03 August 2021 KANNADA Murli Today | Brahma Kumaris

Read and Listen today’s Gyan Murli in Kannada

August 2, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬಾಪ್ದಾದಾರವರ ನೆನಪು-ಪ್ರೀತಿಯನ್ನು ಪಡೆಯಬೇಕೆಂದರೆ ಸೇವಾಧಾರಿಗಳಾಗಿ, ಬುದ್ಧಿಯಲ್ಲಿ ಜ್ಞಾನವು ಸಂಪನ್ನವಾಗಿದ್ದರೆ ಮಳೆಯನ್ನು ಸುರಿಸಿ”

ಪ್ರಶ್ನೆ:: -

ಯಾವ ನಶೆಯು, ತುಂಬಿದ ಮೋಡಗಳನ್ನೂ ಸಹ ಹಾರಿಸಿಕೊಂಡು ಹೋಗುತ್ತದೆ, ಮಳೆ ಸುರಿಸಲು ಬಿಡುವುದಿಲ್ಲ?

ಉತ್ತರ:-

ಒಂದುವೇಳೆ ವ್ಯರ್ಥ ದೇಹಾಭಿಮಾನದ ನಶೆ ಬಂದಿತೆಂದರೆ ತುಂಬಿರುವ ಮೋಡಗಳೂ ಸಹ ಚದುರಿ ಹೋಗುತ್ತವೆ. ಒಂದುವೇಳೆ ಮಳೆ ಸುರಿಸಿದರೂ ಸಹ ಸರ್ವೀಸಿನ ಬದಲು ಡಿಸ್ಸರ್ವೀಸ್ ಮಾಡುತ್ತಾರೆ. ಒಂದುವೇಳೆ ತಂದೆಯೊಂದಿಗೆ ಪ್ರೀತಿಯಿಲ್ಲ, ಅವರೊಂದಿಗೆ ಯೋಗವಿಲ್ಲವೆಂದರೆ ಜ್ಞಾನವಿದ್ದರೂ ಸಹ ಖಾಲಿಯಾಗಿರುತ್ತಾರೆ. ಇಂತಹ ಖಾಲಿ ಮೋಡಗಳು ಅನೇಕರ ಕಲ್ಯಾಣವನ್ನು ಹೇಗೆ ಮಾಡುವರು!

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಇನ್ನು ಕೆಲವೇ ಮೋಡಗಳು ಉಳಿದಿವೆ. ಹೇಗೆ ಮಳೆಯು ಕಡಿಮೆಯಾಗಿ ಬಿಟ್ಟಾಗ ಸಾಗರದ ಮೇಲೆ ಮೋಡಗಳಿರುವುದಿಲ್ಲ, ತಣ್ಣಗಾಗಿ ಬಿಡುತ್ತವೆ ಹಾಗೆಯೇ ಇಲ್ಲಿಯೂ ಸಹ ತಣ್ಣಗಾಗಿ ಬಿಡುತ್ತಾರೆ. ಯಾರು ರಿಫ್ರೆಶ್ ಆಗಿ ಹೋಗಿ ಮಳೆ ಸುರಿಸುವರೋ ಅವರಿಗೆ ಮೋಡಗಳೆಂದು ಹೇಳಲಾಗುವುದು. ಒಂದುವೇಳೆ ಮಳೆ ಸುರಿಸದಿದ್ದರೆ ಅವರಿಗೆ ಮೋಡಗಳೆಂದು ಹೇಳುವರೇ! ಇವು ಜ್ಞಾನದ ಮೋಡಗಳಾಗಿವೆ, ಅವು ನೀರಿನ ಮೋಡಗಳಾಗಿವೆ. ಮಿಲನದ ಸೀಜನ್ ಇದ್ದಾಗ ಜ್ಞಾನದ ಮೋಡಗಳು ಬರುತ್ತವೆ, ರಿಫ್ರೆಶ್ ಆಗಿ ಹೋಗಿ ಅನ್ಯರನ್ನೂ ರಿಫ್ರೆಶ್ ಮಾಡುತ್ತಾರೆ. ಮೋಡಗಳಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರಂತೂ ಬಹಳ ಜೋರಾಗಿ ಮಳೆ ಸುರಿಸುತ್ತಾರೆ. ಮೋಡಗಳ ಕೆಲಸವೇ ಆಗಿದೆ – ಮಳೆ ಸುರಿಸುವುದು, ಬಾಡಿರುವ ಮರ-ಗಿಡಗಳನ್ನು ರಿಫ್ರೆಶ್ ಮಾಡುವುದು. ಯಾರಲ್ಲಿ ಪೂರ್ಣ ಜ್ಞಾನವಿದೆಯೋ ಅವರು ಗುಪ್ತವಾಗಿ ಕುಳಿತುಕೊಳ್ಳುವುದಿಲ್ಲ, ಅವರಿಗೆ ತಂದೆಯ ಆದೇಶವೂ ಬೇಕಾಗಿಲ್ಲ ಏಕೆಂದರೆ ಮೋಡಗಳಲ್ಲವೆ. ತುಂಬಿಕೊಂಡು ಹೋಗಿ ಮಳೆ ಸುರಿಸುವುದಕ್ಕಾಗಿಯೇ ಬರುತ್ತಾರೆ. ಎಲ್ಲಿಯಾದರೂ ಬಂಜರು ಭೂಮಿ ಇರುವುದನ್ನು ನೋಡಿದರೆ ಅಲ್ಲಿ ಹೋಗಿ ಹಚ್ಚ ಹಸುರಾಗಿ ಮಾಡಬೇಕು. ಮಹಾರಥಿ ಮಕ್ಕಳು ಎಲ್ಲಾ ಸೇವಾಕೇಂದ್ರಗಳನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಯಾವ ಸೇವಾಕೇಂದ್ರವು ತಣ್ಣಗಾಗಿದೆ? ಯಾವ ಸೇವಾಕೇಂದ್ರದ ಮಕ್ಕಳಿಗೆ ಹೆಚ್ಚು ಬಿರುಗಾಳಿಗಳು ಬರುತ್ತವೆ? ಎಂಬುದನ್ನು ಮಹಾರಥಿ ಸೇವಾಧಾರಿಗಳು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ತಂದೆಯೂ ಸಹ ಸದಾ ಹೇಳುತ್ತಾರೆ – ಸೇವಾಧಾರಿ ಮಕ್ಕಳಿಗೆ ನೆನಪು-ಪ್ರೀತಿಯನ್ನು ತಿಳಿಸಿ ಎಂದು. ಒಳ್ಳೊಳ್ಳೆಯ ಸೇವಾಧಾರಿ ಮೋಡಗಳು (ಮಕ್ಕಳು) ಸರ್ವೀಸ್ ಮಾಡಲು ಹೋಗುತ್ತಾರೆ, ಪ್ರದರ್ಶನಿಯಲ್ಲಿಯೂ ಎಲ್ಲರೂ ಏಕರಸವಾಗಿ ತಿಳಿಸುವುದಿಲ್ಲ. ಮುಖ್ಯವಾದ ಮಾತೇ ಇದಾಗಿದೆ – ಗೀತೆಯ ಭಗವಂತ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಸಾಕಾರಿ ಶ್ರೀಕೃಷ್ಣನಲ್ಲ. ತಿಳಿಸಿ ಕೊಡುವ ಶೈಲಿಯು ಬಹಳ ಚೆನ್ನಾಗಿರಬೇಕು. ಇಡೀ ದಿನ ಇದೇ ಚಿಂತನೆಯಿರಲಿ – ಎಲ್ಲರನ್ನು ಹೋಗಿ ಜಾಗೃತಗೊಳಿಸಬೇಕು, ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ, ಎಲ್ಲರಿಗೆ ಪ್ರೀತಿಯಿಂದ ತಿಳಿಸುತ್ತಾ ಇರಿ – ಇಬ್ಬರು ತಂದೆಯರಿದ್ದಾರೆ. ಒಬ್ಬರು ಲೌಕಿಕ ತಂದೆ, ಮತ್ತೊಬ್ಬರು ಪಾರಲೌಕಿಕ ತಂದೆ. ಪಾರಲೌಕಿಕ ತಂದೆಗೇ ಪತಿತ-ಪಾವನ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳಿಗೆ ಬುದ್ಧಿಯು ಸಿಕ್ಕಿದೆ. ಪ್ರಪಂಚದ ಮನುಷ್ಯರು ಭಲೆ ಆಡಂಬರವಾಗಿ ಕಾಣುತ್ತಾರೆ ಆದರೆ ಕಲ್ಲು ಬುದ್ಧಿಯವರಾಗಿದ್ದಾರೆ. ಸ್ವಯಂ ತಂದೆಯೇ ಹೇಳುತ್ತಾರೆ- ಈ ಸಾಧು-ಸಂತರನ್ನೂ ಸಹ ನಾನೇ ಉದ್ಧಾರ ಮಾಡಬೇಕಾಗಿದೆ, ಅವರೂ ಸಹ ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ. ಸತ್ಯಯುಗದಿಂದ ಹಿಡಿದು ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ಆದರೆ ಇದು ಯಾರಿಗೂ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಈ ಜ್ಞಾನವಿಲ್ಲ. ಆದ್ದರಿಂದ ಯಾರದೂ ಸದ್ಗತಿಯಾಗಲು ಸಾಧ್ಯವಿಲ್ಲ. ಗೀತೆಗೆ ಎಷ್ಟೊಂದು ಮಾನ್ಯತೆಯಿದೆ ಆದರೆ ಅದು ಭಕ್ತಿಮಾರ್ಗವಾಗಿದೆ. ತಂದೆಯು ಪತಿತ-ಪಾವನನಾಗಿದ್ದಾರೆ. ರಾಜಯೋಗವನ್ನು ಕಲಿಸುತ್ತಾರೆ ಅಂದಮೇಲೆ ರಾಜ್ಯಭಾರಕ್ಕಾಗಿ ಅವಶ್ಯವಾಗಿ ಹೊಸ ಪ್ರಪಂಚ ಬೇಕು. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಇದೂ ಸಹ ನಿಮಗೆ ಈಗ ಅರ್ಥವಾಗಿದೆ. ಯಾರಿಗೆ ಕಲ್ಪದ ಹಿಂದೆ ತಿಳಿಸಿದ್ದರೋ ಅವರಿಗೇ ಈಗಲೂ ತಿಳಿಸುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ. ಯುದ್ಧವೆಂದರೆ ಆ ಯುದ್ಧವಲ್ಲ, ಹೇಗೆ ಯಾವಾಗಲೂ ನಡೆಯುತ್ತಾ ಬಂದಿದೆ. 8-10 ವರ್ಷಗಳವರೆಗೆ ನಡೆದು ಮತ್ತೆ ನಿಂತು ಹೋಗುತ್ತಾರೆ. ಡ್ರಾಮಾನುಸಾರ ಯಾವ ಅಣು ಬಾಂಬುಗಳನ್ನು ತಯಾರಿಸಿದ್ದಾರೆಯೋ ಅವನ್ನು ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರಿಸಿಲ್ಲ. ಪತಿತ ಮನುಷ್ಯರ ಮೃತ್ಯುವಾಗದೇ ಸತ್ಯಯುಗವು ಬರುವುದಿಲ್ಲ. ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನೂ ತಿಳಿಸಬೇಕಾಗಿದೆ. ಶಾಂತಿ ಸ್ಥಾಪನೆ ಮಾಡುವುದು ಹಾಗೂ ಶ್ರೇಷ್ಠಾಚಾರಿ ಪ್ರಪಂಚವನ್ನಾಗಿ ಮಾಡುವುದು ಒಬ್ಬ ತಂದೆಯ ಕರ್ತವ್ಯವೇ ಆಗಿದೆ. ತಂದೆಯು ತಿಳಿಸುತ್ತಾರೆ – ಅನ್ಯ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬರ ಸಂಗವನ್ನು ಸೇರಬೇಕಾಗಿದೆ. ದೇಹ ಸಹಿತ ಏನೆಲ್ಲವೂ ಕಾಣುತ್ತಿದೆಯೋ ಇದೆಲವನ್ನು ತೆಗೆಯಬೇಕಾಗಿದೆ. ನಾವೀಗ ಮರಳಿ ಹೋಗಬೇಕಾಗಿದೆ ಆದ್ದರಿಂದ ಮನೆಯನ್ನೇ ನೆನಪು ಮಾಡಬೇಕಾಗಿದೆ. ನೀವೀಗ ತಿಳಿದುಕೊಂಡಿದ್ದೀರಿ – ಇದು ಮೃತ್ಯುಲೋಕವಾಗಿದೆ, ನಾವೀಗ ಅಮರಲೋಕದಲ್ಲಿ ಹೋಗುವುದಕ್ಕಾಗಿ ಅಮರ ಕಥೆಯನ್ನು ಕೇಳುತ್ತಿದ್ದೇವೆ. ದೇವತೆಗಳಿಗೆ ದೈವೀ ಗುಣವಂತ ಮನುಷ್ಯರೆಂದು ಹೇಳಲಾಗುತ್ತದೆ, ಇಲ್ಲಂತೂ ಒಬ್ಬರೂ ಇರಲು ಸಾಧ್ಯವಿಲ್ಲ. ಕೃಷ್ಣನಿಗೂ ಎಷ್ಟೊಂದು ನಿಂದನೆಯನ್ನು ಬರೆದು ಬಿಟ್ಟಿದ್ದಾರೆ, ಸ್ವಲ್ಪವೂ ಬುದ್ಧಿಯಲ್ಲಿ ಬರುವುದಿಲ್ಲ.

ಈಗ ನೀವು ಮಕ್ಕಳು ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು, ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಯಾವುದಕ್ಕೆ ದೈವೀ ಗುಣಗಳೆಂದು ಹೇಳಲಾಗುತ್ತದೆ ಎಂಬುದನ್ನೂ ಸಹ ತಿಳಿಸಲಾಗುತ್ತದೆ. ಅವಶ್ಯವಾಗಿ ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ಇದು ಮೊದಲ ಮುಖ್ಯ ಗುಣವಾಗಿದೆ. ನೀವು ಎಲ್ಲಿಯಾದರೂ ನೋಡಿರಿ, ಪವಿತ್ರರ ಮುಂದೆ ಅಪವಿತ್ರರು ತಲೆ ಬಾಗುತ್ತಾರೆ. ಸತ್ಯಯುಗದಲ್ಲಿ ಪವಿತ್ರರೇ ಇರುತ್ತಾರೆ ಆದ್ದರಿಂದ ಅಲ್ಲಿ ಮಂದಿರಗಳಿರುವುದಿಲ್ಲ. ನಂತರ ಯಾವಾಗ ಪೂಜಾರಿಗಳಾಗುವರೋ ಆಗ ಮಂದಿರಗಳನ್ನು ಕಟ್ಟಿಸುತ್ತಾರೆ. ಯಾರು ಪಾವನರಾಗಿದ್ದರೋ ಅವರೇ ಪತಿತರಾಗುತ್ತಾರೆ. ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ತಂದೆಯು ತಿಳಿಸುತ್ತಾರೆ – ಈ ಹಳೆಯ ಪ್ರಪಂಚವನ್ನು ಹಳೆಯ ಶರೀರವನ್ನೂ ಮರೆಯಬೇಕಾಗಿದೆ. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ. ಇದು ಸಮಾಪ್ತಿ ಆಗುವುದರಲ್ಲಿ ನಿಧಾನವಾಗುವುದಿಲ್ಲ. ಈ ಹಳೆಯ ಪ್ರಪಂಚ, ಹಣ-ಅಧಿಕಾರ, ಸಂಪತ್ತೆಲ್ಲವೂ ಹೋಯಿತೆಂದರೆ ಹೋಯಿತು. ಇನ್ನು ಕೆಲವೇ ದಿನಗಳು ಉಳಿದಿವೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಡುವುದೆಂದು ಪ್ರಪಂಚದಲ್ಲಿ ಯಾರಿಗಾದರೂ ತಿಳಿದಿದೆಯೇ? ನೀವು ತಿಳಿಸುತ್ತೀರಿ, ಆದರೆ ಅವರಿಗೆ ವಿಶ್ವಾಸ ಕುಳಿತುಕೊಳ್ಳಬೇಕಲ್ಲವೆ. ಭಗವಾನುವಾಚ – ಯಾವಾಗ ತಿಳಿದುಕೊಳ್ಳುವರೋ ಆಗಲೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು.

ತಂದೆಯು ನೀವು ಮಕ್ಕಳಿಗೆ ಹೇಳುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಮಕ್ಕಳಿಗೇ ತಿಳಿದಿದೆ – ಬೇಹದ್ದಿನ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ, ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲರೂ ಸಹೋದರರಾಗಿದ್ದೀರಿ, ಸ್ವರ್ಗದಲ್ಲಿ ಎಲ್ಲಾ ಸಹೋದರರು ಸುಖಿಯಾಗಿದ್ದರು. ಕಲಿಯುಗದಲ್ಲಿ ಎಲ್ಲರೂ ದುಃಖಿಯಾಗಿದ್ದೀರಿ. ಎಲ್ಲಾ ಆತ್ಮರು ನರಕವಾಸಿಯಾಗಿದ್ದಾರೆ, ಕೇವಲ ಆತ್ಮವೇ ಇರುವುದಿಲ್ಲ. ಶರೀರವು ಬೇಕಲ್ಲವೆ. ಈಗ ನೀವು ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಿದೆ. ಇದು ಚಿಕ್ಕಮ್ಮನ ಮನೆಯಂತಲ್ಲ. ಮೊದಲು ಪರಮಪಿತ ಪರಮಾತ್ಮನೇ ನಮಗೆ ಓದಿಸುತ್ತಾರೆ, ಶಿವ ತಂದೆಯು ಈ ಶರೀರದ ಮೂಲಕ ಓದಿಸಲು ಬರುತ್ತಾರೆ ಎಂಬುದು ನಿಶ್ಚಯವಾಗುವುದು ಆಗಲೇ ಸ್ಥಿತಿಯು ಪಕ್ಕಾ ಆಗುವುದು. ನಾವೂ ಸಹ ಶರೀರದ ಮೂಲಕ ಕೇಳುತ್ತೇವೆ, ಧಾರಣೆ ಮಾಡಿಕೊಳ್ಳುತ್ತೇವೆ, ಸಂಸ್ಕಾರಗಳ ಅನುಸಾರವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಧಾರಣೆ ಮಾಡಿಕೊಳ್ಳುತ್ತೇವೆ. ಹೇಗೆ ತಂದೆಯು ಸೈನಿಕರ ಉದಾಹರಣೆ ಕೊಡುತ್ತಾರೆ. ಅವರು ಯುದ್ಧದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಮತ್ತೆ ಸೈನಿಕರಾಗಿಯೇ ಜನ್ಮ ಪಡೆಯುತ್ತಾರೆ. ಈಗ ತಂದೆಯ ಸಂಸ್ಕಾರಗಳ ಬಗ್ಗೆಯೂ ನಿಮಗೆ ತಿಳಿದಿದೆ – ನಿರಾಕಾರ ಬೇಹದ್ದಿನ ತಂದೆಯಲ್ಲಿ ಯಾವ ಸಂಸ್ಕಾರವಿದೆ! ಅವರು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರೆ. ಅವರೇ ಬಂದು ಪಾವನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಜನ್ಮ-ಜನ್ಮಾಂತರದ ವಿಕರ್ಮಗಳು ವಿನಾಶವಾಗುತ್ತವೆ. ಇಲ್ಲವೆಂದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಪದವಿಯೇನೂ ಸಿಗುವುದಿಲ್ಲ.

ಈಗ ಮಕ್ಕಳೂ ತಿಳಿದುಕೊಂಡಿದ್ದೀರಿ – ತಂದೆಯು ನಮಗೆ ಸಹಜ ಮಾರ್ಗವನ್ನು ತಿಳಿಸುತ್ತಾರೆ. ಮಕ್ಕಳೇ, ಮನ್ಮನಾಭವ ಎಂದು ಹೇಳುತ್ತಾರೆ. ಈ ಅಕ್ಷರವು ಗೀತೆಯಲ್ಲಿದೆ ಆದರೆ ಇದರ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿರಿ. ದೇಹಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ಅರಿತು ಪರಮಪಿತ ಪರಮಾತ್ಮನಾದ ನನ್ನನ್ನು ನೆನಪು ಮಾಡಿರಿ. ನೆನಪಿಗೇ ಯೋಗ ಅಗ್ನಿಯೆಂದು ಹೇಳಲಾಗುತ್ತದೆ. ಯೋಗವು ಸಾಮಾನ್ಯ ಪದವಾಗಿದೆ. ಗೀತೆಯಲ್ಲಿಯೂ ಇದೆ ಆದರೆ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಘೋರ ಅಂಧಕಾರ ಮಾಡಿ ಬಿಟ್ಟಿದ್ದಾರೆ. ಈಗ ನೀವು