03 October 2021 KANNADA Murli Today | Brahma Kumaris

Read and Listen today’s Gyan Murli in Kannada

October 2, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

‘ವಾಚಾ’ ಮತ್ತು ‘ಕರ್ಮಣಾ’ - ಎರಡು ಶಕ್ತಿಗಳನ್ನು ಜಮಾ ಮಾಡಿಕೊಳ್ಳುವ ಈಶ್ವರೀಯ ಸ್ಕೀಮ್

♫ ಕೇಳು ಇಂದಿನ ಮುರ್ಲಿ (audio)➤

ಇಂದು ಆತ್ಮಿಕ ಜ್ಯೋತಿ ತಂದೆಯು ತನ್ನ ಆತ್ಮಿಕ ಪತಂಗಗಳನ್ನು ನೋಡುತ್ತಿದ್ದಾರೆ. ನಾಲ್ಕಾರು ಕಡೆಯ ಪತಂಗಗಳು ಪರಂಜ್ಯೋತಿಗೆ ಅರ್ಪಣೆ ಅರ್ಥಾತ್ ಬಲಿಹಾರಿಯಾಗಿ ಬಿಟ್ಟಿದ್ದಾರೆ. ಬಲಿಹಾರಿಯಾಗುವ ಪತಂಗಗಳು ಅನೇಕರಿದ್ದಾರೆ ಆದರೆ ಬಲಿಹಾರಿಯಾದ ನಂತರ ಪರಂಜ್ಯೋತಿಯ ಸ್ನೇಹದಲ್ಲಿ ‘ಜ್ಯೋತಿಯ ಸಮಾನ’ ಆಗುವುದರಲ್ಲಿ, ಬಲಿಹಾರಿ ಆಗುವುದರಲ್ಲಿ ನಂಬರ್ವಾರ್ ಇದ್ದಾರೆ. ವಾಸ್ತವದಲ್ಲಿ ಬಲಿಹಾರಿ ಆಗುವುದೇ ಹೃದಯದ ಸ್ನೇಹದ ಕಾರಣದಿಂದ. ‘ಹೃದಯದ ಸ್ನೇಹ’ ಮತ್ತು ‘ಸ್ನೇಹ’ – ಇದರಲ್ಲಿಯೂ ಅಂತರವಿದೆ. ಎಲ್ಲರಿಗೂ ಸ್ನೇಹವಿದೆ, ಸ್ನೇಹದ ಕಾರಣದಿಂದಲೇ ಬಲಿಹಾರಿಯಾಗಿದ್ದೀರಿ ಆದರೆ ‘ಹೃದಯದ ಸ್ನೇಹಿ’ಗಳು ತಂದೆಯ ಹೃದಯದ ಮಾತುಗಳನ್ನು ಅಥವಾ ಹೃದಯದ ಆಸೆಗಳನ್ನು ತಿಳಿದುಕೊಳ್ಳುತ್ತಾರೆ ಮತ್ತು ಪೂರ್ಣ ಮಾಡುತ್ತಾರೆ. ಹೃದಯದ ಸ್ನೇಹಿಗಳು ಹೃದಯದ ಆಸೆಗಳನ್ನು ಈಡೇರಿಸುವವರಾಗಿದ್ದಾರೆ. ಹೃದಯದ ಸ್ನೇಹಿ ಅರ್ಥಾತ್ ತಂದೆಯ ಹೃದಯವು ಏನು ಹೇಳಿತು ಅದು ಮಕ್ಕಳ ಹೃದಯದಲ್ಲಿ ಸಮಾವೇಶವಾಯಿತು. ಯಾವುದು ಹೃದಯದಲ್ಲಿ ಸಮಾವೇಶವಾಗುವುದೋ ಅದು ಕರ್ಮದಲ್ಲಿ ಸ್ವತಹ ಬರುವುದು. ಸ್ನೇಹಿ ಆತ್ಮಗಳು ಕೆಲವರು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಬುದ್ಧಿಯಲ್ಲಿ ಸಮಾವೇಶ ಮಾಡಿಕೊಳ್ಳುತ್ತಾರೆ. ಯಾರು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುವರೋ ಅವರು ಕರ್ಮದಲ್ಲಿ ತರುತ್ತಾರೆ. ಬುದ್ಧಿಯಲ್ಲಿ ಸಮಾವೇಶ ಮಾಡಿಕೊಳ್ಳುವವರಿಗೆ ವಿಚಾರ ನಡೆಯುತ್ತದೆ – ಮಾಡಲಾಗುತ್ತದೆಯೋ, ಇಲ್ಲವೋ? ಮಾಡುವುದಂತೂ ಮಾಡಬೇಕಾಗಿದೆ, ಸಮಯ ಬಂದಾಗ ಆಗಿ ಬಿಡುವುದು. ಹೀಗೆ ಆಲೋಚನೆ ನಡೆಯುವ ಕಾರಣ ಅದು ಆಲೋಚನೆಯವರೆಗೇ ಉಳಿದುಬಿಡುತ್ತದೆ. ಕರ್ಮದವರೆಗೆ ಬರುವುದಿಲ್ಲ.

ಇಂದು ಬಾಪ್ದಾದಾ ನೋಡುತ್ತಿದ್ದೆವು – ಬಲಿಹಾರಿ ಆಗುವವರಂತೂ ಎಲ್ಲರೂ ಆಗಿದ್ದಾರೆ. ಒಂದುವೇಳೆ ಬಲಿಹಾರಿಯಾಗದಿದ್ದರೆ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿರಲಿಲ್ಲ ಆದರೆ ತಂದೆಯ ಸ್ನೇಹದ ಹಿಂದೆ ತಂದೆಯು ಏನನ್ನು ಹೇಳಿದರೋ ಅದನ್ನು ಮಾಡುವುದಕ್ಕಾಗಿ ಬಲಿಹಾರಿ ಮಾಡಬೇಕಾಗುತ್ತದೆ ಅರ್ಥಾತ್ ನನ್ನತನವನ್ನು, ಭಲೆ ನನ್ನತನದಲ್ಲಿ ಅಭಿಮಾನವಿರಲಿ ಅಥವಾ ಬಲಹೀನತೆಯಿರಲಿ – ಎರಡರ ತ್ಯಾಗ ಮಾಡಬೇಕಾಗುತ್ತದೆ. ಇದಕ್ಕೇ ಅರ್ಪಣೆಯೆಂದು ಹೇಳಲಾಗುತ್ತದೆ. ಬಲಿಹಾರಿಯಾಗುವವರು ಅನೇಕರಿದ್ದಾರೆ ಆದರೆ ಬಲಿಹಾರಿ ಮಾಡುವುದಕ್ಕಾಗಿ ಸಾಹಸವನ್ನು ಇಡುವವರು ನಂಬರ್ವಾರ್ ಇದ್ದಾರೆ.

