04 December 2021 KANNADA Murli Today | Brahma Kumaris

Read and Listen today’s Gyan Murli in Kannada

December 3, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ದೇಹಾಭಿಮಾನವು ನಿಮ್ಮನ್ನು ಬಹಳ ದುಃಖಿಯನ್ನಾಗಿ ಮಾಡುತ್ತದೆ, ಆದ್ದರಿಂದ ಆತ್ಮಾಭಿಮಾನಿಯಾಗಿ, ಆತ್ಮಾಭಿಮಾನಿಯಾಗುವುದರಿಂದಲೇ ಪಾಪಗಳ ಹೊರೆಯು ಸಮಾಪ್ತಿಯಾಗುವುದು”

ಪ್ರಶ್ನೆ:: -

ಸತ್ಯಯುಗದಲ್ಲಿ ಸಾಹುಕಾರ ಪದವಿಯು ಯಾವ ಆಧಾರದ ಮೇಲೆ ಪ್ರಾಪ್ತಿಯಾಗುತ್ತದೆ?

ಉತ್ತರ:-

ಜ್ಞಾನದ ಧಾರಣೆಯ ಆಧಾರದ ಮೇಲೆ ಸಾಹುಕಾರರಾಗುತ್ತಾರೆ. ಜ್ಞಾನ ಧನವನ್ನು ಯಾರೆಷ್ಟು ಧಾರಣೆ ಮಾಡಿಕೊಳ್ಳುವರೋ ಮತ್ತು ದಾನ ಮಾಡುವರೋ ಅವರು ಅಷ್ಟು ಸಾಹುಕಾರ ಪದವಿಯನ್ನು ಪಡೆಯುತ್ತಾರೆ, ಸದಾ ಆರೋಗ್ಯವಂತರಾಗುತ್ತಾರೆ. ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ. ಬಾಕಿ ವಿಶ್ವದ ಮಹಾರಾಜರಾಗಬೇಕೆಂದರೆ ಬಹಳ ರಾಯಲ್ ಸರ್ವೀಸ್ ಮಾಡಬೇಕಾಗಿದೆ. ಎಲ್ಲಾ ನಿರ್ಬಲತೆಗಳನ್ನು ತೆಗೆದು ಸಂಪೂರ್ಣ ಆತ್ಮಾಭಿಮಾನಿಗಳಾಗಬೇಕಾಗಿದೆ. ಬಹಳ ಧೈರ್ಯ ಮತ್ತು ಗಂಭೀರತೆಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಧೈರ್ಯ ತಾಳು ಮಾನವನೇ…..

ಓಂ ಶಾಂತಿ. ಇದನ್ನು ಯಾರು ಹೇಳಿದರು? ಧೈರ್ಯವಹಿಸಿ ಅರ್ಥಾತ್ ತಾಳ್ಮೆಯಿಂದಿರಿ ಎಂದು ತಂದೆಯು ಮಕ್ಕಳಿಗೆ ಹೇಳಿದರು, ಇಡೀ ಪ್ರಪಂಚಕ್ಕೆ ಹೇಳಲಿಲ್ಲ. ಭಲೆ ಎಲ್ಲರೂ ಮಕ್ಕಳಾಗಿದ್ದಾರೆ ಆದರೆ ಎಲ್ಲರೂ ಕುಳಿತುಕೊಂಡಿಲ್ಲ ಅಲ್ಲವೆ. ಮಕ್ಕಳೇ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಈ ದುಃಖಧಾಮವು ಬದಲಾಗುತ್ತಿದೆ, ಸುಖಧಾಮಕ್ಕಾಗಿ ನಾವು ಓದುತ್ತಿದ್ದೇವೆ ಮತ್ತು ಶ್ರೀಮತದಂತೆ ನಡೆಯುತ್ತಿದ್ದೇವೆ. ಮಕ್ಕಳಿಗೆ ಧೈರ್ಯವನ್ನೂ ಕೊಡುತ್ತಾರೆ, ವಾಸ್ತವದಲ್ಲಿ ಇಡೀ ಪ್ರಪಂಚಕ್ಕೆ ಗುಪ್ತ ಧೈರ್ಯವು ಸಿಗುತ್ತಿದೆ. ನಾವು ಸನ್ಮುಖದಲ್ಲಿ ಕೇಳುತ್ತೇವೆಂದು ನೀವು ತಿಳಿದುಕೊಳ್ಳುತ್ತೀರಿ, ಎಲ್ಲರೂ ಕೇಳುವುದಿಲ್ಲ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ಬೇಹದ್ದಿನ ದುಃಖಹರ್ತ-ಸುಖಕರ್ತನಾಗಿದ್ದಾರೆ. ದುಃಖವನ್ನು ದೂರ ಮಾಡಿ ಸುಖದ ಮಾರ್ಗವನ್ನು ತಿಳಿಸುತ್ತಾರೆ. ನಿಮಗೆ ಯಾವಾಗ ಸುಖವಿರುವುದೋ ಆಗ ದುಃಖದ ಹೆಸರೂ ಇರುವುದಿಲ್ಲ, ಸುಖದ ಪ್ರಪಂಚಕ್ಕೆ ಸತ್ಯಯುಗ, ದುಃಖದ ಪ್ರಪಂಚಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಇದನ್ನೂ ಸಹ ಮಕ್ಕಳೇ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಸಂಪೂರ್ಣ ಸುಖವಿರುತ್ತದೆ, 16 ಕಲಾ ಸಂಪೂರ್ಣ. ಹೇಗೆ ಪೂರ್ಣ ಚಂದ್ರಮನಿರುತ್ತಾನೆ, ನಂತರ ಕಲೆಗಳು ಕಡಿಮೆಯಾಗುತ್ತಾ-ಆಗುತ್ತಾ ಅಮಾವಾಸ್ಯೆಯಂದು ಚಿಕ್ಕ ಗೆರೆಯಷ್ಟೇ ಉಳಿದುಕೊಳ್ಳುತ್ತದೆ. ಪೂರ್ಣ ಅಂಧಕಾರವಾಗಿ ಬಿಡುತ್ತದೆ. 16 ಕಲಾ ಸಂಪೂರ್ಣನಿದ್ದಾಗ ಸಂಪೂರ್ಣ ಸುಖವೂ ಇರುವುದು. ಕಲಿಯುಗದಲ್ಲಿ 16 ಕಲೆಗಳು ಅಪೂರ್ಣವಾಗಿವೆ ಆದ್ದರಿಂದ ದುಃಖವೂ ಆಗುತ್ತದೆ. ಈ ಇಡೀ ಪ್ರಪಂಚಕ್ಕೆ ಮಾಯಾರೂಪಿ ಗ್ರಹಣವು ಹಿಡಿಯುತ್ತದೆ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ – ನಿಮ್ಮಲ್ಲಿ ಯಾವ ದೇಹಾಭಿಮಾನವಿದೆಯೋ ಅದನ್ನು ಮೊಟ್ಟ ಮೊದಲು ಬಿಡಿ. ಈ ದೇಹಾಭಿಮಾನವು ನಿಮಗೆ ಬಹಳ ದುಃಖ ಕೊಡುತ್ತದೆ, ಆತ್ಮಾಭಿಮಾನಿಯಾಗಿರಿ ಆಗ ತಂದೆಯನ್ನೂ ನೆನಪು ಮಾಡಬಲ್ಲಿರಿ. ದೇಹಾಭಿಮಾನದಲ್ಲಿ ಇರುವುದರಿಂದ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಇದು ಅರ್ಧಕಲ್ಪದ ದೇಹಾಭಿಮಾನವಾಗಿದೆ, ಈ ಅಂತಿಮ ಜನ್ಮದಲ್ಲಿ ದೇಹೀ-ಅಭಿಮಾನಿಯಾಗುವುದರಿಂದ ಮೊದಲನೆಯದಾಗಿ ಪಾಪಗಳ ಹೊರೆಯು ಸಮಾಪ್ತಿಯಾಗುತ್ತದೆ ಮತ್ತು 16 ಕಲಾ ಸಂಪೂರ್ಣ, ಸತೋಪ್ರಧಾನರಾಗುತ್ತೀರಿ. ಅನೇಕರು ದೇಹಾಭಿಮಾನದ ಮಾತುಗಳನ್ನೂ ತಿಳಿದುಕೊಳ್ಳುವುದಿಲ್ಲ. ಮನುಷ್ಯನನ್ನು ದುಃಖಿಯನ್ನಾಗಿ ಮಾಡುವುದೇ ದೇಹಾಭಿಮಾನವಾಗಿದೆ. ನಂತರ ಅನ್ಯ ವಿಕಾರಗಳು ಬರುತ್ತವೆ. ದೇಹೀ-ಅಭಿಮಾನಿಗಳಾದರೆ ಇವೆಲ್ಲಾ ವಿಕಾರಗಳು ಬಿಟ್ಟು ಹೋಗುತ್ತವೆ. ಇಲ್ಲದಿದ್ದರೆ ಇವು ಬಿಡುವುದು ಕಷ್ಟವಿದೆ. ದೇಹಾಭಿಮಾನದ ಅಭ್ಯಾಸವು ಪಕ್ಕಾ ಆಗಿರುವ ಕಾರಣ ತನ್ನನ್ನು ಆತ್ಮನೆಂದು ತಿಳಿದುಕೊಳ್ಳುವುದೇ ಇಲ್ಲ. ಇದರಲ್ಲಿ ಎಲ್ಲಾ ವಿಕಾರಗಳನ್ನು ದಾನ ಮಾಡಬೇಕಾಗುತ್ತದೆ. ಮೊಟ್ಟ ಮೊದಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಕಾಮ, ಕ್ರೋಧ ಇತ್ಯಾದಿಗಳು ನಂತರ ಬರುತ್ತವೆ. ನಿಮ್ಮ ತಂದೆಯು ಅವರಾಗಿದ್ದಾರೆ. ದೇಹಾಭಿಮಾನದ ಕಾರಣ ಲೌಕಿಕ ತಂದೆಯನ್ನೇ ತಂದೆಯೆಂದು ತಿಳಿದುಕೊಳ್ಳುತ್ತಾ ಬಂದಿದ್ದೀರಿ. ಈಗ ಮುಖ್ಯ ಮಾತೇನೆಂದರೆ ಪಾವನರಾಗುವುದು ಹೇಗೆ? ಪತಿತ ಪ್ರಪಂಚದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಯಾರೂ ಪಾವನರಿರಲು ಸಾಧ್ಯವಿಲ್ಲ. ಒಬ್ಬ ತಂದೆಯೇ ಎಲ್ಲರನ್ನೂ ಪಾವನರನ್ನಾಗಿ ಮಾಡಿ ಖುಷಿ-ಖುಷಿಯಿಂದ ಮರಳಿ ಕರೆದುಕೊಂಡು ಹೋಗುತ್ತಾರೆ.

