04 August 2021 KANNADA Murli Today | Brahma Kumaris

Read and Listen today’s Gyan Murli in Kannada

August 3, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೆನಪಿನಲ್ಲಿರುವುದರಿಂದ ಒಳ್ಳೆಯ ದೆಶೆ ಕುಳಿತುಕೊಳ್ಳುತ್ತದೆ, ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ ಆದ್ದರಿಂದ ನಿಮ್ಮದು ಏರುವ ಕಲೆಯಾಗಿದೆ”

ಪ್ರಶ್ನೆ:: -

ಒಂದುವೇಳೆ ಯೋಗದ ಮೇಲೆ ಪೂರ್ಣ ಗಮನವಿಲ್ಲವೆಂದರೆ ಅದರ ಫಲಿತಾಂಶವೇನಾಗುತ್ತದೆ? ನಿರಂತರ ನೆನಪಿನಲ್ಲಿರುವ ಯುಕ್ತಿ ಏನಾಗಿದೆ?

ಉತ್ತರ:-

1. ಒಂದುವೇಳೆ ಯೋಗದ ಮೇಲೆ ಪೂರ್ಣ ಗಮನವಿಲ್ಲದಿದ್ದರೆ ನಡೆಯುತ್ತಾ-ನಡೆಯುತ್ತಾ ಮಾಯೆಯ ಪ್ರವೇಶತೆ ಆಗಿ ಬಿಡುತ್ತದೆ, ಬಿದ್ದು ಹೋಗುತ್ತಾರೆ. 2. ದೇಹಾಭಿಮಾನಿಗಳಾಗಿ ಅನೇಕ ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ. ಮಾಯೆಯು ಉಲ್ಟಾ ಕರ್ಮ ಮಾಡಿಸುತ್ತಾ ಇರುತ್ತದೆ, ಪತಿತರನ್ನಾಗಿ ಮಾಡಿಬಿಡುತ್ತದೆ. ನಿರಂತರ ನೆನಪಿನಲ್ಲಿರಲು ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿ, ಕ್ರೋಧ ಮಾಡಬೇಡಿ. ದೇಹ ಸಹಿತ ಎಲ್ಲವನ್ನೂ ಮರೆತು ನಾನಾತ್ಮ, ಪರಮಾತ್ಮನ ಮಗುವಾಗಿದ್ದೇನೆ ಎಂಬ ಅಭ್ಯಾಸ ಮಾಡಿರಿ, ಯೋಗಬಲದಿಂದ ಯಾವ-ಯಾವ ಪ್ರಾಪ್ತಿಗಳಾಗುತ್ತವೆ, ಅವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ಆತ್ಮಿಕ ತಂದೆ ಶಿವ ಬಾಬಾರವರ ಮಹಿಮೆಯನ್ನು ಕೇಳಿದಿರಿ. ಯಾವಾಗ ಪಾಪವು ಹೆಚ್ಚುವುದೋ ಅರ್ಥಾತ್ ಮನುಷ್ಯರು ಪಾಪಾತ್ಮರಾಗಿ ಬಿಡುವರೋ ಆಗಲೇ ಪತಿತ-ಪಾವನ ತಂದೆಯು ಬರುತ್ತಾರೆ. ತಂದೆಯು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಆ ಬೇಹದ್ದಿನ ತಂದೆಗೆ ಮಹಿಮೆಯಿದೆ, ಅವರಿಗೆ ವೃಕ್ಷಪತಿಯೆಂತಲೂ ಹೇಳಲಾಗುತ್ತದೆ. ಈ ಸಮಯದಲ್ಲಿ ಬೇಹದ್ದಿನ ತಂದೆಯ ನೆನಪು, ಬೇಹದ್ದಿನ ಬೃಹಸ್ಪತಿ ದೆಶೆಯು ನಿಮ್ಮ ಮೇಲೆ ಕುಳಿತುಕೊಂಡಿದೆ. ವಿಶೇಷವಾಗಿ ಎರಡು ಶಬ್ಧಗಳಿರುತ್ತವೆ ಅಲ್ಲವೆ. ಇದರ ಅರ್ಥವೂ ಸಹ ಇಲ್ಲಿಯೇ ಸಿದ್ಧವಾಗುತ್ತದೆ, ಬೃಹಸ್ಪತಿ ದೆಶೆಯಿಂದ ವಿಶೇಷವಾಗಿ ಭಾರತವು ಜೀವನ್ಮುಕ್ತನಾಗುತ್ತದೆ ಅರ್ಥಾತ್ ತನ್ನ ಸ್ವರಾಜ್ಯ ಪದವಿಯನ್ನು ಪಡೆಯುತ್ತೀರಿ ಏಕೆಂದರೆ ಯಾವ ತಂದೆಗೆ ಸತ್ಯವೆಂದು ಹೇಳುತ್ತಾರೆಯೋ ಅವರೇ ಬಂದು ನಿಮ್ಮನ್ನು ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಬಾಕಿ ಯಾರೆಲ್ಲರೂ ಇದ್ದಾರೆಯೋ ಅವರು ನಂಬರ್ವಾರ್ ತಮ್ಮ ತಮ್ಮ ಧರ್ಮದ ವಿಭಾಗದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಮತ್ತು ನಂಬರ್ವಾರ್ ಆಗಿ ಬರುತ್ತಾರೆ. ಕಲಿಯುಗದ ಅಂತ್ಯದವರೆಗೂ ಬರುತ್ತಾ ಇರುತ್ತಾರೆ. ಪ್ರತಿಯೊಂದು ಆತ್ಮನಿಗೆ ತನ್ನ-ತನ್ನ ಧರ್ಮದಲ್ಲಿ ತನ್ನ-ತನ್ನದೇ ಆದ ಪಾತ್ರವು ಸಿಕ್ಕಿದೆ. ರಾಜ್ಯದಲ್ಲಿ ರಾಜನಿಂದ ಹಿಡಿದು ಪ್ರಜೆಗಳವರೆಗೆ ಎಲ್ಲರಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ನಾಟಕವಿರುವುದೇ ರಾಜನಿಂದ ಹಿಡಿದು ಪ್ರಜೆಯ ತನಕ. ಎಲ್ಲರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸಲಾಗುತ್ತದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಒಂದೇ ದಿನ ಕುಳಿತುಕೊಳ್ಳುತ್ತದೆಯೆಂದಲ್ಲ. ನಿಮ್ಮ ಬೃಹಸ್ಪತಿ ದೆಶೆಯು ನಡೆಯುತ್ತಿದೆ. ಈಗ ನಿಮ್ಮದು ಏರುವ ಕಲೆಯಾಗಿದೆ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ಏರುವಕಲೆಯಾಗುವುದು. ನೆನಪನ್ನು ಮರೆಯುವುದರಿಂದ ಮಾಯೆಯು ವಿಘ್ನಗಳು ಬರುತ್ತವೆ. ನೆನಪಿನಿಂದ ಒಳ್ಳೆಯ ದೆಶೆ ಕುಳಿತುಕೊಳ್ಳುತ್ತದೆ. ಚೆನ್ನಾಗಿ ನೆನಪು ಮಾಡದಿದ್ದರೆ ಅವಶ್ಯವಾಗಿ ಬೀಳುವರು ಮತ್ತೆ ಅವರಿಂದ ಒಂದಲ್ಲ ಒಂದು ತಪ್ಪುಗಳಾಗುವವು. ತಂದೆಯು ತಿಳಿಸುತ್ತಾರೆ – ಡ್ರಾಮಾನುಸಾರ ಯಾವುದೆಲ್ಲಾ ಧರ್ಮದವರಿದ್ದಾರೆಯೋ ಒಬ್ಬರು ಇನ್ನೊಬ್ಬರ ಹಿಂದೆ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಮಕ್ಕಳಿಗೆ ತಿಳಿದಿದೆ- ಸ್ವರ್ಗದ ದೆಶೆ ಅರ್ಥಾತ್ ಜೀವನ್ಮುಕ್ತಿಯ ದೆಶೆಯು ಈಗ ನಮ್ಮಮೇಲೆ ಕುಳಿತುಕೊಂಡಿದೆ. ಈ ಡ್ರಾಮಾದ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನೂ ಸಹ ವಿವರವಾಗಿ ತಿಳಿದುಕೊಳ್ಳಬೇಕಾಗಿದೆ. ಈ ಸೃಷ್ಟಿನಾಟಕದ ಚಕ್ರವು ವಿಶೇಷವಾಗಿ ಭಾರತದ ಮೇಲೆ ಮಾಡಲ್ಪಟ್ಟಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಗಾಯನವಿದೆ – ಆಶ್ಚರ್ಯವೆನಿಸುವಂತೆ ಕೇಳಿ, ಹೇಳಿ ನಡೆಯುತ್ತಾ ಮತ್ತೆ ಬಿಟ್ಟು ಹೋಗುವರು…. ನಡೆಯುತ್ತಾ-ನಡೆಯುತ್ತಾ ಮಾಯೆಯು ಪ್ರವೇಶತೆ ಆಗುವ ಕಾರಣ ಕೆಳಗೆ ಬೀಳುತ್ತಾರೆ. ಯೋಗದ ಮೇಲೆ ಪೂರ್ಣ ಗಮನ ಕೊಡುವುದಿಲ್ಲ, ಮತ್ತೆ ತಂದೆಯು ಬಂದು ಸಂಜೀವಿನ ಮೂಲಿಕೆಯನ್ನು ಕೊಡುತ್ತಾರೆ ಅರ್ಥಾತ್ ಮೂರ್ಛಿತರಾದವರನ್ನು ಎಚ್ಚರಿಸುವಂತಹ ಮೂಲಿಕೆಯನ್ನು ಕೊಡುತ್ತಾರೆ. ಹನುಮಂತನೂ ನೀವೇ ಆಗಿದ್ದೀರಿ, ತಂದೆಯು ತಿಳಿಸಿದ್ದಾರೆ – ಈ ಸಮಯದಲ್ಲಿ ರಾವಣನನ್ನು ಓಡಿಸುವುದಕ್ಕಾಗಿ ಈ ಮೂಲಿಕೆಯನ್ನು ಕೊಡುತ್ತೇನೆ. ನಿಮಗೆ ಎಲ್ಲವೂ ಸತ್ಯವಾದ ಮಾತುಗಳನ್ನು ತಿಳಿಸುತ್ತೇನೆ. ಒಬ್ಬ ತಂದೆಯೇ ಸತ್ಯವಾಗಿದ್ದಾಗ ಅವರೇ ಬಂದು ಸತ್ಯ ನಾರಾಯಣನ ಕಥೆಯನ್ನು ತಿಳಿಸಿ ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಇವರಿಗೇ ಸತ್ಯವಂತ, ಸತ್ಯವನ್ನು ಹೇಳುವವರೆಂದು ಹೇಳಲಾಗುತ್ತದೆ. ನಿಮ್ಮನ್ನು ಕೇಳುತ್ತಾರೆ – ನೀವು ಶಾಸ್ತ್ರಗಳನ್ನು ನಂಬುತ್ತೀರಾ? ಆಗ ತಿಳಿಸಿರಿ – ಹೌದು, ನಾವು ಶಾಸ್ತ್ರಗಳನ್ನು ಏಕೆ ನಂಬುವುದಿಲ್ಲ. ನಮಗೆ ತಿಳಿದಿದೆ – ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ, ಇವನ್ನು ನಾವು ನಂಬುತ್ತೇವೆ. ಜ್ಞಾನ ಮತ್ತು ಭಕ್ತಿ ಎರಡು ಮಾತುಗಳಿವೆ. ಈಗ ಜ್ಞಾನ ಸಿಗುತ್ತದೆಯೆಂದ ಮೇಲೆ ಭಕ್ತಿಯ ಅವಶ್ಯಕತೆಯೇನಿದೆ! ಭಕ್ತಿಯೆಂದರೆ ಇಳಿಯುವ ಕಲೆ. ಜ್ಞಾನವೆಂದರೆ ಏರುವ ಕಲೆ. ಈ ಸಮಯದಲ್ಲಿ ಭಕ್ತಿಯು ನಡೆಯುತ್ತಿದೆ, ಈಗ ನಮಗೆ ಜ್ಞಾನ ಸಿಕ್ಕಿದೆ ಇದರಿಂದ ಸದ್ಗತಿಯಾಗುತ್ತದೆ. ಭಕ್ತರ ರಕ್ಷಣೆ ಮಾಡುವವರು ಒಬ್ಬರೇ ಭಗವಂತನಾಗಿದ್ದಾರೆ. ಶತ್ರುವಿನಿಂದ ರಕ್ಷಣೆ ಮಾಡಲಾಗುತ್ತದೆಯಲ್ಲವೆ. ತಂದೆಯು ಹೇಳುತ್ತಾರೆ – ನಾನು ಬಂದು ರಾವಣನಿಂದ ನಿಮ್ಮ ರಕ್ಷಣೆ ಮಾಡುತ್ತೇನೆ. ರಾವಣನಿಂದ ಹೇಗೆ ರಕ್ಷಣೆಯಾಗುತ್ತದೆ ಎಂಬುದನ್ನು ನೋಡುತ್ತೀರಲ್ಲವೆ. ಈ ರಾವಣನ ಮೇಲೆ ಜಯ ಗಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಈ ರಾವಣನು ನಿಮ್ಮನ್ನು ತಮೋಪ್ರಧಾನರನ್ನಾಗಿ ಮಾಡಿದ್ದಾನೆ, ಸತ್ಯಯುಗಕ್ಕೆ ಸತೋಪ್ರಧಾನ ಸ್ವರ್ಗವೆಂದು ಹೇಳಲಾಗುತ್ತದೆ. ಮತ್ತೆ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಂತ್ಯದಲ್ಲಿ ಯಾವಾಗ ಸಂಪೂರ್ಣ ದೇಹಾಭಿಮಾನದಲ್ಲಿ ಬಂದು ಬಿಡುವರೋ ಆಗ ಪತಿತರಾಗುತ್ತಾರೆ. ಹೇಗೆ ಹೊಸ ಮನೆಯು ತಯಾರಾದ ಮೇಲೆ ಒಂದು ತಿಂಗಳಿನ ನಂತರ ಅಥವಾ ಆರು ತಿಂಗಳಿನ ನಂತರ ಒಂದಲ್ಲ ಒಂದು ಪರಿವರ್ತನೆ ಆಗಿ ಬಿಡುತ್ತದೆ. ಪ್ರತೀ ವರ್ಷ ಮನೆಗೆ ಸುಣ್ಣ ಬಣ್ಣವನ್ನು ಬಳಿಯುತ್ತಾರೆ. ಕಲೆಯಂತೂ ಕಡಿಮೆಯಾಗುತ್ತದೆಯಲ್ಲವೆ. ಹೊಸದರಿಂದ ಹಳೆಯದು, ಹಳೆಯದರಿಂದ ಮತ್ತೆ ಹೊಸದು, ಇದು ಆರಂಭದಿಂದ ಹಿಡಿದು ಪ್ರತಿಯೊಂದು ವಸ್ತುವಿನದೂ ಇದೇ ರೀತಿ ಆಗುತ್ತಾ ಬಂದಿದೆ. ಈ ಮನೆಯು 100 ವರ್ಷ, 150 ವರ್ಷದವರೆಗೆ ನಡೆಯುವುದೆಂದು ತಿಳಿದುಕೊಳ್ಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಹೊಸ ಪ್ರಪಂಚಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ ಮತ್ತೆ ತ್ರೇತಾಯುಗಕ್ಕೆ 25% ಕಡಿಮೆಯೆಂದು ಹೇಳಬಹುದು ಏಕೆಂದರೆ ಸ್ವಲ್ಪ ಹಳೆಯದಾಗುತ್ತದೆ, ಅವರು ಚಂದ್ರವಂಶಿಯರಾಗಿರುತ್ತಾರೆ. ಅವರಿಗೆ ಕ್ಷತ್ರಿಯರ ಚಿಹ್ನೆಗಳನ್ನು ತೋರಿಸುತ್ತಾರೆ ಏಕೆಂದರೆ ಹೊಸ ಪ್ರಪಂಚಕ್ಕೆ ಯೋಗ್ಯರಲ್ಲ ಆದ್ದರಿಂದ ಸೂರ್ಯವಂಶಿಯರಿಗಿಂತ ಕಡಿಮೆ ಪದವಿಯವರಾದರು. ಕೃಷ್ಣಪುರಿಯಲ್ಲಿ ಹೋಗಬೇಕೆಂದು ಎಲ್ಲರೂ ಬಯಸುತ್ತಾರೆ, ರಾಮ ಪುರಿಯಲ್ಲಿ ಹೋಗಬೇಕೆಂದು ಹೇಳುವುದಿಲ್ಲ. ಎಲ್ಲರೂ ಕೃಷ್ಣಪುರಿಗಾಗಿಯೇ ಹೇಳುತ್ತಾರೆ. ಬೃಂದಾವನಕ್ಕೆ ನಡೆಯಿರಿ….. ಎಂದು ಗಾಯನವಿದೆಯಲ್ಲವೆ. ಬೃಂದಾವನದ ಮಾತಿದೆ. ಅಯೋಧ್ಯೆಗೆ ಹೇಳುವುದಿಲ್ಲ. ಶ್ರೀಕೃಷ್ಣನ ಮೇಲೆ ಎಲ್ಲರಿಗೆ ಪ್ರೀತಿಯಿರುತ್ತದೆ, ಕೃಷ್ಣನನ್ನು ಬಹಳ ಪ್ರೀತಿಯಿಂದ ನೆನಪು ಮಾಡುತ್ತಾರೆ, ಕೃಷ್ಣನನ್ನು ನೋಡುತ್ತಾರೆಂದರೆ ಕೃಷ್ಣನಂತಹ ಪತಿ ಸಿಗಲಿ, ಕೃಷ್ಣನಂತಹ ಮಗುವಾಗಲಿ, ಇಂತಹ ಸಹೋದರ ಸಿಗಲಿ ಎಂದು ಹೇಳುತ್ತಾರೆ. ಬುದ್ಧಿವಂತ ಕನ್ಯೆಯರು ಕೃಷ್ಣನ ಮೂರ್ತಿಯನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ – ಇವರಂತಹ ಮಗುವಾಗಲಿ. ಕೃಷ್ಣನ ಪ್ರೀತಿಯಲ್ಲಿ ಬಹಳ ಇರುತ್ತಾರಲ್ಲವೆ. ಕೃಷ್ಣಪುರಿಯನ್ನು ಎಲ್ಲರೂ ಬಯಸುತ್ತಾರೆ. ಈಗಂತೂ ಕಂಸಪುರಿ, ರಾವಣನ ಪುರಿಯಾಗಿದೆ. ಕೃಷ್ಣಪುರಿಗೆ ಬಹಳ ಮಹತ್ವಿಕೆಯಿದೆ, ಕೃಷ್ಣನನ್ನು ಎಲ್ಲರೂ ನೆನಪು ಮಾಡುತ್ತಾರೆ. ಆದ್ದರಿಂದಲೇ ತಂದೆಯು ಹೇಳುತ್ತಾರೆ – ನೀವು ಇಷ್ಟು ಸಮಯ ನೆನಪು ಮಾಡುತ್ತಾ ಬಂದಿದ್ದೀರಿ, ಈಗ ಕೃಷ್ಣ ಪುರಿಯಲ್ಲಿ ಹೋಗುವ ಪುರುಷಾರ್ಥ ಮಾಡಿರಿ, ಇವರ ಮನೆತನದಲ್ಲಿ ಬನ್ನಿರಿ. ಸೂರ್ಯವಂಶಿಯರಿಗೆ 8 ಮನೆತನಗಳಿವೆ ಅಂದಮೇಲೆ ರಾಜಧಾನಿಯಲ್ಲಿ ರಾಜಕುಮಾರರೊಂದಿಗೆ ಉಯ್ಯಾಲೆಯಲ್ಲಿ ತೂಗುವಂತಹ ಪುರುಷಾರ್ಥ ಮಾಡಿರಿ. ಇದು ತಿಳುವಳಿಕೆಯ ಮಾತಲ್ಲವೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಎಷ್ಟು ಸಾಧ್ಯವೊ ಮನ್ಮಾನಭವ ಆಗಿರಿ. ನೆನಪಿನಲ್ಲಿ ಇಲ್ಲದಿದ್ದರೆ ಕೆಳಗೆ ಬೀಳುತ್ತಾರೆ. ಜ್ಞಾನವೆಂದೂ ಬೀಳಿಸುವುದಿಲ್ಲ. ನೆನಪಿನಲ್ಲಿರದಿದ್ದರೆ ಕೆಳಗೆ ಬೀಳುತ್ತಾರೆ. ಇದರಮೇಲೆ ಅಲ್ಲಾ ಅವಲುದ್ದೀನ್, ಹಾತಂ ತಾಯಿಯ ನಾಟಕಗಳೂ ರಚಿಸಲ್ಪಟ್ಟಿವೆ. ನೆನಪಿನಲ್ಲಿರುವುದಕ್ಕಾಗಿ ಬಾಯಲ್ಲಿ ಉಂಗುರವನ್ನು ಹಾಕಿ ಬಿಡುತ್ತಿದ್ದರು. ಯಾರಿಗಾದರೂ ಕ್ರೋಧ ಬರುತ್ತದೆಯೆಂದರೆ ಮಾತನಾಡಿಬಿಡುತ್ತಾರೆ. ಆದ್ದರಿಂದ ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಮಾತನಾಡದಿದ್ದರೆ ಕ್ರೋಧ ಬರುವುದಿಲ್ಲ, ತಂದೆಯು ತಿಳಿಸುತ್ತಾರೆ – ಎಂದೂ ಯಾರಮೇಲೂ ಕ್ರೋಧ ಮಾಡಬೇಡಿರಿ. ಆದರೆ ಈ ಮಾತುಗಳನ್ನು ಪೂರ್ಣ ಅರಿತುಕೊಳ್ಳದೇ ಶಾಸ್ತ್ರಗಳನ್ನು ಏನೇನನ್ನೋ ಬರೆದು ಬಿಟ್ಟಿದ್ದಾರೆ. ತಂದೆಯು ಯಥಾರ್ಥವಾಗಿ ಕುಳಿತು ತಿಳಿಸುತ್ತಾರೆ. ತಂದೆಯೂ ಭೂಮಿಗೆ ಬಂದಾಗಲೇ ತಿಳಿಸುವರು. ಯಾರು ಬಂದು ಹೋಗುವರೋ ಅವರ ಮಹಿಮೆಯನ್ನು