು ಮತ್ತು ತ್ಯಾಗ ಮಾಡಿ ಸೇವೆ ಮಾಡುವುದರಲ್ಲಿ ಖಂಡಿತ ವ್ಯತ್ಯಾಸವಿದೆ. ಯಾರು ಸಮರ್ಪಣತೆಯ ಮಹತ್ವಿಕೆಯನ್ನು ಅರಿತುಕೊಂಡಿದ್ದಾರೆಯೋ ಅವರು ಸದಾ ಸ್ವಯಂನ್ನು ಕೆಲವು ಮಾತುಗಳಿಂದ ಬಿಡಿಸಿಕೊಂಡು ಆರಾಮದಿಂದ ಬಂದು ಬಿಟ್ಟಿದ್ದಾರೆ. ಕೆಲವರು ಪರಿಶ್ರಮದಿಂದ ಬಂದಿದ್ದಾರೆ ಅಂದಾಗ ಟೀಚರ್ಸ್ ತಮ್ಮ ಮಹತ್ವಿಕೆಯನ್ನು ಚೆನ್ನಾಗಿ ಅರಿತುಕೊಂಡಿದ್ದೀರಲ್ಲವೆ? ನೌಕರಿ ಮತ್ತು ಈ ಸೇವೆ ಎರಡೂ ಕೆಲಸಗಳನ್ನು ಮಾಡುವವರು ಒಳ್ಳೆಯವರೋ ಅಥವಾ ಒಂದು ಕೆಲಸ ಮಾಡುವವರು ಒಳ್ಳೆಯವರೋ? ನೌಕರಿ ಮಾಡುವವರಾದರೂ ಡಬಲ್ ಪಾತ್ರವನ್ನು ಅಭಿನಯಿಸಬೇಕಾಗುವುದು. ಭಲೆ ನಿರ್ಬಂಧನರಾಗಿರಬಹುದು ಆದರೂ ಡಬಲ್ ಪಾತ್ರವಂತೂ ಇದೆಯಲ್ಲವೆ. ನಿಮ್ಮದು ಒಂದೇ ಪಾತ್ರವಾಗಿದೆ, ಪ್ರವೃತ್ತಿಯವರಾದರೆ ಒಂದು ವಿದ್ಯಾಭ್ಯಾಸ, ಇನ್ನೊಂದು ಸೇವೆ ಮತ್ತು ಜೊತೆ ಜೊತೆಗೆ ಪ್ರವೃತ್ತಿಯನ್ನೂ ಪಾಲನೆ ಮಾಡುವ ಮೂರು ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ತಾವಂತೂ ಎಲ್ಲಾ ಮಾತುಗಳಿಂದ ಮುಕ್ತರಾದಿರಿ. ಒಳ್ಳೆಯದು.

ಸರ್ವ ಸದಾ ಪ್ರಸನ್ನತೆಯ ವಿಶೇಷತೆಯಿಂದ ಸಂಪನ್ನ, ಶ್ರೇಷ್ಠಾತ್ಮರಿಗೆ, ಸದಾ ತಮ್ಮ ವಿಶೇಷತೆಯನ್ನು ಅರಿತುಕೊಂಡು ಕಾರ್ಯದಲ್ಲಿ ತೊಡಗಿಸುವಂತಹ ಬುದ್ಧಿವಂತ ಮತ್ತು ಉದಾಹರಣಾ ಮೂರ್ತಿ ಆತ್ಮರಿಗೆ, ಸದಾ ಪ್ರಸನ್ನರಾಗಿರುವಂತಹ ಪ್ರಸನ್ನಗೊಳಿಸುವ ಶ್ರೇಷ್ಠತೆಯನ್ನು ಹೊಂದಿರುವ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಆಗ್ರಾ-ರಾಜಸ್ಥಾನ:

ಸದಾ ತಮ್ಮನ್ನು ಅಕಾಲ ಸಿಂಹಾನಧಿಕಾರಿ ಶ್ರೇಷ್ಠ ಆತ್ಮನೆಂದು ತಿಳಿಯುವಿರಾ? ಆತ್ಮನು ಅಕಾಲನಾಗಿದ್ದಾನೆ ಅಂದಮೇಲೆ ಅದರ ಸಿಂಹಾಸನವೂ ಅಕಾಲ ಸಿಂಹಾಸನವಾಯಿತಲ್ಲವೆ! ಈ ಸಿಂಹಾಸನದ ಮೇಲೆ ಆತ್ಮವು ಕುಳಿತುಕೊಂಡು ಎಷ್ಟೊಂದು ಕಾರ್ಯವನ್ನು ಮಾಡುತ್ತದೆ. ನಾನು `ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ’ ಎಂಬ ಸ್ಮೃತಿಯಿಂದ ಸ್ವತಹವಾಗಿಯೇ ಸ್ವರಾಜ್ಯದ ಸ್ಮೃತಿಯು ಬರುತ್ತದೆ. ಯಾವಾಗ ರಾಜನು ಸಿಂಹಾಸನದ ಮೇಲೆ ಕುಳಿತುಕೊಳ್ಳುವನು ಆಗ ರಾಜನೆಂಬ ನಶೆ, ಖುಷಿಯು ಸ್ವತಹವಾಗಿಯೇ ಉತ್ಪನ್ನವಾಗುವುದು. ಸಿಂಹಾಸನಾಧಿಕಾರಿ ಎಂದರೆ ಸ್ವರಾಜ್ಯ ಅಧಿಕಾರಿ ರಾಜನಾಗಿದ್ದೇನೆ – ಈ ಸ್ಮೃತಿಯಿಂದ ಸ್ವತಹವಾಗಿಯೇ ಸರ್ವ ಕರ್ಮೇಂದ್ರಿಯಗಳೂ ಆದೇಶದ ಅನುಸಾರ ನಡೆಯುವುದು. ಯಾರು ಅಕಾಲ ಸಿಂಹಾಸನಾಧಿಕಾರಿ ಎಂದು ತಿಳಿದುಕೊಂಡು ನಡೆಯುವರೋ ಅವರಿಗಾಗಿ ತಂದೆಯ ಹೃದಯ ಸಿಂಹಾಸನವೂ ಇದೆ. ಏಕೆಂದರೆ ಆತ್ಮನೆಂದು ತಿಳಿಯುವುದರಿಂದ ತಂದೆಯದೇ ನೆನಪು ಬರುತ್ತದೆ. ನಂತರ ದೇಹವೂ ಇರುವುದಿಲ್ಲ, ದೇಹದ ಸಂಬಂಧ/ದೇಹದ ಪದಾರ್ಥವೂ ಇರುವುದಿಲ್ಲ. ತಂದೆಯೇ ತನ್ನ ಪ್ರಪಂಚವಾಗಿದ್ದಾರೆ ಆದ್ದರಿಂದ ಅಕಾಲ-ಸಿಂಹಾಸನ-ಅಧಿಕಾರಿಯು ತಂದೆಯ ಹೃದಯ-ಸಿಂಹಾಸನ-ಅಧಿಕಾರಿಯೂ ಆಗುವರು. ಯಾರಲ್ಲಿ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇರುವುದಿಲ್ಲ – ಇಂತಹ ಮಕ್ಕಳೇ ತಂದೆಯ ಹೃದಯದಲ್ಲಿರುವರು ಅಂದಮೇಲೆ ಡಬಲ್ ಸಿಂಹಾಸನವಾಯಿತು. ಯಾರು ಅಗಲಿ ಮರಳಿ ಸಿಕ್ಕಿರುವ ಮಕ್ಕಳಿರುತ್ತಾರೆ, ಬಹಳ ಪ್ರಿಯವಾಗುವರು, ಅವರನ್ನು ಸದಾ ಮಡಿಲಿನಲ್ಲಿಯೇ ಕೂರಿಸಿಕೊಳ್ಳುವರು, ತಲೆಯ ಮೇಲೆ ಕೂರಿಸಿಕೊಳ್ಳುವರೇ ಹೊರತು ಕೆಳಗಿಡುವುದಿಲ್ಲ. ಅದಕ್ಕಾಗಿಯೇ ತಂದೆಯೂ ಹೇಳುವರು – ಸಿಂಹಾಸನದ ಮೇಲೆ ಕುಳಿತುಕೊಳ್ಳಿರಿ, ಕೆಳಗೆ ಬಂದು ಬಿಡಬಾರದು. ಯಾರಿಗೆ ಸಿಂಹಾಸನವು ಸಿಗುತ್ತದೆಯೋ ಅವರು ಬೇರೆ ಜಾಗದಲ್ಲಿ ಕುಳಿತುಕೊಳ್ಳುವರೇನು? ಹಾಗಾದರೆ ಅಕಾಲ ಸಿಂಹಾಸನ ಅಥವಾ ಹೃದಯ ಸಿಂಹಾಸನವನ್ನು ಮರೆತು ದೇಹದ ಧರಣಿಯಲ್ಲಿ, ಮಣ್ಣಿನಲ್ಲಿ ಬರಬಾರದು. ದೇಹವನ್ನು ಮಣ್ಣು ಎಂದು ಹೇಳುವಿರಲ್ಲವೆ, ಮಣ್ಣು-ಮಣ್ಣಿನಲ್ಲಿ ಸೇರಿ ಹೋಗುತ್ತದೆ ಎಂದು ಹೇಳುವರಲ್ಲವೆ! ಹಾಗಾದರೆ ದೇಹದಲ್ಲಿ ಬರುವುದು ಅರ್ಥಾತ್ ಮಣ್ಣಿನಲ್ಲಿ ಬರುವುದಾಯಿತು. ಯಾರು ರಾಯಲ್ ಫ್ಯಾಮಿಲಿ ಮಕ್ಕಳಾಗಿರುತ್ತಾರೆಯೋ ಅವರೆಂದಿಗೂ ಸಹ ಮಣ್ಣಿನಲ್ಲಿ ಆಡುವುದಿಲ್ಲ. ಪರಮಾತ್ಮನ ಮಕ್ಕಳಂತು ಎಲ್ಲರಿಗಿಂತಲೂ ರಾಯಲ್ ಆಗಿರುವರು ಅಂದಾಗ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ಪ್ರಿಯವಾಗುತ್ತದೆಯೋ ಅಥವಾ ಮಣ್ಣನ್ನೂ ಸ್ವಲ್ಪ ನೋಡಿ ಬಿಡೋಣ ಎಂದು ಸ್ವಲ್ಪ-ಸ್ವಲ್ಪ ಮನಸ್ಸಾಗುತ್ತದೆಯೇ! ಕೆಲವು ಮಕ್ಕಳಲ್ಲಿ ಮಣ್ಣನ್ನು ತಿನ್ನುವ ಅಥವಾ ಮಣ್ಣಿನಲ್ಲಿಯೇ ಆಡುವ ಸ್ವಭಾವವಿರುತ್ತದೆ. ತಮ್ಮಲ್ಲಿ ಇಂತಹ ಸ್ವಭಾವವಂತು ಇಲ್ಲವಲ್ಲವೆ! 63 ಜನ್ಮಗಳಲ್ಲಿಯೂ ಮಣ್ಣಿನೊಂದಿಗೆ ಆಡಿದಿರಿ, ಈಗ ತಂದೆಯು ಸಿಂಹಾಸನಾಧಿಕಾರಿ ಮಾಡುತ್ತಿದ್ದಾರೆ, ಅಂದಾಗ ಮಣ್ಣಿನೊಂದಿಗೆ ಹೇಗೆ ಆಡುವಿರಿ, ಯಾರು ಮಣ್ಣಿನಲ್ಲಿ ಆಡುವರೋ ಅವರು ಅಶುದ್ಧವಾಗುತ್ತಾರೆ. ಹಾಗಾದರೆ ತಾವೂ ಸಹ ಎಷ್ಟೊಂದು ಅಶುದ್ಧವಾಗಿ ಬಿಟ್ಟಿದ್ದೀರಿ. ಈಗ ತಂದೆಯವರು ಸ್ವಚ್ಛರನ್ನಾಗಿ ಮಾಡಿ ಬಿಟ್ಟಾರು, ಇದೇ ಸ್ಮೃತಿಯಿಂದ ಸದಾ ಸಮರ್ಥವಾಗಿ ಇರಬೇಕು. ಎಂದಿಗೂ ಸಹ ಶಕ್ತಿಶಾಲಿಗಳು ಬಲಹೀನರಾಗುವುದಿಲ್ಲ. ಬಲಹೀನರಾಗುವುದು ಎಂದರೆ ಮಾಯೆಯ ರೋಗವುಂಟಾಗುವುದು. ಈಗಂತು ಸದಾ ಆರೋಗ್ಯವಂತರು ಆಗಿದ್ದೀರಿ, ಆತ್ಮವು ಶಕ್ತಿಶಾಲಿ ಆಗಿ ಬಿಟ್ಟಿತು. ಶರೀರದ ಲೆಕ್ಕಚಾರವು ಬೇರೆ ಮಾತು ಆದರೆ ಮನಸ್ಸಂತು ಶಕ್ತಿಶಾಲಿ ಆಯಿತಲ್ಲವೆ. ಶರೀರವು ಬಲಹೀನವಾಗಿದೆ ಆದ್ದರಿಂದ ನಡೆಯುವುದಿಲ್ಲ, ಅದಂತು ಅಂತಿಮದಲ್ಲಿದೆ, ಆ ರೀತಿ ಅವಶ್ಯವಾಗಿ ಆಗುವುದು ಆದರೆ ಆತ್ಮವು ಶಕ್ತಿಶಾಲಿ ಆಗಿರಲಿ. ಶರೀರದ ಜೊತೆ ಆತ್ಮವಂತು ಬಲಹೀನವಾಗಬಾರದು. ಅದಕ್ಕಾಗಿ ಸದಾ ನೆನಪಿಟ್ಟುಕೊಳ್ಳಿರಿ – ಡಬಲ್ ಸಿಂಹಾಸನ ಅಧಿಕಾರಿಯಿಂದ ಡಬಲ್ ಕಿರೀಟಧಾರಿ ಆಗುವವರಿದ್ದೀರಿ. ಒಳ್ಳೆಯದು!

