04 April 2022 KANNADA Murli Today | Brahma Kumaris

Read and Listen today’s Gyan Murli in Kannada

April 3, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಕರ್ಮಯೋಗಿಗಳು, ನೀವು ನಡೆಯುತ್ತಾ-ಓಡಾಡುತ್ತಾ ನೆನಪಿನ ಅಭ್ಯಾಸವನ್ನು ಮಾಡಬೇಕು. ಒಬ್ಬ ತಂದೆಯ ಸ್ಮರಣೆಯಲ್ಲಿದ್ದು ನರನಿಂದ ನಾರಾಯಣನಾಗುವ ಪುರುಷಾರ್ಥವನ್ನು ಮಾಡಬೇಕು”

ಪ್ರಶ್ನೆ:: -

ನಿಶ್ಚಯಬುದ್ಧಿ ಮಕ್ಕಳ ಮುಖ್ಯ ಲಕ್ಷಣವೇನಾಗಿರುತ್ತದೆ?

ಉತ್ತರ:-

ಅವರಿಗೆ ತಂದೆಯ ಜೊತೆ ಸಂಪೂರ್ಣವಾಗಿ ಪ್ರೀತಿಯಿರುತ್ತದೆ. ತಂದೆಯ ಪ್ರತೀ ಆಜ್ಞೆಯನ್ನು ಸಂಪೂರ್ಣವಾಗಿ ಪಾಲನೆ ಮಾಡುತ್ತಾರೆ. ಅವರ ಬುದ್ಧಿ ಹೊರಗಡೆ ಅಲೆದಾಡುವುದಿಲ್ಲ. ಅವರು ರಾತ್ರಿ ಎಚ್ಚರವಾಗಿದ್ದು ತಂದೆಯನ್ನು ನೆನಪು ಮಾಡುತ್ತಾರೆ. ನೆನಪಿನಲ್ಲಿದ್ದು ಭೋಜನವನ್ನು ತಯಾರು ಮಾಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ರಾತ್ರಿ ನಿದ್ರೆ ಮಾಡಿ ಕಳೆದೆ…

ಓಂ ಶಾಂತಿ. ಮೊದಲು ನೀವು ಮಕ್ಕಳಿಗೆ ಈ ನಿಶ್ಚಯವಿರಬೇಕು – ಬಾಬಾ ಇಲ್ಲಿಯ ನಿವಾಸಿ ಅಲ್ಲ. ಪರಮಧಾಮದಿಂದ ಇಲ್ಲಿಗೆ ಬಂದು ಓದಿಸುತ್ತಾರೆ. ಏನು ಓದಿಸುತ್ತಾರೆ? ಶ್ರೇಷ್ಠಾತಿ ಶ್ರೇಷ್ಠ ತಂದೆಯು ಶ್ರೇಷ್ಠಾತಿ ಶ್ರೇಷ್ಠ ವಿದ್ಯೆಯನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಓದಿಸುತ್ತಾರೆ. ಈ ವಿದ್ಯೆಯು ಬಹಳ ಪ್ರಸಿದ್ಧವಾಗಿದೆ. ಈ ವಿದ್ಯೆಯಿಂದ ಆಸುರರಿಂದ ದೇವತೆ ಅಥವಾ ಮಂಗನಿಂದ ಮಂದಿರಕ್ಕೆ ಯೋಗ್ಯರಾಗುತ್ತೀರಿ. ಮಂಗನಿಗಿಂತಲೂ ಮನುಷ್ಯರಲ್ಲಿ ಬಹಳ ಶಕ್ತಿಯಿದೆ. ಕಲಿತುಕೊಂಡು ಶಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇಲ್ಲಿಯೂ ಸಹ ಕೆಲವರು ತಂದೆಯಿಂದ ಕಲಿತು ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಮತ್ತೆ ಕೆಲವರು ವಿಜ್ಞಾನವನ್ನು ಕಲಿತು ನರಕದ ವಿನಾಶ ಮಾಡುತ್ತಾರೆ. ಈಗ ಸ್ಥಾಪನೆ ಹಾಗೂ ವಿನಾಶದ ಕಾರ್ಯ ನಡೆಯುತ್ತಿದೆ. ಸಾಮಾನ್ಯವಾಗಿ ಹಳೆಯ ವಸ್ತುವನ್ನು ವಿನಾಶ ಮಾಡಲಾಗುತ್ತದೆ. ಅವರೆಲ್ಲರೂ ರಾವಣನಿಗೆ ನಮಸ್ಕಾರ ಮಾಡುತ್ತಾರೆ. ಕೇವಲ ನೀವು ರಾಮನಿಗೆ ನಮಸ್ಕಾರ ಮಾಡುತ್ತೀರಿ. ನೀವು ಮಕ್ಕಳು ರಾಮ-ರಾವಣ ಇಬ್ಬರನ್ನು ತಿಳಿದುಕೊಂಡಿದ್ದೀರಿ. ಮನುಷ್ಯರು ವ್ಯಾಸ ಮಹರ್ಷಿ ಗೀತೆ ಹೇಳಿದನೆಂದು ಹೇಳುತ್ತಾರೆ. ಅದರಲ್ಲಿ ಬರೆಯಲ್ಪಟ್ಟಿರುವ ಭಗವಾನುವಾಚ ಸತ್ಯವಾಗಿದೆ ಆದರೆ ಭಗವಂತನ ಹೆಸರನ್ನು ಬದಲಾವಣೆ ಮಾಡಿ ಅಸತ್ಯ ಮಾಡಿದ್ದಾರೆ. ಪ್ರದರ್ಶನದಲ್ಲಿ ಗೀತೆಯ ಭಗವಂತ ನಿರಾಕಾರ ಶಿವನಾಗಿದ್ದಾರೆ ಕೃಷ್ಣನಲ್ಲ- ಈ ಒಂದು ಮಾತಿನ ಬಗ್ಗೆ ತಿಳಿಸಬೇಕೆಂದು ತಂದೆಯು ಎಷ್ಟೊಂದು ಹೇಳುತ್ತಾರೆ ಆದರೆ ಇದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಕೇವಲ ಸನ್ಯಾಸಿಗಳು ಮಾತ್ರ ತಮ್ಮನ್ನು ದುಃಖಿಗಳೆಂದು ತಿಳಿದುಕೊಳ್ಳುವುದಿಲ್ಲ. ವಾಸ್ತವದಲ್ಲಿ ಅವರೂ ಸಹ ಅಗತ್ಯವಾಗಿ ದುಃಖಿಗಳಾಗಿದ್ದಾರೆ ಆದರೆ ನಾವು ದುಃಖಿಗಳಲ್ಲ ಅಥವಾ ಈ ಶರೀರ ದುಃಖಿಯಾಗುತ್ತದೆ ಎಂದು ಹೇಳುತ್ತಾರೆ. ಇದು ಉಲ್ಟಾ ಜ್ಞಾನವಾಗಿದೆ ಏಕೆಂದರೆ ಈಗ ಇರುವುದೇ ಅಸತ್ಯಖಂಡ. ಭಾರತ ಸ್ವರ್ಗವಿದ್ದಾಗ ಸತ್ಯ ಖಂಡವಾಗಿತ್ತು. ನಾಟಕದನುಸಾರ ದಿನ-ಪ್ರತಿದಿನ ಹೆಚ್ಚುತ್ತಲೇ ಹೋಗುತ್ತದೆ. ಒಂದುವೇಳೆ ಎಷ್ಟೇ ಯಜ್ಞ, ದಾನ, ಪುಣ್ಯ ಮೊದಲಾದವುಗಳನ್ನು ಮಾಡಿದರೂ ಸಹ ಅದರ ಪರಿಣಾಮ ಕೊನೆಗೆ ಏನಾಯಿತು! ಇನ್ನೂ ಕೆಳಗಡೆ ಇಳಿಯುತ್ತಾ ಹೋದರು. ಈ ಸಮಯದಲ್ಲಿ 100% ಭ್ರಷ್ಟಾಚಾರಿ ನರಕವಾಸಿಗಳಾಗಿದ್ದಾರೆ. ಆದುದರಿಂದ ತಂದೆಯು ಇಂತಹ ಸಮಯದಲ್ಲಿ ಬರಬೇಕಾಗುತ್ತದೆ. ಯಾವಾಗ ಎಲ್ಲರೂ ದುಃಖಿಗಳಾಗಿರುತ್ತಾರೆ ಹಾಗೂ ಎಲ್ಲಾ ಪಾತ್ರಧಾರಿಗಳು ಬಂದು ಬಿಟ್ಟಿರುತ್ತಾರೆ, ಸ್ವಲ್ಪ ಆತ್ಮಗಳು ಬರುತ್ತಿರುತ್ತಾರೆ. ಮೆಜಾರಿಟಿ ಎಲ್ಲರೂ ಬಂದಿದ್ದಾರೆ. ಬಹುಷಃ ಬಹಳಷ್ಟು ಆತ್ಮಗಳು ದುಃಖಿಯಾಗಿರುತ್ತಾರೆ ಆದುದರಿಂದ ಭಗವಂತನನ್ನು ನೆನಪು ಮಾಡುತ್ತಾರೆ. ನಿಮಗಂತೂ ಸ್ವಯಂ ಭಗವಂತನೇ ಓದಿಸುತ್ತಾರೆ, ಆದುದರಿಂದ ಎಷ್ಟೊಂದು ಶ್ರದ್ದೆಯಿಂದ ಓದಬೇಕು. ತಂದೆ, ಶಿಕ್ಷಕ, ಸದ್ಗುರು ಈ ಮೂವರು ಜೊತೆಯಲ್ಲಿ ಸಿಕ್ಕಿದ್ದಾರೆ, ಆದುದರಿಂದ ಈಗ ನೀವು ಮತ್ತೆ ಯಾರ ಬಳಿ ಹೋಗಬೇಕು? ನೀವು ಗೃಹಸ್ಥ ವ್ಯವಹಾರದಲ್ಲಿರಿ ಎಂದು ತಂದೆ ಹೇಳುತ್ತಾರೆ ಆದರೆ ನಿರಾಕಾರ ತಂದೆಯಾದ ನನ್ನ ಮತದಂತೆ ನಡೆದಾಗ ನೀವು ಶ್ರೇಷ್ಠರಾಗುತ್ತೀರಿ ಹಾಗೂ ಬೇರೆ ಯಾವ ಗುರು-ಗೋಸಾಯಿಗಳ ಮತದಂತೆ ನಡೆಯಬೇಡಿ. ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು ಎಂದು ನೀವು ಕೇಳುತ್ತೀರಿ. ಪರಮಪಿತ ಪರಮಾತ್ಮನಾಗಿದ್ದರೆ ಅಗತ್ಯವಾಗಿ ಹೊಸ ಪ್ರಪಂಚದ ಆಸ್ತಿ ಸಿಗಬೇಕಲ್ಲವೇ! ತಂದೆ ಅರ್ಥಾತ್ ರಚಯಿತ ಎಂಬ ಮಾತು ಯಾರ ಬುದ್ಧಿಯಲ್ಲಿ ಬರುವುದಿಲ್ಲ. ಅವರು ಸ್ವರ್ಗವನ್ನು ರಚನೆ ಮಾಡುವವರಾಗಿದ್ದಾರೆ. ಆದರೆ ಅವರು ನಿರಾಕಾರನಾಗಿದ್ದಾರೆ. ಆತ್ಮವೂ ಸಹ ನಿರಾಕಾರವಾಗಿದೆ. ಇದು ಮನುಷ್ಯರಿಗೆ ಗೊತ್ತೇ ಇಲ್ಲ. ಆತ್ಮನ ರೂಪ ಏನಾಗಿದೆ, ಪರಮಾತ್ಮನ ರೂಪ ಏನಾಗಿದೆ, ಆತ್ಮ ಅವಿನಾಶಿಯಾಗಿದೆ, ಪರಮಾತ್ಮನೂ ಸಹ ಅವಿನಾಶಿಯಾಗಿದೆ. ಪ್ರತಿಯೊಬ್ಬರ ಆತ್ಮನು ಅವಿನಾಶಿಯಾಗಿದೆ. ಯಾವಾಗ ಮನುಷ್ಯರು ಈ ಮಾತುಗಳನ್ನು ಕೇಳುತ್ತಾರೆ ಆಗ ಅವರ ಬುದ್ಧಿ ಗೊಂದಲವಾಗುತ್ತದೆ. ಯಾರು ಕಲ್ಪದ ಹಿಂದೆ ಆಸ್ತಿಯನ್ನು ತೆಗೆದುಕೊಂಡಿದ್ದರು, ಅವರೇ ಪುರುಷಾರ್ಥದ ಅನುಸಾರವಾಗಿ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಪಕ್ಕಾ ನಿಶ್ಚಯವಿದೆ ಹಾಗೂ ತಂದೆಯ ಜೊತೆ ಪ್ರೀತಿಯೂ ಇದೆ. ಶಿವ ತಂದೆ ಆಜ್ಞೆ ಮಾಡುತ್ತಾರೆ – ತಿನ್ನುತ್ತಾ-ಕುಡಿಯುತ್ತಾ, ನನ್ನನ್ನು ನೆನಪು ಮಾಡಿ. ನೆನಪಿನಿಂದ ವಿಕರ್ಮ ವಿನಾಶವಾಗುತ್ತದೆ ಹಾಗೂ ಶ್ರೇಷ್ಠ ಪದವಿಯನ್ನು ತೆಗೆದುಕೊಳ್ಳುತ್ತೀರಿ. ಅವರು ಇಲ್ಲಿ ಕುಳಿತಿದ್ದರೂ ಸಹ ಅವರ ಬುದ್ಧಿ ಹೊರಗಡೆ ಅಲೆದಾಡುತ್ತಿರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ಇದೇರೀತಿ ಆಗುತ್ತಿತ್ತು ಏಕೆಂದರೆ ಇದು ಮಾಯೆಯ ರಾಜ್ಯವಲ್ಲವೇ! ನಿಮ್ಮ ತಲೆಯ ಮೇಲೆ ಪಾಪದ ಹೊರೆ ಬಹಳ ಇದೆ ಆದುದರಿಂದ ರಾತ್ರಿಯೆಲ್ಲಾ ಎಚ್ಚರವಾಗಿದ್ದು ತಂದೆಯನ್ನು ನೆನಪು ಮಾಡಿ ನಿಮಗೆ ಬಹಳ ಸಹಯೋಗ ಸಿಗುತ್ತದೆ ಎಂದು ತಂದೆ ಹೇಳುತ್ತಾರೆ. ನಡೆಯುತ್ತಾ-ಓಡಾಡುತ್ತಾ ನೆನಪಿನ ಅಭ್ಯಾಸ ಮಾಡಿ. ನೆನಪಿನಲ್ಲಿದ್ದು ಭೋಜನವನ್ನು ತಯಾರು ಮಾಡಿ. ಇದರಲ್ಲಿ ಬಹಳ ಶ್ರಮ ವಹಿಸಬೇಕಾಗುತ್ತದೆ. ಏಕೆಂದರೆ ತಂದೆಯ ನೆನಪು ಮತ್ತೆ-ಮತ್ತೆ ಮರೆತು ಹೋಗುತ್ತದೆ. ಮಕ್ಕಳು ಬಹಳ ಚೆನ್ನಾಗಿ ಅಭ್ಯಾಸವನ್ನು ಮಾಡಬೇಕು. 24 ಗಂಟೆಯಲ್ಲಿ 16 ಗಂಟೆ ಬಿಡುವಾಗಿರುತ್ತೀರಿ. ಉಳಿದ 8 ಗಂಟೆಯಂತು ಅಗತ್ಯವಾಗಿ ಯೋಗದಲ್ಲಿರಬೇಕು. ನೀವು ಕರ್ಮಯೋಗಿಗಳಾಗಿದ್ದೀರಿ. ಎಲ್ಲವನ್ನು ಮಾಡುತ್ತಾ ನನ್ನ ನೆನಪಿನಲ್ಲಿ ಇರಬೇಕೆಂದು ತಂದೆ ಹೇಳುತ್ತಾರೆ. ನರನಿಂದ ನಾರಾಯಣನಾಗುವ ಪುರುಷಾರ್ಥವನ್ನು ಮಾಡಿದಾಗ ಮನೆಯಲ್ಲಿ ಕುಳಿತುಕೊಂಡೆ ಬಹಳಷ್ಟು ಸಂಪಾದನೆಯನ್ನು ಮಾಡಿಕೊಳ್ಳಬಹುದು. ಗಣ್ಯ ವ್ಯಕ್ತಿಗಳೂ ಸಹ ಬರುತ್ತಾರೆ, ಆದರೆ ಟೂಲೇಟ್ ಆಗಿರುತ್ತದೆ. ನಿಮ್ಮಲ್ಲಿಯೂ ಸಹ ಬಹಳ ಮಕ್ಕಳು ಈ ರೀತಿ ಹೇಳುತ್ತಾರೆ, ನಾವು ಲಕ್ಷ್ಮಿಯನ್ನು ಅಥವಾ ನಾರಾಯಣನ್ನು ಸ್ವೀಕರಿಸುತ್ತೇವೆ ಆದರೆ ಅವರೂ ಸಹ ಮತ್ತೆ-ಮತ್ತೆ ತಂದೆಯನ್ನು ಮರೆತು ಹೋಗುತ್ತಾರೆ. ಕೆಲವರು ಇವರಲ್ಲಿ ಶಿವಬಾಬಾ ಬರುತ್ತಾರೆ ಎಂಬ ಮಾತು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ಹೇಳುತ್ತಾರೆ, ಯಾವುದೋ ಶಕ್ತಿಯಿದೆ, ಯಾವುದೋ ಆಕರ್ಷಣೆ ಇದೆ ಆದರೆ ಮಕ್ಕಳು ತಂದೆಯನ್ನು ತಿಳಿದುಕೊಳ್ಳುವುದಿಲ್ಲ ಏಕೆಂದರೆ ಶಾಸ್ತ್ರಗಳಲ್ಲಿ ಈ ರೀತಿ ತಂದೆ ಬರುತ್ತಾರೆಂಬ ಮಾತುಗಳಿಲ್ಲ. ಗೀತೆಯು ಎಲ್ಲಕ್ಕಿಂತ ಉನ್ನತವಾದ ಶಾಸ್ತ್ರವಾಗಿದೆ. ಅದರಲ್ಲಿಯೂ ಸಹ ಮನುಷ್ಯರ ಹೆಸರನ್ನು ಹಾಕಿ ಬಿಟ್ಟಿದ್ದಾರೆ ಅಂದಮೇಲೆ ಸರ್ವೋತ್ತಮ ಭಗವಂತ ಎಂದು ಉಳಿದ ಶಾಸ್ತ್ರಗಳಲ್ಲಿ ಹೇಗೆ ಬರುತ್ತದೆ. ಎಷ್ಟೊಂದು ತಪ್ಪು ಮಾಡಿ ಬಿಟ್ಟಿದ್ದಾರೆಂದು ತಂದೆ ಹೇಳುತ್ತಾರೆ. ನಾನೇ ಈ ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದೇನೆ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ. ರಾಧಾ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. 84 ಲಕ್ಷ ಜನ್ಮಗಳೆಂದು ಹೇಳಿದರೂ ಸಹ ಸ್ವರ್ಗದಲ್ಲಿ ಬರುವವರು ಲಕ್ಷ್ಮೀ-ನಾರಾಯಣರೇ ಆಗಿದ್ದಾರೆ. ನೀವು ದೇವೀ-ದೇವತಾ ಧರ್ಮದವರು 84 ಜನ್ಮಗಳನ್ನು ತೆಗೆದುಕೊಂಡಿದ್ದೀರೆಂದು ತಂದೆಯು ಹೇಳುತ್ತಾರೆ. ನೀವೇ ನಂಬರ್ವನ್ ಆಗಿದ್ದೀರಿ. ಈಗ ನಿಮ್ಮ ರಾಜಧಾನಿ ಸ್ಥಾಪನೆಯಾಗುತ್ತಿದೆ. ಲಕ್ಷ್ಮೀನಾರಾಯಣರು ನಿಮ್ಮ ತಾಯಿ, ತಂದೆ ಆಗಿದ್ದರು, ಈಗ ನಿಮ್ಮ ರಾಜಧಾನಿ ತಯಾರಾಗುತ್ತಿದೆ. ಈಗ ನೀವು ಇನ್ನೂ ಸಂಪೂರ್ಣರಾಗಿಲ್ಲ. ಅಗತ್ಯವಾಗಿ ಆಗಬೇಕಾಗಿದೆ ಆದುದರಿಂದ ಸೂಕ್ಷ್ಮವತನದಲ್ಲಿ ಸಾಕ್ಷಾತ್ಕಾರವೂ ಆಗುತ್ತದೆ. ನಿಮ್ಮನ್ನು ಸಂಪೂರ್ಣ ಸೂಕ್ಷ್ಮ ದೇವತೆ ಎಂದು ತಿಳಿದುಕೊಳ್ಳುತ್ತೀರಾ! ಸೂಕ್ಷ್ಮ ದೇವತೆಯಾದ ನಂತರ ಲಕ್ಷ್ಮೀ-ನಾರಾಯಣರಾಗುತ್ತೀರಿ, ನಿಮಗೆ ಆ ಸಾಕ್ಷಾತ್ಕಾರವು ಆಗುತ್ತದೆ. ತತತ್ವಂ, ನೀವೂ ಸಹ ಆಗುತ್ತಿದ್ದೀರಿ. ತಂದೆ ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ. ಶಾಲೆಗಳಲ್ಲಿ ಈ ಸಮಯ ಗೀತೆಯನ್ನೂ ಸಹ ಓದಿಸುತ್ತಾರೆ. ಅದನ್ನು ಓದಿ ಬುದ್ಧಿವಂತರಾಗಿ ಬೇರೆಯವರಿಗೂ ಓದಿಸುತ್ತಾರೆ. ಹೀಗೆ ಅವರು ಪಂಡಿತರಾಗುತ್ತಾರೆ. ಕೇಳುವಂತಹ ಅನೇಕರು ಅವರಿಗೆ ಅನುಯಾಯಿಗಳಾಗುತ್ತಾರೆ. ಅವರ ಧ್ವನಿ ಮಧುರವಾಗಿದ್ದು ಶ್ಲೋಕ ಮೊದಲಾದವುಗಳನ್ನು ಬಹಳ ಚೆನ್ನಾಗಿ ಕಂಠಪಾಠ ಮಾಡುತ್ತಾರೆ. ಆದರೆ ಅದರಿಂದ ಏನೂ ಪ್ರಾಪ್ತಿಯಾಗುವುದಿಲ್ಲ ಏಕೆಂದರೆ ತಮೋಪ್ರಧಾನವಾಗಿದ್ದಾರೆ. ತಂದೆ ಬಂದು ಸತೋಪ್ರಧಾನರನ್ನಾಗಿ ಮಾಡುತ್ತಾರೆ. ನೀವೂ ಸಹ ನಂಬರ್ವಾರ್ ಪುರುಷಾರ್ಥದ ಅನುಸಾರ ಸತೋಪ್ರಧಾನರಾಗುತ್ತೀರಿ. ಎಲ್ಲಾ ಆತ್ಮಗಳಂತೂ ಶಕ್ತಿವಂತರಾಗಿರುವುದಿಲ್ಲ. ತಂದೆ ಸರ್ವಶಕ್ತಿವಂತ ಆಗಿದ್ದಾರೆ. ಸರ್ವಶಕ್ತಿವಂತರೆಂದು ಲಕ್ಷ್ಮೀ-ನಾರಾಯಣರಿಗೆ ಹೇಳುವುದಿಲ್ಲ. ಅಲ್ಲಿ ಶಕ್ತಿಯ ಮಾತು ಇರುವುದಿಲ್ಲ. ಈಗ ಮಾತ್ರ ಶಕ್ತಿಯ ಮಾತಾಗಿದೆ. ಈಗ ನೀವು ಆ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ಈಗ ನಿಮಗೆ ವರ ಪ್ರಾಪ್ತಿಯಾಗುತ್ತಿದೆ. ತಂದೆ ಹೇಳುತ್ತಾರೆ ಅಮರ ಭವ! ಆಯುಷ್ಯವಾನ್ಭವ ಸತ್ಯಯುಗದಲ್ಲಿ ನಿಮಗೆ ಮೃತ್ಯು ಕಬಳಿಸುವುದಿಲ್ಲ. ಅಲ್ಲಿ ಮೃತ್ಯು ಎಂಬ ಅಕ್ಷರವೂ ಇರುವುದಿಲ್ಲ. ಅಲ್ಲಿ ಇಂತಹ ವ್ಯಕ್ತಿ ಸತ್ತು ಹೋದರೆಂದು ಹೇಳುವುದಿಲ್ಲ, ಕೇವಲ ಈ ರೀತಿ ಹೇಳುತ್ತಾರೆ, ನಾವು ಹಳೆಯ ವೃದ್ಧ ಶರೀರವನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳುತ್ತೇವೆ. ಮಹಾಕಾಲನ ಮಂದಿರವೂ ಇದೆ. ಅಲ್ಲಿ ಕೇವಲ ಶಿವ ಲಿಂಗವನ್ನು ಇಟ್ಟು ಬಾವುಟ ಮುಂತಾದವುಗಳನ್ನು ಹಾಕಿದ್ದಾರೆ. ಈ ರೀತಿ ಕಲ್ಲುಗಳೂ (ಶಿವ ಲಿಂಗ) ಇರುತ್ತವೆ ಆದರೆ ಅದರಲ್ಲಿ ಚಿನ್ನದ ಲೇಪನವನ್ನು ಮಾಡಿರುತ್ತಾರೆ. ನೇಪಾಲದ ನದಿಯ ಮರಳಿನಲ್ಲಿ ಚಿನ್ನವು ಹರಿದು ಬರುತ್ತಿತ್ತು. ಸತ್ಯಯುಗದಲ್ಲಿ ನಿಮಗೆ ಅಪಾರವಾದ ಚಿನ್ನ ಪ್ರಾಪ್ತಿಯಾಗುತ್ತದೆ. ಈಗಂತು ಚಿನ್ನವೇ ಇಲ್ಲದಂತಾಗಿ ಬಿಟ್ಟಿದೆ. ಎಲ್ಲಾ ಗಣಿಗಳು ಖಾಲಿಯಾಗಿವೆ. ನಿಮಗೆ ಸ್ವರ್ಗದಲ್ಲಿ ಚಿನ್ನದ ಅರಮನೆ ತಯಾರಾಗುತ್ತದೆ. ಪುನಃ ನಾವು ನಮ್ಮ ಸ್ವರ್ಗ ಸ್ಥಾಪನೆ ಮಾಡುತ್ತಿದ್ದೇವೆ. ಎಂದಿಗೂ ತಂದೆಯನ್ನು ನೋಡದೆ ಇರುವ ಅನೇಕ ಮಕ್ಕಳು ಬಾಬಾ ನಿಮಗೆ ಮಕ್ಕಳಾಗಿದ್ದೇವೆಂದು ಪತ್ರ ಬರೆಯುತ್ತಾರೆ. ಈಗ ನೀವು ಶಿವ ತಂದೆಯಿಂದ ಅಮರಲೋಕಕ್ಕಾಗಿ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನಿಶ್ಚಯದಿಂದ ವಿಜಯವಾಗುತ್ತದೆ. ಆದುದರಿಂದ ಪಕ್ಕಾ ನಿಶ್ಚಯವಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನಿಶ್ಚಯ ಬುದ್ಧಿಯವರಾಗಿ ಒಬ್ಬ ತಂದೆಯ ಜೊತೆ ಸಂಪೂರ್ಣ ಪ್ರೀತಿಯಿಡಬೇಕು. ತಂದೆ ಆಜ್ಞೆಯಂತೆ ನಡೆದು ಮಾಯೆಯ ಮೇಲೆ ವಿಜಯೀ ಆಗಬೇಕು.

2. ಶರೀರ ನಿರ್ವಹಣೆಗಾಗಿ ಕರ್ಮ ಮಾಡುತ್ತಾ-ಮಾಡುತ್ತಾ ಕರ್ಮಯೋಗಿಯಾಗಬೇಕು. 8 ಗಂಟೆಯ ನೆನಪಿನ ಚಾರ್ಟನ್ನು ಅಗತ್ಯವಾಗಿ ಮಾಡಿಕೊಳ್ಳಬೇಕು.

ವರದಾನ:-

ಇಡೀ ದಿನದಲ್ಲಿ ವ್ಯರ್ಥ ಸಂಕಲ್ಪ, ವ್ಯರ್ಥ ಮಾತು, ವ್ಯರ್ಥ ಕರ್ಮ ಮತ್ತು ವ್ಯರ್ಥ ಸಂಬಂಧ-ಸಂಪರ್ಕವೇನಾಗುತ್ತದೆಯೋ, ಅದನ್ನು ಸಮರ್ಥದಲ್ಲಿ ಪರಿವರ್ತನೆ ಮಾಡಿ ಬಿಡಿ. ತಮ್ಮ ಬುದ್ಧಿಯಲ್ಲಿ ವ್ಯರ್ಥವನ್ನು ಸ್ವೀಕಾರ ಮಾಡದಿರಿ. ಒಂದುವೇಳೆ ಒಂದು ವ್ಯರ್ಥವನ್ನೇನಾದರೂ ಸ್ವೀಕರಿಸಿದಿರೆಂದರೆ, ಆ ಒಂದು ವ್ಯರ್ಥವು ಅನೇಕ ವ್ಯರ್ಥದ ಅನುಭವ ಮಾಡಿಸುತ್ತದೆ, ಅದಕ್ಕೇ ಹೇಳುತ್ತಾರೆ – ಫೀಲಿಂಗ್ ಬಂದಿತು. ಆದ್ದರಿಂದ ಪವಿತ್ರ ಹಂಸಗಳಾಗಿದ್ದು ವ್ಯರ್ಥವನ್ನು ಸಮರ್ಥದಲ್ಲಿ ಪರಿವರ್ತನೆ ಮಾಡುತ್ತೀರೆಂದರೆ ವ್ಯರ್ಥ ಮುಕ್ತರು ಆಗಿ ಬಿಡುತ್ತೀರಿ. ಯಾರೇ ಗ್ಲಾನಿ ಮಾಡಲಿ, ಕ್ರೋಧ ಮಾಡಲಿ, ಅವರಿಗೆ ತಾವು ಶಾಂತಿಯ ಶೀತಲ ಜಲ ಕೊಡಿ, ಇದೇ ಪವಿತ್ರ ಹಂಸಗಳ ಕರ್ತವ್ಯವಾಗಿದೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

1. ಪರಮಾತ್ಮನನ್ನು ತ್ರಿಮೂರ್ತಿಯೆಂದು ಏಕೆ ಹೇಳುತ್ತಾರೆ?

