04 September 2021 KANNADA Murli Today | Brahma Kumaris

Read and Listen today’s Gyan Murli in Kannada

September 3, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ಈಗ ಈ ಪ್ರಪಂಚದ ಸ್ಥಿತಿಯು ಹೋಪ್ಲೆಸ್ ಕೇಸ್ ಆಗಿದೆ, ಎಲ್ಲರೂ ಮರಣ ಹೊಂದುವರು ಆದ್ದರಿಂದ ಇದರೊಂದಿಗಿನ ಮಮತೆಯನ್ನು ಕಳೆಯಿರಿ, ನನ್ನೊಬ್ಬನನ್ನೇ ನೆನಪು ಮಾಡಿರಿ''

ಪ್ರಶ್ನೆ:: -

ಸರ್ವೀಸಿನ ಉಮ್ಮಂಗ ಬಾರದಿರಲು ಕಾರಣವೇನು?

ಉತ್ತರ:-

1. ಒಂದುವೇಳೆ ಲಕ್ಷಣಗಳು ಸರಿಯಿಲ್ಲ, ತಂದೆಯನ್ನು ನೆನಪು ಮಾಡುವುದಿಲ್ಲವೆಂದರೆ ಸರ್ವೀಸಿನ ಉಮ್ಮಂಗ ಬರುವುದಿಲ್ಲ. ಯಾವುದಾದರೊಂದು ಉಲ್ಟಾ ಕರ್ಮವಾಗುತ್ತಿರುತ್ತದೆ ಆದ್ದರಿಂದ ಸರ್ವೀಸ್ ಮಾಡಲು ಸಾಧ್ಯವಾಗುವುದಿಲ್ಲ. 2. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ ಎಂದು ತಂದೆಯ ಯಾವ ಮೊದಲ ಆದೇಶವಿದೆಯೋ ಅದನ್ನು ಕಾರ್ಯದಲ್ಲಿ ತರುವುದಿಲ್ಲ. ಬುದ್ಧಿಯು ದೇಹ ಮತ್ತು ದೇಹದ ಸಂಬಂಧಗಳಲ್ಲಿ ಸಿಲುಕಿಕೊಂಡಿದ್ದರೂ ಸರ್ವೀಸ್ ಮಾಡಲು ಸಾಧ್ಯವಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…..

ಓಂ ಶಾಂತಿ. ಈಗ ಈ ಭಕ್ತಿಮಾರ್ಗದ ಗೀತೆಯನ್ನು ಕೇಳಿದಿರಿ, ಶಿವಾಯ ನಮಃ ಎಂದು ಹೇಳುತ್ತಾರೆ. ಪದೇ-ಪದೇ ಶಿವನ ಹೆಸರನ್ನು ತೆಗೆದುಕೊಳ್ಳುತ್ತಾರೆ, ನಿತ್ಯವೂ ಶಿವನ ಮಂದಿರಕ್ಕೆ ಹೋಗುತ್ತಾರೆ ಮತ್ತು ಹಬ್ಬಗಳನ್ನು ವರ್ಷ-ವರ್ಷವೂ ಆಚರಿಸುತ್ತಾರೆ. ಪುರುಷೋತ್ತಮ ಮಾಸವೂ ಇದೆ, ಪುರುಷೋತ್ತಮ ವರ್ಷವೂ ಇದೆ, ನಿತ್ಯವೂ ಶಿವಾಯ ನಮಃ ಎಂದು ಹೇಳುತ್ತಿರುತ್ತಾರೆ. ಶಿವನ ಪೂಜಾರಿಗಳು ಅನೇಕರಿದ್ದಾರೆ, ರಚಯಿತ ಶಿವನು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಪತಿತ-ಪಾವನ ಪರಮಪಿತ ಪರಮಾತ್ಮ ಶಿವನೆಂದು ಹೇಳುತ್ತಾರೆ. ನಿತ್ಯವೂ ಪೂಜೆಯನ್ನೂ ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಇದು ಪುರುಷೋತ್ತಮರಾಗುವ ಸಂಗಮಯುಗವಾಗಿದೆ. ಹೇಗೆ ಲೌಕಿಕ ವಿದ್ಯೆಯಿಂದ ಯಾವುದಾದರೊಂದು ಪದವಿಯನ್ನು ಪಡೆಯುತ್ತಾರಲ್ಲವೆ. ಅಂದಮೇಲೆ ಈ ಲಕ್ಷ್ಮೀ-ನಾರಾಯಣರು ಈ ಪದವಿಯನ್ನು ಹೇಗೆ ಪಡೆದರು? ಹೇಗೆ ವಿಶ್ವದ ಮಾಲೀಕರಾದರು ಎಂಬುದು ಯಾರಿಗೂ ತಿಳಿದಿಲ್ಲ. ಶಿವಾಯ ನಮಃ ಎಂದು ಹೇಳುತ್ತಾರೆ. ನೀವು ಮಾತಾಪಿತಾ….. ಎಂದು ನಿತ್ಯವೂ ಮಹಿಮೆ ಮಾಡುತ್ತಾರೆ ಆದರೆ ಅವರು ಯಾವಾಗ ಬಂದು ಮಾತಾಪಿತನಾಗಿ ಆಸ್ತಿಯನ್ನು ಕೊಡುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ನಿಮಗೆ ಅರ್ಥವಾಗಿದೆ, ಪ್ರಪಂಚದ ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಹುಡುಕಾಡುತ್ತಾರೆ. ಅಮರನಾಥಕ್ಕೆ ಗುಂಪು-ಗುಂಪಾಗಿ ಹೋಗುತ್ತಾರೆ, ಎಷ್ಟೊಂದು ಅಲೆದಾಡುತ್ತಾರೆ. ಯಾರಿಗಾದರೂ ಈ ರೀತಿ ಹೇಳಿದ್ದೇ ಆದರೆ ಮುನಿಸಿಕೊಳ್ಳುವರು. ನೀವು ಕೆಲವರೇ ಮಕ್ಕಳಿದ್ದೀರಿ, ಯಾರಿಗೆ ಆಂತರ್ಯದಲ್ಲಿ ಬಹಳ ಖುಷಿಯಿದೆ. ಕೆಲವರು ಪತ್ರವನ್ನು ಬರೆಯುತ್ತಾರೆ, ಬಾಬಾ ತಮ್ಮನ್ನು ಯಾವಾಗ ಅರಿತುಕೊಂಡೆನೋ ಆಗಿನಿಂದಲೂ ನನ್ನ ಖುಷಿಗೆ ಪಾರವೇ ಇಲ್ಲ. ಏನೇ ಕಷ್ಟಗಳಿರಲಿ ಆದರೂ ಖುಷಿಯಲ್ಲಿರಬೇಕು. ನಾವು ತಂದೆಯ ಮಕ್ಕಳಾಗಿದ್ದೇವೆ ಎಂಬುದನ್ನೆಂದೂ ಮರೆಯಬಾರದು. ನಾವು ಶಿವ ತಂದೆಯನ್ನು ಪಡೆದಿದ್ದೇವೆ ಎಂಬುದು ನೀವು ಮಕ್ಕಳಿಗೆ ತಿಳಿದಿದೆ ಅಂದಮೇಲೆ ಖುಷಿಗೆ ಪಾರವೇ ಇರಬಾರದು. ಮಾಯೆಯು ಪದೇ-ಪದೇ ಮರೆಸಿ ಬಿಡುತ್ತದೆ. ನಮಗೆ ನಿಶ್ಚಯವಿದೆ, ತಂದೆಯನ್ನು ತಿಳಿದುಕೊಂಡಿದ್ದೇವೆ ಎಂದು ಬರೆಯುತ್ತಾರೆ ಆದರೂ ಸಹ ನಡೆಯುತ್ತಾ-ನಡೆಯುತ್ತಾ ತಣ್ಣಗಾಗಿ ಬಿಡುತ್ತಾರೆ. 6-8 ತಿಂಗಳು ಅಥವಾ 2-3 ವರ್ಷಗಳ ಕಾಲ ಬರುವುದೇ ಇಲ್ಲ ಆಗ ಇವರು ಪೂರ್ಣ ನಿಶ್ಚಯ ಬುದ್ಧಿಯವರಲ್ಲ, ಪೂರ್ಣ ನಶೆಯಿಲ್ಲವೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಯಾವ ಬೇಹದ್ದಿನ ತಂದೆಯಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ ಎಂಬುದು ನಿಶ್ಚಯವಾಗಿದ್ದೇ ಆದರೆ ಬಹಳ ಖುಷಿಯ ನಶೆಯಿರಬೇಕು. ಹೇಗೆ ಯಾರ ಮಗುವನ್ನಾದರೂ ರಾಜನು ದತ್ತು ತೆಗೆದುಕೊಳ್ಳಬೇಕೆಂದು ಬಯಸುತ್ತಾನೆ, ಮಗುವಿಗೆ ನನ್ನ ಬಗ್ಗೆ ವಾರ್ತಾಲಾಪ ನಡೆಯುತ್ತಿದೆ, ಈ ಮಗುವನ್ನು ನನ್ನ ವಾರಸುಧಾರನನ್ನಾಗಿ ಮಾಡಿಕೊಳ್ಳಬೇಕೆಂದು ರಾಜನು ಬಯಸುತ್ತಾನೆ ಎಂದು ಅರ್ಥವಾಗಿ ಬಿಟ್ಟರೆ ಆ ಮಗುವಿಗೆ ಬಹಳ ಖುಷಿಯಾಗುತ್ತದೆಯಲ್ಲವೆ – ನಾನು ರಾಜನ ಮಗನಾಗುತ್ತೇನೆ ಎಂದು. ಬಡವರ ಮಗುವನ್ನು ಸಾಹುಕಾರರು ದತ್ತು ತೆಗೆದುಕೊಂಡರೆ ಬಹಳ ಖುಷಿಯಾಗುತ್ತದೆ ಅಲ್ಲವೆ. ನನ್ನನ್ನು ಇಂತಹವರು ದತ್ತು ತೆಗೆದುಕೊಳ್ಳುತ್ತಾರೆ ಎಂಬುದು ಅರ್ಥವಾಗಿ ಬಿಟ್ಟರೆ ಬಡತನದ ಚಿಂತೆಯೇ ಮರೆತು ಹೋಗುತ್ತದೆ ಆದರೆ ಒಂದು ಜನ್ಮದ ಮಾತಾಗಿದೆ, ಇಲ್ಲಿ ಮಕ್ಕಳಿಗೆ 21 ಜನ್ಮಗಳ ಆಸ್ತಿಯನ್ನು ಪಡೆಯುವ ಖುಷಿಯಿರುತ್ತದೆ ಅಂದಾಗ ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು ಮತ್ತು ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಶಿವ ತಂದೆ, ಪತಿತ-ಪಾವನನು ಬಂದಿದ್ದಾರೆ, ನಾನು ನಿಮ್ಮ ತಂದೆಯಾಗಿದ್ದೇನೆಂದು ತಿಳಿಸುತ್ತಾರೆ. ಮತ್ತ್ಯಾವ ಮನುಷ್ಯರೂ ಸಹ ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯೇ ತಿಳುವಳಿಕೆ ನೀಡುತ್ತಾರೆ, ನಾನು 5000 ವರ್ಷಗಳ ಮೊದಲು ಬಂದಿದ್ದೆನು. ನಿಮಗೆ ಇದೇ ಮಾತುಗಳನ್ನು ತಿಳಿಸಿದ್ದೆನು- ಮಕ್ಕಳೇ ನನ್ನೊಬ್ಬನನ್ನೇ ನೆನಪು ಮಾಡಿರಿ, ನಾನು ಪತಿತ-ಪಾವನ ತಂದೆಯನ್ನು ನೆನಪು ಮಾಡುವುದರಿಂದಲೇ ನೀವು ಪತಿತರಿಂದ ಪಾವನರಾಗುತ್ತೀರಿ. ಪತಿತರಿಂದ ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನನು ಒಬ್ಬ ತಂದೆಯಾಗಿದ್ದಾರೆ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಗೀತೆಯ ಭಗವಂತನು ಒಬ್ಬ ಪತಿತ-ಪಾವನ, ಪುನರ್ಜನ್ಮ ರಹಿತನಾಗಿದ್ದಾನೆ. ಮೊಟ್ಟ ಮೊದಲನೆಯದಾಗಿ ಇದೇ ಮಾತನ್ನು ಬರೆಸಿಕೊಳ್ಳಿ. ದೊಡ್ಡ-ದೊಡ್ಡ ವ್ಯಕ್ತಿಗಳ ಅಭಿಪ್ರಾಯವನ್ನು ನೋಡಿದಾಗ ಇದು ಸರಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಯಾರಾದರೂ ಸಾಧಾರಣ ವ್ಯಕ್ತಿಗಳ ಬರವಣಿಗೆಯನ್ನು ನೋಡಿದರೆ ಬ್ರಹ್ಮಾಕುಮಾರಿಯರು ಇವರಿಗೆ ಜಾದೂ ಮಾಡಿಬಿಟ್ಟಿದ್ದಾರೆ ಆದ್ದರಿಂದ ಬರೆದಿದ್ದಾರೆ ಎಂದು ಹೇಳುತ್ತಾರೆ. ದೊಡ್ಡ ವ್ಯಕ್ತಿಗಳ ಪ್ರತಿ ಈ ರೀತಿ ಹೇಳುವುದಿಲ್ಲ. ನೀವು ಏನಾದರೂ ಹೇಳುತ್ತೀರೆಂದರೆ ಭಗವಂತನು ಬಂದಿದ್ದಾರೆಂದು ಚಿಕ್ಕ ಬಾಯಿ ದೊಡ್ಡ ಮಾತುಗಳನ್ನು ಹೇಳುತ್ತಾರೆಂದು ತಿಳಿದುಕೊಳ್ಳುತ್ತಾರೆ. ಕೇವಲ ಭಗವಂತನು ಬಂದಿದ್ದಾರೆಂದು ನೀವು ಮಕ್ಕಳು ಹೇಳಬಾರದು, ಇದರಿಂದ ಯಾರೂ ತಿಳಿದುಕೊಳ್ಳುವುದಿಲ್ಲ, ಇನ್ನೂ ಹಾಸ್ಯ ಮಾಡುತ್ತಾರೆ ಆದ್ದರಿಂದ ಈ ರೀತಿ ತಿಳಿಸಬೇಕಾಗಿದೆ – ಇಬ್ಬರು ತಂದೆಯರಿದ್ದಾರೆ. ನೇರವಾಗಿ ಮೊದಲೇ ಭಗವಂತ ಬಂದಿದ್ದಾರೆಂದು ಹೇಳಬಾರದು ಏಕೆಂದರೆ ಈಗಿನ ಪ್ರಪಂಚದಲ್ಲಿಯೂ ಭಗವಂತನೆಂದು ಕರೆಸಿಕೊಳ್ಳುವವರು ಅನೇಕರು ಆಗಿ ಬಿಟ್ಟಿದ್ದಾರೆ. ಎಲ್ಲರೂ ತಮ್ಮನ್ನು ಭಗವಂತನ ಅವತಾರವೆಂದು ತಿಳಿಯುತ್ತಾರೆ ಆದ್ದರಿಂದ ಯುಕ್ತಿಯಿಂದ ಇಬ್ಬರು ತಂದೆಯರ ರಹಸ್ಯವನ್ನು ತಿಳಿಸಬೇಕಾಗಿದೆ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಾಗಿದ್ದಾರೆ. ಆ ತಂದೆಯ ಹೆಸರಾಗಿದೆ – ಶಿವ. ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಅಂದಮೇಲೆ ಅವಶ್ಯವಾಗಿ ಮಕ್ಕಳಿಗೆ ಆಸ್ತಿಯನ್ನು ಕೊಡುವರು. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಅವರೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ನರಕದ ವಿನಾಶವಾಗಬೇಕು. ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ. ಕೇವಲ ಭಗವಂತ ಬಂದಿದ್ದಾರೆಂದು ಹೇಳಿದರೆ ಯಾರೂ ತಿಳಿದುಕೊಳ್ಳುವುದಿಲ್ಲ. ಡಂಗುರ ಸಾರುತ್ತಾ ಇರುತ್ತಾರೆ. ಇಂತಹ ಉಲ್ಟಾ ಸರ್ವೀಸ್ ಮಾಡುವುದರಿಂದ ಇನ್ನೂ ಸೇವೆಯಲ್ಲಿ ತೊಡಕು ಉಂಟಾಗುತ್ತದೆ. ಒಂದುಕಡೆ ಭಗವಂತ ಬಂದಿದ್ದಾರೆ, ಭಗವಂತನು ಓದಿಸುತ್ತಾರೆಂದು ಹೇಳುತ್ತಾರೆ. ಇನ್ನೊಂದು ಕಡೆ ಹೋಗಿ ವಿವಾಹ ಮಾಡಿಕೊಳ್ಳುತ್ತಾರೆ ಆಗ ಜನರು ನಿಮಗೇನಾಯಿತು! ಭಗವಂತ ಓದಿಸುತ್ತಾರೆಂದು ಹೇಳುತ್ತಿದ್ದಿರಿ ಎಂದು ಕೇಳುತ್ತಾರೆ. ನಾವು ಏನನ್ನು ಕೇಳಿದ್ದೆವೋ ಅದನ್ನು ಹೇಳಿ ಬಿಟ್ಟೆವು ಎಂದು ಹೇಳತೊಡಗುತ್ತಾರೆ. ತಮ್ಮ ಮಕ್ಕಳಿಂದಲೂ ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ಹೇಗೆ ಹಿಂದೂ ಧರ್ಮದವರು ತಮಗೆ ತಾವೇ ಪೆಟ್ಟು ಕೊಟ್ಟುಕೊಂಡಿದ್ದಾರೆ. ವಾಸ್ತವದಲ್ಲಿ ದೇವಿ-ದೇವತಾ ಧರ್ಮದವರಾಗಿದ್ದಾರೆ ಆದರೆ ನಾವು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ ಅಂದಮೇಲೆ ಇದು ತಮಗೆ ಪೆಟ್ಟು ಕೊಟ್ಟುಕೊಂಡಂತೆ ಆಯಿತಲ್ಲವೆ. ನೀವೀಗ ತಿಳಿದುಕೊಂಡಿದ್ದೀರಿ, ನಾವೇ ಪೂಜ್ಯರಾಗಿದ್ದೆವು ಆಗ ಶ್ರೇಷ್ಠ ಕರ್ಮ, ಶ್ರೇಷ್ಠ ಧರ್ಮವಿತ್ತು. ಆಸುರೀ ಮತದ ಮೇಲೆ ಧರ್ಮ ಭ್ರಷ್ಟರು, ಕರ್ಮ ಭ್ರಷ್ಠ ಆಗಿ ಬಿಟ್ಟಿದ್ದೇವೆ. ನಾವೇ ಆಸುರೀ ಮಾಯೆಯ ಮತದಿಂದ ನಮ್ಮ ಧರ್ಮದ ನಿಂದನೆ ಮಾಡಲು ಆರಂಭಿಸುತ್ತೇವೆ ಆದ್ದರಿಂದ ತಂದೆಯು ತಿಳಿಸಿದ್ದಾರೆ – ಅದು ಆಸುರೀ ಸಂಪ್ರದಾಯವಾಗಿದೆ. ಇದು ದೈವೀ ಸಂಪ್ರದಾಯವಾಗಿದೆ. ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಈಗ ಕಲಿಯುಗವಾಗಿದೆ. ಯಾರು ಬಂದು ಈ ಜ್ಞಾನವನ್ನು ಕೇಳುವರೋ ಅವರು ಅಸುರರಿಂದ ಪರಿವರ್ತನೆಯಾಗಿ ದೇವತೆಗಳಾಗುತ್ತಾರೆ. ಈ ಜ್ಞಾನವಿರುವುದೇ ದೇವತೆಗಳಾಗುವುದಕ್ಕಾಗಿ, ಪಂಚ ವಿಕಾರಗಳ ಮೇಲೆ ಜಯ ಗಳಿಸುವುದರಿಂದ ದೇವತೆಗಳಾಗುತ್ತಾರೆ. ಬಾಕಿ ಅಸುರರು ಮತ್ತು ದೇವತೆಗಳ ನಡುವೆ ಯಾವುದೇ ಯುದ್ಧವಾಗಲಿಲ್ಲ. ಇದನ್ನು ತಪ್ಪು ಮಾಡಿ ಬಿಟ್ಟಿದ್ದಾರೆ ಮತ್ತು ಇನ್ನೊಂದು ಕಡೆ ಇದನ್ನೂ ತೋರಿಸುತ್ತಾರೆ – ಯಾರ ಕಡೆ ಸಾಕ್ಷಾತ್ ಭಗವಂತನಿದ್ದರೋ ಅವರದು ವಿಜಯವಾಯಿತು. ಅದರಲ್ಲಿ ಕೃಷ್ಣನ ಹೆಸರನ್ನು ತೋರಿಸಿದ್ದಾರೆ. ವಾಸ್ತವದಲ್ಲಿ ನಿಮ್ಮದು ಮಾಯೆಯೊಂದಿಗಿನ ಯುದ್ಧವಾಗಿದೆ. ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ ಆದರೆ ತಮೋಪ್ರಧಾನರಾಗಿರುವ ಕಾರಣ ಏನೂ ಅರ್ಥವಾಗುವುದಿಲ್ಲ. ತಂದೆಯನ್ನು ನೆನಪೇ ಮಾಡುವುದಿಲ್ಲ, ನಮ್ಮದು ಇಂತಹ ತಮೋಪ್ರಧಾನ ಬುದ್ಧಿಯಾಗಿದೆ, ನಮಗೆ ನೆನಪೇ ನಿಲ್ಲುವುದಿಲ್ಲ ಆದ್ದರಿಂದ ಉಲ್ಟಾ ಕರ್ಮಗಳನ್ನು ಮಾಡುತ್ತಾ ಇರುತ್ತೇನೆ ಎಂಬುದನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಒಳ್ಳೊಳ್ಳೆಯ ಮಕ್ಕಳು ಸಹ ನೆನಪು ಮಾಡುವುದಿಲ್ಲ, ಲಕ್ಷಣಗಳು ಸುಧಾರಣೆಯಾಗುವುದಿಲ್ಲ ಆದ್ದರಿಂದ ಸರ್ವೀಸಿನಲ್ಲಿ ಉಮ್ಮಂಗ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಸಾಯಿರಿ ಅಥವಾ ಮರೆಯಿರಿ, ವಾಸ್ತವದಲ್ಲಿ ಸಾಯಿರಿ ಎಂಬ ಶಬ್ಧವಿಲ್ಲ. ತಾನು ಸತ್ತರೆ ಜಗತ್ತೇ ಸತ್ತಂತೆ ಎಂದು ಹೇಳುತ್ತಾರೆ, ಇದನ್ನು ತಂದೆಯೇ ತಿಳಿಸುತ್ತಾರೆ. ನೀವು ನನ್ನವರಾಗಿದ್ದೀರಿ ಅಂದಮೇಲೆ ಎಲ್ಲವನ್ನೂ ಮರೆಯಿರಿ, ಒಬ್ಬ ತಂದೆಯನ್ನು ನೆನಪು ಮಾಡಿರಿ. ಹೇಗೆ ರೋಗಿಯ ಸ್ಥಿತಿಯು ಹೋಪ್ಲೆಸ್ ಕೇಸ್ ಆಗಿ ಬಿಡುತ್ತದೆ ಎಂದರೆ ಮತ್ತೆ ಅವರೊಂದಿಗೆ ಇರುವ ಮಮತೆಯು ಬಿಟ್ಟು ಹೋಗುತ್ತದೆ. ಮತ್ತೆ ಅವರಿಗೆ ರಾಮ, ರಾಮ ಎನ್ನಿರಿ ಎಂದು ಹೇಳಿಕೊಡುತ್ತಾರೆ. ತಂದೆಯೂ ಸಹ ಹೇಳುತ್ತಾರೆ- ಮಕ್ಕಳೇ, ಈ ಪ್ರಪಂಚದ ಸ್ಥಿತಿಯು ಹೋಪ್ಲೆಸ್ ಕೇಸ್ ಆಗಿದೆ, ಈಗ ಸಮಾಪ್ತಿ ಆಗಲೇಬೇಕಾಗಿದೆ, ಎಲ್ಲರೂ ಮರಣ ಹೊಂದುವರು. ಆದ್ದರಿಂದ ಇದರೊಂದಿಗಿನ ಮಮತೆಯನ್ನು ಕಳೆಯಿರಿ. ಅವರಂತೂ ರಾಮ, ರಾಮ ಎಂಬ ಗುಂಗಿನಲ್ಲಿ ಇರುತ್ತಾರೆ, ಇಲ್ಲಂತೂ ಒಬ್ಬರ ಮಾತಲ್ಲ. ಇಡೀ ಪ್ರಪಂಚವೇ ವಿನಾಶವಾಗಲಿದೆ ಆದ್ದರಿಂದ ನಿಮಗೆ ಒಂದೇ ಮಂತ್ರವನ್ನು ಕೊಡುತ್ತೇನೆ – ನನ್ನೊಬ್ಬನನ್ನೇ ನೆನಪು ಮಾಡಿರಿ. ಭಿನ್ನ-ಭಿನ್ನ ಪ್ರಕಾರದಿಂದ ಎಷ್ಟೊಂದು ತಿಳುವಳಿಕೆ ನೀಡುತ್ತಾರೆ, ಈಗ ಪುರುಷೋತ್ತಮ ಮಾಸವು ಬರುತ್ತಿದೆ ಆದ್ದರಿಂದ ಪುರುಷೋತ್ತಮ ಯುಗದ ಬಗ್ಗೆಯೂ ತಿಳುವಳಿಕೆ ನೀಡುತ್ತಾ ಇರುತ್ತೇನೆ. ತಿಳಿಸುವುದಕ್ಕೂ ಬಹಳ ಬುದ್ಧಿವಂತಿಕೆ ಬೇಕು, ಚೆನ್ನಾಗಿ ಧಾರಣೆಯಾಗಬೇಕು, ಯಾವುದೇ ಪಾಪ ಕರ್ಮ ಮಾಡಬಾರದು. ಅನುಮತಿಯಿಲ್ಲದೆ ಯಾವುದೇ ವಸ್ತುವನ್ನು ತೆಗೆದುಕೊಳ್ಳುವುದು, ತಿನ್ನುವುದೂ ಸಹ ಬಹಳ ಗುಪ್ತ ಪಾಪವಾಗಿದೆ. ನಿಯಮಗಳು ಬಹಳ ಕಠಿಣವಾಗಿದೆ, ಪಾಪ ಮಾಡುತ್ತಾರೆ ಆದರೂ ಸಹ ತಿಳಿಸುವುದೇ ಇಲ್ಲ ಆಗ ಪಾಪವು ವೃದ್ಧಿಯಾಗುತ್ತಾ ಹೋಗುತ್ತದೆ. ಇಲ್ಲಂತೂ ನೀವು ಮಕ್ಕಳು ಪುಣ್ಯಾತ್ಮರಾಗಬೇಕಾಗಿದೆ. ನಮಗೆ ಪುಣ್ಯಾತ್ಮರೊಂದಿಗೆ ಸ್ನೇಹವಿದೆ, ಪಾಪಾತ್ಮರೊಂದಿಗೆ ವಿರೋಧವಿದೆ. ಭಕ್ತಿಮಾರ್ಗದಲ್ಲಿಯೂ ತಿಳಿದುಕೊಂಡಿರುತ್ತಾರೆ – ಒಳ್ಳೆಯ ಕರ್ಮ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ ಆದ್ದರಿಂದ ದಾನ, ಪುಣ್ಯ ಮೊದಲಾದ ಒಳ್ಳೆಯ ಕರ್ಮಗಳನ್ನು ಮಾಡುತ್ತಾರಲ್ಲವೆ. ಇದು ಡ್ರಾಮಾ ಆಗಿದೆ ಆದರೂ ಸಹ ಹೇಳುತ್ತಾರೆ – ಭಗವಂತನು ಒಳ್ಳೆಯ ಕರ್ಮಗಳ ಫಲವಾಗಿ ಒಳ್ಳೆಯದನ್ನು ಕೊಡುತ್ತಾನೆ. ತಂದೆಯು ತಿಳಿಸುತ್ತಾರೆ, ಕೇವಲ ನಾನು ಕುಳಿತು ಇದೇ ಉದ್ಯೋಗ ಮಾಡುವುದಿಲ್ಲ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ, ಡ್ರಾಮಾನುಸಾರ ತಂದೆಯು ಅವಶ್ಯವಾಗಿ ಬರಬೇಕಾಗಿದೆ.

ತಂದೆಯು ಹೇಳುತ್ತಾರೆ – ನಾನು ಬಂದು ಎಲ್ಲರಿಗೆ ಮಾರ್ಗ ತಿಳಿಸಬೇಕಾಗಿದೆ, ಇದರಲ್ಲಿ ಕೃಪೆಯ ಮಾತಿಲ್ಲ. ಬಾಬಾ, ನಿಮ್ಮ ಕೃಪೆಯಿದ್ದರೆ ನಾವು ನಿಮ್ಮನ್ನೆಂದೂ ಮರೆಯುವುದಿಲ್ಲವೆಂದು ಕೆಲಕೆಲವರು ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ – ನಾನೆಂದೂ ಕೃಪೆ ತೋರುವುದಿಲ್ಲ, ಇದು ಭಕ್ತಿಮಾರ್ಗದ ಮಾತುಗಳಾಗಿವೆ. ನೀವು ತಮ್ಮ ಮೇಲೆ ಕೃಪೆ ತೋರಿಸಿಕೊಳ್ಳಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಭಕ್ತಿಮಾರ್ಗದ ಮಾತುಗಳೇ ಜ್ಞಾನ ಮಾರ್ಗದಲ್ಲಿ ಇರುವುದಿಲ್ಲ. ಜ್ಞಾನ ಮಾರ್ಗವೆಂದರೆ ವಿದ್ಯಾಭ್ಯಾಸವಾಗಿದೆ. ಶಿಕ್ಷಕರು ಯಾರ ಮೇಲಾದರೂ ಕೃಪೆ ತೋರುವರೇ? ಪ್ರತಿಯೊಬ್ಬರಿಗೆ ಓದಿಸಬೇಕಾಗಿದೆ, ತಂದೆಯು ಶ್ರೀಮತ ಕೊಡುತ್ತಾರೆ ಅದರಂತೆ ನಡೆಯಬೇಕಲ್ಲವೆ. ಆದರೆ ತನ್ನ ಮತದಂತೆ ನಡೆಯುವ ಕಾರಣ ಏನೂ ಸರ್ವೀಸ್ ಮಾಡುವುದಿಲ್ಲ. ಮಕ್ಕಳು ಪುಣ್ಯಾತ್ಮರಾಗಬೇಕಾಗಿದೆ. ಯಾವುದೇ ಪಾಪವಾಗದಿರಲಿ, ಕೆಲವು ಮಕ್ಕಳು ತಮ್ಮ ಪಾಪವನ್ನು ಎಂದೂ ತಿಳಿಸುವುದಿಲ್ಲ. ಅವರೆಂದೂ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲವೆಂದು ತಂದೆಯು ಹೇಳುತ್ತಾರೆ. ಏರಿದರೆ ವೈಕುಂಠ ರಸ ಬಿದ್ದರೆ ಚಕನಾಚೂರ್….. ಎಂದು ಗಾಯನವಿದೆ. ಮಕ್ಕಳಿಗೆ ತಿಳಿದಿದೆ, ಇದು ಬಹಳ ಉನ್ನತ ಪದವಿಯಾಗಿದೆ. ಬಿದ್ದರೆ ಏನೂ ಕೆಲಸಕ್ಕೆ ಬರುವುದಿಲ್ಲ, ಅಶುದ್ಧ ಅಹಂಕಾರವು ಮೊಟ್ಟ ಮೊದಲನೆಯ ವಿಕಾರವಾಗಿದೆ ನಂತರ ಕಾಮ, ಕ್ರೋಧ, ಲೋಭವು ಕಡಿಮೆಯಿಲ್ಲ. ಲೋಭ, ಮೋಹವು ಸತ್ಯನಾಶ ಮಾಡಿ ಬಿಡುತ್ತದೆ. ಮಕ್ಕಳು ಮೊದಲಾದವರಲ್ಲಿ ಮೋಹವಿದ್ದರೆ ಅವರೇ ನೆನಪಿಗೆ ಬರುತ್ತಿರುತ್ತಾರೆ. ಆತ್ಮವು ಹೇಳುತ್ತದೆ, ನನ್ನವರು ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲ, ಮತ್ತ್ಯಾರೂ ನೆನಪಿಗೆ ಬರಬಾರದು, ಇಂತಹ ಪುರುಷಾರ್ಥ ಮಾಡಬೇಕು. ಇವರೆಲ್ಲರೂ ಸಮಾಪ್ತಿಯಾಗುವರು, ವಿನಾಶವು ಸನ್ಮುಖದಲ್ಲಿ ನಿಂತಿದೆ. ಆಸ್ತಿಯನ್ನು ತೆಗೆದುಕೊಳ್ಳಲು ಆಗುವುದಿಲ್ಲ ಅಂದಮೇಲೆ ಇವರಲ್ಲಿ ಮೋಹವನ್ನು ಏಕೆ ಇಟ್ಟುಕೊಳ್ಳುವಿರಿ! ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳಬೇಕು. ಇಡೀ ಪ್ರಪಂಚವನ್ನು ಬುದ್ಧಿಯಿಂದ ಮರೆತು ಹೋಗಬೇಕಾಗಿದೆ. ಇದೆಲ್ಲವೂ ಸಮಾಪ್ತಿಯಾಗಲೇಬೇಕಾಗಿದೆ. ಇಂತಹ ಬಿರುಗಾಳಿಗಳು ಬರುತ್ತವೆ, ಅದರಲ್ಲಿ ಎಲ್ಲವೂ ಸಮಾಪ್ತಿಯಾಗುವುದು. ಕೆಲವೊಂದೆಡೆ ಬೆಂಕಿ ಹತ್ತಿಕೊಳ್ಳುವುದು, ಇನ್ನೂ ಕೆಲವೊಂದೆಡೆ ಜೋರಾಗಿ ಗಾಳಿಯು ಬೀಸಿ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಅರ್ಧ ಗಂಟೆಯಲ್ಲಿ 100-150 ಗುಡಿಸಲುಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ, ಈ ಬಿದುರಿನ ಕಾಡಿಗೆ ಬೆಂಕಿ ಬೀಳಲೇಬೇಕಾಗಿದೆ. ಇಲ್ಲದಿದ್ದರೆ ಇಷ್ಟೇಲ್ಲಾ ಮನುಷ್ಯರು ಹೇಗೆ ಸಾಯುವರು? ಯಾರು ಒಳ್ಳೆಯ ಮಕ್ಕಳಿದ್ದಾರೆಯೋ, ಒಳ್ಳೆಯ ಲಕ್ಷಣಗಳಿವೆಯೋ ಅವರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆ. ನೀವು ಮಕ್ಕಳಿಗೆ ನಶೆಯಿದೆ, ಪೂರ್ಣ ನಶೆಯಂತೂ ಅಂತ್ಯದಲ್ಲಿಯೇ ಇರುತ್ತದೆ. ಕರ್ಮಾತೀತ ಸ್ಥಿತಿಯಾಗುವವರೆಗೂ ಪುರುಷಾರ್ಥ ಮಾಡುತ್ತಾ ಇರುತ್ತೀರಿ. ಕಾಶಿಯಲ್ಲಿ ಶಿವನ ಮಂದಿರಕ್ಕೆ ಅನೇಕರು ಹೋಗುತ್ತಾರೆ ಏಕೆಂದರೆ ಅವರು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಅಲ್ಲಿ ಬಹಳ ಶಿವನ ಭಕ್ತಿಯಿದೆ. ತಂದೆಯಂತೂ ಯಾವಾಗಲೂ ಹೇಳುತ್ತಿರುತ್ತಾರೆ – ಅಲ್ಲಿಗೆ ಹೋಗಿ ಅವರಿಗೆ ತಿಳಿಸಿರಿ, ಈ ಶಿವ ಭಗವಂತನು ಲಕ್ಷ್ಮೀ-ನಾರಾಯಣರಿಗೆ ಈ ಆಸ್ತಿಯನ್ನು ಕೊಡುತ್ತಾರೆ. ಸಂಗಮದಲ್ಲಿಯೇ ಈ ಆಸ್ತಿಯು ಅವರಿಂದ ಸಿಕ್ಕಿದೆ, ಇದನ್ನು ತಿಳಿಸುವುದರಿಂದ ಬ್ರಹ್ಮಾ-ಸರಸ್ವತಿಯ ಪರಿಚಯವೂ ಬಂದು ಬಿಡುತ್ತದೆ. ಚಿತ್ರಗಳಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಬಹುದು – ಇವರಿಗೆ ಈ ರಾಜ್ಯವು ಹೇಗೆ ಸಿಕ್ಕಿತು. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಭಕ್ತಿಮಾರ್ಗವು ಇರಲಿಲ್ಲ. ಭಕ್ತಿಯಂತೂ ಅನಾದಿಯಿಂದಲೂ ಇದೆಯೆಂದು ಹೇಳುತ್ತಾರೆ. ಈಗ ನಿಮಗೆ ಎಷ್ಟೊಂದು ಜ್ಞಾನವು ಸಿಕ್ಕಿದೆ ಅಂದಮೇಲೆ ನಶೆಯೇರಬೇಕಲ್ಲವೆ, ನಮಗೆ 21 ಜನ್ಮಗಳ ರಾಜ್ಯಭಾಗ್ಯವನ್ನು ಕೊಡುವುದಕ್ಕಾಗಿ ಭಗವಂತನು ಓದಿಸುತ್ತಿದ್ದಾರೆ. ನೀವು ವಿದ್ಯಾರ್ಥಿಗಳಾಗಿದ್ದೀರಲ್ಲವೆ. ಈ ಬ್ರಹ್ಮಾಕುಮಾರಿಯರು ಯಾರ ಮೂಲಕ ಕೇಳಿ ನಮಗೆ ನಿಶ್ಚಯ ಮಾಡಿಸುತ್ತಾರೆಯೋ ಅವರು ಹೇಗಿರಬಹುದು ಎಂಬುದು ನಿಶ್ಚಯವಾಗಿ ಬಿಟ್ಟರೆ ಮೊದಲು ಆ ತಂದೆಯೊಂದಿಗೆ ಮಿಲನ ಮಾಡಬೇಕು ಎಂದು ಹೇಳುವರು. ಎಲ್ಲಿಯವರೆಗೆ ಪೂರ್ಣ ನಿಶ್ಚಯ ಇರುವುದಿಲ್ಲವೋ ಅಲ್ಲಿಯವರೆಗೆ ಮುಂದುವರೆಯುವುದಿಲ್ಲ. ನಿಶ್ಚಯ ಬುದ್ಧಿಯವರೇ ಕೂಡಲೇ ಮಿಲನ ಮಾಡುವರು. ಇಂತಹ ತಂದೆಯ ಬಳಿ ನಾವು ಹೋಗಿ ಮಿಲನ ಮಾಡಬೇಕೆಂದು ಓಡಿಬರುವರು, ಬಾಬಾ ನಾವಂತೂ ನಿಮ್ಮವರಾಗಿ ಬಿಟ್ಟೆವು. ನಾವಿನ್ನು ಹೋಗುವುದಿಲ್ಲ. ಪ್ರೀತಿಯನ್ನಾದರೂ ಮಾಡಿ ಅಥವಾ ತಿರಸ್ಕಾರವನ್ನಾದರೂ ಮಾಡಿ ನಾನು ನಿನ್ನ ಧರೆಯನ್ನು ಬಿಟ್ಟುಹೋಗುವುದಿಲ್ಲ ಎಂದು ಗೀತೆಯೂ ಇದೆಯಲ್ಲವೆ. ಆದರೂ ಸಹ ಎಲ್ಲರನ್ನೂ ಇಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸೇವೆಗಾಗಿ ಕಳುಹಿಸಬೇಕಾಗುತ್ತದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ. ಹೀಗೆ ಬರೆದುಕೊಡುತ್ತಾರೆ ಮತ್ತೆ ಹೊರಗಡೆ ಹೋದಮೇಲೆ ಮಾಯೆಯ ಚಕ್ರದಲ್ಲಿ ಬಂದುಬಿಡುತ್ತಾರೆ. ಮಾಯೆಯು ಇಷ್ಟು ಪ್ರಬಲವಾಗಿದೆ, ಮಾಯೆಯ ಅನೇಕ ವಿಘ್ನಗಳು ಬರುತ್ತವೆ. ಚಿಕ್ಕ ದೀಪಕ್ಕೆ ಮಾಯೆಯ ಎಷ್ಟೊಂದು ಬಿರುಗಾಳಿಗಳು ಬರುತ್ತವೆ. ಈ ಹಾಡುಗಳ ಸಾರವನ್ನು ತಂದೆಯು ಬಂದು ತಿಳಿಸುತ್ತಾರೆ. ನಿಮ್ಮದು ಪುರುಷೋತ್ತಮ ಯುಗವು ನಡೆಯುತ್ತಿದೆ. ಭಕ್ತರದು ಪುರುಷೋತ್ತಮ ಮಾಸವು ನಡೆದು ಬಂದಿದೆ, ತಂದೆಯು ಹೇಳುತ್ತಾರೆ – ನಾನು ಸಂಗಮಯುಗದಲ್ಲಿಯೇ ಪತಿತರನ್ನು ಪಾವನರನ್ನಾಗಿ ಮಾಡಲು ಬರುತ್ತೇನೆ, ಎಷ್ಟು ಒಳ್ಳೆಯ ತಿಳುವಳಿಕೆಯಿದೆ.

