04 June 2021 KANNADA Murli Today – Brahma Kumaris
3 June 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ – ಶಿವ ತಂದೆ ಮತ್ತು ಬ್ರಹ್ಮಾ ತಂದೆ ಇಬ್ಬರ ಮತವೂ ಪ್ರಸಿದ್ಧವಾಗಿದೆ, ನೀವು ಇಬ್ಬರ ಮತದಂತೆ ನಡೆದು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ”
ಪ್ರಶ್ನೆ:: -
ನಂಬರ್ವನ್ ಟ್ರಸ್ಟಿಗಳು ಯಾರಾಗಿದ್ದಾರೆ ಮತ್ತು ಹೇಗೆ?
ಉತ್ತರ:-
ಶಿವ ತಂದೆಯು ನಂಬರ್ವನ್ ಟ್ರಸ್ಟಿಯಾಗಿದ್ದಾರೆ, ಅವರಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲ. ಭಕ್ತಿಮಾರ್ಗದಲ್ಲಿಯೂ ನೀವು ಅವರ ಹೆಸರಿನಲ್ಲಿ ಏನೆಲ್ಲಾ ದಾನ-ಪುಣ್ಯಗಳನ್ನು ಮಾಡುತ್ತೀರೋ ಅದೆಲ್ಲವೂ ಇನ್ಶೂರ್ ಆಗಿ ಬಿಡುತ್ತದೆ, ಅದರ ಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಈಗಲೂ ಸಹ ಯಾರು ತಂದೆಯ ಅರ್ಥವಾಗಿ ತಮ್ಮೆಲ್ಲವನ್ನೂ ಇನ್ಶೂರ್ ಮಾಡುವರು ಅದಕ್ಕೆ ತಂದೆಯು ಸಂಪೂರ್ಣವಾಗಿ ಪ್ರತಿಫಲವನ್ನು ಕೊಡುತ್ತಾರೆ ಏಕೆಂದರೆ ತಂದೆಯು ಹೇಳುತ್ತಾರೆ – ನಾನಂತೂ ಸುಖವನ್ನು ಭೋಗಿಸುವುದಿಲ್ಲ. ನಾನು ನಿಮ್ಮಿಂದ ತೆಗೆದುಕೊಂಡು ಏನು ಮಾಡಲಿ?
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಪ್ರತಿಜ್ಞೆ ಮಾಡಿ ಧರೆಗೆ ಬಂದಿದ್ದೇವೆ………….
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ ಗೀತೆಯನ್ನು ಕೇಳಿದಿರಿ. ಯಾರು ತಂದೆಗೆ ಅರ್ಪಣೆಯಾಗುವರೊ ಅವರಿಗೆ ಮಕ್ಕಳೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಇದು ಅಂತಿಮ ಮರುಜೀವಾ ಜನ್ಮವಾಗಿದೆ. ಜೀವಿಸಿದ್ದಂತೆಯೇ ತಂದೆಗೆ ಅರ್ಪಣೆಯಾಗಬೇಕಾಗಿದೆ. ಇದಂತೂ ಮಕ್ಕಳಿಗೆ ತಿಳಿದಿದೆ – ಶ್ರೀಮತದ ಗಾಯನವಿದೆ, ಶ್ರೀಮತ್ಭಗವಾನುವಾಚ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ವಾಸ್ತವದಲ್ಲಿ ಶಿವ ತಂದೆಯಾಗಿದ್ದಾರೆ, ಅವರ ನಂತರ ಬ್ರಹ್ಮಾ, ನಂತರ ಕೃಷ್ಣ. ಶ್ರೀಮತವು ಕೃಷ್ಣನದೆಂದು ಹೇಳುವುದಿಲ್ಲ. ನಮ್ಮ ತಂದೆಯು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಪತಿತ-ಪಾವನರೆಂದು ಕೃಷ್ಣನಿಗಾಗಲಿ, ರಾಧೆಗಾಗಲಿ ಹೇಳುವುದಿಲ್ಲ ಅವರು ದೈವೀ ಗುಣವಂತ ಮನುಷ್ಯರಾಗಿದ್ದಾರೆ. ಮನುಷ್ಯರಿಗೆ ಪತಿತ-ಪಾವನ ಎಂದು ಹೇಳಲಾಗುವುದಿಲ್ಲ. ಸತ್ಯಯುಗದಲ್ಲಿ ಪತಿತ-ಪಾವನ ಬನ್ನಿ ಎಂದು ಹೇಳುವುದಿಲ್ಲ, ಪತಿತರನ್ನು ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರ ಶ್ರೀಮತದಂತೆ ನೀವು ನಡೆಯುತ್ತಿದ್ದೀರಿ. ಪ್ರಜಾಪಿತ ಬ್ರಹ್ಮನ ಮತವು ಪ್ರಸಿದ್ಧವಾಗಿದೆ, ಶ್ರೀಮತವೂ ಪ್ರಸಿದ್ಧವಾಗಿದೆ ಆದರೆ ಅದರಲ್ಲಿ ಮಾಡಿರುವ ತಪ್ಪೇನೆಂದರೆ ತಂದೆಯ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ವಾಸ್ತವದಲ್ಲಿ ಸರ್ವ ಧರ್ಮದವರಿಗೂ ಒಬ್ಬರೇ ತಂದೆಯಾಗಿದ್ದಾರೆ, ಕೃಷ್ಣನನ್ನು ಎಲ್ಲರೂ ಒಪ್ಪುವುದಿಲ್ಲ, ಕ್ರಿಶ್ಚಿಯನ್ನರು ಕ್ರೈಸ್ಟ್ ತಂದೆಯೆಂದು ಒಪ್ಪುತ್ತಾರೆಯೇ ಹೊರತು ಕೃಷ್ಣನನ್ನು ಒಪ್ಪುವುದಿಲ್ಲ ಏಕೆಂದರೆ ಕ್ರಿಶ್ಚಿಯನ್ನರು ಕ್ರೈಸ್ಟ್ನ ಮುಖವಂಶಾವಳಿಯಾಗಿದ್ದಾರೆ. ಶಿವ ತಂದೆಯು ಬಂದು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ತಲೆಯ ಮೇಲೆ ಕೈಯಿಟ್ಟು ತಂದೆಯ ಮಕ್ಕಳಾಗಿದ್ದೇವೆ ಎಂದು ಹೇಳುತ್ತಾರೆ ಅಂದಮೇಲೆ ಅವರ ಆದೇಶದಂತೆ ನಡೆಯಬೇಕಾಗಿದೆ. ನೀವು ತಂದೆಗೆ ತಮ್ಮ ಮತವನ್ನು ಕೊಡುವ ಅವಶ್ಯಕತೆಯಿಲ್ಲ. ಅವರೇ ಮತವನ್ನು ಕೊಡುವವರಾಗಿದ್ದಾರೆ, ಎಲ್ಲರೂ ಮಕ್ಕಳಾಗಿದ್ದೀರಿ. ಶಿವ ತಂದೆಯು ಪ್ರಸಿದ್ಧನಾಗಿದ್ದಾರೆ, ಅವರು ಯಾವ ಮತವನ್ನು ಕೊಡುವರೋ, ಏನೆಲ್ಲವನ್ನೂ ಮಾಡುವರೊ ಅದು ಸತ್ಯವಾಗಿದೆ. ಈ ರೀತಿ ಮಾಡಿ ಎಂದು ಬ್ರಹ್ಮಾರವರಿಗೂ ಸಹ ಮತ ಕೊಡುತ್ತಾರೆ. ನಿಮ್ಮ ಸಂಬಂಧವೇ ಶಿವ ತಂದೆಯೊಂದಿಗೆ ಇದೆ ಅಂದಮೇಲೆ ಯಾರದೇ ಅವಗುಣವನ್ನು ನೋಡಬಾರದು. ಶ್ರೀಮತದಂತೆ ನಡೆಯಬೇಕಾಗಿದೆ. ಶಿವ ತಂದೆಯು ನಿರಾಕಾರನಾಗಿದ್ದಾರೆ. ಈ ಮನೆಯಂತೂ ಅವರದಲ್ಲ, ನೀವಿಲ್ಲಿ ಹಳೆಯ ಮನೆಯಲ್ಲಿರುತ್ತೀರಿ ನಂತರ ಸ್ವರ್ಗದಲ್ಲಿ ಹೋಗಿ ತಮ್ಮ ಮಹಲುಗಳಲ್ಲಿರುತ್ತೀರಿ. ಶಿವ ತಂದೆಯು ಹೇಳುತ್ತಾರೆ, ನಾನಂತೂ ಸ್ವರ್ಗದಲ್ಲಿ ಬರುವುದಿಲ್ಲ, ನಾನು ಈ ಸಮಯದಲ್ಲಿ ಸ್ವಲ್ಪ ಸಮಯಕ್ಕಾಗಿಯೇ ಬರುತ್ತೇನೆ.
ನೀವು ಸತ್ಯ-ಸತ್ಯ ಆತ್ಮೀಯ ರಕ್ಷಣಾ ಸೈನಿಕರಾಗಿದ್ದೀರಿ. ಪರಮ ಆತ್ಮನು ಡ್ರಾಮಾ ಅನುಸಾರ ಕಲ್ಪದ ಹಿಂದಿನ ತರಹ ಆದೇಶ ನೀಡುತ್ತಿದ್ದಾರೆ. ಕಲ್ಪ-ಕಲ್ಪವೂ ಯಾವ ಆದೇಶವನ್ನು ನೀಡಿದ್ದರೋ ಅದನ್ನೇ ನೀಡುತ್ತಾರೆ. ಹಗಲು-ರಾತ್ರಿ ಗುಹ್ಯ-ಗುಹ್ಯ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಈ ಮಾತುಗಳು ಹೊಸಬರಿಗೆ ಅರ್ಥವಾಗುವುದಿಲ್ಲ. ಭಲೆ ಕೆಲವರು 35-40 ವರ್ಷಗಳಿಂದ ಜ್ಞಾನ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಆದರೆ ಅವರಲ್ಲಿ ಅನೇಕರು ಈ ಗಂಭೀರ ಮಾತುಗಳನ್ನು ತಿಳಿದುಕೊಳ್ಳುವುದೇ ಇಲ್ಲ. ತಂದೆಯಂತೂ ನಿತ್ಯವೂ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಕರಾಚಿಯಿಂದ ಹಿಡಿದು