ಪರಮಾತ್ಮನನ್ನು ತ್ರಿಮೂರ್ತಿ ಎಂದು ಏಕೆ ಹೇಳುತ್ತಾರೆ? ಅವರು ಯಾವ ಮೂರು ರೂಪಗಳನ್ನು ರಚಿಸಿದರು? ಅವಶ್ಯವಾಗಿ ಅವರು ಮೂರು ರೂಪಗಳಾದ ಬ್ರಹ್ಮಾ, ವಿಷ್ಣು, ಶಂಕರನ ರಚನೆ ಮಾಡಿದರು. ಅವರೇ ಯಾವಾಗ ಬರುತ್ತಾರೆಯೋ ಆಗ ತನ್ನ ಜೊತೆ ಮೂರು ರೂಪಗಳನ್ನೂ ತರುತ್ತಾರೆ. ಆದರೆ ಹೀಗೆ ಹೇಳುವುದಿಲ್ಲ – ಅವರು ಈ ಮೂರು ರೂಪಗಳನ್ನು ಬೇರೆ-ಬೇರೆಯಾಗಿ ರಚಿಸಿದ್ದಾರೆ, ಒಟ್ಟಿಗೆ ರಚಿಸಿದರು. ಆದ್ದರಿಂದ ಪರಮಾತ್ಮನೇ ಹೇಳುತ್ತಾರೆ – ಇದು ನನ್ನ ರಚನೆಯಾಗಿದೆ ಏಕೆಂದರೆ ನಾನು ಸಾಕಾರಿ, ಆಕಾರಿ, ನಿರಾಕಾರಿ ಮೂರು ಸೃಷ್ಟಿಯ ಮಾಲೀಕನಾಗಿದ್ದೇನೆ. ನಾನು ಸಾಕಾರಿ ಲಕ್ಷ್ಮೀ-ನಾರಾಯಣ ದೇವತಾ ರೂಪದಲ್ಲಿ ಇಲ್ಲ, ಅವರಂತು ಸಾಕಾರಿ ದೈವೀ ಗುಣಗಳಿರುವ ಮನುಷ್ಯರಾಗಿದ್ದಾರೆ ಮತ್ತು ನಾನು ಅವ್ಯಕ್ತ ದೇವತೆಗಳಾದ ಬ್ರಹ್ಮಾ, ವಿಷ್ಣು, ಶಂಕರನೂ ಅಲ್ಲ. ಭಲೆ ಈ ಸಾಕಾರಿ ದೇವತೆಯು ಪುನರ್ಜನ್ಮದಲ್ಲಿ ಬರುವುದಿಲ್ಲ, ಆದರೆ ನಾನು ಅದೂ ಸಹ ಅಲ್ಲ, ಇದೆಲ್ಲವೂ ನನ್ನ ವಿಭಾಗವಾಗಿದೆ. ಯಾವಾಗ ನಾನೇ ಬರುತ್ತೇನೆಯೋ ಆಗ ವಿಭಾಗವನ್ನೇ ಜೊತೆಯಲ್ಲಿ ಕರೆ ತರುತ್ತೇನೆ ಹಾಗೂ ಅವರ ಮೂಲಕವೇ ದೈವೀ ಸೃಷ್ಠಿಯ ಸ್ಥಾಪನೆ, ಆಸುರಿ ಪ್ರಪಂಚದ ವಿನಾಶ ಹಾಗೂ ಹೊಸ ಸೃಷ್ಟಿಯ ಪಾಲನೆ ಮಾಡಿಸುವುದಕ್ಕಾಗಿ ಬರುತ್ತೇನೆ. ನಾನಂತು ನೇರವಾಗಿ ಮೇಲಿಂದ ಪವಿತ್ರ ಆತ್ಮನೇ ಬರುತ್ತೇನೆ ಮತ್ತು ನಾನು ಯಾವ ಮನುಷ್ಯನ ತನುವಿನಲ್ಲಿ ಬರುತ್ತೇನೆಯೋ ಅವರೂ ಸಹ ಬಹಳ ಜನ್ಮಗಳ ಅಂತ್ಯದಲ್ಲಿ, ತಮೋ ಗುಣದವರಾಗಿದ್ದಾರೆಯೋ ಅವರ ತನುವಿನಲ್ಲಿ ಪ್ರವೇಶವಾಗುತ್ತಾ, ಅವರನ್ನೂ ಪವಿತ್ರರನ್ನಾಗಿ ಮಾಡುತ್ತೇನೆ. ಅವರ ಭವಿಷ್ಯ ಜನ್ಮವು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ ಶ್ರೀಕೃಷ್ಣನಾಗಿದ್ದಾರೆ ಏಕೆಂದರೆ ಪರಮಾತ್ಮನಂತು ಸರ್ವ ಗುಣಗಳ ಸಾಗರ, ವಿಕರ್ಮಾಜೀತನಾಗಿದ್ದಾರೆ, ಅವರಿಂದ ಸೆಕೆಂಡ್ ನಂಬರ್ ಶ್ರೀಕೃಷ್ಣನಾಗುತ್ತಾರೆ, ಅವರದೇ ಅಂತಿಮ ಜನ್ಮದಲ್ಲಿ ಈ ಬ್ರಹ್ಮನ ತನುವಿದೆ. ಪರಮಾತ್ಮನಂತಹ ಪವಿತ್ರ ಆತ್ಮರು ಯಾರೂ ಇಲ್ಲ, ಪವಿತ್ರರರನ್ನಾಗಿ ಮಾಡಬೇಕಾಗುತ್ತದೆ, ಆದ್ದರಿಂದ ಪರಮಾತ್ಮನನ್ನೇ ಪರಮ ಆತ್ಮನೆಂದು ಹೇಳಲಾಗುವುದು.

2. ಹಾಳಾಗಿರುವ ಅದೃಷ್ಟವನ್ನು ಸರಿ ಪಡಿಸುವವರು ಪರಮಾತ್ಮನಾಗಿದ್ದಾರೆ.

