03 April 2022 KANNADA Murli Today | Brahma Kumaris

Read and Listen today’s Gyan Murli in Kannada

April 2, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸಂಗಮಯುಗದಲ್ಲಿ ಆತ್ಮರೊಂದಿಗೆ ಪರಮಾತ್ಮನ ವಿಚಿತ್ರ ಮಿಲನ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಅನೇಕ ಬಾರಿ ಮಿಲನ ಮಾಡುವಂತಹ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಪುನಃ ಬಂದು ಸೇರಿದ್ದೀರಿ, ತಂದೆಯೂ ಸಹ ಅದೇ ಸ್ಮೃತಿಯಿಂದ ಮಕ್ಕಳನ್ನು ನೋಡುತ್ತಿದ್ದೇವೆ ಮತ್ತು ಮಕ್ಕಳೂ ಸಹ ಅದೇ “ಅನೇಕ ಬಾರಿ ಮಿಲನ ಮಾಡಿರುವ ಸ್ಮೃತಿ” ಯಿಂದ ಮಿಲನ ಮಾಡುತ್ತಿದ್ದೀರಿ. ಇದು ಆತ್ಮ ಮತ್ತು ಪರಮಾತ್ಮ ತಂದೆಯ ವಿಚಿತ್ರ ಮಿಲನವಾಗಿದೆ. ಇಡೀ ಕಲ್ಪದಲ್ಲಿ ಯಾವುದೇ ಆತ್ಮವು ಅನೇಕ ಬಾರಿಯ ಮಿಲನದ ನಂತರ ಪುನಃ ಬಂದು ಮಿಲನ ಮಾಡುತ್ತಿದ್ದೇವೆ ಎಂಬ ಸ್ಮೃತಿಯಿಂದ ಮಿಲನ ಮಾಡುವುದಿಲ್ಲ. ಸಮಯ-ಪ್ರತಿ ಸಮಯ ಧರ್ಮಪಿತರು ಬಂದಿದ್ದಾರೆ ಮತ್ತು ಅವರು ತಮ್ಮ ಅನುಯಾಯಿಗಳನ್ನು ಮೇಲಿನಿಂದ ಕೆಳಗೆ ಕರೆ ತಂದರು ಆದರೆ ಧರ್ಮಪಿತರೂ ಸಹ ಅನೇಕ ಕಲ್ಪಗಳಲ್ಲಿ ಮಿಲನ ಮಾಡಿರುವವರು ಪುನಃ ಮಿಲನ ಮಾಡುತ್ತಿದ್ದೇವೆ ಎಂಬ ಸ್ಮೃತಿಯಿಂದ ಮಿಲನ ಮಾಡುವುದಿಲ್ಲ. ಪರಮಾತ್ಮನು ವಿನಃ ಮತ್ತ್ಯಾರೂ ಈ ಸ್ಪಷ್ಟ ಸ್ಮೃತಿಯಿಂದ ಆತ್ಮರೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ. ಭಲೆ ಈ ಕಲ್ಪದಲ್ಲಿ ಮೊದಲ ಬಾರಿಯೇ ಮಿಲನ ಮಾಡಬಹುದು ಆದರೆ ಮಿಲನ ಮಾಡುತ್ತಿದ್ದಂತೆಯೇ ಹಳೆಯ ಸ್ಮೃತಿ, ಹಳೆಯ ಪರಿಚಯ ಯಾವುದು ಆತ್ಮದಲ್ಲಿ ಸಂಸ್ಕಾರ ರೂಪದಲ್ಲಿ ರೆಕಾರ್ಡ್ನಂತೆ ತುಂಬಲ್ಪಟ್ಟಿದೆಯೋ ಅದು ಇಮರ್ಜ್ ಆಗಿ ಬಿಡುತ್ತದೆ ಮತ್ತು ಹೃದಯದಿಂದ ಇದೇ ಸ್ಮೃತಿಯ ಕೂಗು ಕೇಳಿ ಬರುತ್ತದೆ – ಇವರೇ ನನ್ನ ತಂದೆಯಾಗಿದ್ದಾರೆ. ನೀವೇ ನನ್ನವರಾಗಿದ್ದೀರಿ ಎಂದು ಮಕ್ಕಳು ಹೇಳುತ್ತೀರಿ ಮತ್ತು ತಂದೆಯು ನೀವು ನನ್ನವರಾಗಿದ್ದೀರಿ ಎಂದು ಹೇಳುತ್ತಾರೆ. ನನ್ನವರು ಎಂಬ ಸಂಕಲ್ಪವು ಉತ್ಪನ್ನವಾಯಿತು, ಅದೇ ಸೆಕೆಂಡ್ ಆ ಶಕ್ತಿಶಾಲಿ ಸ್ಮೃತಿಯಿಂದ, ಸಂಕಲ್ಪದಿಂದ ಹೊಸ ಜೀವನ, ಹೊಸ ಜಗತ್ತು ಸಿಕ್ಕಿ ಬಿಟ್ಟಿತು. ಮತ್ತು ಸದಾಕಾಲಕ್ಕಾಗಿ “ನನ್ನ ಬಾಬಾ” – ಈ ಸ್ಮೃತಿ ಸ್ವರೂಪದಲ್ಲಿ ಸ್ಥಿತರಾದಿರಿ. ಹೇಗೆ ಸ್ಮೃತಿ ಸ್ವರೂಪರಾದಿರಿ, ಆದ್ದರಿಂದ ಸ್ಮೃತಿಗೆ ಪ್ರತಿಯಾಗಿ ಸಮರ್ಥ ಸ್ವರೂಪರಾದಿರಿ. ಸಮರ್ಥ ಸ್ವರೂಪರಾಗಿ ಬಿಟ್ಟಿರಲ್ಲವೆ. ನಿರ್ಬಲ ಸ್ವರೂಪರಲ್ಲ ತಾನೆ? ಮತ್ತು ಯಾರೆಷ್ಟು ಸ್ಮೃತಿಯಲ್ಲಿ ಇರುವರೋ ಅಷ್ಟು ಸಾಮರ್ಥ್ಯಗಳ ಅಧಿಕಾರವನ್ನು