05 August 2021 KANNADA Murli Today | Brahma Kumaris

Read and Listen today’s Gyan Murli in Kannada

August 4, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ನಿಮ್ಮ ಅದೃಷ್ಟವನ್ನು ಬೆಳಗಿಸಲು ಬಂದಿದ್ದಾರೆ, ಪಾವನರಾಗುವುದರಿಂದಲೇ ಅದೃಷ್ಟವು ಬೆಳಗುವುದು”

ಪ್ರಶ್ನೆ:: -

ಯಾವ ಮಕ್ಕಳ ಅದೃಷ್ಟವು ಬೆಳಗಿದೆಯೋ ಅವರ ಚಿಹ್ನೆಗಳೇನು?

ಉತ್ತರ:-

1. ಅವರು ಸುಖ ದೇವತೆಯಾಗಿರುತ್ತಾರೆ. ಬೇಹದ್ದಿನ ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಂಡು ಎಲ್ಲರಿಗೆ ಸುಖ ಕೊಡುತ್ತಾರೆ. ಎಂದೂ ಯಾರಿಗೂ ದುಃಖ ಕೊಡುವುದಿಲ್ಲ. ಅವರು ವ್ಯಾಸನ ಮಕ್ಕಳು ಸತ್ಯ-ಸತ್ಯ ಸುಖ ದೇವನಾಗಿರುತ್ತಾರೆ. 2. ಅವರು ಪಂಚ ವಿಕಾರಗಳ ಸನ್ಯಾಸ ಮಾಡಿ ಸತ್ಯ-ಸತ್ಯ ರಾಜಯೋಗಿ, ರಾಜಋಷಿಗಳೆಂದು ಕರೆಸಿಕೊಳ್ಳುತ್ತಾರೆ. 3. ಅವರ ಸ್ಥಿತಿಯು ಏಕರಸವಾಗಿರುತ್ತದೆ. ಅವರಿಗೆ ಯಾವುದೇ ಮಾತಿನಲ್ಲಿ ದುಃಖವಾಗಲು ಸಾಧ್ಯವಿಲ್ಲ, ಅವರಿಗೇ ಮೋಹಜೀತರೆಂದು ಹೇಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ……

ಓಂ ಶಾಂತಿ. ಗೀತೆಯ ಒಂದು ಸಾಲನ್ನು ಕೇಳುತ್ತಿದ್ದಂತೆಯೇ ಮಧುರಾತಿ ಮಧುರ ಮಕ್ಕಳಿಗೆ ರೋಮಾಂಚನವಾಗಿ ಬಿಡಬೇಕು. ಭಲೆ ಸಾಮಾನ್ಯ ಗೀತೆಯಾಗಿದೆ ಆದರೆ ಇದರ ಸಾರವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಪ್ರತಿಯೊಂದು ಗೀತೆ, ಶಾಸ್ತ್ರದ ಅರ್ಥವನ್ನು ತಿಳಿಸುತ್ತಾರೆ, ಮಧುರಾತಿ ಮಧುರ ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ. ಕಲಿಯುಗದಲ್ಲಿ ಎಲ್ಲರ ಅದೃಷ್ಟವು ಮಲಗಿದೆ, ಸತ್ಯಯುಗದಲ್ಲಿ ಅದೃಷ್ಟವು ಬೆಳಗಿರುತ್ತದೆ. ಮಲಗಿರುವ ಅದೃಷ್ಟವನ್ನು ಜಾಗೃತಗೊಳಿಸುವವರು ಮತ್ತು ಮತವನ್ನು ಕೊಡುವವರು ಅಥವಾ ಅದೃಷ್ಟವನ್ನು ರೂಪಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಅವರೇ ಕುಳಿತು ಮಕ್ಕಳ ಅದೃಷ್ಟವನ್ನು ಬೆಳಗಿಸುತ್ತಾರೆ. ಹೇಗೆ ಮಕ್ಕಳು ಜನ್ಮ ಪಡೆಯುತ್ತಾರೆ, ಅದೃಷ್ಟವು ಬೆಳಗುತ್ತದೆ. ಮಗುವು ಜನ್ಮ ಪಡೆಯುತ್ತಿದ್ದಂತೆಯೇ ಅವರಿಗೆ ಇದು ಅರ್ಥವಾಗುತ್ತದೆ – ನಾನು ವಾರಸುಧಾರನಾಗಿದ್ದೇನೆ ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಮಕ್ಕಳಿಗೆ ತಿಳಿದಿದೆ – ಕಲ್ಪ-ಕಲ್ಪವೂ ನಮ್ಮ ಅದೃಷ್ಟವು