02 April 2022 KANNADA Murli Today | Brahma Kumaris

Read and Listen today’s Gyan Murli in Kannada

April 1, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಮಾತಾಪಿತನ ವಂಶದಲ್ಲಿ ಬರಬೇಕೆಂದರೆ ಸಂಪೂರ್ಣವಾಗಿ ಅನುಕರಣೆ (ಫಾಲೋ) ಮಾಡಿ, ಅವರ ಸಮಾನ ಮಧುರರಾಗಿರಿ, ಬಹಳ ಶ್ರದ್ದೆಯಿಂದ ವಿದ್ಯೆಯನ್ನು ಓದಿರಿ”

ಪ್ರಶ್ನೆ:: -

ಯಾವ ರಹಸ್ಯವುಳ್ಳ ರಾಜಯುಕ್ತ, ರಹಸ್ಯಯುಕ್ತ ಮಾತುಗಳನ್ನು ತಿಳಿದುಕೊಳ್ಳಲು ಬುದ್ಧಿ ಚೆನ್ನಾಗಿರಬೇಕು?

ಉತ್ತರ:-

1. ಬ್ರಹ್ಮಾ-ಸರಸ್ವತಿ ಮಮ್ಮಾ-ಬಾಬಾ ಅಲ್ಲ, ಸರಸ್ವತಿಯಂತು ಬ್ರಹ್ಮನ ಮಗಳಾಗಿದ್ದಾರೆ. ಮಗಳಾಗಿದ್ದು ಅವರೂ ಸಹ ಬ್ರಹ್ಮಾಕುಮಾರಿಯಾಗಿದ್ದಾರೆ. ಬ್ರಹ್ಮಾ ತಂದೆಯೇ ನಿಮ್ಮ ಹಿರಿಯ ತಾಯಿ ಆಗಿದ್ದಾರೆ, ಆದರೆ ಅವರು ಪುರುಷರಾಗಿರುವ ಕಾರಣ ತಾಯಿ ಎಂದು ಜಗದಂಬಾರವರಿಗೆ ಹೇಳಲಾಗಿದೆ. ಇದು ಬಹಳ ರಹಸ್ಯಯುಕ್ತ ಮಾತಾಗಿದೆ, ಇದನ್ನು ತಿಳಿದುಕೊಳ್ಳಲು ಬುದ್ಧಿಯು ಬಹಳ ಚೆನ್ನಾಗಿರಬೇಕು. 2. ಸೂಕ್ಷ್ಮವತನವಾಸಿ ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳುವುದು. ಇಲ್ಲಿ ಮಾತ್ರ ಪ್ರಜಾಪಿತ ಇರುತ್ತಾರೆ. ಈ ವ್ಯಕ್ತ ಬ್ರಹ್ಮ ಯಾವಾಗ ಸಂಪೂರ್ಣ ಪವಿತ್ರವಾಗುತ್ತಾರೆ, ಆಗ ಸಂಪೂರ್ಣ ಅವ್ಯಕ್ತರೂಪ ಕಾಣುತ್ತದೆ. ಅಲ್ಲಿ ಮೌನದ ಭಾಷೆ ನಡೆಯುತ್ತದೆ. ದೇವತೆಗಳ ಸಭೆ ಸೇರುತ್ತದೆ. ಇದೂ ಸಹ ತಿಳಿದುಕೊಳ್ಳುವ ರಹಸ್ಯ ಮಾತಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮಾತೋ ಓ ಮಾತಾ.

ಓಂ ಶಾಂತಿ. ಇದು ಈಶ್ವರೀಯ ವಿದ್ಯಾಲಯವಾಗಿದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಇಲ್ಲಿ ಯಾರು ಓದಿಸುತ್ತಾರೆ? ಸ್ವಯಂ ಈಶ್ವರನೇ ಓದಿಸುತ್ತಾರೆ. ಈಶ್ವರನು ಒಬ್ಬರೇ ಆಗಿದ್ದಾರೆ, ಅವರ ಶಾಸ್ತ್ರವೂ ಸಹ ಒಂದೇ ಆಗಿರಬೇಕು. ಹೇಗೆ ಧರ್ಮಸ್ಥಾಪಕರು ಒಬ್ಬರಾಗಿರುತ್ತಾರೆ, ಅವರ ಧರ್ಮಶಾಸ್ತ್ರವೂ ಸಹ ಒಂದೇ ಆಗಿರಬೇಕು. ಒಂದುವೇಳೆ ಅನೇಕ ಚಿಕ್ಕ-ಪುಟ್ಟ ಪುಸ್ತಕಗಳನ್ನು ಮಾಡುತ್ತಾರೆ, ಆದರೆ ಮುಖ್ಯ ಶಾಸ್ತ್ರ ಒಂದೇ ಆಗಿರುತ್ತದೆ. ಇದು ಪರಮಪಿತ ಪರಮಾತ್ಮನ ವಿದ್ಯಾಲಯವಾಗಿದೆ. ಹಾಗೆ ನೋಡಿದರೆ ಯಾವುದೇ ತಂದೆಯ ವಿದ್ಯಾಲಯ ಇರುವುದಿಲ್ಲ, ಸರ್ಕಾರದ ವಿದ್ಯಾಲಯ ಇರುತ್ತದೆ. ಇದನ್ನು ಮಾತಾಪಿತರ ವಿದ್ಯಾಲಯವೆಂದು ಹೇಳಲಾಗುತ್ತದೆ. ಯಾವ ತಂದೆ-ತಾಯಿ? ಆಗ ದೇವಿ-ದೇವತೆಗಳೆಂದು ಹೇಳುತ್ತಾರೆ. ನೀವು ತಾಯಿ-ತಂದೆ ಎಂದು ಹೇಳುತ್ತಾರೆ…… ಆಗ ಅಗತ್ಯವಾಗಿ ತಂದೆಯೇ ಮೊದಲಿಗರಲ್ಲವೆ. ಭಗುವಾನುವಾಚ – ಇಲ್ಲಿ ಭಗವಂತನೇ ಕುಳಿತು ಓದಿಸುತ್ತಿದ್ದಾರೆ. ಬೇರೆಲ್ಲಾ ಸ್ಥಾನಗಳಲ್ಲಿ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ. ಇಲ್ಲಿ ನಿರಾಕಾರ ತಂದೆ ನೀವು ಆತ್ಮಗಳಿಗೆ ಓದಿಸುತ್ತಿದ್ದಾರೆ. ಈ ವಿಚಿತ್ರ ಮಾತನ್ನು ಮನುಷ್ಯರು ಸುಲಭವಾಗಿ ತಿಳಿದುಕೊಳ್ಳುವುದಿಲ್ಲ. ನಮಗೆ ನಿರಾಕಾರ ಪರಮಪಿತ ಪರಮಾತ್ಮ ಗಾಡ್ಫಾದರ್ ಓದಿಸುತ್ತಾರೆಂದು ಯಾರೂ ಹೇಳುವುದಿಲ್ಲ. ಇಲ್ಲಿ ನಿಮಗೆ ಪರಮಪಿತ ಪರಮಾತ್ಮ ಓದಿಸುತ್ತಾರೆ. ಇದು ಯಾರ ಬುದ್ಧಿಯಲ್ಲೂ ಇರುವುದಿಲ್ಲ. ಓದುವಂತಹವರ ಹಾಗೂ ಓದಿಸುವಂತಹವರ ಬುದ್ಧಿಯಲ್ಲಿ ಇರುವುದಿಲ್ಲ. ನಮಗೆ ಪರಮಪಿತ ಪರಮಾತ್ಮ ಓದಿಸುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ಸರ್ವರಿಗೂ ತಂದೆಯಾದ ಆ ಶ್ರೇಷ್ಠಾತಿ ಶ್ರೇಷ್ಠನು ಒಬ್ಬರೇ ಆಗಿದ್ದಾರೆ. ಬೇರೆ ಯಾರೂ ತಂದೆಯಿಲ್ಲ. ಬ್ರಹ್ಮಾರವರಿಗೂ ತಂದೆ ನಿರಾಕಾರನೇ ಆಗಿದ್ದಾರೆ. ಅವರೇ ನಿಮಗೆ ಓದಿಸುತ್ತಾರೆ. ಬ್ರಹ್ಮನೂ ಸಹ ಓದಿಸುವುದಿಲ್ಲ. ನಿರಾಕಾರ ತಂದೆ ಓದಿಸುತ್ತಾರೆ. ಒಂದುವೇಳೆ ಮನುಷ್ಯರು ಬ್ರಹ್ಮಾ-ಸರಸ್ವತಿ ಆಡಂ ಹಾಗೂ ಈವ್ ಆಗಿದ್ದಾರೆಂದು ತಿಳಿದುಕೊಂಡಿರಬಹುದು. ಆದರೆ ನಿರಾಕಾರ ತಂದೆಯು ಅವರಿಗಿಂತಲೂ ಶ್ರೇಷ್ಠವಾಗಿದ್ದಾರೆ. ಮತ್ತೆ ಅವರಂತೂ ಸಾಕಾರದಲ್ಲಿದ್ದಾರೆ. ನಿರಾಕಾರ ಬಂದು ನಮಗೆ ಓದಿಸುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ನಿಮಗೆ ಜ್ಞಾನವನ್ನು ಕೊಡುವಂತಹವರು ಅವರೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ನಮಗೆ ಗೃಹಸ್ಥ ವ್ಯವಹಾರದಲ್ಲಿದ್ದು ಈ ಜ್ಞಾನವನ್ನು ಓದಬಹುದೆಂದು ಹೇಳುತ್ತಾರೆ. ವಾಸ್ತವದಲ್ಲಿ ಗೃಹಸ್ಥ ವ್ಯವಹಾರದಲ್ಲಿದ್ದು ಯಾರೂ ಓದುವುದಿಲ್ಲ. ಇಲ್ಲಿ ನಿಮಗೆ ನಿರಾಕಾರ ಪರಮಪಿತ ಪರಮಾತ್ಮನೇ ಓದಿಸುತ್ತಿದ್ದಾರೆಂಬ ಪೂರ್ಣ ನಿಶ್ಚಯವಿದೆ. ಈ ಸಾಕಾರ ಮಮ್ಮಾ, ಬಾಬಾರವರೂ ಸಹ ಅವರ ಮೂಲಕ ಓದುತ್ತಾರೆ. ಇದು ಬಹಳ ರಹಸ್ಯವಾದ ಮಾತುಗಳಾಗಿವೆ. ಎಲ್ಲಿಯವರೆಗೆ ತಂದೆಯು ಬರುವುದಿಲ್ಲ, ಅಲ್ಲಿಯವರೆಗೆ ಯಾರೂ ಸಹ ತಿಳಿಸಿಕೊಡಲು ಸಾಧ್ಯವಾಗುವುದಿಲ್ಲ. ಒಂದುವೇಳೆ ನೀವು ಅವರನ್ನು (ಸರಸ್ವತಿಯನ್ನು) ಮಮ್ಮಾ ಎಂದು ಹೇಳುತ್ತೀರಿ ಆದರೆ ಅವರು ಈ ಬ್ರಹ್ಮಾರವರ ದತ್ತು ಮಗಳಾಗಿದ್ದಾರೆ. ನೀವೂ ಸಹ ದತ್ತು ಮಕ್ಕಳಾಗಿದ್ದೀರಿ ಆದರೆ ನಿಮಗೆ ಮಮ್ಮಾ ಎಂದು ಹೇಳುವುದಿಲ್ಲ. ಇದು ದೈವೀ ಪರಿವಾರವಾಗಿದೆ. ಮಮ್ಮಾ, ಬಾಬಾ, ದಾದಾ, ಸಹೋದರ-ಸಹೋದರಿ, ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಇವರೂ ಸಹ ಬ್ರಹ್ಮಾಕುಮಾರಿ ಸರಸ್ವತಿಯಾಗಿದ್ದಾರೆ ಆದರೆ ಅವರನ್ನು ಜಗದಂಬಾ ಎಂದು ಹೇಳುತ್ತೀರಿ. ಏಕೆಂದರೆ ಈ ಬ್ರಹ್ಮಾ ಪುರುಷನಾಗಿದ್ದಾರೆ. ಮಮ್ಮಾರವರನ್ನು ಶಿವ ತಂದೆಯು ಇವರ ಮೂಲಕ ರಚನೆ ಮಾಡಿದ್ದಾರೆ ಆದರೆ ನಿಯಮದನುಸಾರವಾಗಿ ತಾಯಿ ಬೇಕಾಗಿರುವ ಕಾರಣ ಮಮ್ಮಾರವರನ್ನು ನಿಮಿತ್ತ ಮಾಡಲಾಗಿದೆ. ಇದು ಬಹಳ ರಮಣೀಕ ಮಾತಾಗಿದೆ. ಹೊಸ ಮಕ್ಕಳು ಈ ಮಾತುಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಎಲ್ಲಿಯವರೆಗೆ ತಂದೆ ಹಾಗೂ ರಚನೆಯ ಪರಿಚಯವಿಲ್ಲ ಅಲ್ಲಿಯವರೆಗೆ ತಿಳಿದುಕೊಳ್ಳಲು ಬಹಳ ಕಷ್ಟವಾಗುತ್ತದೆ. ಅಂತಹವರು ಯಾರಿಗಾದರೂ ತಿಳಿಸಿಕೊಡಲೂ ಸಹ ಆಗುವುದಿಲ್ಲ.

ವೇದ, ಶಾಸ್ತ್ರ ಮೊದಲಾದವುಗಳನ್ನು ಓದುವುದು, ವೈದ್ಯಕೀಯ ವಿದ್ಯೆಯನ್ನು ಓದುವುದು, ಓದುವುದೆಲ್ಲವೂ ಮನುಷ್ಯರ ವಿದ್ಯೆಯಾಗಿದೆ. ಮನುಷ್ಯರು, ಮನುಷ್ಯರಿಗೆ ಓದಿಸುತ್ತಾರೆ. ನಾನು ಆತ್ಮ, ಆತ್ಮಗಳಿಗೆ ಓದಿಸುತ್ತೇನೆಂದು ಎಂದಿಗೂ ಯಾರೂ ಈ ರೀತಿ ಹೇಳುವುದಿಲ್ಲ. ಇಲ್ಲಿ ನಿಮ್ಮನ್ನು ದೇಹಾಭಿಮಾನದಿಂದ ಬಿಡಿಸಿ ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ದೇಹಾಭಿಮಾನ ಮೊದಲನೆಯ ನಂಬರಿನ ವಿಕಾರವಾಗಿದೆ. ಇಲ್ಲಿ ಯಾರೂ ಸಹ ದೇಹೀ-ಅಭಿಮಾನಿಗಳಿಲ್ಲ. ಆತ್ಮ ಹಾಗೂ ಶರೀರವೆಂಬ ಎರಡು ವಸ್ತುಗಳಿವೆ ಎಂದು ತಿಳಿದುಕೊಂಡಿದ್ದಾರೆ ಆದರೆ ಆತ್ಮ ಎಲ್ಲಿಂದ ಬರುತ್ತದೆ? ಆತ್ಮನ ತಂದೆ ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ ಆದರೆ ಇವು ಹೊಸ ಮಾತುಗಳಾಗಿವೆ. ಹೊಸ ಪ್ರಪಂಚಕ್ಕೆ ಫರಿಸ್ತಾನ್ ಎಂದು ಕರೆಯಲಾಗುತ್ತದೆ. ಮೊಟ್ಟ ಮೊದಲು ನಾವು ಈಶ್ವರೀಯ ಸಂತಾನರೆಂದು ನಿಶ್ಚಯವಾಗಬೇಕು. ದೈವೀ ಸಂತಾನ ಹಾಗೂ ಆಸುರಿ ಸಂತಾನರಲ್ಲಿ ಹಗಲು-ರಾತ್ರಿಯ ಅಂತರವಿದೆ. ಅವರು ಭ್ರಷ್ಟಾಚಾರಿಗಳಾಗಿದ್ದಾರೆ, ನೀವು ಶ್ರೇಷ್ಠಾಚಾರಿಗಳಾಗಿದ್ದೀರಿ. ಹೇ! ಪತಿತ-ಪಾವನ ಬಾ, ಬಂದು ಶ್ರೇಷ್ಠಾಚಾರಿಗಳನ್ನಾಗಿ ಮಾಡು ಎಂದು ಹೇಳುತ್ತಾರೆ. ಭಗವಂತ ಬಂದು ಮಲಿನ ವಸ್ತ್ರಗಳನ್ನು ಸ್ವಚ್ಚ ಮಾಡುತ್ತಾರೆಂದು ಗುರುನಾನಕ್ ಸಹ ಹೇಳಿದ್ದಾರೆ. ನೀವೇ ಪೂಜ್ಯರು, ನೀವೇ ಪೂಜಾರಿಗಳು ಹೇಗೆ ಆಗುತ್ತೀರಿ, ಈ ಎಲ್ಲಾ ಮಾತುಗಳು ತಿಳಿದುಕೊಳ್ಳುವಂತಹ ರಹಸ್ಯವಾಗಿವೆ. ಒಬ್ಬ ಪರಮಪಿತ ಪರಮಾತ್ಮ ಸದಾ ಪೂಜ್ಯರಾಗಿದ್ದಾರೆ. ಅವರು ಲಕ್ಷ್ಮೀ-ನಾರಾಯಣರನ್ನು ಪೂಜ್ಯರನ್ನಾಗಿ ಮಾಡಿದರು. ಅವರೂ ಸಹ ಮೊದಲು ತಾಯಿ-ತಂದೆಯನ್ನು ಮಾಡಿ ಮಮ್ಮಾ, ಬಾಬಾರವರನ್ನು ದತ್ತು ಮಾಡಿಕೊಂಡರು. ಅವರು ಪತಿತರನ್ನು ಪಾವನ ಮಾಡುತ್ತಾರೆ. ಅವರು ಪತಿತರಿಂದ ಪಾವನ ಮಾಡಲು ಪತಿತ ಪ್ರಪಂಚದಲ್ಲಿಯೇ ಬರುತ್ತಾರೆ ಆದುದರಿಂದ ಬ್ರಹ್ಮಾ ತಂದೆಯ ಚಿತ್ರವನ್ನು ಮೇಲೆ ತೋರಿಸಿದ್ದಾರೆ. ಕೆಳಗಡೆ ತಪಸ್ಸನ್ನು ಮಾಡುತ್ತಿದ್ದಾರೆ, ಪತಿತರನ್ನು ದತ್ತು ಮಾಡಿಕೊಳ್ಳುತ್ತಾರೆ. ಬ್ರಹ್ಮಾ-ಸರಸ್ವತಿ ಹಾಗೂ ಮಕ್ಕಳ ಹೆಸರು ಪರಿವರ್ತನೆ ಆಗುತ್ತದೆ. ಬ್ರಹ್ಮಾಕುಮಾರ-ಕುಮಾರಿಯರು ದೇವತೆಗಳಾಗಲು ರಾಜಯೋಗವನ್ನು ಕಲಿಯುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಇದು ಈಶ್ವರೀಯ ಸಂತಾನ ಅಥವಾ ಈಶ್ವರೀಯ ವಂಶವಾಗಿದೆ. ಒಂದು ಬೀಜದಿಂದ ಈ ವಂಶ ಬಂದಿದೆ. ಅದು ಆತ್ಮಗಳ ವಂಶವಾಗಿದೆ. ಇದು ಮನುಷ್ಯರ ವಂಶವಾಗಿದೆ. ರುದ್ರ ಮಾಲೆಯೂ ಸಹ ಆತ್ಮಗಳ ವಂಶವಾಗಿದೆ. ಮತ್ತೆ ಮನುಷ್ಯರ ವಂಶ ಯಾವುದಾಗಿದೆ? ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ…… ಇದು ರಚಯಿತ ಹಾಗೂ ರಚನೆಯ ಜ್ಞಾನವಾಗಿದೆ, ಅದನ್ನು ಕೇವಲ ನೀವು ಮಕ್ಕಳು ಕೇಳುತ್ತೀರಿ ಆದರೆ ನಂಬರ್ವಾರ್ ಧಾರಣೆಯಾಗುವ ಕಾರಣ ರಾಜಾ-ರಾಣಿ ಹಾಗೂ ಪ್ರಜೆಗಳಾಗಬೇಕಾಗುತ್ತದೆ. ಮಮ್ಮಾ-ಬಾಬಾರವರನ್ನು ಅನುಸರಿಸಿ ಪುರುಷಾರ್ಥ ಮಾಡಬೇಕು ಹಾಗೂ ಬಹಳ ಮಧುರರಾಗಬೇಕು. ಮಮ್ಮಾ ಮಧುರರಾಗಿರುವ ಕಾರಣ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ. ಈ ಮಮ್ಮಾ ಬಾಬಾ ಹಾಗೂ ಮಕ್ಕಳನ್ನು ಮಧುರ ಮಾಡುವಂತಹವರು ಶಿವ ತಂದೆ ಆಗಿದ್ದಾರೆ. ಯಾವ ಮಕ್ಕಳು ಶ್ರದ್ದೆಯಿಂದ ಓದುತ್ತಾರೆ, ಅವರ ವಂಶ ಮಮ್ಮಾ, ಬಾಬಾರವರ ವಂಶವಾಗಿರುತ್ತದೆ. ಅವರು ಬಹಳ ಮಧುರರಾಗಿರಬೇಕು. ಸರಸ್ವತಿಯವರಿಗೆ ವೀಣೆಯನ್ನು ಕೊಟ್ಟಿದ್ದಾರೆ. ಮತ್ತೆ ಕೃಷ್ಣನಿಗೆ ಮುರಳಿಯನ್ನು ಕೊಟ್ಟಿದ್ದಾರೆ. ಕೇವಲ ಹೆಸರು ಮಾತ್ರ ಬೇರೆ-ಬೇರೆಯಾಗಿದೆ. ತಂದೆ ಹೇಳುತ್ತಾರೆ ಶ್ರದ್ದೆಯಿಂದ ಓದಬೇಕು. ಹೇಗೆ ವಿದ್ಯಾರ್ಥಿಗಳು ಓದುವಾಗ ಅವರ ಬುದ್ಧಿಯಲ್ಲಿ ಚರಿತ್ರೆ-ಭೂಗೋಳವೆಲ್ಲಾ ಇರುತ್ತದೆ. ಮಹಮ್ಮದ್ ಘಜ್ನಿಯು ಯಾವಾಗ ಬಂದನು, ಹೇಗೆ ಲೂಟಿ ಮಾಡಿಕೊಂಡು ಹೋದನು. ಮುಸಲ್ಮಾನರು ಇಂತಹ ಸ್ಥಾನದಲ್ಲಿ ಯುದ್ಧ ಮಾಡಿದರು, ಇಸ್ಲಾಮಿ, ಬೌದ್ಧ ಧರ್ಮ ನಂತರ ಬಂದಂತಹವರ ಚರಿತ್ರೆಯನ್ನು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಈ ಬೇಹದ್ದಿನ ಚರಿತ್ರೆ ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ಹೊಸ ಪ್ರಪಂಚದಿಂದ ಹಳೆಯ ಪ್ರಪಂಚ ಹೇಗೆ ಆಗುತ್ತದೆ? ನಾಟಕ ಎಲ್ಲಿಂದ ಆರಂಭವಾಗುತ್ತದೆ. ಮೂಲವತನ, ಸೂಕ್ಷ್ಮವತನ ಮತ್ತೆ ಸ್ಥೂಲವತನ, ಈ ಚಕ್ರ ಹೇಗೆ ತಿರುಗುತ್ತದೆ ಎಂಬ ವಿದ್ಯೆಯನ್ನು ನೀವು ಮಕ್ಕಳು ಓದುತ್ತಿದ್ದೀರಿ. ಮೂಲವತನವು ಆತ್ಮಗಳ ನಿವಾಸ ಸ್ಥಾನವಾಗಿದೆ. ಸೂಕ್ಷ್ಮವತನದಲ್ಲಿ ಬ್ರಹ್ಮಾ, ವಿಷ್ಣು, ಶಂಕರಿರುತ್ತಾರೆ. ಯಾವ ಆತ್ಮಗಳು ಮೊದಲು ಪಾವನರಾಗಿದ್ದರು, ಅವರು ಮತ್ತೆ ಹೇಗೆ ಪತಿತರಾಗುತ್ತಾರೆ, ಪುನಃ ಹೇಗೆ ಪಾವನರಾಗುತ್ತಾರೆ, ಎಂದು ಈ ಎಲ್ಲವನ್ನು ತಿಳಿಸಲಾಗುತ್ತದೆ. ಸೂಕ್ಷ್ಮವತನವಾಸಿ ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಪ್ರಜಾಪಿತನಂತು ಇಲ್ಲಿಯೇ ಇರುತ್ತಾರೆ. ನಿಮಗೆ ಸಾಕ್ಷಾತ್ಕಾರವೂ ಸಹ ಆಗುತ್ತದೆ. ಯಾವಾಗ ಈ ವ್ಯಕ್ತ ಬ್ರಹ್ಮ ಪವಿತ್ರವಾಗುತ್ತಾರೆ, ಆಗ ಸಂಪೂರ್ಣ ಅವ್ಯಕ್ತ ರೂಪದಲ್ಲಿ ಅಲ್ಲಿ ಕಾಣುತ್ತಾರೆ. ಹೇಗೆ ಆಕಾಶಕ್ಕೆ ಸೂಕ್ಷ್ಮ ರೂಪವಿರುತ್ತದೆ, ಅಲ್ಲಿ ಸಂಭಾಷಾಣೆಯೂ ಮೌನದಲ್ಲಿ ನಡೆಯುತ್ತದೆ. ಸೂಕ್ಷ್ಮವತನ ಏನಾಗಿದೆ, ಅಲ್ಲಿಗೆ ಯಾರು ಹೋಗುತ್ತಾರೆ ಎಂದು ನೀವು ತಿಳಿದುಕೊಂಡಿದ್ದೀರಿ. ಅಲ್ಲಿ ನೀವು ಮಮ್ಮಾ, ಬಾಬಾರವರನ್ನು ನೋಡುತ್ತೀರಿ. ಅಲ್ಲಿ ದೇವತೆಗಳೂ ಸಹ ಬರುತ್ತಾರೆ. ಅಲ್ಲಿ ದೇವತೆಗಳ ಸಭೆಯನ್ನು ಮಾಡುತ್ತಾರೆ, ಏಕೆಂದರೆ ದೇವತೆಗಳು ಈ ಪತಿತ ಪ್ರಪಂಚದಲ್ಲಿ ತಮ್ಮ ಹೆಜ್ಜೆಯನ್ನು ಇಡಲು ಸಾಧ್ಯವಿಲ್ಲ, ಆದುದರಿಂದ ಸೂಕ್ಷ್ಮವತನದಲ್ಲಿ ಮಿಲನ ಮಾಡುತ್ತಾರೆ. ಅದು ತಾಯಿಯ ಮನೆ ಹಾಗೂ ಅತ್ತೆ ಮನೆಯವರ ಮಿಲನವಾಗಿದೆ. ಇಲ್ಲವೆಂದರೆ ನೀವು ಬ್ರಾಹ್ಮಣರು ಹಾಗೂ ದೇವತೆಗಳು ಹೇಗೆ ಮಿಲನ ಮಾಡುತ್ತೀರಿ? ಇದು ಮಿಲನ ಮಾಡುವ ಉಪಾಯವಾಗಿದೆ. ಸಾಕ್ಷಾತ್ಕಾರ ಮಾಡಿದರೂ ಬುದ್ಧಿಯಿಂದ ತಿಳಿದುಕೊಳ್ಳಬೇಕು. ಇದು ನಾಟಕದಲ್ಲಿ ನಿಗಧಿಯಾಗಿದೆ. ಹೇಗೆ ಮೀರಾ ಮನೆಯಲ್ಲಿ ಕುಳಿತೇ ವೈಕುಂಠ ಸಾಕ್ಷಾತ್ಕಾರ ಮಾಡಿದ್ದಳು, ಮೀರಾಗೆ ನೃತ್ಯ ಮಾಡುತ್ತಿದ್ದಳು. ಪ್ರಾರಂಭದಲ್ಲಿ ನೀವೂ ಸಹ ಬಹಳ ಸಾಕ್ಷಾತ್ಕಾರವನ್ನು ಮಾಡಿಕೊಂಡಿರಿ. ರಾಜಧಾನಿ ಹೇಗೆ ನಡೆಯುತ್ತದೆ, ಅಲ್ಲಿಯ ಪದ್ಧತಿ ಎಲ್ಲವನ್ನು ಹೇಳುತ್ತಿದ್ದಿರಿ. ನೀವು ಆಗ ಬಹಳ ಕಡಿಮೆ ಮಕ್ಕಳಿದ್ದಿರಿ. ಉಳಿದವರು ಕೊನೆಯಲ್ಲಿ ನೋಡುತ್ತಾರೆ. ಪ್ರಪಂಚದವರು ಪರಸ್ಪರ ಯುದ್ಧ ಮಾಡುತ್ತಾ ಇರುತ್ತಾರೆ ಹಾಗೂ ನಿಮಗೆ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿರುತ್ತೀರಿ. ಮನುಷ್ಯರಂತು ಅಯ್ಯೋ ಎಂದು ಕೂಗುತ್ತಿರುತ್ತಾರೆ. ಕೆಲವರ ಸಂಪತ್ತು ಮಣ್ಣಿನ ಪಾಲಾಗುತ್ತದೆ……. ಈ ಸಮಯದಲ್ಲಿ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ, ಆದರೂ ಅವರ ಸ್ಥಾನ ಎಷ್ಟೊಂದು ಉನ್ನತವಾಗಿರುತ್ತದೆ, ಆದರೆ ಈ ಸಮಯದಲ್ಲಿ ಯಾರ ಬುದ್ಧಿಯೂ ಪರಮಾತ್ಮ ಜೊತೆ ಇಲ್ಲದ ಕಾರಣ ಅವರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹೇಗೆ ಕನ್ಯೆಯು ಒಂದು ಸಾರಿ ಹುಡುಗನನ್ನು ತಿಳಿದುಕೊಳ್ಳುತ್ತಾಳೆ, ಆಗ ಅವರೊಂದಿಗೆ ಪ್ರೀತಿಯಾಗಿ ಬಿಡುತ್ತದೆ. ಪರಿಚಯವಿಲ್ಲದಾಗ ಪ್ರೀತಿ ಇರಲಿಲ್ಲ. ನಿಮ್ಮಲ್ಲಿಯೂ ತಂದೆಯ ಮೇಲೆ ನಂಬರ್ವಾರ್ ಪ್ರೀತಿ ಇದೆ. ನಿರಂತರ ನೆನಪು ಮಾಡುವಷ್ಟು ಪ್ರೀತಿ ಇರಬೇಕು ಆದರೆ ಪ್ರಿಯತಮನನ್ನು ಮರೆತು ಹೋಗುತ್ತಾರೆ. ಈ ತಂದೆ (ಬ್ರಹ್ಮಾ) ಹೇಳುತ್ತಾರೆ, ನಾನೂ ಸಹ ಮರೆತು ಹೋಗುತ್ತೇನೆ.