ಈಗ ಇದನ್ನಂತು ಎಲ್ಲಾ ಮನುಷ್ಯರು ತಿಳಿದಿದ್ದಾರೆ – ಅದೃಷ್ಟವನ್ನು ರೂಪಿಸುವವರು ಆ ಪರಮಾತ್ಮನೊಬ್ಬರೇ ಆಗಿದ್ದಾರೆ. ಪರಮಾತ್ಮನಿಗೆ ಹೇಳಲಾಗುತ್ತದೆ – ಅದೃಷ್ಟದ ಮಾಲೀಕ, ಅವರೇ ಬಂದು ನಾವು ಆತ್ಮರ ಅದೃಷ್ಟವನ್ನು ರೂಪಿಸುತ್ತಾರೆ. ಯಾರ ಅದೃಷ್ಟವು ಹಾಳಾಗಿರುತ್ತದೆಯೋ ಅವರನ್ನು ಹೊಸಬರನ್ನಾಗಿ ಮಾಡುವವರು ಪರಮಾತ್ಮನಾಗಿದ್ದಾರೆ. ಬಾಕಿ ಅದೃಷ್ಟವನ್ನು ರೂಪಿಸುವವರು ಅಥವಾ ಹಾಳು ಮಾಡುವುದು ಪರಮಾತ್ಮನ ಕೈಯಲ್ಲಿದೆ ಎಂದು ಮನುಷ್ಯರೇನು ಹೇಳುತ್ತಾರೆ, ಅದೆಲ್ಲವೂ ಅಕ್ಷರಷಃ ಅಸತ್ಯವಾಗಿದೆ. ಅದೃಷ್ಟವನ್ನು ರೂಪಿಸುವುದು ಪರಮಾತ್ಮನ ಕೈಯಲ್ಲಿದೆ ಆದರೆ ಯಾವಾಗ ಮನುಷ್ಯರು ಅದೃಷ್ಟವನ್ನು ರೂಪಿಸುವವರನ್ನು ಮರೆಯುತ್ತಾರೆಯೋ, ಆಗ ಅವರ ಅದೃಷ್ಟವು ಹಾಳಾಗಿ ಬಿಡುತ್ತದೆ ಅಂದರೆ ಅದೃಷ್ಠವನ್ನು ಹಾಳು ಮಾಡುವುದು ಮನುಷ್ಯರ ಕೈಯಲ್ಲಿದೆ. ಯಾವಾಗ ಮನುಷ್ಯನು ತಾನೇ ತನ್ನನ್ನು ಮರೆಯುತ್ತಾನೆಯೋ, ತನ್ನ ತಂದೆಯನ್ನು ಮರೆಯುತ್ತಾನೆಯೋ ಆಗಲೇ ಮನುಷ್ಯರಿಂದ ಉಲ್ಟಾ ಕಾರ್ಯವಾಗುವ ಕಾರಣದಿಂದ ಅದೃಷ್ಟಕ್ಕೆ ಗೆರೆಯೆಳೆದುಕೊಳ್ಳುತ್ತಾರೆ. ಹಾಗಾದರೆ ಹಾಳು ಮಾಡುವವರು ಮನುಷ್ಯ ಮತ್ತು ತಯಾರು ಮಾಡುವವರು ಪರಮಾತ್ಮನಾದರು. ಆದ್ದರಿಂದ ಪರಮಾತ್ಮನನ್ನು ಸುಖ ದಾತಾ ಎಂದು ಹೇಳುತ್ತಾರೆ, ದುಃಖ ದಾತಾ ಎಂದು ಹೇಳುವುದಿಲ್ಲ. ನೋಡಿ, ಯಾವಾಗ ಸ್ವಯಂ ಪರಮಾತ್ಮನೇ ಈ ಸೃಷ್ಟಿಯಲ್ಲಿ ಅವತರಣೆಯಾಗುತ್ತಾರೆಯೋ ಆಗ ಎಲ್ಲಾ ಮನುಷ್ಯರ ಹಾಳಾಗಿರುವ ಅದೃಷ್ಟವನ್ನು ರೂಪಿಸುತ್ತಾರೆ ಅರ್ಥಾತ್ ಎಲ್ಲರಿಗೂ ಸದ್ಗತಿಯನ್ನು ಕೊಡುತ್ತಾರೆ. ಆದ್ದರಿಂದ ಪರಮಾತ್ಮನನ್ನು ಎಲ್ಲಾ ಮನುಷ್ಯಾತ್ಮರ ಉದ್ಧಾರ ಮಾಡುವವರೆಂದು ಹೇಳುತ್ತಾರೆ. ಪರಮಾತ್ಮನು ಹೇಳುತ್ತಾರೆ – ಮಕ್ಕಳೇ, ನಾನು ಈ ಸಂಗಮದಲ್ಲಿ ಬಂದು ಎಲ್ಲರ ಅದೃಷ್ಟವನ್ನು ರೂಪಿಸುತ್ತೇನೆ, ಆದರೆ ಕೆಲವರ ಅದೃಷ್ಟವಾಗುವುದು ಮತ್ತೆ ಕೆಲವರದು ಆಗುವುದಿಲ್ಲ ಎಂದಲ್ಲ. ಪರಮಾತ್ಮನಂತು ಎಲ್ಲರ ಅದೃಷ್ಟವನ್ನೂ ರೂಪಿಸುತ್ತಾರೆ ಏಕೆಂದರೆ ಎಲ್ಲಾ ಮನುಷ್ಯರ ಸಂಬಂಧವು ಇಡೀ ಸೃಷ್ಟಿಯೊಂದಿಗಿದೆ. ಆದ್ದರಿಂದಲೇ ಪರಮಾತ್ಮನಿಗಾಗಿ ಹೇಳುತ್ತಾರೆ – ಅದೃಷ್ಟವನ್ನು ರೂಪಿಸುವ ತಂದೆಯೇ ನಮ್ಮ ಮುಂದೆ ಬನ್ನಿ…. ಅಂದಮೇಲೆ ಇದರಿಂದ ಸಿದ್ಧವಾಗುತ್ತದೆ – ಪರಮಾತ್ಮನು ಅದೃಷ್ಟವನ್ನು ರೂಪಿಸುವವರಾಗಿದ್ದಾರೆ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top