03 June 2021 KANNADA Murli Today – Brahma Kumaris

June 2, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಶಿವ ತಂದೆಯು ನಿಮ್ಮ ಹೂ ಇತ್ಯಾದಿಗಳನ್ನು ಸ್ವೀಕಾರ ಮಾಡುವುದಿಲ್ಲ ಏಕೆಂದರೆ ಅವರು ಪೂಜ್ಯ ಹಾಗೂ ಪೂಜಾರಿಯಾಗುವುದಿಲ್ಲ, ನೀವೂ ಸಹ ಸಂಗಮದಲ್ಲಿ ಹೂ ಮಾಲೆಯನ್ನು ಧರಿಸುವಂತಿಲ್ಲ”

ಪ್ರಶ್ನೆ:: -

ಭವಿಷ್ಯ ರಾಜ್ಯ ಸಿಂಹಾಸನಕ್ಕೆ ಯಾರು ಅಧಿಕಾರಿಗಳಾಗುತ್ತಾರೆ?

ಉತ್ತರ:-

ಯಾರು ಈಗ ಮಾತಾಪಿತರ ಹೃದಯ ಸಿಂಹಾಸನವನ್ನು ಗೆಲ್ಲುವವರಿದ್ದಾರೆಯೋ ಅವರೇ ಭವಿಷ್ಯ ಸಿಂಹಾಸನಾಧೀಶರಾಗುತ್ತಾರೆ. ಅದ್ಭುತವೇನೆಂದರೆ ಮಕ್ಕಳು ಮಾತಾಪಿತರ ಮೇಲೂ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಪರಿಶ್ರಮಪಟ್ಟು ಮಾತಾಪಿತರಿಗಿಂತಲೂ ಮುಂದೆ ಹೋಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಆಕಾಶ ಸಿಂಹಾಸನವನ್ನು ಬಿಟ್ಟು ಬಾ………….

 
 
 

ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ಈ ಗೀತೆಯಿಂದ ಸರ್ವವ್ಯಾಪಿಯ ಜ್ಞಾನವು ಹೊರಟು ಹೋಗುತ್ತದೆ. ಈಗ ಭಾರತವು ಬಹಳ ದುಃಖಿಯಾಗಿದೆ ಆದ್ದರಿಂದ ನೆನಪು ಮಾಡುತ್ತಾರೆ. ಡ್ರಾಮಾನುಸಾರ ಇವೆಲ್ಲಾ ಗೀತೆಗಳು ರಚಿಸಲ್ಪಟ್ಟಿವೆ, ಆದರೆ ಇವುಗಳ ಅರ್ಥವು ಪ್ರಪಂಚದವರಿಗೆ ಗೊತ್ತಿಲ್ಲ. ತಂದೆಯು ಪತಿತರನ್ನು ಪಾವನ ಮಾಡಲು ಅಥವಾ ದುಃಖಿಗಳನ್ನು ದುಃಖದಿಂದ ಬಿಡಿಸಿ ಸುಖ ಕೊಡಲು ಬರುತ್ತಾರೆ. ಅದೇ ತಂದೆಯು ಈಗ ಬಂದಿದ್ದಾರೆಂದು ಮಕ್ಕಳಿಗೆ ಅರ್ಥವಾಗಿದೆ, ಪರಿಚಯ ಸಿಕ್ಕಿ ಬಿಟ್ಟಿದೆ. ಸ್ವಯಂ ತಂದೆಯು ಕುಳಿತು ತಿಳಿಸುತ್ತಾರೆ – ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡಿ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ. ಸೃಷ್ಟಿಯು ಒಂದೇ ಆಗಿದೆ ಕೇವಲ ಹೊಸದು ಮತ್ತು ಹಳೆಯದಾಗುತ್ತದೆ. ಹೇಗೆ ಶರೀರವು ಬಾಲ್ಯದಲ್ಲಿ ಹೊಸದಾಗಿರುತ್ತದೆ ನಂತರ ಹಳೆಯದಾಗುತ್ತದೆ. ಹೊಸ ಶರೀರ, ಹಳೆಯ ಶರೀರ ಎರಡು ಶರೀರಗಳೆಂದು ಹೇಳುವುದಿಲ್ಲ. ಒಂದೇ ಶರೀರವೇ ಆದರೆ ಅದು ಹೊಸದರಿಂದ ಹಳೆಯದಾಗುತ್ತದೆ ಹಾಗೆಯೇ ಪ್ರಪಂಚವೂ ಒಂದೇ ಆಗಿದೆ, ಹೊಸದರಿಂದ ಈಗ ಹಳೆಯದಾಗುತ್ತದೆ. ಯಾವಾಗ ಹೊಸದಾಗಿತ್ತು? ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ, ತಂದೆಯು ಬಂದು ತಿಳಿಸುತ್ತಾರೆ – ಮಕ್ಕಳೇ, ಹೊಸ ಪ್ರಪಂಚವಿದ್ದಾಗ ಭಾರತವು ಹೊಸದಾಗಿತ್ತು, ಸತ್ಯಯುಗವೆಂದು ಕರೆಸಿಕೊಳ್ಳುತ್ತಿತ್ತು, ಅದೇ ಭಾರತವು ಈಗ ಹಳೆಯದಾಗಿದೆ. ಇದಕ್ಕೆ ಹಳೆಯ ಪ್ರಪಂಚ ಎಂದು ಹೇಳಲಾಗುತ್ತದೆ. ಹೊಸ ಪ್ರಪಂಚದಿಂದ ಹಳೆಯದಾಗಿದೆ, ಅದು ಪುನಃ ಖಂಡಿತವಾಗಿಯೂ ಹೊಸದಾಗಬೇಕಾಗಿದೆ. ಮಕ್ಕಳು ಹೊಸ ಪ್ರಪಂಚದ ಸಾಕ್ಷಾತ್ಕಾರ ಮಾಡಿದ್ದಾರೆ, ಅಂದಾಗ ಆ ಹೊಸ ಪ್ರಪಂಚದ ಮಾಲೀಕರು ಯಾರಾಗಿದ್ದರು? ಈ ಲಕ್ಷ್ಮೀ-ನಾರಾಯಣರಾಗಿದ್ದರು. ಆದಿ ಸನಾತನ ದೇವಿ-ದೇವತೆಗಳು ಆ ಪ್ರಪಂಚದ ಮಾಲೀಕರಾಗಿದ್ದರು. ಈ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ, ತಂದೆಯು ಹೇಳುತ್ತಾರೆ – ಈಗ ನಿರಂತರ ಇದನ್ನೇ ನೆನಪು ಮಾಡಿ, ತಂದೆಯು ಪರಮಧಾಮದಿಂದ ನಮಗೆ ಓದಿಸಲು ಬರುತ್ತಾರೆ, ರಾಜಯೋಗವನ್ನು ಕಲಿಸಲು ಬಂದಿದ್ದಾರೆ. ಮಹಿಮೆಯೆಲ್ಲವೂ ಅವರೊಬ್ಬರದೇ ಆಗಿದೆ, ಇವರಿಗೇನೂ ಮಹಿಮೆಯಿಲ್ಲ. ಈ ಸಮಯದಲ್ಲಿ ಎಲ್ಲರೂ ತುಚ್ಛ ಬುದ್ಧಿಯವರಾಗಿದ್ದಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ನಾನು ಬರುತ್ತೇನೆ ಆದ್ದರಿಂದಲೇ ಗೀತೆಯು ಮಾಡಲ್ಪಟ್ಟಿದೆ. ಈ ಹಾಡಿನಿಂದ ಸರ್ವವ್ಯಾಪಿಯ ಜ್ಞಾನವು ಹೊರಟು ಹೋಗುತ್ತದೆ. ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ. ತಂದೆಯು ಪದೇ-ಪದೇ ಹೇಳುತ್ತಾರೆ – ದೇಹಾಭಿಮಾನವನ್ನು ಬಿಟ್ಟು ನೀವು ಆತ್ಮಾಭಿಮಾನಿಯಾಗಿರಿ ಮತ್ತು ಕರ್ಮೇಂದ್ರಿಯಗಳ ಮೂಲಕ ಶಿಕ್ಷಣವನ್ನು ಧಾರಣೆ ಮಾಡಿಕೊಳ್ಳಿ. ಭಲೆ ಈ ತಂದೆಯನ್ನು ನಡೆಯುತ್ತಾ-ತಿರುಗಾಡುತ್ತಾ ನೋಡುತ್ತೀರಿ ಆದರೆ ನೆನಪು ಶಿವ ತಂದೆಯನ್ನು ಮಾಡಿ. ಶಿವ ತಂದೆಯೇ ಎಲ್ಲವನ್ನೂ ಮಾಡುತ್ತಾರೆ ಎಂದು ತಿಳಿದುಕೊಳ್ಳಿ, ಈ ಬ್ರಹ್ಮನಲ್ಲ. ಭಲೆ ಈ ಕಣ್ಣುಗಳಿಗೆ ಇವರ ರೂಪವು ಕಾಣಿಸುತ್ತದೆ ಆದರೆ ನಿಮ್ಮ ಬುದ್ಧಿಯು ಶಿವ ತಂದೆಯ ಕಡೆ ಹೋಗಬೇಕು. ಶಿವ ತಂದೆಯಿಲ್ಲದೇ ಹೋಗಿದ್ದರೆ ಇವರ ಆತ್ಮ, ಇವರ ಶರೀರ ಏನೂ ಕೆಲಸಕ್ಕೆ ಬರುತ್ತಿರಲಿಲ್ಲ ಆದ್ದರಿಂದ ಯಾವಾಗಲೂ ತಿಳಿದುಕೊಳ್ಳಿ, ಇವರಲ್ಲಿ ಶಿವ ತಂದೆಯಿದ್ದಾರೆ, ಇವರ ಮೂಲಕ ಓದಿಸುತ್ತಾರೆ. ನಿಮಗೆ ಶಿಕ್ಷಕರು ಈ ಬ್ರಹ್ಮಾ ತಂದೆಯಲ್ಲ, ಶಿವ ತಂದೆಯು ಪರಮ ಶಿಕ್ಷಕನಾಗಿದ್ದಾರೆ, ಅವರನ್ನೇ ನೆನಪು ಮಾಡಬೇಕಾಗಿದೆ. ಎಂದೂ ಸಹ ಶರೀರವನ್ನು ನೆನಪು ಮಾಡಬಾರದು, ಬುದ್ಧಿಯೋಗವನ್ನು ತಂದೆಯ ಜೊತೆ ಇಡಬೇಕಾಗಿದೆ. ಪುನಃ ಬಂದು ಜ್ಞಾನ-ಯೋಗವನ್ನು ಕಲಿಸಿ ಎಂದು ಮಕ್ಕಳು ತಂದೆಯನ್ನು ನೆನಪು ಮಾಡುತ್ತಾರೆ. ಪರಮಪಿತ ಪರಮಾತ್ಮನ ವಿನಃ ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಮಕ್ಕಳ ಬುದ್ಧಿಯಲ್ಲಿದೆ – ಅವರೇ ಕುಳಿತು ಗೀತಾ ಜ್ಞಾನವನ್ನು ತಿಳಿಸುತ್ತಾರೆ ನಂತರ ಈ ಜ್ಞಾನವು ಪ್ರಾಯಃಲೋಪವಾಗಿಬಿ ಡುತ್ತದೆ. ರಾಜಧಾನಿಯು ಸ್ಥಾಪನೆಯಾಗಿ ಬಿಟ್ಟರೆ ಸದ್ಗತಿಯಾಗಿ ಬಿಟ್ಟರೆ ಅನಂತರ ಅಲ್ಲಿ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ದುರ್ಗತಿಯಿಂದ ಸದ್ಗತಿಯಾಗಲು ಜ್ಞಾನವನ್ನು ಕೊಡಲಾಗುತ್ತದೆ. ಬಾಕಿ ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಮನುಷ್ಯರು ಜಪ ತಪ ದಾನ, ಪುಣ್ಯ ಇತ್ಯಾದಿ ಏನೆಲ್ಲವನ್ನೂ ಮಾಡುವರೋ ಎಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಇದರಿಂದ ಯಾರೂ ನನ್ನೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ. ಆತ್ಮದ ರೆಕ್ಕೆಗಳು ತುಂಡಾಗಿವೆ, ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ. ಕಲ್ಲಿನಿಂದ ಪಾರಸವನ್ನಾಗಿ ಮಾಡಲು ಪುನಃ ನಾನು ಬರಬೇಕಾಗುತ್ತದೆ. ಎಷ್ಟೊಂದು ಜನಸಂಖ್ಯೆಯಿದೆ! ಈ ಸಂಸಾರವು ಸಾಸಿವೆಯಂತೆ ತುಂಬಿದೆ. ಈಗ ಇದೆಲ್ಲವೂ ಸಮಾಪ್ತಿಯಾಗುವುದು, ಸತ್ಯಯುಗದಲ್ಲಿ ಇಷ್ಟೊಂದು ಜನಸಂಖ್ಯೆಯಿರುವುದಿಲ್ಲ. ಹೊಸ ಪ್ರಪಂಚದಲ್ಲಿ ಬಹಳ ವೈಭವ ಮತ್ತು ಜನಸಂಖ್ಯೆ ಕಡಿಮೆಯಿರುತ್ತದೆ. ಇಲ್ಲಾದರೆ ಇಷ್ಟೊಂದು ಮನುಷ್ಯರಿದ್ದಾರೆ, ತಿನ್ನುವುದಕ್ಕೂ ಸಿಗುವುದಿಲ್ಲ. ಹಳೆಯ ಮರಳುಗಾಡು ಆಗಿ ಬಿಟ್ಟಿದೆ, ಇದೇ ಮತ್ತೆ ಹೊಸದಾಗುವುದು, ಅಲ್ಲಿ ಪ್ರತಿಯೊಂದು ಹೊಸದಾಗಿರುತ್ತದೆ. ಸ್ವರ್ಗ, ಬಹಿಶ್ತ್, ದೇವತೆಗಳ ಹೊಸ ಪ್ರಪಂಚ ಈ ಹೆಸರೇ ಎಷ್ಟು ಮಧುರವಾಗಿದೆ. ಹಳೆಯದನ್ನು ಬಿಟ್ಟು ಹೊಸದರಲ್ಲಿ ಹೋಗುವ ಮನಸ್ಸಾಗುತ್ತದೆಯಲ್ಲವೆ. ಈಗ ಹೊಸ ಪ್ರಪಂಚ ಸ್ವರ್ಗದಲ್ಲಿ ಹೋಗುವ ಮಾತಿದೆ. ಈ ಹಳೆಯ ಶರೀರಕ್ಕೆ ಯಾವುದೇ ಬೆಲೆಯಿಲ್ಲ, ಶಿವ ತಂದೆಗಂತೂ ಯಾವುದೇ ಶರೀರವಿಲ್ಲ.

ಈ ತಂದೆಗೆ ಹಾರವನ್ನು ಹಾಕುವುದೇ ಎಂದು ಮಕ್ಕಳು ಕೇಳುತ್ತಾರೆ ಆದರೆ ಇವರಿಗೆ ಹಾರವನ್ನು ಹಾಕಿದರೆ ನಿಮ್ಮ ಬುದ್ಧಿಯೋಗವು ಇವರ ಕಡೆ ಹೊರಟು ಹೋಗುವುದು. ಆದ್ದರಿಂದ ಶಿವ ತಂದೆಯು ಹೇಳುತ್ತಾರೆ – ಹಾರದ ಅವಶ್ಯಕತೆಯಿಲ್ಲ, ನೀವೇ ಪೂಜ್ಯರಾಗುತ್ತೀರಿ, ಪೂಜಾರಿಗಳೂ ನೀವೇ ಆಗುತ್ತೀರಿ ಆಗ ತಮ್ಮದೇ ಚಿತ್ರಗಳನ್ನು ಮಾಡತೊಡಗುತ್ತೀರಿ. ನಾನಂತೂ ಪೂಜ್ಯನೂ ಆಗುವುದಿಲ್ಲ, ಹೂ ಇತ್ಯಾದಿಗಳ ಅವಶ್ಯಕತೆಯೂ ಇಲ್ಲ, ನಾನೇಕೆ ಇದನ್ನು ಧರಿಸಲಿ ಆದ್ದರಿಂದ ಎಂದೂ ಹೂ ಮಾಲೆ ಇತ್ಯಾದಿಗಳನ್ನು ನಾನು ಸ್ವೀಕರಿಸುವುದಿಲ್ಲ. ನೀವು ಪೂಜ್ಯರಾಗುತ್ತೀರಿ ಅಂದಮೇಲೆ ಎಷ್ಟು ಬೇಕೋ ಅಷ್ಟು ಹೂಗಳನ್ನು ಧರಿಸುವಿರಿ, ನಾನಂತೂ ನೀವು ಮಕ್ಕಳ ವಿಧೇಯ ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಸೇವಕನೂ ಆಗಿದ್ದೇನೆ. ದೊಡ್ಡ-ದೊಡ ವ್ಯಕ್ತಿಗಳು ಸಹಿ ಮಾಡುವಾಗ ತಮ್ಮ ವಿಧೇಯ…. ಎಂದು ಬರೆಯುತ್ತಾರೆ. ಎಂದೂ ತಮ್ಮನ್ನು ಲಾರ್ಡ್ ಎಂದು ಬರೆಯುವುದಿಲ್ಲ. ಇಲ್ಲಂತೂ ಮನುಷ್ಯರು ತಮಗೆ ಶ್ರೀ ನಾರಾಯಣ, ಶ್ರೀ….. ತಮಗೆ ಶ್ರೀ ಅಕ್ಷರವನ್ನು ಹಾಕಿಕೊಳ್ಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಈಗ ಈ ಶರೀರವನ್ನು ನೆನಪು ಮಾಡಬೇಡಿ, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ. ಈ ಹಳೆಯ ಪ್ರಪಂಚದಲ್ಲಿ ಆತ್ಮ ಮತ್ತು ಶರೀರ ಎರಡೂ ಪತಿತವಾಗಿವೆ. 9 ಕ್ಯಾರೇಟ್ನ ಚಿನ್ನವಾಗಿದ್ದರೆ 9 ಕ್ಯಾರೇಟ್ನ ಆಭರಣಗಳೇ ತಯಾರಾಗುತ್ತವೆ. ಚಿನ್ನದಲ್ಲಿಯೇ ಲೋಹವು ಬೆರಕೆಯಾಗುತ್ತದೆ ಅಂದಾಗ ಆತ್ಮವನ್ನೆಂದೂ ನಿರ್ಲೇಪವೆಂದು ತಿಳಿದುಕೊಳ್ಳಬಾರದು. ಈ ಜ್ಞಾನವು ನಿಮಗೆ ಈಗಲೇ ಇದೆ. ನೀವು ಅರ್ಧಕಲ್ಪ 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಪಡೆಯುತ್ತೀರಿ ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಬೇಕು! ಆದರೆ ಮಕ್ಕಳು ಪದೇ-ಪದೇ ಮರೆತು ಹೋಗುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ನಮಗೆ ಶಿಕ್ಷಣ ಕೊಡುತ್ತಿದ್ದಾರೆ. ಬ್ರಹ್ಮನ ಆತ್ಮವೂ ಸಹ ಅವರನ್ನೇ ನೆನಪು ಮಾಡುತ್ತದೆ. ಬ್ರಹ್ಮಾ-ವಿಷ್ಣು-ಶಂಕರನು ಸೂಕ್ಷ್ಮವತನವಾಸಿಗಳಾಗಿದ್ದಾರೆ. ತಂದೆಯು ಮೊದಲು ಸೂಕ್ಷ್ಮ ಸೃಷ್ಟಿಯನ್ನು ರಚಿಸುತ್ತಾರೆ. ನಿರ್ವಾಣ ಧಾಮವು ಸರ್ವ ಶ್ರೇಷ್ಠ ಧಾಮವಾಗಿದೆ. ಎಲ್ಲದಕ್ಕಿಂತ ಮೇಲಿದೆ. ಒಬ್ಬ ಭಗವಂತನನ್ನು ಎಲ್ಲಾ ಭಕ್ತರು ನೆನಪು ಮಾಡುತ್ತಾರೆ ಆದರೆ ತಮೋಪ್ರಧಾನರಾಗಿರುವ ಕಾರಣ ತಂದೆಯನ್ನು ಮರೆತು ಕಲ್ಲು, ಮುಳ್ಳು ಎಲ್ಲದರ ಪೂಜೆ ಮಾಡುತ್ತಿರುತ್ತಾರೆ. ನಮಗೆ ತಿಳಿದಿದೆ – ಏನೆಲ್ಲವೂ ನಡೆಯುತ್ತದೆಯೋ ಇದು ಡ್ರಾಮಾದಲ್ಲಿ ನಿಗಧಿಯಾಗುತ್ತಾ ಹೋಗುತ್ತದೆ. ಡ್ರಾಮಾದಲ್ಲಿ ಒಂದು ಬಾರಿ ಯಾವುದು ನಿಗಧಿಯಾಗಿ ಬಿಡುತ್ತದೆಯೋ ಉದಾಹರಣೆಗೆ: ಮಧ್ಯದಲ್ಲಿ ಯಾವುದಾದರೂ ಪಕ್ಷಿಯು ಹಾರಿ ಹೋಗುತ್ತದೆಯೆಂದರೆ ಅದೇ ಮತ್ತೆ-ಮತ್ತೆ ಪುನರಾವರ್ತನೆಯಾಗುತ್ತಿರುವುದು, ಪತಂಗವು ಹಾರುತ್ತಿರುವಾಗ ಅದು ಶೂಟಿಂಗ್ ಆಗಿ ಬಿಟ್ಟರೆ ಮತ್ತೆ-ಮತ್ತೆ ಅದೇ ಪುನರಾವರ್ತನೆಯಾಗುತ್ತಾ ಇರುವುದು. ಈ ಡ್ರಾಮಾದ ಕ್ಷಣ-ಕ್ಷಣವು ಪುನರಾವರ್ತನೆಯಾಗುತ್ತಾ ಇರುತ್ತದೆ, ಶೂಟಿಂಗ್ ನಡೆಯುತ್ತಾ ಇರುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ನೀವು ಪಾತ್ರಧಾರಿಗಳಾಗಿದ್ದೀರಿ, ಇಡೀ ನಾಟಕವನ್ನು ಸಾಕ್ಷಿಯಾಗಿ ನೋಡುತ್ತೀರಿ. ಒಂದೊಂದು ಕ್ಷಣವೂ ಡ್ರಾಮಾನುಸಾರ ಕಳೆಯುತ್ತದೆ. ಎಲೆಯೂ ಅಲುಗಾಡಿದರೂ ಸಹ ಡ್ರಾಮಾದಲ್ಲಿ ಒಂದು ಕ್ಷಣವು ಕಳೆಯಿತು, ಒಂದೊಂದು ಎಲೆಯು ಭಗವಂತನ ಆಜ್ಞೆಯಿಂದ ಅಲುಗಾಡುತ್ತದೆ ಎಂದಲ್ಲ. ಇದೆಲ್ಲವೂ ಡ್ರಾಮಾದಲ್ಲಿ ಮೊದಲೇ ನಿಗಧಿಯಾಗಿದೆ, ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗುತ್ತದೆ. