02 December 2021 KANNADA Murli Today | Brahma Kumaris

Read and Listen today’s Gyan Murli in Kannada

December 1, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಿರಿ, ಎಷ್ಟು ಆತ್ಮಾಭಿಮಾನಿ ಆಗುತ್ತೀರೋ ಅಷ್ಟು ತಂದೆಯೊಂದಿಗೆ ಪ್ರೀತಿಯಿರುವುದು”

ಪ್ರಶ್ನೆ:: -

ದೇಹೀ-ಅಭಿಮಾನಿ ಮಕ್ಕಳಿಗೆ ಯಾವ ತಿಳುವಳಿಕೆಯು ಸಹಜವಾಗಿ ಬಂದು ಬಿಡುತ್ತದೆ?

ಉತ್ತರ:-

ತಮಗಿಂತಲೂ ಹಿರಿಯರಿಗೆ ಗೌರವವನ್ನು ಹೇಗೆ ಕೊಡುವುದು ಎಂಬ ತಿಳುವಳಿಕೆಯು ದೇಹೀ-ಅಭಿಮಾನಿ ಮಕ್ಕಳಲ್ಲಿ ಬಂದು ಬಿಡುತ್ತದೆ. ಅಭಿಮಾನವಂತೂ ಒಮ್ಮೆಲೆ ಶವದಂತೆ ಮಾಡಿ ಬಿಡುತ್ತದೆ, ನೆನಪು ಮಾಡಲು ಸಾಧ್ಯವೇ ಇಲ್ಲ. ಒಂದುವೇಳೆ ದೇಹೀ-ಅಭಿಮಾನಿಯಾಗಿದ್ದರೆ ಬಹಳ ಖುಷಿಯೂ ಇರುವುದು, ಧಾರಣೆಯೂ ಚೆನ್ನಾಗಿರುವುದು. ವಿಕರ್ಮವೂ ವಿನಾಶವಾಗುತ್ತದೆ ಮತ್ತು ಹಿರಿಯರಿಗೆ ಗೌರವವನ್ನೂ ಕೊಡುತ್ತೀರಿ. ಯಾರು ಸತ್ಯ ಹೃದಯದವರು ಇರುತ್ತಾರೆಯೋ ಅವರು ಎಷ್ಟು ಸಮಯ ನಾವು ದೇಹೀ-ಅಭಿಮಾನಿಯಾಗಿದ್ದು ತಂದೆಯನ್ನು ನೆನಪು ಮಾಡುತ್ತೇವೆಂದು ತಿಳಿದುಕೊಳ್ಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅವರು ನಮ್ಮನ್ನು ಅಗಲುವುದಿಲ್ಲ……

ಓಂ ಶಾಂತಿ. ಇದನ್ನು ಯಾರು ಹೇಳಿದರು? ಆತ್ಮವು ಹೇಳಿತು ಏಕೆಂದರೆ ಡ್ರಾಮಾ ಪ್ಲಾನನುಸಾರ ನೀವೀಗ ಆತ್ಮಾಭಿಮಾನಿಗಳಾಗುತ್ತಿದ್ದೀರಿ. ಅರ್ಧಕಲ್ಪ ದೇಹಾಭಿಮಾನಿಯಾಗುತ್ತೀರಿ, ಅರ್ಧಕಲ್ಪ ಆತ್ಮಾಭಿಮಾನಿಯಾಗುತ್ತೀರಿ. ನೀವೀಗ ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಬೇಕಾಗಿದೆ, ತಂದೆಯು ಪದೇ-ಪದೇ ಹೇಳುತ್ತಾರೆ – ಅಶರೀರಿ ಭವ, ಆತ್ಮಾಭಿಮಾನಿ ಭವ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಅವರು ದೂರ ಕುಳಿತಿದ್ದಾರೆ. ನಾವು ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ತಂದೆಯ ಶ್ರೀಮತದ ಅನುಸಾರವೇ ನಡೆಯಬೇಕಾಗಿದೆ, ಇದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಮತವೆಂದು ಹೇಳಲಾಗುತ್ತದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ಈಗ ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧವನ್ನು ಬಿಡಿ, ಆತ್ಮಾಭಿಮಾನಿಯಾಗುವ ಬಹಳ-ಬಹಳ ಅಭ್ಯಾಸ ಮಾಡಬೇಕಾಗಿದೆ. ಶರೀರವಂತೂ ವಿನಾಶವಾಗಲಿದೆ, ಆತ್ಮ ಅವಿನಾಶಿಯಾಗಿದೆ. ವಿನಾಶಿ ಶರೀರವನ್ನು ನೆನಪು ಮಾಡುವ ಕಾರಣ ಆತ್ಮವನ್ನು ಮರೆತು ಕುಳಿತಿದ್ದಾರೆ. ಆತ್ಮವೆಂದರೇನು ಎಂಬುದನ್ನೂ ಸಹ ಮಕ್ಕಳಿಗೆ ತಿಳಿಸಲಾಗುತ್ತದೆ. ಆತ್ಮವು ಚಿಕ್ಕ ನಕ್ಷತ್ರವಾಗಿದೆ ಎಂದು ಹೇಳುತ್ತಾರೆ. ಅದು ಈ ಕಣ್ಣುಗಳಿಗೆ ಕಾಣಿಸುವುದಿಲ್ಲ, ಅದನ್ನು ದಿವ್ಯ ದೃಷ್ಟಿಯಿಲ್ಲದೆ ನೋಡಲು ಸಾಧ್ಯವಿಲ್ಲ. ಆತ್ಮವನ್ನು ನೋಡಲು ಬಹಳ ಪ್ರಯತ್ನ ಪಡುತ್ತಾರೆ ಆದರೆ ನೋಡಲು ಸಾಧ್ಯವಿಲ್ಲ. ಭಲೆ ಯಾರಾದರೂ ದಿವ್ಯ ದೃಷ್ಟಿಯಿಂದ ನೋಡಲೂಬಹುದು ಆದರೆ ಇದೇನು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಆತ್ಮವು ದೊಡ್ಡ ವಸ್ತುವಲ್ಲ, ಚಿಕ್ಕ ನಕ್ಷತ್ರ ಮಾದರಿಯಾಗಿದೆ. ಎಷ್ಟು ಚಿಕ್ಕ ಬಿಂದುವಾಗಿದೆ, ಈ ಮಾತುಗಳು ಯಾರದೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ಕಷ್ಟವಿದೆ ಏಕೆಂದರೆ ಅರ್ಧಕಲ್ಪದಿಂದ ದೇಹಾಭಿಮಾನದಲ್ಲಿದ್ದಿರಿ.