ಈಗ ನೀವು ಮಕ್ಕಳಿಗೆ ಯೋಗದ ಚಿಂತನೆಯಿದೆ. ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ದೇಹಾಭಿಮಾನವನ್ನು ಕಳೆಯುವುದು ಎಂದರೆ ಸಾಯುವುದು ಎಂದರ್ಥ. ನಾವಾತ್ಮರು ತಂದೆಯನ್ನು ನೆನಪು ಮಾಡಿ ಪತಿತರಿಂದ ಪಾವನರಾಗಿ ಬಿಡಬೇಕು, ಈ ಪಾವನರಾಗುವ ಯುಕ್ತಿಯನ್ನು ತಂದೆಯೇ ತಿಳಿಸಿದ್ದರು. ಈಗ ಪುನಃ ತಿಳಿಸುತ್ತಿದ್ದಾರೆ. ಕಲ್ಪ-ಕಲ್ಪವೂ ತಿಳಿಸುತ್ತಾರೆ. ಪ್ರಪಂಚದಲ್ಲಿ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೂಲ ಮಾತು ಶಿವ ತಂದೆಯನ್ನು ನೆನಪು ಮಾಡುವುದಾಗಿದೆ. ಯಾವಾಗ ಇಲ್ಲಿ ಬಂದು ಬಿ.ಕೆ.ಗಳ ಮುಖಾಂತರ ಕೇಳುವರೋ ಆಗಲೇ ಅರ್ಥವಾಗುತ್ತದೆ ಏಕೆಂದರೆ ತಾತನ ಆಸ್ತಿಯು ಸಿಗಬೇಕಾಗಿದೆ. ಅಂದಮೇಲೆ ಅವಶ್ಯವಾಗಿ ಯಾರ ಮುಖಾಂತರ ಸಿಗುವುದೋ ಅವರು ಅವಶ್ಯವಾಗಿ ಬೇಕಾಗಿದೆ. ಸಲಹೆಯನ್ನಂತೂ ಸಾಕಾರ ತಂದೆಯ ಮುಖಾಂತರವೇ ತೆಗೆದುಕೊಳ್ಳಬೇಕಾಗುವುದು. ಬಹಳ ಮಕ್ಕಳು ತಿಳಿಯುತ್ತಾರೆ – ನಾವಂತೂ ಶಿವ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುತ್ತೇವೆ, ಬ್ರಹ್ಮಾರವರನ್ನು ಬಿಟ್ಟು ಬಿಡುತ್ತೇವೆ. ಆದರೆ ಬ್ರಹ್ಮನಿಲ್ಲದೆ ಶಿವ ತಂದೆಯಿಂದ ಹೇಗೆ ಕೇಳುವಿರಿ! ನಮಗೆ ಬ್ರಹ್ಮಾ ತಂದೆಯೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳುತ್ತಾರೆ. ಒಳ್ಳೆಯದು – ನೀವು ತಮ್ಮನ್ನು ಆತ್ಮನೆಂದು ತಿಳಿದು ಶಿವ ತಂದೆಯನ್ನು ನೆನಪು ಮಾಡಿರಿ, ಮನೆಗೆ ಹೋಗಿ ಕುಳಿತುಕೊಳ್ಳಿ ಆದರೆ ಯಾವ ಸೃಷ್ಟಿಚಕ್ರದ ಜ್ಞಾನವು ಸಿಗುತ್ತದೆಯೋ ಅದನ್ನು ಹೇಗೆ ಕೇಳುವಿರಿ? ಈ ಜ್ಞಾನವನ್ನು ತಿಳಿದುಕೊಳ್ಳದೆ ಕೇವಲ ನೆನಪು ಮಾಡಲು ಹೇಗೆ ಸಾಧ್ಯ! ಜ್ಞಾನವನ್ನು ಈ ಬ್ರಹ್ಮನ ಮುಖಾಂತರವೇ ತೆಗೆದುಕೊಳ್ಳಬೇಕಾಗುತ್ತದೆಯಲ್ಲವೆ. ಮತ್ತೆಂದೂ ಈ ಜ್ಞಾನ ಸಿಗಲು ಸಾಧ್ಯವಿಲ್ಲ. ಪ್ರತಿನಿತ್ಯವೂ ಹೊಸ-ಹೊಸ ಮಾತುಗಳು ತಂದೆಯ ಮುಖಾಂತರವೇ ಸಿಗುತ್ತದೆ. ಬ್ರಹ್ಮಾ ಮತ್ತು ಬ್ರಹ್ಮಾಕುಮಾರಿಯರಿಲ್ಲದೆ ಹೇಗೆ ತಿಳಿದುಕೊಳ್ಳುವಿರಿ! ಇದೆಲ್ಲವನ್ನೂ ಕಲಿಯಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಯಾರು ಮನೆಯಲ್ಲಿಯೇ ಕುಳಿತು ಕರ್ಮಾತೀತ ಸ್ಥಿತಿಯನ್ನು ಪಡೆಯುವ ಪುರುಷಾರ್ಥ ಮಾಡುವರೋ ಅವರು ಭಲೆ ಮುಕ್ತಿಯಲ್ಲಿ ಹೋಗುವರು ಆದರೆ ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಜ್ಞಾನ ಧನವನ್ನು ಧಾರಣೆ ಮಾಡಿಕೊಂಡು ದಾನ ಮಾಡಿದಾಗಲೇ ಧನವಂತರಾಗುವಿರಿ, ಇಲ್ಲದಿದ್ದರೆ ಸದಾ ಆರೋಗ್ಯವಂತರು ಹೇಗಾಗುತ್ತೀರಿ! ಮುರುಳಿಯ ಆಧಾರವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯೆಯನ್ನಂತೂ ಓದಬೇಕಲ್ಲವೆ. ಇಂತಹವರು ಅನೇಕರು ಬರುತ್ತಾರೆ, ಕೇವಲ ಲಕ್ಷ್ಯವನ್ನು ತೆಗೆದುಕೊಂಡು ಮುಕ್ತಿಯಲ್ಲಿ ಹೋಗುತ್ತಾರೆ. ನೀವು ಎಲ್ಲಾ ಮನುಷ್ಯ ಮಾತ್ರರಿಗೂ ತಿಳಿಸುತ್ತೀರಿ – ನೀವು ಕೇವಲ ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಯಾವಾಗ ಜ್ಞಾನ ಧನವನ್ನು ಪಡೆಯುವರೋ ಆಗಲೇ ಸತ್ಯಯುಗದಲ್ಲಿ ಸಾಹುಕಾರರಾಗುವರು. ಇಲ್ಲದಿದ್ದರೆ ಮುಕ್ತಿಯಲ್ಲಿ ಹೋಗಿ ಮತ್ತೆ ಭಕ್ತಿಮಾರ್ಗದ ಸಮಯದಲ್ಲಿ ಬಂದು ಭಕ್ತಿ ಮಾಡುತ್ತಾರೆ, ಯಾರ ಕಲ್ಯಾಣವನ್ನೂ ಮಾಡಲು ಸಾಧ್ಯವಿಲ್ಲ ಏಕೆಂದರೆ ಮನುಷ್ಯರಿಂದ ದೇವತೆಯಾಗಬೇಕೆಂದರೆ ಜ್ಞಾನವು ಅವಶ್ಯವಾಗಿ ಬೇಕಾಗಿದೆ. ಜ್ಞಾನವನ್ನು ಕೇಳಿದ ನಂತರ ತಿಳಿಸಬೇಕಾಗಿದೆ. ಪ್ರದರ್ಶನಿಯಲ್ಲಿ ನೋಡಿರಿ, ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೂ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಆತ್ಮವು ಎಷ್ಟು ಚಿಕ್ಕ ಬಿಂದುವಾಗಿದೆ. ಪ್ರತಿಯೊಂದು ಆತ್ಮನಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಎಲ್ಲಾ ಮನುಷ್ಯ ಮಾತ್ರರು ಪಾತ್ರಧಾರಿಗಳಾಗಿದ್ದಾರೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಹಳೆಯ ಪ್ರಪಂಚದ ವಿನಾಶವೂ ಆಗಲಿದೆ. ರಾಮನೂ ಹೋದ, ರಾವಣನೂ ಹೋದನೆಂದು ಗಾಯನವಿದೆ. ಎಲ್ಲರೂ ಹೋಗುವರು ಆದರೆ ಮಕ್ಕಳಾದವರಿಗೆ ದುಃಖವಾಗಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ಇದು ಮಾಡಿ-ಮಾಡಲ್ಪಟ್ಟ ಡ್ರಾಮಾ ಆಗಿದೆ, ಎಲ್ಲರ ವಿನಾಶವು ಆಗಲೇಬೇಕಾಗಿದೆ. ರಾಜ-ರಾಣಿ, ಸಾಧು-ಸಂತ ಎಲ್ಲರೂ ಮರಣ ಹೊಂದುತ್ತಾರೆ ಅಂದಮೇಲೆ ಅವರನ್ನು ಯಾರು ಸುಡುತ್ತಾರೆ? ಇದಂತೂ ಕೇವಲ ಅವರ ಹೆಸರನ್ನು ಪ್ರಸಿದ್ಧ ಮಾಡುವುದಕ್ಕಾಗಿ ಮಾಡುತ್ತಾರೆ. ಇದರಲ್ಲಿ ಯಾವುದೇ ಲಾಭವಿಲ್ಲ ಅಥವಾ ಅವರ ಆತ್ಮಕ್ಕೂ ಇದರಿಂದ ಸುಖ ಸಿಗುವುದಿಲ್ಲ. ಮನುಷ್ಯರಂತೂ ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾರೆಯೋ ಅದೆಲ್ಲವೂ ಅಂಧಶ್ರದ್ಧೆಯಿಂದ ಮಾಡುತ್ತಾರೆ. ಈಗ ತಂದೆಯು ನಿಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ! ಪದೇ-ಪದೇ ಈ ಚಿತ್ರಗಳನ್ನು ನೋಡಿರಿ ಆಗ ನಮಗೆ ತಂದೆಯು ಓದಿಸಿ ಹೇಗೆ ಮಾಡುತ್ತಿದ್ದಾರೆಂದು