05 April 2022 KANNADA Murli Today | Brahma Kumaris
Read and Listen today’s Gyan Murli in Kannada
4 April 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ತಂದೆ, ಶಿಕ್ಷಕ ಮತ್ತು ಸದ್ಗುರು ಮೂವರೂ ಪರಮ ಪ್ರೀಯರಾಗಿದ್ದಾರೆ, ಮೂವರೂ ಒಬ್ಬರೆ, ಇದರಿಂದ ನೆನಪು ಮಡುವುದು ಸಹಜವಾಗಬೇಕು”
ಪ್ರಶ್ನೆ:: -
ಈ ಕಲಿಯುಗದಲ್ಲಿ ಸದಾ ಯಾರು ಯುವಕರಾಗಿರುತ್ತಾರೆ ಮತ್ತು ಹೇಗೆ?
ಉತ್ತರ:-
ಇಲ್ಲಿ ರಾವಣ (ವಿಕಾರ) ಸದಾ ಯುವಕನಾಗಿರುತ್ತಾನೆ. ಮನುಷ್ಯ ಭಲೆ ವೃದ್ಧರಾಗಿರಲಿ, ಆದರೆ ಅವರಲ್ಲಿ ಏನು ವಿಕಾರವಿದೆ, ಆ ಕ್ರೋಧ ಎಂದೂ ವೃದ್ಧ ಆಗುವುದಿಲ್ಲ. ಅದು ಸದಾ ಯುವ ಆಗಿರುತ್ತೆ. ಸಾಯುವವರೆಗೂ ಸಹಾ ವಿಕಾರಗಳ ಆಸೆ ಖಾಯಂ ಆಗಿರುತ್ತದೆ. ತಂದೆ ಹೇಳುತ್ತಾರೆ ಕಾಮ ಮಹಾ ಶತೃ ಆಗಿದೆ ಆದರೆ ಮನುಷ್ಯರಿಗೆ ಅದೇ ಪರಮ ಮಿತ್ರ ಆಗಿದೆ ಇದರಿಂದ ಒಬ್ಬರಿನ್ನೊಬ್ಬರಿಗೆ ತೊಂದರೆ ಮಾಡುತ್ತಿರುತ್ತಾರೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನಾನು ಒಂದು ಮುಗ್ದ ಮಗುವಾಗಿದ್ದೇನೆ…
ಓಂ ಶಾಂತಿ. ಮಕ್ಕಳು ತಂದೆಯನ್ನು ನೆನಪು ಮಾಡುತ್ತಾರೆ. ತಿಳಿಯುತ್ತಾರೆ ನಾವು ಈ ಸಮಯ ಮಾಯೆ ಅಥವಾ ಬಲಶಾಲಿ ರಾವಣನ ಸರಪಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ತಂದೆ ಹೇಳುತ್ತಾರೆ – ಇದರಿಂದ ಬಿಡಿಸುವಂತಹವರು ಸಮರ್ಥರಾಗಿದ್ದಾರೆ. ನೀವು ಮಕ್ಕಳು ತಿಳಿದಿರುವಿರಿ ನಾವು ಆತ್ಮರು ಬಲಹೀನರಾಗಿರುವೆವು ಎಂದು. ರಾವಣನು ಬಲಹೀನ ಮಾಡಿದ್ದಾನೆ. ಈ ಜ್ಞಾನ ಯಾವುದೇ ಮನುಷ್ಯರಲ್ಲಿ ಇಲ್ಲ. ತಂದೆ ಕುಳಿತು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಾರೆ. ನೀವು ಎಂತಹ ಸರ್ವ ಶಕ್ತಿವಾನ್ ವಿಶ್ವದ ಮಾಲೀಕರಾಗಿದ್ದಿರಿ. ಈಗ ಎಷ್ಟು ಕಂಗಾಲರಾಗಿರುವಿರಿ, ನಿರ್ಬಲರಾಗಿ ಬಿಟ್ಟಿರುವಿರಿ ಆದ್ದರಿಂದ ಎಲ್ಲರೂ ಕರೆಯುತ್ತಿರುತ್ತಾರೆ ಹೇ! ಪರಮಪಿತ ಪರಮಾತ್ಮ ಬಂದು ನಮ್ಮನ್ನು ಈ ರಾವಣನ ಸರಪಳಿಯಿಂದ ಬಿಡಿಸಿಎಂದು. ಹೇ! ಪತಿತ-ಪಾವನ ಬನ್ನಿ. ಅವರೇ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಈ ಸಮಯದಲ್ಲಿ ರಾವಣ ರಾಜ್ಯವಿದೆ, ಸ್ವರ್ಗವನ್ನು ರಾಮ ರಾಜ್ಯ, ನರಕವನ್ನು ರಾವಣ ರಾಜ್ಯವೆಂದು ಕರೆಯಲಾಗುವುದು. ರಾವಣನೂ ಬಲಶಾಲಿ ಆಗಿದ್ದಾನೆ, ರಾಮನೂ ಸಹಾ ಬಲಶಾಲಿ ಆಗಿದ್ದಾರೆ ಏಕೆಂದರೆ ಇಬ್ಬರೂ ಅರ್ಧ-ಅರ್ಧ ಕಲ್ಪ ರಾಜ್ಯ ಮಾಡುತ್ತಾರೆ. ಮನುಷ್ಯರೆಲ್ಲಾ ಪತಿತರಾಗಿದ್ದಾರೆ. ನೀವೂ ಸಹಾ ಮೊದಲು ಪತಿತರಾಗಿದ್ದಿರಿ, ಈಗ ಪತಿತ-ಪಾವನ ಬಂದು ನಿಮ್ಮನ್ನು ಪಾವನ ರಾಗಲು ಜ್ಞಾನ ಕೊಡುತ್ತಿದ್ದಾರೆ. ಯೋಗ ಮತ್ತು ಜ್ಞಾನ. ಮೊದಲು ತಂದೆಯ ಜೊತೆ ಯೋಗ ಇರಬೇಕಾಗಿದೆ. ಪ್ರಪಂಚದಲ್ಲಿ ತಂದೆ ಬೇರೆ, ಶಿಕ್ಷಕ ಬೇರೆ, ಗುರು ಬೇರೆ ಇರುತ್ತಾರೆ. ನೆನಪು ಮಾಡಬೇಕಾಗುತ್ತದೆ. ಇಂತಹ ಶಿಕ್ಷಕರು ನಮಗೆ ಓದಿಸುತ್ತಾರೆ. ನೀವು ಮೂರೂ ಸಂಬಂಧದಿಂದ ಒಬ್ಬರನ್ನೇ ನೆನಪು ಮಾಡುವಿರಿ. ಮೂವರ ಹೆಸರೂ ಒಂದೇ ಶಿವ ಆಗಿದೆ. ಪರಮಪ್ರಿಯ ಪರಮಪಿತ, ಪರಮಪ್ರಿಯ ಶಿಕ್ಷಕ, ಪರಮಪ್ರಿಯ ಸದ್ಗುರು ಅವರೆಲ್ಲಾ ಒಬ್ಬರೆ. ಮನುಷ್ಯರಂತು ಶಿಕ್ಷಕರನ್ನು ಬೇರೆ, ಗುರುವನ್ನು ಬೇರೆ, ತಂದೆಯನ್ನು ಬೇರೆ ನೆನಪು ಮಾಡುತ್ತಾರೆ. ಅವರ ಹೆಸರು ರೂಪ ಬೇರೆ,ಬೇರೆ ಇರುತ್ತವೆ. ಇಲ್ಲಿ ಮೂವರ ಹೆಸರು ರೂಪ ಒಂದೇ ಬುದ್ಧಿಯಲ್ಲಿ ಬರುವುದು. ರೂಪ ನಿರಾಕಾರ ಆಗಿದ್ದಾರೆ, ಹೆಸರು ಶಿವ ಆಗಿದೆ. ಬುದ್ಧಿಯಲ್ಲಿ ಒಬ್ಬರದೇ ನೆನಪು ಬರುತ್ತದೆ. ಶಿವಬಾಬಾ ಹೇಳುತ್ತಾರೆ ನಾನು ಬರುತ್ತೇನೆ ನೀವು ಮಕ್ಕಳನ್ನು ಈ ಮೃತ್ಯು ಲೋಕದಿಂದ ಕರೆದುಕೊಂಡು ಹೋಗಲು, ಅವರ ಪ್ರಭಾವವನ್ನೂ ಸಹಾ ನೋಡುತ್ತಿರುವಿರಿ. ಬಲಶಾಲಿಯಾಗಲು ಮಾಯೆ ಬಹಳ ಪ್ರತಿರೋಧ ಮಾಡುತ್ತೆ, ವಿಘ್ನ ತಂದೊಡ್ಡುತ್ತದೆ. ನೀವು ಬಹಳ ಘಾಸಿಗೊಳ್ಳುತ್ತೀರಿ. ಮಾಯೆ ಕೆಲವೊಮ್ಮೆ ಜೋರಾಗಿ ಹೊಡೆಯುತ್ತದೆ ಕೆಲವೊಮ್ಮೆ ಹಗುರವಾಗಿ ಹೊಡೆಯುತ್ತೆದೆ. ಜೋರಾಗಿ ಈ ರೀತಿ ಹೊಡೆಯುತ್ತದೆ ಯಾವುದರಿಂದ ವಿಕಾರದಲ್ಲಿಯೂ ಸಹಾ ಬಿದ್ದು ಬಿಡುತ್ತಾರೆ. ನಂತರ ಅದರ ಪ್ರಭಾವ ಬಹಳ ಸಮಯ ನಡೆಯುತ್ತದೆ. ಬುದ್ಧಿಗೆ ಬೀಗ ಹಾಕಿ ಬಿಡುವುದು. ಈಗ ಬಾಬಾ ಹೇಳುತ್ತಾರೆ ಮಾಯೆ ಮರೆಸಲು ಬಹಳ ಪ್ರಯತ್ನ ಪಡುವುದು. ಆದರೆ ನೀವು ಮರೆಯಬಾರದು ಎಷ್ಟು ನೀವು ನನ್ನನ್ನು ನೆನಪು ಮಾಡುವಿರಿ ಆಸ್ತಿಯೂ ಸಹಾ ಬುದ್ಧಿಯಲ್ಲಿ ಬರುವುದು ಮತ್ತು ಶ್ರೇಷ್ಠ ಪದವಿಯನ್ನೂ ಸಹಾ ಪಡೆಯುವಿರಿ. ತಂದೆಯ ಆಸ್ತಿ ನೆನಪಿಗೇ ಬರದೇ ಇರುವಂತಹ ಈ ರೀತಿ ಮಕ್ಕಳು ಯಾರೂ ಇರುವುದಿಲ್ಲ. ಆಸ್ತಿ ಮಕ್ಕಳಿಂದ ಮುಚ್ಚಿಡಲು ಸಾಧ್ಯವೇ ಇಲ್ಲ. ನೀವೂ ತಿಳಿದಿರುವಿರಿ ನಾವು ಸಹಾ ವಿಶ್ವದ ಬಾದ್ಶಾಹಿಯನ್ನು ಪಡೆಯಬಹುದು ಎಂದು. ಇಲ್ಲಿ ರಾಜಧಾನಿ ಸ್ಥಾಪನೆಯಾಗುತ್ತಿದೆ ಮತ್ತು ಬೇರೆಯವರು ಯಾರು ಬರುತ್ತಾರೆ ಅವರು ಯಾವುದೇ ರಾಜಧಾನಿ ಸ್ಥಾಪನೆ ಮಾಡುವುದಿಲ್ಲ. ಈ ರೀತಿ ಹೇಳಲಾಗುವುದಿಲ್ಲ ಅವರು ರಾವಣ ರಾಜ್ಯದಲ್ಲಿ ಬರುತ್ತಾರೆ ಎಂದು. ರಾವಣನ ಸಂಬಂಧ ಇರುವುದೇ ಭಾರತದ ಜೊತೆ. ರಾವಣನನ್ನು ಇಲ್ಲೇ ಸುಡಲಾಗುತ್ತದೆ ಬೇರೆ ಕಡೆ ಎಲ್ಲೂ ರಾವಣನ ಬಗ್ಗೆ ತಿಳಿದೇ ಇಲ್ಲ. ಅರ್ಧ ಕಲ್ಪದ ನಂತರ ರಾವಣ ರಾಜ್ಯ ಪ್ರಾರಂಭವಾಗುವುದು. ಖಂಡಿತವಾಗಿಯೂ ಸೂರ್ಯವಂಶಿ ಹಾಗೂ ಚಂದ್ರವಂಶಿಗಳಿಂದಲೇ ಇಸ್ಲಾಮ್ ಧರ್ಮ ಹೊರಹೊಮ್ಮಿರಬಹುದು. ಒಂದು ಧರ್ಮದಿಂದಲೇ ಬೇರೆ ಮನೆತನಗಳು ಹೊರಹೊಮ್ಮುತ್ತವೆಯಲ್ಲವೆ. ಹೀಗಲ್ಲಾ ಅಲ್ಲಿ ಮನೆತನ ಹೊರಹೊಮ್ಮಿದ ಆ ಸಮಯದಲ್ಲಿ ಅಲ್ಲಿ ರಾವಣ ರಾಜ್ಯ ವಿತ್ತು, ಎಂದಲ್ಲ, ಅಲ್ಲಿ ನಂತರದಲ್ಲಿ ಬರುವುದು. ಬಾಬಾ ಬಂದು ರಾಜಧಾನಿ ಸ್ಥಾಪನೆ ಮಾಡುತ್ತಾರೆ. ಅಲ್ಲಂತು ಕೆಲವರು ಅರ್ಧದಲ್ಲಿ ಕೆಲವರು ಕಾಲು ಭಾಗದಲ್ಲಿ ಬರುವರು ಸತೋಪ್ರಧಾನ ರಿಂದ ತಮೋಪ್ರಧಾನ ಆಗಬೇಕಾಗಿದೆ. ಅವರಿಗಾಗಿ ಅಲ್ಪಕಾಲದ ಸುಖ ಮತ್ತು ಬಹಳಕಾಲದ ದುಃಖ. ಇದೂ ಸಹಾ ಆಟವೆಂದು ತಿಳಿಯಲಾಗುವುದು. ಮೊದಲು ಪಾವನರಾಗಿದ್ದಿರಿ ನಂತರ ಪತಿತರಾಗುವಿರಿ. ಮೊದಲು ದೇವಿದೇವತಾ ಧರ್ಮ ಒಂದೇ ಇತ್ತು ನಂತರ ಬೇರೆ ಧರ್ಮಗಳ ವೃದ್ಧಿಯಾಗುವುದು. ದೇವತೆಗಳು ತಾವೆ ಹಿಂದುಗಳಾಗಿ ಬಿಡುತ್ತಾರೆ ನಂತರ ಭಿನ್ನ-ಭಿನ್ನ ರೀತಿಯಿಂದ ವೃದ್ಧಿಯಾಗುತ್ತಾ ಹೋಗುತ್ತದೆ. ಅವರು ನಂತರ ತಮ್ಮ ಧರ್ಮಸ್ಥಾಪಕರ ಹಿಂದೆ ಹೋಗಿಬಿಡುತ್ತಾರೆ. ದೇವತಾ ಧರ್ಮ ಪ್ರಾಯಃಲೋಪವಾಗಿದೆ. ಎಲ್ಲರೂ ದೇವಿ-ದೇವತಾ ಧರ್ಮದವರಾಗಿದ್ದಾರೆ, ಆದರೆ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲಾಗುವುದಿಲ್ಲ ಏಕೆಂದರೆ ಪವಿತ್ರರಾಗಿಲ್ಲ. ಪವಿತ್ರತೆಯಿಲ್ಲದೆ ತಮ್ಮನ್ನು ದೇವತೆ ಎಂದು ಹೇಳಿಕೊಳ್ಳುವುದು ಕಾನೂನು ಬಾಹಿರವಾಗಿ ಬಿಡುವುದು. ಯಾರು ಸತ್ಯ ದೇವೀ ದೇವತೆಗಳಾಗಿದ್ದರು, ಅವರೇ ನಂತರ ಕ್ಷತ್ರಿಯ, ನಂತರ ವೈಶ್ಯ ರಿಂದ ಶೂದ್ರರಾಗಿ ಬಿಡುತ್ತಾರೆ. ಈಗ ನೀವು ಪುನಃ ಬ್ರಾಹ್ಮಣರಾಗಿರುವಿರಿ. ಈ ಮಾತುಗಳನ್ನು ಬೇರೆ ಧರ್ಮದವರು ತಿಳಿದುಕೊಳ್ಳುವುದಿಲ್ಲ. ದೇವತಾ ಧರ್ಮದವರೇ ಇಲ್ಲಿ ಬರುತ್ತಾರೆ, ಉಳಿದವರು ನಂತರ ಬರುತ್ತಾ ಹೋಗುತ್ತಾರೆ. ಮುಂದೆ ಹೋದಂತೆ ಬಹಳ ವೃದ್ಧಿಯಾಗುವುದು. ಮುಖವಂಶಾವಳಿಯ ವೃದ್ಧಿಯಾಗುವುದು. ಪ್ರಜಾಪಿತ ಬ್ರಹ್ಮಾ ಬ್ರಾಹ್ಮಣ ಧರ್ಮವನ್ನು ಈಗ ಸ್ಥಾಪನೆ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮಾನ ಮಕ್ಕಳು ಅವಶ್ಯವಾಗಿ ಬ್ರಹ್ಮಾಕುಮಾರ ಕುಮಾರಿಯರಾಗಿರುವರಲ್ಲವೇ. ಬ್ರಾಹ್ಮಣ ವರ್ಣದವರೇ ದೇವತೆಗಳಾಗುತ್ತಾರೆ. ಅನೇಕ ಜನ ಬಂದು ಜ್ಞಾನವನ್ನು ಪಡೆಯುತ್ತಾರೆ.