ಸ್ವತಹವಾಗಿಯೇ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಎಲ್ಲಿ ಸ್ಮೃತಿಯಿರುವುದೋ ಅಲ್ಲಿ ಸಾಮರ್ಥ್ಯವು ಇದ್ದೇ ಇರುವುದು. ಸ್ವಲ್ಪ ವಿಸ್ಮೃತಿಯಿದ್ದರೂ ಸಹ ಅಲ್ಲಿ ವ್ಯರ್ಥ ಇರುವುದು. ವ್ಯರ್ಥ ಸಂಕಲ್ಪ ಇರಬಹುದು, ಮಾತಿರಬಹುದು, ಕರ್ಮವೇ ಇರಬಹುದು. ಯಾವುದಾದರೊಂದು ವ್ಯರ್ಥ ಇರುವುದು. ಆದ್ದರಿಂದ ಬಾಪ್ದಾದಾ ಎಲ್ಲಾ ಮಕ್ಕಳನ್ನು ಇದೇ ದೃಷ್ಟಿಯಿಂದ ನೋಡುತ್ತೇವೆ – ಪ್ರತಿಯೊಬ್ಬ ಮಗು ಸ್ಮೃತಿಸ್ವರೂಪ ಸೋ ಸಮರ್ಥನಾಗಿದೆ. ಇಂದಿನವರೆಗೂ ತಮ್ಮ ಸ್ಮರಣೆಯನ್ನು ಭಕ್ತರ ಮೂಲಕ ಕೇಳಿಸಿಕೊಳ್ಳುತ್ತಿದ್ದೀರಿ. ತಮ್ಮ ಸ್ಮೃತಿಯಲ್ಲಿ “ನನ್ನ ಬಾಬಾ” ಎಂಬುದನ್ನು ತಂದುಕೊಂಡಿರಿ. ಆದ್ದರಿಂದ ಭಕ್ತಾತ್ಮರೂ ಸಹ ನನ್ನ ಇಷ್ಟ ದೇವ ಅಥವಾ ದೇವಿ ಎಂದೇ ಸ್ಮರಣೆ ಮಾಡುತ್ತಾರೆ. ಹೇಗೆ ತಾವು ಅತೀ ಪ್ರೀತಿಯಿಂದ, ಹೃದಯದಿಂದ ತಂದೆಯನ್ನು ನೆನಪು ಮಾಡಿದಿರೋ ಅಷ್ಟೇ ಭಕ್ತಾತ್ಮರೂ ತಾವು ಇಷ್ಟ ದೇವಾತ್ಮರನ್ನು ಹೃದಯದಿಂದ ಅತೀ ಪ್ರೀತಿಯಿಂದ ನೆನಪು ಮಾಡುತ್ತಾರೆ. ತಾವು ಬ್ರಾಹ್ಮಣ ಆತ್ಮರಲ್ಲಿಯೂ ಕೆಲವರು ಹೃದಯದ ಸ್ನೇಹ, ಸಂಬಂಧದಿಂದ ನೆನಪು ಮಾಡುತ್ತಾರೆ ಮತ್ತು ಇನ್ನೂ ಕೆಲವರು ಬುದ್ಧಿಯ ಮೂಲಕ ಜ್ಞಾನದ ಆಧಾರದ ಮೇಲೆ ಸಂಬಂಧವನ್ನು ಅನುಭವ ಮಾಡುವ ಪ್ರಯತ್ನವನ್ನು ಪದೇ-ಪದೇ ಮಾಡುತ್ತಾರೆ. ಎಲ್ಲಿ ಹೃದಯದ ಸ್ನೇಹ ಮತ್ತು ಸಂಬಂಧವು ಅತಿ ಪ್ರಿಯ ಅರ್ಥಾತ್ ಅತಿ ಸಮೀಪ ಇರುವುದೋ ಅಲ್ಲಿ ನೆನಪನ್ನು ಮರೆಯುವುದು ಕಷ್ಟವಾಗುತ್ತದೆ. ಇಲ್ಲಿ ಕೇವಲ ಜ್ಞಾನದ ಆಧಾರದ ಮೇಲೆ ಸಂಬಂಧ ಇರುತ್ತದೆ ಆದರೆ ಹೃದಯದ ಅಟೂಟ ಸ್ನೇಹ ಇರುವುದಿಲ್ಲವೋ ಅಲ್ಲಿ ನೆನಪು ಕೆಲವೊಮ್ಮೆ ಸಹಜ, ಕೆಲವೊಮ್ಮೆ ಕಷ್ಟವಾಗುತ್ತದೆ. ಹೇಗೆ ಶರೀರದಲ್ಲಿ ನರನರದಲ್ಲಿಯೂ ರಕ್ತವು ಸಮಾವೇಶವಾಗಿದೆಯೋ ಹಾಗೆಯೇ ಆತ್ಮದಲ್ಲಿ ಪ್ರತೀ ಕ್ಷಣ ನೆನಪು ಸಮಾವೇಶವಾಗಿ ಇರುವುದು. ಇದಕ್ಕೆ ಹೃದಯದ ಸ್ನೇಹ ಸಂಪನ್ನ ನಿರಂತರ ನೆನಪು ಎಂದು ಹೇಳುತ್ತಾರೆ. ಹೇಗೆ ಭಕ್ತಾತ್ಮರು ತಂದೆಗಾಗಿ ಎಲ್ಲಿ ನೋಡಿದರೂ ನೀನೇ ನೀನು ಎಂದು ಹೇಳುತ್ತಾರೆ ಹಾಗೆಯೇ ತಂದೆಯ ಸ್ನೇಹಿ ಸಮಾನ ಆತ್ಮರನ್ನೂ ಸಹ ಯಾರು ನೋಡಿದರೂ ಸಹ ಇವರ ದೃಷ್ಟಿಯಲ್ಲಿ ಮಾತಿನಲ್ಲಿ, ಕರ್ಮದಲ್ಲಿ ಪರಮಾತ್ಮ ತಂದೆಯದೇ ಅನುಭವವಾಗುತ್ತದೆ ಎಂಬ ಅನುಭವ ಮಾಡಲಿ. ಇದಕ್ಕೆ ಸ್ನೇಹಿಗಳೆಂದರೆ ತಂದೆಯ ಸಮಾನರು ಎಂದು ಹೇಳಲಾಗುತ್ತದೆ. ಅಂದಾಗ ಎಲ್ಲರೂ ಸ್ಮೃತಿ ಸ್ವರೂಪರಾಗಿದ್ದೀರಿ, ಎಲ್ಲರ ಸಂಬಂಧವೂ ಇದೆ, ಅಧಿಕಾರವೂ ಇದೆ ಏಕೆಂದರೆ ಎಲ್ಲರ ಪೂರ್ಣ ಅಧಿಕಾರದ ಸಂಬಂಧವು ತಂದೆಯ ಮತ್ತು ಮಗುವಿನ ಸಂಬಂಧವಾಗಿದೆ. ಎಲ್ಲರೂ ಸಹ ನನ್ನ ಬಾಬಾ ಎಂದು ಹೇಳುತ್ತೀರಿ. ನನ್ನ ಚಿಕ್ಕಪ್ಪ, ನನ್ನ ದೊಡ್ಡಪ್ಪ ಎಂದು ಯಾರೂ ಹೇಳುವುದಿಲ್ಲ. ಅಧಿಕಾರದ (ತಂದೆಯ) ಸಂಬಂಧವಿರುವ ಕಾರಣ ಸರ್ವಪ್ರಾಪ್ತಿಗಳ ಆಸ್ತಿಗೆ ಅಧಿಕಾರಿಗಳಾಗಿದ್ದೀರಿ. 