ಒಳ್ಳೆಯದು. ದಿನ-ಪ್ರತಿದಿನ ಸೇವೆಯ ವೃದ್ಧಿಗಾಗಿ ಹೊಸ-ಹೊಸ ಯುಕ್ತಿಗಳು ಬರುತ್ತಾ ಇರುತ್ತವೆ. ಒಳ್ಳೊಳ್ಳೆಯ ಚಿತ್ರಗಳು ತಯಾರಾಗುತ್ತಿರುತ್ತವೆ. ನಿಧಾನವೇ ಪ್ರಧಾನ ಎಂದು ಹೇಳುತ್ತಾರಲ್ಲವೆ. ತಯಾರಾಗಿರುವ ಮಾಲು ಸಿಗುತ್ತದೆ. ಇದರಿಂದ ಬಹು ಬೇಗನೆ ಅರ್ಥವಾಗುತ್ತದೆ, ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಈ ಸಮಯದಲ್ಲಿ ಯಾರೂ ಸಹ ನಾವು ಪಾವನರಾಗಿದ್ದೇವೆಂದು ಹೇಳಲು ಸಾಧ್ಯವಿಲ್ಲ. ಸತ್ಯಯುಗಕ್ಕೇ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ, ಪಾವನ ಪ್ರಪಂಚದ ಮಾಲೀಕರು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸ್ವಲ್ಪವೂ ಯಾವುದೇ ದೊಡ್ಡ ಅಥವಾ ಸೂಕ್ಷ್ಮ ಪಾಪ ಆಗಬಾರದು, ಇದರ ಮೇಲೆ ಬಹಳ-ಬಹಳ ಗಮನ ಇಡಬೇಕಾಗಿದೆ. ಎಂದೂ ಯಾವುದೇ ವಸ್ತುವನ್ನು ಮುಚ್ಚಿಟ್ಟುಕೊಂಡು ತೆಗೆದುಕೊಳ್ಳಬಾರದು. ಲೋಭ, ಮೋಹದಿಂದಲೂ ಸಾವಧಾನವಾಗಿರಬೇಕಾಗಿದೆ.

2. ಅಶುದ್ಧ ಅಹಂಕಾರವು ಸತ್ಯ ನಾಶ ಮಾಡುತ್ತದೆ, ಇದನ್ನು ತ್ಯಾಗ ಮಾಡಬೇಕಾಗಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು, ಇದೇ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ಯಾವ ಮಕ್ಕಳೆಷ್ಟು ನಿರ್ಬಂಧನರು ಆಗಿರುತ್ತಾರೆಯೋ ಅಷ್ಟು ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಲು ಸಾಧ್ಯವಾಗುವುದು. ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿರಿ – ಮನಸಾ-ವಾಚಾ ಹಾಗೂ ಕರ್ಮದಲ್ಲಿ ಸೂಕ್ಷ್ಮವಾಗಿಯೂ ಯಾವುದೇ ಸೆಳೆತ/ಬಂಧನವು ಬಂಧಿತವಾಗಿಲ್ಲವೆ! ಒಬ್ಬ ತಂದೆಯ ಹೊರತು ಮತ್ತ್ಯಾರದೇ ನೆನಪು ಬರುವುದಿಲ್ಲವೆ! ತಮ್ಮ ದೇಹದ ನೆನಪು ಬಂದಿತೆಂದರೂ ಸಹ ದೇಹದ ಜೊತೆ ದೇಹದ ಸಂಬಂಧ, ಪದಾರ್ಥ, ಪ್ರಪಂಚದಲ್ಲಿ ಇರುವುದೆಲ್ಲವೂ ಬಂದು ಬಿಡುತ್ತದೆ. ನಾನು ನಿರ್ಬಂಧನನಾಗಿದ್ದೇನೆ – ಈ ವರದಾನವನ್ನು ಸ್ಮೃತಿಯಲ್ಲಿ ಇಟ್ಟುಕೊಂಡು, ಇಡೀ ಪ್ರಪಂಚವನ್ನು ಮಾಯೆಯ ಜಾಲದಿಂದ ಮುಕ್ತಗೊಳಿಸುವ ಸೇವೆಯನ್ನು ಮಾಡಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top