ತಂದೆಯು ತಿಳಿಸುತ್ತಾರೆ – ನಿಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ನಾವಾತ್ಮರು ಅಲ್ಲಿನ ನಿವಾಸಿಗಳಾಗಿದ್ದೇವೆ. ಈ ಶರೀರವನ್ನು ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ, ಈ ಶರೀರವು ಪಂಚತತ್ವಗಳಿಂದಾಗಿದೆ. ಯಾವಾಗ ಪಿಂಡ(ಶರೀರ)ವು ತಯಾರಾಗುತ್ತದೆಯೋ ಆಗ ಸೂಕ್ಷ್ಮಆತ್ಮವು ಇದರಲ್ಲಿ ಪ್ರವೇಶ ಮಾಡುತ್ತದೆ, ಚೈತನ್ಯತೆ ಬರುತ್ತದೆ. ಆತ್ಮವು ಸತ್ಯ, ಚೈತನ್ಯವಾಗಿದೆ ಮತ್ತು ಪರಮಪಿತ ಪರಮಾತ್ಮನು ಸತ್ಯ, ಚೈತನ್ಯವಾಗಿದ್ದಾರೆ. ಪರಮ ಆತ್ಮನಾಗಿದ್ದಾರೆ. ಅವರು ದೊಡ್ಡ ಗಾತ್ರದಲ್ಲಿಲ್ಲ. ಆತ್ಮವು ಚಿಕ್ಕ ಬಿಂದುವಾಗಿದೆ. ಹೇಗೆ ಇವರಲ್ಲಿ ಜ್ಞಾನವಿದೆಯೋ ಹಾಗೆಯೇ ನೀವಾತ್ಮರಲ್ಲಿಯೂ ಜ್ಞಾನವಿದೆ. ಇಷ್ಟು ಚಿಕ್ಕಆತ್ಮನಲ್ಲಿ ಸಂಪೂರ್ಣ ಜ್ಞಾನವಿದೆ, ಇದು ಬಹಳ ಅದ್ಭುತವಾಗಿದೆ. ಆದರೆ ಮಕ್ಕಳು ಪದೇ-ಪದೇ ಈ ಮಾತುಗಳನ್ನು ಮರೆತು ಹೋಗುತ್ತಾರೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಈಗ ನೀವಾತ್ಮರು ಈ ಶರೀರದ ಮೂಲಕ ವಿಶ್ವದ ಮಾಲೀಕರಾಗುತ್ತೀರಿ ಅರ್ಥಾತ್ ದೇವಿ-ದೇವತೆಗಳಾಗುತ್ತೀರಿ. ತಂದೆಯಂತೂ ಭಗವಂತನಾಗಿದ್ದಾರೆ ಆದರೆ ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳುತ್ತಾರೆ ಏಕೆಂದರೆ ತಂದೆಯೇ ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಈ ಜ್ಞಾನದಿಂದ ನೋಡಿ, ಹೇಗಾಗಿ ಬಿಡುತ್ತಾರೆ. ಯಾರು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವರೋ ಅವರು ಒಳ್ಳೆಯ ಸಂಪಾದನೆ ಮಾಡುತ್ತಾರೆ. ಹೇಗೆ ಪ್ರಪಂಚದಲ್ಲಿ ಯಾರಾದರೂ ಬಹಳ ಸುಂದರವಾಗಿದ್ದರೆ ಅವರಿಗೆ ಬಹಳ ಬಹುಮಾನವು ಸಿಗುತ್ತದೆ. ಮಿಸ್ ಇಂಡಿಯಾ, ಮಿಸ್ ಅಮೇರಿಕಾ ಎಂದು ಹೇಳುತ್ತಾರೆ. ಶರೀರದ ಜೊತೆ ಅವರು ಎಷ್ಟು ಪರಿಶ್ರಮ ಪಡುತ್ತಾರೆ! ಸತ್ಯಯುಗದಲ್ಲಂತೂ ಆಕರ್ಷಣೆ ಮಾಡುವಂತಹ ಸ್ವಾಭಾವಿಕ ಸೌಂದರ್ಯವಿರುತ್ತದೆ, ಶರೀರವು ಸತೋಪ್ರಧಾನ ಪ್ರಕೃತಿಯಿಂದ ಆಗುತ್ತದೆಯಲ್ಲವೆ. ಅವರು ಎಷ್ಟು ಆಕರ್ಷಿಸುತ್ತದೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರ ಚಿತ್ರಗಳು ಎಲ್ಲರನ್ನು ಎಷ್ಟು ಮನ ಸೆಳೆಯುತ್ತದೆ. ವಾಸ್ತವದಲ್ಲಿ ಇಲ್ಲಿ ಅವರದೂ ಸಹ ಆಕ್ಯೂರೇಟ್ ಚಿತ್ರವಾಗುವುದಿಲ್ಲ. ಅಲ್ಲಂತೂ ಸತೋಪ್ರಧಾನರಾಗಿರುತ್ತಾರೆ ಆದ್ದರಿಂದ ಸ್ವಾಭಾವಿಕ ಸೌಂದರ್ಯವಿರುತ್ತದೆ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ. ಅವರಂತೂ ಹೇ ಪತಿತ-ಪಾವನ ಎಂದು ಹಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಹೇಗೆ ಬುದ್ಧಿ ಇಲ್ಲದವರಂತೆ ಕೂಗುತ್ತಾರೆ. ಹೇ ಭಗವಂತ ದಯೆ ತೋರಿಸಿ ಎಂದು. ಆದರೆ ಭಗವಂತ ಯಾರು ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯನ್ನು ಅರಿತಾಗಲೇ ರಚನೆಯನ್ನೇ ಅರಿತುಕೊಳ್ಳುವರು ಆದ್ದರಿಂದ ಋಷಿ-ಮುನಿ ಮೊದಲಾದವರೆಲ್ಲರೂ ನಮಗೂ ಗೊತ್ತಿಲ್ಲ ಎಂದು ಹೇಳುತ್ತಾ ಹೋದರು. ಇದಂತೂ ಪೂರ್ಣ ಸತ್ಯವಾಗಿದೆ. ರಚಯಿತ ಮತ್ತು ರಚನೆಯನ್ನು ಯಾರೂ ಅರಿತುಕೊಂಡಿಲ್ಲ. ಒಂದುವೇಳೆ ಅರಿತುಕೊಂಡರೆ ವಿಶ್ವದ ಮಾಲೀಕರಾಗಿ ಬಿಡುವರು.

ನೀವೀಗ ತಿಳಿದುಕೊಂಡಿದ್ದೀರಿ – ಈ ಲಕ್ಷ್ಮೀ-ನಾರಾಯಣರನ್ನೂ ಸಹ ಈ ರೀತಿ ಮಾಡುವವರು ತಂದೆಯೇ ಆಗಿದ್ದಾರೆ. ನೀವೀಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ ಆದರೆ ಅರ್ಧಕಲ್ಪ ದೇಹಾಭಿಮಾನದಲ್ಲಿರುವ ಕಾರಣ ಇಷ್ಟು ಗೌರವ ಕೊಡುವುದಿಲ್ಲ. ಆತ್ಮಾಭಿಮಾನಿಯಾಗುವುದೇ ಇಲ್ಲ. ದೇಹೀ-ಅಭಿಮಾನಿಗಳಾಗುವುದರಿಂದ ದಿನ ಪ್ರತಿದಿನ ನಿಮ್ಮ ಗೌರವವು ಹೆಚ್ಚುತ್ತಾ ಹೋಗುವುದು. ಯಾವಾಗ ಪೂರ್ಣ ದೇಹೀ-ಅಭಿಮಾನಿಗಳಾಗುವಿರೋ ಆಗ ಗೌರವವನ್ನು ಇಡುತ್ತೀರಿ. ಸ್ಥಿತಿಯು ಸುಧಾರಣೆಯಾಗುತ್ತಾ ಹೋಗುವುದು, ಖುಷಿಯೂ ಇರುವುದು. ನಂಬರ್ವಾರಂತೂ ಇರುತ್ತಾರಲ್ಲವೆ. ಹೇಗೆ ತಂದೆಯು ನಿಮಗೆ ತಿಳಿಸುತ್ತಾರೆಯೋ ಹಾಗೆಯೇ ನೀವೂ ಸಹ ಅನ್ಯರಿಗೆ ಯುಕ್ತಿಯಿಂದ ತಿಳಿಸುತ್ತಾ ಇರಿ – ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ನಿಮ್ಮ 84 ಜನ್ಮಗಳ ಚಕ್ರವು ಪೂರ್ಣವಾಯಿತು, ಹಿಂತಿರುಗಿ ಹೋಗಬೇಕಾಗಿದೆ. ನಾವಾತ್ಮರು ಮನೆಯಿಂದ ಇಲ್ಲಿ ಬಂದು ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತಿದ್ದೇವೆ. ಇಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡೆವು ಎಂಬುದೂ ಸಹ ಬುದ್ಧಿಯಲ್ಲಿ ಜ್ಞಾನವಿದೆ. ದೇಹೀ-ಅಭಿಮಾನಿಗಳು ಆಗುವುದರಲ್ಲಿಯೇ ಪರಿಶ್ರಮವಿದೆ. ಪದೇ-ಪದೇ ಮಾಯೆಯು ದೇಹಾಭಿಮಾನಿಗಳನ್ನಾಗಿ ಮಾಡುತ್ತದೆ, ನೀವೀಗ ಮಾಯೆಯ ಮೇಲೆ ಜಯ ಗಳಿಸಿ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಏಕಾಂತದಲ್ಲಿ ಕುಳಿತು ವಿಚಾರ ಮಾಡಿ – ನಾವಾತ್ಮರಾಗಿದ್ದೇವೆ, ತಂದೆಯು ತಿಳಿಸಿದ್ದಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಈ ದೇಹದಲ್ಲಿಯೂ ಮೋಹವನ್ನು ಇಟ್ಟುಕೊಳ್ಳಬೇಡಿ, ನಾವಾತ್ಮರು ಅವಿನಾಶಿಯಾಗಿದ್ದೇವೆ. ನಾವು ಸಹೋದರರಲ್ಲಿಯೂ ಬುದ್ಧಿಯೋಗವನ್ನು ಇಡಬಾರದು. ಸಹೋದರನಿಗೆ ಆಸ್ತಿಯು ಸಿಗುತ್ತದೆಯೇ! ಯಾವುದೇ ಆತ್ಮನನ್ನಾಗಲಿ, ಸಹೋದರ ಶರೀರವನ್ನಾಗಲಿ ನೆನಪು ಮಾಡಬಾರದು. ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆಸ್ತಿಯು ತಂದೆಯಿಂದಲೇ ಸಿಗುವುದು. ನಾವಾತ್ಮರು ನಮ್ಮ ಮನೆಗೆ ಹೋಗುತ್ತೇವೆ, ನಂತರ ಸತ್ಯಯುಗದಲ್ಲಿ ಬಂದು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಅಲ್ಲಿ ಆತ್ಮಾಭಿಮಾನಿ ಆಗಿರುತ್ತೇವೆ. ಇಲ್ಲಿ ಮಾಯಾ ರಾವಣನು ದೇಹಾಭಿಮಾನಿಗಳನ್ನಾಗಿ ಮಾಡಿ ಬಿಡುತ್ತಾನೆ. ನೀವೀಗ ಪುನಃ ಆತ್ಮಾಭಿಮಾನಿಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತಾ ಇರಿ, ಇಲ್ಲಿ ಚಿತ್ರಗಳ ಮುಂದೆ ಬಂದು ಕುಳಿತುಕೊಳ್ಳಿ. ಹೇಗೆ ಸೈನಿಕರಿಗೆ ಮೈದಾನದಲ್ಲಿ ಅಭ್ಯಾಸ ಮಾಡಿಸಲಾಗುತ್ತದೆಯಲ್ಲವೆ. ಈಗ ನೀವು ಆತ್ಮಾಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನೀವಂತೂ ನನ್ನ ಮಕ್ಕಳಾಗಿದ್ದೀರಲ್ಲವೆ. ದೇಹಾಭಿಮಾನಿಗಳಾಗಿದ್ದರಿಂದ ನೀವು ಮಾಯೆಗೆ ವಶವಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ, ಜ್ಞಾನ ಸಾಗರ ಎಂದು ಕರೆಯುತ್ತೀರಿ ಅಂದಮೇಲೆ ಉಳಿದೆಲ್ಲರೂ ಭಕ್ತಿಯ ಸಾಗರರಾಗಿದ್ದಾರೆ. ಭಕ್ತಿಮಾರ್ಗದ ಎಷ್ಟೊಂದು ವಿಸ್ತಾರವಿದೆ. ತಂದೆಯು ಬರುವುದೇ ಸುಳ್ಳು ಪ್ರಪಂಚದಲ್ಲಿ, ಅದರಲ್ಲಿಯೂ ಸಾಧಾರಣ ರೂಪದಲ್ಲಿ. ಡ್ರಾಮಾದಲ್ಲಿ ಇದೇ ರೀತಿ ನಿಗಧಿತವಾಗಿದೆ. ಪತಿತ ಶರೀರದಲ್ಲಿಯೇ ತಂದೆಯು ಬರುತ್ತಾರೆ, ಲಕ್ಷ್ಮೀ-ನಾರಾಯಣರ ಶರೀರದಲ್ಲಿ ಬರುವುದಿಲ್ಲ. ಅವರಿಗಂತೂ ರಾಜ್ಯಭಾಗ್ಯವು ಸಿಕ್ಕಿದೆ ಅಂದಮೇಲೆ ಅವರಲ್ಲಿ ನಾನು ಹೇಗೆ ಬರಲಿ! ಸಾಧಾರಣ ರೂಪದಲ್ಲಿರುವ ಕಾರಣ ನನ್ನನ್ನು ಗುರುತಿಸುವುದೇ ಇಲ್ಲ. ಕರೆಯುತ್ತಾರೆ ಆದರೆ ಅವಶ್ಯವಾಗಿ ಯಾವುದೋ ಶರೀರದಲ್ಲಿ ಬರುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ನನ್ನ ರೂಪವು ನಿರಾಕಾರ ಬಿಂದು ಸ್ವರೂಪವಾಗಿದೆ ಅಂದಮೇಲೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನ ತನುವಿನಲ್ಲಿಯೇ ಬರುತ್ತೇನೆ. ಪ್ರಜಾಪಿತನು ಅವಶ್ಯವಾಗಿ ಇಲ್ಲಿಯೇ ಬೇಕು ಮತ್ತು ಹಳೆಯ ತನುವೇ ಬೇಕಾಗಿದೆ. ಈ ಬ್ರಹ್ಮಾರವರು ಹಳೆಯ ರೂಪದಲ್ಲಿ ಮತ್ತು ಇವರ ಪಕ್ಕದಲ್ಲಿಯೇ ಹೊಸ ರೂಪದಲ್ಲಿ ವಿಷ್ಣು ನಿಂತಿದ್ದಾರೆ. ತ್ರಿಮೂರ್ತಿಯ ಚಿತ್ರದಲ್ಲಿ ಎಷ್ಟೊಂದು ಜ್ಞಾನವಿದೆ.

