01 October 2021 KANNADA Murli Today | Brahma Kumaris

Read and Listen today’s Gyan Murli in Kannada

September 30, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಪ್ರಾತಃ ಮುರುಳಿ ಓಂಶಾಂತಿ ಬಾಪ್‍ದಾದಾ ಮಧುಬನ

ಪ್ರಶ್ನೆ:: -

ಈ ವಿದ್ಯೆಯೊಂದಿಗೆ ಯಾವ ಮಾತಿನ ಸಂಬಂಧವಿಲ್ಲ?

ಉತ್ತರ:-

ಈ ವಿದ್ಯೆಯೊಂದಿಗೆ ಯಾವುದೇ ಉಡುಪು ಇತ್ಯಾದಿಗಳ ಸಂಬಂಧವಿಲ್ಲ, ಇದರಲ್ಲಿ ಉಡುಪುಗಳನ್ನು ಬದಲಾಯಿಸುವ ಮಾತಿಲ್ಲ. ತಂದೆಯಂತೂ ಆತ್ಮರಿಗೆ ಓದಿಸುತ್ತಾರೆ, ಆತ್ಮಕ್ಕೆ ಗೊತ್ತಿದೆ ಇದು ಹಳೆಯ ಪತಿತ ಶರೀರವಾಗಿದೆ, ಇದಕ್ಕೆ ಎಂತಹುದೇ ಹಗುರ, ಸಡಿಲ ವಸ್ತ್ರವನ್ನು ತೊಡಿಸಿದರೂ ಪರವಾಗಿಲ್ಲ. ಶರೀರ ಮತ್ತು ಆತ್ಮ ಎರಡೂ ಕಪ್ಪಾಗಿದೆ. ತಂದೆಯು ಕಪ್ಪಾಗಿರುವವರನ್ನೇ ಸುಂದರರನ್ನಾಗಿ ಮಾಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ಪಾಠಶಾಲೆಯಲ್ಲಿ ಆತ್ಮಿಕ ತಂದೆಯ ಮುಂದೆ ಆತ್ಮಿಕ ಮಕ್ಕಳು ಕುಳಿತಿದ್ದೀರಿ. ಇದು ಲೌಕಿಕ ಪಾಠಶಾಲೆಯಲ್ಲ, ಆತ್ಮಿಕ ಪಾಠಶಾಲೆಯಲ್ಲಿ ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಪುನಃ ನರನಿಂದ ನಾರಾಯಣ ಅಥವಾ ದೇವಿ-ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಆತ್ಮಿಕ ತಂದೆಯ ಬಳಿ ಕುಳಿತಿದ್ದೇವೆ, ಇದು ಹೊಸ ಮಾತಾಗಿದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರು ಡಬಲ್ ಕಿರೀಟಧಾರಿಗಳಾಗಿದ್ದರು, ಪ್ರಕಾಶತೆಯ ಕಿರೀಟ ಮತ್ತು ರತ್ನಜಡಿತ ಕಿರೀಟ ಎರಡೂ ಇತ್ತು. ಮೊಟ್ಟ ಮೊದಲು ಪ್ರಕಾಶತೆಯ ಕಿರೀಟವಿರುತ್ತದೆ. ಯಾರು ಇದ್ದು ಹೋದರೋ ಅವರಿಗೆ ಶ್ವೇತ ಪ್ರಕಾಶವನ್ನು ತೋರಿಸುತ್ತಾರೆ, ಇದು ಪವಿತ್ರತೆಯ ಸಂಕೇತವಾಗಿದೆ. ಅಪವಿತ್ರರಿಗೆ ಎಂದೂ ಪ್ರಕಾಶತೆಯನ್ನು ತೋರಿಸುವುದಿಲ್ಲ. ನಿಮ್ಮ ಭಾವಚಿತ್ರವನ್ನು ತೆಗೆದರೆ ಅದರಲ್ಲಿ ಪ್ರಕಾಶತೆಯ ಕಿರೀಟವನ್ನು ತೋರಿಸುವುದಿಲ್ಲ. ಇದು ಪವಿತ್ರತೆಯ ಸಂಕೇತವಾಗಿ ತೋರಿಸುತ್ತಾರೆ. ಬೆಳಕು ಮತ್ತು ಕತ್ತಲೆ. ಬ್ರಹ್ಮನ ದಿನ, ಬೆಳಕು. ಬ್ರಹ್ಮನ ರಾತ್ರಿ ಕತ್ತಲೆ. ಕತ್ತಲೆ ಅರ್ಥಾತ್ ಅವರ ಮೇಲೆ ಪ್ರಕಾಶತೆಯಿಲ್ಲ. ನೀವು ತಿಳಿದುಕೊಂಡಿದ್ದೀರಿ – ತಂದೆಯೇ ಬಂದು ಇಷ್ಟು ಯಾರೆಲ್ಲಾ ಪತಿತರು ಅರ್ಥಾತ್ ಕತ್ತಲೆಯೇ ಕತ್ತಲೆಯಿದೆಯೋ ಅವರನ್ನು ಪಾವನರನ್ನಾಗಿ ಮಾಡುತ್ತಾರೆ. ಈಗಂತೂ ಪವಿತ್ರ ರಾಜಧಾನಿಯೇ ಇಲ್ಲ, ಸತ್ಯಯುಗದಲ್ಲಿ ಯಥಾರಾಜ-ರಾಣಿ ತಥಾಪ್ರಜೆ ಎಲ್ಲರೂ ಪವಿತ್ರರಾಗಿದ್ದರು. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದರ ಮೇಲೆ ನೀವು ಮಕ್ಕಳು ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಇದು ನಿಮ್ಮ ಗುರಿ-ಧ್ಯೇಯವಾಗಿದೆ. ತಿಳಿಸುವುದಕ್ಕಾಗಿ ಇನ್ನೂ ಒಳ್ಳೊಳ್ಳೆಯ ಚಿತ್ರಗಳಿವೆ ಆದ್ದರಿಂದ ಇಷ್ಟೊಂದು ಚಿತ್ರಗಳನ್ನು ಇಡಲಾಗುತ್ತದೆ. ಮನುಷ್ಯರು ನಾವು ನೆನಪಿನ ಯಾತ್ರೆಯಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೇವೆ. ನಂತರ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗುತ್ತೇವೆಂದು ಕೂಡಲೇ ತಿಳಿದುಕೊಳ್ಳುವುದಿಲ್ಲ. ಜೀವನ್ಮುಕ್ತಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತೆಂಬುದು ಯಾರಿಗೂ ಗೊತ್ತಿಲ್ಲ. ನಾವು ತಂದೆಯಿಂದ ಪವಿತ್ರತೆಯ ದೈವೀ ಸ್ವರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಈಗ ನಿಮಗೆ ತಿಳಿದಿದೆ. ಚಿತ್ರಗಳ ಮೇಲೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಭಾರತದಲ್ಲಿಯೇ ಡಬಲ್ ಕಿರೀಟಧಾರಿಗಳ ಪೂಜೆ ಮಾಡುತ್ತಾರೆ. ಇಂತಹ ಚಿತ್ರವು ಏಣಿಯ ಚಿತ್ರದಲ್ಲಿದೆ. ಸ್ಥೂಲವಾದ ಕಿರೀಟವಿದೆ ಆದರೆ ಪ್ರಕಾಶತೆಯ ಕಿರೀಟವಿಲ್ಲ, ಪವಿತ್ರರಿಗೇ ಪೂಜೆಯಾಗುತ್ತದೆ. ಪ್ರಕಾಶತೆಯು ಪವಿತ್ರತೆಯ ಸಂಕೇತವಾಗಿದೆ ಆದರೆ ಯಾರಾದರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಬೆಳಕು ಬರುತ್ತದೆ ಎಂದಲ್ಲ, ಇದು ಪವಿತ್ರತೆಯ ಸಂಕೇತವಾಗಿದೆ. ನೀವೀಗ ಪುರುಷಾರ್ಥಿಗಳಾಗಿದ್ದೀರಿ ಆದ್ದರಿಂದ ನಿಮಗೆ ಪ್ರಕಾಶವನ್ನು ತೋರಿಸಲು ಸಾಧ್ಯವಿಲ್ಲ. ದೇವಿ-ದೇವತೆಗಳಿಗೆ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುತ್ತದೆ, ಇಲ್ಲಂತೂ ಯಾರಿಗೂ ಪವಿತ್ರ ಶರೀರವಿಲ್ಲ ಆದ್ದರಿಂದ ಪ್ರಕಾಶತೆಯನ್ನು ತೋರಿಸುವಂತಿಲ್ಲ. ನಿಮ್ಮಲ್ಲಿಯೂ ಕೆಲವರು ಪೂರ್ಣ ಪವಿತ್ರರಾಗಿರುತ್ತಾರೆ, ಕೆಲವರು ಅರ್ಧಂಬರ್ಧ ಪವಿತ್ರರಾಗಿರುತ್ತಾರೆ. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಅಂತಹವರಿಗೆ ಅರ್ಧ ಪವಿತ್ರರೆಂದು ಹೇಳಲಾಗುತ್ತದೆ. ಕೆಲವರಂತೂ ಒಮ್ಮೆಲೆ ಪತಿತರಾಗಿ ಬಿಡುತ್ತಾರೆ. ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಸ್ವಯಂ ತಿಳಿದುಕೊಳ್ಳುತ್ತಾರೆ. ಆತ್ಮವೇ ಪತಿತನಾಗುತ್ತದೆ ಅದಕ್ಕೆ ಪ್ರಕಾಶತೆಯನ್ನು ತೋರಿಸುವಂತಿಲ್ಲ.