50 ವರ್ಷದವರಿರಬಹುದು, 6 ತಿಂಗಳಿನವರಿರಬಹುದು, ನನ್ನ ಬಾಬಾ ಎಂದು ಹೇಳಿ ಬಿಡುವರು ಆದರೆ ವ್ಯತ್ಯಾಸವೇನಾಗುತ್ತದೆ! ತಂದೆಯು ಅಧಿಕಾರವನ್ನಂತೂ ಎಲ್ಲರಿಗೆ ಒಂದೇರೀತಿ ಕೊಡುತ್ತಾರೆ ಏಕೆಂದರೆ ಅಕೂಟ ಆಸ್ತಿಯನ್ನು ಕೊಡುವಂತಹ ದಾತನಾಗಿದ್ದಾರೆ. ಎರಡುವರೆ ಲಕ್ಷವಷ್ಟೇ ಅಲ್ಲ, ಸರ್ವ ಆತ್ಮರೂ ಸಹ ಅಧಿಕಾರಿಗಳಾಗಲಿ. ಅದಕ್ಕಿಂತಲೂ ಹೆಚ್ಚು ಖಜಾನೆಯು ತಂದೆಯ ಬಳಿಯಿದೆ. ಅಂದಮೇಲೆ ತಂದೆಯು ಏತಕ್ಕೆ ಕಡಿಮೆ ಕೊಡುವರು? ದಾತನು ಎಲ್ಲರಿಗೂ ಒಂದೇರೀತಿ ಕೊಡುತ್ತಾರೆ ಆದರೆ ಅದನ್ನು ತೆಗೆದುಕೊಳ್ಳುವುದರಲ್ಲಿ ಅಂತರವಿದೆ. ಕೆಲವರು ಪ್ರಾಪ್ತಿಗಳ ಆಸ್ತಿಯನ್ನು ಅಥವಾ ಖಜಾನೆಯನ್ನು ಸಮಯ ಪ್ರಮಾಣ ಸ್ವಯಂ ಪ್ರತಿ ಹಾಗೂ ಸೇವೆಯ ಪ್ರತಿ ಕಾರ್ಯದಲ್ಲಿ ತೊಡಗಿಸಿ ಅದರ ಲಾಭವನ್ನು ಅನುಭವ ಮಾಡುತ್ತಾರೆ ಆದ್ದರಿಂದ ತಂದೆಯ ಖಜಾನೆಯನ್ನು ತಮ್ಮ ಖಜಾನೆಯನ್ನಾಗಿ ಮಾಡಿಕೊಳ್ಳುತ್ತಾರೆ ಅರ್ಥಾತ್ ತನ್ನದರಲ್ಲಿ ಸಮಾವೇಶ ಮಾಡಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಂದು ಖಜಾನೆಯನ್ನು ಉಪಯೋಗಿಸುವುದರ ಅನುಭವದಿಂದ ಖುಷಿ ಮತ್ತು ನಶೆಯಲ್ಲಿರುತ್ತಾರೆ. ಶುದ್ಧ ನಶೆಯಿರುತ್ತದೆ, ಉಲ್ಟಾ ನಶೆಯಲ್ಲ ಮತ್ತು ಇನ್ನೂ ಕೆಲವರು ಕೇವಲ ಖಜಾನೆ ಸಿಕ್ಕಿದೆ, ನನ್ನದಾಗಿದೆ ಎಂಬ ಖುಷಿಯಲ್ಲಿರುತ್ತಾರೆ. ಕೇವಲ ನನ್ನದಂತೂ ಆಗಿದೆ ಆದರೆ ಅದನ್ನು ಕಾರ್ಯದಲ್ಲಿ ತೊಡಗಿಸುವುದಿಲ್ಲ. ಯಾವುದೇ ಅಮೂಲ್ಯ ವಸ್ತುವನ್ನು ಕೇವಲ ತಮ್ಮ ಬಳಿ ಕೂಡಿಟ್ಟುಕೊಂಡರು ಆದರೆ ಕೇವಲ ಇಟ್ಟುಕೊಳ್ಳುವುದು ಮತ್ತು ಅದನ್ನು ಉಪಯೋಗಿಸುವುದರ ಅನುಭೂತಿ ಅಂತರವಿರುತ್ತದೆ. ಎಷ್ಟು ಕಾರ್ಯದಲ್ಲಿ ತೊಡಗಿಸುವರೋ ಅಷ್ಟು ಶಕ್ತಿಯು ಇನ್ನೂ ಹೆಚ್ಚುತ್ತದೆ. ಈ ಉಪಯೋಗಿಸುವ ಕೆಲಸವನ್ನು ಅವರು ಸದಾ ಮಾಡುವುದಿಲ್ಲ, ಕೆಲಕೆಲವೊಮ್ಮೆ ಮಾಡುತ್ತಾರೆ ಆದ್ದರಿಂದ ಸದಾ ಉಪಯೋಗಿಸುವವರಲ್ಲಿ ಮತ್ತು ಕೆಲಕೆಲವೊಮ್ಮೆ ಉಪಯೋಗಿಸುವವರಲ್ಲಿ ಅಂತರವಾಗುತ್ತದೆ. ಕಾರ್ಯದಲ್ಲಿ ತೊಡಗಿಸುವ ವಿಧಿಯನ್ನು ಉಪಯೋಗಿಸಿಕೊಳ್ಳುವುದಿಲ್ಲ ಅಂದಮೇಲೆ ದಾತನು ಕೊಡುವುದರಲ್ಲಿ ವ್ಯತ್ಯಾಸ ಮಾಡುವುದಿಲ್ಲ ಆದರೆ ಅದನ್ನು ತೆಗೆದುಕೊಳ್ಳುವುದರಲ್ಲಿ ಅಂತರವಾಗಿ ಬಿಡುತ್ತದೆ. ತಾವೆಲ್ಲರೂ ಯಾರಾಗಿದ್ದೀರಿ? ಕಾರ್ಯದಲ್ಲಿ ತೊಡಗಿಸುವವರೋ ಅಥವಾ ಕೇವಲ ಜಮಾ ಇರುವುದನ್ನು ನೋಡಿ ಖುಷಿ ಪಡುವವರೋ? ಮೊದಲ ನಂಬರಿನವರೋ ಅಥವಾ ಎರಡನೇ ನಂಬರಿನವರೋ?