ನೀವು ಮಕ್ಕಳು ಮೊದಲು ಈ ದೇವತೆಗಳನ್ನು ಕರೆಯುತ್ತಿದ್ದಿರಿ. ಶ್ರೀನಾರಾಯಣನ ಎಷ್ಟೊಂದು ಭಕ್ತಿ ಮಾಡುತ್ತಿದ್ದಿರಿ. ಆಶ್ಚರ್ಯವಲ್ಲವೆ. ನಾನೂ ಸಹ ನಾರಾಯಣನನ್ನು ಎಷ್ಟೊಂದು ಪ್ರೀತಿ ಮಾಡುತ್ತಿದ್ದೆನು, ಶ್ರೀನಾರಾಯಣನು ಬಂದಿದ್ದಾರೆ ಇವರಿಗೆ ತಿನ್ನಿಸಿ, ಕುಡಿಸಿರಿ… ಈಗಂತೂ ನಾನೇ ಈ ರೀತಿಯಾಗುತ್ತಿದ್ದೇನೆ ಎಂದು ಆಂತರ್ಯದಲ್ಲಿ ತಿಳಿದುಕೊಳ್ಳುತ್ತೇನೆ. ಏನು ಆಗಿದ್ದೆನೋ ಅದಕ್ಕೆ ಅವಶ್ಯವಾಗಿ ಖಾತರಿ ಮಾಡುತ್ತೇನೆ ಅಂದರೆ ನಾನು ನನ್ನದೇ ಮೂರ್ತಿಗೆ ಖಾತರಿ ಮಾಡುತ್ತೇನೆ. ತಂದೆಯೂ ಸಹ ಹೇಳುತ್ತಿದ್ದರು – ತಮ್ಮ ಖಾತರಿ ಮಾಡಿಕೊಳ್ಳುತ್ತೀರಿ ಎಂದು. ನೀವು ಮಕ್ಕಳು ನೋಡಿದ್ದೀರಲ್ಲವೆ – ಇವು ಬಹಳ ಅದ್ಭುತ ಮಾತುಗಳಾಗಿವೆ. ಇವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವೇ ತಿಳಿಸಬಲ್ಲಿರಿ, ಇದು ಸಂಪೂರ್ಣ ಹೊಸ ಜ್ಞಾನವಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಪುನಃ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಆದಿಯಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಮಧ್ಯದಲ್ಲಿ ರಾವಣ ರಾಜ್ಯವಿದೆ. ಈಗ ಅಂತ್ಯವಾಗಿದೆ, ಅಂತಿಮದಲ್ಲಿ ಸ್ವಯಂ ತಂದೆಯು ಬರುತ್ತಾರೆ. ಈಗ ನೀವು ಮಕ್ಕಳು ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಇನ್ನು ಸ್ವಲ್ಪ ಸಮಯದಲ್ಲಿಯೇ ಏನೇನು ಆಗುವುದಿದೆ, ವಿನಾಶವೂ ಅವಶ್ಯವಾಗಿ ಆಗುವುದು. ಮಹಾಭಾರತ ಯುದ್ಧವಾಗಿತ್ತು, ಈಗ ಪುನಃ ಆಗುವುದೆಂದು ಹೇಳುತ್ತಾರೆ. ಈ ಸಮಯದಲ್ಲಿ ಇದು ಯಾರಿಗೂ ಗೊತ್ತಿಲ್ಲ. ಪತಿತ-ಪಾವನನು ಒಬ್ಬ ತಂದೆಯೇ ಆಗಿದ್ದಾರೆ. ಅವರು ಬಂದಿದ್ದಾರೆ, ಅಂದಮೇಲೆ ಇನ್ನೆಷ್ಟು ಸಮಯ ಇರಬಹುದು. ಶ್ರೀಕೃಷ್ಣನಂತೂ ಇಲ್ಲಿ ಬರಲು ಸಾಧ್ಯವಿಲ್ಲ. ಶ್ರೀಕೃಷ್ಣನು ಸತ್ಯಯುಗದಲ್ಲಿ ಒಂದು ಜನ್ಮ ತೆಗೆದುಕೊಂಡನು. ಕೃಷ್ಣನ ಹೆಸರಿನಿಂದ ನಂತರ ಹೆಸರು, ರೂಪ ಬದಲಾಗುತ್ತಾ ಹೋಯಿತು. ಶರೀರದ ಲಕ್ಷಣಗಳೇ ಬದಲಾಗುತ್ತಾ ಹೋಗುತ್ತವೆ. ತಂದೆಯು ತಿಳಿಸಿದ್ದಾರೆ – ನೀವೇ ಯಾರು ಪೂಜ್ಯರಾಗಿದ್ದಿರೋ ಅವರೇ ನಂತರ ಪೂಜಾರಿಗಳಾಗಿದ್ದೀರಿ. 