5000 ವರ್ಷದ ನಂತರ ಮತ್ತೆ ತಮ್ಮನ್ನು ತಾವು ಆತ್ಮನೆಂದು ತಿಳಿದು ಪರಮಾತ್ಮನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗುತ್ತದೆ ಎಂಬ ಶಿಕ್ಷಣವು ನೀವು ಮಕ್ಕಳಿಗೆ ಸಿಗುತ್ತದೆ. ಈಗ ವಿಕರ್ಮಾಜೀತ್ ಆಗಬೇಕು. ಯಾರು ಮೊದಲು ಸತ್ಯಯುಗದಲ್ಲಿ ಬರುತ್ತಾರೆ ಅವರಿಗೆ ವಿಕರ್ಮಾಜೀತರು ಎಂದು ಹೇಳಲಾಗುತ್ತದೆ. ಪತಿತರಿಗೆ ವಿಕರ್ಮಿ, ಪಾವನರಿಗೆ ಸುಕರ್ಮಿಯೆಂದು ಹೇಳುತ್ತಾರೆ. ವಿಕರ್ಮಾಜೀತ ರಾಜ್ಯ ಸತ್ಯಯುಗದಲ್ಲಿ ಇರುತ್ತದೆ, ನಂತರ ವಿಕರ್ಮದ ವರ್ಷ ನಡೆಯುತ್ತದೆ. 2500 ವರ್ಷಗಳು ವಿಕರ್ಮಾಜೀತ್ ಆಗಿದ್ದು ನಂತರ ಅವರೇ ವಿಕರ್ಮಿಗಳಾಗುತ್ತಾರೆ. ಈಗ ನೀವು ವಿಕರ್ಮಾಜೀತ್ ರಾಜ್ಯದಲ್ಲಿ ಬರುವ ಸಲುವಾಗಿ ಪುರುಷಾರ್ಥವನ್ನು ಮಾಡುತಿದ್ದೀರಿ. ಮೋಹಜೀತ್ ರಾಜನ ಅತಿ ದೊಡ್ಡ ಕಥೆ ಇದೆ. ಪತಿತ ರಾಜ್ಯ ಯಾವಾಗ ನಡೆಯುತ್ತದೆ, ಪಾವನ ರಾಜ್ಯ ಯಾವಾಗ ನಡೆಯುತ್ತದೆ, ಈ ಎಲ್ಲವನ್ನು ನೀವೇ ತಿಳಿದುಕೊಂಡಿದ್ದೀರಿ. ಶಿವ ತಂದೆಯು ಪಾವನ ಮಾಡುತ್ತಾರೆ, ಅವರ ಚಿತ್ರವೂ ಸಹ ಇದೆ. ರಾವಣ ಪತಿತ ಮಾಡುತ್ತಾನೆ, ಅವರ ಚಿತ್ರವೂ ಇದೆ. ಇದು ರಾವಣ ರಾಜ್ಯವಾಗಿದೆ ಎಂದು ಈಗ ನೀವು ತಿಳಿದುಕೊಂಡಿದ್ದೀರಿ ಆದುದರಿಂದ ಈ ಸೃಷ್ಟಿಚಕ್ರದ ಚಿತ್ರದಮೇಲೆ ಈ ರೀತಿ ಬರೆಯಬೇಕು – ಇಂದಿನ ಭಾರತ, ನಾಳೆಯ ಭಾರತ (ಭಾರತ್ ಟುಡೆ, ಭಾರತ್ ಟುಮಾರೊ) ಮಾಡಬೇಕಲ್ಲವೇ.

ಇದು ಮೃತ್ಯುಲೋಕವೇ ಆಗಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಇಲ್ಲಿ ಅಕಾಲ ಮೃತ್ಯು ಆಗುತ್ತಿರುತ್ತದೆ. ಅಲ್ಲಿ ಈ ರೀತಿ ಆಗುವುದಿಲ್ಲ. ಆದುದರಿಂದ ಅದನ್ನು ಅಮರಲೋಕವೆಂದು ಕರೆಯಲಾಗುವುದು. ರಾಮ ರಾಜ್ಯ ಸತ್ಯಯುಗದಿಂದ ಪ್ರಾರಂಭವಾಗುತ್ತದೆ. ರಾವಣ ರಾಜ್ಯ ದ್ವಾಪರ ಯುಗದಿಂದ ಪ್ರಾರಂಭವಾಗುತ್ತದೆ. ಈ ಎಲ್ಲಾ ಮಾತುಗಳನ್ನು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಮನುಷ್ಯರೆಲ್ಲರೂ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ನಾನು ಮಕ್ಕಳಿಗೆ ಎಲ್ಲಾ ರಹಸ್ಯವನ್ನು ತಿಳಿಸುತ್ತೇನೆ. ನೀವು ಬ್ರಹ್ಮಾ ಮುಖವಂಶಾವಳಿ ಆಗಿದ್ದೀರಿ, ನಾನು ನಿಮಗೆ ತಿಳಿಸುತ್ತೇನೆ. ಇದರಲ್ಲಿ ಈ ಬ್ರಹ್ಮಾ, ಸರಸ್ವತಿ ಎಲ್ಲರೂ ಸಹ ಬರುತ್ತಾರೆ. ಇವರು ಜಗದಂಬಾ ಆಗಿದ್ದಾರೆ. ಮಹಿಮೆಗಾಗಿ ಇವರಿಗೆ ಗಾಯನವಿದೆ. ವಾಸ್ತವದಲ್ಲಿ ಹಿರಿಯ ತಾಯಿ ಬ್ರಹ್ಮಾ ಆಗಿದ್ದಾರಲ್ಲವೇ! ಆದರೆ ಪುರುಷನ ಶರೀರವಾಗಿದೆ. ಇವೆಲ್ಲವೂ ತುಂಬಾ ರಹಸ್ಯವಾದ ಮಾತುಗಳಾಗಿವೆ. ಜಗದಂಬಾರವರಿಗೂ ಅಗತ್ಯವಾಗಿ ಯಾರದರೂ ತಾಯಿ ಇರಬೇಕಲ್ಲವೇ! ಬ್ರಹ್ಮನ ಮಗಳಂತು ಆಗಿದ್ದಾರೆ ಆದರೆ ಸರಸ್ವತಿಯ ತಾಯಿ ಎಲ್ಲಿದ್ದಾರೆ? ಯಾರ ಮೂಲಕ ಇವರನ್ನು