ಬಾಪ್ದಾದಾರವರಿಗೂ ಇರುವ ಖುಷಿಯೇನೆಂದರೆ ಎಲ್ಲರೂ ನಂಬರ್ವನ್ ಆಗಿದ್ದೀರಿ ಅಥವಾ ಈ ಸಮಯದಲ್ಲಿ ನಂಬರ್ವನ್ ಆಗಿದ್ದೀರಾ? ಬಾಪ್ದಾದಾ ಸದಾ ಮಕ್ಕಳ ಬಾಯಲ್ಲಿ ಗುಲಾಬ್ ಜಾಮೂನ್ ಎಂದು ಹೇಳುತ್ತೇವೆ. ಏನು ಹೇಳಿದೆವೋ ಅದನ್ನು ಮಾಡಿ ಬಿಟ್ಟರು ಎಂದರೆ ಸದಾ ಗುಲಾಬ್ ಜಾಮೂನ್ ಬಾಯಲ್ಲಿರುವುದು. ಪ್ರಪಂಚದವರು ಬಾಯಲ್ಲಿ ಗುಲಾಬ್ ಎಂದು ಹೇಳುತ್ತಾರೆ ಆದರೆ ಕೇವಲ ಗುಲಾಬಿಯಿಂದ ಬಾಯಿ ಸಿಹಿಯಾಗುವುದಿಲ್ಲ ಆದ್ದರಿಂದ ಗುಲಾಬ್ ಜಾಮೂನ್ ಬಾಯಲ್ಲಿರಲಿ ಅಂದರೆ ಸದಾ ಇದೇ ರೀತಿ ಮುಗುಳ್ನಗುತ್ತಾ ಇರಿ. ಒಳ್ಳೆಯದು.

ಕೆಲವರು ಹೊಸ-ಹೊಸ ಮಕ್ಕಳು ಪುನಃ ಮಿಲನ ಮಾಡಲು ಬಂದಿದ್ದಾರೆ. ಯಾರೆಲ್ಲಾ ಈ ಕಲ್ಪದಲ್ಲಿ ಪುನಃ ಮಿಲನವನ್ನು ಆಚರಿಸುತ್ತಿದ್ದೀರೋ ಅಂತಹ ಮಕ್ಕಳಿಗೆ ವಿಶೇಷ ಬಾಪ್ದಾದಾರವರು ಸ್ನೇಹದ ವರದಾನವನ್ನು ಕೊಡುತ್ತೇವೆ – ಸದಾ ತಮ್ಮ ಮಸ್ತಕದಲ್ಲಿ ತಂದೆಯ ಅಭಯ ಹಸ್ತದ ಅನುಭವ ಮಾಡುತ್ತಾ ನಡೆಯಿರಿ. ಯಾರ ತಲೆಯ ಮೇಲೆ ತಂದೆಯ ಹಸ್ತವಿರುವುದೋ ಅವರು ಸದಾ ಈ ವರದಾನದ ಅನುಭವದಿಂದ ಎಲ್ಲಾ ಮಾತುಗಳಲ್ಲಿ ಸುರಕ್ಷಿತರಾಗಿರುತ್ತಾರೆ. ಈ ವರದಾನದ ಹಸ್ತವು ಪ್ರತಿಯೊಂದು ಮಾತಿನಲ್ಲಿ ತಮಗೆ ಸುರಕ್ಷತೆಯ ಸಾಧನವಾಗಿದೆ. ಎಲ್ಲದಕ್ಕಿಂತ ಅತಿ ದೊಡ್ಡ ರಕ್ಷಣೆ ಇದೇ ಆಗಿದೆ.

ಬಾಪ್ದಾದಾರವರು ಎಲ್ಲ ಟೀಚರಸ್ ನಿಮಿತ್ತರಾಗುವ ಸಾಹಸವನ್ನು ನೋಡಿ ಖುಶಿಯಾಗಿದ್ದಾರೆ. ಸಾಹಸವನ್ನು ಇಟ್ಟು ನಿಮಿತ್ತರಾಗಿಯೇ ಬಿಡುತ್ತೀರಲ್ಲವೇ. ಟೀಚರ ನಿಮಿತ್ತರಾಗುವುದು ಎಂದರೆ ಬೇಹದ್ದಿನ ಮಂಚದ ಮೇಲೆ ಹೀರೊ (ನಾಯಕ)ನ ಪಾತ್ರ ಅಭಿನಯಿಸುವುದು. ಹೇಗೆ ಹದ್ದಿನ ಮಂಚದ ಮೇಲೆ ಹೀರೊ (ನಾಯಕ) ಪಾತ್ರಧಾರಿ ಆತ್ಮನ ಕಡೆಗೆ ಎಲ್ಲರ ವಿಶೇಷ ಗಮನವಿರುತ್ತದೆ, ಅದೇರೀತಿ ಯಾವ ಆತ್ಮರಿಗೆ ನಿಮಿತ್ತರಾಗಿರುತ್ತಾರೋ ವಿಶೇಷವಾಗಿ ಅವರು ಮತ್ತು ಸಾಮಾನ್ಯ ಸರ್ವ ಆತ್ಮರು ನೀವು ನಿಮಿತ್ತರಾಗಿರುವ ಟೀಚರಸ್ನ್ನು ಅದೇ ದೃಷ್ಟಿಯಿಂದ ನೋಡುತ್ತಾರೆ. ಎಲ್ಲರ ವಿಶೇಷ ಗಮನವಿರುತ್ತದೆಯಲ್ಲವೇ! ಹಾಗಾದರೆ ಟೀಚರಸ್ಗೆ ತಮ್ಮಲ್ಲಿಯೂ ವಿಶೇಷ ಗಮನವಿಟ್ಟುಕೊಳ್ಳಬೇಕಾಗುತ್ತದೆ ಯಾಕೆಂದರೆ ಸೇವೆಯಲ್ಲಿ ಹೀರೊ (ನಾಯಕ)ನ ಪಾತ್ರಧಾರಿಯಾಗುವುದು ಎಂದರೆ ಹೀರೊ (ನಾಯಕ) ಆಗುವುದು. ಆಶೀರ್ವಾದಗಳು ಸಹ ಟೀಚರಸ್ಗೆ ಹೆಚ್ಚು ಸಿಗುತ್ತದೆ. ಎಷ್ಟು ಆಶೀರ್ವಾದ ಸಿಗುವುದು ಅಷ್ಟು ತಮ್ಮ ಮೇಲೆ ಗಮನ ಕೊಡುವ ಅವಶ್ಯಕತೆಯಿದೆ. ಇದು ಸಹ ಡ್ರಾಮಾನುಸಾರ ವಿಶೇಷ ಭಾಗ್ಯವಾಗಿದೆ. ಸದಾ ಪ್ರಾಪ್ತಿಯಾಗಿರುವ ಭಾಗ್ಯವನ್ನು ಹೆಚ್ಚಿಸುತ್ತ ಹೋಗಿ. ನೂರರಿಂದ ಸಾವಿರ, ಸಾವಿರರಿಂದ ಲಕ್ಷ, ಲಕ್ಷದಿಂದ ಕೋಟಿ, ಕೋಟಿಯಿಂದ ಪದಮ, ಪದಮದಿಂದ ಪದಮಾಪದಮ, ಸದಾ ಈ ಭಾಗ್ಯವನ್ನು ಹೆಚ್ಚಿಸುತ್ತ ಹೋಗಬೇಕಾಗಿದೆ. ಇದಕ್ಕೆ ಯೋಗ್ಯ ಆದರ್ಶ ಟೀಚರವೆಂದು ಹೇಳಲಾಗುತ್ತದೆ. ಬಾಪ್ದಾದಾರವರು ನಿಮಿತ್ತರಾಗಿರುವ ಮಕ್ಕಳ ಸ್ಮರಣೆಯನ್ನು ಅವಶ್ಯವಾಗಿ ಮಾಡುತ್ತಾರೆ ಮತ್ತು ಸದಾ ಅಮೃತವೇಳೆ “ವಾಹ್ ಮಕ್ಕಳೇ ವಾಹ್” ಈ ಆಶೀರ್ವಾದಗಳನ್ನು ಕೊಡುತ್ತಾರೆ. ಸೇವಾಧಾರಿಗಳು ಕೇಳಿದ್ದೀರಾ. ಟೀಚರ್ ಎಂದರೆ ನಂಬರ್ವನ್ ಸೇವಾಧಾರಿ! ಒಳ್ಳೆಯದು.