84 ಜನ್ಮಗಳನ್ನು ಹೇಗೆ ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸಿದ್ದಾರೆ ಮತ್ತು ಹೇಳುತ್ತಾರೆ, ನೀವು ಅರ್ಧಕಲ್ಪ ದೇಹಾಭಿಮಾನದಲ್ಲಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿ. ನೀವು ಆತ್ಮರಾಗಿದ್ದೀರಿ, ನಾನು ನಿಮ್ಮ ತಂದೆ ಪರಮಪಿತ ಪರಮಾತ್ಮನಾಗಿದ್ದೇನೆ. ನಾನು ಅಶರೀರಿಯಾಗಿದ್ದೇನೆ ಮತ್ತು ಮಕ್ಕಳಿಗೆ ನನ್ನ ಪರಿಚಯವನ್ನು ಕೊಡುತ್ತೇನೆ. ಅತೀಂದ್ರಿಯ ಸುಖವನು ಗೋಪ-ಗೋಪಿಕೆಯರಿಂದ ಕೇಳಿ ಎಂಬ ಯಾವ ಗಾಯನವಿದೆಯೋ ಇದು ಅಂತ್ಯದ ಮಾತಾಗಿದೆ ಯಾವಾಗ ಪರೀಕ್ಷೆಯ ಫಲಿತಾಂಶವು ಸಮೀಪ ಬರುತ್ತದೆ. ಯಾವ ಮಕ್ಕಳು ಹೆಚ್ಚು ಸರ್ವೀಸ್ ಮಾಡುವರೋ ಅವರು ಅವಶ್ಯವಾಗಿ ಎಲ್ಲರಿಗೆ ಪ್ರಿಯರಾಗುತ್ತಾರೆ. ಪ್ರದರ್ಶನಿ ಮೊದಲಾದುವುಗಳಲ್ಲಿಯೂ ಮೊದಲು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಇಂತಹವರನ್ನು ಕಳುಹಿಸಿಕೊಡಿ ಎಂದು ಪತ್ರ ಬರೆಯುತ್ತಾರೆ. ಇದರ ಅರ್ಥವೇನೆಂದರೆ ಇವರು ನಮಗಿಂತಲೂ ಬುದ್ಧಿವಂತರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಆದರೆ ದೇಹಾಭಿಮಾನವು ಬಹಳ ಇದೆ. ನಮ್ಮ ಹಿರಿಯ ಸಹೋದರ ಅಥವಾ ಸಹೋದರಿಯರಿದ್ದರೆ ಅವರಿಗೆ ಗೌರವ ಕೊಡಬೇಕು. ಇಂತಹವರು ನಮಗಿಂತಲೂ ನೂರು ಪಟ್ಟು ಒಳ್ಳೆಯವರೆಂದು ಎಂದಿಗೂ ಹೇಳುವುದಿಲ್ಲ. ಅನ್ಯರಿಗೆ ಗೌರವ ಕೊಡುವಷ್ಟು ತಿಳುವಳಿಕೆಯೂ ಇಲ್ಲ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದರಂತೆ ನಡೆಯದಿದ್ದರೆ ಅವರ ಗತಿಯೇನಾಗುವುದು! ದೇಹಾಭಿಮಾನವು ಬಾಡಿಸಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ದೇಹೀ-ಅಭಿಮಾನಿಯಾಗಿರಿ. ಮುಂಜಾನೆಯೆದ್ದು ಶಿವ ತಂದೆಯನ್ನು ನೆನಪು ಮಾಡಿರಿ ಆದರೆ ಅದನ್ನೂ ಮಾಡುವುದಿಲ್ಲ, ಒಳ್ಳೊಳ್ಳೆಯ ಮಕ್ಕಳೂ ಸಹ ಯೋಗದಲ್ಲಿ ಬಹಳ ಕಡಿಮೆಯಿರುತ್ತಾರೆ. ಜ್ಞಾನವನ್ನಂತೂ ಚಿಕ್ಕ ಮಕ್ಕಳೂ ತಿಳಿಸಬಲ್ಲರು ಆದರೆ ಅದು ಗಿಳಿಯ ಪಾಠದಂತಾಗಿ ಬಿಡುತ್ತದೆ. ಇದರಲ್ಲಿ ಯೋಗದಲ್ಲಿದ್ದು ಧಾರಣೆಯೂ ಇದ್ದಾಗ ಖುಷಿಯಿರುವುದು. ಯೋಗವಿಲ್ಲದೆ ವಿಕರ್ಮಗಳು ವಿನಾಶವಾಗಲು ಸಾಧ್ಯವಿಲ್ಲ. ಪವಿತ್ರ ವಸ್ತು(ತಂದೆ)ವನ್ನು ನೆನಪು ಮಾಡಲಾಗುತ್ತದೆ ಅಂದಮೇಲೆ ಅವರ ಜೊತೆ ಪ್ರೀತಿಯೂ ಬಹಳ ಇರಬೇಕು. ಪದೇ-ಪದೇ ತಿಳಿಸಲಾಗುತ್ತದೆ – ಮನ್ಮನಾಭವ. ಅರ್ಧಕಲ್ಪ ದೇಹಾಭಿಮಾನಿಯಾಗಿದ್ದಿರಿ ಆದ್ದರಿಂದ ಈಗ ದೇಹೀ-ಅಭಿಮಾನಿಯಾಗಿರುವುದು