ಬೆಳಗುತ್ತದೆ ಮತ್ತೆ ಮಲಗುತ್ತದೆ. ಪಾವನರಾದಾಗ ಅದೃಷ್ಟವು ಬೆಳಗುತ್ತದೆ, ಪಾವನ ಗೃಹಸ್ಥಾಶ್ರಮವೆಂದು ಹೇಳಲಾಗುತ್ತದೆ. ಆಶ್ರಮ ಪದವು ಪವಿತ್ರವಾಗಿರುತ್ತದೆ. ಪವಿತ್ರ ಗೃಹಸ್ಥಾಶ್ರಮ, ಅದಕ್ಕೆ ವಿರುದ್ಧ ಪದವಾಗಿದೆ – ಅಪವಿತ್ರ, ಪತಿತ ಧರ್ಮ, ಆಶ್ರಮವೆಂದು ಹೇಳುವುದಿಲ್ಲ. ಗೃಹಸ್ಥ ಧರ್ಮವಂತೂ ಎಲ್ಲರದೂ ಆಗಿದೆ, ಪ್ರಾಣಿಗಳದೂ ಆಗಿದೆ. ಎಲ್ಲವೂ ಮಕ್ಕಳು ಮರಿಗಳಿಗೆ ಜನ್ಮ ಕೊಡುತ್ತದೆ, ಪ್ರಾಣಿಗಳನ್ನೂ ಸಹ ಗೃಹಸ್ಥ ಧರ್ಮದಲ್ಲಿವೆ ಎಂದು ಹೇಳಲಾಗುತ್ತದೆ. ಈಗ ಮಕ್ಕಳಿಗೆ ತಿಳಿದಿದೆ, ನಾವು ಸ್ವರ್ಗದಲ್ಲಿ ಪವಿತ್ರ ಗೃಹಸ್ಥಾಶ್ರಮದಲ್ಲಿ ಇದ್ದೆವು, ದೇವಿ-ದೇವತೆಗಳಾಗಿದ್ದೆವು. ಅವರ ಮಹಿಮೆಯನ್ನೂ ಹಾಡುತ್ತಾರೆ – ಸರ್ವಗುಣ ಸಂಪನ್ನರು….. ನೀವೂ ಸಹ ಹಾಡುತ್ತಿದ್ದಿರಿ. ಈಗ ನಿಮಗೆ ಅರ್ಥವಾಗಿದೆ – ನಾವು ಮನುಷ್ಯರಿಂದ ಪುನಃ ದೇವಿ-ದೇವತೆಗಳಾಗುತ್ತಿದ್ದೇವೆ. ದೇವಿ-ದೇವತೆಗಳದು ಧರ್ಮವಾಗಿದೆ. ಮತ್ತೆ ಬ್ರಹ್ಮಾ, ವಿಷ್ಣು, ಶಂಕರನಿಗೂ ದೇವತೆಗಳೆಂದು ಹೇಳುತ್ತಾರೆ. ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ….. ಶಿವನಿಗೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಅಂತರವಾಯಿತಲ್ಲವೆ. ಶಿವ ಮತ್ತು ಶಂಕರನನ್ನು ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಕಲ್ಲು ಬುದ್ಧಿಯವರಾಗಿದ್ದಿರಿ, ಈಗ ಪಾರಸ ಬುದ್ಧಿಯವರಾಗುತ್ತಿದ್ದೀರಿ. ದೇವತೆಗಳಿಗೆ ಕಲ್ಲು ಬುದ್ಧಿಯವರೆಂದು ಹೇಳುವುದಿಲ್ಲ. ನಂತರ ಡ್ರಾಮಾನುಸಾರ ರಾವಣ ರಾಜ್ಯವಾಗುವ ಕಾರಣ ಅವರೂ ಸಹ ಏಣಿಯನ್ನು ಇಳಿಯಬೇಕಾಗುವುದು, ಪಾರಸ ಬುದ್ಧಿಯವರಿಂದ ಕಲ್ಲು ಬುದ್ಧಿಯವರು ಆಗಬೇಕಾಗುವುದು. ಎಲ್ಲರಿಗಿಂತ ಬುದ್ಧಿವಂತರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ನಿಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವು ಇಲ್ಲಿಗೆ ಪಾರಸ ಬುದ್ಧಿಯವರಾಗಲು ಬರುತ್ತೀರಿ. ಪಾರಸನಾಥನ ಮಂದಿರವೂ ಇದೆ. ಅಲ್ಲಿ ಮೇಳವಾಗುತ್ತದೆ, ಆದರೆ ಪಾರಸನಾಥ ಯಾರೆಂಬುದು ಯಾರಿಗೂ ತಿಳಿದಿಲ್ಲ. ವಾಸ್ತವದಲ್ಲಿ ಪಾರಸವನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಅವರು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ. ಇದು ನೀವು ಮಕ್ಕಳ ಬುದ್ಧಿಗಾಗಿ ಔಷಧಿಯಾಗಿದೆ. ಬುದ್ಧಿಯು ಎಷ್ಟೊಂದು ಪರಿವರ್ತನೆಯಾಗುತ್ತದೆ, ಹೇಗೆ ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ… ಎಂದು ಹಾಡಲಾಗುತ್ತದೆ. ಆದರೆ ಇದು ಕೋತಿಗಳ ಮಾತಲ್ಲ, ಮನುಷ್ಯರೇ ಕೋತಿಯಂತೆ ಆಗಿ ಬಿಡುತ್ತಾರೆ. ಮನುಷ್ಯರನ್ನು ಕಾಡು ಜನರಿಗೆ ಹೋಲಿಕೆ ಮಾಡಲಾಗುತ್ತದೆ. ಇದಕ್ಕೆ ಮುಳ್ಳುಗಳ ಕಾಡೆಂದು ಹೇಳಲಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಿರುತ್ತಾರೆ. ಈಗ ನೀವು ಮಕ್ಕಳ ಬುದ್ಧಿಗೆ ಟಾನಿಕ್ ಸಿಗುತ್ತಿದೆ. ಬೇಹದ್ದಿನ ತಂದೆಯು ಟಾನಿಕ್ನ್ನು ಕೊಡುತ್ತಿದ್ದಾರೆ. ಇದು ವಿದ್ಯೆಯಾಗಿದೆ, ಇದಕ್ಕೆ ಜ್ಞಾನಾಮೃತವೆಂತಲೂ ಹೇಳುತ್ತಾರೆ. ಯಾವುದೇ ಸ್ಥೂಲವಾದ ನೀರಲ್ಲ, ಇತ್ತೀಚೆಗೆ ಎಲ್ಲಾ ವಸ್ತುಗಳಿಗೆ ಅಮೃತವೆಂದು ಹೇಳಿ ಬಿಡುತ್ತಾರೆ, ಗಂಗಾಜಲವನ್ನು ಅಮೃತವೆಂದು ಹೇಳುತ್ತಾರೆ. ದೇವತೆಗಳ ಪಾದಗಳನ್ನು ತೊಳೆದು ಕುಡಿಯುತ್ತಾರೆ. ನೀರನ್ನಿಟ್ಟು ಅದನ್ನು ಅಮೃತದ ಅಂಚಲಿಯೆಂದು ತಿಳಿಯುತ್ತಾರೆ. ಯಾವ ಅಂಚಲಿಯನ್ನು ತೆಗೆದುಕೊಳ್ಳುವರು ಅದಕ್ಕೆ ಇದು ಪತಿತರನ್ನು ಪಾವನ ಮಾಡುವಂತದ್ದೆಂದು ಹೇಳಲಾಗುವುದಿಲ್ಲ. ಗಂಗಾಜಲಕ್ಕೆ ಪತಿತ-ಪಾವನಿ ಎಂದು ಹೇಳುತ್ತಾರೆ. ಮನುಷ್ಯರು ಸತ್ತಾಗ ಗಂಗಾಜಲವು ಬಾಯಲ್ಲಿರಲಿ ಎಂದು ಹೇಳುತ್ತಾರೆ. ಅರ್ಜುನನು ಬಾಣ ಹೊಡೆದನು, ಮತ್ತೆ ಅಮೃತ ಜಲವನ್ನು ಕುಡಿಸಿದನೆಂದು ತೋರಿಸುತ್ತಾರೆ. ನೀವು ಮಕ್ಕಳು ಬಾಣಗಳನ್ನು ಹೊಡೆಯುವುದಿಲ್ಲ. ಒಂದು ಡ್ರಾಮಾ ಇದೆ, ಅಲ್ಲಿ ಬಾಣಗಳಿಂದ ಜಗಳವಾಡುತ್ತಾರೆ. ಅಲ್ಲಿನ ರಾಜನನ್ನು ಈಶ್ವರನ ಅವತಾರವೆಂದು ತಿಳಿಯುತ್ತಾರೆ, ತಂದೆಯು ಹೇಳುತ್ತಾರೆ – ಇವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಸತ್ಯ-ಸತ್ಯವಾದ ಸದ್ಗುರು ಒಬ್ಬರೇ ಆಗಿದ್ದಾರೆ, ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಅವರು ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಬ್ರಹ್ಮ್ತತ್ವದಲ್ಲಿ ಲೀನವಾಗುವ ಮಾತೇ ಇಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ಈ ಅನಾದಿ ಚಕ್ರವು ಸುತ್ತುತ್ತಲೇ ಇರುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಮನುಷ್ಯರು ಅರ್ಥಾತ್ ಆತ್ಮರು ತನ್ನ ತಂದೆ ರಚಯಿತನನ್ನೂ ಸಹ ಅರಿತುಕೊಂಡಿಲ್ಲ. ಅವರನ್ನೇ ಓ ಗಾಡ್ ಫಾದರ್ ಎಂದು ಹೇಳಿ ನೆನಪು ಮಾಡುತ್ತಾರೆ. ಲೌಕಿಕ ತಂದೆಗೆ ಗಾಡ್ ಫಾದರ್ ಎಂದು ಹೇಳುವುದಿಲ್ಲ. ಗಾಡ್ ಫಾದರ್ ಎಂಬುದನ್ನು ಬಹಳ ಗೌರವದಿಂದ ಹೇಳುತ್ತಾರೆ. ಅವರಿಗೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ. ಒಂದು ಕಡೆ ಅವರು ದುಃಖಹರ್ತ, ಸುಖಕರ್ತನೆಂದು ಹೇಳುತ್ತಾರೆ. ಇನ್ನೊಂದು ಕಡೆ ಯಾವುದೇ ದುಃಖವಾಗುತ್ತದೆ ಅಥವಾ ಮಗುವು ಶರೀರ ಬಿಟ್ಟರೆ ಈಶ್ವರನೇ ಸುಖ-ದುಃಖ ಕೊಡುತ್ತಾನೆ, ಈಶ್ವರನು ನಮ್ಮ ಮಗುವನ್ನು ಕಿತ್ತುಕೊಂಡನು, ಇದೇನು ಮಾಡಿ ಬಿಟ್ಟನು ಎಂದು ಹೇಳಿ ಬಿಡುತ್ತಾರೆ ಮತ್ತೆ ಈಶ್ವರನಿಗೇ ನಿಂದನೆ ಮಾಡುತ್ತಾರೆ. ಈಶ್ವರನೇ ಮಕ್ಕಳನ್ನು ಕೊಟ್ಟನೆಂದು ಹೇಳುತ್ತೀರಿ, ಮತ್ತೆ ಒಂದುವೇಳೆ ಅವರು ಹಿಂತೆಗೆದುಕೊಂಡರೆ ನೀವೇಕೆ ಅಳುತ್ತೀರಿ, ಈಶ್ವರನ ಬಳಿ ಹೋದರಲ್ಲ. ಸತ್ಯಯುಗದಲ್ಲಿ ಎಂದೂ ಯಾರೂ ಅಳುವುದಿಲ್ಲ, ತಂದೆಯು ತಿಳಿಸುತ್ತಾರೆ – ಅಳುವ ಮಾತೇ ಇಲ್ಲ. ಆತ್ಮವು ತನ್ನ ಲೆಕ್ಕಾಚಾರಗಳ ಅನುಸಾರ ಹೋಗಿ ಪಾತ್ರವನ್ನು ಅಭಿನಯಿಸಬೇಕಾಗಿದೆ. ಜ್ಞಾನವಿಲ್ಲದೇ ಇರುವ ಕಾರಣ ಮನುಷ್ಯರು ಎಷ್ಟೊಂದು ಅಳುತ್ತಾರೆ! ಹೇಗೆ ಹುಚ್ಛರಂತೆ ಆಗಿ ಬಿಡುತ್ತಾರೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಅಮ್ಮ ಸತ್ತರೂ ಜ್ಞಾನದ ಅಲ್ವ ತಿನ್ನಿರಿ… ನಷ್ಟಮೋಹಿಗಳಾಗಿರಿ. ನಮ್ಮವರು ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ ಮತ್ತ್ಯಾರೂ ಇಲ್ಲ. ಮಕ್ಕಳದು ಇಂತಹ ಸ್ಥಿತಿಯಿರಬೇಕು. ಮೋಹಜೀತ ರಾಜನ ಕಥೆಯನ್ನೂ ಕೇಳಿದ್ದೀರಲ್ಲವೆ. ಸತ್ಯಯುಗದಲ್ಲಿ ಎಂದೂ ದುಃಖದ ಮಾತಿರುವುದಿಲ್ಲ, ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಕಾಲದ ಮೇಲೆ ಜಯ ಗಳಿಸುತ್ತೇವೆ, ತಂದೆಗೆ ಕಾಲರ ಕಾಲ ಮಹಾಕಾಲನೆಂತಲೂ ಹೇಳುತ್ತಾರೆ. ನೀವು ಕಾಲದ ಮೇಲೆ ಜಯ ಗಳಿಸಬೇಕಾಗಿದೆ ಅರ್ಥಾತ್ ಕಾಲವೆಂದೂ ಕಬಳಿಸುವುದಿಲ್ಲ. ಕಾಲ (ಮೃತ್ಯು) ವು ಆತ್ಮವನ್ನಾಗಲಿ, ಶರೀರವನ್ನಾಗಲಿ ಕಬಳಿಸಲು ಸಾಧ್ಯವಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಅದಕ್ಕೆ ಕಾಲವು ಕಬಳಿಸಿತು ಎಂದು ಹೇಳುತ್ತಾರೆ ಆದರೆ ಮೃತ್ಯುವೆಂದರೆ ಯಾವುದೇ ವಸ್ತುವಲ್ಲ. ಮನುಷ್ಯರು ಮಹಿಮೆಯನ್ನು ಹಾಡುತ್ತಿರುತ್ತಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ. ಅಚ್ಯುತಂ, ಕೇಶವಂ….. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈ ಪಂಚ ವಿಕಾರಗಳು ನಿಮ್ಮ ಬುದ್ಧಿಯನ್ನು ಎಷ್ಟು ಕೆಡಿಸಿಬಿಡುತ್ತವೆ. ಈ ಸಮಯದಲ್ಲಿ ಯಾರೂ ತಂದೆಯನ್ನು ತಿಳಿದುಕೊಂಡಿಲ್ಲ ಆದ್ದರಿಂದ ಇದಕ್ಕೆ ಅನಾಥರ ಪ್ರಪಂಚವೆಂದು ಹೇಳಲಾಗುತ್ತದೆ ಪರಸ್ಪರ ಎಷ್ಟೊಂದು ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ತಂದೆಯ ಮನೆಯಾಗಿದೆಯಲ್ಲವೆ. ಈ ಇಡೀ ಪ್ರಪಂಚವೇ ತಂದೆಯ ಮನೆಯಲ್ಲವೆ. ತಂದೆಯು ಇಡೀ ಪ್ರಪಂಚದ ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಲು ಬರುತ್ತಾರೆ. ಅರ್ಧಕಲ್ಪ ಪಾವನ ಪ್ರಪಂಚವಿತ್ತಲ್ಲವೆ, ರಾಮ ರಾಜ, ರಾಮ ಪ್ರಜೆ…. ಎಂದು ಹಾಡುತ್ತಾರೆ ಅಂದಮೇಲೆ ಅಲ್ಲಿ ಅಧರ್ಮದ ಮಾತಿರಲು ಹೇಗೆ ಸಾಧ್ಯ. ಅಲ್ಲಿ ಹಸು-ಹುಲಿ ಒಟ್ಟಿಗೆ ನೀರು ಕುಡಿಯುತ್ತದೆ ಎಂದು ಹೇಳುತ್ತಾರೆ ಅಂದಮೇಲೆ ಅಲ್ಲಿ ರಾವಣನು ಎಲ್ಲಿಂದ ಬರುವನು? ಏನನ್ನೂ ತಿಳಿದುಕೊಂಡಿಲ್ಲ. ವಿದೇಶದವರು ಇಂತಹ ಮಾತುಗಳನ್ನು ಕೇಳಿ ಹಾಸ್ಯ ಮಾಡುತ್ತಾರೆ. ತಂದೆಯು ಬಂದು ಜ್ಞಾನವನ್ನು ಕೊಡುತ್ತಾರೆ, ಇದು ಪತಿತ ಪ್ರಪಂಚವಲ್ಲವೆ. ಈಗ ಪ್ರೇರಣೆಯಿಂದ ಪತಿತರನ್ನು ಪಾವನ ಮಾಡುವರೇ? ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಭಾರತದಲ್ಲಿಯೇ ಬಂದಿದ್ದರು, ಈಗಲೂ ಸಹ ತಿಳಿಸುತ್ತಾರೆ – ಮಕ್ಕಳೇ, ಜ್ಞಾನ ಸಾಗರನಾದ ನಾನು ನಿಮ್ಮನ್ನು ನನ್ನ ಸಮಾನ ಮಾ|| ಜ್ಞಾನ ಸಾಗರನನ್ನಾಗಿ ಮಾಡಲು ಬಂದಿದ್ದೇನೆ. ತಂದೆಗೇ ಸತ್ಯ-ಸತ್ಯ ವ್ಯಾಸನೆಂದು ಹೇಳುತ್ತಾರೆ ಅಂದಮೇಲೆ ಇವರು ವ್ಯಾಸ ದೇವ ಮತ್ತು ಅವರ ಮಕ್ಕಳಾದ ನೀವು ಸುಖದೇವ ಆಗಿದ್ದೀರಿ. ನೀವೀಗ ಸುಖದ ದೇವತೆಗಳಾಗುತ್ತೀರಿ. ವ್ಯಾಸ ಶಿವಾಚಾರ್ಯರಿಂದ ಸುಖದ ಆಸ್ತಿಯನ್ನೂ ತೆಗೆದುಕೊಳ್ಳುತ್ತಿದ್ದೀರಿ. ನೀವು ವ್ಯಾಸನ ಮಕ್ಕಳಾಗಿದ್ದೀರಿ ಆದರೆ ಮನುಷ್ಯರು ತಬ್ಬಿಬ್ಬಾಗದಿರಲಿ ಎಂದು ಶಿವನ ಮಕ್ಕಳೆಂದು ಹೇಳಲಾಗುತ್ತದೆ. ಅವರ ಮೂಲ ಹೆಸರಾಗಿದೆ – ಶಿವ. ಆತ್ಮವನ್ನು ಅರಿತುಕೊಳ್ಳಲಾಗುತ್ತದೆ, ಪರಮಾತ್ಮನನ್ನೂ ಅರಿತುಕೊಳ್ಳಲಾಗುತ್ತದೆ, ಅವರೇ ಬಂದು ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುತ್ತಾರೆ. ನಾನು ನೀವಾತ್ಮರ ತಂದೆಯಾಗಿದ್ದೇನೆ ಎಂದು ಹೇಳುತ್ತಾರೆ. ಅಂಗುಷ್ಟಾಕಾರದಲ್ಲಿ ಇದ್ದಾರೆಂದು ಹೇಳುತ್ತಾರೆ. ಇಷ್ಟು ದೊಡ್ಡದಾಗಿದ್ದರೆ ಇಲ್ಲಿ ನಿಲ್ಲುವುದಕ್ಕೂ ಆಗುತ್ತಿರಲಿಲ್ಲ. ಅವರು ಬಹಳ ಸೂಕ್ಷ್ಮವಾಗಿದ್ದಾರೆ, ಆತ್ಮವನ್ನು ನೋಡುವುದಕ್ಕಾಗಿ ವೈದ್ಯರುಗಳೂ ಸಹ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ನೋಡಲು ಸಾಧ್ಯವಿಲ್ಲ. ಆತ್ಮವನ್ನು ಅನುಭವ ಮಾಡಲಾಗುತ್ತದೆ. ತಂದೆಯು ಕೇಳುತ್ತಾರೆ- ಈಗ ನೀವು ಆತ್ಮವನ್ನು ಅನುಭೂತಿ ಮಾಡಿದ್ದೀರಾ? ಇಷ್ಟು ಚಿಕ್ಕ ಆತ್ಮನಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಹೇಗೆ ಇದು ರೆಕಾರ್ಡ್ ಆಗಿದೆ. ಮೊದಲು ನೀವು ದೇಹಾಭಿಮಾನಿ ಆಗಿದ್ದಿರಿ, ಈಗ ನೀವು ದೇಹೀ-ಅಭಿಮಾನಿಗಳಾಗಿದ್ದೀರಿ. ನಾವಾತ್ಮರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಇರುತ್ತೇವೆ ಎಂದು ನಿಮಗೆ ತಿಳಿದಿದೆ. ಇದೆಂದೂ ನಿಂತು ಹೋಗಲು ಸಾಧ್ಯವಿಲ್ಲ. ಕೆಲವರು ಈ ನಾಟಕವು ಯಾವಾಗ ಆರಂಭವಾಯಿತೆಂದು ಕೇಳುತ್ತಾರೆ ಆದರೆ ಇದು ಅನಾದಿಯಾಗಿದೆ, ಇದೆಂದೂ ವಿನಾಶವಾಗುವುದಿಲ್ಲ. ಇದಕ್ಕೆ ಮಾಡಿ-ಮಾಡಲ್ಪಟ್ಟ ಅವಿನಾಶಿ ಸೃಷ್ಟಿ ನಾಟಕವೆಂದು ಹೇಳಲಾಗುತ್ತದೆ. ಸೃಷ್ಟಿಯನ್ನು ನೀವು ತಿಳಿದುಕೊಂಡಿದ್ದೀರಿ. ಹೇಗೆ ಅವಿದ್ಯಾವಂತ ಮಕ್ಕಳಿಗೆ ವಿದ್ಯೆಯನ್ನು ಕಲಿಸಲಾಗುತ್ತದೆಯೋ ಹಾಗೆಯೇ ತಂದೆಯು ನೀವು ಮಕ್ಕಳಿಗೆ ಓದಿಸುತ್ತಿದ್ದಾರೆ. ಆತ್ಮವೇ ಶರೀರದ ಮೂಲಕ ಓದುತ್ತದೆ, ಈ ವಿದ್ಯೆಯು ಕಲ್ಲು ಬುದ್ಧಿಗೆ ಆಹಾರವಾಗಿದೆ. ಬುದ್ಧಿಗೆ ತಿಳುವಳಿಕೆ ಸಿಗುತ್ತದೆ. ನೀವು ಮಕ್ಕಳಿಗಾಗಿಯೇ ತಂದೆಯು ಚಿತ್ರಗಳನ್ನು ಮಾಡಿಸಿದ್ದಾರೆ. ಬಹಳ ಸಹಜವಾಗಿದೆ. ತ್ರಿಮೂರ್ತಿ ಬ್ರಹ್ಮಾ-ವಿಷ್ಣು-ಶಂಕರ, ಬ್ರಹ್ಮನನ್ನು ತ್ರಿಮೂರ್ತಿಯೆಂದು ಏಕೆ ಹೇಳುತ್ತಾರೆ! ದೇವ ದೇವ ಮಹಾದೇವ…. ಒಬ್ಬರನ್ನು ಇನ್ನೊಬ್ಬರ ಮೇಲೆ ಇಡುತ್ತಾರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳಲಾಗುತ್ತದೆ ಅಂದಮೇಲೆ ಅವರು ಆ ರೀತಿಯಾಗಲು ಹೇಗೆ ಸಾಧ್ಯ. ಸೂಕ್ಷ್ಮವತನದಲ್ಲಿ ಅವರು ದೇವತೆಯಾಗಲು ಹೇಗೆ ಸಾಧ್ಯ. ಸಾಕಾರದಲ್ಲಿ ಪ್ರಜಾಪಿತನು ಇಲ್ಲಿಯೇ ಇರಬೇಕಲ್ಲವೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಈ ಶರೀರದಲ್ಲಿ ಪ್ರವೇಶ ಮಾಡಿ ಇವರ ಮೂಲಕ ನಿಮಗೆ ತಿಳಿಸುತ್ತೇನೆ. ಇವರನ್ನು ತನ್ನ ರಥವನ್ನಾಗಿ ಮಾಡಿಕೊಳ್ಳುತ್ತೇನೆ. ಇವರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬರುತ್ತೇನೆ. ಇವರೂ ಸಹ ಪಂಚ ವಿಕಾರಗಳ ಸನ್ಯಾಸ ಮಾಡುತ್ತಾರೆ. ಸನ್ಯಾಸ ಮಾಡುವವರಿಗೆ ಯೋಗಿಗಳು, ಋಷಿಗಳೆಂದು ಹೇಳಲಾಗುತ್ತದೆ. ನೀವೀಗ ರಾಜ ಋಷಿಗಳಾಗಿದ್ದೀರಿ, ಪ್ರತಿಜ್ಞೆ ಮಾಡುತ್ತೀರಿ. ಆ ಸನ್ಯಾಸಿಗಳು ಗೃಹಸ್ಥವನ್ನು ಬಿಟ್ಟು ಹೊರಟು ಹೋಗುತ್ತಾರೆ, ಇಲ್ಲಂತೂ ಸ್ತ್ರೀ-ಪುರುಷರು ಒಟ್ಟಿಗೆ ಇರುತ್ತೀರಿ. ನಾವೆಂದೂ ವಿಕಾರದಲ್ಲಿ ಹೋಗುವುದಿಲ್ಲವೆಂದು ಹೇಳುತ್ತೀರಿ. ಮೂಲ ಮಾತು ವಿಕಾರದ್ದಾಗಿದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ರಚಯಿತನಾಗಿದ್ದಾರೆ, ಅವರು ಹೊಸ ರಚನೆಯನ್ನು ರಚಿಸುತ್ತಾರೆ. ಅವರು ಬೀಜರೂಪ, ಸತ್ಚಿತ್ ಆನಂದ ಸಾಗರ, ಜ್ಞಾನ ಸಾಗರನಾಗಿದ್ದಾರೆ. ಸ್ಥಾಪನೆ, ಪಾಲನೆ, ವಿನಾಶವನ್ನು ಹೇಗೆ ಮಾಡುತ್ತಾರೆ – ಇದು ತಂದೆಗೇ ಗೊತ್ತಿದೆ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ಇವೆಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ, ಆದ್ದರಿಂದ ಎಲ್ಲರಿಗೆ ತಿಳಿಸುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪ್ರತಿಯೊಂದು ಆತ್ಮನ ಲೆಕ್ಕಾಚಾರವು ಬೇರೆ-ಬೇರೆಯಾಗಿದೆ ಆದ್ದರಿಂದ ಯಾರಾದರೂ ಶರೀರ ಬಿಟ್ಟರೆ ಅಳಬಾರದು, ಪೂರ್ಣ ನಷ್ಟಮೋಹಿಗಳಾಗಬೇಕಾಗಿದೆ. ಬುದ್ಧಿಯಲ್ಲಿರಲಿ – ನನ್ನವರು ಒಬ್ಬ ಬೇಹದ್ದಿನ ತಂದೆಯ ವಿನಃ ಮತ್ತ್ಯಾರೂ ಇಲ್ಲ.

2. ಯಾವ ಪಂಚ ವಿಕಾರಗಳು ಬುದ್ಧಿಯನ್ನು ಕೆಡಿಸುತ್ತವೆಯೋ ಅವುಗಳ ತ್ಯಾಗ ಮಾಡಬೇಕಾಗಿದೆ. ಸುಖದ ದೇವತೆಯಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ, ಯಾರಿಗೂ ದುಃಖ ಕೊಡಬಾರದು.

ವರದಾನ:-

ಯಾವ ಮಕ್ಕಳು ಒಬ್ಬರಿನ್ನೊಬ್ಬರ ಸಂಸ್ಕಾರಗಳನ್ನು ತಿಳಿದುಕೊಂಡು, ಸಂಸ್ಕಾರ ಪರಿವರ್ತನೆಯ ಲಗನ್ನಿನಲ್ಲಿ ಇರುತ್ತಾರೆ, ಎಂದಿಗೂ ಸಹ ಇವರಂತು ಇರುವುದೇ ಹೀಗೆ ಎಂದು ಯೋಗಿಸುವುದಿಲ್ಲವೋ ಅವರಿಗೆ ಹೇಳಲಾಗುತ್ತದೆ – ಜ್ಞಾನ ಪೂರ್ಣರು. ಅವರು ಸ್ವಯಂನ್ನು ನೋಡಿಕೊಳ್ಳುತ್ತಾ ಹಾಗೂ ನಿರ್ವಿಘ್ನರಾಗಿ ಇರುತ್ತಾರೆ. ಅವರ ಸಂಸ್ಕಾರವು ತಂದೆಯ ಸಮಾನ ದಯಾಹೃದಯಿ ಆಗಿರುತ್ತದೆ. ದಯಾ ದೃಷ್ಟಿಯು ತಿರಸ್ಕಾರದ ದೃಷ್ಟಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಇಂತಹ ದಯಾ ಹೃದಯಿ ಮಕ್ಕಳೆಂದಿಗೂ ಸಹ ಪರಸ್ಪರದಲ್ಲಿ ಕಿರಿ ಕಿರಿ ಮಾಡುವುದಿಲ್ಲ. ಅವರು ಸುಪುತ್ರರಾಗಿದ್ದು ಪ್ರತ್ಯಕ್ಷ ಪ್ರಮಾಣವನ್ನು ಕೊಡುತ್ತಾರೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ :

“ಅಖಂಡ ಜ್ಯೋತಿ ತತ್ವವು ಶಾಂತಿಧಾಮ ಮತ್ತು ಸಾಕಾರಿ ಪ್ರಪಂಚವು ಮೈದಾನ”

ಆತ್ಮಗಳ ನಿವಾಸ ಸ್ಥಾನವು ಅಖಂಡ ಜ್ಯೋತಿ ಮಹಾತತ್ವ ಆಗಿದೆ, ಅಲ್ಲಿ ಈ ಶರೀರದ ಪಾತ್ರದಿಂದ ಮುಕ್ತರಾಗಿರುತ್ತೇವೆ ಅರ್ಥಾತ್ ದುಃಖ-ಸುಖಗಳಿಂದ ಭಿನ್ನಾವಸ್ತೆಯಲ್ಲಿ ಇರುತ್ತೇವೆ, ಅದಕ್ಕೆ ಶಾಂತಿಧಾಮ ಎಂದೂ ಸಹ ಹೇಳಲಾಗುತ್ತದೆ. ಹಾಗೂ ಆತ್ಮರು ಶರೀರ ಸಹಿತವಾಗಿ ಪಾತ್ರವನ್ನು ಅಭಿನಯಿಸುವ ಸ್ಥಾನವು ಮೈದಾನವಾಗಿದೆ – ಈ ಸಾಕಾರ ಪ್ರಪಂಚ. ಅಂದಾಗ ಮುಖ್ಯವಾಗಿ ಎರಡು ಪ್ರಪಂಚಗಳಿವೆ, 1. ನಿರಾಕಾರಿ ಪ್ರಪಂಚ, 2. ಸಾಕಾರಿ ಪ್ರಪಂಚ. ಪ್ರಪಂಚದಲ್ಲಿರುವವರು ಕೇವಲ ಹೇಳುವುದಕ್ಕಷ್ಟೇ ಹೇಳುತ್ತಾರೆ – ಪರಮಾತ್ಮನು ರಚೈತ, ಪಾಲನೆ ಮಾಡುತ್ತಾರೆ, ಸಂಹಾರ ಮಾಡುತ್ತಾರೆ, ತಿನ್ನಿಸುತ್ತಾರೆ, ಸಾಯಿಸುವುದೂ ಅವರೇ ಆಗಿದ್ದಾರೆ. ಹಾಗಾದರೆ ದುಃಖ-ಸುಖವನ್ನು ಕೊಡುವವರೇ ಅವರೇ ಆಗಿದ್ದಾರೆ, ಯಾವಾಗ ಯಾವುದೇ ದುಃಖವು ಬರುತ್ತದೆಯೆಂದರೆ ಹೇಳುತ್ತಾರೆ – ಪ್ರಭು ನಿನ್ನ ಶಿಕ್ಷೆಯು ಮಧುರವೆನಿಸಲಿ, ಈಗ ಇದು ಅಯಥಾರ್ಥವಾದ ಜ್ಞಾನವಾಗಿದೆ. ಏಕೆಂದರೆ ಇದ್ಯಾವುದೂ ಪರಮಾತ್ಮನ ಕಾರ್ಯವಲ್ಲ, ಪರಮಾತ್ಮನು ದುಃಖ ಹರ್ತನಾಗಿದ್ದಾರೆ, ದುಃಖ ಕೊಡುವವನಲ್ಲ. ಜನ್ಮವನ್ನು ತೆಗೆದುಕೊಳ್ಳುವುದು-ಬಿಡುವುದು, ದುಃಖ-ಸುಖ ಭೋಗಿಸುವುದು ಪ್ರತಿಯೊಬ್ಬ ಮನುಷ್ಯಾತ್ಮನ ಸಂಸ್ಕಾರವಾಗಿದೆ. ಶಾರೀರಿಕ ಜನ್ಮವನ್ನು ಕೊಡುವಂತಹ ಮಾತಾ-ಪಿತರಿದ್ದಾರೆ, ಅವರು ಕರ್ಮ ಬಂಧನದ ಅನುಸಾರವಾಗಿ ತಂದೆ-ಮಗನ ಸಂಬಂಧದಲ್ಲಿ ಬರುತ್ತಾರೆ, ಇದೇ ರೀತಿ ಆತ್ಮರ ಪಿತನು ಪರಮಾತ್ಮ ತಂದೆಯಾಗಿದ್ದಾರೆ. ಅವರು ಹೇಗೆ ಬೇಹದ್ದಿನ ರಚೈತನ ಸ್ಥಾಪನೆ, ಪಾಲನೆ ಮಾಡುತ್ತಾರೆ! ಹೇಗೆ ಅವರು ತನ್ನ ಮೂರು ರೂಪವಾದ ಬ್ರಹ್ಮಾ-ವಿಷ್ಣು-ಶಂಕರನ ರಚೈತನಾಗಿದ್ದಾರೆ, ನಂತರ ಈ ಆಕಾರಿ ರೂಪಗಳ ಮೂಲಕ ದೈವೀ ಸೃಷ್ಟಿಯ ಸ್ಥಾಪನೆ, ಆಸುರಿ ಪ್ರಪಂಚದ ವಿನಾಶ, ನಂತರ ದೈವೀ ಪ್ರಪಂಚದ ಪಾಲನೆ ಮಾಡಿಸುತ್ತಾರೆ. ಪರಮಾತ್ಮನ ಈ ಮೂರು ಕಾರ್ಯಗಳೂ ಬೇಹದ್ದಿನದಾಗಿದೆ. ಉಳಿದಂತೆ ಈ ದುಃಖ-ಸುಖ, ಜನನ-ಮರಣವು ಕರ್ಮಗಳನುಸಾರ ಆಗುತ್ತದೆ. ಪರಮಾತ್ಮನಂತು ಸುಖ ದಾತನೇ ಆಗಿದ್ದಾರೆ, ಅವರು ತಮ್ಮ ಮಕ್ಕಳಿಗೆ ಯಾವುದೇ ದುಃಖವನ್ನು ಕೊಡುವುದಿಲ್ಲ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top