04 January 2022 KANNADA Murli Today | Brahma Kumaris

Read and Listen today’s Gyan Murli in Kannada

January 3, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬಲಹೀನತೆಗಳ ದಾನ ಕೊಟ್ಟು ನಂತರ ಪುನಃ ಯಾವುದೇ ತಪ್ಪುಗಳೇನಾದರೂ ನಡೆದರೆ ಬಾಬಾರವರಿಗೆ ತಿಳಿಸಬೇಕು, ಮಿಯ್ಯಾ ಮಿಟ್ಟು (ಎಲ್ಲಾ ನನಗೆ ಗೊತ್ತು) ಎಂದು ತಿಳಿಯಬಾರದು ಹಾಗೂ ಎಂದೂ ಮುನಿಸಿಕೊಳ್ಳಬಾರದು”

ಪ್ರಶ್ನೆ:: -

ಯಾವ ಮಾತನ್ನು ನೆನಪು ಮಾಡಿಕೊಂಡು ಅಪಾರ ಖುಷಿಯಲ್ಲಿರಬೇಕು? ಹಾಗೂ ಯಾವ ಮಾತಿನಲ್ಲಿ ಎಂದೂ ಸಹ ಬೇಜಾರು ಪಟ್ಟುಕೊಳ್ಳಬಾರದು?

ಉತ್ತರ:-

ನಾವೀಗ ರಾಜಯೋಗವನ್ನು ಕಲಿತು ನಂತರ ಸೂರ್ಯವಂಶಿ, ಚಂದ್ರವಂಶಿ ರಾಜರುಗಳಾಗುತ್ತೇವೆ. ಅತೀ ಸುಂದರವಾದ ಮಹಲ್ ಕಟ್ಟುತ್ತೇವೆ. ನಾವು ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಹೋಗುತ್ತೇವೆ. ಅಲ್ಲಿ ಎಲ್ಲಾ ವಸ್ತುಗಳು ಪ್ರಥಮ ದರ್ಜೆಯಿಂದ ಕೂಡಿರುತ್ತವೆ. ಶರೀರವೂ ಸಹ ಸುಂದರ ಹಾಗೂ ನಿರೋಗಿಯಾಗಿರುವುದು ಸಿಗುತ್ತದೆ ಎಂಬ ಮಾತನ್ನು ನೆನಪು ಮಾಡಿ ಖುಷಿಯಲ್ಲಿರಬೇಕು. ಇಲ್ಲಿ ಈ ಹಳೆಯ ಶರೀರಕ್ಕೇನಾದರೂ ರೋಗ ಬಂದರೆ ಬೇಜಾರು ಆಗಬಾರದು ಔಷಧೋಪಚಾರ ಮಾಡಿಸಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಪರಂಜ್ಯೋತು ಬೆಳಗಿತು…

ಓಂ ಶಾಂತಿ. ಗೀತೆಯನ್ನಂತೂ ಮಕ್ಕಳು ಅನೇಕ ಬಾರಿ ಕೇಳಿದ್ದೀರಿ. ಇದರ ಅರ್ಥವನ್ನೂ ಸಹ ಭಿನ್ನ ಭಿನ್ನ ಪ್ರಕಾರದಲ್ಲಿ ತಿಳಿಸಿಕೊಡಲಾಗುತ್ತದೆ. ಆದರೆ ಯಾರು ಈ ಗೀತೆಗಳನ್ನು ಮಾಡಿದ್ದಾರೋ ಅವರಂತೂ ಇದರ ಅರ್ಥವನ್ನು ತಿಳಿದುಕೊಂಡೇ ಇಲ್ಲ. ನೀವೀಗ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ನೀವು ಬೇಹದ್ದಿನ ತಂದೆಗೆ ಮಕ್ಕಳೂ ಹೌದು ಮೊಮ್ಮಕ್ಕಳೂ ಹೌದು. ನೀವು ನನ್ನ ಮಕ್ಕಳೂ ಹೌದು ಮೊಮ್ಮಕ್ಕಳೂ ಹೌದು ಎಂಬುದಾಗಿ ಬೇರೆ ಯಾವುದೇ ತಂದೆಯೂ ಹೇಳಲು ಸಾಧ್ಯವಿಲ್ಲ. ಇಲ್ಲಿ ಇದು ಆಶ್ಚರ್ಯಕರವಾದ ಮಾತಾಗಿದೆ. ನಾವೆಲ್ಲ ಆತ್ಮರು ಶಿವಬಾಬಾ ರವರ ಮಕ್ಕಳಾಗಿದ್ದೇವೆ. ಹಾಗೂ ಶಿವಬಾಬಾರವರಿಗೆ ಬ್ರಹ್ಮಬಾಬಾ ಮಗನಾಗಿದ್ದಾರೆ, ಆದ್ದರಿಂದ ನಾವೆಲ್ಲರು ಶಿವಬಾಬಾರಿಗೆ ಮೊಮ್ಮಕ್ಕಳಾಗುತ್ತೇವೆ. ಲೆಕ್ಕವಿಲ್ಲದಷ್ಟು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೂ ಒಬ್ಬರೇ ತಂದೆಯಾಗಿದ್ದಾರೆ. ನೀವೀಗ ಆಸ್ತಿ ತೆಗೆದುಕೊಳ್ಳಲು ಮೊಮ್ಮಕ್ಕಳಾಗಿರುವಿರಿ. ಬೇರೆ ಯಾರೂ ಆಸ್ತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಎಲ್ಲರೂ ಮೊಮ್ಮಕ್ಕಳಾಗಿ ಬಿಟ್ಟರೆ ಎಲ್ಲರೂ ಸ್ವರ್ಗದ ಆಸ್ತಿ ತೆಗೆದುಕೊಳ್ಳಬಹುದು. ಆದರೆ ಈ ರೀತಿ ಆಗಲು ಸಾಧ್ಯವಿಲ್ಲ. ಆದ್ದರಿಂದ ಕೋಟಿಯಲ್ಲಿ ಕೆಲವರಷ್ಟೇ ಮೊಮ್ಮಕ್ಕಳಾಗುತ್ತಾರೆ. ಬ್ರಹ್ಮನನ್ನೂ ಸಹ ದತ್ತು ತೆಗೆದುಕೊಳ್ಳಬೇಕಾಗುತ್ತದೆಂಬುದನ್ನು ಪ್ರಜಾಪಿತ ಬ್ರಹ್ಮನಿಗೂ ತಿಳಿಸಬೇಕಾಗುತ್ತದೆ. ಒಬ್ಬರನ್ನು ದತ್ತು ಪಡೆದು ನಂತರ ಅವರಲ್ಲಿ ಪ್ರವೇಶ ಮಾಡಲಾಗುತ್ತದೆ. ನಾವು ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು ಸಹ ಆಗಿದ್ದೇವೆಂದು ಮಕ್ಕಳು ಹೇಳುತ್ತಾರೆ. ಮಕ್ಕಳೇ ಈಗ ನೀವು ತಮ್ಮ ಮಧುರ ಮನೆಯನ್ನು ನೆನಪು ಮಾಡಿರೆಂದು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಇಲ್ಲಿ ಯಾರಿಗೆ ಹೇಳಲಾಗುತ್ತದೆ? ಆತ್ಮರಿಗೇ ಹೇಳಲಾಗುತ್ತದೆ. ಆತ್ಮ ಈ ಕರ್ಮೇಂದ್ರಿಯಗಳ ಮೂಲಕ ಕೇಳುತ್ತದೆ. ನಾವು ಆತ್ಮರೊಂದಿಗೆ ಮಾತನಾಡುತ್ತೇವೆಂದು ಯಾರೂ ಸಹ ಹೇಳಲು ಸಾಧ್ಯವಿಲ್ಲ. ಬಾಬಾ ಹೇಳುತ್ತಾರೆ, ನಾನು ಪರಮಪಿತ ಪರಮಾತ್ಮ ಈ ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡಿ ನಿಮಗೆ ತಿಳಿಸಿ ಕೊಡುತ್ತೇನೆ. ಆತ್ಮವೇ ಈ ಎಲ್ಲಾ ಮಾತುಗಳನ್ನು ಕೇಳುತ್ತದೆ. ನನಗೆ ಬ್ರಹ್ಮನ ತನುವಿನಲ್ಲಿಯೇ ಬರಬೇಕಾಗುತ್ತದೆ ಇಲ್ಲದಿದ್ದರೆ ನಾನು ಹೇಗೆ ತಿಳಿಸಿಕೊಡಲು ಸಾಧ್ಯ. ಇವರಿಗೆ ಬ್ರಹ್ಮಾ ಎಂದೇ ಹೆಸರನ್ನು ಇಡಬೇಕಾಗುತ್ತದೆ ಆಗಲೇ ನೀವು ಬ್ರಹ್ಮಾಕುಮಾರ – ಕುಮಾರಿ ಎಂದು ಕರೆಸಿಕೊಳ್ಳುವಿರಿ. ನೀವು ಆ ಬ್ರಾಹ್ಮಣರಿಗೆ ಕೇಳಿರಿ ನೀವು ಬ್ರಹ್ಮನ ಸಂತಾನರು ಹೇಗೆ ಆಗಲು ಸಾಧ್ಯ. ಆಗ ಅವರು ಉತ್ತರ ಕೊಡಲು ಸಾಧ್ಯವಿಲ್ಲ. ನಾವು ಬ್ರಹ್ಮನ ಮುಖವಂಶಾವಳಿ ಎಂದು ಹೇಳುತ್ತಾರೆ ಆದರೆ ಅವರು ಕುಖವಂಶಾವಳಿಗಳು. ಈಗ ಬ್ರಹ್ಮನ ಕುಖವಂಶಾವಳಿಗಳಂತೂ ಆಗಿರಲು ಸಾಧ್ಯವಿಲ್ಲ. ಆದ್ದರಿಂದ ಇದು ಬಹಳ ಆಶ್ಚರ್ಯಕರವಾದ ಮಾತಾಗಿದೆ. ಬಾಬಾರಂತೂ ಎಂದೂ ತಪ್ಪಾಗಿ ತಿಳಿಸಿಕೊಡಲು ಸಾಧ್ಯವಿಲ್ಲ. ಅವರು ಸತ್ಯ ಆಗಿದ್ದಾರೆ ನಾವೂ ಸಹ ಈಗ ಸತ್ಯವಂತರಾಗುತ್ತಿದ್ದೇವೆ. ಆದ್ದರಿಂದ ಸ್ವಯಂನ್ನು “ಎಲ್ಲಾ ತಿಳಿದವನೆಂದು” ತಿಳಿದುಕೊಳ್ಳಬಾರದು. ಎಲ್ಲಿಯ ತನಕ ಪರಿಪೂರ್ಣರಾಗುವುದಿಲ್ಲವೋ ಅಲ್ಲಿಯ ತನಕ ಏನಾದರೂ ಹೆಚ್ಚು ಕಡಿಮೆಗಳು ಆಗುತ್ತಿರುತ್ತವೆ ಎಂಬುದನ್ನು ಈ ದಾದಾರವರೂ ಸಹ ತಿಳಿಸಿಕೊಡುತ್ತಾರೆ. ಆದರೆ ನಿಮ್ಮ ಕೆಲಸವೆಲ್ಲವೂ ಶಿವಬಾಬಾರೊಂದಿಗಿದೆ. ಮನುಷ್ಯರಂತೂ ಏನಾದರೂ ತಪ್ಪುಗಳನ್ನು ಮಾಡುತ್ತಿರುತ್ತಾರೆ, ನಿಮಗೂ ಸಹ ಬೇರೆಯವರೊಂದಿಗೆ ಏನಾದರೂ ಏರುಪೇರು ಆಗಬಹುದು. ಆದರೆ ನೀವಂತೂ ತಂದೆಯಿಂದಲೇ ಆಸ್ತಿ ಪಡೆಯಬೇಕಲ್ಲವೇ. ಬಹಳ ಮಕ್ಕಳು ತಂದೆಯೊಂದಿಗೂ ಮುನಿಸಿಕೊಳ್ಳುತ್ತಾರೆ. ಒಂದುವೇಳೆ ಯಾರಾದರೂ ಸಹೋದರ ಸಹೋದರಿಯರು ಏನಾದರೂ ಹೇಳಬಹುದು. ಆದರೆ ಶಿವಬಾಬಾರ ಮುರಳಿಯಂತೂ ಕೇಳುತ್ತಿರಬೇಕು. ಮನೆಯಲ್ಲಿಯೇ ಇರಿ, ಆದರೆ ತಂದೆಯ ಖಜಾನೆಯನ್ನು ತೆಗೆದುಕೊಳ್ಳಿರಿ. ಖಜಾನೆಯಿಲ್ಲದೆ ನೀವು ಹೇಗೆ ಇರುವಿರಿ. ಬ್ರಾಹ್ಮಣರ ಸಂಗದಲ್ಲೂ ಅವಶ್ಯವಾಗಿ ಬರಬೇಕು ಇಲ್ಲದಿದ್ದರೆ ಶೂದ್ರರ ಪ್ರಭಾವ ಬಿದ್ದು ಬಿಡುತ್ತದೆ. ಆಗ ನಿಮ್ಮ ದುರ್ಗತಿ ಆಗುತ್ತದೆ. ಸತ್ಯ ಸಂಗವು ಉನ್ನತಿಯಲ್ಲಿ ಕರೆ ತಂದರೆ ಕುಸಂಗವು ಅವನತಿಯಲ್ಲಿ ಮುಳುಗಿಸುತ್ತದೆ. ಹಂಸ ಹೋಗಿ ಕೊಕ್ಕರೆಗಳೊಂದಿಗಿದ್ದರೆ ಸತ್ಯನಾಶವಾಗಿ ಬಿಡುತ್ತದೆ. ಅಂಬಿಗನೆಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಬಾಕಿ ಮುಳಿಗಿಸುವವರಂತೂ ಬಹಳಷ್ಟಿದ್ದಾರೆ. ಯಾವುದೇ ಮನುಷ್ಯರು ಸ್ವಯಂನ್ನು ಅಂಬಿಗ/ಗುರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈ ನಿಸ್ಸಾರ ಜಗತ್ತಿನಿಂದ, ವಿಷಯ ಸಾಗರ ದಿಂದ ಮೇಲೆತ್ತಿ ಮಧುರ ಮನೆಗೆ ಕರೆದುಕೊಂಡು ಹೋಗುವವರು ಒಬ್ಬ ತಂದೆಯಾಗಿದ್ದಾರೆ. ಸುಖಧಾಮ, ಶಾಂತಿಧಾಮ ಹಾಗೂ ದುಃಖಧಾಮ ಹೇಗೆ ಮೂರೂ ಧಾಮಗಳಿವೆಯೆಂದು ಬಾಬಾ ಹೇಳುತ್ತಾರೆ. ನೀವೀಗ ಈ ದುಃಖಧಾಮವನ್ನು ಬಿಟ್ಟು ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ಇದರಲ್ಲಿ ಕುಂಭಕರ್ಣನಂತ ಭ್ರಷ್ಟಾಚಾರಿ ಮನುಷ್ಯರು ಇರುತ್ತಾರೆ ಹಾಗೂ ಪತಿತ ಪಾವನ ತಂದೆಯನ್ನು ಕರೆಯುತ್ತಾರೆ. ಗಂಗೆಯನ್ನು ಪತಿತ-ಪಾವನಿ ಎಂದು ಕರೆಯುವ ಮಾತೇ ಇಲ್ಲ. ಅದಂತೂ ಅನಾದಿಯಾಗಿದೆ. ಅದಂತೂ ಸ್ವರ್ಗದಲ್ಲೂ ಇರುತ್ತದೆ. ಒಂದು ವೇಳೆ ಈ ಗಂಗೆಯೇ ಪತಿತ ಪಾವನಿಯಾದರೆ ಎಲ್ಲರೂ ಸಹ ಪಾವನರೇ ಇರಬೇಕಿತ್ತು.ಏನನ್ನೂ ಮನುಷ್ಯರು ತಿಳಿದುಕೊಳ್ಳುವುದೇ ಇಲ್ಲ. ಈಗ ನೀವು ಮಕ್ಕಳಿಗೆ ಇದೆಲ್ಲ ತಿಳಿಸಿಕೊಡಲಾಗುತ್ತದೆ. ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರವಾಗಿ ತಿಳಿದುಕೊಳ್ಳುವಿರಿ. ಏಕೆಂದರೆ ಮಕ್ಕಳಲ್ಲಿ ಬಹಳ ಕೊರತೆಯಿದೆ. ಅಶುದ್ಧ ಅಹಂಕಾರ, ಕಾಮ, ಕ್ರೋಧ ಪ್ರತಿಯೊಬ್ಬರಲ್ಲೂ ಇದೆ. ಆದ್ದರಿಂದ ನಮ್ಮಲ್ಲಿ ಏನು ಕೊರತೆಯಿದೆ ಎಂದು ಪ್ರತಿಯೊಬ್ಬರೂ ತಮ್ಮ ಮನಃಪೂರ್ವಕವಾಗಿ ಹೇಳಬೇಕು. ಇಲ್ಲದಿದ್ದರೆ ಕೊರತೆಗಳು ವೃದ್ಧಿ ಪಡೆಯುತ್ತಿರುತ್ತವೆ. ಇದಂತೂ ಯಾವುದೇ ಶಾಪವಲ್ಲ. ಆದರೆ ಏನಾದರೂ ತಪ್ಪುಗಳಾದರೆ ತಿಳಿಸಬೇಕೆಂಬ ನಿಯಮಗಳಿವೆ. ಕೊರತೆಗಳು ದಾನ ಕೊಟ್ಟು ಹಿಂದಿರುಗಿ ಪಡೆಯಬಾರದೆಂಬ ನಿಯಮವಿದೆ. ಬಾಬಾ ನಾನು ಈ ತಪ್ಪನ್ನು ಮಾಡಿರುವೆ ಇಂತಹವರ ವಸ್ತುವನ್ನು ಕಳ್ಳತನ ಮಾಡಿದೆ ಎಂಬುದನ್ನು ಹೇಳಬೇಕು. ಶಿವಬಾಬಾನ ಭಂಡಾರದಿಂದ ಎಲ್ಲವೂ ಸಿಗುತ್ತದೆ. ಜ್ಞಾನರತ್ನಗಳೂ ಸಿಗುತ್ತಿರುತ್ತವೆ. ಹಾಗೂ ಶರೀರ ನಿರ್ವಹಣೆಗಾಗಿಯೂ ಸಿಗುತ್ತಿರುತ್ತದೆ. ಬುದ್ಧಿಗೂ ಶರೀರಕ್ಕೂ ಔಷಧಿ ಸಿಗುತ್ತಿರುತ್ತದೆ. ಇನ್ನೂ ಸಹ ಏನಾದರೂ ಬೇಕಾದಲ್ಲಿ ಕೇಳಬಹುದಾಗಿದೆ. ಒಂದುವೇಳೆ ಹೇಳದೆ ಕೇಳದೆ ತೆಗೆದುಕೊಂಡರೆ ನಿಮ್ಮನ್ನು ನೋಡಿ ಬೇರೆಯವರೂ ಹಾಗೆಯೇ ಮಾಡುತ್ತಾರೆ. ಕೇಳಿ ಪಡೆಯುವುದು ಸರಿಯಾಗಿದೆ ಹೇಗೆ ಲೌಕಿಕದಲ್ಲೂ ಮಕ್ಕಳು ಏನಾದರೂ ಕೇಳಿದರೆ ತಂದೆ ತೆಗೆಸಿಕೊಡುತ್ತಾರಲ್ಲವೆ. ಶ್ರೀಮಂತರಾದರೆ ಎಲ್ಲವನ್ನೂ ತರಿಸಿ ಕೊಡುತ್ತಾರೆ. ಬಡವರು ಏನು ಮಾಡಲು ಸಾಧ್ಯ. ಇದಂತೂ ಶಿವಬಾಬಾರ ಭಂಡಾರವಾಗಿದೆ. ಆದ್ದರಿಂದ ಏನೇ ವಸ್ತುಗಳು ಬೇಕಾದರೂ ಕೇಳಿ ಪಡೆಯಬಹುದಾಗಿದೆ. ಅವರವರ ಯೋಗ್ಯತೆಗನುಸಾರವಾಗಿ ಎಲ್ಲರಿಗೂ ಸಿಗಲೇ ಬೇಕು. ಬಾಬಾ ಮಮ್ಮಾ ಹಾಗೂ ಅನನ್ಯ ಮಕ್ಕಳ ಜೊತೆ ರೀಸ್ (ಹೊಟ್ಟೆಕಿಚ್ಚು) ಮಾಡಬಾರದಾಗಿದೆ. ಚೆನ್ನಾಗಿ ಸೇವೆ ಮಾಡುವವರನ್ನು ಬಾಬಾರವರೂ ಸಹ ಮಹಿಮೆ ಮಾಡುತ್ತಾರೆ. ಆದ್ದರಿಂದ ನೀವು ಮಕ್ಕಳೂ ಸಹ ಅಂತಹವರಿಗೆ ಗೌರವ ಕೊಡಬೇಕಾಗಿದೆ. ಎಲ್ಲವೂ ಸಹ ಜ್ಞಾನ ಹಾಗೂ ಯೋಗದ ಆಧಾರದ ಮೇಲಿದೆ. ಬುದ್ಧಿವಂತ ಮಕ್ಕಳು ಸದಾ ಯುಕ್ತಿಯಿಂದ ನಡೆಯುತ್ತಾರೆ. ಇಂತಹವರು ಅವಶ್ಯವಾಗಿ ನನಗಿಂತ ಮುಂದಿದ್ದಾರೆಂಬುದನ್ನು ತಿಳಿದುಕೊಂಡಿರುತ್ತಾರೆ. ಅಂದಮೇಲೆ ಅಂತಹ ಮಕ್ಕಳನ್ನು ಬಹಳ ಗೌರವದಿಂದ ನೋಡಬೇಕಾಗಿದೆ. ಸ್ತ್ರೀಯರಲ್ಲೂ ಕೆಲವರು ಓದಿರುವವರು ಬಹಳ ಚುರುಕು ಬುದ್ಧಿಯುಳ್ಳವರು ಇರುತ್ತಾರೆ. ಅವರು ಪ್ರತಿಯೊಬ್ಬರನ್ನೂ ತಾವು ತಾವು ಎನ್ನುತ್ತಲೇ ಮಾತನಾಡಿಸುತ್ತಾರೆ. ಕೆಲವರು ಅವಿದ್ಯಾವಂತರು ನೀನು ನೀನು ಎಂಬುದಾಗಿ ಮಾತನಾಡಿಸುತ್ತಾರೆ. ಮಾತನಾಡುವ ತಿಳುವಳಿಕೆಯೂ ಬೇಕಾಗಿದೆ. ಬಾಬಾರ ಬಳಿಗೆ ಭಿನ್ನ – ಭಿನ್ನ ಪ್ರಕಾರದವರು ಬರುತ್ತಾರೆ. ನೀವು ರಾಜಖುಷಿಯಾಗಿದ್ದೀರಾ? ಎಂದು ಬಾಬಾ ಕೆಲವರನ್ನು ಕೇಳುತ್ತಾರೆ. ಯಾರಾದರೂ ಪೋಪ್ ಮುಂತಾದವರು ಬಂದರೆ, ಇದು ಮುಳ್ಳಿನ ಕಾಡಾಗಿದೆ, ಯಾವುದಕ್ಕೆ ನೀವು ಪ್ಯಾರಡೈಜ್ (ಸ್ವರ್ಗ) ಎಂದು ಹೇಳುವಿರೋ ಅದು ಹೂವಿನ ತೋಟವಾಗಿತ್ತು ಎಂದು ತಿಳಿಸಿಕೊಡಿ. ಅಲ್ಲಂತೂ ಶ್ರೇಷ್ಠ ಫರಿಶ್ತೆಯರು ಇರುತ್ತಾರೆ. ಇದು ಮುಳ್ಳಿನ ಕಾಡಾಗಿದೆ. ಕಾಡಿನಲ್ಲಿ ಮುಳ್ಳು ಹಾಗೂ ಪ್ರಾಣಿಗಳೇ ವಾಸಿಸುತ್ತವೆ. ಈ ಬಾಬಾ ಯಾರಿಗಾದರೂ ಏನು ಬೇಕಾದರೂ ಹೇಳಬಹುದು, ಆದರೆ ನೀವು ಮಕ್ಕಳು ಹೇಳಬಾರದಾಗಿದೆ. ಈಗ ಪ್ಯಾರಡೈಜ್ (ಸ್ವರ್ಗ) ಸ್ಥಾಪನೆಯಾಗುತ್ತದೆ. ಇದಂತೂ ಕಲಿಯುಗವಾಗಿದೆ. ಅಲ್ಲಾನ ಹೂದೋಟ ಸ್ಥಾಪನೆಯಾಗುತ್ತದೆ. ಸತ್ಯಯುಗವು ಅಲ್ಲಾನ ಹೂದೋಟವಾಗಿದೆ. ಇದು ಮುಳ್ಳಿನ ಕಾಡಾಗಿದೆ. ಇದೆಲ್ಲ ತಿಳಿದುಕೊಳ್ಳುವ ಮಾತಾಗಿದೆ. ಅದೃಷ್ಟವಂತರೇ ಚೆನ್ನಾಗಿ ತಿಳಿದುಕೊಳ್ಳಬಲ್ಲರು ಹಾಗೂ ತಿಳಿಸಿಕೊಡಬಲ್ಲರು. ತಂದೆ ಮಕ್ಕಳಿಗೆ ಚೆನ್ನಾಗಿ ತಿಳುವಳಿಕೆ ಕೊಡುತ್ತಾರೆಂದ ಮೇಲೆ ಮಕ್ಕಳೇ ಅವಶ್ಯವಾಗಿ ಪಂಚ ವಿಕಾರಗಳ ಮೇಲೆ ವಿಜಯ ಪಡೆಯಬೇಕು. ಇವುಗಳಿಂದ ವಿದಾಯಿ ಅಂತಿಮದಲ್ಲಿ ಆಗುತ್ತದೆ. ಅಲ್ಲಿಯ ತನಕವೂ ಏನಾದರೂ ಕೊರತೆಗಳು ಇದ್ದೇ ಇರುತ್ತದೆ ಅವುಗಳನ್ನು ಓಡಿಸುವ ಪುರುಷಾರ್ಥ ಮಾಡಬೇಕು. ದೇಹೀ ಅಭಿಮಾನಿ ಆಗಬೇಕು. ಶಾಂತಿಧಾಮ ಹಾಗೂ ಸುಖಧಾಮ ವನ್ನು ನೆನಪು ಮಾಡಬೇಕಾಗಿದೆ ಆಗ ಅಪಾರ ಖುಷಿಯಿರುತ್ತದೆ. ನಾವು ಶಾಂತಿಧಾಮದ ಮೂಲಕ ಸುಖಧಾಮಕ್ಕೆ ಹೋಗುತ್ತೇವೆ. ಅಲ್ಲಿಯ ತನಕ ಈ ಜಗತ್ತು ಸಂಪೂರ್ಣ ಸ್ವಚ್ಛವಾಗಿರುತ್ತದೆ. ನಂತರ ಸ್ವರ್ಗದಲ್ಲಿ ಪ್ರತಿಯೊಂದೂ ಅತ್ಯುತ್ತಮ ವಸ್ತುಗಳು ಸಿಗುತ್ತವೆ. ಅಲ್ಲಿ ಹೋಗಿ ವಜ್ರ ರತ್ನಗಳ ಮಹಲ್ ಮಾಡುತ್ತೇವೆ. ಅಲ್ಲಿ ನಾನು ಆತ್ಮ ಎಂಬುದು ನಿಮ್ಮ ಬುದ್ಧಿಯಲ್ಲಿರುತ್ತದೆ. ಇಲ್ಲಿ ನಮ್ಮ ರಾಜಧಾನಿ ಸ್ಥಾಪನೆ ಮಾಡಲು ಬಂದಿದ್ದೇವೆ ಎಂಬುದನ್ನೂ ತಿಳಿದಿರುತ್ತದೆ. ಇಲ್ಲಿ ನಾವು ರಾಜಯೋಗ ಕಲಿಯುತ್ತಿದ್ದೇವೆ ನಂತರ ತಂದೆಯ ಜೊತೆಯಲ್ಲಿ ಹೋಗಿ ಸೂರ್ಯವಂಶಿ ಚಂದ್ರವಂಶಿ ರಾಜಾ ರಾಣಿಯಾಗುತ್ತೇವೆ. ಮಹಲ್ಗಳನ್ನಂತೂ ಕಟ್ಟಿಸ ಬೇಕಾಗುತ್ತದೆ. ಈ ಎಲ್ಲಾ ಮಾತುಗಳನ್ನು ನೆನಪು ಮಾಡುತ್ತಾ ಆಂತರ್ಯದಲ್ಲಿ ಬಹಳ ಖುಷಿಯಿಂದಿರಬೇಕು. ಮಕ್ಕಳಲ್ಲಿ ಬಹಳಷ್ಟು ಕೊರತೆಗಳಿವೆ. ದೇಹಾಭಿಮಾನದಲ್ಲೂ ಬರುತ್ತಿರುತ್ತಾರೆ. ಇದಂತೂ ಹಿಂದಿನ ಹಳೆಯ ವಸ್ತ್ರವಾಗಿದೆ. ಹೊಸ ವಸ್ತ್ರ ಸತ್ಯಯುಗದಲ್ಲಿ ಸಿಗುತ್ತದೆ. ಅರ್ಧಕಲ್ಪ ನೀವು ಭಗವಂತನ ಮಿಲನ ಮಾಡಲು ಭಕ್ತಿ ಮಾಡಿದಿರಿ ಎಂಬುದಾಗಿ ತಂದೆ ಮಧುರಾತಿ ಮಧುರ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಒಬ್ಬ ಭಗವಂತನೊಂದಿಗೆ ಮಿಲನ ಮಾಡುವ ಸಲುವಾಗಿಯೇ ಭಕ್ತಿಯನ್ನು ಮಾಡಲಾಗುತ್ತದೆಯೋ ಅಥವಾ ಅನೇಕರನ್ನು ಮಿಲನ ಮಾಡಲೋ? ಭಕ್ತಿಯನ್ನೂ ಒಬ್ಬರದ್ದೇ ಮಾಡಬೇಕಾಗುತ್ತದೆ. ನಂತರ ಭಕ್ತಿ, ವ್ಯಭಿಚಾರಿ ಭಕ್ತಿ ಆಗುತ್ತದೆ ನಂತರ ನೀವು ಪ್ರತೀ ಜನ್ಮದಲ್ಲೂ ಗುರುಗಳನ್ನು ಮಾಡಿಕೊಳ್ಳುತ್ತಾ ಬರುವಿರಿ. ಪುನರ್ಜನ್ಮ ಪಡೆದಿರೆಂದರೆ ಇನ್ನೊಂದು ಗುರುವನ್ನು ಮಾಡಿಕೊಳ್ಳಬೇಕಾಗುತ್ತದೆ. ಈಗ ಬಾಬಾ ಹೇಳುತ್ತಾರೆ-ನಾನು ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಿಮಗೆ ಜನ್ಮ ಜನ್ಮಾಂತರ ಗುರುಗಳನ್ನು ಮಾಡಿಕೊಳ್ಳುವ ಅಗತ್ಯವಿಲ್ಲ. ಅವ್ಯಭಿಚಾರಿ ಭಕ್ತಿ ಆದ ನಂತರ ವ್ಯಭಿಚಾರಿ ಭಕ್ತಿ ಆಗಲೇಬೇಕು. ಏಕೆಂದರೆ ಈಗ ಇಳಿಯುವ ಕಲೆಯಿದೆ. ಆದ್ದರಿಂದ ಬಾಬಾ ಹೇಳುತ್ತಾರೆ-ಈಗ ಮನೆಗೆ ಹೋಗಬೇಕಾಗಿದೆ. ಬಾಬಾನ ಪ್ರತಿಯಾಗಿ ಮುಕ್ತಿದಾತ, ಅಂಬಿಗ, ಭಗವಂತ ಎಂದೆಲ್ಲಾ ಹೇಳುತ್ತಾರೆ. ಸ್ವರ್ಗವು ಹೂವಿನ ತೋಟವಾಗಿದೆ ಮಕ್ಕಳನ್ನು ಅಲ್ಲಿಗೆ ಕಳುಹಿಸಿ ಅಂಬಿಗ ಹೊರಟು ಹೋಗುತ್ತಾರೆ. ಎಲ್ಲರೂ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಮೊಟ್ಟ ಮೊದಲು ಯಾರು ಬರುತ್ತಾರೋ ಅವರಿಗಾಗಿ ಅಲ್ಲಾನ ಹೂದೋಟವಿದೆ. ಅವರು ಅಪಾರ ಸುಖ ಭೋಗಿಸುತ್ತಾರೆ. ಅಲ್ಲಾನೇ ಎಲ್ಲರಿಗೂ ಸುಖ ಕೊಡುತ್ತಾರೆ. ಸತ್ಯಯುಗವು ಅಲ್ಲಾನ ಹೂದೋಟವಾಗಿತ್ತು ಎಂದು ಇಲ್ಲಿ ಯಾರಾದರೂ ಹೇಳಬಹುದು. ಭಾರತವೇ ಪ್ರಾಚೀನ ಖಂಡವಾಗಿದೆ. ಯಾವಾಗ ಸೂರ್ಯವಂಶ, ಚಂದ್ರವಂಶದವರು ರಾಜ್ಯಭಾರ ಮಾಡುತ್ತಿದ್ದರೋ ಆಗ ಅನ್ಯ ಎಲ್ಲಾ ಆತ್ಮರು ಮಧುರ ಮನೆಯಲ್ಲಿರುತ್ತಾರೆ. ಅದಕ್ಕಾಗಿಯೇ ಮುಕ್ತಿಯಲ್ಲಿ ಹೋಗಲು ಭಕ್ತಿ ಮಾಡುತ್ತಾರೆ. ಜೀವನ್ಮುಕ್ತಿ ನೀಡುವ ಗುರು ಯಾರೂ ಸಹ ಇಲ್ಲ. ಶಿವಬಾಬಾರೇ ಮುಕ್ತಿ ಹಾಗೂ ಜೀವನ್ಮುಕ್ತಿಯ ಮಾರ್ಗ ತಿಳಿಸುತ್ತಾರೆ. ಇದಾಗಿದೆ ಮುಳ್ಳಿನ ಕಾಡು ಇದಕ್ಕೆ ಬೆಂಕಿ ಬೀಳಲಿದೆ. ಕಲ್ಪವು ಲಕ್ಷಾಂತರ ವರ್ಷದ್ದೇನೂ ಅಲ್ಲ. ಲಕ್ಷಾಂತರ ವರ್ಷವೆಂದು ತಿಳಿದು ಮನುಷ್ಯರು ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆ. ಈಗ ಈಶ್ವರ ಬಂದು ಎಬ್ಬಿಸಿದ್ದಾರೆ. ನೀವೀಗ ಬೇರೆಯವರನ್ನೂ ಎಬ್ಬಿಸಬೇಕಾಗಿದೆ. ಸೇವೆ ಮಾಡದ ವಿನಃ ಶ್ರೇಷ್ಠ ಪದವಿ ಪಡೆಯಲಾಗದು. ಮಕ್ಕಳು ತಂದೆಯಿಂದ ಪೂರ್ಣ ಆಸ್ತಿ ಪಡೆಯುತ್ತಿಲ್ಲವೆಂದು ಬಾಬಾರವರಿಗೆ ಮಕ್ಕಳ ಮೇಲೆ ದಯೆ ಬರುತ್ತದೆ. ತಂದೆಯಂತೂ ಎಲ್ಲರಿಂದಲೂ ಪೂರ್ಣ ಪುರುಷಾರ್ಥ ಮಾಡಿಸುತ್ತಾರೆ. ಅಂದಮೇಲೆ ನೀವೇಕೆ ತಂದೆಯ ವಿಜಯ ಮಾಲೆಯಲ್ಲಿ ಸ್ಮರಣೆಗೆ ಯೋಗ್ಯರಾಗಬಾರದು. ಬ್ರಹ್ಮನ ಮೂಲಕ ಸ್ಥಾಪನೆ ಹಗೂ ಶಂಕರನ ಮೂಲಕ ದುಃಖಧಾಮದ ವಿನಾಶ ಎಂಬುದು ತಿಳಿಸಿ ಕೊಡುವುದು ಬಹಳ ಸಹಜವಾಗಿದೆ. ಈಗ ಸುಖಧಾಮಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ಆದರೆ ಸುಖಧಾಮವನ್ನು ಯಾರು ತಿಳಿದುಕೊಂಡೇ ಇಲ್ಲ. ಒಂದುವೇಳೆ ತಿಳಿದಿದ್ದರೆ ಅಲ್ಲಿಗೂ ಹೋಗಿ ಬಿಡುತ್ತಿದ್ದರು. ಆದರೆ ಯಾರೂ ತಿಳಿಯದಿರುವ ಕಾರಣ ಅಲ್ಲಿಗೆ ಹೋಗಲು ಸಾಧ್ಯವೂ ಇಲ್ಲ. ಎಲ್ಲರದ್ದೂ ರೆಕ್ಕೆಯು ಮುರಿದು ಬಿಟ್ಟಿದೆ. ನೀವು ಮಕ್ಕಳು ಕಾಲನ ಮೇಲೆ ವಿಜಯ ಪಡೆಯುವಿರಿ. ಕಾಲರ ಕಾಲ ಬಾಬಾನೇ ಕಾಲನ ಮೇಲೆ ವಿಜಯ ಪ್ರಾಪ್ತಿ ಮಾಡಿಸುತ್ತಾರೆ. ಆದ್ದರಿಂದ ಇದೆಲ್ಲ ಧಾರಣೆ ಮಾಡಿ ಪತಿತರಿಂದ ಪಾವನರಾಗಬೇಕಾಗಿದೆ. ಕೇವಲ ಪ್ರಭಾವಿತರಾಗಿ ಹೋಗುವುದರಿಂದ ಏನು ಪ್ರಯೋಜನ ಯಾವಾಗ 7 ದಿನಗಳ ಕೋರ್ಸ್ ಪಡೆಯುವಿರೋ ಆಗಲೇ ಸಂಪೂರ್ಣ ರಂಗು ಹತ್ತಿ ಬಿಡುತ್ತದೆ. ಕೆಲವು ಮಕ್ಕಳು ನಡೆಯುತ್ತ ನಡೆಯುತ್ತ ನಿಮಿತ್ತ ಸಹೋದರಿಯೊಂದಿಗೆ ಮುನಿಸಿಕೊಂಡು ನಂತರ ಶಿವಬಾಬಾನೊಂದಿಗೂ ಮುನಿಸಿಕೊಳ್ಳುತ್ತಾರೆ. ಬೇರೆಯವರೊಂದಿಗೆ ಬೇಕಾದರೆ ಮುನಿಸಿಕೊಳ್ಳಿ ಆದರೆ ನನ್ನೊಂದಿಗೆ ಮುನಿಸಿಕೊಂಡರೆ ಹೆಣದಂತಾಗಿಬಿಡುವಿರಿ. ಶಿವಬಾಬಾರೊಂದಿಗೆ ಎಂದೂ ಮುನಿಸಿಕೊಳ್ಳಬೇಡಿ. ಬಾಬಾನಿಂದ ಖಜಾನೆ ತೆಗೆದುಕೊಳ್ಳುತ್ತಾ ಇರಿ. ಈಶ್ವರಾರ್ಥವಾಗಿ ಮಾಡಿದ ದಾನ ಎಂದೂ ವ್ಯರ್ಥವಾಗುವುದಿಲ್ಲ. ಒಳ್ಳೆಯ ಸಂಗವೂ ಬೇಕಾಗಿದೆ. ಬ್ರಾಹ್ಮಣ ಕುಲದಲ್ಲಿ ಬಹಳ ಕ್ಷೀರಖಂಡವಾಗಿರಬೇಕು. ಧೂತಿಯರು (ಚಾಡಿ ಹೇಳುವರು) ಹಾಗೂ ಧೂತರೂ ಸಹ ಇರುತ್ತಾರೆ. ಅವರಿಂದ ಸ್ವಯಂನ್ನು ತುಂಬಾ ರಕ್ಷಿಸಿಕೊಳ್ಳಬೇಕು.

