02 June 2021 KANNADA Murli Today – Brahma Kumaris

1 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯ ಜೊತೆ ಹಾರುವುದಕ್ಕಾಗಿ ಸಂಪೂರ್ಣ ಪವಿತ್ರರಾಗಿ ಸಂಪೂರ್ಣ ಬಲಿಹಾರಿಯಾಗಿ, ಈ ದೇಹವೂ ನನ್ನದಲ್ಲ, ಪೂರ್ಣ ಅಶರೀರಿಯಾಗಿರಿ”

ಪ್ರಶ್ನೆ:: -

ಶ್ರೇಷ್ಠ ಗುರಿಯನ್ನು ತಲುಪುವುದಕ್ಕಾಗಿ ಯಾವ ಭಯವು ಹೊರಟು ಹೋಗಬೇಕು?

ಉತ್ತರ:-

ಕೆಲವು ಮಕ್ಕಳು ಮಾಯೆಯ ಬಿರುಗಾಳಿಗಳಿಗೆ ಬಹಳ ಹೆದರುತ್ತಾರೆ. ಬಾಬಾ, ಬಿರುಗಾಳಿಗಳು ಬಹಳ ತೊಂದರೆ ಕೊಡುತ್ತವೆ, ಇವನ್ನು ತಡೆಯಿರಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದು ಮಲ್ಲ ಯುದ್ಧವಾಗಿದೆ, ಆ ಮಲ್ಲ ಯುದ್ಧದಲ್ಲಿಯೂ ಒಂದೇ ಕಡೆಯಿಂದ ಯುದ್ಧವು ಆಗುವುದಿಲ್ಲ. ಒಂದುವೇಳೆ ಒಬ್ಬರು ಹತ್ತು ಏಟುಗಳನ್ನು ಹೊಡೆದರೆ ಇನ್ನೊಬ್ಬರು 5 ಏಟುಗಳನ್ನು ಖಂಡಿತ ಹೊಡೆಯುವರು. ಆದ್ದರಿಂದ ನೀವು ಖಂಡಿತ ಹೆದರಬಾರದು. ಮಹಾವೀರರಾಗಿ ವಿಜಯಿಗಳಾಗಬೇಕಾಗಿದೆ, ಆಗಲೇ ಶ್ರೇಷ್ಠ ಗುರಿಯನ್ನು ತಲುಪುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಪ್ರತಿಜ್ಞೆ ಮಾಡಿ ಧರೆಯ ಮೇಲೆ ಬಂದಿದ್ದೇವೆ………..

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಅವಶ್ಯವಾಗಿ ಗೀತೆಯಲ್ಲಿ ಯಾವುದೋ ರಹಸ್ಯವಿದೆ. ಈ ರೆಕಾರ್ಡನ್ನು ಖರೀದಿಸಿ ತಂದೆಯು ಇದರ ಅರ್ಥವನ್ನು ತಿಳಿಸುತ್ತಾರೆ. ಜೀವಿಸಿದ್ದಂತೆಯೇ ಸತ್ತು ತಂದೆಯ ಮಕ್ಕಳಾಗುವುದು ಎಂದು ಇದಕ್ಕೇ ಹೇಳಲಾಗುತ್ತದೆ. ತಂದೆಯ ಮಕ್ಕಳಾದ ಮೇಲೆ ಶಿಕ್ಷಕರನ್ನು ಮಾಡಿಕೊಳ್ಳುವುದು, ಶಿಕ್ಷಕರ ನಂತರ ಅನೇಕರು ಗುರುಗಳನ್ನು ಮಾಡಿಕೊಳ್ಳುತ್ತಾರೆ. ಕ್ರಿಶ್ಚಿಯನ್ನರೂ ಸಹ ಮಗು ಜನ್ಮ ಪಡೆದಾಗ ಕ್ರಿಶ್ಚಿಯನೈಸ್ ಮಾಡುತ್ತಾರೆ. ಗುರುವಿನ ಮಡಿಲಿಗೆ ಕೊಡುತ್ತಾರೆ, ಪಾದ್ರಿಯಾಗಿರಲಿ ಅಥವಾ ಯಾರೇ ಆಗಿರಲಿ ಆದರೆ ಪಾದ್ರಿಯಂತೂ ಕ್ರೈಸ್ಟ್ ಆಗಲಿಲ್ಲ, ಅವರ ಹೆಸರಿನ ಮೇಲೆ ನಾವು ಕ್ರಿಶ್ಚಿಯನ್ನರಾಗುತ್ತೇವೆಂದು ಹೇಳುತ್ತಾರೆ.

ಈಗ ನೀವು ಮಕ್ಕಳು ಮೊದಲು ತಂದೆಯ ಮಕ್ಕಳಾಗುತ್ತೀರಿ, ಅಶರೀರಿಯಾಗುತ್ತೀರಿ. ತಮ್ಮ ತನು-ಮನ-ಧನ ಏನೆಲ್ಲವೂ ಇದೆಯೋ ಅದನ್ನು ತಂದೆಗೆ ಅರ್ಪಣೆ ಮಾಡುತ್ತೀರಿ. ಜೀವಿಸಿದ್ದಂತೆಯೇ ಸಾಯುತ್ತೇವೆ ಅರ್ಥಾತ್ ನಾವಾತ್ಮರು ಅವರ ಮಕ್ಕಳಾಗುತ್ತೇವೆ. ಇದು ಬುದ್ಧಿಯಲ್ಲಿರಬೇಕಾಗಿದೆ. ನನ್ನದು ಏನೆಲ್ಲಾ ವಸ್ತುಗಳಿವೆಯೋ ನನ್ನ ಶರೀರ, ನನ್ನ ಹಣ, ಅಧಿಕಾರ, ಸಂಬಂಧ ಇತ್ಯಾದಿಗಳೆಲ್ಲವನ್ನೂ ಮರೆಯುತ್ತೇವೆ. ಹೇಗೆ ಸತ್ತನಂತರ ಎಲ್ಲವೂ ಮರೆತು ಹೋಗುತ್ತದೆಯಲ್ಲವೆ. ಹಾಗೆಯೇ ಇದು ಬಹಳ ದೊಡ್ಡ ಗುರಿಯಾಗಿದೆ. ನಾವು ಅಶರೀರಿ ಆತ್ಮರಾಗಿದ್ದೇವೆ, ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ನೀವು ಶರೀರವನ್ನು ಬಿಟ್ಟು ಸತ್ತು ಹೋಗುತ್ತೀರೆಂದಲ್ಲ, ಆತ್ಮವು ಇನ್ನೂ ಸಂಪೂರ್ಣವಾಗಿದೆಯೇ! ಭಲೆ ತಂದೆಯ ಮಕ್ಕಳಾಗಿದ್ದೀರಿ ಆದರೆ ತಂದೆಯೇ ಹೇಳುತ್ತಾರೆ – ನೀವಾತ್ಮರು ಇನ್ನೂ ಅಪವಿತ್ರರಾಗಿದ್ದೀರಿ. ಆತ್ಮದ ರೆಕ್ಕೆಗಳು ತುಂಡಾಗಿದೆ. ಈಗ ಆತ್ಮವು ಹಾರಲಾಗುತ್ತಿಲ್ಲ. ತಮೋಪ್ರಧಾನವಾಗಿರುವ ಕಾರಣ ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಮಾಯೆಯು ಒಮ್ಮೆಲೆ ರೆಕ್ಕೆಗಳನ್ನು ಕತ್ತರಿಸಿ ಹಾಕಿದೆ. ತಂದೆಯು ತಿಳಿಸುತ್ತಾರೆ – ಆತ್ಮವು ಎಲ್ಲದಕ್ಕಿಂತ ತೀಕ್ಷ್ಣವಾಗಿ ಹಾರುತ್ತದೆ. ಅದಕ್ಕಿಂತಲೂ ತೀಕ್ಷ್ಣವಾದ ವಸ್ತು ಮತ್ತ್ಯಾವುದೂ ಇಲ್ಲ. ಆತ್ಮಕ್ಕೆ ಸರಿಸಮನಾಗಿ ಮತ್ತ್ಯಾವುದೇ ವಸ್ತು ತಲುಪುವುದಿಲ್ಲ. ಕೊನೆಯಲ್ಲಿ ಎಲ್ಲಾ ಆತ್ಮರು ಸೊಳ್ಳೆಗಳೋಪಾದಿಯಲ್ಲಿ ಹಾರುತ್ತಾರೆ. ಎಲ್ಲಿಗೆ ಹೋಗುತ್ತಾರೆ? ಬಹಳ ದೂರ ಸೂರ್ಯ-ಚಂದ್ರರಿಗಿಂತಲೂ ಮೇಲೆ. ಅಲ್ಲಿಂದ ಮತ್ತೆ ಹಿಂತಿರುಗುವುದಿಲ್ಲ. ಈ ರಾಕೆಟ್ ಇತ್ಯಾದಿಗಳು ಹೋಗಿ ಹಿಂತಿರುಗಿ ಬರುತ್ತವೆ. ಸೂರ್ಯನವರೆಗೂ ತಲುಪಲು ಸಾಧ್ಯವಿಲ್ಲ. ನೀವಂತೂ ಅದಕ್ಕಿಂತಲೂ ಬಹಳ ದೂರ ತಲುಪಬೇಕಾಗಿದೆ. ಸೂಕ್ಷ್ಮವತನಕ್ಕಿಂತಲೂ ಮೇಲೆ ಮೂಲವತನಕ್ಕೆ ಹೋಗಬೇಕಾಗಿದೆ, ಆತ್ಮಕ್ಕೆ ರೆಕ್ಕೆಗಳು ಸಿಗುತ್ತವೆ. ಲೆಕ್ಕಾಚಾರಗಳೆಲ್ಲವನ್ನೂ ಮುಗಿಸಿ ಆತ್ಮವು ಪವಿತ್ರವಾಗಿ ಬಿಡುತ್ತದೆ. ಅಂತಿಮ ಸಮಯದ ಮಹಿಮೆಯನ್ನು ಬಹಳ ಬರೆದಿದ್ದಾರೆ. ಎಲ್ಲಾ ಆತ್ಮಗಳು ಲೆಕ್ಕಾಚಾರವನ್ನು ಮುಗಿಸಿ ಹೋಗಬೇಕಾಗಿದೆ. ಈಗಂತೂ ಎಲ್ಲಾ ಆತ್ಮರು ಮೈಲಿಗೆ, ಪಾಪಾತ್ಮರಾಗಿದ್ದಾರೆ. ಭಲೆ ದೊಡ್ಡ-ದೊಡ್ಡ ಗುರು, ಸಾಧು-ಸನ್ಯಾಸಿಗಳಿದ್ದಾರೆ. ನಾವು ಗುರುಗಳಾಗಿದ್ದೇವೆ, ಅಹಂ ಬ್ರಹ್ಮಾಸ್ಮಿ…. ಅಹಂ ಬ್ರಂಹೋಮಃ ನಾವು ಬ್ರಹ್ಮ್ದಲ್ಲಿ ತಲುಪಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇಲ್ಲಿಯೇ ಕುಳಿತಿದ್ದಾರೆ ಅಂದಮೇಲೆ ಬ್ರಹ್ಮ್ತತ್ವದಲ್ಲಿ ಎಲ್ಲಿ ತಲುಪಿದ್ದಾರೆ? ನೀವೀಗ ತಿಳಿದುಕೊಂಡಿದ್ದೀರಿ – ನಾವಾತ್ಮರು ಬ್ರಹ್ಮತತ್ವದ ನಿವಾಸಿಗಳಾಗಿದ್ದೇವೆ ಆದರೆ ಅಲ್ಲಿಗೆ ಈಗ ಯಾರೂ ಹೋಗಲು ಸಾಧ್ಯವಿಲ್ಲ. ಎಲ್ಲಾ ಆತ್ಮರು ಇಲ್ಲಿಯೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಇದು ಬೇಹದ್ದಿನ ಡ್ರಾಮಾ ಆಗಿದೆ, ಎಲ್ಲಾ ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸಲು ಅಲ್ಲಿಂದ ಬರಲೇಬೇಕಾಗಿದೆ. ಎಲ್ಲಾ ಆತ್ಮರು ಸ್ಟೇಜಿನ ಮೇಲೆ ಬಂದಿದ್ದಾರೆ, ಯಾವಾಗ ವಿನಾಶದ ಸಮಯವಾಗುವುದು ಆಗ ಎಲ್ಲರೂ ಬಂದು ಬಿಡುತ್ತಾರೆ. ಅಲ್ಲಿದ್ದು ಏನು ಮಾಡುತ್ತಾರೆ! ಪಾತ್ರಧಾರಿಯು ಪಾತ್ರವನ್ನು ಅಭಿನಯಿಸದೇ ಮನೆಯಲ್ಲಿ ಕುಳಿತುಕೊಳ್ಳುವರೇ? ನಾಟಕದಲ್ಲಿ ಅವಶ್ಯವಾಗಿ ಬರಬೇಕಾಗುತ್ತದೆ ಅಲ್ಲಿಂದ ಯಾವಾಗ ಎಲ್ಲರೂ ಬಂದು ಬಿಡುವರೋ ಆಗ ಪುನಃ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ತಂದೆಯು ಹೇಳುತ್ತಾರೆ – ನಾನು ಭಲೆ ಇಲ್ಲಿದ್ದೇನೆ ಆದರೂ ಸಹ ಎಲ್ಲಾ ಆತ್ಮರೂ ಇಲ್ಲಿ ಬರುತ್ತಿರುತ್ತಾರೆ, ನಂಬರ್ವಾರ್ ವೃದ್ಧಿ ಹೊಂದುತ್ತಾ ಇರುತ್ತಾರೆ. ನೀವು ನಂಬರ್ವಾರ್ ಆಗಿಯೇ ಹೋಗುತ್ತೀರಿ. ನಿಮ್ಮದೆಲ್ಲವೂ ಸ್ಥಿತಿಯ ಮೇಲೆ ಆಧಾರಿತವಾಗಿದೆ ಆದ್ದರಿಂದ ನೀವು ಮರುಜೀವಿಗಳಾಗಬೇಕಾಗಿದೆ. ನಾವಾತ್ಮರಾಗಿದ್ದೇವೆ ಎಂಬುದನ್ನು ನಿಶ್ಚಯ ಮಾಡಿಕೊಳ್ಳುವುದು ಪರಿಶ್ರಮವಿದೆ. ಮಕ್ಕಳು ಪದೇ-ಪದೇ ದೇಹಾಭಿಮಾನದಲ್ಲಿ ಬಂದು ಮರೆತು ಹೋಗುತ್ತಾರೆ. ಯಾವಾಗ ಸಂಪೂರ್ಣ ಸಮರ್ಪಿತರಾಗುವರು, ಬಾಬಾ ಇದೆಲ್ಲವೂ ತಮ್ಮದಾಗಿದೆ, ನಾನೂ ನಿಮ್ಮವನಾಗಿದ್ದೇನೆ. ಈ ದೇಹವೂ ಸಹ ನನ್ನದಲ್ಲ, ಇದನ್ನು ಬಿಟ್ಟು ಬಿಡುತ್ತೇನೆ, ಬಾಬಾ, ನನು ನಿಮ್ಮವನಾಗಿದ್ದೇನೆ ಎಂದು ಬಲಿಹಾರಿಯಾಗುವಿರೋ ಆಗಲೇ ದೇಹೀ-ಅಭಿಮಾನಿಗಳಾಗಿರಲು ಸಾಧ್ಯ. ತಂದೆಯು ಹೇಳುತ್ತಾರೆ – ನನ್ನವರಾಗಿ ಮತ್ತೆಲ್ಲರಿಂದ ಮಮತ್ವವನ್ನು ಕಳೆಯಿರಿ, ಅಂದರೆ ಇಲ್ಲಿ ಬಂದು ಕುಳಿತು ಬಿಡುವುದಲ್ಲ, ನೀವು ತಮ್ಮ ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕು, ಮನೆಯನ್ನೂ ಸಂಭಾಲನೆ ಮಾಡಬೇಕಾಗಿದೆ. ಮಕ್ಕಳು ಮಾತಾಪಿತರ ಸಾಲವನ್ನೂ ತೀರಿಸಬೇಕಾಗಿದೆ. ಅವರ ಸೇವೆ ಮಾಡಿ ಅವರಿಗೆ ರಿಟರ್ನ್ ಕೊಡಬೇಕಾಗಿದೆ. ಮಕ್ಕಳಮೇಲೆ ತಂದೆ-ತಾಯಿಯ ಪಾಲನೆಯ ಸಾಲವೇರುತ್ತದೆ. ಈಗ ತಂದೆಯು ನಿಮ್ಮ ಪಾಲನೆ ಮಾಡುತ್ತಿದ್ದಾರೆ, ಆದಿಯಲ್ಲಿ ಯಾರೆಲ್ಲರೂ ಬಂದಿದ್ದರೋ ಎಲ್ಲರೂ ಕೂಡಲೇ ಸಮರ್ಪಣೆ ಮಾಡಿ ಬಿಟ್ಟರು. ತಮ್ಮ ಬಳಿ ಏನನ್ನೂ ಇಟ್ಟುಕೊಳ್ಳಲಿಲ್ಲ, ಸಮರ್ಪಣೆ ಮಾಡಿದರು, ಆ ಧನದಿಂದ ನೀವು ಮಕ್ಕಳು ಭಾರತವನ್ನು ಪಾವನವನ್ನಾಗಿ ಮಾಡುತ್ತಿದ್ದೀರಿ. ಭಾರತವೇ ಸಂಪೂರ್ಣ ಪವಿತ್ರವಾಗಿತ್ತು, ಭಾರತವಾಸಿಗಳಷ್ಟು ಮತ್ತ್ಯಾರೂ ಪವಿತ್ರ, ಸುಖಿಗಳಾಗಿರಲು ಸಾಧ್ಯವಿಲ್ಲ. ಭಾರತವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಇಲ್ಲಿ ಪತಿತ-ಪಾವನ ತಂದೆಯು ಬಂದು ಇಡೀ ಸೃಷ್ಟಿಯನ್ನು ಪತಿತರನ್ನೂ ಪವಿತ್ರರನ್ನಾಗಿ ಮಾಡುತ್ತಾರೆ. ಈಗ ಈ ತತ್ವ ಇತ್ಯಾದಿಗಳೆಲ್ಲವೂ ಶತ್ರುಗಳಾಗಿವೆ, ಭೂಕಂಪವಾಗುತ್ತದೆ, ಚಂಡ ಮಾರುತಗಳು ಬರುತ್ತವೆ ಏಕೆಂದರೆ ತಮೋಪ್ರಧಾನವಾಗಿವೆ. ಪ್ರಾಕೃತಿಕ ವಿಕೋಪಗಳು ಬಂದರೆ ಬಹಳ ದುಃಖ ಕೊಡುತ್ತವೆ. ಈ ಸಮಯದಲ್ಲಿ ಎಲ್ಲವೂ ದುಃಖದ ವಸ್ತುಗಳಾಗಿವೆ. ಸತ್ಯಯುಗದಲ್ಲಿ ಎಲ್ಲವೂ ಸುಖದ ವಸ್ತುಗಳಾಗಿವೆ, ಅಲ್ಲಿ ಈ ಬಿರುಗಾಳಿ ಅಥವಾ ಬಿಸಿಗಾಳಿ ಇತ್ಯಾದಿ ಏನೂ ಇರುವುದಿಲ್ಲ. ನಿಮ್ಮಲ್ಲಿಯೂ ಕೆಲವರೇ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ಇಂದು ಇರುತ್ತಾರೆ, ನಾಳೆ ಹೊರಟು ಹೋಗುತ್ತಾರೆ ಅಂದಮೇಲೆ ಅವರು ಏನೂ ಅರಿತುಕೊಳ್ಳಲಿಲ್ಲ. ಭಲೆ ಇಲ್ಲಿಗೆ ಬರುತ್ತಾರೆ. ಆದರೆ ಎಲ್ಲರೂ ಸ್ಥಿರವಾಗಿ ನಿಲ್ಲುತ್ತಾರೆಯೇ? ಇಲ್ಲಿಂದ ಹೋದರೆಂದರೆ 10 ದಿನಗಳ ನಂತರ ಬಾಬಾ, ಇಂತಹವರನ್ನು ಮಾಯೆಯು ತಿಂದು ಬಿಟ್ಟಿತೆಂದು ಸಮಾಚಾರ ಬರುತ್ತದೆ. ಚಿಕ್ಕ ಹೂಗಳು ದೊಡ್ಡದಾದಾಗಲೇ ಅದರಿಂದ ಫಲ ಬಿಡುವುದು, ಅವರಲ್ಲಿ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುವ ಶಕ್ತಿಯಿರುತ್ತದೆ. ಅದಕ್ಕೆ ಫಲ ಬರುತ್ತದೆ.

ತಂದೆಯ ಮಕ್ಕಳಾದ ಮೇಲೆ ಪ್ರಜೆಗಳನ್ನೂ ಮಾಡಿಕೊಳ್ಳಬೇಕು, ವಾರಸುಧಾರರನ್ನೂ ಮಾಡಿಕೊಳ್ಳಬೇಕಾಗಿದೆ. ಮಾರ್ಗದರ್ಶಕರಾಗಿ ತಂದೆಯ ಬಳಿ ಬಂದಿರಿ, ನಾವಂತೂ ತಲುಪಿ ಬಿಟ್ಟೆವು ಎಂದಲ್ಲ. ಗುರಿಯು ಬಹಳ ದೊಡ್ಡದಾಗಿದೆ. ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆಯೆಂದು ಹೇಳುತ್ತಾರೆ, ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಬಿರುಗಾಳಿಗಳಂತೂ ಬಂದೇ ಬರುತ್ತವೆ. ಕೆಲವರು ಹೇಳುತ್ತಾರೆ – ಬಾಬಾ, ನಾವು ನಿಮ್ಮವರಾಗಿದ್ದೆವು, ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡಿದ್ದೆವು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ 84 ಜನ್ಮಗಳನ್ನು ಕಳೆದೆವು, ಈಗ ಪುನಃ ಬಂದು ನಿಮ್ಮವರಾಗಿದ್ದೇವೆ. ನಾವಂತೂ ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡೇ ತೀರುತ್ತೇವೆ. ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕಾಗಿದೆ ಮತ್ತು ಅನ್ಯರನ್ನೂ ತಮ್ಮ ಸಮಾನ ಮಾಡಿಕೊಂಡು ಫಲ ಕೊಡಬೇಕಾಗಿದೆ. ಇಲ್ಲದಿದ್ದರೆ ಮಾಲಿಯು ಹೇಗಾಗುತ್ತದೆ! ತಂದೆಯ ವಾರಸುಧಾರರನ್ನು ಹೇಗೆ ತಯಾರು ಮಾಡುತ್ತೀರಿ? ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಪ್ರಜೆಗಳೂ ಬೇಕು, ವಾರಸುಧಾರರೂ ಬೇಕು, ತಂದೆಯ ಬಳಿಯಂತು ಅನೇಕರು ಬರುತ್ತಾರೆ ಮತ್ತು ವಿಚ್ಛೇದನ ಕೊಟ್ಟು ಬಿಡುತ್ತಾರೆ. ಬುದ್ಧಿಯೋಗವು ತುಂಡಾಯಿತೆಂದರೆ ಆಟವೇ ಸಮಾಪ್ತಿ.

ಕೆಲವು ಮಕ್ಕಳು ಬಂದು ತಂದೆಯೊಂದಿಗೆ ಕೇಳುತ್ತಾರೆ – ಬಾಬಾ, ಯಾವುದೇ ಬಿರುಗಾಳಿ ತಗುಲದಂತೆ ಸ್ಥಿತಿಯನ್ನು ಹೇಗೆ ಸರಿಯಾಗಿಟ್ಟುಕೊಳ್ಳುವುದು? ಇದರ ಮಾರ್ಗವನ್ನಂತೂ ತಿಳಿಸುತ್ತಲೇ ಇರುತ್ತೇವೆ – ತಂದೆಯನ್ನು ನೆನಪು ಮಾಡಿ. ಬಿರುಗಾಳಿಗಳಂತೂ ಬರುತ್ತವೆ, ಮಲ್ಲಯುದ್ಧದಲ್ಲಿ ಕೇವಲ ಒಬ್ಬರೇ ಹೊಡೆಯುತ್ತಿರುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ಎರಡೂ ಕಡೆಯವರಲ್ಲಿಯೂ ಶಕ್ತಿಯಿರುತ್ತದೆ, ಒಬ್ಬರು 5 ಏಟು ಹೊಡೆದರೆ ಇನ್ನೊಬ್ಬರು 10 ಏಟುಗಳನ್ನು ಹೊಡೆಯುತ್ತಾರೆ. ಇದೂ ಸಹ ಮಲ್ಲ ಯುದ್ಧವಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಇದ್ದಾಗ ಮಾಯೆಯು ದೂರವಾಗುವುದು ಆದರೆ ಒಂದೇಸಲ ಅದು ಓಡಿ ಹೋಗುವುದಿಲ್ಲ. ಮಾಯೆಯೊಂದಿಗೆ ಕುಸ್ತಿ ಆಡಬೇಕಾಗಿದೆ, ಮಾಯೆಯು ಪೆಟ್ಟು ಕೊಡುವುದಿಲ್ಲ ಎಂದು ತಿಳಿಯಬೇಡಿ, ಭಲೆ ಯಾರೇ ಆದರೂ ಸಹ ಇದು ದೊಡ್ಡ ಮಲ್ಲ ಯುದ್ಧವಾಗಿದೆ. ಕೆಲವರು ಬಹಳ ಹೆದರುತ್ತಾರೆ, ಮಾಯೆಯು ಒಮ್ಮೆಲೆ ಉಸಿರು ಕಟ್ಟಿಸುತ್ತದೆ, ಯುದ್ಧ ಸ್ಥಳವಲ್ಲವೆ. ಬುದ್ಧಿಯೋಗವನ್ನು ಇಡುವುದರಲ್ಲಿ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ, ಪರಿಶ್ರಮವೆಲ್ಲವೂ ಯೋಗದಲ್ಲಿದೆ. ತಂದೆಯು ಜ್ಞಾನಿ ಆತ್ಮ ಮಕ್ಕಳು ನನಗೆ ಪ್ರಿಯರೆಂದು ಭಲೆ ಹೇಳುತ್ತಾರೆ ಆದರೆ ಇದರ ಅರ್ಥ ಕೇವಲ ಜ್ಞಾನವನ್ನು ಕೊಡುವವರು ಪ್ರಿಯರೆಂದಲ್ಲ. ಮೊದಲು ಯೋಗವಿರಬೇಕು, ತಂದೆಯನ್ನು ನೆನಪು ಮಾಡಬೇಕಾಗಿದೆ. ಮಾಯೆಯ ವಿಘ್ನಗಳಿಗೆ ಹೆದರಬಾರದು. ವಿಶ್ವದ ಮಾಲೀಕರಾಗುತ್ತೀರಲ್ಲವೆ! ಎಲ್ಲರೂ ಆಗುವರೇ? 16,108ರ ಮಾಲೆಯಂತೂ ಬಹಳ ದೊಡ್ಡದಾಗಿದೆ, ಅಂತ್ಯದಲ್ಲಿ ಮುಕ್ತಾಯವಾಗುತ್ತದೆ, ತ್ರೇತಾದ ಅಂತ್ಯದವರೆಗೂ ಎಷ್ಟೊಂದು ರಾಜಕುಮಾರ-ಕುಮಾರಿಯರಾಗುತ್ತಾರೆ, ಕೆಲವು ಸಾಕ್ಷಿಗಳೂ ಇವೆಯಲ್ಲವೆ. 8ರ ಮಾಲೆಯ ಗುರುತೂ ಇದೆ, 108ರ ಮಾಲೆಯೂ ಇದೆ. ಇದು ಸರಿಯಾಗಿದೆ. ತ್ರೇತಾದ ಅಂತ್ಯದಲ್ಲಿ ಇಷ್ಟು 16,108 ರಾಜಕುಮಾರ-ಕುಮಾರಿಯರಿರುತ್ತಾರೆ, ಆರಂಭದಲ್ಲಿ ಇಷ್ಟೊಂದು ಮಂದಿ ಇರುವುದಿಲ್ಲ. ಮೊದಲು ಕೆಲವರೇ ಇರುತ್ತಾರೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ಅವರು ಇಲ್ಲಿಯೇ ತಯಾರಾಗುತ್ತಾರೆ, ಬಹಳ ಒಳ್ಳೆಯ ಅವಕಾಶವಿದೆ ಆದರೆ ಬಹಳ ಪರಿಶ್ರಮವೂ ಇದೆ. ಗೀತೆಯಲ್ಲಿಯೂ ಹೇಳುತ್ತಾರೆ, ನಾನು ನಿಮ್ಮನ್ನೆಂದೂ ಬಿಡುವುದಿಲ್ಲ. ಶರೀರವನ್ನಾದರೂ ಬಿಡುತ್ತೇನೆ…… ಬಾಬಾ, ಈ ತನು-ಮನ-ಧನವೆಲ್ಲವೂ ನಿಮ್ಮದಾಗಿದೆ, ನಾವು ಅಶರೀರಿಯಾಗಿ ತಮ್ಮನ್ನು ನೆನಪು ಮಾಡುತ್ತೇವೆ. ತಮ್ಮೊಂದಿಗೇ ಬುದ್ಧಿಯೋಗವನ್ನಿಡುತ್ತೇವೆ. ಮತ್ತೆ ತಂದೆಯು ಹೇಳುತ್ತಾರೆ – ಇದೆಲ್ಲವೂ ನೀವು ಮಕ್ಕಳಿಗಾಗಿಯೇ ಎಂದು ಮತ್ತು ಮಕ್ಕಳು ಹೇಳುತ್ತಾರೆ – ಬಾಬಾ, ನಮ್ಮದೆಲ್ಲವೂ ನಿಮ್ಮದಾಗಿದೆ. ಇದೆಲ್ಲವನ್ನೂ ಭಗವಂತನು ಕೊಟ್ಟಿದ್ದಾರೆಂದು ಹೇಳುತ್ತಾರಲ್ಲವೆ. ಈಗ ತಂದೆಯು ತಿಳಿಸುತ್ತಾರೆ, ಇದೆಲ್ಲವೂ ಸಮಾಪ್ತಿಯಾಗುವುದಿದೆ. ನಿಮ್ಮ ಬಳಿ ಏನಿದೆ? ಈ ಶರೀರವೂ ಸಮಾಪ್ತಿಯಾಗಿ ಬಿಡುವುದು. ನಾನು ನಿಮ್ಮನ್ನು ಪರಿವರ್ತನೆ ಮಾಡಿ ಬಿಡುತ್ತೇನೆ. ಕೇವಲ ಅದಲು ಬದಲು ಮಾಡುತ್ತೇನೆ ಆದ್ದರಿಂದ ಮಕ್ಕಳೇ ಅಶರೀರಿಯಾಗಿ ನನ್ನನ್ನು ನೆನಪು ಮಾಡಿರಿ. ಬುದ್ಧಿಯಿಂದ ಎಲ್ಲವನ್ನೂ ಸಮರ್ಪಣೆ ಮಾಡಿ ರಾಜ ಹರಿಶ್ಚಂದ್ರನ ಕಥೆಯೂ ಇದೆಯಲ್ಲವೆ. ಅಡವಾಗಿ ಇಟ್ಟುಕೋ ಎಂದು ಹೇಳಿದರು.

ತಂದೆಯು ತಿಳಿಸುತ್ತಾರೆ – ಇವೆಲ್ಲಾ ಶಾಸ್ತ್ರ ಮೊದಲಾದುವುಗಳ ಸಾರವನ್ನು ನಿಮಗೆ ತಿಳಿಸುತ್ತೇನೆ. ನಾನೇ ನಿಮ್ಮನ್ನು ಬ್ರಹ್ಮಾರವರ ಮುಖದ ಮೂಲಕ ರಾಜ-ರಾಣಿಯರನ್ನಾಗಿ ಮಾಡಿದ್ದೆನು, ಈಗ ಪುನಃ ಮಾಡುತ್ತೇನೆ. ಮನುಷ್ಯರು ಮನುಷ್ಯರಿಗೆ ಗೀತೆಯನ್ನು ತಿಳಿಸಿ ರಾಜಯೋಗವನ್ನು ಕಲಿಸಿ ಎಂದೂ ರಾಜ-ರಾಣಿಯರನ್ನಾಗಿ ಮಾಡಲು ಸಾಧ್ಯವಿಲ್ಲ. ಅಂದಮೇಲೆ ಗೀತೆಯನ್ನು ಕೇಳುವುದರಿಂದೇನು ಲಾಭ? ತಂದೆಯು ಹೇಳುತ್ತಾರೆ – ನಾನೇ ಕಲ್ಪ-ಕಲ್ಪವೂ ಬಂದು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ನನ್ನವರಾದಾಗಲೇ ವಾರಸುಧಾರರಾಗುತ್ತೀರಲ್ಲವೆ. ಆದ್ದರಿಂದ ಎಷ್ಟು ಯೋಗದಲ್ಲಿರುತ್ತೀರೋ ಅಷ್ಟು ಶುದ್ಧವಾಗುತ್ತಾ ಹೋಗುತ್ತೀರಿ. ಬಾಬಾ, ಇದೆಲ್ಲವೂ ತಮ್ಮದಾಗಿದೆ, ನಾವು ಕೇವಲ ನಿಮಿತ್ತರಾಗಿದ್ದೇವೆ. ನಿಮ್ಮ ಆಜ್ಞೆಯಿಲ್ಲದೆ ನಾವು ಏನನ್ನೂ ಮಾಡುವುದಿಲ್ಲ. ಶರೀರ ನಿರ್ವಹಣೆ ಹೇಗೆ ಮಾಡುವುದೆಂಬುದನ್ನೂ ಸಹ ಮತ ತೆಗೆದುಕೊಳ್ಳುತ್ತಾರೆ. ಬಹಳ ಮಟ್ಟಿಗೆ ಬಡವರೇ ಪೂರ್ಣ ಲೆಕ್ಕವನ್ನು ತಿಳಿಸುತ್ತಾರೆ, ಸಾಹುಕಾರರು ತಿಳಿಸುವುದಿಲ್ಲ. ಅವರು ಸಮರ್ಪಣೆಯಾಗಲು ಸಾಧ್ಯವಿಲ್ಲ. ಕೆಲವರೇ ವಿರಳ ಅಂತಹವರು ಬರುತ್ತಾರೆ. ಹೇಗೆ ಒಬ್ಬ ಜನಕನ ಹೆಸರಿದೆ, ಮಕ್ಕಳು ಮರಿ ಜಂಟಿ ಆಸ್ತಿಯಿದೆ ಅಂದಮೇಲೆ ಅದು ಹೇಗೆ ಬೇರ್ಪಡಿಸುವುದು? ಸಮರ್ಪಣೆಯಾಗಲು ಸಾಹುಕಾರರು ತಮ್ಮ ಆಸ್ತಿಯನ್ನು ಬೇರ್ಪಡಿಸುವುದಾದರೂ ಹೇಗೆ? ತಂದೆಯು ಬಡವರ ಬಂಧುವಾಗಿದ್ದಾರೆ, ಎಲ್ಲರಿಗಿಂತ ಬಡವರು ಮಾತೆಯರಾಗಿದ್ದಾರೆ, ಅವರಿಗಿಂತಲೂ ಹೆಚ್ಚು ಬಡವರು ಕನ್ಯೆಯರಾಗಿದ್ದಾರೆ. ಕನ್ಯೆಗೆ ಎಂದೂ ಆಸ್ತಿಯ ನಶೆಯಿರುವುದಿಲ್ಲ. ಗಂಡು ಮಕ್ಕಳಿಗಾದರೆ ತಂದೆಯ ಆಸ್ತಿಯ ನಶೆಯಿರುತ್ತದೆ. ಅಂದಾಗ ಅದೆಲ್ಲವನ್ನೂ ಬಿಟ್ಟು ಮತ್ತೆ ವೈಕುಂಠದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾವಾಗಲೂ ಬಡವರಿಗೇ ದಾನ ಮಾಡಲಾಗುತ್ತದೆ. ಭಾರತವು ಎಲ್ಲದಕ್ಕಿಂತ ಬಡದೇಶವಾಗಿದೆ, ಅಮೇರಿಕಾ ಬಹಳ ಸಾಹುಕಾರನಾಗಿದೆ ಅದಕ್ಕೇ ಆಸ್ತಿಯನ್ನು ಕೊಡುತ್ತಾರೆಯೇ? ಭಾರತವು ಎಲ್ಲದಕ್ಕಿಂತ ಸಾಹುಕಾರನಾಗಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ, ಕೇವಲ ಭಾರತವಾಸಿಗಳೇ ಇದ್ದರು, ಒಂದು ಭಾಷೆ ಇತ್ತು. ದೇವರೊಬ್ಬನೇ ಆಗಿದ್ದಾನೆ, ನಾನು ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆಯನ್ನು ಸ್ಥಾಪನೆ ಮಾಡುತ್ತೇನೆ. ಒಂದು ಈಶ್ವರೀಯ ಸರ್ಕಾರವನ್ನು ಸ್ಥಾಪನೆ ಮಾಡುತ್ತೇನೆ. ಆ ಒಂದರಿಂದ ಎರಡು, ಮೂರು ಹೀಗೆ ಅನೇಕ ಆಗಿ ಬಿಡುತ್ತವೆ. ಈಗ ಎಷ್ಟೊಂದು ಧರ್ಮಗಳಿವೆ ಅಂದಮೇಲೆ ಪುನಃ ಅವಶ್ಯವಾಗಿ ಒಂದು ಧರ್ಮ ಬರಬೇಕಾಗಿದೆ. 5000 ವರ್ಷಗಳ ಮಾತಾಗಿದೆ. ಒಂದು ಧರ್ಮವಿತ್ತು, ವಿದ್ವಾಂಸರು ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ಸತ್ಯಯುಗವೆಂದರೇನು? ಎಂಬುದನ್ನು ತಿಳಿದುಕೊಂಡಿಲ್ಲ. ಸ್ವರ್ಗವಾಸಿಯಾದರೆಂದರೆ ಭಹುಷಃ ಮೇಲೆ ಹೊರಟು ಹೋದರೆಂದು ತಿಳಿಯುತ್ತಾರೆ. ದಿಲ್ವಾಡಾ ಮಂದಿರದಲ್ಲಿಯೂ ಸ್ವರ್ಗವನ್ನು ಮೇಲ್ಭಾಗದಲ್ಲಿ ತೋರಿಸಿದ್ದಾರೆ ಆದ್ದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ವಾಸ್ತವದಲ್ಲಿ ಸ್ವರ್ಗವೇನೂ ಮೇಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ – ತಂದೆಯ ಬಳಿ ಹೋಗಿ ಮತ್ತೆ ಇಲ್ಲಿಯೇ ಬಂದು ರಾಜ್ಯಮಾಡುತ್ತೇವೆ. ಯಾರಿಗೆ ಬೇಕಾದರೂ ತಿಳಿಸಿಕೊಡುವುದಕ್ಕಾಗಿ ಈ ಜ್ಞಾನವು ಬುದ್ಧಿಯಲ್ಲಿರಬೇಕು. ಕಚ್ಚಾ ಆಗಿರುವವರನ್ನು ಮಾಯಾ ಹದ್ದು ತಿಂದು ಬಿಡುತ್ತದೆ ಆದ್ದರಿಂದ ಅವರ ಭಾವಚಿತ್ರಗಳನ್ನೂ ತರಿಸಲಾಗುತ್ತದೆ ಮತ್ತು ರಿಜಿಸ್ಟರ್ ಇಡಲಾಗುತ್ತದೆ.