ಕಷ್ಟವೆನಿಸುತ್ತದೆ. ಬಹಳ ಪರಿಶ್ರಮವಾಗುತ್ತದೆ. ದೇಹೀ-ಅಭಿಮಾನಿ ಸ್ಥಿತಿಯನ್ನು ಹೊಂದುವುದರಲ್ಲಿ ಎಷ್ಟು ವರ್ಷಗಳು ಹಿಡಿಸುತ್ತದೆ. ತನ್ನನ್ನು ಚಿಕ್ಕ ಆತ್ಮವೆಂದು ತಿಳಿದು ತಂದೆಯನ್ನೂ ಬಿಂದುವೆಂದು ತಿಳಿದು ನೆನಪು ಮಾಡುವುದರಲ್ಲಿ ಪರಿಶ್ರಮವಿದೆ. ಯಾರು ಸತ್ಯವಾಗಿರುವರೋ ಅವರು ನಾವು ಎಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಎಂದು ಆಂತರ್ಯದಲ್ಲಿ ಕೇಳಿಕೊಳ್ಳುತ್ತಾ ಇರುತ್ತಾರೆ. ಇದು ಬಹಳ ಕಠಿಣ ಅಭ್ಯಾಸವಾಗಿದೆ. 21 ಜನ್ಮಗಳಿಗಾಗಿ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದು ಕಡಿಮೆ ಮಾತೇನು! ನೀವು ತಿಳಿದುಕೊಂಡಿದ್ದೀರಿ – ನಾವು ಅತಿ ಚಿಕ್ಕ ಆತ್ಮರಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ಆತ್ಮವೇ ಮುಖ್ಯ ಪಾತ್ರಧಾರಿಯಾಗುತ್ತದೆ. ಆತ್ಮವೇ ಎಲ್ಲವೂ ಆಗುತ್ತದೆ ಆದರೆ ದೇಹಾಭಿಮಾನದ ಕಾರಣ ಅತ್ಮಾಭಿಮಾನವು ಮಾಯವಾಗಿ ಬಿಟ್ಟಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇದೇ ಅಭ್ಯಾಸ ಮಾಡಬೇಕಾಗಿದೆ – ಈ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಇದೇ ಗೀತೆಯಾಗಿದೆ. ಕೇವಲ ಅದರಲ್ಲಿ ನಿರಾಕಾರನ ಹೆಸರನ್ನು ಬಿಟ್ಟು ದೇಹಧಾರಿ ದೇವತೆಯ ಹೆಸರನ್ನು ಬರೆದು ಬಿಟ್ಟಿದ್ದಾರೆ.

ತಂದೆಯು ತಿಳಿಸುತ್ತಾರೆ – ಯಾರು ಆದಿಯಿಂದ ಹಿಡಿದು ಅಂತ್ಯದವರೆಗೆ ಬಹಳ ಭಕ್ತಿ ಮಾಡಿದ್ದಾರೆಯೋ ಅವರೇ ನಂಬರ್ವನ್ ಮೇಲೆ ಹೋಗುತ್ತಾರೆ. ನೀವೂ ಸಹ ಬಹಳ ಭಕ್ತಿ ಮಾಡಿದ್ದೀರಿ ಅಂದಮೇಲೆ ನೀವು ಮಕ್ಕಳಿಗೂ ಸಹ ಎಷ್ಟೊಂದು ಖುಷಿಯಿರಬೇಕು – ನಮಗೆ ತಂದೆಯು ಸಿಕ್ಕಿದ್ದಾರೆ, ತಂದೆಯು ನಮಗೆ ಓದಿಸುತ್ತಿದ್ದಾರೆ, ನಾವು ಈ ವಿದ್ಯೆಯಿಂದ ವಿಶ್ವದ ಮಾಲೀಕರಾಗುತ್ತೇವೆ. ಈಗ ತಂದೆಯ ಮತದಂತೆ ಅವಶ್ಯವಾಗಿ ನಡೆಯಬೇಕು. ತಂದೆಯು ಯಾವ ಆದೇಶವನ್ನು ಕೊಡುತ್ತಾರೆಯೋ ಅದರಿಂದ ಒಂದುವೇಳೆ ಏನಾದರೂ ತಪ್ಪಾಗಿ ಬಿಟ್ಟರೂ ಸಹ ಅವರೇ ಅದನ್ನು ಸರಿ ಪಡಿಸುತ್ತಾರೆ. ಸಲಹೆ ನೀಡುತ್ತಾರೆಂದರೆ ಅದಕ್ಕೆ ಜವಾಬ್ದಾರನೂ ಅವರೇ ಆಗಿದ್ದಾರೆ. ಅವರ ಸಲಹೆಯಂತೆ ಮಾಡಿದಾಗ ಪದೇ-ಪದೇ ಆ ಶಿವ ತಂದೆಯ ನೆನಪೇ ಬರುತ್ತಿರುವುದು ಆದ್ದರಿಂದ ಈ ಬ್ರಹ್ಮಾ ತಂದೆಯೂ ಸಹ ಸದಾ ನಿಮಗೆ ಶಿವ ತಂದೆಯು ತಿಳಿಸುತ್ತಾರೆಂದೇ ಹೇಳುತ್ತಾರೆ. ನಾನೂ ಸಹ ಅವರಿಂದಲೇ ಕೇಳುತ್ತೇನೆ, ಈ ಸಲಹೆ ನೀಡುವವರು ಶಿವ ತಂದೆಯಾಗಿದ್ದಾರೆ. ನಾನು ಅವರ ಆದೇಶದಂತೆ ನಡೆಯುತ್ತೇನೆ. ನೀವೂ ಸಹ ಅವರನ್ನು ನೆನಪು ಮಾಡುತ್ತೀರಿ, ಇವರೂ ಸಹ ಅವರನ್ನೇ ನೆನಪು ಮಾಡುತ್ತಾರೆ. ದೇಹಾಭಿಮಾನವನ್ನು ಬಿಟ್ಟು ಬಿಡಿ, ನೀವು ಯಾವುದೇ ವಜ್ರ ವ್ಯಾಪಾರಿ ದಾದಾರವರ ಬಳಿ ಬಂದಿಲ್ಲ, ನೀವು ಶಿವ ತಂದೆಯ ಬಳಿ ಬಂದಿದ್ದೀರಿ. ಜ್ಞಾನಸಾಗರನಂತೂ ಅವರೇ ಅಲ್ಲವೆ, ನೀವು ಶಿವ ತಂದೆಯಿಂದ ಜ್ಞಾನಾಮೃತವನ್ನು ಕುಡಿಯಲು ಬಂದಿದ್ದೀರಿ. ಈಗಲೂ ಸಹ ಜ್ಞಾನಾಮೃತವನ್ನು ಕುಡಿಯುತ್ತಾ ಇರುತ್ತೀರಿ. ಪ್ರತಿನಿತ್ಯವು ಜ್ಞಾನ ಸಾಗರ ತಂದೆಯು ತಿಳಿಸುತ್ತಾ ಇರುತ್ತಾರೆ – ಅವರನ್ನೇ ನೆನಪು ಮಾಡಬೇಕಾಗಿದೆ. ತಂದೆಯು ಭಕ್ತಿಯನ್ನು ಬಿಡಿ ಎಂದು ಹೇಳುವುದಿಲ್ಲ, ಯಾವಾಗ ಜ್ಞಾನದ ಪರಾಕಾಷ್ಠತೆ ಬರುವುದೋ ಆಗ ಅದು ಭಕ್ತಿ, ಇದು ಜ್ಞಾನವಾಗಿದೆ ಎಂಬುದನ್ನು ತಾವಾಗಿಯೇ ಅರ್ಥ ಮಾಡಿಕೊಳ್ಳುವರು. ಅರ್ಧಕಲ್ಪ ನೀವು ಭಕ್ತಿ ಮಾಡಿದ್ದೀರಿ, ಇದರಿಂದ ಯಾರೂ ಹಿಂತಿರುಗಿ ಹೋಗಲಿಲ್ಲ, ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯು ಯಾವ ಸಲಹೆ ನೀಡಿದ್ದಾರೆಯೋ ಅದನ್ನು ಶಿವ ತಂದೆಯ ಶ್ರೀಮತವೆಂದು ತಿಳಿದು ನಡೆಯಬೇಕಾಗಿದೆ. ಜ್ಞಾನಾಮೃತವನ್ನು ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ.

2. ಎಲ್ಲರಿಗೆ ಗೌರವ ನೀಡುತ್ತಾ ಸರ್ವೀಸಿನಲ್ಲಿ ತತ್ಪರರಾಗಿರಬೇಕು. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:-

ಎಷ್ಟು ಸಾಧ್ಯವೋ ಅಷ್ಟು ಸೇವಾ ಸಂಬಂಧದಲ್ಲಿ ಬಾಲಕನಾಗಿದ್ದು, ತಮ್ಮ ಪುರುಷಾರ್ಥದ ಸ್ಥಿತಿಯಲ್ಲಿ ಮಾಲೀಕತ್ವವಿರಲಿ. ಸಂಪರ್ಕ ಹಾಗೂ ಸೇವೆಯಲ್ಲಿ ಬಾಲಕನಾಗಿದ್ದು, ನೆನಪಿನ ಯಾತ್ರೆ ಹಾಗೂ ಮಂಥನ ಮಾಡುವುದರಲ್ಲಿ ಮಾಲೀಕತ್ವ, ಜೊತೆಗಾರರು ಹಾಗೂ ಸಂಘಟನೆಯಲ್ಲಿ ಬಾಲಕತ್ವ ಹಾಗೂ ವ್ಯಕ್ತಿಗತ ನಿರ್ಣಯದಲ್ಲಿ ಮಾಲೀಕತ್ವದ ಸಮತೋಲನದಿಂದ ನಡೆಯುವುದೇ ಯುಕ್ತಿಯುಕ್ತವಾಗಿ ನಡೆಯುವುದಾಗಿದೆ. ಇದರಿಂದ ಪ್ರತಿಯೊಂದು ಕಾರ್ಯದಲ್ಲಿ ಸಹಜವಾಗಿ ಸಫಲತೆಯು ಪ್ರಾಪ್ತಿಯಾಗುತ್ತದೆ, ಸ್ಥಿತಿಯು ಏಕರಸವಾಗಿ ಇರುತ್ತದೆ ಹಾಗೂ ಸಹಜವಾಗಿಯೇ ಸರ್ವರ ಸ್ನೇಹಿಯಾಗಿ ಬಿಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top