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ ಮತ್ತು ಸೃಷ್ಟಿ ನಾಟಕದ ಜ್ಞಾನವನ್ನು ಕೊಡುತ್ತಾರೆ. ಎಷ್ಟು ಒಳ್ಳೊಳ್ಳೆಯ ಚಿತ್ರಗಳೂ ಮಾಡಲ್ಪಟ್ಟಿವೆ, ಸಂಗಮಯುಗದಲ್ಲಿ ಗಡಿಯಾರದ ಗಂಟೆಯ ಮುಳ್ಳನ್ನೂ ತೋರಿಸಲಾಗಿದೆ. ಕಲಿಯುಗದ ಅಂತ್ಯ ಸತ್ಯಯುಗದ ಆದಿಯ ಸಂಗಮವಾಗಿದೆ. ಈಗ ಹಳೆಯ ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ ನಂತರ ಹೊಸ ಪ್ರಪಂಚದಲ್ಲಿ ಇವು ಇರುವುದಿಲ್ಲ. ನೀವು ಮಕ್ಕಳು ಸದಾ ನಮಗೆ ತಂದೆಯು ಓದಿಸುತ್ತಾರೆ, ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆಂದು ತಿಳಿಯಿರಿ. ಭಗವಾನುವಾಚ – ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ರಾಜರೂ ಸಹ ಲಕ್ಷ್ಮೀ-ನಾರಾಯಣರನ್ನು ಪೂಜಿಸುತ್ತಾರೆ ಅಂದಮೇಲೆ ಅವರನ್ನು ಪೂಜ್ಯರನ್ನಾಗಿ ಮಾಡುವವನು ನಾನಾಗಿದ್ದೇನೆ. ಯಾರು ಪೂಜ್ಯರಾಗಿದ್ದರೋ ಅವರೇ ಈಗ ಪೂಜಾರಿಗಳಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವೇ ಪೂಜ್ಯರಾಗಿದ್ದೆವು ನಂತರ ನಾವೇ ಪೂಜಾರಿಗಳಾದೆವು, ತಂದೆಯಂತೂ ಆಗುವುದಿಲ್ಲ. ತಂದೆಯು ಹೇಳುತ್ತಾರೆ – ನಾನು ಪೂಜಾರಿಯೂ ಆಗುವುದಿಲ್ಲ, ಪೂಜ್ಯನೂ ಆಗುವುದಿಲ್ಲ. ಆದ್ದರಿಂದ ನಾನು ಹಾರವನ್ನು ಧರಿಸುವುದೂ ಇಲ್ಲ, ಧರಿಸಬೇಕಾಗುವುದೂ ಇಲ್ಲ ಅಂದಮೇಲೆ ನಾನೇಕೆ ಹೂಗಳನ್ನು ಸ್ವೀಕಾರ ಮಾಡಲಿ? ವಾಸ್ತವದಲ್ಲಿ ನೀವೂ ಸಹ ಸ್ವೀಕಾರ ಮಾಡುವಂತಿಲ್ಲ, ನಿಯಮಾನುಸಾರ ಆ ದೇವತೆಗಳಿಗೇ ಹಕ್ಕಿದೆ ಏಕೆಂದರೆ ಅವರ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿದೆ. ಹೂಗಳನ್ನು ಸ್ವೀಕರಿಸಲು ಅವರೇ ಅಧಿಕಾರಿಗಳಾಗಿದ್ದಾರೆ. ಅಲ್ಲಿ ಸ್ವರ್ಗದಲ್ಲಂತೂ ಸುಗಂಧ ಭರಿತ ಹೂಗಳಿರುತ್ತವೆ, ಹೂಗಳಿರುವುದೇ ಸುಗಂಧ ಬೀರುವುದಕ್ಕಾಗಿ, ಧರಿಸುವುದಕ್ಕಾಗಿಯೂ ಇರುತ್ತದೆ. ತಂದೆಯು ಹೇಳುತ್ತಾರೆ – ಈಗ ನೀವು ಮಕ್ಕಳು ವಿಷ್ಣುವಿನ ಕೊರಳಿನ ಹಾರವಾಗುತ್ತೀರಿ. ನಂಬರ್ವಾರ್ ನೀವು ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕಾಗಿದೆ. ಕಲ್ಪದ ಮೊದಲು ಯಾರು ಪುರುಷಾರ್ಥ ಮಾಡಿದ್ದಾರೆಯೋ ಅವರು ಈಗಲೂ ಮಾಡುತ್ತಾರೆ ಮತ್ತು ಮಾಡತೊಡಗುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಇವರು ಬಹಳ ಒಳ್ಳೆಯ ಸೇವಾಧಾರಿಯೆಂದು ವಿವೇಕವೂ ಹೇಳುತ್ತದೆ. ಹೇಗೆ ಅಂಗಡಿಯಲ್ಲಿರುತ್ತಾರೆ, ಸೇಟ್ ಆಗುತ್ತಾರೆ, ಭಾಗೀಧಾರರಾಗುತ್ತಾರೆ. ಅವರ ಕೆಳಗಿನವರಿಗೂ ಲಿಫ್ಟ್ ಸಿಗುತ್ತದೆ. ಇಲ್ಲಿಯೂ ಹಾಗೆಯೇ ನೀವು ಮಕ್ಕಳು ಮಾತಾಪಿತರ ಮೇಲೆ ಜಯ ಗಳಿಸಬೇಕಾಗಿದೆ. ಮಾತಾಪಿತರಿಗಿಂತಲೂ ಹೇಗೆ ಮುಂದೆ ಹೋಗಬಹುದೆಂದು ನೀವು ಆಶ್ಚರ್ಯಚಕಿತರಾಗುತ್ತೀರಿ. ತಂದೆಯಂತೂ ಮಕ್ಕಳನ್ನು ಸಿಂಹಾಸನಾಧಿಕಾರಿಗಳನ್ನಾಗಿ ಮಾಡಲು ಪರಿಶ್ರಮಪಟ್ಟು ಯೋಗ್ಯರನ್ನಾಗಿ ಮಾಡುತ್ತಾರೆ. ಆದ್ದರಿಂದ ಹೇಳುತ್ತಾರೆ – ಈಗ ನನ್ನ ಹೃದಯರೂಪಿ ಸಿಂಹಾಸನವನ್ನು ಜಯಿಸಿದರೆ ಭವಿಷ್ಯದ ಸಿಂಹಾಸನಕ್ಕೆ ಅಧಿಕಾರಿಗಳಾಗುತ್ತೀರಿ. ಇಷ್ಟು ಪುರುಷಾರ್ಥ ಮಾಡಿ ಅದರಿಂದ ನರನಿಂದ ನಾರಾಯಣರಾಗಿರಿ, ಮುಖ್ಯವಾಗಿ ಒಂದೇ ಗುರಿ-ಧ್ಯೇಯವಿದೆ -ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಂದಮೇಲೆ ಅದರಲ್ಲಿ ಪದವಿಗಳು ಬಹಳಷ್ಟಿದೆ. ನೀವು ಮಾಯೆಯನ್ನು ಗೆಲ್ಲುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ಮಕ್ಕಳು ಮೊದಲಾದವರನ್ನು ಭಲೆ ಪ್ರೀತಿಯಿಂದ ನಡೆಸಿ ಆದರೆ ಟ್ರಸ್ಟಿಯಾಗಿ ಇರಿ. ಭಕ್ತಿಮಾರ್ಗದಲ್ಲಿಯೂ ಸಹ ಹೇಳುತ್ತಿದ್ದರಲ್ಲವೆ – ಪ್ರಭು ಇದೆಲ್ಲವೂ ತಾವು ಕೊಟ್ಟಿರುವುದೇ ಆಗಿದೆ. ತಾವು ಕೊಟ್ಟಿರುವ ವಸ್ತುವನ್ನು ತಾವು ತೆಗೆದುಕೊಂಡಿರಿ. ಒಳ್ಳೆಯದು- ಅಂದಮೇಲೆ ಅಳುವ ಮಾತೇ ಇಲ್ಲ ಆದರೆ ಇದಂತೂ ಅಳುವ ಪ್ರಪಂಚವಾಗಿದೆ. ಮನುಷ್ಯರು ಬಹಳ ಕಥೆಗಳನ್ನು ತಿಳಿಸುತ್ತಾರೆ. ಮೋಹಜೀತ ರಾಜನ ಕಥೆಯನ್ನೂ ಹೇಳುತ್ತಾರೆ. ಇದರಿಂದ ದುಃಖದ ಅನುಭವವಾಗುವುದಿಲ್ಲ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡರು, ಅಲ್ಲಿ ಎಂದೂ ಯಾವುದೇ ಕಾಯಿಲೆ ಬರುವುದಿಲ್ಲ. 21 ಜನ್ಮಗಳಿಗಾಗಿ ನಿರೋಗಿಕಾಯವಿರುತ್ತದೆ. ಮಕ್ಕಳಿಗೆ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ – ಅಲ್ಲಿನ ರೀತಿ ಪದ್ಧತಿಗಳು ಹೇಗೆ ನಡೆಯುತ್ತವೆ. ಎಂತಹ ಉಡುಪುಗಳನ್ನು ಧರಿಸುತ್ತಾರೆ, ಸ್ವಯಂವರ ಇತ್ಯಾದಿ ಹೇಗಾಗುತ್ತವೆ ಎಲ್ಲವನ್ನೂ ಮಕ್ಕಳು ಸಾಕ್ಷಾತ್ಕಾರ ಮಾಡಿದ್ದೀರಿ. ಆ ಪಾತ್ರವೆಲ್ಲವೂ ಕಳೆದು ಹೋಯಿತು, ಆ ಸಮಯದಲ್ಲಿ ಇಷ್ಟೊಂದು ಜ್ಞಾನವಿರಲಿಲ್ಲ, ದಿನ-ಪ್ರತಿದಿನ ನೀವು ಮಕ್ಕಳಲ್ಲಿ ಆ ಶಕ್ತಿಯು ಬರತೊಡಗುತ್ತಿದೆ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಆಶ್ಚರ್ಯವಲ್ಲವೆ. ಪರಮಪಿತ ಪರಮಾತ್ಮನದೂ ಸಹ ಎಷ್ಟು ದೊಡ್ಡ ಪಾತ್ರವಾಗಿದೆ! ಅವರೇ ಕುಳಿತು ತಿಳಿಸುತ್ತಾರೆ – ಭಕ್ತಿಮಾರ್ಗದಲ್ಲಿಯೂ ನಾನು ಮೇಲೆ ಕುಳಿತು ಎಷ್ಟೊಂದು ಕೆಲಸ ಮಾಡುತ್ತೇನೆ. ಕಲ್ಪದಲ್ಲಿ ಒಂದೇಬಾರಿ ಕೆಳಗೆ ಬರುತ್ತೇನೆ. ಅನೇಕರು ನಿರಾಕಾರನ ಪೂಜೆಯನ್ನೂ ಮಾಡುತ್ತಾರೆ ಆದರೆ ನಿರಾಕಾರ ಪರಮಾತ್ಮನು ಹೇಗೆ ಬಂದು