ನಾಲ್ಕಾರು ಕಡೆಯ ಅನೇಕ ಕಲ್ಪಗಳಲ್ಲಿ ಭಿನ್ನ ಮತ್ತು ಪ್ರಿಯ ಮಿಲನವನ್ನು ಆಚರಿಸುವವರು, ಸದಾ ಪ್ರಾಪ್ತಿಯಾಗಿರುವ ಆಸ್ತಿಯ ಖಜಾನೆಗಳನ್ನು ಪ್ರತೀ ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುವವರು, ಸದಾ ಹೃದಯದಿಂದ ಅತಿ ಸ್ನೇಹಿ ಮತ್ತು ತಂದೆಯ ಸಮಾನರಾಗಿ ಸ್ವಯಂನ ಮೂಲಕ ತಂದೆಯ ಅನುಭವ ಮಾಡಿಸುವವರು, ಸದಾ ಸ್ಮೃತಿ ಸ್ವರೂಪರಿಂದ ಭಕ್ತರ ಮೂಲಕ ಸಮರ್ಥ ಸ್ವರೂಪರಾಗುವವರು, ಸದಾ ತಮ್ಮ ಪ್ರಾಪ್ತಿಯಾಗಿರುವ ಭಾಗ್ಯವನ್ನು ಹಂಚುವವರು ಅರ್ಥಾತ್ ಹೆಚ್ಚಿಸಿಕೊಳ್ಳುವವರು, ಇಂತಹ ಮಾ|| ದಾತಾ ಸಮರ್ಥ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಡಬಲ್ ವಿದೇಶಿ ಸಹೋದರ-ಸಹೋದರಿಯರೊಂದಿಗೆ ಗ್ರೂಪ್ವೈಜ್ ವಾರ್ತಾಲಾಪ

1. ಎಲ್ಲರೂ ತಮ್ಮನ್ನು ಅತ್ಯಂತ ಭಾಗ್ಯಶಾಲಿಯೆಂದು ತಿಳಿಯುವಿರಾ? ಏಕೆಂದರೆ ಇಂತಹ ಶ್ರೇಷ್ಠಾತ್ಮರಾಗುವೆವು ಎಂದು ಎಂದಿಗೂ ಸ್ವಪ್ನದಲ್ಲಿಯೂ ಸಂಕಲ್ಪವಿರಲಿಲ್ಲ ಆದರೆ ಈಗ ಸಾಕಾರದಲ್ಲಾಯಿತು! ಬಾಪ್ದಾದಾರವರು ಎಲ್ಲೆಲ್ಲಿಂದ ಆಯ್ಕೆ ಮಾಡುತ್ತಾ, ರತ್ನಗಳ ಮಾಲೆಯನ್ನು ಮಾಡಿದ್ದಾರೆ ನೋಡಿರಿ! ಬ್ರಾಹ್ಮಣ ಪರಿವಾರದ ಮಾಲೆಯಲ್ಲಿ ಪೆÇೀಣಿಸಿದರು. ಹಾಗಾದರೆ ಮಾಲೆಯಿಂದ ಎಂದಿಗೂ ಹೊರ ಬರುವುದಿಲ್ಲವೇ? ಯಾವುದೇ ಮಾಲೆಯ ವಿಶೇಷತೆ ಹಾಗೂ ಸುಂದರತೆಯೇನಾಗಿದೆ? ಮಣಿಯು ಮಣಿಯೊಂದಿಗೆ ಮಿಲನವಾಗಿರುತ್ತದೆ. ಒಂದುವೇಳೆ ಮಧ್ಯದಲ್ಲೇನಾದರೂ ದಾರವು ಕಾಣಿಸಿತೆಂದರೆ, ಮಣಿಯು ಮಣಿಯೊಂದಿಗೆ ಜೋಡಣೆಯಾಗಿಲ್ಲದಿದ್ದರೆ ಚೆನ್ನಾಗಿ ಕಾಣಿಸುವುದಿಲ್ಲ. ಅಂದಾಗ ತಾವು ಬ್ರಾಹ್ಮಣ ಪರಿವಾರದ ಮಾಲೆಯಲ್ಲಿದ್ದೀರಿ ಅರ್ಥಾತ್ ಸರ್ವ ಬ್ರಾಹ್ಮಣ ಆತ್ಮರ ಸಮೀಪದಲ್ಲಿದ್ದೀರಿ. ಹೇಗೆ ತಾವು ತಂದೆಯ ಸಮೀಪವಿದ್ದೀರಿ ಹಾಗೆಯೇ ತಂದೆಯ ಜೊತೆ ಜೊತೆಗೆ ಪರಿವಾರದ ಸಮೀಪದಲ್ಲಿಯೂ ಇದ್ದೀರಿ ಏಕೆಂದರೆ ಈಗ ಈ ಪರಿವಾರವೂ ಸಹ ಇದೇ ಪರಿಚಯದಿಂದ ಮಿಲನವಾಗುತ್ತದೆ. ಪರಿವಾರದಲ್ಲಿ ಮಜಾ ಬರುತ್ತದೆಯಲ್ಲವೆ? ಕೇವಲ ತಂದೆಯ ನೆನಪಿನಲ್ಲಷ್ಟೇ ಮಜಾ ಬರುತ್ತದೆ ಎಂದಲ್ಲ, ಯೋಗವನ್ನು ಪರಿವಾರದೊಂದಿಗೆ ಇಡುವುದಿಲ್ಲ ಆದರೆ ಒಬ್ಬರಿನ್ನೊಬ್ಬರ ಸಮೀಪವಿರಬೇಕು. ಎಲ್ಲಿಯೇ ಇಷ್ಟು ದೊಡ್ಡದಾದ ಒಂದುವರೆ ಲಕ್ಷ ಮಂದಿಯ ಪರಿವಾರವೇನಾದರೂ ಆಗುತ್ತದೆಯೇ? (ಈಗಂತು 9-10 ಲಕ್ಷಕ್ಕಿಂತಲೂ ದೊಡ್ಡದಾದ ಪರಿವಾರವಿದೆ) ಅಂದಮೇಲೆ ಪರಿವಾರವು ಇಷ್ಟವಾಗುತ್ತದೆಯೇ ಅಥವಾ ಕೇವಲ ಬಾಬಾರವರಷ್ಟೇ ಇಷ್ಟವಾಗುವರೇ? ಯಾರಿಗೆ ಕೇವಲ ಬಾಬಾರವರಷ್ಟೇ ಇಷ್ಟವಾಗುವರು, ಅವರು ಪರಿವಾರದಲ್ಲಿ ಬರಲು ಸಾಧ್ಯವಿಲ್ಲ. ಬಾಪ್ದಾದಾರವರಿಗೆ ಪರಿವಾರವನ್ನು ನೋಡುತ್ತಾ ಸದಾ ಹರ್ಷಿತವಾಗುತ್ತದೆ ಹಾಗೂ ಸದಾ ಒಬ್ಬರಿನ್ನೊಬ್ಬರ ವಿಶೇಷತೆಯನ್ನು ನೋಡಿ ಹರ್ಷಿತವಾಗುತ್ತಾರೆ. ಪ್ರತಿಯೊಂದು ಬ್ರಾಹ್ಮಣ ಆತ್ಮನ ಬಗ್ಗೆ ಸದಾ ಇದೇ ಸಂಕಲ್ಪವಿರುತ್ತದೆ- ವಾಹ್ ಬ್ರಾಹ್ಮಣ ಆತ್ಮವೇ ವಾಹ್! ನೋಡಿ – ತಂದೆಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ ಆದ್ದರಿಂದ ಬರುವರಲ್ಲವೆ, ಇಲ್ಲದಿದ್ದರೆ ಮೇಲೆ ಕುಳಿತುಕೊಂಡಿದ್ದೇ ಭೇಟಿಯಾಗುತ್ತಿದ್ದರು. ತಂದೆಯು ಕೇವಲ ಮೇಲಿಂದಂತು ಕುಳಿತು ಭೇಟಿಯಾಗುವುದಿಲ್ಲ, ತಾವೂ ವಿದೇಶದಿಂದ ಬರುತ್ತೀರಿ ಅಂದಮೇಲೆ ಬಾಪ್ದಾದಾರವರೂ ವಿದೇಶದಿಂದ ಬರುತ್ತಾರೆ. ಬಹಳಷ್ಟು ದೂರದಿಂದ ಅಂದರೆ ಅತಿ ದೂರದಿಂದ ಬರುತ್ತಾರೆ ಆದರೆ ಬರುತ್ತಾರೆ ಒಂದು ಸೆಕೆಂಡಿನಲ್ಲಿ. ತಾವೆಲ್ಲರೂ ಸಹ ಸೆಕೆಂಡಿನಲ್ಲಿ ಹಾರುವ ಕಲೆಯ ಅನುಭವ ಮಾಡುತ್ತೀರಾ? ಸೆಕೆಂಡಿನಲ್ಲಿ ಹಾರಲು ಸಾಧ್ಯವಿದೆಯೇ? ಇಷ್ಟು ಡಬಲ್ ಲೈಟ್ ಆಗಿದ್ದೀರಾ, ಸಂಕಲ್ಪ ಮಾಡಿದ ಕೂಡಲೆ ತಲುಪಿ ಬಿಡಬೇಕು. ಪರಮಧಾಮ ಎಂದು ಹೇಳಲಾಯಿತು, ತಲುಪಿದಿರಿ- ಇಷ್ಟು ಅಭ್ಯಾಸವಿದೆಯೇ? ಎಲ್ಲಿಯೂ ಸಿಲುಕುವುದಿಲ್ಲವೇ? ಎಂದಿಗೂ ಯಾವುದೇ ಅಡಚಣೆಗಳು ಬೇಸರ ಪಡಿಸುವುದಿಲ್ಲವೇ, ಎಚ್ಚರಿಕೆಯಿಂದ ಹಾಗೂ ಲಕ್ಷ್ಯದ ಸ್ಪಷ್ಟತೆಯೂ ಇದೆಯಲ್ಲವೆ.

ಡಬಲ್ ವಿದೇಶಿ ಮಕ್ಕಳು ಬರುತ್ತಿದ್ದಂತೆಯೇ ಸೇವಾಕೇಂದ್ರವು ಸಿಕ್ಕಿ ಬಿಡುತ್ತದೆ. ಬಹಳ ಬೇಗನೆ ಟೀಚರ್ ಆಗಿ ಬಿಡುತ್ತಾರೆ ಆದ್ದರಿಂದ ಸೇವೆ ಮಾಡುವುದಕ್ಕೂ ಆಶೀರ್ವಾದಗಳು ಲಭಿಸುತ್ತವೆ. ಆಶೀರ್ವಾದ ಸಿಗುವ ವಿಶೇಷ ಲಿಫ್ಟ್ ಸಿಗುತ್ತದೆ, ಜೊತೆ ಜೊತೆಗೆ ಬರುತ್ತಿದ್ದಂತೆಯೇ ಇಷ್ಟೂ ವ್ಯಸ್ತವಾಗಿ ಬಿಡುತ್ತೀರಿ, ಅನ್ಯ ಮಾತುಗಳಿಗಾಗಿ ಸಮಯವೇ ಸಿಗುವುದಿಲ್ಲ. ಆದ್ದರಿಂದ ಬ್ಯುಸಿಯಾಗುವುದರಿಂದ ಗಾಬರಿಯಾಗಬಾರದು, ಇದು ಶುಭ ಸಂಕೇತವಾಗಿದೆ. ಕೆಲವರು ಹೇಳುತ್ತಾರಲ್ಲವೆ – ಲೌಕಿಕ ಕಾರ್ಯವನ್ನೂ ಮಾಡಿರಿ ಹಾಗೂ ಅಲೌಕಿಕ ಸೇವೆಯನ್ನೂ ಮಾಡಿರಿ ಮತ್ತು ತಮ್ಮ ಸೇವೆಯನ್ನು ಮಾಡಿರಿ – ಇದರಲ್ಲಂತು ಬಹಳ ವ್ಯಸ್ತವಾಗಿರಬೇಕಾಗುವುದು. ಆದರೆ ಹೀಗೆ ವ್ಯಸ್ತವಾಗಿರುವುದು ಅರ್ಥಾತ್ ಅಲೌಕಿಕ ಮಾಯಾಜೀತರಾಗುವುದು. ಇದು ಸರಿಯೆನಿಸುವುದೇ ಅಥವಾ ಲೌಕಿಕ ಕಾರ್ಯವನ್ನು ಮಾಡುವುದು ಕಷ್ಟವೇ? ಲೌಕಿಕ ನೌಕರಿಯನ್ನೇನು ಮಾಡುತ್ತೀರಿ ಅದರಲ್ಲೇನು ಸಂಪಾದನೆಯಾಗುವುದು, ಅದನ್ನು ಎಲ್ಲಿಗೆ ಉಪಯೋಗಿಸುತ್ತೀರಿ? ಹೇಗೆ ಸಮಯವನ್ನು ಉಪಯೋಗ ಮಾಡುತ್ತೀರಿ ಹಾಗೆಯೇ ಧನವನ್ನೂ ಉಪಯೋಗಿಸುತ್ತೀರಿ ಅಂದಮೇಲೆ ತನು-ಮನ-ಧನ ಮೂರೂ ಉಪಯೋಗವಾಗುತ್ತದೆ, ಸಫಲವಾಗುತ್ತದೆ ಅಲ್ಲವೆ ಆದ್ದರಿಂದ ಸುಸ್ತಾಗುವುದಿಲ್ಲ. ಸೇವಾಕೇಂದ್ರವನ್ನು ತೆರೆಯುತ್ತೀರೆಂದರೆ ಎಷ್ಟೊಂದು ಆತ್ಮರು ಸಂದೇಶವನ್ನು ಕೇಳುತ್ತಿದ್ದಂತೆಯೇ ಕಲ್ಯಾಣವಾಗುವುದು. ಹಾಗಾದರೆ ಮನಸ್ಸು ಹಾಗೂ ಧನದ ಸಂಬಂಧವಿದೆ, ಎಲ್ಲಿ ಧನವಿರುತ್ತದೆಯೋ ಅಲ್ಲಿ ಮನಸ್ಸಿರುತ್ತದೆ. ಎಲ್ಲಿ ಮನಸ್ಸಿರುತ್ತದೆಯೋ ಅಲ್ಲಿ ಧನವಿರುತ್ತದೆ. ಬಾಪ್ದಾದಾರವರಿಗೆ ಡಬಲ್ ವಿದೇಶಿಗಳಿಗೆ ಸರ್ವಪ್ರಕಾರದಲ್ಲಿಯೂ ಸಫಲ ಮಾಡುವುದರಲ್ಲಿ ಬ್ಯುಸಿಯಾಗಿರುವುದನ್ನು ನೋಡುತ್ತಾ ಖುಷಿಯಾಗುತ್ತದೆ. ಎಲ್ಲರೂ ಸುವರ್ಣಾವಕಾಶ ತೆಗೆದುಕೊಳ್ಳುವವರು ಆಗಿದ್ದೀರಿ. ಸದಾ ನೆನಪಿಟ್ಟುಕೊಳ್ಳಿರಿ – ಸಫಲತಾಮೂರ್ತಿ ಆಗಿದ್ದೇವೆ ಮತ್ತು ಸದಾ ಸಫಲತೆಯು ನನ್ನ ಕೊರಳಿನ ಮಾಲೆಯಾಗಿದೆ. ಯಾವುದೇ ಕಾರ್ಯವನ್ನು ಮಾಡುವ ಮೊದಲು ಇದನ್ನು ಯೋಚಿಸಿರಿ – ಸಫಲತೆಯು ನನ್ನ ಕೊರಳಿನ ಮಾಲೆಯಾಗಿದೆ. ಹೇಗೆ ನಿಶ್ಚಯವಿರುತ್ತದೆಯೋ ಹಾಗೆಯೇ ಪ್ರತ್ಯಕ್ಷ ಫಲವು ಸಿಗುವುದು. ಒಳ್ಳೆಯದು.

