03 May 2022 KANNADA Murli Today | Brahma Kumaris

Read and Listen today’s Gyan Murli in Kannada

May 2, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ತಂದೆಯ ಸಮಾನ ಮಧುರರಾಗಬೇಕಾಗಿದೆ, ಯಾರಿಗೂ ದುಃಖವನ್ನು ಕೊಡಬಾರದಾಗಿದೆ, ಎಂದೂ ಕ್ರೋಧ ಮಾಡಬಾರದಾಗಿದೆ”

ಪ್ರಶ್ನೆ:: -

ಕರ್ಮಗಳ ಗುಹ್ಯಗತಿಯನ್ನು ಅರಿತುಕೊಂಡು ನೀವು ಮಕ್ಕಳು ಯಾವ ಪಾಪ ಕರ್ಮವನ್ನು ಮಾಡಲು ಸಾಧ್ಯವಿಲ್ಲ?

ಉತ್ತರ:-

ಇಲ್ಲಿಯ ತನಕ ದಾನವನ್ನು ಪುಣ್ಯ ಕರ್ಮವೆಂದು ತಿಳಿದುಕೊಂಡಿದ್ದೀರಿ. ಆದರೆ ಈಗ ತಿಳಿದುಕೊಳ್ಳುತ್ತೀರಿ – ದಾನ ಮಾಡುವುದರಿಂದಲೂ ಸಹ ಕೆಲವು ಬಾರಿ ಪಾಪವಾಗುತ್ತದೆ, ಏಕೆಂದರೆ ಒಂದುವೇಳೆ ಯಾರಿಗಾದರೂ ಇಂತಹವರಿಗೆ ಹಣವನ್ನು ಕೊಟ್ಟಾಗ ಅವರು ಆ ಹಣದಿಂದ ಪಾಪಕರ್ಮ ಮಾಡಿದರೆ ಅದರ ಪ್ರಭಾವವೂ ಸಹ ನಿಮ್ಮ ಸ್ಥಿತಿಯ ಮೇಲೆ ಅವಶ್ಯವಾಗಿ ಬೀಳುವುದು. ಆದ್ದರಿಂದ ದಾನವನ್ನೂ ಸಹ ತಿಳಿದುಕೊಂಡು ಮಾಡಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದಿಂದ ನಮ್ಮನ್ನು ದೂರ ಕರೆದುಕೊಂಡು ಹೋಗು…

ಓಂ ಶಾಂತಿ. ಈಗ ನೀವು ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ಹೇಳುತ್ತಾರೆ ಹೇ! ಜೀವಾತ್ಮರೇ ಕೇಳಿಸಿಕೊಳ್ಳುತ್ತಿದ್ದೀರಾ! ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಆತ್ಮಗಳೂ ಸಹ ತಿಳಿದುಕೊಂಡಿದ್ದೀರಿ – ನಮ್ಮ ಬೇಹದ್ದಿನ ತಂದೆಯು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ಈ ಪಾಪದ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಗೀತೆಯಲ್ಲಿಯೂ ಸಹ ಹೇಳುತ್ತಾರೆ. ಪತಿತ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ ಎನ್ನುವುದನ್ನು ಈ ಪ್ರಪಂಚವು ತಿಳಿದುಕೊಂಡಿಲ್ಲ. ನೋಡಿ! ಇಂದಿನ ಮನುಷ್ಯರಲ್ಲಿ ಕಾಮ, ಕ್ರೋಧ ಎಷ್ಟೊಂದು ತೀವ್ರವಾಗಿದೆ. ಕ್ರೋಧಕ್ಕೆ ವಶಿಭೂತರಾಗಿ ನಾವು ಇವರ ದೇಶವನ್ನು ನಾಶ ಮಾಡುತ್ತೇವೆ ಎಂದು ಹೇಳುತ್ತಾರೆ. ಹೇಳುತ್ತಾರೆ- ಹೇ! ಭಗವಾನ್ ನಮ್ಮನ್ನು ಘೋರ ಅಂಧಕಾರದಿಂದ ಘೋರ ಪ್ರಕಾಶದಲ್ಲಿ ಕರೆದುಕೊಂಡು ಹೋಗಿ ಏಕೆಂದರೆ ಇದು ಹಳೆಯ ಪ್ರಪಂಚವಾಗಿದೆ. ಕಲಿಯುಗವನ್ನು ಹಳೆಯ ಯುಗ, ಸತ್ಯಯುಗವನ್ನು ಹೊಸ ಯುಗವೆಂದು ಹೇಳಲಾಗುತ್ತದೆ. ತಂದೆಯ ವಿನಃ ಹೊಸ ಯುಗವನ್ನು ಯಾರು ಸ್ಥಾಪನೆ ಮಾಡಲು ಸಾಧ್ಯವಿಲ್ಲ. ನಮ್ಮ ಮಧುರ ಬಾಬಾ ನಮ್ಮನ್ನು ಈಗ ದುಃಖಧಾಮದಿಂದ ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಬಾಬಾ ನಿಮ್ಮ ವಿನಃ ನಮ್ಮನ್ನು ಯಾರೂ ಸ್ವಗ್ರ್ದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಬಾಬಾ ಎಷ್ಟು ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ, ಆದರೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಈ ಸಮಯದಲ್ಲಿ ತಂದೆಯ ಶ್ರೇಷ್ಠ ಮತವು ಸಿಗುತ್ತದೆ. ಆ ಶ್ರೇಷ್ಠ ಮತದಿಂದ ನಾವು ಶ್ರೇಷ್ಠರಾಗುತ್ತೇವೆ. ಇಲ್ಲಿ ಶ್ರೇಷ್ಠರಾಗುತ್ತೇವೆಂದರೆ ಶ್ರೇಷ್ಠ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ಇದು ಭ್ರಷ್ಟಾಚಾರಿ ರಾವಣನ ಪ್ರಪಂಚವಾಗಿದೆ. ತಮ್ಮ ಮತದ ಮೇಲೆ ನಡೆಯುವುದನ್ನು ಮನ್ಮತ ಎಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ – ಮಕ್ಕಳೇ ಶ್ರೀಮತದ ಮೇಲೆ ನಡೆಯಿರಿ. ನಿಮಗೆ ಆಸುರಿ ಮತವು ಗಳಿಗೆ-ಗಳಿಗೆಯು ನರಕದಲ್ಲಿ ಬೀಳಿಸುತ್ತದೆ. ಕ್ರೋಧ ಮಾಡುವುದೂ ಸಹ ಆಸುರಿ ಮತವಾಗಿದೆ. ಬಾಬಾ ಹೇಳುತ್ತಾರೆ – ಒಬ್ಬರು ಇನ್ನೊಬ್ಬರ ಮೇಲೆ ಕ್ರೋಧ ಮಾಡಬೇಡಿ. ಪ್ರೀತಿಯಿಂದ ನಡೆಯಿರಿ. ಪ್ರತಿಯೊಬ್ಬರೂ ತಮಗಾಗಿ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು ಹೇಳುತ್ತಾರೆ ಮಕ್ಕಳೇ, ಪಾಪವನ್ನು ಏಕೆ ಮಾಡುತ್ತೀರಿ, ಪುಣ್ಯದಿಂದ ಕಾರ್ಯವನ್ನು ನಡೆಸಿ. ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ತೀರ್ಥ ಸ್ಥಾನಗಳಲ್ಲಿ ಪೆಟ್ಟು ತಿನ್ನುವುದು, ಸನ್ಯಾಸಿಗಳ ಹತ್ತಿರ ಪೆಟ್ಟು ತಿನ್ನುವುದು, ಈ ಎಲ್ಲಾ ಕರ್ಮ ಕಾಂಡಗಳಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ, ಇದೆಲ್ಲದರಿಂದ ತಂದೆಯು ಈಗ ಬಿಡಿಸುತ್ತಾರೆ. ಮದುವೆಯನ್ನು ಮನುಷ್ಯರು ಎಷ್ಟೊಂದು ಆಡಂಬರವಾಗಿ ಮಾಡುತ್ತಾರೆ, ಸಾಲ ತೆಗೆದುಕೊಂಡಾದರೂ ಮದುವೆ ಮಾಡುತ್ತಾರೆ. ಮೊದಲನೆಯದು ಸಾಲವನ್ನು ಹೊತ್ತುಕೊಳ್ಳುತ್ತಾರೆ, ಎರಡನೆಯದಾಗಿ ಪತಿತರನ್ನಾಗಿ ಮಾಡುತ್ತಾರೆ. ಯಾರಾದರೂ ಪತಿತರಾಗಲು ಇಚ್ಚಿಸುವುದಾದರೆ ಹೋಗಿ ಆಗಲಿ. ಯಾರು ಶ್ರೀಮತದನುಸಾರ ನಡೆದು ಪವಿತ್ರರಾಗುತ್ತಾರೆ ಅವರನ್ನು ತಡೆಯುವುದೇಕೆ! ಮಿತ್ರ ಸಂಬಂಧಿ ಮುಂತಾದವರು ಜಗಳ ಮಾಡಿದರೆ ಸಹನೆ ಮಾಡಲೇಬೇಕಾಗುವುದು. ಭಕ್ತ ಮೀರಾ ಎಲ್ಲವನ್ನು ಸಹನೆ ಮಾಡಿದರಲ್ಲವೇ. ಬೇಹದ್ದಿನ ತಂದೆಯು ಬಂದಿದ್ದಾರೆ ರಾಜಯೋಗವನ್ನು ಕಲಿಸಿ ಭಗವಾನ್-ಭಗವತಿಯ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಲಕ್ಷ್ಮಿಯನ್ನು ಭಗವತಿ, ನಾರಯಣನನ್ನು ಭಗವಾನ್ ಎಂದು ಹೇಳುತ್ತಾರೆ. ಕಲಿಯುಗದ ಅಂತ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ನಂತರ ಅಂತಹವರನ್ನು ಯಾರು ಪರಿವರ್ತನೆ ಮಾಡಿದರು! ತಂದೆಯೇ ಪರಿವರ್ತನೆ ಮಾಡಿದರಲ್ಲವೇ! ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ಬಂದು ಹೇಗೆ ಸ್ವರ್ಗ ಅಥವಾ ರಾಮ ರಾಜ್ಯದ ಸ್ಥಾಪನೆ ಮಾಡುತ್ತಾರೆ. ನಾವು ಸೂರ್ಯವಂಶಿ ಅಥವಾ ಚಂದ್ರವಂಶಿ ಪದವಿಯನ್ನು ಪಡೆಯಲು ಇಲ್ಲಿ ಬಂದಿದ್ದೇವೆ. ಯಾರು ಸೂರ್ಯವಂಶಿ ಸುಪುತ್ರ ಮಕ್ಕಳಿದ್ದಾರೆ ಅವರೇ ಒಳ್ಳೆಯ ರೀತಿಯಲ್ಲಿ ವಿದ್ಯೆಯನ್ನು ಓದುತ್ತಾರೆ.

ತಂದೆಯು ಎಲ್ಲರಿಗೂ ತಿಳಿಸುತ್ತಾರೆ – ಮಕ್ಕಳೇ, ನೀವು ಪುರುಷಾರ್ಥ ಮಾಡಿ ತಂದೆ ತಾಯಿಯನ್ನು ಅನುಕರಣೆ ಮಾಡಿ. ಇಂತಹ ಪುರುಷಾರ್ಥ ಮಾಡಿ ತಂದೆ-ತಾಯಿಗೆ ವಾರಸುದಾರರಾಗಿ ತೋರಿಸಿ. ಮಮ್ಮಾ ಬಾಬಾ ಎಂದು ಹೇಳುತ್ತೀರೆಂದರೆ ಭವಿಷ್ಯ ಸಿಂಹಾಸನಾಧಿಕಾರಿಗಳಾಗಿ ತೋರಿಸಿ. ತಂದೆಯು ಈ ರೀತಿ ಹೇಳುತ್ತಾರೆ – ಮಕ್ಕಳೇ ನೀವು ಈ ರೀತಿ ಓದಿ ಅದರಿಂದ ನಮಗಿಂತಲೂ ಮುಂದೆ ಹೋಗಿ. ಇಂತಹವರೂ ಸಹ ಅನೇಕ ಮಕ್ಕಳಿದ್ದಾರೆ. ಅವರು ತಂದೆಗಿಂತಲೂ ಮುಂದೆ ಹೋಗಿ ಬಿಡುತ್ತಾರೆ. ಬೇಹದ್ದಿನ ತಂದೆಯೇ ಹೇಳುತ್ತಾರೆ – ಮಕ್ಕಳೇ ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಆದರೆ ನಾನು ಮಾಲೀಕನಾಗುವುದಿಲ್ಲ. ಎಷ್ಟು ಮಧುರ ತಂದೆಯಾಗಿದ್ದಾರೆ. ಅವರ ಶ್ರೀಮತವೂ ಸಹ ಪ್ರಸಿದ್ಧವಾಗಿದೆ. ನೀವು ಶ್ರೇಷ್ಠ ದೇವೀ-ದೇವತೆಗಳಿದ್ದವರು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪತಿತರಾಗಿ ಬಿಟ್ಟಿದ್ದೀರಿ. ಇದು ಸೋಲು-ಗೆಲುವಿನ ಆಟವಾಗಿದೆ. ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೊಂದಿಗೆ ಗೆಲುವುದೇ ಗೆಲುವು. ಮನಸ್ಸಿನ ಸಂಕಲ್ಪಗಳನ್ನು ನಿಲ್ಲಿಸಬಹುದೆಂದು ಹೇಳುವುದು ತಪ್ಪಾಗಿದೆ ಏಕೆಂದರೆ ಸಂಕಲ್ಪಗಳನ್ನು ನಿಲ್ಲಿಸಲು ಸಾಧ್ಯವೇನು! ಮನಸ್ಸು ಸಂಕಲ್ಪಗಳನ್ನು ಮಾಡುತ್ತಲೇ ಇರುತ್ತದೆ. ನಾವು ಸಂಕಲ್ಪರಹಿತರಾಗಿ ಕುಳಿತುಕೊಳ್ಳಲು ಇಚ್ಚಿಸಿದರೂ ಸಹ ಎಲ್ಲಿಯತನಕ? ಕರ್ಮವನ್ನಂತೂ ಮಾಡಲೇ ಬೇಕಲ್ಲವೇ. ಗೃಹಸ್ಥ ಧರ್ಮದಲ್ಲಿದ್ದು ಕರ್ಮವನ್ನು ಮಾಡಬಾರದೆಂದು ಸನ್ಯಾಸಿಗಳು ತಿಳಿಯುತ್ತಾರೆ. ಈ ಹಠಯೋಗಿ ಸನ್ಯಾಸಿಗಳದೂ ಪಾತ್ರವಿದೆ. ನಿವೃತ್ತಿ ಮಾರ್ಗದವರದು ಒಂದು ಧರ್ಮವಿದೆ, ಮತ್ಯಾವುದೇ ಧರ್ಮಗಳಲ್ಲಿ ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗುವುದಿಲ್ಲ. ಒಂದುವೇಳೆ ಯಾರೇ ಹೋದರೂ ಸಹ ಅವರು ಸನ್ಯಾಸಿಗಳನ್ನು ನೋಡಿ ಹೋಗುತ್ತಾರೆ. ತಂದೆಯು ಮನೆಯೊಂದಿಗೆ ವೈರಾಗ್ಯವನ್ನು ತರಿಸುವುದಿಲ್ಲ. ತಂದೆಯು ಇಷ್ಟನ್ನೇ ಹೇಳುತ್ತಾರೆ – ಭಲೆ ಮನೆಯಲ್ಲೇ ಇರಿ ಆದರೆ ಪವಿತ್ರವಾಗಿರಿ. ಈ ಹಳೆಯ ಪ್ರಪಂಚವನ್ನು ಮರೆಯುತ್ತಾ ಹೋಗಿ ಏಕೆಂದರೆ ನಾನು ನಿಮಗೋಸ್ಕರ ಹೊಸ ಪ್ರಪಂಚವನ್ನು ತಯಾರು ಮಾಡುತ್ತಿದ್ದೇನೆ. ಶಂಕರಾಚಾರ್ಯರು ಸನ್ಯಾಸ ಸ್ವೀಕರಿಸಿದರು. ನಾನು ನಿಮಗೋಸ್ಕರ ಹೊಸ ಪ್ರಪಂಚವನ್ನು ಮಾಡುತ್ತೇನೆ ಎಂದು ಹೇಳಲಿಲ್ಲ ಏಕೆಂದರೆ ಅವರದು ಹದ್ದಿನ ಸನ್ಯಾಸವಾಗಿದೆ, ಇದರಿಂದ ಅಲ್ಪಕಾಲದ ಸುಖವು ಸಿಗುತ್ತದೆ. ಅಪವಿತ್ರರೆಲ್ಲರೂ ಹೋಗಿ ತಲೆ ಬಾಗಿಸುತ್ತಾರೆ. ನೋಡಿ, ಪವಿತ್ರತೆಗೆ ಎಷ್ಟೊಂದು ಗೌರವವಿದೆ! ಈಗಂತು ಎಷ್ಟು ದೊಡ್ಡ-ದೊಡ್ಡ ವಿಮಾನ ಮುಂತಾದವುಗಳನ್ನು ಮಾಡುತ್ತಾರೆ. ಮನುಷ್ಯರು ದಾನವನ್ನು ಮಾಡುತ್ತಾರೆ ಆದರೆ ಈಗ ಇದರಲ್ಲಿ ಪುಣ್ಯವಂತು ಸ್ವಲ್ಪವೂ ಆಗಲಿಲ್ಲ. ಮನುಷ್ಯರು ತಿಳಿಯುತ್ತಾರೆ – ನಾವು ಈಶ್ವರಾರ್ಥವಾಗಿ ಏನೆಲ್ಲವನ್ನು ಮಾಡುತ್ತೇವೆ ಅದು ಪುಣ್ಯವಾಗಿದೆ. ಆದರೆ ತಂದೆಯು ಹೇಳುತ್ತಾರೆ – ನೀವು ನನ್ನ ಅರ್ಥವಾಗಿ ಯಾವ-ಯಾವ ಕಾರ್ಯದಲ್ಲಿ ತೊಡಗಿಸುತ್ತೀರಿ! ಯಾರು ಹಣದಿಂದ ಪಾಪಕರ್ಮವನ್ನು ಮಾಡುವುದಿಲ್ಲ ಅಂತಹವರಿಗೆ ದಾನವನ್ನು ಕೊಡಬೇಕು. ಒಂದುವೇಳೆ ಅವರು ಅದರಿಂದ ಪಾಪ ಮಾಡುತ್ತಾರೆಂದರೆ ನಿಮ್ಮ ಮೇಲೆ ಅದರ ಪ್ರಭಾವ ಬೀಳುವುದು ಏಕೆಂದರೆ ನೀವು ಹಣ ಕೊಟ್ಟಿರುವ ಕಾರಣದಿಂದ. ಪತಿತರಿಗೆ ದಾನವನ್ನು ಕೊಡುತ್ತಾ-ಕೊಡುತ್ತಾ ನೀವು ಕಂಗಾಲರಾಗಿದ್ದೀರಿ. ಹಣವೆಲ್ಲವೂ ನಷ್ಟವಾಗಿ ಬಿಟ್ಟಿದೆ. ಭಲೆ ಅದರಿಂದ ಅಲ್ಪಕಾಲದ ಸುಖ ಸಿಗಬಹುದಷ್ಟೆ. ಇದೂ ಸಹ ನಾಟಕವಾಗಿದೆ. ಈಗ ನೀವು ತಂದೆಯ ಶ್ರೀಮತದ ಮೇಲೆ ಪಾವನರಾಗುತ್ತಿದ್ದೀರಿ. ಅಲ್ಲಿ ನಿಮ್ಮ ಹತ್ತಿರ ಹಣವು ಯತೇಚ್ಚವಾಗಿರುತ್ತದೆ. ಅಲ್ಲಿ ಯಾರೂ ಪತಿತರು ಇರುವುದಿಲ್ಲ, ಇದು ಅತಿ ದೊಡ್ಡ ತಿಳಿದುಕೊಳ್ಳುವ ಮಾತಾಗಿದೆ. ನೀವು ಈಶ್ವರೀಯ ಸಂತಾನರಾಗಿದ್ದೀರಿ. ನಿಮ್ಮಲ್ಲಿ ತುಂಬಾ ಶ್ರೇಷ್ಠತೆ (ರಾಯಲ್ಟಿ) ಇರಬೇಕು. ಗುರುವಿನ ನಿಂದಕರು ಪದವಿಯನ್ನು ಪಡೆಯುವುದಿಲ್ಲ ಎಂದು ಹೇಳುತ್ತಾರೆ. ಮನುಷ್ಯರಲ್ಲಿ ತಂದೆ ಶಿಕ್ಷಕ, ಗುರು ಬೇರೆ ಬೇರೆ ಇರುತ್ತಾರೆ. ಆದರೆ ಇಲ್ಲಿ ತಂದೆ, ಟೀಚರ್, ಸದ್ಗುರು ಒಬ್ಬರೇ ಆಗಿದ್ದಾರೆ. ಒಂದುವೇಳೆ ನೀವು ಯಾವುದೇ ಉಲ್ಟಾ ಚಲನೆಯನ್ನು ನಡೆಯುತ್ತೀರೆಂದರೆ ಮೂವರಿಗೂ ನಿಂದಕರಾಗಿ ಬಿಡುತ್ತೀರಿ. ಸತ್ಯ ತಂದೆ, ಸತ್ಯ ಟೀಚರ್, ಸದ್ಗುರುವಿನ ಮತದ ಮೇಲೆ ನಡೆಯುವುದರಿಂದಲೇ ನೀವು ಶ್ರೇಷ್ಠರಾಗುತ್ತೀರಿ. ಈ ಶರೀರವನ್ನಂತೂ ಬಿಡಲೇ ಬೇಕಾಗಿದೆ. ಆದ್ದರಿಂದ ಇದನ್ನು ಈಶ್ವರೀಯ ಅಲೌಕಿಕ ಸೇವೆಯಲ್ಲಿ ತೊಡಗಿಸಿ. ತಂದೆಯಿಂದ ಆಸ್ತಿಯನ್ನು ಏಕೆ ಪಡೆಯಬಾರದು! ತಂದೆಯು ಹೇಳುತ್ತಾರೆ – ನಾನು ಈ ಆಸ್ತಿಯನ್ನು ತೆಗೆದುಕೊಂಡು ಏನು