01 September 2021 KANNADA Murli Today | Brahma Kumaris

Read and Listen today’s Gyan Murli in Kannada

August 31, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಪ್ರಾತಃ ಮುರುಳಿ ಓಂ ಶಾಂತಿ ``ಬಾಪ್ದಾದಾ'' ಮಧುಬನ

ಪ್ರಶ್ನೆ:: -

ಯಾವ ನಿಶ್ಚಯವು ಅದೃಷ್ಠವಂತ ಮಕ್ಕಳಲ್ಲಿಯೇ ಇರುತ್ತದೆ?

ಉತ್ತರ:-

ನಮ್ಮ ಶ್ರೇಷ್ಠ ಅದೃಷ್ಠವನ್ನು ಬೆಳಗಿಸಲು ಸ್ವಯಂ ತಂದೆಯೇ ಬಂದಿದ್ದಾರೆ. ತಂದೆಯಿಂದ ನಮಗೆ ಭಕ್ತಿಯ ಫಲವು ಸಿಗುತ್ತಿದೆ. ಮಾಯೆಯು ಯಾವ ರೆಕ್ಕೆಗಳನ್ನು ಕತ್ತರಿಸಿದೆಯೋ ಆ ರೆಕ್ಕೆಗಳನ್ನು ಕೊಟ್ಟು, ತನ್ನ ಜೊತೆ ಹಿಂತಿರುಗಿ ಕರೆದುಕೊಂಡು ಹೋಗುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ಈ ನಿಶ್ಚಯವು ಅದೃಷ್ಠವಂತ ಮಕ್ಕಳಲ್ಲಿಯೇ ಉಂಟಾಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಬೆಳಗ್ಗೆ ಯಾರು ಬಂದರು…

ಓಂ ಶಾಂತಿ. ಬೆಳಗ್ಗೆ-ಬೆಳಗ್ಗೆ ಯಾರು ಬಂದು ಮುರುಳಿಯನ್ನು ನುಡಿಸುವರು? ಪ್ರಪಂಚದವರಂತು ಸಂಪೂರ್ಣವಾಗಿ ಕಗ್ಗತ್ತಲೆಯಲ್ಲಿ ಇದ್ದಾರೆ. ನೀವೀಗ ಜ್ಞಾನ ಸಾಗರ, ಪತಿತ-ಪಾವನ ಪ್ರಾಣೇಶ್ವರ ತಂದೆಯಿಂದ ಮುರುಳಿಯನ್ನು ಆಲಿಸುತ್ತಿದ್ದೀರಿ. ಆ ತಂದೆಯು ಪ್ರಾಣವನ್ನು ರಕ್ಷಿಸುವಂತಹ ಈಶ್ವರನಾಗಿದ್ದಾರೆ. ಹೇ ಈಶ್ವರ ಈ ದುಃಖದಿಂದ ರಕ್ಷಣೆ ಮಾಡು ಎಂದು ಹೇಳುತ್ತಾರಲ್ಲವೆ! ಅವರು ಅಲ್ಪಕಾಲದ ಸಹಯೋಗವನ್ನು ಬೇಡುವರು. ನೀವು ಮಕ್ಕಳಿಗೆ ಈಗ ಬೇಹದ್ದಿನ ಸಹಯೋಗವು ಸಿಗುವುದು ಏಕೆಂದರೆ ಬೇಹದ್ದಿನ ತಂದೆಯಲ್ಲವೆ. ನೀವು ತಿಳಿದುಕೊಂಡಿದ್ದೀರಿ – ಆತ್ಮವು ಗುಪ್ತವಾಗಿದೆ, ತಂದೆಯೂ ಗುಪ್ತವಾಗಿದ್ದಾರೆ. ಯಾವಾಗ ಮಕ್ಕಳ ಶರೀರವು ಪ್ರತ್ಯಕ್ಷವಾಗಿ ಇದೆಯೆಂದರೆ ತಂದೆಯೂ ಪ್ರತ್ಯಕ್ಷವಾಗಿ ಇದ್ದಾರೆ. ಆತ್ಮವು ಗುಪ್ತವಾಗಿದೆಯೆಂದರೆ ತಂದೆಯೂ ಗುಪ್ತವಾಗಿದ್ದಾರೆ. ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುವುದಕ್ಕಾಗಿ ತಂದೆಯು ಬಂದಿದ್ದಾರೆ ಎಂಬುದು ನೀವು ಮಕ್ಕಳಿಗೆ ಗೊತ್ತಿದೆ. ಅವರದೇ ಶ್ರೀಮತವಾಗಿದೆ, ಸರ್ವ ಶಾಸ್ತ್ರಮಯಿ ಶಿರೋಮಣಿ ಗೀತೆಯೂ ಪ್ರಸಿದ್ಧವಿದೆ, ಅದರಲ್ಲಿ ಕೇವಲ ಹೆಸರನ್ನು ಬದಲಾಯಿಸಿ ಬಿಟ್ಟಿದ್ದಾರೆ. ಈಗ ನೀವು ಶ್ರೀಮತ್ ಭಗವಾನುವಾಚ ಆಗಿದೆ ಎಂದು ತಿಳಿದಿದ್ದೀರಲ್ಲವೆ. ಇದೂ ಸಹ ತಿಳಿದಿದ್ದೀರಿ – ಭ್ರಷ್ಟಾಚಾರಿಗಳನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡುವಂತಹವರು ಒಬ್ಬ ತಂದೆಯೇ ಆಗಿದ್ದಾರೆ, ಅವರೇ ನರನಿಂದ ನಾರಾಯಣನನ್ನಾಗಿ ಮಾಡುವರು. ಕಥೆಯೂ ಸಹ ಸತ್ಯ ನಾರಾಯಣನದಿದೆ. ಅಮರ ಕಥೆಯು ಅಮರಪುರಿಯ ಮಾಲೀಕರಾಗುವ ಅಥವಾ ನರನಿಂದ ನಾರಾಯಣನಾಗುವ ಕಥೆಯೆಂದು ಮಹಿಮೆ ಮಾಡಲಾಗುತ್ತದೆ. ಮಾತಂತು ಒಂದೇ ಆಗಿದೆ, ಇದಂತು ಮೃತ್ಯುಲೋಕವಾಗಿದೆ. ಭಾರತವೇ ಅಮರ ಪುರಿಯಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ. ಇಲ್ಲಿಯೂ ಸಹ ಅಮರ ತಂದೆಯು ಭಾರತವಾಸಿಗಳಿಗೆ ತಿಳಿಸಿದ್ದಾರೆ. ಒಬ್ಬ ಪಾರ್ವತಿ ಅಥವಾ ಒಬ್ಬ ದ್ರೌಪದಿಯಿರಲಿಲ್ಲ, ಇದನ್ನಂತು ಬಹಳ ಮಕ್ಕಳು ಕೇಳಿಸಿಕೊಳ್ಳುತ್ತಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ. ತಂದೆಯು ಹೇಳುವರು – ನಾನು ಬ್ರಹ್ಮಾರವರ ಮೂಲಕ ಮಧುರಾತಿ ಮಧುರ ಆತ್ಮಗಳಿಗೆ ತಿಳಿಸುವೆನು. ಮಕ್ಕಳು ಅವಶ್ಯವಾಗಿ ಆತ್ಮಾಭಿಮಾನಿ ಆಗಬೇಕೆಂಬುದನ್ನು ತಂದೆಯು ತಿಳಿಸಿದ್ದಾರೆ. ತಂದೆಯೇ ಈ ರೀತಿ ಮಾಡಲು ಸಾಧ್ಯ. ಇಡೀ ಪ್ರಪಂಚದಲ್ಲಿ ಆತ್ಮನ ಜ್ಞಾನವನ್ನು ಅರಿತಿರುವ ಒಬ್ಬ ಮನುಷ್ಯನೂ ಇಲ್ಲ. ಆತ್ಮನ ಬಗ್ಗೆಯೇ ಜ್ಞಾನ ಇಲ್ಲವೆಂದ ಮೇಲೆ ಪರಮಪಿತ ಪರಮಾತ್ಮನ ಜ್ಞಾನವಿರಲು ಹೇಗೆ ಸಾಧ್ಯ! ಈ ರೀತಿ ಹೇಳಿ ಬಿಡುತ್ತಾರೆ – ಆತ್ಮನೇ ಪರಮಾತ್ಮ. ಇಡೀ ಪ್ರಪಂಚವು ಎಷ್ಟೊಂದು ದೊಡ್ಡ ಅಜ್ಞಾನದಲ್ಲಿ ಸಿಲುಕಿಕೊಂಡಿದೆ! ಈ ಸಮಯದ ಮನುಷ್ಯರ ಬುದ್ಧಿಯು ಯಾವುದೇ ಕೆಲಸಕ್ಕೆ ಉಪಯೋಗವಾಗುವುದಿಲ್ಲ. ತನ್ನದೇ ವಿನಾಶಕ್ಕಾಗಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನೀವು ಮಕ್ಕಳಿಗಂತು ಇದ್ಯಾವುದೂ ಹೊಸ ಮಾತಲ್ಲ. ಡ್ರಾಮಾನುಸಾರ ಅವರುಗಳ ಪಾತ್ರವೂ ಇದೆ, ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಇತ್ತೀಚಿಗೆ ಪ್ರಪಂಚದಲ್ಲಿ ಬಹಳಷ್ಟು ಗಲಾಟೆಗಳಿವೆ. ಈಗ ನೀವು ಮಕ್ಕಳು ವಿನಾಶಕಾಲೇ ಪ್ರೀತಿ ಬುದ್ಧಿಯವರಾಗಿದ್ದೀರಿ, ಯಾರು ತಂದೆಯಿಂದ ವಿಪರೀತ ಬುದ್ಧಿಯವರಿದ್ದಾರೆಯೋ ಅವರಿಗಾಗಿ ವಿನಃಶ್ಯಂತಿ ಎಂದು ಗಾಯನವಿದೆ. ಈಗ ಈ ಪ್ರಪಂಚವನ್ನು ಪರಿವರ್ತಿಸಬೇಕಾಗಿದೆ, ಇದೂ ಸಹ ತಿಳಿದಿದೆ – ಅವಶ್ಯವಾಗಿ ಮಹಾಭಾರತ ಯುದ್ಧವಾಗಿತ್ತು, ತಂದೆಯು ರಾಜಯೋಗವನ್ನು ಕಲಿಸಿಕೊಟ್ಟಿದ್ದರು. ಶಾಸ್ತ್ರಗಳಲ್ಲಂತು ಸಂಪೂರ್ಣವಾಗಿ ವಿನಾಶವನ್ನೇ ಬರೆದು ಬಿಟ್ಟಿದ್ದಾರೆ ಆದರೆ ಸಂಪೂರ್ಣವಾಗಿ ವಿನಾಶವಂತು ಆಗುವುದಿಲ್ಲ, ಹಾಗಾದರೆ ಮತ್ತೆ ಪ್ರಳಯ ಆಗಿ ಬಿಡುತ್ತದೆ. ಯಾವುದೇ ಮನುಷ್ಯರೇ ಇರುವುದಿಲ್ಲ ಕೇವಲ ಪಂಚ ತತ್ವಗಳಷ್ಟೆ ಉಳಿದುಕೊಳ್ಳುತ್ತದೆ. ಈ ರೀತಿಯಂತು ಆಗಲು ಸಾಧ್ಯವಿಲ್ಲ. ಪ್ರಳಯವಾಗಿ ಬಿಟ್ಟರೆ ಮತ್ತೆ ಮನುಷ್ಯರೆಲ್ಲಿಂದ ಬರುವರು. ಆನಂತರ ತೋರಿಸುತ್ತಾರೆ – ಬೆರಳನ್ನು ಚೀಪುತ್ತಿರುವ ಕೃಷ್ಣನು, ಸಾಗರದಲ್ಲಿ ಆಲದ ಎಲೆಯ ಮೇಲೆ ಬಂದನು. ಬಾಲಕನು ಈ ರೀತಿ ಬರಲು ಹೇಗೆ ಸಾಧ್ಯ! ಶಾಸ್ತ್ರಗಳಲ್ಲಿ ಅಂತಂತಹ ಮಾತುಗಳನ್ನು ಬರೆದು ಬಿಟ್ಟಿದ್ದಾರೆ, ಆ ಮಾತನ್ನು ಕೇಳಲೇಬೇಡಿ. ಈಗ ನೀವು ಕುಮಾರಿಯರ ಮೂಲಕ ಈ ವಿದ್ವಾನರು, ಭೀಷ್ಮ ಪಿತಾಮಹ ಮುಂತಾದವರಿಗೂ ಜ್ಞಾನ ಬಾಣವು ನಾಟಬೇಕಾಗಿದೆ. ಅವರೂ ಸಹ ಮುಂದೆ ನಡೆದಂತೆ ಬರುವರು. ನೀವು