ಇಂದು ಬಾಪ್ದಾದಾ ಕೇವಲ ಒಂದು ತಿಂಗಳಿನ ಫಲಿತಾಂಶವನ್ನು ನೋಡುತ್ತಿದ್ದೆವು, ಇದೇ ಸೀಜನ್ನಿನಲ್ಲಿ ವಿಶೇಷವಾಗಿ ಬಾಪ್ದಾದಾ ‘ತಂದೆಯ ಸಮಾನ’ರಾಗುವ ಭಿನ್ನ-ಭಿನ್ನ ರೂಪಗಳಿಂದ ಎಷ್ಟೊಂದು ಬಾರಿ ಸೂಚನೆ ನೀಡಿದ್ದಾರೆ ಮತ್ತು ಬಾಪ್ದಾದಾರವರಿಗೆ ವಿಶೇಷವಾಗಿ ಇದೇ ಹೃದಯದ ಶ್ರೇಷ್ಠ ಆಸೆಯಿದೆ. ಎಷ್ಟೊಂದು ಖಜಾನೆ ಸಿಕ್ಕಿತು, ಎಷ್ಟೊಂದು ವರದಾನ ಸಿಕ್ಕಿತು. ವರದಾನಕ್ಕಾಗಿ ಓಡೋಡಿ ಬಂದಿರಿ. ಮಕ್ಕಳು ಸ್ನೇಹದಿಂದ ಮಿಲನ ಮಾಡಲು ಬರುತ್ತಾರೆ, ವರದಾನವನ್ನು ಪಡೆದುಕೊಂಡು ಖುಷಿಯಾಗುತ್ತಾರೆಂದು ತಂದೆಗೂ ಖುಷಿಯಿದೆ ಆದರೆ ತಂದೆಯ ಹೃದಯದ ಆಸೆಯನ್ನು ಪೂರ್ಣ ಮಾಡುವವರು ಯಾರು? ಯಾವುದನ್ನು ತಂದೆಯನ್ನು ತಿಳಿಸಿದರೋ ಅದನ್ನು ಕರ್ಮದಲ್ಲಿ ಎಲ್ಲಿಯವರೆಗೆ ತಂದಿರಿ? ಮನಸ್ಸಾ-ವಾಚಾ-ಕರ್ಮಣಾ – ಮೂರರ ಫಲಿತಾಂಶವು ಎಲ್ಲಿಯವರೆಗೆ ಇದೆಯೆಂದು ತಿಳಿದುಕೊಳ್ಳುತ್ತೀರಿ? ಶಕ್ತಿಶಾಲಿ ಮನಸ್ಸಾ, ಸಂಬಂಧ-ಸಂಪರ್ಕದಲ್ಲಿ ಎಲ್ಲಿಯವರೆಗೆ ಬಂದಿದೆ? ಕೇವಲ ಇದು ಸ್ವ-ಉನ್ನತಿಗಾಗಿ ಬಹಳ ಒಳ್ಳೆಯದಾಗಿದೆ ಮತ್ತು ಮಾಡಲೇಬೇಕೆಂದು ತಮಗೆ ತಾವು ಮನನ ಮಾಡಿದಿರಿ ಆದರೆ ಶ್ರೇಷ್ಠ ಆತ್ಮರ ಶ್ರೇಷ್ಠ ಮನಸ್ಸು ಅರ್ಥಾತ್ ಸಂಕಲ್ಪವು ಶಕ್ತಿಶಾಲಿಯಾಗಿರುತ್ತದೆ, ಶುಭಭಾವನೆ-ಶುಭಕಾಮನೆಯಿಂದ ಕೂಡಿರುತ್ತದೆ. ಮನಸ್ಸಾ ಶಕ್ತಿಯ ದರ್ಪಣ ಯಾವುದಾಗಿದೆ? ಮಾತು ಮತ್ತು ಕರ್ಮವೇ ದರ್ಪಣವಾಗಿದೆ. ಅಜ್ಞಾನಿ ಆತ್ಮರಿರಲಿ, ಜ್ಞಾನಿ ಆತ್ಮರಿರಲಿ – ಇಬ್ಬರ ಸಂಬಂಧ-ಸಂಪರ್ಕದಲ್ಲಿಯೂ ಮಾತು ಮತ್ತು ಕರ್ಮವು ಮನಸ್ಸಿನ ದರ್ಪಣವಾಗಿದೆ. ಒಂದುವೇಳೆ ಮಾತು ಮತ್ತು ಕರ್ಮವು ಶುಭಭಾವನೆ-ಶುಭಕಾಮನೆಯಿಂದ ಕೂಡಿರದಿದ್ದರೆ ಮನಸ್ಸಾ ಶಕ್ತಿಯ ಪ್ರತ್ಯಕ್ಷ ಸ್ವರೂಪವು ಹೇಗೆ ಕಂಡು ಬರುವುದು? ಯಾರ ಮನಸ್ಸು ಶಕ್ತಿಶಾಲಿ ಅಥವಾ ಶುಭವಾಗಿದೆಯೋ ಅವರ ಮಾತು ಮತ್ತು ಕರ್ಮವು ಸ್ವತಹ ಶಕ್ತಿಶಾಲಿ ಮತ್ತು ಶುದ್ಧವಾಗಿರುವುದು, ಶುಭ ಭಾವನೆಯಿಂದ ಕೂಡಿರುವುದು. ಮನಸ್ಸಾ ಶಕ್ತಿಶಾಲಿ ಅರ್ಥಾತ್ ನೆನಪಿನ ಶಕ್ತಿಯೂ ಶ್ರೇಷ್ಠವಾಗಿರುವುದು, ಶಕ್ತಿಶಾಲಿಗಳು ಸಹಜಯೋಗಿಗಳೂ ಆಗಿರುವರು. ಕೇವಲ ಸಹಜಯೋಗಿಗಳಷ್ಟೇ ಅಲ್ಲ, ಸಹಜ ಕರ್ಮಯೋಗಿಗಳೂ ಆಗಿರುತ್ತಾರೆ.

ಬಾಪ್ದಾದಾ ನೋಡಿದೆವು – ನೆನಪನ್ನು ಶಕ್ತಿಶಾಲಿ ಮಾಡಿಕೊಳ್ಳುವುದರಲ್ಲಿ ಮೆಜಾರಿಟಿ ಮಕ್ಕಳಿಗೆ ಗಮನವಿದೆ. ನೆನಪನ್ನು ಸಹಜ ಮತ್ತು ನಿರಂತರ ಮಾಡಿಕೊಳ್ಳುವುದಕ್ಕಾಗಿ ಉಲ್ಲಾಸ-ಉತ್ಸಾಹವೂ ಇದೆ. ಮುಂದುವರೆಯುತ್ತಿದ್ದಾರೆ ಮತ್ತು ಮುಂದುವರೆಯುತ್ತಲೇ ಇರುತ್ತಾರೆ ಏಕೆಂದರೆ ತಂದೆಯ ಜೊತೆ ಸ್ನೇಹವು ಚೆನ್ನಾಗಿದೆ. ಆದ್ದರಿಂದ ನೆನಪಿನ ಗಮನವು ಚೆನ್ನಾಗಿದೆ ಮತ್ತು ನೆನಪಿಗೆ ಆಧಾರವೇ ಆಗಿದೆ – ‘ಸ್ನೇಹ’. ತಂದೆಯೊಂದಿಗೆ ವಾರ್ತಾಲಾಪ ಮಾಡುವುದರಲ್ಲಿಯೂ ಎಲ್ಲರೂ ಚೆನ್ನಾಗಿದ್ದಾರೆ. ಕೆಲಕೆಲವೊಮ್ಮೆ ಸ್ವಲ್ಪ ಕಣ್ಣು ಬಿಡುತ್ತಾರೆ. ಅದೂ ಸಹ ಯಾವಾಗ ಪರಸ್ಪರ ಸ್ವಲ್ಪ ಮುನಿಸಿಕೊಳ್ಳುವರೋ ಆಗ. ಮತ್ತೆ ತಂದೆಗೆ ದೂರು ಕೊಡುತ್ತಾರೆ – ತಾವೇಕೆ ಇದನ್ನು ಸರಿಪಡಿಸುತ್ತಿಲ್ಲ ಎಂದು. ಆದರೂ ಸಹ ಅದು ಸ್ನೇಹ ತುಂಬಿದ ಪ್ರೀತಿಯ ದೃಷ್ಟಿಯಾಗಿದೆ ಆದರೆ ಸಂಘಟನೆಯಲ್ಲಿ ಬರುತ್ತಾ ಕರ್ಮದಲ್ಲಿ, ಕಾರೋಬಾರ್ನಲ್ಲಿ, ಪರಿವಾರದಲ್ಲಿ ಬಂದಾಗ ಸಂಘಟನೆಯಲ್ಲಿ ಮಾತು ಅರ್ಥಾತ್ ವಾಚಾ ಶಕ್ತಿ ಇದರಲ್ಲಿ ವ್ಯರ್ಥವು ಹೆಚ್ಚು ಕಂಡು ಬರುತ್ತಿದೆ.