ಹಾಡಲಾಗುತ್ತದೆ. ಠಾಗೂರ್, ಝಾನ್ಸಿ ರಾಣಿ ಇದ್ದು ಹೋದರು ನಂತರ ಅವರ ನಾಟಕಗಳನ್ನು ರಚಿಸಿದ್ದಾರೆ. ಒಳ್ಳೆಯದು – ಶಿವನೂ ಸಹ ಬಂದು ಹೋಗಿದ್ದಾರೆ ಆದ್ದರಿಂದಲೇ ಶಿವ ಜಯಂತಿಯನ್ನು ಆಚರಿಸುತ್ತಾರಲ್ಲವೆ. ಆದರೆ ಶಿವನು ಯಾವಾಗ ಬಂದರು, ಬಂದು ಏನು ಮಾಡಿದರು ಎಂಬುದನ್ನು ತಿಳಿದುಕೊಂಡಿಲ್ಲ. ಅವರಂತೂ ಇಡೀ ಸೃಷ್ಟಿಯ ತಂದೆಯಾಗಿದ್ದಾರೆ ಅಂದಮೇಲೆ ಬಂದು ಎಲ್ಲರಿಗೂ ಅವಶ್ಯವಾಗಿ ಸದ್ಗತಿಯನ್ನೂ ನೀಡಿರುವರು. ಇಸ್ಲಾಮಿ, ಬೌದ್ಧಿ ಮೊದಲಾದ ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡಿ ಹೋಗಿದ್ದಾರೆಯೋ ಅವರ ಜಯಂತಿಯನ್ನು ಆಚರಿಸುತ್ತಾರೆ. ಎಲ್ಲರ ತಿಥಿ-ತಾರೀಖು ಇದೆ. ಆದರೆ ಶಿವನ ಬಗ್ಗೆ ಯಾರಿಗೂ ತಿಳಿದಿಲ್ಲ. ಕ್ರಿಸ್ತನಿಗೆ ಇಷ್ಟು ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಎಂದು ಹೇಳುತ್ತಾರೆ. ಸ್ವಸ್ತಿಕ್ ಚಿತ್ರವನ್ನು ಬಿಡಿಸುವಾಗ ಅದರಲ್ಲಿ ಪೂರ್ಣ ನಾಲ್ಕು ಭಾಗಗಳನ್ನು ಮಾಡಿದ್ದಾರೆ ಅಂದರೆ ನಾಲ್ಕು ಯುಗಗಳಿವೆ. ಆಯಸ್ಸು ಹೆಚ್ಚು ಕಡಿಮೆಯಾಗಲು ಸಾಧ್ಯವಿಲ್ಲ. ಜಗನ್ನಾಥಪುರಿಯಲ್ಲಿ ಅನ್ನದ ನೈವೇದ್ಯವನ್ನು ತಯಾರಿಸುತ್ತಾರೆ, ಅದರಿಂದ ಪೂರ್ಣ ನಾಲ್ಕು ಭಾಗಗಳಾಗಿ ಬಿಡುತ್ತವೆ. ತಂದೆಯು ತಿಳಿಸುತ್ತಾರೆ – ಭಕ್ತಿ ಮಾರ್ಗದಲ್ಲಿ ಎಲ್ಲಾ ಗೊಂದಲ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮಕ್ಕಳೇ, ದೇಹ ಸಹಿತ ಎಲ್ಲವನ್ನೂ ಮರೆತು ಹೋಗಿ. ನಾನಾತ್ಮನಾಗಿದ್ದೇನೆ, ಪರಮಪಿತ ಪರಮಾತ್ಮನ ಮಗುವಾಗಿದ್ದೇನೆ, ಈ ಅಭ್ಯಾಸವನ್ನು ಇಟ್ಟುಕೊಳ್ಳಿ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅಂದಮೇಲೆ ಅವಶ್ಯವಾಗಿ ನಮ್ಮನ್ನು ಸ್ವರ್ಗದಲ್ಲಿ ಕಳುಹಿಸಿರಬೇಕು. ನರಕದಲ್ಲಂತೂ ಕಳುಹಿಸುವುದಿಲ್ಲ, ತಂದೆಯು ಯಾರನ್ನೂ ನರಕದಲ್ಲಿ ಕಳುಹಿಸುವುದಿಲ್ಲ. ಮೊಟ್ಟ ಮೊದಲು ಎಲ್ಲರೂ ಸುಖವನ್ನು ಅನುಭವಿಸುತ್ತಾರೆ. ಮೊದಲು ಸುಖ ನಂತರ ದುಃಖ, ತಂದೆಯು ಎಲ್ಲರ ದುಃಖಹರ್ತ, ಸುಖಕರ್ತನಲ್ಲವೆ. ಆತ್ಮವು ಮೊದಲು ಸುಖ ನಂತರ ದುಃಖವನ್ನು ನೋಡುತ್ತದೆ. ವಿವೇಕವೂ ಹೇಳುತ್ತದೆ – ನಾವು ಮೊದಲು ಸತೋಪ್ರಧಾನರು ನಂತರ ಸತೋ, ರಜೋ, ತಮೋದಲ್ಲಿ ಬರುತ್ತೇವೆ. ಮನುಷ್ಯರೂ ಸಹ ತಿಳಿದುಕೊಳ್ಳುತ್ತಾರೆ – ವಿದೇಶದವರು ಬುದ್ಧಿವಂತರಾಗಿದ್ದಾರೆ. ಅಲ್ಲಂತೂ ಇಂತಹ ಬಾಂಬುಗಳನ್ನು ತಯಾರಿಸುತ್ತಾರೆ ಬಹು ಬೇಗನೆ ಎಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಹೇಗೆ ಇತ್ತೀಚೆಗೆ ಶವವನ್ನು ವಿದ್ಯುತ್ನಿಂದ ಕೂಡಲೇ ಸಮಾಪ್ತಿ ಮಾಡಿ ಬಿಡುತ್ತಾರೆ. ಹಾಗೆಯೇ ಬಾಂಬುಗಳಿಂದ ಬೆಂಕಿಯು ಹತ್ತಿಕೊಂಡರೆ ಮನುಷ್ಯರೂ ಸಹ ಬಹುಬೇಗ ಸಮಾಪ್ತಿಯಾಗಿ ಬಿಡುತ್ತಾರೆ. ಈ ಬಿದುರಿನ ಕಾಡಿಗೆ ಬೆಂಕಿ ಬೀಳಲಿದೆ. ಬಿರುಗಾಳಿಗಳು ಈ ರೀತಿ ಬರುತ್ತವೆ, ಹಳ್ಳಿ-ಹಳ್ಳಿಗಳು ಸಮಾಪ್ತಿಯಾಗುತ್ತವೆ. ಆ ಸಮಯದಲ್ಲಿ ಅವರನ್ನು ಪಾರು ಮಾಡಲು ಮತ್ತ್ಯಾವುದೇ ಪ್ರಬಂಧವಿರುವುದಿಲ್ಲ, ವಿನಾಶವಾಗಲೇಬೇಕಾಗಿದೆ. ಹಳೆಯ ಪ್ರಪಂಚವು ಸಮಾಪ್ತಿಯಾಗುವುದು ಗೀತೆಯಲ್ಲಿಯೂ ವರ್ಣನೆಯಿದೆ. ತಂದೆಯು ತಿಳಿಸಿದರು – ಯುರೋಪಿಯನ್ನರು ಈ ರೀತಿ ಬಾಂಬುಗಳನ್ನು ಹಾಕುತ್ತಾರೆ ಅದು ತಿಳಿಯುವುದೇ ಇಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಕಲ್ಪದ ಮೊದಲೂ ಸಹ ವಿನಾಶವಾಗಿತ್ತು, ಈಗಲೂ ಆಗುವುದು. ನೀವು ಕಲ್ಪದ ಹಿಂದಿನ ತರಹ ಓದುತ್ತಿದ್ದೀರಿ. ನಿಧಾನ-ನಿಧಾನವಾಗಿ ವೃಕ್ಷವು ವೃದ್ಧಿಯಾಗುತ್ತಾ ಇರುವುದು. ವೃದ್ಧಿಯಾಗುತ್ತಾ-ಆಗುತ್ತಾ ಸ್ಥಾಪನೆಯಾಗಿ ಬಿಡುವುದು. ಮಾಯೆಯ ಬಿರುಗಾಳಿಗಳು ಬಹಳ ಒಳ್ಳೊಳ್ಳೆಯ ಹೂಗಳನ್ನೂ ಬೀಳಿಸಿ ಬಿಡುತ್ತದೆ. ಪೂರ್ಣ ಯೋಗದಲ್ಲಿ ಇರದಿದ್ದರೆ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಂದೆಯ ಮಗುವಾಗಿ ಪವಿತ್ರತೆಯ ಪ್ರತಿಜ್ಞೆ ಮಾಡಿ, ನಂತರ ಒಂದುವೇಳೆ ವಿಕಾರದಲ್ಲಿ ಇಳಿದರೆ ಹೆಸರನ್ನೇ ಕೆಡಿಸಿ ಬಿಡುತ್ತಾರೆ. ಅಂತಹವರಿಗೆ ಬಹಳ ದೊಡ್ಡ ಪೆಟ್ಟು ಬೀಳುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ – ಮಕ್ಕಳೇ, ಎಂದೂ ಕಾಮದ ಪೆಟ್ಟನ್ನು ತಿನ್ನಬೇಡಿರಿ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ರಕ್ತದ ನದಿಗಳು ಹರಿಯಲಿದೆ. ಸತ್ಯಯುಗದಲ್ಲಿ ಹಾಲಿನ ನದಿಗಳು ಹರಿಯುತ್ತವೆ. ಅದು ಹೊಸ ಪ್ರಪಂಚ, ಇದು ಹಳೆಯ ಪ್ರಪಂಚವಾಗಿದೆ. ಕಲಿಯುಗದಲ್ಲಿ ನೋಡಿ ಏನಿದೆ, ಹೊಸ ಪ್ರಪಂಚದ ವೈಭವವನ್ನೂ ನೋಡಿರಿ. ಇಲ್ಲಂತೂ ಏನೇನೂ ಇಲ್ಲ. ಮಕ್ಕಳು ಸಾಕ್ಷಾತ್ಕಾರದಲ್ಲಿ ಹೋಗಿ ಸ್ವರ್ಗವನ್ನು ನೋಡಿಕೊಂಡು ಬರುತ್ತಾರೆ. ಸೂಕ್ಷ್ಮವತನದಲ್ಲಿ ಶೂಬೀ ರಸವನ್ನು ಕುಡಿದೆವು ಎಂದು ಹೇಳುತ್ತಾರೆ. ಇದೆಲ್ಲವೂ ಸಾಕ್ಷಾತ್ಕಾರವಾಗಿದೆ. ತಿಳಿಸುತ್ತಾರೆ – ನಾವು ಮೂಲವತನಕ್ಕೆ ಹೋಗುತ್ತೇವೆ. ತಂದೆಯು ಅಲ್ಲಿಂದ ವೈಕುಂಠಕ್ಕೆ ಕಳುಹಿಸುತ್ತಾರೆ, ಇವೆಲ್ಲಾ ಸಾಕ್ಷಾತ್ಕಾರಗಳು ಡ್ರಾಮಾದಲ್ಲಿ ನಿಗಧಿಯಾಗಿದೆ. ಇದರಿಂದೇನೂ ಸಿಗುವುದಿಲ್ಲ. ಅನೇಕ ಮಕ್ಕಳು ಸೂಕ್ಷ್ಮವತನಕ್ಕೆ ಹೋಗುತ್ತಿದ್ದರು, ಶೂಬೀ ರಸವನ್ನು ಕುಡಿಯುತ್ತಿದ್ದರು, ಅಂತಹವರೂ ಸಹ ಇಂದು ಇಲ್ಲ. ಒಳ್ಳೊಳ್ಳೆಯ ಮಕ್ಕಳೂ ಸಹ ಮಾಯವಾದರು, ಬಹಳ ಧ್ಯಾನದಲ್ಲಿ ಹೋಗುತ್ತಿದ್ದವರೂ ಸಹ ಇಲ್ಲಿಂದ ಹೊರಟು ಹೋಗಿ ವಿವಾಹವಾದರು. ಆಶ್ಚರ್ಯವೆನಿಸುತ್ತದೆ, ಮಾಯೆಯು ಹೇಗಿದೆ! ಅದೃಷ್ಟವು ಹೇಗೆ ಬದಲಾಗಿ ಬಿಡುತ್ತದೆ. ಅನೇಕರು ಒಳ್ಳೊಳ್ಳೆಯ ಪಾತ್ರವನ್ನಭಿನಯಿಸಿದರು. ಸಮಯದಲ್ಲಿ ಬಹಳ ಸಹಯೋಗವನ್ನೂ ಕೊಟ್ಟರು ಆದರೂ ಸಹ ಅವರು ಇಂದು ಇಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ – ಹೇ ಮಾಯೆ, ನೀನು ಬಹಳ ಶಕ್ತಿಶಾಲಿಯಾಗಿದ್ದೀಯಾ! ಮಾಯೆಯೊಂದಿಗೆ ನಿಮ್ಮ ಯುದ್ಧ ನಡೆಯುತ್ತದೆ. ಇದಕ್ಕೆ ಯೋಗಬಲದ ಯುದ್ಧವೆಂದು ಹೇಳಲಾಗುತ್ತದೆ. ಯೋಗಬಲದಿಂದ ಏನು ಪ್ರಾಪ್ತಿಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಕೇವಲ ಭಾರತದ ಪ್ರಾಚೀನ ಯೋಗವೆಂದು ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ಯೋಗದ ಬಗ್ಗೆ ತಿಳಿಸಲಾಗಿದೆ, ಪ್ರಾಚೀನ ರಾಜಯೋಗವೆಂದು ಗಾಯನವಿದೆ, ಯಾರೆಲ್ಲರೂ ತತ್ವಜ್ಞಾನಿಗಳಿದ್ದಾರೆಯೋ ಅವರಲ್ಲಿ ಈ ಆಧ್ಯಾತ್ಮಿಕ ಜ್ಞಾನವಿಲ್ಲ. ಆತ್ಮಿಕ ತಂದೆಯೇ ಜ್ಞಾನ ಸಾಗರನಾಗಿದ್ದಾರೆ. ಅವರಿಗೇ ಶಿವಾಯ ನಮಃ ಎಂದು ಹಾಡುತ್ತಾರೆ. ಅವರ ಮಹಿಮೆಯ ಗಾಯನವಿದೆ, ತಂದೆಯು ಬಂದು ನಿಮಗೆ ಎಷ್ಟೊಂದು ಜ್ಞಾನವನ್ನು ತಿಳಿಸುತ್ತಾರೆ. ಇದಕ್ಕೆ ಜ್ಞಾನದ ಮೂರನೇ ನೇತ್ರವೆಂದು ಹೇಳಲಾಗುತ್ತದೆ. ತಮ್ಮನ್ನು ತ್ರಿಕಾಲದರ್ಶಿಗಳೆಂದು ಕರೆಸಿಕೊಳ್ಳಲು ಮತ್ತ್ಯಾರಿಗೂ ಬಲವಿಲ್ಲ. ಕೇವಲ ಬ್ರಾಹ್ಮಣರೇ ತ್ರಿಕಾಲದರ್ಶಿಗಳಾಗುತ್ತಾರೆ. ಆ ಬ್ರಾಹ್ಮಣರ ಮೂಲಕವೇ ಯಜ್ಞವನ್ನು ರಚಿಸಲಾಗಿದೆ, ರುದ್ರ ಜ್ಞಾನ ಯಜ್ಞವಲ್ಲವೆ. ಶಿವನಿಗೆ ರುದ್ರನೆಂತಲೂ ಹೇಳುತ್ತಾರೆ, ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಪ್ರತಿಯೊಂದು ದೇಶದಲ್ಲಿ ಅನೇಕ ಬೇರೆ-ಬೇರೆ ಹೆಸರುಗಳಿವೆ. ಒಬ್ಬ ತಂದೆಯ ವಿನಃ ಮತ್ತ್ಯಾರಿಗೂ ಇಷ್ಟೊಂದು ಹೆಸರುಗಳಿಲ್ಲ. ಇವರಿಗೆ ಬಬುಲ್ನಾಥನೆಂದೂ ಹೇಳುತ್ತಾರೆ. ಯಾರಲ್ಲಿ ಮುಳ್ಳುಗಳಿರುತ್ತವೆಯೋ ಅವರಿಗೆ ಬಬುಲ್ ಎಂದು ಹೇಳುತ್ತಾರೆ. ತಂದೆಯು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವವರಾಗಿದ್ದಾರೆ ಆದ್ದರಿಂದ ಅವರಿಗೆ ಬಬುಲ್ನಾಥನೆಂದು ಹೆಸರಿಟ್ಟಿದ್ದಾರೆ. ಬಾಂಬೆಯಲ್ಲಿ ಬಹಳ ದೊಡ್ಡ ಮೇಳವಾಗುತ್ತದೆ, ಅರ್ಥವನ್ನು ತಿಳಿದುಕೊಂಡಿಲ್ಲ, ತಂದೆಯು ತಿಳಿಸುತ್ತಾರೆ. ಅವರ ನಿಜವಾದ ಹೆಸರಾಗಿದೆ ಶಿವ. ವ್ಯಾಪಾರಿಗಳೂ ಸಹ ಬಿಂದು (ಸೊನ್ನೆ) ವನ್ನು ಶಿವ ಎಂದು ಹೇಳುತ್ತಾರೆ. 