ಎಷ್ಟೆಷ್ಟು ಸೇವೆಯಲ್ಲಿ ಒತ್ತು ಕೊಡುವಿರಿ, ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡುತ್ತಾ ಇರುವಿರೋ ಅಷ್ಟು ನಿಮ್ಮ ಪ್ರಭಾವವಾಗುವುದು. ಹಾ! ಅದರಲ್ಲಿ ವಿಘ್ನಗಳೂ ಬೀಳುತ್ತವೆ, ಅದರ ಬಗ್ಗೆ ಗಾಯನವೂ ಇದೆ – ಈ ಜ್ಞಾನ ಯಜ್ಞದಲ್ಲಿ ಆಸುರೀ ಸಂಪ್ರದಾಯದವರ ಬಹಳ ವಿಘ್ನಗಳುಂಟಾಗುತ್ತವೆ. ನೀವು ಕಲಿಸಿಕೊಡಲು ಸಾಧ್ಯವಿಲ್ಲ, ಜ್ಞಾನ ಹಾಗೂ ಯೋಗವನ್ನು ತಂದೆಯೇ ಕಲಿಸಿಕೊಡುತ್ತಿದ್ದಾರೆ. ಒಬ್ಬ ತಂದೆಯವರೇ ಸದ್ಗತಿದಾತಾ ಆಗಿದ್ದಾರೆ, ಅವರೇ ಪತಿತರನ್ನು ಪಾವನರನ್ನಾಗಿ ಮಾಡುವರು ಅಂದಮೇಲೆ ಅವಶ್ಯವಾಗಿ ಪತಿತರಿಗೇ ಜ್ಞಾನವನ್ನು ಕೊಡುವರಲ್ಲವೆ! ತಂದೆಯ ಬಗ್ಗೆ ಯಾವಾಗ ಸರ್ವವ್ಯಾಪಿ ಎಂದು ಹೇಳುತ್ತಾರೆಂದರೆ ಒಪ್ಪಿಕೊಳ್ಳಲು ಸಾಧ್ಯವೇ! ನೀವು ಮಕ್ಕಳು ತಿಳಿದಿದ್ದೀರಿ – ನಾವು ಪಾರಸ ಬುದ್ಧಿಯವರಾಗಿ ಪಾರಸನಾಥರು ಆಗುವೆವು. ಮನುಷ್ಯರು ಎಷ್ಟೊಂದು ಮಂದಿರಗಳ ನಿರ್ಮಾಣ ಮಾಡುವರು ಆದರೆ ಅವರು ಯಾರು, ಅವರು ಏನು ಮಾಡಿ ಹೋದರು ಎನ್ನುವುದರ ಅರ್ಥವನ್ನೇ ತಿಳಿದುಕೊಂಡಿಲ್ಲ. ಪಾರಸನಾಥನ ಮಂದಿರವಿದೆ, ಭಾರತವು ಪಾರಸಪುರಿ ಆಗಿತ್ತು.ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳಿದ್ದವು, ಇದು ನೆನ್ನೆಯ ಮಾತಾಗಿದೆ. ಅವರಂತು ಕೇವಲ ಸತ್ಯಯುಗಕ್ಕೇ ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಹಾಗೂ ತಂದೆಯು ಹೇಳುತ್ತಾರೆ – ಇಡೀ ಡ್ರಾಮಾವೇ 5 ಸಾವಿರ ವರ್ಷಗಳದ್ದಾಗಿದೆ ಆದ್ದರಿಂದ ಹೇಳಲಾಗುತ್ತದೆ – ಇಂದಿನ ಭಾರತವೇನಾಗಿದೆ, ನೆನ್ನೆಯ ಭಾರತವೇನಾಗಿತ್ತು. ಲಕ್ಷಾಂತರ ವರ್ಷಗಳ ಮಾತನ್ನಂತು ಯಾರಿಗೂ ಸ್ಮೃತಿಯಲ್ಲಿರಲು ಸಾಧ್ಯವಿಲ್ಲ. ನೀವು ಮಕ್ಕಳಿಗೀಗ ಸ್ಮೃತಿ ಪ್ರಾಪ್ತಿಯಾಗಿದೆ. ಇದು 5 ಸಾವಿರ ವರ್ಷಗಳ ಮಾತಾಗಿದೆ ಎನ್ನುವುದು ಗೊತ್ತಿದೆ. ಬಾಬಾರವರು ಹೇಳುತ್ತಾರೆ – ಯೋಗದಲ್ಲಿ ಕುಳಿತುಕೊಳ್ಳಿರಿ, ತಮ್ಮನ್ನು ಆತ್ಮನೆಂದು ತಿಳಿದುಕೊಂಡು ತಂದೆಯನ್ನು ನೆನಪು ಮಾಡಿರಿ, ಇದು ಜ್ಞಾನವಾಗಿದೆ ಅಲ್ಲವೆ. ಅವರಂತು ಹಠಯೋಗಿ ಆಗಿದ್ದಾರೆ, ಕಾಲಿನ ಮೇಲೆ ಕಾಲನ್ನು ಇಟ್ಟುಕೊಂಡು (ಪದ್ಮಾಸನ) ಕುಳಿತುಕೊಳ್ಳುವರು, ಏನೇನು ಮಾಡುವರು! ನೀವು ಮಾತೆಯರಂತು ಈ ರೀತಿ ಮಾಡಲು ಸಾಧ್ಯವಿಲ್ಲ, ಆ ರೀತಿ ಕುಳಿತುಕೊಳ್ಳುವುದಕ್ಕೂ ಆಗುವುದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಚಿತ್ರಗಳಿವೆ. ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ನೀವು ಇದೆಲ್ಲವನ್ನು ಮಾಡುವ ಅವಶ್ಯಕತೆಯಿದೆ. ಶಾಲೆಯಲ್ಲಿ ವಿದ್ಯಾರ್ಥಿಯು ಕಾಯಿದೆಯನುಸಾರವಾಗಿ ಕುಳಿತುಕೊಳ್ಳುವರು. ತಂದೆಯು ಅದನ್ನೂ ಹೇಳುವುದಿಲ್ಲ. ಹೇಗೆ ಬೇಕೋ ಹಾಗೆ ಕುಳಿತುಕೊಳ್ಳಿರಿ, ಕುಳಿತುಕೊಂಡು ಸುಸ್ತಾಗುತ್ತೀರೆಂದರೆ ಮಲಗಿ ಬಿಡಿ. ಬಾಬಾರವರು ಯಾವುದೇ ಮಾತಿನಲ್ಲಿ ಬೇಡ ಎಂದು ಹೇಳುವುದಿಲ್ಲ. ಇದಂತು ಬಹಳ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ, ಇದರಲ್ಲಿ ಯಾವುದೇ ಕಷ್ಟದ ಮಾತೇ ಇಲ್ಲ. ಭಲೆ ಯಾರೆಷ್ಟೇ ರೋಗಿಯಾಗಿರಬಹುದು, ಹಾ! ಮುರುಳಿಯನ್ನು ಕೇಳುತ್ತಾ-ಕೇಳುತ್ತಾ ಶಿವ ತಂದೆಯ ನೆನಪಿನಲ್ಲಿ ಇರುತ್ತಾ-ಇರುತ್ತಾ ತನುವಿನಿಂದ ಪ್ರಾಣವು ಹೊರಟು ಹೋಗಲಿ…. ಹೀಗೂ ಆಗಬಹುದು. ಗಾಯನವಿದೆಯಲ್ಲವೆ – ಗಂಗಾ ಜಲ ಮುಖದಲ್ಲಿರಲಿ….. ಆಗ ಪ್ರಾಣವು ತನುವಿನಿಂದ ಹೊರಟು ಹೋಗಲಿ. ಅದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಇದು ವಾಸ್ತವದಲ್ಲಿ ಜ್ಞಾನದ ಮಾತುಗಳಾಗಿವೆ. ನಿಮಗೆ ಗೊತ್ತಿದೆ – ಸತ್ಯವಾಗಿಯೂ ಹೀಗೆಯೇ ತನುವಿನಿಂದ ಪ್ರಾಣವು ಹೋಗಬೇಕು. ನೀವು ಮಕ್ಕಳು ಬರುತ್ತೀರೆಂದರೆ, ನಮ್ಮನ್ನು ಬಿಟ್ಟು ಹೋಗುತ್ತೀರಿ. ತಂದೆಯು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವರು ಎಂದು ಹೇಳುತ್ತಾರೆ. ನಾವು ಬಂದಿರುವುದೇ ನೀವು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ. ನಿಮಗೆ ಮನೆಯ ವಿಳಾಸವೂ ಗೊತ್ತಿಲ್ಲ, ಆತ್ಮದ ಬಗ್ಗೆಯೂ ಅರಿವಿಲ್ಲ. ಮಾಯೆಯು ಸಂಪೂರ್ಣವಾಗಿಯೇ ರೆಕ್ಕೆಗಳನ್ನು ಕತ್ತರಿಸಿ ಬಿಟ್ಟಿದೆ. ಆದ್ದರಿಂದ ಆತ್ಮವು ಹಾರುವುದಕ್ಕೆ ಆಗುತ್ತಿಲ್ಲ ಏಕೆಂದರೆ ತಮೋಪ್ರಧಾನವಾಗಿದೆ. ಎಲ್ಲಿಯವರೆಗೆ ಸತೋಪ್ರಧಾನ ಆಗುವುದಿಲ್ಲವೋ ಅಲ್ಲಿಯವರೆಗೆ ಶಾಂತಿಧಾಮಕ್ಕೆ ಹೋಗಲು ಹೇಗೆ ಸಾಧ್ಯ! ಇದೂ ಸಹ ಗೊತ್ತಿದೆ – ಡ್ರಾಮಾನುಸಾರ ಎಲ್ಲರೂ ತಮೋಪ್ರಧಾನರು ಆಗಲೇಬೇಕು.ಈ ಸಮಯದಲ್ಲಿ ಇಡೀ ವೃಕ್ಷವೇ ಟೊಳ್ಳಾಗಿ ಬಿಟ್ಟಿದೆ. ಇಲ್ಲಿ ಯಾರದೂ ಸಹ ಸತೋಪ್ರಧಾನ ಸ್ಥಿತಿಯಾಗಲು ಸಾಧ್ಯವಿಲ್ಲ. ಇಲ್ಲಿ ಆತ್ಮವು ಪವಿತ್ರವಾಗಿ ಬಿಟ್ಟರೆ, ಇಲ್ಲಿ ನಿಲ್ಲಲು ಸಾಧ್ಯವಿರುವುದಿಲ್ಲ. ಇಲ್ಲಿಂದ ಹೊರಟು ಹೋಗುವುದು. ಎಲ್ಲರೂ ಮುಕ್ತಿಗಾಗಿಯೇ ಭಕ್ತಿ ಮಾಡುವರು ಆದರೆ ಯಾರೂ ಸಹ ಹಿಂತಿರುಗಲು ಸಾಧ್ಯವಿಲ್ಲ, ಹಿಂತಿರುಗಲು ನಿಯಮವೂ ಹೇಳುವುದಿಲ್ಲ. ತಂದೆಯು ಇವೆಲ್ಲಾ ರಹಸ್ಯಗಳನ್ನು ಧಾರಣೆ ಮಾಡಿಕೊಳ್ಳುವುದಕ್ಕಾಗಿ ತಿಳಿಸುತ್ತಾರೆ. ಇಷ್ಟೆಲ್ಲಾ ತಿಳಿಸಿದ ನಂತರವೂ ಮುಖ್ಯವಾದ ಮಾತು- ತಂದೆಯನ್ನು ನೆನಪು ಮಾಡುವುದು, ಸ್ವದರ್ಶನ ಚಕ್ರಧಾರಿ ಆಗುವುದಾಗಿದೆ. ಬೀಜವನ್ನು ನೆನಪು ಮಾಡುವುದರಿಂದ ಇಡೀ ವೃಕ್ಷವೇ ಬುದ್ಧಿಯಲ್ಲಿ ಬರುವುದು. ನೀವು ಒಂದು ಸೆಕೆಂಡಿನಲ್ಲಿ ಎಲ್ಲವನ್ನೂ ತಿಳಿದುಕೊಳ್ಳುತ್ತೀರಿ. ಮನುಷ್ಯ ಸೃಷ್ಟಿಯ ಬೀಜರೂಪನು ಸರ್ವರ ತಂದೆಯು ಒಬ್ಬರಾಗಿದ್ದಾರೆ ಎಂಬುದನ್ನು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಕೃಷ್ಣನು ಭಗವಂತನಲ್ಲ, ಕೃಷ್ಣನ್ನೇ ಶ್ಯಾಮ ಸುಂದರನೆಂದು ಹೇಳುವರು. ಯಾವುದೋ ತಕ್ಷಕ ಸರ್ಪವು ಬಂದು