ವಾಣಿಯ ಶಕ್ತಿಯು ವ್ಯರ್ಥವಾಗಿ ಹೋಗುವ ಕಾರಣ ವಾಣಿಯಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡಲು ಯಾವ ಹರಿತ ಅಥವಾ ಶಕ್ತಿಯ ಅನುಭವ ಮಾಡಿಸಬೇಕೋ ಅದು ಕಡಿಮೆಯಾಗಿ ಬಿಡುತ್ತದೆ. ಅವರ ಮಾತುಗಳೇನೋ ಇಷ್ಟವಾಗುತ್ತದೆ, ಇದು ಬೇರೆ ಮಾತಾಗಿದೆ ಏಕೆಂದರೆ ತಂದೆಯ ಮಾತುಗಳನ್ನೇ ಪುನರಾವರ್ತನೆ ಮಾಡುವ ಕಾರಣ ಅವು ಖಂಡಿತ ಇಷ್ಟವಾಗುತ್ತದೆ. ಆದರೆ ವಾಚಾದ ಶಕ್ತಿಯು ವ್ಯರ್ಥವಾಗಿ ಹೋಗುವ ಕಾರಣ ಶಕ್ತಿಯು ಜಮಾ ಆಗುವುದಿಲ್ಲ ಆದ್ದರಿಂದ ತಂದೆಯನ್ನು ಪ್ರತ್ಯಕ್ಷ ಮಾಡುವ ಶಬ್ಧವು ಕೇಳಿಬರುವುದರಲ್ಲಿ ಇನ್ನೂ ತಡವಾಗುತ್ತಿದೆ. ಸಾಧಾರಣ ಮಾತು ಹೆಚ್ಚಿನದಾಗಿದೆ ಆದರೆ ಈಗ `ಅಲೌಕಿಕ ಮಾತಾಗಿರಲಿ’ `ಫರಿಶ್ತೆಗಳ ಮಾತಿರಲಿ’ ಈಗ ಈ ವರ್ಷದಲ್ಲಿ ಇದರ ಮೇಲೆ ಅಂಡರ್ಲೈನ್ ಮಾಡಿಕೊಳ್ಳಿ. ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ, ತಂದೆಯದು ಫರಿಶ್ತೆಗಳ ಮಾತಾಗಿತ್ತು, ಕಡಿಮೆ ಮಾತು ಮತ್ತು ಮಧುರ ಮಾತಾಗಿತ್ತು. ಯಾವ ಮಾತಿಗೆ ಫಲ ಸಿಗಬೇಕು, ಅದು ಯಥಾರ್ಥ ಮಾತಾಗಿದೆ. ಯಾವ ಮಾತಿಗೆ ಯಾವುದೇ ಫಲವಿಲ್ಲವೋ ಅದು ವ್ಯರ್ಥವಾಗಿದೆ. ಭಲೆ ಕಾರೋಬಾರ್ನ ಫಲವಾಗಿರಲಿ, ಕಾರೋಬಾರ್ಗಾಗಿಯೂ ಮಾತನಾಡಲೇ ಬೇಕಾಗುತ್ತದೆ ಆದರೆ ಅದನ್ನೂ ಸಹ ಬಹಳ ಉದ್ದಗಲವಾಗಿ ಮಾತನಾಡಬೇಡಿ. ಈಗ ಶಕ್ತಿಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಹೇಗೆ `ನೆನಪಿನಿಂದ’ ಮನಸ್ಸಾ ಶಕ್ತಿಯನ್ನು ಜಮಾ ಮಾಡಿಕೊಳ್ಳುತ್ತೀರಿ. ಶಾಂತಿಯಲ್ಲಿ ಕುಳಿತುಕೊಳ್ಳುತ್ತೀರೆಂದರೆ `ಸಂಕಲ್ಪ ಶಕ್ತಿ’ಯನ್ನು ಜಮಾ ಮಾಡಿಕೊಳ್ಳುತ್ತೀರಿ. ಹಾಗೆಯೇ ವಾಣಿಯ ಶಕ್ತಿಯನ್ನೂ ಜಮಾ ಮಾಡಿಕೊಳ್ಳಿ.

ಒಂದು ಹಾಸ್ಯದ ಮಾತನ್ನು ತಿಳಿಸುತ್ತೇವೆ – ಬಾಪ್ದಾದಾರವರ ವತನದಲ್ಲಿ ಎಲ್ಲರ ಉಳಿತಾಯದ ಭಂಡಾರಗಳಿವೆ. ತಮ್ಮ ಸೇವಾಕೇಂದ್ರದಲ್ಲಿಯೂ ಭಂಡಾರಗಳು ಇವೆಯಲ್ಲವೆ ಆದರೆ ತಂದೆಯ ವತನದಲ್ಲಿ ಮಕ್ಕಳ ಭಂಡಾರವಿದೆ. ಇಡೀ ದಿನದಲ್ಲಿ ಪ್ರತಿಯೊಬ್ಬರೂ ಮನಸ್ಸಾ-ವಾಚಾ-ಕರ್ಮಣಾ ಮೂರು ಶಕ್ತಿಗಳನ್ನು ಉಳಿತಾಯ ಮಾಡಿ ಜಮಾ ಮಾಡಿಕೊಳ್ಳುತ್ತೀರಿ. ಆ ಭಂಡಾರವು ವತನದಲ್ಲಿದೆ. ಮನಸ್ಸಾ ಶಕ್ತಿಯನ್ನು ಎಷ್ಟು ಜಮಾ ಮಾಡಿಕೊಂಡಿರಿ, ವಾಚಾಶಕ್ತಿ, ಕರ್ಮಣಾ ಶಕ್ತಿಯನ್ನು ಎಷ್ಟು ಜಮಾ ಮಾಡಿಕೊಂಡಿರಿ. ಇದೆಲ್ಲವೂ ಲೆಕ್ಕವಿದೆ. ತಾವೂ ಸಹ ಇಲ್ಲಿ ಖರ್ಚು ಮತ್ತು ಉಳಿತಾಯದ ಲೆಕ್ಕಪತ್ರಗಳನ್ನು ಕಳುಹಿಸುತ್ತೀರಲ್ಲವೆ ಅಂದಾಗ ಬಾಪ್ದಾದಾ ಈ ಉಳಿತಾಯದ ಭಂಡಾರವನ್ನು ನೋಡಿದೆವು ಅಂದಮೇಲೆ ಅದರಲ್ಲಿ ಏನಿರಬಹುದು. ಜಮಾದ ಖಾತೆಯು ಎಷ್ಟು ಬಂದಿರಬಹುದು? ಪ್ರತಿಯೊಬ್ಬರ ಫಲಿತಾಂಶವು ಬೇರೆ-ಬೇರೆಯಾಗಿದೆ. ಭಂಡಾರಗಳಂತೂ ಬಹಳ ತುಂಬಿತ್ತು ಆದರೆ ಚಿಲ್ಲರೆಯು ಹೆಚ್ಚಾಗಿತ್ತು. ಚಿಕ್ಕ ಮಕ್ಕಳು ಭಂಡಾರದಲ್ಲಿ ಚಿಲ್ಲರೆಯನ್ನು ಜಮಾ ಮಾಡುತ್ತಾರೆ ಆಗ ಭಂಡಾರವು ಎಷ್ಟು ಭಾರಿಯಾಗಿ ಬಿಡುತ್ತದೆ. ಅದೇರೀತಿ ವಾಚಾದ ಫಲಿತಾಂಶದಲ್ಲಿ ವಿಶೇಷವಾಗಿ ಚಿಲ್ಲರೆಯನ್ನು ಹೆಚ್ಚು ನೋಡಿದೆವು. ಹೇಗೆ ನೆನಪಿನ ಮೇಲೆ ಗಮನವಿದೆಯೋ ಹಾಗೆ ವಾಚಾದ ಮೇಲೆ ಅಷ್ಟೊಂದು ಗಮನವಿಲ್ಲ. ಆದ್ದರಿಂದ ಈ ವರ್ಷದಲ್ಲಿ ವಾಚಾ ಮತ್ತು ಕರ್ಮಣಾ – ಇವೆರಡೂ ಶಕ್ತಿಗಳನ್ನು ಜಮಾ ಮಾಡಿಕೊಳ್ಳುವ ಉಳಿತಾಯ ಯೋಜನೆ ಮಾಡಿಕೊಳ್ಳಿ. ಹೇಗೆ ಸರ್ಕಾರವೂ ಸಹ ಭಿನ್ನ-ಭಿನ್ನ ವಿಧಿಯಿಂದ ಉಳಿತಾಯ ಯೋಜನೆ ಮಾಡುತ್ತದೆಯಲ್ಲವೆ ಹಾಗೆಯೇ ಇದರಲ್ಲಿ ಮೂಲವು ಮನಸ್ಸಾ ಶಕ್ತಿಯಾಗಿದೆ. ಇದಂತೂ ಎಲ್ಲರಿಗೂ ತಿಳಿದಿದೆ ಆದರೆ ಮನಸ್ಸಾ ಜೊತೆ ಜೊತೆಗೆ ವಿಶೇಷವಾಗಿ ವಾಚಾ ಮತ್ತು ಕರ್ಮಣಾ – ಇದು ಸಂಬಂಧ-ಸಂಪರ್ಕದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಮನಸ್ಸಾ ಶಕ್ತಿಯಾದರೂ ಗುಪ್ತವಾಗಿದೆ ಆದರೆ ಇದು ಪ್ರತ್ಯಕ್ಷವಾಗಿ ಕಾಣುವಂತದ್ದಾಗಿದೆ. ವಾಚಾ ಶಕ್ತಿಯನ್ನು ಜಮಾ ಮಾಡಿಕೊಳ್ಳುವ ಸಾಧನವಾಗಿದೆ – `ಕಡಿಮೆ ಮಾತನಾಡಿ, ಮಧುರವಾಗಿ ಮಾತನಾಡಿ ಮತ್ತು ಸ್ವಮಾನದಿಂದ ಮಾತನಾಡಿ’ ಹೇಗೆ ಬ್ರಹ್ಮಾ ತಂದೆಯು ಕಿರಿಯರು ಅಥವಾ ಹಿರಿಯರನ್ನು ಸ್ವಮಾನದ ಮಾತಿನಿಂದ ತಮ್ಮವರನ್ನಾಗಿ ಮಾಡಿಕೊಂಡರು. ಈ ವಿಧಿಯಿಂದ ಎಷ್ಟು ಮುಂದುವರೆಯುತ್ತೀರೋ ಅಷ್ಟು ವಿಜಯದ ಮಾಲೆಯು ಬೇಗನೆ ತಯಾರಾಗುವುದು ಅಂದಾಗ ಈ ವರ್ಷದಲ್ಲಿ ಏನು ಮಾಡಬೇಕಾಗಿದೆ? ಸೇವೆಯ ಜೊತೆಗೆ ವಿಶೇಷವಾಗಿ ಈ ಶಕ್ತಿಗಳನ್ನು ಜಮಾ ಮಾಡಿಕೊಳ್ಳುತ್ತಾ ಸೇವೆ ಮಾಡಬೇಕಾಗಿದೆ.

ಸೇವಾ ಯೋಜನೆಗಳನ್ನಂತೂ ಎಲ್ಲರೂ ಬಹಳ ಚೆನ್ನಾಗಿ ಮಾಡಿದ್ದೀರಿ ಮತ್ತು ಇಲ್ಲಿಯವರೆಗೆ ಯೋಜನೆಯ ಪ್ರಮಾಣ ಸೇವೆ ಮಾಡುತ್ತಿದ್ದೀರಿ. ನಾಲ್ಕಾರು ಕಡೆ ಭಾರತದಲ್ಲಿರಲಿ, ವಿದೇಶದಲ್ಲಿರಲಿ ಚೆನ್ನಾಗಿ ಮತ್ತು ಮುಂದೆಯೂ ಮಾಡುವವರಿದ್ದೀರಿ. ಹೇಗೆ ಸೇವೆಯಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಬಹಳ ಚೆನ್ನಾಗಿ ಫಲಿತಾಂಶ ತರುವ ಶುಭ ಭಾವನೆಯಿಂದ ಮುಂದುವರೆಯುತ್ತಿದ್ದೀರಿ. ಅದೇರೀತಿ ಸೇವೆಯಲ್ಲಿ ಸಂಘಟಿತ ರೂಪದಲ್ಲಿ ಸದಾ ಸಂತುಷ್ಟವಾಗಿರುವ ಮತ್ತು ಸಂತುಷ್ಟ ಪಡಿಸುವ ಸಂಕಲ್ಪವೂ ಸಹ ಸದಾ ಜೊತೆ ಜೊತೆಯಿರಲಿ ಏಕೆಂದರೆ ಒಂದೇ ಸಮಯದಲ್ಲಿ ಮೂರು ಪ್ರಕಾರದ ಸೇವೆಯು ಒಟ್ಟಿಗೆ ನಡೆಯುತ್ತದೆ. ಒಂದನೆಯದು – ತನ್ನ ಸಂತುಷ್ಟತೆ, ಇದು ಸ್ವಯಂನ ಸೇವೆಯಾಗಿದೆ. ಎರಡನೆಯದು – ಸಂಘಟನೆಯಲ್ಲಿ ಸಂತುಷ್ಟತೆ, ಇದು ಪರಿವಾರದ ಸೇವೆಯಾಗಿದೆ. ಮೂರನೆಯದು – ಭಾಷೆಯ ಮೂಲಕ ಅಥವಾ ಯಾವುದೇ ವಿಧಿಯ ಮೂಲಕ ವಿಶ್ವದ ಆತ್ಮಗಳ ಸೇವೆಯಾಗಿದೆ. ಒಂದೇ ಸಮಯದಲ್ಲಿ ಮೂರು ಸೇವೆಗಳಾಗುತ್ತವೆ. ಯಾವುದೇ ಕಾರ್ಯಕ್ರಮ ಮಾಡುತ್ತೀರೆಂದರೆ ಅದರಲ್ಲಿ ಮೂರು ಸೇವೆಗಳು ಸಮಾವೇಶವಾಗಿವೆ. ಹೇಗೆ ವಿಶ್ವ ಸೇವೆಯ ಫಲಿತಾಂಶ ಹಾಗೂ ವಿಧಿಯನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೀರೋ ಅದೇರೀತಿ ಎರಡು ಸೇವೆಗಳು `ಸ್ವ ಮತ್ತು ಸಂಘಟನೆ’ – ಈ ಮೂರು ನಿರ್ವಿಘ್ನವಾಗಿರಲಿ ಆಗ ಸೇವೆಯ ನಂಬರ್ವನ್ ಸಫಲತೆಯೆಂದು ಹೇಳಲಾಗುವುದು. ಈ ಮೂರೂ ಸಫಲತೆಗಳು ಒಟ್ಟಿಗೆ ಆಗುವುದೇ ನಂಬರ್ ತೆಗೆದುಕೊಳ್ಳುವುದಾಗಿದೆ. ಈ ವರ್ಷ ಮೂರೂ ಸೇವೆಗಳ ಸಫಲತೆಯು ಜೊತೆ ಜೊತೆಯಿರಲಿ – ಈ ಘಂಟೆಯು ಮೊಳಗಲಿ. ಒಂದುವೇಳೆ ಒಂದು ಮೂಲೆಯಲ್ಲಿ ಘಂಟೆ ಬಾರಿಸಿದರೆ ಕುಂಭಕರ್ಣರ ಕಿವಿಗಳವರೆಗೆ ತಲುಪುವುದಿಲ್ಲ. ಯಾವಾಗ ನಾಲ್ಕಾರು ಕಡೆ ಈ ಘಂಟೆ ಮೊಳಗುವುದೋ ಆಗ ಈ ಕುಂಭಕರ್ಣರು ಜಾಗೃತರಾಗುವರು. ಈಗ ಒಬ್ಬರು ಏಳುತ್ತಾರೆ, ಇನ್ನೊಬ್ಬರು ಮಲಗುತ್ತಾರೆ. ಇನ್ನೊಬ್ಬರು ಎದ್ದಾಗ ಮೂರನೆಯವರು ಮಲಗುತ್ತಾರೆ. ಸ್ವಲ್ಪ ಜಾಗೃತರಾದರೂ ಸಹ `ಚೆನ್ನಾಗಿದೆ-ಚೆನ್ನಾಗಿದೆ’ ಎಂದು ಹೇಳಿ ಮತ್ತೆ ಮಲಗಿ ಬಿಡುತ್ತಾರೆ. ಆದರೆ ಈಗ ಜಾಗೃತರಾಗಲಿ ಮತ್ತು ಬಾಯಿಂದ ಹಾಗೂ ಮನಸ್ಸಿನಿಂದ `ಅಹೋ ಪ್ರಭು!’ ಎಂದು ಹೇಳಲಿ ಮತ್ತು ಮುಕ್ತಿಯ ಆಸ್ತಿಯನ್ನೂ ತೆಗೆದುಕೊಳ್ಳಲಿ ಆಗ ಸಮಾಪ್ತಿಯಾಗುವುದು. ಜಾಗೃತರಾದಾಗಲೇ ಮುಕ್ತಿಯ ಆಸ್ತಿಯನ್ನು ತೆಗೆದುಕೊಳ್ಳುವರು ಅಂದಾಗ ಏನು ಮಾಡಬೇಕೆಂದು ತಿಳಿಯಿತೆ? ಒಬ್ಬರು ಇನ್ನೊಬ್ಬರ ಸಹಯೋಗಿಗಳಾಗಿ. ಇನ್ನೊಬ್ಬರ ಉಳಿತಾಯದಲ್ಲಿ ತನ್ನ ಉಳಿತಾಯವಾಗಿ ಬಿಡುವುದು.