2. ಈ ಮಧುರ ಶಾಂತಿಯು ಪ್ರಿಯವೆನಿಸುತ್ತದೆಯಲ್ಲವೆ? ಏಕೆಂದರೆ ಆತ್ಮನ ಸತ್ಯ ಸ್ವರೂಪವೇ ಮಧುರ ಶಾಂತಿಯಾಗಿದೆ ಅಂದಮೇಲೆ ಯಾವ ಸಮಯದಲ್ಲಿ ಬೇಕೋ ಅದೇ ಸಮಯದಲ್ಲಿ ಮಧುರ ಶಾಂತಿಯ ಸ್ಥಿತಿಯ ಅನುಭವ ಮಾಡಬಲ್ಲಿರಾ? ಏಕೆಂದರೆ ಈಗ ಆತ್ಮವು ಇವೆಲ್ಲಾ ಬಂಧನಗಳಿಂದ ಮುಕ್ತವಾಗಿ ಬಿಟ್ಟಿದೆ ಆದ್ದರಿಂದ ಯಾವಾಗ ಬೇಕೋ ಆಗ ತಮ್ಮ ಸತ್ಯ ಸ್ವರೂಪ ಸ್ಥಿತಿಯಲ್ಲಿ ಸ್ಥಿತವಾಗಿ ಬಿಡುತ್ತದೆ. ಅಂದಮೇಲೆ ಬಂಧನಮುಕ್ತರಾಗಿದ್ದೀರಾ ಅಥವಾ ಆಗಬೇಕಾಗಿದೆಯೇ? ಈ ಬಾರಿ ಮಧುಬನದಲ್ಲಿ ಎರಡು ಶಬ್ಧಗಳನ್ನು ಬಿಟ್ಟು ಹೋಗಿರಿ – ಸಮ್ತಿಂಗ್ ಮತ್ತು ಸಮ್ಟೈಮ್. ಇದು ಇಷ್ಟವಿದೆಯೇ? ಎಲ್ಲರೂ ಬಿಡುವಿರಾ? ಸಾಹಸವನ್ನಿಡುವುದರಿಂದ ಸಹಯೋಗ ಸಿಗುವುದು ಏಕೆಂದರೆ 63 ಜನ್ಮಗಳಲ್ಲಿ ಅನೇಕ ಬಂಧನಗಳಲ್ಲಿಯೇ ಇದ್ದಿರೆನ್ನುವುದು ಗೊತ್ತಿದೆ ಮತ್ತು ಈ ಒಂದು ಜನ್ಮದಲ್ಲಿ ಸ್ವತಂತ್ರರಾಗಬೇಕಾಗಿದೆ, ಇದರ ಫಲವೇ ಅನೇಕ ಜನ್ಮಗಳಿಗಾಗಿ ಜೀವನ್ಮುಕ್ತಿಯು ಪ್ರಾಪ್ತಿಯಾಗುವುದು. ಅಂದಮೇಲೆ ಇಲ್ಲಿಯೇ ಅದರ ಬುನಾದಿ ಹಾಕಬೇಕಾಗಿದೆ. ಯಾವಾಗ ಬುನಾದಿಯು ಇಷ್ಟು ಪರಿಪಕ್ವವಾಗುವುದೋ ಆಗ 21 ಜನ್ಮಗಳವರೆಗೆ ನಡೆಯುತ್ತದೆ. ತಮ್ಮಲ್ಲಿ ಎಷ್ಟು ನಿಶ್ಚಯವನ್ನಿಡುವಿರಿ ಅಷ್ಟು ನಶೆಯಿರುವುದು. ತಂದೆಯಲ್ಲಿಯೂ, ತಮ್ಮಲ್ಲಿಯೂ ಹಾಗೂ ಡ್ರಾಮಾದಲ್ಲಿಯೂ ನಿಶ್ಚಯವಿರಲಿ, ಮೂರರಲ್ಲಿಯೂ ಉತ್ತೀರ್ಣರಾಗಬೇಕು. ಒಳ್ಳೆಯದು. ಒಂದೊಂದು ರತ್ನದ ವಿಶೇಷತೆಯು ತನ್ನದೇ ಆಗಿದೆ. ಬಾಪ್ದಾದಾರವರು ಎಲ್ಲರ ವಿಶೇಷತೆಯನ್ನು ತಿಳಿದಿದ್ದಾರೆ. ಈಗ ಮುಂದೆ ನಡೆದಂತೆ ಇನ್ನಷ್ಟು ತಮ್ಮ ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸುತ್ತೀರೆಂದರೆ, ವಿಶೇಷತೆಯು ವೃದ್ಧಿಯಾಗುವುದು. ಪ್ರಪಂಚದಲ್ಲಿ ಖರ್ಚು ಮಾಡುವುದರಿಂದ ಹಣದ ಕೊರತೆಯಾಗುವುದು ಆದರೆ ಇಲ್ಲಿ ಎಷ್ಟು ಉಪಯೋಗಿಸುತ್ತೀರಿ, ಖರ್ಚು ಮಾಡುವಿರಿ ಅಷ್ಟು ಹೆಚ್ಚಾಗುವುದು. ಎಲ್ಲರೂ ಅನುಭವಿ ಆಗಿದ್ದೀರಲ್ಲವೆ. ಅಂದಮೇಲೆ ಈ ವರ್ಷದಲ್ಲಿ ಇದೇ ವರದಾನವನ್ನು ನೆನಪಿಟ್ಟುಕೊಳ್ಳಿರಿ – ನಾವು ವಿಶೇಷ ಆತ್ಮರಾಗಿದ್ದೇವೆ ಮತ್ತು ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಮುಂದುವರೆಯುತ್ತೇವೆ. ಹೇಗೆ ಇಲ್ಲಿ ಸಮೀಪದಲ್ಲಿ ಕುಳಿತುಕೊಳ್ಳುವುದು ಪ್ರಿಯವೆನಿಸುತ್ತದೆಯೋ ಹಾಗೆಯೇ ಅಲ್ಲಿಯೂ ಸದಾ ಸಮೀಪದಲ್ಲಿರಬೇಕು. ಬಾಪ್ದಾದಾರವರು ಸದಾ ಪ್ರತಿಯೊಬ್ಬರನ್ನೂ ಇದೇ ಶ್ರೇಷ್ಠ ದೃಷ್ಟಿಯಿಂದ ನೋಡುತ್ತಾರೆ – ಒಂದೊಂದು ಮಗುವು ಯೋಗಿಯೂ ಆಗಿದ್ದಾರೆ ಮತ್ತು ಯೋಗ್ಯರೂ ಆಗಿದ್ದಾರೆ. ಒಳ್ಳೆಯದು.

ವರದಾನ:-

ಸ್ವ-ಪರಿವರ್ತನೆ ಮಾಡುವುದೇ ಶುಭಚಿಂತಕರು ಆಗುವುದಾಗಿದೆ. ಒಂದುವೇಳೆ ತನ್ನನ್ನು ಮರೆತು ಅನ್ಯರ ಪರಿವರ್ತನೆಯ ಚಿಂತೆ ಮಾಡುತ್ತೀರೆಂದರೆ, ಇದು ಶುಭಚಿಂತನೆ ಅಲ್ಲ. ಮೊದಲು ಸ್ವಯಂ ಹಾಗೂ ಸ್ವಯಂನ ಜೊತೆಗೆ ಸರ್ವ, ಒಂದುವೇಳೆ ಸ್ವಯಂನ ಪರಿವರ್ತನೆ ಮಾಡುವುದಿಲ್ಲ ಮತ್ತು ಅನ್ಯರ ಶುಭ ಚಿಂತಕರಾಗುತ್ತೀರೆಂದರೆ ಸಫಲತೆಯು ಸಿಗಲು ಸಾಧ್ಯವಿಲ್ಲ ಆದ್ದರಿಂದ ತಮ್ಮನ್ನು ಕಾಯಿದೆಯನುಸಾರ ನಡೆಸುತ್ತಾ ಸ್ವಯಂನ ಪರಿವರ್ತನೆ ಮಾಡಿಕೊಳ್ಳಿರಿ, ಇದರಲ್ಲಿಯೇ ಲಾಭವಿದೆ. ಹೊರಗಿನಿಂದ ಲಾಭವೇನೂ ಕಾಣಿಸದೇ ಇರಬಹುದು ಆದರೆ ಆಂತರ್ಯದಿಂದ ಹಗುರತೆ ಹಾಗೂ ಖುಷಿಯ ಅನುಭೂತಿ ಆಗುತ್ತಿರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top