1, 2… ಎಂದು ಎಣಿಕೆ ಮಾಡುವಾಗ 10ರವರೆಗೆ ಬಂದಾಗ ಶಿವ ಎಂದು ಹೇಳುತ್ತಾರೆ. ತಂದೆಯೂ ತಿಳಿಸುತ್ತಾರೆ, ನಾನು ನಕ್ಷತ್ರ ಬಿಂದುವಾಗಿದ್ದೇನೆ, ಅನೇಕರು ಹೀಗೆ ಡಬಲ್ ತಿಲಕವನ್ನಿಟ್ಟುಕೊಳ್ಳುತ್ತಾರೆ. ಮಾತಾ ಮತ್ತು ಪಿತಾ. ಜ್ಞಾನ ಸೂರ್ಯ, ಜ್ಞಾನ ಚಂದ್ರಮನ ಚಿಹ್ನೆಯಾಗಿದೆ, ಅವರಿಗೆ ಅರ್ಥವು ಗೊತ್ತಿಲ್ಲ ಅಂದಾಗ ತಂದೆಯೇ ಯೋಗದ ಬಗ್ಗೆ ತಿಳಿಸುತ್ತಿದ್ದರು. ಯೋಗವು ಎಷ್ಟು ಪ್ರಸಿದ್ಧಿಯಾಗಿದೆ. ಈಗ ನೀವು ಮಕ್ಕಳು ಯೋಗ ಶಬ್ಧವನ್ನು ಬಿಟ್ಟು ಬಿಡಿ, ನೆನಪು ಮಾಡಿರಿ. ತಂದೆಯು ಹೇಳುತ್ತಾರೆ – ಯೋಗ ಶಬ್ಧದಿಂದ ತಿಳಿದುಕೊಳ್ಳುವುದಿಲ್ಲ, ನೆನಪು ಎಂದು ಹೇಳಿದರೆ ತಿಳಿದುಕೊಳ್ಳುತ್ತಾರೆ. ತಂದೆಯನ್ನು ಬಹಳ ನೆನಪು ಮಾಡಬೇಕಾಗಿದೆ. ಅವರಿಗೆ ಪ್ರಿಯತಮನೆಂತಲೂ ಹೇಳಲಾಗುತ್ತದೆ. ಪಟ್ಟದ ರಾಣಿಯರನ್ನಾಗಿ ಮಾಡುತ್ತಾರಲ್ಲವೆ. ವಿಶ್ವದ ರಾಜಧಾನಿಯ ಆಸ್ತಿಯನ್ನು ಕೊಡುತ್ತಾರೆ, ಸತ್ಯಯುಗದಲ್ಲಿ ಒಬ್ಬ ತಂದೆಯಿರುತ್ತಾರೆ. ಭಕ್ತಿಯಲ್ಲಿ ಇಬ್ಬರು ತಂದೆಯರು ಮತ್ತು ಜ್ಞಾನಮಾರ್ಗದಲ್ಲಿ ಈಗ ನಿಮಗೆ ಮೂವರು ತಂದೆಯರಿದ್ದಾರೆ. ಎಷ್ಟು ವಿಚಿತ್ರವಾಗಿದೆ! ನೀವು ಅರ್ಥ ಸಹಿತವಾಗಿ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದ್ದರಿಂದ ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇರುವುದಿಲ್ಲ. ಈಗ ನೀವು ಮೂವರು ತಂದೆಯರನ್ನು ಅರಿತುಕೊಂಡಿದ್ದೀರಿ. ಎಷ್ಟು ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನೆನಪಿನಲ್ಲಿರಲು ಬಾಯಿಂದ ಏನನ್ನು ಮಾತನಾಡಬೇಡಿರಿ. ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿ, ಆಗ ಕ್ರೋಧವು ಸಮಾಪ್ತಿಯಾಗುವುದು, ಯಾರಮೇಲೂ ಕ್ರೋಧ ಮಾಡಬಾರದು.

2. ಈಗ ಈ ದುಃಖಧಾಮಕ್ಕೆ ಬೆಂಕಿ ಬೀಳಲಿದೆ. ಆದ್ದರಿಂದ ಇದನ್ನು ಮರೆತು ಹೊಸ ಪ್ರಪಂಚವನ್ನು ನೆನಪು ಮಾಡಬೇಕಾಗಿದೆ. ತಂದೆಯೊಂದಿಗೆ ಯಾವ ಪವಿತ್ರರಾಗಿರುವ ಪ್ರತಿಜ್ಞೆ ಮಾಡಿದ್ದೀರೋ ಅದರಲ್ಲಿ ಪಕ್ಕಾ ಇರಬೇಕಾಗಿದೆ.

ವರದಾನ:-

ಯಾವ ಮಕ್ಕಳು “ಪವಿತ್ರತೆ”ಯ ಪ್ರತಿಜ್ಞೆಯನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾರೆ, ಅವರಿಗೆ ಸ್ವತಹವಾಗಿಯೇ ಸುಖ-ಶಾಂತಿಯ ಅನುಭೂತಿ ಆಗುತ್ತದೆ. ಪವಿತ್ರತೆಯ ಅಧಿಕಾರವನ್ನು ತೆಗೆದುಕೊಳ್ಳುವುದರಲ್ಲಿ ನಂಬರ್ವನ್ ಆಗಿರುವುದು ಅರ್ಥಾತ್ ಸರ್ವ ಪ್ರಾಪ್ತಿಗಳಲ್ಲಿ ನಂಬರ್ವನ್ ಆಗುವುದು. ಆದ್ದರಿಂದ ಪವಿತ್ರತೆಯ ಬುನಾದಿಯನ್ನೆಂದಿಗೂ ಬಲಹೀನ ಮಾಡಬಾರದು, ಈ ರೀತಿ ಇದ್ದಾಗಲೇ ಲಾಸ್ಟ್ ಸೊ ಫಾಸ್ಟ್ ಹೋಗಬಹುದು. ಇದೇ ಧರ್ಮದಲ್ಲಿ ಸದಾ ಸ್ಥಿತರಾಗಿರಿ, ಭಲೆ ವ್ಯಕ್ತಿ, ಭಲೆ ಪ್ರಕೃತಿ, ಭಲೆ ಪರಿಸ್ಥಿತಿಗಳು ಎಷ್ಟಾದರೂ ಅಲುಗಾಡಿಸಲಿ ಆದರೆ ಧರಣಿ ಬಾಯ್ಬಿಟ್ಟರೂ ಧರ್ಮವನ್ನು ಬಿಡಬಾರದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top