ಸೇವಾ ಯೋಜನೆಯಲ್ಲಿ ಎಷ್ಟು ಸಂಪರ್ಕದಲ್ಲಿ ಸಮೀಪ ತರುತ್ತೀರೋ ಅಷ್ಟು ಸೇವೆಯ ಪ್ರತ್ಯಕ್ಷ ಫಲಿತಾಂಶವು ಕಂಡುಬರುವುದು. ಸಂದೇಶ ಕೊಡುವಂತಹ ಸೇವೆಯನ್ನಂತೂ ಮಾಡುತ್ತಾ ಬಂದಿದ್ದೀರಿ, ಮಾಡುತ್ತಾ ಇರಿ ಆದರೆ ವಿಶೇಷವಾಗಿ ಈ ವರ್ಷದಲ್ಲಿ ಕೇವಲ ಸಂದೇಶ ಕೊಡುವುದಲ್ಲ, ಸಹಯೋಗಿಗಳನ್ನಾಗಿ ಮಾಡಬೇಕಾಗಿದೆ ಅರ್ಥಾತ್ ಸಂಪರ್ಕದಲ್ಲಿ ಸಮೀಪ ತರಬೇಕಾಗಿದೆ. ಕೇವಲ ಫಾರ್ಮನ್ನು ತುಂಬಿಸಿದಿರಿ, ಇದಂತೂ ನಡೆಯುತ್ತಾ ಇರುತ್ತದೆ ಆದರೆ ಈ ವರ್ಷದಲ್ಲಿ ಮುಂದುವರೆಯಿರಿ, ಅವರಿಂದ ಕೇವಲ ಫಾರ್ಮ್ ತುಂಬಿಸಿ ಬಿಟ್ಟು ಬಿಡಬೇಡಿ. ಅವರನ್ನು ಸಂಬಂಧದಲ್ಲಿ ತನ್ನಿರಿ. ಎಂತಹ ವ್ಯಕ್ತಿಯೋ ಅದೇ ರೀತಿ ಅವರನ್ನು ಸಂಪರ್ಕದಲ್ಲಿ ತರುವ ಯೋಜನೆ ಮಾಡಿ. ಭಲೆ ಚಿಕ್ಕ-ಚಿಕ್ಕ ಕಾರ್ಯಕ್ರಮಗಳನ್ನೇ ಮಾಡಿ ಆದರೆ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ. ಕೇವಲ ಒಂದು ಗಂಟೆಗಾಗಿ ಅಥವಾ ಫಾರ್ಮನ್ನು ತುಂಬಿಸಿಕೊಳ್ಳುವ ಸಮಯದವರೆಗೆ ಅವರನ್ನು ಸಹಯೋಗಿಗಳನ್ನಾಗಿ ಮಾಡುವುದಲ್ಲ ಆದರೆ ಸಹಯೋಗದ ಮೂಲಕ ಅವರನ್ನು ಸಮೀಪ ತರಬೇಕಾಗಿದೆ. ಸಂಪರ್ಕದಲ್ಲಿ, ಸಂಬಂಧದಲ್ಲಿ ತನ್ನಿ, ಇದರಿಂದ ಮುಂದೆ ಹೋದಂತೆ ಸೇವೆಯ ರೂಪವು ಪರಿವರ್ತನೆಯಾಗುವುದು. ತಾವು ತಮ್ಮ ಬಗ್ಗೆ ಹೇಳಿಕೊಳ್ಳುವುದಲ್ಲ, ತಮ್ಮ ಕಡೆಯಿಂದ ತಮ್ಮ ಸಂಬಂಧದಲ್ಲಿ ಬರುವವರು ಮಾತನಾಡುತ್ತಾರೆ, ತಮ್ಮ ಮಹಿಮೆ ಮಾಡುತ್ತಾರೆ. ಕೇವಲ ತಾವು ಆಶೀರ್ವಾದ ಮತ್ತು ದೃಷ್ಟಿ ನೀಡಬೇಕಾಗುವುದು. ಹೇಗೆ ಇತ್ತೀಚೆಗೆ ಶಂಕರಾಚಾರ್ಯರನ್ನು ಆಸನದ ಮೇಲೆ ಕೂರಿಸುತ್ತಾರೆ ಅದೇರೀತಿ ತಮ್ಮನ್ನು ಪೂಜ್ಯ ಸ್ಥಿತಿಯ ಕುರ್ಚಿಯ ಮೇಲೆ ಕುಳ್ಳರಿಸುತ್ತಾರೆ, ಬೆಳ್ಳಿಯದಲ್ಲ. ಧರಣಿಯನ್ನು ತಯಾರು ಮಾಡುವವರು ನಿಮಿತ್ತರಾಗಿರುತ್ತಾರೆ ಮತ್ತು ತಾವು ಕೇವಲ ದೃಷ್ಟಿಯಿಂದ ಬೀಜವನ್ನು ಹಾಕಬೇಕಾಗಿದೆ, ಆಶೀರ್ವಾದದ ಎರಡು ಮಾತನ್ನು ಮಾತನಾಡಬೇಕಾಗಿದೆ ಆಗಲೇ ಪ್ರತ್ಯಕ್ಷತೆಯಾಗುವುದು. ತಮ್ಮಲ್ಲಿ ತಂದೆಯು ಕಾಣಿಸುವವರು ಮತ್ತು ತಂದೆಯ ದೃಷ್ಟಿ, ತಂದೆಯ ಸ್ನೇಹದ ಅನುಭೂತಿಯು ಪಡೆಯುತ್ತಿದ್ದಂತೆಯೇ ಪ್ರತ್ಯಕ್ಷತೆಯ ಘಂಟೆಯು ಮೊಳಗಲು ಆರಂಭಿಸುವುದು.