ತಿಳಿಸುತ್ತೀರೆಂದರೂ ಸಹ ಇದು ನಿಮ್ಮ ಕಲ್ಪನೆಯಾಗಿದೆ ಎಂದು ಹೇಳಿ ಬಿಡುತ್ತಾರೆ. ಏನೂ ಅರ್ಥವಾಗುವುದಿಲ್ಲ. ಅವರಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವುದಿಲ್ಲ. ಮೊದಲು ಇವರು ಬೇಹದ್ದಿನ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಅವರು ನಮಗೆ ಓದಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇದು ಪಕ್ಕಾ ನಿಶ್ಚಯವಿರಬೇಕು. ಹೊಸ ವ್ಯಕ್ತಿಗಳಿಗೆ ನಿಶ್ಚಯ ಕುಳಿತುಕೊಳ್ಳುವುದು ಅಸಂಭವವಾಗಿದೆ, ಕೆಲಕೆಲವರು ಹೊಸಬರೂ ಸಹ ಬಹಳ ಸೂಕ್ಷ್ಮ ಬುದ್ಧಿಯವರಾಗಿರುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ. ಕೆಲವರಂತೂ ಇಲ್ಲಿಗೆ ಬರುವುದಕ್ಕೂ ಇಚ್ಛಿಸುವುದಿಲ್ಲ, ಏನೂ ತಿಳಿದುಕೊಳ್ಳುವುದಿಲ್ಲ. ಬುದ್ಧಿಯಲ್ಲಿಯೇ ಬರುವುದಿಲ್ಲ – ಇಷ್ಟೊಂದು ಮಂದಿ ಬಿ.ಕೆ.ಗಳಿದ್ದಾರೆ ಅಂದಮೇಲೆ ಅವಶ್ಯವಾಗಿ ಇವರಿಗೆ ತಂದೆಯಿಂದ ಆಸ್ತಿಯು ಸಿಕ್ಕಿರಬೇಕು. ಇದು ಪರಿವಾರವಾಗಿದೆ, ಬ್ರಹ್ಮಾಕುಮಾರ-ಕುಮಾರಿಯರು ಎಂದು ಬರೆಯಲಾಗಿದೆ ಅಂದಮೇಲೆ ಇದು ಪರಿವಾರವಾಯಿತಲ್ಲವೆ. ಪ್ರಜಾಪಿತ ಬ್ರಹ್ಮನ ಪರಿವಾರವು ಎಷ್ಟು ದೊಡ್ಡದಾಗಿದೆ ಆದರೆ ಈ ಮಾತು ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ. ತಮ್ಮ ಗುರಿ-ಧ್ಯೇಯವೇನೆಂದು ಯಾರಾದರೂ ಕೇಳಿದರೆ ತಿಳಿಸಿರಿ – ಹೊರಗಡೆ ಬೋರ್ಡಿನ ಮೇಲೆ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಎಂದು ಬರೆಯಲಾಗಿದೆ ಅಂದಮೇಲೆ ಇದು ಪರಿವಾರವಾಯಿತು. ಇಲ್ಲಿ ತಾತನಿಂದ ಆಸ್ತಿಯು ಸಿಗುತ್ತದೆ. ಪ್ರಜಾಪಿತ ಬ್ರಹ್ಮನ ಮುಖದ ಮೂಲಕ ಶಿವ ತಂದೆಯು ರಚನೆಯನ್ನು ರಚಿಸುತ್ತಾರೆ. ಅಂದಮೇಲೆ ಅವರು ರಚಯಿತನಾದರು, ಸ್ವರ್ಗವನ್ನು ರಚಿಸುತ್ತಾರೆಂದರೆ ಅವಶ್ಯವಾಗಿ ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ ಅಂದಮೇಲೆ ಇದು ಪರಿವಾರ ಆಯಿತಲ್ಲವೆ. ತಂದೆ-ಗಂಡು ಮಕ್ಕಳು, ಹೆಣ್ಣು ಮಕ್ಕಳು ಮತ್ತು ದಾದಾರವರು. ಬ್ರಹ್ಮನೂ ಇದ್ದಾರೆ, ಶಿವನೂ ಇದ್ದಾರೆ, ಶಿವನು ರಚಯಿತ ನಿರಾಕಾರನಾಗಿದ್ದಾರೆ ಅಂದಮೇಲೆ ಮಕ್ಕಳಿಗೆ ಆಸ್ತಿಯನ್ನು ಹೇಗೆ ಕೊಡುವುದು! ಆದ್ದರಿಂದ ಬ್ರಹ್ಮಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ, ಇದನ್ನು ಒಳ್ಳೆಯ ರೀತಿಯಲ್ಲಿ ತಿಳಿಸಬೇಕಾಗಿದೆ. ತಿಳಿಸಿರಿ, ಇದು ನಿಮ್ಮ ತಂದೆಯ ಮನೆಯಾಗಿದೆ, ಇದಕ್ಕೆ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ, ನಾವು ಬ್ರಾಹ್ಮಣರಾಗಿದ್ದೇವೆ, ತಂದೆಯ ವಿನಃ ಮತ್ತ್ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಇದೆಯಲ್ಲವೆ – ಮನ್ಮನಾಭವ ಅರ್ಥಾತ್ ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು. ಆದ್ದರಿಂದ ನಾವು ಆ ಒಬ್ಬ ತಂದೆಯನ್ನೇ ನೆನಪು ಮಾಡುತ್ತೇವೆ. ಭಕ್ತಿಮಾರ್ಗದಲ್ಲಿ ಹಾಡುತ್ತಾರೆ – ಬಾಬಾ, ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ, ನಿಮ್ಮವರಾಗುತ್ತೇವೆ. ನಾವಾತ್ಮರು ಈ ದೇಹವನ್ನೂ ಬಿಟ್ಟು ನಿಮ್ಮ ಜೊತೆ ಬಂದು ಬಿಡುತ್ತೇವೆ, ನಿಮ್ಮ ಮಕ್ಕಳಾಗುತ್ತೇವೆ ಅಂದಮೇಲೆ ತಮ್ಮ ಜೊತೆಯಲ್ಲಿಯೇ ಹೋಗುತ್ತೇವೆ. ಹೇಗೆ ವಿವಾಹವಾದರೆ ಪ್ರಿಯತಮನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರಲ್ಲವೆ. ಈ ಶಿವ ಪ್ರಿಯತಮನೂ ಹೇಳುತ್ತಾರೆ – ನಾನು ನಿಮ್ಮನ್ನು ಈ ದುಃಖದಿಂದ ಬಿಡಿಸಿ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ, ಮತ್ತೆ ತಮ್ಮ-ತಮ್ಮ ಪುರುಷಾರ್ಥದನುಸಾರ ಹೋಗಿ ರಾಜ್ಯಭಾರ ಮಾಡುತ್ತೀರಿ. ಯಾರೆಷ್ಟು ಜ್ಞಾನ ಧನವನ್ನು ಧಾರಣೆ ಮಾಡಿಕೊಳ್ಳುವರೋ ಅಷ್ಟು ಶ್ರೇಷ್ಠ ಪದವಿಯನ್ನೂ ಪಡೆಯುತ್ತಾರೆ. ಚಿಕ್ಕ-ಚಿಕ್ಕ ಕುಮಾರಿಯರೂ ಸಹ ಸರ್ವೀಸ್ ಮಾಡುತ್ತಿದ್ದಾರೆ. ಅವರೇ ದೊಡ್ಡ-ದೊಡ್ಡ ವಿದ್ವಾಂಸರು, ಪಂಡಿತರು ಮೊದಲಾದವರಿಗೆ ತಿಳಿಸಬೇಕಾಗಿದೆ. ಉಮಂಗವಿರಬೇಕು – ಮಲ್ಲ ಯುದ್ಧದಲ್ಲಿ ದೊಡ್ಡ-ದೊಡ್ಡ ಪ್ರತಿಜ್ಞೆ ಮಾಡುತ್ತಾರೆ – ನಾವು ಇವರ ಜೊತೆ ಯುದ್ಧ ಮಾಡುತ್ತೇವೆ ಎಂದು. ಸೇವಾಧಾರಿ ಮಕ್ಕಳು ಆರಾಮದಿಂದ ಮಲಗುವಂತಿಲ್ಲ, ಆರಾಮ ಹರಾಮ (ವ್ಯರ್ಥ) ವಾಗಿದೆ. ಯಾರೆಲ್ಲಾ ತಮ್ಮನ್ನು ಮಹಾರಥಿಗಳೆಂದು ತಿಳಿದುಕೊಳ್ಳುವರೋ ಅವರು ಸುಖದಿಂದ ಮಲಗುವಂತಿಲ್ಲ. ಸರ್ವೀಸಿಗಾಗಿ ಓಡಾಡಬೇಕಾಗಿದೆ. ಇತ್ತೀಚೆಗೆ ತಂದೆಯು ಬಹಳಷ್ಟು ಪ್ರದರ್ಶನಿಗಳನ್ನು ಮಾಡಿಸುತ್ತಿರುತ್ತಾರೆ. ದೊಡ್ಡ-ದೊಡ್ಡವರಿಗೂ ನಿಮಂತ್ರಣವನ್ನು ಕಳುಹಿಸಿ, ಈಗಿಲ್ಲದಿದ್ದರೆ ಕೊನೆಯಲ್ಲಿ ಬಂದೇ ಬರುತ್ತಾರೆ. ಸಾಧು-ಸಂತ, ಮಹಾತ್ಮ ಯಾರಾದರೂ ಇರಲಿ ಎಲ್ಲರನ್ನೂ ಜಾಗೃತ ಮಾಡುತ್ತಾ ಇರಿ ಆದರೆ ಮಾತನಾಡುವವರು ಮಹಾರಥಿಯಾಗಿರಬೇಕು. ಯಾರಿಗೆ ತಂದೆಯೊಂದಿಗೆ ಯೋಗವಿಲ್ಲವೋ ಪ್ರೀತಿಯಿಲ್ಲವೋ ಅವರು ಖಾಲಿ ಮೋಡಗಳಿದ್ದಂತೆ, ಅವರೇನು ಮಾಡುವರು! ಇದನ್ನಂತೂ ತಿಳಿದುಕೊಂಡಿದ್ದೀರಿ, ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆ ಬಾಗುತ್ತಾರೆ. ನಾನು ಎಲ್ಲಿಯವರೆಗೆ ಓದಿದ್ದೇನೆ, ಸರ್ವೀಸ್ ಮಾಡಿ ತೋರಿಸುತ್ತೇನೆಂದು ಪ್ರತಿಯೊಬ್ಬರೂ ತನ್ನನ್ನು ತಿಳಿದುಕೊಳ್ಳಬಹುದಾಗಿದೆ. ಒಂದುವೇಳೆ ಮೋಡಗಳು ತುಂಬಿದೆ, ಆದರೆ ಮಳೆ ಸುರಿಸದಿದ್ದರೆ ಅಂತಹ ಮೋಡಗಳಿಂದೇನು ಪ್ರಯೋಜನ? ಪ್ರತಿಯೊಬ್ಬರಿಗೆ ತಮ್ಮ ತಿಳುವಳಿಕೆ ಬೇಕು. ವ್ಯರ್ಥ ದೇಹಾಭಿಮಾನದ ನಶೆಯಲ್ಲಿದ್ದರೆ ಸದಾಕಾಲಕ್ಕಾಗಿ ಶ್ರೇಷ್ಠ ಪದವಿಯನ್ನು ಕಳೆದುಕೊಳ್ಳುತ್ತೀರಿ. ತಂದೆಗೆ ಸರ್ವೀಸಿನ ಎಷ್ಟೊಂದು ಉಮಂಗವಿದೆ! ಸರ್ಕಾರದವರಿಗೆ ತಿಳಿಸಬೇಕು – ನಮಗೆ ಒಂದು ದೊಡ್ಡ ಹಾಲ್ನ್ನು ಕೊಡಿ, ಅದರಲ್ಲಿ ನಾವು ಆತ್ಮಿಕ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತೇವೆ. ತಂದೆಯು ಬಂದಿರುವುದೇ ರಾಜಯೋಗವನ್ನು ಕಲಿಸಲು ಆದರೆ ಯುಕ್ತಿಯುಕ್ತವಾಗಿ ತಿಳಿಸಬೇಕಾಗಿದೆ. ಯಾರಿಗೆ ಭಾಷಣ ಮಾಡುವುದೇ ಗೊತ್ತಿಲ್ಲವೋ ಅವರೇನು ತಿಳಿಸುವರು! ಉನ್ನತ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ಸರ್ವೀಸ್ ಮಾಡುವರೋ ಅವರು ಪಡೆಯುವರು. ದೊಡ್ಡ-ದೊಡ್ಡವರಿಗೆ ಬರೆಯಿರಿ – ಈ ಜ್ಞಾನವಿಲ್ಲದೆ ಭಾರತದ ಹಾಗೂ ಪ್ರಪಂಚದ ಕಲ್ಯಾಣವಾಗಲು ಸಾಧ್ಯವಿಲ್ಲ. ವಿದ್ಯೆಯು ಮುಖ್ಯವಾಗಿದೆ, ಈ ಲಕ್ಷ್ಮೀ-ನಾರಾಯಣರೂ ಸಹ ವಿದ್ಯೆಯಿಂದಲೇ ಪದವಿಯನ್ನು ಪಡೆದರಲ್ಲವೆ. ಹಿಂದಿನ ಜನ್ಮದಲ್ಲಿ ರಾಜಯೋಗವನ್ನು ಕಲಿತಿದ್ದಾರೆ, ನಾವೂ ಸಹ ಈಗ ಇಲ್ಲಿ ಓದುತ್ತಿದ್ದೇವೆ. ಶಾಲೆಯಲ್ಲಿ ವಿದ್ಯಾರ್ಥಿಗಳು ನಾವು ಈ ಪರೀಕ್ಷೆಯನ್ನು ತೇರ್ಗಡೆ ಮಾಡಿ ಹೋಗಿ ಈ ಪದವಿಯನ್ನು ಪಡೆಯುತ್ತೇವೆಂದು ತಿಳಿದುಕೊಳ್ಳುತ್ತಾರೆ. ಈ ಜ್ಞಾನವು ನಿಮಗೆ ಸಿಗುತ್ತದೆ. ಅದು ಈ ಪ್ರಪಂಚಕ್ಕಾಗಿ ಅಲ್ಲ. ನೀವು ಭವಿಷ್ಯ 21 ಜನ್ಮಗಳಿಗಾಗಿ ಪ್ರಾಲಬ್ಧ ಮಾಡಿಕೊಳ್ಳುವುದಕ್ಕಾಗಿ ಓದುತ್ತೀರಿ, ಅವರು ಇದೊಂದು ಜನ್ಮದ ಸುಖಕ್ಕಾಗಿ ಓದುತ್ತಾರೆ ಅಂದಮೇಲೆ ಆ ವಿದ್ಯೆಯನ್ನೂ ಓದಬೇಕು, ಜೊತೆ ಜೊತೆಗೆ ಈ ಶಿಕ್ಷಣವನ್ನೂ ಕಲಿಯಬೇಕಾಗಿದೆ, ಇದರಲ್ಲಿ ಹೆದರುವ ಮಾತಿಲ್ಲ. ಆಧ್ಯಾತ್ಮಿಕ ಜ್ಞಾನವನ್ನು ಏಕೆ ತೆಗೆದುಕೊಳ್ಳಬಾರದು! ಚಿತ್ರಗಳನ್ನು ತೆಗೆದುಕೊಂಡು ಹೋಗಿ ತಿಳಿಸಬೇಕು – ಈ ಜ್ಞಾನವು ಎಲ್ಲರಿಗಾಗಿ ಬಹಳ ಅವಶ್ಯಕವಾಗಿದೆ ಆದರೆ ಮಕ್ಕಳು ಇನ್ನೂ ಅಷ್ಟು ತಯಾರಾಗುತ್ತಿಲ್ಲ. ನೌಕರಿಯ ಹೊರೆಯನ್ನು ಹೊತ್ತುಕೊಳ್ಳುವುದರಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಬಂಧನಮುಕ್ತರಾಗಿದ್ದರೆ ಸರ್ವೀಸಿನಲ್ಲಿ ತೊಡಗಬೇಕು. ಎಲ್ಲರೂ ಶ್ರೀಮತದಂತೆ ನಡೆಯುವುದಿಲ್ಲ, ಮಧ್ಯದಲ್ಲಿ ಮಾಯೆಯು ಸಿಕ್ಕಿ ಹಾಕಿಸುತ್ತದೆ. ಕೆಲಕೆಲವು ಮಕ್ಕಳಿಗೆ ಬಹಳ ಆಸಕ್ತಿಯಿದೆ ಆದರೆ ನಾವು ಹೋಗಿ ಅನೇಕರ ಕಲ್ಯಾಣ ಮಾಡಬೇಕೆಂಬ ನಶೆಯಿರುವುದಿಲ್ಲ. ಅಂದಾಗ ತಂದೆಯೂ ತಿಳಿದುಕೊಳ್ಳುವರು – ನೀವು ದೊಡ್ದವರಾಗಿದ್ದೀರಿ ಅಂದಮೇಲೆ ಏಕೆ ಗುಟುಕರಿಸಬೇಕು! ನೀವು ಇದನ್ನು ಹೇಳಬಹುದು – ನಾವು ಭಾರತದ ಉದ್ಧಾರ ಮಾಡಬೇಕಾಗಿದೆ, ಸತ್ಯ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕಾಗಿದೆ ಆದರೆ ತಂದೆಗೆ ಆಶ್ಚರ್ಯವೇನೆಂದರೆ ಮಕ್ಕಳಲ್ಲಿ ಇಷ್ಟು ನಶೆಯಿರುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ – ಇನ್ನೂ ರಜೋ ಬುದ್ಧಿಯಾಗಿದೆ, ಅವಕಾಶವು ಬಹಳ ಚೆನ್ನಾಗಿದೆ. ಇಂತಹವರೂ ಅನೇಕರಿದ್ದಾರೆ ಯಾರಿಗೆ ಜ್ಞಾನದ ಅಹಂಕಾರವು ಬಹಳ ಇದೆ. ಆದರೆ ಬಹಳ ಡಿಸ್ಸರ್ವೀಸ್ ಮಾಡುತ್ತಾರೆ, ಇದು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು ಎನ್ನುವಂತೆ ತಂದೆಗೆ ಗೊತ್ತಿದೆ. ರಾಹುವಿನ ಗ್ರಹಣ ಕುಳಿತುಕೊಳ್ಳುತ್ತದೆ, ಬೃಹಸ್ಪತಿ ದೆಶೆಯು ಇಳಿದು ರಾವಣನ ದೆಶೆಯು ಕುಳಿತುಕೊಳ್ಳುತ್ತದೆ. ಈಗೀಗ ನೋಡಿದರೆ ಬಹಳ ಚೆನ್ನಾಗಿ ನಡೆಯುತ್ತಾ ಇರುತ್ತಾರೆ, ಮತ್ತೆ ಈಗೀಗ ಗ್ರಹಚಾರವು ಕುಳಿತುಕೊಳ್ಳುತ್ತದೆ, ಕೆಳಗೆ ಬೀಳುತ್ತಾರೆ. ಮಕ್ಕಳು ಬಹಳ ಬಹದ್ದೂರರಾಗಬೇಕಾಗಿದೆ. ಪ್ರತಿಜ್ಞೆ ಮಾಡಬೇಕಾಗಿದೆ – ನಾವು ಈ ಭಾರತವನ್ನು ಸ್ವರ್ಗವಾಸಿಯನ್ನಾಗಿ ಮಾಡಿಯೇ ತೀರುತ್ತೇವೆ. ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವುದು, ಶ್ರೇಷ್ಠಾಚಾರಿಗಳನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡುವುದು ನಿಮ್ಮ ಧರ್ಮವಾಗಿದೆ. ತಂದೆಯು ಬಹಳ ಚೆನ್ನಾಗಿ ನಶೆಯೇರಿಸುತ್ತಾರೆ ಆದರೆ ಮಕ್ಕಳಲ್ಲಿ ನಂಬರ್ವಾರ್ ನಶೆಯೇರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಬಂಧನ ಮುಕ್ತರಾಗಿ ಭಾರತದ ಸತ್ಯ ಸೇವೆ ಮಾಡಬೇಕಾಗಿದೆ. ಆತ್ಮಿಕ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕಾಗಿದೆ. ಜ್ಞಾನದ ಅಹಂಕಾರದಲ್ಲಿ ಬರಬಾರದು. ಆತ್ಮಿಕ ನಶೆಯಲ್ಲಿರಬೇಕಾಗಿದೆ.

2. ನಿಶ್ಚಯ ಬುದ್ಧಿಯವರಾಗಿ ಮೊದಲು ತಮ್ಮ ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ದೇಹ ಸಹಿತವಾಗಿ ಏನೆಲ್ಲವೂ ಕಾಣುತ್ತದೆಯೋ ಅದೆಲ್ಲದರಿಂದ ಬುದ್ಧಿಯೋಗವನ್ನು ತೆಗೆಯಬೇಕು ಮತ್ತು ಒಬ್ಬ ತಂದೆಯ ಜೊತೆ ಜೋಡಿಸಬೇಕಾಗಿದೆ.

ವರದಾನ:-

ಯಾವುದೇ ವ್ಯರ್ಥ ಸಂಕಲ್ಪ ಅಥವಾ ಹಳೆಯ ಸಂಸ್ಕಾರಗಳು ದೇಹ-ಅಭಿಮಾನದ ಸಂಬಂಧದಿಂದ ಇದೆ, ಆತ್ಮಿಕ ಸ್ವರೂಪದ ಸಂಸ್ಕಾರವು ತಂದೆಯ ಸಮಾನವಾಗಿರುತ್ತದೆ. ಹೇಗೆ ತಂದೆಯು ಸದಾ ವಿಶ್ವ ಕಲ್ಯಾಣಕಾರಿ, ಪರೋಪಕಾರಿ, ದಯಾಹೃದಯಿ, ವರದಾತ…… ಆಗಿದ್ದಾರೆಯೋ ಹಾಗೆಯೇ ಸ್ವಯಂನ ಸಂಸ್ಕಾರವು ಸ್ವಾಭಾವಿಕವಾಗಿ ಬಿಡುತ್ತದೆ. ಸಂಸ್ಕಾರವಾಗುವುದು ಅರ್ಥಾತ್ ಸಂಕಲ್ಪ, ಮಾತು ಮತ್ತು ಕರ್ಮವು ಅದರನುಸಾರ ಸ್ವತಹವಾಗಿ ನಡೆಯುವುದು. ಜೀವನದಲ್ಲಿ ಸಂಸ್ಕಾರವು ಒಂದು ಕೀಲಿ ಕೈ ಆಗಿದೆ, ಇದರಿಂದ ಸ್ವತಹವಾಗಿ ನಡೆಯುತ್ತಾ ಇರುತ್ತೀರಿ, ನಂತರ ಪರಿಶ್ರಮ ಪಡುವ ಅವಶ್ಯಕತೆಯೇ ಇರುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top