ಮಕ್ಕಳಿಗೆ ಸೇವೆಯ ಆಸಕ್ತಿ ಬಹಳ ಇರಬೇಕೆಂದು ಬಾಬಾ ಹೇಳುತ್ತಾರೆ. ಮುಳುಗಿರುವವರನ್ನು ಮೇಲೆತ್ತಬೇಕು. ಇದೂ ಸಹ ಮನೆಯಲ್ಲೇ ಪ್ರಾರಂಭಿಸಬೇಕು. ಬಾಬಾರೂ ಸಹ ಮೊಟ್ಟ ಮೊದಲು ಬ್ರಹ್ಮಾ ಮಗುವನ್ನು ಎಬ್ಬಿಸುತ್ತಾರೆ. ನೀವೂ ಸಹ ನಿಮ್ಮ ಮಕ್ಕಳನ್ನು ಎಚ್ಚರಿಸಬೇಕಾಗಿದೆ. ಅವರಿಗೆ ಪ್ರಾಣ ದಾನ ಕೊಡಬೇಕು. ವಿದ್ಯೆಯನ್ನು ಅಂತಿಮದವರೆಗೆ ಓದಬೇಕಾಗಿದೆ. ಎಷ್ಟೊಂದು ಉತ್ತಮವಾದ ಮಾತುಗಳನ್ನು ಬಾಬಾ ತಿಳಿಸುತ್ತಾರೆ. ಬದುಕಿದ್ದು ಸತ್ತು ಆಸ್ತಿಯನ್ನು ಪಡೆದುಕೊಳ್ಳಬೇಕಾಗಿದೆ. ಬಾಬಾ ನಾವು ನಿಮ್ಮವರಾಗಿದ್ದೇವೆ, ನಿಮ್ಮವರಾಗಿಯೇ ಇದ್ದೆವು, ಮುಂದೆಯೂ ನಿಮ್ಮವರಾಗಿಯೇ ಇರುತ್ತೇವೆ, ನಿಮ್ಮಿಂದ ಪೂರ್ಣ ಆಸ್ತಿ ಪಡೆಯದೆ ಬಿಡಲಾರೆವು ಎಂಬ ನಿಶ್ಚಯವಿರಬೇಕು. ಈಗ ಈ ದುಃಖಧಾಮದ ಬಿದಿರು ಬೊಂಬಿಗೆ ಬೆಂಕಿ ಬೀಳಲಿದೆ. ನಾವು ಸುಖಧಾಮಕ್ಕೆ ಹೋಗಲಿದ್ದೇವೆ. ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾರು ಜ್ಞಾನ-ಯೋಗದಲ್ಲಿ ಮುಂದಿರುವರೊ, ಚೆನ್ನಾಗಿ ಸೇವೆ ಮಾಡುವರೊ ಅವರಿಗೆ ಬಹಳ ಗೌರವ ಕೊಡಬೇಕು. ತಾವು ತಾವು ಎಂದು ಮಾತನಾಡಿಸಬೇಕು. ಪರಸ್ಪರರಲ್ಲೂ ಎಂದೂ ಮುನಿಸಿಕೊಳ್ಳಬಾರದು.

2. ಬ್ರಾಹ್ಮಣ ಕುಲದಲ್ಲಿ ಬಹಳ – ಬಹಳ ಕ್ಷೀರ ಖಂಡವಾಗಿರಬೇಕು ಧೂತಿತನ (ಚಾಡಿ ಹೇಳುವುದು) ಪರಚಿಂತನೆಯಿಂದ ಸ್ವಯಂನ್ನು ಸಂಚಾಲನೆ ಮಾಡಿಕೊಳ್ಳಬೇಕು. ಸತ್ಯ ಸಂಗವನ್ನು ಅವಶ್ಯವಾಗಿ ಮಾಡಬೇಕು.

ವರದಾನ:-

ಈಗ ಏರುವ ಕಲೆಯ ಸಮಯವು ಸಮಾಪ್ತಿಯಾಯಿತು, ಈಗ ಹಾರುವ ಕಲೆಯ ಸಮಯವಾಗಿದೆ. ಹಾರುವ ಕಲೆಯ ಸಂಕೇತವು ಡಬಲ್ ಲೈಟ್ ಆಗಿರುವುದಾಗಿದೆ. ಸ್ವಲ್ಪವೇನಾದರೂ ಹೊರೆಯಿದೆಯೆಂದರೆ ಕೆಳಗೆ ಕರೆ ತರುತ್ತದೆ. ಅದು ಭಲೆ ತಮ್ಮ ಸಂಸ್ಕಾರಗಳ ಹೊರೆಯಿರಬಹುದು, ವಾಯುಮಂಡಲದ ಹೊರೆಯಿರಬಹುದು, ಯಾವುದೇ ಆತ್ಮನ ಸಂಬಂಧ-ಸಂಕಲ್ಪವಾಗಿರಬಹುದು, ಯಾವುದೇ ಹೊರೆಯಾದರೂ ಏರುಪೇರಿನಲ್ಲಿ ತರುತ್ತದೆ ಆದ್ದರಿಂದ ಎಲ್ಲಿಯೂ ಸೆಳೆತವಿರಬಾರದು, ಯಾವುದೇ ಆಕರ್ಷಣೆಯಲ್ಲಿ ಸ್ವಲ್ಪವೂ ಆಕರ್ಷಿತರಾಗಬಾರದು. ಯಾವುದೇ ಈ ರೀತಿಯಲ್ಲಿ ಆಕರ್ಷಣಾ ಮುಕ್ತ, ಡಬಲ್ ಲೈಟ್ ಆಗಿರುತ್ತೀರಿ ಆಗಲೇ ಸಂಪೂರ್ಣರಾಗಲು ಸಾಧ್ಯವಾಗುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ತಂದೆಯ ಪ್ರೀತಿಯಲ್ಲಿ ಈ ರೀತಿ ಸಮಾವೇಶವಾಗಿರಿ, ಅದರಲ್ಲಿ ನಾನು ಮತ್ತು ನನ್ನದೆನ್ನುವುದು ಸಮಾಪ್ತಿಯಾಗಿ ಬಿಡಲಿ. ಜ್ಞಾನ ಆಧಾರದಿಂದ ತಂದೆಯ ನೆನಪಿನಲ್ಲಿ ಸಮಾವೇಶವಾಗಿರುವುದೇ ಲವಲೀನ ಸ್ಥಿತಿಯಾಗಿದೆ. ಯಾವಾಗ ಲವ್ನಲ್ಲಿ ಲೀನವಾಗಿ ಬಿಡುತ್ತೀರಿ ಅಂದರೆ ಲಗನ್ನಲ್ಲಿ ಮಗ್ನರಾಗುತ್ತೀರಿ, ಆಗಲೇ ತಂದೆಯ ಸಮಾನರಾಗಿ ಬಿಡುತ್ತೀರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top