ಈಗ ಸೇವೆಯ ಸುವರ್ಣ ಮಹೋತ್ಸವವನ್ನು ಪೂರ್ಣ ಮಾಡಿದಿರಿ. ಈಗಿನ್ನೂ ಅನ್ಯರು ಸೇವೆ ಮಾಡುತ್ತಿದ್ದಾರೆ ಮತ್ತು ತಾವು ನೋಡಿ-ನೋಡಿ ಹರ್ಷಿತರಾಗುತ್ತಾ ಇರುತ್ತೀರಿ. ಹೇಗೆ ಪೋಪ್ ಏನು ಮಾಡುತ್ತಾರೆ? ಇಷ್ಟು ದೊಡ್ಡ ಸಭೆಯ ಮಧ್ಯದಲ್ಲಿ ದೃಷ್ಟಿ ನೀಡಿ ಆಶೀರ್ವಚನಗಳನ್ನು ಕೊಡುತ್ತಾರೆ. ಅವರ ಪ್ರತಿ ಅನ್ಯರು ಉದ್ದಗಲವಾಗಿ ಭಾಷಣ ಮಾಡಲು ನಿಮಿತ್ತರಾಗುತ್ತಾರೆ. ಹಾಗೆಯೇ ಅಂತಿಮದಲ್ಲಿ ನಮಗೆ ಇದನ್ನು ತಂದೆಯು ತಿಳಿಸಿದ್ದಾರೆಂದು ತಾವು ಹೇಳುವುದಲ್ಲ. ನಿಮ್ಮ ಪರವಾಗಿ ಅನ್ಯರು ಹೇಳುತ್ತಾರೆ – ಇವರು ಏನನ್ನು ತಿಳಿಸಿದರೋ ಅವು ತಂದೆಯ ಮಾತುಗಳಾಗಿವೆ, ಮತ್ತ್ಯಾರದೂ ಅಲ್ಲ. ಹೀಗೆ ಕಳೆಯುತ್ತಾ ಹೋದಂತೆ ಇಂತಹ ಭುಜಗಳು ತಯಾರಾಗುತ್ತಾರೆ ಹೇಗೆ ಸೇವಾಕೇಂದ್ರಗಳನ್ನು ಸಂಭಾಲನೆ ಮಾಡಲು ಭುಜಗಳು ತಯಾರಾದರಲ್ಲವೆ. ಅದೇ ರೀತಿ ಸ್ಟೇಜಿನ ಮೇಲೆ ತಮ್ಮ ಪರವಾಗಿ ಮಾತನಾಡುವವರು, ಅನುಭವ ಮಾಡಿ ಹೇಳುವವರು ಅನ್ಯರು ಬರುತ್ತಾರೆ. ಕೇವಲ ಮಹಿಮೆ ಮಾಡುವವರಲ್ಲ, ಜ್ಞಾನದ ಗುಹ್ಯ ಮಾತುಗಳನ್ನು ಸ್ಪಷ್ಟ ಮಾಡುವವರು ಪರಮಾತ್ಮನ ಜ್ಞಾನವನ್ನು ಸಿದ್ಧ ಮಾಡುವಂತಹವರು ನಿಮಿತ್ತರಾಗುತ್ತಾರೆ ಆದರೆ ಅದಕ್ಕಾಗಿ ಅಂತಹ ವ್ಯಕ್ತಿಗಳನ್ನು ಸ್ನೇಹಿ, ಸಹಯೋಗಿ ಮತ್ತು ಸಂಪರ್ಕದಲ್ಲಿ ತರುತ್ತಾ, ಸಂಬಂಧದಲ್ಲಿ ತನ್ನಿ. ಈ ಇಡೀ ಕಾರ್ಯಕ್ರಮದ ಲಕ್ಷ್ಯವೇ ಇದಾಗಿದೆ – ಇಂತಹ ಸಹಯೋಗಿಗಳನ್ನು ತಯಾರು ಮಾಡಿ, ತಾವು `ಮೈಟ್’ ಆಗಿ ಮತ್ತು ಅವರು `ಮೈಕ್’ ಆಗಲಿ. ಈ ವರ್ಷದ ಸಹಯೋಗದ ಸೇವೆಯ ಲಕ್ಷ್ಯವು `ಮೈಕ್’ ಗಳನ್ನು ತಯಾರು ಮಾಡಬೇಕಾಗಿದೆ. ಅವರು ಅನುಭವದ ಆಧಾರದಿಂದ ತಮ್ಮ ಮತ್ತು ತಂದೆಯ ಜ್ಞಾನವನ್ನು ಪ್ರತ್ಯಕ್ಷ ಮಾಡಲಿ. ಇದರ ಪ್ರಭಾವವು ಸ್ವತಹ ಅನ್ಯರ ಮೇಲೆ ಬೀರುತ್ತದೆ. ಇಂತಹ ಮೈಕ್ ಆತ್ಮಗಳನ್ನು ತಯಾರು ಮಾಡಿ. ಸೇವೆಯ ಉದ್ದೇಶವೇನೆಂದು ತಿಳಿಯಿತೇ! ಇಷ್ಟೆಲ್ಲಾ ಯಾವ ಕಾರ್ಯಕ್ರಮಗಳನ್ನು ಮಾಡಿದ್ದೀರೋ ಅದರ ಫಲಿತಾಂಶವು ಏನು ಬರಬಹುದು? ಹೆಚ್ಚಿನ ಸೇವೆ ಮಾಡಿ ಆದರೆ ಈ ವರ್ಷದಲ್ಲಿ ಸಂದೇಶ ಕೊಡುವುದರ ಜೊತೆ ಜೊತೆಗೆ ಇದನ್ನೂ ಸೇರಿಸಿಕೊಳ್ಳಿ. ಗಮನದಲ್ಲಿಡಿ – ಯಾರು-ಯಾರು ಇದಕ್ಕೆ ಪಾತ್ರರಾಗಿದ್ದಾರೆ ಮತ್ತು ಅವರನ್ನು ಸಮಯ-ಪ್ರತಿ ಸಮಯ ಭಿನ್ನ-ಭಿನ್ನ ವಿಧಿಗಳಿಂದ ಸಂಪರ್ಕದಲ್ಲಿ ತನ್ನಿ. ಒಂದು ಕಾರ್ಯಕ್ರಮ ಮಾಡಿದಿರಿ. ಮತ್ತೆ ಇನ್ನೊಂದು ಮಾಡಿದಿರಿ, ಮೂರನೆಯದು ಮಾಡಿದಿರಿ ಆದರೆ ಮೊದಲಿನವರು ಅಲ್ಲಿಯೇ ಉಳಿದು, ಮೂರನೆಯವರು ಬಂದು ಬಿಡುವುದಲ್ಲ. ಜಮಾದ ಶಕ್ತಿಯನ್ನು ಪ್ರಯೋಗದಲ್ಲಿ ತರಬೇಕಾಗುವುದು. ಪ್ರತೀ ಬಾರಿ ಹಿಂದಿನವರನ್ನೂ ಸೇರಿಸುವ ಪ್ರಯತ್ನ ಮಾಡಿ. ಪ್ರತೀ ಕಾರ್ಯಕ್ರಮದಲ್ಲಿ ಅವರನ್ನು ಸೇರಿಸುತ್ತಾ ಹೋಗಿ. ಕೊನೆಯಲ್ಲಿ ಇಂತಹ ಸಂಬಂಧ-ಸಂಪರ್ಕದ ಆತ್ಮಗಳದು ಮಾಲೆಯಾಗಿ ಬಿಡಲಿ. ತಿಳಿಯಿತೆ? ಇನ್ನೇನು ಉಳಿಯಿತು? ಮಿಲನ ಮಾಡುವ ಕಾರ್ಯಕ್ರಮ.