ಎಲ್ಲರೂ ಸಂತುಷ್ಟವಾಗಿ ಇದ್ದೀರಲ್ಲವೆ! ಸಂತುಷ್ಟತೆ ಅರ್ಥಾತ್ ಪ್ರಸನ್ನವಾಗಿರುವುದು. ಸದಾ ಪ್ರಸನ್ನವಾಗಿ ಇರುತ್ತೀರಾ ಅಥವಾ ಕೆಲವೊಮ್ಮೆ ಪ್ರಸನ್ನವಾಗಿರುತ್ತೀರಾ? ಕೆಲವೊಮ್ಮೆ ಅಪ್ರಸನ್ನ, ಕೆಲವೊಮ್ಮೆ ಪ್ರಸನ್ನವಾಗಿರುವಂತೆ ಇರುವುದಿಲ್ಲವೇ, ಕೆಲವೊಮ್ಮೆ ಕೆಲವು ಮಾತುಗಳಲ್ಲಿ ಅಪ್ರಸನ್ನರಂತು ಆಗುವುದಿಲ್ಲವೇ?ಇಂದು ಇದನ್ನು ಮಾಡಿದೆನು, ಇಂದು ಇದಾಯಿತು, ನೆನ್ನೆ ಅದಾಯಿತು – ಈ ರೀತಿಯಾಗಿ ಪತ್ರವನ್ನು ಬರೆಯುವುದಿಲ್ಲವೇ?ಸದಾ ಪ್ರಸನ್ನಚಿತ್ತರಾಗಿ ಇರುವವರು ತನ್ನ ಆತ್ಮಿಕ ಪ್ರಕಂಪನಗಳಿಂದ ಅನ್ಯರನ್ನೂ ಪ್ರಸನ್ನಗೊಳಿಸುವರು.ನಾನಂತು ಪ್ರಸನ್ನವಾಗಿಯೇ ಇರುವೆನು ಅಷ್ಟೇ ಅಲ್ಲ, ಆದರೆ ಪ್ರಸನ್ನತೆಯ ಶಕ್ತಿಯು ಅವಶ್ಯವಾಗಿ ಹರಡುವುದು ಅಂದಮೇಲೆ ಯಾರನ್ನಾದರೂ ಪ್ರಸನ್ನಗೊಳಿಸಬಹುದು – ಈ ರೀತಿ ಇದ್ದೀರಾ ಅಥವಾ ತಮ್ಮವರೆಗಷ್ಟೇ ಪ್ರಸನ್ನತೆಯಿರುವುದು ಸರಿಯೇ? ಅನ್ಯರನ್ನೂ ಪ್ರಸನ್ನಗೊಳಿಸುವಿರೆಂದರೆ ನಂತರ ಯಾವುದೇ ಪತ್ರಗಳು ಬರುವುದಿಲ್ಲ. ಒಂದುವೆಳೆ ಯಾರಿಂದಲಾದರೂ ಅಪ್ರಸನ್ನತೆಯ ಪತ್ರವು ಬಂದಿತೆಂದರೆ, ಮತ್ತೆ ಅವರಿಗೇ ಹಿಂತಿರುಗಿಸಿ ಕಳುಹಿಸಬೇಕಲ್ಲವೆ! ಈ ಸಮಯ ಮತ್ತು ದಿನಾಂಕವನ್ನು ನೆನಪಿಟ್ಟುಕೊಳ್ಳಿರಿ. ಮತ್ತು ಈ ಪತ್ರವನ್ನು ಬರೆಯಿರಿ – ಓ.ಕೆ.ಆಗಿದ್ದೇನೆ ಮತ್ತು ಎಲ್ಲರೂ ನನ್ನಿಂದಲೂ ಒ.ಕೆ.ಆಗಿದ್ದಾರೆ. ಕೇವಲ ಈ ಎರಡು ಸಾಲುಗಳಲ್ಲಿಯೇ ಬರೆಯಿರಿ. ನಾನೂ ಒ.ಕೆ., ಮತ್ತು ನನ್ನಿಂದ ಅನ್ಯರೂ ಒ.