ಇಂತಹವರು ಒಂದೇ ಜ್ಞಾನದ ಬಾಣವನ್ನು ಹೊಡೆದರು – ನಾನು ತಂದೆಯ ಮಗುವಾಗಿ ಬಿಟ್ಟೆನು ಎಂದು ತಂದೆಯ ಬಳಿ ಸಮಾಚಾರಗಳು ಬರುತ್ತವೆ. ಕುಮಾರಿಯರ ಮೂಲಕ ಬಾಣ ಹೊಡೆಸಿದರೆಂದು ಶಾಸ್ತ್ರಗಳಲ್ಲಿಯೂ ಬರೆಯಲ್ಪಟ್ಟಿದೆ. ಅರೆ! ತಂದೆಯನ್ನು ಏಕೆ ಮರೆತಿದ್ದೀರಿ? ಇದಕ್ಕೆ ಜ್ಞಾನ ಬಾಣವೆಂದು ಹೇಳಲಾಗುತ್ತದೆ, ಕೇವಲ ತಂದೆಯ ನೆನಪು ತರಿಸಬೇಕಾಗಿದೆ. ಬಾಕಿ ಯಾವುದೇ ಹಿಂಸಾ ಬಾಣದ ಮಾತಿಲ್ಲ. ತಂದೆಯು ಹೇಳುತ್ತಾರೆ – ನಾನು ಬ್ರಹ್ಮ ಮುಖದಿಂದ ಎಲ್ಲಾ ಶಾಸ್ತ್ರಗಳ ರಹಸ್ಯವನ್ನು ನಿಮಗೆ ತಿಳಿಸುತ್ತೇನೆ. ಬ್ರಹ್ಮಾರವರೂ ಸಹ ಅವಶ್ಯವಾಗಿ ಇಲ್ಲಿಯೇ ಇರಬೇಕಲ್ಲವೆ. ಮನುಷ್ಯರು ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮನನ್ನು ತೋರಿಸಿದ್ದಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ, ಮನುಷ್ಯರಿಗೆ ಏನು ಬಂದಿತೋ ಅದನ್ನು ಬರೆದು ಬಿಟ್ಟರು. ರಿದ್ಧಿ ಸಿದ್ಧಿಯವರು ಅನೇಕರಿದ್ದಾರೆ, ಯಾವಾಗ ಸತ್ಯವು ಬರುವುದೋ ಆಗ ಅಸತ್ಯದವರು ಅದನ್ನು ಎದುರಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಯು ನಿರಾಕಾರನಾಗಿದ್ದಾರೆ. ಈ ಬ್ರಹ್ಮಾರವರು ಸಾಕಾರಿಯಾಗಿದ್ದಾರೆ. ಬಾಕಿ ನಾಭಿ ಇತ್ಯಾದಿಗಳ ಯಾವುದೇ ಮಾತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗ ಜ್ಞಾನಿ ಆತ್ಮರಾಗಬೇಕಾಗಿದೆ, ಕೇವಲ ಜ್ಞಾನವನ್ನು ಕೇಳುವವರು-ಹೇಳುವವರಲ್ಲ. ನೆನಪಿನ ಪರಿಶ್ರಮ ಪಡಬೇಕಾಗಿದೆ, ಅಶರೀರಿಯಾಗಿ ಅಶರೀರಿ ತಂದೆಯನ್ನು ನೆನಪು ಮಾಡಬೇಕಾಗಿದೆ.

2. ತಂದೆಯ ಮಕ್ಕಳಾಗಿ ಅನ್ಯ ಎಲ್ಲಾ ಮಾತುಗಳಿಂದ ಮಮತ್ವವನ್ನು ಕಳೆಯಬೇಕಾಗಿದೆ. ಈ ದೇಹವೂ ನನ್ನದಲ್ಲ, ಪೂರ್ಣ ದೇಹೀ-ಅಭಿಮಾನಿಯಾಗಿ ಸಂಪೂರ್ಣ ಸಮರ್ಪಣೆಯಾಗಬೇಕಾಗಿದೆ.

ವರದಾನ:-

ಎಂತಹ ಪತಿತ ವಾತಾವರಣವನ್ನು ಪರಿವರ್ತಿಸುವುದಕ್ಕಾಗಿ ಅಥವಾ ಹಳೆಯ ಸಂಸ್ಕಾರಗಳೆಂಬ ಕೀಟಾಣುಗಳನ್ನು ಭಸ್ಮಗೊಳಿಸುವುದಕ್ಕಾಗಿ, ಇದೇ ಸ್ಮೃತಿಯಿರಲಿ – ನಾನು ಮಾಸ್ಟರ್ ಜ್ಞಾನ ಸೂರ್ಯನಾಗಿದ್ದೇನೆ. ಸೂರ್ಯನ ಕರ್ತವ್ಯವಾಗಿದೆ – ಬೆಳಕನ್ನು ಕೊಡುವುದು ಮತ್ತು ಕೊಳಕನ್ನು ಸಮಾಪ್ತಿಗೊಳಿಸುವುದು. ಅಂದಮೇಲೆ ಇದೇ ಕರ್ತವ್ಯವನ್ನು ಜ್ಞಾನ-ಯೋಗದ ಶಕ್ತಿ ಅಥವಾ ಶ್ರೇಷ್ಠ ಚಲನೆಯ ಮೂಲಕ ಮಾಡುತ್ತಿರಿ. ಒಂದುವೇಳೆ ಶಕ್ತಿಯು ಕಡಿಮೆಯಿದ್ದರೆ ಜ್ಞಾನವು ಕೇವಲ ಬೆಳಕನ್ನು ಕೊಡುತ್ತದೆ ಆದರೆ ಹಳೆಯ ಸಂಸ್ಕಾರಗಳೆಂಬ ಕೀಟಾಣುಗಳನ್ನು ಸಮಾಪ್ತಿ ಮಾಡುವುದಿಲ್ಲ. ಆದ್ದರಿಂದ ಮೊದಲು ಯೋಗ ತಪಸ್ಸಿನ ಮೂಲಕ ಶಕ್ತಿಶಾಲಿ ಆಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top