ಈ ವರ್ಷ ಬಾಪ್ದಾದಾ 6 ತಿಂಗಳಿನ ಸೇವೆಯ ಫಲಿತಾಂಶವನ್ನು ನೋಡ ಬಯಸುತ್ತೇವೆ. ಸೇವೆಯಲ್ಲಿ ಯಾವುದೆಲ್ಲಾ ಯೋಜನೆಗಳನ್ನು ಮಾಡಿದ್ದೀರೋ ಅದನ್ನು ನಾಲ್ಕಾರೂ ಕಡೆ ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾಗಿ ಹೆಚ್ಚು-ಹೆಚ್ಚು ಸುತ್ತಾಡಿದಿರಿ. ಎಲ್ಲಾ ಹಿರಿಯರು-ಕಿರಿಯರನ್ನು ಉಲ್ಲಾಸ-ಉತ್ಸಾಹದಲ್ಲಿ ತಂದು ಮೂರು ಪ್ರಕಾರದ ಸೇವೆಯಲ್ಲಿ ಮುಂದುವರೆಸಿರಿ ಅದಕ್ಕಾಗಿ ಬಾಪ್ದಾದಾ ಈ ವರ್ಷದಲ್ಲಿ ಇಡೀ ರಾತ್ರಿಯನ್ನೇ ಹಗಲು ಮಾಡಿ ಸೇವೆಯನ್ನು ಕೊಟ್ಟಿದ್ದೇವೆ. ಈಗ ಮೂರೂ ಪ್ರಕಾರದ ಸೇವೆಯ ಫಲವನ್ನು ಸ್ವೀಕರಿಸುವ ವರ್ಷವು ಇದಾಗಿದೆ. ಕೇವಲ ಬರುವುದಲ್ಲ, ಫಲವನ್ನು ಸ್ವೀಕಾರ ಮಾಡಬೇಕಾಗಿದೆ. ಈ ವರ್ಷದಲ್ಲಿ ಬರುವ ನೊಂದಣಿಯಿಲ್ಲ, ತಂದೆಯ ಸಕಾಶವಂತೂ ಸದಾ ಜೊತೆಯಲ್ಲಿ ಇದ್ದೇ ಇದೆ. ಡ್ರಾಮಾದಲ್ಲಿ ಏನು ನಿಗಧಿಯಾಗಿದೆಯೋ ಅದನ್ನು ತಿಳಿಸಿದೆವು. ಡ್ರಾಮಾದ ಸಮ್ಮತಕ್ಕೆ ಸಮ್ಮತ ನೀಡಲೇಬೇಕಾಗಿದೆ. ಹೆಚ್ಚಿನ ಸೇವೆ ಮಾಡಿ ಆರು ತಿಂಗಳಿನಲ್ಲಿಯೇ ಫಲಿತಾಂಶವು ಅರ್ಥವಾಗುವುದು. ತಂದೆಯ ಆಸೆಗಳನ್ನು ಪೂರ್ಣ ಮಾಡುವ ಯೋಜನೆ ಮಾಡಿ. ಇಲ್ಲಿಯೂ ನೋಡಿ, ಯಾರನ್ನೇ ನೋಡಿದರೂ ಸಹ ಪ್ರತಿಯೊಬ್ಬರ ಸಂಕಲ್ಪ, ಮಾತು ಮತ್ತು ಕರ್ಮವು ತಂದೆಯ ಆಶಾದೀಪಗಳನ್ನು ಬೆಳಗಿಸುವಂತದ್ದಾಗಿರಲಿ. ಮೊದಲು ಮಧುಬನದಲ್ಲಿ ಈ ಉದಾಹರಣೆಯನ್ನು ತೋರಿಸಿ. ಉಳಿತಾಯದ ಯೋಜನೆಯ ಮಾದರಿಯನ್ನು ಮೊದಲು ಮಧುಬನದಲ್ಲಿ ಮಾಡಿ. ಮೊದಲು ಈ ಬ್ಯಾಂಕ್ನಲ್ಲಿ ಜಮಾ ಮಾಡಿ. ಮಧುಬನದವರಿಗೂ ಸಹ ವರದಾನವಂತೂ ಸಿಕ್ಕಿಯೇ ಬಿಟ್ಟಿತು ಬಾಕಿ ಯಾರು ಉಳಿದುಕೊಂಡಿದ್ದಾರೆ! ಅವರನ್ನೂ ಈ ವರ್ಷದಲ್ಲಿ ಬೇಗನೆ ಪೂರ್ಣ ಮಾಡುತ್ತೇವೆ ಏಕೆಂದರೆ ತಂದೆಯ ಸ್ನೇಹವು ಎಲ್ಲಾ ಮಕ್ಕಳ ಜೊತೆ ಇದೆ. ಹಾಗೆ ನೋಡಿದರೆ ಪ್ರತಿಯೊಬ್ಬ ಮಗುವಿನ ಪ್ರತಿ ಪ್ರತೀ ಹೆಜ್ಜೆಯಲ್ಲಿ ವರದಾನವಿದೆ. ಯಾರು ಹೃದಯದ ಸ್ನೇಹೀ ಆತ್ಮರಿದ್ದಾರೆಯೋ ಅವರು ಪ್ರತೀ ಹೆಜ್ಜೆಯಲ್ಲಿ ವರದಾನದಿಂದಲೇ ನಡೆಯುತ್ತಾರೆ. ತಂದೆಯ ವರದಾನವು ಕೇವಲ ಬಾಯಿಂದ ಅಲ್ಲ, ಹೃದಯದಿಂದ ಇದೆ ಮತ್ತು ಹೃದಯದ ವರದಾನವು ಸದಾ ಹೃದಯದಲ್ಲಿ ಖುಷಿ ಹಾಗೂ ಉಲ್ಲಾಸ-ಉತ್ಸಾಹದ ಅನುಭವ ಮಾಡಿಸುತ್ತದೆ. ಇದು ಹೃದಯದ ವರದಾನದ ಗುರುತಾಗಿದೆ. ಹೃದಯದ ವರದಾನವನ್ನು ಯಾರೆಲ್ಲಾ ತಮ್ಮ ಹೃದಯದಿಂದ ಧಾರಣೆ ಮಾಡಿಕೊಳ್ಳುವರೋ ಅವರ ಗುರುತು ಇದೇ ಆಗಿದೆ – ಅವರು ಸದಾ ಖುಷಿ ಮತ್ತು ಉಲ್ಲಾಸ-ಉತ್ಸಾಹದಿಂದ ಮುಂದುವರೆಯುತ್ತಿರುತ್ತಾರೆ, ಎಂದೂ ಯಾವುದೇ ಮಾತುಗಳಲ್ಲಿ ಸಿಲುಕುವುದೂ ಇಲ್ಲ, ನಿಲ್ಲುವುದೂ ಇಲ್ಲ. ವರದಾನದಿಂದ ಹಾರುತ್ತಾ ಇರುತ್ತಾರೆ ಮತ್ತು ಮಾತುಗಳೆಲ್ಲವೂ ಕೆಳಗೆ ಉಳಿಯುತ್ತವೆ. ಬದಿಯ ದೃಶ್ಯಗಳೂ ಸಹ ಹಾರುವವರನ್ನು ತಡೆಯಲಾರವು.

ಇಂದು ಬಾಪ್ದಾದಾ ಎಲ್ಲಾ ಮಕ್ಕಳಿಗೆ ಯಾರೆಲ್ಲಾ ಹೃದಯಪೂರ್ವಕವಾಗಿ ಅವಿಶ್ರಾಂತರಾಗಿ ಸೇವೆ ಮಾಡಿದರು ಆ ಎಲ್ಲಾ ಸೇವಾಧಾರಿಗಳಿಗೆ ಈ ಸೀಜನ್ನಿನ ಸೇವೆಯ ಶುಭಾಷಯಗಳನ್ನು ನೀಡುತ್ತಿದ್ದೇವೆ. ಮಧುಬನಕ್ಕೆ ಬಂದು ಮಧುಬನದ ಶೃಂಗಾರವಾದಿರಿ, ಇಂತಹ ಶೃಂಗಾರವಾಗುವ ಮಕ್ಕಳಿಗೂ ಸಹ ಬಾಪ್ದಾದಾ ಶುಭಾಷಯಗಳನ್ನು ನೀಡುತ್ತಿದ್ದೇವೆ ಮತ್ತು ನಿಮಿತ್ತರಾಗಿರುವ ಶ್ರೇಷ್ಠ ಆತ್ಮರಿಗೂ ಸಹ ಸದಾ ಅವಿಶ್ರಾಂತರಾಗಿ ತಂದೆಯ ಸಮಾನ ತಮ್ಮ ಸೇವೆಗಳಿಂದ ಸರ್ವರನ್ನೂ ರಿಫ್ರೆಷ್ ಮಾಡುವ ಶುಭಾಷಯಗಳನ್ನು ನೀಡುತ್ತಿದ್ದೇವೆ ಮತ್ತು ರಥಕ್ಕೂ ಶುಭಾಷಯಗಳು. ನಾಲ್ಕಾರು ಕಡೆಯ ಸೇವಾಧಾರಿ ಮಕ್ಕಳಿಗೂ ಶುಭಾಷಯಗಳು. ನಿರ್ವಿಘ್ನರಾಗಿ ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಯುತ್ತಲೇ ಇರಬೇಕಾಗಿದೆ. ದೇಶ-ವಿದೇಶದ ಎಲ್ಲಾ ಮಕ್ಕಳಿಗೆ ಇಲ್ಲಿಗೆ ಬರುವುದಕ್ಕೂ ಶುಭಾಷಯಗಳು ಮತ್ತು ರಿಫ್ರೆಷ್ ಆಗುವುದಕ್ಕೂ ಶುಭಾಷಯಗಳು ಆದರೆ ಕೇವಲ ಆರುತಿಂಗಳು ರಿಫ್ರೆಷ್ ಆಗಿರುವುದಲ್ಲ, ಸದಾ ರಿಫ್ರೆಷ್ ಆಗಿರಿ. ರಿಫ್ರೆಷ್ನಲ್ಲಿ ರಿಫ್ರೆಷ್ ಆಗಲು ಭಲೆ ಮತ್ತೆ-ಮತ್ತೆ ಬನ್ನಿ ಏಕೆಂದರೆ ತಂದೆಯ ಖಜಾನೆಗಳ ಮೇಲೆಸ್ ಎಲ್ಲಾ ಮಕ್ಕಳಿಗೆ ಸದಾ ಅಧಿಕಾರವಿದೆ. ತಂದೆ ಮತ್ತು ಖಜಾನೆಯು ಸದಾ ಜೊತೆಯಿದೆ ಮತ್ತು ಸದಾ ಜೊತೆಯಲ್ಲಿಯೇ ಇರುವುದು. ಕೇವಲ ಯಾವ ಅಂಡರ್ ಲೈನ್ ಮಾಡಿಸಿದೆವೋ ಅದರಲ್ಲಿ ವಿಶೇಷವಾಗಿ ಸ್ವಯಂನ್ನು ಮಾದರಿಯನ್ನಾಗಿ ಮಾಡಿಕೊಂಡು ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆದುಕೊಳ್ಳಿ, ಅನ್ಯರನ್ನು ನೋಡಬೇಡಿ. ತನ್ನನ್ನು ಮಾದರಿಯನ್ನಾಗಿ ಮಾಡಿಕೊಳ್ಳಿ, ಇದರಲ್ಲಿ ಯಾರು ಮೊದಲು ಮಾಡುವರೋ ಅವರೇ ಅರ್ಜುನರು ಅರ್ಥಾತ್ ನಂಬರ್ವನ್. ಇನ್ನೊಂದು ಬಾರಿ ಬಾಪ್ದಾದಾ ಬಂದಾಗ ಎಲ್ಲರೂ ಫರಿಶ್ತೆಗಳ ಕರ್ಮ, ಫರಿಶ್ತೆಗಳ ಮಾತು, ಫರಿಶ್ತೆಗಳ ಸಂಕಲ್ಪವನ್ನು ಧಾರಣೆ ಮಾಡಿಕೊಂಡಿರುವವರೇ ಕಂಡುಬರಬೇಕು. ಇಂತಹ ಪರಿವರ್ತನೆಯ ಸಂಘಟನೆಯು ಕಂಡುಬರಲಿ ಅದರಿಂದ ಪ್ರತಿಯೊಬ್ಬರೂ ಅನುಭವ ಮಾಡಲಿ – ಈ ಫರಿಶ್ತೆಗಳ ಮಾತು, ಫರಿಶ್ತೆಗಳ ಕರ್ಮವು ಎಷ್ಟು ಅಲೌಕಿಕವಾಗಿದೆ! ಈ ಪರಿವರ್ತನಾ ಸಮಾರೋಹ ಸಮಾರಂಭವನ್ನು ಬಾಪ್ದಾದಾ ನೋಡ ಬಯಸುತ್ತೇವೆ. ಒಂದುವೇಳೆ ಪ್ರತಿಯೊಬ್ಬರೂ ತಮ್ಮ ಇಡೀ ದಿನದ ಮಾತುಗಳನ್ನು ಟೇಪ್ ಮಾಡಿದರೆ ತಮ್ಮ ಬಗ್ಗೆ ಬಹಳ ಚೆನ್ನಾಗಿ ಅರ್ಥವಾಗುವುದು. ಪರಿಶೀಲನೆ ಮಾಡಿಕೊಂಡಾಗ ನನ್ನ ಮಾತು ಎಷ್ಟು ವ್ಯರ್ಥವಾಗಿ ಹೋಗುತ್ತದೆ ಎಂಬುದು ತಿಳಿದುಬರುತ್ತದೆ. ಮನಸ್ಸಿನ ಟೇಪ್ನಲ್ಲಿ ಪರಿಶೀಲನೆ ಮಾಡಿಕೊಳ್ಳಿ. ಸ್ಥೂಲ ಟೇಪ್ ಅಲ್ಲ. ಸಾಧಾರಣ ಮಾತೂ ಸಹ ವ್ಯರ್ಥದಲ್ಲಿ ಜಮಾ ಆಗುತ್ತದೆ. ಒಂದುವೇಳೆ ನಾಲ್ಕು ಮಾತಿನ ಬದಲು 24 ಮಾತುಗಳನ್ನಾಡಿದರೆ 20 ಮಾತುಗಳು ಯಾವುದರಲ್ಲಿ ಹೋಯಿತು? ಶಕ್ತಿಯನ್ನು ಜಮಾ ಮಾಡಿಕೊಳ್ಳಿ ಆಗ ತಮ್ಮ ಎರಡು ಮಾತುಗಳು ಆಶೀರ್ವಾದದ ಹಾಗೂ ಒಂದು ಗಂಟೆಯ ಭಾಷಣದ ಕೆಲಸ ಮಾಡುತ್ತವೆ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ಬಲಿಹಾರಿ ಆಗುವಂತಹ ಆತ್ಮಿಕ ಪತಂಗಗಳಿಗೆ, ಸರ್ವ ತಂದೆಯ ಸಮಾನರಾಗುವ ಧೃಡ ಸಂಕಲ್ಪದಿಂದ ಮುಂದುವರೆಯುವಂತಹ ವಿಶೇಷ ಆತ್ಮರಿಗೆ, ಸದಾ ಹಾರುವ ಕಲೆಯ ಮೂಲಕ ಯಾವುದೇ ಪ್ರಕಾರದ ಬದಿಯ ದೃಶ್ಯವನ್ನು ಪಾರು ಮಾಡುವಂತಹ ಡಬಲ್ಲೈಟ್ ಮಕ್ಕಳಿಗೆ ಆತ್ಮಿಕ ಜ್ಯೋತಿ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:-

ಹೇಗೆ ತಂದೆಯಲ್ಲಿ 100% ನಿಶ್ಚಯ ಬುದ್ಧಿಯವರು ಆಗಿದ್ದೀರಿ, ಯಾರೆಷ್ಟೇ ಏರುಪೇರು ಮಾಡುವಂತಹ ಪ್ರಯತ್ನದಲ್ಲಿರಲಿ ಆದರೆ ಅದಾಗಲು ಸಾಧ್ಯವಿಲ್ಲ. ಇಂತಹ ದೈವೀ ಪರಿವಾರ ಅಥವಾ ಸಂಸಾರಿ ಆತ್ಮರುಗಳ ಮೂಲಕ ಭಲೆ ಯಾರೆಷ್ಟಾದರೂ ಪರೀಕ್ಷೆಯನ್ನೇ ತೆಗೆದುಕೊಳ್ಳಲಿ, ಕ್ರೋಧಿಯಾಗಿ ಎದುರಿಸಲಿ ಅಥವಾ ಯಾರೇ ಟೀಕೆ ಮಾಡಲಿ, ನಿಂದನೆ ಮಾಡಬಹುದು, ಅದರಲ್ಲಿಯೂ ಏರುಪೇರಾಗಲು ಸಾಧ್ಯವಿಲ್ಲ. ಇದರಲ್ಲಿ ಕೇವಲ ಪ್ರತಿಯೊಂದು ಆತ್ಮನ ಬಗ್ಗೆ ಕಲ್ಯಾಣದ ಭಾವನೆಯಿರಲಿ, ಈ ಭಾವನೆಯು ಅವರ ಸಂಸ್ಕಾರಗಳನ್ನು ಪರಿವರ್ತಿಸುತ್ತದೆ. ಇದರಲ್ಲಿ ಕೇವಲ ಧೈರ್ಯವನ್ನು ಕಳೆದುಕೊಳ್ಳಬಾರದು, ಸಮಯದನುಸಾರ ಅವಶ್ಯವಾಗಿ ಫಲವು ಹೊರ ಬರುತ್ತದೆ – ಇದು ಡ್ರಾಮಾದಲ್ಲಿ ನೊಂದಣಿಯಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top