ನೀವು ಮಕ್ಕಳು ಇದನ್ನು ಮರೆಯಬಾರದು- ನಾವು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಎಷ್ಟೊಂದು ಘನತೆಯಿರಬೇಕು. ತಿಳಿದುಕೊಳ್ಳಿ – ಯಾರಾದರೂ ಕೂಲಿ ಕಾರ್ಮಿಕರಾಗಿದ್ದಾರೆ, ಅವರು ಎಂ.ಎಲ್, ಎ., ಎಂ.ಪಿ., ಆಗಿ ಬಿಡುತ್ತಾರೆ ಅಥವಾ ವಿದ್ಯೆಯನ್ನು ಓದಿ ಯಾವುದಾದರೂ ಪದವಿಯನ್ನು ಪಡೆಯುತ್ತಾರೆಂದರೆ ಟಿಪ್‍ಟಾಪ್ ಆಗಿ ಬಿಡುತ್ತಾರೆ. ಇಂತಹವರು ಅನೇಕರು ಇದ್ದು ಹೋಗಿದ್ದಾರೆ. ಭಲೆ ಜಾತಿಯು ಅದೇ ಆಗಿರುತ್ತದೆ ಆದರೆ ಪದವಿ ಸಿಕ್ಕಿದರೆ ನಶೆ ಏರಿ ಬಿಡುತ್ತದೆ. ಮತ್ತೆ ಅದರಂತೆಯೇ ಅವರು ಉಡುಪುಗಳನ್ನು ಧರಿಸುತ್ತಾರೆ. ಹಾಗೆಯೇ ನೀವೂ ಸಹ ಈಗ ಪತಿತರಿಂದ ಪಾವನರಾಗುವುದಕ್ಕಾಗಿ ಓದುತ್ತಿದ್ದೀರಿ. ಅವರೂ ಸಹ ವಿದ್ಯೆಯಿಂದ ವೈದ್ಯರು, ವಕೀಲರು ಆಗುತ್ತಾರೆ ಆದರೆ ಪತಿತರೇ ಆಗಿದ್ದಾರಲ್ಲವೆ ಏಕೆಂದರೆ ಅವರ ವಿದ್ಯೆಯು ಪಾವನರಾಗುವುದಕ್ಕಾಗಿ ಅಲ್ಲ. ನಾವು ಭವಿಷ್ಯದಲ್ಲಿ ಪವಿತ್ರ ದೇವಿ-ದೇವತೆಗಳಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಶೂದ್ರರ ಹವ್ಯಾಸಗಳು ಕಳೆಯುತ್ತಾ ಹೋಗುವವು. ಆಂತರ್ಯದಲ್ಲಿ ಈ ನಶೆಯಿರಲಿ – ಪರಮಪಿತ ಪರಮಾತ್ಮನು ನಮ್ಮನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಾರೆ, ನಾವು ಶೂದ್ರರಿಂದ ಬ್ರಾಹ್ಮಣರಾಗುತ್ತೇವೆ ನಂತರ ದೇವತೆಗಳಾಗುತ್ತೇವೆ. ಇದು ನೆನಪಿದ್ದಾಗ ಆ ಕೊಳಕು ವಿಕಾರಿ ಹವ್ಯಾಸಗಳು ಕಳೆಯುತ್ತಾ ಹೋಗುತ್ತವೆ. ಆಸುರೀ ಪದಾರ್ಥಗಳು ತಿನ್ನುವುದನ್ನು ಬಿಡಬೇಕಾಗಿದೆ. ಕೂಲಿ ಮಾಡುವವರು ಎಂ.ಪಿ., ಆಗಿ ಬಿಡುತ್ತಾರೆಂದರೆ ಅವರ ರೀತಿ ನೀತಿ, ಮನೆ ಎಲ್ಲವೂ ಬಹಳ ಬದಲಾವಣೆ ಆಗಿ ಬಿಡುತ್ತದೆ. ಅವರದಂತೂ ಈ ಸಮಯಕ್ಕಾಗಿ ಪದವಿಯಿದೆ, ನೀವು ತಿಳಿದುಕೊಂಡಿದ್ದೀರಿ – ನಾವು ಭವಿಷ್ಯದಲ್ಲಿ ಏನಾಗಲಿದ್ದೇವೆ! ತಮ್ಮ ಜೊತೆ ಹೀಗೀಗೆ ಮಾತನಾಡಿಕೊಳ್ಳಬೇಕು, ನಾವು ಹೇಗಿದ್ದೆವು, ಈಗ ಏನಾಗಿದ್ದೇವೆ! ನೀವು ಶೂದ್ರ ಜಾತಿಯವರಾಗಿದ್ದಿರಿ, ಈಗ ವಿಶ್ವದ ಮಾಲೀಕರಾಗುತ್ತೀರಿ. ಯಾರಾದರೂ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದರೆ ಮತ್ತೆ ಆ ನಶೆಯಿರುತ್ತದೆ ಅಂದಮೇಲೆ ನೀವು ಏನಾಗಿದ್ದಿರಿ? (ಪತಿತರು) ಛೀ ಛೀ ಆಗಿದ್ದಿರಿ. ಈಗ ನಿಮಗೆ ಭಗವಂತನು ಓದಿಸಿ ಬೇಹದ್ದಿನ ಮಾಲೀಕರನ್ನಾಗಿ ಮಾಡುತ್ತಾರೆ. ಇದನ್ನೂ ನೀವು ತಿಳಿದುಕೊಳ್ಳುತ್ತೀರಿ, ಪರಮಪಿತ ಪರಮಾತ್ಮನು ಅವಶ್ಯವಾಗಿ ಇಲ್ಲಿಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಮೂಲವತನ, ಸೂಕ್ಷ್ಮವತನದಲ್ಲಿ ಕಲಿಸುವುದಿಲ್ಲ. ನೀವೆಲ್ಲರೂ ದೂರದೇಶದಲ್ಲಿ ಇರುವ ಆತ್ಮರಾಗಿದ್ದೀರಿ, ಇಲ್ಲಿಗೇ ಬಂದು ಪಾತ್ರವನ್ನು ಅಭಿನಯಿಸುತ್ತೀರಿ. 84 ಜನ್ಮಗಳ ಪಾತ್ರವನ್ನು ಅಭಿನಯಿಸಲೇಬೇಕಾಗಿದೆ. ಮನುಷ್ಯರಂತೂ 84 ಲಕ್ಷ ಯೋನಿಗಳೆಂದು ಹೇಳಿ ಬಿಡುತ್ತಾರೆ. ಎಷ್ಟು ಘೋರ ಅಂಧಕಾರದಲ್ಲಿದ್ದಾರೆ. ನೀವೀಗ ತಿಳಿದುಕೊಳ್ಳುತ್ತೀರಿ, 5000 ವರ್ಷಗಳ ಮೊದಲು ನಾವು ದೇವಿ-ದೇವತೆಗಳಾಗಿದ್ದೆವು, ಈಗಂತೂ ಪತಿತರಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಹಾಡುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ಈಗ ತಂದೆಯು ಸ್ವಯಂ ಪಾವನರನ್ನಾಗಿ ಮಾಡಲು ಬಂದಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ. ವಿದ್ಯೆಯಿಲ್ಲದೆ ಯಾರೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮಗೆ ಓದಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ, ಗುರಿ-ಧ್ಯೇಯವು ಸನ್ಮುಖದಲ್ಲಿದೆ. ಪ್ರಜಾಪದವಿಯು ನಿಮ್ಮ ಗುರಿ-ಧ್ಯೇಯವಲ್ಲ, ಲಕ್ಷ್ಮೀ-ನಾರಾಯಣರ ಚಿತ್ರವೂ ಇದೆ. ಇಂತಹ ಚಿತ್ರಗಳನ್ನು ಮತ್ತೆಲ್ಲಿಯಾದರೂ ಇಟ್ಟು ಓದಿಸುವವರಿದ್ದಾರೆಯೇ? ನಾವು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದೇವೆ ಎಂದು ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ, ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಇದು ಪತಿತ ಪ್ರಪಂಚ ಅಲ್ಲವೆ, ಇದರಲ್ಲಿ ಸಾಧು-ಸಂತ ಎಲ್ಲರೂ ಬಂದು ಬಿಡುತ್ತಾರೆ. ಪತಿತ-ಪಾವನ ಬನ್ನಿ ಎಂದು ಅವರೂ ಸಹ ಹಾಡುತ್ತಿರುತ್ತಾರೆ, ಪತಿತ ಪ್ರಪಂಚಕ್ಕೆ ಪಾವನವೆಂದು ಹೇಳುವುದಿಲ್ಲ. ಹೊಸ ಪ್ರಪಂಚವು ಪಾವನ ಪ್ರಪಂಚವಾಗಿದೆ, ಹಳೆಯ ಪತಿತ ಪ್ರಪಂಚದಲ್ಲಿ ಯಾರೂ ಪಾವನರಿರಲು ಸಾಧ್ಯವಿಲ್ಲ. ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು! ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ, ಈಶ್ವರನು ನಮಗೆ ಓದಿಸುತ್ತಾರೆ. ತಂದೆಯು ಬಡವರಿಗೇ ಬಂದು ಓದಿಸುತ್ತಾರೆ, ಬಡವರ ವಸ್ತ್ರಗಳು ಮೈಲಿಗೆ ಆಗಿರುತ್ತದೆಯಲ್ಲವೆ. ನಿಮ್ಮ ಆತ್ಮವೇ ಓದುತ್ತದೆ. ಆತ್ಮಕ್ಕೆ ತಿಳಿದಿದೆ, ಇದು ಹಳೆಯ ಶರೀರವಾಗಿದೆ, ಇದಕ್ಕೆ ಎಂತಹುದೇ ಸಡಿಲ ಸಾಧಾರಣ ವಸ್ತ್ರಗಳನ್ನು ತೊಡಿಸಿದರೂ ಪರವಾಗಿಲ್ಲ. ಇಲ್ಲಿ ಯಾವುದೇ ವೇಷ ಭೂಷಣಗಳನ್ನು ಬದಲಾಯಿಸುವ ಆಡಂಬರದಿಂದ ಇರುವ ಮಾತಿಲ್ಲ. ಉಡುಪುಗಳ ಜೊತೆ ಯಾವುದೇ ಸಂಬಂಧವೇ ಇಲ್ಲ. ತಂದೆಯಂತೂ ಆತ್ಮರಿಗೇ ಓದಿಸುತ್ತಾರೆ, ಶರೀರವು ಪತಿತವಾಗಿದೆ, ಇದಕ್ಕೆ ಎಷ್ಟಾದರೂ ಒಳ್ಳೆಯ ವಸ್ತ್ರವನ್ನು ಧರಿಸಿ ಆದರೆ ಆತ್ಮ ಮತ್ತು ಶರೀರವು ಪತಿತವಾಗಿದೆಯಲ್ಲವೆ. ಕೃಷ್ಣನನ್ನು ಕಪ್ಪಾಗಿ ತೋರಿಸುತ್ತಾರಲ್ಲವೆ. ಅವರ ಆತ್ಮ ಮತ್ತು ಶರೀರ ಎರಡೂ ಕಪ್ಪಾಗಿತ್ತು, ಗೊಲ್ಲ ಬಾಲಕನಾಗಿದ್ದನು ಎಂದು ಹೇಳುತ್ತಾರೆ. ವಾಸ್ತವದಲ್ಲಿ ನೀವೆಲ್ಲರೂ ಸಾಧಾರಣರಾಗಿದ್ದೀರಿ, ಪ್ರಪಂಚದಲ್ಲಿ ಮನುಷ್ಯ ಮಾತ್ರರು ನಿರ್ಗಧಿಕರಾಗಿದ್ದಾರೆ. ತಂದೆಯನ್ನೇ ಅರಿತುಕೊಂಡಿಲ್ಲ. ಲೌಕಿಕ ತಂದೆಯಂತೂ ಎಲ್ಲರಿಗೂ ಇದ್ದಾರೆ, ಬೇಹದ್ದಿನ ತಂದೆಯು ನೀವು ಬ್ರಾಹ್ಮಣರಿಗೇ ಸಿಕ್ಕಿದ್ದಾರೆ, ಈಗ ಬೇಹದ್ದಿನ ತಂದೆಯು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಭಕ್ತಿ ಮತ್ತು ಜ್ಞಾನ. ಭಕ್ತಿಯ ಅಂತ್ಯವಾದಾಗ ಮತ್ತೆ ತಂದೆಯು ಬಂದು ಜ್ಞಾನವನ್ನು ಕೊಡುವರು. ಈಗ ಅಂತಿಮವಾಗಿದೆ, ಸತ್ಯಯುಗದಲ್ಲಿ ಇದೇನೂ ಇರುವುದಿಲ್ಲ. ಈಗ ಹಳೆಯ ಪ್ರಪಂಚದ ವಿನಾಶವು ಬಹಳ ಸಮೀಪದಲ್ಲಿದೆ, ಪಾವನ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಚಿತ್ರಗಳಲ್ಲಿ ಎಷ್ಟು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಧೆ-ಕೃಷ್ಣರೇ ನಂತರ ಲಕ್ಷ್ಮೀ-ನಾರಾಯಣನಾಗುತ್ತಾರೆ. ಇದೂ ಸಹ ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ – ಇಬ್ಬರೂ ಬೇರೆ-ಬೇರೆ ರಾಜ್ಯದವರಾಗಿದ್ದರು, ನೀವು ಸ್ವರ್ಗದ ಸ್ವಯಂವರವನ್ನೂ ನೋಡಿದ್ದೀರಿ. ಪಾಕೀಸ್ತಾನದಲ್ಲಿ ನೀವು ಮಕ್ಕಳನ್ನು ಖುಷಿ ಪಡಿಸುವುದಕ್ಕಾಗಿ ಎಲ್ಲಾ ಸಾಕ್ಷಾತ್ಕಾರಗಳು ನಿಮಗೆ ಆಗುತ್ತಿತ್ತು.

ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆಂದು ನೀವೀಗ ತಿಳಿದುಕೊಂಡಿದ್ದೀರಿ ಅಂದಮೇಲೆ ಇದನ್ನು ಮರೆಯಬಾರದು. ಭಲೆ ಅಡಿಗೆ ಮಾಡುತ್ತಿರಲಿ ಅಥವಾ ಪಾತ್ರೆ ತೊಳೆಯುತ್ತಿರಲಿ ಆದರೆ ಎಲ್ಲರ ಆತ್ಮವೇ ಓದುತ್ತದೆಯಲ್ಲವೆ! ಇಲ್ಲಿ ಎಲ್ಲರೂ ಬಂದು ಕುಳಿತುಕೊಳ್ಳುತ್ತಾರೆ ಆದ್ದರಿಂದ ಇಲ್ಲಿ ಎಲ್ಲರೂ ಬಡವರೇ ಇದ್ದಾರೆ, ನಮಗೆ ಸಂಕೋಚವಾಗುತ್ತದೆ ಎಂದು ದೊಡ್ಡ-ದೊಡ್ಡ ವ್ಯಕ್ತಿಗಳು ಬರುವುದೆ ಇಲ್ಲ. ತಂದೆಯು ಬಡವರ ಬಂಧುವಾಗಿದ್ದಾರೆ, ಕೆಲವು ಸೇವಾಕೇಂದ್ರಗಳಲ್ಲಿ ಕೂಲಿ ಮಾಡುವವರು ಬಂದು ಬಿಡುತ್ತಾರೆ, ಕೆಲವರು ಮುಸಲ್ಮಾನರೂ ಬರುತ್ತಾರೆ. ತಂದೆಯು ತಿಳಿಸುತ್ತಾರೆ – ದೇಹದ ಎಲ್ಲಾ ಧರ್ಮಗಳನ್ನು ಬಿಡಿ, ನಾವು ಗುಜರಾತಿಯಾಗಿದ್ದೇನೆ, ನಾನು ಇಂತಹವನಾಗಿದ್ದೇನೆ ಇದೆಲ್ಲವೂ ದೇಹಾಭಿಮಾನವಾಗಿದೆ. ಇಲ್ಲಂತೂ ಆತ್ಮರಿಗೆ ಪರಮಾತ್ಮನು ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಸಾಧಾರಣ ತನುವಿನಲ್ಲಿ ಬಂದಿದ್ದೇನೆ ಅಂದಮೇಲೆ ಸಾಧಾರಣರ ಬಳಿ ಸಾಧಾರಣರೇ ಬರುತ್ತಾರೆ. ಇದಂತೂ ತಿಳಿದಿದೆ, ಇವರು ವಜ್ರ ವ್ಯಾಪಾರಿಯಾಗಿದ್ದರು, ಸ್ವಯಂ ತಂದೆಯೂ ಸಹ ಪುನಃ ನೆನಪಿಗೆ ತರಿಸುತ್ತಾರೆ – ಕಲ್ಪದ ಮೊದಲೂ ನಾನು ಹೇಳಿದ್ದೆನು – ನಾನು ಸಾಧಾರಣ ವೃದ್ಧ ತನುವಿನಲ್ಲಿ ಬರುತ್ತೇನೆ. ಇವರ ಅನೇಕ ಜನ್ಮಗಳ ಅಂತಿಮದಲ್ಲಿಯೂ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲವೆಂದು ತಂದೆಯು ಇವರಿಗೆ ಹೇಳುತ್ತಾರೆ. ಕೇವಲ ಕುದುರೆ ಗಾಡಿಯ ರಥದಲ್ಲಿ ಒಬ್ಬ ಅರ್ಜುನನಿಗೆ ಜ್ಞಾನವನ್ನು ಕೊಡಲಿಲ್ಲ, ಅದಕ್ಕೆ ಪಾಠಶಾಲೆಯೆಂದು ಹೇಳಲಾಗುವುದಿಲ್ಲ. ಯುದ್ಧದ ಮೈದಾನವೂ ಇರಲಿಲ್ಲ, ಇದು ವಿದ್ಯೆಯಾಗಿದೆ. ಮಕ್ಕಳು ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ನಾವು ಪೂರ್ಣ ಓದಿ ಡಬಲ್ ಕಿರೀಟಧಾರಿಗಳು ಆಗಬೇಕಾಗಿದೆ. ಈಗಂತೂ ಯಾವುದೇ ಕಿರೀಟವಿಲ್ಲ. ಭವಿಷ್ಯದಲ್ಲಿ ಡಬಲ್ ಕಿರೀಟಧಾರಿಗಳು ಆಗಬೇಕಾಗಿದೆ. ದ್ವಾಪರದಿಂದ ಪ್ರಕಾಶತೆಯ ಕಿರೀಟವು ಹೊರಟು ಹೋಗುತ್ತದೆ, ಕೇವಲ ಸಿಂಗಲ್ ಕಿರೀಟವಿರುತ್ತದೆ. ಸಿಂಗಲ್ ಕಿರೀಟವಿರುವವರು ಡಬಲ್ ಕಿರೀಟಧಾರಿಗಳಿಗೆ ಪೂಜಿಸುತ್ತಾರೆ. ಇದೂ ಸಹ ಚಿಹ್ನೆಯು ಅವಶ್ಯವಾಗಿ ಇರಬೇಕು. ತಂದೆಯು ಚಿತ್ರಗಳಿಗಾಗಿ ಸಲಹೆ ನೀಡುತ್ತಾ ಇರುತ್ತಾರೆ – ಚಿತ್ರಗಳನ್ನು ಮಾಡಿಸುವವರಿಗೆ ಮುರುಳಿಯ ಮೇಲೆ ಬಹಳ ಗಮನ ಕೊಡಬೇಕಾಗಿದೆ. ಚಿತ್ರಗಳಲ್ಲಿ ಯಾರಿಗೇ ಇರಲಿ ತಿಳಿಸುವುದು ಬಹಳ ಸಹಜವಾಗುತ್ತದೆ. ಹೇಗೆ ಕಾಲೇಜಿನಲ್ಲಿ ನಕ್ಷೆಯನ್ನು ತೋರಿಸಿದರೆ ಸಾಕು, ಬುದ್ಧಿಯಲ್ಲಿ ಬಂದು ಬಿಡುತ್ತದೆ – ಯುರೋಪ್ ಅತ್ತ ಕಡೆ ಇದೆ, ದ್ವೀಪವಿದೆ, ಇತ್ತ ಕಡೆ ಲಂಡನ್ ಇದೆ, ನಕ್ಷೆಯನ್ನೇ ನೋಡದಿದ್ದರೂ ಯುರೋಪ್ ಎಲ್ಲಿದೆ ಎಂದು ಅವರಿಗೇನು ತಿಳಿಯುತ್ತದೆ! ನಕ್ಷೆಯನ್ನು ನೋಡಿದರೆ ಕೂಡಲೇ ಬುದ್ಧಿಯಲ್ಲಿ ಬಂದು ಬಿಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಚಿತ್ರದ ಮೇಲ್ಭಾಗದಲ್ಲಿ ಪೂಜ್ಯ ಡಬಲ್ ಕಿರೀಟಧಾರಿ ದೇವಿ-ದೇವತೆಗಳಿರುತ್ತಾರೆ ನಂತರ ಕೆಳಗೆ ಬಂದಾಗ ಪೂಜಾರಿಗಳಾಗುತ್ತಾರೆ. ಏಣಿಯನ್ನು ಇಳಿಯುತ್ತಾರಲ್ಲವೆ. ಈ ಏಣಿಯಂತೂ ಬಹಳ ಸಹಜವಾಗಿದೆ, ಇದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು ಆದರೆ ಕೆಲವರ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ಅವರ ಅದೃಷ್ಟವೇ ಹೀಗಿದೆ, ಶಾಲೆಯಲ್ಲಿ ಉತ್ತೀರ್ಣ-ಅನುತ್ತೀರ್ಣರು ಆಗಿಯೇ ಆಗುತ್ತಾರೆ, ಅದೃಷ್ಟದಲ್ಲಿ ಇಲ್ಲದಿದ್ದರೆ ಪುರುಷಾರ್ಥವೂ ಇರುವುದಿಲ್ಲ, ಕಾಯಿಲೆಗೆ ಒಳಗಾಗುತ್ತಾರೆ. ಓದಲು ಸಾಧ್ಯವಿಲ್ಲ, ಕೆಲವರಂತೂ ಸಂಪೂರ್ಣ ಓದುತ್ತಾರೆ, ಆದರೂ ಅದು ಲೌಕಿಕ ವಿದ್ಯೆ, ಇದು ಆತ್ಮಿಕ ವಿದ್ಯೆಯಾಗಿದೆ. ಇದಕ್ಕಾಗಿ ಬುದ್ಧಿಯು ಚಿನ್ನದ ಸಮಾನವಿರಲಿ. ಸತ್ಯ ಚಿನ್ನವಾದ ತಂದೆಯು ಸದಾ ಪಾವನನಾಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದ ನೀವಾತ್ಮರು ಚಿನ್ನದ ಸಮಾನವಾಗುತ್ತಾ ಹೋಗುವಿರಿ. ಇಲ್ಲಂತೂ ಮನುಷ್ಯರದು ಕಲ್ಲು ಬುದ್ಧಿಯಾಗಿದೆ ಎಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಅದಂತೂ ಸ್ವರ್ಗವಾಗಿತ್ತು, ಭಾರತವೇ ಸ್ವರ್ಗವಾಗಿತ್ತು ಎಂಬುದನ್ನು ಮರೆತು ಹೋಗಿದ್ದಾರೆ. ಇದನ್ನು ಎಲ್ಲಿಯಾದರೂ ಪ್ರದರ್ಶನಿಗಳಲ್ಲಿ ತಿಳಿಸಬಹುದು, ಮತ್ತು ಪುನರಾವರ್ತನೆಯನ್ನೂ ಮಾಡಿಸಬಹುದು. ಪ್ರೊಜೆಕ್ಟರ್‍ನಲ್ಲಿ ಇದು ಸಾಧ್ಯವಿಲ್ಲ. ಮೊಟ್ಟ ಮೊದಲು ಈ ತ್ರಿಮೂರ್ತಿ, ಲಕ್ಷ್ಮೀ-ನಾರಾಯಣ ಮತ್ತು ಏಣಿಯ ಚಿತ್ರವು ಅತ್ಯವಶ್ಯಕವಾಗಿದೆ. ಈ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಇಡೀ 84 ಜನ್ಮಗಳ ಜ್ಞಾನವು ಬಂದು ಬಿಡುತ್ತದೆ. ಮಕ್ಕಳಿಗೆ ಇಡೀ ದಿನ ಇದೇ ಚಿಂತನೆ ನಡೆಯಬೇಕು – ಪ್ರತಿಯೊಂದು ಸೇವಾಕೇಂದ್ರದಲ್ಲಿ ಮುಖ್ಯ ಚಿತ್ರಗಳನ್ನು ಅವಶ್ಯವಾಗಿ ಇಡಬೇಕಾಗಿದೆ. ಚಿತ್ರಗಳಲ್ಲಿ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ಬ್ರಹ್ಮನ ಮೂಲಕ ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ನಾವು ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಮೊದಲು ನಾವು ಶೂದ್ರ ವಂಶದವರಾಗಿದ್ದೆವು. ಈಗ ಬ್ರಾಹ್ಮಣ ವರ್ಣದವರಾಗಿದ್ದೇವೆ. ಈಗ ಮತ್ತೆ ದೇವತೆಗಳಾಗಬೇಕಾಗಿದೆ. ಶಿವ ತಂದೆಯು ನಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ನಮ್ಮ ಗುರಿ-ಧ್ಯೇಯವು ಸನ್ಮುಖದಲ್ಲಿ ನಿಂತಿದೆ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು ನಂತರ ಇವರು ಹೇಗೆ ಕೆಳಗಿಳಿದರು? ಹೇಗಿದ್ದವರು ಹೇಗಾಗುತ್ತಾರೆ? ಒಮ್ಮೆಲೆ ಬುದ್ಧುಗಳಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು, ಭಾರತವಾಸಿಗಳಿಗೆ ಇವು ತಿಳಿದಿರಬೇಕಲ್ಲವೆ. ನಂತರ ಏನಾಯಿತು? ಇವರು ಎಲ್ಲಿ ಹೋದರು? ಇವರ ಮೇಲೆ ಯಾರಾದರೂ ವಿಜಯ ಪಡೆದರೇ? ಅವರು ಯುದ್ಧದಲ್ಲಿ ಯಾರನ್ನಾದರೂ ಸೋಲಿಸಿದರೇ? ಯಾರೊಂದಿಗೂ ಜಯಿಸಲೂ ಇಲ್ಲ, ಸೋಲಲೂ ಇಲ್ಲ. ಇದೆಲ್ಲವೂ ಮಾಯೆಯ ಮಾತಾಗಿದೆ. ರಾವಣ ರಾಜ್ಯವು ಆರಂಭವಾಯಿತು ಮತ್ತು 5 ವಿಕಾರಗಳಲ್ಲಿ ಬಿದ್ದು ರಾಜ್ಯಭಾಗ್ಯವನ್ನು ಕಳೆದುಕೊಂಡರು ಈಗ ಪುನಃ ಪಂಚ ವಿಕಾರಗಳ ಮೇಲೆ ಜಯ ಗಳಿಸುವುದರಿಂದ ಮತ್ತೆ ಶ್ರೇಷ್ಠರಾಗುವರು. ಈಗ ರಾವಣ ರಾಜ್ಯದ ಆಡಂಬರವಿದೆ, ನಾವು ಗುಪ್ತ ರೀತಿಯಲ್ಲಿ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ನೀವು ಎಷ್ಟು ಸಾಧಾರಣರಾಗಿದ್ದೀರಿ! ಓದಿಸುವವರು ಎಷ್ಟು ಸರ್ವಶ್ರೇಷ್ಠನಾಗಿದ್ದಾರೆ ಮತ್ತು ನಿರಾಕಾರ ತಂದೆಯು ಪತಿತ ಶರೀರದಲ್ಲಿ ಬಂದು ಮಕ್ಕಳನ್ನು ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ದೂರ ದೇಶದಿಂದ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ. ಆದರೂ ನೀವು ಮಕ್ಕಳನ್ನೇ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ, ಅವರು ಸ್ವಯಂ ಆಗುವುದಿಲ್ಲ. ಆದರೂ ಸಹ ಆ ರೀತಿ ಆಗುವುದಕ್ಕಾಗಿ ನೀವು ಪೂರ್ಣ ಪುರುಷಾರ್ಥ ಮಾಡುವುದಿಲ್ಲ. ಹಗಲು-ರಾತ್ರಿ ಓದಬೇಕು ಮತ್ತು ಓದಿಸಬೇಕಾಗಿದೆ. ತಂದೆಯು ದಿನ-ಪ್ರತಿದಿನ ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಲಕ್ಷ್ಮೀ-ನಾರಾಯಣರಿಂದಲೇ ಆರಂಭ ಮಾಡಬೇಕು – ಅವರು ಹೇಗೆ 84 ಜನ್ಮಗಳನ್ನು ತೆಗೆದುಕೊಂಡರು ಮತ್ತೆ ಅಂತಿಮ ಜನ್ಮದಲ್ಲಿ ಓದುತ್ತಿದ್ದಾರೆ ಪುನಃ ಅವರ ರಾಜಧಾನಿಯು ಸ್ಥಾಪನೆಯಾಗುತ್ತದೆ, ಎಷ್ಟೊಂದು ತಿಳಿಸುವ ಮಾತುಗಳಿವೆ, ಚಿತ್ರಗಳಿಗಾಗಿ ತಂದೆಯು ಎಷ್ಟೊಂದು ಸಲಹೆ ಕೊಡುತ್ತಾರೆ. ಯಾವುದೇ ಚಿತ್ರವನ್ನು ತಯಾರು ಮಾಡಿದ ಮೇಲೆ ಕೂಡಲೇ ಅದನ್ನು ತಂದೆಯ ಬಳಿ ತಂದು ತೋರಿಸಬೇಕು. ತಂದೆಯು ಅದನ್ನು ತಿದ್ದುಪಡಿ ಮಾಡಿ ಎಲ್ಲಾ ಸಲಹೆಗಳನ್ನು ಕೊಡುವರು.

ತಂದೆಯು ತಿಳಿಸುತ್ತಾರೆ – ನಾನು ಬಹಳ ಸಾಹುಕಾರನಾಗಿದ್ದೇನೆ. ಹುಂಡಿಯೂ ತಾನಾಗಿಯೇ ತುಂಬುವುದು, ಚಿಂತೆಯ ಯಾವುದೇ ಮಾತಿಲ್ಲ. ಇಷ್ಟೊಂದು ಮಕ್ಕಳು ಕುಳಿತಿದ್ದಾರೆ. ತಂದೆಗೆ ಗೊತ್ತಿದೆ – ಯಾರಿಂದಲಾದರೂ ಹುಂಡಿಯನ್ನು ತುಂಬಿಸುತ್ತಾರೆ, ತಂದೆಗೆ ಸಂಕಲ್ಪವಿದೆ – ಜೈಪುರವನ್ನು ಚೆನ್ನಾಗಿ ವೃದ್ಧಿ ಮಾಡಬೇಕಾಗಿದೆ. ಅಲ್ಲಿಯೇ ಹಠಯೋಗಿಗಳ ಮ್ಯೂಸಿಯಂ ಇದೆ, ಅಲ್ಲಿ ನಿಮ್ಮದು ರಾಜಯೋಗದ ಮ್ಯೂಸಿಯಂ ಬಹಳ ಚೆನ್ನಾಗಿ ಮಾಡಿಸಬೇಕು. ಅದನ್ನು ಎಲ್ಲರೂ ಬಂದು ನೋಡುವಂತಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪವಿತ್ರ ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಲು ತಮ್ಮ ಬುದ್ಧಿರೂಪಿ ಪಾತ್ರೆಯನ್ನು ಚಿನ್ನದ ಪಾತ್ರೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೆನಪಿನಿಂದಲೇ ಪಾತ್ರೆಯು ಚಿನ್ನದ ಸಮಾನವಾಗುತ್ತದೆ.

2. ಈಗ ಬ್ರಾಹ್ಮಣರಾಗಿದ್ದೀರಿ ಆದ್ದರಿಂದ ಶೂದ್ರರ ಎಲ್ಲಾ ಹವ್ಯಾಸಗಳನ್ನು ಅಳಿಸಬೇಕಾಗಿದೆ, ಬಹಳ ಘನತೆಯಿಂದ ಇರಬೇಕಾಗಿದೆ. ನಾವು ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂಬ ನಶೆಯಲ್ಲಿರಬೇಕಾಗಿದೆ.

ವರದಾನ:-

ತಮ್ಮ ವೃತ್ತಿಯ ಪರಿವರ್ತನೆಯ ದೃಷ್ಟಿಯನ್ನು ದಿವ್ಯ ದೃಷ್ಟಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಅನೇಕ ಆತ್ಮರು ತಮ್ಮ ಯಥಾರ್ಥ ರೂಪ, ಯಥಾರ್ಥವಾದ ಮನೆ ಹಾಗೂ ಯಥಾರ್ಥವಾದ ರಾಜಧಾನಿಯನ್ನೂ ನೋಡುವಿರಿ. ಇಂತಹ ಯಥಾರ್ಥವಾದ ಸಾಕ್ಷಾತ್ಕಾರವನ್ನು ಮಾಡಿಸುವುದಕ್ಕಾಗಿ ವೃತ್ತಿಯಲ್ಲಿ ಅಂಶದಷ್ಟೂ ದೇಹಾಭಿಮಾನದ ಚಂಚಲನೆಯಿರಬಾರದು. ಅಂದಮೇಲೆ ವೃತ್ತಿಯ ಸುಧಾರಣೆಯಿಂದ ದೃಷ್ಠಿಯನ್ನು ದಿವ್ಯ ದೃಷ್ಟಿಯನ್ನಾಗಿ ಮಾಡಿಕೊಂಡಾಗ, ಈ ಸೃಷ್ಟಿಯ ಪರಿವರ್ತನೆ ಆಗುವುದು. ಇದನ್ನು ನೋಡುವವರೂ ಅನುಭವ ಮಾಡುವರು – ಇದು ನಯನಗಳಲ್ಲ ಆದರೆ ಇದೊಂದು ಜಾದುವಿನ ಡಬ್ಬಿಯಾಗಿದೆ. ಈ ನಯನಗಳು ಸಾಕ್ಷಾತ್ಕಾರದ ಸಾಧನವಾಗಿ ಬಿಡುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top