02 July 2021 KANNADA Murli Today | Brahma Kumaris

Read and Listen today’s Gyan Murli in Kannada

July 1, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇಲ್ಲಿಯವರೆಗೆ ನೀವು ಹೇಳಿಕೆ-ಕೇಳಿಕೆ ಮಾತುಗಳಂತೆಯೇ ನಡೆಯುತ್ತಾ ಬಂದಿದ್ದೀರಿ, ತಂದೆಯು ಈಗ ಡೈರೆಕ್ಟ್ ಜ್ಞಾನವನ್ನು ತಿಳಿಸಿ ತಮ್ಮ ಸಮಾನ ಜ್ಞಾನ ಪೂರ್ಣರನ್ನಾಗಿ ಮಾಡುತ್ತಾರೆ”

ಪ್ರಶ್ನೆ:: -

ಒಳ್ಳೆಯ ಪುರುಷಾರ್ಥಿಗಳ ಲಕ್ಷಣಗಳು ಹಾಗೂ ಸ್ಥಿತಿಯ ಗಾಯನ ಏನಾಗಿದೆ?

ಉತ್ತರ:-

ಒಳ್ಳೆಯ ಪುರುಷಾರ್ಥಿ ಮಕ್ಕಳು ತಾಯಿ-ತಂದೆಯನ್ನು ಸಂಪೂರ್ಣವಾಗಿ ಅನುಕರಣೆ ಮಾಡುತ್ತಾರೆ. ತಮ್ಮ ಜೀವನದ ಬಗ್ಗೆ ಕರುಣೆ ತೋರಿಸಿಕೊಳ್ಳುತ್ತಾರೆ. ಸಂಪೂರ್ಣ ಗಮನವನ್ನು ಇಡುತ್ತಾರೆ. ಸ್ವಲ್ಪ ಸಮಯವನ್ನಾದರೂ ತೆಗೆದು ಅವಶ್ಯವಾಗಿ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುತ್ತಾರೆ. ಅವರ ಸ್ಥಿತಿಯ ಗಾಯನವಾಗಿದೆ – ಅಚಲ, ಅಡೋಲ, ಸ್ಥಿರವಾಗಿರುತ್ತದೆ, ಅವರನ್ನೇ ಮಹಾವೀರರು ಎಂದು ಕರೆಯುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ………

ಓಂ ಶಾಂತಿ.

ಭಕ್ತಿಮಾರ್ಗದಲ್ಲಿ ಪ್ರಪಂಚದವರು ಕೇವಲ ಹಾಡನ್ನು ಹಾಡುತ್ತಾರೆ. ಭಕ್ತಿಮಾರ್ಗದಲ್ಲಿ ನಾವೂ ಸಹ ಹಾಡುತ್ತಿದ್ದೆವೆಂದು ನೀವು ಮಕ್ಕಳು ತಿಳಿದಿದ್ದೀರಿ, ಈಗ ಅದೇ ಭೋಲಾನಾಥ ಸನ್ಮುಖದಲ್ಲಿದ್ದಾರೆ. ಭೋಲಾನಾಥನೆಂಬುದೂ ಭಕ್ತಿಮಾರ್ಗದ ಶಬ್ಧವಾಗಿದೆ, ಜ್ಞಾನಮಾರ್ಗದಲ್ಲಿ ಶಿವ ಬಾಬಾ ಎಂದಾಗಿದೆ. ಅನಾದಿ ಮಾಡಿ-ಮಾಡಲ್ಪಟ್ಟ ಡ್ರಾಮಾದ ಪ್ಲಾನನುಸಾರ ಸಂಗಮಯುಗದಲ್ಲಿ ತಂದೆಯು ಬಂದು ನಮ್ಮಿಂದ ಈ ಪುರುಷಾರ್ಥಿ ಮಾಡಿಸುತ್ತಾರೆಂದು ನೀವು ತಿಳಿದಿದ್ದೀರಿ. ಕಲ್ಪ-ಕಲ್ಪವೂ ಪುರುಷಾರ್ಥವನ್ನು ಮಾಡಿಸುತ್ತಲೇ ಬಂದಿದ್ದಾರೆ. ನೀವು ಮಕ್ಕಳು ಎಷ್ಟು ಸಮಯ ಭಕ್ತಿ ಮಾಡಿದಿರಿ ಎಂಬುದನ್ನೂ ಸಹ ಸಿದ್ಧ ಮಾಡಿ ತಿಳಿಸುತ್ತಾರೆ. ಯಾರು ಮೊಟ್ಟ ಮೊದಲು ಭಕ್ತಿಯನ್ನು ಪ್ರಾರಂಭ ಮಾಡಿದರೋ ಅವರೇ ಬಂದು ಜ್ಞಾನವನ್ನು ಪಡೆಯುತ್ತಾರೆ ನಂತರ ಸೂರ್ಯವಂಶಿಗಳಾಗುತ್ತಾರೆ. ಸತ್ಯಯುಗದಲ್ಲಿ ಕೇವಲ ಲಕ್ಷ್ಮೀ-ನಾರಾಯಣರಷ್ಟೇ ಬರುವುದಿಲ್ಲ, ಅವರ ವಂಶಾವಳಿ ಇದೆಯಲ್ಲವೆ. ಅದನ್ನು ದೈವೀ ವರ್ಣವೆಂದು ಕರೆಯಲಾಗುತ್ತದೆ. ಭಾರತವು ದೈವೀ ವರ್ಣವಾಗಿತ್ತು, ಈಗ ಆಸುರೀ ವರ್ಣವಿದೆ, ಇದು ಸಂಗಮವಾಗಿದೆ. ಈಗ ಆಸುರೀ ವರ್ಣದಿಂದ ದೈವೀ ವರ್ಣದಲ್ಲಿ ಹೋಗಬೇಕಾಗಿದೆ. ಅವಶ್ಯವಾಗಿ ಇದು ಅದೇ ಮಹಾಭಾರತದ ಯುದ್ಧವಾಗಿದೆ, ಕೇವಲ ಶಿವನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಒಂದು ಗೀತೆಯ ಖಂಡನೆ ಆಗಿರುವುದರಿಂದ ಎಲ್ಲಾ ಶಾಸ್ತ್ರಗಳ ಖಂಡನೆ ಆಗಿ ಬಿಡುತ್ತದೆ. ಮೂಲ ಮಾತೇ ಗೀತೆಯದ್ದಾಗಿದೆ, ಗೀತಾ ಪಾಠಶಾಲೆಗಳು ಅಥವಾ ಗೀತಾ ಭವನಗಳು ಎಷ್ಟೊಂದಿದೆ, ಗೀತೆಯ ಜ್ಞಾನವನ್ನು ಕೇಳುವಂತಹ ಪಾಠಶಾಲೆಯಾಗಿದೆ, ಸ್ವಯಂ ತಿಳಿಸುವಂತದ್ದಲ್ಲ. ಯಾವುದು ಆಗಿ ಹೋಗಿದೆಯೋ ಅದರ ಗಾಯನ ಅವಶ್ಯವಾಗಿ ನಡೆಯುತ್ತದೆ. ಮಕ್ಕಳಿಗೆ ಪ್ರತೀ ದಿನ ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಾರೆ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಎಂದು ಮಕ್ಕಳು ತಿಳಿದಿದ್ದೀರಿ. ಎಲ್ಲರಿಗೂ ಪ್ರೀತಿಯಿಂದ ಕಲಿಸಿಕೊಡುತ್ತಾರೆ. ತಂದೆಯೂ ಎಂದೂ ಸಹ ಕೋಪ ಮಾಡಿಕೊಳ್ಳುವುದಿಲ್ಲ, ಸದಾ ಪ್ರೀತಿಯಿಂದ ತಿಳಿಸುತ್ತಾರೆ – ಮಕ್ಕಳೇ, ನೀವು ಸತೋಪ್ರಧಾನರಾಗಿದ್ದಿರಿ ಈಗ ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ. ನೀವು ವಾಸ್ತವದಲ್ಲಿ ಭಾರತವಾಸಿಗಳು ದೇವತಾ ಧರ್ಮದವರಾಗಿದ್ದಿರಿ, ಇದನ್ನೂ ಸಹ ತಂದೆಯು ತಿಳಿಸುತ್ತಾರೆ. ಮೊಟ್ಟ ಮೊದಲು ಆಸ್ತಿಯನ್ನು ಯಾರು ಪಡೆಯಲು ಬರುತ್ತಾರೆ? ಯಾರು ಕಲ್ಪದ ಹಿಂದೆ ಪಡೆದಿದ್ದರೋ ಅವರೇ ಬಾಬಾ, ನಿನ್ನನ್ನು ಬಿಟ್ಟರೆ ನನಗೆ ಯಾರೂ ಸಹಾಯಕರಿಲ್ಲವೆಂದು ಹೇಳುತ್ತಾರೆ. ಸಂಗಮಯುಗವು ಯಾವಾಗ ಬರುತ್ತದೆಯೋ ಆಗಲೇ ಕ್ಷಮಿಸುತ್ತಾರೆ. ಈಗ ರಾವಣ ರಾಜ್ಯವಾಗಿದೆ ಮತ್ತು ರಾಮ ರಾಜ್ಯವು ಇಲ್ಲಿಯೇ ಆಗುತ್ತದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ರಾವಣ ರಾಜ್ಯವಿರುವ ಕಾರಣ ಎಲ್ಲರೂ ರಾಮ ರಾಜ್ಯವನ್ನು ಬಯಸುತ್ತಾರೆ. ನೀವು ಶಿವ ಬಾಬಾ ಎಂದು ಹೇಳಿದಾಗ ಬುದ್ಧಿಯು ನಿರಾಕಾರನ ಕಡೆಗೆ ಹೋಗುತ್ತದೆ. ನಿರಾಕಾರನ ನೆನಪೇ ಬರುತ್ತದೆ. ಆತ್ಮವೇ ತಂದೆಯನ್ನು ಕರೆಯುತ್ತದೆ. ಪರಮಾತ್ಮನು ಕುಳಿತುಕೊಂಡು ಎಲ್ಲವನ್ನು ಕೇಳುತ್ತಾನೆಂದಲ್ಲ. ಈ ಡ್ರಾಮಾ ಪ್ಲಾನನುಸಾರ ಪತಿತರನ್ನು ಪಾವನ ಮಾಡಲು ನಾನು ಈ ಶರೀರದಲ್ಲಿ ಬರುತ್ತೇನೆಂದು ತಿಳಿಸುತ್ತಾರೆ. ನಿಮ್ಮ ಕೂಗನ್ನು ಕೇಳಿ ನಾನು ಬರಲಿಲ್ಲ. ಭಕ್ತಿಯು ಯಾವಾಗ ಪೂರ್ಣವಾಗುತ್ತದೆಯೋ ಆಗ ನಾನು ಬರಲೇಬೇಕಾಗುತ್ತದೆ. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಅಂತಹ ಸಮಯ ಬರುತ್ತದೆ ಮಕ್ಕಳು ಕರೆಯಲು ಪ್ರಾರಂಭಿಸುತ್ತಾರೆ. ಯಾವಾಗ ಬರುತ್ತಾರೆ ಎಂಬುದು ಎಲ್ಲಿಯೂ ಸಹ ಬರೆದಿಲ್ಲ. ಅವರಂತೂ ಕಲ್ಪದ ಆಯಸ್ಸನ್ನು ತಪ್ಪಾಗಿ ಬರೆದು ಬಿಟ್ಟಿದ್ದಾರೆ, ಈ ಚಿತ್ರಗಳು ಮನೆ-ಮನೆಯಲ್ಲಿ ಇರಬೇಕಾಗಿದೆ. ದಿನವು ನೋಡುತ್ತಿರಬೇಕು ಮತ್ತು ನೆನಪು ಮಾಡಬೇಕು – ಇವರು ನಮ್ಮ ಬಾಬಾ, ಇವರು ನಮ್ಮ ದಾದಾ, ಇದು ನಮ್ಮ ಆಸ್ತಿಯಾಗಿದೆ ಎಂದು. ನನ್ನನ್ನು ನೆನಪು ಮಾಡಿದರೆ ನೀವು ಮಕ್ಕಳು ಸತೋಪ್ರಧಾನರೂ ಆಗುತ್ತೀರಿ, ತುಕ್ಕೂ ಸಹ ಬಿಟ್ಟು ಹೋಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಈ ಯುಕ್ತಿಯನ್ನು ತಂದೆಯೇ ತಿಳಿಸುತ್ತಾರೆ. ಈ ತಂದೆಯು (ಬ್ರಹ್ಮ) ಸಹ ನಾನು ಪುರುಷಾರ್ಥ ಮಾಡುತ್ತೇನೆಂದು ಹೇಳುತ್ತಾರೆ. ಮಕ್ಕಳು ಒಬ್ಬರಿಗೊಬ್ಬರು ಎಚ್ಚರಿಕೆಯನ್ನು ಕೊಟ್ಟುಕೊಂಡು ಉನ್ನತಿಯನ್ನು ಪಡೆಯಬೇಕಾಗಿದೆ, ಈ ಚಿತ್ರಗಳಲ್ಲಿಯೂ ಸಹ ತಿಳುವಳಿಕೆ ಬಹಳ ಚೆನ್ನಾಗಿದೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ, ಎದುರಿನಲ್ಲಿ ಮಹಾಭಾರಿ ಮಹಾಭಾರತ ಯುದ್ಧವು ನಿಂತಿದೆ. ಇಎಷ್ಟೊಂದು ಅನೇಕ ಧರ್ಮಗಳ ವಿನಾಶವಾಗಬೇಕು ಅದಕ್ಕಾಗಿ ಯುದ್ಧವು ಅವಶ್ಯಕವಾಗಿದೆ. ಈ ಮಾತುಗಳನ್ನು ಮಕ್ಕಳು ಮರೆಯಬಾರದು. ಅವಶ್ಯವಾಗಿ ಈಗ ಕಲಿಯುಗ ಘೋರ ಅಂಧಕಾರದಲ್ಲಿದೆ, ಎಷ್ಟೊಂದು ಮನುಷ್ಯರಿದ್ದಾರೆ ಅವಶ್ಯವಾಗಿ ವಿನಾಶವಾಗಲೇಬೇಕು. ಸತ್ಯಯುಗದಲ್ಲಿ ಒಂದೇ ಧರ್ಮವಿದೆ, ಅವಶ್ಯವಾಗಿ 84 ಜನ್ಮಗಳ ಚಕ್ರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಇದಂತೂ ಸಹಜವಾಗಿದೆ, ಬಾಕಿ ಇಷ್ಟೊಂದು ಎಲ್ಲಾ ಧರ್ಮಗಳೂ ಸಹ ಅವಶ್ಯವಾಗಿ ವಿನಾಶವಾಗುವುದು ಮತ್ತೆ ಒಂದು ಧರ್ಮದ ಸ್ಥಾಪನೆಯಾಗುವುದು. ಸರ್ವರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ, ನಾವೀಗ ಈ ವಿದ್ಯೆಯನ್ನು ಭವಿಷ್ಯ 21 ಜನ್ಮಗಳಿಗಾಗಿ ಓದುತ್ತಿದ್ದೇವೆಂದು ನೀವು ಮಕ್ಕಳು ತಿಳಿದಿದ್ದೀರಿ. ಭಗವಾನುವಾಚ – ನಾನು ನಿಮಗೆ ಓದಿಸಿ 21 ಜನ್ಮಗಳಿಗೆ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಸೂರ್ಯವಂಶಿ, ಚಂದ್ರವಂಶಿ ಮನೆತನಗಳು ಅವಶ್ಯವಾಗಿ ಸ್ಥಾಪನೆಯಾಗುತ್ತದೆ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದ ಮೇಲೆ ಈ ತಂದೆ-ತಾಯಿಯನ್ನು ಅನುಕರಣೆ ಮಾಡಿ ಎಂದು ಶಿವ ತಂದೆಯು ತಿಳಿಸುತ್ತಾರೆ, ಇವರನ್ನು ಸೂಕ್ಷ್ಮವತನದಲ್ಲಿಯೂ ನೋಡುತ್ತೀರಿ, ವೈಕುಂಠದಲ್ಲಿಯೂ ನೋಡುತ್ತೀರಿ. ತಮ್ಮನ್ನೂ ನೋಡಿಕೊಳ್ಳುತ್ತೀರಿ – ನಾವೂ ಸಹ ಮಹಾರಾಜ-ಮಹಾರಾಣಿಯಾಗುತ್ತೇವೆ, ವೈಕುಂಠದ ಸಾಕ್ಷಾತ್ಕಾರವೂ ಆಗುತ್ತದೆ. ಅವಶ್ಯವಾಗಿ ಭಾರತವು ವೈಕುಂಠವಾಗಿತ್ತು, ಶ್ರೀಕೃಷ್ಣ ಪುರಿಯಾಗಿತ್ತು ಎಂದು ಒಪ್ಪುತ್ತಾರೆ. ಇಂದು ಕಂಸ ಪುರಿಯಾಗಿದೆ, ನಾಳೆ ಕೃಷ್ಣ ಪುರಿಯಾಗುತ್ತದೆ. ರಾತ್ರಿಯ ಬದಲಾಗಿ ಹಗಲಾಗಬೇಕಾಗಿದೆ. ಇದು ಅರ್ಧಕಲ್ಪದ ಬೇಹದ್ದಿನ ದಿನ ಮತ್ತು ಅರ್ಧಕಲ್ಪದ ಬೇಹದ್ದಿನ ರಾತ್ರಿಯಾಗಿದೆ. ಅಂಧಕಾರದಲ್ಲಿ ಎಲ್ಲರೂ ಪೆಟ್ಟನ್ನು ತಿನ್ನುತ್ತಲೇ ಇರುತ್ತಾರೆ. ಬ್ರಹ್ಮನ ರಾತ್ರಿ ಸೋ ಬ್ರಾಹ್ಮಣರ ರಾತ್ರಿಯಾಗಿದೆ ಮತ್ತೆ ನೀವು ಬ್ರಾಹ್ಮಣರಿಂದ ದೇವತೆಗಳಾಗುತ್ತೀರಿ. ಸತ್ಯಯುಗದಲ್ಲಿ ಬ್ರಾಹ್ಮಣರಿರುವುದಿಲ್ಲ, ದೇವತೆಗಳಿರುತ್ತಾರೆ.

ಭಾರತವು ಪವಿತ್ರ ರಾಜಾಸ್ಥಾನವಾಗಿತ್ತು ಮತ್ತೆ ಅಪವಿತ್ರ ರಾಜಸ್ಥಾನವಾಗಿದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ಭಾರತವು ಸದಾ ರಾಜಾಸ್ಥಾನವಾಗಿಯೇ ಇರುತ್ತದೆ. ರಾಜಧಾನಿಯು ಪ್ರಾರಂಭದಿಂದ ನಡೆಯುತ್ತಲೇ ಬರುತ್ತದೆ, ಅನ್ಯ ಧರ್ಮದವರದು ಪ್ರಾರಂಭದಿಂದಲೂ ರಾಜಧಾನಿಯಿರುವುದಿಲ್ಲ. ಭಗವಂತನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ಅವರೇ ರಾಜಯೋಗವನ್ನು ಕಲಿಸಿಕೊಡುತ್ತಾರೆ. ಅವರು ನಿರಾಕಾರ, ಜ್ಞಾನ ಸಾಗರ, ಸುಖ ಸಾಗರ…. ಆಗಿದ್ದಾರೆ. ಅವರಿಂದ ನಾವು ಆಸ್ತಿಯನ್ನು ಪಡೆಯುತ್ತಿದ್ದೇವೆಂದು ತಿಳಿದಿದ್ದೀರಿ. ಅವಶ್ಯವಾಗಿ ನಮ್ಮ ಪುರುಷಾರ್ಥದಲ್ಲಿಯೇ ನಿಧಾನತೆಯಿದೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಮಾರ್ಗ ತೋರಿಸುತ್ತೀರಿ. ನನ್ನನ್ನು ನೆನಪು ಮಾಡುತ್ತೀರೆಂದರೆ ನೀವು ಪತಿತರಿಂದ ಪಾವನರಾಗಿ, ಪಾವನ ಪ್ರಪಂಚದ ಮಾಲೀಕರಾಗುತ್ತೀರಿ, ಇದು ಎಷ್ಟು ಸಹಜವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಒಂದುವೇಳೆ ಲೌಕಿಕ ತಂದೆ-ತಾಯಿಯು ಜ್ಞಾನದಲ್ಲಿ ಇದ್ದಾರೆಂದರೆ ಮಕ್ಕಳನ್ನೂ ಸಹ ತಮ್ಮ ಸಮಾನ ಮಾಡಿಕೊಳ್ಳಬೇಕು. ತಾಯಿ-ತಂದೆ ಸತ್ಯವಾದ ಸಂಪಾದನೆ ಮಾಡುತ್ತಾರೆಂದ ಮೇಲೆ ಸತ್ಯವಾದ ಸಂಪಾದನೆಯನ್ನು ಮಾಡಿಸಬೇಕಲ್ಲವೆ. ಕೆಲವು ಮಕ್ಕಳು ಬಹಳ ಒಳ್ಳೆಯವರಿರುತ್ತಾರೆ, ನಾವು ಈ ಆತ್ಮಿಕ ವಿದ್ಯೆಯನ್ನು ಓದಿ ಮನೆ-ಮನೆಗೆ ಸಂದೇಶ ಕೊಡುತ್ತೇವೆಂದು ಹೇಳುತ್ತಾರೆ. ತಂದೆಯೂ ಸಹ ತಿಳಿಸುತ್ತಾರೆ – ನಾನು ಪೈಗಂಬರ್ ಮತ್ತು ಮೆಸೆಂಜರ್ ಆಗಿದ್ದೇನೆ, ನಿಮಗೂ ಸಹ ಸಂದೇಶ ಕೊಡುತ್ತೇನೆ – ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಎಂದು. ಅನ್ಯ ಧರ್ಮ ಸ್ಥಾಪಕರು ಕೇವಲ ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಹಿಂತಿರುಗಿ ಹೋಗಬೇಕೆನ್ನುವ ಸಂದೇಶವನ್ನು ಎಲ್ಲರಿಗೂ ನಾನು ಕೊಡುತ್ತೇನೆ. ಈ ಪ್ರಪಂಚವು ನೀವಿರಲು ಯೋಗ್ಯವಿಲ್ಲ. ನನ್ನನ್ನು ನೆನಪು ಮಾಡಿದರೆ ಪಾವನರಾಗಿ ಬಿಡುತ್ತೀರಿ. ನೀವು ಪಾವನರಾಗಿದ್ದಿರಿ ನಂತರ ರಾವಣನು ಪತಿತರನ್ನಾಗಿ ಮಾಡಿದನು ಪುನಃ ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಸ್ವಲ್ಪ ಸಮಯದ ನಂತರ ಬಾಂಬುಗಳು ಬೀಳುತ್ತವೆಯೆಂದರೆ ಅದೇ ಮಹಾಭಾರತ ಯುದ್ಧವಾಗಿದೆ ಎಂದು ತಿಳಿಯುತ್ತಾರೆ. ಅವಶ್ಯವಾಗಿ ಭಗವಂತನು ಇದ್ದಾನೆಂದು ತಿಳಿಯುತ್ತಾರೆ ಆದರೆ ಗೀತೆಯ ಭಗವಂತನು ಕೃಷ್ಣನೆಂದು ತಿಳಿದಿದ್ದಾರೆ. ಎಷ್ಟೊಂದು ತಬ್ಬಿಬ್ಬಾಗಿದ್ದಾರೆ! ತಬ್ಬಿಬ್ಬಾಗದಿದ್ದರೆ ಭಗವಂತನು ಬರುವ ಅವಶ್ಯಕತೆಯೇ ಇಲ್ಲ. ಭಕ್ತಿಮಾರ್ಗವು ಮರೆತು ಮರೆಸುವಂತಹ ಆಟವೆಂದು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದರೆ ಎಲ್ಲಾ ತಪ್ಪುಗಳು ಭಸ್ಮವಾಗಿ ಬಿಡುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಮೊದಲು ನೀವು ನಿಮ್ಮನ್ನು ದೇಹವೆಂದು ತಿಳಿದಿದ್ದಿರಿ, ಈಗ ತಮ್ಮನ್ನು ದೇಹೀ ಎಂದು ತಿಳಿಯುತ್ತೀರಿ. ಈ ಎಚ್ಚರಿಕೆಯನ್ನು ತಂದೆಯೇ ಕೊಡುತ್ತಾರೆ – ಮಕ್ಕಳೇ ದೇಹೀ-ಅಭಿಮಾನಿಗಳಾಗಿ. ಇಲ್ಲಿ ನೀವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಲ್ಲವೆ. ಅಲ್ಲಿ ಸೇವಾಕೇಂದ್ರದಲ್ಲಿ ಮಕ್ಕಳು ಕುಳಿತು ಶಿವ ತಂದೆಯು ಹೀಗೆ ತಿಳಿಸುತ್ತಾರೆಂದು ಹೇಳುತ್ತಾರೆ, ಇಲ್ಲಂತೂ ನಾನು ಕುಳಿತು ಡೈರೆಕ್ಟ್ ಆತ್ಮಗಳೊಂದಿಗೆ ಮಾತನಾಡುತ್ತೇನೆ. ತಂದೆಯು ಇವರ ಮೂಲಕ ನಮಗೆ ತಿಳಿಸುತ್ತಿದ್ದಾರೆಂದು ನೀವು ಮಕ್ಕಳು ತಿಳಿದಿದ್ದೀರಿ. ಇದಂತೂ ಬಹಳ ದೊಡ್ಡ ಮೇಳವಾಗಿದೆ. ತಂದೆಯು ತಿಳಿಸುತ್ತಾರೆ – ನಿರಂತರವಾಗಿ ನನ್ನನ್ನು ನೆನಪು ಮಾಡಿ. ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆ ಮತ್ತು ಸ್ವರ್ಗವನ್ನು ನೆನಪು ಮಾಡಬೇಕು, ಯಾವುದೇ ತಪ್ಪನ್ನು ಮಾಡಬಾರದು. ಒಂದುವೇಳೆ ವಿಕರ್ಮ ಮಾಡಿದರೆ ನೂರು ಪಟ್ಟು ಆಗಿ ಬಿಡುತ್ತದೆ. ವಿಕರ್ಮ ಮಾಡಿಸುವುದು ಮಾಯೆಯಾಗಿದೆ, ಅದರ ಮೇಲೆ ವಿಜಯ ಗಳಿಸಬೇಕು ಆದ್ದರಿಂದ ಹನುಮಂತ, ಮಹಾವೀರನ ಕಥೆಯಿದೆ, ನೀವು ಹನುಮಂತ ಮಹಾವೀರರಾಗಿದ್ದೀರಿ. ನಾವು ತಂದೆಯ ಮಗುವಾಗಿದ್ದೇವೆ, ಮಾಯೆಯಿಂದ ಸೋಲಲು ಸಾಧ್ಯವಿಲ್ಲ. ನಾವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಸತೋಪ್ರಧಾನ, ವಿಕರ್ಮಾಜೀತರಾಗಿ ಬಿಡುತ್ತೇವೆ. ಇಲ್ಲದಿದ್ದರೆ ಪದವಿ ಭ್ರಷ್ಟವಾಗುವುದು, ಪುರುಷಾರ್ಥಿ ಮಕ್ಕಳು ಯಾರಿರುತ್ತಾರೆಯೋ ಅವರ ತಮ್ಮ ಜೀವನದ ಮೇಲೆ ಅನುಕಂಪ ತೋರಿಸಿಕೊಳ್ಳುತ್ತಾರೆ. ಏನೇ ಆಗಲಿ, ನೆನಪಿನ ಯಾತ್ರೆಯಲ್ಲಿಯೇ ಇರುತ್ತೇವೆ, ಅಚಲ-ಅಡೋಲ, ಸ್ಥಿರವಾಗಿರುತ್ತೇವೆಂದು ಹೇಳುತ್ತಾರೆ. ವಿನಾಶವಂತೂ ಆಗಲೇಬೇಕಾಗಿದೆ. ಎಲ್ಲರ ಚಿಕ್ಕಪ್ಪ, ಕಾಕಾ, ಮಾವ, ಗುರು-ಗೋಸಾಯಿ ಎಲ್ಲರೂ ಸಮಾಪ್ತಿಯಾಗಲೇಬೇಕು. ನಾನು ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವವನಾಗಿದ್ದೇನೆಂದು ಸದ್ಗುರು ಹೇಳುತ್ತಾರೆ. ಮನುಷ್ಯರಂತೂ ಅವಶ್ಯವಾಗಿ ಅಂಧಕಾರದಲ್ಲಿದ್ದಾರೆ, ಶಿವ ತಂದೆಯು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆಂದು ನೀವು ತಿಳಿದಿದ್ದೀರಿ. ಕಾಲ ಕಬಳಿಸಿತೆಂದು ಹೇಳುತ್ತೀರಲ್ಲವೆ ಆದರೆ ನಾನು ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ, ಆತ್ಮವು ಶರೀರವನ್ನು ಬಿಟ್ಟು ಹೋಗುತ್ತದೆ. ಮೃತ್ಯುವು ತೆಗೆದುಕೊಂಡು ಹೋಗುವುದಿಲ್ಲ, ಆತ್ಮವೇ ಶರೀರವನ್ನು ಬಿಟ್ಟು ಬರಬೇಕಾಗುತ್ತದೆ. ನಿಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಸ್ವಯಂ ನಾನೇ ಬಂದಿದ್ದೇನೆ. ತಂದೆಯ ಯಾರನ್ನಾದರೂ ಸಾಯಿಸಲು ಬರುತ್ತಾರೆಯೇ? ಇಲ್ಲ. ನೀವೀಗ ಹಳೆಯ ಶರೀರವನ್ನು ಬಿಡಬೇಕಾಗಿದೆ. ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಬೇಕಾಗಿದೆ. ಈ ಪಂಚತತ್ವಗಳೂ ತಮೋಪ್ರಧಾನವಾಗಿದೆ ಆದ್ದರಿಂದಲೇ ಶರೀರವೂ ಸಹ ಹಾಗೆಯೇ ಇದೆ. ಅಲ್ಲಿ ಸತೋಪ್ರಧಾನ ತತ್ವಗಳಿರುವುದರಿಂದ ನಿಮ್ಮ ಶರೀರವೂ ಸಹ ಸುಂದರವಾಗಿರುತ್ತದೆ. ನಾನು ಮತ್ತೆ ಸತ್ಯಯುಗದ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ನೀವೇ 84 ಜನ್ಮಗಳನ್ನು ಭೋಗಿಸುತ್ತೀರಿ, ನೀವು ನಿಮ್ಮ ಧರ್ಮವನ್ನು ಮರೆತು ಬಿಟ್ಟಿದ್ದೀರಿ, ಮತ್ತ್ಯಾರೂ ಸಹ ತಮ್ಮ ಧರ್ಮವನ್ನು ಮರೆತಿಲ್ಲ. ವಾಸ್ತವದಲ್ಲಿ ನಾವು ದೇವಿ-ದೇವತಾ ಧರ್ಮದವರು ಅಷ್ಟು ಶ್ರೇಷ್ಠರು ನಂತರ ಹೇಗೆ ಕನಿಷ್ಟರಾದೆವು ಎಂದು ನೀವು ತಿಳಿದಿದ್ದೀರಿ. ತಂದೆಯು ಕಲ್ಪ-ಕಲ್ಪವೂ ನಿಮಗೇ ತಿಳಿಸುತ್ತಾರೆ, ನೀವು ಮತ್ತೆ ಅನ್ಯರಿಗೆ ತಿಳಿಸುತ್ತಿರುತ್ತೀರಿ. ಈಗ 84 ಜನ್ಮಗಳ ಚಕ್ರವು ಸಂಪೂರ್ಣವಾಗಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ. ಸ್ವರ್ಗದ ಮಾಲೀಕರಾಗಲು ತಮ್ಮನ್ನು ತಾವು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ, ಅದೂ ಸಹ ನೆನಪಿನಿಂದಲೇ ಆಗಲು ಸಾಧ್ಯ. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ- ಬಾಬಾ, ನೀವು ಹೇಗೆ ಬರುತ್ತೀರಿ ಇದು ಬಹಳ ಆಶ್ಚರ್ಯಕರವಾಗಿದೆ, ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ಈಗ ನಾವು ತಿಳಿದಿದ್ದೇವೆ – ಅವರೇ ಎದುರಿಗೆ ಮಾತನಾಡುತ್ತಿದ್ದಾರೆ. ಅವೆಲ್ಲವೂ ಹೇಳಿ-ಕೇಳಿರುವಂತಹ ಭಕ್ತಿಯ ಮಾತುಗಳಾಗಿವೆ. ಈಗಂತೂ ನಾವೆಲ್ಲಾ ಆತ್ಮಗಳಿಗೆ ತಂದೆಯು ಸಿಕ್ಕಿದ್ದಾರೆ, ಆತ್ಮನಿಗೆ ತಂದೆಯು ಸಿಕ್ಕಿದ್ದಾರೆಂದರೆ ಬಂದು ಅವರನ್ನು ಪ್ರೀತಿಯಿಂದ ಮಿಲನ ಮಾಡುತ್ತಾರೆ. ಮಕ್ಕಳು ತಂದೆಯನ್ನು ಬಹಳ ಪ್ರೀತಿಯಿಂದ ಮಿಲನ ಮಾಡುತ್ತಾರೆ, ಇಲ್ಲಂತೂ ಆ ನಿರಾಕಾರ ತಂದೆಯು ಗುಪ್ತವಾಗಿದ್ದಾರೆ ಆದ್ದರಿಂದಲೇ ನೀವು ಯಾವಾಗ ಈ ಸಾಕಾರ ತಂದೆಯನ್ನು ಮಿಲನ ಮಾಡುತ್ತೀರೆಂದರೂ ಶಿವ ತಂದೆಯನ್ನು ನೆನಪು ಮಾಡುತ್ತಾ ಮಿಲನ ಮಾಡಿ. ಮನುಷ್ಯರಂತೂ ಸ್ವಲ್ಪವೂ ತಿಳಿದಿಲ್ಲ. ನಿಮ್ಮಲ್ಲಿಯೂ ಸಹ ಯಾರನ್ನು ತಿಳಿದಿದ್ದಾರೆಯೋ ಅವರು ನನ್ನವರಾಗಿ ಮತ್ತೆ ಮರೆತು ಬಿಡುತ್ತಾರೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಬಾಬಾ, ನಾನು ನಿಮ್ಮವನಾಗಿದ್ದೇನೆಂದು ಪ್ರತಿಜ್ಞೆಯನ್ನೂ ಮಾಡುತ್ತಾರೆ. ಪುರುಷರಾಗಲಿ ಅಥವಾ ಸ್ತ್ರೀಯಾಗಲಿ ಎರಡೂ ಆತ್ಮಗಳೂ ಹೇಳುತ್ತಾರೆ ಆದರೆ ಪುರುಷನ ಶರೀರದಲ್ಲಿದ್ದರೆ ನಾನು ನಿನ್ನವನಾಗಿದ್ದೇನೆಂದು ಹೇಳುತ್ತಾರೆ, ಸ್ತ್ರೀಯಾಗಿದ್ದರೆ ನಾನು ನಿನ್ನವಳಾಗಿದ್ದೇನೆಂದು ಹೇಳುತ್ತಾರೆ, ಬಾಬಾ, ನಾನು ನಿಮ್ಮಿಂದ ಸಂಪೂರ್ಣ ಆಸ್ತಿಯನ್ನೂ ಪಡೆಯುತ್ತೇನೆ, ನೆನಪೂ ಮಾಡುತ್ತೇನೆ. ನೆನಪಿನ ವಿನಃ ತುಕ್ಕು ಬಿಟ್ಟು ಹೋಗಲು ಸಾಧ್ಯವಿಲ್ಲ. ತಮೋಪ್ರಧಾನರಿಂದ ಸತೋಪ್ರಧಾನರಾಗಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ನಿಮಗೆ ಅಖಂಡ, ಅಟಲ, ಸುಖ-ಶಾಂತಿ, ಸಂಪತ್ತಿನ 21 ಜನ್ಮಗಳ ರಾಜ್ಯ ಸಿಗುತ್ತದೆ. ಸ್ವರ್ಗದ ರಚಯಿತ ತಂದೆಯು ಅವಶ್ಯವಾಗಿ ತಮ್ಮ ಆಸ್ತಿಯನ್ನು ಕೊಡುತ್ತಾರೆ. ಗಾಯನವೂ ಇದೆ, ಪರಬ್ರಹ್ಮದಲ್ಲಿರುವ ಪರಮಪಿತ ಪರಮಾತ್ಮನನ್ನು ಪಡೆಯುವ ಇಚ್ಛೆಯಿತ್ತು, ಅವರಂತೂ ಒಂದೇ ಬಾರಿ ಬರುತ್ತಾರೆ. ಇದು ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಕೆಲವರಂತೂ ತಿಳಿದುಕೊಳ್ಳುವುದೇ ಇಲ್ಲ, ಸ್ವಲ್ಪ ದೊಡ್ಡದಾದ ಯುದ್ಧ ನಡೆಯುತ್ತದೆ ಎಂದರೆ ಮುಂದೆ ಹೋದಂತೆ ಕಣ್ಣು ತೆರೆಯುತ್ತದೆ. ವಾಸ್ತವದಲ್ಲಿ ಈ ಯಜ್ಞವೂ ರಚನೆಯಾಗಿದೆ ಮತ್ತು ಯುದ್ಧವೂ ಇದೆ. ಈ ಯಜ್ಞದ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ರುದ್ರ ಜ್ಞಾನ ಯಜ್ಞವು ವಿನಾಶಕ್ಕಾಗಿಯೇ ರಚನೆಯಾಗಿದೆ, ವಿನಾಶವಾಗದೇ ಇರಲಿ ಮತು ಶಾಂತಿಯಿರಲಿ ಎಂದು ಅವರು ಯಜ್ಞಗಳನ್ನು ರಚಿಸುತ್ತಾರೆ. ಈ ಯಜ್ಞವು ಪುನಃ ರಚನೆಯಾಗುತ್ತದೆ, ವಿನಾಶದ ನಂತರ ಏನಾಗುವುದು ಎಂದು ಅವರಿಗೆ ಗೊತ್ತಿಲ್ಲ. ಈಗ ನೀವು ಮಕ್ಕಳು ಇಡೀ ಪ್ರಪಂಚದ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದೀರಿ, ಎಲ್ಲರ ಬೇಹದ್ದಿನ ಜನ್ಮಗಳ ಕಥೆಯನ್ನೂ ತಿಳಿದಿದ್ದೀರಿ. ನಾವು ಪರಮಪಿತ ಪರಮಾತ್ಮನ ಜೀವನದ ಕಥೆಯನ್ನು ತಿಳಿಸುತ್ತೇವೆ ಎಂದಲ್ಲ, ಎಲ್ಲರೂ ಪರಮಾತ್ಮನನ್ನೇ ಕರೆಯುತ್ತಾರಲ್ಲವೆ. ಕ್ಷಣ-ಕ್ಷಣವೂ ಅವರನ್ನೇ ನೆನಪು ಮಾಡುತ್ತಾರೆ. ಭಗವಂತನು ಮಗುವನ್ನು ಕೊಟ್ಟನು, ಇದನ್ನು ಮಾಡಿದನು… ಎಂದು ಹೇಳುತ್ತಾರೆ. ಯಾರ ವಸ್ತುವಾಗಿತ್ತೋ ಅದನ್ನು ಹಿಂತಿರುಗಿ ತೆಗೆದುಕೊಂಡನೆಂದು ಕೆಲವರು ಹೇಳುತ್ತಾರೆ. ಅಂತಹ ತಿಳುವಳಿಕೆಯುಳ್ಳ ಪುರುಷರೂ ಇರುತ್ತಾರೆ, ಅನೇಕ ಪ್ರಕಾರದ ಮನುಷ್ಯರಿದ್ದಾರೆ. ಈಗ ನಿಮಗೆ ತಂದೆಯು ಸಿಕ್ಕಿದ್ದಾರೆಂದರೆ ತಂದೆಯನ್ನೇ ನೆನಪು ಮಾಡಬೇಕು, ಇದರಿಂದಲೇ ಸಂಪಾದನೆಯಾಗುವುದು. ನೀವು ವಿಷ್ಣು ಪುರಿಯ ಮಾಲೀಕರಾಗಿ ಬಿಡುವಿರಿ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೂ ಎಲ್ಲವನ್ನೂ ನೀವು ತಿಳಿದಿದ್ದೀರಿ. ತಂದೆಯ ಬುದ್ಧಿಯಲ್ಲಿ ಏನು ವಿಚಾರವಿದೆಯೋ ಅದೇ ರೀತಿ ನಿಮ್ಮ ಬುದ್ಧಿಯಲ್ಲಿಯೂ ಇದೆ ಆದ್ದರಿಂದಲೇ ಅವರನ್ನು ಜ್ಞಾನ ಸಾಗರ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ಈಗ ನೀವು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೀವು ಮಕ್ಕಳು ಅಚಲ, ಸ್ಥಿರವಾಗಿರಬೇಕಾಗಿದೆ, ಮಾಯೆಯು ಘಳಿಗೆ-ಘಳಿಗೆಗೆ ಬಂದು ಅಲುಗಾಡಿಸುತ್ತಲೇ ಇರುತ್ತದೆಯೆಂದಲ್ಲ. ಎಂದೂ ಸಹ ಮುಟ್ಟಿದರೆ ಮುನಿ ಆಗಬಾರದು. ತಂದೆಯನ್ನು ನೆನಪು ಮಾಡದೇ ಇರುವುದರಿಂದ ಬಾಡಿ ಹೋಗುತ್ತಾರೆ. ನೆನಪು ಮಾಡುವ ಪುರುಷಾರ್ಥವನ್ನು ನೀವು ಮಾಡುತ್ತಿದ್ದೀರಿ. ಸಮಯವು ಸಮೀಪ ಬಂದಿತೆಂದರೆ ಆಗ ನಿಮಗೆ ನಿಮ್ಮ ಪುರುಷಾರ್ಥವು ಸಂಪೂರ್ಣವಾಯಿತು, ಅಂತಿಮ ಸಮಯವು ಬಂದು ಬಿಟ್ಟಿತೆಂದು ತಿಳಿಯುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಆತ್ಮಿಕ ವಿದ್ಯೆಯನ್ನು ಓದಿ ಸತ್ಯ ಸಂಪಾದನೆಯನ್ನು ಮಾಡಿಕೊಳ್ಳಬೇಕು ಮತ್ತು ಅನ್ಯರಿಗೆ ಮಾಡಿಸಬೇಕಾಗಿದೆ. ಈಗ ಯಾವುದೇ ವಿಕರ್ಮ ಮಾಡಬಾರದು.

2. ಮುಂಜಾನೆ ಎದ್ದು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ, ಚಿಕ್ಕ-ಪುಟ್ಟ ಮಾತುಗಳಲ್ಲಿ ಮುಟ್ಟಿದರೆ ಮುನಿಯಾಗಬಾರದು. ಸ್ಥಿತಿಯನ್ನು ಅಚಲ-ಅಡೋಲವಾಗಿ ಇಟ್ಟುಕೊಳ್ಳಬೇಕಾಗಿದೆ.

ವರದಾನ:-

ಯಾವುದೇ ಸಂಕಲ್ಪ ಮಾಡಿ, ಮಾತನಾಡಿರಿ, ಕರ್ಮ ಮಾಡಿರಿ, ಸಂಬಂಧ ಅಥವಾ ಸಂಪರ್ಕದಲ್ಲಿ ಬನ್ನಿರಿ, ಕೇವಲ ಇದರ ಪರಿಶೀಲನೆ ಮಾಡಿರಿ – ಇದೆಲ್ಲವೂ ತಂದೆಯ ಸಮಾನವಾಗಿ ಇದೆಯೇ? ಮೊದಲು ಸಂತುಲನೆ ಮಾಡಿರಿ ನಂತರ ಕಾರ್ಯ ರೂಪಕ್ಕೆ ತನ್ನಿರಿ. ಹೇಗೆ ಸ್ಥೂಲವಾಗಿಯೂ ಕೆಲವು ಆತ್ಮರಲ್ಲಿ ಮೊದಲು ಪರಿಶೀಲನೆ ಮಾಡಿದ ನಂತರ ಸ್ವೀಕಾರ ಮಾಡುವ ಸಂಸ್ಕಾರವಿರುತ್ತದೆ. ಅದೇ ರೀತಿ ತಾವು ಮಹಾನ್ ಪವಿತ್ರ ಆತ್ಮರಾಗಿದ್ದೀರಿ ಅಂದಮೇಲೆ ಪರಿಶೀಲನೆ ಮಾಡುವ ಯಂತ್ರದ ಗತಿಯನ್ನು ತೀವ್ರಗೊಳಿಸಿರಿ. ಇದನ್ನು ತಮ್ಮ ನಿಜ ಸಂಸ್ಕಾರವನ್ನಾಗಿ ಮಾಡಿಕೊಳ್ಳಿರಿ – ಇದೇ ಅತಿ ಶ್ರೇಷ್ಠವಾದ ಮಹಾನತೆಯಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top