ಮಾಡಲಿ! ನಾನು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಸತ್ಯಯುಗದಲ್ಲಿಯೂ ಸಹ ಮೆಹಲ್ಗಳಲ್ಲಿ ನಾನು ಇರುವುದಿಲ್ಲ ಮತ್ತು ಇಲ್ಲಿಯೂ ಸಹ ನಾನು ಮಹಲುಗಳಲ್ಲಿ ಇರುವುದಿಲ್ಲ ಆದ್ದರಿಂದಲೇ ಭಂಭಂ ಮಹಾದೇವಾ…… ನನ್ನ ಜೋಳಿಗೆಯನ್ನು ತುಂಬಿಸು ಎಂದು ಗಾಯನ ಮಾಡುತ್ತಾರೆ ಆದರೆ ಅವರು ಯಾವಾಗ ಮತ್ತು ಹೇಗೆ ಜೋಳಿಗೆಯನ್ನು ತುಂಬಿಸುತ್ತಾರೆ ಎನ್ನುವುದನ್ನು ಯಾರೂ ಅರಿತುಕೊಂಡಿಲ್ಲ. ಯಾವಾಗ ಜೋಳಿಗೆಯು ತುಂಬಿತು ಆಗ ನೀವು ಚೈತನ್ಯದಲ್ಲಿಯೇ ಇದ್ದಿರಿ. 21 ಜನ್ಮಗಳಿಗೋಸ್ಕರ ನೀವು ತುಂಬಾ ಸುಖಿ, ಸಾಹುಕಾರರಾಗುತ್ತೀರಿ. ಆದ್ದರಿಂದ ಇಂತಹ ತಂದೆಯ ಮತದಂತೆ ನೀವು ಹೆಜ್ಜೆ-ಹೆಜ್ಜೆಯಲ್ಲಿಯೂ ನಡೆಯಬೇಕು. ಇದು ತುಂಬಾ ದೊಡ್ಡ ಗುರಿಯಾಗಿದೆ. ಒಂದುವೇಳೆ ಯಾರಾದರೂ ನಾನು ನಡೆಯಲಾಗುವುದಿಲ್ಲ ಎಂದು ಹೇಳಿದರೆ ಅದಕ್ಕೆ ತಂದೆಯು ಹೇಳುತ್ತಾರೆ – ನೀವು ಬಾಬಾ ಎಂದು ಏಕೆ ಹೇಳುತ್ತೀರಿ! ಶ್ರೀಮತದ ಮೇಲೆ ನಡೆಯುವುದಿಲ್ಲವೆಂದರೆ ತುಂಬಾ ಶಿಕ್ಷೆಗಳನ್ನು ಅನುಭವಿಸುತ್ತೀರಿ. ಪದವಿಯೂ ಸಹ ಭ್ರಷ್ಟವಾಗುವುದು. ಗೀತೆಯಲ್ಲಿಯೂ ಸಹ ಕೇಳಿದಿರಿ – ಅಲ್ಲಿ ಹೇಳುತ್ತಾರೆ ನನ್ನನ್ನು ಇಂತಹ ಪ್ರಪಂಚದಲ್ಲಿ ಕರೆದುಕೊಂಡು ಹೋಗು ಅಲ್ಲಿ ಸುಖ ಮತ್ತು ಶಾಂತಿ ಇರಬೇಕು. ಇದನ್ನು ತಂದೆಯು ಕೊಡಬಲ್ಲರು. ತಂದೆಯ ಮತದ ಮೇಲೆ ನಡೆಯುವುದಿಲ್ಲವೆಂದರೆ ತಮಗೇ ನಷ್ಟ ಮಾಡಿಕೊಳ್ಳುತ್ತೀರಿ. ಇಲ್ಲಿ ಯಾವುದೇ ಖರ್ಚು ಮುಂತಾದವುಗಳ ಮಾತಿಲ್ಲ. ನೀವು ಗುರುಗಳ ಹತ್ತಿರ ತೆಂಗಿನ ಕಾಯಿ, ಕಡ್ಡಿ ಕರ್ಪೂರ ಮುಂತಾದವನ್ನು ತೆಗೆದುಕೊಂಡು ಹೋಗಿ ಅಥವಾ ಶಾಲೆಯಲ್ಲಿ ಶುಲ್ಕವನ್ನು ಕೊಡಿ ಎಂದು ತಂದೆಯು ಹೇಳುತ್ತಾರೇನು!! ಏನೂ ಇಲ್ಲ. ಹಣವನ್ನು ಭಲೆ ತಮ್ಮ ಹತ್ತಿರವೇ ಇಟ್ಟುಕೊಳ್ಳಿ. ನೀವು ಕೇವಲ ಜ್ಞಾನವನ್ನು ಓದಿ. ಭವಿಷ್ಯವನ್ನು ಸುಧಾರಣೆ ಮಾಡಿಕೊಳ್ಳುವುದರಲ್ಲಿ ಯಾವುದೇ ನಷ್ಟವಂತು ಇಲ್ಲ. ಇಲ್ಲಿ ತಲೆ ಭಾಗಿಸುವುದನ್ನೂ ಸಹ ಕಲಿಸುವುದಿಲ್ಲ. ಅರ್ಧಕಲ್ಪ ನೀವು ಹಣವನ್ನು ಕೊಟ್ಟು, ತಲೆ ಬಾಗಿಸುತ್ತಾ-ಬಾಗಿಸುತ್ತಾ ಕಂಗಾಲರಾಗಿ ಬಿಟ್ಟಿದ್ದೀರಿ. ಈಗ ನವಯುಗ, ಹೊಸ ಪ್ರಪಂಚವು ಬರುವುದಿದೆ. ನವಯುಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ ನಂತರ ಕಲೆಗಳು ಕಡಿಮೆ ಆಗುತ್ತಾ ಹೋಗುತ್ತದೆ. ಈಗ ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ನಾರದನ ತರಹ….. ಒಂದುವೇಳೆ ನಿಮ್ಮಲ್ಲಿ ಯಾವುದೇ ಭೂತವಿದ್ದರೂ ಸಹ ನೀವು ಲಕ್ಷ್ಮಿಯನ್ನು ವರಿಸಲು ಸಾಧ್ಯವಿಲ್ಲ. ನೀವು ಮಕ್ಕಳು ಗೃಹಸ್ಥವನ್ನು ಸಂಭಾಲನೆ ಮಾಡಬೇಕು ಮತ್ತು ಸೇವೆಯನ್ನು ಮಾಡಬೇಕಾಗಿದೆ. ಮೊದಲು-ಮೊದಲು ಕೆಲವರೆಲ್ಲಾ ಓಡಿ ಹೋದರು ಏಕೆಂದರೆ ಮನೆಯವರು ಬಂದು ತುಂಬಾ ಹಿಂಸೆಯನ್ನು ಕೊಡುತ್ತಿದ್ದರು. ತುಂಬಾ ಅತ್ಯಾಚಾರಗಳಾಯಿತು. ಇವರಿಗೆ ಏಟುಗಳದ್ದು ಸಹ ಚಿಂತೆ ಇರಲಿಲ್ಲ. ಆದರೆ ಭಟ್ಟಿಯಲ್ಲಿ ಕೆಲವರು ಪಕ್ಕಾ ಇನ್ನೂ ಕೆಲವರು ಕಚ್ಚಾ ಇರುತ್ತಾರಲ್ಲವೇ ಏಕೆಂದರೆ ಡ್ರಾಮಾದ ಭಾವೀ ಈ ರೀತಿಯಿತ್ತು. ಏನಾಗಬೇಕಿತ್ತು ಅದೇ ಆಯಿತು ನಂತರವು ಆಗುವುದು. ಗ್ಲಾನಿಯನ್ನೂ ಸಹ ಮಾಡುತ್ತಾರೆ. ಎಲ್ಲರಿಗಿಂತ ದೊಡ್ಡದಕ್ಕಿಂತ ದೊಡ್ಡ ಗ್ಲಾನಿಯನ್ನು ಪರಮಪಿತ ಪರಮಾತ್ಮ ಶಿವನೇ ಸಹಿಸಬೇಕಾಗುತ್ತದೆ. ಪರಮಾತ್ಮನೂ ಸರ್ವವ್ಯಾಪಿ ಆಗಿದ್ದಾರೆ. ನಾಯಿ, ಬೆಕ್ಕು, ಮೀನು, ಮೊಸಳೆ ಎಲ್ಲದರಲ್ಲಿ ಪರಮಾತ್ಮನಿದ್ದಾರೆಂದು ಹೇಳಿ ಬಿಡುತ್ತಾರೆ. ಇದು ಗ್ಲಾನಿ ಆಯಿತಲ್ಲವೇ. ತಂದೆಯು ಹೇಳುತ್ತಾರೆ – ನಾನಂತು ಪರೋಪಕಾರಿ ಆಗಿದ್ದೇನೆ, ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಶ್ರೀ ಕೃಷ್ಣ ಸ್ವರ್ಗದ ರಾಜಕುಮಾರನಾಗುತ್ತಾರಲ್ಲವೇ! ಕೃಷ್ಣನಿಗೆ ಸರ್ಪವು ಕಚ್ಚಿತು, ಕಪ್ಪಾಗಿ ಬಿಟ್ಟರೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ಸರ್ಪವು ಹೇಗೆ ಕಚ್ಚುತ್ತದೆ! ಕೃಷ್ಣ ಪುರಿಯಲ್ಲಿ ಕಂಸನು ಎಲ್ಲಿಂದ ಬಂದ? ಇವೆಲ್ಲವೂ ದಂತ ಕಥೆಗಳಾಗಿವೆ. ಭಕ್ತಿಮಾರ್ಗದ ಸಾಮಾಗ್ರಿಗಳಾಗಿದೆ ಇದರಿಂದ ನೀವು ಕೆಳಗೆ ಇಳಿಯುತ್ತಾ ಬಂದಿದ್ದೀರಿ. ತಂದೆಯು ಈಗ ನಿಮ್ಮನ್ನು ಹೂಗಳನ್ನಾಗಿ ಮಾಡುತ್ತಾರೆ. ಕೆಲ-ಕೆಲವರು ತುಂಬಾ ದೊಡ್ಡ ಮುಳ್ಳುಗಳಾಗಿದ್ದಾರೆ. ಓ ಪರಮಪಿತ ಎಂದು ಹೇಳುತ್ತಾರೆ, ಆದರೆ ಅವರನ್ನು ತಿಳಿದುಕೊಂಡಿಲ್ಲ. ತಂದೆಯಂತು ಇದ್ದಾರೆ, ಆದರೆ ತಂದೆಯಿಂದ ಯಾವ ಆಸ್ತಿಯು ಸಿಗುತ್ತದೆ ಎನ್ನುವುದು ಗೊತ್ತೇ ಇಲ್ಲ. ಬೇಹದ್ದಿನ ತಂದೆಯೇ ಹೇಳುತ್ತಾರೆ- ನಾನು ನಿಮಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದೇನೆ. ನಿಮಗೆ ಒಬ್ಬರು ಲೌಕಿಕ ತಂದೆ, ಎರಡನೆಯವರು ಅಲೌಕಿಕ ತಂದೆ ಪ್ರಜಾಪಿತ ಬ್ರಹ್ಮ ಮೂರನೆಯವರು ಪಾರಲೌಕಿಕ ಶಿವ ತಂದೆ ಆಗಿದ್ದಾರೆ. ನಿಮಗೆ ಮೂರು ಜನ ತಂದೆಯವರಾದರು. ನೀವೀಗ ತಿಳಿದುಕೊಂಡಿದ್ದೀರಿ ನಾವು ಪ್ರಜಾಪಿತ ಬ್ರಹ್ಮಾರವರ ಮುಖಾಂತರ ತಾತನಿಂದ (ಶಿವ ಬಾಬಾರಿಂದ) ಆಸ್ತಿಯನ್ನು ಪಡೆದುಕೊಳ್ಳುತ್ತೇವೆ ಆದ್ದರಿಂದ ಶ್ರೀಮತದ ಮೇಲೆ ನಡೆಯಬೇಕಾಗುತ್ತದೆ, ಆಗಲೇ ಶ್ರೇಷ್ಠರಾಗುತ್ತೇವೆ. ಸತ್ಯಯುಗದಲ್ಲಿ ನೀವು ಪ್ರಾಲಬ್ಧವನ್ನು ಭೋಗಿಸುವಿರಿ. ಅಲ್ಲಿ ಪ್ರಜಾಪಿತ ಬ್ರಹ್ಮನನ್ನಾಗಲಿ, ಶಿವ ತಂದೆಯನ್ನಾಗಲಿ ಅರಿತುಕೊಂಡಿರುವುದಿಲ್ಲ. ಅಲ್ಲಿ ಕೇವಲ ಲೌಕಿಕ ತಂದೆಯನ್ನು ಅರಿತುಕೊಂಡಿರುತ್ತೀರಿ. ಅಲ್ಲಿ ನಿಮಗೆ ಒಬ್ಬ ತಂದೆ ಇರುತ್ತಾರೆ. ಭಕ್ತಿಯಲ್ಲಿ ಇಬ್ಬರು ತಂದೆಯರು ಇರುತ್ತಾರೆ. ಲೌಕಿಕ ತಂದೆ ಮತ್ತು ಪಾರಲೌಕಿಕ ತಂದೆ. ಈ ಸಂಗಮಯುಗದಲ್ಲಿ ಮೂರು ಜನ ತಂದೆಯರಿದ್ದಾರೆ. ಈ ಮಾತುಗಳನ್ನು ಮತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನಿಮಗೆ ನಿಶ್ಚಯವಾಗಬೇಕು. ಈಗೀಗ ನಿಶ್ಚಯ ಮತ್ತು ಈಗೀಗ ಸಂಶಯ ಈ ರೀತಿ ಆಗಬಾರದು. ಈಗೀಗ ಜನ್ಮ ಪಡೆಯುವುದು ಮತ್ತೆ ಈಗೀಗ ಸಾಯುವುದು. ಸಾಯುವುದರಿಂದ (ಜ್ಞಾನ ಬಿಟ್ಟು ಹೋಗುವುದು) ಆಸ್ತಿಯು ಸಮಾಪ್ತಿ ಆಗುತ್ತದೆ. ಇಂತಹ ತಂದೆಗೆ ವಿಚ್ಚೇದನವನ್ನು ಕೊಡಬಾರದಾಗಿದೆ. ಎಷ್ಟು ನಿರಂತರ ನೆನಪು ಮಾಡುತ್ತೀರಿ, ಸೇವೆ ಮಾಡುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ಈ ಮಾತನ್ನೂ ಸಹ ತಿಳಿಸುತ್ತಾರೆ – ನೀವು ನನ್ನ ಮತದ ಮೇಲೆ ನಡೆದಾಗ ಬಚಾವ್ ಆಗುತ್ತೀರಿ. ಇಲ್ಲವೆಂದರೆ ಹೆಚ್ಚಿನ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಅಂತ್ಯದಲ್ಲಿ ಎಲ್ಲವನ್ನು ಸಾಕ್ಷಾತ್ಕಾರ ಮಾಡಿಸುತ್ತಾರೆ, ನೀವು ಇಂತಹ ಪಾಪ ಕರ್ಮ ಮಾಡಿದಿರಿ…… ಶ್ರೀಮತದಂತೆ ನಡೆಯದಿದ್ದರೆ ಸೂಕ್ಷ್ಮ ಶರೀರವನ್ನು ಧಾರಣೆ ಮಾಡಿಸಿ ಶಿಕ್ಷೆಯನ್ನು ಕೊಡಲಾಗುತ್ತದೆ. ಗರ್ಭ ಜೈಲಿನಲ್ಲಿಯೂ ಸಹ ಸಾಕ್ಷಾತ್ಕಾರ ಮಾಡಿಸುತ್ತಾರೆ. ಇಂತಹ ಪಾಪಕರ್ಮವನ್ನು ಮಾಡಿದ್ದೀರಿ ಆದ್ದರಿಂದ ಈಗ ಶಿಕ್ಷೆಯನ್ನು ಅನುಭವಿಸಿ. ವೃಕ್ಷವು ವೃದ್ಧಿಯನ್ನು ಪಡೆಯುತ್ತಾ ಹೋಗುವುದು, ಯಾರು ಈ ಧರ್ಮದವರು ಆಗಿದ್ದರು, ಯಾರೆಲ್ಲಾ ಬೇರೆ ಬೇರೆ ಧರ್ಮಗಳಲ್ಲಿ ಸೇರಿ ಹೋಗಿದ್ದಾರೆ ಅವರೆಲ್ಲರೂ ಹಿಂತಿರುಗಿ ಬರುತ್ತಾರೆ. ಉಳಿದವರು ತಮ್ಮ-ತಮ್ಮ ಸೆಕ್ಷೆನ್ನಲ್ಲಿ ಹೋಗುತ್ತಾರೆ. ಪರಮಧಾಮದಲ್ಲಿ ಬೇರೆ ಬೇರೆ ವಿಭಾಗಗಳಿದೆ. ಈ ವೃಕ್ಷವು ನೋಡಿ ಹೇಗೆ ವೃದ್ಧಿ ಆಗುತ್ತದೆ. ಚಿಕ್ಕ-ಚಿಕ್ಕ ರೆಂಬೆಗಳೂ ಸಹ ಹೊರಡುತ್ತಾ ಹೋಗುವುದು.

ನೀವು ತಿಳಿದುಕೊಂಡಿದ್ದೀರಿ – ಮಧುರಬಾಬಾ ಬಂದಿದ್ದಾರೆ, ನಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ, ಆದ್ದರಿಂದ ಅವರನ್ನು ಮುಕ್ತಿದಾತನೆಂದು ಹೇಳುತ್ತಾರೆ. ಅವರು ದುಃಖಹರ್ತಾ-ಸುಖಕರ್ತಾ ಆಗಿದ್ದಾರೆ. ಮಾರ್ಗದರ್ಶಕರಾಗಿ ಮತ್ತೆ ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಅಂತಹ ತಂದೆಯು ಹೇಳುತ್ತಾರೆ 5000 ವರ್ಷಗಳಹಿಂದೆ ನಿಮ್ಮನ್ನು ಸುಖದ ಸಂಬಂಧದಲ್ಲಿ ಕಲಿಸಿದ್ದೆ. ನೀವು 84 ಜನ್ಮಗಳನ್ನು ಪಡೆದುಕೊಂಡಿರಿ. ಈಗ ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಿ. ಶ್ರೀಕೃಷ್ಣನ ಜೊತೆ ಎಲ್ಲರಿಗೂ ಪ್ರೀತಿಯಿದೆ. ಶ್ರೀಕೃಷ್ಣನೊಂದಿಗೆ ಎಷ್ಟು ಪ್ರೀತಿ ಇದೆಯೋ ಅಷ್ಟು ಪ್ರೀತಿ ಲಕ್ಷ್ಮೀ-ನಾರಾಯಣರೊಂದಿಗಿಲ್ಲ. ರಾಧೆ ಕೃಷ್ಣರೇ ಲಕ್ಷ್ಮೀ-ನಾರಾಯಣರಾಗುತ್ತಾರೆ ಎನ್ನುವ ಮಾತನ್ನು ಯಾರೂ ತಿಳಿದುಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ – ರಾಧೆ ಕೃಷ್ಣ ಬೇರೆ ಬೇರೆ ರಾಜಧಾನಿಯವರಾಗಿದ್ದರು ಮತ್ತೆ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣ ಆದರು. ಆದರೆ ಅವರು ಕೃಷ್ಣನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೃಷ್ಣನಿಗೆ ಪತಿತ ಪಾವನ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿದಿನವು ಓದದೇ ಇದ್ದರೆ ಶ್ರೇಷ್ಠ ಪದವಿಯನ್ನು ಯಾರೂ ಪಡೆಯಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಮ್ಮ ಚಲನೆಯನ್ನು ತುಂಬಾ ಶ್ರೇಷ್ಠ (ರಾಯಲ್)ವಾಗಿ ಇಟ್ಟುಕೊಳ್ಳಬೇಕಾಗಿದೆ, ತುಂಬಾ ಕಡಿಮೆ ಮತ್ತೆ ಮಧುರವಾಗಿ ಮಾತನಾಡಬೇಕಾಗಿದೆ. ಶಿಕ್ಷೆಗಳಿಂದ ಬಚಾವ್ ಆಗಲು ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಶ್ರೀಮತದ ಮೇಲೆ ನಡೆಯಬೇಕಾಗಿದೆ.

2. ವಿದ್ಯೆಯನ್ನು ತುಂಬಾ ಗಮನದಿಂದ ಒಳ್ಳೆಯ ರೀತಿಯಲ್ಲಿ ಓದಬೇಕಾಗಿದೆ. ಮಾತಾಪಿತರನ್ನು ಅನುಕರಣೆ ಮಾಡಿ ಸಿಂಹಾಸನಾಧಿಕಾರಿ, ವಾರಸುಧಾರರಾಗಬೇಕಾಗಿದೆ. ಕ್ರೋಧಕ್ಕೆ ವಶರಾಗಿ ದುಃಖವನ್ನು ಕೊಡಬಾರದಾಗಿದೆ.

ವರದಾನ:-

ಹೇಗೆ ಸತ್ಯವಾದ ವಜ್ರವು ಎಲ್ಲಿ ಎಷ್ಟೇ ಆಳವಾಗಿ ಮಣ್ಣಿನಲ್ಲಿ ಬಚ್ಚಿಟ್ಟುಕೊಂಡಿದ್ದರೂ ಸಹ ತನ್ನ ಹೊಳಪನ್ನವು ಖಂಡಿತವಾಗಿಯೂ ತೋರಿಸುತ್ತದೆ, ಹಾಗೆಯೇ ತಮ್ಮ ಜೀವನವು ವಜ್ರ ಸಮಾನವಾದುದು. ಅಂದಮೇಲೆ ಎಂತಹ ವಾತಾವರಣವೇ ಇರಲಿ, ಎಂತಹ ಸಂಘಟನೆಯಲ್ಲಿಯೂ ಸಹ ತಮ್ಮ ಹೊಳಪು ಅಂದರೆ ಆ ಜಲಕ್ ಹಾಗೂ ಫಲಕ್(ನಶೆ ಹಾಗೂ ಖುಷಿ) ಎಲ್ಲರಿಗೂ ಕಾಣಿಸುವುದು. ಭಲೆ ಸಾಧಾರಣ ಕರ್ಮವೇ ಮಾಡುತ್ತೀರಿ ಆದರೆ ಸ್ಮೃತಿ ಹಾಗೂ ಸ್ಥಿತಿಯು ಇಷ್ಟೂ ಶ್ರೇಷ್ಠವಾಗಿರಲಿ, ಅವರನ್ನು ನೋಡುತ್ತಿದ್ದಂತೆಯೇ ಅನುಭವವಾಗಲಿ – ಇವರು ಸಾಧಾರಣ ವ್ಯಕ್ತಿಯಲ್ಲ, ಇವರು ಸೇವಾಧಾರಿ ಆಗಿದ್ದರೂ ಪುರುಷೋತ್ತಮನಾಗಿದ್ದಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top