ಕಚ್ಚಿತು ಆದ್ದರಿಂದ ಕಪ್ಪಾದನು – ಹೀಗಲ್ಲ. ಇದಂತು ಕಾಮ ಚಿತೆಯ ಮೇಲೇರುವುದರಿಂದ ಮನುಷ್ಯನು ಕಪ್ಪಾಗುವನು. ರಾಮನನ್ನೂ ಕಪ್ಪಾಗಿಯೇ ತೋರಿಸುವರು, ಅವರನ್ನು ಏನು ಕಚ್ಚಿತು ಎನ್ನುವುದನ್ನೇನೂ ತಿಳಿದುಕೊಳ್ಳುವುದಿಲ್ಲ. ಆದರೂ ಯಾರ ಅದೃಷ್ಟದಲ್ಲಿದೆ, ನಿಶ್ಚಯವಿದೆಯೋ ಅವರೇ ಅವಶ್ಯವಾಗಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವರು. ನಿಶ್ಚಯವಿಲ್ಲದಿದ್ದರೆ ಎಂದಿಗೂ ತಿಳಿದುಕೊಳ್ಳುವುದಿಲ್ಲ. ಅದೃಷ್ಟದಲ್ಲಿ ಎಂದರೆ ಪುರುಷಾರ್ಥವನ್ನೇನು ಮಾಡುವರು! ಅದೃಷ್ಟದಲ್ಲಿ ಇಲ್ಲದಿದ್ದರೆ ಕುಳಿತುಕೊಂಡಿದ್ದರೂ ಏನೂ ತಿಳಿಯುತ್ತಿಲ್ಲ ಎನ್ನುವಂತೆಯೇ ಕುಳಿತುಕೊಳ್ಳುವರು. ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುವುದಕ್ಕಾಗಿ ಬಂದಿದ್ದಾರೆ ಎನ್ನುವ ನಿಶ್ಚಯವೂ ಇರುವುದಿಲ್ಲ. ಹೇಗೆ ಯಾರೇ ಹೊಸ ವ್ಯಕ್ತಿಯು ಮೆಡಿಕಲ್ ಕಾಲೇಜಿಗೆ ಹೋಗಿ ಕುಳಿತುಕೊಂಡರೆ ಏನು ತಿಳಿಯುವರು, ಏನೂ ತಿಳಿಯುವುದಿಲ್ಲ. ಇಲ್ಲಿಯೂ ಸಹ ಅದೇರೀತಿ ಬಂದು ಕುಳಿತುಕೊಳ್ಳುತ್ತಾರೆ. ಈ ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ. ಹಾಗಾದರೆ ಮತ್ತೆ ಅವರೇನು ಬಂದು ಮಾಡುವರು! ರಾಜಧಾನಿ ಸ್ಥಾಪನೆಯಾಗುತ್ತದೆ ಅಂದಮೇಲೆ ಅದರಲ್ಲಿ ನೌಕರ-ಕೆಲಸ ಮಾಡುವವರು, ಪ್ರಜೆ, ಪ್ರಜೆಗಳಿಗೂ ನೌಕರರು ಎಲ್ಲಾ ರೀತಿಯಾಗಿ ಬೇಕಾಗುವುದಲ್ಲವೆ. ಮುಂದೆ ನಡೆದಂತೆ ಸ್ವಲ್ಪವೇನಾದರೂ ಓದಲು ಪ್ರಯತ್ನ ಪಡುವರು ಆದರೆ ಕಷ್ಟಸಾಧ್ಯ. ಏಕೆಂದರೆ ಆ ಸಮಯದಲ್ಲಿ ಬಹಳ ಗಲಾಟೆಗಳುಂಟಾಗುತ್ತವೆ. ದಿನ ಕಳೆದಂತೆ ಬಿರುಗಾಳಿಗಳೂ ಹೆಚ್ಚಾಗುತ್ತಿರುತ್ತವೆ. ಇಷ್ಟೆಲ್ಲಾ ಸೇವಾಕೇಂದ್ರಗಳಿವೆ, ಹಲವರು ಬಂದು ಅವಶ್ಯವಾಗಿ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ಇದನ್ನೂ ಬರೆಯಲಾಗಿದೆ – ಬ್ರಹ್ಮಾನ ಮೂಲಕ ಸ್ಥಾಪನೆ, ವಿನಾಶವೂ ಸಹ ಸನ್ಮುಖದಲ್ಲಿ ನಿಂತಿದೆ. ವಿನಾಶವಂತು ಆಗಲೇಬೇಕು. ಹೇಳುವರು- ಜನ್ಮಗಳು ಕಡಿಮೆಯಾಗಲಿ ಆದರೆ ವೃಕ್ಷದ ವೃದ್ಧಿಯಂತು ಆಗಲೇಬೇಕು. ಎಲ್ಲಿಯವರೆಗೆ ತಂದೆಯಿದ್ದಾರೆಯೋ ಅಲ್ಲಿಯವರೆಗೆ ಎಲ್ಲಾ ಧರ್ಮಗಳ ಆತ್ಮರು ಇಲ್ಲಿಗೆ ಬರಲೇಬೇಕು. ಯಾವಾಗ ಹೊರಡುವ ಸಮಯವಾಗುವುದೋ ಆಗ ಅಲ್ಲಿಂದ ಆತ್ಮರು ಬರುವುದು ಸ್ಥಗಿತಗೊಳ್ಳುವುದು. ಈಗಂತು ಎಲ್ಲರೂ ಬರಲೇಬೇಕು ಆದರೆ ಈ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಭಕ್ತರ ರಕ್ಷಕ ಭಗವಂತನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಭಕ್ತರ ಮೇಲೆ ಆಪತ್ತುಗಳು ಬರುತ್ತವೆ. ರಾವಣ ರಾಜ್ಯದಲ್ಲಿ ಸಂಪೂರ್ಣವಾಗಿ ಎಲ್ಲರೂ ಪಾಪಾತ್ಮರು ಆಗಿ ಬಿಟ್ಟಿದ್ದಾರೆ. ರಾವಣ ರಾಜ್ಯವಿದೆ ಕಲಿಯುಗದ ಅಂತ್ಯದಲ್ಲಿ, ರಾಮ ರಾಜ್ಯವಿದೆ ಸತ್ಯಯುಗದ ಆದಿಯಲ್ಲಿ. ಈ ಸಮಯದಲ್ಲಿ ಎಲ್ಲರೂ ಆಸುರಿ ರಾವಣ ಸಂಪ್ರದಾಯದವರು ಇದ್ದಾರಲ್ಲವೆ. ಹೇಳುತ್ತಾರೆ – ಇಂತಹವರು ಸ್ವರ್ಗಸ್ಥರಾದರು ಅಂದಮೆಲೆ ಇದರ ಅರ್ಥ – ಇದು ನರಕವಾಗಿದೆ ಅಲ್ಲವೆ. ಸ್ವರ್ಗವಾಸಿ ಆಗುವುದಂತು ಒಳ್ಳೆಯ ಹೆಸರಾಗಿದೆ. ಇಲ್ಲಿದ್ದಾಗ ಏನಿತ್ತು, ಅವಶ್ಯವಾಗಿ ನರಕವಾಸಿ ಆಗಿದ್ದರು. ನಾವೂ ನರಕವಾಸಿ ಆಗಿದ್ದೇವೆ ಎನ್ನುವುದನ್ನೂ ತಿಳಿದುಕೊಳ್ಳುವುದಿಲ್ಲ. ಈಗ ನೀವು ತಿಳಿದುಕೊಳ್ಳುವಿರಿ – ತಂದೆಯೇ ಬಂದು ನಮ್ಮನ್ನು ಸ್ವರ್ಗವಾಸಿ ಮಾದುವರು. ಗಾಯನವೂ ಇದೆ – ಹೆವೆನ್ಲಿ ಗಾಡ್ ಫಾದರ್ (ಸ್ವರ್ಗದ ರಚೈತ). ಅವರೇ ಬಂದು ಹೆವೆನ್ನ ಸ್ಥಾಪನೆ ಮಾಡುವರು. ಎಲ್ಲರೂ ಪತಿತ-ಪಾವನ ಸೀತಾರಾಮ, ನಾವು ಪತಿತರಾಗಿದ್ದೇವೆ ಪಾವನರನ್ನಾಗಿ ಮಾಡುವವರು ತಾವಾಗಿದ್ದೀರಿ ಎಂದು ಮಹಿಮೆ ಮಾಡುವರು. ಅವರೆಲ್ಲರೂ ಭಕ್ತಿಮಾರ್ಗದ ಸೀತೆಯರಾಗಿದ್ದಾರೆ, ತಂದೆಯು ರಾಮನಾಗಿದ್ದಾರೆ. ಇದನ್ನು ಯಾರಿಗಾದರೂ ನೇರವಾಗಿ ಹೇಳಿದರೆ ಒಪ್ಪಿಕೊಳ್ಳುವುದಿಲ್ಲ. ರಾಮನನ್ನು ಕರೆಯುತ್ತಾ ಇರುತ್ತಾರೆ. ಈಗ ನೀವು ಮಕ್ಕಳಿಗೆ ತಂದೆಯವರು ಮೂರನೇ ನೇತ್ರವನ್ನು ಕೊಟ್ಟಿದ್ದಾರೆ. ನೀವು ಹೇಗೆಂದರೆ ಬೇರೆ ಪ್ರಪಂಚದವರೇ ಆಗಿ ಬಿಟ್ಟಿದ್ದೀರಿ.

ತಂದೆಯು ತಿಳಿಸುತ್ತಾರೆ – ಈಗ ಅವಶ್ಯವಾಗಿ ಎಲ್ಲರೂ ತಮೋಪ್ರಧಾನರು ಆಗಲೇಬೇಕು, ಈ ಕಾರಣದಿಂದ ತಂದೆಯು ಬಂದು ಸತೋಪ್ರಧಾನರನ್ನಾಗಿ ಮಾಡುವರು. ತಂದೆಯು ಎಷ್ಟೊಂದು ಚೆನ್ನಾಗಿ ಕುಳಿತು ತಿಳಿಸುತ್ತಾರೆ. ಹೇಳುತ್ತಾರೆ – ಭಲೆ ನೀವು ಮಕ್ಕಳು ತಮ್ಮ ಸೇವೆಯನ್ನೂ ಮಾಡುತ್ತೀರಿ, ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿರಿ – ತಂದೆಯನ್ನು ನೆನಪು ಮಾಡುವುದು. ಸತೋಪ್ರಧಾನರು ಆಗುವುದಕ್ಕೆ ಮತ್ತ್ಯಾರೂ ಮಾರ್ಗವನ್ನು ತಿಳಿಸಲು ಸಾಧ್ಯವಿಲ್ಲ. ಸರ್ವರ ಆತ್ಮಿಕ ಸರ್ಜನ್ ಒಬ್ಬರೇ ಆಗಿದ್ದಾರೆ. ಅವರೇ ಬಂದು ಆತ್ಮರಿಗೆ ಇಂಜೆಕ್ಷನ್ ಹಾಕುವರು ಏಕೆಂದರೆ ಆತ್ಮವೇ ತಮೋಪ್ರಧಾನವಾಗಿದೆ. ತಂದೆಗೆ ಅವಿನಾಶಿ ಸರ್ಜನ್ ಎಂದು ಹೇಳಲಾಗುತ್ತದೆ. ಆತ್ಮವು ಅವಿನಾಶಿ ಆಗಿದೆ, ಪರಮಾತ್ಮ ತಂದೆಯೂ ಅವಿನಾಶಿ ಆಗಿದ್ದಾರೆ. ಈಗ ಆತ್ಮವು ಸತೋಪ್ರಧಾನದಿಂದ ತಮೋಪ್ರಧಾನವಾಗಿದೆ, ಅದಕ್ಕೆ ಇಂಜೆಕ್ಷನ್ ಬೇಕಾಗಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿರಿ ಹಾಗೂ ತಮ್ಮ ತಂದೆಯನ್ನು ನೆನಪು ಮಾಡಿರಿ. ಬುದ್ಧಿಯೋಗವನ್ನು ಮೇಲೆ ಜೋಡಿಸುತ್ತೀರೆಂದರೆ, ಮಧುರ ಮನೆಗೆ ಹೊರಟು ಹೋಗುವಿರಿ. ಈಗ ನಿಮ್ಮ ಬುದ್ಧಿಯಲ್ಲಿದೆ – ನಾವು ಮಧುರ ಶಾಂತಿಯ ಮನೆಗೆ ಹೋಗಬೇಕು ಎನ್ನುವುದಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನ ಹಾಗೂ ಯೋಗದಿಂದ ಬುದ್ಧಿಯನ್ನು ಪಾರಸವನ್ನಾಗಿ ಮಾಡಬೇಕಾಗಿದೆ. ಎಷ್ಟೇ ರೋಗವಿರಬಹುದು, ನೋವಿರಬಹುದು, ಅದರಲ್ಲಿಯೂ ಒಬ್ಬ ತಂದೆಯ ನೆನಪಿರಲಿ.