ರಚಿಸಲಾಯಿತು. ರಚಯಿತನಂತು ಬ್ರಹ್ಮಾ ಆಗುತ್ತಾರೆ. ಬ್ರಹ್ಮಾ ಹಿರಿಯ ತಾಯಿ ಆಗಿದ್ದಾರೆ. ಇವರ ಮೂಲಕ ಮಕ್ಕಳನ್ನು ರಚಿಸುತ್ತಾರೆ. ಈ ಮಾತುಗಳನ್ನು ತಿಳಿದುಕೊಳ್ಳಲು ಬಹಳ ವಿಶಾಲ ಬುದ್ಧಿ ಬೇಕಾಗುತ್ತದೆ. ಕುಮಾರಿಯರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಮಮ್ಮಾ ಸಹ ಕುಮಾರಿಯಾಗಿದ್ದಾರೆ. ಯಾವಾಗ ಬ್ರಹ್ಮಚರ್ಯದ ಉಲ್ಲಂಘನೆ ಆಗುತ್ತದೆ ಆಗ ಧಾರಣೆಯಾಗುವುದಿಲ್ಲ. ಸತ್ಯಯುಗದಲ್ಲಿ ಗೃಹಸ್ಥ ಧರ್ಮವಿತ್ತು ಆದರೆ ಅವರಿಗೆ ಪಾವನರೆಂದು ಕರೆಯಲಾಗುತ್ತದೆ. ಇಲ್ಲಿ ಪತಿತರಿದ್ದಾರೆ. ಶ್ರೀಕೃಷ್ಣನಿಗೆ ಎಷ್ಟೊಂದು ಈ ರೀತಿ ಮಹಿಮೆ ಮಾಡುತ್ತಾರೆ – ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ…….. ಇಲ್ಲಿ ಯಾವ ಮನುಷ್ಯನು ಹೀಗೆ ಇರುವುದಿಲ್ಲ. ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ. ದೇಹದ ಅಹಂಕಾರದ ಹೆಸರೂ ಸಹ ಇರುವುದಿಲ್ಲ. ಅಲ್ಲಿ ಅವರಿಗೆ ನಾವು ಈ ಹಳೆಯ ಶರೀರವನ್ನು ಬಿಟ್ಟು ಬೇರೆ ಶರೀರವನ್ನು ತೆಗೆದುಕೊಳ್ಳುತ್ತೇವೆಂಬ ಜ್ಞಾನವಿರುತ್ತದೆ. ಅವರು ಆತ್ಮಾಭಿಮಾನಿಗಳಾಗಿರುತ್ತಾರೆ. ಇಲ್ಲಿ ದೇಹಾಭಿಮಾನದಲ್ಲಿ ಇದ್ದಾರೆ. ತಮ್ಮನ್ನು ಆತ್ಮನೆಂದು ತಿಳಿದು ನೀವು ಹಳೆಯ ಶರೀರವನ್ನು ಬಿಟ್ಟು ಹಿಂತಿರುಗಬೇಕು. ನಂತರ ಹೊಸ ಪ್ರಪಂಚದಲ್ಲಿ ಹೊಸ ಶರೀರವನ್ನು ತೆಗೆದುಕೊಳ್ಳುತ್ತೀರೆಂದು ನಿಮಗೆ ಕಲಿಸಲಾಗುತ್ತದೆ. ತಿಳಿಯಿತಲ್ಲವೇ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನಿರಂತರ ನೆನಪಿನಲ್ಲಿರಲು ನಿಮ್ಮ ಹೃದಯದ ಪ್ರೀತಿಯನ್ನು ಒಬ್ಬ ತಂದೆಯ ಜೊತೆ ಇಡಬೇಕು. ಎಂದಿಗೂ ಪ್ರಿಯತಮನನ್ನು ಮರೆಯಬಾರದು.

2. ವಿಕರ್ಮಾಜೀತ ರಾಜ್ಯದಲ್ಲಿ ಹೋಗುವ ಸಲುವಾಗಿ ಮೋಹಾಜೀತರಾಗಬೇಕು, ಸುಕರ್ಮವನ್ನು ಮಾಡಬೇಕು. ಯಾವುದೇ ವಿಕರ್ಮವನ್ನು ಮಾಡಬಾರದು.

ವರದಾನ:-

ಒಂದುವೇಳೆ ಯಾವುದೇ ಅಸತ್ಯ ಅಥವಾ ವ್ಯರ್ಥ ಮಾತುಗಳನ್ನು ನೋಡಿದಿರಿ ಅಥವಾ ಕೇಳಿದಿರಿ ಮತ್ತು ಅದನ್ನು ವಾಯುಮಂಡಲದಲ್ಲಿ ಹರಡಿದಿರಿ, ವ್ಯರ್ಥ ಮಾತುಗಳನ್ನು ಕೇಳಿಸಿಕೊಂಡು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳದೆ ಹರಡಿದರೂ ಸಹ ಪಾಪದ ಅಂಶವಾಗಿದೆ. ಈ ಚಿಕ್ಕ ಪುಟ್ಟ ಪಾಪಗಳು ಹಾರುವ ಕಲೆಯ ಅನುಭವವನ್ನೇ ಸಮಾಪ್ತಿಗೊಳಿಸುತ್ತದೆ. ಇಂತಹ ಸಮಾಚಾರವನ್ನು ಕೇಳುವವರ ಮೇಲೂ ಪಾಪ ಹಾಗೂ ತಿಳಿಸುವವರ ಮೇಲೆ ಅದಕ್ಕಿಂತಲೂ ಪಾಪವೇರುವುದು. ಆದ್ದರಿಂದ ತಮ್ಮ ಸೂಕ್ಷ್ಮ ಪರಿಶೀಲನೆ ಮಾಡಿಕೊಳ್ಳುತ್ತಾ, ಪಾಪಗಳ ಹೊರೆಯನ್ನು ಸಮಾಪ್ತಿ ಮಾಡುತ್ತೀರೆಂದರೆ ತಂದೆಯ ಸಮಾನ ಅಥವಾ ಸಂಪನ್ನರಾಗಲು ಸಾಧ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top