ಓದಿಸುತ್ತಾರೆ ಎಂಬ ಮಾತನ್ನು ಮರೆ ಮಾಡಿ ಬಿಟ್ಟಿದ್ದಾರೆ. ಗೀತೆಯಲ್ಲಿಯೂ ಕೃಷ್ಣನ ಹೆಸರನ್ನು ಹಾಕಿದ್ದಾರೆ, ಆದ್ದರಿಂದ ನಿರಾಕಾರನೊಂದಿಗಿನ ಪ್ರೀತಿಯೇ ಹೊರಟು ಹೋಗಿದೆ. ಇದನ್ನು ಪರಮಾತ್ಮನೇ ಬಂದು ಸಹಜಯೋಗವನ್ನು ಕಲಿಸಿದರು ಮತ್ತು ಪ್ರಪಂಚವನ್ನು ಪರಿವರ್ತಿಸಿದರು. ಯುಗಗಳು ಸುತ್ತುತ್ತಾ ಇರುತ್ತವೆ, ಪ್ರಪಂಚವು ಬದಲಾಗುತ್ತಾ ಇರುತ್ತದೆ. ಈ ಸೃಷ್ಟಿಚಕ್ರವನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ, ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸತ್ಯಯುಗದ ದೇವಿ-ದೇವತೆಗಳನ್ನು ತಿಳಿದುಕೊಂಡಿಲ್ಲ. ಕೇವಲ ದೇವತೆಗಳ ಸಾಕ್ಷಿಗಳು ಉಳಿದುಕೊಂಡಿವೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಸದಾ ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ಶಿವ ತಂದೆಯು ನಮಗೆ ಓದಿಸುತ್ತಾರೆ, ಈ ಬ್ರಹ್ಮಾರವರ ಮೂಲಕ ನಮಗೆ ಶಿಕ್ಷಣ ಕೊಡುತ್ತಾರೆಂದು ತಿಳಿಯಿರಿ. ಶಿವ ತಂದೆಯ ನೆನಪಿನಲ್ಲಿ ಬಹಳ ಮಜಾ ಬರುವುದು. ಇಂತಹ ಗಾಡ್ಫಾದರ್ ಯಾರು? ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಕೆಲವರು ಲೌಕಿಕ ತಂದೆಯರು ಮಕ್ಕಳಿಗೆ ಓದಿಸಲೂಬಹುದು, ಆಗ ಅವರು ನಮ್ಮ ತಂದೆಯು ಶಿಕ್ಷಕನೂ ಆಗಿದ್ದಾರೆಂದು ಹೇಳುತ್ತಾರೆ ಆದರೆ ಅವರೇ ಗುರುವೂ ಆಗಿರಲು ಸಾಧ್ಯವಿಲ್ಲ. ಭಲೆ ಶಿಕ್ಷಕರಾಗಿರಬಹುದು. ತಂದೆಗೆ ಎಂದೂ ಸಹ ಗುರುವೆಂದು ಹೇಳುವುದಿಲ್ಲ. ಇವರ (ಬ್ರಹ್ಮಾ) ತಂದೆಯು ಶಿಕ್ಷಕನೂ ಆಗಿದ್ದರು, ಓದಿಸುತ್ತಿದ್ದರು. ಅವರಂತೂ ಹದ್ದಿನ ತಂದೆ, ಶಿಕ್ಷಕನಾಗಿದ್ದಾರೆ, ಇವರು ಬೇಹದ್ದಿನ ಶಿಕ್ಷಕನಾಗಿದ್ದಾರೆ. ನೀವು ತಮ್ಮನ್ನು ಈಶ್ವರೀಯ ವಿದ್ಯಾರ್ಥಿಯೆಂದು ತಿಳಿದುಕೊಂಡರೂ ಸಹ ಅಹೋ ಸೌಭಾಗ್ಯ! ಪರಮಾತ್ಮನು ಓದಿಸುತ್ತಾರೆ, ಎಷ್ಟು ಸ್ಪಷ್ಟವಾಗಿದೆ. ಎಷ್ಟು ಮಧುರ ತಂದೆಯಾಗಿದ್ದಾರೆ, ಸದಾ ಮಧುರ ವಸ್ತುವನ್ನು ನೆನಪು ಮಾಡಲಾಗುತ್ತದೆ. ಹೇಗೆ ಪ್ರಿಯತಮ-ಪ್ರಿಯತಮೆಯರ ಪ್ರೀತಿಯಿರುತ್ತದೆ. ಅವರಲ್ಲಿ ವಿಕಾರಕ್ಕಾಗಿ ಪ್ರೀತಿಯಿರುವುದಿಲ್ಲ, ಕೇವಲ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಇರುತ್ತಾರೆ, ನಿಮ್ಮದು ಪರಮಾತ್ಮ ತಂದೆಯ ಜೊತೆ ಆತ್ಮರ ಯೋಗವಾಗಿದೆ. ತಂದೆಯು ಎಷ್ಟು ಜ್ಞಾನ ಸಾಗರ, ಪ್ರೇಮ ಸಾಗರನಾಗಿದ್ದಾರೆ. ಈ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬಂದು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆಂದು ಆತ್ಮವೂ ಹೇಳುತ್ತದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವವರೆಂದು ಗಾಯನವಿದೆ, ಸೆಕೆಂಡಿನಲ್ಲಿ ವೈಕುಂಠಕ್ಕೆ ಹೊರಟು ಹೋಗುತ್ತೀರಿ. ಸೆಕೆಂಡಿನಲ್ಲಿ ಮನುಷ್ಯರಿಂದ ದೇವತೆಗಳಾಗಿ ಬಿಡುತ್ತೀರಿ, ಇದು ಗುರಿ-ಧ್ಯೇಯವಾಗಿದೆ ಅದಕ್ಕಾಗಿ ವಿದ್ಯಾಭ್ಯಾಸ ಮಾಡಬೇಕು. ಗುರುನಾನಕರೂ ಹೇಳಿದ್ದಾರಲ್ಲವೆ – ಹೊಲಸಾದ ಬಟ್ಟೆಯನ್ನು ಒಗೆದರು…. ಲಕ್ಷ್ಯವು ಸಾಬೂನು ಆಗಿದೆಯಲ್ಲವೆ. ತಂದೆಯು ಹೇಳುತ್ತಾರೆ – ನಾನು ಎಷ್ಟು ಒಳ್ಳೆಯ ಅಗಸನಾಗಿದ್ದೇನೆ. ನಿಮ್ಮ ವಸ್ತ್ರಗಳು ಅರ್ಥಾತ್ ಆತ್ಮ ಮತ್ತು ಶರೀರವನ್ನು ಎಷ್ಟು ಶುದ್ಧವನ್ನಾಗಿ ಮಾಡುತ್ತೇನೆ! ಆದ್ದರಿಂದ ಈ ದಾದಾರವರನ್ನು ಎಂದೂ ನೆನಪು ಮಾಡಬಾರದು. ಇದೆಲ್ಲವೂ ಶಿವ ತಂದೆಯ ಕಾರ್ಯವಾಗಿದೆ, ಅವರನ್ನೇ ನೆನಪು ಮಾಡಿರಿ. ತಂದೆಯು ಇವರಿಗಿಂತಲೂ ಮಧುರರಾಗಿದ್ದಾರೆ. ಆತ್ಮಕ್ಕೆ ಹೇಳುತ್ತಾರೆ – ನಿಮಗೆ ಈ ಕಣ್ಣುಗಳಿಂದ ಬ್ರಹ್ಮಾರವರ ರಥವು ಕಂಡು ಬರುತ್ತದೆ, ಆದರೆ ನೀವು ಶಿವ ತಂದೆಯನ್ನು ನೆನಪು ಮಾಡಿರಿ. ಶಿವ ತಂದೆಯು ಇವರ ಮೂಲಕ ನಿಮ್ಮನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಹೃದಯರೂಪಿ ಸಿಂಹಾಸನದ ಮೇಲೆ ಜಯ ಗಳಿಸುವ ಪುರುಷಾರ್ಥ ಮಾಡಬೇಕಾಗಿದೆ. ಪರಿವಾರದಲ್ಲಿ ಟ್ರಸ್ಟಿಯಾಗಿದ್ದು ಪ್ರೀತಿಯಿಂದ ಎಲ್ಲರನ್ನೂ ನಡೆಸಬೇಕಾಗಿದೆ. ಮೋಹಜೀತರಾಗಬೇಕಾಗಿದೆ.

2. ಯೋಗ ಬಲದಿಂದ ಆತ್ಮವನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ. ಈ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಿದ್ದರೂ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಇಲ್ಲಿ ಹೂ ಮಾಲೆ ಸ್ವೀಕಾರ ಮಾಡದೇ ಸುಗಂಧ ಭರಿತ ಹೂವಾಗಬೇಕಾಗಿದೆ.

ವರದಾನ:-

ಯಾವ ಮಕ್ಕಳು ತನ್ನ ಚಂಚಲ ವೃತ್ತಿಗಳನ್ನು ಪರಿವರ್ತನೆ ಮಾಡಿ ಬಿಡುತ್ತಾರೆಯೋ, ಅವರೇ ಸತೋಪ್ರಧಾನ ವಾಯುಮಂಡಲವನ್ನಾಗಿ ತಯಾರು ಮಾಡಬಹುದು. ಏಕೆಂದರೆ ವೃತ್ತಿಯಿಂದ ವಾಯುಮಂಡಲವಾಗುತ್ತದೆ. ಯಾವಾಗ ವೃತ್ತಿಯಲ್ಲಿ ಇಷ್ಟು ದೊಡ್ಡ ಕಾರ್ಯದ ಸ್ಮೃತಿಯಿರುವುದಿಲ್ಲವೋ ಆಗಲೇ ವೃತ್ತಿಯು ಚಂಚಲವಾಗುತ್ತದೆ. ಒಂದುವೇಳೆ ಬಹಳ ಚಂಚಲವಿರುವ ಮಗುವು ಬ್ಯುಸಿಯಾಗಿದ್ದರೂ, ತನ್ನ ಚಂಚಲತೆಯನ್ನು ಬಿಡುವುದಿಲ್ಲವೆಂದರೆ, ಅದು ಅವರನ್ನು ಬಂಧಿಸಿ ಬಿಡುತ್ತದೆ. ಇದೇ ರೀತಿಯಲ್ಲಿ ಒಂದುವೇಳೆ ಜ್ಞಾನ-ಯೋಗದಲ್ಲಿ ಬ್ಯುಸಿಯಾಗಿದ್ದರೂ ವೃತ್ತಿಯು ಚಂಚಲ ಆಗುತ್ತದೆಯೆಂದರೆ, ಒಬ್ಬ ತಂದೆಯ ಜೊತೆ ಸರ್ವ ಸಂಬಂಧಗಳ ಬಂಧದಲ್ಲಿ ವೃತ್ತಿಯನ್ನು ಬಂಧಿಸಿ ಬಿಡುತ್ತೀರೆಂದರೆ, ಆ ಚಂಚಲತೆಯು ಸಹಜವಾಗಿಯೇ ಸಮಾಪ್ತಿ ಆಗಿ ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top