ಮುರುಳಿಯನ್ನು ನುಡಿಸುತ್ತಲೇ ಬಂದಿದ್ದಾರೆ. ತಂದೆಯು ಮೊದಲು ಮುರುಳಿ ನುಡಿಸುತ್ತಿರಲಿಲ್ಲ. ರಾತ್ರಿ ಎರಡು ಗಂಟೆಗೆ ಎದ್ದು 10-15 ಪುಟಗಳನ್ನು ಬರೆಯುತ್ತಿದ್ದರು. ತಂದೆಯು ಬರೆಸುತ್ತಿದ್ದರು ನಂತರ ಅದರ ಪ್ರತಿಗಳನ್ನು ಮಾಡಿಸಿ ಕಳುಹಿಸಲಾಗುತ್ತಿತ್ತು. ಭಕ್ತಿಮಾರ್ಗದಲ್ಲಂತೂ ಶಾಸ್ತ್ರ ಮುಂತಾದುವುಗಳ ಕಾಗದಗಳನ್ನು ಸಂಭಾಲನೆ ಮಾಡುತ್ತಾರೆ. ದಿನ-ಪ್ರತಿದಿನ ದೊಡ್ಡ-ದೊಡ್ಡ ಗ್ರಂಥಗಳನ್ನು ಮಾಡುತ್ತಾ ಬರುತ್ತಾರೆ. ಎಷ್ಟೊಂದು ಚರಿತ್ರೆಗಳನ್ನು ತಯಾರಿಸುತ್ತಾ ಇರುತ್ತಾರೆ. ಅದನ್ನು ಓದಿ ಮತ್ತೆ ಇಟ್ಟು ಬಿಡುತ್ತಾರೆ. ನೀವಂತೂ ಮುರುಳಿಗಳನ್ನು ಓದಿ ಎಸೆದು ಬಿಡುತ್ತೀರಿ, ಈ ಮಹಾವಾಕ್ಯಗಳನ್ನು ಸದಾಕಾಲಕ್ಕಾಗಿ ಇಟ್ಟುಕೊಳ್ಳಬೇಕು ಆದರೆ ನಿಮಗೆ ತಿಳಿದಿದೆ – ಇದೆಲ್ಲವೂ ವಿನಾಶವಾಗಿ ಬಿಡುವುದು. ನೀವು ಯಾವುದೆಲ್ಲಾ ಚಿತ್ರ ಮೊದಲಾದುವುಗಳನ್ನು ಮಾಡಿಸುತ್ತೀರೋ ಇವು ಸ್ವಲ್ಪ ಸಮಯಕ್ಕಾಗಿ ಮಾತ್ರ. ಮತ್ತೆ ಇವೆಲ್ಲವೂ ಮಣ್ಣು ಪಾಲಾಗುತ್ತವೆ ನಂತರ ಅಲ್ಲಿ ಶಾಸ್ತ್ರಗಳಾಗಲಿ, ಈ ಚಿತ್ರಗಳಾಗಲಿ ಏನೂ ಉಳಿಯುವುದಿಲ್ಲ. ಈಗ ಏನೆಲ್ಲವೂ ನಡೆಯುತ್ತಿದೆಯೋ ಅದು ಕಲ್ಪದ ನಂತರವೂ ಆಗುವುದು. ಶಾಸ್ತ್ರ ಮೊದಲಾದುವುಗಳು ಮತ್ತೆ ಪ್ರಾರಂಭವಾಗುತ್ತವೆ. ಗ್ರಂಥವೂ ಸಹ ಮೊದಲು ಕೈಯಿಂದ ಬರೆಯಲ್ಪಟ್ಟ ಚಿಕ್ಕ ಪುಸ್ತಕವಾಗಿತ್ತು, ಈಗ ದೊಡ್ಡದಾಗಿ ಮಾಡಿದ್ದಾರೆ. ದಿನ-ಪ್ರತಿದಿನ ದೊಡ್ಡದಾಗಿ ಮಾಡಿಸುತ್ತಾ ಹೋಗುತ್ತಾರೆ, ಇಲ್ಲವಾದರೆ ಶಿವ ತಂದೆಯ ಜೀವನ ಕಥೆಯು ಎಷ್ಟೊಂದು ಬರೆಯಬೇಕು! ನಾವು ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ತಿಳಿದುಕೊಂಡಿದ್ದೇವೆಂದು ನೀವು ಮಕ್ಕಳು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ – ನಾನು ಭಕ್ತಿಮಾರ್ಗದಲ್ಲಿ ಏನು ಮಾಡುತ್ತೇನೆ? ಭಕ್ತಿ ಮಾರ್ಗದಲ್ಲಿಯೂ ಇನ್ಶೂರೆನ್ಸ್ ಮಾಡುತ್ತೇನೆ. ಮನುಷ್ಯರು ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುತ್ತಾರಲ್ಲವೆ. ಇವರು ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡಿದ್ದಾರೆ ಆದ್ದರಿಂದ ಈಶ್ವರನು ದೊಡ್ಡ ಮನೆಯಲ್ಲಿ ಜನ್ಮ ಕೊಟ್ಟಿದ್ದಾರೆಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಅನೇಕ ಧರ್ಮಾತ್ಮರಿರುತ್ತಾರೆ. ಈಶ್ವರಾರ್ಥವಾಗಿ ಶ್ರೀಕೃಷ್ಣನ ಅರ್ಥವಾಗಿ ದಾನ-ಪುಣ್ಯ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಮಕ್ಕಳಿಗೆ ಇನ್ನೊಂದು ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಫಲ ಕೊಡುತ್ತಾ ಬಂದಿದ್ದೇನೆ. ಒಳ್ಳೆಯದು ಅಥವಾ ಕೆಟ್ಟ ಫಲವು ಸಿಗುತ್ತದೆಯಲ್ಲವೆ. ಎಷ್ಟೊಂದು ಇನ್ಶೂರೆನ್ಸ್ ಆಯಿತು! ಯಾರು ಎಂತಹ ಕರ್ಮ ಮಾಡುವರೋ ಅದರನುಸಾರ ಫಲವು ಸಿಗುತ್ತದೆ. ಮಾಯೆಯು ಉಲ್ಟಾ ಕರ್ಮಗಳನ್ನು ಮಾಡಿಸುತ್ತದೆ ಅದರಿಂದಲೇ ನೀವು ದುಃಖ ಪಡೆಯುತ್ತೀರಿ. ನಾನೀಗ ನಿಮಗೆ ಇಂತಹ ಕರ್ಮವನ್ನು ಕಲಿಸುತ್ತೇನೆ ಅದರಿಂದ ಎಂದೂ ದುಃಖವಾಗುವುದಿಲ್ಲ ಮತ್ತು ಅಲ್ಲಿ ಮಾಯೆಯೂ ಇರುವುದಿಲ್ಲ ಆದರೆ ಅಲ್ಲಿ ಪದವಿಗಳಿರುತ್ತವೆ. ಯಾರೆಷ್ಟು ಇನ್ಶೂರ್ ಮಾಡುವರೋ ಅದರಂತೆ ಪದವಿಯಿರುತ್ತದೆ, ಶಿವ ತಂದೆಯು ಟ್ರಸ್ಟಿಯಲ್ಲವೆ. ನಂಬರ್ವನ್ ಟ್ರಸ್ಟಿಯಾಗಿದ್ದಾರೆ. ಕೆಲವರು ಟ್ರಸ್ಟಿಗಳಂತೂ ಅನ್ಯರ ಆಹಾರವನ್ನೇ ಕೆಡಿಸಿ ಬಿಡುತ್ತಾರೆ. ತಂದೆಯು ನೋಡಿ ಎಂತಹ ಟ್ರಸ್ಟಿಯಾಗಿದ್ದಾರೆ! ಇದೆಲ್ಲವೂ ಮಕ್ಕಳಿಗಾಗಿ ಎಂದು ಹೇಳುತ್ತಾರೆ. ನಿಮ್ಮ ಸಂಬಂಧವೆಲ್ಲವೂ ಶಿವ ತಂದೆಯೊಂದಿಗೆ ಇದೆ. ತಂದೆಯು ಹೇಳುತ್ತಾರೆ – ನಾನು ಸತ್ಯವಾದ ಟ್ರಸ್ಟಿಯಾಗಿದ್ದೇನೆ, ನಾನು ಸುಖವನ್ನು ತೆಗೆದುಕೊಳ್ಳುವುದಿಲ್ಲ, ಇಡೀ ರಾಜಧಾನಿಯನ್ನು ಮಕ್ಕಳಿಗೆ ಕೊಡುತ್ತೇನೆ. ಲೌಕಿಕ ತಂದೆಯೂ ಸಹ ಎಲ್ಲವನ್ನೂ ಮಕ್ಕಳಿಗೆ ಆಸ್ತಿಯಲ್ಲಿ ಕೊಟ್ಟು ಬಿಡುತ್ತಾರೆ. ನಾನಂತೂ ಸ್ವರ್ಗದಲ್ಲಿ ಏನನ್ನೂ ತೆಗೆದುಕೊಳ್ಳುವುದಿಲ್ಲ, ನಿಮಗೇ ಎಲ್ಲವನ್ನೂ ಕೊಡುತ್ತೇನೆ ಆದ್ದರಿಂದ ನಿಮ್ಮ ಸಂಬಂಧವೆಲ್ಲವೂ ನನ್ನೊಂದಿಗಿದೆ. ಈ ಬ್ರಹ್ಮಾ ತಂದೆಯೂ ಹೇಳುತ್ತಾರೆ – ನಾನೂ ಸಹ ಪೂರ್ಣ ಇನ್ಶೂರೆನ್ಸ್ ಮಾಡಿ ಬಿಟ್ಟಿದ್ದೇನೆ, ತನು-ಮನ-ಧನ ಎಲ್ಲವೂ ತಂದೆಯ ಸೇವೆಯಲ್ಲಿದೆ. ಸಿಂಧಿಯಲ್ಲಿ ಒಂದು ಗಾದೆಯಿದೆ, ಯಾರದು ನೀಡುವ ಕೈಯಿದೆಯೋ ಅವರೇ ಮೊದಲು ತಲುಪುವರು. ತಂದೆಗೆ ಎಲ್ಲವನ್ನೂ ಇನ್ಶೂರ್ ಮಾಡಬೇಕಾಗಿದೆ, 2 ಹಿಡಿ ಅವಲಕ್ಕಿಯನ್ನು ಕೊಟ್ಟಿದ್ದರಿಂದ ಮಹಲು ಸಿಕ್ಕಿ ಬಿಟ್ಟಿತು. ಈಗ ನೋಡಿ, ಎಷ್ಟು ದೊಡ್ಡ ಮನೆಯಾಗಿದೆ! ಕೆಲವರು ಒಂದು ರೂಪಾಯಿಯನ್ನು ಕಳುಹಿಸಿದರು, ಇದರಿಂದ ನಮ್ಮ ಒಂದು ಇಟ್ಟಿಗೆಯನ್ನಾದರೂ ಹಾಕಿಸಿ ಎಂದು. ಅದಕ್ಕೆ ತಂದೆಯು ಬರೆಯುತ್ತಿದ್ದರು – ನಿಮಗೆ ಎಲ್ಲರಿಗಿಂತ ಒಳ್ಳೆಯ ಮಹಲು ಸಿಗುತ್ತದೆ ಏಕೆಂದರೆ ನೀವು ಬಡವರಾಗಿದ್ದೀರಿ, ನಾನು ಬಡವರ ಬಂಧುವಾಗಿದ್ದೇನೆ. ಬಡವರ ಒಂದು ರೂಪಾಯಿಯು ಸಾಹುಕಾರರ 10 ಸಾವಿರಕ್ಕೆ ಸರಿಸಮಾನ. ಇಬ್ಬರಿಗೂ ಒಂದೇ ಪದವಿ ಸಿಗುತ್ತದೆ. ಸಾಹುಕಾರರು ಬರುವುದು ಬಹಳ ವಿರಳ, ಎಲ್ಲರಿಗಿಂತಲೂ ಕನ್ಯೆಯರು ಬಹಳ ಸ್ವತಂತ್ರರಾಗಿದ್ದಾರೆ. ನೋಡಿ, ಮಮ್ಮಾ ನಂಬರ್ವನ್ನಲ್ಲಿ ಹೋದರು, ಅವರ ಬಳಿ ಏನೂ ಇರಲಿಲ್ಲ, ಬಡವರ ಮನೆಯ ಕನ್ಯೆಯಾಗಿದ್ದರು ಆದರೂ ಸಹ ನಂಬರ್ವನ್ ಹೊರಟುಹೋದರು. ಇವರು (ಬ್ರಹ್ಮಾ) ಎಲ್ಲವನ್ನೂ ಕೊಟ್ಟರು ಆದರೂ ಸಹ ಮೊದಲು ಲಕ್ಷ್ಮೀ, ನಂತರ ನಾರಾಯಣ. ಎಷ್ಟು ವಿಚಿತ್ರ ಆಟವಾಗಿದೆ! ಅಂದಾಗ ಎಂದೂ ಯಾವುದೇ ಮಾತಿನಲ್ಲಿ ಸಂಶಯವಿರಬಾರದು. ಬಾಪ್ದಾದಾ ಎಷ್ಟು ದೊಡ್ಡವರಾಗಿದ್ದಾರೆ ಅಂದಮೇಲೆ ಇವರಲ್ಲಿ ಸ್ವಲ್ಪವೂ ಸಂಶಯ ಬರಬಾರದು, ಬಹಳ ಮಧುರರಾಗಬೇಕು, ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮಾಯೆಯು ನಷ್ಟವನ್ನುಂಟುಮಾಡಿಸುತ್ತದೆ. ಮಕ್ಕಳಿಗೆ ಎಷ್ಟೊಂದು ಸೂಚನೆ ನೀಡಬೇಕಾಗುತ್ತದೆ. ತಂದೆಯು ಹೇಳುತ್ತಾರೆ – ಪೂರ್ಣ ಸಮಾಚಾರವನ್ನು ಬರೆಯಿರಿ, ತಂದೆಯು ಪ್ರತಿಯೊಂದು ಪ್ರಕಾರದ ಸಂಭಾಲನೆ ಮಾಡುತ್ತಾರೆ. ತಂದೆಗೆ ಬಹಳ ವಿಚಾರಗಳಿರುತ್ತವೆ ಮಕ್ಕಳ ಉನ್ನತಿಯಾಗಲಿ ಎಂದು. ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕು. ನಾವು ಪ್ರಿಯಾತಿ ಪ್ರಿಯ ತಂದೆಯ ವಿದ್ಯಾರ್ಥಿಗಳಾಗಿದ್ದೇವೆ, ಭಗವಾನುವಾಚವು ಬರೆಯಲ್ಪಟ್ಟಿದೆ ಆದರೆ ಅದರಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಕೃಷ್ಣನೂ ಸಹ ಎಲ್ಲಾ ಮನುಷ್ಯರಿಗಿಂತಲೂ ಶ್ರೇಷ್ಠನಾದನಲ್ಲವೆ. ಮೊದಲ ರಾಜಕುಮಾರನಾಗಿದ್ದೇನೆ, ಕೃಷ್ಣನ ಹೆಸರನ್ನು ಹೇಳುತ್ತಾರೆ, ನಾರಾಯಣನ ಹೆಸರು ಏಕೆ ಇಲ್ಲ? ಕೃಷ್ಣನು ಬಾಲಕನಾಗಿದ್ದಾನೆ, ಬಾಲಕರು ಸತೋಪ್ರಧಾನರಾಗಿರುತ್ತಾರೆ ನಂತರ ಬಾಲ್ಯದಿಂದ ಯವ್ವನ ನಂತರ ವೃದ್ಧಾವಸ್ಥೆಯು ಬರುತ್ತದೆ. ಮಕ್ಕಳಿಗೇ ಮಹಿಮೆ ಮಾಡುತ್ತಾರೆ ಏಕೆಂದರೆ ಪವಿತ್ರರಲ್ಲವೆ. ಬಾಲಕರು ಬ್ರಹ್ಮ ಜ್ಞಾನಿಗಳ ಸಮಾನರೆಂದು ಹೇಳುತ್ತಾರೆ. ಮಕ್ಕಳಿಂದ ಯಾವುದೇ ಪಾಪವಾಗುವುದಿಲ್ಲ. ಕೃಷ್ಣನೂ ಸಹ ಚಿಕ್ಕ ಮಗುವಾಗಿರುವ ಕಾರಣ ಅವನ ಜಯಂತಿಯನ್ನು ಆಚರಿಸುತ್ತಾರೆ ಆದರೆ ಕೃಷ್ಣನನ್ನು ಅವರು ದ್ವಾಪರದಲ್ಲಿ ತೋರಿಸಿದ್ದಾರೆ. ಯಥಾರ್ಥ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಇವೆಲ್ಲಾ ಮಾತುಗಳನ್ನು ತಿಳಿದುಕೊಂಡಿರುವವರೇ ಈ ಪ್ರಪಂಚದಲ್ಲಿ ನೀವು ಬ್ರಾಹ್ಮಣರ ವಿನಃ ಮತ್ತ್ಯಾರೂ ಇರುವುದಿಲ್ಲ. ಬ್ರಾಹ್ಮಣರು ಉತ್ತಮರಾಗಿದ್ದಾರೆ. ನೀವು ಬ್ರಾಹ್ಮಣರು ಈಶ್ವರೀಯ ಸಂತಾನರಾಗಿದ್ದೀರಿ. ಸತ್ಯಯುಗದಲ್ಲಿ ಈಶ್ವರನ ಸಂತಾನರೆಂದು ಹೇಳುವುದಿಲ್ಲ, ಈಶ್ವರನಿಂದ ಅವಶ್ಯವಾಗಿ ಸ್ವರ್ಗದ ಪ್ರಾಪ್ತಿಯಾಗುವುದು. ನಿಮ್ಮದು ಇದು ಅತಿ ದುರ್ಲಬವಾದ ಅಮೂಲ್ಯ ಜೀವನವಾಗಿದೆ. ಎಲ್ಲರಿಗೂ ಇದು ಸಿಗಲು ಸಾಧ್ಯವಿಲ್ಲ, ಈ ನಾಟಕವೇ ಹೀಗೆ ಮಾಡಲ್ಪಟ್ಟಿದೆ. ಕಲ್ಪದ ಮೊದಲು ಯಾರು ಓದಿದ್ದರೋ ಅವರು ಓದುತ್ತಿದ್ದಾರೆ. ಭಗವಂತನೇ ಅವಶ್ಯವಾಗಿ ಭಗವಾನ್-ಭಗವತಿಯನ್ನು ಸೃಷ್ಟಿಸಿದರು ಆದರೆ ವಾಸ್ತವದಲ್ಲಿ ಭಗವಾನ್-ಭಗವತಿಯೆಂದು ಹೇಳುವುದಿಲ್ಲ ಏಕೆಂದರೆ ಭಗವಂತ ಒಬ್ಬರೇ ಆಗಿದ್ದಾರೆ. ನಿರಾಕಾರನ ಮಹಿಮೆಯಿದೆ. ಸಾಕಾರಿ ಮನುಷ್ಯರಿಗೆ ಮಹಿಮೆಯಾಗುವುದಿಲ್ಲ, ಈ ಲಕ್ಷ್ಮೀ-ನಾರಾಯಣರನ್ನೂ ಸಹ ನಿರಾಕಾರಿ ತಂದೆಯೇ ಈ ರೀತಿ ಮಾಡಿದರು. ಈಗ ಪುನಃ ರಾಜಯೋಗವನ್ನು ಕಲಿಯುತ್ತಿದ್ದಾರೆ, ರಾಜಧಾನಿಯು ಸ್ಥಾಪನೆಯಾಯಿತು ಮತ್ತು ಆ ಸಮಯದಲ್ಲಿ ವಿನಾಶವು ಆಗಿತ್ತು. ತಂದೆಯು ಅವಶ್ಯವಾಗಿ ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರೆ, ಈಗಂತೂ ಸಂಗಮದ ಮಾತಾಗಿದೆ. ಶಿವ ತಂದೆಯು ಬರುತ್ತಾರೆ ಆಗ ಆಟವು ಮುಕ್ತಾಯವಾಗುತ್ತದೆ. ನಂತರ ಕೃಷ್ಣನ ಜನ್ಮವಾಗುತ್ತದೆ, ಇದರಲ್ಲಿ ಮನುಷ್ಯರು ತಬ್ಬಿಬ್ಬಾಗಿದ್ದಾರೆ ಆದ್ದರಿಂದಲೇ ತಂದೆಯು ಬಂದು ತಿಳಿಸುತ್ತಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ನೀವೀಗ ಮಾ|| ಜ್ಞಾನಪೂರ್ಣರ ಹಾಗೆ ಆಗಿ ಬಿಟ್ಟಿದ್ದೀರಿ, ಆತ್ಮಕ್ಕೇ ಮಹಿಮೆಯಿದೆ. ಜ್ಞಾನ ಸಾಗರ, ಆನಂದ ಸಾಗರ, ದಯಾ ಸಾಗರ ಇದು ತಂದೆಯ ಮಹಿಮೆಯಾಗಿದೆ. ತಂದೆಯು ಹೇಳುತ್ತಾರೆ – ಈ ಭಾರತವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ ಆದರೆ ಕೃಷ್ಣನ ಹೆಸರನ್ನು ಹಾಕಿರುವ ಕಾರಣ ಎಲ್ಲಾ ಮಹಿಮೆಯನ್ನು ಮರೆ ಮಾಡಿ ಬಿಟ್ಟಿದ್ದಾರೆ. ಇಲ್ಲದಿದ್ದರೆ ಎಲ್ಲರೂ ಶಿವನ ಮಂದಿರದಲ್ಲಿ ಹೋಗಿ ಹೂಗಳನ್ನಿಡುತ್ತಾರೆ, ಎಲ್ಲರ ಸದ್ಗತಿದಾತನು ಅವರೊಬ್ಬರೇ ಆಗಿದ್ದಾರೆ. ಅರ್ಧಕಲ್ಪ ನೀವು ಪ್ರಾಲಬ್ಧವನ್ನು ಭೋಗಿಸಿ ನಂತರ ಕೆಳಗೆ ಬರುತ್ತೀರಿ. ಎಲ್ಲರೂ ತಮೋಪ್ರಧಾನರಾಗಲೇಬೇಕಾಗಿದೆ, ಈಗ ತಂದೆಯು ಹೇಳುತ್ತಾರೆ – ನಾನು ನೀವು ಮಕ್ಕಳಿಗಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇನೆ, ನಾನು ಅಲ್ಲಿ ಬರುವುದಿಲ್ಲ, ಎಲ್ಲವೂ ನೀವು ಮಕ್ಕಳಿಗಾಗಿಯೇ. ಇದು ಸತ್ಯ ಮಾತಾಗಿದೆ. ಮನುಷ್ಯರಂತೂ ಎಲ್ಲವನ್ನೂ ತಮಗಾಗಿ ಮಾಡಿಕೊಳ್ಳುತ್ತಾರೆ ಮತ್ತೆ ನಾವು ನಿಷ್ಕಾಮ ಸೇವೆ ಮಾಡುತ್ತೇವೆಂದು ಹೇಳುತ್ತಾರೆ ಆದರೆ ಯಾರೂ ನಿಷ್ಕಾಮ ಸೇವೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಕರ್ಮಕ್ಕೂ ಅವಶ್ಯವಾಗಿ ಫಲ ಸಿಗುತ್ತದೆ. ನಾನು ನೀವು ಮಕ್ಕಳಿಗೆ ಅವಿನಾಶಿ ಜ್ಞಾನರತ್ನಗಳನ್ನು ಕೊಡುತ್ತೇನೆ, ನಿಮಗಾಗಿಯೇ ವೈಕುಂಠವನ್ನು ತಂದಿದ್ದೇನೆ. ಮಕ್ಕಳಿಗೆ ಸ್ವರ್ಗದ ಉಡುಗೊರೆಯನ್ನು ಕೊಡುತ್ತೇನೆ ಅಂದಮೇಲೆ ಅದನ್ನು ತೆಗೆದುಕೊಳ್ಳಲು ಅಷ್ಟು ಯೋಗ್ಯರಾಗಬೇಕಾಗಿದೆ. ಸ್ವರ್ಗದ ಮಾಲೀಕರಾಗಬೇಕಾಗಿದೆ. ಅಂಗೈಯಲ್ಲಿ ಸ್ವರ್ಗ ಸಿಗುತ್ತದೆ, ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿ ಸಿಗುತ್ತದೆ. ದಿವ್ಯ ದೃಷ್ಟಿ ದಾತನು ಶಿವ ತಂದೆಯಾಗಿದ್ದಾರೆ, ಸೆಕೆಂಡಿನಲ್ಲಿ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ತಂದೆಯ ಕೈಯಲ್ಲಿ ಯಾವುದೇ ಸ್ಥೂಲವಾದ ಬೀಗದಕೈ ಇಲ್ಲ. ತಂದೆಯು ಹೇಳುತ್ತಾರೆ – ನಾನು ನೀವು ಮಕ್ಕಳಿಗೆ ರಾಜ್ಯಭಾಗ್ಯವನ್ನು ಕೊಡುತ್ತೇನೆ, ನಾನು ರಾಜ್ಯಭಾರ ಮಾಡುವುದಿಲ್ಲ. ನಂತರ ನೀವು ಯಾವಾಗ ಭಕ್ತಿಮಾರ್ಗದಲ್ಲಿ ಬರುತ್ತೀರೋ ಆಗ ನಿಮ್ಮನ್ನು ದಿವ್ಯದೃಷ್ಟಿಯಿಂದ ಖುಷಿಪಡಿಸಬೇಕಾಗುತ್ತದೆ. ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಇಂತಹ ತಂದೆಯು ಕಲ್ಪ-ಕಲ್ಪವೂ ಕಲ್ಪದ ಸಂಗಮ ಯುಗದಲ್ಲಿ ಒಂದೇ ಬಾರಿ ಬರುತ್ತಾರೆ. ಮಾಡಿ -ಮಾಡಿಲ್ಪಟ್ಟಿರುವುದೇ ನಡೆಯುತ್ತದೆ, ಹೊಸದೇನೂ ಆಗುವುದಿಲ್ಲ…. ಏನೆಲ್ಲವೂ ಆಗುತ್ತಿದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ ಆದ್ದರಿಂದ ಸಾಕ್ಷಿಯಾಗಿ ನೋಡಿರಿ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಮಕ್ಕಳೇ, ನಾನು ನಿಮ್ಮ ಇನ್ಶೂರೆನ್ಸ್ ಮ್ಯಾಗ್ನೆಟ್ ಆಗಿದ್ದೇನೆ, ನಿಮ್ಮ ಒಂದು ಪೈಸೆಯನ್ನೂ ಕಳೆಯುವುದಿಲ್ಲ, ನಿಮ್ಮನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತೇನೆ. ಇದೆಲ್ಲವನ್ನೂ ಶಿವ ತಂದೆಯು ಬ್ರಹ್ಮಾರವರ ಮೂಲಕ ಮಾಡಿಸುತ್ತಾರೆ, ಅವರು ಮಾಡಿ-ಮಾಡಿಸುವವರಾಗಿದ್ದಾರೆ. ನಿರಕಾರ, ನಿರಹಂಕಾರಿಯಾಗಿದ್ದಾರೆ. ಪರಮಪಿತ ಪರಮಾತ್ಮನು ಹೇಗೆ ಸಾಧಾರಣ ರೀತಿಯಲ್ಲಿ ಕುಳಿತು ಓದಿಸುತ್ತಾರೆ, ನೀವು ನನ್ನ ಚರಣಗಳಿಗೆ ನಮಿಸಿ ಎಂದೂ ಹೇಳುವುದಿಲ್ಲ, ತಂದೆಯು ಮಕ್ಕಳ ವಿಧೇಯ ಸೇವಕನಾಗಿದ್ದಾರೆ. ಹೇಳುತ್ತಾರೆ – ಯಾರನ್ನು ಮಾಲೀಕರನ್ನಾಗಿ ಮಾಡಿದೆನೋ ಅವರು ಸುಖವನ್ನು ಭೋಗಿಸಿ ಈಗ ದುಃಖಿಯಾಗಿದ್ದೀರಿ. ನಿಮಗೆ ಬಹಳ ಸುಖವು ಸಿಗುತ್ತದೆ, ಮತ್ತ್ಯಾವ ಧರ್ಮದವರಿಗೂ ಇಷ್ಟು ಸುಖ ಸಿಗುವುದಿಲ್ಲ. ಭಾರತವಾಸಿಗಳಿಗೇ ಏಕೆ ಇಷ್ಟು ಸುಖ, ಅನ್ಯರು ಏನು ಮಾಡಿದ್ದಾರೆ? ಎಂದು ಹೇಳುವಂತಿಲ್ಲ. ಇಷ್ಟೊಂದು ಜನಸಂಖ್ಯೆಯಿದೆ, ಎಲ್ಲರೂ ಬರುವುದಿಲ್ಲ. ಈ ಡ್ರಾಮಾ ಮಾಡಲ್ಪಟ್ಟಿದೆ. ಭಾರತದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಭಗವಂತನು ಬಂದು ಸಹಜ ರಾಜಯೋಗವನ್ನು ಕಲಿಸಿದ್ದರು. ತಂದೆಯು ತಿಳಿಸುತ್ತಾರೆ, ಮಕ್ಕಳೇ, ನಾನು ಪುನಃ ಬಂದಿದ್ದೇನೆ. ನೀವೂ ತಿಳಿದುಕೊಂಡಿದ್ದೀರಿ, 84 ಜನ್ಮಗಳ ಪಾತ್ರವನ್ನಭಿನಯಿಸಿ ಈಗ ಪುನಃ ನಾವು ನಮ್ಮ ಮನೆಗೆ ಹೋಗುತ್ತೇವೆ. ಇದು ಬಹಳ ಹಳೆಯ ಪೊರೆಯಾಗಿ ಬಿಟ್ಟಿದೆ (ಸರ್ಪದಂತೆ) ಸನ್ಯಾಸಿಗಳು ಹೇಳುತ್ತಾರೆ – ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಬಿಡುತ್ತದೆ ಎಂದು. ಇದೇ ಸ್ಥಿತಿಯಲ್ಲಿ ಇರುತ್ತಾ-ಇರುತ್ತಾ ಶರೀರವನ್ನು ಬಿಟ್ಟು ಬಿಡುತ್ತಾರೆ ಆದರೆ ಬ್ರಹ್ಮ್ದಲ್ಲಿ ಯಾರೂ ಲೀನವಾಗುವುದಿಲ್ಲ. ಅವರಲ್ಲಿಯೂ ಕೆಲವರು ಬಹಳ ತೀಕ್ಷ್ಣವಾಗಿರುತ್ತಾರೆ, ಶಾಂತಿಯಲ್ಲಿ ಕುಳಿತು ಶರೀರಬಿಟ್ಟು ಹೊರಟು ಹೋಗುತ್ತಾರೆ ಆಗ ಅವರ ವಾಯುಮಂಡಲದಲ್ಲಿ 2-3 ದಿನಗಳವರೆಗೆ ಶೂನ್ಯ ಶಾಂತಿಯಾಗಿ ಬಿಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಈ ಹಳೆಯ ಶರೀರವನ್ನು ಬಿಟ್ಟು ನಾವು ತಂದೆಯ ಬಳಿ ಹೋಗುತ್ತೇವೆ, ಬ್ರಹ್ಮ್ತತ್ವವೇ ತಂದೆಯಲ್ಲ, ಇದು ಆ ಮನುಷ್ಯರ ಭ್ರಮೆಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಈ ಡ್ರಾಮಾದ ಪ್ರತಿಯೊಂದು ದೃಶ್ಯವನ್ನು ಸಾಕ್ಷಿಯಾಗಿದ್ದು ನೋಡಬೇಕಾಗಿದೆ ಏಕೆಂದರೆ ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ. ಎಂದೂ ಯಾವುದೇ ಮಾತಿನಲ್ಲಿ ಸಂಶಯ ಬರಬಾರದು.
2. ತಂದೆಯು ಇನ್ಶೂರೆನ್ಸ್ ಮ್ಯಾಗ್ನೆಟ್ ಆಗಿದ್ದಾರೆ ಆದ್ದರಿಂದ ತನು-ಮನ-ಧನವನ್ನು ತಂದೆಯ ಸೇವೆಯಲ್ಲಿ ಸಫಲ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ತಂದೆಯೊಂದಿಗೆ ಪೂರ್ಣ ಸಂಬಂಧವನ್ನಿಡಬೇಕಾಗಿದೆ, ಪೂರ್ಣ ಸಮಾಚಾರವನ್ನು ತಿಳಿಸಬೇಕಾಗಿದೆ.
ವರದಾನ:-
ಯಾವುದೇ ವಸ್ತುವು ಎಷ್ಟು ಅಧಿಕ ಶಕ್ತಿಶಾಲಿ ಆಗಿರುತ್ತದೆಯೋ, ಅಷ್ಟು ಅದರ ಕ್ವಾಂಟಿಟಿಯು(ತೂಕ) ಕಡಿಮೆಯಾಗುತ್ತದೆ. ಅದೇ ರೀತಿಯಲ್ಲಿ ತಾವು ಯಾವಾಗ ತಮ್ಮ ನಿರ್ವಾಣ ಸ್ಥಿತಿಯಲ್ಲಿ ಸ್ಥಿತವಾಗಿದ್ದು, ವಾಣಿಯಲ್ಲಿ/ಶಬ್ಧದಲ್ಲಿ ಬರುತ್ತೀರೆಂದರೆ ಶಬ್ಧಗಳು ಕಡಿಮೆಯಾಗಿರುತ್ತದೆ ಆದರೆ ಯಥಾರ್ಥ ಮತ್ತು ಶಕ್ತಿಶಾಲಿ ಆಗಿರುತ್ತದೆ. ಒಂದು ಶಬ್ಧದಲ್ಲಿ ಸಾವಿರಾರು ಶಬ್ಧಗಳ ರಹಸ್ಯಗಳು ಸಮಾವೇಶವಾಗಿ ಇರುತ್ತವೆ, ಅದರಿಂದ ವ್ಯರ್ಥ ವಾಣಿಯು ಸ್ವತಹವಾಗಿಯೇ ಸಮಾಪ್ತಿ ಆಗಿಬಿಡುತ್ತದೆ. ಒಂದು ಶಬ್ಧದಿಂದ ಜ್ಞಾನದ ಸರ್ವ ರಹಸ್ಯಗಳನ್ನು ಸ್ಪಷ್ಟಗೊಳಿಸಬಹುದು, ವಿಸ್ತಾರವು ಸಮಾಪ್ತಿಯಾಗಿ ಬಿಡುತ್ತದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!