2. ತಮ್ಮ ಶ್ರೇಷ್ಠ ಅದೃಷ್ಠವನ್ನು ರೂಪಿಸಿಕೊಳ್ಳುವುದಕ್ಕಾಗಿ ಸಂಪೂರ್ಣ ನಿಶ್ಚಯ ಬುದ್ಧಿಯವರು ಆಗಬೇಕಾಗಿದೆ. ಬುದ್ಧಿಯೋಗವನ್ನು ತಮ್ಮ ಮಧುರ ಶಾಂತಿಯ ಮನೆಯ ಜೊತೆ ಜೋಡಣೆ ಮಾಡಬೇಕಾಗಿದೆ.

ವರದಾನ:-

ಯಾವ ಮಕ್ಕಳು ನಿರಂತರ ನೆನಪಿನಲ್ಲಿಯೇ ಇರುತ್ತಾರೆ, ಅವರು ಸದಾ ಜೊತೆಯ ಅನುಭವ ಮಾಡುತ್ತಾರೆ. ಅವರ ಮುಂದೆ ಯಾವುದೇ ಸಮಸ್ಯೆಗಳು ಬಂದರೂ ಸಹ ತನ್ನನ್ನು ಕಂಬೈಂಡ್ ಆಗಿರುವ ಅನುಭವ ಮಾಡುವರು, ಗಾಬರಿಯಾಗುವುದಿಲ್ಲ. ಈ ಕಂಬೈಂಡ್ ಸ್ವರೂಪದ ಸ್ಮೃತಿಯು ಯಾವುದೆ ಕಷ್ಟದ ಕಾರ್ಯವನ್ನೂ ಸಹಜವೆನ್ನುವಂತೆ ಮಾಡಿ ಬಿಡುತ್ತದೆ. ಯಾವಾಗ ಯಾವುದೇ ದೊಡ್ಡ ಮಾತು ಬಂದರೂ ಸಹ, ತನ್ನ ಹೊರೆಯನ್ನು ತಂದೆಯ ಮೇಲಿಟ್ಟು ಸ್ವಯಂ ಡಬಲ್ಲೈಟ್ ಆಗಿ ಬಿಡಿ. ಇದರಿಂದ ಹಗಲು-ರಾತ್ರಿ ಫರಿಶ್ತೆಯಂತೆ ಖುಷಿಯಲ್ಲಿ ಮನಸ್ಸಿನಿಂದ ನರ್ತಿಸುತ್ತಾ ಇರುವಿರಿ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ – “ಜ್ಞಾನ ಹಾಗೂ ಯೋಗದ ಅಂತರ”

ಯೋಗ ಮತ್ತು ಜ್ಞಾನ ಎರಡು ಶಬ್ಧಗಳಿವೆ. ಯೋಗ ಎಂದು ಹೇಳಲಾಗುತ್ತದೆ ಪರಮಾತ್ಮನ ನೆನಪನ್ನು ಹಾಗೂ ಯಾರದೇ ನೆನಪಿನ ಸಂಬಂಧದಲ್ಲಿ ಯೋಗವೆಂಬ ಶಬ್ಧವು ಬರುವುದಿಲ್ಲ. ಗುರುಜನರು, ಯಾರೇ ಯೋಗವನ್ನು ಕಲಿಸುತ್ತಾರೆ, ಅವರೂ ಸಹ ಪರಮಾತ್ಮನ ಕಡೆಗೆ ಜೋಡಣೆ ಮಾಡಿಸುತ್ತಾರೆ ಆದರೆ ಅವರಿಗೆ ಕೇವಲ ಪರಮಾತ್ಮನ ಸಂಪೂರ್ಣ ಪರಿಚಯವಿಲ್ಲ. ಆದ್ದರಿಂದ ಯೋಗದ ಸಂಪೂರ್ಣ ಸಿದ್ಧಿಯು ಸಿಗುವುದಿಲ್ಲ. ಯೋಗ ಹಾಗೂ ಜ್ಞಾನ ಇವೆರಡು ಶಕ್ತಿಗಳಾಗಿವೆ, ಇವೆರಡು ಪುರುಷಾರ್ಥದಿಂದ ಶಕ್ತಿಯು ಸಿಗುತ್ತದೆ ಹಾಗೂ ನಾವು ವಿಕರ್ಮಾಜೀತರಾಗಿ ಶ್ರೇಷ್ಠ ಜೀವನವನ್ನು ತಯಾರು ಮಾಡಿಕೊಳ್ಳುತ್ತೇವೆ. ಯೋಗ ಎಂಬ ಅಕ್ಷರವನ್ನಂತು ಎಲ್ಲರೂ ಹೇಳುತ್ತಾರೆ ಆದರೆ ಯಾರೊಂದಿಗೆ ಯೋಗವನ್ನಿಡಬೇಕು ಎಂಬುದರ ಪರಿಚಯ ಮೊಟ್ಟ ಮೊದಲು ಇರಬೇಕು. ಈಗ ಈ ಪರಮಾತ್ಮನ ಪರಿಚಯವೂ ಸಹ ನಮಗೆ ಪರಮಾತ್ಮನ ಮೂಲಕವೇ ಸಿಗುವುದು, ಆ ಪರಿಚಯದಿಂದ ಯೋಗವನ್ನು ಇಡುವುದರಿಂದ ಸಂಪೂರ್ಣ ಸಿದ್ಧಿಯು ಸಿಗುವುದು. ಯೋಗದಿಂದ ನಾವು ಹಿಂದಿನ ವಿಕರ್ಮಗಳ ಹೊರೆಯು ಭಸ್ಮ ಮಾಡುತ್ತೇವೆ ಹಾಗೂ ಜ್ಞಾನದಿಂದ ಗೊತ್ತಾಗುವುದು – ಭವಿಷ್ಯಕ್ಕಾಗಿ ನಾವು ಎಂತಹ ಕರ್ಮವನ್ನು ಮಾಡಬೇಕಾಗಿದೆ ಹಾಗೂ ಏಕೆ? ಜೀವನದ ಮೂಲವಾಗಿದೆ ಸಂಸ್ಕಾರ, ಆತ್ಮವೂ ಸಹ ಅನಾದಿ ಸಂಸ್ಕಾರಗಳಿಂದ ಮಾಡಲ್ಪಟ್ಟಿದೆ ಆದರೆ ಕರ್ಮದಿಂದ ಆ ಸಂಸ್ಕಾರಗಳು ಬದಲಾಗುತ್ತಿರುತ್ತವೆ. ಯೋಗ ಮತ್ತು ಜ್ಞಾನದಿಂದ ಆತ್ಮದಲ್ಲಿ ಶ್ರೇಷ್ಠತೆಯು ಬರುತ್ತದೆ ಹಾಗೂ ಜೀವನದಲ್ಲಿ ಶಕ್ತಿ ಬರುತ್ತದೆ. ಆದರೆ ಇವೆರಡೂ ವಸ್ತುಗಳು ಪರಮಾತ್ಮನಿಂದ ಸಿಗುತ್ತದೆ. ನಮಗೆ ಕರ್ಮ ಬಂಧನದಿಂದ ಮುಕ್ತರಾಗುವ ಮಾರ್ಗವೂ ಸಹ ಪರಮಾತ್ಮನಿಂದ ಪ್ರಾಪ್ತಿಯಾಗುವುದು. ನಾವು ಯಾವ ವಿಕರ್ಮಗಳಿಂದ ಕರ್ಮ ಬಂಧನವನ್ನಾಗಿ ಮಾಡಿಕೊಂಡಿದ್ದೇವೆ, ಅದರಿಂದ ಮುಕ್ತವಾಗಬೇಕು ಹಾಗೂ ಭವಿಷ್ಯದಲ್ಲಿ ನಮ್ಮ ಕರ್ಮವು ವಿಕರ್ಮವಾಗಬಾರದೆಂದರೆ, ಇವೆರಡು ಶಕ್ತಿಗಳನ್ನು ಪರಮಾತ್ಮನಲ್ಲದೆ ಮತ್ತ್ಯಾರೂ ಸಹ ಕೊಡಲು ಸಾಧ್ಯವಿಲ್ಲ. ಯೋಗ ಮತ್ತು ಜ್ಞಾನ – ಈ ಎರಡೂ ವಸ್ತುಗಳನ್ನು ಪರಮಾತ್ಮನು ತೆಗೆದುಕೊಂಡು ಬರುತ್ತಾರೆ, ಯೋಗಾಗ್ನಿಯಿಂದ ವಿಕರ್ಮಗಳನ್ನು ಭಸ್ಮಗೊಳಿಸುತ್ತಾರೆ ಹಾಗೂ ಜ್ಞಾನದಿಂದ ಭವಿಷ್ಯಕ್ಕಾಗಿ ಶ್ರೇಷ್ಠ ಕರ್ಮವನ್ನು ಕಲಿಸಿ ಕೊಡುತ್ತಾರೆ, ಇದರಿಂದ ಕರ್ಮ ಅಕರ್ಮವಾಗುವುದು. ಆದ್ದರಿಂದ ಪರಮಾತ್ಮನು ಹೇಳುವರು – ಈ ಕರ್ಮ-ಅಕರ್ಮ-ವಿಕರ್ಮದ ಗತಿಯು ಬಹಳ ಗುಹ್ಯವಾಗಿದೆ. ಈಗಂತು ನಾವಾತ್ಮರಿಗೆ ಡೈರೆಕ್ಟ್ ಪರಮಾತ್ಮನ ಶಕ್ತಿಯು ಬೇಕಾಗಿದೆ, ಶಾಸ್ತ್ರಗಳ ಮೂಲಕ ಈ ಯೋಗ ಮತ್ತು ಜ್ಞಾನದ ಬಲವು ಸಿಗಲು ಸಾಧ್ಯವಿಲ್ಲ ಆದರೆ ಸರ್ವಶಕ್ತಿವಂತನ ಮೂಲಕವೇ ಶಕ್ತಿಯು ಸಿಗುವುದು. ಈಗ ನಾವು ನಮ್ಮ ಜೀವನ ಸಂಸ್ಕಾರವನ್ನು ಈ ರೀತಿ ಮಾಡಿಕೊಳ್ಳಬೇಕಾಗಿದೆ, ಅದರಿಂದ ಜೀವನದಲ್ಲಿ ಸುಖ ಸಿಗಲಿ. ಅದಕ್ಕಾಗಿಯೇ ಪರಮಾತ್ಮನು ಬಂದು ಜೀವನದ ಮೂಲದಲ್ಲಿ(ಸಂಸ್ಕಾರ) ಶುದ್ಧ ಸಂಸ್ಕಾರದ ಬೀಜವನ್ನು ಬಿತ್ತನೆ ಮಾಡುವರು. ಆ ಶುದ್ಧ ಸಂಸ್ಕಾರಗಳ ಆಧಾರದಿಂದ ನಾವು ಅರ್ಧಕಲ್ಪ ಜೀವನ್ಮುಕ್ತರು ಆಗುತ್ತೇವೆ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top