ಕೆ., ಇದ್ದಾರೆ, ಇವೆರಡು ಸಾಲುಗಳನ್ನು ಕಾರ್ಡಿನಲ್ಲಿ ಬರೆದರೂ ತಲುಪುತ್ತದೆ, ಅದಕ್ಕಾಗಿ ಇಷ್ಟೆಲ್ಲಾ ಖರ್ಚನ್ನೇಕೆ ಮಾಡುತ್ತೀರಿ! ಮತ್ತು ಪದೇ-ಪದೇ ಬರೆಯಬೇಡಿ, ಇಲ್ಲದಿದ್ದರೆ ಪ್ರತಿನಿತ್ಯವೂ ಕಾರ್ಡನ್ನು ಕಳುಹಿಸುತ್ತೀರಿ, ನಿತ್ಯವೂ ಕಳುಹಿಸಬಾರದು. ತಿಂಗಳಿಗೆ ಎರಡು ಬಾರಿ, 15 ದಿನದಲ್ಲಿ ಒಮ್ಮೆ “ಒ.ಕೆ.” ಎಂದು ಬರೆದು ಕಾರ್ಡನ್ನು ಕಳುಹಿಸಿರಿ, ಬೇರೆ ಕಥೆಗಳನ್ನು ಬರೆಯಬಾರದು. ತಮ್ಮ ಪ್ರಸನ್ನತೆಯಿಂದ ಅನ್ಯರನ್ನೂ ಪ್ರಸನ್ನರನ್ನಾಗಿ ಮಾಡಿರಿ. ಒಳ್ಳೆಯದು!

ವರದಾನ:-

ಆತ್ಮಿಕ ಸೇವಾಧಾರಿಗಳಲ್ಲಿ ಸೇವೆಯ ಹೊರತು ಮತ್ತೇನೂ ತೋಚುವುದಿಲ್ಲ, ಅವರು ಮನಸಾ-ವಾಚಾ-ಕರ್ಮಣಾ ಸೇವೆಯಿಂದ ಒಂದು ಸೆಕೆಂಡಿಗೂ ವಿಶ್ರಾಂತಿ ಪಡೆಯುವುದಿಲ್ಲ. ಆದ್ದರಿಂದ ಸಮರ್ಥರು ಆಗಿ ಬಿಡುತ್ತಾರೆ. ಅಂತಹವರು ಸೇವೆಗಳಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಸದಾ ಇದೇ ಸ್ಲೋಗನ್ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ- ಸಮಾವೇಶ ಮಾಡಿಕೊಳ್ಳುವುದು ಹಾಗೂ ಧೈರ್ಯವಾಗಿ ಇರುವುದೇ ನಮ್ಮ ಲಕ್ಷ್ಯವಾಗಿದೆ. ಅವರು ತನ್ನ ಹಳೆಯ ಸಂಸ್ಕಾರಗಳನ್ನು ಸಮಾವೇಶ ಮಾಡಿಕೊಳ್ಳುತ್ತಾರೆ ಹಾಗೂ ಮಾಯೆಯೊಂದಿಗೆ ಧೈರ್ಯವಾಗಿ ಎದುರಿಸುತ್ತಾರೆಯೇ ಹೊರತು ದೈವೀ ಪರಿವಾರದವರೊಂದಿಗೆ ಅಲ್ಲ. ಇಂತಹ ಮಕ್ಕಳು ಯಾರು ಜ್ಞಾನಪೂರ್ಣರಾಗಿ ಇರುವುದರ ಜೊತೆ-ಜೊತೆ ಶಕ್ತಿಶಾಲಿಗಳೂ ಆಗಿದ್ದಾರೆಯೋ ಅವರಿಗೇ ಹೇಳಲಾಗುತ್ತದೆ – ಆತ್ಮಿಕ ಸೇವಾಧಾರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top