ನೆನಪಿರುತ್ತದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಕಾರ್ಯದಲ್ಲಿ ತರುವುದಿಲ್ಲ. ತಂದೆಯು ಬಹಳಷ್ಟು ತಿಳಿಸುತ್ತಾರೆ ಆದರೆ ಅದನ್ನು ಕಾರ್ಯದಲ್ಲಿ ತರಬೇಕಲ್ಲವೆ. ತಂದೆಯ ಮಕ್ಕಳಾಗಿಯೂ ಸರ್ವೀಸ್ ಮಾಡುವುದಿಲ್ಲ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ. ಕೆಲವು ಮಕ್ಕಳು ಅನೇಕರ ಅಕಲ್ಯಾಣವನ್ನೇ ಮಾಡುತ್ತಾ ಇರುತ್ತಾರೆ. ಯಾರಿಗೆ ಸ್ವಲ್ಪ ಭಾವನೆಯಾದರೂ ಇರುತ್ತದೆಯೋ ಅವರ ಭಾವನೆಯನ್ನೂ ಸಹ ತೆಗೆಸಿ ಬಿಡುತ್ತಾರೆ. ಇಂತಿಂತಹ ವಿಕರ್ಮಗಳನ್ನು ಮಾಡುವವರೂ ಇದ್ದಾರೆ. ಭೂತಗಳ ಪ್ರವೇಶತೆಯಾಗುತ್ತದೆಯಲ್ಲವೆ! ಆದ್ದರಿಂದ ಸದ್ಗುರುವಿನ ನಿಂಧಕರಿಗೆ ನೆಲೆಯಿಲ್ಲವೆಂದು ಗಾಯನವಿದೆ. ಇದರಲ್ಲಿ ಬಾಪ್ದಾದಾ ಇಬ್ಬರೂ ಬಂದು ಬಿಡುತ್ತಾರೆ. ನಿರಾಕಾರನನ್ನು ಯಾರೇನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಏನು ಹೇಳಲು ಸಾಧ್ಯ! ಭಕ್ತಿಮಾರ್ಗದಲ್ಲಿ ಭಗವಂತನೇ ದುಃಖ ಕೊಡುತ್ತಾರೆ ಎಂದು….. ಹೇಳುತ್ತಿದ್ದರು, ಅಜ್ಞಾನದ ಕಾರಣ ಹೀಗೆ ತಿಳಿಯುತ್ತಿದ್ದರು. ಈಗಂತೂ ಮಕ್ಕಳು ತಿಳಿದುಕೊಳ್ಳುತ್ತೀರಿ – ಅಜ್ಞಾನಕ್ಕೆ ವಶವಾಗಿ ತಂದೆಗೆ ಅಷ್ಟೊಂದು ತಿರಸ್ಕರಿಸುತ್ತಾರೆ. ತಮೋಪ್ರಧಾನರನ್ನು ಸತೋಪ್ರಧಾನರನ್ನಾಗಿ ಮಾಡುವವರು ಯಾರೂ ಇಲ್ಲ. ಪರಮಾತ್ಮ ಸರ್ವವ್ಯಾಪಿಯೆಂದು ಉಲ್ಟಾ ಮತ ಕೊಡುತ್ತಾರೆ. ಇದರಿಂದ ಮನುಷ್ಯರು ಎಷ್ಟೊಂದು ತಬ್ಬಿಬ್ಬಾಗುತ್ತಾರೆ! ಆದ್ದರಿಂದಲೇ ಬ್ರಹ್ಮನ ತನುವಿನಲ್ಲಿ ಪರಮಾತ್ಮನು ಬರಲು ಹೇಗೆ ಸಾಧ್ಯವೆಂದು ಹೇಳುತ್ತಾರೆ. ಅಂದಮೇಲೆ ಮತ್ತ್ಯಾರ ತನುವಿನಲ್ಲಿ ಬರುವುದು? ಕೃಷ್ಣನ ತನುವಿನಲ್ಲಿ ಬರುವುದೇ? ಅವರು ಇಲ್ಲದಿದ್ದರೆ ಬ್ರಹ್ಮಾಕುಮಾರ-ಕುಮಾರಿಯರು ಹೇಗಾಗುವಿರಿ? ಕೃಷ್ಣನ ತನುವಿನಲ್ಲಿ ಬಂದರೆ ಅವರಿಂದ ಜ್ಞಾನವನ್ನು ಕೇಳಿದವರು ದೈವೀಕುಮಾರ-ಕುಮಾರಿಯರಾಗಿ ಬಿಡುತ್ತಾರೆ. ಬ್ರಾಹ್ಮಣರಂತೂ ಅವಶ್ಯವಾಗಿ ಬ್ರಹ್ಮಾಕುಮಾರ ಮತ್ತು ಕುಮಾರಿಯರಾಗುತ್ತಾರೆ. ಬ್ರಾಹ್ಮಣರಿಲ್ಲದೆ ತಂದೆಯು ಏನನ್ನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಇವರ ಚಿತ್ರವನ್ನು ಅವಶ್ಯವಾಗಿ ಕೊಡಬೇಕಾಗಿದೆ. ಈ ಬ್ರಹ್ಮನೂ ಸಹ ಬ್ರಾಹ್ಮಣನಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ಭಾರತದಲ್ಲಿಯೇ ಬೇಕಾಗಿದೆ. ದಿನ-ಪ್ರತಿದಿನ ಮನೆಯಲ್ಲಿ ಕುಳಿತೇ ಅನೇಕರಿಗೆ ಬ್ರಹ್ಮನ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ, ವೃದ್ಧಿಯಾಗುತ್ತಿರುತ್ತದೆ. ಯಾರ ಪಾತ್ರವಿರುವುದೋ ಅವರು ಓಡೋಡಿ ಬರುತ್ತಾರೆ. ಭಗವಂತನು ಅವಶ್ಯವಾಗಿ ಯಾವುದೋ ರೂಪದಲ್ಲಿದ್ದಾರೆಂದು ಅನೇಕರು ತಿಳಿದುಕೊಳ್ಳುತ್ತಾರೆ. ಸಾಕ್ಷಾತ್ಕಾರವನ್ನೂ ಸಹ ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಮಾಡಿಸಲು ಸಾಧ್ಯವಿಲ್ಲ. ಶಿವ ತಂದೆಯು ಬ್ರಹ್ಮನ ಮುಖಾಂತರವೇ ಸ್ಥಾಪನೆ ಮಾಡುತ್ತಾರೆ, ಜ್ಞಾನವನ್ನು ಕೊಡುತ್ತಾರೆ ಮತ್ತು ಬ್ರಾಹ್ಮಣ ಧರ್ಮವನ್ನೂ ರಚಿಸುತ್ತಾರೆ. ಬ್ರಾಹ್ಮಣ ಧರ್ಮವು ಅವಶ್ಯವಾಗಿ ಬೇಕಾಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಪ್ರಜಾಪಿತ ಬ್ರಹ್ಮನೂ ಸಹ ಬಹಳ ಶ್ರೇಷ್ಠನಲ್ಲವೆ. ಅವರಿಗೆ ಎರಡನೇ ಭಗವಂತನೆಂದು ಹೇಳುತ್ತಾರೆ. ಸೂಕ್ಷ್ಮವತನದಲ್ಲಿ ಮತ್ತ್ಯಾರೂ ಇಲ್ಲ. ಬ್ರಹ್ಮನ ಮೂಲಕ ಸ್ಥಾಪನೆಯಾಗುತ್ತದೆ ಅಷ್ಟೇ. ಬ್ರಹ್ಮನೇ ನಂತರ ದೇವತೆಯಾಗುತ್ತಾರೆ, 84 ಜನ್ಮಗಳ ನಂತರ ಅವರೇ ಬ್ರಹ್ಮನಾಗುತ್ತಾರೆ. ಬ್ರಹ್ಮಾ-ಸರಸ್ವತಿಯೇ ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ಜ್ಞಾನ ಜ್ಞಾನೇಶ್ವರಿಯೇ ನಂತರ ರಾಜ ರಾಜೇಶ್ವರಿಯಾಗುತ್ತಾರೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ ಹೇಗಾದರು? ಇದು ಬಹಳಒಳ್ಳೆಯ ಮಾತಾಗಿದೆ. ಇದರ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಈ ಜ್ಞಾನವು ಒಬ್ಬ ತಂದೆಯ ಮೂಲಕ ಸಿಗುತ್ತದೆ. ಪ್ರದರ್ಶನಿಯಲ್ಲಿ ಬಹಳ ಚೆನ್ನಾಗಿ ತಿಳಿಸಿರಿ – ನೀವು ಬ್ರಹ್ಮನನ್ನು ನೋಡಿ ಏಕೆ ತಬ್ಬಿಬ್ಬಾಗುತ್ತೀರಿ! ಇಷ್ಟೇಲ್ಲಾ ಬ್ರಾಹ್ಮಣ-ಬ್ರಾಹ್ಮಣಿಯರಿದ್ದಾರೆ. ಮೊದಲು ಬ್ರಾಹ್ಮಣರಾದರು ಆದ್ದರಿಂದ ವಿಷ್ಣುಪುರಿಯ ಮಾಲೀಕ ದೇವತೆಯಾದರು. ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿಯು ಪ್ರಸಿದ್ಧವಾಗಿದೆ. ಈಗ ರಾತ್ರಿಯಾಗಿದೆ, ಹೀಗೆ ಚಿತ್ರಗಳ ಮುಂದೆ ಕುಳಿತು ಅಭ್ಯಾಸ ಮಾಡಿರಿ. ಯಾರು ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಸರ್ವೀಸಿನ ವಿನಃ ಮತ್ತ್ಯಾವುದೇ ವಿಚಾರ ಬರುವುದಿಲ್ಲ. ಸರ್ವೀಸಿಗಾಗಿ ಓಡುತ್ತಾ ಇರುತ್ತಾರೆ. ಬುದ್ಧಿಯಲ್ಲಿ ಜ್ಞಾನದ ಹನಿ ಬೀಳುತ್ತಿದ್ದು ಬುದ್ಧಿರೂಪಿ ಜೋಳಿಗೆಯು ಚೆನ್ನಾಗಿ ತುಂಬಿದಾಗಲೇ ಉಮ್ಮಂಗ ಬರುವುದು. ಸರ್ವೀಸಿಗಾಗಿ ಓಡುತ್ತಾ ಇರುತ್ತೀರಿ. ಜ್ಞಾನವಿದ್ದು ಅನ್ಯರಿಗೆ ತಿಳಿಸದೇ ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಜ್ಞಾನ ತೆಗೆದುಕೊಳ್ಳುವುದಾದರೂ ಏತಕ್ಕಾಗಿ? ತೆಗೆದುಕೊಳ್ಳುವುದೆಂದರೆ ದಾನ ಮಾಡುವುದಾಗಿದೆ. ದಾನ ಮಾಡುವುದಿಲ್ಲ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದಿಲ್ಲವೆಂದರೆ ಅವರು ಬ್ರಾಹ್ಮಣರೇನು! ಬಹಳ ಕನಿಷ್ಠ ದರ್ಜೆಯವರಾದರು. ತಂದೆಯು ನಿತ್ಯವೂ ಮಕ್ಕಳಿಗೆ ತಿಳಿಸುತ್ತಾರೆ, ಪ್ರಥಮ ದರ್ಜೆಯ ಬ್ರಾಹ್ಮಣರ ಕರ್ತವ್ಯವೇ ಇದಾಗಿದೆ – ಸರ್ವೀಸ್ ಮಾಡುವುದು. ಡಿಸ್ಸರ್ವೀಸ್ ಸಹ ಮಕ್ಕಳಿಂದಲೇ ಆಗುತ್ತದೆ. ಒಂದುವೇಳೆ ಸರ್ವೀಸ್ ಮಾಡದಿದ್ದರೆ ಅವಶ್ಯವಾಗಿ ಡಿಸ್ಸರ್ವೀಸ್ ಮಾಡುತ್ತೀರಿ. ಒಳ್ಳೊಳ್ಳೆಯ ಮಕ್ಕಳು ಎಲ್ಲಿಗೇ ಹೋದರೂ ಅವಶ್ಯವಾಗಿ ಸರ್ವೀಸ್ ಮಾಡುತ್ತಾರೆ. ಯಾವಾಗ ಜ್ಞಾನವು ಸಂಪೂರ್ಣವಾಗಿ ಬಿಡುವುದೋ ಆಗ ಅನನ್ಯ ಮಕ್ಕಳಿಂದ ಯಾವುದೇ ತಪ್ಪಾಗುವುದಿಲ್ಲ ಆಗಲೇ ಮಾಲೆಯ ಮಣಿಯಾಗುವರು. ಮುಖ್ಯವಾಗಿ 8 ಮಣಿಗಳಿವೆ, ಪರೀಕ್ಷೆಯು ಬಹಳ ದೊಡ್ಡದಾಗಿದೆಯಲ್ಲವೆ. ದೊಡ್ಡ ಪರೀಕ್ಷೆಯನ್ನು ಯಾವಾಗಲೂ ಕೆಲವರೇ ತೇರ್ಗಡೆ ಮಾಡುತ್ತಾರೆ ಏಕೆಂದರೆ ಸರ್ಕಾರವು ಅವರಿಗೆ ನೌಕರಿ ಕೊಡಬೇಕಾಗುತ್ತದೆ. ತಂದೆಯೂ ಸಹ ಇಲ್ಲಿ ವಿಶ್ವದ ಮಾಲೀಕರನ್ನಾಗಿ ಮಾಡಬೇಕಾಗುತ್ತದೆ ಆದ್ದರಿಂದ ಈ ಪರೀಕ್ಷೆಯಲ್ಲಿ ಕೆಲವರು ತೇರ್ಗಡೆಯಾಗುತ್ತಾರೆ, ಪ್ರಜೆಗಳಂತೂ ಲಕ್ಷಾಂತರ ಮಂದಿಯಾಗುತ್ತಾರೆ ಆದ್ದರಿಂದ ತಂದೆಯು ಕೇಳುತ್ತಾರೆ – ಮಹಾರಾಜರಾಗುತ್ತೀರೋ ಅಥವಾ ಪ್ರಜೆಗಳಲ್ಲಿ ಸಾಹುಕಾರರಾಗುತ್ತೀರೋ? ಇಲ್ಲವೆ ಬಡವರಾಗುತ್ತೀರೋ? ಹೇಳಿರಿ – ಏನಾಗುತ್ತೀರಿ? ಮಹಾರಾಜರ ಬಳಿ ದಾಸ-ದಾಸಿಯರಂತೂ ಅನೇಕರಿರುತ್ತಾರೆ ಮತ್ತು ವರದಕ್ಷಿಣೆಯಾಗಿಯೂ ದಾಸಿಯರನ್ನು ಕಳುಹಿಸುತ್ತಾರೆ. ಪುರುಷಾರ್ಥ ಮಾಡಿ ಒಳ್ಳೆಯ ಪದವಿಯನ್ನು ಪಡೆಯಬೇಕು. ನಿಮಂತ್ರಣ ಕೊಡುವಷ್ಟು ಬುದ್ಧಿವಂತರಾಗಬೇಕು. ಕೆಲವರನ್ನೇ ಭಾಷಣಕ್ಕಾಗಿ ಕರೆಯುತ್ತಾರೆ, ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಬಾಕಿ ಯಾರಲ್ಲಿ ಲಕ್ಷಣಗಳಿಲ್ಲವೋ ಅವರನ್ನು ಯಾರೂ ಕರೆಸುವುದಿಲ್ಲ. ಆದರೆ ನಾವು ಅಷ್ಟು ಕನಿಷ್ಠರಾಗಿದ್ದೇವೆ ಎಂಬುದು ಸ್ವಯಂಗೆ ಅರ್ಥವಾಗುತ್ತದೆಯೇ? ಕೆಲವರಂತೂ ಒಳ್ಳೆಯ ಸೇವಾಧಾರಿಗಳಿದ್ದಾರೆ. ಎಲ್ಲಿ ನೋಡಿದರಲ್ಲಿ ಸರ್ವೀಸಿಗಾಗಿ ಹೋಗುತ್ತಾರೆ. ನೌಕರಿಯ ವಿಚಾರವನ್ನೂ ಮಾಡದೆ ಸೇವೆಗೆ ಓಡುತ್ತಾರೆ. ಕೆಲವರು ನೌಕರಿಯಿಲ್ಲದಿದ್ದರೂ ಸಹ ಸರ್ವೀಸ್ ಮಾಡುವುದಿಲ್ಲ, ಉಮ್ಮಂಗವಿಲ್ಲ ಅಂದರೆ ಅದೃಷ್ಟದಲ್ಲಿಲ್ಲ ಅಥವಾ ಗ್ರಹಚಾರಿಯಿದೆ ಎಂದರ್ಥ. ಸರ್ವೀಸ್ ಬಹಳಷ್ಟಿದೆ, ಪರಿಶ್ರಮವೂ ಪಡಬೇಕಾಗುತ್ತದೆ. ಸುಸ್ತಾಗುತ್ತ, ತಿಳಿಸುತ್ತಾ-ತಿಳಿಸುತ್ತಾ ಗಂಟಲು ಕಟ್ಟುತ್ತದೆ, ಪುರುಷಾರ್ಥಿಗಳ ಗಂಟಲೂ ಕಟ್ಟುತ್ತದೆಯೆಂದರೆ ಬಹಳ ಚೆನ್ನಾಗಿ ಸರ್ವೀಸ್ ಮಾಡಿದರು ಎಂದಲ್ಲ. ಬಹಳ ರಾಯಲ್ ಸರ್ವೀಸ್ ಮಾಡುವವರು ಯಾರು ಎಂದು ತಂದೆಗೆ ಗೊತ್ತಿದೆ ಆದರೆ ಕೆಲವರಲ್ಲಿ ಬಲಹೀನತೆಗಳೂ ಇರುತ್ತವೆ, ನಾಮ-ರೂಪದಲ್ಲಿ ಸಿಲುಕುತ್ತಾ ಇರುತ್ತಾರೆ ಮತ್ತೆ ಶಿಕ್ಷಣವನ್ನು ಕೊಟ್ಟು ಸುಧಾರಣೆ ಮಾಡಲಾಗುತ್ತದೆ. ನಾಮ-ರೂಪದಲ್ಲಿ ಎಂದೂ ಸಿಲುಕಬಾರದು, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಆತ್ಮವು ಚಿಕ್ಕ ಬಿಂದುವಾಗಿದೆ. ತಂದೆಯೂ ಬಿಂದುವಾಗಿದ್ದಾರೆ. ತನ್ನನ್ನು ಚಿಕ್ಕ ಬಿಂದುವೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಬಹಳ ಪರಿಶ್ರಮವಿದೆ. ಬಾಬಾ, ನಾವು ನಿಮ್ಮನ್ನು ಬಹಳ ನೆನಪು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಬುದ್ಧಿಯಲ್ಲಿ ಆಕ್ಯೂರೇಟ್ ನೆನಪಿರಬೇಕಾಗಿದೆ. ಬಹಳ ಧೈರ್ಯ ಹಾಗೂ ಗಂಭೀರತೆಯಿಂದ ನೆನಪು ಮಾಡಬೇಕಾಗಿದೆ. ಈ ರೀತಿ ನೆನಪು ಮಾಡುವವರು ಕೆಲವರೇ ವಿರಳ. ಇದರಲ್ಲಿ ಬಹಳ ಪರಿಶ್ರಮವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಮ್ಮ ಜೋಳಿಗೆಯನ್ನು ಜ್ಞಾನರತ್ನಗಳಿಂದ ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಇದೇ ಕರ್ತವ್ಯದಲ್ಲಿ ತತ್ಫರರಾಗಿದ್ದು ಫಸ್ಟ್ಕ್ಲಾಸ್ ಬ್ರಾಹ್ಮಣರಾಗಬೇಕಾಗಿದೆ.

2. ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಅನ್ಯರ ಭಾವನೆಯನ್ನು ಕೆಡಿಸುವುದು, ಉಲ್ಟಾ ಮತ ಕೊಡುವುದು, ಇಂತಹ ಅಕಲ್ಯಾಣದ ಕರ್ತವ್ಯವನ್ನು ಎಂದೂ ಮಾಡಬಾರದು.

ವರದಾನ:-

ಹೇಗೆ ಶರೀರ ನಿರ್ವಹಣೆಗಾಗಿ ಅನೇಕ ಸಾಧನಗಳನ್ನು ಉಪಯೋಗಿಸುತ್ತೀರಿ, ಹಾಗೆಯೇ ಆತ್ಮಿಕ ಉನ್ನತಿಗಾಗಿಯೂ ಸಾಧನವನ್ನು ಉಪಯೋಗಿಸಿರಿ. ಇದಕ್ಕಾಗಿ ಸದಾ ಅಕಾಲಮೂರ್ತಿ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸ ಮಾಡಿರಿ. ಸ್ವಯಂನ್ನು ಅಕಾಲಮೂರ್ತಿ ಎಂದು ತಿಳಿದುಕೊಂಡು ನಡೆಯುವವರು ಅಕಾಲಮೃತ್ಯುವಿನಿಂದ, ಅಕಾಲದಿಂದ, ಸರ್ವ ಸಮಸ್ಯೆಗಳಿಂದ ಪಾರಾಗಿ ಬಿಡುತ್ತಾರೆ. ಮಾನಸಿಕ ಚಿಂತೆಗಳು, ಮಾನಸಿಕ ಪರಿಸ್ಥಿತಿಗಳನ್ನು ದೂರಗೊಳಿಸುವುದಕ್ಕಾಗಿ – ಕೇವಲ ತಮ್ಮ ಹಳೆಯ ಶರೀರದ ಪರಿವೆಯನ್ನು ಅಳಿಸುತ್ತಾ ಸಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top