ನೀವು ಸೂರ್ಯವಂಶಿ ರಾಜಧಾನಿಯಲ್ಲಿ ಬರಲು ಪುರುಷಾರ್ಥ ಮಾಡುವಿರಿ. ಅದರಲ್ಲೂ ಮುಖ್ಯ 8, ಬಾಕಿ ಎಲ್ಲಾ ವೃದ್ಧಿಯಾಗುವುದು. ಯಾರು ಮಮ್ಮಾ ಬಾಬಾರವರ ಮಕ್ಕಳಾಗುವರು, ಸ್ವಲ್ಪ ಕೇಳಿದರೂ ಅವರು ಬರುವರು. ಪ್ರದರ್ಶನಿಯಲ್ಲೂ ಸಹಾ ಅನೇಕರು ಬರುವರು. ಅದರಲ್ಲೂ ಕೆಲವರು ಹೊರಹೊಮ್ಮುತ್ತಾರೆ ಒಳ್ಳೆಯ ಪುರುಷಾರ್ಥ ಮಾಡುತ್ತಾರೆ. ಮೊದಲು-ಮೊದಲು ತಂದೆಯ ಪರಿಚಯ ಖಂಡಿತ ಕೊಡಬೇಕಾಗಿದೆ. ನಂತರ ಕೆಲವರು ಲಿಂಗರೂಪ ಎಂದು ಹೇಳುತ್ತಾರೆ ಅಥವಾ ಜ್ಯೋತಿ ಸ್ವರೂಪ ಎಂದು ಹೇಳುತ್ತಾರೆ, ತಂದೆ ಎಂದು ತಿಳಿಯುವುದರಿಂದ ಬ್ರಹ್ಮ್ ಏನು ಮಹಾತತ್ವವಾಗಿದೆ. ನಂತರ ಅದನ್ನು ಭಗವಾನ್ ಎಂದು ಹೇಳಲಾಗುವುದಿಲ್ಲ. ಪರಮಪಿತ ಪರಮಾತ್ಮನಂತೂ ಜ್ಞಾನಪೂರ್ಣ ಆಗಿದ್ದಾರೆ. ಬ್ರಹ್ಮಾನಂತೂ ಜ್ಞಾನ ಪೂರ್ಣ ಅಲ್ಲ. ನೀವು ಕೇಳಿದಿರಿ ಎಂದ ಮೇಲೆ ಆತ್ಮನ ರೂಪ ಏನು? ಅಂದರೆ ನೀವು ಲಿಂಗೆವೆಂದು ಹೇಳಿ ಬಿಡುವಿರಿ ಏಕೆಂದರೆ ಲಿಂಗ ರೂಪದ್ದೇ ಪೂಜೆಯಾಗುವುದು. ನಕ್ಷತ್ರದ ಪೂಜೆಯಂತೂ ಎಲ್ಲೂ ಇಲ್ಲ. ಏನೂ ತಿಳಿಯದೇ ಇರುವ ಕಾರಣ ಏನಾದರೊಂದು ಮಾಡಿಬಿಡುತ್ತಾರೆ. ಕಲ್ಲು-ಮಣ್ಣು ಎಲ್ಲದರಲ್ಲೂ ಭಗವಂತ ನಿದ್ದಾನೆ ಎಂದು ಹೇಳಿ ಬಿಡುತ್ತಾರೆ ತಂದೆ ತಿಳಿಸಿ ಹೇಳುತ್ತಾರೆ ಆತ್ಮವಂತೂ ನಕ್ಷತ್ರವಾಗಿದೆ, ಆತ್ಮಗಳ ಗುಂಪನ್ನು ಸಹ ನೋಡಬಹುದಾಗಿದೆ. ಯಾವಾಗ ಎಲ್ಲಾ ಆತ್ಮರೂ ವಾಪಸ್ಸು ಹೋಗಿಬಿಡುತ್ತಾರೆ ಆಗ ಬಹಳ ದೊಡ್ಡ ಗುಂಪಾಗಿರುವುದಲ್ಲವೇ. ಅದಕ್ಕೆ ಹೇಳಲಾಗುವುದು ಸೂಕ್ಷ್ಮದರಲ್ಲಿಯೂ ಸೂಕ್ಷ್ಮ. ಸಾಕ್ಷಾತ್ಕಾರದಿಂದ ಯಾರೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ತಿಳಿಯಿರಿ ಯಾರಿಗಾದರೂ ಶಿವನ ಅಥವಾ ಬ್ರಹ್ಮಾ, ವಿಷ್ಣು, ಶಂಕರರ ಸಾಕ್ಷಾತ್ಕಾರ ಸಹಾ ಆಗಲಿ, ಆದರೆ ಅದರಿಂದ ಲಾಭವಂತೂ ಏನೂ ಇಲ್ಲ. ಇಲ್ಲಂತೂ ಸೃಷ್ಠಿಯ ಆಧಿ, ಮಧ್ಯ, ಅಂತ್ಯವನ್ನು ತಿಳಿಯಬೇಕಾಗುವುದು. ಇದು ವಿದ್ಯೆಯಾಗಿದೆ. ಪರಮಾತ್ಮ ಸಹಾ ಒಂದು ನಕ್ಷತ್ರವಾಗಿದ್ದಾರೆ. ಇಷ್ಟು ಚಿಕ್ಕ ವಸ್ತು ನೋಡಿ, ಎಷ್ಟು ಮಹಿಮೆಯಿದೆ. ಜ್ಞಾನದ ಸಾಗರ, ಪ್ರೇಮದ ಸಾಗರ, ಸುಖದ ಸಾಗರ ಅವರೇ ಎಲ್ಲಾ ಕಾರ್ಯವನ್ನೂ ಮಾಡುತ್ತಾರೆ. ಇದಕ್ಕೆ ಹೇಳಲಾಗುವುದು-ಅತೀ ಗುಹ್ಯ ಮಾತುಗಳು.
ತಂದೆ ಎಂದು ಹೇಳುವುದರಿಂದ ಬುದ್ಧಿಯಲ್ಲಿ ಖಂಡಿತ ಬರಬೇಕಾಗಿದೆ ಇವರೆ ಸ್ವರ್ಗದ ರಚಯಿತ ಎಂದು. ಭಗವಂತ ಎಲ್ಲೊ ಒಂದು ಕಡೆ ಬಂದಿದ್ದಾರೆ ಎಂದೂ ಸಹಾ ಹೇಳುತ್ತಾರೆ. ಒಂದು ವೇಳೆ ಗೀತೆಯ ಭಗವಂತ ಶ್ರೀಕೃಷ್ಣನಾಗಿದ್ದರೆ ಆ ದೇಹಧಾರಿಯಂತೂ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಇದೆಲ್ಲಾ ಪೂರ್ತಿ ಗುಹ್ಯ ಮಾತುಗಳಾಗಿವೆ. ಎಂದೂ ಕೇಳೇ ಇಲ್ಲ ಪರಮಪಿತ ಪರಮಾತ್ಮ ಏನು ವಸ್ತು ಆಗಿದ್ದಾರೆ, ಆತ್ಮ ಏನಾಗಿದೆ. ಕೇವಲ ಹೇಳಿ ಬಿಡುತ್ತಾರೆ-ಭೃಕುಟಿಯ ಮಧ್ಯೆ ವಿಚಿತ್ರ ನಕ್ಷತ್ರ ಹೊಳೆಯುತ್ತಿದೆ ಎಂದು. ನಂತರ ಅದನ್ನು ಪರಮಪಿತ ಪರಮಾತ್ಮ ಎಂದು ಹೇಳಿಬಿಡುತ್ತಾರೆ. ಈಗ ಆತ್ಮ ಮತ್ತು ಪರಮಾತ್ಮನ ಮಧ್ಯೆ ರೂಪದಲ್ಲಿ ಸ್ವಲ್ಪವೂ ವ್ಯತ್ಯಾಸ ವಿರುವುದಿಲ್ಲ. ಪರಮಾತ್ಮ ಏನಾದರೂ ದೊಡ್ಡ ಅಥವಾ ಹೆಚ್ಚು ಪ್ರಕಾಶ ಉಳ್ಳ ವಸ್ತು ಆಗಿದ್ದಾರ? ಇಲ್ಲಾ, ಅವರಂತೂ ಕೇವಲ ಜ್ಞಾನಪೂರ್ಣರಾಗಿದ್ದಾರೆ. ಗತಿ ಸದ್ಗತಿಗಾಗಿ ಜ್ಞಾನ ಕೊಡುತ್ತಾರೆ. ಆದ್ದರಿಂದ ಜ್ಞಾನ ಸಾಗರ ಆಗಿದ್ದಾರೆ. ಈಗ ಜ್ಞಾನದ ಸಾಗರ ಪರಮಪಿತ ಪರಮಾತ್ಮನಿಗೆ ಹೇಳಲಾಗುವುದೇ ಅಥವಾ ರಾವಣನ ಮತದ ಮೇಲೆ ನಡೆಯುವ ಮನಷ್ಯನಿಗೊ? ತಂದೆ ಹೇಳುತ್ತಾರೆ ನಾನು ಅಧಿಕಾರಿಯಾಗಿದ್ದೇನೆ, ಬಾಕಿ ಇದೆಲ್ಲವೂ ಸಹಾ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಬ್ರಹ್ಮನ ಕೈಯಲ್ಲಿ ಶಾಸ್ತ್ರವನ್ನು ತೋರಿಸುತ್ತಾರೆ ಆದರೆ ಅವರಿಗೆ ಬ್ರಹ್ಮಾ ಯಾರು ಎಂದು ತಿಳಿದೇ ಇಲ್ಲ. ತಂದೆ ಹೇಳುತ್ತಾರೆ ನಾನು ಮೊದಲೂ ಸಹಾ ಹೇಳಿದ್ದೆ ನಾನು ಒಬ್ಬ ಸಾಧಾರಣ ವೃದ್ಧಮಾನವ ಶರೀರದಲ್ಲಿ ಬರುತ್ತೇನೆ ಎಂದು. ಈ ನಂದೀಗಣದಲ್ಲಿ ಬಂದು ಜ್ಞಾನ ತಿಳಿಸುತ್ತೇನೆ. ಮನುಷ್ಯರು ಭಾಗೀರಥವನ್ನೂ ಸಹಾ ತೋರಿಸುತ್ತಾರೆ ಹಾಗು ಗೋಮುಖವನ್ನೂ ಸಹಾ ತೋರಿಸುತ್ತಾರೆ. ಈಗ ಭಗೀರಥನಿಂದಲೂ ಗಂಗೆ, ನಂದಿಯಿಂದಲೂ ಗಂಗೆ ತೋರಿಸುತ್ತಾರೆ. ಸರಿ-ತಪ್ಪು ಯಾವುದು ತಿಳಿದುಕೊಂಡಿಲ್ಲ. ನಂದಿ ಪ್ರಾಣಿ ಏನು ಪ್ರಾಣಿಯಿಂದ ಗಂಗೆ ಹೊರ ಬರುವುದೇ? ಗೋಮುಖ ತೋರಿಸಿದರೆಂದರೆ ಗೋವಾಗಿರಬೇಕು. ನಂದಿ ಗಣದಲ್ಲಿ ನಂದಿಯನ್ನು ತೋರಿಸುತ್ತಾರೆ, ಇದು ಪುರುಷ ಇದು ಸರಿಯಾಯಿತು. ಮನುಷ್ಯ ಆಗಿದ್ದಾರೆ. ಒಂದುವೇಳೆ ಗೋವು ಆದರೆ ಅದೂ ಸಹಾ ಮಾತೆ ಆಯಿತಲ್ಲವೆ. ಈ ಮಾತುಗಳನ್ನೆಲ್ಲಾ ಮನುಷ್ಯ ಪೂರ್ತಿ ಮರೆತು ಬಿಟ್ಟಿದ್ದಾನೆ, ಯಾವುದೂ ಸರಿಯಾಗಿರುವುದನ್ನು ತಿಳಿಸುವುದಿಲ್ಲ. ಬ್ರಹ್ಮನ ಮುಖಾಂತರ ಸೂರ್ಯವಂಶಿ ರಾಜ್ಯದ ಸ್ಥಾಪನೆಯಾಗುತ್ತಿದೆ. ಈಗಂತೂ ಯಾವುದೇ ರಾಜ್ಯಭಾಗ್ಯವಿಲ್ಲ. ಇಲ್ಲಿ ಬೇಹದ್ದಿನ ತಂದೆ ಬೇಹದ್ದಿನ ರಾಜ್ಯ ಕೊಡುತ್ತಿದ್ದಾರೆ. ವಿದ್ಯೆಯಿಂದ ಯಾರು ಸೂರ್ಯವಂಶಿ, ಚಂದ್ರವಂಶಿ ಮನೆತನದವರಾಗಿರುತ್ತಾರೆ ಅವರ ಬುದ್ಧಿಯಲ್ಲಿ ಇದೆಲ್ಲಾ ಕುಳಿತುಕೊಳ್ಳುವುದು. ಶಿವಬಾಬಾರವರೇ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ ಎನ್ನುವ ಈ ನಿಶ್ಚಯ ಮೊದಲು ಬೇಕು. ಬೇರೆ ಯಾರೇ ಗುರು-ಗೋಸಾಯಿಗಳಿಗೆ ಇದನ್ನು ಹೇಳುವ ಧೈರ್ಯವಿಲ್ಲ. ಪತಿತ ಪಾವನರಂತೂ ಒಬ್ಬ ತಂದೆಯೇ ಆಗಿದ್ದಾರೆ. ಅವರನ್ನೇ ಎಲ್ಲಾ ನೆನಪು ಮಾಡುತ್ತಾರೆ ಬಂದು ಪಾವನ ಮಾಡಿ ಎಂದು. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದು-ಇದಂತೂ ಆಗಲೇ ಬೇಕು. ಪರಮಪಿತ ಪರಮಾತ್ಮನ ವಿನಹ ಪಾವನ ಪ್ರಪಂಚವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯಿಂದಲೇ ಸೂರ್ಯವಂಶಿ ಮತ್ತು ಚಂದ್ರವಂಶಿ ರಾಜ್ಯದ ಆಸ್ತಿ ಸಿಗುವುದು. ಇಲ್ಲಂತೂ ಯಾವುದೇ ರಾಜ್ಯವಿಲ್ಲ. ಇದು ಬಹಳ ತಿಳಿದುಕೊಳ್ಳುವ ಮಾತಾಗಿದೆ. ಮನುಷ್ಯರು ತಿಳಿಯುತ್ತಾರೆ ಶಾಸ್ತ್ರವು ಸತ್ಯವಾಗಿದೆ ಏಕೆಂದರೆ ಭಗವಂತನು ಮಾಡಿದ್ದಾನೆ ಎಂದು. ಭಗವಂತನು ಮನುಷ್ಯನ ತನುವಿನಲ್ಲಿ ಬಂದು ಗೀತೆ ನುಡಿಸಿದರು ಎಂದು ಅವರಿಗೆ ಇದು ತಿಳಿದೇಯಿಲ್ಲ. ಅದರ ಮೇಲೆ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈ ತಪ್ಪು ಮೊದಲು ಬುದ್ಧಿಯಿಂದ ಹೊರ ಬರಬೇಕು. ಮೊದಲು ಶಿವಬಾಬಾನನ್ನು ಅರಿತುಕೊಂಡಾಗ ತಿಳಿಯುತ್ತಾರೆ ಅವರೆ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಇದನ್ನು ತಿಳಿಯದೇ ಇರುವ ಕಾರಣ ಪರಸ್ಪರ ಹೊಡೆದಾಡುತ್ತಿರುತ್ತಾರೆ. ತಂದೆ ಹೇಳುತ್ತಾರೆ ನೀವು ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಲಾಯಕ್ಕಾಗಿಲ್ಲ. ದೈವೀಗುಣವುಳ್ಳವರಲ್ಲ. ಧಾರಣೆಯಾಗದಿದ್ದರೆ ಖಂಡಿತ ವಿಕಾರ ಆಗುವುದು. ಭಲೇ ಅವರು ವೃದ್ಧರೇ ಆಗಿರಬಹುದು, ಕ್ರೋಧ ಅವರಲ್ಲಿಯೂ ಬಹಳ ಇರುವುದು. ಕ್ರೋಧ ಎಂದು ವೃದ್ಧ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವೃದ್ಧರೂ ಸಹಾ ವಿಕಾರದಲ್ಲಿ ಹೋಗುತ್ತಾರೆ. ಬಾಬಾ ಹೇಳುತ್ತಾರೆ ಕಾಮ ಮಹಾ ಶತ್ರು ಆಗಿದೆ, ಮನುಷ್ಯರಿಗಂತೂ ಮಿತ್ರ ಆಗಿದೆ ವಿಕಾರಕ್ಕಾಗಿ ನೋಡಿ ಎಷ್ಟು ತೊಂದರೆ ಕೊಡುತ್ತಾರೆ. ರಾವಣ ಎಲ್ಲರ ಮಿತ್ರ ಆಗಿದ್ದಾನೆ. ವಿಷದ ಸಂತಾನ ತಾನೆ. ವಿಶದ ಸಂತಾನ ಎಂದಮೇಲೆ ರಾವಣನ ಸಂತಾನ. ಮನುಷ್ಯರು ತಿಳಿದೇ ಇಲ್ಲ. ತಂದೆಯ ಶ್ರೀಮತದ ಮೇಲೆ ನಡೆದಾಗಲೆ ಸುಪುತ್ರರೆಂದು ಕರೆಯಲಾಗುವುದು. ವಿಕರ್ಮ ಮಾಡಿದರೆ ತಕ್ಷಣ ಎಚ್ಚರಿಕೆ ಕೊಡಲಾಗುವುದು. ಬಹಳ ಜನರಲ್ಲಿ ಬಹಳಷ್ಟು ಕೆಟ್ಟ ಹವ್ಯಾಸಗಳು ಇರುತ್ತವೆ. ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಬೇಡುವುದು. ತಂದೆ ತಿಳಿಸುತ್ತಾರೆ ನಾನಂತೂ ಧಾತ ಆಗಿದ್ದೇನೆ. ನೀವು ಯಾರಿಂದಲಾದರೂ ಏಕೆ ಬೇಡುವಿರಿ. ಯಾರು ಇನ್ಷೂರ್ ಮಾಡಬೇಕಿದೆ ಅವರು ತಾವಾಗಿಯೆ ಮಾಡುತ್ತಾರೆ. ಎಂದೂ ಸಹಾ ಬೇಡಬೇಡಿ. ಇಂದು ಬಾಬಾನ ಜನ್ಮದಿನವಾಗಿದೆ, ಏನಾದರೂ ಕಳಿಸಲಿ, ಈ ರೀತಿ ಬೇಡಬೇಡಿ. ತಿಳಿಸಬೇಕು- ಇನ್ಷೂರೆನ್ಸ್ ಮಾಡಬೇಕಾದರೆ ಭಲೆ ಮಾಡಿ. ಭಕ್ತಿಮಾರ್ಗದಲ್ಲಿ ಮನಷ್ಯ ತನಗೆ ಇನ್ಷೂರ್ ಮಾಡುತ್ತಾನೆ ಈಶ್ವರನ ಬಳಿ, ಯಾವುದಕ್ಕೆ ದಾನವೆಂದು ಹೇಳಲಾಗುವುದು. ಅದರ ಫಲವನ್ನೂ ತಂದೆಯೇ ಕೊಡುತ್ತಾರೆ. ಅದಾಗಿದೆ ಹದ್ದಿನ ಇನ್ಷೂರೆನ್ಸ್, ಇದಾಗಿದೆ ಬೇಹದ್ದಿನದು. ಭಕ್ತಿಮಾರ್ಗದಲ್ಲಿ ಹೇಳುತ್ತಾ ಬಂದಿದ್ದಾರೆ ಪರಮಪಿತ ಪರಮಾತ್ಮನು ಈ ಭಕ್ತಿಯ ಫಲವನ್ನು ಕೊಟ್ಟಿದ್ದಾನೆ ಎಂದು. ಸಾಹುಕಾರರಾಗಿದ್ದರೆ ಹೇಳುತ್ತಾರೆ ಇದು ಇವರಿಗೆ ಹಿಂದಿನ ಜನ್ಮದ ಕರ್ಮದ ಫಲ ಸಿಕ್ಕಿದೆ. ಯಾರಾದರೂ ಬಡವರಾಗಿದ್ದರೆ ಹೇಳುತ್ತಾರೆ ಬಡವರು ಏಕೆಂದರೆ ಇನ್ಷೊರೆನ್ಸ್ ಮಾಡಿಲ್ಲ ಆದ್ದರಿಂದ ಹಣ ಸಿಗುತ್ತಿಲ್ಲ ಎಂದು.. ತಂದೆ ಹೇಳುತ್ತಾರೆ ಎಲ್ಲರೂ ನನ್ನ ಬಳಿಯೇ ಇನ್ಷೂರ್ ಮಾಡುತ್ತಾರೆ. ಇದೆಲ್ಲಾ ಭಗವಂತನೇ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ನೀವು ಹದ್ದಿನ ಇನ್ಷೂರ್ ಮಾಡುವಿರಿ. ಈಗ ಡೈರೆಕ್ಟ್ ಆಗಿ ಬೇಹದ್ದಿನ ಇನ್ಷೂರೆನ್ಸ್ ಮಾಡುತ್ತಿರುವಿರಿ. ಮಾತಾ-ಪಿತರನ್ನು ನೋಡಿ ಇನ್ಷೂರೆನ್ಸ್ ಮಾಡಿದ್ದಕ್ಕಾಗಿ, ಪ್ರತಿಫಲವಾಗಿ ಎಷ್ಟು ಕೊಡುತ್ತಾರೆ. ಕನ್ಯೆಯರ ಬಳಿ ಹಣ ಇರುವುದಿಲ್ಲ. ಅವರು ಮತ್ತೆ ಈ ಸೇವೆಯಲ್ಲಿ ತೊಡಗಿಸಿಕೊಂಡರೆ ಎಲ್ಲರಿಗಿಂತಲೂ ಮೇಲೆ ಹೋಗಬಹುದಾಗಿದೆ. ಮಮ್ಮಾರವರು ಏನೂ ಇನ್ಷೂರ್ ಮಾಡಿರಲಿಲ್ಲ. ಹಾ! ಶರೀರವನ್ನು ಈ ಸೇವೆಯಲ್ಲಿ ಕೊಟ್ಟು ಬಿಟ್ಟರು, ಅದರಿಂದ ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆತ್ಮಕ್ಕೆ ತಿಳಿದಿದೆ ನಾನು ಈ ಶರೀರದಲ್ಲಿದ್ದು ಬೇಹದ್ದಿನ ತಂದೆಯ ಸೇವೆ ಮಾಡುತ್ತಿದ್ದೇನೆ. ಜಗದಂಬೆಗೆ ಎಷ್ಟು ದೊಡ್ಡ ಪದವಿ. ಜಗತ್ಅಂಬಾ ಜ್ಞಾನ ಜ್ಞಾನೇಶ್ವರಿ ನಂತರ ಅವರೆ ರಾಜ ರಾಜೇಶ್ವರಿಯಾಗುತ್ತಾರೆ. ಇದೆಲ್ಲವನ್ನೂ ನೀವೆ ತಿಳಿದುಕೊಂಡಿರುವಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಸುಪುತ್ರರಾಗಬೇಕಾದರೆ ತಂದೆಯ ಶ್ರೀಮತದಂತೆ ನಡೆಯಬೇಕು. ಬೇಡುವಂತಹ, ಕಳ್ಳತನ ಮಾಡುವಂತಹ ಅಥವಾ ಸುಳ್ಳು ಹೇಳುವಂತಹ ಯಾವುದೆಲ್ಲಾ ಕೆಟ್ಟ ಹವ್ಯಾಸಗಳಿವೆ ಅದನ್ನು ತೆಗೆದು ಹಾಕಬೇಕು.
2. ತಮ್ಮದೆಲ್ಲವನ್ನೂ ತಂದೆಯ ಬಳಿ ಇನ್ಷೂರ್ ಮಾಡಬೇಕು. ಶರೀರವನ್ನೂ ಸಹಾ ಈಶ್ವರೀಯ ಸೇವೆಯಲ್ಲಿ ತೊಡಗಿಸಬೇಕು. ಮಾಯೆಯ ಪ್ರವೇಶತೆ ಯಾವುದೇ ಕಾರಣದಿಂದ ಆಗಬಾರದು, ಇದರಿಂದ ಎಚ್ಚರಿಕೆಯಿಂದಿರಬೇಕು.
ವರದಾನ:-
ಸಂಗಮಯುಗದಲ್ಲಿ ತಾವು ಮಕ್ಕಳು ಎಲ್ಲರಿಗಿಂತಲೂ ಅತ್ಯಂತಹ ಅದೃಷ್ಟಶಾಲಿ ಆಗಿದ್ದೀರಿ ಏಕೆಂದರೆ ತಮ್ಮನ್ನು ಸ್ವಯಂ ಭಗವಂತನೇ ಇಷ್ಟ ಪಟ್ಟಿದ್ದಾರೆ. ಬೇಹದ್ದಿನ ಮಾಲೀಕರಾಗಿ ಬಿಟ್ಟಿರಿ. ಭಗವಂತನ ಶಬ್ಧ ಕೋಶದಲ್ಲಿ “ಇವರು ಯಾರು” ಎನ್ನುವುದರಲ್ಲಿ ತಮ್ಮ ಹೆಸರಿದೆ. ಬೇಹದ್ದಿನ ತಂದೆಯು ಸಿಕ್ಕಿತು, ಬೇಹದ್ದಿನ ರಾಜ್ಯಭಾಗ್ಯ ಸಿಕ್ಕಿತು, ಬೇಹದ್ದಿನ ಖಜಾನೆಯೇ ಸಿಕ್ಕಿತು…. ಸದಾ ಇದೇ ನಶೆಯಿರಲಿ, ಅದರಿಂದ ಅತೀಂದ್ರಿಯ ಸುಖದ ಅನುಭವವಾಗುತ್ತಿರುತ್ತದೆ. ಇದಾಯಿತು ಬೇಹದ್ದಿನ ನಶೆ, ಇದರ ಅನುಭವ ಮಾಡುತ್ತಾ ಹಾಗೂ ಮಾಡಿಸುತ್ತಾ ಇರುತ್ತೀರೆಂದರೆ ಅದೃಷ್ಟಶಾಲಿ ಎಂದು ಹೇಳುವರು.
ಸ್ಲೋಗನ್:-
➤ Email me Murli: Receive Daily Murli on your email. Subscribe!